Category Archives: Blog

Your blog category

ರಸ್ತೆ ಬದಿ ಅಂಗಡಿಯಲ್ಲಿ 1 ಟೀ ಕುಡಿದು 2 ಸಾವಿರ ರೂ. ಕೊಟ್ಟ DCM ಪರಮೇಶ್ವರ್ – Kannada News | DCM Dr G parameshwara Gives rs 2 Thousand For On Cup Tea at Tumakuru

ತುಮಕೂರು, (ಜೂನ್ 14): ಡಾ. ಜಿ ಪರಮೇಶ್ವರ್  (DCM Dr G parameshwara) ಅವರು ಉಪಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ತಮ್ಮ ಕ್ಷೇತ್ರ ಕೊರಟಗೆರೆಗೆ ಆಗಮಿಸಿದ್ದು, ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ಡಿಸಿಎಂ ಆಗಿದ್ದಕ್ಕೆ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಪರಮೇಶ್ವರ್ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಿದ್ದು, ಈ ವೇಳೆ ಪರಮೇಶ್ವರ್ ಅವರು ತಮ್ಮ ರಾಜಕೀಯ ಹಾದಿಯನ್ನು ಬಿಚ್ಚಿಟ್ಟರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಮತ್ತು ನಾನು ಜೋಡೆತ್ತುಗಳು. ನಾವು ಒರಿಜಿನಲ್​ ಕಾಂಗ್ರೆಸ್ಸಿಗರು, ಒಳ್ಳೆಯ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ನಾಗೇನಹಳ್ಳಿ ಬಳಿ ರಸ್ತೆಬದಿ ಅಂಗಡಿಯಲ್ಲಿ ಟೀ ಸೇವಿಸಿದರು. ವಿಶೇಷ ಅಂದ್ರೆ, ತಾವು ಕುಡಿದ ಒಂದು ಟೀಗೆ ಬರೋಬ್ಬರಿಗೆ 2000 ಹಣ ನೀಡಿದ್ದಾರೆ.  ಹೌದು..ತಮ್ಮ ಪರ್ಸ್​​​ನಿಂದ  500 ರೂಪಾಯಿಯ ನಾಲ್ಕು ಗರಿ ಗರಿ ನೋಟುಗಳನ್ನು ತೆಗೆದು ನೀಡಿದರು. ಇದರಿಂದ ಅಂಗಡಿ ಮಾಲೀಕ ಫುಲ್ ಖುಷ್ ಆಗಿದ್ದಾನೆ.

Source link

ಮಾನ್ಸೂನ್‌ ಋತುವಿನಲ್ಲಿ ಈ ಕಾಲೋಚಿತ ಹಣ್ಣುಗಳನ್ನು ತಿನ್ನಲು ಮರೆಯದಿರಿ – Kannada News | Eat these fruits during the rainy season to stay healthy

ಮಳೆಗಾಲದಲ್ಲಿ ಅನಾರೋಗ್ಯ ಎದುರಾಗುವುದು ಸಾಮಾನ್ಯ. ಹೌದು ಋತುವಿನಲ್ಲಾಗುವ ಹವಾಮಾನ ಬದಲಾವಣೆಯಿಂದಾಗಿ ಶೀತ, ಜ್ವರ, ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಅಲರ್ಜಿ, ಸೋಂಕುಗಳ ಅಪಾಯವೂ ಹೆಚ್ಚು. ಹಾಗಾಗಿ ಈ ಸಮಯದಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲವಾಗಿಡುವುದು ತುಂಬಾನೇ ಮುಖ್ಯವಾಗಿದೆ.  ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸರಿಯಾದ ಆಹಾರ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಜೊತೆಗೆ ಈ ಕೆಲವೊಂದಿಷ್ಟು ಕಾಲೋಚಿತ ಹಣ್ಣುಗಳನ್ನು (seasonal fruits) ಸೇವನೆ ಮಾಡಬೇಕು. ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಕಾಲೋಚಿತ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಸಾಮಾನ್ಯ ಸೋಂಕುಗಳನ್ನು ತಡೆಗಟ್ಟಲು, ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ದಿನವಿಡೀ ಶಕ್ತಿಯ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ಮಳೆಗಾಲದಲ್ಲಿ ತಿನ್ನಲೇಬೇಕಾದ ಹಣ್ಣುಗಳಿವು:

ಪಪ್ಪಾಯಿ: ವಿಟಮಿನ್ ಸಿ, ವಿಟಮಿನ್ ಎ ಮತ್ತು ಫೈಬರ್‌ನಿಂದ ಸಮೃದ್ಧವಾಗಿರುವ ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಪಪೈನ್‌ನಂತಹ ಇದರ ಕಿಣ್ವಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಆದ್ದರಿಂದ ಈ ಸಮಯದಲ್ಲಿ ಪಪ್ಪಾಯವನ್ನು ಸೇವನೆ ಮಾಡಿ.

ಪೇರಳೆ: ಪೇರಳೆ ಹಣ್ಣುಗಳು ಫೈಬರ್ ಮತ್ತು ವಿಟಮಿನ್ ಕೆ ಯ ಉತ್ತಮ ಮೂಲವಾಗಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಅಲ್ಲದೆ ಪೇರಳೆಯಲ್ಲಿ ನೀರಿನಾಂಶ ಅಧಿಕವಾಗಿದ್ದು, ಇದು ಜಲಸಂಚಯನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಚರ್ಮವನ್ನು ಕಾಂತಿಯುತಗೊಳಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ತಿನ್ನಲು ಇದು ಸೂಕ್ತ ಹಣ್ಣು.

ದಾಳಿಂಬೆ: ಪಾಲಿಫಿನಾಲ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ದಾಳಿಂಬೆ ರಕ್ತ ಪರಿಚಲನೆಯನ್ನು ಬೆಂಬಲಿಸುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಇದು ಮಳೆಗಾಲದ ಕಾಯಿಲೆಗಳಿಂದ ದೇಹವು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಜಾಮೂನ್: ನೇರಳೆ ಹಣ್ಣು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಸೋಂಕಿನಿಂದ ರಕ್ಷಿಸುತ್ತದೆ. ಜೀವಸತ್ವಗಳು, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳಿಂದ ತುಂಬಿರುವ ಜಾಮೂನ್ ನಿಮ್ಮನ್ನು ಫಿಟ್ ಮತ್ತು ಆರೋಗ್ಯವಾಗಿರಿಸುತ್ತದೆ. ಹಾಗಾಗಿ ಮಳೆಗಾಲದಲ್ಲಿ ತಪ್ಪದೇ ನೇರಳೆಹಣ್ಣನ್ನು ಸೇವನೆ ಮಾಡಿ.

