Category Archives: Blog

Your blog category

ಒಮಾನ್ ನಮ್ಮ ಆಯ್ಕೆಯಾಗಿರಲಿಲ್ಲ, ಐಆರ್​ಜಿಸಿ ಸೇನೆಯ ಅಂಗವಲ್ಲ, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತೆ: ಇರಾನ್ ವಿದೇಶಾಂಗ ಸಚಿವ – Kannada News | Iran: IRGC Acted Independently in Oman Drone Attack, Foreign Minister Denies Govt Role

ಇರಾನ್ ವಿದೇಶಾಂಗ ಸಚಿವImage Credit source: China Daily

ಒಮಾನ್, ಮಾರ್ಚ್​ 02: ಒಮಾನ್ ಮೇಲೆ ಇರಾನ್​​(Iran)ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಡ್ರೋನ್ ದಾಳಿ ನಡೆಸಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಒಮಾನ್ ನಮ್ಮ ಆಯ್ಕೆಯಾಗಿರಲಿಲ್ಲ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಒತ್ತಿ ಹೇಳಿದ್ದಾರೆ. ಇರಾನಿನ ಕ್ರಾಂತಿಯ ನಂತರ ಮೇ 1979 ರಲ್ಲಿ ರುಹೊಲ್ಲಾ ಖೊಮೇನಿ ಸ್ಥಾಪಿಸಿದ ಐಆರ್​​ಜಿಸಿ, ಸಾಂಪ್ರದಾಯಿಕ ಇರಾನಿನ ಸೈನ್ಯದಿಂದ ಪ್ರತ್ಯೇಕವಾಗಿದೆ. ಅಮೆರಿಕ-ಇಸ್ರೇಲ್ ದಾಳಿಯ ಸಮಯದಲ್ಲಿ ಕೊಲ್ಲಲ್ಪಡುವ ಮೊದಲು ಅಯತೊಲ್ಲಾ ಅಲಿ ಖಮೇನಿಗೆ ಐಆರ್‌ಜಿಸಿ ವರದಿ ಮಾಡುತ್ತಿತ್ತು.

ಇದರರ್ಥ ಐಆರ್‌ಜಿಸಿ ಈಗ ನಿಗಾ ಇಡುವವರಿಲ್ಲದೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ.ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ.ಒಮಾನ್ ಬಂದರನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯ ಬಗ್ಗೆ ಕೇಳಿದಾಗ, ಒಮಾನ್‌ನಲ್ಲಿ ನಡೆದದ್ದು ನಮ್ಮ ಆಯ್ಕೆಯಾಗಿರಲಿಲ್ಲ. ನಮ್ಮ ಸಶಸ್ತ್ರ ಪಡೆಗಳು ಆಯ್ಕೆ ಮಾಡುವ ಗುರಿಗಳ ಬಗ್ಗೆ ಜಾಗರೂಕರಾಗಿರಲು ನಾವು ಈಗಾಗಲೇ ಹೇಳಿದ್ದೇವೆ ಎಂದು ಉತ್ತರಿಸಿದ್ದಾರೆ.

ಈ ಹೇಳಿಕೆ ಮಹತ್ವದ್ದಾಗಿದೆ. ಇದರರ್ಥ IRGC ಇರಾನಿನ ಸರ್ಕಾರದ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿಲ್ಲ, ಬದಲಾಗಿ ಖಮೇನಿ ತನ್ನ ಹತ್ಯೆಗೆ ಮೊದಲು ನೀಡಿದ ಸೂಚನೆಗಳ ಪ್ರಕಾರ ಕಾರ್ಯನಿರ್ವಹಿಸುತ್ತಿದೆ.

ಮತ್ತಷ್ಟು ಓದಿ: ಕುವೈತ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಇರಾನ್ ಡ್ರೋನ್ ದಾಳಿ

ಖಮೇನಿ ಐಆರ್‌ಜಿಸಿಗೆ ಖಾಸಗಿ ಉದ್ಯಮವಾಗಿ ವಿಸ್ತರಿಸಲು ಅಧಿಕಾರ ನೀಡಿದ್ದರು, ಬಂದರುಗಳು, ದೂರಸಂಪರ್ಕ ಜಾಲಗಳು ಮತ್ತು ಲೇಸರ್ ಕಣ್ಣಿನ ಶಸ್ತ್ರಚಿಕಿತ್ಸಾ ಕೇಂದ್ರಗಳನ್ನು ಸಹ ನಡೆಸುತ್ತದೆ. ಇದರರ್ಥ ಅದು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದೆ. ಮತ್ತು ಮುಂದಿನ ಸುಪ್ರೀಂ ಲೀಡರ್ ಆಯ್ಕೆಯಾಗುವವರೆಗೆ, ಐಆರ್‌ಜಿಸಿಗೆ ಬಾಸ್ ಇರುವುದಿಲ್ಲ. ಖಮೇನಿಯವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಐಆರ್‌ಜಿಸಿ ಪ್ರತಿಜ್ಞೆ ಮಾಡಿದೆ.

ತಮ್ಮ ನಾಯಕನ ಪರಂಪರೆಯನ್ನು ರಕ್ಷಿಸುವಲ್ಲಿ ಅವರ ಮಾರ್ಗವನ್ನು ಶಕ್ತಿಯುತವಾಗಿ ಮುಂದುವರಿಸುತ್ತವೆ, ಆಂತರಿಕ ಮತ್ತು ಬಾಹ್ಯ ಪಿತೂರಿಗಳ ವಿರುದ್ಧ ದೃಢವಾಗಿ ನಿಲ್ಲುತ್ತವೆ ಮತ್ತು ಇಸ್ಲಾಮಿಕ್ ತಾಯ್ನಾಡಿನ ವಿರುದ್ಧ ಆಕ್ರಮಣಕಾರರಿಗೆ ಪಾಠ ಕಲಿಸುತ್ತದೆ.

