Category Archives: Blog

Your blog category

ಚಿಕ್ಕಬಳ್ಳಾಪುರ: ಮೊಮ್ಮಗಳ 40 ದಿನದ ಶಿಶುವನ್ನೇ ಕೊಂದಳೇ ಅಜ್ಜಿ? ಚೇಳೂರಿನಲ್ಲಿ ಮರ್ಯಾದಾ ಹತ್ಯೆ ಶಂಕೆ – Kannada News | Chikkaballapur: Suspicion Over 40 Day Old Infant’s Death in Chelur, Grandmother Under Scanner

ಸಾಂದರ್ಭಿಕ ಚಿತ್ರ (ಒಳಚಿತ್ರದಲ್ಲಿ ಆರೋಪಿ)

ಚಿಕ್ಕಬಳ್ಳಾಪುರ, ಡಿಸೆಂಬರ್ 25: ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚೇಳೂರು ಪಟ್ಟಣದಲ್ಲಿ 40 ದಿನದ ನವಜಾತ ಗಂಡು ಶಿಶು ಸಾವಿನ ಪ್ರಕರಣ ಇದೀಗ ತೀವ್ರ ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆಯಲ್ಲಿ ಮರ್ಯಾದೆ ಹತ್ಯೆ ಶಂಕೆ ವ್ಯಕ್ತವಾಗಿದ್ದು, ಶಿಶುವಿನ ಸಾವಿನಲ್ಲಿ ಅಜ್ಜಿಯ ಕೈವಾಡವಿರಬಹುದೆಂಬ ಆರೋಪ ಕೇಳಿಬಂದಿದೆ. ಅಪ್ರಾಪ್ತ ಮೊಮ್ಮಗಳು ಹಿಂದೂ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಕ್ಕೆ ದ್ವೇಷ ಹೊಂದಿದ್ದ ಅನ್ಯಕೋಮಿಗೆ ಸೇರಿದ ಅಜ್ಜಿ, ಮೊಮ್ಮಗಳ 40 ದಿನದ ನವಜಾತ ಶಿಶುವನ್ನು ಕೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರೀತಿಸಿ ಮದುವೆಯಾದ ದಂಪತಿಗೆ ಜನಸಿದ್ದ ಗಂಡು ಮಗು ಡಿಸೆಂಬರ್ 21 ರಂದು ಮೃತಪಟ್ಟಿದೆ.

ಸಾವು ಸಂಭವಿಸಿದ ವೇಳೆ ಮಗು ಅಜ್ಜಿ ಬಳಿ ಇತ್ತು. ಆದರೆ, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಅಜ್ಜಿ ವಾದಿಸಿದ್ದಾಳೆ ಎನ್ನಲಾಗಿದೆ. ಆದರೆ ತನ್ನ ಮಗುವಿನ ಸಾವಿನಲ್ಲಿ ಅಜ್ಜಿಯ ಕೈವಾಡವಿದೆ ಎಂಬ ಅನುಮಾನ ವ್ಯಕ್ತಪಡಿಸಿದ 17 ವರ್ಷದ ಅಪ್ರಾಪ್ತ ಬಾಲಕಿ, ಚೇಳೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.

ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಈ ದೂರಿನ ಆಧಾರದ ಮೇಲೆ ಬಿಎನ್ಎಸ್ 194 ಸೆಕ್ಷನ್ ಅಡಿ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ನವಜಾತ ಶಿಶುವಿನ ಮೃತದೇಹವನ್ನು ಹೊರತೆಗೆಯಲಾಗಿದ್ದು, ಚೇಳೂರು ತಹಶಿಲ್ದಾರ್ ಶ್ವೇತಾ ಅವರ ನೇತೃತ್ವದಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಲಾಗಿದೆ.

ಹಿಂದೂ ಯುವಕನ ವಿರುದ್ಧ ಪೋಕ್ಸೋ ಕೇಸ್

ಇನ್ನೊಂದೆಡೆ, ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಹಿಂದೂ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಅಪ್ರಾಪ್ತ ಬಾಲಕಿಯ ಮದುವೆ ಹಾಗೂ ಶಿಶು ಸಾವಿನ ಪ್ರಕರಣಗಳು ಇದೀಗ ಚೇಳೂರು ಪಟ್ಟಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.

ಇದನ್ನೂ ಓದಿ: ಮನೆಗೆ ನುಗ್ಗಿ ಹೊಡೆಯುತ್ತಿದ್ದರು, ಅಂಗಲಾಚಿದರೂ ಯಾರೂ ನೆರವಿಗೆ ಬಂದಿಲ್ಲ: ಗರ್ಭಿಣಿ ಹತ್ಯೆ ಬಗ್ಗೆ ಪತಿ ವಿವೇಕಾನಂದ ಕಣ್ಣೀರ ಮಾತು

ನವಜಾತ ಶಿಶುವಿನ ಮರಣಕ್ಕೆ ನಿಖರ ಕಾರಣ ಏನು, ಇದರಲ್ಲಿ ಅಜ್ಜಿಯ ಪಾತ್ರವಿದೆಯೇ ಎಂಬುದನ್ನು ತಿಳಿಯಲು ಪೊಲೀಸರು ಮರಣೋತ್ತರ ವರದಿ ನಿರೀಕ್ಷಿಸುತ್ತಿದ್ದಾರೆ. ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೊಂದು ಘನಘೋರ ದುರಂತ: ಚಿತ್ರದುರ್ಗ ಹೆದ್ದಾರಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್​​​​, 17ಕ್ಕೂ ಹೆಚ್ಚು ಜನ ಸಜೀವ ದಹನ – Kannada News | Chitradurga Horrific Accident: 17 Dead as Bus Catches Fire on NH 48

ಚಿತ್ರದುರ್ಗ, ಡಿ.25: ಚಿತ್ರದುರ್ಗದ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಭೀಕರ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ 17ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ಸೊಂದು ಹೊತ್ತಿಉರಿದಿದೆ. ಖಾಸಗಿ ಸ್ಲೀಪರ್ ಕೋಚ್​​ ಬಸ್​ನಲ್ಲಿದ್ದ 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಉಳಿದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಈ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಒಂದು ಕಡೆಯಿಂದ ಬರುತ್ತಿದ್ದ ಲಾರಿಯೊಂದು ಡಿವೈಡರ್​ ಹಾರಿ ಮತ್ತೊಂದು ಕಡೆಯಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಲೀಪರ್​ ಕೋಚ್​​ ಬಸ್​​​ ರಸ್ತೆ ಮಧ್ಯೆ ಹೊತ್ತಿ ಉರಿದಿದೆ. ಈ ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ. ಇನ್ನು ಈ ಲಾರಿ ಹಿರಿಯೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು ಎಂದು ಹೇಳಾಗಿದೆ. ಬಸ್​​​ ಬೆಂಗಳೂರಿಂದ ಶಿವಮೊಗ್ಗಕ್ಕೆ  ಹೋಗುತ್ತಿತ್ತು. ಇದೀಗ ಘಟನಾ ಸ್ಥಳಕ್ಕೆ ಎಸ್​ಪಿ ರಂಜಿತ್​​ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣಾಯಲ್ಲಿ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

ಹೆಚ್ಚಿನ ಮಾಹಿತಿ ಅಪ್ಡೇಟ್​​​ ಮಾಡಲಾಗುವುದು …..

