Category Archives: Blog

Your blog category

IND vs AUS: 3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ – Kannada News | Indian Women’s Cricket Team Australia Tour 2024: T20, ODI & Test Series Schedule, Squads

ಒಂದೆಡೆ ಪುರುಷರ ತಂಡ ಭಾರತದಲ್ಲಿ ಟಿ20 ವಿಶ್ವಕಪ್ ಆಡುತ್ತಿದ್ದರೆ, ಇನ್ನೊಂದೆಡೆ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಆಡಲಿದೆ. ಭಾರತದ ಈ ಪ್ರವಾಸ ಫೆಬ್ರವರಿ 15 ರಿಂದ ಆರಂಭವಾಗಲಿರುವ ಟಿ20 ಸರಣಿಯೊಂದಿಗೆ ಆರಂಭವಾಗಲಿದ್ದು, ಮಾರ್ಚ್​ 6 ರಿಂದ 9 ರವರೆಗೆ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದೊಂದಿಗೆ ಅಂತ್ಯವಾಗಲಿದೆ.

ಈ ಪ್ರವಾಸವು ಟಿ20 ಸರಣಿಯೊಂದಿಗೆ ಆರಂಭವಾಗಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20ಪಂದ್ಯ ಫೆಬ್ರವರಿ 15 ರಂದು ಸಿಡ್ನಿಯಲ್ಲಿ ನಡೆಯಲಿದೆ. ಎರಡನೇ ಟಿ20ಪಂದ್ಯ ಫೆಬ್ರವರಿ 19 ರಂದು ಹೋಬಾರ್ಟ್‌ನಲ್ಲಿ ನಡೆಯಲಿದೆ. ಮೂರನೇ ಪಂದ್ಯ ಫೆಬ್ರವರಿ 21 ರಂದು ಅಡಿಲೇಡ್ ಓವಲ್‌ನಲ್ಲಿ ನಡೆಯಲಿದೆ. ಆ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 24 ರಂದು ಆರಂಭವಾಗಲಿದೆ. ಮೊದಲ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯಲಿದ್ದು, ಎರಡನೇ ಏಕದಿನ ಪಂದ್ಯ ಫೆಬ್ರವರಿ 27 ರಂದು ಹೋಬಾರ್ಟ್‌ನಲ್ಲಿ ನಡೆಯಲಿದೆ. ಮೂರನೇ ಏಕದಿನ ಪಂದ್ಯ ಮಾರ್ಚ್ 1 ರಂದು ಹೋಬಾರ್ಟ್‌ನಲ್ಲಿ ನಡೆಯಲಿದೆ. ಆ ಬಳಿಕ ಏಕೈಕ ಟೆಸ್ಟ್ ಪಂದ್ಯ ಮಾರ್ಚ್​ 6 ರಿಂದ 9 ರವರೆಗೆ ಪರ್ತ್​ ಮೈದಾನದಲ್ಲಿ ನಡೆಯಲಿದೆ.

ಟಿ20 ಸರಣಿಗೆ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ರೇಣುಕಾ ಠಾಕೂರ್, ಶ್ರೀ ಚರಣಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ಸ್ನೇಹ ರಾಣಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಜಿ ಕಮಲಿನಿ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಅಮಾನ್‌ಜೋತ್ ಕೌರ್,ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ಶ್ರೇಯಾಂಕಾ ಪಾಟೀಲ್.

ಏಕದಿನ ಸರಣಿಗೆ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ರೇಣುಕಾ ಠಾಕೂರ್, ಶ್ರೀ ಚರಣಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ಸ್ನೇಹ ರಾಣಾ, ದೀಪ್ತಿ ಶರ್ಮಾ,ರಿಚಾ ಘೋಷ್ (ವಿಕೆಟ್ ಕೀಪರ್), ಜಿ ಕಮಲಿನಿ (ವಿಕೆಟ್ ಕೀಪರ್),ಕಾಶ್ವೀ ಗೌತಮ್, ಅಮನ್ಜೋತ್ ಕೌರ್, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್.

ಟೆಸ್ಟ್ ತಂಡ: ಹರ್ಮನ್‌ಪ್ರೀತ್ ಕೌರ್ (ಸಿ), ಸ್ಮೃತಿ ಮಂಧಾನ (ವಿಸಿ) , ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಅಮನ್‌ಜೋತ್ ಕೌರ್, ರಿಚಾ ಘೋಷ್ (ಡಬ್ಲ್ಯುಕೆ), ಉಮಾ ಚೆಟ್ರಿ (ಡಬ್ಲ್ಯುಕೆ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರೇಣುಕಾ ಸಿಂಗ್ ಠಾಕೂರ್, ಸ್ನೇಹ ರಾಣಾ, ಕ್ರಾಂತಿ ಗೌಡ್, ವೈಷ್ಣವಿ ಶರ್ಮಾ, ಸಯಾಲಿ ಸತ್ಘರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿವಿಯಲ್ಲೂ ದಾಖಲೆ ಬರೆದ ‘ಕಾಂತಾರ ಚಾಪ್ಟರ್ 1’; ಜೀ ಕನ್ನಡದಲ್ಲಿ ಪ್ರಸಾರ – Kannada News | Kantara Chapter 1 movie gets record breaking TVR on Zee Kannada Television premiere

‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯು ‘ಕಾಂತಾರ ಚಾಪ್ಟರ್ 1’ (Kantara Chapter 1) ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿತು. ಚಿತ್ರಮಂದಿರದಲ್ಲಿ ಮತ್ತು ಒಟಿಟಿಯಲ್ಲಿ ಈ ಸಿನಿಮಾ ಹಲವು ದಾಖಲೆಗಳನ್ನು ಬರೆಯಿತು. ಅಲ್ಲದೇ, ಕಿರುತೆರೆಯಲ್ಲಿ ಪ್ರಸಾರ ಆದಾಗಲೂ ಬ್ಲಾಕ್‌ ಬಸ್ಟರ್ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ‘ಜೀ ಕನ್ನಡ’ (Zee Kannada) ವಾಹಿನಿಯಲ್ಲಿ ಆಯಿತು. ಅದರಲ್ಲಿ ಅತ್ಯುತ್ತಮ ಟಿಆರ್‌ಪಿ ಗಳಿಸಿದೆ. ಆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

2026ರ ಜನವರಿ 24ರಂದು ಸಂಜೆ 7 ಗಂಟೆಗೆ ‘ಜೀ ಕನ್ನಡ’ ವಾಹಿನಿಯಲ್ಲಿ ‘ಕಾಂತಾರ ಚಾಪ್ಟರ್ 1’ ಸಿನಿಮಾ ಪ್ರಸಾರ ಆಯಿತು. ಈ ಪ್ರೀಮಿಯರ್​ನಿಂದ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ ಒಟ್ಟು 11.56 ಟಿವಿಆರ್ ದಾಖಲಿಸಿತು. ನಗರ ಪ್ರದೇಶದಲ್ಲಿ 9.30 ಟಿವಿಆರ್ ದಾಖಲಿಸಿದೆ. ಇದು ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಿದೆ.

2025ರ ಅಕ್ಟೋಬರ್ 2ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಕಾಂತಾರ ಚಾಪ್ಟರ್ 1’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸು ಕಂಡಿತ್ತು. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿತ್ತು. ರಿಷಬ್ ಶೆಟ್ಟಿ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವನ್ನು ವಿಜಯ್ ಕಿರಗಂದೂರು ಅವರು ‘ಹೊಂಬಾಳೆ ಫಿಲ್ಮ್ಸ್’ ಮೂಲಕ ನಿರ್ಮಿಸಿದ್ದಾರೆ.

‘ಕಾಂತಾರ ಚಾಪ್ಟರ್ 1’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಅರವಿಂದ್ ಎಸ್. ಕಶ್ಯಪ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಟಿವಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಕೂಡ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣದ ಮುಂದಿನ ಸಿನಿಮಾಗಳ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚುವಂತಾಗಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿ ವಿವಾಹ ವಾರ್ಷಿಕೋತ್ಸವ: ಪತ್ನಿ ಪ್ರಗತಿ ಶೆಟ್ಟಿಗೆ ಹೊಗಳಿಕೆಯ ಸುರಿಮಳೆ

ಟ್ರೇಡ್ ವಿಶ್ಲೇಷಕರ ಪ್ರಕಾರ, ಪ್ರೈಮ್-ಟೈಮ್‌ನಲ್ಲಿ ಕನ್ನಡ ಸಿನಿಮಾವೊಂದರ ಟೆಲಿವಿಷನ್ ಪ್ರೀಮಿಯರ್ ಈ ಮಟ್ಟದ ರೇಟಿಂಗ್ ಪಡೆಯುವುದು ಅಪರೂಪ. ಇದು ‘ಕಾಂತಾರ ಚಾಪ್ಟರ್ 1’ ಚಿತ್ರದ ಸಾಂಸ್ಕೃತಿಕ ಪ್ರಭಾವ ಮತ್ತು ಕಮರ್ಷಿಯಲ್ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. ಸಿನಿಮಾದಲ್ಲಿ ಇರುವ ಗಟ್ಟಿಯಾದ ಕಥಾಹಂದರವು ಕುಟುಂಬ ಸಮೇತರಾಗಿ ವೀಕ್ಷಿಸುವ ಪ್ರೇಕ್ಷಕರನ್ನು ಸೆಳೆದುಕೊಂಡಿದೆ ಎಂದು ಹೊಂಬಾಳೆ ಫಿಲ್ಮ್ಸ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಪಾನ್, ಡಚ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ: ತಮಿಳುನಾಡು ಡಿಸಿಎಂ ಹೆಸರು ಉಲ್ಲೇಖ – Kannada News | Bengaluru Bomb Hoax: Japan, Dutch Embassies Targeted; TN DyCM Name Mentioned

ಬೆಂಗಳೂರು, ಫೆಬ್ರವರಿ 09: ನಗರದಲ್ಲಿರುವ ಜಪಾನ್, ಡಚ್ ರಾಯಭಾರಿ ಕಚೇರಿಗಳಿಗೆ ಇ-ಮೇಲ್ ಮೂಲಕ ಹುಸಿ ಬಾಂಬ್​​ ಬೆದರಿಕೆ ಹಾಕಲಾಗಿದ್ದು, ಕಳೆದ 10 ದಿನಗಳ ಅಂತರದಲ್ಲಿ ದೂತವಾಸ ಕಚೇರಿಗಳಿಗೆ 2ನೇ ಬಾರಿಗೆ ಹಾಕಿರುವ ಬೆದರಿಕೆ ಇದಾಗಿದೆ. ಬೆಳಗ್ಗೆ 8.40ಕ್ಕೆ ರಾಯಭಾರ ಕಚೇರಿ ಮೇಲ್ ಐಡಿಗೆ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಈ ವೇಳೆ ಯಾವುದೇ ಸ್ಫೋಟಕ ಸಾಮಗ್ರಿ ಪತ್ತೆಯಾಗದ ಕಾರಣ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಇ-ಮೇಲ್​ನಲ್ಲಿ ಉದಯನಿಧಿ ಸ್ಟಾಲಿನ್ ಹೆಸರು ಉಲ್ಲೇಖ

