Category Archives: Blog

Your blog category

ಮೌತ್ ಕಾಂಡೋಮ್‌ ಎಂದರೇನು? ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?

ಮೌತ್ ಕಾಂಡೋಮ್‌ ಎಂದರೇನು? ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?

ನೀವು ಎಂದಾದರೂ ಮೌತ್ ಕೊಂಡೋಮ್ (Mouth Condoms) ಅಥವಾ ಡೆಂಟಲ್ ಡ್ಯಾಮ್ ಬಗ್ಗೆ ಕೇಳಿದ್ದೀರಾ… ಸಾಮಾನ್ಯವಾಗಿ ಈ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಆದರೆ ಇತ್ತೀಚಿಗೆ ಇವುಗಳಿಂದ ಸಿಗುವ ಪ್ರಯೋಜನಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು ಹಾಗಾಗಿ ಈ ಬಗ್ಗೆ ತಿಳಿಯುವುದು ಬಹಳ ಉತ್ತಮವಾಗಿದೆ. ಇದೊಂದು ಲೇಟೆಕ್ಸ್‌ನಿಂದ ತಯಾರಿಸಲಾದ ತೆಳ್ಳಗಿನ ಮತ್ತು ಲವಚಿಕ ಶೀಟ್ ಆಗಿದೆ. ಇದನ್ನು ಓರಲ್ ಸಂಪರ್ಕದ ವೇಳೆ ಬಳಸಲಾಗುತ್ತದೆ, ಇದರಿಂದ ಬಾಯಿ ಮತ್ತು ಚರ್ಮದ ನಡುವೆ ನೇರ ಸಂಪರ್ಕವಾಗುವುದನ್ನು ತಡೆಯಬಹುದು. ಇದರ ಮುಖ್ಯ ಉದ್ದೇಶ ಸೋಂಕು ಹರಡುವ ಅಪಾಯವನ್ನು ಕಡಿಮೆ ಮಾಡುವುದಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿದಾಗ, ಇದು ರಕ್ಷಾಕವಚದಂತೆ ಕಾರ್ಯನಿರ್ವಹಿಸಿ ದೇಹದ ದ್ರವಗಳು ಅಥವಾ ಸೋಂಕಿತ ಚರ್ಮದ ನೇರ ಸಂಪರ್ಕವನ್ನು ತಪ್ಪಿಸುವುದಕ್ಕೆ ಸಹಾಯವಾಗುತ್ತದೆ. ಅದರಲ್ಲಿಯೂ ಸುರಕ್ಷಿತ ವಿಧಾನಗಳನ್ನು ಅನುಸರಿಸಲು ಬಯಸುವವರಿಗೆ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಜಾಗರೂಕರಾಗಿರುವವರಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ. ಹಾಗಾದರೆ ಮೌತ್ ಕೊಂಡೋಮ್ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ನಿಂದ ರಕ್ಷಣೆ ನೀಡುತ್ತದೆಯೇ, ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಿಸಬಹುದೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೌತ್ ಕೊಂಡೋಮ್ HPV ವೈರಸ್‌ನಿಂದ ರಕ್ಷಿಸುತ್ತದೆಯೇ?

ತಜ್ಞರ ಪ್ರಕಾರ, ಹ್ಯೂಮನ್ ಪ್ಯಾಪಿಲೋಮಾವೈರಸ್ (HPV) ಇದು ಚರ್ಮದಿಂದ ಚರ್ಮ ಸಂಪರ್ಕದ ಮೂಲಕ ಹರಡುತ್ತದೆ ಮತ್ತು ಓರಲ್ ಸಂಪರ್ಕದ ಮೂಲಕವೂ ದೇಹಕ್ಕೆ ಪ್ರವೇಶಿಸಬಹುದು. ಮೌತ್ ಕೊಂಡೋಮ್ ನೇರ ಸಂಪರ್ಕವನ್ನು ತಡೆಯುವುದರಿಂದ ಈ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಇದು 100% ರಕ್ಷಣೆ ನೀಡುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು. HPV ಕೇವಲ ದ್ರವಗಳ ಮೂಲಕವಷ್ಟೇ ಅಲ್ಲ, ಚರ್ಮದ ಸಂಪರ್ಕದಿಂದಲೂ ಹರಡುತ್ತದೆ. ಹೀಗಾಗಿ, ಸುತ್ತಮುತ್ತಲಿನ ಚರ್ಮ ಸೋಂಕಿತವಾಗಿದ್ದರೆ ಅಪಾಯ ಮುಂದುವರಿಯಬಹುದು. ಆದರೂ, ನಿಯಮಿತವಾಗಿ ಮತ್ತು ಸರಿಯಾಗಿ ಬಳಸಿದರೆ ಸೋಂಕಿನ ಸಾಧ್ಯತೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಆದರೆ ಇದಕ್ಕಿಂತಲೂ ಪರಿಣಾಮಕಾರಿ ರಕ್ಷಣಾ ಕ್ರಮವೆಂದರೆ HPV ಲಸಿಕೆ (ವ್ಯಾಕ್ಸಿನೇಷನ್) ತೆಗೆದುಕೊಳ್ಳುವುದಾಗಿದೆ.

ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?

ಓರಲ್ ಕ್ಯಾನ್ಸರ್‌ ಬರುವುದಕ್ಕೆ ಹಲವು ಕಾರಣಗಳಿದ್ದು, HPV ಸೋಂಕು ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಮೌತ್ ಕೊಂಡೋಮ್ HPV ಹರಡುವಿಕೆಯನ್ನು ಕಡಿಮೆ ಮಾಡುವುದರಿಂದ, ಇದು ಓರಲ್ ಕ್ಯಾನ್ಸರ್‌ನ ಅಪಾಯವನ್ನು ಕೆಲವು ಮಟ್ಟಿಗೆ ಕಡಿಮೆ ಮಾಡಬಹುದು. ಆದರೆ, ಇದು ನೇರವಾಗಿ ಕ್ಯಾನ್ಸರ್‌ನಿಂದ ಸಂಪೂರ್ಣ ರಕ್ಷಣೆ ನೀಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಧೂಮಪಾನ, ತಂಬಾಕು ಸೇವನೆ ಮತ್ತು ಅಸ್ವಸ್ಥ ಜೀವನಶೈಲಿ ಕೂಡ ಓರಲ್ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ, ಕೇವಲ ಮೌತ್ ಕೊಂಡೋಮ್‌ನ ಮೇಲೆ ಅವಲಂಬಿಸದೇ, ಆರೋಗ್ಯಕರ ಜೀವನಶೈಲಿ ಮತ್ತು ನಿಯಮಿತ ವೈದ್ಯಕೀಯ ತಪಾಸಣೆ ಅಗತ್ಯವಾಗಿದೆ.