ರಂಬುಟಾನ್: ನೀರು ಮತ್ತು ವಿಟಮಿನ್ ಸಿ ಅಧಿಕವಾಗಿರುವ ರಂಬುಟಾನ್ ಹಣ್ಣು ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಮಳೆಗಾಲದಲ್ಲಿ ತಪ್ಪದೇ ರಂಬುಟಾನ್‌ ಹಣ್ಣು ಸೇವಿಸಿ.

ಇದನ್ನೂ ಓದಿ: ಪ್ರತಿದಿನ ಊಟದ ಬಳಿಕ ಒಂದು ಸ್ಪೂನ್‌ ಸೋಂಪು ತಿನ್ನಿ, ಅದ್ಭುತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ

ಬಾಳೆಹಣ್ಣು: ಬಾಳೆಹಣ್ಣುಗಳು ಪೊಟ್ಯಾಸಿಯಮ್, ಫೈಬರ್ ಮತ್ತು ಪ್ರಿಬಯಾಟಿಕ್ ಗುಣಲಕ್ಷಣಗಳಿಂದ ಸಮೃದ್ಧವಾಗಿವೆ, ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ, ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ.

ಪ್ಲಮ್: ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್‌ನಿಂದ ಸಮೃದ್ಧವಾಗಿರುವ ಪ್ಲಮ್, ಮಳೆಗಾಲದಲ್ಲಿ ಮಲಬದ್ಧತೆಯನ್ನು ತಡೆಯಲು, ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅವುಗಳ ನೈಸರ್ಗಿಕ ಸಂಯುಕ್ತಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಕಾಲೋಚಿತ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಸೇಬು: ಸೇಬುಗಳು ಫೈಬರ್, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ಹೃದಯದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಳೆಗಾಲದಲ್ಲಿ ಪ್ರತಿದಿನ ಒಂದು ಸೇಬನ್ನು ತಿನ್ನುವುದರಿಂದ ಉತ್ತಮ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಬಹುದು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs PAK: ವಿಶ್ವಕಪ್​ ಅಂಗಳದಲ್ಲೂ ಕೈಕುಲುಕದ ಉಭಯ ನಾಯಕಿಯರು – Kannada News | Women’s T20 World Cup 2026: India’s No Handshake Stance vs Pakistan Continues in Birmingham

ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದಾಗ್ಯೂ ಟಾಸ್‌ ಸಮಯದಲ್ಲಿ ಉಭಯ ತಂಡಗಳ ನಾಯಕಿಯರು ಹ್ಯಾಂಡ್‌ಶೇಕ್ ಮಾಡುತ್ತಾರಾ ಎಂಬುದನ್ನು ನೋಡಲು ಎಲ್ಲರೂ ಕಾದು ಕುಳಿತಿದ್ದರು. ಆದರೆ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಪಾಕಿಸ್ತಾನಿ ನಾಯಕಿಯೊಂದಿಗೆ ಹ್ಯಾಂಡ್‌ಶೇಕ್ ಮಾಡುವುದಿಲ್ಲ ಎಂಬ ನೀತಿಯನ್ನು ಟಿ20 ವಿಶ್ವಕಪ್​ನಲ್ಲೂ ಮುಂದುವರೆಸಿದರು. ಇದರರ್ಥ ಪಂದ್ಯದ ನಂತರವೂ ಭಾರತೀಯ ಆಟಗಾರ್ತಿಯರು ಪಾಕಿಸ್ತಾನದೊಂದಿಗೆ ಹ್ಯಾಂಡ್‌ಶೇಕ್ ಮಾಡುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಟಿ20 ವಿಶ್ವಕಪ್​ನಲ್ಲೂ ಕೈಕುಲುಕಲಿಲ್ಲ

ವಾಸ್ತವವಾಗಿ, ಕಳೆದ ವರ್ಷ ನಡೆದ ಪುರುಷರ ಏಷ್ಯಾಕಪ್ ನಂತರ, ಪುರುಷ ಮತ್ತು ಮಹಿಳಾ ತಂಡಗಳ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕುವುದಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಏಷ್ಯಾಕಪ್‌ನಲ್ಲಿ, ಪಾಕ್ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಮಾಡಿರಲಿಲ್ಲ. ಇದರಿಂದ ದೊಡ್ಡ ವಿವಾದವೇ ಹುಟ್ಟಿಕೊಂಡಿತು. ಇದಕ್ಕೆ ತಿರುಗೇಟೆಂಬಂತೆ ಎಸಿಸಿ ಅಧ್ಯಕ್ಷರಾಗಿದ್ದ ಮೊಹ್ಸಿನ್ ನಖ್ವಿ, ಟೀಂ ಇಂಡಿಯಾಕ್ಕೆ ನೀಡಬೇಕಿದ್ದ ಏಷ್ಯಾಕಪ್ ಟ್ರೋಫಿಯನ್ನು ಹಸ್ತಾಂತರಿಸಿಲ್ಲ. ಈ ಟೂರ್ನಿಯ ಬಳಿಕ ನಡೆದಿದ್ದ ಮಹಿಳಾ ವಿಶ್ವಕಪ್, U19 ವಿಶ್ವಕಪ್, ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಮತ್ತು ಪುರುಷರ ಟಿ20 ವಿಶ್ವಕಪ್‌ನಲ್ಲಿಯೂ ಉಭಯ ತಂಡಗಳ ಆಟಗಾರರು ಹ್ಯಾಂಡ್‌ಶೇಕ್ ಮಾಡಿರಲಿಲ್ಲ.