ಇನ್ನು ಬಾಂಬ್ ಬೆದರಿಕೆ ಇ-ಮೇಲ್​ನಲ್ಲಿ ಅಪರಿಚಿತರು ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೆಸರು ಉಲ್ಲೇಖ ಮಾಡಿದ್ದಾರೆ. ಕೋರಮಂಡಲ್ ಹೋಟೆಲ್​ನ ಕೊಠಡಿ ಸಂಖ್ಯೆ 536ರಲ್ಲಿ ಸ್ಟಾಲಿನ್ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ. ವಿಐಪಿ ಪರಿಚಯ ಮಾಡಿಸುತ್ತೇನೆಂದು ಹೋಟೆಲ್​ಗೆ ಕರೆಸಿ ಕೃತ್ಯ ಎಸಗಲಾಗಿದ್ದು, ಅರ್ಜುನ್ ದೊರೆ ರಾಜಶೇಖರ್ ಎಂಬಾತ ಮಹಿಳೆಯನ್ನು ಕರೆದೊಯ್ದಿದ್ದ. ಹೋಟೆಲ್​​ಗೆ ಹೋದಾಗ ಸ್ಟಾಲಿನ್ ಅರೆಬೆತ್ತಲಾಗಿ ಕುಳಿತಿದ್ದರು. ಈ ಬಗ್ಗೆ ದೂರು ನೀಡಿದ್ದರೂ ತಮಿಳುನಾಡು ಪೊಲೀಸರು ಕೇಸ್ ಹಾಕಿಲ್ಲ. ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ಜಪಾನ್ ದೂತಾವಾಸದ ಶೌಚಾಲಯದಲ್ಲಿ 4 RDX, IED ಬಾಂಬ್ ಇಟ್ಟಿದ್ದೇವೆ ಎಂದು ಉಲ್ಲೇಖಿಸಿರೋದು ಕಂಡುಬಂದಿದೆ.

ಇದನ್ನೂ ಓದಿ: ಇಟಲಿ, ಜಪಾನ್ ಬಳಿಕ ನೆದರ್​​ಲ್ಯಾಂಡ್ ರಾಯಭಾರಿ ಕಚೇರಿಗೆ ಬಾಂಬ್​ ಬೆದರಿಕೆ ಸಂದೇಶ

ಇತ್ತೀಚೆಗಷ್ಟೇ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಆರ್​​ಟಿ ನಗರದ ಗಂಗಾನಗರದಲ್ಲಿರುವ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿಗೆ ಜನವರಿ 29ರಂದು ಕಿಡಿಗೇಡಿಗಳು ಇ-ಮೇಲ್ ಕಳುಹಿಸಿ 5 RDX ಮತ್ತು ಐಇಡಿ ಬಳಸಿ ಸ್ಫೋಟ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಈ ಕುರಿತು ರಾಯಭಾರಿ ಕಚೇರಿ ಅಧಿಕಾರಿ ಭಾಸ್ಕರ್ ಸುಬ್ರಹ್ಮಣಿ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಹಲಸೂರಿನಲ್ಲಿರುವ ಇಟಾಲಿಯನ್ ಕಾನ್ಸುಲೇಟ್ ಕಚೇರಿಗೂ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಕಾರಣ ಇಟಾಲಿಯನ್ ಕಾನ್ಸುಲೇಟ್ ಭದ್ರತಾ ವ್ಯವಸ್ಥಾಪಕ ಜಿಯೋಡೊಮೆನಿಕ್ ಒ ಮಿಲಾನೋ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ

ದಾವಣಗೆರೆ, (ಫೆಬ್ರವರಿ 09): ಪರಿಶಿಷ್ಟ ಜಾತಿ(ಎಸ್​​ಟಿ) ಹಾಗೂ ಪರಿಶಿಷ್ಟ ಪಂಗಡ (ಎಸ್​​​ಸಿ) ಸಮುದಾಯದವರಿಗೆ ಈವರೆಗೆ ಭೂಮಿ ನೀಡಲಾಗುತ್ತಿತ್ತು. ಇದೀಗ ಸೈಟ್​​ ಸಹ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣೆ ಇಲಾಖೆಯಿಂದ ಎಸ್​​​ಸಿ ಎಸ್​​ಟಿ ಸಮುದಾಯವರಿಗೆ ವಿಶೇಷ ಅನುದಾನ ನೀಡಿದ್ದು, ಭೂಮಿ ಖರೀದಿ ಮಾಡಿ ಸೈಟ್​​ ನೀಡಲು ಹಣ ಕೊಟ್ಟಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಬೇಕಿದೆ. ಒಂದು ವೇಳೆ ಸಿಎಂ ಅನುಮೋದನೆ ಕೊಟ್ಟರೆ ಸಮುದಾಯದ ಜನರಿಗೆ 30 40 ಸೈಟ್ ನೀಡಲಾಗುವುದು ಎಂದು ಘೋಷಣೆ ಮಾಡಿದರು.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

EPFO: ಹೊಸ ಇಪಿಎಫ್​ಒ ಆ್ಯಪ್​ನಲ್ಲಿ ಯುಪಿಐ ಮೂಲಕ ಹಣ ವಿತ್​ಡ್ರಾಗೆ ಅವಕಾಶ? – Kannada News | New EPFO mobile app to allow withdrawal of money through UPI

