ನಟಿ ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಭಾರತದ ಚಿತ್ರರಂಗ ಮಾತ್ರವಲ್ಲದೇ ಬಾಲಿವುಡ್ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಅವರು ನಟಿಸುತ್ತಿರುವ ‘ಕಾಕ್ಟೇಲ್ 2’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ.
‘ಕಾಕ್ಟೇಲ್ 2’ ಸಿನಿಮಾದ ಹೊಸ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಿಂದ ಹೊಸ ಹಾಡು ರಿಲೀಸ್ ಆಗಲಿದೆ.
ರಶ್ಮಿಕಾ ಮಂದಣ್ಣ ಜೊತೆ ಬಾಲಿವುಡ್ ಬೆಡಗಿ ಕೃತಿ ಸನನ್ ಕೂಡ ಅಭಿನಯಿಸುತ್ತಿದ್ದಾರೆ. ಅವರ ಪಾತ್ರ ಕೂಡ ಸಖತ್ ಬೋಲ್ಡ್ ಆಗಿದೆ. ಪಡ್ಡೆ ಹುಡುಗರ ಕಣ್ಣು ಕುಕ್ಕವ ರೀತಿಯಲ್ಲಿ ಕೃತಿ ಸನನ್ ಕಾಣಿಸಿಕೊಂಡಿದ್ದಾರೆ.
ಕೃತಿ ಸನನ್ ಅವರ ಅಭಿಮಾನಿಗಳಲ್ಲಿ ‘ಕಾಕ್ಟೇಲ್ 2’ ಸಿನಿಮಾ ಬಗ್ಗೆ ಕೌತುಕ ಮೂಡಿದೆ. ಈ ಸಿನಿಮಾದಲ್ಲಿ ಡಿಫರೆಂಟ್ ಕಥೆ ಇರಲಿದೆ ಎಂದು ಫ್ಯಾನ್ಸ್ ಊಹಿಸಿದ್ದಾರೆ. ಜೂನ್ ತಿಂಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ.
ಶಾಹಿದ್ ಕಪೂರ್ ಅವರು ‘ಕಾಕ್ಟೇಲ್ 2’ ಸಿನಿಮಾಗೆ ಹೀರೋ. ಈ ಚಿತ್ರದಲ್ಲಿ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನನ್ ಅವರ ಪಾತ್ರಗಳ ನಡುವಿನ ಕಹಾನಿ ಏನು ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ನವದೆಹಲಿ, ಏಪ್ರಿಲ್ 7: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಭಾರತದಿಂದ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಎದುರಾದರೆ ಕೊಲ್ಕತ್ತಾವನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಆ ಹೇಳಿಕೆಗೆ ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಪ್ರತಿಕ್ರಿಯೆ ನೀಡಿದ್ದು, ನೀವೇನಾದರೂ ಭಾರತದ ಮೇಲೆ ದಾಳಿ ನಡೆಸಿದರೆ ಏನಾಗುತ್ತದೆ ಎಂಬುದನ್ನು ಇನ್ನೊಮ್ಮೆ ಪ್ರಯತ್ನಿಸಿ ನೋಡಿ. 1971ರಲ್ಲಿ ಏನಾಗಿತ್ತೆಂಬುದನ್ನು ನೆನಪಿಸಿಕೊಳ್ಳಿ ಎಂದಿದ್ದಾರೆ.
ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, 1971ರ ಯುದ್ಧದಲ್ಲಿ ಪಾಕಿಸ್ತಾನವನ್ನು ಎರಡು ಭಾಗಗಳಾಗಿ ವಿಭಜಿಸಿದ ಪರಿಣಾಮಗಳನ್ನು ನೆನಪಿಸಿಕೊಳ್ಳಿ. ಕೊಲ್ಕತ್ತಾದ ಮೇಲೆ ದಾಳಿ ನಡೆಸಲು ಬಂದರೆ ಪಾಕಿಸ್ತಾನ ಎಷ್ಟು ಭಾಗವಾಗುತ್ತದೋ ದೇವರಿಗೇ ಗೊತ್ತು ಎಂದು ಎಚ್ಚರಿಕೆ ನೀಡಿದ್ದಾರೆ. 1971ರ ಭಾರತ-ಪಾಕಿಸ್ತಾನ ಯುದ್ಧವು ಬಾಂಗ್ಲಾದೇಶದ ರಚನೆಗೆ ಕಾರಣವಾದ ದೇಶಗಳ ನಡುವಿನ ಪ್ರಮುಖ ಮಿಲಿಟರಿ ಸಂಘರ್ಷವಾಗಿತ್ತು.
