Category Archives: Blog

Your blog category

ರಣಜಿ ಸೆಮಿಫೈನಲ್‌: ಸ್ಮರಣ್ ಸತತ 2ನೇ ಶತಕ; 800 ರನ್​ಗಳ ಗಡಿ ದಾಟಿದ ಕರ್ನಾಟಕ – Kannada News | Ranji Trophy Semi final: Smaran Ravichandran’s Twin Centuries Propel Karnataka to Dominance

ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025-26ರ ರಣಜಿ ಟ್ರೋಫಿಯ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತರಾಖಂಡ ತಂಡವನ್ನು ಎದುರಿಸಿರುವ ಕರ್ನಾಟಕ ತಂಡ ಪಂದ್ಯದ ಮೇಲೆ ಭಿಗಿ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್​ನಲ್ಲಿ 736 ರನ್ ಕಲೆಹಾಕಿದ ಕರ್ನಾಟಕ ತಂಡ, ಉತ್ತರಾಖಂಡ ತಂಡವನ್ನು ಮೊದಲ ಇನ್ನಿಂಗ್ಸ್​ನಲ್ಲಿ 233 ರನ್​ಗಳಿಗೆ ಆಲೌಟ್ ಮಾಡಿತು. ಆ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ 4ನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 299 ರನ್ ಕಲೆಹಾಕಿದೆ. ಈ ಮೂಲಕ ತನ್ನ ಮುನ್ನಡೆಯನ್ನು 802 ರನ್​ಗಳಿಗೆ ಕೊಂಡೊಯ್ದಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಕರ್ನಾಟಕ ಪರ ಅಮೋಘ ಶತಕ ಬಾರಿಸಿದ್ದ ಸ್ಮರಣ್ ರವಿಚಂದ್ರನ್, ಇದೀಗ ಎರಡನೇ ಇನ್ನಿಂಗ್ಸ್​ನಲ್ಲಿ ಶತಕ ಬಾರಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.

ಮೊದಲ ಇನ್ನಿಂಗ್ಸ್​ನಲ್ಲಿ 216 ಎಸೆತಗಳನ್ನು ಎದುರಿಸಿ 12 ಬೌಂಡರಿಗಳ ಸಹಿತ 135 ರನ್ ಬಾರಿಸಿದ್ದ ಸ್ಮರಣ್, ಇದೀಗ ಎರಡನೇ ಇನ್ನಿಂಗ್ಸ್​ನಲ್ಲೂ 149 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 127 ರನ್ ಬಾರಿಸಿದರು. ಇನ್ನು ಕರ್ನಾಟಕ ಪರ ಮೊದಲ ಇನ್ನಿಂಗ್ಸ್​ನಲ್ಲಿ ಸ್ಮರಣ್ ಹೊರತುಪಡಿಸಿ ನಾಯಕ ದೇವದತ್ ಪಡಿಕ್ಕಲ್ ದ್ವಿಶತಕ ಬಾರಿಸಿದರೆ, ಕೆಎಲ್ ರಾಹುಲ್ ಕೂಡ ಶತಕದ ಇನ್ನಿಂಗ್ಸ್ ಅಡಿದ್ದರು

Source link

ಅವನ ಸಹವಾಸ ಬೇಡ ಅಂದ್ರೂ ಕೇಳಿಲ್ಲ: ಪ್ರಿಯಕರನ ಅಸಲಿಮುಖ ಬಿಚ್ಚಿಟ್ಟ ಮಂಗಳಮುಖಿ – Kannada News | Love Turns Tragic in Ballary: Transgender Talks about Partners death

ಬಳ್ಳಾರಿ, (ಫೆಬ್ರವರಿ 18): ಪ್ರೀತಿ ಪ್ರೇಮ ಎಂದು ನಂಬಿಸಿ ಕೊನೆಗೆ ಹಣಕ್ಕಾಗಿ ಕೊಲೆ ಮಾಡಿದ್ದಾನೆ ಎಂಬ ಗಂಭೀರ ಆರೋಪಗಳ ನಡುವೆಯೇ ಬಳ್ಳಾರಿಯಲ್ಲಿ ಪ್ರೇಮಿಗಳಿಬ್ಬರ ಮೃತದೇಹಗಳು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿವೆ. ನಗರದ ಕೆಎಂಎಫ್ (KMF) ಡೈರಿ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ಈ ದಾರುಣ ಘಟನೆ ನಡೆದಿದೆ. ಮೃತ ದುರ್ದೈವಿಗಳನ್ನು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮಲ್ಪನಗುಡಿ ಗ್ರಾಮದ ಆಟೋ ಚಾಲಕ ಶೇಖರ್ ಅಲಿಯಾಸ್ ಮಣಿ (31) ಹಾಗೂ ಬಳ್ಳಾರಿ ತಾಲೂಕಿನ ಚಾಗನೂರ ಗ್ರಾಮದ ನಿವಾಸಿ, ಮಂಗಳಮುಖಿ ಸುಹಾಸಿನಿ (29) ಎಂದು ಗುರುತಿಸಲಾಗಿದೆ. ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಇವರಿಬ್ಬರ ಮೃತದೇಹಗಳು ಮನೆಯ ಕಿಡಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇದು ಆತ್ಮತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಬ್ರೂಸ್‌ಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಮಂಗಳಮುಖಿಯೊಬ್ಬರು ಸ್ಫೋಟ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಮಂಗಳಮುಖಿ ಎಂದು ಗೊತ್ತಿದ್ದರೂ ಪ್ರೀತಿಯಲ್ಲಿ ಬಿದ್ದ ಯುವಕ: ಆಮೇಲಾಗಿದ್ದು ದುರಂತ