ಟಾಸ್ ಗೆದ್ದ ಭಾರತ

ಟಾಸ್ ಗೆದ್ದ ಬಳಿಕ ಮಾತನಾಡಿದ ಹರ್ಮನ್ಪ್ರೀತ್ ಕೌರ್, ‘ನಾವು ಮೊದಲು ಬ್ಯಾಟಿಂಗ್ ಮಾಡುತ್ತೇವೆ, ಇದು ಬ್ಯಾಟಿಂಗ್ ಮಾಡಲು ಉತ್ತಮ ಪಿಚ್. ಹೀಗಾಗಿ ನಾವು ಉತ್ತಮ ಸ್ಕೋರ್ ಕಲೆಹಾಕುತ್ತೇವೆ ಎಂದರು. ಇದರ ಜೊತೆಗೆ ತಂಡದ ಪ್ಲೇಯಿಂಗ್ 11 ಬಗ್ಗೆ ಮಾತನಾಡಿದ ಹರ್ಮನ್ಪ್ರೀತ್, ಭಾರತಿ ಫುಲ್ಮಾಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಲಾಗಿದೆ ಎಂದರು.

ಉಭಯ ತಂಡಗಳ ಪ್ಲೇಯಿಂಗ್ 11

ಭಾರತ: ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್ಪ್ರೀತ್ ಕೌರ್ (ನಾಯಕಿ), ಭಾರತಿ ಫುಲ್ಮಾಲಿ, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್, ಶ್ರೀ ಚರಣಿ, ಕ್ರಾಂತಿ ಗೌಡ್.

ಪಾಕಿಸ್ತಾನ: ಗುಲ್ ಫಿರೋಜಾ, ಮುನೀಬಾ ಅಲಿ (ವಿಕೆಟ್ ಕೀಪರ್), ಆಯೇಶಾ ಜಾಫರ್, ಸೈರಾ ಜಬೀನ್, ಅಲಿಯಾ ರಿಯಾಜ್, ನತಾಲಿಯಾ ಪರ್ವೇಜ್, ಫಾತಿಮಾ ಸನಾ (ನಾಯಕಿ), ರಮೀನ್ ಶಮೀಮ್, ನಶ್ರಾ ಸಂಧು, ತಸ್ಮಿಯಾ ರುಬಾಬ್, ಸಾದಿಯಾ ಇಕ್ಬಾಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:20 pm, Sun, 14 June 26

Source link

ಕರ್ನಾಟಕಕ್ಕೆ ಕೊಟ್ಟ ಅನುದಾನ: ಯೋಜನೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್ – Kannada News | Nirmala Sitharaman Details Central Grants Allocated to Karnataka Projects

ನಿರ್ಮಲಾ ಸೀತಾರಾಮನ್Image Credit source: tv9 kannada

ಬೆಂಗಳೂರು, ಜೂನ್​ 14: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್​​ಡಿಎ ಸರ್ಕಾರ 12 ವರ್ಷಗಳನ್ನು ಪೂರ್ತಿ ಮಾಡಿದೆ. ಚುನಾಯಿತ ಪ್ರತಿನಿಧಿಯಾಗಿ ‌ನರೇಂದ್ರ‌ ಮೋದಿ ದಾಖಲೆಯ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ಡಿಜಿಟಲ್ ಪೇಮೆಂಟ್​​ ಮೂಲಕ ಬೀದಿ ವ್ಯಾಪಾರಿಗಳು ಯುಪಿಐ ಬಳಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ದಾಖಲೆ ಸೃಷ್ಟಿಸಲಾಗಿದೆ. ಗುಣಮಟ್ಟದ ರಸ್ತೆಗಳ ನಿರ್ಮಾಣವಾಗಿದೆ. ವಾಯುಮಾರ್ಗಗಳು, ಏರ್​ಪೋರ್ಟ್, ರೈಲು ಮಾರ್ಗಗಳ ಅಭಿವೃದ್ಧಿ ಆಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸೂತ್ರದಲ್ಲಿ ದೇಶ ಮುನ್ನಡೆಯುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು

ಬೆಂಗಳೂರಿನ ಜಯನಗರದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈವರೆಗೆ ಬರೋಬ್ಬರಿ 2 ಕೋಟಿಗೂ ಅಧಿಕ ‘ಪಿಎಂ ಜನ ಧನ್’ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಲು 3.4 ಲಕ್ಷ ಕೋಟಿಗೂ ಅಧಿಕ ಮುದ್ರಾ ಸಾಲವನ್ನು ವಿತರಿಸಲಾಗಿದೆ. ವಿಶೇಷವಾಗಿ ಬೆಂಗಳೂರಿನ ಪೀಣ್ಯ ಮತ್ತು ಶಿರಸಿಯಂತಹ ಪ್ರಮುಖ ಎಂಎಸ್ಎಂಇ ಕೈಗಾರಿಕಾ ವಲಯಗಳಿಗೆ ಇದರಿಂದ ಭಾರಿ ನೆರವಾಗಿದೆ ಎಂದರು.

ನಿರ್ಮಲಾ ಸೀತಾರಾಮನ್ ಟ್ವೀಟ್​

ರಸ್ತೆ ಬದಿಯ 6 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಯಾವುದೇ ಗ್ಯಾರಂಟಿ ಇಲ್ಲದೆ ‘ಪಿಎಂ ಸ್ವನಿಧಿ’ ಯೋಜನೆಯಡಿ ಸಾಲ ಸೌಲಭ್ಯ ಒದಗಿಸಲಾಗಿದೆ. ಜನರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ 1.9 ಕೋಟಿಗೂ ಅಧಿಕ ‘ಆಯುಷ್ಮಾನ್ ಕಾರ್ಡ್’ಗಳನ್ನು ವಿತರಿಸಲಾಗಿದ್ದು, ಪ್ರತಿ ಕುಟುಂಬಕ್ಕೆ 5 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ ಸೌಲಭ್ಯ ಸಿಕ್ಕಿದೆ. ಇನ್ನು ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧ ಒದಗಿಸಲು 1,610ಕ್ಕೂ ಹೆಚ್ಚು ‘ಜನೌಷಧಿ ಕೇಂದ್ರ’ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