#WATCH | Barrackpore, West Bengal | “Pakistan’s Defence Minister should not have given such a provocative statement. 55 years ago, they suffered the consequences when Pakistan was divided into two parts. If they try to cast an eye on Bengal, only God knows how many parts Pakistan… pic.twitter.com/VJU8fyXB3c
“ಪಾಕಿಸ್ತಾನದ ರಕ್ಷಣಾ ಸಚಿವರು ಈ ರೀತಿಯ ಪ್ರಚೋದನಕಾರಿ ಹೇಳಿಕೆಯನ್ನು ನೀಡಬಾರದಿತ್ತು. 55 ವರ್ಷಗಳ ಹಿಂದೆ ಪಾಕಿಸ್ತಾನವನ್ನು 2 ಭಾಗಗಳಾಗಿ ವಿಂಗಡಿಸಿದಾಗ ಪಾಕಿಸ್ತಾನ ಅದರ ಪರಿಣಾಮಗಳನ್ನು ಅನುಭವಿಸಿತ್ತು. ಅವರು ಬಂಗಾಳದ ಮೇಲೆ ಕಣ್ಣಿಡಲು ಪ್ರಯತ್ನಿಸಿದರೆ ಈ ಬಾರಿ ಪಾಕಿಸ್ತಾನ ಎಷ್ಟು ಭಾಗಗಳಾಗಿ ವಿಂಗಡಿಸಲ್ಪಡುತ್ತದೆಯೋ ದೇವರಿಗೇ ಗೊತ್ತು” ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಏಷ್ಯಾದಲ್ಲಿ ನಡೆಯುವ ‘ಏಷ್ಯಾ ಕಪ್‘ ಮಾದರಿಯಲ್ಲೇ ಆಫ್ರಿಕಾ ಖಂಡದಲ್ಲೂ ಬಲಿಷ್ಠ ಕ್ರಿಕೆಟ್ ರಾಷ್ಟ್ರಗಳ ನಡುವೆ ಆಫ್ರಿಕಾ ಕಪ್ ಪಂದ್ಯಾವಳಿ ನಡೆಸಲು ಭರ್ಜರಿ ಪ್ಲ್ಯಾನ್ ರೂಪಿಸಲಾಗಿದೆ. 6 ತಂಡಗಳ ಟೂರ್ನಿಯಲ್ಲಿ ಆಫ್ರಿಕಾದ ಅಗ್ರಗಣ್ಯ ತಂಡಗಳಾದ ಸೌತ್ ಆಫ್ರಿಕಾ (South Africa), ಝಿಂಬಾಬ್ವೆ (Zimbabwe) ಮತ್ತು ನಮೀಬಿಯಾ (Namibia) ತಂಡಗಳು ಕಣಕ್ಕಿಳಿಯುವುದು ಖಚಿತವಾಗಿದೆ. ಇವುಗಳ ಜೊತೆಗೆ ಅರ್ಹತಾ ಸುತ್ತಿನ ಮೂಲಕ ಆಯ್ಕೆಯಾದ ಇತರೆ ಮೂರು ಆಫ್ರಿಕನ್ ದೇಶಗಳು ಭಾಗವಹಿಸಲಿವೆ.
ಟೂರ್ನಿಯ ಮುಖ್ಯ ಉದ್ದೇಶ:
ಆಫ್ರಿಕಾ ಕಪ್ ಟೂರ್ನಿಯ ಮುಖ್ಯ ಉದ್ದೇಶ, ಆಫ್ರಿಕನ್ ದೇಶಗಳಲ್ಲಿ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸುವುದು. ಝಿಂಬಾಬ್ವೆ ಕೋಚ್ ಡೇವ್ ಹೌಟನ್ ಅವರಂತಹ ಹಿರಿಯರು ಪ್ರತಿಪಾದಿಸಿದಂತೆ, ಆಫ್ರಿಕಾದಲ್ಲಿ ಕ್ರಿಕೆಟ್ ಅನ್ನು ಫುಟ್‌ಬಾಲ್‌ನಂತೆ ಜನಪ್ರಿಯಗೊಳಿಸುವುದು ಮತ್ತು ಸಣ್ಣ ತಂಡಗಳಿಗೆ ಹೆಚ್ಚಿನ ಎಕ್ಸ್‌ಪೋಷರ್ ನೀಡುವುದು ಇದರ ಮುಖ್ಯ ಗುರಿ.
ಹಾಗೆಯೇ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯ ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಆಫ್ರಿಕಾ ಕಪ್ ಆ ದೇಶಗಳಿಗೆ ತಾಲೀಮು ನಡೆಸಲು ಉತ್ತಮ ವೇದಿಕೆಯಾಗಲಿದೆ.
6 ತಂಡಗಳಾವುವು?
ಆಫ್ರಿಕಾ ಕಪ್ ಟೂರ್ನಿಯಲ್ಲಿ ಸೌತ್ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಇದರ ಜೊತೆಗೆ ಅರ್ಹತಾ ಸುತ್ತಿನ ಮೂಲಕ 3 ತಂಡಗಳು ಸೇರ್ಪಡೆಯಾಗಲಿವೆ. ಇಲ್ಲಿ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಳ್ಳಲಿರುವ ತಂಡಗಳಾವುವು ಎಂದು ನೋಡುವುದಾದರೆ…
ಉಗಾಂಡ: ಪ್ರಸ್ತುತ ಆಫ್ರಿಕಾ ಕ್ರಿಕೆಟ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ತಂಡಗಳಲ್ಲಿ ಒಂದಾದ ಉಗಾಂಡ, 2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿತ್ತು. ಆದ್ದರಿಂದ ಈ ಟೂರ್ನಿಗೆ ಇವರು ಪ್ರಬಲ ಸ್ಪರ್ಧಿಗಳಾಗಿದ್ದಾರೆ.
ಕೀನ್ಯಾ: ಒಮ್ಮೆ ಕ್ರಿಕೆಟ್ ಜಗತ್ತಿನಲ್ಲಿ ಬಲಿಷ್ಠವಾಗಿದ್ದ ಕೀನ್ಯಾ, ಈಗ ಮತ್ತೆ ತನ್ನ ಫಾರ್ಮ್ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಆಫ್ರಿಕಾ ಕ್ರಿಕೆಟ್ ಮಂಡಳಿ (ACA) ಆಯೋಜಿಸುವ ಟೂರ್ನಿಗಳಲ್ಲಿ ಇವರು ಪ್ರಮುಖವಾಗಿ ಭಾಗವಹಿಸುತ್ತಾರೆ.
ಟಾಂಜಾನಿಯಾ: ಇತ್ತೀಚಿನ ವರ್ಷಗಳಲ್ಲಿ ಐಸಿಸಿ ಪ್ರಾದೇಶಿಕ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಟಾಂಜಾನಿಯಾ ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಆಫ್ರಿಕಾದ ಉದಯೋನ್ಮುಖ ತಂಡಗಳಲ್ಲಿ ಸ್ಥಾನ ಪಡೆದಿದೆ.
