Category Archives: Blog

Your blog category

Video: ಟ್ರಿಪ್‌ಗೆ ಹೊರಟ ಯುವತಿ ವಿಮಾನ ಹತ್ತುತ್ತಿದ್ದಂತೆ ರಜೆ ಕ್ಯಾನ್ಸಲ್ ಮಾಡಿದ ಬಾಸ್ – Kannada News | Boss cancels Gen Z employee’s vacation, video goes viral

ರೆಸ್ಟ್ ಇಲ್ಲದೇ ದುಡಿಯುವ ಉದ್ಯೋಗಿಗಳಿಗೆ (employees) ಒಂದೇ ಒಂದು ದಿನ ಕೊಟ್ಟರೆ ಸಾಕು ಎನ್ನುವಂತಾಗಿರುತ್ತದೆ. ರಜೆ ಸಿಕ್ಕೊಡನೆ ಟ್ರಿಪ್ ಮಾಡ್ತಾರೆ. ರಜೆಯ ವಿಚಾರವಾಗಿ ಜೆನ್ ಝೆಡ್ ತಲೆಮಾರಿನ ಯುವತಿಯ ಪೋಸ್ಟ್ ವೈರಲ್ ಆಗಿದೆ. ಹೌದು, ರಜೆ ಎಂದು ಟ್ರಿಪ್‌ಗೆ ಹೊರಟ ಯುವತಿಯೂ ವಿಮಾನ ಹತ್ತುವಷ್ಟರಲ್ಲಿ ಬಾಸ್ ರಜೆ ಕ್ಯಾನ್ಸಲ್ ಎಂಬ ಸಂದೇಶ ಕಳುಹಿಸಿ ಶಾಕ್ ನೀಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಘರ್ ಕೆ ಕಲೇಶ್ (Gharkekalesh) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಜೆನ್ ಜಿ ಉದ್ಯೋಗಿಯೂ ರಜೆ ಕ್ಯಾನ್ಸಲ್ ಆದ ಬಗ್ಗೆ ವಿವರಿಸಿರುವುದನ್ನು ಕಾಣಬಹುದು. ರಜೆಯಂದು ವಿಯೆಟ್ನಾಂಗೆ ಹೊರಟ ಸಿಮ್ರಾನ್‌ಳ ಬಾಸ್ ನಿರ್ಣಾಯಕ ಕೆಲಸಕ್ಕಾಗಿ ರಜೆಯನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಿದರು. ಹೀಗಾಗಿ ಈ ಉದ್ಯೋಗಿ ನಾನು ಕಂಪನಿಗಾಗಿ ಅಲ್ಲ, ಮುಕ್ತವಾಗಿ ಬದುಕಲು ಕೆಲಸ ಮಾಡುತ್ತೇನೆ. ಯೋಜನೆಯನ್ನು ರದ್ದುಗೊಳಿಸುತ್ತೇನೆ. ಆದರೆ ನನ್ನ ಲ್ಯಾಪ್‌ಟಾಪ್ 10 ದಿನಗಳವರೆಗೆ ಆಫ್ ಆಗಿರುತ್ತದೆ ಎಂದು ಹೇಳಿರುವುದನ್ನು ಶೀರ್ಷಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಜೆನ್ ಝೆಡ್ ಉದ್ಯೋಗಿ ಸಿಮ್ರಾನ್ ತನ್ನ ಈ ಟ್ರಿಪ್ ಪ್ಲ್ಯಾನ್ ಬಗ್ಗೆ ವಾರಗಳ ಮೊದಲೇ ತನ್ನ ಮ್ಯಾನೇಜರ್‌ಗೆ ತಿಳಿಸಿದ್ದೆ. ಆದರೆ ಸಮಯದಲ್ಲಿ ಯಾವುದೇ ಆಕ್ಷೇಪಣೆ ವ್ಯಕ್ತವಾಗಿರಲಿಲ್ಲ. ವಿಮಾನ ನಿಲ್ದಾಣದಲ್ಲಿದ್ದಾಗ, ತುರ್ತು ನಿಯೋಜನೆಯ ಅಗತ್ಯತೆಯಿಂದಾಗಿ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ರು. ಇದು ನಿಜವಾದ ಸಂವಹನ ವೈಫಲ್ಯ. ನೌಕರರ ವೈಯಕ್ತಿಕ ಸಮಯದ ಬಗ್ಗೆ ಕಂಪನಿಯ ಬಾಸ್‌ಗಳಿಗೆ ಇರದ ಗೌರವದ ಕೊರತೆಯನ್ನು ತೋರಿಸುತ್ತದೆ. ಕೆಲಸದಲ್ಲಿ ತುರ್ತು ಪರಿಸ್ಥಿತಿಗಳು ಸಂಭವಿಸಿದ್ರೂ, ಅವು ವೈಯಕ್ತಿಕ ಬದ್ಧತೆಗಳನ್ನು ಪದೇ ಪದೇ ಮೀರಬಾರದು. ತನ್ನ ವೈಯಕ್ತಿಕ ಜೀವನ ಹಾಗೂ ಪ್ರಯಾಣವನ್ನು ಆನಂದಿಸುವುದಕ್ಕಾಗಿ ತಾನು ಕೆಲಸ ಮಾಡುತ್ತೇನೆ. ಕೊನೆಯ ಕ್ಷಣದ ಬೇಡಿಕೆಗಳಿಗೆ ನೌಕರರು ಯಾವಾಗಲೂ ಲಭ್ಯವಿರಬೇಕು ಎಂಬ ನಿಯಮಗಳನ್ನು ನಾನು ಒಪ್ಪುವುದಿಲ್ಲ ಹೀಗಾಗಿ ಬಾಸ್‌ ಏನು ಬೇಕಾದರೂ ಮಾಡಲಿ ಐ ಡೋಂಟ್ ಕೇರ್ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 38 ಲಕ್ಷ ರೂ ಆಫರ್, ದುಬೈನಲ್ಲಿ ತಿಂಗಳಿಗೆ 5 ಲಕ್ಷ ರೂ ಸಂಬಳ; ವೃತ್ತಿ ಆಯ್ಕೆಯ ಬಗ್ಗೆ ಸಲಹೆ ಕೇಳಿದ ಟೆಕ್ಕಿ