12 ಕೋಟಿ ಕುಟುಂಬಗಳಿಗೆ ಶೌಚಾಲಯ ನಿರ್ಮಾಣ

‘ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ’ಗೆ 1.67 ಕೋಟಿ ಹಾಗೂ ‘ಪಿಎಂ ಸುರಕ್ಷಾ ಬಿಮಾ ಯೋಜನೆ’ಗೆ 2.60 ಕೋಟಿ ಜನ ನೊಂದಾಯಿಸಿಕೊಂಡಿದ್ದಾರೆ. ಇದರೊಂದಿಗೆ 49 ಲಕ್ಷ ಜನ ‘ಅಟಲ್ ಪೆನ್ಷನ್ ಯೋಜನೆ’ಯ ಲಾಭ ಪಡೆಯುತ್ತಿದ್ದಾರೆ. 4 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಈ ಯೋಜನೆಯಡಿ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ದೇಶದ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. 12 ಕೋಟಿ ಕುಟುಂಬಗಳಿಗೆ ಶೌಚಾಲಯ ನಿರ್ಮಾಣ ಆಗಿದೆ. ಭಾರತದ 15 ಕೋಟಿ ಕುಟುಂಬಕ್ಕೆ ನಲ್ಲಿ ಮೂಲಕ ನೀರು ಸಿಗುತ್ತಿದೆ. 10 ಕೋಟಿ ಕುಟುಂಬಗಳಿಗೂ ಎಲ್​ಪಿಜಿ ಕನೆಕ್ಷನ್ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ ಅನ್ನೋದು ಸರಿಯಲ್ಲ

ಅನುದಾನದ ವಿಚಾರದಲ್ಲಿ ಕೇಂದ್ರದಿಂದ ತಾರತಮ್ಯ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರಕ್ಕೆ ಹೆಚ್ಚು ತೆರಿಗೆ ಪಾಲು ಕೊಡುತ್ತಿದ್ದೇವೆ ಎಂದ ಮಾತ್ರಕ್ಕೆ, ಹೆಚ್ಚು ಅನುದಾನ ಕೊಟ್ಟಿಲ್ಲ ಅನ್ನೋದು ಸರಿಯಲ್ಲ. ಕಲಬುರಗಿ, ಯಾದಗಿರಿಯಂತಹ ಪ್ರದೇಶದಿಂದಲೂ ತೆರಿಗೆ ಸಂಗ್ರಹ ಆಗುತ್ತದೆ. ಆದರೆ ಬೆಂಗಳೂರಿಗೆ ಅನುದಾನ ಹೆಚ್ಚು ಅನ್ನೋದು ಹೇಗೆ ಸರಿ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಕಡೆಗೋಲು ಕೃಷ್ಣನ ದರ್ಶನ ಪಡೆದ ನಿರ್ಮಲಾ ಸೀತಾರಾಮನ್

ರಾಜ್ಯ ಸರ್ಕಾರಗಳು ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿವೆ. ನಿಮ್ಮಿಂದ ಕೊಡಲು ಆಗುವುದಿದ್ದರೆ ಸದನದಲ್ಲಿ ಚರ್ಚೆ ಮಾಡಿ. ಬಜೆಟ್​ನಲ್ಲಿ ನಿಧಿ ಸಂಗ್ರಹದ ಬಗ್ಗೆ ಪ್ಲ್ಯಾನ್ ಮಾಡಿ ಜಾರಿಗೊಳಿಸಿ. ಬೇಕಾಬಿಟ್ಟಿ ಗ್ಯಾರಂಟಿ ನೀಡುವುದರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಕಿಡಿಕಾರಿದರು.

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ 

ಆರ್ಥಿಕತೆ ವಿನಾಶದತ್ತ ಸಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ರಾಹುಲ್ ಭಾರತದ ಆರ್ಥಿಕತೆ ಬಗ್ಗೆ ನಕರಾತ್ಮಕವಾಗಿ ಮಾತನಾಡುತ್ತಾರೆ. ನಾನು ಸ್ಪಷ್ಟಪಡಿಸುತ್ತೇನೆ, ಆರ್ಥಿಕತೆ ವಿನಾಶದ ಹಾದಿಯಲ್ಲಿ ಇಲ್ಲ. ಕಾಂಗ್ರೆಸ್ ನಾಯಕರು ದುರ್ಬಲ ಭಾರತ ಮಾಡಲು ಹೊರಟಿದ್ದಾರೆ. ಮಧ್ಯಪ್ರಾಚ್ಯದ ಯುದ್ಧದ ನಡುವೆ ಆರ್ಥಿಕ ಬೆಳವಣಿಗೆ ಚೆನ್ನಾಗಿದೆ. ಹೊರ್ಮುಝ್​ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಸಮಸ್ಯೆ ಇದೆ. ಹೆಚ್ಚು ಹಣ ಕೊಡುವ ದೇಶಗಳಿಗೆ ತೈಲ ಸಾಗಾಣಿಕೆ ನಡೆಯುತ್ತಿದೆ. ಹಡಗುಗಳಿಗೆ ವಿಮೆ ಇದ್ದರೂ ಸಹ ಯುದ್ಧ ಕಾಲದಲ್ಲಿ ಉಪಯೋಗವಿಲ್ಲ. ಎಲ್ಲಾ ಚಾಲೆಂಜ್​ಗಳ ಮಧ್ಯೆಯೂ ಭಾರತದಲ್ಲಿ LPG ಕೊರತೆಯಾಗಿಲ್ಲ. ರಾಹುಲ್ ಗಾಂಧಿಗೆ ಇದು ಗೊತ್ತಾಗುತ್ತಿಲ್ಲ, ನೆಗೆಟಿವ್ ಹೇಳಿಕೆ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Karnataka Weather Forecast: ಕರ್ನಾಟಕದಲ್ಲಿ ಮುಂಗಾರು ಕ್ಷೀಣಿಸಿದರೂ ಹಲವೆಡೆ 5 ದಿನ ಮಳೆ ಮುನ್ಸೂಚನೆ – Kannada News | Weak monsoon In Some Places at Karnataka: intermittent rain in southern districts upcoming 5 days

