Category Archives: Blog

Your blog category

ನಾನು ಗಂಡಸಾಗಿ ಹುಟ್ಟಿರುವುದೇ ತಪ್ಪಾ? ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ – Kannada News | Teachers Personal Dispute Disrupts School in Komalapura, Karnataka

ಕೊಪ್ಪಳ, ಮಾ.4: ಜಿಲ್ಲೆಯ ಕುಕನೂರ ತಾಲೂಕಿನ ಕೋಮಲಾಪುರ ಗ್ರಾಮದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿದ್ದೇಶ ಶೆಟ್ಟರ್ ಅವರ ವೈಯಕ್ತಿಕ ಬದುಕಿನ ವಿವಾದ ಶಾಲಾ ಆವರಣದಲ್ಲಿ ಸಾರ್ವಜನಿಕ ಗಲಾಟೆಗೆ ಕಾರಣವಾಗಿದೆ. ತಮ್ಮ ಪತ್ನಿ ಪ್ರತಿದಿನ ಶಾಲೆಗೆ ಬಂದು ಕಿರಿಕ್​​ ಮಾಡುವುದು, ತಮ್ಮ ವೃತ್ತಿ ಬದುಕಿಗೆ ಮತ್ತು ಸಾರ್ವಜನಿಕ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಶಿಕ್ಷಕ ಸಿದ್ದೇಶ ಶೆಟ್ಟರ್ ಆರೋಪಿಸಿದ್ದಾರೆ. ಸಿದ್ದೇಶ ಶೆಟ್ಟರ್ ಅವರ ಹೇಳಿಕೆಯ ಪ್ರಕಾರ, ತಮ್ಮ ಪತ್ನಿ ತಮ್ಮನ್ನು ಮನೆಯಲ್ಲಿ ಕೈದಿ ತರಹ ಇಟ್ಟುಕೊಂಡಿದ್ದು, ಕುಟುಂಬದ ಸದಸ್ಯರೊಂದಿಗೆ ಅಥವಾ ಕಚೇರಿಯಿಂದ ಬರುವ ಯಾವುದೇ ಕರೆಗಳನ್ನು ಸ್ವೀಕರಿಸಲು ಬಿಡುತ್ತಿಲ್ಲ. ಇದರ ಜೊತೆಗೆ, ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಲಾಗುತ್ತಿದ್ದು, ದೇಹದ ಮೇಲೆ ಗಾಯಗಳಾಗಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ. “ಅವರಪ್ಪನ ಬಳಿ ವರದಕ್ಷಿಣೆ ತಗೊಂಡು ಬಾ” ಎಂದು ಒತ್ತಾಯಿಸುತ್ತಿದ್ದಾರೆ ಎಂದು ತಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಬೆದರಿಕೆಗಳನ್ನು ಹಾಕಲಾಗುತ್ತಿದೆ ಎಂದಿದ್ದಾರೆ.

ತಮಗೆ ಈಗಾಗಲೇ ಮದುವೆಯಾಗಿದ್ದು, ಮಕ್ಕಳೂ ಇದ್ದಾರೆ ಎಂದು ಸಿದ್ದೇಶ ಶೆಟ್ಟರ್ ಹೇಳಿದ್ದಾರೆ. ತಮ್ಮ ಮಗ ಇಂಜಿನಿಯರಿಂಗ್ ಓದುತ್ತಿದ್ದು, ಮೊದಲ ಪತ್ನಿ ಮತ್ತು ಮಕ್ಕಳ ಜೊತೆ ಇರಲು ಬಿಡುತ್ತಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ತಾನು ಮಾಸಿಕ ನಿರ್ವಹಣಾ ವೆಚ್ಚವನ್ನು ನೀಡುತ್ತಿದ್ದು, ತಮ್ಮ ಪತ್ನಿಯ ಕೈ ಬಿಟ್ಟಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೂ, ತಮ್ಮ ಮಕ್ಕಳನ್ನು ಭೇಟಿ ಮಾಡಲು ಹೋದಾಗ ಅಥವಾ ಊರಿಗೆ ಹೋಗಲು ಬಯಸಿದಾಗ ಆಕೆ ತಕರಾರು ಮಾಡುತ್ತಾಳೆ ಎಂದು ಅವರು ತಿಳಿಸಿದ್ದಾರೆ. ಶಾಲಾ ಆವರಣದಲ್ಲಿ ಆಕೆ ಪ್ರತಿದಿನ ಬಂದು ಗಲಾಟೆ ಮಾಡುವುದರಿಂದ ತಮ್ಮ ಚಾರಿತ್ರ್ಯ ಹರಣವಾಗುತ್ತಿದೆ. ಇದರಿಂದ ತಲೆ ಎತ್ತಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಮತ್ತು ಸಹ ಶಿಕ್ಷಕರ ಎದುರು ತಮ್ಮ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಶೆಟ್ಟರ್ ಆತಂಕ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಬ್ಯಾಗ್ ಬಿಸಾಕುವುದು, ಮೊಬೈಲ್ ಕಿತ್ತುಕೊಳ್ಳುವುದು ಸೇರಿದಂತೆ ಸಾರ್ವಜನಿಕವಾಗಿ ಕಿರಿಕಿರಿ ಉಂಟುಮಾಡುತ್ತಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ. ವೈಯಕ್ತಿಕ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಹೀಗೆ ಬೆರೆಸಿದರೆ, ವೃತ್ತಿ ಬದುಕನ್ನು ಮುಂದುವರಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ರಸ್ತೆಯಲ್ಲಿ ಹೋಗುವಾಗ ಕಲ್ಲು ಎಸೆಯುವಷ್ಟರ ಮಟ್ಟಿಗೆ ಪರಿಸ್ಥಿತಿ ತಲುಪಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಕಂಪನಿಗಳ ನೊಂದಣಿ ಫೆಬ್ರುವರಿಯಲ್ಲಿ ಶೇ. 37 ಹೆಚ್ಚಳ; ಆರೋಗ್ಯಕರ ಆರ್ಥಿಕತೆಗೆ ಇದು ಸಾಕ್ಷ್ಯವಾ? – Kannada News | New company registrations in 2026 February rises by 37pc indicating healthy economy