ನವದೆಹಲಿ, ಫೆಬ್ರುವರಿ 9: ಇಪಿಎಫ್ ಹಣವನ್ನು ಎಟಿಎಂನಲ್ಲಿ ವಿತ್​ಡ್ರಾ ಮಾಡುವುದು, ಯುಪಿಐ ಪ್ಲಾಟ್​ಫಾರ್ಮ್​ ಮೂಲಕ ಇಪಿಎಫ್ ಹಣ ವಿತ್ಡ್ರಾ (EPF money withdrawal) ಮಾಡುವುದು ಇವೇ ಮುಂತಾದ ಸೌಲಭ್ಯಗಳು ಇಪಿಎಫ್ ಸದಸ್ಯರಿಗೆ ಸಿಗುತ್ತವೆ ಎನ್ನುವ ಮಾತು ವರ್ಷದಿಂದಲೂ ಕೇಳಿಬರುತ್ತಿದೆ. ಇದೀಗ ಏಪ್ರಿಲ್ ತಿಂಗಳಲ್ಲಿ ಇಪಿಎಫ್​ನ ಹೊಸ ಆ್ಯಪ್​ವೊಂದು ಬಿಡುಗಡೆ ಆಗುತ್ತಿದ್ದು, ಅದರಲ್ಲಿ ಇಪಿಎಫ್ ಹಣವನ್ನು ನೇರವಾಗಿ ವಿತ್​ಡ್ರಾ ಮಾಡುವ ಅವಕಾಶ ಸಿಗಲಿದೆ.

ಏಪ್ರಿಲ್​ನಲ್ಲಿ ಅನಾವರಣಗೊಳ್ಳಲಿರುವ ಹೊಸ ಆ್ಯಪ್​ನಲ್ಲಿ ಯುಪಿಐ ಗೇಟ್​ವೇ ಬಳಸಿ ಇಪಿಎಫ್ ಹಣ ವಿತ್​ಡ್ರಾ ಮಾಡುವುದು ಮಾತ್ರವಲ್ಲ, ಪಾಸ್​ಬುಕ್ ಬ್ಯಾಲನ್ಸ್ ಪರಿಶೀಲನೆ ಸೇರಿದಂತೆ ಹಲವು ಇಪಿಎಫ್ ಫೀಚರ್​ಗಳನ್ನು ಬಳಸಬಹುದು. ಸದ್ಯಕ್ಕೆ ಇಪಿಎಫ್ ಸದಸ್ಯರು ತಮ್ಮ ಪಾಸ್​ಬುಕ್ ಪರಿಶೀಲನೆ ಇತ್ಯಾದಿಗೆ ಉಮಂಗ್ ಆ್ಯಪ್ ಅಥವಾ ಯುಎಎನ್ ಪೋರ್ಟಲ್, ಇಪಿಎಫ್ ವೆಬ್​ಸೈಟ್ ಬಳಸಬೇಕು. ಈಗ ಇಪಿಎಫ್​ನದ್ದೇ ಡೆಡಿಕೇಟ್ ಆಗಿರುವ ಹೊಸ ಅಪ್ಲಿಕೇಶನ್ ಸಿದ್ಧವಾಗಿದೆ.

ಇದನ್ನೂ ಓದಿ: ಚಿನ್ನದ ಮೇಲೆ ಯಾವತ್ತೂ ಹೂಡಿಕೆ ಮಾಡಲ್ಲ…! ವಿಶ್ವದ ಅತಿ ಚಾಣಾಕ್ಷ್ಯ ಹೂಡಿಕೆದಾರನ ನಿರ್ಧಾರ

ಯುಪಿಐನಲ್ಲಿ ಎಷ್ಟು ಇಪಿಎಫ್ ಹಣ ವಿತ್​ಡ್ರಾ ಸಾಧ್ಯ?

ಇಪಿಎಫ್ ವಿತ್​ಡ್ರಾಯಲ್ ನಿಯಮಗಳನ್ನು ಸರಳಗೊಳಿಸಲಾಗಬಹುದು. ಈ ನಿಟ್ಟಿನಲ್ಲಿ ಕಾರ್ಮಿಕ ಸಚಿವಾಲಯವು ಪ್ರಯತ್ನ ಮಾಡುತ್ತಿದೆ. ನಿರ್ದಿಷ್ಟ ಪ್ರಮಾಣದಷ್ಟು ಇಪಿಎಫ್ ಹಣವನ್ನು ಫ್ರೀಜ್ ಮಾಡಿ, ಉಳಿದವನ್ನು ವಿತ್​ಡ್ರಾ ಮಾಡಲು ಬಿಡುವ ಯೋಚನೆಯಲ್ಲಿದೆ ಸರ್ಕಾರ. ಅಂದರೆ, ಇಂತಿಷ್ಟು ಪ್ರತಿಶತದಷ್ಟು, ಉದಾಹರಣೆಗೆ ಶೇ. 20, ಅಥವಾ ಶೇ. 30 ಅಥವಾ ಶೇ. 40ರಷ್ಟು ಇಪಿಎಫ್ ಹಣವನ್ನು ಮಾತ್ರ ಫ್ರೀಜ್ ಮಾಡಿ ಉಳಿದವನ್ನು ಬಳಸಲು ಅವಕಾಶ ಕೊಡಲಾಗಬಹುದು.

ಇಪಿಎಫ್ ಆ್ಯಪ್​ನಿಂದ ಹಣವನ್ನು ಜೋಡಿತ ಬ್ಯಾಂಕ್ ಅಕೌಂಟ್​ಗೆ ವರ್ಗಾಯಿಸಲು ಯುಪಿಐ ಪ್ಲಾಟ್​ಫಾರ್ಮ್ ಬಳಸಲಾಗುತ್ತದೆ. ಇದರಿಂದ ಸುಲಭವಾಗಿ ಹಣ ವರ್ಗಾವಣೆ ಆಗುತ್ತದೆ. ಇಪಿಎಫ್​ಒ ಸಂಸ್ಥೆ ಈ ಹೊಸ ಆ್ಯಪ್​ನ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ.

