Category Archives: Blog

Your blog category

ರಾತ್ರಿ ಈ ಆಹಾರಗಳ ಸೇವನೆ ಮಾಡುವ ಅಭ್ಯಾಸವಿದ್ಯಾ? ಹಾಗಿದ್ರೆ ನೀವು ವಿಷ ಸೇವಿಸುತ್ತಿದ್ದೀರಿ ಎಂದರ್ಥ! – Kannada News | Nighttime Eating: What Not to Eat

ರಾತ್ರಿಯ ನಿದ್ದೆ (Sleep) ಮನುಷ್ಯನಿಗೆ ತುಂಬಾ ಮುಖ್ಯ. ಈ ಸಮಯದಲ್ಲಿ ದೇಹಕ್ಕೆ ವಿಶ್ರಾಂತಿ ಬೇಕಾಗಿರುತ್ತದೆ. ಹಾಗಾಗಿ ರಾತ್ರಿ ಸೇವನೆ ಮಾಡುವ ಆಹಾರ ಎಲ್ಲಾ ರೀತಿಯಿಂದಲೂ ಬಹಳ ಮುಖ್ಯವಾಗಿರುತ್ತದೆ. ಸೂರ್ಯ ಮುಳುಗಿದ ನಂತರ ನಮ್ಮ ಜೀರ್ಣಕ್ರಿಯೆ ನಿಧಾನಗೊಳ್ಳುವುದರಿಂದ ರಾತ್ರಿ ಯಾವ ಆಹಾರವನ್ನು, ಎಷ್ಟು ಪ್ರಮಾಣದಲ್ಲಿ ಸೇವಿಸುತ್ತೇವೆ ಎಂಬುದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ರಾತ್ರಿ ಸರಿಯಾದ ಆಹಾರ ಪದ್ಧತಿ ಪಾಲಿಸದಿದ್ದರೆ ದೇಹಕ್ಕೆ ಸರಿಯಾಗಿ ವಿಶ್ರಾಂತಿ ಸಿಗುವುದಿಲ್ಲ. ಹೊಟ್ಟೆ ತುಂಬಿರುವ ಅನುಭವ, ಗ್ಯಾಸ್ಟ್ರಿಕ್, ಆಸಿಡಿಟಿ, ಎದೆ ಉರಿ, ನಿದ್ರೆಯಲ್ಲಿರುವಾಗ ಮಧ್ಯೆ ಮಧ್ಯೆ ಎಚ್ಚರವಾಗುವುದು ಅಥವಾ ಬೆಳಿಗ್ಗೆ ಎದ್ದ ತಕ್ಷಣ ದಣಿವು ಕಾಣಿಸಿಕೊಳ್ಳುವುದೆಲ್ಲವೂ ಸೇವಿಸುತ್ತಿರುವ ಆಹಾರ ಸರಿಯಾಗಿಲ್ಲ ಎಂಬುದರ ಲಕ್ಷಣಗಳಾಗಿವೆ. ಮತ್ತೆ ಕೆಲವರಿಗೆ ಬೆವರು, ಬೆಳಿಗ್ಗೆ ತಲೆ ಭಾರವಾಗಿರುವುದು, ತೂಕ ಹೆಚ್ಚಳ, ಮಲಬದ್ಧತೆ ಹಾಗೂ ದಿನವಿಡೀ ಸುಸ್ತು ಕಾಣಿಸಿಕೊಳ್ಳಬಹುದು. ಇವೆಲ್ಲವೂ ರಾತ್ರಿ ಊಟದ ಸಮಯ, ಅಭ್ಯಾಸಗಳು ಸರಿಯಾಗಿಲ್ಲ ಎಂಬುದನ್ನು ಸೂಚಿಸುತ್ತವೆ. ಹಾಗಾಗಿ ರಾತ್ರಿ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ. ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಈ ಸ್ಟೋರಿಯಲ್ಲಿ ತಿಳಿಸಿರುವ ಸಲಹೆಗಳನ್ನು ತಪ್ಪದೆ ಪಾಲಿಸಿ.

ರಾತ್ರಿ ಯಾವ ಆಹಾರಗಳನ್ನು ತಿನ್ನಬಾರದು?

  • ರಾತ್ರಿ ಜೀರ್ಣಿಸಿಕೊಳ್ಳಲು ಕಷ್ಟಕರವಾದ ಮತ್ತು ಹೊಟ್ಟೆಗೆ ಒತ್ತಡ ನೀಡುವ ಆಹಾರಗಳ ಸೇವನೆ ಮಾಡಬಾರದು.
  • ಎಣ್ಣೆಯಲ್ಲಿ ಕರಿದ ಮತ್ತು ಅತಿ ಮಸಾಲೆಯುಕ್ತ ಆಹಾರಗಳು ಜೀರ್ಣಕ್ರಿಯೆ ಹದಗೆಡಿಸಿ ಆಸಿಡಿಟಿ ಹೆಚ್ಚಿಸಬಹುದು.
  • ಹೆಚ್ಚು ಸಿಹಿ ಪದಾರ್ಥಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಸ್ಥಿರಗೊಳಿಸಿ ನಿದ್ರೆಗೆ ಅಡ್ಡಿಪಡಿಸಬಹುದು.
  • ಹೆಚ್ಚು ಉಪ್ಪು ಇರುವ ಆಹಾರಗಳು ದೇಹದಲ್ಲಿ ನೀರನ್ನು ಹಿಡಿದುಕೊಳ್ಳುವ ಕಾರಣ ಊತ ಮತ್ತು ಅಸ್ವಸ್ಥತೆ ಉಂಟಾಗಬಹುದು.
  • ಪ್ರೊಸೆಸ್ಡ್ ಮತ್ತು ಜಂಕ್ ಫುಡ್‌ಗಳಲ್ಲಿ ಇರುವ ಕೊಬ್ಬು ಜೀರ್ಣಕ್ರಿಯೆಯನ್ನು ಮತ್ತಷ್ಟು ನಿಧಾನಗೊಳಿಸುತ್ತದೆ.
  • ರಾತ್ರಿ ಚಹಾ, ಕಾಫಿ ಅಥವಾ ಕೆಫೀನ್ ಇರುವ ಪಾನೀಯಗಳನ್ನು ಸೇವಿಸಬಾರದು.
  • ತುಂಬಾ ತಂಪಾದ ಅಥವಾ ಹಾಲು ಉತ್ಪನ್ನಗಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗೆ ಕಾರಣವಾಗಬಹುದು.