ಬೆಂಗಳೂರು, (ಜೂನ್ 14): ಕರ್ನಾಟಕದಲ್ಲಿ (Karnataka) ಮುಂದಿನ ಇಂದಿನಿಂದ ಅಂದರೆ ಜೂನ್ 14ರಿಂದ ಐದು ದಿನಗಳವರೆಗೆ ಕೆಲವೆಡೆ ವರುಣಾರ್ಭಟ (Monson Rain)) ಮುಂದುವರಿಯಲಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿರಲಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಮಂಗಳವಾರದಿಂದ ಮಳೆ ಕ್ಷೀಣಿಸಲಿದೆ. ಹೌದು…ಉತ್ತರ ಒಳನಾಡಿನಲ್ಲಿ ಪ್ರಸ್ತುತ ಒಣ ಹವೆ ಇದ್ದರೂ, ಮುಂದಿನ ದಿನಗಳಲ್ಲಿ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಉತ್ತರ ಒಳನಾಡಲ್ಲಿ ಜೂನ್ 14 ರಿಂದ 18 ರವರೆಗೆ ಕೆಲವು ಕಡೆಗಳಲ್ಲಿ ಶೇ 50 ರಷ್ಟು ಕಡೆ, ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕಲಬುರಗಿ, ಬೀದರ್, ಕೊಪ್ಪಳ, ಯಾದಗಿರಿ, ರಾಯಚೂರು, ಬೆಳಗಾವಿ, ಬಾಗಲಕೋಟೆ, ವಿಜಯಪುರ, ದಾರವಾಡ, ಗದಗ, ಹಾವೇರಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂನೆ ನೀಡಿದೆ. ಉಳಿದಂತೆ ಮೈಸೂರು, ಕೊಡಗು, ಹಾಸನಕ್ಕೆ ಮಂಗಳವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಕರಾವಳಿಯ 2 ಜಿಲ್ಲೆಗಳಲ್ಲಿ ಮಾತ್ರ ಶುಕ್ರವಾರದವರೆಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.

ಬೆಂಗಳೂರು ಹವಾಮಾನ ವರದಿ

ಇನ್ನು ಮುಂದಿನ 3 ದಿನಗಳ ಬೆಂಗಳೂರಿನ ಹವಾಮಾನ ವರದಿಯನ್ನು ನೋಡುವುದಾರೆ, ಜೂನ್ 15 (ಸೋಮವಾರ): ಭಾಗಶಃ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ತಾಪಮಾನ 32°C (90°F) ಆಸುಪಾಸಿನಲ್ಲಿರಲಿದೆ.ಜೂನ್ 16 (ಮಂಗಳವಾರ): ಮೋಡ ಮತ್ತು ಬಿಸಿಲಿನ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಗುಡುಗು ಸಹಿತ ತುಂತುರು ಮಳೆಯಾಗುವ 61% ಸಂಭವವಿದೆ. ಇನ್ನು ಜೂನ್ 17 (ಬುಧವಾರ): ಗರಿಷ್ಠ ತಾಪಮಾನ 31°C (87°F) ಇರಲಿದ್ದು, ಸಂಜೆ ವೇಳೆಗೆ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು ಎಂದು ತಿಳಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರತಿದಿನ ಊಟದ ಬಳಿಕ ಒಂದು ಸ್ಪೂನ್‌ ಸೋಂಪು ತಿನ್ನಿ, ಈ ಅದ್ಭುತ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ – Kannada News | What are the benefits of eating fennel seeds?

ಭಾರತೀಯ ಅಡುಗೆ ಮನೆಗಳಲ್ಲಿ ಇರುವಂತಹ ಅನೇಕ ಮಸಾಲೆ ಪದಾರ್ಥಗಳು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿವೆ. ಅವುಗಳಲ್ಲಿ ಸೋಂಪು (fennel seeds) ಕೂಡ ಒಂದು. ಈ ಸೋಂಪು ಕಾಳುಗಳಲ್ಲಿ ವಿಟಮಿನ್‌, ಫೈಬರ್‌, ಕ್ಯಾಲ್ಸಿಯಂ, ಆಂಟಿ ಆಕ್ಸಿಡೆಂಟ್‌, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ ಫಂಗಲ್‌ ಗುಣಗಳಿದ್ದು, ಪ್ರತಿನಿತ್ಯ ಊಟದ ಬಳಿಕ ಸ್ವಲ್ಪ ಸೋಂಪು ತಿನ್ನುವ ಮೂಲಕ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಹೌದು ಸೋಂಪು ಕಾಳು ಜಗಿಯುವುದರಿಂದ ಬಾಯಿಯ ವಾಸನೆ ನಿವಾರಣೆಯಾಗುವುದಲ್ಲದೆ, ಅನೇಕ ಆರೋಗ್ಯ ಲಾಭಗಳು ಲಭಿಸುತ್ತವೆ. ಅವು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಊಟದ ನಂತರ ಸೋಂಪು ತಿನ್ನುವುದರಿಂದ ಲಭಿಸುವ ಪ್ರಯೋಜನಗಳೇನು?

ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ: ಸೋಂಪು ವಿಟಮಿನ್ ಎ ಯಲ್ಲಿ ಸಮೃದ್ಧವಾಗಿದೆ, ಇದು ದೃಷ್ಟಿ ಸುಧಾರಿಸಲು ತುಂಬಾನೇ ಸಕಾರಿಯಾಗಿದೆ. ಊಟದ ನಂತರ ಸೋಂಪನ್ನು ನಿಯಮಿತವಾಗಿ ಸೇವಿಸುವುದರಿಂದ ಕಣ್ಣುಗಳನ್ನು ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ಕಣ್ಣಿನ ಪೊರೆಗಳಂತಹ ಸ್ಥಿತಿಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ: ಸೋಂಪು ಕಾಳುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುವ ಮೂಲಕ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಸೋಂಪು ಬೀಜಗಳು ಚರ್ಮದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಉಸಿರಾಟವನ್ನು ತಾಜಾಗೊಳಿಸುತ್ತದೆ: ಊಟದ ನಂತರ ಸೋಂಪು ಬೀಜಗಳನ್ನು ಅಗಿಯುವುದರಿಂದ ಉಸಿರಾಟವು ತಾಜಾವಾಗಿರುತ್ತದೆ. ಸೋಂಪು ಬೀಜಗಳಲ್ಲಿರುವ ಆರೊಮ್ಯಾಟಿಕ್ ಸಂಯುಕ್ತಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಬಾಯಿಯ ದುರ್ವಾಸನೆಯ ವಿರುದ್ಧ ಹೋರಾಡುತ್ತದೆ ಮತ್ತು ನಿಮ್ಮ ಬಾಯಿಯನ್ನು ತಾಜಾತನದಿಂದ ಇರುವಂತೆ ಮಾಡುತ್ತದೆ.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ:  ಇದು ಜೀರ್ಣಕಾರಿ ರಸಗಳು ಮತ್ತು ಕಿಣ್ವಗಳ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ, ಅಜೀರ್ಣ, ಉಬ್ಬುವುದು ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಅಲ್ಲದೆ ಸೋಂಪು ಅನಿಲ ಮತ್ತು ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಊಟದ ಬಳಿಕ ಸ್ವಲ್ಪ ಸೋಂಪು ಸೇವಿಸಿ.