Published On – 6:18 am, Thu, 25 December 25

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 25ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಅತ್ಯಂತ ಕ್ರಿಯಾಶೀಲವಾದ ದಿನ ಇದಾಗಿರುತ್ತದೆ. ಉದ್ಯೋಗಕ್ಕೆ ರಜೆಯ ದಿನವಾಗಿದ್ದರೂ ನಿಮ್ಮ ಮನಸ್ಸು ಮುಂದಿನ ಗುರಿಗಳ ಬಗ್ಗೆ ಯೋಚಿಸುತ್ತಾ ಇರಲಿದೆ. ಕೌಟುಂಬಿಕವಾಗಿ ಸಂಭ್ರಮದ ಸಮಯವನ್ನು ಕಳೆಯಲಿದ್ದೀರಿ. ಮನೆಯ ಹಿರಿಯರೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುವಿರಿ. ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಆಕರ್ಷಣೆ ಹಾಗೂ ಬದಲಾವಣೆ ಕಂಡುಬರಲಿದ್ದು, ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಲಿದೆ. ಆರ್ಥಿಕವಾಗಿ ಹಳೆಯ ಹೂಡಿಕೆಗಳಿಂದ ಸಣ್ಣ ಪ್ರಮಾಣದ ಲಾಭ ನಿರೀಕ್ಷೆ ಮಾಡಬಹುದು. ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ಸಂಗಾತಿಯ ಮನ ಗೆಲ್ಲುವಿರಿ. ಮಕ್ಕಳೊಂದಿಗೆ ಸಮಯ ಕಳೆಯುವುದು ನಿಮಗೆ ಮಾನಸಿಕ ಒತ್ತಡದಿಂದ ಮುಕ್ತಿ ನೀಡಲಿದೆ. ಸಂಬಂಧಗಳ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ದೊಡ್ಡ ಬದಲಾವಣೆ ತರಲಿವೆ. ಅತಿಯಾದ ಕೆಲಸದ ಒತ್ತಡ ಮೈ ಮೇಲೆ ಹಾಕಿಕೊಳ್ಳಬೇಡಿ, ವಿಶ್ರಾಂತಿಗೂ ಸಮಯವನ್ನು ಮೀಸಲಿಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಭಾವನಾತ್ಮಕವಾಗಿ ಸಮತೋಲನದಿಂದ ಕೂಡಿರುವ ದಿನ ಇದಾಗಿರಲಿದೆ. ಮನಸ್ಸು ಶಾಂತವಾಗಿದ್ದು, ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುವಿರಿ. ಮನೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣ ಇರುತ್ತದೆ. ನಿಮ್ಮ ಮೃದುವಾದ ಹಾಗೂ ಮನವೊಲಿಸುವ ರೀತಿಯ ಮಾತುಗಳು ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಹಾಯ ಮಾಡಲಿವೆ. ಸಂಗಾತಿಯಿಂದ ಅನಿರೀಕ್ಷಿತ ಬೆಂಬಲ- ಪ್ರೀತಿ ದೊರೆಯಲಿದೆ. ಪ್ರವಾಸದ ಯೋಜನೆಗಳಿದ್ದರೆ ಅವು ಕಾರ್ಯಗತವಾಗಲಿವೆ. ಹಣಕಾಸಿನ ವಿಚಾರದಲ್ಲಿ ತೃಪ್ತಿದಾಯಕ ವಾತಾವರಣವಿರುತ್ತದೆ. ಕಲೆ ಅಥವಾ ಸಾಹಿತ್ಯದ ಮೇಲೆ ಒಲವು ಹೆಚ್ಚಾಗಲಿದೆ. ಆರೋಗ್ಯದ ದೃಷ್ಟಿಯಿಂದ ಲಘು ಆಹಾರ ಸೇವನೆ ಮಾಡುವುದು ಉತ್ತಮ. ನಿಮ್ಮ ಆಪ್ತ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಹೊಸ ಚೈತನ್ಯ ಸಿಗಲಿದೆ. ಸಣ್ಣಪುಟ್ಟ ಏರುಪೇರಾದಂಥ ವಿಷಯಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ದಿನವನ್ನು ಆನಂದಿಸಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಜ್ಞಾನ ವೃದ್ಧಿಯಾಗುವ ದಿನ. ಅಂದರೆ ಈ ದಿನ ಸಮಯವನ್ನು ಸ್ವಲ್ಪವೂ ವ್ಯರ್ಥ ಮಾಡದೆ ಏನಾದರೂ ಹೊಸ ವಿಷಯ ಕಲಿಯಲು ಪ್ರಯತ್ನಿಸುವಿರಿ. ಮನೆಯಲ್ಲಿ ಧಾರ್ಮಿಕ ಅಥವಾ ಆಧ್ಯಾತ್ಮಿಕ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಆಗಬಹುದು. ಹಿರಿಯರ ಮಾರ್ಗದರ್ಶನದಿಂದ ನಿಮ್ಮ ಜೀವನದ ಗೊಂದಲಗಳು ದೂರವಾಗಲಿವೆ. ಆರ್ಥಿಕವಾಗಿ ಸ್ಥಿತಿ ಸುಧಾರಿಸಲಿದ್ದು, ಸ್ಥಗಿತ ಆಗಿದ್ದ ಹಣಕಾಸಿನ ವ್ಯವಹಾರಗಳು ಚೇತರಿಕೆ ಕಾಣಲಿವೆ. ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಮನ್ನಣೆ ಸಿಗಲಿದೆ. ನಿಮ್ಮಲ್ಲಿ ಕೆಲವರಿಗೆ ಗೌರವ- ಸನ್ಮಾನಗಳು ಆಗಬಹುದು. ಸಂಬಂಧಿಕರು ನಿಮ್ಮನ್ನು ಭೇಟಿ ಆಗುವದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರುತ್ತದೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಮಹತ್ವದ ಯೋಜನೆ ರೂಪಿಸುವಿರಿ. ನಿಮ್ಮ ನೇರ ನಡೆ- ನುಡಿ ಎಲ್ಲರಿಗೂ ಇಷ್ಟವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ, ದೈಹಿಕ ವ್ಯಾಯಾಮ ಮರೆಯಬೇಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಹಲವು ಅನಿರೀಕ್ಷಿತ ಘಟನೆಗಳು ಈ ದಿನ ನಡೆಯಲಿವೆ. ಬಿಡುವಾಗಿ ಇರೋಣ ಅಥವಾ ವಿಶ್ರಾಂತಿ ಪಡೆಯೋಣ ಎಂದು ನೀವು ಅಂದುಕೊಂಡರೂ ಹಠಾತ್ ಪ್ರಯಾಣ ಅಥವಾ ಅತಿಥಿಗಳ ಆಗಮನ ಆಗಬಹುದು. ಮನೆಯಲ್ಲಿ ಕೆಲವು ತಾಂತ್ರಿಕ ಬದಲಾವಣೆ ಅಥವಾ ದುರಸ್ತಿ ಕೆಲಸಗಳಲ್ಲಿ ಮಗ್ನರಾಗುವಿರಿ. ನಿಮ್ಮ ಶಿಸ್ತುಬದ್ಧ ಜೀವನಶೈಲಿಯಿಂದ ಕುಟುಂಬದ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ. ಆರ್ಥಿಕ ವಿಚಾರದಲ್ಲಿ ಇಂದು ಸ್ವಲ್ಪ ಎಚ್ಚರಿಕೆಯಿಂದ ಇರಿ, ಅನಗತ್ಯ ವೆಚ್ಚಗಳು ಬಜೆಟ್ ಏರುಪೇರು ಮಾಡಬಹುದು. ಇತರರ ವೈಯಕ್ತಿಕ ವಿಚಾರಗಳಲ್ಲಿ ತಲೆಹಾಕಬೇಡಿ, ಅದು ನಿಮ್ಮ ನೆಮ್ಮದಿ ಕೆಡಿಸಬಹುದು. ಹಳೆಯ ಹವ್ಯಾಸಗಳನ್ನು ಪುನರಾರಂಭಿಸಲು ಇದು ಸಕಾಲ. ಸಂಗಾತಿಯೊಂದಿಗೆ ಸಣ್ಣಪುಟ್ಟ ವಾದಗಳು ಬರಬಹುದು, ತಾಳ್ಮೆಯಿಂದ ವರ್ತಿಸಿ. ಹೊಸ ವಸ್ತುಗಳನ್ನು ಖರೀದಿಸುವ ಆಸೆ ಉಂಟಾಗಲಿದೆ. ದಿನದ ಕೊನೆಗೆ ಮಾನಸಿಕ ತೃಪ್ತಿ ಸಿಗುವಂತಹ ಕೆಲಸ ಮಾಡುವಿರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಸಂತೋಷದ ಸುದ್ದಿ ಬರುವುದರಿಂದ ಅಥವಾ ನಿಮ್ಮದೇ ಸ್ವಭಾವದ ಕಾರಣಕ್ಕಾಗಿ ಅತ್ಯಂತ ಲವಲವಿಕೆಯ ದಿನ ಇದಾಗಿರುತ್ತದೆ. ಹಳೆಯ ಸ್ನೇಹಿತರೊಂದಿಗೆ ಮಾತುಕತೆ ನಡೆಸುವಿರಿ ಅಥವಾ ಅವರನ್ನು ಭೇಟಿ ಮಾಡುವಿರಿ. ನಿಮ್ಮ ಹಾಸ್ಯಪ್ರವೃತ್ತಿ ಮನೆಯಲ್ಲಿನ ವಾತಾವರಣವನ್ನು ಹಗುರಗೊಳಿಸಲಿದೆ. ವ್ಯಾಪಾರಸ್ಥರಿಗೆ ಕೆಲವು ಲಾಭದಾಯಕ ವ್ಯವಹಾರಗಳ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ. ಆರ್ಥಿಕವಾಗಿ ಶುಭದಿನವಾಗಿದ್ದು, ಹಣದ ಹರಿವು ಉತ್ತಮವಾಗಿರುತ್ತದೆ. ಹೊಸ ಯೋಜನೆಗಳ ಬಗ್ಗೆ ಆಲೋಚಿಸಲು ಮತ್ತು ಅವುಗಳನ್ನು ರೂಪಿಸಲು ಸೂಕ್ತ ಸಮಯ. ಪ್ರಯಾಣದ ಯೋಗವಿದ್ದು, ಅದು ನಿಮಗೆ ಉಲ್ಲಾಸ- ಉತ್ಸಾಹ ನೀಡಲಿದೆ. ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ನಿಮ್ಮ ಮಾತುಗಳ ಮೇಲೆ ನಿಯಂತ್ರಣ ಇರಲಿ, ಇಲ್ಲದಿದ್ದರೆ ಆತ್ಮೀಯರ ಮನಸ್ಸಿಗೆ ನೀವಾಡುವ ಮಾತು- ಬಳಸುವ ಶಬ್ದಗಳಿಂದ ನೋವಾಗಬಹುದು. ಇನ್ನು ಹೊಸ ಹವ್ಯಾಸಗಳಿಗೆ ಸಮಯವನ್ನು ಮೀಸಲಿಡುತ್ತೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಐಷಾರಾಮಿ ಮತ್ತು ಸುಖವಾಗಿ ದಿನ ಕಳೆಯುವಂಥ ಯೋಗ ನಿಮ್ಮ ಪಾಲಿಗೆ ಇದೆ. ಮನೆಯನ್ನು ಸುಂದರಗೊಳಿಸಲು ಅಥವಾ ಅಲಂಕಾರಿಕ ವಸ್ತುಗಳ ಖರೀದಿಗೆ ಹಣ ಖರ್ಚು ಮಾಡುವಿರಿ. ಪ್ರೀತಿಯಲ್ಲಿ ಇರುವವರಿಗೆ ರೋಮ್ಯಾಂಟಿಕ್ ಕ್ಷಣಗಳು ಕಳೆಯುವಂಥ ಅವಕಾಶ ದೊರೆಯಲಿದೆ. ನಿಮ್ಮ ಆಕರ್ಷಕ ವ್ಯಕ್ತಿತ್ವಕ್ಕೆ ಎಲ್ಲರೂ ಮಾರುಹೋಗಲಿದ್ದಾರೆ. ಕೌಟುಂಬಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ರುಚಿಕರವಾದ ಭೋಜನದ ಸವಿಯನ್ನು ಕುಟುಂಬದವರೊಂದಿಗೆ ಸವಿಯುವಿರಿ. ಆರ್ಥಿಕವಾಗಿ ಸ್ಥಿತಿ ಉತ್ತಮವಾಗಿದ್ದರೂ ಉಳಿತಾಯದ ಕಡೆಗೂ ಗಮನವಿರಲಿ. ಸ್ತ್ರೀಯರಿಂದ ನಿಮಗೆ ವಿಶೇಷ ಸಹಕಾರ ದೊರೆಯಲಿದೆ. ಆರೋಗ್ಯದಲ್ಲಿ ಸುಧಾರಣೆ ಇರಲಿದ್ದು, ಮನಸ್ಸು ಉತ್ಸಾಹದಿಂದ ಇರಲಿದೆ. ಸೃಜನಾತ್ಮಕ ಕೆಲಸಗಳಿಗೆ ಮನ್ನಣೆ ಸಿಗಲಿದೆ. ವಿವಾಹ ವಯಸ್ಕರಿಗೆ ಮನಸ್ಸಿಗೆ ಒಪ್ಪುವಂಥ ವ್ಯಕ್ತಿಯ ಪರಿಚಯ ಆಗಲಿದೆ. ಈ ದಿನ ನೀವು ಎಲ್ಲವನ್ನೂ ಪ್ರೀತಿಯ ಕಣ್ಣಿನಿಂದಲೇ ನೋಡುವಿರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಆತ್ಮಾವಲೋಕನದ ದಿನ ಇದಾಗಿರಲಿದೆ. ಮುಂದಿನ ಯೋಜನೆಗಳು, ದೀರ್ಘಾವಧಿ ಕಾರ್ಯಗಳ ಅನುಷ್ಠಾನದ ಬಗ್ಗೆ ಚಿಂತಿಸುವುದಕ್ಕೆ ಏಕಾಂತದಲ್ಲಿ ಸಮಯ ಕಳೆಯಲು ಬಯಸುವಿರಿ. ದಿನದ ಎರಡನೇ ಭಾಗದಲ್ಲಿ ಆಧ್ಯಾತ್ಮಿಕ ಮತ್ತು ತಾತ್ವಿಕ ವಿಷಯಗಳ ಬಗ್ಗೆ ಓದಲು ಅಥವಾ ಚರ್ಚಿಸಲು ಆಸಕ್ತಿ ತೋರುವಿರಿ. ಹಣಕಾಸಿನ ವ್ಯವಹಾರಗಳಲ್ಲಿ ಯಾರನ್ನೂ ಅತಿಯಾಗಿ ನಂಬಬೇಡಿ, ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಅಂತಃಪ್ರಜ್ಞೆ ಇಂದು ಬಹಳ ತೀಕ್ಷ್ಣವಾಗಿರಲಿದ್ದು, ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅದು ಸಹಾಯ ಮಾಡಲಿದೆ. ಮನೆಯಲ್ಲಿನ ಹಿರಿಯರೊಬ್ಬರ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು. ಹಳೆಯ ನೆನಪುಗಳು ನಿಮ್ಮನ್ನು ಭಾವುಕರನ್ನಾಗಿ ಮಾಡಲಿದೆ. ಯೋಗ ಮತ್ತು ಧ್ಯಾನ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಟ್ರಾಫಿಕ್ ಮತ್ತಿತರ ಗದ್ದಲದಿಂದ ದೂರವಿದ್ದು ನಿಮ್ಮ ನೆಮ್ಮದಿಯನ್ನು ಕಂಡುಕೊಳ್ಳುವಿರಿ. ಪಾರದರ್ಶಕ- ನೇರವಂತಿಕೆಯಿಂದ ಮಾತನಾಡಲು ಪ್ರಯತ್ನಿಸಿ, ಅದು ನಿಮಗೆ ಗೌರವ ತರಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಶಿಸ್ತು ಮತ್ತು ಜವಾಬ್ದಾರಿಗಾಗಿ ಇತರರ ಮೆಚ್ಚುಗೆಯನ್ನು ಪಡೆಯಲಿದ್ದೀರಿ. ಮನೆಯಲ್ಲಿನ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲು ಶ್ರಮ ಹಾಕಲಿದ್ದೀರಿ. ನ್ಯಾಯ ಮತ್ತು ಧರ್ಮದ ಬಗ್ಗೆ ನಿಮ್ಮ ನಿಲುವು ಕಟ್ಟುನಿಟ್ಟಾಗಿರಲಿವೆ. ಆಸ್ತಿ ಖರೀದಿ ಅಥವಾ ಹೂಡಿಕೆಯ ಬಗ್ಗೆ ಮನೆಯವರೊಂದಿಗೆ ಪ್ರಮುಖ ಚರ್ಚೆ ನಡೆಸುವಿರಿ. ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಕೆಲಸದ ಒತ್ತಡದಿಂದ ಬೆನ್ನು ನೋವು ಅಥವಾ ಕತ್ತಿನ ನೋವು ಕಾಣಿಸಿಕೊಳ್ಳಬಹುದು, ಜಾಗರೂಕರಾಗಿರಿ. ಹಿರಿಯರ ಆಶೀರ್ವಾದ ಪಡೆಯುವುದರಿಂದ ಈ ತನಕ ನೀವು ಎದುರಿಸುತ್ತಾ ಬಂದಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. ನಿಮ್ಮ ಸಂಯಮ ಮತ್ತು ಗಾಂಭೀರ್ಯವು ಮನೆಯ ಕಿರಿಯರಿಗೆ ಮಾದರಿಯಾಗಲಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಮಾನಸಿಕ ತೃಪ್ತಿ ಪಡೆಯುವಿರಿ. ವ್ಯಾಪಾರ ವ್ಯವಹಾರ ಮಾಡುವವರಿಗೆ ನಿರೀಕ್ಷಿತ ಲಾಭ ದೊರೆಯುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಯಾವುದೇ ಕಾರ್ಯದಲ್ಲಿ ತೊಡಗಿಕೊಳ್ಳಲು ಶಕ್ತಿ, ಉತ್ಸಾಹ ನಿಮ್ಮಲ್ಲಿ ಇರುತ್ತದೆ. ದೈಹಿಕ ಚಟುವಟಿಕೆಗಳ ಮೂಲಕವಾಗಿ ಸಕ್ರಿಯರಾಗಿರುವಿರಿ. ಮನೆಯಲ್ಲಿನ ಹಳೆಯ ವಿವಾದಗಳನ್ನು ಬಗೆಹರಿಸಲು ಈ ದಿನ ಸೂಕ್ತವಾಗಿದೆ. ಭೂಮಿಗೆ ಸಂಬಂಧಿಸಿದ ಅಥವಾ ರಿಯಲ್ ಎಸ್ಟೇಟ್ ವಿಚಾರಗಳಲ್ಲಿ ನಿಮ್ಮ ನಿರ್ಧಾರಗಳು ಲಾಭ ತರಲಿವೆ. ಕೋಪವನ್ನು ನಿಯಂತ್ರಿಸದಿದ್ದರೆ ಮನೆಯಲ್ಲಿನ ವಾತಾವರಣ ಹಾಳಾಗಬಹುದು, ಹಾಗಾಗಿ ಸಂಯಮದಿಂದಿರಿ. ಕ್ರೀಡೆ ಅಥವಾ ಸಾಹಸಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿರಿ. ಸಹೋದರರೊಂದಿಗೆ ಬಾಂಧವ್ಯ ಸುಧಾರಿಸಲಿದ್ದು, ಅವರ ಸಹಕಾರದಿಂದ ನಿಮ್ಮ ಕಾರ್ಯಗಳು ಪೂರ್ಣಗೊಳ್ಳಲಿವೆ. ಆರ್ಥಿಕವಾಗಿ ಲಾಭದಾಯಕ ದಿನ ಇದಾಗಿರಲಿದೆ. ಹೊಸ ಉದ್ಯಮಗಳ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳುವಿರಿ. ನಿಮ್ಮ ಧೈರ್ಯ ಮತ್ತು ಸಂಕಲ್ಪ ಶಕ್ತಿಯ ಕಾರಣದಿಂದ ನೀವು ಎಲ್ಲರಿಗಿಂತ ಮುಂದೆ ಇರಲಿದ್ದೀರಿ.

