Category Archives: Blog

Your blog category

ಗಂಟಲಿನ ಸೋಂಕಿನಿಂದ ಎನ್​ಸಿಪಿ ನಾಯಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು – Kannada News | NCP Leader Sharad Pawar admitted to hospital in Pune due to throat Problem

ಪುಣೆ, ಫೆಬ್ರವರಿ 9: ಎನ್​ಸಿಪಿ ನಾಯಕ ಶರದ್ ಪವಾರ್ (Sharad Pawar) ಗಂಟಲು ಸಂಬಂಧಿತ ಸಮಸ್ಯೆಗಳು, ಕೆಮ್ಮು ಮತ್ತು ಜ್ವರದ ಕಾರಣದಿಂದ ಇಂದು ಮಧ್ಯಾಹ್ನ ಪುಣೆಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಅವರ ನಿವಾಸದಿಂದ ಆಸ್ಪತ್ರೆಗೆ ಸೇರಿಸಲಾಯಿತು. ಬಾರಾಮತಿಯಲ್ಲಿದ್ದಾಗಲೇ ಅವರು ಅಸ್ವಸ್ಥರಾಗಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದರೂ ಅವರ ಅನಾರೋಗ್ಯ ಮುಂದುವರಿದ ಕಾರಣದಿಂದ ಚಿಕಿತ್ಸೆಗಾಗಿ ಅವರನ್ನು ಪುಣೆಗೆ ಸ್ಥಳಾಂತರಿಸಲು ವೈದ್ಯರು ಸಲಹೆ ನೀಡಿದರು.

ಎನ್‌ಸಿಪಿ ನಾಯಕ ಶರದ್ ಪವಾರ್ ಗಂಟಲು ಸೋಂಕಿನಿಂದ ಬಳಲುತ್ತಿದ್ದಾರೆ. ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ಆಸ್ಪತ್ರೆಗೆ ಬಂದ ನಂತರ ವೈದ್ಯರ ತಂಡವು ಅವರನ್ನು ಪರಿಶೀಲಿಸುತ್ತಿದೆ. ವೈದ್ಯರ ಸಲಹೆಯ ಮೇರೆಗೆ ಮುಂದಿನ ಕ್ರಮವನ್ನು ನಿರ್ಧರಿಸಲಾಗುತ್ತದೆ” ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅಜಿತ್ ಪವಾರ್ ಸಾವಿನಲ್ಲಿ ಷಡ್ಯಂತ್ರವಿಲ್ಲ, ಅದೊಂದು ಅಪಘಾತ; ಶರದ್ ಪವಾರ್ ಮೊದಲ ಪ್ರತಿಕ್ರಿಯೆ

ಎನ್​ಸಿಪಿ ಸಂಸದೆ ಮತ್ತು ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಮತ್ತು ಅವರ ಅಳಿಯ ಸದಾನಂದ ಸುಳೆ ಆಸ್ಪತ್ರೆಯಲ್ಲಿ ಶರದ್ ಪವಾರ್ ಅವರೊಂದಿಗೆ ಇದ್ದಾರೆ. ಎನ್​ಸಿಪಿ ನಾಯಕರು ಮತ್ತು ಬೆಂಬಲಿಗರು ಶರದ್ ಪವಾರ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮರಣದ ನಂತರವೂ ಶರದ್ ಪವಾರ್ ಜನರನ್ನು ಭೇಟಿ ಮಾಡುವುದನ್ನು ಮತ್ತು ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು. ವೈದ್ಯರು ವೈದ್ಯಕೀಯ ಪರೀಕ್ಷೆಯನ್ನು ಪೂರ್ಣಗೊಳಿಸಿ, ಚಿಕಿತ್ಸೆಗೆ ಅವರ ಪ್ರತಿಕ್ರಿಯೆಯನ್ನು ಪರಿಶೀಲಿಸಿದ ನಂತರ ಅವರ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:17 pm, Mon, 9 February 26

Source link

T20 World Cup: ಬದಲಿ ತಂಡವಾಗಿ ಬಂದು ಈ ಆವೃತ್ತಿಯ ಮೊದಲ ದ್ವಿಶತಕ ಬಾರಿಸಿದ ಸ್ಕಾಟ್ಲೆಂಡ್ – Kannada News | Unexpected Entry, Dominant Win: Scotland Crushes Italy with T20 World Cup 2026 Highest Total

2026 ರ ಟಿ20 ವಿಶ್ವಕಪ್​ನ (T20 World Cup 2026) ಮೂರನೇ ದಿನದಾಟದ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ಹಾಗೂ ಇಟಲಿ (Scotland vs Italy) ತಂಡಗಳು ಮುಖಾಮುಖಿಯಾಗಿದ್ದವು. ಕ್ರಿಕೆಟ್ ಲೋಕದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ಈ ಉಭಯ ತಂಡಗಳ ಕಾಳಗದ ಮೇಲೆ ಅಷ್ಟು ನಿರೀಕ್ಷೆಗಳಿರಲಿಲ್ಲ. ಆದರೆ ಇಟಲಿಗೆ ಹೋಲಿಸಿಕೊಂಡರೆ ಕೊಂಚ ಬಲಿಷ್ಠವಾಗಿ ಕಾಣುತ್ತಿದ್ದ ಸ್ಕಾಟ್ಲೆಂಡ್ ತಂಡ ಇಟಲಿ ವಿರುದ್ಧ ಭರ್ಜರಿ ಪ್ರದರ್ಶನ ನೀಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸ್ಕಾಟ್ಲೆಂಡ್ 20 ಓವರ್​ಗಳಲ್ಲಿ ಬರೋಬ್ಬರಿ 207 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಟಲಿ 134 ರನ್​ಗಳಿಗೆ ಆಲೌಟ್ ಆಗುವ ಮೂಲಕ 73 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಬದಲಿ ತಂಡವಾಗಿ ಬಂದ ಸ್ಕಾಟ್ಲೆಂಡ್