ಇತರೆ ಸಂಭಾವ್ಯ ತಂಡಗಳು: ಈ ಟೂರ್ನಿಯ ಸ್ವರೂಪದ ಆಧಾರದ ಮೇಲೆ, ಅರ್ಹತಾ ಸುತ್ತಿನ ಮೂಲಕ ಕೆಳಗಿನ ತಂಡಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಅದರಂತೆ ಬೋಟ್ಸ್ವಾನ, ನೈಜೀರಿಯಾ ಮತ್ತು
ಘಾನಾ ತಂಡಗಳು ಕೂಡ ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಆಫ್ರಿಕಾ ಕಪ್ ಟೂರ್ನಿಯಿಂದಾಗಿ ಆಫ್ರಿಕನ್ ಕ್ರಿಕೆಟ್‌ನಲ್ಲಿ ಹೊಸ ಪೈಪೋಟಿ ಶುರುವಾಗಲಿದೆ. ಸೌತ್ ಆಫ್ರಿಕಾದಂತಹ ಬಲಿಷ್ಠ ತಂಡದ ವಿರುದ್ಧ ಆಡುವುದರಿಂದ ನಮೀಬಿಯಾ ಮತ್ತು ಇತರ ಉದಯೋನ್ಮುಖ ತಂಡಗಳ ಗುಣಮಟ್ಟ ಸುಧಾರಿಸಲಿದೆ.
ಬೆಂಗಳೂರು, (ಏಪ್ರಿಲ್ 07): ಅಸ್ಸಾಂ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಆರ್‌ಎಸ್‌ಎಸ್ (RSS) ಹಾಗೂ ಬಿಜೆಪಿ ವಿರುದ್ಧ ವಿವದಾತ್ಮಕ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President mallikarjun kharge) ವಿರುದ್ಧ ಕರ್ನಾಟಕ ಬಿಜೆಪಿ ದೂರು ನೀಡಿದೆ. ಶಾಸಕರಾದ ಸಿ.ಕೆ.ರಾಮಮೂರ್ತಿ, ಮುನಿರಾಜು ನೇತೃತ್ವದ ಬಿಜೆಪಿ (BJP) ಇಂದು (ಏಪ್ರಿಲ್ 07) ಬೆಂಗಳೂರಿನ (Bengaluru) ಡಿಜಿ & ಐಜಿಪಿ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು ನೀಡಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ವಿರುದ್ಧ ಬಹಿರಂಗವಾಗಿ ಮಲ್ಲಿಕಾರ್ಜುನ ಖರ್ಗೆ ಹಿಂಸೆಗೆ ಪ್ರಚೋದನೆ ನೀಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ, ಇಡೀ ದೇಶದಲ್ಲಿ ಪ್ರತಿಭಟನೆಗೆ ಬಿಜೆಪಿ ಸಜ್ಜಾಗಿದೆ. ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಸಂವಿಧಾನ ವಿರೋಧಿ. ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆಗೆ ನಿದ್ದೆ ಬರುತ್ತಿಲ್ಲ. ಕಣ್ಣು ಮುಚ್ಚಿದರೆ ಅವರಿಗೆ ಕಾಣಿಸುವುದು ಆರ್ ಎಸ್ ಎಸ್. ಆರ್ ಎಸ್ ಎಸ್ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ಕೊಡುತ್ತಾರೆ. ಅವರು ನೆಮ್ಮದಿಯಿಂದ ನಿದ್ದೆ ಮಾಡಬೇಕೆಂದರೆ ದಯವಿಟ್ಟು ಆರ್ ಎಸ್ ಎಸ್ ಕಚೇರಿಗೆ ಹೋಗಿ ಅಲ್ಲಿ ಕೆಲಸ ಮಾಡಲಿ. ನಾಗಪುರಕ್ಕಾದರೂ ಹೋಗಲಿ ಅಥವಾ ಕೇಶವಕೃಪಾಕ್ಕಾದರೂ ಹೋಗಲಿ. ಆಗ ಅವರಿಗೆ ನಿದ್ದೆ ಬರುತ್ತದೆ. ಒಂದು ತಿಂಗಳು ನೀವು ಅಲ್ಲಿ ಕೆಲಸ ಮಾಡಿದರೆ ಬುದ್ದಿ ಬರುತ್ತದೆ ಎಂದು ಕಿಡಿಕಾರಿದ್ದಾರೆ.
ಇನ್ನು ಇದೇ ವೇಳೆ ದಾಸರಹಳ್ಳಿ ಶಾಸಕ ಎಸ್. ಮುನಿರಾಜು ಪ್ರತಿಕ್ರಿಯಸಿದ್ದು, ಬೆಂಕಿ ಹಚ್ಚುವ ಕೆಲಸ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡಿದ್ದಾರೆ. ಅದರ ವಿರುದ್ಧ ಇಡೀ ದೇಶದಲ್ಲಿ ಟೀಕೆ ಬರುತ್ತಿದೆ. ಕೋಮು ಗಲಭೆ ಹರಡುವ ಸಂದರ್ಭ ಇಂತಹ ಭಾಷಣಗಳಿಂದ ಸೃಷ್ಟಿಯಾಗುತ್ತದೆ. ದೇಶದ್ರೋಹಿಗಳು, ಮೂಲಭೂತವಾದಿಗಳಿಗೆ ಬೆಂಬಲ ಸೂಚಿಸುವ ಮಾತುಗಳಿವು. ಬಿಜೆಪಿ ದೇಶದಾದ್ಯಂತ ಇದರ ವಿರುದ್ಧ ಹೋರಾಟ ಮಾಡುತ್ತದೆ, ದೂರು ದಾಖಲಿಸುತ್ತದೆ. ಇಂದು ಡಿಜಿಪಿಯವರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದೇವೆ. ಇಂತಹ ದೇಶದ್ರೋಹಿ ಮಾತಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದು, ರಾಜ್ಯ ಪೊಲೀಸ್ ಇಲಾಖೆ ಕ್ರಮ ಜರುಗಿಸುವ ಬಗ್ಗೆ ನಮಗೆ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ಕುರಾನ್‌ನಲ್ಲಿ ನಮಾಜ್ ಮಾಡುವಾಗಲೂ ವಿಷಕಾರಿ ಹಾವನ್ನು ಕಂಡರೆ ಅದನ್ನು ಕೊಲ್ಲಬೇಕು ಎಂದು ಹೇಳಲಾಗಿದೆ. ಆರ್‌ಎಸ್‌ಎಸ್ ಅಥವಾ ಬಿಜೆಪಿ ಕೂಡ ಅದೇ ರೀತಿಯ ಹಾವು, ಅವನ್ನು ಕೊಲ್ಲದಿದ್ದರೆ ನೀವು ಬದುಕಲು ಸಾಧ್ಯವಿಲ್ಲ ಎಂದಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆ ಸಂಬಂಧ ಖರ್ಗೆ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿಆಗ್ರಹಗಳು ವ್ಯಕ್ತವಾಗುತ್ತಿವೆ. ಇನ್ನು ಖರ್ಗೆ ವಿರುದ್ಧ ಬಿಜೆಪಿ ದೇಶಾದ್ಯಂತ ಪ್ರತಿಭಟನೆಗೆ ಸಜ್ಜಾಗಿದೆ.