Source link

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 3 ಚಿರತೆ ಮರಿಗಳ ಜನನ; ದೇಶದಲ್ಲಿ ಚೀತಾಗಳ ಸಂಖ್ಯೆ 38ಕ್ಕೆ ಏರಿಕೆ – Kannada News | 3 cheetah cubs born at Kuno National Park South African cheetah Gamini video viral

ಶಿವಪುರಿ, ಫೆಬ್ರವರಿ 18: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದಕ್ಷಿಣ ಆಫ್ರಿಕಾದ ಚೀತಾ ಗಾಮಿನಿಗೆ 3 ಮರಿಗಳು ಜನಿಸಿವೆ. ಈ ವಿಷಯವನ್ನು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಘೋಷಿಸಿದ್ದಾರೆ. ಇದು ಭಾರತದ ಚೀತಾ (Cheetah) ಮರುಪರಿಚಯ ಕಾರ್ಯಕ್ರಮಕ್ಕೆ ಪ್ರಮುಖ ಮೈಲಿಗಲ್ಲು ಎಂದು ಕರೆದಿದ್ದಾರೆ. ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ ಭೂಪೇಂದರ್ ಯಾದವ್, ಭಾರತಕ್ಕೆ ದಕ್ಷಿಣ ಆಫ್ರಿಕಾದ ಚೀತಾಗಳ ಆಗಮನವಾಗಿ 3 ವರ್ಷವಾಗಿದೆ. ಈಗ ಎರಡನೇ ಬಾರಿಗೆ ತಾಯಿಯಾಗಿರುವ ಗಾಮಿನಿ 3 ಮರಿಗಳಿಗೆ ಜನ್ಮ ನೀಡಿದ್ದಾರೆ. ಇದು ಉದ್ಯಾನವನದ ಬೆಳೆಯುತ್ತಿರುವ ಚೀತಾಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ.

ಪ್ರಾಜೆಕ್ಟ್ ಚೀತಾ ಪ್ರಾರಂಭವಾದ ನಂತರ ಭಾರತದಲ್ಲಿ ಜನಿಸಿದ ಒಂಬತ್ತನೇ ಯಶಸ್ವಿ ಚಿರತೆ ಮರಿ ಇದು. ಬದುಕುಳಿದ ಭಾರತೀಯ ಮೂಲದ ಮರಿಗಳ ಸಂಖ್ಯೆ 27ಕ್ಕೆ ಏರಿದೆ. ಭಾರತದ ಒಟ್ಟು ಚಿರತೆ ಸಂಖ್ಯೆ ಈಗ 38ರಷ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೊಸೆ ಬರ್ತ್​​​ಡೇ ಮಾಡಲು ಹೋಗಿದ್ದ ಇಬ್ಬರು ದುರಂತ ಸಾವು: ಆಗಿದ್ದೇನು? – Kannada News | Koppal Road Accident: Two Youths Die Overtaking Lorry in Yalaburga Tragedy

ಕೊಪ್ಪಳ, ಫೆಬ್ರವರಿ 18: ಓವರ್​​ಟೇಕ್​ ವೇಳೆ ಲಾರಿ ಚಕ್ರಕ್ಕೆ ಸಿಲುಕಿ ಇಬ್ಬರು ಯುವಕರು (boys) ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಉಪಲದಿನ್ನಿ ಬಳಿ ನಡೆದಿದೆ. ಬೈಕ್​ ಸವಾರನ ನಿಯಂತ್ರಣ ತಪ್ಪಿ ಲಾರಿ ಚಕ್ರಕ್ಕೆ ಸಿಲುಕಿ ಶ್ರೀನಿವಾಸ್​(26) ಮತ್ತು ಸಿದ್ದನಗೌಡ(25) ಮೃತಪಟ್ಟಿದ್ದಾರೆ. ಸೊಸೆ ಬರ್ತ್​​​ಡೇ ಮಾಡಲು ಹೋಗಿದ್ದ ಇಬ್ಬರು ದುರಂತ ಅಂತ್ಯಕಂಡಿದ್ದಾರೆ. ಬೇವೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಸೊಸೆ ಬರ್ತ್​​ಡೇ ಹಿನ್ನೆಲೆ ಸ್ನೇಹಿತ ಸಿದ್ದನಗೌಡ ಜತೆ ಶ್ರೀನಿವಾಸ್ ತೆರಳುತ್ತಿದ್ದ. ಮುಸಲಾಪುರದಿಂದ  ಹಿರೇಅರಳಹಳ್ಳಿಗೆ ಬೈಕ್​ನಲ್ಲಿ ಇಬ್ಬರು ತೆರಳುತ್ತಿದ್ದ ವೇಳೆ ಮುಂದೆ ಹೋಗುತ್ತಿದ್ದ ಸ್ಟೀಲ್ ಕ್ವಾಯಿಲ್ ಸಾಗಿಸುತ್ತಿದ್ದ ಲಾರಿ ಓವರ್​​ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಲಾರಿ ಕೆಳಗಡೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಮೃತರು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಮುಸಲಾಪುರ ನಿವಾಸಿಗಳು ಎನ್ನಲಾಗಿದೆ.