ಲೇಖನ- ಎನ್‌.ಕೆ.ಸ್ವಾತಿ

Source link

Horoscope Today 25 December : ಇಂದು ಈ ರಾಶಿಯವರಿಗೆ ಯಾವುದೂ ಸುಲಭವಾಗಿ ಸಿಗಲ್ಲ

ಮೇಷ ರಾಶಿ :
ನಿಮ್ಮ ಸೂಕ್ಷ್ಮ ಮನಸ್ಸಿಗೆ ಭೇದಭಾವ ಬಿಸಿ ಬೇಗ ತಟ್ಟಬಹುದು. ಧಾರ್ಮಿಕತೆಯಲ್ಲಿ ಅಚಲವಾದ ಶ್ರದ್ಧೆ ಶಾಂತಿಯನ್ನು ತಾನಾಗಿಯೇ ನೀಡುತ್ತದೆ. ಆಸ್ತಿ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಿರಿ. ವೃತ್ತಿಯ ಸ್ಥಳದಲ್ಲಿ ನಿಮಗೆ ಕೆಲವು ಬದಲಾವಣೆಯು ಇರಲಿದೆ‌. ಸ್ನೇಹಿತನ ಮಾತಿನಿಂದ ಯಾರಿಗಾದರೂ ನೀವು ಹಣವನ್ನು ಕೊಡುವ ಸಂದರ್ಭವು ಬರಬಹುದು. ನಿಮ್ಮ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಉತ್ತಮ. ಶತ್ರುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರಲಿದೆ. ಅನಿರೀಕ್ಷಿತ ವಾರ್ತೆಯಿಂದ ನಿಮಗೆ ಬೇಸರವಾಗಬಹುದು. ಬಂಧುಗಳು ಪ್ರೀತಿಯನ್ನು ತೋರಿಸುವರು. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣ ಮಾಡುವಿರಿ. ಗೃಹನಿರ್ಮಾಣ ಸದ್ಯ ಕನಸಾಗಿ ಮುಂದುವರಿಯುವುದು. ನಿಮಗೆ ನ್ಯಾಯ ಸತ್ಯಕ್ಕಿಂತ ಹೆಚ್ಚಾಗಿ ಕರುಣೆಯಿಂದ ಲಭಿಸುತ್ತದೆ. ನೀವು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಉಪಾಯವನ್ನು ಮಾಡುವಿರಿ. ಸುಳ್ಳು ಹೇಳುವ ಸಂದರ್ಭವೂ ಬರಬಹುದು. ಸುಲಭವಾದ ಕಾರ್ಯವನ್ನು ಮೊದಲು ಮಾಡಿ ಮುಗಿಸಿ.

ವೃಷಭ ರಾಶಿ :
ನೀವು ಮಂಡಿಸುವ ವಿಚಾರದಲ್ಲಿ ಭಿನ್ನತೆ ಕಾಣಿಸಲಿದ್ದು ಭೇದಭಾವುಂಡಾಗಬಹುದು. ಧಾರ್ಮಿಕ ಮುಖಂಡತ್ವವನ್ನು ವಹಿಸಕೊಳ್ಳಬೇಕಾಗುವುದು. ಸೇವಾ ಕಾರ್ಯಗಳು ಸಮಾಜದಲ್ಲಿ ಗುರುತಿಸಲ್ಪಡುತ್ತವೆ. ನಿಮ್ಮ ಒಳ ಜಗಳವು ಬೀದಿಗೆ ಬರಬಹುದು. ಕೆಲವರನ್ನು ನೀವು ಸರಿಯಾಗಿ ಅಂದಾಜು ಮಾಡಲಾಗದು. ಸುಮ್ಮನೇ ಯಾರ ಬೆಂಬಲಕ್ಕೂ ನಿಲ್ಲಲು ಹೋಗುವುದು ಬೇಡ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ. ಬಂಧುಗಳ ಸ್ವಭಾವವು ಇಷ್ಟವಾಗಸೇ ಅವರ ಬಗ್ಗೆ ನೀವು ಆಡಿಕೊಳ್ಳುವಿರಿ. ಯಾರ ಮೇಲಾದರೂ ದೋಷಾರೋಪ ಮಾಡುವ ಸಂಭವವಿದೆ. ಬರುವ ಆದಾಯಕ್ಕೆ ವಿಘ್ನವು ಬರಬಹುದು. ಆಸ್ತಿ ವಿಷಯದಲ್ಲಿ ಹೊಸ ನಿರ್ಧಾರ ಮಾಡುವುದೇ ಉಚಿತ. ಹೂಡಿಕೆಯನ್ನು ಪ್ರತಿಷ್ಠೆಗಾಗಿ ಮಾಡುವಿರಿ. ಸ್ಪರ್ಧೆಯಲ್ಲಿ ತಂತ್ರಗಾರಿಕೆ ಫಲಿಸುವುದು. ಹಣದ ಆಮಿಷದಲ್ಲಿ‌ ಸಿಕ್ಕಿಕೊಳ್ಳುವಿರಿ. ಯಾರಾದರೂ ಭೂಮಿಯನ್ನು ವಶಪಡಿಸಿಕೊಳ್ಳಲು ಯೋಚಿಸಬಹುದು. ತಾಳ್ಮೆಯನ್ನು ಕಳೆದುಕೊಳ್ಳದೇ ಪರಿಹಾರವನ್ನು ಕಂಡುಕೊಳ್ಳಿ.

ಮಿಥುನ ರಾಶಿ :
ದೀರ್ಘಕಾಲದ ಹೂಡಿಕೆಯ ಬಗ್ಗೆ ಗಮನವಿರುವುದು. ಗೃಹನಿರ್ಮಾಣ ಯೋಜಿತವಾಗಿ ನಡೆಯುತ್ತದೆ. ಸ್ಪರ್ಧೆಯಲ್ಲಿ ನೀವು ಹಾಕಿದ ಶ್ರಮಕ್ಕೆ ತಕ್ಕ ಫಲ. ಸತ್ಯ ಪ್ರಕಟವಾಗಲು ಸಮಯ ತೆಗೆದುಕೊಳ್ಳುತ್ತದೆ. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ತಲೆಕೊಡಬೇಕಾದೀತು. ನಿಮಗೆ ಸಿಗುವ ಸೂಚನೆಗಳನ್ನು ಗಮನಿಸಿಕೊಂಡು ವ್ಯವಹಾರಾದಿಗಳನ್ನು ಮಾಡಿ. ಯಂತ್ರಜ್ಞರು ಇಂದು ಒತ್ತಡದಲ್ಲಿ ಇರುವರು. ಭೂಮಿಯ ವ್ಯವಹಾರದಲ್ಲಿ ಲಾಭವಾಗಲು ತಿರುಗಾಟವನ್ನು ಮಾಡಬೇಕಾಗಬಹುದು. ತುರ್ತು ಹಣವು ಬೇಕಾಗಿದ್ದು ಕಾರ್ಯಸ್ಥಳದ ಭೇದಭಾವ ಕಾಡಬಹುದು. ಧಾರ್ಮಿಕ ಆಚರಣೆ ಮನಸ್ಸಿಗೆ ನೆಮ್ಮದಿ. ಸೇವೆಯಿಂದ ವಿಶ್ವಾಸ ಗಳಿಸಿಕೊಳ್ಳುವಿರಿ. ಸ್ಥಿರಾಸ್ತಿ ಚೂರಾಗುವ ಸಾಧ್ಯತೆ ಇದೆ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನಿಮ್ಮ ಕೌಶಲವನ್ನು ಪ್ರದರ್ಶಿಸಲು ಅವಕಾಶವಿದೆ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ.