ಇದನ್ನೂ ಓದಿ: ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೆ ಬೇಡ ನಿರ್ಲಕ್ಷ್ಯ: ಅವಾಗಿರಬಹುದು ಬ್ರೈನ್ ಸ್ಟ್ರೋಕ್ ಮುನ್ಸೂಚನೆ!

ಬಳಸುವಾಗ ತೆಗೆದುಕೊಳ್ಳಬೇಕಾದ ಜಾಗ್ರತಾ ಕ್ರಮಗಳು:

  • ಯಾವಾಗಲೂ ಹೊಸದು ಮತ್ತು ಸರಿಯಾಗಿ ಪ್ಯಾಕ್ ಮಾಡಿರುವ ಉತ್ಪನ್ನವನ್ನೇ ಬಳಸಬೇಕು
  • ಬಳಸುವ ಮೊದಲು ಇದರಲ್ಲಿ ಚಿಕ್ಕ ರಂಧ್ರಗಳಿಲ್ಲವೆಂಬುದನ್ನು ಪರಿಶೀಲಿಸಬೇಕು
  • ಒಂದು ಬಾರಿ ಬಳಸಿದ ನಂತರ ಮರುಬಳಕೆ ಮಾಡಬಾರದು
  • ಬಳಸುವಾಗ ಸರಿಯಾಗಿ ಹಿಡಿದುಕೊಂಡು ಅದು ಜಾರಿಬಿಳದಂತೆ ನೋಡಿಕೊಳ್ಳಬೇಕು
  • ಆಯಿಲ್ ಆಧಾರಿತ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಬೇಕು
  • ಸರಿಯಾದ ರೀತಿಯಲ್ಲಿ ಬಳಸಿದಾಗ ಮಾತ್ರ ಮೌತ್ ಕೊಂಡೋಮ್‌ನ ಸಂಪೂರ್ಣ ಪ್ರಯೋಜನ ಸಿಗುತ್ತದೆ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಅಭಿಮಾನಿಗಳೇ ಗಮನಿಸಿ! ಪಂದ್ಯದ ದಿನ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಈ ರಸ್ತೆಗಳು ಬಂದ್!

ಬೆಂಗಳೂರು, ಮಾ.24: ಐಪಿಎಲ್ 2026ರ (IPL 2026) ಉದ್ಘಾಟನಾ ಪಂದ್ಯ ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯ ನಡೆಯಲಿದೆ. ಈ ಬಾರಿ ಪಂದ್ಯಕ್ಕೆ ಭಾರೀ ಜನ ಸೇರುವ ಸಾಧ್ಯತೆಗಳು ಇದೆ. ಅದರಲ್ಲೂ ನೆಚ್ಚಿನ ಟೀಮ್​​​ ಆರ್​​ಸಿಬಿ ಬೆಂಗಳೂರಿನಲ್ಲಿ ಆಡುತ್ತಿದೆ ಎಂದರೆ ಖಂಡಿತ ಜನ ಬರುವುದು ಖಂಡಿತ. ಅದಕ್ಕಾಗಿ ಜನರನ್ನು ಹಾಗೂ ವಾಹನಗಳನ್ನು ನಿಭಾಯಿಸಲು ಹಲವು ಕ್ರಮಗಳನ್ನು ಸಂಚಾರಿ ಪೊಲೀಸರು ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಆಡಳಿಯ ಮಂಡಳಿ ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ವಾಹನ ಸಂಚಾರ ಹಾಗೂ ಪಾರ್ಕಿಂಗ್​​​, ಜನರ ಓಡಾಟ ಎಲ್ಲದಕ್ಕೂ ಹೊಸ ರೂಲ್ಸ್​​ ತರಲಾಗಿದೆ. ಪಂದ್ಯಗಳ ದಿನದಂದು ಕ್ರೀಡಾಂಗಣದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.

ಮಾರ್ಚ್ 28 & ಏಪ್ರಿಲ್ 5ರವರೆಗೆ ಕ್ವೀನ್ಸ್ ರಸ್ತೆ, ಬಾಳೆಕುಂದ್ರಿ ರಸ್ತೆ ಮತ್ತು ಸಿಟಿ ಓ ಜಂಕ್ಷನ್ ಸಂಪೂರ್ಣ ಬಂದ್​​ ಮಾಡಲಾಗುವುದು. ಎಂ.ಜಿ. ರಸ್ತೆಯ ಅನಿಲ್ ಕುಂಬಳೆ ವೃತ್ತದಿಂದ ಅನಿಲ್ ಕುಂಬಳೆ ಜಂಕ್ಷನ್ ವರೆಗೆ ನಿಷೇಧವನ್ನು ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ಎಂ.ಜಿ. ರಸ್ತೆಯಿಂದ ಕಬ್ಬನ್ ರಸ್ತೆಯವರೆಗೆ ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದರ ಜತೆಗೆ ರಾಜಭವನ ರಸ್ತೆ, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ಮತ್ತು ಸೆಂಟ್ರಲ್ ಸ್ಟ್ರೀಟ್ ರಸ್ತೆಯ ಎರಡು ಬದಿಗಳಲ್ಲಿ ಸಂಚಾರ ನಿಷೇಧ ಮಾಡಲಾಗುವುದು. ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ ನಿರ್ಬಂಧ ಮಾಡಲಾಗಿದೆ. ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬಳೆ ವೃತ್ತದವರೆಗೆ ಹಾಗೂ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ ಮತ್ತು ಬಾಲಭವನ ಮುಂಭಾಗದ ಫೌಂಟೇನ್ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.

