Category Archives: Blog

Your blog category

Bihar Politics: ಬಿಹಾರದಲ್ಲಿ ನಿತೀಶ್ ಯುಗಾಂತ್ಯ: ಮುಂದಿನ ವಾರ ರಾಜೀನಾಮೆ ಸಾಧ್ಯತೆ, ಸಾಮ್ರಾಟ್ ಚೌಧರಿ ನೂತನ ಸಿಎಂ?

Bihar Politics: ಬಿಹಾರದಲ್ಲಿ ನಿತೀಶ್ ಯುಗಾಂತ್ಯ: ಮುಂದಿನ ವಾರ ರಾಜೀನಾಮೆ ಸಾಧ್ಯತೆ, ಸಾಮ್ರಾಟ್ ಚೌಧರಿ ನೂತನ ಸಿಎಂ?

ಪಾಟ್ನಾ, ಏಪ್ರಿಲ್ 09: ಬಿಹಾರದ ರಾಜಕೀಯ ಇತಿಹಾಸದಲ್ಲಿ ಒಂದು ಸುದೀರ್ಘ ಮತ್ತು ಪ್ರಭಾವಶಾಲಿ ಅಧ್ಯಾಯ ಈಗ ಅಂತ್ಯದತ್ತ ಸಾಗುತ್ತಿದೆ. ಕಳೆದ ಎರಡು ದಶಕಗಳಿಂದ ಬಿಹಾರ ರಾಜಕಾರಣದಲ್ಲಿ ಆಳವಾಗಿ ಬೇರೂರಿದ್ದ  ನಿತೀಶ್ ಕುಮಾರ್(Nitish Kumar), ಈಗ ಪಾಟ್ನಾದಿಂದ ದೆಹಲಿಯ ರಾಜಕೀಯ ಅಂಗಳಕ್ಕೆ ತಮ್ಮ ಪಯಣ ಬೆಳೆಸಿದ್ದಾರೆ.

ನಿತೀಶ್ ಯುಗಾಂತ್ಯ: ಬಿಹಾರದ ಚಾಣಕ್ಯನ ದೆಹಲಿ ಪಯಣ
ಬಿಹಾರ ರಾಜಕೀಯದಲ್ಲಿ ‘ಸುಶಾಸನ್ ಬಾಬು’ ಎಂದೇ ಖ್ಯಾತರಾದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರ ಎರಡು ದಶಕಗಳ ಮುಖ್ಯಮಂತ್ರಿ ಪರ್ವ ಮುಕ್ತಾಯವಾಗುತ್ತಿದೆ. ರಾಜ್ಯ ರಾಜಕಾರಣವನ್ನು ದಶಕಗಳ ಕಾಲ ಆಳಿದ ಅವರು, ಈಗ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ಪದಾರ್ಪಣೆ ಮಾಡುತ್ತಿದ್ದಾರೆ.

ರಾಜ್ಯಸಭಾ ಸದಸ್ಯರಾಗಿ ಹೊಸ ಜವಾಬ್ದಾರಿ
ನಿತೀಶ್ ಕುಮಾರ್ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ನವದೆಹಲಿಗೆ ತಲುಪಲಿದ್ದಾರೆ. ಅವರ ಜೊತೆಯಲ್ಲಿ ಆಪ್ತ ನಾಯಕರಾದ ಸಂಜಯ್ ಝಾ ಮತ್ತು ವಿಜಯ್ ಕುಮಾರ್ ಚೌಧರಿ ಕೂಡ ಇದ್ದು, ಇಬ್ಬರೂ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮುಂದಿನ ಸಿಎಂ ಯಾರು?
ಮೂಲಗಳ ಪ್ರಕಾರ, ಏಪ್ರಿಲ್ 14 ರಂದು ನಿತೀಶ್ ಕುಮಾರ್ ಅವರು ಅಧಿಕೃತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅಂದೇ ಎನ್‌ಡಿಎ (NDA) ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಬಿಹಾರದ ನೂತನ ಮುಖ್ಯಮಂತ್ರಿಯ ಆಯ್ಕೆಯಾಗಲಿದೆ.

ಮತ್ತಷ್ಟು ಓದಿ: Nitish Kumar: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ

ಮುಂಚೂಣಿಯಲ್ಲಿ ಸಾಮ್ರಾಟ್ ಚೌಧರಿ ಹೆಸರು
ಪ್ರಸ್ತುತ ಉಪಮುಖ್ಯಮಂತ್ರಿಯಾಗಿರುವ ಸಾಮ್ರಾಟ್ ಚೌಧರಿ ಅವರು ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ಅವರು ನಾಯಕತ್ವ ಬದಲಾವಣೆ ಕುರಿತು ಬಿಜೆಪಿಯ ಕೇಂದ್ರ ನಾಯಕತ್ವದೊಂದಿಗೆ ಚರ್ಚಿಸಲು ಈಗಾಗಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ನಿತೀಶ್ ಕುಮಾರ್ ಅವರ ಈ ನಡೆ ಕೇವಲ ಅಧಿಕಾರ ಬದಲಾವಣೆಯಲ್ಲ, ಬದಲಿಗೆ ಅವರ ಒಂದು ದೀರ್ಘಕಾಲದ ವೈಯಕ್ತಿಕ ಬಯಕೆಯ ಈಡೇರಿಕೆ ಕೂಡ ಹೌದು. ಬಿಜೆಪಿಯಿಂದ ದಿಲೀಪ್ ಜೈಸ್ವಾಲ್, ಸಾಮ್ರಾಟ್ ಚೌಧರಿ , ಸಂಜೀವ್ ಚೌರಾಸಿಯಾ ಮತ್ತು ಕೇಂದ್ರ ಸಚಿವ ನಿತ್ಯಾನಂದ್ ರೈ ಅವರ ಹೆಸರುಗಳು ಮುಖ್ಯಮಂತ್ರಿ ಹುದ್ದೆಗೆ ಚರ್ಚೆಯಾಗುತ್ತಿವೆ.ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ.

ಬಿಹಾರ ವಿಧಾನಸಭೆಯ ಎರಡೂ ಸದನಗಳು (ವಿಧಾನಸಭೆ ಮತ್ತು ವಿಧಾನ ಪರಿಷತ್ತು) ಹಾಗೂ ಸಂಸತ್ತಿನ ಎರಡೂ ಸದನಗಳ (ಲೋಕಸಭೆ ಮತ್ತು ರಾಜ್ಯಸಭೆ) ಸದಸ್ಯರಾಗುವ ಅಪರೂಪದ ಗೌರವ ಪಡೆಯುವುದು ನನ್ನ ಬಯಕೆಯಾಗಿತ್ತು ಎಂದು ಅವರು ಈ ಹಿಂದೆ ಹೇಳಿದ್ದರು.

ಮಾರ್ಚ್ 17 ರಂದು ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಅವರು, ಮಾರ್ಚ್ 30 ರಂದು ವಿಧಾನ ಪರಿಷತ್ತು ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ದೆಹಲಿಗೆ ತೆರಳುವ ಪ್ರಕ್ರಿಯೆ ಆರಂಭಿಸಿದ್ದರು.