ಇತ್ತೀಚೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಐಎನ್ಎಸ್ ಅರಿದಮಾನ್ (INS Aridhaman) ಸುದ್ದಿಯಲ್ಲಿದೆ. ಇದು ದೇಶದ ಮೂರನೇ ಪರಮಾಣು ಚಾಲಿತ ಜಲಾಂತರ್ಗಾಮಿಯಾಗಿದ್ದು, ಭೂಮಿ, ಆಕಾಶ ಮತ್ತು ಸಮುದ್ರದ ಆಳದಿಂದ ಪರಮಾಣು ಶಸ್ತ್ರಾಸ್ತ್ರಗಳನ್ನು ಉಡಾಯಿಸುವ ‘ನ್ಯೂಕ್ಲಿಯರ್ ಟ್ರಯಾಡ್’ ಸಾಮರ್ಥ್ಯವನ್ನು ಭಾರತಕ್ಕೆ ನೀಡಿದೆ. ಈ ಸುದ್ದಿಯ ಬೆನ್ನಲ್ಲೇ, ಸಾಹಸಮಯ ಸಮುದ್ರದ ಆಳದ ಜೀವನ ಮತ್ತು ನೌಕಾಪಡೆಯ ಜಲಾಂತರ್ಗಾಮಿ ವಿಭಾಗದಲ್ಲಿ ಕೆಲಸ ಪಡೆಯುವುದು ಹೇಗೆ ಎಂಬ ಕುತೂಹಲ ಅನೇಕರಲ್ಲಿ ಮೂಡಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಜಲಾಂತರ್ಗಾಮಿ (Submarine) ಎಂದರೇನು?
ಜಲಾಂತರ್ಗಾಮಿ ಎಂದರೆ ಸಮುದ್ರದ ಮೇಲ್ಮೈ ಮತ್ತು ಆಳದಲ್ಲಿ ದೀರ್ಘಕಾಲ ಕಾರ್ಯನಿರ್ವಹಿಸಬಲ್ಲ ವಿಶೇಷ ನೌಕೆ. ಇದನ್ನು ಪ್ರಪಂಚದಾದ್ಯಂತದ ನೌಕಾಪಡೆಗಳು ರಾಷ್ಟ್ರೀಯ ಭದ್ರತೆ, ಶತ್ರುಗಳ ಮೇಲೆ ನಿಗಾ ಇಡುವುದು ಮತ್ತು ರಹಸ್ಯ ಕಾರ್ಯಾಚರಣೆಗಳಿಗಾಗಿ ಬಳಸುತ್ತವೆ. ಕ್ಷಿಪಣಿಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ನೌಕೆಗಳಲ್ಲಿ ಕೆಲಸ ಮಾಡುವುದು ಅತ್ಯಂತ ಸವಾಲಿನ ಹಾಗೂ ಹೆಮ್ಮೆಯ ವಿಷಯವಾಗಿದೆ.
ನೇಮಕಾತಿ ಪ್ರಕ್ರಿಯೆ:
ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಿಭಾಗಕ್ಕೆ (Submarine Arm) ನೇರ ನೇಮಕಾತಿ ಇರುವುದಿಲ್ಲ. ಜಲಾಂತರ್ಗಾಮಿ ಅಧಿಕಾರಿಯಾಗಲು ನೀವು ಮೊದಲು ನೌಕಾಪಡೆಗೆ ಸೇರಬೇಕು:
ಅಗ್ನಿವೀರ್ ನೇಮಕಾತಿ: 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ (PCM) ವಿಷಯಗಳನ್ನು ಓದಿದವರು ಅಗ್ನಿವೀರ್ ಅಥವಾ ತಾಂತ್ರಿಕ ಪ್ರವೇಶದ ಮೂಲಕ ನೌಕಾಪಡೆಗೆ ಸೇರಬಹುದು.
ಅಧಿಕಾರಿ ಪ್ರವೇಶ (Officer Entry): ಪದವೀಧರರು ವಿವಿಧ ಎಂಟ್ರಿ ಸ್ಕೀಮ್‌ಗಳ ಮೂಲಕ ಅಧಿಕಾರಿಗಳಾಗಿ ಸೇರಬಹುದು. ನೌಕಾಪಡೆಗೆ ಸೇರಿದ ನಂತರ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ಜಲಾಂತರ್ಗಾಮಿ ವಿಭಾಗಕ್ಕೆ ಆಯ್ಕೆ ಮಾಡಲಾಗುತ್ತದೆ.
ದೈಹಿಕ ಮತ್ತು ಮಾನಸಿಕ ಅರ್ಹತೆಗಳು:
ಜಲಾಂತರ್ಗಾಮಿಗಳಲ್ಲಿನ ಜೀವನವು ಕಿರಿದಾದ ಜಾಗ ಮತ್ತು ಹೆಚ್ಚಿನ ಒತ್ತಡದಿಂದ ಕೂಡಿರುತ್ತದೆ. ಆದ್ದರಿಂದ ಇಲ್ಲಿ ಕೆಲಸ ಮಾಡುವವರಿಗೆ ಕಠಿಣ ವೈದ್ಯಕೀಯ ಮಾನದಂಡಗಳಿವೆ. ಅತ್ಯುತ್ತಮ ದೃಷ್ಟಿ ಮತ್ತು ಶ್ರವಣ ಶಕ್ತಿ ಅತ್ಯಗತ್ಯ. ದೀರ್ಘಕಾಲದವರೆಗೆ ಸೂರ್ಯನ ಬೆಳಕಿಲ್ಲದೆ, ಸಮುದ್ರದ ಆಳದಲ್ಲಿ ಕೆಲಸ ಮಾಡಲು ಮಾನಸಿಕವಾಗಿ ಸದೃಢರಾಗಿರಬೇಕು. ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ (PFT), ವೈದ್ಯಕೀಯ ತಪಾಸಣೆ ಮತ್ತು ಅಧಿಕಾರಿ ಹುದ್ದೆಗಳಿಗಾದರೆ SSB ಸಂದರ್ಶನ ಇರುತ್ತದೆ.