ಇನ್ನು ಪಂದ್ಯ ನೋಡಲು ಬರುವ ಕ್ರಿಕೆಟ್​​ ಪ್ರೇಮಿಗಳಿಗೆ ವಾಹನಗಳನ್ನು ನಿಲ್ಲಿಸಲು ಕೂಡ ವ್ಯವಸ್ಥೆಗಳನ್ನು ಕೂಡ ಮಾಡಲಾಗಿದೆ. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಂಚಾರಿ ಪೊಲೀಸರ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ ಆಡಳಿಯ ಮಂಡಳಿ ಸೂಚಿಸಿರುವ ಕಡೆಗಳಲ್ಲಿ ವಾಹನ ನಿಲುಗಡೆ ಮಾಡಬಹುದು. ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಸೇಂಟ್ ಜೋಸೆಫ್ ಸ್ಕೂಲ್ ಮೈದಾನ (ವಿಠ್ಠಲ್ ಮಲ್ಯ ರಸ್ತೆ), ಫ್ರೀಡಂ ಪಾರ್ಕ್ (MLCP ಮಲ್ಟಿ ಲೆವೆಲ್ ಪಾರ್ಕಿಂಗ್), ಗರುಡ ಮಾಲ್ ಪಾರ್ಕಿಂಗ್ ಸ್ಥಳ, ಶಿವಾಜಿನಗರ ಬಸ್ ನಿಲ್ದಾಣದ ಮೊದಲ ಮಹಡಿ, ಯುಬಿ ಸಿಟಿ (UB City) ಪಾರ್ಕಿಂಗ್ ಸ್ಥಳ ಪಾರ್ಕಿಂಗ್ ಮಾಡಬಹುದು.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB vs SRH ಹೈವೋಲ್ಟೇಜ್ ಪಂದ್ಯ! ನಿಮಗೂ ಟಿಕೆಟ್​​ ಬೇಕಾ? ಬೆಲೆ ಎಷ್ಟು? ಎಲ್ಲಿ ಬುಕ್ ಮಾಡಬೇಕು?

ಇನ್ನು ಸ್ಟೇಡಿಯಂ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಕೂಡ ಸೂಚಿಸಲಾಗಿದೆ. ಪ್ರವೇಶ ಗೇಟ್ ನಂಬರ್ E1 ರಿಂದ E3, E18, E19, E22 ಮತ್ತು E11 ರಿಂದ E17 ರ ಮೂಲಕ ಪ್ರವೇಶಿಸಬಹುದು. ಪಂದ್ಯ ಮುಗಿದ ನಂತರ E5, E8, E09, E9A ಗೇಟ್‌ಗಳ ಮೂಲಕ ಮಾತ್ರ ಹೊರಗೆ ಹೋಗಲು ಅವಕಾಶವಿದೆ. ಗೇಟ್ ನಂಬರ್ E10 ಕೇವಲ ಆಟಗಾರರು, ವಿಐಪಿಗಳು ಮತ್ತು ಪ್ರಮುಖ ಅತಿಥಿಗಳಿಗೆ ಮೀಸಲಾಗಿದೆ. ಕ್ಯಾಬ್/ಆಟೋ ಪಿಕ್-ಅಪ್ ಮತ್ತು ಡ್ರಾಪ್ ಪಾಯಿಂಟ್ಸ್ ಬಗ್ಗೆಯೂ ಇಲ್ಲಿ ತಿಳಿಸಿದ್ದಾರೆ. ಬಿಆರ್‌ವಿ (BRV) ಮೈದಾನ ಗೇಟ್ ನಂಬರ್ 6 ತಿಳಿಸಿದ್ದಾರೆ. ಮಾಣಿಕ್ ಷಾ ಪರೇಡ್ ಮೈದಾನ ಗೇಟ್ ನಂಬರ್ 3 ಕೂಡ ಗುರುತು ಮಾಡಲಾಗಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ನಟ ರಾಜವರ್ಧನ್ ಪ್ಯಾನ್ ಏಷ್ಯಾ ಸಿನಿಮಾ ಕನಸಿಗೆ ವರ್ಷಗಳಿಂದ ನಡೆದಿದೆ ತಯಾರಿ

ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಈವರೆಗೂ 4 ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ. ಪ್ರತಿ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಪ್ರಯತ್ನ ಮಾಡಿದ್ದರು. ಈಗ ಪ್ಯಾನ್ ಏಷ್ಯಾ ಪ್ರಯತ್ನಕ್ಕೆ ಕೈ ಹಾಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಹೊಸ ಸಿನಿಮಾಗೆ ಈಗಾಗಲೇ ಮುಹೂರ್ತ ನೇರವೇರಿದೆ. ಗಣಪತಿ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತಕ್ಕೆ ಚಾಲನೆ ನೀಡುವ ಮೂಲಕ ಕೆಲಸಗಳನ್ನು ಆರಂಭಿಸಲಾಗಿದೆ. ಈ ಸಿನಿಮಾಗಾಗಿ ರಾಜವರ್ಧನ್ (Rajavardhan) ಅವರು ಇತ್ತೀಚಿನ ಕೆಲವು ವರ್ಷಗಳಿಂದ ತಯಾರಿ ಮಾಡಿಕೊಂಡಿದ್ದಾರೆ.

ಕೆಜಿಎಫ್, ಕಾಂತಾರ, ಟಾಕ್ಸಿಕ್ ರೀತಿ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಬೇಕು ಎಂಬುದು ರಾಜವರ್ಧನ್ ಕನಸು. ಅದಕ್ಕಾಗಿ ಒಂದು ತಂಡ ಕಟ್ಟಿಕೊಂಡು ಸುಮಾರು 5 ವರ್ಷಗಳಿಂದ ಸತತವಾಗಿ ಪೂರ್ವ ತಯಾರಿ ನಡೆಸುತ್ತಿದ್ದಾರಂತೆ. ಇದೀಗ ಎಲ್ಲ ತಯಾರಿ ಕೊನೆಯ ಹಂತಕ್ಕೆ ಬಂದಿದೆ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.

ಇತ್ತೀಚೆಗೆ ರಾಜವರ್ಧನ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ನಟನೆಯಿಂದ ಅವರು ದೂರ ಉಳಿದಿದ್ದು ಕೂಡ ಇದೇ ಹೊಸ ಪ್ರಾಜೆಕ್ಟ್ ಕಾರಣಕ್ಕೆ ಎಂದು ಹೇಳಲಾಗುತ್ತಿದೆ. ಇದನ್ನು ಅವರು ಪ್ಯಾನ್ ಏಷ್ಯಾ ಸಿನಿಮಾ ಎಂದು ಕರೆದಿರುವ ಕಾರಣ ಸಹಜವಾಗಿಯೇ ಸಿನಿಪ್ರಿಯರಲ್ಲಿ ಕೌತುಕ ಮೂಡಿದೆ. ಆ ಬಗ್ಗೆ ಇನ್ನಷ್ಟೇ ಅಪ್​ಡೇಟ್ ಸಿಗಬೇಕಿದೆ.