ಈಗ ಇಪಿಎಫ್ ಹಣ ಹಿಂಪಡೆಯಲು ಏನಿದೆ ಪ್ರಕ್ರಿಯೆ?

ಈಗಿರುವ ಪ್ರಕ್ರಿಯೆ ಪ್ರಕಾರ ಇಪಿಎಫ್ ಖಾತೆದಾರರು ಹಣ ವಿತ್​ಡ್ರಾಯಲ್​ಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು. ಇದು ಮ್ಯಾನುಯಲ್ ಆಗಿ ವೆರಿಫಿಕೇಶನ್ ಆಗಿ ಹಣವು ಬ್ಯಾಂಕ್ ಖಾತೆಗೆ ತರಲು ಹಲವು ವಾರಗಳೇ ಆಗುತ್ತವೆ.

ಇದನ್ನೂ ಓದಿ: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

ಇದೀಗ ಆಟೊಸೆಟಲ್ಮೆಂಟ್ ಮೋಡ್ ಎನ್ನುವ ಹೊಸ ಫೀಚರ್ ಅಳವಡಿಸಲಾಗುತ್ತಿದೆ. ಇಪಿಎಫ್ ಹಣ ವಿತ್​ಡ್ರಾ ಮಾಡಲು ಅರ್ಜಿ ಸಲ್ಲಿಸಿದ ಮೂರೇ ದಿನದೊಳಗೆ ಸೆಟಲ್ಮೆಂಟ್ ಆಗುತ್ತದೆ. ಈ ರೀತಿ ಆಟೊಸೆಟಲ್ಮೆಂಟ್ ಮೋಡ್​ನ ಮಿತಿಯನ್ನು 1 ಲಕ್ಷ ರೂನಿಂದ 5 ಲಕ್ಷ ರೂಗೆ ಏರಿಸಲಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Teddy Day 2026: ಇದು ಬರೀ ಗಿಫ್ಟ್‌ ಅಲ್ಲ… ಪ್ರತಿ ಬಣ್ಣದ ಟೆಡ್ಡಿಬೇರ್‌ಗೂ ಒಂದು ಅರ್ಥ ಇದೆ – Kannada News | Teddy Day 2026: Each colored teddy bear given on Teddy Day has a meaning know about it

ಟೆಡ್ಡಿ ಬೇರ್‌ಗಳು (teddy bear) ಕೇವಲ ಮುದ್ದಾದ ಉಡುಗೊರೆಯಲ್ಲ, ಅವುಗಳನ್ನು ನೋಡುವುದು ಮತ್ತು ಅಪ್ಪಿಕೊಳ್ಳುವುದರಿಂದ ಸಕಾರಾತ್ಮಕ ಭಾವನೆ ಮೂಡುತ್ತದೆ. ಸಂಶೋಧನೆಯ ಪ್ರಕಾರ, ಟೆಡ್ಡಿ ಬೇರ್ ಅನ್ನು ಮುದ್ದಾಡುವುದರಿಂದ ದೇಹದಲ್ಲಿ ಆಕ್ಸಿಟೋಸಿನ್ (ಸಂತೋಷದ ಹಾರ್ಮೋನ್) ಬಿಡುಗಡೆಯಾಗುತ್ತದೆ, ಇದು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ಸಂತೋಷ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ಅದಕ್ಕಾಗಿಯೇ ವ್ಯಾಲೆಂಟೈನ್‌ ವೀಕ್‌ನ ಟೆಡ್ಡಿ ಡೇಯಂದು ಸಂಗಾತಿಗೆ ಟೆಡ್ಡಿ ಬೇರ್‌ಗಳನ್ನು ಉಡುಗೊರೆಯಾಗಿ ನೀಡುವ ಪ್ರವೃತ್ತಿ ಬೆಳೆದು ಬಂದಿದೆ. ಟೆಡ್ಡಿ ಡೇಯಂದು ಜನ ತಮ್ಮ ಸಂಗಾತಿಗೆ ಬೇರೆ ಬೇರೆ ಬಣ್ಣದ ಕ್ಯೂಟ್‌ ಕ್ಯೂಟ್‌ ಟೆಡ್ಡಿ ಬೇರ್‌ಗಳನ್ನು ಗಿಫ್ಟ್‌ ಮಾಡ್ತಾರೆ. ಇದು ಕೇವಲ ಉಡುಗೊರೆಯಲ್ಲ, ಅದರ ಬಣ್ಣಗಳು ವಿಭಿನ್ನ ಭಾವನೆಗಳನ್ನು ಸಂಕೇತಿಸುತ್ತವೆ. ಹಾಗಿದ್ರೆ ಯಾವ ಬಣ್ಣದ ಟೆಡ್ಡಿ ಬೇರ್ ಏನರ್ಥವನ್ನು ಸೂಚಿಸುತ್ತದೆ ಎಂಬುದನ್ನು ತಿಳಿಯೋಣ.

ಯಾವ ಬಣ್ಣದ ಟೆಡ್ಡಿ ಬೇರ್‌ ಏನರ್ಥವನ್ನು ಸೂಚಿಸುತ್ತದೆ?

ಕೆಂಪು ಬಣ್ಣದ ಟೆಡ್ಡಿಬೇರ್:  ಇದು ಪ್ರೀತಿ, ಉತ್ಸಾಹ ಮತ್ತು ಆಕರ್ಷಣೆಯನ್ನು ಸಂಕೇತಿಸುತ್ತದೆ. ದಂಪತಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹೆಚ್ಚಾಗಿ ತಮ್ಮ ಸಂಗಾತಿಗೆ ಕೆಂಪು ಟೆಡ್ಡಿಯನ್ನು ಉಡುಗೊರೆಯಾಗಿ ನೀಡುತ್ತಾರೆ.