ರಾತ್ರಿ ಸಮಯದಲ್ಲಿ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು?

  • ರಾತ್ರಿ ಸಮಯದಲ್ಲಿ ಹಗುರ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸುವುದು ಉತ್ತಮ.
  • ಕಡಿಮೆ ಪ್ರಮಾಣದಲ್ಲಿ ಬೇಯಿಸಿದ ತರಕಾರಿಗಳು
  • ದಾಲ್ (ಬೇಳೆ)
  • ರೊಟ್ಟಿ ಅಥವಾ ಸ್ವಲ್ಪ ಅನ್ನ
  • ಖಿಚ್ಡಿ ಅಥವಾ ಸೂಪ್ನಿ
  • ಯಮಿತ ಪ್ರಮಾಣದಲ್ಲಿ ಮೊಸರು ಅಥವಾ ಮಜ್ಜಿಗೆ.

ಇದನ್ನೂ ಓದಿ: ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕು ಅಂದ್ರೆ ಮಲಗುವ ಮೊದಲು ಈ ಆಹಾರಗಳನ್ನು ಸೇವನೆ ಮಾಡಬೇಡಿ

ಉತ್ತಮ ಆರೋಗ್ಯಕ್ಕಾಗಿ ಇನ್ನಷ್ಟು ಸಲಹೆಗಳು:

  • ಮಲಗುವ ಸಮಯಕ್ಕೆ ಕನಿಷ್ಠ ಎರಡು ರಿಂದ ಮೂರು ಗಂಟೆಗಳ ಮೊದಲು ರಾತ್ರಿ ಊಟ ಮಾಡಬೇಕು.
  • ಊಟದ ತಕ್ಷಣ ಮಲಗುವುದನ್ನು ತಪ್ಪಿಸಿ, ಸ್ವಲ್ಪ ಹೊತ್ತು ವಾಕಿಂಗ್ ಮಾಡಿ.
  • ಟಿವಿ ಅಥವಾ ಮೊಬೈಲ್ ನೋಡುತ್ತಾ ಊಟ ಮಾಡುವುದನ್ನು ಬಿಡಿ, ಇದರಿಂದ ಹೊಟ್ಟೆ ತುಂಬಿದಾಗ ತಿಳಿಯುತ್ತದೆ.
  • ರಾತ್ರಿ ಹೊತ್ತು ಹೆಚ್ಚು ನೀರು ಅಥವಾ ತುಂಬಾ ತಣ್ಣಗಿರುವ ನೀರನ್ನು ಕುಡಿಯಬಾರದು.
  • ಬೆಳಿಗ್ಗೆ ಏಳುವ ಮತ್ತು ರಾತ್ರಿ ನಿದ್ರೆ ಮಾಡುವ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು.
  • ಒತ್ತಡವನ್ನು ಕಡಿಮೆ ಮಾಡಿಕೊಂಡು ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DSSSB Recruitment 2026: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು! – Kannada News | DSSSB Recruitment 2026: Apply for Delhi Govt Jobs; 10th Pass to Graduates Eligible

ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂಬ ಹಂಬಲ ಹೊತ್ತಿರುವ ಯುವಜನತೆಗೆ ಈಗ ಸುಸಮಯ ಒದಗಿಬಂದಿದೆ. ದೆಹಲಿ ಅಧೀನ ಸೇವೆಗಳ ಆಯ್ಕೆ ಮಂಡಳಿ (DSSSB) ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ, 10ನೇ ತರಗತಿಯಿಂದ ಹಿಡಿದು ವೃತ್ತಿಪರ ಪದವೀಧರರವರೆಗೆ ಎಲ್ಲರಿಗೂ ಅವಕಾಶ ಕಲ್ಪಿಸುತ್ತಿದೆ.

ವಿವಿಧ ಹುದ್ದೆಗಳಿಗೆ ವಿಭಿನ್ನ ಅರ್ಹತೆಗಳು:

ಈ ನೇಮಕಾತಿಗೆ ಶೈಕ್ಷಣಿಕ ಅರ್ಹತೆಗಳನ್ನು ಹುದ್ದೆಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಕೆಲವು ಹುದ್ದೆಗಳಿಗೆ, 10 ಅಥವಾ 12 ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ, ಹಲವರಿಗೆ, ಐಟಿಐ, ಪದವಿ ಅಥವಾ ವೃತ್ತಿಪರ ಪದವಿ ಅಗತ್ಯವಿದೆ. ಉದಾಹರಣೆಗೆ, ಪುಸ್ತಕ ಬೈಂಡರ್‌ಗೆ ಐಟಿಐ, ಜೂನಿಯರ್ ಲ್ಯಾಬ್ ಅಸಿಸ್ಟೆಂಟ್‌ಗೆ 12 ನೇ ತರಗತಿ ಅಥವಾ ಪದವಿ, ಜೂನಿಯರ್ ಕಾನೂನು ಅಧಿಕಾರಿಗೆ ಕಾನೂನು ಪದವಿ ಮತ್ತು ವರದಿಗಾರರಿಗೆ ಪದವಿ ಅಗತ್ಯವಿದೆ. ತಾಂತ್ರಿಕ ಹುದ್ದೆಗಳಿಗೆ, ಬಿಇ, ಬಿಟೆಕ್ ಅಥವಾ ಸಂಬಂಧಿತ ವಿಷಯದಲ್ಲಿ ಪದವಿ ಅಗತ್ಯವಿದೆ.