ಈ ಬಗ್ಗೆ ರಾಜವರ್ಧನ್ ಅವರು ಮಾತನಾಡಿದ್ದಾರೆ. ‘ಬಿಚ್ಚುಗತ್ತಿ ಚಿತ್ರದಿಂದ ಗಜರಾಮ ಸಿನಿಮಾದ ತನಕವೂ ಮಾಡಿದ ಎಲ್ಲಾ ಸಿನಿಮಾಗಳು ಒಂದೊಂದು ಬಗೆಯಲ್ಲಿ ಪಾಠ ಹೇಳಿಕೊಟ್ಟಿವೆ. ಕಳೆದ ವರ್ಷ ನಾನು‌ ಕ್ರಿಯೇಟೀವ್ ಹೆಡ್ ಆಗಿ, ನಿರ್ಮಾಪಕನಾಗಿ ಕೆಲಸ ಮಾಡಿದ್ದ ‘ಕಮಲ್ ಶ್ರೀದೇವಿ’ ಸಿನಿಮಾದೊಳಗಿನ, ಹೊರಗಿನ
ಬೇಕು-ಬೇಡ ಮತ್ತು ವ್ಯವಹಾರಿಕ ಜ್ಞಾನವನ್ನ ಕಲಿಸಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್ ಬಹಳ ಭಾವನಾತ್ಮಕ ಜೀವಿ, ಹಾಗಾಗಿ ನೋವಾಗಿದೆ: ರಾಜವರ್ಧನ್

‘ನಾನೂ ಮೂಲತಃ ಚಿತ್ರಕಲಾ ವಿದ್ಯಾರ್ಥಿ‌. ಸಿನಿಮಾದೊಳಗೆ ಕೊನೆಯವರೆಗೂ ನಾನು ವಿದ್ಯಾರ್ಥಿಯೇ. ಈವರೆಗೂ ನಾನು ಮಾಡಿದ ಚಿತ್ರಗಳೆಲ್ಲವೂ ಸಿನಿಮಾ ಕೆಲಸಗಳೆಲ್ಲವೂ ಒಂದೊಂದು ಕಲಿಕೆ. ಈವರೆಗೂ ನಾನೇನು ಮಾಡಿದ್ದೇನೂ ಅದೆಲ್ಲವೂ ಅನುಭವ ಅಷ್ಟೇ. ನನ್ನ ಅಸಲಿ ಸಿನಿಮಾ ಪಯಣ ಇಲ್ಲಿಂದ ಆರಂಭ. ನನ್ನ ಸಿನಿಮಾ ಕನಸು, ದಾರಿ, ಗುರಿ ಈ ಪ್ರಾಜೆಕ್ಟ್ ಆಗಲಿದೆ ಎಂಬುದು ನನ್ನ ಭರವಸೆ’ ಎಂದು ರಾಜ್​ವರ್ಧನ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎರಡು ಬಿಲಿಯನ್ ಡಾಲರ್ ಮೈಲಿಗಲ್ಲು ದಾಟಿದ ಭಾರತದ ಕ್ರೀಡಾ ಆರ್ಥಿಕತೆ

ನವದೆಹಲಿ, ಮಾರ್ಚ್ 24: ಭಾರತದ ಕ್ರೀಡಾ ಆರ್ಥಿಕತೆ ಬಹಳ ವೇಗದಲ್ಲಿ ಬೆಳೆಯುತ್ತಿದೆ. ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಕ್ರೀಡಾ ಆರ್ಥಿಕತೆಯ (Indian Sports Economy) ಗಾತ್ರ ಎರಡು ಬಿಲಿಯನ್ ಡಾಲರ್ ದಾಟಿದೆ. ಡಬ್ಲ್ಯುಪಿಪಿ ಮೀಡಿಯಾದ ವರದಿಯೊಂದರ ಪ್ರಕಾರ ಸ್ಪೋರ್ಟ್ಸ್ ಎಕನಾಮಿ ಗಾತ್ರ 2.13 ಬಿಲಿಯನ್ ಡಾಲರ್ ಮುಟ್ಟಿದೆ. ಅಂದರೆ, 18,864 ಕೋಟಿ ರೂ ಗಾತ್ರದ ಆರ್ಥಿಕತೆಯು ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಅಡಕವಾಗಿದೆ.

ಭಾರತೀಯ ಕ್ರೀಡಾ ಕ್ಷೇತ್ರದ ಆರ್ಥಿಕತೆ ಕಳೆದ ನಾಲ್ಕು ವರ್ಷದಲ್ಲಿ ಅದ್ವಿತೀಯವಾಗಿ ಹಿಗ್ಗಿದೆ. ಶೇ. 19ರ ಸಿಎಜಿಆರ್​ನಲ್ಲಿ ಬೆಳೆದಿದೆ. ನಾಲ್ಕು ವರ್ಷದ ಹಿಂದೆ ಇದ್ದುದಕ್ಕೆ ಹೋಲಿಸಿದರೆ ಅದರ ಗಾತ್ರ ಎರಡು ಪಟ್ಟು ಹೆಚ್ಚಿದೆ. ಅಂದರೆ, ನಾಲ್ಕೇ ವರ್ಷದಲ್ಲಿ ಡಬಲ್ ಆಗಿದೆ.

ಕ್ರಿಕೆಟ್ ಸಿಕ್ಕಾಪಟ್ಟೆ ವೇಗದಲ್ಲಿ ಬೆಳವಣಿಗೆ

ಭಾರತದ ಕ್ರೀಡಾ ಆರ್ಥಿಕತೆಗೆ ಅತಿಹೆಚ್ಚು ಕೊಡುಗೆ ಕೊಡುತ್ತಿರುವುದು ಕ್ರಿಕೆಟ್. ಶೇ 89ರಷ್ಟು ಕೊಡುಗೆ ಇದರದ್ದು. 2024ರಲ್ಲಿ ಒಟ್ಟಾರೆ ಕ್ರೀಡಾ ಆರ್ಥಿಕತೆಯಲ್ಲಿ ಕ್ರಿಕೆಟ್​ನ ಪಾಲು ಶೇ. 84 ಇತ್ತು. ಕುತೂಹಲ ಎಂದರೆ 2024ರಲ್ಲಿ ಒಟ್ಟಾರೆ ಭಾರತೀಯ ಕ್ರೀಡಾ ಆರ್ಥಿಕತೆ ಹೊಂದಿದ್ದ ಗಾತ್ರಕ್ಕಿಂತ ದೊಡ್ಡದಾಗಿ ಕ್ರಿಕೆಟ್ ಈಗ ಬೆಳೆದಿದೆ ಎಂಬುದು ಡಬ್ಲ್ಯುಪಿಪಿ ಮೀಡಿಯಾದ ‘ಸ್ಪೋರ್ಟಿಂಗ್ ನೇಶನ್: ಬ್ಯುಲ್ಡಿಂಗ್ ಎ ಲೆಗಸಿ’ ವರದಿಯಿಂದ ತಿಳಿದುಬರುತ್ತದೆ.