ತೂಕ ನಿಯಂತ್ರಣಕ್ಕೆ ಸಹಕಾರಿ: ಸೋಂಪು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಅಗಿಯುವುದರಿಂದ ಲಾಲಾರಸದ ಉತ್ಪಾದನೆ ಹೆಚ್ಚಾಗುತ್ತದೆ, ಇದು ಹೊಟ್ಟೆ ತುಂಬಿದ ಭಾವನೆಗೆ ಕಾರಣವಾಗುತ್ತದೆ ಮತ್ತು ಹಸಿವಿನ ಹಂಬಲವನ್ನು ಕಡಿಮೆ ಮಾಡುತ್ತದೆ. ಆ

ಇದನ್ನೂ ಓದಿ: ರಾತ್ರಿ ಊಟ ಮಾಡದೆ ಖಾಲಿ ಹೊಟ್ಟೆಯಲ್ಲಿ ಮಲಗುವ ಅಭ್ಯಾಸ ಎಷ್ಟು ಡೇಂಜರಸ್‌ ಗೊತ್ತಾ?

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಸೋಂಪು ಬೀಜಗಳು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿವೆ, ಇದರ ನಿಯಮಿತ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ: ಇದರಲ್ಲಿರುವ ಜೀವಸತ್ವಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ: ಸೋಂಪು ಜಗಿಯುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಇದರಲ್ಲಿರುವ ಅನೆಥೋಲ್, ಫೆನ್ಸೋನ್ ಮತ್ತು ಎಸ್ಟ್ರಾಗೋಲ್ ನಂತಹ ಅಂಶಗಳಿದ್ದು, ಇವು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs PAK Women’s T20 WC Live Score: ಭಾರತ-ಪಾಕಿಸ್ತಾನ ಹಣಾಹಣಿ – Kannada News | India vs Pakistan Women’s T20 World Cup 2026 Live Cricket Score IND vs PAK Group A Today Match, highlights latest news in Kannada

2026 ರ ಐಸಿಸಿ ಮಹಿಳಾ ಟಿ20ಐ ವಿಶ್ವಕಪ್‌ನ ಆರನೇ ಪಂದ್ಯವು ಎರಡು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿದೆ. ಈ ಪಂದ್ಯವು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಟಿ20 ವಿಶ್ವಕಪ್​ನಲ್ಲಿ ಎರಡೂ ತಂಡಗಳ ಮೊದಲ ಪಂದ್ಯ ಇದಾಗಿದೆ. ವಿಶ್ವಕಪ್ ಇತಿಹಾಸದಲ್ಲಿ, ಟೀಂ ಇಂಡಿಯಾ 8 ಪಂದ್ಯಗಳಲ್ಲಿ 6 ರಲ್ಲಿ ಪಾಕಿಸ್ತಾನವನ್ನು ಸೋಲಿಸಿದೆ. ಆದ್ದರಿಂದ, ಭಾರತ ತಂಡವು ಪಾಕಿಸ್ತಾನದ ವಿರುದ್ಧ ಏಳನೇ ಗೆಲುವು ಸಾಧಿಸುತ್ತದೆಯೇ? ಎಂಬುದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.

Source link

‘ರಾಮಾಯಣ’ ಚಿತ್ರದ ಬಿಡುಗಡೆ ಮುಂದೂಡಿಕೆ? ವದಂತಿಗಳಿಗೆ ತೆರೆ ಎಳೆದ ಚಿತ್ರತಂಡ! – Kannada News | Ramayana movie released postponed what team said

ರಣ್​​ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ಇನ್ನೂ ಹಲವು ಸ್ಟಾರ್ ನಟ, ನಟಿಯರು ನಟಿಸಿ ಭಾರಿ ಬಜೆಟ್​​ನಲ್ಲಿ ನಿರ್ಮಾಣ ಮಾಡಲಾಗಿರುವ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾವನ್ನು ಹಾಲಿವುಡ್​​ ಮಾದರಿಯಲ್ಲಿ ನಿರ್ಮಾಣ ಮಾಡಿರುವುದಾಗಿ ಮಾತ್ರವಲ್ಲದೆ, ಭಾರತದಿಂದ ವಿಶ್ವ ಸಿನಿಮಾ ರಂಗಕ್ಕಾಗಿ ನಿರ್ಮಾಣ ಮಾಡಲಾಗಿರುವ ಸಿನಿಮಾ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಪದೇ ಪದೇ ಹೇಳಿದ್ದಾರೆ. ಸಿನಿಮಾದ ಪ್ರಚಾರವನ್ನು ಈಗಾಗಲೇ ಆರಂಭಿಸಲಾಗಿದೆ. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ.

‘ರಾಮಾಯಣ’ ಸಿನಿಮಾದ ಟೀಸರ್ ಬಿಡುಗಡೆ ವಿಳಂಬವಾಗಿತ್ತು, ಆ ಬಳಿಕ ಬಿಡುಗಡೆ ಆದ ಟೀಸರ್​​ನಲ್ಲಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಲಾಗಿತ್ತು. ಇದೇ ವರ್ಷದ ದೀಪಾವಳಿಗೆ ಸಿನಿಮಾದ ಮೊದಲ ಭಾಗ ರಿಲೀಸ್ ಆಗಲಿದೆ ಎನ್ನಲಾಯ್ತು. ಆದರೆ ಇದೀಗ ಹರಿದಾಡುತ್ತಿರುವ ಕೆಲ ಸುದ್ದಿಗಳ ಪ್ರಕಾರ ಸಿನಿಮಾದ ಬಿಡುಗಡೆ ತಡವಾಗಲಿದೆಯಂತೆ. ಅಂತರಾಷ್ಟ್ರೀಯ ಯುದ್ಧ ಪರಿಸ್ಥಿತಿಯ ಜೊತೆಗೆ ಸಿನಿಮಾದ ಕೆಲ ಭಾಗಗಳ ಮರು ವಿಎಫ್​​ಎಕ್ಸ್ ಮತ್ತು ಮರು ಚಿತ್ರೀಕರಣ ಸಹ ಮಾಡಲಾಗುತ್ತಿದೆ ಎಂಬ ಸುದ್ದಿಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.