ಐಆರ್​ಜಿಸಿ ಬಹು ವಿಭಾಗಗಳನ್ನು ಹೊಂದಿದೆ. ಸಾಮಾನ್ಯ ಇರಾನಿನ ಮಿಲಿಟರಿಗಿಂತ 200,000 ಕಡಿಮೆ ಸೈನಿಕರನ್ನು ಹೊಂದಿದ್ದರೂ, ಗಾರ್ಡ್‌ಗಳನ್ನು ಇರಾನ್‌ನಲ್ಲಿ ಪ್ರಬಲ ಮಿಲಿಟರಿ ಪಡೆಯೆಂದು ಪರಿಗಣಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಐಆರ್​ಜಿಸಿ ತನ್ನದೇ ಆದ ನೆಲದ ಪಡೆಗಳು, ವಾಯುಪಡೆ ಮತ್ತು ನೌಕಾಪಡೆಯನ್ನು ಹೊಂದಿದೆ. ಅಷ್ಟೇ ಅಲ್ಲ. ರಹಸ್ಯ ಕಾರ್ಯಾಚರಣೆಗಳಿಗಾಗಿ ಅದು ಕುಡ್ಸ್ ಎಂಬ ಮೀಸಲಾದ ಪಡೆಯನ್ನು ಹೊಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:05 pm, Mon, 2 March 26

Source link

ಕಬ್ಬಿಗೆ ಗುಡ್‌ ಬೈ ಹೇಳಿ ಬಹುಬೇಡಿಕೆ ಬೆಳೆಯತ್ತ ಮುಖಮಾಡಿದ ಗಡಿ ಜಿಲ್ಲೆಯ ರೈತರು: ಕೈತುಂಬಾ ಲಾಭ – Kannada News | Bidar Farmer Thrives with Chia: From Sugarcane Losses to High Profit

ಬೀದರ್, ಮಾರ್ಚ್​ 02: ಜಿಲ್ಲೆಯ ರೈತ ಉದ್ದು, ಸೋಯಾ, ಕಬ್ಬು ಬೆಳೆಗೆ ಮಾತ್ರ ಸೀಮಿತವಾಗಿದ್ದರು. ಹೀಗಾಗಿ ಪದೇ ಪದೇ ನಷ್ಟಕ್ಕೆ ತುತ್ತಾಗಿ, ಸಾಲದ ಸುಳಿಗೆ ಸಿಲುಕುತ್ತಿದ್ದರು. ಬೆಳೆ ಬದಲಾವಣೆ ಮಾಡಬೇಕೆಂದು ನಿರ್ಧರಿಸಿದ ರೈತನಿಗೆ ಚಿಯಾ ಬೆಳೆ ಕೈ ಹಿಡಿದಿದ್ದು, ಇದೀಗ ಭರ್ಜರಿ ಲಾಭ ಗಳಿಸುತ್ತಿದ್ದಾರೆ.

ಬಹುಬೇಡಿಕೆ ಬೆಳೆಯತ್ತ ವಾಲಿದ ರೈತರು

ಗಡಿ ಜಿಲ್ಲೆ ಬೀದರ್​ನ ರೈತರು ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕಿಕೊಂಡು ನಷ್ಟವನ್ನ ಅನುಭವಿಸುತ್ತಿದ್ದರು. ಜೊತೆಗೆ ಪದೇ ಪದೇ ಒಂದೆ ಬೆಳೆಯನ್ನ ನಾಟಿ ಮಾಡಿ ಆರ್ಥಿಕ ಸ್ಥಿತಿವಂತರಾಗುವ ದಿಕ್ಕಿನಲ್ಲಿ ಮುಂದಾಗಿ ಏಳು-ಬೀಳು ಕಂಡಿದ್ದು, ಇದೀಗ ಬಹುಬೇಡಿಕೆ ಬೆಳೆ ಚಿಯಾ ಧಾನ್ಯ ಬೆಳೆಯುವ ಕಡೆಗೆ ಮುಖ ಮಾಡಿದ್ದಾರೆ.

ಇದನ್ನೂ ಓದಿ: ಬೀದರ್​​ ರೈತನ ಕೈಹಿಡಿದ ಹಳದಿ ಸುಂದರಿ: ವರ್ಷಕ್ಕೆ ಲಕ್ಷಾಂತರ ರೂ ಆದಾಯ, ಆಧುನಿಕ ಯುಗದಲ್ಲಿ ಕೃಷಿ ಕ್ರಾಂತಿ

ಬೀದರ್ ತಾಲೂಕಿನ ಶಮಶಾನಗರ ಗ್ರಾಮದ ಆನಂದ ಒಂದು ಎಕರೆ ಜಮೀನಿನಲ್ಲಿ ಚಿಯಾ ಬೆಳೆಯನ್ನ ಬೆಳೆಯುತ್ತಿದ್ದಾರೆ. ಆ ಮೂಲಕ ಆರ್ಥಿಕವಾಗಿ ಸದೃಢರಾಗುವ ನಿಟ್ಟಿನಲ್ಲಿ ವಾಣಿಜ್ಯ ಬೇಸಾಯಕ್ಕೆ ಒಲವು ತೋರಿದ್ದಾರೆ. ಇಂಟರ್​ನೆಟ್​​ನಲ್ಲಿ ಚಿಯಾ ಬೆಳೆ ಕುರಿತು ಮಾಹಿತಿ ಸಂಗ್ರಹಿಸಿ, ಬೀಜ ಖರೀದಿಸಿ ಇದೀಗ ಬೆಳೆ ಬೆಳೆದು ಸ್ಥಳೀಯ ರೈತರಿಗೆ ಮಾದರಿಯಾಗಿದ್ದಾರೆ. ಚಿಯಾ ಪೌಷ್ಟಿಕಾಂಶ ಸೇರಿದಂತೆ ಔಷಧಿಯ ಗುಣ ಹೊಂದಿದೆ. ಈ ಬೆಳೆ ಜಾನುವಾರು ಅಥವಾ ಕಾಡುಪ್ರಾಣಿಗಳ ಹಾವಳಿ ಇಲ್ಲದೆ ನೆಮ್ಮದಿಯಿಂದ ಬೆಳೆಯಬಹುದಾಗಿದೆ.

ರೈತ ಆನಂದ

ರಾಗಿ ಬೇಸಾಯದ ಮಾದರಿಯಲ್ಲೇ ಚಿಯಾ ಬೆಳೆಯಬಹುದು. ಅತಿಯಾದ ನೀರಿನ ಅವಲಂಬನೆ ಇಲ್ಲದೆ ಬೆಳೆಯುವ ಬೆಳೆ ಇದಾಗಿದೆ ಎಂದು ರೈತ ಅಜರ್ ಮಸ್ತಾನ್ ಹೇಳುತ್ತಾರೆ. ಇನ್ನು ಚಿಯಾ ಬೆಳೆಗೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಬಹುಬೇಡಿಕೆ ಇದೆ. ಒಣ ಹವಾಮಾನದಲ್ಲಿ, ವಾರಕ್ಕೊಂದು ಬಾರಿ ತುಂತುರು ನೀರಾವರಿ ನೀಡಿದರೆ ಸಾಕು. 90ರಿಂದ 100 ದಿನದಲ್ಲಿ ಫಸಲು ಪಡೆಯಬಹುದು. ಒಂದು ಎಕರೆ ಪ್ರದೇಶಕ್ಕೆ 3 ರಿಂದ 4 ಸಾವಿರ ರೂ ವೆಚ್ಚ ತಗುಲಲಿದ್ದು, ಪೈರು ಬೆಳೆಸಿ ನಾಟಿ ಅಥವಾ ಬಿತ್ತನೆ ಬೀಜ ನೇರವಾಗಿ ಸಾಲು ಬಿಟ್ಟು ಬೆಳೆಯಬಹುದು.