ಇದನ್ನೂ ಓದಿ: ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿವರೆಗೆ, ಮಾರ್ಚ್ 31ಕ್ಕೆ ಡೆಡ್​ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳು

ಕ್ರೀಡಾ ಆರ್ಥಿಕತೆಯ ಗಾತ್ರ ಅಳೆಯುವುದು ಹೇಗೆ?

ಡಬ್ಲ್ಯುಪಿಪಿ ಮೀಡಿಯಾದ ಅಧ್ಯಯನದಲ್ಲಿ, ಕ್ರೀಡಾ ಆರ್ಥಿಕತೆಯ ಗಾತ್ರವನ್ನು ಅಳೆಯಲು ಮೂರು ಅಂಶಗಳನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಪ್ರಾಯೋಜತ್ವ, ಕ್ರೀಡಾಪಟು ಪ್ರಚಾರ, ಜಾಹೀರಾತು ವೆಚ್ಚ, ಈ ಮೂರು ಆದಾಯ ಮೂಲಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಭಾರತದಲ್ಲಿ ಕ್ರಿಕೆಟ್ ಪ್ರಾಬಲ್ಯ ನಿಚ್ಚಳವಾಗಿ ಕಾಣುತ್ತದೆ. ಶೇ. 89ರಷ್ಟು ಕ್ರೀಡಾ ಆರ್ಥಿಕತೆಯು ಕ್ರಿಕೆಟ್​ನದ್ದಾಗಿದೆ. ಇತರ ಕ್ರೀಡೆಗಳ ಪಾಲು ಶೇ. 11 ಮಾತ್ರ. ಫುಟ್ಬಾಲ್ ಕಳೆದ ವರ್ಷ ಹೆಚ್ಚಿನ ಬೆಳವಣಿಗೆ ಹೊಂದಿಲ್ಲದಿರುವುದು ಇದಕ್ಕೆ ಕಾರಣ. ಪ್ರೋಕಬಡ್ಡಿ ಲೀಗ್ ಮೂಲಕ ಕಬಡ್ಡಿ ತನ್ನ ಸ್ಥಾನ ಉಳಿಸಿಕೊಂಡಿದೆ.

ಇದನ್ನೂ ಓದಿ: ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಿಗೆ ಬಡ್ಡಿ ಸಿಗುತ್ತಾ? ಯಾವುದಕ್ಕೆ ಟ್ಯಾಕ್ಸ್ ಇರುತ್ತೆ?

ಆದರೆ, ಆದಾಯ ಗಳಿಕೆ ಮತ್ತು ವೀಕ್ಷಣೆ ಎರಡರಲ್ಲೂ ಕ್ರಿಕೆಟ್​ಗೆ ಭಾರತದಲ್ಲಿ ಯಾವ ಕ್ರೀಡೆಯೂ ಸಾಟಿ ಇಲ್ಲ. ಅದರಲ್ಲೂ ಐಪಿಎಲ್​ನ ಕೊಡುಗೆಯೂ ಗಣನೀಯವಾಗಿ ಇದೆ. ಮಹಿಳಾ ಕ್ರಿಕೆಟ್ ಕೂಡ ಇತ್ತಿಚಿನ ವರ್ಷಗಳಲ್ಲಿ ಕೊಡುಗೆ ನೀಡುತ್ತಿದೆ.

ಕ್ರೀಡಾ ಆರ್ಥಿಕತೆಗೆ ಮಾಧ್ಯಮ ವೆಚ್ಚದ ಕೊಡುಗೆ ಶೇ. 50ರಷ್ಟು ಇದೆ. 9,571 ಕೋಟಿ ರೂ ಅನ್ನು ಮಾಧ್ಯಮಗಳು ಕ್ರೀಡಾ ಪ್ರಸಾರಕ್ಕೆ ವ್ಯಯಿಸುತ್ತವೆ. ಇದರಲ್ಲಿ ಕ್ರಿಕೆಟ್​ಗೆ ಮಾಡುವ ವೆಚ್ಚವೇ 9,026 ಕೋಟಿ ರೂ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಕಾರಿನಲ್ಲೇ ಸುಟ್ಟು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ

ಧಾರವಾಡ, ಮಾ.24: ಜಿಲ್ಲೆಯ ರಾಮಾಪುರ ಅರಣ್ಯ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಅವರ ಶವವು ಕಾರಿನಲ್ಲೇ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ಇದು ಪೂರ್ವನಿಯೋಜಿತ ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಕಾರಿಗೆ ಬೆಂಕಿ ಹಚ್ಚಲಾಗಿದ್ದು, ಒಳಗಿದ್ದ ರಾಜು ಬೋಳಶೆಟ್ಟಿ ಅವರ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. ಗುರುತು ಸಿಗದಷ್ಟು ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಧಾರವಾಡ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಕಾರಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ಐಪಿಎಲ್​​ ಆರಂಭಕ್ಕೂ ಮುನ್ನ ಶಾಕ್​​​​​: ಈ ಬಾರಿ ಆರ್​ಸಿಬಿ ತಂಡದಲ್ಲಿರಲ್ಲ ಯಶ್ ದಯಾಳ್

ಯಶ್ ದಯಾಳ್ ಈ ಬಾರಿ ಆರ್​ಸಿಬಿ ತಂಡದಲ್ಲಿ ಇರುವುದಿಲ್ಲ ಎಂದು ಆರ್​ಸಿಬಿ ನಿರ್ದೇಶಕ ಮೋ ಬೋಬಾಟ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರಿಗೆ ಏನು ಸಹಕಾರ ನೀಡಬೇಕು ಅದನ್ನು ಆರ್​ಸಿಬಿ ಮಾಡುತ್ತಿದೆ. ಜೋಶ್ ಹ್ಯಾಜಲ್‌ವುಡ್ ಮುಂದಿನ ದಿನಗಳಲ್ಲಿ ತಂಡಕ್ಕೆ ಸೇರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link

ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದೆ ಎಲ್​ಪಿಜಿ ಹೊತ್ತ 2 ಹಡಗುಗಳು

ನವದೆಹಲಿ, ಮಾರ್ಚ್ 24: ಇರಾನ್ ಹಾಗೂ ಇಸ್ರೇಲ್, ಅಮೆರಿಕದ ಯುದ್ಧದ ನಡುವೆ ಮತ್ತೆರಡು ಎಲ್​ಪಿಜಿ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತದತ್ತ ಆಗಮಿಸುತ್ತಿವೆ. ಹೀಗಾಗಿ, ದೇಶದಲ್ಲಿ ಎಲ್​ಪಿಜಿ ಬಿಕ್ಕಟ್ಟಿನ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ. 92,612.59 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತ ಎರಡು ಭಾರತೀಯ ಎಲ್‌ಪಿಜಿ ವಾಹಕಗಳಾದ ಜಗ್ ವಸಂತ್ ಮತ್ತು ಪೈನ್ ಗ್ಯಾಸ್ ಹಾರ್ಮುಜ್ ಜಲಸಂಧಿಯ ಮೂಲಕ ಭಾರತದತ್ತ ಸಾಗಿವೆ. ಜಗ್ ವಸಂತ್ ಹಡಗಿನಲ್ಲಿ 33 ಮತ್ತು ಪೈನ್ ಗ್ಯಾಸ್ ಹಡಗಿನಲ್ಲಿ 27 ಭಾರತೀಯ ನಾವಿಕರು ಇದ್ದಾರೆ. ಈ ಹಡಗುಗಳು ಮಾರ್ಚ್ 26 ಮತ್ತು 28ರ ನಡುವೆ ಭಾರತದ ಬಂದರುಗಳನ್ನು ತಲುಪುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಬೆಂಗಳೂರಿಗೆ ಹೋಗಲು ಇಷ್ಟವಿಲ್ಲ; 34 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ಯುವಕ

ಉದ್ಯೋಗ (employment) ಎಲ್ಲರಿಗೂ ಅತ್ಯವಶ್ಯಕ. ಆದರೆ ಈಗಿನ ಕಾಲದಲ್ಲಿ ಎಷ್ಟೇ ಓದಿಕೊಂಡಿದ್ದರೂ ಕೈ ತುಂಬಾ ಸಂಬಳ ಸಿಗುವ ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ತುಂಬಾನೇ ಕಷ್ಟ. ತಾವು ಓದಿರುವುದಕ್ಕೆ ತಕ್ಕ ಉದ್ಯೋಗವಿಲ್ಲದೇ ಸಿಕ್ಕ ಕೆಲಸವನ್ನೇ ಅನಿವಾರ್ಯ ಕಾರಣಕ್ಕಾಗಿ ಮಾಡುವವರೇ ಹೆಚ್ಚು. ಆದರೆ ದೆಹಲಿಯ ಗುರುಗ್ರಾಮ ಮೂಲದ  ಇಂಜಿನಿಯರ್‌ರೊಬ್ಬ ಬೆಂಗಳೂರಿಗೆ (Bengaluru) ಶಿಫ್ಟ್ ಆಗೋಕೆ ಆಗಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ 34 ಲಕ್ಷ ರೂ ವಾರ್ಷಿಕ ಸಂಬಳ ಸಿಗುವ ಕೆಲಸದ ಆಫರ್ ತಿರಸ್ಕರಿಸಿದ್ದಾನೆ. ಉದ್ಯೋಗದ ಕುರಿತು ಈ ಯುವಕ ಮಾಡಿದ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Gaurav Sharan ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಇತ್ತೀಚೆಗೆ ನನಗೆ ಬೆಂಗಳೂರಿನಲ್ಲಿ 35 ಲಕ್ಷ ರೂ ಪ್ಯಾಕೇಜ್ ಕೆಲಸದ ಆಫರ್ ಲಭಿಸಿತು. ಪ್ಯಾಕೇಜ್ ಹಾಗೂ ಕಂಪನಿಯು ಚೆನ್ನಾಗಿತ್ತು. ಆದರೆ ಬೇರೆಡೆಗೆ ಸ್ಥಳಾಂತರವಾಗುವಂತೆ ಬೇಡಿಕೆ ಇರಿಸಲಾಗಿತ್ತು. ಆದರೆ ಈ ಆಫರ್ ಅನ್ನು ನಾನು ತಿರಸ್ಕರಿಸಿದ್ದೇನೆ. ಏಕೆಂದರೆ ನನಗೆ ಎಂದಿಗೂ ಬೆಂಗಳೂರಿಗೆ ಹೋಗಲು ಇಷ್ಟವಿಲ್ಲ ಎಂದು ಬರೆದುಕೊಂಡಿರುವುದನ್ನು ಕಾಣಬಹುದು.

ವೈರಲ್ ಪೋಸ್ಟ್‌ ಇಲ್ಲಿದೆ

ಇದನ್ನೂ ಓದಿ: ಬಾಸ್‌ನಿಂದ ಕಾಲ್ ಬಂದದ್ದೇ ತಡ ಮೆಟ್ರೋದೊಳಗೆ ಲ್ಯಾಪ್ ಟಾಪ್ ತೆರೆದು ಕೆಲಸ ಮಾಡಲು ಕುಳಿತ ಯುವಕ

ಮಾರ್ಚ್ 21 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರಿಗೆ ಹೋಗದಿರಲು ನಿರ್ದಿಷ್ಟ ಕಾರಣವೇನು ಎಂದು ಹೇಳಿದ್ದಾರೆ. ಇನ್ನೊಬ್ಬರು, ಅದ್ಭುತ, ದಯವಿಟ್ಟು ನಿಮ್ಮ ಭರವಸೆಯನ್ನು ಜೀವಮಾನವಿಡೀ ಉಳಿಸಿಕೊಳ್ಳಿ ಮತ್ತು ಬೆಂಗಳೂರಿಗೆ ಎಂದಿಗೂ ಬರಬೇಡಿ ಎಂದು ಖಾರವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ನಿರ್ಧಾರ. ಬೆಂಗಳೂರಿಗರು ನಿಮಗೆ ಸದಾ ಆಭಾರಿಯಾಗಿರುತ್ತಾರೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಪತ್ನಿಗೆ ಇದೆ ಸ್ಯಾಂಡಲ್​​ವುಡ್ ಕನೆಕ್ಷನ್

‘ಧುರಂಧರ್’ ಮತ್ತು ‘ಧುರಂಧರ್ 2’ (Dhurandhar 2) ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ದೊಡ್ಡ ಸೆಲೆಬ್ರಿಟಿಗಳು ಸಹ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ. ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ. ಆದಿತ್ಯ ಧರ್ ಅಚಾನಕ್ಕಾಗಿ ಭಾರತದ ಟಾಪ್ ನಿರ್ದೇಶಕರಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಆದಿತ್ಯ ಧರ್ ಅವರ ಈ ಅದ್ಭುತ ಯಶಸ್ಸಿನ ಹಿಂದೆ ಪತ್ನಿ, ನಟಿ ಯಾಮಿ ಗೌತಮ್ ಅವರ ಪಾಲು ಸಹ ಇದೆ. ಈಗ ಈ ಜೋಡಿ ಬಾಲಿವುಡ್‌ನ ‘ಪವರ್ ಕಪಲ್’ ಆಗಿ ಹೊರಹೊಮ್ಮಿದೆ. ಹಿಮಾಚಲ ಪ್ರದೇಶದ ಸುಂದರಿ ಯಾಮಿಗೂ ಕರ್ನಾಟಕಕ್ಕೂ ಒಂದು ಗಾಢವಾದ ಮತ್ತು ಮರೆಯಲಾಗದ ಸಂಬಂಧವಿದೆ.