ನವದೆಹಲಿ, ಮಾರ್ಚ್ 4: ಫೆಬ್ರುವರಿ ತಿಂಗಳಲ್ಲಿ 24,136 ಸಂಖ್ಯೆಯಷ್ಟು ಹೊಸ ಕಂಪನಿಗಳ ರಿಜಿಸ್ಟ್ರೇಶನ್​ಗಳಾಗಿವೆ. ಕಳೆದ ವರ್ಷದಕ್ಕೆ ಹೋಲಿಸಿದರೆ ಶೇ. 37ರಷ್ಟು ಹೆಚ್ಚು ನೊಂದಣಿಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಈವರೆಗಿನ 11 ತಿಂಗಳಲ್ಲೇ ಹೊಸ ಕಂಪನಿಗಳ ನೊಂದಣಿಯಲ್ಲಿ (New company registrations) ಆಗಿರುವ ಎರಡನೇ ಅತಿ ಹೆಚ್ಚಳ ಎನಿಸಿದೆ.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹೊಸ ಬ್ಯುಸಿನೆಸ್ ನೊಂದಣಿಗಳ ಸಂಖ್ಯೆ ಕಡಿಮೆ ಆಗಿದ್ದವು. ಅಕ್ಟೋಬರ್​ನಲ್ಲಿ 15,000, ಹಾಗೂ ನವೆಂಬರ್​ನಲ್ಲಿ ಹತ್ತಿರಹತ್ತಿರ 14,000 ನೊಂದಣಿಗಳಾಗಿವೆ. ಜನವರಿ ತಿಂಗಳಲ್ಲಿ ಹೊಸ ಕಂಪನಿಗಳ ನೊಂದಣಿ 23,280ಕ್ಕೆ ಏರಿದರೆ, ಫೆಬ್ರುವರಿ ಅದು ಇನ್ನಷ್ಟು ಏರಿದೆ.

ಎಕೆಎಂ ಗ್ಲೋಬಲ್ ಎನ್ನುವ ಟ್ಯಾಕ್ಸ್ ಮತ್ತು ಕನ್ಸಲ್ಟಿಂಗ್ ಕಂಪನಿಯ ಮ್ಯಾನೇಜಿಂಗ್ ಪಾರ್ಟ್ನರ್ ಆಗಿರುವ ಅಮಿತ್ ಮಹೇಶ್ವರಿ ಅವರು ಫೆಬ್ರುವರಿಯಲ್ಲಿ ಹೊಸ ಕಂಪನಿ ರಿಜಿಸ್ಟ್ರೇಶನ್ಸ್ ಶೇ. 37ರಷ್ಟು ಹೆಚ್ಚಾಗಿರುವುದು ಬ್ಯುಸಿನೆಸ್ ವಾತಾವರಣ ಉತ್ತಮಗೊಳ್ಳುತ್ತಿರುವುದರ ಮತ್ತು ಆರ್ಥಿಕತೆಯ ಔಪಚಾರಿಕೀಕರಣ (Formalization) ಮುಂದುವರಿಯುತ್ತಿರುವುದರ ಸಂಕೇತವಾಗಿದೆ ಎನ್ನುತ್ತಾರೆ.