14 ರಿಂದ 19 ಸಾವಿರ ರೂ ದರ

ಒಮ್ಮೆ ಮಾತ್ರ ರಾಸಾಯನಿಕ ಗೊಬ್ಬರ ನೀಡಿದೆ ಸಾಕು. ಸ್ಥಳಿಯ ವಾತಾವರಣಕ್ಕೆ ಬೆಳೆಯಬಹುದಾದ ವಾಣಿಜ್ಯ ಬೆಳೆ ಚಿಯಾ ಎಕರೆಗೆ 4 ರಿಂದ 5 ಕ್ವಿಂಟಲ್ ಇಳುವರಿ ಸಿಗಲಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 14 ರಿಂದ 19 ಸಾವಿರ ರೂ ದರವಿದ್ದು ರೈತರು ಹೆಚ್ಚಿನ ಲಾಭ ಗಳಿಸಬಹುದಾಗಿದೆ.

ಚಿಯಾ ಧಾನ್ಯದಲ್ಲಿ ಅಧಿಕ ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಫಾಸ್ಫರಸ್ (ರಂಜಕ) ಇದ್ದು, ಹೀಗಾಗಿ ಮಾರುಕಟ್ಟೆಯಲ್ಲಿ ಇದಕ್ಕೆ ಭಾರೀ ಬೇಡಿಕೆಯಿದೆ. ಈ ಧಾನ್ಯ ಸೇವನೆಯಿಂದ ಮೂಳೆಗಳು ಗಟ್ಟಿಗೊಳ್ಳುತ್ತವೆ. ರಕ್ತದ ಒತ್ತಡ ನಿಯಂತ್ರಣ, ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣ, ಸಕ್ಕರೆ ಕಾಯಿಲೆ ನಿಯಂತ್ರಣ, ಉತ್ತಮ ಪಚನಕ್ರಿಯೆಗೆ ಸಹಕಾರಿ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ ಎಂಬುವುದು ರೈತರ ಮಾತು.

ಚಿಯಾ ಬೆಳೆ

ಇನ್ನು ಬೀದರ್ ಜಿಲ್ಲೆಯಲ್ಲಿ ಚಿಯಾ ಬೆಳೆಯ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿಯಿಲ್ಲ. ಜೊತೆಗೆ ಮಾರುಕಟ್ಟೆ ಬಗ್ಗೆ ಕೂಡ ರೈತರಿಗೆ ಮಾಹಿತಿಯಿಲ್ಲ. ಹೀಗಾಗಿ ಕೆಲವೇ ಕೆಲವು ರೈತರು ಈ ಬೆಳೆಯ ಕಡೆಗೆ ಮುಖ ಮಾಡಿದ್ದೇವೆಂದು ರೈತ ರೇವಣಸಿದ್ದಯ್ಯ ಹೇಳುತ್ತಾರೆ.

ಇದನ್ನೂ ಓದಿ: ಮಾಂಜ್ರಾ ನದಿ ಒಡಲು ಬಗೆಯುತ್ತಿರುವ ದಂಧೆಕೋರರು: ಹಗಲು-ರಾತ್ರಿ ಎನ್ನದೆ ಮರಳು ಮಾಫಿಯಾ

ಜಿಲ್ಲೆಯ ರೈತರು ಚಿಯಾ ಕೃಷಿಯಲ್ಲಿ ತೊಡಗಿದ್ದಾರೆ. ಒಮ್ಮೆ ನಾಟಿ ಮಾಡಿದ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆಯಬಹುದಾದ ಬೆಳೆ ಇದಾಗಿದೆ. ಒಟ್ಟಾರೆ ಕೇವಲ ಕಬ್ಬು ಬೆಳೆದು ಕೈ ಸುಟ್ಟುಕೊಳ್ಳುತ್ತಿದ್ದ ಗಡಿ ಜಿಲ್ಲೆಯ ರೈತರಿಗೆ ಇವರು ಮಾದರಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ – Kannada News | PM Modi meets Canadian PM Mark Carney in Hyderabad House

ನವದೆಹಲಿ, ಮಾರ್ಚ್ 2: ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೆನಡಾದ ಪ್ರಧಾನಿ ಮಾರ್ಕ್ ಜೆ ಕಾರ್ನಿ ಅವರನ್ನು ಭೇಟಿಯಾದರು. ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಕಾರ್ನಿ ಇಂದು ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗಿ ನಿಯೋಗ ಮಟ್ಟದ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮೊದಲು ಇಂದು ಬೆಳಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕೆನಡಾ ಪ್ರಧಾನಿ ಕಾರ್ನಿ ಅವರೊಂದಿಗೆ ಮಾತನಾಡಿದ್ದರು. ಎರಡೂ ದೇಶಗಳ ನಡುವೆ ಬಲವಾದ ಸಂಬಂಧವನ್ನು ನಿರ್ಮಿಸುವ ಅವರ ಬದ್ಧತೆಯನ್ನು ಸಚಿವ ಜೈಶಂಕರ್ ಶ್ಲಾಘಿಸಿದ್ದರು.

ಕೆನಡಾದ ಪ್ರಧಾನಿ ಕಾರ್ನಿ ಅವರ ಮುಂಬೈ ಭೇಟಿಯ ನಂತರ ಭಾನುವಾರ ಸಂಜೆ ಅವರು ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿಳಿದಿದ್ದರು. ಇದು ಅವರ ಅಧಿಕೃತ ಭಾರತ ಪ್ರವಾಸದ ಭಾಗವಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಜಿತಿನ್ ಪ್ರಸಾದ ಅವರು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪತ್ನಿ ಕೊಂದು ಆಕೆಯ ಹಣೆಗೆ ಸಿಂಧೂರವಿಟ್ಟು ವಿಡಿಯೋ ಮಾಡಿ ಪತಿಯೂ ಆತ್ಮಹತ್ಯೆ: ಕ್ಷುಲ್ಲಕ ಕಾರಣಕ್ಕೆ ದಂಪತಿ ದಾರುಣ ಅಂತ್ಯ – Kannada News | Bengaluru Couple Tragedy: Husband Kills wife, Commits Suicide in Anekal