ವಾಸ್ತವವಾಗಿ ಈ ಬಾರಿಯ ಟಿ20 ವಿಶ್ವಕಪ್​ಗೆ ಸ್ಕಾಟ್ಲೆಂಡ್ ತಂಡ ಅರ್ಹತೆ ಪಡೆದಿರಲಿಲ್ಲ. ಆದರೆ ಬಯಸದೆ ಬಂದ ಭಾಗ್ಯದಂತೆ ಬಾಂಗ್ಲಾದೇಶ ಟಿ20 ವಿಶ್ವಕಪ್​ನಿಂದ ತನ್ನ ಹೆಸರನ್ನು ಹಿಂಪಡೆದುದರಿಂದ ಸ್ಕಾಟ್ಲೆಂಡ್ ತಂಡಕ್ಕೆ ಟಿ20 ವಿಶ್ವಕಪ್​ನಲ್ಲಿ ಆಡುವ ಅವಕಾಶ ಸಿಕ್ಕಿತು. ಅದರಂತೆ ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಸ್ಕಾಟ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ ಇಟಲಿ ತಂಡವನ್ನು ಎದುರಿಸಿತು.

ಸ್ಕಾಟ್ಲೆಂಡ್​ಗೆ ಭರ್ಜರಿ ಆರಂಭ

ಈ ಪಂದ್ಯದಲ್ಲಿ ಟಾಸ್ ಗೆದ್ದ ಇಟಲಿ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಆರಂಭಿಸಿದ ಸ್ಕಾಟ್ಲೆಂಡ್ ತಂಡಕ್ಕೆ ಉತ್ತಮ ಜೊತೆಯಾಟ ಸಿಕ್ಕಿತು. ಮೊದಲ ವಿಕೆಟ್​ಗೆ ತಂಡ 126 ರನ್​ಗಳ ಜೊತೆಯಾಟ ಕಂಡಿತು. ಆರಂಭಿಕರಾದ ಜಾರ್ಜ್ ಮುನ್ಸೆ ಮತ್ತು ಮೈಕೆಲ್ ಜೋನ್ಸ್ 14 ಓವರ್​ಗಳ ಒಳಗೆ ತಂಡವನ್ನು 126 ರನ್​ಗಳಿಗೆ ಕೊಂಡೊಯ್ದರು. ಈ ಹಂತದಲ್ಲಿ ಮುನ್ಸೆ 54 ಎಸೆತಗಳಲ್ಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 84 ರನ್ ಬಾರಿಸಿ ಔಟಾದರು. ಇದರೊಂದಿಗೆ ಇವರಿಬ್ಬರ ಜೊತೆಯಾಟವೂ ಮುರಿದುಬಿತ್ತು.

200 ರನ್ ದಾಟಿದ ಮೊದಲ ತಂಡ

ಆ ಬಳಿಕ ಜೋನ್ಸ್ ಜೊತೆಯಾದ ಬ್ರಾಂಡನ್ ಮೆಕ್‌ಮುಲ್ಲೆನ್ ಉತ್ತಮ ಜೊತೆಯಾಟ ಕಟ್ಟಿದರು. ಜೋನ್ಸ್ 37 ರನ್ ಬಾರಿಸಿ ಔಟಾದರೆ, ಮೆಕ್‌ಮುಲ್ಲೆನ್ ಕೇವಲ 18 ಎಸೆತಗಳಲ್ಲಿ 4 ಸಿಕ್ಸರ್ ಸಹಿತ ಅಜೇಯ 41 ರನ್​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಮೈಕೆಲ್ ಲೀಸ್ಕ್ 22 ರನ್ ಬಾರಿಸಿ ತಂಡವನ್ನು 200 ರನ್​ಗಳ ಗಡಿ ದಾಟಿಸಿದರು. 200 ರನ್​ಗಳ ಗಡಿ ದಾಟುವುದರೊಂದಿಗೆ ಸ್ಕಾಟ್ಲೆಂಡ್ ತಂಡ ಈ ಆವೃತ್ತಿಯಲ್ಲಿ 200 ಕ್ಕೂ ಅಧಿಕ ರನ್​ ಕಲೆಹಾಕಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದುವರೆಗೆ 7 ಪಂದ್ಯಗಳು ನಡೆದಿದ್ದು, ಈ ಹಿಂದಿನ ಅತ್ಯಧಿಕ ಸ್ಕೋರ್ 184 ರನ್ ಆಗಿತ್ತು. ಅದು ನೇಪಾಳ ವಿರುದ್ಧ ಇಂಗ್ಲೆಂಡ್ ಕಲೆಹಾಕಿದ್ದ ಮೊತ್ತವಾಗಿತ್ತು.

T20 World Cup: ಟಿ20 ವಿಶ್ವಕಪ್​ನಿಂದ 7 ಸ್ಟಾರ್ ಆಟಗಾರರು ಔಟ್

134 ರನ್​​ಗಳಿಗೆ ಇಟಲಿ ಆಲೌಟ್

ಇನ್ನು 207 ರನ್​ಗಳ ಗುರಿ ಬೆನ್ನಟ್ಟಿದ ಇಟಲಿ ತಂಡದ ಅನಾನುಭವ ಎದ್ದು ಕಾಣಿಸುತ್ತಿತ್ತು. ಮೊದಲ ಎಸೆತದಲ್ಲೇ ತಂಡದ ಮೊದಲ ವಿಕೆಟ್ ಪತನವಾಯಿತು. ತಂಡದ ಪರ ಅರ್ಧಶತಕ ಬಾರಿಸಿ ಹೋರಾಟದ ಇನ್ನಿಂಗ್ಸ್ ಆಡಿದ ಬೆಂಜಮಿನ್ ಮಾನೆಂಟಿ 52 ರನ್​ ಬಾರಿಸಿದರೆ, ಹ್ಯಾರಿ ಮಾನೆಂಟಿ 37 ರನ್​ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರ ಆಟದಿಂದ ಇಟಲಿ 100 ರನ್​ಗಳ ಗಡಿ ದಾಟಿತು. ಅಂತಿಮವಾಗಿ 16.4 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು ಇಟಲಿ 134 ರನ್​ಗಳಿಗೆ ಆಲೌಟ್ ಆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿನ್ನದ ಮೇಲೆ ಯಾವತ್ತೂ ಹೂಡಿಕೆ ಮಾಡಲ್ಲ…! ವಿಶ್ವದ ಅತಿ ಚಾಣಾಕ್ಷ್ಯ ಹೂಡಿಕೆದಾರನ ನಿರ್ಧಾರ – Kannada News | Warren Buffett criticizes investing in the gold, despite its value soaring high