ಆದರೆ ಚಿತ್ರತಂಡ ಹೇಳಿರವಂತೆ ಅದೆಲ್ಲ ಸುಳ್ಳು ಸುದ್ದಿ ಎನ್ನಲಾಗಿದ್ದು, ಸಿನಿಮಾವು ಈ ಹಿಂದೆಯೇ ನಿಗದಿ ಪಡಿಸಿರುವಂತೆ ದೀಪಾವಳಿ ಹಬ್ಬದಂದೇ ಬಿಡುಗಡೆ ಆಗಲಿದೆಯೆಂತೆ. ಹಿಂದಿ ಮಾತ್ರವಲ್ಲದೆ, ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಕೆಲ ವಿದೇಶಿ ಭಾಷೆಗಳಲ್ಲಿಯೂ ಡಬ್ ಆಗಿ ಸಿನಿಮಾ ಬಿಡುಗಡೆ ಆಗಲಿದೆ. ‘ರಾಮಾಯಣ’ ಸಿನಿಮಾದ ಪ್ರಚಾರ ಭಾರತದಲ್ಲಿ ಇನ್ನೂ ಅಧಿಕೃತವಾಗಿ ಆರಂಭವಾಗಿಲ್ಲ, ಆದರೆ ಅದೂ ಸಹ ಶೀಘ್ರವೇ ಆರಂಭ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:‘ಅನಿಮಲ್ ಪಾರ್ಕ್’ ಚಿತ್ರೀಕರಣ ಯಾವಾಗ: ಬಾಯ್ಬಿಟ್ಟ ರಣ್​​ಬೀರ್ ಕಪೂರ್

ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾ ನಮಿತ್ ಮಲ್ಹೋತ್ರಾ ಅವರ ಅತ್ಯಂತ ಮಹತ್ವಾಕಾಂಕ್ಷೆಯ ಸಿನಿಮಾ ಆಗಿದೆ. ಆಸ್ಕರ್ ವಿಜೇತ ಹಾಲಿವುಡ್ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್ ಮತ್ತು ಎಆರ್ ರೆಹಮಾನ್ ಒಟ್ಟಿಗೆ ಈ ಸಿನಿಮಾಕ್ಕೆ ಸಂಗೀತ ನೀಡುತ್ತಿರುವುದು ವಿಶೇಷ. ಈ ಚಿತ್ರವನ್ನು ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಅತ್ಯಾಧುನಿಕ ವಿಎಫ್‌ಎಕ್ಸ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗುತ್ತಿದೆ. ಚಿತ್ರದ ಕೆಲಸಗಳು ವೇಗವಾಗಿ ನಡೆಯುತ್ತಿದ್ದು, ಬಿಡುಗಡೆಯ ದಿನಾಂಕದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎನ್ನಲಾಗಿದೆ. ಸಿನಿಮಾದ ಮೊದಲ ಭಾಗ ಈ ವರ್ಷ ದೀಪಾವಳಿಗೆ ಬಿಡುಗಡೆ ಆದರೆ ಎರಡನೇ ಭಾಗ ಮುಂದಿನ ವರ್ಷದ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾ ಅನ್ನು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯ ಪ್ರತಿಭೆ ಮತ್ತು ಐರೋಪ್ಯ ಪರಿಣಿತಿಗೆ ಸೇತುವಾಗಿರುವ ಭಾರತ್ ಇನ್ನೋವೇಟ್ಸ್: ಪ್ರಧಾನಿ ಮೋದಿ – Kannada News | India France Tech Partnership: Modi & Macron Lead Global Deep Tech Innovation for World Challenges

ನೀಸ್ ನಗರದಲ್ಲಿ ಮೋದಿ ಮತ್ತು ಮ್ಯಾಕ್ರಾನ್Image Credit source: PTI

ನೀಸ್ (ಫ್ರಾನ್ಸ್), ಜೂನ್ 14: ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಭಾರತ ಮತ್ತು ಫ್ರಾನ್ಸ್ ದೇಶಗಳ ತಾಂತ್ರಿಕ ಪಾಲುದಾರಿಕೆ ಅತ್ಯಂತ ನಿರ್ಣಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದ್ದಾರೆ. ಫ್ರಾನ್ಸ್‌ನ ನೀಸ್ ನಗರದಲ್ಲಿ (Nice city) ಜಂಟಿಯಾಗಿ ಹಮ್ಮಿಕೊಳ್ಳಲಾಗಿರುವ ‘ಭಾರತ್ ಇನ್ನೋವೇಟ್ಸ್ 2026’ (Bharat Innovates 2026) ಜಾಗತಿಕ ಡೀಪ್-ಟೆಕ್ (Deep Tech) ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ಜಂಟಿಯಾಗಿ ಸಮಾವೇಶವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಉಭಯ ದೇಶಗಳ ಸ್ನೇಹವು ಕೇವಲ ರಾಜತಾಂತ್ರಿಕತೆಗೆ ಸೀಮಿತವಾಗಿರದೆ, ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳಿದರು.

ಮಾನವಕುಲದ ಸವಾಲುಗಳಿಗೆ ಪರಿಹಾರ: ಮೋದಿ

“ಇಂದು ಜಗತ್ತು ಎದುರಿಸುತ್ತಿರುವ ಹವಾಮಾನ ವೈಪರೀತ್ಯ, ಆರೋಗ್ಯ ರಕ್ಷಣೆ ಮತ್ತು ಕೃತಕ ಬುದ್ಧಿಮತ್ತೆಯ (AI) ಸುರಕ್ಷಿತ ಬಳಕೆಯಂತಹ ಬೃಹತ್ ಸವಾಲುಗಳಿಗೆ ಭಾರತ ಮತ್ತು ಫ್ರಾನ್ಸ್ ಒಟ್ಟಾಗಿ ನಾವೀನ್ಯತೆಯ (Innovation) ಮೂಲಕ ಉತ್ತರಗಳನ್ನು ಹುಡುಕುತ್ತಿವೆ,” ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ: ಮೋದಿ 5 ದಿನಗಳ ಐರೋಪ್ಯ ಪ್ರವಾಸದಲ್ಲಿ ‘ಭಾರತ್ ಇನ್ನೋವೇಟ್ಸ್’; ಹೂಡಿಕೆದಾರರೊಂದಿಗೆ ಪ್ರಧಾನಿ ಸಂವಾದ