ಆನೇಕಲ್​​, ಮಾರ್ಚ್​​ 02: ಪತ್ನಿಯನ್ನು ಕೊಂದು ಬಳಿಕ ತಾನೂ ನೇಣುಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೀಲಲಿಗೆಯಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಒಡಿಶಾ ಮೂಲದ ಮಂಜುಳಾಳನ್ನು ಕೊಂದು ದೀಪಂತ್ ತಾನೂ ಪ್ರಾಣ ಬಿಟ್ಟಿದ್ದಾನೆ. ದಂಪತಿ ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಕಳೆದ ಬುಧವಾರ ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ಗಲಾಟೆ ಆಗಿತ್ತು. ಗಲಾಟೆ ವಿಕೋಪಕ್ಕೆ ಹೋಗಿ ಮಂಜುಳಾ ಮೇಲೆ ದೀಪಂತ್​ ಹಲ್ಲೆ ನಡೆಸಿದ್ದ. ಈ ವೇಳೆ ಮಂಜುಳಾ ಪ್ರಾಣ ಬಿಟ್ಟಿದ್ದಾಳೆ. ಬಳಿಕ ಶವದ ಮುಂದೆ ಕಣ್ಣೀರು ಹಾಕಿ ವಿಡಿಯೋ ಮಾಡಿದ್ದ ದೀಪಂತ್, ಮಂಜುಳಾ ಹಣೆಗೆ ಸಿಂಧೂರವಿಟ್ಟಿದ್ದ. ಬಳಿಕ ಒಡಿಶಾ ಭಾಷೆಯಲ್ಲಿ ಡೆತ್​ನೋಟ್​ ಬರೆದು ತಾನು ಕೂಡ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅನುಮಾನಗೊಂಡ ಮನೆ ಮಾಲೀಕ ಕಿಟಕಿಯಲ್ಲಿ ನೋಡಿದಾಗ ಮಂಜುಳಾ ಮತ್ತು ದೀಪಂತ್​​ ಇಬ್ಬರೂ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಕಳೆದ ಶುಕ್ರವಾರವೇ ಮನೆ ಮಾಲಿಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ! ಪತ್ನಿಯೇ ಕೊಂದಿರುವ ಶಂಕೆ

ಮಹಿಳೆಯರ ಮೇಲೆ ಹಲ್ಲೆ

ಬೆಳಗಾವಿ ತಾಲೂಕಿನ ಬೆಕ್ಕಿನಕೇರಿ ಗ್ರಾಮದಲ್ಲಿ ದೇವಸ್ಥಾನದ ಜಾಗದಲ್ಲಿ ಮೇವು ಇಟ್ಟಿದ್ದಕ್ಕೆ ಮಹಿಳೆಯರ ಮೇಲೆ ಹಲ್ಲ ನಡೆಸಿರುವ ಘಟನೆ ನಡೆದಿದೆ. ನಾಗನಾಥ ದೇವಸ್ಥಾನದ ಆವರಣದಲ್ಲಿ ಮೇವು ಇಟ್ಟಿದ್ದ ಮಹಿಳೆಯರಿಗೆ, ಅವನ್ನು ತೆಗೆಯುವಂತೆ ಕೆಲ ಪುಡಿ ರೌಡಿಗಳು ಧಮ್ಕಿ ಹಾಕಿ, ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆ ಬಗ್ಗೆ ಕಾಕತಿ ಪೊಲೀಸರು ಸ್ಪಂದಿಸದ ಹಿನ್ನೆಲೆ ಹರಿದ ಸೀರೆಯಲ್ಲಿಯೇ ಪೊಲೀಸ್ ಕಮಿಷನರ್ ಭೆಟಿಯಾಗಲು ಮಹಿಳೆಯರು ತೆರಳಿದ್ದು, ಇವರಿಗೆ ಸ್ಥಳಿಯ ರೈತ ಮುಖಂಡರು ಸಾಥ್​​ ನೀಡಿದ್ದಾರೆ. ಪ್ರಿಯಾಂಕಾ ಸಾವಂತ್ ಮತ್ತು ಉಮಾ ಸಾವಂತ್ ಮೇಲೆ ಶಿವಾಜಿ ಬೋಗಾನ್, ಶಿವಾಜಿ ಪಾಟೀಲ್, ಜಯವಂತ ಸಾವಂತ್, ನವನಾಥ್ ಗಾವಡೆ ಮತ್ತು ಸುನೀಲ್ ಗಾವಡೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿವಾಹದ ಬಳಿಕವೂ ಸಂಸ್ಕೃತಿ ಮರೆಯದ ರಶ್ಮಿಕಾ-ವಿಜಯ್; ಅಭಿಮಾನಿಗಳಿಂದ ಮೆಚ್ಚುಗೆ – Kannada News | Rashmika Mandanna and Vijay Deverakonda Wedding: Tirupati Visit, Hometown Pooja and Annadana

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗೆ ವಿವಾಹ ಆಗಿದ್ದಾರೆ. ಇವರ ಮದುವೆ ಬಗ್ಗೆ ಎಲ್ಲ ಕಡೆಗಳಲ್ಲೂ ಚರ್ಚೆ ಆಯಿತು. ಇವರ ವಿವಾಹ ಫೋಟೋಗೆ ಕೋಟಿ ಕೋಟಿ ಲೈಕ್ಸ್ ಸಿಕ್ಕಿದೆ. ರಶ್ಮಿಕಾ ಮಂದಣ್ಣ ಅವರು ವಿವಾಹದ ಬಳಿಕ ಪತಿ ವಿಜಯ್ ಜೊತೆ ತಿರುಪತಿಗೆ ಭೇಟಿ ಕೊಟ್ಟಿದ್ದರು. ಈಗ ಇವರು ಮದುವೆ ಬಳಿಕವೂ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.

ಕೆಲವರು ಕೆಲಸದ ಕಾರಣಕ್ಕೆ ಬೇರೆ ಕಡೆಗಳಿಗೆ ತೆರಳುತ್ತಾರೆ. ಆದರೆ, ಮದುವೆ ಬಳಿಕ ಹುಟ್ಟೂರಿಗೆ ಭೇಟಿ ಕೊಡೋದು ಸಂಪ್ರದಾಯ. ಈ ಸಂಪ್ರದಾಯವನ್ನು ವಿಜಯ್ ಹಾಗೂ ರಶ್ಮಿಕಾ ಮರೆತಿಲ್ಲ. ಹೌದು, ಮದುವೆ ಆದ ಬಳಿಕ ವಿಜಯ್ ದೇವರಕೊಂಡ ಸ್ವಂತ ಊರಿಗೆ ದಂಪತಿ ತೆರಳಿದ್ದಾರೆ. ತೆಲಂಗಾಣದ ನಾಗರ್ ಕರ್ನೋಲ್ ತುಮ್ಮನ್​ಪೆಟ್​ಗೆ ಭೇಟಿ ಕೊಟ್ಟಿದ್ದಾರೆ.