ಇದನ್ನೂ ಓದಿ: ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ

ನೊಂದಣಿಯಾಗುವ ಹೊಸ ಕಂಪನಿಗಳಲ್ಲಿ ಹೆಚ್ಚಿನವು ಪ್ರೈವೇಟ್ ಲಿಮಿಟೆಡ್ ಕಂಪನಿಗಳಾಗಿರುವುದು ಗಮನಾರ್ಹ. ಜನವರಿ ತಿಂಗಳಲ್ಲಿ ಶುರುವಾದ ಕಂಪನಿಗಳ ಸರಾಸರಿ ಷೇರು ಬಂಡವಾಳ (Paid up Capital) ಆರು ಲಕ್ಷ ರೂ ಎನ್ನಲಾಗಿದೆ. ಅಂದರೆ, ಸಣ್ಣ ಬ್ಯುಸಿನೆಸ್​ಗಳು ಹೆಚ್ಚಾಗಿ ಶುರುವಾಗುತ್ತಿವೆ.

ಹಾಗೆಯೇ, ಹೊಸ ಕಂಪನಿಗಳು ಸರ್ವಿಸ್ ಸೆಕ್ಟರ್​ನವೇ ಹೆಚ್ಚು. ಅದರಲ್ಲೂ ಐಟಿ ಸರ್ವಿಸಸ್, ಕನ್ಸಲ್ಟೆನ್ಸಿ ಮತ್ತು ಪ್ರೊಫೆಷನಲ್ ಸರ್ವಿಸಸ್ ಕಂಪನಿಗಳು ಹೆಚ್ಚಿವೆ. ಎಐ ಸಂಬಂಧಿತ ಬ್ಯುಸಿನೆಸ್​ಗಳನ್ನು ಮಾಡುವ 300 ಹೊಸ ಕಂಪನಿಗಳು ಸರಾಸರಿಯಾಗಿ ಪ್ರತೀ ತಿಂಗಳು ಶುರುವಾಗುತ್ತಿವೆ ಎನ್ನಲಾಗಿದೆ.

ಇದನ್ನೂ ಓದಿ: ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್​ಗೂ ಸೈ, ಹೆಲ್ತ್​ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?

‘ಸರ್ಕಾರದ ಸ್ಟಾರ್ಟಪ್ ಇಂಡಿಯಾ ಯೋಜನೆಯು ಹೊಸ ಬ್ಯುಸಿನೆಸ್ ಸ್ಥಾಪನೆಗೆ ಒಂದಷ್ಟು ಪುಷ್ಟಿ ಕೊಟ್ಟಿದೆ. ಡಿಪಿಐಐಟಿ ಮಾನ್ಯತೆಯ ಸ್ಟಾರ್ಟಪ್​ಗಳಿಗೆ ಟ್ಯಾಕ್ಸ್ ವಿನಾಯಿತಿ ಕೊಡುವುದು, ದಿವಾಳಿತಡೆ ಕಾನೂನಿನ ಸರಳೀಕರಣ ಸೇರಿದಂತೆ ಒಂದಷ್ಟು ಉತ್ತೇಜನಕಾರಿ ಕ್ರಮಗಳು ಹೊಸ ಬ್ಯುಸಿನೆಸ್​ಗಳಿಗೆ ಅನುಕೂಲ ಮಾಡಿವೆ ಎಂದು ಎಎಂಆರ್​ಜಿ ಗ್ಲೋಬಲ್ ಸಂಸ್ಥೆಯ ಪಾರ್ಟ್ನರ್ ರಜತ್ ಮೋಹನ್ ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ಹಾರ್ಮುಜ್ ಜಲಸಂಧಿ ಮುಚ್ಚಿದ ಪರಿಣಾಮ: ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿದ ಭಾರತದ 37 ಹಡಗು – Kannada News | Iran Closes Strait of Hormuz; 37 Indian Ships Stranded in Persian Gulf with 1109 Crew Onboard

ನವದೆಹಲಿ, ಮಾರ್ಚ್ 4: ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಉಲ್ಬಣಗೊಳ್ಳುತ್ತಿರುವ ನಡುವೆಯೇ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ. ಇರಾನ್​​ನ ಈ ನಿರ್ಧಾರದಿಂದಾಗಿ ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಜಲಸಂಧಿಯಲ್ಲಿ ಭಾರತದ 37 ಹಡಗುಗಳು ಸಿಲುಕಿವೆ. ಈ ಹಡಗುಗಳಲ್ಲಿ 1,109 ಸಿಬ್ಬಂದಿ ಇದ್ದು, ಸುಮಾರು 10,000 ಕೋಟಿ ರೂ. ಮೌಲ್ಯದ ಸರಕು ಸಾಗಾಟವಾಗುತ್ತಿದೆ. ಭಾರತದ ಬಂದರು ಸಚಿವಾಲಯವು ಹಡಗುಗಳಿಗೆ ನಿರಂತರ ರಾಡಾರ್ ಸಂಪರ್ಕ ಕಾಯ್ದುಕೊಳ್ಳಲು ಮತ್ತು ದೆಹಲಿಯೊಂದಿಗೆ ಟೋಲ್ ಫ್ರೀ ಸಹಾಯವಾಣಿ ಮೂಲಕ ಸಂಪರ್ಕದಲ್ಲಿರಲು ಸೂಚನೆ ನೀಡಿದೆ. ಸಚಿವಾಲಯವು ನಾವಿಕರಿಗೆ ತುರ್ತು ಸೌಲಭ್ಯಗಳನ್ನು ಒದಗಿಸಲು ಮತ್ತು ಹಡಗು ಸಾಗಣೆಯನ್ನು ಪುನರಾರಂಭಿಸಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಾಲು ಮಾರುವ ಕೆಲಸ ಕೊಟ್ಟದ್ದಾರೆ, ಮತ್ತೆ ಚುನಾವಣೆಗೆ ನಿಲ್ತೀನೋ ಇಲ್ವೋ ಗೊತ್ತಿಲ್ಲ: ಡಿ.ಕೆ.ಸುರೇಶ್ – Kannada News | Magadi’s Water Lifeline: YG Gudda Project Inaugurated Amidst DK Suresh’s Election Buzz