ಖಾಸಗಿ ಶಾಲಾ ಬಸ್ ಹರಿದು 4 ವರ್ಷದ ಮಗು ಸ್ಥಳದಲ್ಲೇ ಸಾವು

ಖಾಸಗಿ ಶಾಲಾ ಬಸ್ ಹರಿದು 4 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ನಿನ್ನೆ ನಡೆದಿದೆ. ಗಾಜರಕೋಟ ಗ್ರಾಮದ ವಿಸ್ಡಮ್ ಶಾಲೆಯ ಪುನೀತ್ ಮೃತ ವಿದ್ಯಾರ್ಥಿ. ನಿನ್ನೆ ಶಾಲೆಯಿಂದ ಬಸ್​ನಲ್ಲಿ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಪುನೀತ್, ಬಸ್​ನಿಂದ ಕೆಳಗೆ ಇಳಿಯುತ್ತಿದ್ದಂತೆ ಡ್ರೈವರ್ ರಿವರ್ಸ್ ತೆಗೆದುಕೊಂಡಿದ್ದು, ಈ ವೇಳೆ ಬಸ್​ನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: ಇಡೀ ಕುಟುಂಬವೇ ದುರಂತ ಅಂತ್ಯ

ಪುನೀತ್ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಮಗುವಿನ ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಬಸ್ ಡ್ರೈವರ್​ಗೆ ಜೀವಾವಧಿ ಶಿಕ್ಷೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಪೊಲೀಸರ ಮನವೊಲಿಕೆ ಬಳಿಕ ಪ್ರತಿಭಟನೆ ಕೈಬಿಟ್ಟಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹುಟ್ಟುಹಬ್ಬದ ದಿನದಂದೇ ಅಪಘಾತದಲ್ಲಿ ಯುವಕ ದುರ್ಮರಣ

ಹುಟ್ಟುಹಬ್ಬದ ದಿನದಂದೇ ಅಪಘಾತದಲ್ಲಿ ಯುವಕ ದುರ್ಮರಣ ಹೊಂದಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಐವರಕಂಡಪುರ ಗ್ರಾಮದಲ್ಲಿ ನಡೆದಿದೆ. ತೋಟದ ಗುಡ್ಡದಹಳ್ಳಿ ನಿವಾಸಿ ಪವನ್(24) ಮೃತ ಯುವಕ. ನಿನ್ನೆ ಸಂಜೆ5:45ಕ್ಕೆ ಹುಟ್ಟುಹಬ್ಬ ಸಂಭ್ರಮಿಸಿ ಮುಗಿಸಿ ಬೈಕ್​ನಲ್ಲಿ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಗೂಡ್ಸ್ ವಾಹನ, ಬೈಕ್​ ನಡುವೆಯಾಗಿ ಪವನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸೋಲದೇವನಹಳ್ಳಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇವರ ಬಳಿ 20ಕ್ಕೂ ಹೆಚ್ಚು ಮನೆಗಳಿವೆ, ಆದರೂ ಬಾಡಿಗೆ ಮನೆಯಲ್ಲಿ ವಾಸ; ಕಾರಣ ಗೊತ್ತಾ? – Kannada News | Indian origin Ravi Sharma rents out home despite owning over 20 properties

ನವದೆಹಲಿ, ಫೆಬ್ರುವರಿ 18: ಮನೆ ಹೊಂದುವುದು ಎಲ್ಲರಿಗೂ ಇರುವ ಕನಸು. ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಒಂದು ಮನೆ ಕಟ್ಟಿಕೊಂಡರೆ ಸಾಕು ಎನ್ನುವಂತಾಗಿರುತ್ತದೆ. ತಮಗೆ ಸ್ವಂತ ಮನೆಯ ಸಹವಾಸವೇ ಬೇಡ, ಬಾಡಿಗೆ ಮನೆ ಸಾಕು ಎಂದೂ ಹೇಳುವವರಿದ್ದಾರೆ. ಆಸ್ಟ್ರೇಲಿಯಾದಲ್ಲಿರುವ ಭಾರತ ಮೂಲದ ವ್ಯಕ್ತಿಯೊಬ್ಬರು 20ಕ್ಕೂ ಹೆಚ್ಚು ಪ್ರಾಪರ್ಟಿಗಳನ್ನು ಹೊಂದಿದ್ದರೂ ಬಾಡಿಗೆ ಮನೆಯಲ್ಲಿ ವಾಸವಿದ್ದಾರಂತೆ. ಇವರ ಹೆಸರು ರವಿ ಶರ್ಮಾ (Ravi Sharma). 32 ವರ್ಷದ ಇವರು ಸರ್ಚ್ ಪ್ರಾಪರ್ಟಿ ಬಯರ್ಸ್ ಏಜೆನ್ಸಿ ಸಂಸ್ಥೆಯ ಸಂಸ್ಥಾಪಕರು.