ಬೆಳ್ಳಿ ಮತ್ತು ಚಿನ್ನದ ಬೆಲೆ ಕಳೆದ ಒಂದು ವರ್ಷದಲ್ಲಿ ಸಿಕ್ಕಾಪಟ್ಟೆ ಏರಿದೆ. ವರ್ಷದ ಹಿಂದೆ ಚಿನ್ನ ಖರೀದಿಸಿದ್ದರೆ ಅದರ ಮೌಲ್ಯ 2-3 ಪಟ್ಟು ಹೆಚ್ಚಾಗುತ್ತಿತ್ತಲ್ಲ ಎಂದು ಯಾರಿಗಾದರೂ ಅನಿಸಿರುತ್ತದೆ. ಬಹಳಷ್ಟು ತಜ್ಞರು ಚಿನ್ನದ ಮೇಲೆ ಸ್ವಲ್ಪ ಭಾಗವಾದರೂ ಹೂಡಿಕೆ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ಆದರೆ, ವಿಶ್ವದ ಅಪ್ರತಿಮ ಹೂಡಿಕೆದಾರರೆನಿಸಿದ ಮತ್ತು ವಿಶ್ವದ ಅತಿ ಶ್ರೀಮಂತರ ಪೈಕಿ ಒಬ್ಬರೆನಿಸಿದ ವಾರನ್ ಬಫೆಟ್ ಅವರು ಚಿನ್ನದಂತಹ ಲೋಹಗಳ ಮೇಲೆ ಹೂಡಿಕೆ ಮಾಡಲು ಇದೂವರೆಗೆ ಮನಸ್ಸನ್ನೇ ಮಾಡಿಲ್ಲ. ಅವರು ಹೂಡಿಕೆ ದೃಷ್ಟಿಯಲ್ಲಿ ಚಿನ್ನದಿಂದ ದೂರವೇ ಉಳಿದಿದ್ದಾರೆ.

ವಾರನ್ ಬಫೆಟ್ ಅವರು ಚಿನ್ನದ ಮೇಲೆ ಹೂಡಿಕೆ ಮಾಡಿಯೇ ಇಲ್ಲವೆಂದಲ್ಲ, ಆದರೆ ಅವರ ಪ್ರಮುಖ ಹೂಡಿಕೆ ಭಾಗದಲ್ಲಿ ಚಿನ್ನ ಯಾವತ್ತಿಗೂ ಇಲ್ಲ. ಬಹಳ ಬೇಡಿಕೆಯಲ್ಲಿರುವ ಚಿನ್ನದ ಬಗ್ಗೆ ವಾರನ್ ಬಫೆಟ್​ಗೆ ಯಾಕೆ ತಿರಸ್ಕಾರ? ಚಿನ್ನದ ಮೇಲೆ ಹೂಡಿಕೆ ಮಾಡುವುದು ವ್ಯರ್ಥ ಎಂದು ಅವರು ವಾದಿಸುವುದು ಯಾಕೆ? ಸೆಂಟ್ರಲ್ ಬ್ಯಾಂಕುಗಳು ಚಿನ್ನ ಖರೀದಿಸಲು ನಾ ಮುಂದು, ತಾ ಮುಂದು ಎಂದು ಯತ್ನಿಸುತ್ತಿರುವಾಗ ವಾರನ್ ಬಫೆಟ್ ಯಾಕೆ ದೂರ ಉಳಿಯುತ್ತಿದ್ದಾರೆ?

ಇದನ್ನೂ ಓದಿ: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

ಚಿನ್ನ ಅನುತ್ಪಾದಕ ಆಸ್ತಿ, ಸೀಮಿತ ಬಳಕೆ

ವಾರನ್ ಬಫೆಟ್ ಪ್ರಕಾರ ಚಿನ್ನ ಅನುತ್ಪಾದಕ ಆಸ್ತಿ. ಇದರ ಪೂರೈಕೆ ಹೆಚ್ಚಾದರೆ ಅದಕ್ಕೆ ಸರಿದೂಗುವಷ್ಟು ಬಳಕೆ ಇಲ್ಲ ಎಂಬುದು ಇವರ ಅನಿಸಿಕೆ. ಚಿನ್ನ ಅನುತ್ಪಾದಕ ಆಸ್ತಿ ಹಾಗೂ ಹೆಚ್ಚು ಉಪಯುಕ್ತವಲ್ಲದ ಆಸ್ತಿ ಎನ್ನುವ ಎರಡು ಅಂಶಗಳು ಇವರು ಮುಂದಿಡುತ್ತಾರೆ. ಚಿನ್ನವನ್ನು ಆಭರಣಕ್ಕೆ ಬಳಸುವುದೇ ಹೆಚ್ಚು. ಎಲೆಕ್ಟ್ರಾನಿಕ್ಸ್ ಇತ್ಯಾದಿ ಔದ್ಯಮಿಕವಾಗಿ ಇದರ ಉಪಯೋಗ ಇರುವುದು ಬಹಳ ಕಡಿಮೆ. ಹೀಗಾಗಿ, ಇದನ್ನು ಅನುತ್ಪಾದಕ ವಸ್ತುವೆಂದು ಇವರು ಪರಿಗಣಿಸುತ್ತಾರೆ.

ಇದಕ್ಕೆ ವ್ಯತಿರಿಕ್ತವಾಗಿ ಬ್ಯುಸಿನೆಸ್, ಫ್ಯಾಕ್ಟರಿಗಳು, ಅಥವಾ ಕೃಷಿ ಭೂಮಿಯೇ ಆದರೂ ಅವು ಉತ್ಪಾದಕತೆಯ ಗುಣ ಹೊಂದಿವೆ. ಇವುಗಳಿಂದ ಹೊಸ ಸರಕು ಮತ್ತು ಸೇವೆಗಳನ್ನು ಸೃಷ್ಟಿಸಬಹುದು. ಆದರೆ, ಚಿನ್ನದಿಂದ ಇದನ್ನು ಮಾಡಲಾಗುವುದಿಲ್ಲ ಎಂಬುದು ಇವರ ವಾದ.