ಹಳದಿ ಟೆಡ್ಡಿಬೇರ್:‌ ಇದು ಸ್ನೇಹವನ್ನು ಸಂಕೇತಿಸುತ್ತದೆ. ನೀವು ಹೊಸ ಸಂಬಂಧವನ್ನು ಪ್ರಾರಂಭಿಸಲು ಬಯಸಿದರೆ, ಹಳದಿ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಆಯ್ಕೆಯಾಗಿದೆ.

ಬ್ರೌನ್ ಟೆಡ್ಡಿಬೇರ್: ಇದು ಕಾಳಜಿ ಮತ್ತು ನಂಬಿಕೆಯನ್ನು ಸಂಕೇತಿಸುತ್ತದೆ. ಯಾರಾದರೂ ನಿಮ್ಮ ಬಗ್ಗೆ ಆಳವಾಗಿ ಕಾಳಜಿ ವಹಿಸುತ್ತಿದ್ದರೆ ಮತ್ತು ನಿಮ್ಮೊಂದಿಗೆ ಆಳವಾದ ಬಾಂಧವ್ಯ ಹೊಂದಿದ್ದರೆ, ಅವರಿಗೆ ಕಂದು ಬಣ್ಣದ ಟೆಡ್ಡಿ ನೀಡಬಹುದು.

ನೀಲಿ ಟೆಡ್ಡಿಬೇರ್:  ಇದು ನಿಜವಾದ ಪ್ರೀತಿ ಮತ್ತು ನಿಷ್ಠೆಯನ್ನು ಪ್ರತಿನಿಧಿಸುತ್ತದೆ. ಯಾರಾದರೂ ನಿಮಗೆ ನೀಲಿ ಟೆಡ್ಡಿಯನ್ನು ಉಡುಗೊರೆಯಾಗಿ ನೀಡಿದರೆ, ಅವರು ಯಾವಾಗಲೂ ನಿಮಗೆ ನಿಷ್ಠರಾಗಿರುತ್ತಾರೆ ಎಂದರ್ಥ.

ಪಿಂಕ್ ಟೆಡ್ಡಿಬೇರ್:‌ ಇದು ಪ್ರಣಯ ಭಾವನೆಗಳು ಮತ್ತು ವಾತ್ಸಲ್ಯವನ್ನು ಸಂಕೇತಿಸುತ್ತದೆ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ನೀವು ಬಯಸಿದರೆ, ನಿಮಗ ಪಿಂಕ್ ಟೆಡ್ಡಿ ಅತ್ಯುತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: ಟೆಡ್ಡಿ ಡೇ ವ್ಯಾಲೆಂಟೈನ್‌ ವೀಕ್‌ಭಾಗವಾಗಿದ್ದು ಹೇಗೆ? ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ

ಬಿಳಿ ಟೆಡ್ಡಿಬೇರ್:  ಬಿಳಿ ಬಣ್ಣವು ಶುದ್ಧತೆ, ಮುಗ್ಧತೆ ಮತ್ತು ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. ಯಾರಿಗಾದರೂ ಬಿಳಿ ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡುವುದು ಅವರ ಮೇಲಿನ ಶುದ್ಧ ಮತ್ತು ನಿಜವಾದ ಭಾವನೆಗಳನ್ನು ಸೂಚಿಸುತ್ತದೆ. ಪ್ರಾಮಾಣಿಕತೆ ಮತ್ತು ನಂಬಿಕೆಯ ಆಧಾರದ ಮೇಲೆ ಸಂಬಂಧಗಳಿಗೆ ಈ ಬಣ್ಣ ಸೂಕ್ತವಾಗಿದೆ.

ಕಿತ್ತಳೆ‌ ಬಣ್ಣದ ಟೆಡ್ಡಿಬೇರ್: ಕಿತ್ತಳೆ ಬಣ್ಣದ ಟೆಡ್ಡಿ ಬೇರ್‌ಗಳು ಸಂಬಂಧಗಳಲ್ಲಿ ಹೊಸ ಆರಂಭವನ್ನು ಸಂಕೇತಿಸುತ್ತವೆ, ಅಂದರೆ ಯಾರಾದರೂ ನಿಮಗೆ ಈ ಬಣ್ಣದ ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡುತ್ತಿದ್ದರೆ, ಅವರು ಶೀಘ್ರದಲ್ಲೇ ತಮ್ಮ ಸಂಬಂಧವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಬಯಸುತ್ತಾರೆ ಎಂದರ್ಥ.

ನೇರಳೆ ಬಣ್ಣದ ಟೆಡ್ಡಿ ಬೇರ್: ನೇರಳೆ ಬಣ್ಣವು ಐಷಾರಾಮಿ ಮತ್ತು ನಿಗೂಢತೆಯನ್ನು ಸೂಚಿಸುತ್ತದೆ. ತಮ್ಮ ಪ್ರೀತಿಪಾತ್ರರಿಗೆ ಅವರು ತುಂಬಾ ವಿಶೇಷರು ಎಂದು ತಿಳಿಸಲು ಬಯಸುವವರಿಗೆ ಈ ಬಣ್ಣ ಸೂಕ್ತವಾಗಿದೆ. ಅಲ್ಲದೆ ಆಳವಾದ ಮತ್ತು ಸೀಕ್ರೆಟ್ ಸಂಬಂಧದಲ್ಲಿ ಇರುವವರಿಗೆ ನೇರಳೆ ಬಣ್ಣದ ಟೆಡ್ಡಿ ಬೇರ್‌ಗಳು ಉತ್ತಮವಾಗಿವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವ್ಯಾಲೆಂಟೈನ್ಸ್‌ ಡೇಗೆ ಬೆಂಗಳೂರಿನ ಮಹಿಳೆಯರಿಗೆ ಗುಡ್​​​ ನ್ಯೂಸ್: ನಿಮ್ಮ ಸುರಕ್ಷತೆಗೆ ಬರಲಿದೆ ‘ಸಖಿ ಆಟೋ’ – Kannada News | Bengaluru’s Sakhi Auto: Empowering Women with Safe Transport and No Surge Pricing