ರಾಮನಗರ, ಮಾ.4: ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದಲ್ಲಿ ನಡೆದ ವೈ.ಜಿ. ಗುಡ್ಡ ಏತ ನೀರಾವರಿ ಯೋಜನೆಯ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಆಡಿದ ಮಾತುಗಳು ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. “ಮುಂದೆ ಮತ್ತೆ ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ” ಎಂದು ಹೇಳುವ ಮೂಲಕ ಅವರು ಅಚ್ಚರಿ ಮೂಡಿಸಿದ್ದಾರೆ.”ಮುಂದೆ ನಾನು ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ನನಗೆ ಗೊತ್ತಿಲ್ಲ. ಸದ್ಯಕ್ಕೆ ನನ್ನನ್ನು ಬಮೂಲ್ (BAMUL) ಅಧ್ಯಕ್ಷನನ್ನಾಗಿ ಮಾಡಿದ್ದಾರೆ, ಹಾಲು ಮಾರುವ ಕೆಲಸ ಕೊಟ್ಟಿದ್ದಾರೆ, ಅದನ್ನು ಮಾಡುತ್ತಿದ್ದೇನೆ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ. 115 ಕಿ.ಮೀ ದೂರದಿಂದ ನೀರು ತಂದು ಮಾಗಡಿಯ 18 ಕೆರೆಗಳಿಗೆ ಕಾವೇರಿ ನೀರು ತುಂಬಿಸುವ ವೈ.ಜಿ. ಗುಡ್ಡ ಏತ ನೀರಾವರಿ ಯೋಜನೆ ಊಹಿಸಲೂ ಸಾಧ್ಯವಿರಲಿಲ್ಲ. ಆದರೆ ನಾವು ಕೊಟ್ಟ ಮಾತಿನಂತೆ ಅದನ್ನು ಮಾಡಿ ತೋರಿಸುತ್ತಿದ್ದೇವೆ ಎಂದರು. ಬೆಂಗಳೂರು ದಕ್ಷಿಣ ಜಿಲ್ಲೆಯ ನೀರಿನ ಅಭಾವ ನೀಗಿಸಲು ಡಿ.ಕೆ. ಶಿವಕುಮಾರ್ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಸತ್ತೇಗಾಲ ನೀರಾವರಿ ಯೋಜನೆ ಕೂಡ ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.”ನಾವು ಸುಳ್ಳು ಹೇಳಿ, ಕಣ್ಣೀರು ಹಾಕಿಕೊಂಡು ಜನರ ಬಳಿ ಹೋಗುವುದಿಲ್ಲ. ಬದಲಾಗಿ ಕೆಲಸ ಮಾಡಿ ತೋರಿಸುತ್ತೇವೆ. ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವವರು” ಎಂದು ವಿರೋಧ ಪಕ್ಷದವರಿಗೆ ಟಾಂಗ್ ನೀಡಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ಇರಾನ್​ನ ಹೊಸ ಸುಪ್ರೀಂ ನಾಯಕ ಮುಜ್ತಾಬಾ ಖಮೇನಿಯ ಆಸ್ತಿ ಎಷ್ಟು? – Kannada News | Iran’s New Supreme Leader Mojtaba Hosseini Khamenei net worth and Family

ನವದೆಹಲಿ, ಮಾರ್ಚ್ 4: ಇರಾನ್‌ನ ತಜ್ಞರ ಸಭೆಯು ಹತ್ಯೆಗೀಡಾದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ (Ayatollah Ali Khamenei) ಎರಡನೇ ಮಗ 56 ವರ್ಷದ ಮೊಜ್ತಬಾ ಹೊಸೇನಿ ಖಮೇನಿ ಅವರನ್ನು ಇರಾನ್ ದೇಶದ ಹೊಸ ಸರ್ವೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಿದೆ. ಮೊಜ್ತಾಬಾ ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆಂದು ಹೇಳಲಾಗಿದೆ. ಇರಾನ್‌ನ ತಜ್ಞರ ಸಭೆಯು ರೆವಲ್ಯೂಷನರಿ ಗಾರ್ಡ್ಸ್‌ನ ಒತ್ತಡದ ಮೇರೆಗೆ ಮೊಜ್ತಾಬಾ ಅವರನ್ನು ಆಯ್ಕೆ ಮಾಡಿದೆ ಎಂದು ಕೂಡ ಹೇಳಲಾಗುತ್ತಿದೆ.