ವಿಜಯ್ ಅವರು ಸ್ವಂತ ಊರಲ್ಲಿ ಫಾರ್ಮ್​​ಹೌಸ್ ಹೊಂದಿದ್ದಾರೆ. ಅಲ್ಲಿ ಇಂದು (ಮಾರ್ಚ್ 2) ಸತ್ಯನಾರಾಯಣ ಪೂಜೆ ಮಾಡಿಸಿದ್ದಾರೆ. ಅಲ್ಲದೆ, ಗ್ರಾಮದ 2000ಕ್ಕೂ ಹೆಚ್ಚು ಜನಕ್ಕೆ ಅನ್ನದಾನ ವ್ಯವಸ್ಥೆ ಮಾಡಲಾಗಿದೆ. ರಶ್ಮಿಕಾ ಹಾಗೂ ವಿಜಯ್ ಊರಿಗೆ ಬರುತ್ತಿದ್ದಂತೆ ಎಲ್ಲರೂ ಅವರನ್ನು ಪ್ರೀತಿಯಿಂದ ಸ್ವಾಗತಿಸಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ತಿರುಪತಿಗೆ ಭೇಟಿ ನೀಡಿದಾಗಲೂ ರಶ್ಮಿಕಾ ಹಾಗೂ ವಿಜಯ್ ಅವರನ್ನು ಅಭಿಮಾನಿಗಳು ಮುತ್ತಿಕೊಂಡಿದ್ದರು.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಹಲವು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಈ ವಿಷಯವನ್ನು ದಂಪತಿ ಮುಚ್ಚಿಟ್ಟಿದ್ದರು. ವಿವಾಹ ಆಗುವ ಹಲವು ವರ್ಷಗಳ ಪ್ರೀತಿಗೆ ಹೊಸ ಅರ್ಥ ನೀಡಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ಒಟ್ಟಾಗಿ ಸಿನಿಮಾ ಕೂಡ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

ಇದನ್ನೂ ಓದಿ: ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ

ರಶ್ಮಿಕಾ ವಿವಾಹದ ಕುರಿತು ಒಂದು ವರ್ಗದ ಜನರು ಅಪಸ್ವರ ತೆಗೆದಿದ್ದಾರೆ. ಆದರೆ, ಇದಕ್ಕೆ ರಶ್ಮಿಕಾ ಮಂದಣ್ಣ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಟೀಕೆಗಳಿಗೆ ಕಿವಿಕೊಡದೆ ಇಬ್ಬರೂ ಹಾಯಾಗಿ ಜೀವನ ಸಾಗಿಸುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ – Kannada News | Union Minister HD Kumaraswamy Talks about Kannadigas Who stuck In dubai for Israel And Iran War

ಮೈಸೂರು, (ಮಾರ್ಚ್ 02): ಇರಾನ್- ಇಸ್ರೇಲ್ ಪರಸ್ಪರ ದಾಳಿಯಿಂದಾಗಿ (Iran Israel War) ಮಧ್ಯ ಪ್ರಾಚ್ಯದಲ್ಲಿ ಯುದ್ಧ ಕಾಮೋರ್ಡ ಆವರಿಸಿದೆ. ಇದರಿಂದ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಅಲ್ಲೇ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಏಕಾಏಕಿ ವಿಮಾನಗಳು ಕ್ಯಾನ್ಸಲ್ ಆಗಿದ್ದರಿಂದ ಕುವೈತ್, ದುಬೈ, ಅಬುದಾಬಿ ಸೇರಿದಂತೆ ಇತರೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಕನ್ನಡಿಗರು ಸಿಲುಕಿದ್ದು, ಇವರ ರಕ್ಷಣೆಗೆ ರಾಜ್ಯ ಸರ್ಕಾರದವೂ ಸಹ ಇನ್ನಿಲ್ಲದ ಕಸರತ್ತು ನಡೆಸಿದೆ. ಮತ್ತೊಂದೆಡೆ ಕುಮಾರಸ್ವಾಮಿ ಮಾತನಾಡಿ, ಯುದ್ಧ ನಿಲ್ಲುವವರೆಗೂ ಅಲ್ಲಿಂದ ಎಲ್ಲರನ್ನೂ ಕರೆಸುವುದು ಕಷ್ಟ ಎಂದಿದ್ದಾರೆ.

ಇಂದು (ಮಾರ್ಚ್ 02) ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಯುದ್ಧ ನಿಲ್ಲುವವರೆಗೂ ಅಲ್ಲಿಂದ ಎಲ್ಲರನ್ನೂ ಕರೆಸುವುದು ಕಷ್ಟ. ವಿಮಾನ ಹಾರಾಟ ಆರಂಭವಾದರೆ ಸುರಕ್ಷಿತವಾಗಿ ಬರುತ್ತಾರೆ. ವಿಮಾನ ಹಾರಾಟ ಬಂದ್ ಆಗಿರುವ ಕಾರಣ ಸಮಸ್ಯೆಯಾಗಿದೆ. ದುಬೈನಲ್ಲಿ ಕೆಲಸ ಮಾಡ್ತಿರುವ ಕನ್ನಡಿಗರು ಸಹಾಯಕ್ಕೆ ಬಂದಿದ್ದಾರೆ. ನನ್ನ ಜೊತೆಯೂ ಬಹಳಷ್ಟು ಜನ ಸಂಪರ್ಕದಲ್ಲಿದ್ದಾರೆ. ಕೇಂದ್ರ ಸರ್ಕಾರ ಕೂಡ ಭಾರತೀಯರ ಸುರಕ್ಷತೆಗೆ ಒತ್ತು ಕೊಟ್ಟಿದೆ. ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಗೂ ಪಾಕಿಸ್ತಾನದ ವಿಶ್ವ ದಾಖಲೆ ಸರಿಗಟ್ಟಿದ ಭಾರತ – Kannada News | India has equaled Pakistan’s T20 World Cup World record

ಪಾಕಿಸ್ತಾನ್ ತಂಡವು 2007, 2009, 2010, 2012, 2021 ಮತ್ತು 2022 ರ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್ ಪಂದ್ಯವಾಡುವ ಮೂಲಕ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಅಂದರೆ ಪಾಕ್ ಪಡೆ ಟಿ20 ವಿಶ್ವಕಪ್​ನಲ್ಲಿ 6 ಬಾರಿ ಸೆಮಿಫೈನಲ್ ಪಂದ್ಯಗಳನ್ನಾಡಿದೆ.

Source link

ಶಿವಮೊಗ್ಗ: ಶಿಕಾರಿಪುರದಲ್ಲಿ ರಂಜಾನ್ ದೇಣಿಗೆ ವಿಚಾರದಲ್ಲಿ ಗಲಾಟೆ-ಕಲ್ಲು ತೂರಾಟ, 10 ಜನರ ಬಂಧನ – Kannada News | Stone Pelting During Ramzan Donation Dispute in Shikaripura, 10 Arrested After Clash in Shivamogga

ಶಿಕಾರಿಪುರದಲ್ಲಿ ರಂಜಾನ್ ದೇಣಿಗೆ ವಿಚಾರದಲ್ಲಿ ಗಲಾಟೆ-ಕಲ್ಲು ತೂರಾಟ, 10 ಜನರ ಬಂಧನImage Credit source: tv9