ಈ ಪೋಸ್ಟ್ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ವೈಯುಕ್ತಿಕ ಜೀವನಕ್ಕಿಂತ ಮುಖ್ಯ ದುಡಿಮೆನಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಬಾಸ್ ಗಳ ಈ ವರ್ತನೆಗಳು ಅತೀರೇಕ ಅನಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ನಡವಳಿಕೆ ಸ್ವೀಕಾರಾರ್ಹವೇ? ಎಂದು ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನಾರ್ದನ ರೆಡ್ಡಿಗೆ ಮತ್ತೆ ‘ಗಣಿ’ ಉರುಳು? ಮಾಜಿ ಸಚಿವನಿಂದ 884 ಕೋಟಿ ನಷ್ಟ ವಸೂಲಿ? – Kannada News | Janardhan Reddy Faces New Recovery Demand of 884 Crore Over Illegal Mining

ಬಳ್ಳಾರಿ, ಫೆಬ್ರವರಿ 27: ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಿಬಿಐ ವಿಶೇಷ ನ್ಯಾಯಾಲಯದಲ್ಕಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ನಡೆಸಿರೋದು ಸಾಬೀತಾಗಿದ್ದು, ಅಕ್ರಮವಾಗಿ 29 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಸಾಗಾಟ‌ದ ಮೂಲಕ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ 884 ಕೋಟಿ ನಷ್ಟ ಮಾಡಿದ್ದಾರೆ. ಹೀಗಾಗಿ ಆ ಹಣವನ್ನು ಅವರಿಂದ ವಸೂಲಿ ಮಾಡುವಂತೆ ಟಪಾಲ್ ಗಣೇಶ್ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರದ ಹಿನ್ನೆಲೆಯಲ್ಲಿ ಸರ್ಕಾರ ವರದಿ ತರಿಸಿಕೊಳ್ಳಲು ಮುಂದಾಗಿದೆ. ಸಂಡೂರು ಕ್ಲಸ್ಟರ್‌ನಲ್ಲಿ ರೆಡ್ಡಿ ನಡೆಸಿರುವ ಗಣಿಗಾರಿಕೆ ಕುರಿತು ವರದಿ ನೀಡಲು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಧೀನ ಕಾರ್ಯದರ್ಶಿ, ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಂತರಾಷ್ಟ್ರೀಯ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಹೊಂಬಾಳೆ, ಹೊಸ ಸಾಹಸ – Kannada News | Hombale Films started overseas distribution of movies

ಹೊಂಬಾಳೆ ಫಿಲಮ್ಸ್ (Hombale Films) ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ದೊಡ್ಡ ನಿರ್ಮಾಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾ ಮೂಲಕ ಅಭೂತಪೂರ್ವ ಗೆಲುವು ಕಂಡ ಹೊಂಬಾಳೆ ಫಿಲಮ್ಸ್ ಆ ನಂತರವೂ ಸಹ ‘ಸಲಾರ್’, ‘ಕಾಂತಾರ’, ‘ಕಾಂತಾರ ಚಾಪ್ಟರ್ 1’ ಇನ್ನೂ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದು, ಪ್ರಭಾಸ್ ಜೊತೆಗೆ ಐದು ಸಿನಿಮಾಗಳ ಮುಂಗಡ ಒಪ್ಪಂದವನ್ನು ಸಹ ಮಾಡಿಕೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈಗಾಗಲೇ ಹೆಸರು ಮಾಡಿರುವ ಹೊಂಬಾಳೆ ಇದೀಗ ಸಾಗರದಾಟಿ ಹೊರ ದೇಶಕ್ಕೆ ತನ್ನ ಉದ್ಯಮ ವಿಸ್ತರಿಸಲು ಮುಂದಾಗಿದೆ.

ಹೊಂಬಾಳೆ ಫಿಲಮ್ಸ್ ಇದೀಗ ವಿದೇಶದಲ್ಲಿ ಸಿನಿಮಾ ವಿತರಣೆಗೆ ಮುಂದಾಗಿದೆ. ಈ ಬಗ್ಗೆ ಟ್ವಿಟ್ಟರ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ಹೊಂಬಾಳೆ, ಇನ್ನು ಮುಂದೆ ತಾವು ಓವರಸೀಸ್ ಡಿಸ್ಟ್ರಿಬ್ಯೂಷನ್ (ವಿದೇಶದಲ್ಲಿ ಸಿನಿಮಾ ವಿತರಣೆ) ಮಾಡುವುದಾಗಿ ಘೋಷಿಸಿದೆ. ‘ಸಿನಿಮಾ ಎನ್ನುವುದು ಅಂತರವನ್ನೂ ಮೀರಿ ಹೃದಯಗಳನ್ನು ಬೆಸೆಯುವ ಶಕ್ತಿ. ಭಾರತದಿಂದ ಜಗತ್ತಿನವರೆಗೆ, ನಮ್ಮ ಕಥೆಗಳು ದಿಕ್ಕು-ದಿಗಂತಗಳನ್ನೂ ದಾಟಿ ಸಾಗುತ್ತವೆ. ಅತೀವ ಕೃತಜ್ಞತೆ ಮತ್ತು ಸಂಭ್ರಮದೊಂದಿಗೆ, ಭಾರತೀಯ ಸಿನಿಮಾದ ಚೈತನ್ಯವನ್ನು ಗಡಿಗಳ ಆಚೆಗೆ, ವಿವಿಧ ಚಿತ್ರೋದ್ಯಮಗಳಿಗೆ ಮತ್ತು ಪ್ರತಿಯೊಬ್ಬರ ಹೃದಯಕ್ಕೆ ತಲುಪಿಸಲು ‘ಹೊಂಬಾಳೆ ಫಿಲ್ಮ್ಸ್’ ಈಗ ವಿದೇಶಿ ವಿತರಣಾ (Overseas Distribution) ಕ್ಷೇತ್ರಕ್ಕೆ ಹೆಜ್ಜೆ ಇಡುತ್ತಿದೆ. ಇನ್ನಷ್ಟು ವಿವರಗಳಿಗಾಗಿ ಅಥವಾ ಇದರಲ್ಲಿ ಯಾವುದಾದರೂ ನಿರ್ದಿಷ್ಟ ಪದ ಬದಲಾವಣೆ ಬೇಕಿದ್ದಲ್ಲಿ ಕೇಳಬಹುದು. ನಾನಿಲ್ಲಿ ಸಹಾಯಕ್ಕೆ ಸಿದ್ಧ’ ಎಂದು ಹೊಂಬಾಳೆ ಹೇಳಿದೆ.