ಬೆಂಗಳೂರು, ಫೆ. 9: ಪ್ರೇಮಿಗಳ ದಿನದಂದು ಮಹಿಳೆಯರಿಗೆ ಒಂದು ಗುಡ್​​​​ ನ್ಯೂಸ್​​ ಇದೆ. ಬೆಂಗಳೂರಿನಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಅತ್ಯಂತ ವಿನೂತನವಾದ ‘ಸಖಿ ಆಟೋ’ (Sakhi Auto) ಸೇವೆ ಶೀಘ್ರದಲ್ಲೇ ಆರಂಭವಾಗುತ್ತಿದೆ. ಈ ಸೇವೆಯು ಇದೇ ಫೆಬ್ರವರಿ 14, 2026 ರಂದು (ಪ್ರೇಮಿಗಳ ದಿನದಂದು) ಬೆಂಗಳೂರಿನಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.ಇದು ಮಹಿಳಾ ಪ್ರಯಾಣಿಕರಿಗಾಗಿ, ಮಹಿಳಾ ಚಾಲಕಿಯರೇ ನಡೆಸುವ ವಿಶೇಷ ಸಾರಿಗೆ ವ್ಯವಸ್ಥೆಯಾಗಿದೆ. ಆರಂಭದಲ್ಲಿ ಇದು ಬೆಳಿಗ್ಗೆ 6:00 ರಿಂದ ಮಧ್ಯರಾತ್ರಿ 12:00 ರವರೆಗೆ ಲಭ್ಯವಿರಲಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆಗನುಗುಣವಾಗಿ 24 ಗಂಟೆಗಳ ಕಾಲ ವಿಸ್ತರಿಸುವ ಯೋಜನೆಯಿದೆ ಎಂದು ಹೇಳಲಾಗಿದೆ.

ಇತರ ಆಪ್‌ಗಳಂತೆ ಮಳೆ ಅಥವಾ ಹೆಚ್ಚಿನ ದಟ್ಟಣೆಯ ಸಮಯದಲ್ಲಿ ದರ ಏರಿಕೆಯಾಗುವುದಿಲ್ಲ. ಭವಿಷ್ಯದಲ್ಲಿ ಟ್ರಾನ್ಸ್ ಮಹಿಳೆಯರನ್ನು (Trans women) ಕೂಡ ಚಾಲಕಿಯರನ್ನಾಗಿ ನೇಮಿಸಿಕೊಳ್ಳುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. ಮೊದಲ 2 ಕಿಲೋಮೀಟರ್‌ಗಳಿಗೆ 50 ರೂ. ಇರುತ್ತದೆ. ನಂತರದ ಪ್ರತಿ ಕಿಲೋಮೀಟರ್‌ಗೆ 20 ರೂ ಇರುತ್ತದೆ. ಇದೀಗ ಸಂಸ್ಥೆ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಮಾಡುತ್ತಿದೆ. ಅಲ್ಲಿಯವರೆಗೆ ride.sakhiwomen.in ಹಾಗೂ 63619 33364 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಬುಕ್ ಮಾಡಬಹುದು.

ಇದನ್ನೂ ಓದಿ: ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಗುಡ್​​​ ನ್ಯೂಸ್​​ ನೀಡಿದ ಸಚಿವ ಅಶ್ವಿನಿ ವೈಷ್ಣವ್

ಈ ವಿನೂತನ ಆಲೋಚನೆಯ ಹಿಂದೆ 24 ವರ್ಷದ ಉದ್ಯಮಿ ಕೃಷ್ಣವಿ ಪರೇಖ್ ಅವರ ಶ್ರಮವಿದೆ. ಮುಂಬೈನಲ್ಲಿ ತಾವು ಅನುಭವಿಸಿದ ಅಸುರಕ್ಷಿತ ಪ್ರಯಾಣದ ಅನುಭವಗಳೇ ಈ ಸಂಸ್ಥೆಯನ್ನು ಆರಂಭಿಸಲು ಅವರಿಗೆ ಪ್ರೇರಣೆಯಾಗಿದೆ. ಈಗಾಗಲೇ 21 ರಿಂದ 40 ವರ್ಷದ ಸುಮಾರು 50 ನುರಿತ ಮಹಿಳಾ ಚಾಲಕಿಯರು ಈ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನ ಮಹಿಳೆಯರಿಗೆ ಇದು ಹೆಚ್ಚು ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಆಯ್ಕೆಯಾಗಲಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಿಷಬ್ ಶೆಟ್ಟಿ ವಿವಾಹ ವಾರ್ಷಿಕೋತ್ಸವ: ಪತ್ನಿ ಪ್ರಗತಿ ಶೆಟ್ಟಿಗೆ ಹೊಗಳಿಕೆಯ ಸುರಿಮಳೆ

Source link

ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್ – Kannada News | Nikhil Kumaraswamy Hits Back At BJP Leader Preetham Gowda about Alliance In Hassan