ಜಲಾಂತರ್ಗಾಮಿ ತಾಂತ್ರಿಕ ಅಧಿಕಾರಿ (STO) ಆಗಲು ಬೇಕಾದ ವಿದ್ಯಾಭ್ಯಾಸ:
ಜಲಾಂತರ್ಗಾಮಿಗಳಲ್ಲಿನ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಯಂತ್ರೋಪಕರಣಗಳನ್ನು ನಿರ್ವಹಿಸಲು ತಾಂತ್ರಿಕ ಅಧಿಕಾರಿಗಳ ಅಗತ್ಯವಿರುತ್ತದೆ. ಕನಿಷ್ಠ ಶೇ.55 ಅಂಕಗಳೊಂದಿಗೆ BE/B.Tech ಪದವಿ ಹೊಂದಿರಬೇಕು. ಮೆಕ್ಯಾನಿಕಲ್, ಮೆರೈನ್, ಆಟೋಮೋಟಿವ್, ಮೆಕಾಟ್ರಾನಿಕ್ಸ್, ಏರೋನಾಟಿಕಲ್, ಕಂಟ್ರೋಲ್ ಎಂಜಿನಿಯರಿಂಗ್, ಇನ್ಸ್ಟ್ರುಮೆಂಟೇಶನ್ ಅಥವಾ ರೊಬೊಟಿಕ್ಸ್‌ನಂತಹ ವಿಭಾಗಗಳಲ್ಲಿ ಪದವಿ ಪಡೆದವರಿಗೆ ಆದ್ಯತೆ ಇರುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳನ್ನು ಮೊದಲು ಸಬ್-ಲೆಫ್ಟಿನೆಂಟ್ ಶ್ರೇಣಿಯಲ್ಲಿ ನಿಯೋಜಿಸಲಾಗುತ್ತದೆ. ಕೇರಳದ ಎಝಿಮಲದಲ್ಲಿರುವ ನೌಕಾ ಅಕಾಡೆಮಿಯಲ್ಲಿ 22 ವಾರಗಳ ದೃಷ್ಟಿಕೋನ ಕೋರ್ಸ್ ನೀಡಲಾಗುತ್ತದೆ. ನಂತರ ವೃತ್ತಿಪರ ತರಬೇತಿ ಮತ್ತು ಜಲಾಂತರ್ಗಾಮಿ ಅರ್ಹತಾ ಮಂಡಳಿ (SQB) ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರವೇ ಅಧಿಕೃತವಾಗಿ ಜಲಾಂತರ್ಗಾಮಿ ನೌಕೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ.
ವೇತನ ಮತ್ತು ಸೌಲಭ್ಯಗಳು:
ನೌಕಾಪಡೆಯಲ್ಲಿ ಜಲಾಂತರ್ಗಾಮಿ ಸಿಬ್ಬಂದಿಗೆ ಆಕರ್ಷಕ ವೇತನ ಮತ್ತು ಗೌರವದ ಜೀವನ ಲಭ್ಯವಿದೆ. ಮಾಸಿಕ ವೇತನ 10ನೇ ಹಂತದ ವೇತನ ಶ್ರೇಣಿಯಂತೆ 56,100 ರಿಂದ 1,77,500 ರೂ. ರವರೆಗೆ ಇರುತ್ತದೆ. ಹೆಚ್ಚುವರಿ ಭತ್ಯೆಗಳುಜಲಾಂತರ್ಗಾಮಿ ಸೇವೆಯ ಕಠಿಣತೆಯನ್ನು ಪರಿಗಣಿಸಿ ವಿಶೇಷ ‘ಸಬ್‌ಮರೀನ್ ಅಲೋವೆನ್ಸ್’ ನೀಡಲಾಗುತ್ತದೆ. ಇದಲ್ಲದೇ ಇತರ ಸೌಲಭ್ಯಗಳು ಉಚಿತ ವೈದ್ಯಕೀಯ ಸೇವೆ, ವಿಮೆ, ಕ್ಯಾಂಟೀನ್ ಸೌಲಭ್ಯ ಮತ್ತು ನಿವೃತ್ತಿಯ ನಂತರದ ಪೆನ್ಷನ್ ಸೌಲಭ್ಯಗಳು ದೊರೆಯುತ್ತವೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏ.7: ನಗರದ ಖಾಸಗಿ ಬಸ್ ಸಂಸ್ಥೆಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ರಾಮೇಗೌಡ ಎಂಬುವವರ ಮೇಲೆ ಮಾಲೀಕರು ಮತ್ತು ಮ್ಯಾನೇಜ್‌ಮೆಂಟ್ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ ಚಾಲಕನಿಗೆ ಕಳೆದ ಹಲವು ತಿಂಗಳುಗಳಿಂದ ಸಂಬಳ ನೀಡದೆ ಸತಾಯಿಸುತ್ತಿದ್ದ ಸಂಸ್ಥೆ, ಈಗ ಅವರ ಮೇಲೆ ದೈಹಿಕ ದೌರ್ಜನ್ಯ ಎಸಗಿದೆ ಎಂದು ಆರೋಪಿಸಲಾಗಿದೆ.