ಕರ್ಕಾಟಕ ರಾಶಿ :
ಕುಟುಂಬದಲ್ಲಿ ವಿಚಾರಭೇದದಿಂದ ಅಸಮಾಧಾನ. ಧಾರ್ಮಿಕ ನಂಬಿಕೆಗಳು ದಾರಿ ತೋರಿಸುತ್ತವೆ. ಸೇವೆಯಲ್ಲಿ ನಿಮಗೆ ಸಂತೋಷ ಸಿಗುವುದು. ಆಸ್ತಿ ಸ್ಥಿರತೆಯ ಬಗ್ಗೆ ನಿಶ್ಚಯವಿರಲಿ. ಹೂಡಿಕೆ ವಿಸ್ತರಣೆ ಯೋಚನೆ ಮಾಡಬಹುದು. ಕಾನೂನಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳುವಿರಿ. ಆಸ್ತಿಯನ್ನು ಮಾಡುವ ಚಿಂತನೆ ಅಧಿಕವಾಗಿರುವುದು. ಹಠದ ಸ್ವಭಾವವು ಎಲ್ಲರ ಪ್ರೀತಿಯಿಂದ ನಿಮ್ಮನ್ನು ದೂರಮಾಡಬಹುದು. ನಿಮ್ಮವರ ಮೇಲೆ‌ ಅನುಮಾನ ಸಕಾರಣಕ್ಕೆ ಆಗಿರಲಿ. ಇಂದು ಹಣಕಾಸಿನ ವ್ಯವಹಾರ ಮಾಡಲು ಧೈರ್ಯವು ಸಾಕಾಗದು. ಗೃಹನಿರ್ಮಾಣ ಶುಭಾರಂಭ. ವಿಳಂಬವಾದರೂ ಸ್ಪರ್ಧೆಗೆ ಅವಕಾಶ. ನ್ಯಾಯ ವಿಷಯದಲ್ಲಿ ಸತ್ಯದ ಪಕ್ಷವನ್ನು ಬಿಡುವುದು ಬೇಡ. ವಿವಾಹಕ್ಕೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿ, ಗೊಂದಲ ಬೇಡ.‌ ಹೆದರಿಸಿ ವಸ್ತುವನ್ನು ಪಡೆಯುವಿರಿ. ನಿಮ್ಮ ಇಷ್ಟವಾದ ವಸ್ತುವು ಕಣ್ಮೆಯಾರಿಗಿರುವುದು ಇಂದು ಗೊತ್ತಾಗುವುದು.

ಸಿಂಹ ರಾಶಿ :
ಗುಪ್ತ ವಿರೋಧದಿಂದ ನಿಮಗೆ ಬೇಸರ. ಧಾರ್ಮಿಕ ಕಾರ್ಯದಿಂದ ಮನೋಬಲ ಹೆಚ್ಚಿಸುತ್ತದೆ. ಸೇವೆ ಆತ್ಮಶಕ್ತಿ ಜಾಗೃತಗೊಳಿಸುತ್ತದೆ. ಆಸ್ತಿ ರಕ್ಷಣೆಗೆ ಇನ್ನೊಬರಿಂದ ಎಚ್ಚರಿಕೆ ಬರಲಿದೆ. ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವುದು ಅವಶ್ಯಕ. ಪಕ್ಷಪಾತ ಸ್ವಭಾವದಿಂದ ಒಂಟಿಯಾಗುವ ಸಾಧ್ಯತೆ ಇದೆ. ನಿಮ್ಮನ್ನು ನೋಡು ದೃಷ್ಟಿಯು ಇದರಿಂದ ಬದಲಾದೀತು. ನೂತನ ಉದ್ಯಮಕ್ಕೆ ಹೆಚ್ಚು ಆದ್ಯತೆ ಇರಲಿದೆ. ಕುಟುಂಬದಲ್ಲಿ ನಿಮ್ಮ ಪ್ರತಿ ಮಾತನ್ನು ಅನೇಕ ಅರ್ಥದಲ್ಲಿ ಗ್ರಹಿಸಬಹುದು. ಮೇಲಧಿಕಾರಿಗಳ ಜೊತೆ ನಿಮ್ಮ ಒಡನಾಟವನ್ನು ಚೆನ್ನಾಗಿಟ್ಟುಕೊಳ್ಳಿ. ನಿಮ್ಮ ಇಂದಿನ ಗುರಿಯನ್ನು ಸ್ಪಷ್ಟ ಮಾಡಿಕೊಂಡಿರಿ. ಇಂದಿನ ಹೂಡಿಕೆ ಅಪಾಯಕಾರಿ ಅನುಭವ ಕೊಡುವುದು. ಗೃಹನಿರ್ಮಾಣ ವಿಳಂಬ. ಸ್ಪರ್ಧೆಯಲ್ಲಿ ತೀವ್ರತೆ. ನ್ಯಾಯ ಕಠಿಣ ಪರಿಶ್ರಮದಿಂದ ಸಿಗುತ್ತದೆ. ಕೆಲವು ರಾಜಕೀಯ ವ್ಯಕ್ತಿಗಳ ಪ್ರೇರಣೆಯಿಂದ ನೀವೂ ರಾಜಕೀಯಕ್ಕೆ ಬರುವಿರಿ. ನಿಮ್ಮದೇ ಕೆಲಸವಾದರೂ ನಿಮಗೆ ಅದರ ಸಂಪೂರ್ಣ ಯಶಸ್ಸು ಸಿಗದು. ಮುಖಪ್ರೇಕ್ಷಕತ್ವ ಒಳ್ಳೆಯದಲ್ಲ.

ಕನ್ಯಾ ರಾಶಿ :
ಆಸ್ತಿ ವಿಚಾರದಲ್ಲಿ ಸಂಧಾನ ಸಾಧ್ಯ. ಹೂಡಿಕೆಯಿಂದ ಸಮಾಧಾನಕರ ಲಾಭ. ಗೃಹನಿರ್ಮಾಣ ಬಗ್ಗೆ ಚರ್ಚೋಪಚರ್ಚೆಗಳು ನಡೆಯುವುದು. ಸ್ಪರ್ಧೆಯಲ್ಲಿ ಸಮಾನ ಪೈಪೋಟಿ. ಸ್ನೇಹಿತರ ವಿವಾಹವನ್ನು ನೀವೇ ಮುಂದೆ ನಿಂತು ಮಾಡಿಸುವಿರಿ. ಮಾನಸಿಕವಾಗಿ ಯಾರನ್ನೂ ಕೊಲ್ಲುವುದು ಬೇಡ. ಸ್ನೇಹಿತರ ಮೇಲೆ ಕೂಗಾಡುವಷ್ಟು ಸಲುಗೆ ಬೇಡ. ಉದ್ಯೋಗದಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಲು ಯಾರದ್ದಾದರೂ ಸಹಾಯವನ್ನು ಪಡೆಯುವಿರಿ. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ಸಮತೋಲನ ಕಳೆದುಕೊಂಡರೆ ಭೇದಭಾವ ಅನುಭವ. ಧಾರ್ಮಿಕ ಚಿಂತನೆ ಸಮಾಧಾನ. ಸೇವೆ ಮಾನ ಹೆಚ್ಚಿಸುತ್ತದೆ. ನ್ಯಾಯ ಸಮಾಧಾನದಿಂದ ಸಿಗುತ್ತದೆ. ಹಿರಿಯರ ಜೊತೆ ಕಳೆದ ಸಮಯವು ನಿಮಗೆ ಉಪಯೋಗಕ್ಕೆ ಬರಲಿದೆ. ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಸರಿ‌ಮಾಡಿಕೊಳ್ಳಿ. ಹಣಕಾಸಿನ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು.

ತುಲಾ ರಾಶಿ :
ಸಣ್ಣ ವಿಷಯಗಳಿಂದ ಮನಸ್ತಾಪ ಮೂಡಬಹುದು. ಧಾರ್ಮಿಕ ಶಿಸ್ತಿನಿಂದ ಗೌರವ ಪ್ರಾಪ್ತಿ. ಸೇವಾ ಮನೋಭಾವದಿಂದ ಪ್ರಶಂಸೆ ತರುತ್ತದೆ. ಆಸ್ತಿ ಲೆಕ್ಕಾಚಾರ ಮುಖ್ಯ. ಕಛೇರಿಯ ಕಾರ್ಯವು ಕುಂಟುತ್ತ ಸಾಗುವುದು. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತುಗಳು ಬರಬಹುದು. ಧಾರ್ಮಿಕ‌ ಕಾರ್ಯದಲ್ಲಿ ಅಡಚಣೆ ಆಗಬಹುದು. ಕೆಲವು ವಿಚಾರದಲ್ಲಿ ನಿಮಗೆ ಸೂಕ್ಷ್ಮತೆಯು ಇರಬೇಕಾಗುವುದು. ನಿಮ್ಮದೇ ಆದ ದಾರಿಯಲ್ಲಿ ನೀವು ಸಾಗುವಿರಿ. ಕ್ಷಮಾದಾನವೂ ಇಂದು ಅಸ್ತ್ರವಾಗಬಹುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಕೊಡುವುದು ಕಷ್ಟವಾಗಬಹುದು. ಹೂಡಿಕೆಯಲ್ಲಿ ವಿವರ ಪರಿಶೀಲನೆ. ಗೃಹ ಯೋಜನೆ ನಿಧಾನಗತಿಯಲ್ಲಿ ಸಾಗುವುದು. ಸ್ಪರ್ಧೆಯಲ್ಲಿ ತಂತ್ರಗಾರಿಕೆಯಿಂದ ಜಯ. ನ್ಯಾಯಕ್ಕೆ ತಾಳ್ಮೆ ಅಗತ್ಯ. ಆಮಿಷಕ್ಕೆ ಒಳಗಾಗಿ ಸಿಕ್ಕಿಬೀಳಬಹುದು. ವಿದೇಶೀ ವ್ಯಾಪಾರದಿಂದ ಅಲ್ಪ ಲಾಭವಾಗಲಿದೆ. ಉದ್ಯೋಗದಲ್ಲಿ ನಿಮಗೆ ಮನಸ್ಸು ಖಿನ್ನವಾಗುವುದು.‌ ಇಂದು ನೀವು ಹಣವನ್ನು ಉಳಿಸಿಕೊಳ್ಳಲು ಸಮಸ್ಯೆಯೇ ಆಗಬಹುದು.