ರವಿ ಶರ್ಮಾ ಅವರು ಆಸ್ಟ್ರೇಲಿಯಾದ ವಿವಿಧೆಡೆ ಹೊಂದಿರುವ 20ಕ್ಕೂ ಅಧಿಕ ಮನೆಗಳ ಒಟ್ಟು ಮೌಲ್ಯ 25 ಮಿಲಿಯನ್ ಎಯುಡಿ, ಅಥವಾ ಸುಮಾರು 160 ಕೋಟಿ ರೂ. ಆದರೆ, ತಮ್ಮದೇ ಮನೆಗಳನ್ನು ಬಿಟ್ಟು ಇವರು ಸಿಡ್ನಿಯ ಮೆಕ್ವಾರೀ ಪಾರ್ಕ್​ನಲ್ಲಿರುವ ಪ್ರತಿಷ್ಠಿತ ಅಪಾರ್ಟ್ಮೆಂಟ್​ವೊಂದರಲ್ಲಿ ಮೂರು ಬೆಡ್​ರೂಮ್​ಗಳ ಪೆಂಟ್​ಹೌಸ್ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದಾರೆ.

ಇದನ್ನೂ ಓದಿ: ಆಂಥ್ರೋಪಿಕ್ vs ಆಂಥ್ರೋಪಿಕ್; ಅಮೆರಿಕನ್ ಎಐ ದೈತ್ಯನಿಗೆ ಕರ್ನಾಟಕ ಕೋರ್ಟ್​ನಿಂದ ಸಮನ್ಸ್

ಸ್ವಂತ ಮನೆ ಇದ್ದೂ ಬಾಡಿಗೆ ಮನೆಯಲ್ಲಿ ಯಾಕೆ ವಾಸ?

ರವಿ ಶರ್ಮಾ ಅವರು ರೆಂಟ್​ವೆಸ್ಟಿಂಗ್ (Rentvesting) ಎನ್ನುವ ತಂತ್ರ ಬಳಸುತ್ತಾರೆ. ನೀವು ಯಾವ ಏರಿಯಾದಲ್ಲಿ ಇರಬಯಸುತ್ತೀರೋ ಅಲ್ಲಿ ಪ್ರಾಪರ್ಟಿ ದರ ಹೆಚ್ಚಿದ್ದರೆ ಅಂಥ ಕಡೆ ಬಾಡಿಗೆ ಮನೆಯಲ್ಲಿ ವಾಸ ಇರುವುದು ರೆಂಟ್​ವೆಸ್ಟಿಂಗ್ ತಂತ್ರಗಾರಿಕೆ. ಕಡಿಮೆ ಬೆಲೆ ಇರುವ ಕಡೆ ಪ್ರಾಪರ್ಟಿ ಖರೀದಿಸಲು ಸಾಧ್ಯವಾಗುತ್ತದೆ. ಇದರಿಂದ ಹೆಚ್ಚೆಚ್ಚು ಕಡೆ ರಿಯಲ್ ಎಸ್ಟೇಟ್​ಗಳಲ್ಲಿ ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ.

ಆಸ್ಟ್ರೇಲಿಯಾದಲ್ಲಿ ರೆಂಟ್​ವೆಸ್ಟಿಂಗ್ ತಂತ್ರಗಾರಿಕೆ ಟ್ರೆಂಡಿಂಗ್​ನಲ್ಲಿದೆ. ಸಿಡ್ನಿಯಂತಹ ನಗರಗಳಲ್ಲಿ ರಿಯಲ್ ಎಸ್ಟೇಟ್ ಬೆಲೆ ಬಹಳ ಅಧಿಕ ಇದೆ. ಆದರೆ ಇಲ್ಲಿಯೇ ವಾಸಿಸಲು ಜನರು ಇಷ್ಟಪಡುತ್ತಾರೆ. ಹೀಗಾಗಿ, ಸಿಡ್ನಿಯಲ್ಲಿ ಮನೆಯನ್ನು ಬಾಡಿಗೆಗೆ ಪಡೆದು, ಬೇರೆ ಪ್ರದೇಶಗಳಲ್ಲಿ ಮನೆ ಖರೀದಿಗೆ ಹೆಚ್ಚು ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಐದು ವರ್ಷದಲ್ಲಿ ಐಟಿ ಉದ್ಯೋಗಗಳೇ ಇರೋದಿಲ್ಲ ಎಂದಿದ್ದಾರೆ ವಿನೋದ್ ಖೋಸ್ಲಾ; ಎಐನಿಂದ ಭಾರತವೇನು ಮಾಡಬೇಕು?

ರವಿಶರ್ಮಾ ಅವರ ಈ ಬಾಡಿಗೆ ಮನೆ ತಂತ್ರಗಾರಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ರವಿಶರ್ಮಾ ನಿರ್ಧಾರ ಜಾಣತನದ್ದು ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ಮನೆ ಎನ್ನುವುದು ಲಾಭಕ್ಕಾಗಿ ಇರುವುದಲ್ಲ. ಹೆಚ್ಚು ಮನೆಗಳನ್ನು ಹೊಂದಿರುವುದು ಅಕ್ರಮ ಮತ್ತು ಅನೈತಿಕ ಎಂದೂ ಟ್ರೋಲ್ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆನೇಕಲ್​ ಅಪಹರಣ ಕೇಸ್ ಭೇದಿಸಿದ ಪೊಲೀಸರು: ಕಿಡ್ನ್ಯಾಪರ್ಸ್​ ಮಾಸ್ಟರ್​​ ಪ್ಲ್ಯಾನ್​​​ ಬಿಚ್ಚಿಟ್ಟ ಡಿಸಿಪಿ – Kannada News | Anekal: Electronic City Kidnap Case; Three Arrested in Spa worker Ransom Plot