ಇದನ್ನೂ ಓದಿ:2025ರ ಟಾಪ್ ಐದು ಸಿನಿಮಾಗಳ ಪಟ್ಟಿಯಲ್ಲಿ ಹೊಂಬಾಳೆಯ ಎರಡು ಚಿತ್ರಗಳಿಗೆ ಸ್ಥಾನ

ಇತ್ತೀಚೆಗಿನ ವರ್ಷಗಳಲ್ಲಿ ಭಾರತೀಯ ಸಿನಿಮಾಗಳಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಆದರೆ ವಿದೇಶದಲ್ಲಿ ಸರಿಯಾದ ವಿತರಣೆ ವ್ಯವಸ್ಥೆ ಇಲ್ಲ. ಒಮ್ಮೊಮ್ಮೆ ಸಿನಿಮಾಗಳ ನಿರ್ಮಾಪಕರೇ ವಿದೇಶಗಳಿಗೆ ಹೋಗಿ ಸಿನಿಮಾಗಳನ್ನು ವಿತರಣೆ ಮಾಡಿದ್ದೂ ಸಹ ಇದೆ. ಈ ಸಮಸ್ಯೆ ಗುರುತಿಸಿದಂತಿರುವ ಹೊಂಬಾಳೆ ವಿದೇಶಗಳಲ್ಲಿ ಸಿನಿಮಾ ವಿತರಣೆಗೆ ಮುಂದಾಗಿದೆ. ಭಾರತದಲ್ಲಿ ಒಳ್ಳೆಯ ಸಿನಿಮಾ ವಿತರಣೆ ನೆಟ್​​ವರ್ಕ್ ಹೊಂದಿರುವ ಹೊಂಬಾಳೆ ಇದೀಗ ವಿದೇಶದಲ್ಲಿ ಅದೇ ಮಾದರಿಯ ನೆಟ್​​ವರ್ಕ್ ಸ್ಥಾಪನೆಗೆ ಮುಂದಾಗಿದೆ.

ಸಿನಿಮಾ ನಿರ್ಮಾಣದ ವಿಷಯಕ್ಕೆ ಬರುವುದಾದರೆ ಹೊಂಬಾಳೆ ಮುಂದಿನ ದಿನಗಳಲ್ಲಿ ‘ಸಲಾರ್ 2’ ಸಿನಿಮಾ ನಿರ್ಮಾಣ ಮಾಡಲಿದೆ. ಅದಾದ ಬಳಿಕ ಪ್ರಶಾಂತ್ ವರ್ಮಾ ನಿರ್ದೇಶಿಸಿ ಪ್ರಭಾಸ್ ನಟಿಸಲಿರುವ ಇನ್ನೊಂದು ಸಿನಿಮಾಕ್ಕೆ ಬಂಡವಾಳ ಹೂಡಲಿದೆ. ‘ರಿಚರ್ಡ್ ಆಂಟೊನಿ’ ಬಹಳ ಹಿಂದೆಯೇ ಘೋಷಿಸಿದ್ದು, ಆ ಸಿನಿಮಾ ಶೀಘ್ರವೇ ಶೂಟಿಂಗ್ ಆರಂಭಿಸಲಿದೆ. ‘ಕಾಂತಾರ ಚಾಪ್ಟರ್ 2’ ಸಿನಿಮಾ ಸಹ ನಿರ್ಮಾಣ ಮಾಡುವ ಸಾಧ್ಯತೆ ಇದೆ. ಇನ್ನು ‘ಕೆಜಿಎಫ್ 3’ ಸಹ ಲೈನಪ್​​ನಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ 5.24 ಕೋಟಿ ರೂ ಮೌಲ್ಯದ ಡ್ರಗ್ಸ್, ಗಾಂಜಾ ಜಪ್ತಿ: ಮಹಿಳೆಯರಿಬ್ಬರು ಸೇರಿ 16 ಆರೋಪಿಗಳ ಬಂಧನ – Kannada News | Bengaluru Drug Bust: 5.24 Cr Worth Drugs and Ganja Seized, 16 Peddlers Arrested

ಜಪ್ತಿ ಮಾಡಲಾದ ಡ್ರಗ್ಸ್​Image Credit source: tv9 kannada

ಬೆಂಗಳೂರು, ಫೆಬ್ರವರಿ 27: ವಿವಿಧ ಡ್ರಗ್ಸ್ ಪ್ರಕರಣಗಳಲ್ಲಿ (Drugs Case) ಇಬ್ಬರು ಮಹಿಳೆಯರು ಸೇರಿ ಒಟ್ಟು 16 ಪೆಡ್ಲರ್​ಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಹಾಗೂ ನಗರದ ವಿವಿಧ ಠಾಣೆಗಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ವಿದೇಶಿ ಪ್ರಜೆಗಳು ಸೇರಿದಂತೆ ಹೊರ ರಾಜ್ಯದ 8 ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಜೊತೆಗೆ ನಗರದಲ್ಲಿ 5.24 ಕೋಟಿ ರೂ ಮೌಲ್ಯದ ಡ್ರಗ್ಸ್, ಮೂರು ಸಾವಿರ ಎಂಡಿಎಂ ಮಾತ್ರೆಗಳು ಮತ್ತು ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ನೈಜೀರಿಯಾ ಪ್ರಜೆಯ ಡ್ರಗ್ಸ್ ಡಿಲೀಂಗ್​​ಗೆ ಸಾಥ್ ಕೊಡುತ್ತಿದ್ದ ಕಿಲಾಡಿ ಲೇಡಿಯ ಬಂಧನ