ಶಿವಮೊಗ್ಗ, ಮಾರ್ಚ್ 2: ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ರಂಜಾನ್ (Ramzan) ಹಬ್ಬದ ದೇಣಿಗೆ ಸಂಗ್ರಹ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿ, ಕಲ್ಲು ತೂರಾಟ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡೂ ಕಡೆಯ ಒಟ್ಟು 10 ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರಂಜಾನ್ ಹಬ್ಬದ ಹಿನ್ನೆಲೆ ಪಟ್ಟಣದ ಮಸೀದಿಯಲ್ಲಿ ಮುಖಂಡರು ಭಾನುವಾರ ಸಭೆ ನಡೆಸಿದ್ದರು. ಈ ವೇಳೆ ಪ್ರತಿ ಕುಟುಂಬದಿಂದ ತಲಾ 1,000 ರೂಪಾಯಿ ದೇಣಿಗೆ ಸಂಗ್ರಹಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಸಭೆಯಲ್ಲಿದ್ದ ಮತ್ತೊಂದು ಗುಂಪು ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಇದರಿಂದಾಗಿ ಮಾತಿಗೆ ಮಾತು ಬೆಳೆದಿದೆ. ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ತೀವ್ರಗೊಂಡು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ನಂತರ ಗಲಾಟೆ ವಿಕೋಪಕ್ಕೆ ತಿರುಗಿ, ಶಿಕಾರಿಪುರ–ಶಿರಾಳಕೊಪ್ಪ ಮುಖ್ಯರಸ್ತೆಯಲ್ಲೇ ಎರಡೂ ಗುಂಪುಗಳು ಪರಸ್ಪರ ಕಲ್ಲು ತೂರಾಟ ಮಾಡಿದ್ದಲ್ಲದೆ, ಬಡಿಗೆಗಳಿಂದ ಹೊಡೆದಾಡಿಕೊಂಡಿವೆ.

ಕಲ್ಲು ತೂರಾಟದ ಕಾರಣ ರಸ್ತೆ ಸಂಚಾರ ಸ್ಥಗಿತ

ಗಗ್ರಿ ಪ್ರದೇಶದಲ್ಲಿ ನಡೆದ ಈ ಘಟನೆಯ ವೇಳೆ ರಸ್ತೆಯುದ್ದಕ್ಕೂ ಕಲ್ಲುಗಳು ಬಿದ್ದಿದ್ದರಿಂದ ವಾಹನ ಸವಾರರು ಆತಂಕಕ್ಕೀಡಾದರು. ಪರಿಣಾಮವಾಗಿ ಕೆಲಕಾಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಮಾಹಿತಿ ತಿಳಿದ ತಕ್ಷಣ ಶಿಕಾರಿಪುರ ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

ಇದನ್ನೂ ಓದಿ: ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ ಸಿದ್ದರಾಮಯ್ಯ

ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದಡಿ 10 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇಬ್ಬರೂ ಗುಂಪುಗಳ ನಡುವೆ ಪರಸ್ಪರ ದೂರು ಹಾಗೂ ಪ್ರತಿದೂರು ದಾಖಲಾಗಿವೆ. ಹಿಂಸಾಚಾರ ತಪ್ಪಿಸಲು ಪಟ್ಟಣದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಷ್ಟು ದಿನ ಸಂಜು​ರನ್ನು ಹೊರಗಿಟ್ಟಿದ್ದೇಕೆ? ಕೊನೆಗೂ ಮೌನ ಮುರಿದ ಗಂಭೀರ್ – Kannada News | Gautam Gambhir broke his silence on Sanju Samson’s exclusion from the playing XI

T20 World Cup 2026: ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಈ ಬಾರಿಯ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ ವಿಶ್ವಕಪ್ ಆರಂಭವಾದ ಬಳಿಕ ಸ್ಯಾಮ್ಸನ್ ಬೆಂಚ್​ನಲ್ಲಿದ್ದರು. ಆರಂಭಿಕನಾಗಿ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ಕಾಣಿಸಿಕೊಂಡಿದ್ದರು.

ಅತ್ತ ಅಭಿಷೇಕ್ ಶರ್ಮಾ ಸತತವಾಗಿ ವಿಫಲರಾದರೂ ಸಂಜು ಸ್ಯಾಮ್ಸನ್​ಗೆ ಚಾನ್ಸ್ ನೀಡಿರಲಿಲ್ಲ. ಇದೀಗ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ಸ್ಯಾಮ್ಸನ್ ಭಾರತ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ವಿಶ್ವಕಪ್​ನ ಸೆಮಿಫೈನಲ್​ಗೇರಿದೆ.

ಭಾರತ ತಂಡ ವಿಶ್ವಕಪ್​ನ ಸೆಮಿಫೈನಲ್​ಗೇರಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾ ಕೋಚ್​ ಗೌತಮ್ ಗಂಭೀರ್​ಗೆ ಇಷ್ಟು ದಿನ ಸಂಜು ಸ್ಯಾಮ್ಸನ್ ಅವರನ್ನು ಪ್ಲೇಯಿಂಗ್ ಇಲೆವೆನ್​​ನಿಂದ ಹೊರಗಿಟ್ಟಿರುವುದೇಕೆ? ಎಂಬ ಪ್ರಶ್ನೆಯೊಂದು ಎದುರಾಗಿದೆ. ಈ ಪ್ರಶ್ನೆಗೆ ನಿರ್ದಿಷ್ಟ ಕಾರಣಗಳನ್ನು ಮುಂದಿಡುವ ಮೂಲಕ ಗಂಭೀರ್ ಉತ್ತರಿಸಿದ್ದಾರೆ.

ಸಂಜು ಸ್ಯಾಮ್ಸನ್​ರನ್ನು ಹೊರಗಿಡಲು ಕಾರಣವೇನು?

ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಬೇಗನೆ ವಿಕೆಟ್ ಒಪ್ಪಿಸುತ್ತಿದ್ದರು. ಅವರು ಕಣಕ್ಕಿಳಿದ ಐದು ಇನಿಂಗ್ಸ್​ಗಳಲ್ಲಿ ಕಲೆಹಾಕಿದ್ದು 10, 6, 0, 24, 6 ರನ್ ಮಾತ್ರ. ಅಂದರೆ ಅವರು ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದರು.

ಈ ಒತ್ತಡದ ಪರಿಸ್ಥಿತಿಯಿಂದ ಅವರನ್ನು ಹೊರತರಲು ಮತ್ತು ಮಾನಸಿಕವಾಗಿ ರಿಫ್ರೆಶ್ ಆಗಲು ವಿರಾಮ ನೀಡಬೇಕಿತ್ತು. ಹೀಗಾಗಿ ಟಿ20 ವಿಶ್ವಕಪ್​ನ ಆರಂಭಿಕ ಪಂದ್ಯಗಳಿಗೆ ಸಂಜು ಸ್ಯಾಮ್ಸನ್​ರನ್ನು ಪ್ಲೇಯಿಂಗ್ ಇಲೆವೆನ್​ಗೆ ಆಯ್ಕೆ ಮಾಡಿರಲಿಲ್ಲ  ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.

