ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್! ಬಿಸಿಲಿನ ಬೇಗೆಯಲ್ಲೂ ಪ್ರಾಣಿಗಳು ಕೂಲ್ ಕೂಲ್ – Kannada News | Bannerghatta Zoo Fights Summer Heat: Ice candy and fruits fed to zoo animals
ಬೆಂಗಳೂರು, ಮಾರ್ಚ್ 05: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಬಿಸಿಲಿನ ತಾಪದಿಂದ ರಕ್ಷಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಝೂ ಸಿಬ್ಬಂದಿ ಪ್ರಾಣಿಗಳಿಗೆ ಎಳನೀರು, ಹಣ್ಣು, ತರಕಾರಿ ಬಳಸಿ ಲಾಲಿಪಾಪ್ ಮತ್ತು ಐಸ್‌ಕ್ಯಾಂಡಿ ರೂಪದಲ್ಲಿ ಪೌಷ್ಠಿಕ ಆಹಾರ ನೀಡುತ್ತಿದ್ದಾರೆ. ಆನೆ, ಜಿಂಕೆ, ಮಂಗ, ಕರಡಿ ಸೇರಿದಂತೆ ಎಲ್ಲಾ ಪ್ರಾಣಿಗಳಿಗೂ ತಂಪಾದ ಆಹಾರ ಮತ್ತು ನೀರಿನ್ನು ನೀಡಲಾಗುತ್ತಿದೆ. ದಿನಕ್ಕೆ ಆನೆಗಳಿಗೆ ಸ್ನಾನ, ಕಲ್ಲಂಗಡಿ ಹಣ್ಣು ಮತ್ತು ನೀರಿನ ಹೊಂಡಗಳ ಮೂಲಕ ತಂಪಾದ ವಾತಾವರಣ ನೀಡಲಾಗುತ್ತಿದೆ. ಪ್ರವಾಸಿಗರಿಗೆ ಸಹ ಮರಗಿಡಗಳ ನೆರವಿನಿಂದ…