ವಯಸ್ಸಿನ ಮಿತಿ ಮತ್ತು ವೇತನ:

ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ರಿಂದ 21 ವರ್ಷಗಳು ಮತ್ತು ಗರಿಷ್ಠ ವಯಸ್ಸು 30 ರಿಂದ 35 ವರ್ಷಗಳು, ಇದು ಹುದ್ದೆಗೆ ಅನುಗುಣವಾಗಿ ಬದಲಾಗುತ್ತದೆ. ಆಯ್ಕೆಯು ಲಿಖಿತ ಪರೀಕ್ಷೆಯನ್ನು ಆಧರಿಸಿರುತ್ತದೆ, ಇದರಲ್ಲಿ ಟೈಯರ್-1 ಮತ್ತು ಟೈಯರ್-2 ಪರೀಕ್ಷೆಗಳು ಒಳಗೊಂಡಿರಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ 18,000 ರಿಂದ 1,42,400 ರೂ. ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​; ನಿಮ್ಮದೇ ಜಿಲ್ಲೆಯ ಆಧಾರ್ ಕೇಂದ್ರಗಳಲ್ಲಿ ಉದ್ಯೋಗವಕಾಶ

ಅರ್ಜಿ ಶುಲ್ಕ ಮತ್ತು ಫಾರ್ಮ್ ಭರ್ತಿ ಮಾಡುವ ವಿಧಾನ:

ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳು 100ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಆದರೆ ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಬೇಕು. ಶುಲ್ಕ ಪಾವತಿಸಿದ ಬಳಿಕ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಮುದ್ರಣ (Print-out) ತೆಗೆದಿಟ್ಟುಕೊಳ್ಳುವುದು ಮುಂದಿನ ಪ್ರಕ್ರಿಯೆಗಳಿಗೆ ಸಹಕಾರಿಯಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ – Kannada News | Phone Tapping Row: Union Minister Pralhad joshi Mocks about Siddaramaiah And DK Shivakumar relationship

ಹುಬ್ಬಳ್ಳಿ, (ಮಾರ್ಚ್ 04): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಫೋನ್ ಟ್ಯಾಪಿಂಗ್ ಕದನ ಶುರುವಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮೊದಲು ಫೋನ್ ಟ್ಯಾಪಿಂಗ್ ಅರೋಪ ಮಾಡಿದ್ದು, ಇದಕ್ಕೆ ಸಿಎಂ ಪ್ರತಿಕ್ರಿಯಿಸಿ ನಮ್ಮದು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಹಾಲು-ಜೇನಿನ ಸಂಬಂಧವಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು. ಇದೀಗ ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಅವರು ನಾವು ಮಾಡ್ತಿಲ್ಲ ಎಂದು ಗೃಹ ಸಚಿವರು ನಿರಾಕರಿಸಿಲ್ಲ. ಯಾರದ್ದು ಮಾಡ್ತಿದ್ದಾರೆ ಪೋನ್ ಕದ್ದಾಲಿಕೆಯನ್ನು ವಿರೋಧ ಪಕ್ಷದವರದು ಮಾಡ್ತಿದ್ದಾರಾ? ಅಥವಾ ಡಿ ಕೆ‌ ಶಿವಕುಮಾರ್ ಅವರದು ಮಾಡ್ತಿದ್ದಾರೆ? ಈ ಬಗ್ಗೆ ಮೊದಲು ನ್ಯಾಯಾಂಗ ತನಿಖೆಯಾಗಲಿ ಎಂದಿದ್ದಾರೆ. ಅಲ್ಲದೇ ನಿಮ್ಮದು ಹಾಲು ಜೇನು ಅಲ್ಲಆಲ್ಕೋಹಾಲ್ ಜೇನು ಇರಬೇಕೆಂದು ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

Source link

ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು! ವಿಡಿಯೋ ನೋಡಿ – Kannada News | CRPF 38 Battalion Celebrates Holi 2026 with Enthusiasm in Poonch, Jammu and Kashmir, Video goes viral

ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ CRPF 38ನೇ ಬೆಟಾಲಿಯನ್ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದೆ. ಕರ್ತವ್ಯ ನಿರ್ವಹಿಸುತ್ತಿರುವ ಮಧ್ಯೆಯೇ ಯೋಧರು ಬಣ್ಣ ಹಚ್ಚಿಕೊಂಡು ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಈ ಕುರಿತು CRPF 38ನೇ ಬೆಟಾಲಿಯನ್ ಇನ್ಸ್‌ಪೆಕ್ಟರ್ ರಾಜ್ ಸಿಂಗ್ ಮಾತನಾಡಿ, ‘ನಾವು ಇಲ್ಲಿ ನಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದೇವೆ. ಜತೆಗೆ ಹೋಳಿ ಹಬ್ಬವನ್ನು ಸಹ ಆಚರಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ. ಭದ್ರತಾ ಕರ್ತವ್ಯಗಳ ನಡುವೆಯೂ ಯೋಧರು ಹಬ್ಬದ ಸಂಭ್ರಮದಿಂದ ಕುಣಿದು ಕುಪ್ಪಳಿಸಿದ ವಿಡಿಯೋ ಗಮನ ಸೆಳೆದಿದೆ.

ವಿಡಿಯೋ ಕೃಪೆ: ಎಎನ್​ಐ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಯುವತಿಗೆ MBBS ಸೀಟ್ ಕೊಡಿಸುವುದಾಗಿ ನಂಬಿಸಿ 25 ಲಕ್ಷ ರೂ. ಮಕ್ಮಲ್​​ ಟೋಪಿ: ನಾಲ್ವರ ವಿರುದ್ಧ ದೂರು ದಾಖಲು – Kannada News | Bengaluru MBBS Seat Scam: 25 Lakh Fraud, FIR Filed Against Four Persons

ಬೆಂಗಳೂರು, ಮಾರ್ಚ್​​ 04: ಯುವತಿಗೆ MBBS ಸೀಟ್ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 25 ಲಕ್ಷ ರೂಪಾಯಿ ಹಣವನ್ನು ವಂಚಿಸಿರುವ ಆರೋಪ ಬೆಂಗಳೂರಲ್ಲಿ ಕೇಳಿಬಂದಿದೆ. ಆಯೇಷಾ ಖಥುಮ್​ ಎಂಬಾಕೆಗೆ ಸೀಟ್ ಕೊಡಿಸುವುದಾಗಿ ನಂಬಿಸಿದ್ದ ಡಾ.ಕೆ.ಪಿ. ಶರತ್ ಸೇರಿದಂತೆ ನಾಲ್ವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಶಂಶೇರ್ ಬೇಗ್, ಸೈಯದ್ ತಬ್ರೇಜ್ ಮೂಲಕ ಸಂತ್ರಸ್ತ ಯುವತಿಗೆ ಡಾ.ಶರತ್ ಪರಿಚಯವಾಗಿದ್ದು, ಕಿಮ್ಸ್ ಕಾಲೇಜಿನಲ್ಲಿ ಸೀಟ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳ ವಿರುದ್ಧ BNS 318(4), 318(2) ಸೇರಿ ಒಟ್ಟು 8 ಸೆಕ್ಷನ್​​ಗಳ ಅಡಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಇರೋದೇನು?