ಇದಲ್ಲದೆ ಆರಂಭದಲ್ಲಿ ತಂಡದ ಕಾಂಬಿನೇಷನ್ ಮತ್ತು ಬ್ಯಾಟಿಂಗ್ ಆಳವನ್ನು  ಹೆಚ್ಚಿಸಲು ಶಿವಂ ದುಬೆ ಹಾಗೂ ರಿಂಕು ಸಿಂಗ್​ ಅವರಂತಹ ಆಟಗಾರರಿಗೆ ಆದ್ಯತೆ ನೀಡಲಾಗಿತ್ತು. ಇದಾಗ್ಯೂ ಸ್ಯಾಮ್ಸನ್​ ನೆಟ್ಸ್​ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರು. ಹೀಗಾಗಿ ಬ್ಯಾಟಿಂಗ್ ಲೈನಪ್​ನಲ್ಲಿ ಬದಲಾವಣೆ ಮಾಡಿ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲಾಗಿದೆ ಎಂದು ಗಂಭೀರ್ ತಿಳಿಸಿದ್ದಾರೆ.

ಸಂಜು ಸ್ಯಾಮ್ಸನ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲು ಟೀಮ್ ಇಂಡಿಯಾ ತನ್ನ ಬ್ಯಾಟಿಂಗ್ ಲೈನಪ್​ನಲ್ಲಿ ಎರಡು ಬದಲಾವಣೆ ಮಾಡಿದೆ. ಆರಂಭದ ಪಂದ್ಯಗಳಲ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದ ಇಶಾನ್ ಕಿಶನ್ ಅವರನ್ನು ಮೂರನೇ ಕ್ರಮಾಂಕಕ್ಕೆ ಹಿಂಬಡ್ತಿ ನೀಡಲಾಗಿದೆ.

ಹಾಗೆಯೇ ಮೂರನೇ ಕ್ರಮಾಂಕದಲ್ಲಿದ್ದ ತಿಲಕ್ ವರ್ಮಾ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿದೆ. ತಿಲಕ್ ವರ್ಮಾ ಅವರನ್ನು ಮಿಡಲ್ ಆರ್ಡರ್​ನಲ್ಲಿ ಆಡಿಸಲು ಇಲ್ಲಿ ಟೀಮ್ ಮ್ಯಾನೇಜ್ಮೆಂಟ್ ರಿಂಕು ಸಿಂಗ್ ಅವರನ್ನು ಕೈ ಬಿಟ್ಟಿದ್ದಾರೆ.

ಈ ಮೂಲಕ ಸಂಜು ಸ್ಯಾಮ್ಸನ್​ ಅವರಿಗೆ ಆರಂಭಿಕನಾಗಿ ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶವನ್ನು ಬಳಸಿಕೊಂಡಿರುವ ಸಂಜು ಸ್ಯಾಮ್ಸನ್ ವೆಸ್ಟ್ ಇಂಡೀಸ್ ವಿರುದ್ಧ 50 ಎಸೆತಗಳಲ್ಲಿ ಅಜೇಯ 97 ರನ್ ಸಿಡಿಸಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ 5 ವಿಕೆಟ್​ಗಳ ಗೆಲುವು ತಂದುಕೊಟ್ಟಿದ್ದಾರೆ.

ಈ ಗೆಲುವಿನ ಬೆನ್ನಲ್ಲೇ  ಅವರನ್ನು ಹಾಡಿಹೊಗಳಿರುವ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್,  ಅವರು ಒಬ್ಬ “ವಿಶ್ವದರ್ಜೆಯ ಆಟಗಾರ” ಎಂದು ಬಣ್ಣಿಸಿದ್ದಾರೆ. ವಿಂಡೀಸ್​ ವಿರುದ್ಧದ 97  ರನ್‌ಗಳ ಅದ್ಭುತ ಇನ್ನಿಂಗ್ಸ್ ಅವರ ಸಾಮರ್ಥ್ಯಕ್ಕೆ ಸಾಕ್ಷಿ ಎಂದು ಗಂಭೀರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಪ್ರಕಟ

ಒಟ್ಟಾರೆಯಾಗಿ, ಸಂಜು ಸ್ಯಾಮ್ಸನ್ ಅವರನ್ನು ಕೇವಲ ವಿಶ್ರಾಂತಿಯ ಉದ್ದೇಶದಿಂದ ಮತ್ತು ಫಾರ್ಮ್ ಮರಳಿ ಪಡೆಯುವ ದೃಷ್ಟಿಯಿಂದ ಪ್ಲೇಯಿಂಗ್ ಇಲೆವೆನ್‌ನಿಂದ ದೂರ ಇಡಲಾಗಿತ್ತು ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದಾರೆ.

Source link

ಶನಿಯ ಆಧಿಪತ್ಯದ ಈ ರಾಶಿಗೆ ಹಳೆಯ ಸಮಸ್ಯೆಗಳಿಗೆ ಪರಿಹಾರ – Kannada News | March 2026 Capricorn Astrology: Dasha Effects and Financial Forecast

ಮಾರ್ಚ್ 2026ರಲ್ಲಿ ಮಕರ ರಾಶಿಯವರಿಗೆ ಗ್ರಹಗತಿಗಳ ಬದಲಾವಣೆಯು ಜೀವನದ ಮೇಲೆ ನಿರ್ಣಾಯಕ ಪ್ರಭಾವ ಬೀರಲಿದೆ. ಮಕರ ರಾಶಿಯ ಅಧಿಪತಿ ಶನಿಯು ನಿಮ್ಮ ರಾಶಿಯಿಂದ ಎರಡನೇ ಮನೆಯಿಂದ ಮೂರನೇ ಮನೆಗೆ ಇದ್ದಾನೆ. ​ಮಾರ್ಚ್ 2026 ರಲ್ಲಿ ಮಕರ ರಾಶಿಯವರಿಗೆ ಯಾವ ದಶೆಗಳು ಶುಭ, ಅಶುಭ ಮತ್ತು ಮಿಶ್ರ ಫಲಗಳನ್ನು ನೀಡಲಿವೆ ಎನ್ನುವುದು ಇಲ್ಲಿದೆ.

​ಮಕರ ರಾಶಿಯವರಿಗೆ ಈ ತಿಂಗಳು ಆರ್ಥಿಕ ಶಿಸ್ತು ಮತ್ತು ಕೌಟುಂಬಿಕ ಜವಾಬ್ದಾರಿಗಳ ಸುತ್ತ ಸುತ್ತುತ್ತದೆ. ಗ್ರಹಗಳ ಸ್ಥಾನಪಲ್ಲಟವು ನಿಮ್ಮ ಹಳೆಯ ಸಮಸ್ಯೆಗಳಿಗೆ ಪರಿಹಾರ ನೀಡುವ ಸೂಚನೆ ನೀಡುತ್ತಿದೆ.