ವಾರನ್ ಬಫೆಟ್ ಅವರು ಔದ್ಯಮಿಕ ಸಂಸ್ಥೆಗಳ ಷೇರುಗಳ ಮೇಲೆ ಹೂಡಿಕೆ ಮಾಡಲು ಪ್ರಾಶಸ್ತ್ಯ ನೀಡುತ್ತಾರೆ. ಈ ಷೇರುಗಳಿಂದ ಡಿವಿಡೆಂಡ್ ಇತ್ಯಾದಿ ಹೆಚ್ಚುವರಿ ಲಾಭಗಳು ದೊರಕುತ್ತವೆ. ಚಿನ್ನದಿಂದ ಏನೂ ಗೀಟುವುದಿಲ್ಲ ಎನ್ನುತ್ತಾರೆ.

ಇದನ್ನೂ ಓದಿ: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್​ಗಳ ನಡುವೆ ಏನು ವ್ಯತ್ಯಾಸ?

ಚಿನ್ನದ ಮೇಲಿನ ಹೂಡಿಕೆ ವ್ಯರ್ಥವಾ?

ಚಿನ್ನದ ಬೆಲೆ ಕಳೆದ ಒಂದು ವರ್ಷದಲ್ಲಿ 2-3 ಪಟ್ಟು ಹೆಚ್ಚಿರುವುದು ಹೌದು. ಈ ರೀತಿಯ ಉಬ್ಬರ ವೈಪರೀತ್ಯವು ಆಗೊಮ್ಮೆ ಈಗೊಮ್ಮೆ ಇರುತ್ತದೆ. ದೀರ್ಘಾವಧಿಯಲ್ಲಿ ಚಿನ್ನ ಇದೇ ಸ್ಥಿರತೆ ಹೊಂದಿಲ್ಲ ಎಂಬುದು ಹೌದು. ಎರಡು ದಶಕಕ್ಕಿಂತ ಹೆಚ್ಚು ದೀರ್ಘಾವಧಿಯಲ್ಲಿ ಚಿನ್ನ ಹಾಗೂ ಷೇರು ಹೂಡಿಕೆಯನ್ನು ತುಲನೆ ಮಾಡಿದರೆ ಷೇರು ಹೆಚ್ಚು ರಿಟರ್ನ್ ಕೊಟ್ಟಿರುವುದು ಗಮನಾರ್ಹ ಸಂಗತಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯಲಹಂಕ ರೈಲು ನಿಲ್ದಾಣದಲ್ಲಿ ಸಿಕ್ತು 19 ಲಕ್ಷ ರೂ ಮೌಲ್ಯದ ಚಿನ್ನಾಭರಣ: ಪ್ರಾಮಾಣಿಕತೆ ಮೆರೆದ RPF – Kannada News | Bengaluru: RPF Staff Return Lost Gold Jewellery Worth 19 Lakh to Passenger

ಪ್ರಯಾಣಿಕರಿಗೆ ಚಿನ್ನಾಭರಣ ಹಿಂದಿರುಗಿಸಿದ RPF ಸಿಬ್ಬಂದಿImage Credit source: tv9 kannada

ಬೆಂಗಳೂರು, ಫೆಬ್ರವರಿ 09: ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಸುಮಾರು 19 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ಇರುವ ಟ್ರಾಲಿ ಬ್ಯಾಗ್‌ನ್ನು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಪತ್ತೆಹಚ್ಚಿ ವಾಪಸ್ ನೀಡಿದ್ದಾರೆ. ಯಲಹಂಕ ರೈಲು ನಿಲ್ದಾಣದಲ್ಲಿ ಟ್ರ್ಯಾಲಿ ಬ್ಯಾಗ್ ಕಳೆದುಕೊಂಡಿದ್ದರು. ಇದೀಗ ವಾಪಸ್​ ಸಿಕ್ಕ ಬೆನ್ನಲ್ಲೇ ಪ್ರಯಾಣಿಕ ನಿಟ್ಟುಸಿರು ಬಿಟ್ಟಿದ್ದಾರೆ. RPF ಸಿಬ್ಬಂದಿ ತ್ವರಿತ ಮತ್ತು ಪ್ರಾಮಾಣಿಕ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ನಡೆದಿದ್ದೇನು?

ಫೆಬ್ರವರಿ 08ರಂದು ರಾತ್ರಿ 08.35ಕ್ಕೆ ಈ ಘಟನೆ ನಡೆದಿತ್ತು. ಪ್ರಯಾಣಿಕರೊಬ್ಬರು ಯಲಹಂಕ ರೈಲು ನಿಲ್ದಾಣದಲ್ಲಿ ತಮ್ಮ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಕಳೆದುಕೊಂಡಿದ್ದರು. ಈ ಕುರಿತು ತಕ್ಷಣವೇ ‘ರೈಲ್ ಮದದ್’ ಪೋರ್ಟಲ್‌ನಲ್ಲಿ ದೂರು ಕೂಡ ದಾಖಲಿಸಿದ್ದರು.

ದೂರು ಸ್ವೀಕರಿಸಿದ ಕೂಡಲೇ RPF ಸಿಬ್ಬಂದಿ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಯಲಹಂಕ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್–1ರಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ವಾರಸುದಾರರಿಲ್ಲದ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ಯಲಹಂಕ ನಿಲ್ದಾಣದ RPF ಪೋಸ್ಟ್‌ಗೆ ತೆಗೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿತ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್​ಮ್ಯಾನ್ ಅರೆಸ್ಟ್

ಬ್ಯಾಗ್ ಪರಿಶೀಲನೆ ವೇಳೆ ಅದರೊಳಗೆ ಸುಮಾರು 17 ಲಕ್ಷ ರೂ ಮೌಲ್ಯದ 100 ಗ್ರಾಂ ಚಿನ್ನಾಭರಣಗಳು ಹಾಗೂ 2 ಲಕ್ಷ ರೂ ನಗದು ಇರುವುದು ಪತ್ತೆಯಾಗಿದೆ. ನಂತರ ರೈಲ್ ಮದದ್​​ನಲ್ಲಿ ಉಲ್ಲೇಖವಾದ ದೂರು ಹಾಗೂ ಆಧಾರ್ ಕಾರ್ಡ್ ವಿವರಗಳನ್ನು ಪಡೆದು RPF ಸಿಬ್ಬಂದಿ ಬ್ಯಾಗ್ ಕಳೆದುಕೊಂಡ ಪ್ರಯಾಣಿಕನನ್ನು ಸಂಪರ್ಕಿಸಿದ್ದಾರೆ. ಬಳಿಕ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಟ್ರಾಲಿ ಬ್ಯಾಗ್‌ನ್ನು ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.