ವಂಚನೆ ಬಗ್ಗೆ ಆಯೇಷಾ ಖಥುಮ್​ ಅವರ ತಂದೆ ಲಾಲ್ ಬಾಬು ಅವರ ದೂರಿನಂತೆ ಆರೋಪಿಗಳ ವಿರುದ್ಧ ಕೇಸ್​​ ದಾಖಲಾಗಿದೆ. ದ್ವಿತೀಯ ಪಿಯುಸಿ ಮತ್ತು NLT ಪರೀಕ್ಷೆಗಳನ್ನು ಬರೆದಿದ್ದ ಯುವತಿ MBBSಗೆ ಸೇರಿಕೊಳ್ಳುವ ಬಗ್ಗೆ ಯೋಚಿಸಿ, ಒಳ್ಳೆಯ ಕಾಲೇಜಿನಲ್ಲಿ ಸೀಟ್​​ಗಾಗಿ ಪ್ರಯತ್ನಿಸುತ್ತಿದ್ದರು. ಈ ನಡುವೆ ಪರಿಚಯದ ಸೈಯದ್‌ ತಬ್ರೇಜ್ ಮೂಲಕ ಶಂಶೇರ್ ಬೇಗ್ ಎಂಬಾತನ ಪರಿಚಯವಾಗಿತ್ತು. ಈತ ತನಗೆ ಕಿಮ್ಸ್‌ ಮೆಡಿಕಲ್ ಕಾಲೇಜಿನ ಪ್ರೆಸಿಡೆಂಟ್ ಪರಿಚಯವಿರುವುದಾಗಿ ಹೇಳಿ ಡಾ. ಶರತ್ ಕೆ.ಪಿ. ಎಂಬುವವರನ್ನು ಪರಿಚಯಿಸಿದ್ದ. ಅದರಂತೆ ಬನಶಂಕರಿ 2ನೇ ಹಂತದಲ್ಲಿನ ಕಿಮ್ಸ್‌ ಮೆಡಿಕಲ್ ಕಾಲೇಜಿನಲ್ಲಿ ಶರತ್​​ನ ಭೇಟಿಯಾಗಿದ್ದರು. ಈ ವೇಳೆ ಇದೇ ಕಾಲೇಜಿನಲ್ಲಿ ಆಯೇಷಾ ಖಥುಮ್​​ಗೆ ಸೀಟ್​​ ಕೊಡಿಸೋದಾಗಿ ನಂಬಿಸಿ ಶೈಕ್ಷಣಿಕ ದಾಖಲೆಗಳನ್ನು ಪಡೆಯಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ವಾಣಿಜ್ಯ, ಕೈಗಾರಿಕಾ ವಲಯಕ್ಕೆ ಶಾಕ್ ಕೊಟ್ಟ ಕೆಇಆರ್​ಸಿ; ವಿರೋಧದ ನಡುವೆ ವಿದ್ಯುತ್​​ ದರ ಏರಿಕೆ

ನಂತರ ಹೋಟೆಲ್​​ ಒಂದರಲ್ಲಿ ಭೇಟಿಯಾಗಿದ್ದ ಆರೋಪಿಗಳು ಡೊನೇಶನ್​​ ಆಗಿ 25 ಲಕ್ಷ ಹಣ ಕೊಟ್ಟರೆ ಸೀಟ್​​ ಪಕ್ಕಾ ಎಂದಿದ್ದರು. ಇವರ ಮಾತು ನಂಬಿ ಯುವತಿ ಕಡೆಯವರು ಹಂತ ಹಂತವಾಗಿ ಯುಪಿಐ, ಚೆಕ್​​ ರೂಪದಲ್ಲಿ 10 ಲಕ್ಷ ರೂ. ಹಣ ನೀಡಿದ್ದಾರೆ. ಬಳಿಕ ಆರೋಪಿಗಳ ಡಿಮ್ಯಾಂಡ್​​ ಹಿನ್ನೆಲೆ ಉಳಿದವ 15 ಲಕ್ಷವನ್ನ ನಗದು ರೂಪದಲ್ಲಿ ನೀಡಲಾಗಿದೆ. ಪೂರ್ತಿ ಹಣ ಕೈಸೇರಿದ ಮೇಲೆ ಆರೋಪಿಗಳು ತಮ್ಮ ಅಸಲಿ ರೂಪ ತೋರಿಸಿದ್ದು, ಮೆಡಿಕಲ್ ಸೀಟ್ ಕೊಡಿಸದೇ ವಂಚಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಡಾ. ಕೆ.ಪಿ ಶರತ್ ಎಂಬ ವ್ಯಕ್ತಿ ಕಿಮ್ಸ್​​ ಕಾಲೇಜಿನ ಪ್ರೆಸಿಡೆಂಟ್​​ ಅಲ್ಲ ಎಂಮಬ ವಿಚಾರ ಬಯಲಾಗಿದೆ. ಅಂತಿಮವಾಗಿ ತಾವು ಮೋಸ ಹೋಗಿದ್ದು ಅರಿತ ಯುವತಿ ಕಡೆಯವರು ಈ ಬಗ್ಗೆ ಪೊಲೀಸರ ಮೊರೆ ಹೋಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಕ್ಯಾನ್ಸರ್ ಸೂಚಕವೇ? ಯಾವಾಗ ವೈದ್ಯರ ಸಲಹೆ ಪಡೆಯಬೇಕು – Kannada News | Blood in Urine? When to Worry About Kidney Cancer