ವೃಶ್ಚಿಕ ರಾಶಿ :
ಸೇವೆಯಿಂದ ನಾಯಕತ್ವ ಪ್ರಾಪ್ತಿಯಾಗಲಿದೆ. ಹೂಡಿಕೆಯಲ್ಲಿ ಲಾಭದ ಸೂಚನೆ. ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸುವಿರಿ. ನ್ಯಾಯ ವಿಷಯದಲ್ಲಿ ಧೈರ್ಯ ಅಗತ್ಯ. ಮಕ್ಕಳ ಪ್ರೀತಿಯಲ್ಲಿ ನೀವು ಕಳೆದುಹೋಗುವಿರಿ. ಉದ್ಯೋಗಕ್ಕಾಗಿ ನೀವು ವಿದೇಶಕ್ಕೆ ತೆರಳುವ ಆಸೆ ಇರಲಿದೆ. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ. ಮಕ್ಕಳಿಂದ‌ ನಿಮಗೆ ಅಸಮಾಧಾನ ಇರಲಿದೆ. ನಿಮ್ಮ ಹಳೆಯ ಸಮಸ್ಯೆಯನ್ನು ಸರಿಮಾಡಿಕೊಳ್ಳುವಿರಿ. ದೇಹದೊಳಗೆ ಆದ ಗಾಯವು ಹೊರಗೆ ಕಾಣಿಸಿಕೊಳ್ಳುವುದು. ವಾಹನ ವಿಚಾರವಾಗಿ ಮನೆಯಲ್ಲಿ ಕಲಹವಾಗುವುದು. ಸಂಗಾತಿಯ ಮಾತಿಗೆ ಏನಾದರೂ ಪ್ರತಿಕ್ರಿಯೆಯನ್ನು ನೀಡಿ. ನಿಮ್ಮ ಅಹಂಕಾರದಿಂದ ಭೇದಭಾವ ಉಂಟಾಗದಂತೆ ಎಚ್ಚರ. ಧಾರ್ಮಿಕ ವಿಧಿಗಳು ಶಾಂತಿ ತರುತ್ತವೆ. ಸಾಮಾಜಿಕ ಕಾರ್ಯದಿಂದ ನಿಮಗೆ ಹೆಸರು ಬರಲಿದೆ. ನಂಬಿಕೆಗಳನ್ನು ಮೀರಿ ಏನನ್ನೂ ಮಾಡಲಾರಿರಿ. ನಿಮ್ಮ ಉತ್ಸಾಹವನ್ನು ಶತ್ರುಗಳು ನಿರುತ್ಸಾಹಗೊಳಿಸುವೆರು.

ಧನು ರಾಶಿ :
ಆಸ್ತಿಗೆ ರಕ್ಷಣೆ ಕ್ರಮವಹಿಸುವುದು ಸೂಕ್ತ. ಹೂಡಿಕೆ ದೀರ್ಘಾವಧಿಗೆ ಒಳ್ಳೆಯದು. ಗೃಹನಿರ್ಮಾಣ ಅರ್ಧಕ್ಕೆ ತಾತ್ಕಾಲಿಕವಾಗಿ ನಿಲ್ಲುವುದು. ಸ್ಪರ್ಧೆಯಲ್ಲಿ ಆತ್ಮವಿಶ್ವಾಸ ಹೊರಗಿನಿಂದ ಬರಲಿದೆ. ನ್ಯಾಯ ನಿಧಾನವಾಗಿ ಸಿಗುತ್ತದೆ. ಸ್ತ್ರೀಯರು ಇಂದಿನ ವ್ಯಾಪಾರದಲ್ಲಿ ಅಧಿಕ ಲಾಭವನ್ನು ಗಳಿಸುವರು. ಚಿಂತಕರ ಜೊತೆ ಮಂಥನ ಮಾಡುವುದಕ್ಕೆ ಈ ದಿನ ಆಗುವುದು. ಎಷ್ಟೋ ಕಾಲದ ಅನಂತರ ನೀವು ಮಿತ್ರನನ್ನು ಭೇಟಿಯಾಗುವಿರಿ. ಅನ್ನಿಸಿದ್ದನ್ನು ನೇರವಾಗಿ ಹೇಳುವುದು ಬೇಡ. ಸಮಯಕ್ಕಾಗಿ ಕಾದು ನೋಡಿ. ದಿನಚರಿಯನ್ನು ಬದಲಾಯಿಸಿಕೊಳ್ಳುವುದು ಬೇಕಾಗಬಹುದು. ಭಾವನಾತ್ಮಕವಾಗಿ ಭೇದಭಾವ ನೋವು ಕೊಡಬಹುದು. ಧಾರ್ಮಿಕ ಆಚರಣೆ ಧೈರ್ಯ ನೀಡುತ್ತದೆ. ಸೇವೆಯಿಂದ ಹೃದಯ ಹಗುರ. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಜಾಣತನದಿಂದ ಇಂದಿನ ಕಾರ್ಯವನ್ನು ಮಾಡುವಿರಿ. ಹಣಕಾಸಿನ ವ್ಯವಸ್ಥೆಯನ್ನು ಸರಿ ಮಾಡಿಕೊಳ್ಳುವುದು ಸೂಕ್ತ. ಅರ್ಧ ಪ್ರಯಾಣ ಮಾಡಿ‌ ಮನೆಗೆ ಹಿಂದಿರುಗುವಿರಿ.

ಮಕರ ರಾಶಿ :
ಮಾತಿನಲ್ಲಿ ನಿಮಗೆ ಭೇದಭಾವ ಮಾಡುವ ಅನುಭವವಾಗಲಿದೆ. ಧಾರ್ಮಿಕ ಚಿಂತನೆಯ ಗೊಂದಲವನ್ನು ಮನಸ್ಸು ಸರಿಪಡಿಸುತ್ತದೆ. ಸೇವಾಭಾವದಿಂದ ಸ್ನೇಹ ವೃದ್ಧಿ. ನೀವು ಇಂದು ಸ್ವಂತ ವಾಹನವನ್ನು ಬಾಡಿಗೆ ಕೊಡುವಿರಿ. ಇರುವ ಸಾಲವನ್ನು ತೀರಿಸಿಕೊಳ್ಳಲುಬೇಕಾದ ಯೋಜನೆ ಮಾಡಿ. ಪ್ರೇಮವನ್ನು ಮತ್ತಾವುದೋ ರೀತಿಯಲ್ಲಿ ಪಡೆಯುವಿರಿ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ಸಂಬಂಧಿಕರನ್ನೇ ಪಾಲುದಾರಿಕೆಯಲ್ಲಿ ಇಟ್ಟಕೊಳ್ಳುವಿರಿ. ಸರ್ಕಾರದಿಂದ ಆಗಬೇಕಾದ ಕಾರ್ಯಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಆಸ್ತಿ ಹಾಗೂ ದಾಖಲೆಯ ಪರಿಶೀಲನೆ ಅಗತ್ಯ. ಹೂಡಿಕೆಯಲ್ಲಿ ಅಪಾಯ ತಪ್ಪಿಸಿ. ಗೃಹನಿರ್ಮಾಣ ಯೋಚನೆ ಅಧಿಕವಾಗಲಿ. ನ್ಯಾಯ ವಿಚಾರದಲ್ಲಿ ಸಂಯಮ ಅವಶ್ಯಕ. ಭೂಮಿಯ ವ್ಯವಹಾರದಿಂದ ಲಾಭವಿಲ್ಲದಿದ್ದರೂ ಅದನ್ನೇ‌ ನಡೆಸಲು ಇಷ್ಟಪಡುವಿರಿ. ಸುಖವಾದ ಜೀವನಕ್ಕೆ ಸರಳ‌ ಸೂತ್ರವನ್ನು ಬಳಸಿ.

ಕುಂಭ ರಾಶಿ :
ಸೇವೆಯಿಂದ ಮನಸ್ಸಿಗೆ ನಿಶ್ಚಲತೆ. ಆಸ್ತಿ ವಿಷಯದಲ್ಲಿ ಕುಟುಂಬದ ಬೆಂಬಲ. ಹೂಡಿಕೆ ನಿಧಾನವಾಗಿರಲಿ. ಗೃಹ ಯೋಜನೆ ರೂಪುಗೊಳ್ಳುತ್ತದೆ. ಸ್ಪರ್ಧೆಯಲ್ಲಿ ಸ್ಥೈರ್ಯ ಬೇಕು. ನಿಮ್ಮ ನಿರೀಕ್ಷೆಯು ಹುಸಿಯಾಗುವುದು. ಧನಸಂಪಾದನೆಯ ಚಿಂತೆ ಇರಲಿದೆ. ಆಲಸ್ಯದಿಂದ ನಿಮ್ಮ ಸಾಮರ್ಥ್ಯವು ಕಡಿಮೆ ಆಗಲಿದೆ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಇನ್ನೊಬ್ಬರ ಮೇಲೆ ದೂರು ಹಾಕಲು ಮುಜುಗರವಾಗದು. ಸಂಗಾತಿಯಿಂದ ಅಧಿಕ ಸಂಪತ್ತನ್ನು ನಿರೀಕ್ಷಿಸುವಿರಿ. ತಾಯಿಯ ಪ್ರೀತಿಯು ನಿಮಗೆ ಸಿಗಲಿದೆ. ಏಕಮುಖವಾದ ನಿರ್ಧಾರದಿಂದ ಸಫಲತೆಯು ಇರದು.‌ ಸಣ್ಣ ವಿಚಾರಗಳಿಗೂ ಸಿಟ್ಟಾಗುವುದನ್ನು ಕಡಿಮೆ ಮಾಡಿ. ವೇತನದ ಅಸಮಾನತೆ ಕಂಡು ಬೇಸರವಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದರೆ ಸಮಾಧಾನ. ನ್ಯಾಯ ನಿಮ್ಮತ್ತ ವಾಲುವ ಸೂಚನೆ. ಅಪರಿಚಿತರ ಸಹವಾಸವು ನಿಮ್ಮಲ್ಲಿ ಬೇಡದ ಭಾವವನ್ನು ಕೊಡಬಹುದು. ಎಲ್ಲವನ್ನೂ ಒಬ್ಬರೇ ಮಾಡುವ ಉತ್ಸಾಹವು ಇದ್ದರೂ ಮತ್ತೊಬ್ಬರ ಸಹಕಾರವನ್ನು ಪಡೆದು ಕಾರ್ಯವನ್ನು ಪೂರ್ಣಗೊಳಿಸಿ.