ಮೊಜ್ತಾಬಾ ಅವರನ್ನು ಸಂಭಾವ್ಯ ಉತ್ತರಾಧಿಕಾರಿ ಎಂದು ಬಹಳ ಹಿಂದಿನಿಂದಲೂ ಪರಿಗಣಿಸಲಾಗಿದ್ದರೂ, ತಜ್ಞರಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಕಳೆದ ವರ್ಷ ಸಿದ್ಧಪಡಿಸಲಾದ ಸಂಭಾವ್ಯ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ತನ್ನ ಮಗನ ಹೆಸರನ್ನು ಸೇರಿಸಿರಲಿಲ್ಲ. ಇರಾನ್‌ನ ಶಿಯಾ ಪಾದ್ರಿಗಳ ಸಂಪ್ರದಾಯದಲ್ಲಿ ತಂದೆಯ ಬಳಿಕ ಮಗ ಉತ್ತರಾಧಿಕಾರಿಯಾಗುವುದನ್ನು ಸಾಮಾನ್ಯವಾಗಿ ನೆಗೆಟಿವ್ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Mojtaba Khamenei: ಇರಾನ್​​ನ ನೂತನ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಖಮೇನಿ ಮಗ ಮೊಜ್ತಬಾ ನೇಮಕ

ಸಾರ್ವಜನಿಕ ಹುದ್ದೆಯನ್ನು ಎಂದಿಗೂ ಹೊಂದಿರದ ಮತ್ತು ಉನ್ನತ ದರ್ಜೆಯ ಧರ್ಮಗುರು ಅಲ್ಲದ ಮೊಜ್ತಬಾ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಇರಾನಿನ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರು IRGCಯೊಂದಿಗಿನ ನಿಕಟ ಸಂಪರ್ಕಗಳಿಗೆ ಹೆಸರುವಾಸಿಯಾಗಿದ್ದಾರೆ.

ಮೊಜ್ತಬಾ ಖಮೇನಿಯವರ ಆಸ್ತಿ ಎಷ್ಟು?:

ಮೊಜ್ತಾಬಾ ಅವರ ನಿಖರವಾದ ಆಸ್ತಿಯ ಬಗ್ಗೆ ತಿಳಿದಿಲ್ಲವಾದರೂ ವಿವಿಧ ವರದಿಗಳು ಅವರು ಬಹು-ಮಿಲಿಯನೇರ್ ಎಂದು ಸೂಚಿಸುತ್ತವೆ. ಅವರು ವಿಶಾಲ ಹೂಡಿಕೆ ಜಾಲವನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅವರು ಸ್ವಿಸ್ ಬ್ಯಾಂಕ್ ಖಾತೆಗಳು ಮತ್ತು 138 ಮಿಲಿಯನ್‌ ಡಾಲರ್​​ಗಿಂತಲೂ ಹೆಚ್ಚು ಮೌಲ್ಯದ ಬ್ರಿಟಿಷ್ ಐಷಾರಾಮಿ ಆಸ್ತಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ:  Iran Army and IRGC: ಇರಾನ್​​ನಲ್ಲಿವೆ ಎರಡೆರಡು ಸೇನೆಗಳು, IRGC ಎಂದರೆ ಯಾರು? ಇರಾನ್ ಸೇನೆಗಿಂತ ಹೇಗೆ ಭಿನ್ನ?

ಮೊಜ್ತಾಬಾ ಅವರು ಹಿರಿಯ ಸಂಪ್ರದಾಯವಾದಿ ರಾಜಕಾರಣಿ ಮತ್ತು ಇರಾನ್​ನ ಮಾಜಿ ಸಂಸತ್ ಅಧ್ಯಕ್ಷ ಘೋಲಮ್-ಅಲಿ ಹದ್ದದ್-ಅಡೆಲ್ ಅವರ ಪುತ್ರಿ ಜಹ್ರಾ ಹದ್ದದ್-ಅಡೆಲ್ ಅವರನ್ನು ವಿವಾಹವಾದರು. ಈ ದಂಪತಿಗಳು 2004ರಲ್ಲಿ ವಿವಾಹವಾದರು. ಇರಾನ್ ಮೇಲೆ ಯುಎಸ್-ಇಸ್ರೇಲ್ ದಾಳಿಯ ಸಮಯದಲ್ಲಿ ಜಹ್ರಾ 2026ರಲ್ಲಿ ಕೊಲ್ಲಲ್ಪಟ್ಟರು. ಅವರಿಗೆ ಮೂರು ಮಕ್ಕಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ: ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳ – Kannada News | DC G.M. Gangadharaswamy’s Home Faces Bomb Threat in Davangere; Police Probe