ರಾಜಕೀಯ ಟೀಕೆ ಮತ್ತು ವಿಶ್ಲೇಷಣೆ
ನಿತೀಶ್ ಅವರ ಈ ನಿರ್ಧಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ತೇಜಸ್ವಿ ಯಾದವ್ ವಾಗ್ದಾಳಿ: ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಇದು ಬಲವಂತದ ನಿವೃತ್ತಿ ಎಂದು ಟೀಕಿಸಿದ್ದಾರೆ. ಬಿಜೆಪಿ ಸೂಚನೆಯ ಮೇರೆಗೆ ನಿತೀಶ್ ಅವರನ್ನು ರಾಜ್ಯದಿಂದ ಹೊರಗೆ ಕಳುಹಿಸಲಾಗುತ್ತಿದೆ ಮತ್ತು ಬಿಜೆಪಿಯು ಜೆಡಿ(ಯು) ಪಕ್ಷವನ್ನು ಸಂಪೂರ್ಣವಾಗಿ ಮುಗಿಸಲು ಈ ತಂತ್ರ ರೂಪಿಸಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ನಿತೀಶ್ ಅವರು ಬಿಹಾರದಿಂದ ದೂರವಾಗುವುದು ಅವರ ಪ್ರಾದೇಶಿಕ ಪ್ರಭಾವವನ್ನು ಕುಗ್ಗಿಸಬಹುದು. ರಾಜ್ಯದ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದ ನಾಯಕ ದೆಹಲಿಗೆ ತೆರಳುವುದು ಅವರ ಪಕ್ಷದ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದಿದ್ದಾರೆ.

ಒಟ್ಟಾರೆಯಾಗಿ, ಎನ್‌ಡಿಎ ಮೈತ್ರಿಕೂಟವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ ಕೆಲವೇ ತಿಂಗಳಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನ ತ್ಯಜಿಸುತ್ತಿರುವುದು ಬಿಹಾರದ ರಾಜಕೀಯ ಭೂಪಟದಲ್ಲಿ ದೊಡ್ಡ ಬದಲಾವಣೆಗಳಿಗೆ ನಾಂದಿ ಹಾಡಿದೆ. ಸಾಮ್ರಾಟ್ ಚೌಧರಿ ಅವರ ನೇತೃತ್ವದಲ್ಲಿ ಬಿಹಾರದಲ್ಲಿ ಹೊಸ ಪರ್ವ ಆರಂಭವಾಗಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026: ಆನ್​​​ಲೈನ್​​​ನಲ್ಲಿ ರಿಸಲ್ಟ್ ಪ್ರಕಟ

ಬೆಂಗಳೂರು, (ಏಪ್ರಿಲ್ 09): 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ (Karnataka 2nd PUC Result 2026) ಹೊರಬಿದ್ದಿದೆ. ಆನ್​​ಲೈನ್​​ ನಲ್ಲಿ ಫಲಿತಾಂಶ ಪ್ರಕಟವಾಗಿದ್ದು,  ಬಳಿಕ  ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಇಂದು (ಏಪ್ರಿಲ್ 09) ಸಂಜೆ 6ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ  ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ  ಪ್ರಕಟಿಸಲಿದ್ದಾರೆ. ಇದಕ್ಕೂ ಮೊದಲು ಆನ್​​ಲೈನ್​​ನಲ್ಲಿ https://karresults.nic.in ವೆಬ್​​ಸೈಟ್ ಮೂಲಕ ಫಲಿತಾಂಶವನ್ನು ಪರಿಶೀಲನೆ ಮಾಡಬಹುದು. ಒಂದು ವೇಳೆ ಸರ್ವರ್ ಸಮಸ್ಯೆ ಎದುರಾದರೆ ಡಿಜಿಲಾಕರ್ ಮೂಲಕವೂ ರಿಸ್ಟಲ್ ಚೆಕ್ ಮಾಡಬಹುದಾಗಿದ್ದು ಹೇಗೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

 ಪರೀಕ್ಷೆಗೆ ಎದುರಿಸಿದ ವಿದ್ಯಾರ್ಥಿಗಳ ಸಂಖ್ಯೆ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 28ರಿಂದ ಮಾರ್ಚ್ 12ರವರೆಗೆ ರಾಜ್ಯಾದ್ಯಂತ ಒಟ್ಟು 1217 ಕೇಂದ್ರಗಳಲ್ಲಿ ನಡೆದಿದ್ದು, 5174 ಕಾಲೇಜುಗಳ ಒಟ್ಟು 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಣಿ ಮಾಡಿಕೊಂಡಿದ್ದರು. ಈ ಪೈಕಿ ಸೈನ್ಸ್ ವಿಷಯದಲ್ಲಿ 2.92 ಲಕ್ಷ, ವಾಣಿಜ್ಯ ವಿಭಾಗದಲ್ಲಿ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.

ಇದನ್ನೂ ಓದಿ: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026: ಸರ್ವರ್ ಕಿರಿಕಿರಿಗೆ ಬೈ ಹೇಳಿ, ವೆಬ್‌ಸೈಟ್‌ಗಿಂತಲೂ ಮೊದಲೇ ದ್ವಿತೀಯ PUC ರಿಸಲ್ಟ್​ ನೋಡಿ

ನಿಮ್ಮ ರಿಸಲ್ಟ್‌ ಹೀಗೆ ಚೆಕ್ ಮಾಡಿ

ದ್ವಿತೀಯ ಪಿಯುಸಿ ಫಲಿತಾಂಶದ ಮಾಹಿತಿ ಅಧಿಕೃತ ವೆಬ್‌ಸೈಟ್‌ https://karresults.nic.in
ಲಿಂಕ್ ಮೂಲಕ ರಿಸಲ್ಟ್ ವೀಕ್ಷಿಸಬಹುದಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ, ‘Submit’ ಬಟನ್ ಒತ್ತಿದ ತಕ್ಷಣ ಅಂಕಪಟ್ಟಿ ಪರದೆ ಓಪನ್ ಆಗಲಿದೆ.

ಈ ಬಾರಿ ಡಿಜಿಲಾಕರ್‌ನಲ್ಲೂ ಫಲಿತಾಂಶ ಲಭ್ಯ

ಇನ್ನುಳಿದಂತೆ ಕರ್ನಾಟಕ ಒನ್ ಮೊಬೈಲ್ ಆ್ಯಪ್‌ ನಲ್ಲಿ ಸಿಗಲಿದೆ. ವಿದ್ಯಾರ್ಥಿಗಳ ಮೊಬೈಲ್‌ಗೆ SMS ಮೂಲಕ ಫಲಿತಾಂಶದ ಮಾಹಿತಿ ರವಾನೆಯಾಗುತ್ತದೆ. ಇನ್ನು ಈ ವರ್ಷ ಪ್ರಥಮ ಬಾರಿಗೆ ಡಿಜಿಲಾಕರ್‌ನಲ್ಲೂ https://www.digilocker.govt.in ನಲ್ಲೂ ರಿಸಲ್ಟ್‌ ವೀಕ್ಷಿಸಬಹುದಾಗಿದೆ.

ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯು ಡಿಜಿಲಾಕರ್ ಮೂಲಕ ಲಭ್ಯವಾಗಲಿದೆ. ಒಂದು ವೇಳೆ ವೆಬ್​​ಸೈಟ್​​ನಲ್ಲಿ ರಿಸಲ್ಟ್ ನೋಡುವಾಗ ಸರ್ವರ್ ಸಮಸ್ಯೆ ಎದುರಾದರೆ ಡಿಜಿಲಾಕರ್ ಮೂಲಕವೇ ಮಾರ್ಕ್ಸ್ ಕಾರ್ಡ್ ಪಡೆದುಕೊಳ್ಳಬಹುದು.

ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ತಕ್ಷಣ ಲಕ್ಷಾಂತರ ವಿದ್ಯಾರ್ಥಿಗಳು ಒಮ್ಮೆಗೆ ಅಧಿಕೃತ ವೆಬ್‌ಸೈಟ್‌ಗಳ ಮೇಲೆ ಮುಗಿಬೀಳುತ್ತಾರೆ. ಇದರಿಂದ ಸರ್ವರ್ ಸಮಸ್ಯೆ ಅಥವಾ ಪೇಜ್ ಲೋಡ್ ಆಗಲು ಬಹಳ ಸಮಯ ತೆಗೆದುಕೊಳ್ಳುವುದು ಮಾಮೂಲಿ. ಆದರೆ ಈ ಬಾರಿ ನೀವು ವೆಬ್‌ಸೈಟ್ ಓಪನ್ ಆಗುವವರೆಗೆ ಕಾಯಬೇಕಾದ ಅಗತ್ಯವಿಲ್ಲ. ಡಿಜಿಲಾಕರ್ ಮೂಲಕವೇ ನೇರವಾಗಿ ಅಂಕಪಟ್ಟಿ ಡೌನ್ ಲೋಡ್ ಮಾಡಿಕೊಂಡು ನಿಮ್ಮ ಫಲಿತಾಂಶ ಪಡೆಯಬಹುದು. ವೆಬ್‌ಸೈಟ್‌ಗಿಂತಲೂ ವೇಗವಾಗಿ ಮತ್ತು ಸುಲಭವಾಗಿ ನಿಮ್ಮ ಅಂಕಪಟ್ಟಿ ಪಡೆಯಲು ನಿಮ್ಮ ಮೊಬೈಲ್ ನಲ್ಲಿ ‘DigiLocker’ ಡೌನ್‌ಲೋಡ್ ಮಾಡಿ. ಅಪ್ಲಿಕೇಶನ್ ಇಲ್ಲದಿದ್ದರೆ ನೇರವಾಗಿ digilocker.gov.in ವೆಬ್‌ಸೈಟ್‌ಗೂ ಭೇಟಿ ನೀಡಬಹುದು.

ಶಿಕ್ಷಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದರ್ಶನ’ ಸಿನಿಮಾ ಮುಹೂರ್ತ: ತಬಲಾ ನಾಣಿ ಮಾತಿಗೆ ನಕ್ಕು ಸುಸ್ತಾದ ಜನ

ಇತ್ತೀಚೆಗಷ್ಟೆ ಕನ್ನಡದ ಮೂರು ಸಿನಿಮಾಗಳ (Cinema) ಮುಹೂರ್ತ ಒಟ್ಟಿಗೆ ನಡೆದಿದೆ. ‘ದರ್ಶನ’, ‘ಸೀತಾರಾಮ ರಾಜು’ ಮತ್ತು ‘ಕಾಡ’ ಸಿನಿಮಾದ ಮುಹೂರ್ತಗಳು ಒಟ್ಟಿಗೆ ನಡೆದಿದ್ದು, ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಮುಖ ನಟ, ನಟಿಯರು ಮುಹೂರ್ತದಲ್ಲಿ ಹಾಜರಾಗಿದ್ದರು. ಮಾಧ್ಯಮಗಳೊಟ್ಟಿಗೆ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪೃಥ್ವಿ ಅಂಬರ್ ನಟಿಸುತ್ತಿರುವ ‘ದರ್ಶನ’ ಸಿನಿಮಾನಲ್ಲಿ ನಟಿಸಲಿರುವ ಪೋಷಕ ನಟ ತಬಲಾ ನಾಣಿ ಮುಹೂರ್ತದ ವೇಳೆ ಮಾತನಾಡಿದ್ದು, ಅವರ ತಮಾಷೆ ಮಾತುಗಳು ಕೇಳಿ ಸಭಿಕರು ನಕ್ಕು ಹಗುರಾದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ರಾಷ್ಟ್ರೀಯ ಸಿನಿಮಾ ಅಕಾಡೆಮಿ ಪ್ರಶಸ್ತಿ ಘೋಷಣೆ: ಯಾರಿಗೆಲ್ಲ ಸಿಕ್ಕಿತು ಅವಾರ್ಡ್

ಭಾರತದ 12 ಚಿತ್ರರಂಗಗಳನ್ನು (Movie Industry) ಪ್ರತಿನಿಧಿಸುವ ಭಾರತೀಯ ರಾಷ್ಟ್ರೀಯ ಸಿನಿ ಅಕಾಡೆಮಿ ತಮ್ಮ 2026ರ ಐಎನ್​​ಸಿಎ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಭಾಷಾವಾರು ಈ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಕನ್ನಡದಲ್ಲಿ ಎಲ್ಲ ಪ್ರಶಸ್ತಿಗಳನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ನೀಡಲಾಗಿದೆ. ‘ಕಾಂತಾರ: ಚಾಪ್ಟರ್ 1’ ಹೊರತಾಗಿ ಇನ್ಯಾವ ಕನ್ನಡ ಸಿನಿಮಾಕ್ಕೂ ಐಎನ್​​ಸಿಎ ಪ್ರಶಸ್ತಿ ಲಭಿಸಿಲ್ಲ.

ಅತ್ಯುತ್ತಮ ನಟ, ನಟಿ, ನಿರ್ದೇಶಕ ಮತ್ತು ಸಿನಿಮಾ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಐಎನ್​​ಸಿಎ ಘೋಷಿಸಿದೆ. ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ‘ಕಾಂತಾರ: ಚಾಪ್ಟರ್ 1’, ಅತ್ಯುತ್ತಮ ನಟ ರಿಷಬ್ ಶೆಟ್ಟಿ, ಅತ್ಯುತ್ತಮ ನಿರ್ದೇಶಕ ರಿಷಬ್ ಶೆಟ್ಟಿ, ಅತ್ಯುತ್ತಮ ನಟಿ ರುಕ್ಮಿಣಿ ವಸಂತ್ ಅವರಿಗೆ ನೀಡಲಾಗಿದೆ. ತೆಲುಗಿನಲ್ಲಿ ಅತ್ಯುತ್ತಮ ನಟಿ ರಶ್ಮಿಕಾ ಮಂದಣ್ಣ (ಗರ್ಲ್​​ಫ್ರೆಂಡ್), ಅತ್ಯುತ್ತಮ ನಟ ಅಕ್ಕಿನೇನಿ ನಾಗಾರ್ಜುನ (ತಂಡೇಲ್), ಅತ್ಯುತ್ತಮ ನಿರ್ದೇಶಕ ಅನಿಲ್ ರವಿಪುಡಿ (ಸಂಕ್ರಾಂತಿಕಿ ವಸ್ತುನ್ನಾಮ್) ಅತ್ಯುತ್ತಮ ಸಿನಿಮಾ ‘ಮಿರಾಯ್’ಗೆ ನೀಡಲಾಗಿದೆ.

ತಮಿಳಿನಲ್ಲಿ ಅತ್ಯುತ್ತಮ ನಟ ದುಲ್ಕರ್ ಸಲ್ಮಾನ್ (ಕಾಂತಾ), ಅತ್ಯುತ್ತಮ ನಟಿ ಸಿಮ್ರನ್ (ಟೂರಿಸ್ಟ್ ಫ್ಯಾಮಿಲಿ), ಅತ್ಯುತ್ತಮ ನಿರ್ದೇಶಕ ಮಾರಿ ಸೆಲ್ವರಾಜ್ (ಬೈಸನ್), ಅತ್ಯುತ್ತಮ ಸಿನಿಮಾ ‘ಟೂರಿಸ್ಟ್ ಫ್ಯಾಮಿಲಿ’ಗೆ ನೀಡಲಾಗಿದೆ. ಮಲಯಾಳಂನಲ್ಲಿ ಅತ್ಯುತ್ತಮ ನಟ ನಿವಿನ್ ಪೌಲಿ (ಸರ್ವಂ ಮಾಯ), ಅತ್ಯುತ್ತಮ ನಟಿ ಕಲ್ಯಾಣಿ ಪ್ರಿಯದರ್ಶಿನಿ (ಲೋಕಃ), ಅತ್ಯುತ್ತಮ ನಿರ್ದೇಶಕ ಡಾಮಿನಿಕ್ ಅರುಣ್ (ಲೋಕಃ), ಅತ್ಯುತ್ತಮ ಸಿನಿಮಾ ‘ಲೋಕಃ’.