ಮೀನ ರಾಶಿ :
ಭೇದಭಾವದ ಅನುಭವದಿಂದ ಮನಸ್ಸು ಕಲುಷಿತವಾಗಬಹುದು. ಧಾರ್ಮಿಕ ಆಚರಣೆ ಶಾಂತಿ ನೀಡುತ್ತದೆ. ಸೇವಾಮನೋಭಾವದಿಂದ ಗೌರವ ಸಿಗುತ್ತದೆ. ಆಸ್ತಿ ರಕ್ಷಣೆ ಅಗತ್ಯ. ಇಂದು ನಿಮಗೆ ಧಾರ್ಮಿಕ ಕಾರ್ಯಗಳಿಂದ ನಿಮ್ಮ ಹಣದ‌ ಸಂಪಾದನೆಯಾಗಲಿದೆ. ಮನೋವಿಕಾರಕ್ಕೆ‌ ಆಸ್ಪದ ಕೊಡುವುದು ಬೇಡ. ನಿಮಗೆ ಸೂಚಿತ ದಿಕ್ಕಿನಲ್ಲಿ‌ ತೆರಳಿ ಕಾರ್ಯವನ್ನು ಸಾಧಿಸಿಕೊಳ್ಳಿ. ಸುಮ್ಮನೇ ಒತ್ತಡವಿದ್ದಂತೆ ತೋರಿಸುವಿರಿ. ಕೆಲವು ಸಾಧನೆಗೆ ನಿಯಂತ್ರಣ ಅವಶ್ಯಕ. ಅತಿಥಿಗಳ ಸತ್ಕಾರವನ್ನು ಮಾಡುವಿರಿ. ಸಂಗಾತಿಯ ಜೊತೆ ಸರಸದಿಂದ ಕಾಲ ಕಳೆಯುವಿರಿ. ಮಕ್ಕಳ‌ ಕಾರ್ಯವು ಹೆಮ್ಮೆ ಎನಿಸುವುದು. ಹೂಡಿಕೆಯಲ್ಲಿ ಜಾಗರೂಕತೆ ವಹಿಸಿ. ಗೃಹನಿರ್ಮಾಣ ಚಿಂತನೆ ಮೂಡುತ್ತದೆ. ಸ್ಪರ್ಧೆಯಲ್ಲಿ ಶ್ರಮ ಫಲಿಸುತ್ತದೆ. ನ್ಯಾಯ ವಿಳಂಬವಾದರೂ ಸತ್ಯ ಜಯಿಸುತ್ತದೆ. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಕಳೆದ ವ್ಯರ್ಥ ಕಾಲವನ್ನು ಮತ್ತೆ ಸೇರಿಸಲಗಾದು ಎಂದು ವ್ಯಥೆಪಡುವುದು ಬೇಡ. ಮುಂದಿನದ್ದರ ಬಗ್ಗೆ ಆಲೋಚಿಸಿ. ನಿಮ್ಮ ಮಾತಿನಿಂದ ಕುಟುಂಬದ ಕೆಲವು ಸಮಸ್ಯೆಯು ದೂರಾಗುವುದು.

24 ಡಿಸೆಂಬರ್​​ 2025ರ ಪಂಚಾಂಗ:

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಧನಿಷ್ಠ, ಯೋಗ : ವಜ್ರ, ಕರಣ : ಬಾಲವ, ಸೂರ್ಯೋದಯ – 06 – 47 am, ಸೂರ್ಯಾಸ್ತ – 06 – 02 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:49 – 15:13, ಯಮಗಂಡ ಕಾಲ 06:47 – 08:11, ಗುಳಿಕ ಕಾಲ 09:36 – 11:00

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಶಿವಣ್ಣ ಫ್ಯಾನ್ಸ್ ಕ್ರೇಜ್ ಯಾವತ್ತೂ ಕಡಿಮೆ ಆಗಲ್ಲ: ಸಾಕ್ಷಿ ತೋರಿಸಿದ ಕೆ.ಪಿ. ಶ್ರೀಕಾಂತ್ – Kannada News | KP Srikanth talks about Shivarajkumar fans craze during 45 Kannada Movie release

‘ಹ್ಯಾಟ್ರಿಕ್ ಹೀರೋ’ ಶಿವರಾಜ್​​ಕುಮಾರ್ ನಟನೆಯ ‘45’ ಸಿನಿಮಾ (45 Kannada Movie) ಡಿಸೆಂಬರ್ 25ಕ್ಕೆ ಎಲ್ಲೆಡೆ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಮತ್​ತು ಉಪೇಂದ್ರ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಡಿಸೆಂಬರ್ 24ರಂದು ಈ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಬೆಂಗಳೂರಿನ ‘ಪ್ರಸನ್ನ’ ಚಿತ್ರಮಂದಿರದಲ್ಲಿ 2 ಪ್ರೀಮಿಯರ್ ಶೋ ಹೌಸ್​ಫುಲ್ ಆಗಿದೆ. ಶಿವರಾಜ್​​ಕುಮಾರ್ (Shivarajkumar) ಅವರ ಆಪ್ತರಾದ ಕೆ.ಪಿ. ಶ್ರೀಕಾಂತ್ ಕೂಡ ಸಿನಿಮಾ ನೋಡಲು ಬಂದಿದ್ದಾರೆ. ‘45’ ಸಿನಿಮಾದಲ್ಲಿ ಶಿವರಾಜ್​​ಕುಮಾರ್ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ. ಜನರ ಕ್ರೇಜ್ ಯಾವ ರೀತಿ ಇದೆ ಎಂಬುದನ್ನು ಕೆ.ಪಿ. ಶ್ರೀಕಾಂತ್ (KP Srikanth) ಅವರು ವಿವರಿಸಿದ್ದಾರೆ.

‘ಜನರ ರೆಸ್ಪಾನ್ಸ್ ನೋಡಿ ತುಂಬಾ ಖುಷಿ ಆಗುತ್ತಿದೆ. ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಧನ್ಯವಾದಗಳು. ತುಂಬಾ ಖರ್ಚು ಮಾಡಿ ಬಹಳ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನಿರ್ದೇಶಕ ಅರ್ಜುನ್ ಜನ್ಯ ಅವರು ಮೊದಲ ನಿರ್ದೇಶನದಲ್ಲೇ ಉತ್ತಮವಾದ ಸಿನಿಮಾ ಮಾಡಿದ್ದಾರೆ. ಶಿವ ತಾಂಡವ ನೋಡಲು ಶಿವನ ಅಭಿಮಾನಿಗಳೆಲ್ಲ ಕಾಯುತ್ತಿದ್ದೇನೆ’ ಎಂದಿದ್ದಾರೆ ಕೆ.ಪಿ. ಶ್ರೀಕಾಂತ್.

‘ಡಾ. ರಾಜ್​​ಕುಮಾರ್ ಅವರು ಅನ್ನದಾತರು ಅಂತ ಕರೆಯುತ್ತಿದ್ದರು. ಇಂದು ಅವರ ಅಭಿಮಾನಿಗಳು ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ‘ಯುವರಾಜ’ ಸಿನಿಮಾವನ್ನು 25 ವರ್ಷಗಳ ಹಿಂದೆ ಇದೇ ಚಿತ್ರಮಂದಿರದಲ್ಲಿ ನಾವೇ ರಿಲೀಸ್ ಮಾಡಿದ್ದೆವು. ನಾನು ನೋಡಿದ ಹಾಗೆ ಆ ಸಿನಿಮಾಗೆ ಎಷ್ಟು ಕ್ರೇಜ್ ಇತ್ತೋ ಈಗಲೂ ಅದೇ ಕ್ರೇಜ್ ಇದೆ. ಶಿವರಾಜ್​​ಕುಮಾರ್ ಮೇಲೆ ಅಭಿಮಾನಿಗಳಿಗೆ ಇರುವ ಕ್ರೇಜ್ ಎಂದಿಗೂ ಕಡಿಮೆ ಆಗಲ್ಲ’ ಎಂದು ಕೆ.ಪಿ. ಶ್ರೀಕಾಂತ್ ಅವರು ಹೇಳಿದ್ದಾರೆ.

‘ನಾಳೆ ರಿಲೀಸ್ ಇದ್ದರೂ ಕೂಡ ಒಂದು ದಿನ ಮೊದಲೇ 2 ಪ್ರೀಮಿಯರ್ ಶೋಗಳು ಪ್ರಸನ್ನ ಚಿತ್ರಮಂದಿರದಲ್ಲಿ ಫುಲ್ ಆಗಿವೆ. ಅದ್ಭುತವಾದ ಪ್ರತಿಕ್ರಿಯೆ ಜನರಿಂದ ಸಿಗುತ್ತಿದೆ. ಅಭಿಮಾನಿಗಳೆಲ್ಲರೂ ಸಂಭ್ರಮಿಸುತ್ತಿದ್ದಾರೆ. ಇಡೀ ಕರ್ನಾಟಕದಲ್ಲಿ ಇದೇ ಸಂಭ್ರಮ ಇದೆ. ಶಿವಣ್ಣ ನಟಿಸಿದ ಟಗರು, ಮಫ್ತಿ ಸಿನಿಮಾಗಳ ರೀತಿಯೇ ‘45’ ಸಿನಿಮಾಗೆ ಕೂಡ ಕ್ರೇಜ್ ಇದೆ’ ಎಂದಿದ್ದಾರೆ ಕೆ.ಪಿ. ಶ್ರೀಕಾಂತ್.

ಇದನ್ನೂ ಓದಿ: ‘45’ ಸಿನಿಮಾದಲ್ಲಿ ಶಿವರಾಜ್​​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ..

ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಕೂಡ ಡಿಸೆಂಬರ್ 25ರಂದು ಬಿಡುಗಡೆ ಆಗುತ್ತಿದೆ. ಸ್ಟಾರ್ ಸಿನಿಮಾಗಳು ಹೀಗೆ ಒಂದೇ ದಿನ ಬಿಡುಗಡೆ ಆಗಿದ್ದರಿಂದ ಪೈಪೋಟಿ ಜೋರಾಗಿದೆ. ಎರಡೂ ಸಿನಿಮಾಗಳನ್ನು ಪ್ರೇಕ್ಷಕರು ನೋಡುತ್ತಿದ್ದಾರೆ. ‘ಮಾರ್ಕ್’ ಸಿನಿಮಾದ ಶೋಗಳು ಡಿ.25ರ ಬೆಳಗ್ಗೆ 6 ಗಂಟೆಯಿಂದ ಆರಂಭ ಆಗುತ್ತಿದೆ. ಕ್ರಿಸ್ಮಸ್ ರಜೆ ಇರುವ ಕಾರಣ ಎರಡೂ ಸಿನಿಮಾಗಳಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದವಡೆ ಹಲ್ಲು ಉದುರಿಸಿಕೊಂಡು ಹೋಗಬೇಕು… ಗಗನಯಾತ್ರಿಯಾಗಲು ಬೇಕು ದಂತ ತ್ಯಾಗ; ಯಾಕೆ ಗೊತ್ತಾ? – Kannada News | To become Astronaut, one has to sacrifice some wisdom teeth, surprise revelation by Shubhanshu Shukla

ಮುಂಬೈ, ಡಿಸೆಂಬರ್ 24: ಸುನೀತಾ ವಿಲಿಯಮ್ಸ್, ಕಲ್ಪನಾ ಚಾವ್ಲಾ ಮತ್ತು ಶುಭಾಂಶು ಶುಕ್ಲಾ (Shubhanshu Shukla) ಅವರು ಗಗನಕ್ಕೆ ಹೋಗಿ ಬಂದ ಬಳಿಕ ಕೋಟ್ಯಂತರ ಭಾರತೀಯರಿಗೆ ಗಗನಯಾತ್ರಿಗಳಾಗಬೇಕೆಂಬ ಹಂಬಲ ಉಂಟಾಗಿರಬಹುದು. ಆದರೆ, ಆಸ್ಟ್ರೋನಾಟ್ (Astronaut) ಆಗುವುದು ವಿಮಾನದ ಪೈಲಟ್ ಆಗುವುದಕ್ಕಿಂತ ಬಹಳ ಕಠಿಣದ ಕೆಲಸ. ಬಹಳಷ್ಟು ಶ್ರಮ, ತರಬೇತಿ, ಸಹನೆ, ದೈಹಿಕ ಕ್ಷಮತೆ, ಮಾನಸಿಕ ಕ್ಷಮತೆ ಇವೆಲ್ಲವೂ ಬೇಕು. ಇತ್ತೀಚೆಗಷ್ಟೇ ಗಗನಯಾನ ಮಾಡಿಬಂದ ಭಾರತದ ಶುಭಾಂಶು ಶುಕ್ಲಾ ಅವರು ದಂತತ್ಯಾಗದ ಅಚ್ಚರಿಯ ವಿಚಾರ ಪ್ರಸ್ತಾಪಿಸಿದ್ದಾರೆ.