ಹಿಂದಿನ ಕೈಗಾರಿಕಾ ಕ್ರಾಂತಿಗಳಲ್ಲಿ ಭಾರತ ಮತ್ತು ಅಭಿವೃದ್ಧಿಶೀಲ (Global South) ದೇಶಗಳು ಕೇವಲ ಅನುಯಾಯಿಗಳಾಗಿದ್ದವು. ಆದರೆ ಇಂದಿನ ಎಐ ಮತ್ತು ಡೀಪ್-ಟೆಕ್ ಯುಗದಲ್ಲಿ ಭಾರತವು ಕೇವಲ ವೀಕ್ಷಕನಲ್ಲ, ಬದಲಿಗೆ ಜಾಗತಿಕ ನಿರ್ಧಾರಗಳನ್ನು ರೂಪಿಸುವ ಪ್ರಮುಖ ಪಾಲುದಾರನಾಗಿ ಹೊರಹೊಮ್ಮಿದೆ ಎಂದು ಅವರು ಒತ್ತಿ ಹೇಳಿದರು.

ಸ್ಟಾರ್ಟ್‌ಅಪ್ ಶಕ್ತಿ: ಭಾರತದ ಯುವ ಪೀಳಿಗೆಯು ಬಾಹ್ಯಾಕಾಶ (Space Tech), ಸೆಮಿಕಂಡಕ್ಟರ್ ಮತ್ತು ಗ್ರೀನ್ ಹೈಡ್ರೋಜನ್ ವಲಯಗಳಲ್ಲಿ ಅದ್ಭುತ ಕ್ರಾಂತಿ ಮಾಡುತ್ತಿದೆ. ಭಾರತದಲ್ಲಿ ಸೃಷ್ಟಿಯಾಗುತ್ತಿರುವ ತಂತ್ರಜ್ಞಾನಗಳು ಕೇವಲ ದೇಶಕ್ಕಷ್ಟೇ ಅಲ್ಲ, ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್’ (ಭಾರತದಲ್ಲಿ ನಿರ್ಮಿಸಿ, ಜಗತ್ತಿಗಾಗಿ ನೀಡಿ) ಎಂಬ ಮಂತ್ರದೊಂದಿಗೆ ಜಗತ್ತಿಗೆ ಉಪಯುಕ್ತವಾಗಲಿವೆ ಎಂದರು.

ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಶ್ಲಾಘನೆ

ಇದೇ ಸಂದರ್ಭದಲ್ಲಿ ಮಾತನಾಡಿದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್, ಭಾರತದ ಡಿಜಿಟಲ್ ಮೂಲಸೌಕರ್ಯ ಮತ್ತು ತಾಂತ್ರಿಕ ಬೆಳವಣಿಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ತಂತ್ರಜ್ಞಾನ ವಲಯದಲ್ಲಿ ಭಾರತದೊಂದಿಗೆ ಕೈಜೋಡಿಸಲು ಫ್ರಾನ್ಸ್ ಯುವ ಉದ್ಯಮಿಗಳು ಉತ್ಸುಕರಾಗಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಆಂತ್ರೋಪಿಕ್​ನ ಬಲಿಷ್ಠ ಎಐ ಮಾಡಲ್​ಗಳು ಅಮೆರಿಕನ್ನೇತರರಿಗೆ ಅಲಭ್ಯ; ಭಾರತಕ್ಕೆ ಇದು ಎಚ್ಚರಿಕೆಯ ಕರೆಗಂಟೆಯಾ?

ಈ ಮೂರು ದಿನಗಳ ಜಾಗತಿಕ ಸಮಾವೇಶದಲ್ಲಿ ಭಾರತದ 120 ಕ್ಕೂ ಹೆಚ್ಚು ಅತ್ಯಾಧುನಿಕ ದೀಪ್-ಟೆಕ್ ಸ್ಟಾರ್ಟ್‌ಅಪ್‌ಗಳು ಹಾಗೂ ಐಐಟಿಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದು, ಜಾಗತಿಕ ಹೂಡಿಕೆದಾರರ ಗಮನ ಸೆಳೆಯುತ್ತಿವೆ. 2047ರ ವೇಳೆಗೆ ಭಾರತವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಸಮಾವೇಶವು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗೃಹಲಕ್ಷ್ಮೀ, ಗೃಹಜ್ಯೋತಿಗೆ ಹೊಸ ಅರ್ಜಿಗೆ ಏನೇನು ದಾಖಲೆ ಬೇಕು? ಎಲ್ಲಿ ಸಲ್ಲಿಸಬೇಕು? – Kannada News | Gruhalakshmi And Gruha Jyothi Scheme: here Is details Where And How to Apply and what are Documents Required

ಬೆಂಗಳೂರು, (ಜೂನ್ 14): ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಾದ ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಯನ್ನು  (Gruhalakshmi And Gruha Jyothi Scheme) ಪರಿಷ್ಕರಿಸಲು ರಾಜ್ಯ ಸರ್ಕಾರದ ಮುಂದಾಗಿದೆ. ಅನರ್ಹರಿಗೆ ಹೊಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ತಡೆಯಲು ಈ ಕ್ರಮಕ್ಕೆ ಮುಂದಾಗಿದ್ದು, ಫಲಾನುಭವಿಗಳು ಮತ್ತೊಮ್ಮೆ ಎಲ್ಲಾ ವಿವರ-ಫೋಟೋ ಜೊತೆಗೆ ಅರ್ಜಿ ಸಲ್ಲಿಕೆ ಕಡ್ಡಾಯವಾಗಿದೆ. ಹೌದು… ಗ್ಯಾರಂಟಿ ಯೋಜನೆಗಳ ಲಾಭ ಅನರ್ಹರಿಗೂ ತಲುಪುತ್ತಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇಂತಹ ನಿರ್ಧಾರ ಕೈಗೊಂಡಿದೆ. ಹಾಗಾದ್ರೆ, ಮತ್ತೊಮ್ಮೆ ಅರ್ಜಿಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು? ದಾಖಲೆಗಳೊಂದಿಗೆ ಎಲ್ಲಿ ಅರ್ಜಿ ಸಲ್ಲಿಸಬಹುದು? ಈ ಯೋಜನೆಗಳಿಗೆ ಯಾರ್ಯಾರು ಅರ್ಹರು ಎನ್ನುವ ವಿವರ ಇಲ್ಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link