ಇದನ್ನೂ ಓದಿ:ಮತ್ತೆ ಬಾಲಿವುಡ್​​ಗೆ ಹಾರಿದ ಧನುಶ್, ಆನಂದ್ ಜೊತೆ ನಾಲ್ಕನೇ ಸಿನಿಮಾ

ಹಿಂದಿಯ ಅತ್ಯುತ್ತಮ ಸಿನಿಮಾ ‘ಛಾವಾ’, ಅತ್ಯುತ್ತಮ ನಟ ರಣ್ವೀರ್ ಸಿಂಗ್ (ಧುರಂಧರ್), ಅತ್ಯುತ್ತಮ ನಿರ್ದೇಶಕ ಆದಿತ್ಯ ಧರ್ (ಧುರಂಧರ್), ಅತ್ಯುತ್ತಮ ನಟಿ ಯಾಮಿ ಗೌತಮ್ (ಹಖ್). ಇವುಗಳು ಮಾತ್ರವೇ ಅಲ್ಲದೆ, ಬೆಂಗಾಲಿ, ಅಸ್ಸಾಮಿ, ಮರಾಠಿ, ಪಂಜಾಬಿ, ಗುಜರಾತಿ ಇನ್ನೂ ಕೆಲ ಭಾಷೆಗಳ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ಐಎನ್​​ಸಿಎ ಘೋಷಿಸಿದೆ. ಪ್ರಶಸ್ತಿ ವಿತರಣೆ ಸಮಾರಂಭ ಶೀಘ್ರವೇ ನಡೆಯಲಿದ್ದು, ಕರಣ್ ಜೋಹರ್ ಮತ್ತು ರಾನಾ ದಗ್ಗುಬಾಟಿ ಅವರುಗಳು ಸಮಾರಂಭದ ನಿರೂಪಣೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಾಲ ಬಿಚ್ಚಿದರೆ ಗಡೀಪಾರು: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ರೌಡಿಗಳಿಗೆ ಕಮಿಷನರ್ ಖಡಕ್ ಎಚ್ಚರಿಕೆ

ಹುಬ್ಬಳ್ಳಿ, ಏಪ್ರಿಲ್ 9: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ (Hubballi-Dharawad) ಇತ್ತೀಚೆಗೆ ಪುಡಿ ರೌಡಿಗಳ ಉಪಟಳ ಮತ್ತು ಚಾಕು ಇರಿತದಂತಹ ಕೃತ್ಯಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಗರದ ಹಳೆ ಸಿಎಆರ್ (CAR) ಮೈದಾನದಲ್ಲಿ ಇಂದು ನಡೆದ ಬೃಹತ್ ರೌಡಿ ಪರೇಡ್‌ನಲ್ಲಿ 450ಕ್ಕೂ ಹೆಚ್ಚು ರೌಡಿ ಶೀಟರ್‌ಗಳು ಭಾಗಿಯಾಗಿದ್ದರು.

ಬಾಲ ಬಿಚ್ಚಿದರೆ ಗುಂಡಾ ಕಾಯ್ದೆ

ನೆತ್ತಿ ಸುಡುವ ಬಿಸಿಲಿನಲ್ಲಿ ನಡೆದ ಈ ಪರೇಡ್‌ನಲ್ಲಿ ಒಬ್ಬೊಬ್ಬರ ಹಳೆಯ ಇತಿಹಾಸ (Criminal Records) ಕೆದಕಿದ ಕಮಿಷನರ್, ಸಾರ್ವಜನಿಕರ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಕೆಲಸ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಯಾರಾದರೂ ಬಾಲ ಬಿಚ್ಚಿದರೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನಗರದಿಂದ ಗಡಿಪಾರು ಮಾಡಲಾಗುವುದು ಎಂದು ಅವರು ಗುಡುಗಿದರು. ಈಗಾಗಲೇ ಈ ವರ್ಷ 30ಕ್ಕೂ ಹೆಚ್ಚು ರೌಡಿಗಳನ್ನು ಗಡಿಪಾರು ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.

816 ಜನರಿಗೆ ರೌಡಿ ಪಟ್ಟಿಯಿಂದ ಮುಕ್ತಿ

ಇದೇ ವೇಳೆ, ಅಪರಾಧ ಲೋಕವನ್ನು ಬಿಟ್ಟು ಸನ್ನಡತೆಯಿಂದ ಬದುಕುತ್ತಿರುವವರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ. 2026ರ ಆರಂಭದಲ್ಲಿ ಅವಳಿ ನಗರದಲ್ಲಿ 1,320 ರೌಡಿ ಶೀಟರ್‌ಗಳಿದ್ದರು. ಅವರಲ್ಲಿ ಸನ್ನಡತೆ ತೋರಿದ 816 ಜನರನ್ನು ರೌಡಿ ಪಟ್ಟಿಯಿಂದ ಕೈಬಿಡಲಾಗಿದೆ. ಪ್ರಸ್ತುತ ನಗರದಲ್ಲಿ 510 ಸಕ್ರಿಯ ರೌಡಿ ಶೀಟರ್‌ಗಳಿದ್ದು, ಈ ವರ್ಷ ಹೊಸದಾಗಿ 100ಕ್ಕೂ ಹೆಚ್ಚು ಜನರ ಮೇಲೆ ನಿಗಾ ಇರಿಸಿ ರೌಡಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ.

ಇದನ್ನೂ ಓದಿ: ಮನೆ ಮುಂದಿನ ಹಿಂದೂ ಮಹಿಳೆ ಜತೆ ಮುಸ್ಲಿಂ ವ್ಯಕ್ತಿ ಜೂಟ್: ಕಣ್ಣೀರಿಟ್ಟ ತಾಯಿ

ಒಟ್ಟಾರೆಯಾಗಿ, ಹುಬ್ಬಳ್ಳಿ-ಧಾರವಾಡದಲ್ಲಿ ಶಾಂತಿ ಕಾಪಾಡಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಅಪರಾಧ ಕೃತ್ಯಗಳಲ್ಲಿ ತೊಡಗುವವರಿಗೆ ಜೈಲೇ ಗತಿ ಎಂಬ ಸಂದೇಶ ರವಾನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡೆಲಿವರಿ ಬಾಯ್​​ಗೆ ಬೆದರಿಸಿ ತಡ ರಾತ್ರಿ ಹಣ ಪೀಕಿದ ಗುಂಪು: ದೂರು ನೀಡದಂತೆಯೂ ಬೆದರಿಕೆ

ಬೆಂಗಳೂರು, ಏಪ್ರಿಲ್​​ 09: ತಡ ರಾತ್ರಿಯೂ ಕೆಲಸ ಮಾಡುವ ಡೆಲಿವರಿ ಬಾಯ್​​ಗಳನ್ನೇ ಟಾರ್ಗೆಟ್​​ ಮಾಡಿ ದೋಚುವ ಪ್ರಕರಣಗಳು ಬೆಂಗಳೂರಲ್ಲಿ (Bengaluru) ಮೇಲಿಂದ ಮೇಲೆ ನಡೆಯುತ್ತಿದ್ದು, ಇವುಗಳ ಸಾಲಿಗೆ ಮತ್ತೊಂದು ಕೇಸ್​​ ಸೇರ್ಪಡೆಯಾಗಿದೆ. ನಗರದ ನೆಕ್ಸಸ್​​ ಮಾಲ್​​ ಬಳಿ ನಿಂತಿದ್ದ 19 ವರ್ಷದ ಡೆಲಿವರಿ ಬಾಯ್​​ನ ಬೆದರಿಸಿರುವ ಮೂರು ಮಂದಿಯ ಗುಂಪು, ಆನ್‌ಲೈನ್ ಮೂಲಕ 49 ಸಾವಿರ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿರುವ ಬಗ್ಗೆ ದೂರು ದಾಖಲಾಗಿದೆ. ಯುವಕನ ಮೇಲೆ ಹಲ್ಲೆ ನಡೆಸಿರುವ ಬಗ್ಗೆಯೂ ಆರೋಪಿಸಲಾಗಿದೆ.