ದಾವಣಗೆರೆ, ಮಾ.4: ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ ಬಂದ ಕೇವಲ ಒಂದು ತಿಂಗಳ ಅಂತರದಲ್ಲಿ, ಈಗ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸಕ್ಕೂ ಬಾಂಬ್ ಬೆದರಿಕೆ ಬಂದಿರುವುದು ಪೊಲೀಸರನ್ನು ಹೈರಾಣಾಗಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಜಿಲ್ಲಾಧಿಕಾರಿಗಳ ಮನೆಗೆ ಬಿಗಿ ಭದ್ರತೆ ಒದಗಿಸಿದ್ದಾರೆ. ಪೊಲೀಸ್ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬರು, ದಾವಣಗೆರೆ ನಗರದ ರಿಂಗ್ ರೋಡ್‌ನಲ್ಲಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರ ಸರ್ಕಾರಿ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಶ್ವಾನ ದಳ (Dog Squad) ಮತ್ತು ಬಾಂಬ್ ನಿಷ್ಕ್ರಿಯ ದಳ (Bomb Disposal Squad), ನಿವಾಸದ ಮೂಲೆ ಮೂಲೆಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿವೆ. ಸುಮಾರು ಒಂದು ತಿಂಗಳ ಹಿಂದೆ ಇದೇ ರೀತಿ ಜಿಲ್ಲಾಧಿಕಾರಿಗಳ ಕಚೇರಿಗೂ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇದೀಗ ನೇರವಾಗಿ ಅವರ ಮನೆಗೇ ಬೆದರಿಕೆ ಬಂದಿರುವುದು ಗಂಭೀರ ವಿಷಯವಾಗಿ ಪರಿಣಮಿಸಿದೆ. ದಾವಣಗೆರೆ ನಗರ ಪೊಲೀಸರು ಈಗಾಗಲೇ ತಾಂತ್ರಿಕ ತಂಡದ ನೆರವಿನೊಂದಿಗೆ 112 ಕ್ಕೆ ಕರೆ ಮಾಡಿದ ವ್ಯಕ್ತಿಯ ಲೋಕೇಶನ್ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಇದೊಂದು ಹುಸಿ ಬಾಂಬ್ ಕರೆಯೇ ಅಥವಾ ಗಂಭೀರ ಸಂಚೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಹಡಗಿನ ಮೇಲೆ ಸಬ್​ಮರೀನ್ ದಾಳಿ: ಕನಿಷ್ಠ 101 ಮಂದಿ ಕಣ್ಮರೆ – Kannada News | Submarine Attack on Iranian Ship off Sri Lanka Coast; 101 Missing, 78 Injured in Major Maritime Incident

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಹಡಗಿನ ಮೇಲೆ ಸಬ್​ಮರೀನ್ ದಾಳಿImage Credit source: @clashreport

ಕೊಲಂಬೋ, ಮಾರ್ಚ್​ 4: ಇರಾನ್ ಹಾಗೂ ಇಸ್ರೇಲ್ ಸೇನಾ ಸಂಘರ್ಷ (Iran Isreal Conflict) ತೀವ್ರಗೊಂಡಿದ್ದು, ಭಾರತದ ನೆರೆಯ ಶ್ರೀಲಂಕಾ ಕರಾವಳಿ ವರೆಗೂ ಅದರ ಬಿಸಿ ತಟ್ಟತೊಡಗಿದೆ. ಶ್ರೀಲಂಕಾ ಸಮುದ್ರ ಗಡಿಯೊಳಗೆ ಇರಾನ್‌ಗೆ ಸೇರಿದ ಹಡಗೊಂದಕ್ಕೆ ಬುಧವಾರ ಸಬ್‌ಮರೀನ್ ಮೂಲಕ ದಾಳಿ ನಡೆಸಲಾಗಿದೆ ಎಂದು ಅಂತರರಾಷ್ಟ್ರೀಯ ಸುದ್ದಿಸಂಸ್ಥೆ ‘ರಾಯಿಟರ್ಸ್’ ವರದಿ ಮಾಡಿದೆ. ಈ ದಾಳಿಯ ಪರಿಣಾಮ ಕನಿಷ್ಠ 101 ಮಂದಿ ಕಣ್ಮರೆಯಾಗಿದ್ದು, 78 ಮಂದಿ ಗಾಯಗೊಂಡಿದ್ದಾರೆ.