ಮೂತ್ರದಲ್ಲಿ (Urine) ರಕ್ತ ಕಾಣಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಇದಕ್ಕೆ ಯೂರಿನರಿ ಇನ್ಫೆಕ್ಷನ್, ಕಿಡ್ನಿ ಸ್ಟೋನ್ ಅಥವಾ ಕೆಲವು ಔಷಧಿಗಳ ಸೇವನೆಯಿಂದ ಉಂಟಾಗುವ ಅಡ್ಡಪರಿಣಾಮಗಳು ಕೂಡ ಕಾರಣವಾಗಿರಬಹುದು. ಕೆಲವೊಮ್ಮೆ ಪ್ರೋಸ್ಟೇಟ್ ಸಮಸ್ಯೆಯೂ ಈ ಸಮಸ್ಯೆಗೆ ಕಾರಣವಾಗಬಹುದು. ಆದರೆ ಪ್ರತಿಯೊಂದು ಸಂದರ್ಭದಲ್ಲೂ ಇದು ಕ್ಯಾನ್ಸರ್‌ನ ಲಕ್ಷಣವೆಂದು ಅರ್ಥೈಸುವುದು ತಪ್ಪು. ಹಾಗಂತ ಈ ರೀತಿಯ ಈ ಲಕ್ಷಣವನ್ನು ನಿರ್ಲಕ್ಷ್ಯ ಮಾಡುವುದು ಕೂಡ ಬಹಳ ಅಪಾಯಕಾರಿ. ಒಂದು ಅಥವಾ ಎರಡು ಬಾರಿ ಈ ಸಮಸ್ಯೆ ಕಾಣಿಸಿಕೊಂಡರೆ ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ ಈ ಸಮಸ್ಯೆ ಮುಂದುವರಿದರೆ ಅಥವಾ ಪದೇ ಪದೇ ಈ ರೀತಿ ಆಗುತ್ತಿದ್ದರೆ ಅಸಡ್ಡೆ ಮಾಡಬಾರದು. ಇದೆಲ್ಲದರ ಜೊತೆಗೆ ಈ ರೀತಿಯ ಸಮಸ್ಯೆ ಯಾಕಾಗಿ ಕಂಡುಬರುತ್ತದೆ, ಲಕ್ಷಣಗಳು ಹೇಗಿರುತ್ತವೆ, ಇದನ್ನು ತಡೆಗಟ್ಟುವುದು ಹೇಗೆ ಎಂಬುದರ ಬಗ್ಗೆ ತಿಳಿಯುವುದು ಅತ್ಯಗತ್ಯ.

ದೆಹಲಿ ನಗರದ ಸಫ್ದರ್‌ಜಂಗ್ ಆಸ್ಪತ್ರೆಯ ಸೀನಿಯರ್ ರೆಸಿಡೆಂಟ್ ವೈದ್ಯರಾದ ಡಾ. ದೀಪಕ್ ಕುಮಾರ್ ಸುಮನ್ ಹೇಳುವಂತೆ, ಜನರು ಮೂತ್ರ ಸಂಬಂಧಿತ ಸಮಸ್ಯೆಗಳನ್ನು ಲಘುವಾಗಿ ತೆಗದುಕೊಳ್ಳುತ್ತಾರೆ ಮೂತ್ರ ಮಾಡುವಾಗ ದುರ್ವಾಸನೆ ಬರುವುದು, ಮೂತ್ರವಿಸರ್ಜನೆ ಸಮಯದಲ್ಲಿ ಉರಿ ಉಂಟಾಗುವುದು ಮುಂತಾದ ಲಕ್ಷಣಗಳನ್ನು ಸಾಮಾನ್ಯವೆಂದು ಕಡೆಗಣಿಸಲಾಗುತ್ತದೆ. ಜೊತೆಗೆ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದನ್ನು ಕೂಡ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಈ ರೀತಿ ಮಾಡುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ ಎಂದಿದ್ದಾರೆ.

ಮೂತ್ರದಲ್ಲಿ ರಕ್ತ ಬರುವುದು ಕ್ಯಾನ್ಸರ್ ಲಕ್ಷಣವೇ?

ಡಾ. ದೀಪಕ್ ಅವರ ಪ್ರಕಾರ, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದೇ ಕಿಡ್ನಿ ಕ್ಯಾನ್ಸರ್‌ನ ಏಕೈಕ ಲಕ್ಷಣವಲ್ಲ. ಆದರೆ ಈ ರೀತಿ ಪದೇಪದೇ ಕಾಣಿಸಿಕೊಳ್ಳುವುದು, ತೀವ್ರ ನೋವು, ದೇಹದ ತೂಕ ಕಡಿಮೆಯಾಗುವುದು, ಬೆನ್ನು ಭಾಗದ ಒಂದು ಕಡೆ ನಿರಂತರವಾದ ನೋವು ಇತ್ಯಾದಿ ಲಕ್ಷಣಗಳು ಜೊತೆಯಾಗಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಏಕೆಂದರೆ ಪ್ರಾರಂಭಿಕ ಹಂತದಲ್ಲೇ ಕಾಯಿಲೆ ಪತ್ತೆಯಾದರೆ ಚಿಕಿತ್ಸೆ ಸುಲಭವಾಗುತ್ತದೆ.

ಇದನ್ನೂ ಓದಿ: ಮೂತ್ರ ವಿಸರ್ಜನೆ ಮಾಡುವಾಗ ಅತಿಯಾಗಿ ನೊರೆ ಬರುವುದು ನಿರ್ಜಲೀಕರಣವೇ ಅಥವಾ ಮಧುಮೇಹದ ಸಂಕೇತವೇ ತಿಳಿದುಕೊಳ್ಳಿ

ಪರೀಕ್ಷೆಗಳು ಹೇಗೆ ನಡೆಯುತ್ತದೆ?

ಪ್ರಾಥಮಿಕವಾಗಿ ಮೂತ್ರ ಪರೀಕ್ಷೆ (ಯೂರಿನ್ ಟೆಸ್ಟ್) ಮತ್ತು ಅಲ್ಟ್ರಾಸೌಂಡ್ ಮಾಡಲಾಗುತ್ತದೆ. ಕೆಲವು ಗಂಭೀರ ಸಂದರ್ಭಗಳಲ್ಲಿ ಸಿಸ್ಟೋಸ್ಕೋಪಿ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಲಕ್ಷಣಗಳು ತೀವ್ರವಾಗಿದ್ದಾಗ ಮಾತ್ರ ಈ ಪರೀಕ್ಷೆ ಮಾಡಿಸಲು ಸಲಹೆ ನೀಡಲಾಗುತ್ತದೆ. ವೈದ್ಯರ ಪ್ರಕಾರ, ಒಂದು ಅಥವಾ ಎರಡು ದಿನ ಈ ಸಮಸ್ಯೆ ಕಂಡುಬಂದರೆ ಹೆಚ್ಚಿನ ಆತಂಕ ಬೇಡ. ಆದರೆ ಎರಡು ದಿನಕ್ಕಿಂತ ಹೆಚ್ಚು ಕಾಲ ಮುಂದುವರಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಮೂತ್ರದಲ್ಲಿ ರಕ್ತ ಬರುವುದನ್ನು ತಡೆಗಟ್ಟುವುದು ಹೇಗೆ?

