ಪ್ರಯಾಣಿಕರೇ ಗಮನಿಸಿ: ಕ್ರಿಸ್ಮಸ್ ಹಿನ್ನೆಲೆ ರಸ್ತೆಗಿಳಿಯಲಿವೆ ಹೆಚ್ಚುವರಿ KSRTC ಬಸ್ಗಳು – Kannada News | KSRTC to Operate 1,000 Special Buses on the Occasion of Christmas
ಬೆಂಗಳೂರು, ಡಿಸೆಂಬರ್ 19: ಕ್ರಿಸ್ಮಸ್ ಹಿನ್ನೆಲೆ ಊರುಗಳಿಗೆ, ಪ್ರವಾಸಕ್ಕೆ ತೆರಳುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಗುಡ್ನ್ಯೂಸ್ ಕೊಟ್ಟಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಡಿ.19, 20 ಮತ್ತು 24ರಂದು ಹೆಚ್ಚುವರಿಯಾಗಿ 1,000 ಬಸ್ಗಳು ಸಂಚಾರ ನಡೆಸಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ವಿಶೇಷ ಬಸ್‌ಗಳ ಸಂಚಾರ ನಡೆಯಲಿದ್ದು, ಸಾಮಾನ್ಯ ಸಾರಿಗೆ, ಐರಾವತ ಹಾಗೂ ಸ್ಲೀಪರ್ ಕೋಚ್ ಸೇರಿದಂತೆ ಎಲ್ಲಾ ಐಷಾರಾಮಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಕ್ರಿಸ್ಮಸ್ ಹಬ್ಬ ಮುಗಿದ ಬಳಿಕವೂ ವಿಶೇಷ…