ಹಾಸನ, (ಫೆಬ್ರವರಿ 09): ಕರ್ನಾಟಕದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಬಿಜೆಪಿ ಮೈತ್ರಿ ಮುಂದುವರಿಸುವ ವಿಚಾರಕ್ಕೆ ಸಂಬಂಧಿಸಿ ಹಾಸನ ಜಿಲ್ಲೆಯಲ್ಲಿ ಪಕ್ಷದೊಳಗಿನ ಅಸಮಾಧಾನ ಸ್ಫೋಟವಾಗಿದೆ. ಹಾಸನದಲ್ಲಿ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಜೆಡಿಎಸ್​​ನೊಂದಿಗಿನ ಮೈತ್ರಿ ಬಗ್ಗೆ ಬಹಿರಂಗವಾಗಿಯೇ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಇದೀಗ ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪ್ರೀತಂಗೌಡಗೆ ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮನೆ ಮುಂದೆ ಕಸಗುಡಿಸುತ್ತಿದ್ದಾಕೆ ಮೇಲೆ ಬೆಳ್ಳಂ ಬೆಳಿಗ್ಗೆ ಸರಗಳ್ಳರ ದಾಳಿ: ಕುಸಿದು ಬಿದ್ದು ಮಹಿಳೆ ಸಾವು – Kannada News | Nelamangala Chain Snatching: Woman Dies After Attack in Huskoor Village

ನೆಲಮಂಗಲ, ಫೆಬ್ರವರಿ 09: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಸರಗಳ್ಳತನ ಪ್ರಕರಣಗಳು ಸಾರ್ವಜನಿಕರ ನಿದ್ದೆಗೆಡಿಸಿವೆ. ಈ ನಡುವೆ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಗೆ ಸ್ಪ್ರೇ ಹೊಡೆದು ದುಷ್ಕರ್ಮಿಗಳು ಒಡವೆ ದೋಚಿ ಪರಾರಿಯಾಗಿದ್ದಾರೆ. ಇತ್ತ ಕುಸಿದು ಬಿದ್ದ ಮಹಿಳೆ ಮೃತಪಟ್ಟಿದ್ದು, ಮೃತ ಜ್ಯೋತಿ(45) ಕತ್ತಲ್ಲಿದ್ದ ಮಾಂಗಲ್ಯ ಸರ ಮತ್ತು ಓಲೆಯನ್ನು ದುಷ್ಕರ್ಮಿಗಳು ದೋಚಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಮನೆಯವರು ಬೆಳಿಗ್ಗೆ 6.30ರ ವೇಳೆಗೆ ಮನೆಯಿಂದ ಹೊರ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಕಾಡೆ ಬಿದಿದ್ದ ಜ್ಯೋತಿ ಕೈ ಮೇಲೆ ಮಾರ್ಕ್​​ ಕಂಡುಬಂದಿದ್ದು, ಅವರ ಮೈಮೇಲಿದ್ದ ಒಡವೆಗಳು ಇರಲಿಲ್ಲ. ಮುಂಜಾನೆ 5.30ರ ಸುಮಾರಿಗೆ ಕಸಗುಡಿಸಲೆಂದು ಅವರು ಮನೆಯಿಂದ ಹೊರ ಬಂದಿದ್ದು, ಈ ವೇಳೆ ಅಪರಿಚಿತರು ಕಳ್ಳತನ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕುಸಿದು ಬಿದ್ದ ಜ್ಯೋತಿಯವರನ್ನು ಕಂಡ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅದಾಗಲೇ ಅವರು ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಜ್ಯೋತಿ ಅವರ ಬಾಯಲ್ಲಿ ನೊರೆ ಕೂಡ ಕಂಡುಬಂದಿದ್ದು, ಸ್ಪ್ರೇ ಹೊಡೆದಿರುವ ಹಿನ್ನೆಲೆ ಉಸಿರುಗಟ್ಟಿ ಅವರು ಸಾವನ್ನಪ್ಪಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿತ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್​ಮ್ಯಾನ್ ಅರೆಸ್ಟ್

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮೃತ ಜ್ಯೋತಿ ಸಹೋದರಿ ನೀತು,  ಮನೆಯ ಬಾಗಿಲ ಬಳಿಯೇ  ಅಟ್ಯಾಕ್ ಮಾಡಿ ಕತ್ತಿನಲ್ಲಿದ್ದ ಚಿನ್ನ ಮತ್ತು ಓಲೆ ಎರಡನ್ನೂ ಕಿತ್ತುಕೊಂಡಿದ್ದಾರೆ. ಬಳಿಕ  ಮುಖಕ್ಕೆ ಸ್ಪ್ರೇ ಮಾಡಿ ಜೋರಾಗಿ ನೂಕಿದ್ದಾರೆ. ಈ ವೇಳೆ ಮನೆಯ ಮುಂದಿನ ಸಂಪ್ ಮುಚ್ಚಳಕ್ಕೆ ಜ್ಯೋತಿ ಅವರ ಮುಖ ತಾಗಿ ಗಾಯಗಳಾಗಿವೆ. ನಮಗೆ ಯಾರ ಮೇಲೂ ಅನುಮಾನ ಇಲ್ಲ. ಇತ್ತೀಚೆಗೆ ಸರಗಳ್ಳತನ ಪ್ರಕರಣಗಳು ಜಾಸ್ತಿ ಆಗುತ್ತಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿರೋದಾಗಿ ತಿಳಿಸಿದ್ದಾರೆ.

ವರದಿ: ಮಂಜುನಾಥ್​, ಟಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:25 pm, Mon, 9 February 26

Source link