  • ಪ್ರತಿದಿನ ಕನಿಷ್ಠ 7 ಗ್ಲಾಸ್ ನೀರು ಕುಡಿಯಿರಿ
  • ಮೂತ್ರವನ್ನು ಹಿಡಿದಿಟ್ಟುಕೊಳ್ಳಬೇಡಿ
  • ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆಯಿರಿ
  • ಮೂತ್ರದಲ್ಲಿ ರಕ್ತ ಕಾಣಿಸಿದರೆ ನಿರ್ಲಕ್ಷ್ಯ ಮಾಡಬೇಡಿ

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಗಂಭೀರ ಆರೋಗ್ಯ ಸಮಸ್ಯೆಯ ಸೂಚಕವಾಗಿರಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆವಿಎನ್ vs ಕೆವಿಎನ್; ಒಂದೇ ತಿಂಗಳಲ್ಲಿ ಎರಡು ಬಿಗ್ ಬಜೆಟ್ ಸಿನಿಮಾ ರಿಲೀಸ್? – Kannada News | Toxic Postponed: KVN Productions’ June Dilemma with Yash and Jana Nayagan Release

ಮಾರ್ಚ್ 4ರ ಬೆಳಿಗ್ಗೆ ಕೆವಿಎನ್ ಸಂಸ್ಥೆ ಯಶ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ನೀಡಿತು. ‘ಟಾಕ್ಸಿಕ್’ (Toxic) ಸಿನಿಮಾ ಮಾರ್ಚ್ 19ಕ್ಕೆ ತೆರೆಗೆ ಬರೋದು ಪಕ್ಕಾ ಎಂಬ ರೀತಿ ಬಿಂಬಿಸಲಾಗಿತ್ತು. ಆದರೆ, ಏಕಾಏಕಿ ಸಿನಿಮಾ ರಿಲೀಸ್ ದಿನಾಂಕವನ್ನು ತಂಡ ಮುಂದಕ್ಕೆ ಹಾಕಿದೆ. ಜೂನ್ 4ರಂದು ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದು ನಿರ್ಮಾಣ ಸಂಸ್ಥೆ ಹೇಳಿದೆ. ಹಾಗಾದರೆ ಬಾಕ್ಸ್ ಆಫೀಸ್​​ನಲ್ಲಿ ಕೆವಿಎನ್ vs ಕೆವಿಎನ್ ಎಂಬ ಪರಿಸ್ಥಿತಿ ನಿರ್ಮಾಣ ಆಗಲಿದೆಯೇ ಎಂಬ ಪ್ರಶ್ನೆ ಮೂಡುವಂತೆ ಆಗಿದೆ. ಇದಕ್ಕೆ ಕಾರಣವೂ ಇದೆ.

ಕೆವಿಎನ್ ಸಂಸ್ಥೆ ಒಮ್ಮೆಲೇ ಮೂರು ದೊಡ್ಡ ಬಜೆಟ್ ಚಿತ್ರಗಳನ್ನು ಕೈಗೆತ್ತಿಕೊಂಡಿತು. ‘ಜನ ನಾಯಗನ್’ ಜನವರಿ 9ಕ್ಕೆ, ‘ಟಾಕ್ಸಿಕ್’ ಮಾರ್ಚ್ 19ಕ್ಕೆ ಹಾಗೂ ‘ಕೆಡಿ’ ಚಿತ್ರವನ್ನು ಏಪ್ರಿಲ್ 30ಕ್ಕೆ ರಿಲೀಸ್ ಮಾಡುವ ಪ್ಲ್ಯಾನ್ ತಂಡಕ್ಕೆ ಇತ್ತು. ಎಲ್ಲಾ ರಿಲೀಸ್ ಮಧ್ಯೆ 50+ ದಿನಗಳ ಅಂತರ ಇತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ‘ಜನ ನಾಯಗನ್’ ಹಾಗೂ ‘ಟಾಕ್ಸಿಕ್’ ರಿಲೀಸ್ ಮುಂದಕ್ಕೆ ಹೊಗಿದೆ. ‘ಜನ ನಾಯಗನ್’ ಸೆನ್ಸಾರ್ ಪ್ರಕ್ರಿಯೆ ಆಗಿಲ್ಲ. ಈ ಕಾರಣದಿಂದ ಈ ಸಿನಿಮಾ ರಿಲೀಸ್ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ‘ಟಾಕ್ಸಿಕ್’ ಜೂನ್ 4ಕ್ಕೆ ಬರೋದಾಗಿ ಘೋಷಣೆ ಆಗಿದೆ.

ಈ ಮೊದಲು ಹರಿದಾಡಿದ ಮಾಹಿತಿ ಪ್ರಕಾರ, ‘ಜನ ನಾಯಗನ್’ ಸಿನಿಮಾ ಜೂನ್ ಅಲ್ಲಿ ತೆರೆಗೆ ಬರಲಿದೆ ಎನ್ನಲಾಗಿತ್ತು. ಜೂನ್ 22 ವಿಜಯ್ ಜನ್ಮದಿನ. ಈ ವಿಶೇಷ ದಿನದ ಸಮಯದಲ್ಲಿ ‘ಜನ ನಾಯಗನ್’ ತರುವ ಆಲೋಚನೆ ತಂಡಕ್ಕೆ ಇದೆ. ಈಗ ‘ಟಾಕ್ಸಿಕ್’ ಕೂಡ ಜೂನ್ ಅಲ್ಲೇ ಬರುತ್ತಿದೆ. ಹೀಗಾಗಿ, ಒಂದೇ ನಿರ್ಮಾಣ ಸಂಸ್ಥೆಯ ಎರಡು ಚಿತ್ರಗಳು ಒಂದೇ ತಿಂಗಳಲ್ಲಿ ಬಿಡುಗಡೆ ಆಗಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳದ್ದು. ಹಾಗಾದಲ್ಲಿ, ಕೆವಿಎನ್ vs ಕೆವಿಎನ್ ಎಂಬತಹ ಸ್ಥಿತಿ ನಿರ್ಮಾಣ ಆಗುತ್ತದೆ.