ಮಾರ್ಚ್​​ 31ರ ರಾತ್ರಿ ಸುಮಾರು 1:30ರ ವೇಳೆಗೆ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಮೂಲದ ಹಾಲಿ ಸುದ್ದಗುಂಟೆಪಾಳ್ಯದ ತಾವರೆಕೆರೆಯಲ್ಲಿ ವಾಸವಾಗಿರುವ ಗೋಪಿಕಿಶನ್ ಎಂಬ ಯುವಕನಿಂದ ಆರೋಪಿಗಳು ಹಣ ಪೀಕಿದ್ದು, ವಿದ್ಯಾರ್ಥಿಯಾಗಿರುವ ಈತ ಶಿಕ್ಷಣ ಸಂಬಂಧ ಹಣಕ್ಕಾಗಿ ಪಾರ್ಟ್​​ ಟೈಂ ಡೆಲಿವರಿ ಬಾಯ್​​ ಆಗಿ ಕೆಲಸಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಗೋಪಿಕಿಶನ್ ಹಾಗೂ ಅವನ ಸ್ನೇಹಿತ ಓಂಕಾರ್ ನೆಕ್ಸಸ್ ಮಾಲ್ ಹೊರಗೆ ಆರ್ಡರ್‌ಗಾಗಿ ಕಾಯುತ್ತಿದ್ದಾಗ ಬಂದ ಮೂವರು ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟಿರುವ ದುರುಳರು ಮುಖ ಹಾಗೂ ಕೈಗಳ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ನಗದು ಸಿಗದಿದ್ದಾಗ, ಗೋಪಿಕಿಶನ್‌ನ ಮೊಬೈಲ್ ಕಸಿದುಕೊಂಡು ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಪಾಸ್‌ವರ್ಡ್ ಕೇಳಿ, ಬಲವಂತವಾಗಿ 49 ಸಾವಿರ ರೂಪಾಯಿ ಹಣವನ್ನು ತಮ್ಮ ಖಾತೆಗೆ ಆರೋಪಿಗಳು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಉದ್ಯಮಿಗೆ ಬೆದರಿಸಿ ಹಣ ಸುಲಿಗೆ;  ನಗರಸಭೆ ಮಾಜಿ ಸದಸ್ಯ ಅಂದರ್, ಮತ್ತೋರ್ವ ವಶಕ್ಕೆ

ದೂರು ನೀಡದಂತೆ ಬೆದರಿಕೆ

ಡೆಲಿವರಿ ಬಾಯ್​​ನಿಂದ ಹಣ ಪೀಕಿದ ಬಳಿಕ ಈ ಸಂಬಂಧ ದೂರು ಕೊಡಬಾರದು ಎಂದು ಆರೋಪಿಗಳು ಬೆದರಿಕೆ ಹಾಕಿದ್ದರು. ಆದರೂ ಕುಟುಂಬದವರು ಹಾಗೂ ಸ್ನೇಹಿತರ ಸಲಹೆಯ ಮೇರೆಗೆ ಅಂತಿಮವಾಗಿ ಗೋಪಿಕಿಶನ್ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026: RCB ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಬಹುತೇಕ ಖಚಿತ

IPL 2026: ಐಪಿಎಲ್ 2026ರ 16ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಬಲಿಷ್ಠ ರಾಜಸ್ಥಾನ್ ರಾಯಲ್ಸ್ (RR) ತಂಡವನ್ನು ಎದುರಿಸಲಿದೆ. ಗುವಾಹಟಿಯ ಎಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸತತ ಗೆಲುವಿನ ಓಟವನ್ನು ಮುಂದುವರಿಸುವ ಗುರಿಯನ್ನು ಆರ್​ಸಿಬಿ ಹೊಂದಿದೆ. ಇದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲಿದೆ.

RCB ತಂಡದ ಬಲ:

ಬ್ಯಾಟರ್​ಗಳೇ ಆರ್​ಸಿಬಿ ತಂಡದ ಬಲಿಷ್ಠ ಶಕ್ತಿ. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರ ಸ್ಫೋಟಕ ಆರಂಭವು ತಂಡಕ್ಕೆ ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ದೇವದತ್ ಪಡಿಕ್ಕಲ್ ಕಳೆದ ಎರಡು ಮ್ಯಾಚ್​ಗಳಲ್ಲೂ ಅರ್ಧಶತಕ ಸಿಡಿಸಿದ್ದಾರೆ.

ಇನ್ನು ನಾಯಕ ರಜತ್ ಪಾಟಿದಾರ್, ಟಿಮ್ ಡೇವಿಡ್ ಅವರ ಅಬ್ಬರವನ್ನು ತಡೆಯುವುದೇ ಬೌಲರ್​ಗಳ ಮುಂದಿರುವ ಅತೀ ದೊಡ್ಡ ಸವಾಲು. ಇದಾದ ಬಳಿಕ ಅಬ್ಬರಿಸಲು ಕೃನಾಲ್ ಪಾಂಡ್ಯ, ಜಿತೇಶ್ ಶರ್ಮಾ ಹಾಗೂ ರೊಮಾರಿಯೋ ಶೆಫರ್ಡ್ ಇದ್ದಾರೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್​ಸಿಬಿ ತಂಡದ ಬ್ಯಾಟಿಂಗ್​ ಲೈನಪ್​ನಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ.

ಒಂದು ಬದಲಾವಣೆ:

ಕಳೆದ ಎರಡು ಮ್ಯಾಚ್​ಗಳಿಂದ ಹೊರಗುಳಿದಿದ್ದ ಜೋಶ್ ಹೇಝಲ್​ವುಡ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ. ಹೇಝಲ್​ವುಡ್ ಆಡುವ ಬಳಗದಲ್ಲಿ ಕಾಣಿಸಿಕೊಂಡರೆ, ಜೇಕಪ್ ಡಫಿ ಹೊರಗುಳಿಯಬೇಕಾಗುತ್ತದೆ. ಹೀಗಾಗಿ ಆರ್​ಆರ್​ ವಿರುದ್ಧ ಆರ್​ಸಿಬಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಕಂಡು ಬರುವ ಸಾಧ್ಯತೆ ಹೆಚ್ಚಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ಫಿಲ್ ಸಾಲ್ಟ್ (ವಿಕೆಟ್ ಕೀಪರ್)
  • ವಿರಾಟ್ ಕೊಹ್ಲಿ
  • ದೇವದತ್ ಪಡಿಕ್ಕಲ್
  • ರಜತ್ ಪಾಟಿದಾರ್ (ನಾಯಕ)
  • ಜಿತೇಶ್ ಶರ್ಮಾ
  • ಟಿಮ್ ಡೇವಿಡ್
  • ರೊಮಾರಿಯೋ ಶೆಫರ್ಡ್
  • ಕೃನಾಲ್ ಪಾಂಡ್ಯ
  • ಭುವನೇಶ್ವರ್ ಕುಮಾರ್
  • ಅಭಿನಂದನ್ ಸಿಂಗ್
  • ಜೋಶ್ ಹೇಝಲ್​ವುಡ್.
  • ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್).