ಇನ್ನು ನೈಜೀರಿಯಾ ಪ್ರಜೆಯ ಡ್ರಗ್ಸ್ ಡಿಲೀಂಗ್​​ಗೆ ಸಾಥ್ ಕೊಡುತ್ತಿದ್ದ ಕಿಲಾಡಿ ಲೇಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಭಾಷಿಣಿ ಬಂಧಿತ ಮಹಿಳೆ. ಬಾಗಲೂರು ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೇರಳ ಪೊಲೀಸರ ಭರ್ಜರಿ ಕಾರ್ಯಾಚರಣೆ: 1 ಕೋಟಿ ರೂ ಮೌಲ್ಯದ ಡ್ರಗ್ಸ್ ಸೀಜ್, ಪೆಡ್ಲರ್ ಅರೆಸ್ಟ್

ಬಂಧಿತ ಸುಭಾಷಿಣಿ, ನೈಜೀರಿಯನ್​​ ಪ್ರಜೆಯೊಬ್ಬನ ಜೊತೆ ಸೇರಿ ಡ್ರಗ್ಸ್ ಡಿಲೀಂಗ್​​​ ಮಾಡುತ್ತಿದ್ದಳು. ವಿದೇಶಿ ಪ್ರಜೆ ನೈಜೀರಿಯಾದಿಂದ ಡ್ರಗ್ಸ್​ ತರಿಸಿಕೊಂಡು ಸುಭಾಷಿಣಿ ಮನೆಯಲ್ಲಿ ಶೇಖರಿಸಿಟ್ಟಿದ್ದ. ಆತ ಸೂಚಿಸಿದ್ದ ವಿಳಾಸ, ಗ್ರಾಹಕರಿಗೆ ಸುಭಾಷಿಣಿ ತಲುಪಿಸುತ್ತಿದ್ದಳು.

ವಿದೇಶಿ ಡ್ರಗ್ ಪೆಡ್ಲರ್ ಪರಾರಿ

ಇನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಬಂಧಿತಳಿಂದ 2 ಕೋಟಿ ರೂ ಮೌಲ್ಯದ 300 ಎಕ್ಸ್ ಟೆಸಿ ಮಾತ್ರೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಾರಿಯಾಗಿರುವ ವಿದೇಶಿ ಡ್ರಗ್ ಪೆಡ್ಲರ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟಲ್ಲಿ ಭರ್ಜರಿ ಕಾರ್ಯಾಚರಣೆ: ಬ್ಯಾಂಕಾಕ್, ಹಾಂಕಾಂಗ್​ನಿಂದ ಬರ್ತಿದ್ದ ಅಪಾರ ಪ್ರಮಾಣದ ಡ್ರಗ್ಸ್ ವಶ

ಇನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಕೋಟಿಗಟ್ಟಲೇ ಮಾದಕ ವಸ್ತುಗಳನ್ನು ಸಿಸಿಬಿ ಪೊಲೀಸರು ಸೀಜ್ ಮಾಡಿ ಪೆಡ್ಲರ್​ಗಳನ್ನು ಲಾಕ್​ ಮಾಡಿದ್ದರು. ಬಂಧಿತರಲ್ಲಿ ಬಹುಪಾಲು ನೆರೆ ರಾಜ್ಯದವರು ಸೇರಿ ವಿದೇಶಿಗರನ್ನು ಕಂಬಿಹಿಂದೆ ತಳ್ಳಿದ್ದರು. ಅಮೃತಹಳ್ಳಿ, ಹೆಬ್ಬಗೋಡಿ, ಶೇಷಾದ್ರಿಪುರಂ, ಜೆಬಿ ನಗರ, ಮಹಾಲಕ್ಷ್ಮೀ ಲೇಔಟ್, ಗೋವಿಂದರಾಜ್ ಠಾಣಾ ವ್ಯಾಪ್ತಿಗಳಲ್ಲಿ ಪೆಡ್ಲರ್​ಗಳನ್ನು ಲಾಕ್ ಮಾಡಿ ಬರೋಬ್ಬರಿ 20 ಕೋಟಿ ರೂ ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳನ್ನು ಸೀಜ್​ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಾನು ಕೆಲಸ ಮಾಡಿದ ಆಫೀಸಿಗೇ 91 ಲಕ್ಷ ರೂ. ಕನ್ನ! ಆರೋಪಿ ಕ್ಯಾಶಿಯರ್ ಅಂದರ್ – Kannada News | Cashier And His Friends Arrested For Stealing Rs 91 Lakh From Builders Office In Bengaluru

ಬೆಂಗಳೂರು, ಫೆಬ್ರವರಿ 27: ಸದಾಶಿವನಗರದಲ್ಲಿರುವ ಬಿಲ್ಡರ್ ನರಸಿಂಹ ಅವರ ಕಚೇರಿಯಲ್ಲಿ ನಡೆದ 91.76 ಲಕ್ಷ ರೂಪಾಯಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಚೇರಿಯ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಧನಂಜಯ್ ಮತ್ತು ಅವನ ಸ್ನೇಹಿತ ಪ್ರವೀಣ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಪೊಲೀಸರ ತನಿಖೆಯಿಂದಾಗಿ ಆರೋಪಿಗಳನ್ನು ಬಂಧಿಸಲಾಗಿದ್ದು, ಕಳ್ಳತನವಾದ ಒಟ್ಟು 91,76,000 ರೂಪಾಯಿಗಳ ಪೈಕಿ 81,66,000 ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ. ಇನ್ನೂ ಇಬ್ಬರು ಆರೋಪಿಗಳು ಪತ್ತೆಯಾಗಬೇಕಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ತಾಂತ್ರಿಕ ಆಧಾರಗಳ ಮೇಲೆ ತನಿಖೆ ನಡೆಸಿ, ಬಹುಬೇಗ ಹಣವನ್ನು ವಸೂಲಿ ಮಾಡಿದ ಸದಾಶಿವನಗರ ಪೊಲೀಸರ ತಂಡದ ಕಾರ್ಯಕ್ಕೆ ಸೀಮಂತ್ ಕುಮಾರ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಡುರಸ್ತೆಯಲ್ಲಿ ಇಬ್ಬರು ಕಾಲೇಜು ಹುಡುಗಿಯರಿಗೆ ಲಿಪ್​​​ ಕಿಸ್ ಮಾಡಿದ ಯುವಕ, ವಿಡಿಯೋ ವೈರಲ್ – Kannada News | School Uniform Controversy: Viral Video Sparks Discipline Debate