ಇದನ್ನೂ ಓದಿ: ಕೊನೇ ಕ್ಷಣದಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಯಶ್; ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ

ಯಾವುದೇ ಪಳಗಿದ ನಿರ್ಮಾಪಕರು ತಮ್ಮದೇ ನಿರ್ಮಾಣ ಸಂಸ್ಥೆಯ ಎರಡು ಸಿನಿಮಾಗಳನ್ನು ಒಂದೇ ತಿಂಗಳಲ್ಲಿ ರಿಲೀಸ್ ಮಾಡುವ ಸಾಹಸಕ್ಕೆ ಹೊಗೋದಿಲ್ಲ. ಅದರಲ್ಲೂ ಬಿಗ್ ಬಜೆಟ್ ಸಿನಿಮಾ ಎಂದಾಗ ಆ ರೀತಿಯ ಸಾಹಸವನ್ನು ಮಾಡೋದಿಲ್ಲ. ಹೀಗಾಗಿ, ಕೆವಿಎನ್ ಕೂಡ ಈ ಬಗ್ಗೆ ಬೇರೆಯದೇ ರೀತಿಯ ಸ್ಟ್ರೆಟಜಿ ಮಾಡಬಹುದು ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಿತ್ರರಂಗಕ್ಕೆ 93 ವರ್ಷ: ನಡೆದು ಬಂದ ಹಾದಿಯ ನೆನೆದ ಜಯಮಾಲ – Kannada News | Film Chamber president Jayamala talks about Kannada movie industry 93rd anniversary

ಕನ್ನಡ ಚಿತ್ರರಂಗ (Sandalwood) 93 ವರ್ಷ ಪೂರೈಸಿದ ಕಾರಣಕ್ಕೆ ಫಿಲಂ ಚೇಂಬರ್ ವತಿಯಿಂದ ಸಂಭ್ರಮಾಚರಣೆ ಕಾರ್ಯಕ್ರಮಮ ಹಮ್ಮಿಕೊಳ್ಳಲಾಗಿತ್ತು. ಕನ್ನಡ ಚಿತ್ರರಂಗದ ಮೊದಲ ಟಾಕಿ ಸಿನಿಮಾ ‘ಸತಿ ಸುಲೋಚನ’ ಬಿಡುಗಡೆ ಆಗಿ 93 ವರ್ಷಗಳಾಗಿವೆ. ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಅವರು ಈ ಸಂಭ್ರಮಾಚರಣೆಯಲ್ಲಿ ಮಾತನಾಡಿ, ಕನ್ನಡ ಚಿತ್ರರಂಗವನ್ನು ಆರಂಭದಲ್ಲಿ ಕಟ್ಟಿದವರನ್ನು, ಅದರ ನಂತರ ಚಿತ್ರರಂಗದ ಏಳಿಗೆಗೆ ಶ್ರಮಿಸಿದವರ ಸಾಧನೆಯನ್ನು ನೆನಪು ಮಾಡಿಕೊಂಡರು. ಕನ್ನಡದ ಮೊದಲ ಸಿನಿಮಾದ ನಾಯಕ ಸುಬ್ಬಯ್ಯ ನಾಯ್ಡು ಅವರ ಸೊಸೆ ಗಿರಿಜಾ ಲೋಕೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

27 ಕೋಟಿ ರೂ. ಮೌಲ್ಯದ ಕಾರಿನಲ್ಲಿ ಕಾಲೇಜಿಗೆ ಬಂದ ವಿದ್ಯಾರ್ಥಿ! ವಿಡಿಯೋ ವೈರಲ್ – Kannada News | Shanghai University Student Arrives in Rs 27 Crore Aston Martin Valkyrie; Campus Video Goes Viral

ಆಸ್ಟನ್ ಮಾರ್ಟಿನ್ ವಾಲ್ಕೈರಿ ಹೈಪರ್‌ಕಾರ್‌Image Credit source: TV9 Network

ಶಾಂಘೈ, ಮಾರ್ಚ್ 4: ವಿಶ್ವವಿದ್ಯಾಲಯಕ್ಕೆ ಬೈಕ್ ಅಥವಾ ಕಾರಿನಲ್ಲಿ ವಿದ್ಯಾರ್ಥಿಗಳು ಬರುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಆದರೆ ಸುಮಾರು 27 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರಿನಲ್ಲಿ ವಿದ್ಯಾರ್ಥಿಯೊಬ್ಬ ಕ್ಯಾಂಪಸ್‌ಗೆ ಬಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. ಚೀನಾದ ಶಾಂಘೈ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ವಿಶ್ವದ ಅತ್ಯಂತ ದುಬಾರಿ ಮತ್ತು ಸೀಮಿತ ಆವೃತ್ತಿಯ ಕಾರುಗಳಲ್ಲಿ ಒಂದಾದ Aston Martin Valkyrie ಚಾಲನೆ ಮಾಡಿ ಕಾಲೇಜಿಗೆ ಬಂದಿದ್ದಾನೆ ಎನ್ನಲಾಗಿದೆ. ಸದ್ಯ, ಆತ ದುಬಾರಿ ಕಾರಿನಲ್ಲಿ ಬಂದ ವಿಡಿಯೋ ‘ಎಕ್ಸ್​’ನಲ್ಲಿ ಪೋಸ್ಟ್ ಆಗಿದ್ದು, ವೈರಲ್ (Viral Video) ಆಗಿದೆ. ಈ ಕಾರಿನ ಅಂದಾಜು ಮೌಲ್ಯ ಸುಮಾರು 3 ಮಿಲಿಯನ್ ಅಮೆರಿಕನ್ ಡಾಲರ್ ಎನ್ನಲಾಗಿದ್ದು, ಭಾರತೀಯ ಮೌಲ್ಯದಲ್ಲಿ ಅಂದಾಜು 27 ಕೋಟಿ ರೂ. ಆಗಿದೆ.