ಬಿಎಂಟಿಸಿ ಬಸ್‌ನಲ್ಲಿ ಬಿಟ್ಟುಹೋಗಿದ್ದ 10 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್‌ ವಾಪಸ್

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಬಿಟ್ಟುಹೋಗಿದ್ದ ಸುಮಾರು 10 ಲಕ್ಷ ರೂ ಮೌಲ್ಯದ ಚಿನ್ನಾಭರಣ ಇರುವ ಬ್ಯಾಗ್‌ನ್ನು ಬಿಎಂಟಿಸಿ ಸಿಬ್ಬಂದಿ ಪತ್ತೆಹಚ್ಚಿ ಸುರಕ್ಷಿತವಾಗಿ ಹಿಂತಿರುಗಿಸಿದ್ದಾರೆ. ಕಳೆದುಹೋಗಿದ್ದ ಚಿನ್ನ ಮರಳಿ ಸಿಕ್ಕ ಖುಷಿಯಲ್ಲಿ ಮಹಿಳೆ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಿನ್ನೆ ಬೆಂಗಳೂರಿನಲ್ಲಿ ನಡೆದಿದೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಸಿಕ್ತು 3 ಕೋಟಿ ರೂ. ಮೌಲ್ಯದ ಗಾಂಜಾ! ಮೂವರು ಆರೋಪಿಗಳು ವಶಕ್ಕೆ

ಜನವರಿ 31ರಂದು ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಬಸ್ ಹತ್ತಿದ್ದ ಮಹಿಳೆ ಕನಕಪುರಕ್ಕೆ ತೆರಳಲು ಬಸವನಗುಡಿ ಟಿಕೆಟ್ ಪಡೆದಿದ್ದರು. ಶನಿವಾರ ಹಿನ್ನೆಲೆ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರಿಂದ ಬಸ್‌ನಲ್ಲಿ ಭಾರೀ ರಷ್ ಇತ್ತು. ಬಸ್ ಬದಲಾಯಿಸಲು ಬಸವನಗುಡಿಯಲ್ಲಿ ಇಳಿಯುವ ವೇಳೆ ಆತುರದಲ್ಲಿ ಮಹಿಳೆ ಚಿನ್ನದ ಸರ ಇದ್ದ ಬ್ಯಾಗ್‌ನ್ನು ಬಸ್‌ನಲ್ಲೇ ಮರೆತು ಹೋಗಿದ್ದರು. ನಂತರ ಬ್ಯಾಗ್ ಕಳೆದುಹೋಗಿರುವುದು ತಿಳಿದ ಕೂಡಲೇ ಮಹಿಳೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಮಹಿಳೆಯನ್ನು ಸಂಪರ್ಕಿಸಿ, ಪದ್ಮನಾಭನಗರ ಡಿಪೋ ಬಳಿ ಚಿನ್ನಾಭರಣ ಇರುವ ಬ್ಯಾಗ್‌ನ್ನು ಹಿಂತಿರುಗಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟಿ20 ವಿಶ್ವಕಪ್ ನಡುವೆ ಶಸ್ತ್ರಚಿಕಿತ್ಸೆಗೊಳಗಾದ ಟೀಂ ಇಂಡಿಯಾ ವೇಗಿ – Kannada News | Harshit Rana Undergoes Knee Surgery After T20 World Cup Exit; Vows Comeback

2026 ರ ಟಿ20 ವಿಶ್ವಕಪ್​ನಿಂದ ಹೊರಬೀಳುವ ಮೊದಲು, ಹರ್ಷಿತ್ ರಾಣಾ ಉತ್ತಮ ಫಾರ್ಮ್​ನಲ್ಲಿದ್ದರು. ಬೌಲಿಂಗ್​ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್​ನಲ್ಲೂ ರಾಣಾ ಅವರ ಪ್ರದರ್ಶನ ಅಮೋಘವಾಗಿತ್ತು. ಆದರೆ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಅವರು ಗಾಯಗೊಂಡಿದ್ದು ತಂಡದ ಚಿಂತೆ ಹೆಚ್ಚಿಸಿತ್ತು. ಏಕೆಂದರೆ ಹರ್ಷಿತ್ ಅವರಂತೆಯೇ, ವಾಷಿಂಗ್ಟನ್ ಸುಂದರ್ ಕೂಡ ಗಾಯಗೊಂಡಿದ್ದರು. ಪ್ರಸ್ತುತ ಚೇತರಿಸಿಕೊಂಡಿರುವ ಸುಂದರ್ ತಂಡವನ್ನು ಕೂಡಿಕೊಂಡಿದ್ದಾರೆ.

Source link

ಕಾಲೇಜಿನೊಳಗೇ ಯುವತಿಯನ್ನು ಕೊಂದು, ತಾನೂ ಶೂಟ್ ಮಾಡಿಕೊಂಡ ಪಂಜಾಬ್​​ನ ಕಾನೂನು ವಿದ್ಯಾರ್ಥಿ – Kannada News | Tarn Taran law student shoots female classmate dead inside College then kills self

ನವದೆಹಲಿ, ಫೆಬ್ರವರಿ 9: ಪಂಜಾಬ್​​ನ ತರಣ್ ತರಣ್ ಕಾನೂನು ಕಾಲೇಜಿನ ವಿದ್ಯಾರ್ಥಿನಿಯನ್ನು ಅದೇ ಕಾಲೇಜಿನಲ್ಲಿ ಗುಂಡಿಕ್ಕಿ (Shoot) ಕೊಲ್ಲಲಾಗಿದೆ. ಆಕೆಗೆ ಗುಂಡು ಹಾರಿಸಿದ ಹುಡುಗ ನಂತರ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವತಿಯನ್ನು 20 ವರ್ಷದ ಸಂದೀಪ್ ಕೌರ್ ಎಂದು ಗುರುತಿಸಲಾಗಿದೆ. ಶೂಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಹುಡುಗನನ್ನು ಪ್ರಿನ್ಸ್ ರಾಜ್ ಎಂದು ಗುರುತಿಸಲಾಗಿದೆ. ಈ ಘಟನೆ ಉಸ್ಮಾನ್ ಕಾನೂನು ಕಾಲೇಜಿನಲ್ಲಿ ನಡೆದಿದೆ.