ಶಾಲಾ-ಕಾಲೇಜುಗಳು ಜ್ಞಾನದ ದೇಗುಲಗಳು ಮತ್ತು ಶಿಸ್ತಿನ ತಳಹದಿ ಎಂಬ ನಂಬಿಕೆ ಇದೆ. ಆದರೆ ಇದೀಗ ವೈರಲ್​​ ಆಗಿರುವ ವಿಡಿಯೋದಲ್ಲಿ ಇಬ್ಬರು ಕಾಲೇಜು ಹುಡುಗಿಯರು ಮತ್ತು ಒಬ್ಬ ಹುಡುಗ ಸಮವಸ್ತ್ರದಲ್ಲೇ ಪರಸ್ಪರ ಅಪ್ಪಿಕೊಂಡು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಸಮವಸ್ತ್ರ ಧರಿಸಿಯೇ ಸಿನೆಮಾ ಹಾಡೊಂದಕ್ಕೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಕೇವಲ ‘ಲೈಕ್ಸ್’ ಮತ್ತು ‘ಶೇರ್’ಗಳಿಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ ಎನ್ನಲಾಗಿದೆ. ಶಾಲೆಗಳು ಮಕ್ಕಳ ವ್ಯಕ್ತಿತ್ವ ರೂಪಿಸುವ ಮತ್ತು ಉತ್ತಮ ಭವಿಷ್ಯ ಕಟ್ಟಿಕೊಡುವ ಜಾಗ. ಸಮವಸ್ತ್ರ ಧರಿಸಿದಾಗ ಆ ಶಾಲೆಯ ಗೌರವವನ್ನು ಕಾಪಾಡುವುದು ವಿದ್ಯಾರ್ಥಿಗಳ ಜವಾಬ್ದಾರಿಯಲ್ಲವೇ? ಎಂಬುದು ಅನೇಕರ ಪ್ರಶ್ನೆ. ಶಾಲಾ ಸಮವಸ್ತ್ರವು ಸಮಾನತೆ ಮತ್ತು ಶಿಸ್ತಿನ ಸಂಕೇತ. ಅಂತಹ ಸಮವಸ್ತ್ರದಲ್ಲೇ ಇಂತಹ ವರ್ತನೆಗಳು ಶಾಲಾ ಮರ್ಯಾದೆಗೆ ಕುಂದು ತರುತ್ತವೆ ಎಂಬ ವಾದ ಕೇಳಿಬರುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಿಂಬಾಬ್ವೆ ವಿರುದ್ಧ ಗೆದ್ದರೂ ಮೇಲೇಳದ ಟೀಂ ಇಂಡಿಯಾ ಸೆಮಿಫೈನಲ್‌ ತಲುಪುವುದು ಹೇಗೆ? – Kannada News | Team India’s T20 World Cup Semis Path: Beat WI After Zimbabwe Win to Qualify!

2026 ರ ಟಿ20 ವಿಶ್ವಕಪ್‌ನ (T20 World Cup 2026) ಸೂಪರ್ 8 ಸುತ್ತಿನಲ್ಲಿ ಜಿಂಬಾಬ್ವೆ ತಂಡವನ್ನು 72 ರನ್​ಗಳಿಂದ ಮಣಿಸಿದ ಟೀಂ ಇಂಡಿಯಾ ತನ್ನ ಸೆಮಿಫೈನಲ್‌ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ. ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 256 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ 184 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್​ಗೇರುವ ಅವಕಾಶವನ್ನು ಹೊಂದಿದೆಯಾದರೂ, ಪಾಯಿಂಟ್ ಪಟ್ಟಿಯಲ್ಲಿ ಮಾತ್ರ ಮೂರನೇ ಸ್ಥಾನದಲ್ಲೇ ಉಳಿದಿದೆ. ಇದು ಟೀಂ ಇಂಡಿಯಾ ಅಭಿಮಾನಿಗಳನ್ನು ಆತಂಕಕ್ಕೀಡುಮಾಡಿದೆ. ಪಾಯಿಂಟ್ ಪಟ್ಟಿಯಲ್ಲಿ ಭಾರತ ತಂಡ 3ನೇ ಸ್ಥಾನದಲ್ಲಿದ್ದರೂ, ಸೆಮಿಫೈನಲ್​ಗೆ ಸುಲಭವಾಗಿ ಅರ್ಹತೆ ಪಡೆಯುವ ಅವಕಾಶ ಹೊಂದಿದೆ. ಹಾಗಿದ್ದರೆ, ಭಾರತ ಸೆಮಿಫೈನಲ್​ಗೇರಬೇಕೆಂದರೆ ಏನು ಮಾಡಬೇಕು? ವಿವರ ಇಲ್ಲಿದೆ.

ಭಾರತ ಸೆಮಿಫೈನಲ್ ತಲುಪುವುದು ಹೇಗೆ?

ದಕ್ಷಿಣ ಆಫ್ರಿಕಾ ಈಗಾಗಲೇ ಗುಂಪು 1 ರಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಮಾರ್ಚ್ 1 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದಿಂದ ನಿರ್ಧರಿಸಲಾಗುತ್ತದೆ. ಟೀಂ ಇಂಡಿಯಾ ಈ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಸೂರ್ಯಕುಮಾರ್ ಪಡೆ, ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದರೆ ದಾಕು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಈ ಗೆಲುವಿನೊಂದಿಗೆ ಭಾರತ 4 ಅಂಕ ಪಡೆಯುವ ಮೂಲಕ ಗುಂಪು 1 ರಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್‌ ಟಿಕೆಟ್ ಖಚಿತ ಪಡಿಸಿಕೊಳ್ಳುತ್ತದೆ.

IND vs ZIM: ಟಿ20 ವಿಶ್ವಕಪ್​ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ

ಟಿ20 ವಿಶ್ವಕಪ್‌ನಲ್ಲಿ ದಾಖಲೆ ಹೇಗಿದೆ?

ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಪಂದ್ಯಗಳ ದಾಖಲೆ ನಿಜಕ್ಕೂ ಅದ್ಭುತವಾಗಿದೆ. ವಾಸ್ತವವಾಗಿ, ಈ ಪಂದ್ಯಾವಳಿಯಲ್ಲಿ ಎರಡೂ ತಂಡಗಳು ನಾಲ್ಕು ಬಾರಿ ಮುಖಾಮುಖಿಯಾಗಿವೆ. ಈ ಅವಧಿಯಲ್ಲಿ, ವೆಸ್ಟ್ ಇಂಡೀಸ್ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ಕೇವಲ ಒಂದು ಪಂದ್ಯವನ್ನು ಗೆದ್ದಿದೆ. ಆದ್ದರಿಂದ, ಈ ಪಂದ್ಯವು ಟೀಂ ಇಂಡಿಯಾಕ್ಕೆ ಸುಲಭವಲ್ಲ. 2014 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಒಮ್ಮೆ ಮಾತ್ರ ಟೀಂ ಇಂಡಿಯಾ ಗೆಲುವು ಸಾಧಿಸಿದೆ. 2016 ರಲ್ಲಿ ನಡೆದಿದ್ದ ಕೊನೆಯ ಮುಖಾಮುಖಿಯಲ್ಲಿ ವೆಸ್ಟ್ ಇಂಡೀಸ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿಸಿತ್ತು. ಆದ್ದರಿಂದ, ಈ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತ ತಂಡಕ್ಕೆ ಇದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:43 pm, Fri, 27 February 26

Source link

ಪೋಕ್ಸೋ ಕೇಸ್​​: ವಿಚಾರಣೆಗೆ ಹಾಜರಾಗದೆ ಹೈಕೋರ್ಟ್​​ ಮೆಟ್ಟಿಲೇರಿದ ಮಲ್ಲಿಕಾರ್ಜುನ ಮುತ್ಯಾ – Kannada News | Mallikarjuna Muthya Moves High Court to Quash FIR, Skips Police Inquiry

ಮಲ್ಲಿಕಾರ್ಜುನ್​​ ಮುತ್ಯಾImage Credit source: Google

ಯಾದಗಿರಿ, ಫೆಬ್ರವರಿ 27: ಅಪ್ರಾಪ್ತ ಬಾಲಕಿಯೋರ್ವಳ ಜೊತೆ ಅನುಚಿತ ವರ್ತನೆ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಕೋರಿ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಯಮನೂರಪ್ಪ ಮುತ್ಯಾನ ಮಠದ ಮಲ್ಲಿಕಾರ್ಜುನ ಮುತ್ಯಾ ಹೈಕೋರ್ಟ್ ಮೊರೆ ಹೋಗಿದ್ದಾರೆ. ಪೋಷಕರೇ ದೂರು ನೀಡಿಲ್ಲ. ಆದ್ರೂ ಎಫ್​ಐಆರ್ ದಾಖಲಿಸಿರುವ ಕಾರಣ, ಈ ಸಂಬಂಧ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಸೋಮವಾರ ಈ ಅರ್ಜಿಯ ವಿಚಾರಣೆ ನಡೆಯಲಿದೆ.

ಪ್ರಕರಣ ರದ್ದು ಮಾಡುವಂತೆ ಭಕ್ತರ ಪಟ್ಟು

ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೋ ಕೇಸ್ ಹಿನ್ನಲೆ ಪ್ರಕರಣ ಕುರಿತು ಮುಂದಿನ ಹೋರಾಟದ ಬಗ್ಗೆ ಮಠದ ಆವರಣದಲ್ಲಿ ಸಭೆ ನಡೆಸಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಸೇರಿ ಭಕ್ತರು ಸಭೆಯಲ್ಲಿ ಭಾಗಿಯಾಗಿದ್ದು, ಮುಂದಿನ‌ ಕಾನೂನು ಹೋರಾಟ ಸೇರಿ ಮಹತ್ವದ ನಿರ್ಣಯಗಳನ್ನು ಮಾಡಲಾಗಿದೆ. ಘಟನೆ ಸಂಬಂಧ ಅಪ್ರಾಪ್ತೆಯ ಪೋಷಕರು ದೂರು ನೀಡದಿದ್ದರೂ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಕೂಡಲೇ ಕೇಸ್​​ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯಾದ್ಯಂತ ಬಖ್ತರು ಉಗ್ರ ಹೋರಾಟ ನಡೆಸೋದಾಗಿ ಮಹಲ್ ರೋಜಾ ಮಠದಲ್ಲಿ ಸಭೆ ಬಳಿಕ ಬಿಜೆಪಿ ನಾಯಕಿ ಲಲಿತಾ ಹೇಳಿದ್ದಾರೆ.

ಇದನ್ನೂ ಓದಿ: ಬಾಲಕಿ‌ ಪೋಷಕರಿಂದ ವಿಡಿಯೋ ಹೇಳಿಕೆ ರಿಲೀಸ್; ಮಲ್ಲಿಕಾರ್ಜುನ ಮುತ್ಯಾನ ಬಗ್ಗೆ ಹೇಳಿದ್ದಿಷ್ಟು