ರಾಮೇಗೌಡ ಅವರು ‘ಸಿದ್ಧಗಂಗಾ ಟೂರ್ಸ್ ಅಂಡ್ ಟ್ರಾವೆಲ್ಸ್’ (Siddaganga Tours and Travels) ಸಂಸ್ಥೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಹಲವು ತಿಂಗಳಿಂದ ಸಂಬಳ ಬಾರದ ಕಾರಣ ಸಂಸಾರ ನಡೆಸುವುದು ಕಷ್ಟವಾಗಿತ್ತು. ಮಾರ್ಚ್ 26ರ ಸಂಜೆ 6.30ರ ಸುಮಾರಿಗೆ ಅವರು ತಮ್ಮ ಬಾಕಿ ಸಂಬಳ ಕೇಳಲು ಹೋದಾಗ, ಸಂಸ್ಥೆಯ ಆಡಳಿತ ಮಂಡಳಿಯವರು ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಗೊಳಗಾದ ರಾಮೇಗೌಡ ಅವರು ಎರಡು ದಿನಗಳ ಕಾಲ ಮನೆಯಲ್ಲಿ ಮೌನವಾಗಿ ಮಲಗಿದ್ದರು. ಪತ್ನಿ ಜ್ಯೋತಿ ಅವರು ಅನಾರೋಗ್ಯವೆಂದು ಭಾವಿಸಿದ್ದರು. ಆದರೆ ಅವರ ಮೊಬೈಲ್ ಪರೀಕ್ಷಿಸಿದಾಗ ಹಲ್ಲೆಯ ಸತ್ಯಾಂಶ ಬಯಲಾಗಿದೆ. ತಕ್ಷಣವೇ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹಲ್ಲೆ ನಡೆದ ಒಂದು ಗಂಟೆಯೊಳಗೆ (ಸಂಜೆ 7.43ಕ್ಕೆ) ಸಂಸ್ಥೆಯು ಯುಪಿಐ (UPI) ಮೂಲಕ 15,000 ರೂಪಾಯಿಗಳನ್ನು ರಾಮೇಗೌಡ ಅವರ ಖಾತೆಗೆ ವರ್ಗಾಯಿಸಿದೆ. ಈ ಮೂಲಕ ತಮ್ಮ ಕೃತ್ಯವನ್ನು ಒಪ್ಪಿಕೊಂಡಂತೆ ಆಗಿದೆ.
ಇನ್ನು ಈ ಪ್ರಕರಣದಲ್ಲಿ ಪೊಲೀಸರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪತ್ನಿ ಜ್ಯೋತಿ ದೂರು ನೀಡಲು ಹೋದಾಗ ಬಸವೇಶ್ವರನಗರ ಪೊಲೀಸರು ಮೊದಲು ನಿರಾಕರಿಸಿದ್ದರು. ನಂತರ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಹೊಯ್ಸಳ ಪೊಲೀಸ್ ಸಿಬ್ಬಂದಿಯೇ ತನ್ನ ಪತಿಯ ರಕ್ತಸಿಕ್ತ ಅಂಗಿಯನ್ನು (ಪ್ರಮುಖ ಸಾಕ್ಷ್ಯ) ಬಲವಂತವಾಗಿ ತೆಗೆಸಿದ್ದಾರೆ ಎಂದು ಜ್ಯೋತಿ ಗಂಭೀರ ಆರೋಪ ಮಾಡಿದ್ದಾರೆ. ಬಸವೇಶ್ವರನಗರ ಇನ್ಸ್‌ಪೆಕ್ಟರ್ ಅವರು ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದು, ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಆರೋಪಿಗಳಿಗೆ ಸ್ಟೇಷನ್ ಜಾಮೀನು ನೀಡಲಾಗಿದ್ದು, ತನಿಖೆ ಮುಂದುವರಿದಿದೆ.
ಬೆಂಗಳೂರು, ಏಪ್ರಿಲ್ 07:ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಗರದ ನಿವಾಸಿಗಳಿಗೆ ಗುಡ್ ನ್ಯೂಸ್ ನೀಡಿದೆ. ಬಾಕಿ ಇರುವ ನೀರಿನ ಬಿಲ್‌ಗಳನ್ನು ವಸೂಲಿ ಮಾಡುವ ಉದ್ದೇಶದಿಂದ ಮೂರು ತಿಂಗಳ ಅವಧಿಗೆ ಒನ್ ಟೈಮ್ ಸೆಟಲ್‌ಮೆಂಟ್ (OTS) ಯೋಜನೆಯನ್ನು ಜಾರಿಗೆ ತಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಂಡಳಿಯ ಅಧ್ಯಕ್ಷ ರಾಮ ಪ್ರಸಾತ್ ಮನೋಹರ್ , ಪ್ರಸ್ತುತ ನೀರಿನ ಬಿಲ್‌ಗಳ ಜೊತೆಗೆ OTS ನೋಟಿಸ್‌ಗಳನ್ನು ನೀಡಲಾಗುವುದು. BWSSB ವ್ಯಾಪ್ತಿಯ ಸುಮಾರು 11 ಲಕ್ಷ ನೀರಿನ ಸಂಪರ್ಕಗಳಲ್ಲಿ, 5.11 ಲಕ್ಷ ಗ್ರಾಹಕರಿಗೆ ಸಂಬಂಧಿಸಿ ಬಾಕಿ ಬಿಲ್‌ಗಳು ಇರುವುದಾಗಿ ಅವರು ತಿಳಿಸಿದ್ದಾರೆ.