ಉಭಯ ತಂಡಗಳ ಮುಖಾಮುಖಿ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ 34 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಆರ್​ಸಿಬಿ ಗೆದ್ದಿರುವುದು 17 ಪಂದ್ಯಗಳಲ್ಲಿ. ಹಾಗೆಯೇ 14 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಜಯ ಸಾಧಿಸಿದೆ. ಇನ್ನುಳಿದ 3 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿದ್ದವು.

ಇನ್ನು ಕಳೆದ ಕಳೆದ ಐದು ಮುಖಾಮುಖಿಯಲ್ಲಿ ಆರ್​ಸಿಬಿ  3 ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ್ ರಾಯಲ್ಸ್​ 2 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇದೀಗ ಉಭಯ ತಂಡಗಳು 35ನೇ ಬಾರಿ ಮುಖಾಮುಖಿಯಾಗಲು ಸಜ್ಜಾಗಿದೆ.

ಇದನ್ನೂ ಓದಿ: IPL 2026: ಹೀಗೆ ಮಾಡಿದ್ರೆ ಮಾತ್ರ RCB ಇಬ್ಬರನ್ನು ಜೊತೆಯಾಗಿ ಕಣಕ್ಕಿಳಿಸಬಹುದು..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ಯಶ್ ದಯಾಳ್ (ಅಲಭ್ಯ).

 

Source link

ಧೋಬಿ ಎಲ್ಲಿ ಡೈಮಂಡ್ ಡೀಲ್ಸ್ ಎಲ್ಲಿ? ಬಟ್ಟೆ ಒಗೆಯುವವನಿಗೆ 598 ಕೋಟಿ ರೂ ಟ್ಯಾಕ್ಸ್ ನೋಟೀಸ್ ಬಂದಿದ್ದು ಯಾಕೆ?

ಅಜ್ಮೇರ್, ಏಪ್ರಿಲ್ 9: ಬಟ್ಟೆ ಒಗೆಯುವ ಕಾಯದ ಧೋಬಿಗೆ ಆದಾಯ ತೆರಿಗೆ ಇಲಾಖೆಯಿಂದ (Income Tax) ಬರೋಬ್ಬರಿ 598 ಕೋಟಿ ರೂಗಳ ಟ್ಯಾಕ್ಸ್ ನೋಟೀಸ್ ಬಂದಿದೆ. ಧೋಬಿ ಹೆಸರಲ್ಲಿ ದೊಡ್ಡ ಪ್ರಮಾಣದ ಡೈಮಂಡ್ ವ್ಯಾಪಾರ ನಡೆದಿದ್ದ ಹಿನ್ನೆಲೆಯಲ್ಲಿ ಇನ್ಕಮ್ ಟ್ಯಾಕ್ಸ್ ಇಲಾಖೆಯು ಆತನ ಬೆನ್ನು ಬಿದ್ದಿದೆ. ರಾಜಸ್ಥಾನದ ಅಜ್ಮೇರ್ ನಗರದ ರಾಮಗಂಜ್ ಎಂಬಲ್ಲಿನ ರಸ್ತೆಬದಿಯಲ್ಲಿ ಬಟ್ಟೆ ಒಗೆಯುವ ಮತ್ತು ಇಸ್ತ್ರಿ ಮಾಡುವ ಅಂಗಡಿ ಇಟ್ಟುಕೊಂಡಿರುವ ಜಿತೇಂದ್ರ ಕುಮಾರ್ ಎನ್ನುವ ಈ ಅಮಾಯಕ ವ್ಯಕ್ತಿ ಈಗ ನೂರಾರು ಕೋಟಿ ರೂ ಮಾತುಗಳನ್ನು ಕೇಳಿ ದಿಕ್ಕು ತೋಚದಂತಾಗಿದ್ದಾನೆ.

ಬ್ಯಾಂಕ್ ಅಕೌಂಟ್ ಇವನದ್ದಲ್ಲ… ಆದರೆ, ನೋಟೀಸ್ ಯಾಕೆ?

ಜಿತೇಂದ್ರ ಕುಮಾರ್ ಅವರ ಹೆಸರಿನಲ್ಲಿ ಇರುವ ಬ್ಯಾಂಕ್ ಅಕೌಂಟ್​ನಿಂದ ನೂರಾರು ಕೋಟಿ ರೂ ಮೊತ್ತದ ವಹಿವಾಟು ನಡೆದಿದೆ. ಆದರೆ, ಇವರನ್ನು ಕೇಳಿದಾಗ, ಆ ಬ್ಯಾಂಕ್ ಅಕೌಂಟ್ ತನ್ನದಲ್ಲ. ತನಗೇನೂ ಗೊತ್ತಿಲ್ಲ ಎಂದಿದ್ದಾನೆ. ಆದರೆ, ಎರಡು ವರ್ಷದ ಹಿಂದೆ ಪಾಲಿಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದಾಗಿ ಒಂದು ಮಾಹಿತಿ ನೀಡುತ್ತಾನೆ.

ಇದನ್ನೂ ಓದಿ: ಬೇರೆಯವರ ಪ್ಯಾನ್ ಕಾರ್ಡ್ ದಾಖಲೆ ಬಳಸಿ ಸಾಲ ಸೂರೆಗೊಂಡ ವಂಚಕರು; ನಿಮ್ಮ ಪ್ಯಾನ್ ದುರ್ಬಳಕೆ ಗುರುತಿಸುವುದು ಹೇಗೆ?

ಜಿತೇಂದ್ರ ಕುಮಾರ್ ಅವರು ವಕೀಲರೊಬ್ಬರ ಸಹಾಯದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ವಕೀಲ ರಾಕೇಶ್ ತಾಡ ಅವರು ಪಾಲಿಯಲ್ಲಿರುವ ಯಾರೂ ವ್ಯಾಪಾರಿಯು ಜಿತೇಂದ್ರನ ಅಕೌಂಟ್ ಅನ್ನು ನಿಭಾಯಿಸುತ್ತಿರಬಹುದು ಎಂದು ಅನುಮಾನಿಸಿದ್ದಾರೆ. ಬ್ಯಾಂಕ್ ಹಾಗೂ ಅಕೌಂಟ್ ನಿಭಾಯಿಸುತ್ತಿರುವ ವ್ಯಕ್ತಿಯ ವಿರುದ್ಧ ಎಫ್​ಐಆರ್ ಸಲ್ಲಿಸಿದ್ದೇವೆ ಎಂದು ವಕೀಲರು ತಿಳಿಸಿದ್ದಾರೆ.

‘598 ಕೋಟಿ ರೂ ವಹಿವಾಟು ನಡೆಸಲಾಗಿರುವುದರ ವಿವರ ಕೇಳಿ ಐಟಿ ಇಲಾಖೆ ಶೋಕಾಸ್ ನೋಟೀಸ್ ಕೊಟ್ಟಿದೆ. ನಾವು ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದೇವೆ’ ಎಂದು ರಾಕೇಸ್ ತಾಡ ಮಾಹಿತಿ ನೀಡಿದ್ದಾರೆ.

ಪ್ಯಾನ್ ಕಾರ್ಡ್ ಕಳುವಾದರೆ ಏನು ಮಾಡಬೇಕು?