ಪಾರ್ಕಿಂಗ್ ಸ್ಥಳದಲ್ಲಿ ಹೊಳೆಯುವ ಐಷಾರಾಮಿ ಕಾರು ನಿಲ್ಲಿಸಿರುವುದು ಎಕ್ಸ್ ವಿಡಿಯೋದಲ್ಲಿ ಕಾಣುತ್ತದೆ. ಕಾರನ್ನು ನೋಡಲು ವಿದ್ಯಾರ್ಥಿಗಳ ಗುಂಪು ಕೂಡಿಕೊಂಡಿದ್ದು, ಕೆಲವರು ಫೋಟೋ ಮತ್ತು ವಿಡಿಯೋ ತೆಗೆಯುವುದರಲ್ಲಿ ಮುಳುಗಿದ್ದಾರೆ. ಬಳಿಕ ಯುವಕನೊಬ್ಬ ಬಂದು ಕಾರಿನ ಬಾಗಿಲು ತೆರೆಯುವ ಮೂಲಕ ಆರಾಮವಾಗಿ ಒಳಗೆ ಕುಳಿತುಕೊಳ್ಳುವುದು ವಿಡಿಯೋದಲ್ಲಿದೆ.

Aston Martin Valkyrie ಫಾರ್ಮುಲಾ-1 ತಂತ್ರಜ್ಞಾನದಿಂದ ಪ್ರೇರಿತವಾಗಿ ವಿನ್ಯಾಸಗೊಳಿಸಲಾದ ಅತ್ಯುನ್ನತ ಕಾರ್ಯಕ್ಷಮತೆಯ ಹೈಪರ್ ಕಾರ್ ಆಗಿದೆ. ಇಂತಹ ಅಪರೂಪದ ಕಾರನ್ನು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ನೋಡುವುದು ಅಸಾಮಾನ್ಯ ಎನ್ನಲಾಗುತ್ತಿದೆ.

ಐಷಾರಾಮಿ ಕಾರಿನ ವಿಡಿಯೋ ಇಲ್ಲಿ ನೋಡಿ

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ @DAMIADENUGA ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಶಾಂಘೈ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರು ಸುಮಾರು 3 ಮಿಲಿಯನ್ ಡಾಲರ್ ಮೌಲ್ಯದ ಕಾರಿನಲ್ಲಿ ಕ್ಯಾಂಪಸ್‌ನಿಂದ ಹೊರಡುತ್ತಿರುವುದು ಕಂಡುಬಂದಿದೆ ಎಂದು ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಲಾಗಿದೆ.

ಸುಮಾರು 21 ಸೆಕೆಂಡುಗಳ ಈ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಬಾರಿ ವೀಕ್ಷಿಸಿದ್ದು, ಸಾವಿರಾರು ಮಂದಿ ಲೈಕ್ ಹಾಗೂ ಕಾಮೆಂಟ್ ಮಾಡಿದ್ದಾರೆ. ಆಸ್ಟನ್ ಮಾರ್ಟಿನ್ ಯುರೋಪಿನ ಅತ್ಯುತ್ತಮ ಐಷಾರಾಮಿ ಕಾರುಗಳಲ್ಲಿ ಒಂದು ಎಂದು ಕೆಲವರು ಅಭಿಪ್ರಾಯಪಟ್ಟರೆ, ನಾವು ಇಲ್ಲಿ ಬಸ್ ದರದ ಬಗ್ಗೆ ಚಿಂತಿಸುತ್ತಿದ್ದೇವೆ, ಆದರೆ ಈ ವಿದ್ಯಾರ್ಥಿ ಕೋಟಿ ಮೌಲ್ಯದ ಕಾರಿನಲ್ಲಿ ಬರುತ್ತಿದ್ದಾನೆ ಎಂದು ಇನ್ನೂ ಕೆಲವರು ಹಾಸ್ಯಮಿಶ್ರಿತವಾಗಿ ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ, ವಿದ್ಯಾರ್ಥಿಯೊಬ್ಬನ ಐಷಾರಾಮಿ ಜೀವನಶೈಲಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ವಿಡಿಯೋ ವ್ಯಾಪಕವಾಗಿ ಶೇರ್ ಆಗುತ್ತಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಬಣ್ಣದಲ್ಲಿ ಮಿಂದೆದ್ದ ಕೋತಿಗಳು, ವೈರಲ್ ಆಯ್ತು ದೃಶ್ಯ – Kannada News | Monkeys participating in Holi celebration

ಬಣ್ಣಗಳ ಹಬ್ಬ ಎಂದಾಗ ನೆನಪಿಗೆ ಬರುವುದೇ ಈ ಹೋಳಿ ಹಬ್ಬ (Holi). ದೇಶಾದ್ಯಂತ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಎಲ್ಲರೂ ಒಗ್ಗೂಡಿ ಬಣ್ಣಗಳಿಂದ ಓಕುಳಿಯಾಟ ಆಡಿ ಹೋಳಿಯನ್ನು ಸಂಭ್ರಮಿಸುತ್ತಾರೆ. ಈ ಸೆಲೆಬ್ರೇಶನ್‌ನಲ್ಲಿ ತೊಡಗಿದ್ದ ಜನರ ನಡುವೆ ಕೋತಿಗಳು ಕಲರ್ ಫುಲ್ ಬಣ್ಣದಲ್ಲಿ ಮಿಂದೆದ್ದಿವೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

Shani Nirala Vlogs ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹೋಳಿ ಸೆಲೆಬ್ರೇಶನ್ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಜನರು ಹೋಳಿ ಸೆಲೆಬ್ರೇಶನ್‌ನಲ್ಲಿ ತೊಡಗಿಕೊಂಡಿದ್ದರೆ ಇತ್ತ ಕೋತಿಗಳು ಓಕುಳಿಯಾಟ ಆಡಲು ಬಂದಿವೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ ಬಣ್ಣವನ್ನು ಎರಚುತ್ತಿದ್ದು, ಅಲ್ಲೇ ಇದ್ದವರು ಈ ದೃಶ್ಯವನ್ನು ನೋಡಿ ನಗುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಹರಿಯಾಣದಲ್ಲಿ ಹೋಳಿ ಆಚರಣೆ ವೇಳೆ ಗೋಮಾತೆಗೆ ಬಲವಂತವಾಗಿ ಮದ್ಯ ಕುಡಿಸಿದ ಕುಡುಕರು

ಈ ವಿಡಿಯೋ 6.3 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಜೈ ಶ್ರೀರಾಮ್, ಹ್ಯಾಪಿ ಹೋಳಿ ಎಂದರೆ, ಮತ್ತೊಬ್ಬರು, ಜೈ ಭಜರಂಗ್ ಬಲಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಕೋತಿಗಳ ಹೋಳಿ ಸೆಲೆಬ್ರೇಶನ್ ಮಸ್ತ್ ಆಗಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:59 pm, Wed, 4 March 26

Source link