ದಾಳಿಯಿಂದ ಹಡಗಿಗೆ ತೀವ್ರ ಹಾನಿಯಾಗಿ ಮುಳುಗಿದೆ ಎನ್ನಲಾಗಿದೆ. ಇದಕ್ಕೂ ಮೊದಲು, ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿ, ಮುಳುಗುತ್ತಿರುವ ಇರಾನ್ ಹಡಗಿನಲ್ಲಿ ಇದ್ದ 30 ಮಂದಿಯನ್ನು ಶ್ರೀಲಂಕಾ ಸೇನೆ ರಕ್ಷಣೆ ಮಾಡಿದೆ ಎಂದು ತಿಳಿಸಿತ್ತು. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದವರ ಶೋಧ ಕಾರ್ಯ ನಡೆಯುತ್ತಿದೆ. ದಾಳಿ ಹಿನ್ನಲೆ ಮತ್ತು ಕಾರಣಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

(ಸುದ್ದಿ ಅಪ್​ಡೇಟ್ ಆಗುತ್ತಿದೆ)

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 4:13 pm, Wed, 4 March 26

Source link

ಈ ಗಂಡ-ಹೆಂಡತಿ ಜಗಳ ಶಾಲೆ ತನಕ: ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು? – Kannada News | Wife Chennamma Reacts Why conflict With Husband at Komalapura School Koppal

ಕೊಪ್ಪಳ, (ಮಾರ್ಚ್​​ 04): ಗಂಡ ಹೆಂಡ್ತಿ  (Wife And Husband) ಜಗಳ ಮನೆಯಲ್ಲಿ ಉಂಡು ಮಲಗುವ ತನಕ ಅಂತಾರೆ. ಆದ್ರೆ, ಈ ದಂಪತಿ ಗಲಾಟೆ ಶಾಲೆ ತನಕ ಬಂದಿದೆ. ಹೌದು… ಪ್ರೌಢಶಾಲೆಯ ಮುಖ್ಯ ಶಿಕ್ಷಕನ ಎರಡನೇ ಪತ್ನಿ ಶಾಲೆಗೆ ಬಂದು ದೊಡ್ಡ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಕೊಪ್ಪಳ (Koppal) ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ನಡೆದಿದೆ.ಮುಖ್ಯ ಶಿಕ್ಷಕ ಸಿದ್ದೇಶ ಶೆಟ್ಟರ್ ಮನೆಗೆ ಬರುತ್ತಿಲ್ಲ ಎಂದು ಆರೋಪಿಸಿ, ಶಾಲೆ ಆವರಣದಲ್ಲಿಯೇ ಎರಡನೇ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲ ಪತ್ನಿ ಇದ್ದರೂ ಸಹ ಶಿಕ್ಷಕ ಸಿದ್ದೇಶ, ಚೆನ್ನಮ್ಮಳನ್ನ ವಿವಾಹವಾಗಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆಯೇ ಸಿದ್ದೇಶ ಹಾಗೂ ಚೆನ್ನಮ್ಮ ಮದುವೆಯಾಗಿದ್ದಾರೆ. ಆದ್ರೆ, ಪತಿ ಸಿದ್ದೇಶ ಮನೆಗೆ ಬರುತ್ತಿಲ್ಲ ಎಂದು ಪತ್ನಿ ಚೆನ್ನಮ್ಮ ಕೋಪಗೊಂಡಿದ್ದು, ಸಿದ್ದೇಶ ಇರುವ ಶಾಲೆಗೆ ಬಂದು ಗಲಾಟೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ರೆ, ಅವರು ಟೀಚರ್ ಆಗಿದ್ರೆ ನನಗೆ ಗಂಡ. ಮನೆಗೆ ಬರುತ್ತಿಲ್ಲ. ಅದಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ.

ಇದನ್ನೂ ನೋಡಿ: ಪತಿ ಮನೆಗೆ ಬಾರದ್ದಕ್ಕೆ ಸಿಟ್ಟು: ಶಾಲೆಗೆ ಬಂದು ಮುಖ್ಯ ಶಿಕ್ಷಕನ 2ನೇ ಪತ್ನಿಯ ಹೈಡ್ರಾಮಾ

Source link

ICC T20 Rankings: 25 ಸ್ಥಾನ ಮೇಲೇರಿದ ಸಂಜು ಸ್ಯಾಮ್ಸನ್! ಜಾರಿದ ಸೂರ್ಯ – Kannada News | ICC T20 Rankings: Indian Stars Soar, Sanju Samson Jumps 25 Spots After WC Heroics

ತಿಲಕ್ ವರ್ಮಾ ಕೂಡ ಒಂದು ಸ್ಥಾನ ಮೇಲಕ್ಕೆ ಜಿಗಿದು ಏಳನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಬಂದಿದ್ದಾರೆ. ಆದಾಗ್ಯೂ, ನಾಯಕ ಸೂರ್ಯಕುಮಾರ್ ಯಾದವ್ ಹಿನ್ನಡೆ ಅನುಭವಿಸಿದ್ದು, ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಒಳ್ಳೆಯ ಸುದ್ದಿ ಏನೆಂದರೆ ಕಳಪೆ ಪ್ರದರ್ಶನದ ಹೊರತಾಗಿಯೂ ಅಭಿಷೇಕ್ ಶರ್ಮಾ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿ ಉಳಿದಿದ್ದು, ಅಗ್ರ ಸ್ಥಾನದಲ್ಲಿ ತಮ್ಮ ಹಿಡಿತವನ್ನು ಕಾಯ್ದುಕೊಂಡಿದ್ದಾರೆ.