ಇಂದು ಬುಧವಾರ ಐಐಟಿ ಬಾಂಬೆಯಲ್ಲಿ ಮಾತನಾಡುತ್ತಿದ್ದ ಶುಭಾಂಶು ಶುಕ್ಲಾ, ಗಗನಯಾತ್ರಿಗಳಾಗಬೇಕೆನ್ನುವವರು ಹಲ್ಲುಗಳ ತ್ಯಾಗಕ್ಕೆ ಸಿದ್ಧ ಇರಬೇಕೆಂದು ಹೇಳಿದ್ದಾರೆ. ಸಾಮಾನ್ಯವಾಗಿ ಗಗನಯಾತ್ರಿಗಳ ದವಡೆ ಹಲ್ಲುಗಳನ್ನು ಕಿತ್ತು ಕಳುಹಿಸುತ್ತಾರಂತೆ. ಶುಭಾಂಶು ಶುಕ್ಲ ಅವರ ಎರಡು ದವಡೆ ಹಲ್ಲುಗಳನ್ನು ಕೀಳಲಾಗಿತ್ತಂತೆ.

ಇದನ್ನೂ ಓದಿ: ಮುಸ್ಲಿಂ ದೇಶದಲ್ಲಿ 4500 ವರ್ಷ ಪ್ರಾಚೀನ ಸೂರ್ಯ ದೇವಾಲಯ ಪತ್ತೆ; ಎಲ್ಲಿದೆ ಈ ದೇವಸ್ಥಾನ?

ಗಗನಯಾತ್ರಿಗಳ ಹಲ್ಲು ಕಿತ್ತುಹಾಕುವುದು ಯಾಕೆ?

ಗಗನಯಾತ್ರೆ ಎಂಬುದು ಸಾಧಾರಣ ವಿಷಯವಲ್ಲ. ಭೂಮಿಯಿಂದ ಬಹಳ ದೂರದಲ್ಲಿ, ಗುರುತ್ವಾಕರ್ಷಣೆ ಶಕ್ತಿ ತೀರಾ ನಗಣ್ಯವಾಗಿರುವಂತಹ ಸ್ಪೇಸ್​ಗೆ ಹೋಗಲಾಗುತ್ತದೆ. ಅಲ್ಲಿ ಯಾರಿಗಾದರೂ ಅನಾರೋಗ್ಯ ಸಂಭವಿಸಿದರೆ ಅದಕ್ಕೆ ಚಿಕಿತ್ಸೆ ಹೇಗೆ ಪಡೆದುಕೊಳ್ಳುವುದು ಇತ್ಯಾದಿಯ ತರಬೇತಿ ಕೊಟ್ಟು ಕಳುಹಿಸಲಾಗುತ್ತದೆ. ಆದರೆ, ಹಲ್ಲಿನ ಸಮಸ್ಯೆ ಬಂದರೆ ಅದಕ್ಕೆ ಚಿಕಿತ್ಸೆ ನೀಡುವುದು ಕಷ್ಟವಂತೆ. ಅದರಲ್ಲೂ ಗಗನನೌಕೆಯೊಳಗೆ ದಂತ ಶಸ್ತ್ರಚಿಕಿತ್ಸೆ ಅಸಾಧ್ಯವೇ ಅಂತೆ. ಗಗನಯಾತ್ರಿಗಳಿಗೆ ಸ್ವಲ್ಪ ಹಲ್ಲಿನ ಸಮಸ್ಯೆ ಬಂದರೂ ಅದರು ಗಂಭೀರ ಸ್ವರೂಪಕ್ಕೆ ತಿರುಗುವ ಅಪಾಯ ಇರುತ್ತದೆ.

‘ನಿಮ್ಮ ದಂತ ಆರೋಗ್ಯ ಬಹಳ ಮುಖ್ಯ. ಗಗನಯಾತ್ರಿ ಆಯ್ಕೆ ಮತ್ತು ತರಬೇತಿ ವೇಳೆ ಹಲವು ಅಭ್​ಯರ್ಥಿಗಳು ತಮ್ಮ ಹಲ್ಲು ಕೀಳಿಸಿಕೊಳ್ಳುತ್ತಾರೆ. ಅದರಲ್ಲೂ ದವಡೆ ಹಲ್ಲನ್ನು ಮುಂಜಾಗ್ರತೆಯಾಗಿ ತೆಗೆಯಲಾಗುತ್ತದೆ’ ಎಂಬು ಬಾಂಬೆ ಐಐಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಭಾಂಶು ಶುಕ್ಲಾ ವಿವರಿಸಿದ್ದಾರೆ.

ಇದನ್ನೂ ಓದಿ: ಹಿಂದೂ ದೇವಾಲಯದ ಧ್ವಂಸಕ್ಕೆ ಭಾರತ ಕಳವಳ; ಯುದ್ಧ ನಿಲ್ಲಿಸುವಂತೆ ಥೈಲ್ಯಾಂಡ್, ಕಾಂಬೋಡಿಯಾಕ್ಕೆ ಒತ್ತಾಯ

ಶುಭಾಂಶು ಶುಕ್ಲಾ ಅವರು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಬಂದಿದ್ದರು. ಗಗನನೌಕೆಯ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ್ದರು. ಭಾರತದ ಗಗನಯಾನ ಮಿಷನ್​ನಲ್ಲಿ ಶಾರ್ಟ್​ಲಿಸ್ಟ್ ಆದ ಮೂವರು ಗಗನಯಾತ್ರಿಕರಲ್ಲಿ ಶುಕ್ಲಾ ಕೂಡ ಒಬ್ಬರು. ಪ್ರಶಾಂತ್ ನಾಯರ್ ಮತ್ತು ಅಂಗದ್ ಪ್ರತಾಪ್ ಅವರು ಇತರ ಇನ್ನಿಬ್ಬರು. ತರಬೇತಿ ವೇಳೆ, ನಾಯರ್ ಅವರ ಮೂರು ಹಲ್ಲನ್ನು ಕೀಳಲಾಗಿದೆ. ಅಂಗದ್ ಪ್ರತಾಪ್ ಅವರ ನಾಲ್ಕು ದವಡೆ ಹಲ್ಲುಗಳನ್ನು ತೆಗೆಯಲಾಗಿದೆಯಂತೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

VHT 2025-26: ದೇಶಿ ಅಂಗಳದಲ್ಲಿ ಶತಕಗಳ ಮಳೆ; ಮೊದಲ ದಿನವೇ ಸಿಡಿದವು 22 ಶತಕಗಳು – Kannada News | Vijay Hazare Trophy 2025 26: Rohit, Kohli Shine, 22 Centuries on Day 1!

ವಿಜಯ್ ಹಜಾರೆ ಟ್ರೋಫಿಯ 2025-26 (Vijay Hazare Trophy 2025-26) ರ ಆವೃತ್ತಿ ಡಿಸೆಂಬರ್ 24 ರಿಂದ ಅಬ್ಬರದಿಂದ ಆರಂಭವಾಗಿದೆ. ಮೊದಲ ಸುತ್ತಿನ ಮೊದಲ ದಿನವೇ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಟೂರ್ನಿಯ ಮೊದಲ ದಿನವೇ ಒಟ್ಟು 22 ಶತಕಗಳು ದಾಖಲಾಗಿವೆ. ಇವುಗಳಲ್ಲಿ ಇಬ್ಬರು ಭಾರತೀಯ ದಂತಕಥೆಗಳಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಶತಕಗಳು ಸೇರಿರುವುದು ವಿಶೇಷ. ಬಹಳ ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದ ರೋಹಿತ್ ಹಾಗೂ ವಿರಾಟ್ ಶತಕದ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ತಮ್ಮ ತಂಡಗಳಿಗೆ ಜಯ ತಂದುಕೊಟ್ಟರು. ಇವರಿಬ್ಬರಲ್ಲದೆ, ಇನ್ನು 20 ಆಟಗಾರರು ಶತಕದ ಇನ್ನಿಂಗ್ಸ್ ಆಡಿದರು.

ರೋಹಿತ್, ಕೊಹ್ಲಿ ಶತಕ

ಜೈಪುರದಲ್ಲಿ ನಡೆದ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಭರ್ಜರಿ 155 ರನ್​ಗಳ ಇನ್ನಿಂಗ್ಸ್ ಆಡಿದರು. ಇತ್ತ ಬೆಂಗಳೂರಿನಲ್ಲಿ ನಡೆದ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಆಡಿದ್ದ ವಿರಾಟ್ ಕೊಹ್ಲಿ 131 ರನ್ ಬಾರಿಸಿ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಹಾಗೆಯೇ ಬಿಹಾರ ಮತ್ತು ಅರುಣಾಚಲ ಪ್ರದೇಶ ನಡುವಿನ ಪಂದ್ಯದಲ್ಲಿ ಒಂದೇ ತಂಡದ ಮೂವರು ಆಟಗಾರರು ಭರ್ಜರಿ ಶತಕ ಬಾರಿಸಿದರು. ಈ ಪಂದ್ಯದಲ್ಲಿ ಬಿಹಾರ ಪರ ಕಣಕ್ಕಿಳಿದಿದ್ದ 14 ವರ್ಷದ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಲಿಸ್ಟ್ ಎ ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರೆ, ಇದೇ ತಂಡದ ನಾಯಕ ಸಕಿಬುಲ್ ಗನಿ ಕೂಡ 32 ಎಸೆತಗಳಲ್ಲಿ ಶತಕ ಸಿಡಿಸಿದರು. ಇವರಿಬ್ಬರ ಜೊತೆಗೆ ಆಯುಷ್ ಲೋಹರುಕ ಕೂಡ 116 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಮೂವರ ಶತಕದ ಇನ್ನಿಂಗ್ಸ್​ನಿಂದಾಗಿ ಬಿಹಾರ ತಂಡ 574 ರನ್ ಕಲೆಹಾಕುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿದೊಡ್ಡ ಮೊತ್ತ ಕಲೆಹಾಕಿದ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿತು.