ಅಪ್ರಾಪ್ತೆಯ ಹೇಳಿಕೆಯನ್ನೂ ಪಡೆಯದೆ ಎಫ್​​ಐಆರ್​​ ದಾಖಲಿಸಲಾಗಿದೆ. ಇಲ್ಲಿ ಜಿಲ್ಲಾಡಳಿತ ಎಡವಿದ್ದು, ಕೇಸ್​​ ರದ್ದು ಮಾಡಲು ಎರಡು ದಿನ ಗಡುವು ನೀಡುತ್ತೇವೆ. ಆ ಬಳಿಕವೂ ಪ್ರಕರಣ ರದ್ದು ಮಾಡದಿದ್ದಲ್ಲಿ ಭಕ್ತರು ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಮಠದ ಭಕ್ತರು ಎಚ್ಚರಿಸಿದ್ದಾರೆ. ಈ ನಡುವೆ ಪ್ರಕರಣ ಸಂಬಂಧ ಪೊಲೀಸರು ನೋಟಿಸ್​​ ನೀಡಿದ್ದರೂ ಮಲ್ಲಿಕಾರ್ಜುನ್​​ ಮುತ್ಯಾ ಮಾತ್ರ ಈ ವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಕೇಸ್​​ ದಾಖಲು ಬೆನ್ನಲ್ಲೇ ನಾಪತ್ತೆಯಾಗಿರುವ ಮುತ್ಯಾ ನಿನ್ನೆ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ರಿಲೀಸ್​​ ಮಾಡಿದ್ದರು. ಅತ್ತ ಮಹಾರಾಷ್ಟ್ರದ ಸೊಲ್ಲಾಪುರದಿಂದ ಅಪ್ರಾಪ್ತ ಬಾಲಕಿ‌ ಪೋಷಕರಿಂದು ಕೂಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ವಿಡಿಯೋವನ್ನು ತಿರುಚಿರುವ ಆರೋಪ ಮಾಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಾಯಕಿಯಾಗಿ ನಟಿಸುವಾಗ ಅನುಭವಿಸಿದ ಕಷ್ಟಗಳ ನೆನಪಿಸಿಕೊಂಡ ಪ್ರೇಮಾ – Kannada News | Actress Prema talks about her struggles while acting back then

ದಕ್ಷಿಣ ಭಾರತದ ಸ್ಟಾರ್ ನಟಿ ಎನಿಸಿಕೊಂಡಿದ್ದ ಪ್ರೇಮಾ (Prema), ನಟನೆಯಿಂದ ದೂರಾಗಿ ಬಳಿಕ 2017 ರಲ್ಲಿ ಮತ್ತೆ ಕಮ್ ಬ್ಯಾಕ್ ಸಹ ಮಾಡಿದರು. ಎವರ್‌ಗ್ರೀನ್ ನಟಿ ಪ್ರೇಮಾ ಅವರು ಇತ್ತೀಚೆಗೆ ತಮ್ಮ ಸುದೀರ್ಘ 23 ವರ್ಷಗಳ ಸಿನಿಮಾ ಬದುಕಿನ ಸಿಹಿ-ಕಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟ ಅವರು, ಸ್ಟಾರ್ ನಟಿಯಾಗಿ ಬೆಳೆದ ಹಾದಿ ಎಷ್ಟೊಂದು ಕಠಿಣವಾಗಿತ್ತು ಎಂಬುದನ್ನ ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಸಿನಿಮಾ ಒಂದರಲ್ಲಿ ನಟಿಸುವಾಗ ಅನುಭವಿಸಿದ ನೋವು, ಅದರಂದ ಆದ ಹಾನಿಯ ಬಗ್ಗೆಯೂ ಮಾತನಾಡಿದ್ದಾರೆ ನಟಿ.

ಪ್ರೇಮಾ ಅವರಿಗೆ ಮೊದಲಿನಿಂದಲೂ ಗಗನಸಖಿ ಆಗಬೇಕೆಂಬ ಹಂಬಲ ಇತ್ತಂತೆ. ಆದರೆ ತಾಯಿಯ ಪ್ರೋತ್ಸಾಹದಿಂದಾಗಿ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಉಪೇಂದ್ರ ನಿರ್ದೇಶನದ ‘ಓಂ’ ಸಿನಿಮಾ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಪ್ರೇಮ ನಟಿಸಿದ ಎರಡನೇ ಸಿನಿಮಾ ಅದು. ಆ ಚಿತ್ರದ ರಿಯಲಿಸ್ಟಿಕ್ ನಟನೆಗಾಗಿ ಅವರು ಗಾಜಿನ ಚೂರುಗಳು ಮತ್ತು ಬೆಂಕಿಯ ನಡುವೆ ಕೆಲಸ ಮಾಡಬೇಕಾಗಿದ್ದ ಕಠಿಣ ಸಂದರ್ಭಗಳನ್ನು ಅವರು ನೆನಪಿಸಿಕೊಂಡಿದ್ದಾರೆ.

ತೆಲುಗಿನಲ್ಲಿ ‘ಧರ್ಮಚಕ್ರಂ’ ಮತ್ತು ‘ದೇವಿ’ಯಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಪ್ರೇಮಾ ಅವರಿಗೆ ಆರಂಭದಲ್ಲಿ ಭಾಷೆಯ ಸಮಸ್ಯೆ ಎದುರಾಗಿತ್ತಂತೆ. ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ತಮಗೆ ತೆಲುಗು ಕಲಿಸಿಕೊಟ್ಟರು ಎಂದು ಪ್ರೇಮ ನೆನಪು ಮಾಡಿಕೊಂಡಿದ್ದಾರೆ. ಆಗ ಇಂದಿನಂತೆ ಕ್ಯಾರವಾನ್ ಸೌಲಭ್ಯಗಳಿರಲಿಲ್ಲ, ಸೆಟ್‌ನಲ್ಲಿ ಎಲ್ಲರೂ ಒಂದೇ ಕೋಣೆಯಲ್ಲಿ ಕುಳಿತು ಕೆಲಸ ಮಾಡಬೇಕಿತ್ತು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ:‘ಕವಳ’ ಸಿನಿಮಾ ಮುಹೂರ್ತ ಶುಭ ಹಾರೈಸಿದ ನಟ ರವಿಚಂದ್ರನ್