ಇಂದು ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿರುವ ಯಾಮಿ ಗೌತಮ್ ಅವರ ಬೆಳ್ಳಿಪರದೆಯ ಪಯಣ ಆರಂಭವಾಗಿದ್ದು ಮುಂಬೈನಲ್ಲಲ್ಲ, ಬದಲಾಗಿ ಬೆಂಗಳೂರಿನಲ್ಲಿ. ಯಾಮಿ ಗೌತಮ್ ಅವರು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದು 2010ರಲ್ಲಿ ಬಿಡುಗಡೆಯಾದ ‘ಉಲ್ಲಾಸ ಉತ್ಸಾಹ’ ಎಂಬ ಕನ್ನಡ ಚಿತ್ರದ ಮೂಲಕ. ಈ ಚಿತ್ರದಲ್ಲಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರೊಟ್ಟಿಗೆ ನಾಯಕಿಯಾಗಿ ನಟಿಸಿದ್ದರು.

ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ತಮಗೆ ಗಣೇಶ್ ಅವರ ಸ್ಟಾರ್‌ಡಮ್ ಬಗ್ಗೆ ಅರಿವಿರಲಿಲ್ಲ ಎಂದು ಯಾಮಿ ಹಲವು ಸಂದರ್ಶನಗಳಲ್ಲಿ ನೆನಪಿಸಿಕೊಂಡಿದ್ದಾರೆ. ಮಾತ್ರವಲ್ಲದೆ ತಮ್ಮ ಜೀವನಕ್ಕೆ ತಿರುವು ನೀಡಿದ್ದು ಬೆಂಗಳೂರು ಎಂದು ಸಹ ಅವರು ಹೇಳಿಕೊಂಡಿದ್ದಿದೆ. ‘ಬೆಂಗಳೂರಿನ ಚಿತ್ರಮಂದಿರವೊಂದರಲ್ಲಿ ನನ್ನ ತಾಯಿಯ ಜೊತೆ ಕುಳಿತು ಈ ಸಿನಿಮಾ ನೋಡಿದಾಗ, ನಾನು ಚಿತ್ರರಂಗದಲ್ಲಿ ಉಳಿಯಲು ಬಂದಿದ್ದೇನೆ ಎಂಬ ಆತ್ಮವಿಶ್ವಾಸ ಮೂಡಿತು’ ಎಂದು ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ:ಮುನ್ನೆಚ್ಚರಿಕೆಯ ಹೊರತಾಗಿಯೂ ‘ಧುರಂಧರ್ 2’ ಸಿನಿಮಾಕ್ಕೆ ಭಾರಿ ನಷ್ಟ

ಯಾಮಿ ಗೌಥಮ್ ಅವರ ವೃತ್ತಿ ಜೀವನದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಕೊಡುಗೆ ಅಪಾರವಾಗಿದೆ. ಯಾಮಿ ಅವರು ಬಾಲಿವುಡ್​​ಗೆ ಹೋಗುವ ಮುನ್ನ ದಕ್ಷಿಣದ ಭಾಷೆಗಳಲ್ಲಿ ನಟಿಸಿ ಅನುಭವ ಪಡೆದುಕೊಂಡಿದ್ದರು. ಕನ್ನಡದ ‘ಉಲ್ಲಾಸ ಉತ್ಸಾಹ’ ಸಿನಿಮಾದ ಬಳಿಕ ತೆಲುಗಿನಲ್ಲಿ ‘ನುವ್ವಿಲಾ’ ಸಿನಿಮಾನಲ್ಲಿ ನಟಿಸಿದ್ದರು, ಅದೇ ಸಿನಿಮಾನಲ್ಲಿ ವಿಜಯ್ ದೇವರಕೊಂಡ ಸಹ ಇದ್ದರು, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರ್ ಜೊತೆಗೆ ‘ಹೀರೋ’ ಮತ್ತು ತಮಿಳಿನಲ್ಲಿ ‘ಗೌರವಂ’ ಚಿತ್ರಗಳಲ್ಲಿ ನಟಿಸಿದರು. ‘ಗೌರವಂ’ ಸಿನಿಮಾವನ್ನು ಪ್ರಕಾಶ್ ರೈ ನಿರ್ಮಾಣ ಮಾಡಿದ್ದರು. ಅವರ ಮೊದಲ ಹಿಂದಿ ಸಿನಿಮಾ ‘ವಿಕ್ಕಿ ಡೋನರ್’ ಆ ಸಿನಿಮಾ ಸಹ ಸೂಪರ್ ಹಿಟ್ ಆಯ್ತು.

ಯಾಮಿ ಗೌತಮ್ ಇಂದಿಗೂ ದಕ್ಷಿಣ ಭಾರತದ ಚಿತ್ರರಂಗದ ಕಾರ್ಯವೈಖರಿ ಮತ್ತು ಅಲ್ಲಿನ ಜನರ ಒಗ್ಗಟ್ಟನ್ನು ಶ್ಲಾಘಿಸುತ್ತಾರೆ. ‘ದಕ್ಷಿಣದ ಚಿತ್ರರಂಗದಲ್ಲಿ ಯಾರೂ ಸಿನಿಮಾ ಬಗ್ಗೆ ನೆಗೆಟಿವಿಟಿ ಹರಡಲು ಧೈರ್ಯ ಮಾಡುವುದಿಲ್ಲ, ಯಾಕೆಂದರೆ ಅಲ್ಲಿನ ಇಂಡಸ್ಟ್ರಿ ಒಂದಾಗಿ ನಿಲ್ಲುತ್ತದೆ’ ಎಂಬ ಅವರ ಮಾತುಗಳು ಅವರು ಇಂದಿಗೂ ಸ್ಯಾಂಡಲ್‌ವುಡ್ ಮತ್ತು ಇತರ ದಕ್ಷಿಣ ಭಾಷೆಗಳ ಮೇಲೆ ಹೊಂದಿರುವ ಪ್ರೀತಿಯನ್ನು ತೋರಿಸುತ್ತದೆ.

‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಅವರ ವೃತ್ತಿ ಜೀವನದ ಮೇಲೂ ಯಾಮಿ ಗೌಥಮ್ ಪ್ರಭಾವ ಇದೆ. ಆದಿತ್ಯ ನಿರ್ದೇಶಿಸಿದ ಮೊದಲ ಸಿನಿಮಾ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾನಲ್ಲಿ ಯಾಮಿ ನಟಿಸಿದ್ದರು. ಪಲ್ಲವಿ ಶರ್ಮಾ ಎಂಬ ಗುಪ್ತಚರ ಅಧಿಕಾರಿಯ ಪಾತ್ರ ಮಾಡಿದ್ದ ಯಾಮಿ, ಆದಿತ್ಯ ಅವರ ಕೆಲಸದ ಶಿಸ್ತು ಮತ್ತು ಶಾಂತ ಸ್ವಭಾವಕ್ಕೆ ಮಾರುಹೋದರು. 2021ರಲ್ಲಿ ಇವರು ಸರಳವಾಗಿ ವಿವಾಹವಾದರು.

ಸಿನಿಮಾ ನಿರ್ಮಾಣದ ಒತ್ತಡದ ಸಮಯದಲ್ಲಿ ಯಾಮಿ ಅವರು ಆದಿತ್ಯ ಅವರಿಗೆ ದೊಡ್ಡ ಬೆಂಬಲವಾಗಿ ನಿಂತಿದ್ದಾರೆ. ಇತ್ತೀಚೆಗೆ ‘ಧುರಂಧರ್ 2’ ಬಿಡುಗಡೆಯ ಮುನ್ನ ಬಾಲಿವುಡ್‌ನಲ್ಲಿ ನಡೆಯುವ ‘ಪೇಯ್ಡ್ ಹೈಪ್’ ಪ್ರಚಾರದ ವಿರುದ್ಧ ಯಾಮಿ ಧ್ವನಿ ಎತ್ತಿದ್ದರು. ತನ್ನ ಪತಿ ಮತ್ತು ತಂಡದ ಪ್ರಾಮಾಣಿಕ ಶ್ರಮವನ್ನು ರಕ್ಷಿಸಲು ಅವರು ದಕ್ಷಿಣ ಭಾರತದ ಚಿತ್ರರಂಗದ ಒಗ್ಗಟ್ಟನ್ನು ಉದಾಹರಣೆಯಾಗಿ ನೀಡಿ ಬಾಲಿವುಡ್‌ಗೆ ಬುದ್ಧಿ ಹೇಳಿದ್ದರು. ‘ಧುರಂಧರ್ 2’ ನಲ್ಲಿಯೂ ಸಹ ಯಾಮಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಯಾಮಿ ಅವರು ಶಾಜಿಯಾ ಬಾನೋ ಎಂಬ ಹೆಸರಿನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೇವಲ ಒಂದು ಸಣ್ಣ ದೃಶ್ಯವಾದರೂ, ಕಥೆಗೆ ಒಂದು ದೊಡ್ಡ ತಿರುವು ನೀಡುವ ಪಾತ್ರ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಲಿಗಳಲ್ಲೂ ಅಕ್ಕರೆ ಕಂಡ ವೃದ್ಧ: ಪ್ರೀತಿ ನೀಡಲು ಪ್ರಾಣಿಯೇ ಆಗಬೇಕಿಲ್ಲ, ಮನುಷ್ಯತ್ವವೊಂದಿದ್ದರೆ ಸಾಕು!

ಪ್ರೀತಿ ಎನ್ನುವುದು ಕೇವಲ ಮನುಷ್ಯರ ನಡುವೆ ಮಾತ್ರ ಇರುವುದಿಲ್ಲ, ಅದು ಪ್ರಕೃತಿಯ ಎಲ್ಲ ಜೀವಿಗಳ ನಡುವೆಯೂ ಇರಬಹುದು ಎಂಬುದಕ್ಕೆ ಈ ವೀಡಿಯೊ ಒಂದು ಜೀವಂತ ಉದಾಹರಣೆ. ನಗರದ ಬಿಡುವಿಲ್ಲದ ರಸ್ತೆಯ ಬದಿಯಲ್ಲಿ ವಯೋವೃದ್ಧರೊಬ್ಬರು ಅಲ್ಲಿನ ಇಲಿಗಳೊಂದಿಗೆ ಅಕ್ಕರೆಯಿಂದ ಸಮಯ ಕಳೆಯುತ್ತಾ, ಅವುಗಳಿಗೆ ತಿಂಡಿ ತಿನ್ನಿಸುತ್ತಿರುವ ದೃಶ್ಯ ಎಲ್ಲರ ಹೃದಯ ಗೆಲ್ಲುತ್ತಿದೆ. ಸಾಮಾನ್ಯವಾಗಿ ಮನುಷ್ಯರನ್ನು ಕಂಡರೆ ದೂರ ಓಡುವ ಇಲಿಗಳು, ಈ ವೃದ್ಧರ ಬಳಿ ಯಾವುದೇ ಭಯವಿಲ್ಲದೆ ಬಂದು ತಿಂಡಿ ತಿನ್ನುತ್ತಿವೆ. ಇದು ಅವರು ಆ ಪ್ರಾಣಿಗಳೊಂದಿಗೆ ಬೆಳೆಸಿಕೊಂಡಿರುವ ವಿಶ್ವಾಸವನ್ನು ತೋರಿಸುತ್ತದೆ.”ನನ್ನನ್ನು ಪ್ರೀತಿಸಿದರೆ ನಾನು ನಿಮ್ಮನ್ನು ಪ್ರೀತಿಸುತ್ತೇನೆ” ಎಂಬ ಪ್ರಾಣಿಗಳ ಸಹಜ ಗುಣವನ್ನು ಈ ವೀಡಿಯೊ ಪ್ರತಿಬಿಂಬಿಸುತ್ತದೆ. ಯಾರು ಯಾರನ್ನೂ ಕೇಳದ ಈ ಜಗತ್ತಿನಲ್ಲಿ, ಕಿಲುಬು ಕಾಂಚಾಣದ ಹಂಗಿಲ್ಲದ ಈ ಪ್ರೀತಿ ಅನನ್ಯ. ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, “ನಿಜವಾದ ಪ್ರೀತಿ ಎಂದರೆ ಇದೇ” ಎಂದು ಸಾವಿರಾರು ಜನರು ಕಾಮೆಂಟ್ ಮಾಡುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link