ಮತ್ತೊಂದೆಡೆ, ಜಾರ್ಖಂಡ್‌ನ ಇಶಾನ್ ಕಿಶನ್ ಕೂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಕರ್ನಾಟಕ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಗಳಿಸಿ ಭಾರತದ ಎರಡನೇ ಅತಿ ವೇಗದ ಶತಕದ ದಾಖಲೆಯನ್ನು ಸೃಷ್ಟಿಸಿದರು. ಈ ಮೂವರ ಶತಕಗಳು ಭಾರತೀಯ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಮೂರು ವೇಗದ ಶತಕಗಳ ದಾಖಲೆಗಳನ್ನು ಮುರಿದವು. ಇಶಾನ್ ಕಿಶನ್ ಅವರ ಇನ್ನಿಂಗ್ಸ್‌ಗೆ ಪ್ರತಿಕ್ರಿಯೆಯಾಗಿ, ದೇವದತ್ ಪಡಿಕ್ಕಲ್ ಕೂಡ ಕರ್ನಾಟಕ ಪರ 147 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿ, ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ದ್ವಿಶತಕ ಸಿಡಿಸಿದ ಸ್ವಸ್ತಿಕ್ ಸಮಲ್

ಇನ್ನು ಒಡಿಶಾ ಮತ್ತು ಸೌರಾಷ್ಟ್ರ ನಡುವಿನ ಪಂದ್ಯದಲ್ಲಿ ಒಡಿಶಾ ತಂಡದ ಸ್ವಸ್ತಿಕ್ ಸಮಲ್ ದ್ವಿಶತಕ ಸಿಡಿಸಿ ಮಿಂಚಿದರು. ತಮ್ಮ ಇನ್ನಿಂಗ್ಸ್​ನಲ್ಲಿ 169 ಎಸೆತಗಳನ್ನು ಎದುರಿಸಿದ ಸ್ವಸ್ತಿಕ್ ಸಮಲ್, 21 ಬೌಂಡರಿ ಮತ್ತು 8 ಸಿಕ್ಸರ್ ಸೇರಿದಂತೆ 212 ರನ್ ಗಳಿಸಿ ಐತಿಹಾಸಿಕ ಇನ್ನಿಂಗ್ಸ್ ಆಡಿದರು. ಇವರ ಶತಕದಿಂದಾಗಿ ಒಡಿಶಾ ತಂಡವು 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 345 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸೌರಾಷ್ಟ್ರ ತಂಡದ ಪರ ಸಮ್ಮರ್ ಗಜ್ಜರ್ ಕೂಡ ಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ರೋಹಿತ್, ಕೊಹ್ಲಿಯ ಶತಕಗಳ ಅಬ್ಬರ; ಬಿಸಿಸಿಐ ವಿರುದ್ಧ ಸಿಡಿದೆದ್ದ ಅಭಿಮಾನಿಗಳು

ಇವರೂ ಕೂಡ ಶತಕ ಸಿಡಿಸಿದರು

ಅರ್ಪಿತ್ ಭತೇವಾರಾ, ರಿಕಿ ಭುಯಿ, ಯಶ್ ದುಬೆ, ಸ್ನೇಹಲ್ ಕೌತಾಂಕರ್, ಶುಭಂ ಖಜುರಿಯಾ, ಕಿಶನ್ ಲಿಂಗ್ಡೋಹ್, ಅಮನ್ ಮೊಖಡೆ, ಹಿಮಾಂಶು ರಾಣಾ, ರವಿ ಸಿಂಗ್, ಬಿಪ್ಲಬ್ ಸಮಂತ್ರಾಯ್, ಧ್ರುವ ಶೋರೆ, ಫಿರೋಜಮ್ ಜೋತಿನ್ ಮತ್ತು ವಿಷ್ಣು ವಿನೋದ್ ಕೂಡ ಮೊದಲ ದಿನ ಶತಕದ ಇನ್ನಿಂಗ್ಸ್ ಆಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೋಕಾಯುಕ್ತ ದಾಳಿ ವೇಳೆ ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ – Kannada News | Lokayukta Finds Assets Worth Over ₹14 Crore at Minister Zameer Ahmed’s Personal Aide Surfraj Khans House

ಬೆಂಗಳೂರು, ಡಿಸೆಂಬರ್​​ 24: ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ನಿವಾಸದಲ್ಲಿ ಲೋಕಾಯುಕ್ತ ದಾಳಿ ಮುಕ್ತಾಯವಾಗಿದ್ದು, ಸರ್ಫರಾಜ್ ಖಾನ್ ಬಳಿ 14.38 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. 8.44 ಕೋಟಿ ರೂ. ಮೌಲ್ಯ ಸ್ಥಿರಾಸ್ತಿ ಮತ್ತು 5.93 ಕೋಟಿ ರೂ. ಮೊತ್ತದ ಚರಾಸ್ತಿ ಪತ್ತೆಯಾಗಿದೆ. 4 ವಾಸದ ಮನೆ ಮತ್ತು 35 ಎಕರೆ ಕೃಷಿ ಜಮೀನು ದಾಖಲೆ, 66,500 ಹಣ, 2.99 ಲಕ್ಷ ಮೌಲ್ಯದ ಚಿನ್ನ, 1.29 ಕೋಟಿ ಎಫ್​ಡಿ ಇರೋದು ಗೊತ್ತಾಗಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಈ ದಾಳಿ ನಡೆದಿದ್ದು, ಬೆಂಗಳೂರಿನ ಹಲಸೂರು ನಿವಾಸ, ಇತರ ಆರು ಮನೆಗಳು ಸೇರಿದಂತೆ ಒಟ್ಟು ಏಳು ಮನೆಗಳು, ಕೊಡಗಿನಲ್ಲಿರುವ ಎರಡು ಕಾಫಿ ಎಸ್ಟೇಟ್‌ಗಳು ಮತ್ತು ಹೆಚ್.ಡಿ.ಕೋಟೆಯಲ್ಲಿನ ಒಂದು ರೆಸಾರ್ಟ್ ಸೇರಿ ಸರ್ಫರಾಜ್ ಖಾನ್​​ಗೆ​​ ಸೇರಿದ ಒಟ್ಟು 13 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಸರ್ದಾರ್ ಸರ್ಫರಾಜ್ ಖಾನ್ ವಸತಿ ಇಲಾಖೆಗೆ ನಿಯೋಜನೆಗೊಂಡಿರುವ ಅಧಿಕಾರಿಯಾಗಿದ್ದು, ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು (ಡಿ.24) ಬೆಳ್ಳಂಬೆಳಿಗ್ಗೆ 50ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಎಲ್ಲಾ ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಆಸ್ತಿ ವಿವರಗಳ ಸಂಗ್ರಹ ಕಾರ್ಯ ನಡೆದಿದೆ.

ಇದನ್ನೂ ಓದಿ:  ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತು ಇದೆ ಗೊತ್ತೇ?

ಲೋಕಾಯುಕ್ತ ಬಲೆಗೆ ಬಿದ್ದ ಎಸಿಪಿ

30 ಸಾವಿರ ರೂ. ಲಂಚ ಸ್ವೀಕರಿಸುವಾಗ ಬೆಂಗಳೂರಿನ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಕೃಷ್ಣಮೂರ್ತಿ ಲೋಕಾ ಬಲೆಗೆ ಬಿದ್ದಿದ್ದಾರೆ. ಸಾಗರ್​ ಹೋಟೆಲ್ ಮಾಲೀಕರ ಬಳಿ ಲಂಚ ಸ್ವೀಕರಿಸುವಾಗ ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲೇ ಸಿಕ್ಕಿಬಿದ್ದಿದ್ದಾರೆ. ಪ್ರತಿ ತಿಂಗಳು 32 ಸಾವಿರ ರೂಪಾಯಿ ಕೊಡಬೇಕೆಂದು ಎಸಿಪಿ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಲೋಕಾಯುಕ್ತಕ್ಕೆ ಸಾಗರ್ ಹೋಟೆಲ್ ಮಾಲೀಕ ದೂರು ನೀಡಿದ್ದರು. ಎಸಿಪಿ ಕೃಷ್ಣಮೂರ್ತಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ಕೂಡ ಲಭ್ಯವಾಗಿತ್ತು. ಈ ಆಧಾರದಲ್ಲಿಯೇ ದೂರು ದಾಖಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಯುದ್ಧಕ್ಕೆ ಸಿದ್ಧ ಎಂದ ಸುದೀಪ್ ಮಾತಿಗೆ ಅರ್ಜುನ್ ಜನ್ಯ ಮೊದಲ ರಿಯಾಕ್ಷನ್ – Kannada News | Arjun Janya reaction to Kichcha Sudeep controversial statement

ನಟ ಕಿಚ್ಚ ಸುದೀಪ್ (Kichcha Sudeep) ಅವರು ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ‘ಮಾತಿಗೆ ಬದ್ಧ, ಯುದ್ಧಕ್ಕೆ ಸಿದ್ಧ’ ಎಂದು ಹೇಳಿದ್ದರು. ಹಾಗಾದರೆ ಅವರು ಆ ಮಾತು ಹೇಳಿದ್ದು ಯಾರಿಗೆ ಎಂಬ ಪ್ರಶ್ನೆ ಜನರಲ್ಲಿ ಮೂಡಿತ್ತು. ‘ಮಾರ್ಕ್’ ತೆರೆಕಾಣುತ್ತಿರುವ ದಿನವೇ (ಡಿಸೆಂಬರ್ 25) ಅರ್ಜುನ್ ಜನ್ಯ ನಿರ್ದೇಶನದ ‘45’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಬಗ್ಗೆ ಅರ್ಜುನ್ ಜನ್ಯ (Arjun Janya) ಅವರು ಟಿವಿ9 ಜೊತೆ ಮಾತನಾಡಿ ಪ್ರತಿಕ್ರಿಯೆ ನೀಡಿದ್ದಾರೆ. ‘ಪೈರಸಿಗೋಸ್ಕರ ತಾವು ಆ ರೀತಿ ಹೇಳಿಕೆ ನೀಡಿರುವುದು ಎಂದು ಸುದೀಪ್ ಸರ್ ಈಗಾಗಲೇ ಹೇಳಿದ್ದಾರೆ. ಶಿವಣ್ಣ, ಉಪೇಂದ್ರ, ರಾಜ್​ ಬಿ. ಶೆಟ್ಟಿ ಅವರಿಗೂ ಸುದೀಪ್ ಸರ್ ಎಂದರೆ ಬಹಳ ಪ್ರೀತಿ ಇದೆ. ಇವರೆಲ್ಲರ ಬಗ್ಗೆ ಸುದೀಪ್ ಅವರಿಗೂ ಬಹಳ ಅಭಿಮಾನ ಇದೆ. ಜನರು ಬೇರೆ ರೀತಿ ಅಂದುಕೊಂಡಿರಬಹುದು. ಆದರೆ ಈಗ ಸ್ಪಷ್ಟನೆ ಸಿಕ್ಕಿದೆ’ ಎಂದು ಅರ್ಜುನ್ ಜನ್ಯ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೇವಲ ಬೌಂಡರಿ, ಸಿಕ್ಸರ್​ಗಳಿಂದಲೇ 126 ರನ್ ಚಚ್ಚಿದ ರೋಹಿತ್; ವಿಡಿಯೋ ನೋಡಿ – Kannada News | Rohit Sharma Century: 155 Runs for Mumbai in Vijay Hazare Trophy

7 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದ ಹಿಟ್​ಮ್ಯಾನ್ ರೋಹಿತ್ ಶರ್ಮಾ ತಮ್ಮ ಹೊಡಿಬಡಿ ಆಟದ ಮೂಲಕ ಮೊದಲ ದಿನವೇ ಭರ್ಜರಿ ಶತಕ ಸಿಡಿಸಿದರು. ಈ ಟೂರ್ನಿಯಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದ ರೋಹಿತ್, ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಕೇವಲ 62 ಎಸೆತಗಳಲ್ಲಿ ಶತಕ ಸಿಡಿಸಿದರು. ತಮ್ಮ ಈ ಇನ್ನಿಂಗ್ಸ್​ನಲ್ಲಿ 94 ಎಸೆತಗಳನ್ನು ಎದುರಿಸಿದ ರೋಹಿತ್ 9 ಸಿಕ್ಸರ್ ಮತ್ತು 18 ಬೌಂಡರಿಗಳ ಸಹಾಯದಿಂದ ಬರೋಬ್ಬರಿ 155 ರನ್ ಸಿಡಿಸಿದರು. ಅಂದರೆ ರೋಹಿತ್ ಬರಿ ಬೌಂಡರಿ ಹಾಗೂ ಸಿಕ್ಸರ್​ಗಳಿಂದಲೇ 126 ರನ್ ಕಲೆಹಾಕಿದರು. ಇದೀಗ ಅದರ ವಿಡಿಯೋವನ್ನು ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗುತ್ತಿದೆ.

Source link