— Bangalore Water Supply and Sewerage Board (@chairmanbwssb) April 7, 2026
ಅಂಕಿಅಂಶಗಳ ಪ್ರಕಾರ, ಫೆಬ್ರವರಿ ಅಂತ್ಯದ ವೇಳೆಗೆ ಬಾಕಿ ಇರುವ ನೀರಿನ ಬಿಲ್‌ಗಳ ಒಟ್ಟು ಮೊತ್ತ 851.33 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಮೂಲ ಮೊತ್ತ 539.43 ಕೋಟಿ ರೂಪಾಯಿ ಹಾಗೂ ಬಡ್ಡಿ 311.90 ಕೋಟಿ ರೂಪಯಿಗಳು ಸೇರಿವೆ. ಈ ಬಾಕಿ ಮೊತ್ತವನ್ನು ಸುಲಭವಾಗಿ ತೀರಿಸಲು ಏಪ್ರಿಲ್‌ನಿಂದ ಜೂನ್‌ವರೆಗೆ OTS ಯೋಜನೆಯನ್ನು ಜಾರಿಗೆ ತರಲಾಗಿದೆ. OTS ಯೋಜನೆಗೆ ಅರ್ಹರಾಗಿರುವ ಗ್ರಾಹಕರಿಗೆ ಈ ತಿಂಗಳ ನೀರಿನ ಬಿಲ್ ಜೊತೆಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ ಎಂದು ರಾಮ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಬಾಕಿ ಇರುವ ಮೂಲ ಮೊತ್ತ, ಮನ್ನಾ ಮಾಡಲಾಗುವ ಬಡ್ಡಿ ಮೊತ್ತ, ಅಂತಿಮವಾಗಿ ಪಾವತಿಸಬೇಕಾದ ಮೊತ್ತ, ಪಾವತಿ ವಿಧಾನಗಳು ಹಾಗೂ ಯೋಜನೆಯ ಅರ್ಹತಾ ಮಾನದಂಡಗಳ ವಿವರಗಳನ್ನು ಪ್ರತ್ಯೇಕ ಪತ್ರದ ಮೂಲಕ ಬಿಲ್ ಜೊತೆ ಸೇರಿಸಿ ನೀಡಲಾಗುತ್ತದೆ. ದೀರ್ಘಕಾಲದಿಂದ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಅವರು ಮನವಿ ಮಾಡಿರೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರ ಆರಂಭದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಬ್ಯಾಕ್ ಟು ಬ್ಯಾಕ್ ಸೋಲನುಭವಿಸಿದೆ. ಅದರಲ್ಲೂ ತನ್ನ ಬದ್ಧವೈರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸಿಎಸ್‌ಕೆ ಪಡೆ ಮಕಾಡೆ ಮಲಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು.
ಅತ್ತ ಟಾಸ್ ಗೆದ್ದಿದ್ದರಿಂದ ಸಿಎಸ್‌ಕೆ ತಂಡವು ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಾಂಡಿಗರು ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿದ್ದರು. ಅಲ್ಲದೆ 20 ಓವರ್ಗಳಲ್ಲಿ ಬರೋಬ್ಬರಿ 250 ರನ್ ಬಾರಿಸಿ ಆರ್‌ಸಿಬಿ ಹೊಸ ಇತಿಹಾಸ ನಿರ್ಮಿಸಿದ್ದರು.
ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.4 ಓವರ್ಗಳಲ್ಲಿ 207 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಸಿಎಸ್‌ಕೆ ತಂಡವು 43 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ಈ ಸೋಲಿನ ಬಳಿಕ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್, “ಇಂದಿನ ಸೋಲಿಗೆ ಖಂಡಿತವಾಗಿಯೂ ನಾನೇ ಕಾರಣ. ನಾನು ಕ್ರೀಸ್‌ನಲ್ಲಿ ಹೆಚ್ಚು ಸಮಯ ನಿಂತು ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು. ಆರಂಭದಲ್ಲೇ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು,” ಎಂದು ಒಪ್ಪಿಕೊಂಡಿದ್ದಾರೆ.
ಒಂದು ವೇಳೆ ನಾನು ಕ್ರೀಸ್‌ನಲ್ಲಿ ಹೆಚ್ಚು ಸಮಯ ಆಡಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು. ನಾನು ಬೇಗನೆ ಔಟಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೋಲಿಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದಾಗ್ಯೂ ಮುಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಸಿಎಸ್‌ಕೆ ಗೆಲುವಿನ ಖಾತೆ ತೆರೆಯಲಿದೆ ಎಂಬ ವಿಶ್ವಾಸವಿದೆ ರುತುರಾಜ್ ಗಾಯಕ್ವಾಡ್ ತಿಳಿಸಿದ್ದಾರೆ.
RCB vs CSK ಮುಖ್ಯಾಂಶಗಳು:
RCB ಅಬ್ಬರ: ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ಟಿಮ್ ಡೇವಿಡ್ (70*) ಮತ್ತು ರಜತ್ ಪಾಟಿದಾರ್ (48*) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 250 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
CSK ವಿಫಲ: 251 ರನ್‌ಗಳ ಗುರಿ ಬೆನ್ನತ್ತಿದ ಸಿಎಸ್‌ಕೆ ತಂಡವು 19.4 ಓವರ್ಗಳಲ್ಲಿ 207 ರನ್ಗಳಿಗೆ ಆಲೌಟ್ ಆಗಿದ್ದರು.
ಗಾಯಕ್ವಾಡ್ ವೈಫಲ್ಯ: 251 ರನ್‌ಗಳ ಗುರಿ ಬೆನ್ನಟ್ಟಿದ ಸಿಎಸ್‌ಕೆ ಪರ ನಾಯಕ ರುತುರಾಜ್ ಗಾಯಕ್ವಾಡ್ ಕೇವಲ 7 ರನ್ ಗಳಿಸಿ ಔಟ್ ಆಗಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು.
ಸತತ ಸೋಲು:
ಇದು 2026ರ ಸೀಸನ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಎದುರಾದ ಸತತ ಮೂರನೇ ಸೋಲಾಗಿದೆ. ರುತುರಾಜ್ ನಾಯಕತ್ವದಲ್ಲಿ ತಂಡವು ಕಳೆದ ಸೀಸನ್‌ನಿಂದ ಸೇರಿ ಒಟ್ಟು ಏಳು ಪಂದ್ಯಗಳಲ್ಲಿ ಸೋಲು ಕಂಡಿದೆ.