ಈ ಘಟನೆಯ ನಂತರ ಪೊಲೀಸರು ಇಡೀ ಕಾಲೇಜನ್ನು ಸೀಲ್ ಮಾಡಿದ್ದಾರೆ. ಪೊಲೀಸರು ಕಾಲೇಜಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಘಟನೆಯ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಸಂದೀಪ್ ಕೌರ್ ತನ್ನ ಗೆಳತಿಯೊಂದಿಗೆ ಬೆಂಚ್ ಮೇಲೆ ಕುಳಿತಿರುವುದು ಕಂಡುಬರುತ್ತದೆ. ಆಗ ಅಲ್ಲಿಗೆ ಬಂದ ಹುಡುಗ ಮೊದಲು ಆಕೆಗೆ ಗುಂಡು ಹಾರಿಸುತ್ತಾನೆ. ಇದರಿಂದ ಆಕೆ ಕಿರುಚುತ್ತಾ ಬೆಂಚ್ ಮೇಲೆ ಬೀಳುತ್ತಾಳೆ. ಇದಾದ ನಂತರ, ಆ ಹುಡುಗ ಸ್ಥಳದಲ್ಲೇ ತನಗೆ ತಾನು ಗುಂಡು ಹಾರಿಸಿಕೊಂಡು ನೆಲಕ್ಕೆ ಬೀಳುತ್ತಾನೆ.

ಇದನ್ನೂ ಓದಿ: ಹಸಿವಿನಿಂದ ಅಳುತ್ತಿದ್ದ 5 ವರ್ಷದ ಮಗಳಿಗೆ ಹೆಂಡ ಕುಡಿಸಿ, ಕತ್ತು ಹಿಸುಕಿ ಕೊಂದ ಕುಡುಕ!

ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಮೃತ ಯುವತಿಯ ಪೋಷಕರು, ನಮ್ಮ ಮಗಳು ಇಂದು ಎಂದಿನಂತೆ ಕಾಲೇಜಿಗೆ ಬಂದಿದ್ದಳು. ಇಂದು, ಒಬ್ಬ ಹುಡುಗ ತರಗತಿಯಲ್ಲಿ ಅವಳಿಗೆ ಗುಂಡು ಹಾರಿಸಿದ. ನಂತರ ಹುಡುಗ ತನಗೆ ತಾನೇ ಗುಂಡು ಹಾರಿಸಿಕೊಂಡ. ಆ ಹುಡುಗ ನಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದ. ಅವನು ನಮ್ಮ ಮನೆಗೆ ಕೂಡ ಬಂದಿದ್ದ. ಆತ ಮನೆಗೆ ಬಂದು ನಮ್ಮ ಮಗಳನ್ನು ಬೆದರಿಸಿದ್ದ ಎಂದು ಆರೋಪಿಸಿದ್ದಾರೆ.

ಮೃತ ಯುವತಿಯ ಕುಟುಂಬದ ಸದಸ್ಯರು ಕಾಲೇಜಿನ ಭದ್ರತೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಗನ್ ತೆಗೆದುಕೊಂಡು ಬರುತ್ತಿದ್ದರೂ ಯಾಕೆ ಯಾರೂ ಅದನ್ನು ಪರಿಶೀಲಿಸಿಲ್ಲ ಎಂದು ಅವರು ಕೇಳಿದ್ದಾರೆ. ಅವರು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿತ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್​ಮ್ಯಾನ್ ಅರೆಸ್ಟ್

ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಡಿಎಸ್ಪಿ ಜಗ್ಬೀರ್ ಸಿಂಗ್, ಯುವಕ ಮತ್ತು ಯುವತಿ ಇಬ್ಬರೂ ಮೊದಲ ವರ್ಷದ ಕಾನೂನು ವಿದ್ಯಾರ್ಥಿಗಳಾಗಿದ್ದರು. ಇಂದು ತರಗತಿ ಪ್ರಾರಂಭವಾದಾಗ ಯುವಕ ಪಿಸ್ತೂಲು ತೆಗೆದು ಸಂದೀಪ್ ಕೌರ್ ಮೇಲೆ ಗುಂಡು ಹಾರಿಸಿದ್ದಾನೆ. ಇದಾದ ನಂತರ, ಆತ ಕೂಡ ಗುಂಡು ಹಾರಿಸಿಕೊಂಡಿದ್ದಾನೆ. ಈ ಘಟನೆಯ ಹಿಂದಿನ ಕಾರಣಗಳನ್ನು ತನಿಖೆ ಮಾಡಲಾಗುತ್ತಿದೆ. ಆ ಹುಡುಗ ಪಿಸ್ತೂಲ್ ಅನ್ನು ಎಲ್ಲಿಂದ ತಂದಿದ್ದಾನೆಂದು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಒಂದೊಂದೇ ಇನಿಂಗ್ಸ್​ ಬಳಿಕ ಸೊನ್ನೆ ಸುತ್ತುವ ಅಭಿಷೇಕ್ ಶರ್ಮಾ – Kannada News | Abhishek Sharma’s last 6 innings showcase his “all or nothing” style

ಅಂದರೆ ಒಂದು ಇನಿಂಗ್ಸ್​​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಅಭಿಷೇಕ್ ಶರ್ಮಾ, ಮತ್ತೊಂದು ಇನಿಂಗ್ಸ್​ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಕಳೆದ 6 ಪಂದ್ಯಗಳಲ್ಲಿ ಅವರು ಮೂರು ಬಾರಿ ಡಕ್ ಔಟ್ ಆಗಿರುವುದು. ಅಂದರೆ ಅತ್ತ ಭರ್ಜರಿ ಫಾರ್ಮ್​​ನಲ್ಲಿದ್ದರೂ ಅಭಿಷೇಕ್ ಶರ್ಮಾ ಒಂದೊಂದೇ ಇನಿಂಗ್ಸ್​​ಗಳ ಸೊನ್ನೆ ಸುತ್ತುತ್ತಿರುವುದು ಇದೀಗ ಟೀಮ್ ಇಂಡಿಯಾದ ಚಿಂತೆಗೆ ಕಾರಣವಾಗಿದೆ.