ಮಹಿಳಾ ಪ್ರಧಾನ ಚಿತ್ರಗಳಲ್ಲಿ ಮೈಲಿಗಲ್ಲು ಸೃಷ್ಟಿಸಿದ ‘ದೇವಿ’ ಚಿತ್ರದ ಪಾತ್ರಕ್ಕಾಗಿ ಅವರು ವಿಶೇಷ ಲೆನ್ಸ್‌ಗಳನ್ನು ಧರಿಸಬೇಕಾಗಿತ್ತು. ಇದರ ಪರಿಣಾಮವಾಗಿ ‘ದೇವಿ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರಿಗೆ ತೀವ್ರವಾದ ಕಣ್ಣಿನ ಸೋಂಕು ಕಾಣಿಸಿಕೊಂಡಿತ್ತು. ನಟನೆಯ ಮೇಲಿನ ಅತಿಯಾದ ಪ್ರೀತಿಯಿಂದ ಆ ಕಷ್ಟವನ್ನೂ ಅವರು ಮೆಟ್ಟಿ ನಿಂತಿದ್ದಾಗಿ ಪ್ರೇಮ ಹೇಳಿಕೊಂಡಿದ್ದಾರೆ. ತೆಲುಗಿನ ವೆಂಕಟೇಶ್, ಮೋಹನ್ ಬಾಬು ಮತ್ತು ಜಗಪತಿ ಬಾಬು ಅವರಂತಹ ದಿಗ್ಗಜ ನಟರ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ಪ್ರೇಮಾ, ಮೋಹನ್ ಬಾಬು ಮತ್ತು ವಿಷ್ಣುವರ್ಧನ್ ಅವರ ಶಿಸ್ತು ಮತ್ತು ಸಮಯಪಾಲನೆ ತಮ್ಮ ಮೇಲೆ ದೊಡ್ಡ ಪ್ರಭಾವ ಬೀರಿದೆ ಎಂದು ತಿಳಿಸಿದ್ದಾರೆ.

1995 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಪ್ರೇಮ, 2009ರ ವರೆಗೆ ಕನ್ನಡ, ತೆಲುಗು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದರು. ಅದಾದ ಬಳಿಕ ಚಿತ್ರರಂಗದಿಂದ ದೂರಾದ ಪ್ರೇಮ, ವೈಯಕ್ತಿಕ ಜೀವನದಲ್ಲಿ ಬ್ಯುಸಿ ಆದರು. ಆದರೆ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ಕೆಲವು ಏರು-ಪೇರುಗಳ ಬಳಿಕ 2017 ರಲ್ಲಿ ಮತ್ತೆ ಚಿತ್ರರಗಕ್ಕೆ ರೀ ಎಂಟ್ರಿ ಕೊಟ್ಟರು. ಈಗ ಅಲ್ಲೊಂದು-ಇಲ್ಲೊಂದು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Kolkata Earthquake: ಕೇಂದ್ರ ಸಚಿವರು ವೇದಿಕೆಯಲ್ಲಿ ಮಾತನಾಡುತ್ತಿರುವಾಗಲೇ ಕಂಪಿಸಿದ ಭೂಮಿ – Kannada News | Powerful Tremors Shake Kolkata, Quake Origin Traced to Bangladesh

ಕೋಲ್ಕತ್ತಾ, ಫೆಬ್ರವರಿ 27: ಕೋಲ್ಕತ್ತಾದಲ್ಲಿ ವೇದಿಕೆಯ ಮೇಲೆ ಕೇಂದ್ರ ಸಚಿವ ಸುಕಾಂತ ಮಜುಂದಾರ್  ಮಾತನಾಡುತ್ತಿರುವಾಗಲೇ ಭೂಮಿ ಕಂಪಿಸಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.  ಕೋಲ್ಕತ್ತಾದಲ್ಲಿ ಇಂದು ಮಧ್ಯಾಹ್ನ ಹಠಾತ್ತನೆ ಭೂಮಿ ಕಂಪಿಸಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ನಗರದ ಹಲವು ಕಡೆಗಳಲ್ಲಿ ಸೌಮ್ಯದಿಂದ ಮಧ್ಯಮ ಪ್ರಮಾಣದ ಭೂಕಂಪ ಸಂಭವಿಸಿದೆ. ಹಠಾತ್ ಭೂಕಂಪನದಿಂದಾಗಿ ಒಂದು ಕ್ಷಣ ಜನರು ಭಯಭೀತರಾದರು.ತಮ್ಮ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಓಡಿಬಂದಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಯಾವುದೇ ಸಾವುನೋವುಗಳು ಅಥವಾ ದೊಡ್ಡ ಹಾನಿಯ ವರದಿಗಳು ಬಂದಿಲ್ಲ. ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಜನರು ಜಾಗರೂಕರಾಗಿರುವಂತೆ ತಿಳಿಸಿದ್ದಾರೆ. ಮಧ್ಯಾಹ್ನ 1.22 ಕ್ಕೆ ಭೂಕಂಪ ಸಂಭವಿಸಿದೆ. ಅದರ ತೀವ್ರತೆ ತುಂಬಾ ಹೆಚ್ಚಾಗಿತ್ತು. ಕಂಪನ ಸಂಭವಿಸಿದಾಗ ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿದ್ದರು.

ಬಾಂಗ್ಲಾದೇಶದಲ್ಲೂ ಭೂಕಂಪದ ಅನುಭವವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಫೆಬ್ರವರಿ 27 ರಂದು ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಕೇಂದ್ರಬಿಂದು ಬಾಂಗ್ಲಾದೇಶದ ಖುಲ್ನಾದಿಂದ ನೈಋತ್ಯಕ್ಕೆ 26 ಕಿಲೋಮೀಟರ್ ದೂರದಲ್ಲಿತ್ತು. ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಭೂಕಂಪದ ತೀವ್ರತೆ ಹೆಚ್ಚು ಕಂಡುಬಂದಿದೆ.

ಕಳೆದ ಎರಡು ತಿಂಗಳಲ್ಲಿ ಕೋಲ್ಕತ್ತಾದಲ್ಲಿ ಸಂಭವಿಸಿದ ಮೂರನೇ ಭೂಕಂಪ ಇದಾಗಿದೆ. ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಡೋಕಾನಿಯಾ ಅವರು ವೀಡಿಯೊ ಹಂಚಿಕೊಂಡಿದ್ದಾರೆ. ಹಲವು ವರ್ಷಗಳಲ್ಲಿ ಕೋಲ್ಕತ್ತಾವನ್ನು ಅಪ್ಪಳಿಸಿದ ಅತ್ಯಂತ ಶಕ್ತಿಶಾಲಿ ಭೂಕಂಪ ಇದಾಗಿದೆ. ತೀವ್ರತೆ 6ಕ್ಕಿಂತ ಮೇಲಿರುವಂತೆ ಭಾಸವಾಗಿತ್ತು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link