ಆನೇಕಲ್​​, ಫೆಬ್ರವರಿ 18: ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟದಾಸನಪುರ ಸಮೀಪದಲ್ಲಿ  ಸಿನಿಮಾ ಸ್ಟೈಲ್​​ನಲ್ಲಿ ಮೂವರು ದುಷ್ಕರ್ಮಿಗಳು ಓರ್ವ ವ್ಯಕ್ತಿಯನ್ನ ಕಿಡ್ನ್ಯಾಪ್ (Kidnap)​​​ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ (Arrested). ಜಿಗಣಿ ಮೂಲದ ಅಕ್ಷಯ್, ಜಿಗಣಿ ಮಂಟಪ ಗ್ರಾಮದ ಮಂಜುನಾಥ್ ಮತ್ತು ಆನೇಕಲ್ ತಾಲ್ಲೂಕಿನ ಹೊಂಪಲಘಟ್ಟ ಮೂಲದ ಪ್ರಜ್ವಲ್​​ ಬಂಧಿತರು. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಹೇಳಿದ್ದಿಷ್ಟು 

ಪ್ರಕರಣ ಕುರಿತಾಗಿ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಪ್ರತಿಕ್ರಿಯಿಸಿದ್ದು, ಅಶೀತ್ ಜ್ಹಾ ಎಂಬಾತನನ್ನ ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಲಾಗಿತ್ತು. ಮ್ಯಾನೇಜರ್​ ಮನ್ನುಕುಮಾರ್ ಎಂಬಾತ ದೂರು ನೀಡಿದ್ದರು. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನವಾಗಿದೆ ಎಂದರು.

ಕಿಡ್ನ್ಯಾಪ್​​​ಗೆ ಮಾಸ್ಟರ್ ಪ್ಲ್ಯಾನ್​

ಆರೋಪಿ ಮಂಜುನಾಥ್ ಅಪಾರ್ಟ್ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ. ಅಪಾರ್ಟ್ಮೆಂಟ್​​ನ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದ. ಬಳಿಕ ಹಣ ಹೊಂದಿಸಲು ಪ್ರಜ್ವಲ್ ಮತ್ತು ಅಕ್ಷಯ್ ಬಳಿ ಸಹಾಯ ಕೇಳಿದ್ದ. ಮೂರು ಜನ ಸೇರಿ ಮಾಸ್ಟರ್ ಪ್ಲ್ಯಾನ್​ ರೂಪಿಸಿದ್ದರು. ಸ್ಪಾ ಮಾಲೀಕರ ಬಳಿ ಹಣ ಇರುತ್ತೆ ಅಂತ ಕಿಡ್ನ್ಯಾಪ್ ಮಾಡುವುದಕ್ಕೆ ಹೊಂಚು ಹಾಕಿದ್ದರು. ಅದರಂತೆಯೇ ಸ್ಪಾ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಅಶೀತ್ ಜ್ಹಾ, ಮನ್ನುಕುಮಾರ್​​​​​​​​​ರನ್ನ ಹಿಂಬಾಲಿಸಿ ಅಶೀತ್​​ರನ್ನ ಕಿಡ್ನ್ಯಾಪ್​ ಮಾಡಿದ್ದರು.  ಬಳಿಕ ಎರಡು ಲಕ್ಷ ರೂ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲ್​​ನಲ್ಲಿ ಕಿಡ್ನ್ಯಾಪ್: ಸ್ಪಾ ನಡೆಸುತ್ತಿದ್ದವನನ್ನ ಹೊತ್ತೊಯ್ದು ಹಣಕ್ಕೆ ಡಿಮ್ಯಾಂಡ್

ಎಸಿಪಿ ಸತೀಶ್, ಇನ್ಸ್‌ಪೆಕ್ಟರ್‌ ನವೀನ್, ಪಿಎಸ್ಐ ದರ್ಶನ್ ತಂಡ ಕಾರ್ಯ ಪ್ರವೃತ್ತರಾಗಿದ್ದರು. ಲೊಕೇಶನ್ ಆಧರಿಸಿ ಆರೋಪಿಗಳನ್ನ ಬಂಧಿಸಲಾಗಿದೆ. ಆರೋಪಿ ಅಕ್ಷಯ್ ಈ ಹಿಂದೆ ಕೊಲೆ ಕೇಸ್​ನಲ್ಲಿ ಭಾಗಿಯಾಗಿದ್ದ. ಆರೋಪಿ ಪ್ರಜ್ವಲ್​​ಗೆ ಕೂಡ ಕ್ರಿಮಿನಲ್ ಬ್ಯಾಗ್ರೌಂಡ್​​​ ಇದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ 01 ಕಾರು, 1 ಲಾಂಗ್, 2 ಡ್ರಾಗರ್
03 ಮೊಬೈಲ್ ಫೋನ್‌ ಮತ್ತು 9,700 ರೂ. ಹಣ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಭೇದಿಸಿದ ಪೊಲೀಸರಿಗೆ ರಿವಾರ್ಡ್ ನೀಡಲಾಗುತ್ತೆ ಎಂದು ಡಿಸಿಪಿ ನಾರಾಯಣ್ ಹೇಳಿದ್ದಾರೆ.

ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದ ಅಶೀತ್

ಇನ್ನು ಕಿಡ್ನ್ಯಾಪ್ ಆಗಿದ್ದ ಅಶೀತ್​ ಮಾತನಾಡಿದ್ದು, ಸ್ಪಾ ಕೆಲಸ ಮುಗಿಸಿಕೊಂಡು ಬೈಕ್​ನಲ್ಲಿ ಬರುತ್ತಿದ್ದೇವು. ಬೆಟ್ಟದಾಸನಪುರ ಬಳಿ ಕಾರಿನಲ್ಲಿ ಬೈಕ್​​ ಡಿಕ್ಕಿ ಹೊಡೆದರು. ಏಕಾಏಕಿ ಲಾಂಗ್​ನಿಂದ ಹಲ್ಲೆ ಮಾಡಿದರು. ಮುಖ ಮತ್ತು ಕಾಲಿಗೆ ಹಲ್ಲೆ ನಡೆಸಿ ಕಿಡ್ನ್ಯಾಪ್ ಮಾಡಿದರು. ಜೊತೆಯಲ್ಲಿದ್ದ ಮನ್ನುಕುಮಾರ್​​ನನ್ನ ಕಿಡ್ನ್ಯಾಪ್ ಮಾಡಲು ನೋಡಿದರು, ಆಗ ರಸ್ತೆಯಲ್ಲಿ ಯಾವುದೋ ವಾಹನ ಬಂದಿದ್ದರಿಂದ ಆತನನ್ನ ಬಿಟ್ಟು ನನ್ನ ಕಿಡ್ನ್ಯಾಪ್ ಮಾಡಿದರು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಮಹಿಳೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​: ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ

ಕಿಡ್ನ್ಯಾಪ್ ಮಾಡಿ, ಯಾವುದೇ ಗುಡಿಸಲಿನಲ್ಲಿ ಕೂಡಿ ಹಾಕಿದ್ದರು. ನನ್ನ ಫೋನ್​ ಮೂಲಕವೇ ಎಲ್ಲರಿಗೂ ಫೋನ್​​ ಮಾಡುವುದಕ್ಕೆ ಹೇಳಿದರು. ಕುತ್ತಿಗೆಗೆ ಚಾಕು ಇಟ್ಟು ಹೆದರಿಸಿ, ಫೋನ್​ ಮಾಡಿಸಿದರು. ಸ್ನೇಹಿತರು, ಸಂಬಂಧಿಕರಿಗೆ ಫೋನ್​ ಮಾಡಿದ್ದೆ. ಎರಡು ಲಕ್ಷ ರೂ ಹಣ ಕೊಟ್ಟರೆ ಬಿಡುತ್ತೇವೆ, ಇಲ್ಲಾ ಕೊಲೆ ಮಾಡುವುದಾಗಿ ಹೇಳಿದ್ದರು. ಕೊನೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂದು ನನ್ನ ಕಾಪಾಡಿದರು. ಅವರಿಗೆ ಧನ್ಯವಾದ ತಿಳಿಸುತ್ತೇನೆ. ಆರೋಪಿಗಳನ್ನ ಬಂಧನ ಮಾಡಿದ್ದಾರೆ, ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅಶೀತ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ICC Rankings: ಟಿ20 ವಿಶ್ವಕಪ್​ನಲ್ಲಿ ಸಿಡಿಲಬ್ಬರ; ಬರೋಬ್ಬರಿ 17 ಸ್ಥಾನ ಮೇಲೇರಿದ ಇಶಾನ್ ಕಿಶನ್ – Kannada News | ICC T20 Rankings: Abhishek Sharma #1, Ishan Kishan enters Top 10 amidst 2026 World Cup

ಪಾಕಿಸ್ತಾನದ ಸಾಹಿಬ್‌ಜಾದಾ ಫರ್ಹಾದನ್ ಎರಡು ಸ್ಥಾನ ಕುಸಿದು ಐದನೇ ಸ್ಥಾನಕ್ಕೆ ಇಳಿದಿದ್ದಾರೆ. ಸೂರ್ಯಕುಮಾರ್ ಯಾದವ್ ಆರನೇ ಸ್ಥಾನದಲ್ಲಿದ್ದರೆ, ಜೋಸ್ ಬಟ್ಲರ್ ಮೂರು ಸ್ಥಾನ ಕುಸಿದು 7ನೇ ಸ್ಥಾನಕ್ಕೆ ಇಳಿದಿದ್ದಾರೆ. ಇಶಾನ್ ಕಿಶನ್ 8ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್‌ನ ಟಿಮ್ ಸೀಫರ್ಟ್ 9ನೇ ಸ್ಥಾನ ಮತ್ತು ಟ್ರಾವಿಸ್ ಹೆಡ್ 10ನೇ ಸ್ಥಾನದಲ್ಲಿದ್ದಾರೆ.