ಸೋಲಿಗೆ ಕಾರಣವಾದ ಅಂಶಗಳು:
ಸಿಎಸ್‌ಕೆ ತಂಡದ ಬ್ಯಾಟಿಂಗ್ ವೈಫಲ್ಯದ ಜೊತೆಗೆ, ವಿರಾಟ್ ಕೊಹ್ಲಿ ಅವರಿಗೆ ನೀಡಿದ ಜೀವದಾನ ಮತ್ತು ನೋ-ಬಾಲ್‌ಗಳ ಮೂಲಕ ಎದುರಾಳಿ ತಂಡಕ್ಕೆ ಸಿಕ್ಕ ಅವಕಾಶಗಳು ಸೋಲಿಗೆ ಮುಖ್ಯ ಕಾರಣ ಎಂದು ರುತುರಾಜ್ ಗಾಯಕ್ವಾಡ್ ವಿಶ್ಲೇಷಿಸಿದ್ದಾರೆ.
ಇತ್ತ ಸರ್ಫರಾಝ್ ಖಾನ್, ಪ್ರಶಾಂತ್ ವೀರ್ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂದಿನ ಪಂದ್ಯಗಳಲ್ಲಿ ಪುಟಿದೇಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇಂದಿನ ಕಾಲದಲ್ಲಿ ಅನಾರೋಗ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ಅಸ್ಥಿರ ಜೀವನ ಶೈಲಿ. ಈಗ ಹೆಚ್ಚಿನವರು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ತಿನ್ನುತ್ತಾರೆ. ಅಷ್ಟು ಮಾತ್ರವಲ್ಲ, ಊಟ ಮಾಡುವಾಗ ಮೊಬೈಲ್ ಬಳಸದೆಯೇ ಊಟ ಮಾಡುವುದೇ ಇಲ್ಲ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ಅಭ್ಯಾಸ ನಿಮ್ಮ ಆರೋಗ್ಯಕ್ಕೆ, ಅದರಲ್ಲಿಯೂ ಕರುಳಿನ ಆರೋಗ್ಯಕ್ಕೆ (Gut Health)ಹಾನಿ ಉಂಟುಮಾಡಬಹುದು. ಹಾಗಾದರೆ ಫೋನ್ ಬಳಕೆ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆಯೇ, ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಫೋನ್ ಬಳಕೆ ಮತ್ತು ಜೀರ್ಣಕ್ರಿಯೆ ಮೇಲೆ ಪರಿಣಾಮ:
ಊಟ ಮಾಡುವಾಗ ಫೋನ್ ನೋಡುತ್ತಾ ಆಹಾರ ಸೇವನೆ ಮಾಡುವವರು ಸಾಮಾನ್ಯವಾಗಿ ಆಹಾರವನ್ನು ಸರಿಯಾಗಿ ಜಗಿದು ತಿನ್ನುವುದಿಲ್ಲ. ಇದರ ಪರಿಣಾಮವಾಗಿ ಆಹಾರ ಸರಿಯಾಗಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಒತ್ತಡದಿಂದ ಕರುಳು ಅಥವಾ ಗಟ್ ಆರೋಗ್ಯ ಹದಗೆಡುತ್ತದೆ. ಆಗ ಮೈಕ್ರೋಬಿಯೊಮ್‌ನಲ್ಲಿ ಅಸಮತೋಲನ ಉಂಟಾಗುತ್ತದೆ. ಇದು ಇಮ್ಯುನಿಟಿ ಕಡಿಮೆಯಾಗುವುದರಿಂದ ಹಿಡಿದು ನಿದ್ರಾಹೀನತೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಪ್ಯಾಸಿಫಿಕ್ ವನ್‌ಹೆಲ್ತ್ ಸಂಸ್ಥೆಯ ಪ್ರಿವೆಂಟಿವ್ ವೆಲ್‌ನೆಸ್ ಮತ್ತು ಮೆಟಾಬಾಲಿಕ್ ಡಿಸೀಸ್ ವಿಭಾಗದ ಮುಖ್ಯಸ್ಥರಾದ ಡಾ. ಐಜಾಝ್ ಇಲ್ಮಿ ಅವರ ಪ್ರಕಾರ, 2025ರಲ್ಲಿ ನಡೆದ ಒಂದು ಅಧ್ಯಯನದಂತೆ ಸುಮಾರು 39% ನಗರ ಪ್ರದೇಶದ ಜನರು ಕಡಿಮೆ ಫೈಬರ್ ಇರುವ ಆಹಾರ ಸೇವಿಸುತ್ತಿದ್ದಾರೆ. ಜೊತೆಗೆ 36% ಕ್ಕಿಂತ ಹೆಚ್ಚು ಜನರು ಹೆಚ್ಚು ಸಕ್ಕರೆ ಇರುವ ಆಹಾರಗಳನ್ನು ಸೇವಿಸುತ್ತಿದ್ದಾರೆ. ಈ ರೀತಿಯ ಆಹಾರ ಪದ್ಧತಿಗಳು ಕರುಳಿನ ಆರೋಗ್ಯವನ್ನು ಹಾನಿಗೊಳಿಸುತ್ತವೆ. ದೇಹದಲ್ಲಿ ಉರಿಯೂತ (ಇನ್‌ಫ್ಲಮೇಷನ್) ಹೆಚ್ಚುವುದು, ಇಮ್ಯೂನ್ ಸಿಸ್ಟಮ್ ಮೇಲೆ ಪರಿಣಾಮ ಬೀಳುವುದು ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ಹೊಟ್ಟೆ ಉಬ್ಬರ, ಮಧ್ಯಾಹ್ನದ ವೇಳೆಯಲ್ಲಿ ದಣಿವು ಇತ್ಯಾದಿ ಲಕ್ಷಣಗಳು ಕಂಡುಬರುತ್ತದೆ ಆದರೆ ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುವುದರಿಂದ ಸಮಸ್ಯೆ ಗಂಭೀರವಾಗಬಹುದು.
ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು:
ಊಟ ಮಾಡುವಾಗ ಫೋನ್ ಬಳಕೆ ಮಾಡಬೇಡಿ
ಆಹಾರದಲ್ಲಿ ದಾಲ್, ಹಣ್ಣು ಮತ್ತು ಕಾಯಿ, ಬೀಜಗಳನ್ನು ಸೇರಿಸಿಕೊಳ್ಳಿ