Source link

ಮಾರ್ಚ್ 19ಕ್ಕೆ ‘ಟಾಕ್ಸಿಕ್’ ಬದಲು ರಿಲೀಸ್ ಆಗಲಿದೆ ‘ಲವ್ ಮಾಕ್ಟೇಲ್ 3’ ಸಿನಿಮಾ – Kannada News | Love Mocktail 3 movie will release on March 19 after Toxic film postponed

ಮಾರ್ಚ್ 19ರಂದು ‘ಟಾಕ್ಸಿಕ್’ (Toxic) ಸಿನಿಮಾ ನೋಡಲು ಸಿನಿಪ್ರಿಯರು ಕಾದಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಈಗ ‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೇ, ಆ ದಿನಾಂಕದಲ್ಲಿ ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾವನ್ನು ಬಿಡುಗಡೆ ಮಾಡಲು ಡಾರ್ಲಿಂಗ್ ಕೃಷ್ಣ ಸಜ್ಜಾಗಿದ್ದಾರೆ. ಆ ಮೂಲಕ ಅವರು ಅಭಿಮಾನಿಗಳಿಗೆ ಗುಡ್​ ನ್ಯೂಸ್ ನೀಡಿದ್ದಾರೆ.

ಯುಗಾದಿಯ ರಜೆ, ಅದರ ಬೆನ್ನಲ್ಲಿಯೇ ಶುರುವಾಗುವ ವೀಕೆಂಡ್ ಸೇರಿದಂತೆ ಮಾರ್ಚ್ 19 ಎಲ್ಲ ರೀತಿಯಿಂದಲೂ ಚಿತ್ರತಂಡಗಳಿಗೆ ಸೂಕ್ತವಾದ ದಿನಾಂಕ. ಆ ದಿನಾಂಕದಂದು ‘ಟಾಕ್ಸಿಕ್’ ಬಿಡುಗಡೆ ಆಗದಿದ್ದರೂ, ಅದೇ ದಿನ ‘ಲವ್ ಮಾಕ್ಟೇಲ್ 3’ ಚಿತ್ರವನ್ನು ಬಿಡುಗಡೆ ಮಾಡಲು ‘ಕೆವಿಎನ್’ ಸಂಸ್ಥೆ ತೀರ್ಮಾನಿಸಿದೆ. ಈ ಸಿನಿಮಾವನ್ನು ಕೆವಿಎನ್ ಸಂಸ್ಥೆ ವಿತರಿಸುತ್ತಿದೆ.

‘ಲವ್ ಮಾಕ್ಟೇಲ್ 3’ ಸಿನಿಮಾಗೆ ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿದ್ದಾರೆ. ‘ಟಾಕ್ಸಿಕ್’ ಬಿಡುಗಡೆ ದಿನಾಂಕ ಮುಂದೆ ಹೋಗುತ್ತಲೇ ‘ಲವ್ ಮಾಕ್ಟೇಲ್ 3’ ಪಾಲಿಗೆ ಅದೃಷ್ಟ ಖುಲಾಯಿಸಿದೆ. ಈ ಚಿತ್ರವನ್ನು ಏಪ್ರಿಲ್ 10ರಂದು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ, ಯುಗಾದಿ ರಜೆಯಂದೇ ‘ಲವ್ ಮಾಕ್ಟೇಲ್ 3’ ತೆರೆಕಾಣಿಸಲು ಚಿತ್ರತಂಡ ತೀರ್ಮಾನಿಸಿದೆ.

ಮಾರ್ಚ್ 19ರ ಸಮಯದಲ್ಲಿ ಯುಗಾದಿ, ರಂಜಾನ್ ಮುಂತಾದ ಹಬ್ಬಗಳಿಗೆ ಸಾಲು ಸಾಲು ರಜೆಗಳು ಇರಲಿವೆ. ಸಿನಿಮಾದ ಬಾಕ್ಸ್ ಆಫೀಸ್​​ ಗಳಿಕೆಗೆ ಅದು ಪ್ರಶಸ್ತವಾದ ಸಮಯ. ಅಂತಹ ಲಾಭದಾಯಕ ದಿನಾಂಕವು ‘ಲವ್ ಮಾಕ್ಟೇಲ್ 3’ ಸಿನಿಮಾಗೆ ಸಿಕ್ಕಿದೆ. ‘ಕ್ರಿಸ್‌ಮಿ’ ಬ್ಯಾನರ್ ಮೂಲಕ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಲವ್ ಮಾಕ್ಟೇಲ್ 3: ಹೊಸ ಹಾಡು ರಿಲೀಸ್

‘ಲವ್ ಮಾಕ್ಟೇಲ್’ ಮತ್ತು ‘ಲವ್ ಮಾಕ್ಟೇಲ್ 2’ ಹಿಟ್ ಆಗಿದ್ದರಿಂದ ‘ಲವ್ ಮಾಕ್ಟೇಲ್ 3’ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರೇಚಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆಯುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link