Source link

ಸಾರಿಗೆ ನಿಗಮಗಳ ಬಂಡವಾಳ ಬಟಾಬಯಲು: ಶಕ್ತಿ ಯೋಜನೆ ಬಗ್ಗೆ ಕೋರ್ಟ್ ಹೇಳಿದ್ದೇನು? – Kannada News | Karnataka transport corporations In Loss Says advocate In High Court

ಬೆಂಗಳೂರು, (ಫೆಬ್ರವರಿ 18): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು (karnataka transport corporations) ನಷ್ಟವನ್ನು ಅನುಭವಿಸುತ್ತಿವೆ. ಇದರ ಮಧ್ಯೆ ಶಕ್ತಿ ಯೋಜನೆ ಸಹ ಹೊಡೆತಕೊಟ್ಟಿದ್ದು, ವ್ಯಕ್ತಿಯೊಬ್ಬರು ಕೋರ್ಟ್​​​ಗೆ ಸಲ್ಲಿಸಿದ್ದ ಪಿಐಎಲ್​​ನಲ್ಲಿ ಕರ್ನಾಟಕ ಸಾರಿಗೆ ನಿಗಮಗಳು ಅಸಲಿಯತ್ತು ಬಹಿರಂಗವಾಗಿದೆ. ಹೌದು…ಕೊವಿಡ್ ವೇಳೆ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ಪರಿಹಾರ ವಿಚಾರವಾಗಿ ಪಿಐಎಲ್​​ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ವೇಳೆ ಸಿಬ್ಬಂದಿಗೆ ವೇತನ ನೀಡುವುದೇ ಕಷ್ಟವೆಂಬ ಪರಿಸ್ಥಿತಿ ಇದೆ ಎಂದು ಹೈಕೋರ್ಟ್​ಗೆ (Karnataka High Court) ಸಾರಿಗೆ ನಿಗಮಗಳ ಪರ ವಕೀಲ ಒಪ್ಪಿಕೊಂಡಿದ್ದಾರೆ.

ಕೊವಿಡ್ ವೇಳೆ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ಪರಿಹಾರ ವಿಚಾರವಾಗಿ ದಾವಣಗೆರೆಯ ತಾಹಿರ್ ಹುಸೇನ್ ಎನ್ನುವರು ಹೈಕೋರ್ಟ್​​​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಕೊವಿಡ್ ಸಂದರ್ಭದಲ್ಲಿ 323 ಉದ್ಯೋಗಿಗಳು ಮೃತಪಟ್ಟಿದ್ದಾರೆ.ಆದರೆ 7 ಕುಟುಂಬಗಳಿಗೆ ಮಾತ್ರ 30 ಲಕ್ಷ ರೂ. ಪರಿಹಾರ ನೀಡಲಾಗಿದೆ. ಉಳಿದವರಿಗೆ ಹಣ ನೀಡಿಲ್ಲವೆಂದು ಅರ್ಜಿದಾರರ ಆರೋಪಿಸಿದ್ದಾರೆ.

ಇದನ್ನೋ ನೋಡಿ: KSRTC BMTC Employees Strike: ನಾಳೆ ಸಾರಿಗೆ ಬಸ್ ಇರೋದಿಲ್ವಾ? ಹೇಗಿರುತ್ತೆ ಮುಷ್ಕರ?

ಇನ್ನೊಂದೆಡೆ ಸಾರಿಗೆ ನಿಗಮಗಳ ಪರ ವಕೀಲ ವಾದ ಮಂಡಿಸಿದ್ದು, ಸಾರಿಗೆ ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ. ಸಿಬ್ಬಂದಿಗೆ ವೇತನ ನೀಡುವುದೇ ಕಷ್ಟವೆಂಬ ಪರಿಸ್ಥಿತಿ ಇದೆ. ಹೀಗಾಗಿ ಪರಿಹಾರ ನಿರ್ಣಯ ಜಾರಿಗೊಳಿಸದಿರಲು ನಿಗಮಗಳು ನಿರ್ಧರಿಸಿವೆ ಎಂದು ಹೇಳಿದರು. ಈ ವಾದ ಪ್ರತಿವಾದ ಆಲಿಸಿದ ಕೋರ್ಟ್, ಶಕ್ತಿ ಯೋಜನೆಯಡಿ ಸರ್ಕಾರ ಎಷ್ಟು ಹಣ ಬಾಕಿ ಉಳಿಸಿಕೊಂಡಿದೆ? ಸಾರಿಗೆ ನಿಗಮಗಳಿಗೆ ನೀಡಬೇಕಾದ ಬಾಕಿಯ ವಿವರ ಮಾರ್ಚ್​​ 23ರೊಳಗೆ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.

ಈ ಮೂಲಕ ಕರ್ನಾಟಕ ಸಾರಿಗೆ ನಿಗಮಗಳು ನಷ್ಟದಲ್ಲಿದ್ದು, ಸಿಬ್ಬಂದಿಗೆ ವೇತನ ನೀಡಲು ಸಹ ಕಷ್ಟವಾಗುತ್ತಿದೆ ಎನ್ನುವುದನ್ನು ವಕೀಲರೇ ಕೋರ್ಟ್​ ಮುಂದೆ ಒಪ್ಪಿಕೊಂಡಿದ್ದಾರೆ. ಈ ಮೂಲಕ ಸಾರಿಗೆ ನಿಗಮಗಳ ಬಂಡವಾಳ ಬಟಾಬಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ಗ್ರಾಮದ ಸೊಸೆಯಂದಿರು ಸ್ಮಾರ್ಟ್​​ಫೋನ್ ಬಳಸುವಂತಿಲ್ಲ; ಕಾರಣ ಕೇಳಿದ್ರೆ ಆಶ್ಚರ್ಯ ಪಡುತ್ತೀರ! – Kannada News | Rajasthan Panchayat bans Smartphone Usage of Women Human Rights Commission issues notice