Source link

ಅಬಕಾರಿ ಇಲಾಖೆಯಲ್ಲಿ ಹಗರಣ ಆರೋಪ ಬೆನ್ನಲ್ಲೇ ದೈವದ ಮೊರೆ ಹೋದ ಸಚಿವ ತಿಮ್ಮಾಪುರ! – Kannada News | Excise Minister RB Timmapur Visits Dhumavati Temple in Kapu, Udupi

ದೈವಸ್ಥಾನಕ್ಕೆ ಸಚಿವ ತಿಮ್ಮಾಪುರ ಭೇಟಿImage Credit source: Tv9 Kannada

ಉಡುಪಿ, ಫೆಬ್ರವರಿ 09: ವಿಧಾನ ಸಭೆ ವಿಶೇಷ ಅಧಿವೇಶನದಲ್ಲಿ ಅಬಕಾರಿ ಇಲಾಖೆಯಲ್ಲಿನ ಹಗರಣ ಆರೋಪ ಭಾರಿ ಸದ್ದು ಮಾಡಿತ್ತು. ಸಚಿವ ಆರ್​​.ಬಿ. ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳು ಪಟ್ಟುಹಿಡಿದಿದ್ದವು. ಈ ಬೆನ್ನಲ್ಲೇ ಸಚಿವರು ದೈವದ ಮೊರೆ ಹೋಗಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಸಮೀಪದ ಬಿಳಿಯಾರು ಧೂಮಾವತಿ ಸನ್ನಿಧಾನಕ್ಕೆ ನೇಮೋತ್ಸವ ದಿನದಂದೇ ಕುಟುಂಬ ಸಮೇತ ತಿಮ್ಮಾಪುರ ಅವರ ಭೇಟಿಯೀಗ ಗಮನ ಸೆಳೆದಿದೆ. ಇದೇ ವೇಳೆ ಸನ್ನಿಧಿಯ ನೂತನ ಗೋಪುರ ಮತ್ತು ಹೊಸ ಕಟ್ಟಡವನ್ನೂ ಅವರು ಉದ್ಘಾಟಿಸಿದ್ದಾರೆ.

ಆಪ್ತನ ಆಹ್ವಾನದ ಮೇರೆಗೆ ದೈವಸ್ಥಾನಕ್ಕೆ ಭೇಟಿ

ಆಪ್ತ ಜೀವನಶೆಟ್ಟಿ ಆಹ್ವಾನದ ಮೇರೆಗೆ ಸಚಿವ ತಿಮ್ಮಾಪುರ ಅವರು ಧೂಮಾವತಿ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ಸಹಿತ ಬಂದು ದೈವದ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನು ವಿಪಕ್ಷಗಳು ಮಾಡಿದ್ದ ಅಬಕಾರಿ ಹಗರಣ ಆರೋಪದಲ್ಲಿ ಉಡುಪಿಯ ಬಿಳಿಯಾರು ಮೂಲದ ಜೀವನ್ ಶೆಟ್ಟಿ ಹೆಸರು ಕೂಡ ಕೇಳಿಬಂದಿತ್ತು. ಹಗರಣ ಕುರಿತಾದ ಆಡಿಯೋದಲ್ಲಿ ಸದ್ಯ ಧಾರವಾಡದಲ್ಲಿ ವೈನ್ ಮರ್ಚೆಂಟ್ ಅಸೋಸಿಯೇಷನ್ ಪದಾಧಿಕಾರಿಯಾಗಿರುವ ಜೀವನ್ ಶೆಟ್ಟಿ ಹೆಸರು ಉಲ್ಲೇಖವಾಗಿತ್ತು. ಸಚಿವರ ಹೆಸರಲ್ಲಿ ಜೀವನಶೆಟ್ಟಿ ಕಿರುಕುಳ ನೀಡುತ್ತಾರೆ ಎಂಬ ಮಾತುಗಳು ಅದರಲ್ಲಿದ್ದವು.

ಇದನ್ನೂ ಓದಿ:  ಅಬಕಾರಿ ಸಚಿವ ತಿಮ್ಮಾಪುರಗೆ ಸಂಕಷ್ಟ; ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

ಇನ್ನು ದೈವಸ್ಥಾನಕ್ಕೆ ಭೇಟಿ ಬಳಿಕ ಮಾತನಾಡಿದ ಸಚಿವರು, ಜೀವನ್ ಶೆಟ್ಟಿ ಅವರು ಇಲ್ಲಿಗೆ ಬರುವಂತೆ ಕರೆದಿದ್ದಕ್ಕೆ ನಾನು ಬಂದಿದ್ದೇನೆ. ಕುಟುಂಬದ ಜೊತೆಗೆ ಬಂದು ದೈವದ ಆಶೀರ್ವಾದ ಪಡೆದಿದ್ದು, ದೈವಸ್ಥಾನದ ಕಟ್ಟಡಕ್ಕೆ ಸಹಕಾರ ಮಾಡಿದವರನ್ನು ಸನ್ಮಾನಿಸಿದ್ದೇನೆ. ಇಂತಹ ದೈವದ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಎಲ್ಲರಿಗೂ ದೇವರ ಅನುಗ್ರಹ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಅಲ್ಲದೆ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಆರೋಪಗಳೆಲ್ಲ ಸುಳ್ಳು. ಅಧಿವೇಶನದಲ್ಲಿ ಎಲ್ಲಾ ವಿಚಾರವನ್ನು ನಾನು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!