ಪ್ಯಾನ್ ಮತ್ತು ಆಧಾರ್ ದಾಖಲೆಗಳು ದುಷ್ಕರ್ಮಿಗಳ ಕೈಗೆ ಸಿಕ್ಕರೆ ದುರುಪಯೋಗವಾಗುವ ಸಾಧ್ಯತೆ ಹೆಚ್ಚು. ನಿಮ್ಮ ಗುರುತಿನ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ತೆರೆದು, ಅದಕ್ಕೆ ನಿಮ್ಮ ಪ್ಯಾನ್ ಅನ್ನು ನೀಡಲಾಗುತ್ತದೆ. ಆ ಅಕೌಂಟ್​ನಲ್ಲಿ ಏನೇ ವಹಿವಾಟು ಆದರೂ ಪ್ಯಾನ್​ನಲ್ಲಿ ದಾಖಲಾಗುತ್ತದೆ. ಇದರಿಂದ ವಂಚಕರು ಸಿಕ್ಕಿಬೀಳುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ

ಇಂಥ ದುರ್ಬಳಕೆ ಬಗ್ಗೆ ಎಚ್ಚರದಿಂದಿರಬೇಕು. ಅಪರಿಚಿತರಿಗೆ ಮೊಬೈಲ್ ಒಟಿಪಿ ನೀಡಬಾರದು. ಆಗಾಗ್ಗೆ ಕ್ರೆಡಿಟ್ ಸ್ಕೋರ್ ಪರಿಶೀಲಿಸಬೇಕು. ಕ್ರೆಡಿಟ್ ರಿಪೋರ್ಟ್ ಕೂಡ ತೆಗೆಸುತ್ತಿರಬೇಕು. ಅದರಲ್ಲಿ ಪ್ಯಾನ್ ಅಡಿಯಲ್ಲಿ ಏನೇನು ವಹಿವಾಟು ನಡೆದಿದೆ ಎಲ್ಲವೂ ದಾಖಲಾಗಿರುತ್ತದೆ. ನಿಮ್ಮ ಸಮ್ಮತಿ ಇಲ್ಲದೆ ಯಾವುದಾದರೂ ವಹಿವಾಟು ನಡೆದಿದ್ದರೆ ದೂರು ಕೊಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೈಕ್​ನಲ್ಲಿ ಬಂದು ಮತ ಚಲಾಯಿಸಿದ ಪುದುಚೇರಿ ಸಿಎಂ ರಂಗಸ್ವಾಮಿ! ವಿಡಿಯೋ ವೈರಲ್

ಪುದುಚೇರಿ, ಏಪ್ರಿಲ್ 9: ಪುದುಚೇರಿ ಮುಖ್ಯಮಂತ್ರಿ ಹಾಗೂ ಎಐಎನ್ಆರ್‌ಸಿ (AINRC) ಮುಖ್ಯಸ್ಥ ಎನ್. ರಂಗಸ್ವಾಮಿ ವಿಧಾನಸಭೆ ಚುನಾವಣೆ ವೇಳೆ ಸರಳತೆ ಮೆರೆದಿದ್ದಾರೆ. ಮಂಗಲಂ, ತಟ್ಟಂಚವಾಡಿ ಕ್ಷೇತ್ರಗಳ ಅಭ್ಯರ್ಥಿಯಾಗಿರುವ ಅವರು, ಯಾವುದೇ ಹಮ್ಮುಬಿಮ್ಮಿಲ್ಲದೆ ಸಾಮಾನ್ಯರಂತೆ ಬೈಕ್ ಚಲಾಯಿಸಿಕೊಂಡು ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಮತದಾನದ ಬಳಿಕ ಅದೇ ಬೈಕ್‌ನಲ್ಲಿ ಮರಳಿದ ಸಿಎಂ ಅವರ ವಿಡಿಯೋ ಮತ್ತು ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ವಿಡಿಯೋ ಕೃಪೆ: ಎಎನ್​ಐ

ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಹೀಗೆ ಮಾಡಿದ್ರೆ ಮಾತ್ರ RCB ಇಬ್ಬರನ್ನು ಜೊತೆಯಾಗಿ ಕಣಕ್ಕಿಳಿಸಬಹುದು..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಶುಕ್ರವಾರ (ಏ.10) ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ಪರ ಕಣಕ್ಕಿಳಿಯುವ ವಿದೇಶಿ ವೇಗಿ ಯಾರು ಎಂಬುದೇ ಈಗ ಕುತೂಹಲ. ಏಕೆಂದರೆ ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಜೋಶ್ ಹೇಝಲ್​ವುಡ್ ಇದೀಗ ಸಂಪೂರ್ಣ ಫಿಟ್​ ಆಗಿದ್ದಾರೆ. ಹೀಗಾಗಿ ಅವರು ಆರ್​ಆರ್​ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ. ಇದರಿಂದ ಜೇಕಬ್ ಡಫಿ ಆಡುವ ಬಳಗದಿಂದ ಹೊರಗುಳಿಯಬೇಕಾಗಬಹುದು.

ಆದರೆ ಆರ್​ಸಿಬಿ ಟೀಮ್ ಮ್ಯಾನೇಜ್ಮೆಂಟ್ ಈ ಒಂದು ತಂತ್ರ ಅನುಸರಿಸಿದರೆ, ಇಬ್ಬರು ವಿದೇಶಿ ವೇಗಿಗಳನ್ನು ಜೊತೆಯಾಗಿ ಕಣಕ್ಕಿಳಿಸಬಹುದು. ಇದಕ್ಕಾಗಿ ಆರ್​ಸಿಬಿ ಮುಂದಿರುವ ಆಯ್ಕೆಗಳು ಈ ಕೆಳಗಿನಂತಿವೆ…

  • ಐಪಿಎಲ್ ನಿಯಮದ ಪ್ರಕಾರ ಒಂದು ಪಂದ್ಯದಲ್ಲಿ ಗರಿಷ್ಠ ನಾಲ್ವರು ವಿದೇಶಿ ಆಟಗಾರರಿಗೆ ಮಾತ್ರ ಅವಕಾಶವಿರುತ್ತದೆ. ಪ್ರಸ್ತುತ ಆರ್‌ಸಿಬಿ ತಂಡದಲ್ಲಿ ಫಿಲ್ ಸಾಲ್ಟ್, ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೆಫರ್ಡ್ ಪ್ರಮುಖ ವಿದೇಶಿ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಇವರ ನಡುವೆ ಇಬ್ಬರು ವಿದೇಶಿ ವೇಗಿಗಳನ್ನು ಸೇರಿಸುವುದು ಸವಾಲಿನ ಕೆಲಸ.

ಇಬ್ಬರನ್ನೂ ಆಡಿಸಲು ಇರುವ ಆಯ್ಕೆಗಳು:

ಒಬ್ಬ ವಿದೇಶಿ ಬ್ಯಾಟರ್ ಅನ್ನು ಕೈಬಿಡುವುದು:  ತಂಡದ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಆರ್‌ಸಿಬಿ ಒಬ್ಬ ವಿದೇಶಿ ಪವರ್-ಹಿಟ್ಟರ್ ಅನ್ನು ಕೈಬಿಡಬೇಕಾಗುತ್ತದೆ. ಅಂದರೆ ಫಿಲ್ ಸಾಲ್ಟ್ ಅಥವಾ ಟಿಮ್ ಡೇವಿಡ್ ಅಥವಾ ರೊಮಾರಿಯೋ ಶೆರ್ಫಡ್​… ಇವರಲ್ಲಿ ಇಬ್ಬರನ್ನು ಕೈ ಬಿಡುವುದು ಅನಿವಾರ್ಯ.

ಫಿಲ್ ಸಾಲ್ಟ್​ಗೆ ಕೊಕ್: ಆರ್​ಸಿಬಿ ಮ್ಯಾನೇಜ್ಮೆಂಟ್​ ಫಿಲ್ ಸಾಲ್ಟ್ ಬದಲಿಗೆ ಜೋಶ್ ಹೇಝಲ್‌ವುಡ್ ಅಥವಾ ಜೇಕಬ್ ಡಫಿ ಅವರನ್ನು ಆಡಿಸಿದರೆ, ದೇವದತ್ ಪಡಿಕ್ಕಲ್ ವಿರಾಟ್ ಕೊಹ್ಲಿ ಜೊತೆ ಆರಂಭಿಕರಾಗಿ ಕಣಕ್ಕಿಳಿಯಬಹುದು.