​ಶುಭ ಫಲ ನೀಡುವ ದಶೆಗಳು

​ಈ ದಶೆ ಅಥವಾ ಅಂತರ್ದಶೆಗಳು ನಡೆಯುತ್ತಿದ್ದರೆ ನೀವು ಪ್ರಗತಿಯನ್ನು ನಿರೀಕ್ಷಿಸಬಹುದು.

​ಶನಿ ದಶೆ :

ನಿಮ್ಮ ರಾಶ್ಯಾಧಿಪತಿಯಾದ ಶನಿಯು 3ನೇ ಮನೆಯಲ್ಲಿ ಸಂಚರಿಸುತ್ತಿರುವುದು ನಿಮಗೆ “ಧೈರ್ಯ-ಸ್ಥೈರ್ಯ” ನೀಡುತ್ತದೆ. ಶನಿ ದಶೆ ನಡೆಯುತ್ತಿದ್ದರೆ ವೃತ್ತಿಜೀವನದಲ್ಲಿ ಸ್ಥಿರತೆ, ಕಿರಿಯ ಸಹೋದರರಿಂದ ಬೆಂಬಲ ಮತ್ತು ಶತ್ರುಗಳ ಮೇಲೆ ವಿಜಯ ಪ್ರಾಪ್ತಿಯಾಗಲಿದೆ. ಇದು ನಿಮ್ಮ ದೀರ್ಘಕಾಲದ ಪ್ರಯತ್ನಗಳಿಗೆ ಫಲ ನೀಡುವ ಸಮಯ.

​ಶುಕ್ರ ದಶೆ :

ಮಕರ ರಾಶಿಗೆ ಶುಕ್ರನು ಯೋಗಕಾರಕ ಗ್ರಹ. ಈ ಸಮಯದಲ್ಲಿ ಶುಕ್ರನ ದಶೆಯು ನಿಮಗೆ ಐಷಾರಾಮಿ ವಸ್ತುಗಳ ಖರೀದಿ, ವಾಹನ ಸುಖ ಮತ್ತು ಪ್ರೇಮ ಜೀವನದಲ್ಲಿ ಯಶಸ್ಸನ್ನು ನೀಡುತ್ತದೆ. ಕಲೆ ಮತ್ತು ಸೃಜನಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಇದು ಅತ್ಯುತ್ತಮ ಕಾಲ.

​ಮಿಶ್ರ ಫಲ ನೀಡುವ ದಶೆಗಳು

ಈ ದಶೆಗಳು ಲಾಭ ಮತ್ತು ಸವಾಲುಗಳೆರಡನ್ನೂ ಸಮನಾಗಿ ತರಲಿವೆ.

​ಗುರು ದಶೆ :

ಗುರುವು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ಇರುವುದರಿಂದ ಆರೋಗ್ಯದ ಮೇಲೆ ಸ್ವಲ್ಪ ಖರ್ಚು ಬರಬಹುದು. ಆದರೆ, ನಿಮ್ಮ ಜ್ಞಾನ ಮತ್ತು ಬುದ್ಧಿವಂತಿಕೆಯಿಂದ ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸುವಿರಿ. ಹಳೆಯ ಸಾಲಗಳನ್ನು ತೀರಿಸಲು ಈ ದಶೆ ಸಹಕಾರಿ, ಆದರೆ ಹೊಸ ಹೂಡಿಕೆಯಲ್ಲಿ ಎಚ್ಚರಿಕೆ ಅಗತ್ಯ.

​ಬುಧ ದಶೆ :

ಬುಧನು ಭಾಗ್ಯಾಧಿಪತಿಯಾಗಿದ್ದರೂ ವಕ್ರಗತಿಯಲ್ಲಿ ಚಲಿಸುವ ಕಾರಣ, ವಿದೇಶಿ ವ್ಯವಹಾರಗಳಲ್ಲಿ ಅಥವಾ ಉನ್ನತ ಶಿಕ್ಷಣದಲ್ಲಿ ಸ್ವಲ್ಪ ವಿಳಂಬ ಉಂಟಾಗಬಹುದು. ಸಂವಹನದಲ್ಲಿ ಸ್ಪಷ್ಟತೆ ಇದ್ದರೆ ಮಾತ್ರ ಮಧ್ಯಮ ಲಾಭ ಪಡೆಯಬಹುದು.

​ಅಶುಭ ಅಥವಾ ಎಚ್ಚರಿಕೆಯ ದಶೆಗಳು

​ಈ ಅವಧಿಯಲ್ಲಿ ನಡೆಯುವ ಕೆಳಗಿನ ದಶೆಗಳು ಸಣ್ಣಪುಟ್ಟ ತೊಂದರೆ ನೀಡಬಹುದು.

​ಮಂಗಳ ದಶೆ :

ಮಂಗಳನು ಎರಡನೇ ಮನೆಯಲ್ಲಿ ಇರುವುದರಿಂದ ಮಾತಿನಲ್ಲಿ ಉಗ್ರತೆ ಬರಬಹುದು. ಮಂಗಳ ದಶೆ ನಡೆಯುತ್ತಿದ್ದರೆ ಕೌಟುಂಬಿಕ ಕಲಹಗಳು ಅಥವಾ ಹಣಕಾಸಿನ ನಷ್ಟದ ಸಂಭವವಿರುತ್ತದೆ. ಆತುರದ ಹೂಡಿಕೆಗಳು ಅಪಾಯಕಾರಿ.

​ರಾಹು-ಕೇತು ದಶೆ :

ರಾಹು ಮತ್ತು ಶನಿಯ ಸಂಯೋಗವು 3ನೇ ಮನೆಯಲ್ಲಿದ್ದರೂ, ಇದು ಅತಿಯಾದ ಆತ್ಮವಿಶ್ವಾಸಕ್ಕೆ ಕಾರಣವಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಬಹುದು. ಗುಪ್ತ ಶತ್ರುಗಳ ಬಗ್ಗೆ ಎಚ್ಚರವಿರಲಿ.

ಪ್ರತಿ ಶನಿವಾರ ಶನಿ ಚಾಲೀಸಾ ಅಥವಾ ಸ್ತೋತ್ರ ಪಠಿಸುವುದರಿಂದ ಏಳೂವರೆ ಶನಿಯ ಅಂತಿಮ ಹಂತದ ಪ್ರಭಾವ ಕಡಿಮೆಯಾಗಿ ಶುಭ ಫಲಗಳು ದೊರೆಯಲಿವೆ. ಧೈರ್ಯ ಮತ್ತು ಶಕ್ತಿಗಾಗಿ ಪ್ರತಿದಿನ ಹನುಮಂತನನ್ನು ಪ್ರಾರ್ಥಿಸಿ. ಮಂಗಳನ ಅಶುಭ ಫಲ ಕಡಿಮೆ ಮಾಡಲು ಕೆಂಪು ಬಣ್ಣದ ವಸ್ತುಗಳನ್ನು ದಾನ ಮಾಡಿ.

– ಲೋಹಿತ ಹೆಬ್ಬಾರ್

Source link