ಬೆಂಗಳೂರು, ಫೆಬ್ರವರಿ 09: ಬ್ರೇಕ್ ಫೇಲ್ ಆಗಿ ಬಿಎಂಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಭೀಕರ ಅಪಘಾತ ಭಾನುವಾರ ಸಂಜೆ ಕಮಲಾನಗರದಲ್ಲಿ ಸಂಭವಿಸಿದೆ. ಸಂಜೆ 6.49ರ ಸುಮಾರಿಗೆ ಡಾ. ರಾಜ್ ಕುಮಾರ್ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ನಿಯಂತ್ರಣ ತಪ್ಪಿದ ಬಸ್ ಜನರ ಮೇಲೆ ನುಗ್ಗುವ ಹಂತಕ್ಕೆ ಬಂದಿದ್ದು, ಕೂದಲೆಳೆಯ ಅಂತರದಲ್ಲಿ ಯುವಕನೊಬ್ಬ ಪಾರಾಗಿದ್ದಾನೆ. ಆಟೋ ಚಾಲಕ, ಪ್ಯಾಸೆಂಜರ್ಸ್ ಹಾಗೂ ಬೈಕ್ ಸವಾರರು ಮಹಾ ಅಪಾಯದಿಂದ ತಪ್ಪಿಸಿಕೊಂಡರೂ ಆಟೋ ಹಾಗೂ ಬೈಕ್‌ಗೆ ಹಾನಿಯಾಗಿದೆ. ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

ಸಲ್ಮಾನ್ ಶ್ರೇಷ್ಠ,ಉತ್ತಮ ಎಂದು ಕೊಂಡಾಡಿದ ಆರ್​​ಎಸ್​​ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ – Kannada News | Bollywood’s Salman Khan Joins RSS Centenary; Mohan Bhagwat’s Remarks Go Viral

ಇತ್ತೀಚೆಗೆ ನಡೆದ ಆರ್​​ಎಸ್​​ಎಸ್​​ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ಭಾಗಿ ಆಗಿದ್ದರು. ಮುಂಬೈನಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ವೇಳೆ ಸ್ವಯಂ ಸೇವಕ್ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಸಲ್ಮಾನ್ ಖಾನ್ ಅವರನ್ನು ಹೊಗಳಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗುತ್ತಿದೆ.

ಆರ್​​ಎಸ್​​ಎಸ್​ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಬಾಲಿವುಡ್​​ನ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಈ ರೀತಿ ಭಾಗಿ ಆದವರಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರು. ವೇದಿಕೆ ಏರಿದ ಮೋಹನ್ ಭಾಗ್ವತ್ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ಸಲ್ಮಾನ್ ಖಾನ್ ಕಾಲೇಜು ವಿದ್ಯಾರ್ಥಿಗಳು ಹಾಗೆ ಬಟ್ಟೆ ಧರಿಸುತ್ತಾರೆ. ಅವರು ಅದನ್ನು ಏಕೆ ಧರಿಸುತ್ತಾರೆ ಗೊತ್ತಾ? ಅವರು ಅದನ್ನು ಧರಿಸಲೇಬೇಕು ಅದಕ್ಕೆ. ಸಲ್ಮಾನ್ ಇದನ್ನು ಏಕೆ ಧರಿಸುತ್ತಾರೆ? ಅದು ನನಗೆ ಗೊತ್ತಿಲ್ಲ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

‘ಒಳ್ಳೆಯದಿರಲಿ ಅಥವಾ ಕೆಟ್ಟದ್ದಾಗಿರಲಿ, ಅದನ್ನು ಮುನ್ನಡೆಸುವುದು ಫ್ಯಾಷನ್. ಫ್ಯಾಷನ್ ಅನ್ನು ಸೃಷ್ಟಿಸುವವರು ವಿಶ್ವಾಸಾರ್ಹರು, ಶ್ರೇಷ್ಠರು ಮತ್ತು ಗೌರವಕ್ಕೆ ಅರ್ಹರು ಎಂದು ಪರಿಗಣಿಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ. ಸಲ್ಮಾನ್ ಖಾನ್ ಅವರು ಈ ಮಾತುನ್ನು ಆಲಿಸುತ್ತಾ ಇದ್ದರು. ಅವರು ಇದಕ್ಕೆ ಪ್ರೀತಿಯಿಂದ ಮುಗುಳುನಗೆ ಬೀರಿದ್ದಾರೆ.

ಸಲ್ಮಾನ್ ಖಾನ್ ಅವರ ಬಗ್ಗೆ ಮೋಹನ್ ಭಾಗ್ವತ್ ಹೇಳಿದ ಮಾತು ಅನೇಕರಿಗೆ ಖುಷಿ ನೀಡಿದೆ. ಈ ಬಗ್ಗೆ ಎಲ್ಲರೂ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ‘ಸಲ್ಮಾನ್ ಖಾನ್ ಅವರ ರೀತಿ ಯಾರೂ ಇಲ್ಲ. ಅವರು ಸರಳ ವ್ಯಕ್ತಿತ್ವದ ಜೀವಿ’ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ಸ್ಯಾಂಡ್​​ವಿಚ್​ ಆಗೋದನ್ನು ತಪ್ಪಿಸಿಕೊಳ್ಳಲು ನಿರ್ಧರಿಸಿದ ಸಲ್ಮಾನ್ ಖಾನ್

ಆರ್​​ಎಸ್​​ಎಸ್ ಕಾರ್ಯಕ್ರಮಕ್ಕೆ ಇಡೀ ಬಾಲಿವುಡ್ ಹಾಜರಿ ಹಾಕಿತ್ತು ಎಂದರೂ ತಪ್ಪಾಗಲಾರದು. ಸಲ್ಮಾನ್ ಖಾನ್ ಜೊತೆ, ಅಕ್ಷಯ್ ಕುಮಾರ್, ಕರಣ್ ಜೋಹರ್, ರವೀನಾ ಟಂಡನ್, ಅನನ್ಯಾ ಪಾಂಡೆ ಸೇರಿದಂತೆ ಅನೇಕರು ಹಾಜರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link