ಫಿನಿಶರ್ ಬದಲಿಗೆ: ಸ್ಪೋಟಕ ದಾಂಡಿಗ ಟಿಮ್ ಡೇವಿಡ್ ಅಥವಾ ರೊಮಾರಿಯೋ ಶೆರ್ಫಡ್ ಬದಲಿಗೆ ಹೆಚ್ಚುವರಿ ವಿದೇಶಿ ಬೌಲರ್ ಅನ್ನು ಆಯ್ಕೆ ಮಾಡಿದರೆ, ಕೆಳ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ ಅವರು ಫಿನಿಶಿಂಗ್ ಜವಾಬ್ದಾರಿ ಹೊರಬೇಕಾಗುತ್ತದೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಳಕೆ:

ಐಪಿಎಲ್​ನ ಇಂಪ್ಯಾಕ್ಟ್ ಪ್ಲೇಯರ್  ನಿಯಮವನ್ನು ಚಾಣಾಕ್ಷತನದಿಂದ ಬಳಸಿಕೊಂಡರೆ ಆರ್​ಸಿಬಿ ಜೋಶ್ ಹೇಝಲ್​ವುಡ್ ಹಾಗೂ ಜೇಕಬ್ ಡಫಿಯನ್ನು ಜೊತೆಯಾಗಿ ಕಣಕ್ಕಿಳಿಸಬಹುದು. ಇದಕ್ಕಾಗಿ ಆರ್​ಸಿಬಿ ಮಾಡಬೇಕಿರುವುದು…

  • 3 ವಿದೇಶಿ ಆಟಗಾರರು: ಪಂದ್ಯದ ಆರಂಭದಲ್ಲಿ ಆರ್​ಸಿಬಿ ಕೇವಲ ಮೂವರು ವಿದೇಶಿ ಆಟಗಾರರನ್ನು ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಹೆಸರಿಸಬೇಕು.
  • ಇಂಪ್ಯಾಕ್ಟ್ ಸಬ್: ಮೊದಲು ಬ್ಯಾಟಿಂಗ್ ಮಾಡುವಾಗ ಮೂವರು ವಿದೇಶಿ ಆಟಗಾರರೊಂದಿಗೆ ಆಡಿ, ನಂತರ ಬೌಲಿಂಗ್ ಮಾಡುವಾಗ ಒಬ್ಬ ಭಾರತೀಯ ಬ್ಯಾಟರ್ ಬದಲಿಗೆ ಜೇಕಬ್ ಡಫಿ ಅಥವಾ ಜೋಶ್ ಹೇಝಲ್​ವುಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ತರಬಹುದು.
  • ಏನು ಮಾಡಬೇಕು: ಇದಕ್ಕಾಗಿ ಆರ್​ಸಿಬಿ ಫಿಲ್ ಸಾಲ್ಟ್, ಟಿಮ್ ಡೇವಿಡ್ ಹಾಗೂ ಜೋಶ್ ಹೇಝಲ್​ವುಡ್​ ಅವರನ್ನು ಪ್ಲೇಯಿಂಗ್ ಇಲೆವೆನ್​ನಲ್ಲಿ ಸೇರಿಸಬೇಕು. ಅಲ್ಲದೆ ರೊಮಾರಿಯೊ ಶೆಫರ್ಡ್​ ಹಾಗೂ ಜೇಕಬ್ ಡಫಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲಿರಿಸಬೇಕು.
  • ಮಾಸ್ಟರ್ ಪ್ಲ್ಯಾನ್: ಮೂವರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಮತ್ತೋರ್ವ ವಿದೇಶಿ ಆಟಗಾರನನ್ನು ಕಣಕ್ಕಿಳಿಸಬಹುದು. ಅದರಂತೆ ಬ್ಯಾಟಿಂಗ್​ಗೆ ಅನಿವಾರ್ಯತೆ ಇದ್ದರೆ ಮಾತ್ರ ರೊಮಾರಿಯೋ ಶೆರ್ಫಡ್​ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಬೇಕು. ಒಂದು ವೇಳೆ ಆರ್​ಸಿಬಿ ತಂಡಕ್ಕೆ ರೊಮಾರಿಯೊ ಶೆಫರ್ಡ್ ಅವರ ಬ್ಯಾಟಿಂಗ್​ನ ಅನಿವಾರ್ಯತೆ ಬರದಿದ್ದರೆ, ಬೌಲಿಂಗ್ ವೇಳೆ ಜೇಕಬ್ ಡಫಿಯನ್ನು ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿಸಬಹುದು.

ಈ ಮೂಲಕ ಜೇಕಬ್ ಡಫಿ ಹಾಗೂ ಜೋಶ್ ಹೇಝಲ್​ವುಡ್​ ಅವರನ್ನು ಆರ್​ಸಿಬಿ ಜೊತೆಯಾಗಿ ಕಣಕ್ಕಿಳಿಸಬಹುದು. ಅಂದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಜೇಕಬ್ ಡಫಿಯನ್ನು ಆಡಿಸಲು ಬಯಸಿದರೆ, ಆರ್​ಸಿಬಿ ಮೊದಲು ಬ್ಯಾಟಿಂಗ್​ ಮಾಡುವಾಗ ತನ್ನ ಪ್ಲೇಯಿಂಗ್ ಇಲೆವೆನ್​ನಲ್ಲಿ ಮೂವರು ವಿದೇಶಿ ಆಟಗಾರರನ್ನು ಮಾತ್ರ ಆಯ್ಕೆ ಮಾಡುವುದು ಅನಿವಾರ್ಯ.

ಅಲ್ಲದೆ ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲಿ ರೊಮಾರಿಯೋ ಶೆಫರ್ಡ್ ಹಾಗೂ ಜೇಕಬ್ ಡಫಿ ಅವರನ್ನು ಸೇರ್ಪಡೆಗೊಳಿಸಬೇಕು. ಇಲ್ಲಿ ಆರ್​ಸಿಬಿ ಬೇಗನೆ ಹೆಚ್ಚಿನ ವಿಕೆಟ್ ಕಳೆದುಕೊಂಡರೆ ಮಾತ್ರ ಶೆಫರ್ಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಬಹುದು. ಒಂದು ವೇಳೆ ಆರ್​ಸಿಬಿ 3 ಅಥವಾ 4 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತ ಪೇರಿಸಿದರೆ ಶೆಫರ್ಡ್ ಅವಶ್ಯಕತೆ ಎದುರಾಗುವುದಿಲ್ಲ.

ಇದನ್ನೂ ಓದಿ: VIDEO: ಗ್ಲೆನ್ ಫಿಲಿಪ್ಸ್ ಇದ್ದಾರೆ ಎಚ್ಚರಿಕೆ..!

ಹೀಗಾಗಿ ಬ್ಯಾಟಿಂಗ್ ವೇಳೆ ಇಂಪ್ಯಾಕ್ಟ್ ಪ್ಲೇಯರ್​ನನ್ನು ಬಳಸಿಕೊಳ್ಳದಿರುವುದು ಉತ್ತಮ. ಅಲ್ಲದೆ ಬೌಲಿಂಗ್ ವೇಳೆ ಓರ್ವ ಬ್ಯಾಟರ್​ನನ್ನು ಕೈ ಬಿಟ್ಟು ಜೇಕಬ್ ಡಫಿ ಅನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವ ಬಳಗಕ್ಕೆ ಸೇರಿಸಿಕೊಳ್ಳಬಹುದು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜೋಶ್ ಹೇಝಲ್​ವುಡ್ ಹಾಗೂ ಜೇಕಬ್ ಡಫಿ ಎಂಬ ವೇಗಾಸ್ತ್ರದೊಂದಿಗೆ ಕಣಕ್ಕಿಳಿಯಬಹುದು.

 

Source link