ಜೋಧಪುರ, ಫೆಬ್ರವರಿ 18: ರಾಜಸ್ಥಾನದ ಜಾಲೋರ್ ಜಿಲ್ಲೆಯ ಗ್ರಾಮ ಪಂಚಾಯತ್ ಜನವರಿ 26ರಿಂದ ತನ್ನ ಗ್ರಾಮದ 15 ಹಳ್ಳಿಗಳ ಸೊಸೆಯಂದಿರು ಮತ್ತು ಯುವತಿಯರು ಕ್ಯಾಮೆರಾ ಹೊಂದಿರುವ ಸ್ಮಾರ್ಟ್​​ಫೋನ್‌ಗಳನ್ನು (Smartphones) ಬಳಸುವುದನ್ನು ನಿಷೇಧಿಸಿದೆ. ಮನೆಯಲ್ಲಿ ಮಾತ್ರವಲ್ಲ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅಥವಾ ನೆರೆಹೊರೆಯವರ ಮನೆಗೆ ಕೂಡ ಸ್ಮಾರ್ಟ್​​ಫೋನ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಸ್ಮಾರ್ಟ್​​ಫೋನ್ ಬದಲಾಗಿ, ಅವರು ಕೀಪ್ಯಾಡ್ ಫೋನ್‌ಗಳನ್ನು ಮಾತ್ರ ಬಳಸಲು ಅನುಮತಿ ನೀಡಲಾಗಿದೆ. ಲಿಂಗ ಅಸಮಾನತೆಯನ್ನು ಸೂಚಿಸುವ ಈ ನಿರ್ಧಾರಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್ ನೀಡಿದೆ.

ಗ್ರಾಮ ಪಂಚಾಯತ್​​ನ ಅಧ್ಯಕ್ಷರು, ಸದಸ್ಯರ ನಡುವಿನ ಚರ್ಚೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಊರಿನ ಸೊಸೆಯಂದಿರು ಮತ್ತು ಯುವತಿಯರು ಕರೆ ಮಾಡಲು ಕೀಪ್ಯಾಡ್ ಫೋನ್‌ಗಳನ್ನು ಮಾತ್ರ ಬಳಸಬೇಕು ಎಂದು ನಿರ್ಧರಿಸಲಾಯಿತು. ತಮ್ಮ ಅಧ್ಯಯನಕ್ಕಾಗಿ ಮೊಬೈಲ್ ಫೋನ್‌ಗಳ ಅಗತ್ಯವಿರುವ ಶಾಲಾ ಹುಡುಗಿಯರು ಅವುಗಳನ್ನು ಮನೆಯಲ್ಲಿ ಮಾತ್ರ ಬಳಸಬಹುದು. ಮದುವೆ, ಸಾಮಾಜಿಕ ಕಾರ್ಯಕ್ರಮಗಳು ಅಥವಾ ನೆರೆಯವರ ಮನೆಗೆ ಸ್ಮಾರ್ಟ್​ಫೋನ್ ತೆಗೆದುಕೊಂಡು ಹೋಗಲು ಅವರಿಗೆ ಅವಕಾಶವಿಲ್ಲ.

ಇದನ್ನೂ ಓದಿ: ರಸ್ತೆಯಲ್ಲಿ ಸಾಕುನಾಯಿ ಮೇಲೆ ಕಾರು ಹತ್ತಿಸಿ ಕೊಂದ ಚಾಲಕ; ವಿಡಿಯೋ ವೈರಲ್

ಮಕ್ಕಳು ತಮ್ಮ ಮನೆಗಳಲ್ಲಿ ಮಹಿಳೆಯರ ಮೊಬೈಲ್ ಫೋನ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದು ಅವರ ಕಣ್ಣಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಕಾರಣದಿಂದಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಪಷ್ಟಪಡಿಸಿದ್ದಾರೆ. ಕೆಲವು ಮಹಿಳೆಯರು ತಮ್ಮ ಫೋನ್‌ಗಳನ್ನು ಮಕ್ಕಳಿಗೆ ನೀಡಿ ತಮ್ಮ ದೈನಂದಿನ ಕೆಲಸಗಳ ಮೇಲೆ ಗಮನಹರಿಸುತ್ತಾರೆ. ಹೀಗಾಗಿ, ಮಹಿಳೆಯರು ಮೊಬೈಲ್ ಬಳಸದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಉದ್ಯೋಗದ ವೇಳೆ ಲವ್; ಮದುವೆಯಲ್ಲಿ ತಮ್ಮ ಕಂಪನಿಗೆ ಡಿಫರೆಂಟಾಗಿ ಥ್ಯಾಂಕ್ಸ್ ಹೇಳಿದ ವಧು!

ಈ ಸುದ್ದಿ ವೈರಲ್ ಆಗಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಮಾನವ ಹಕ್ಕುಗಳ ಆಯೋಗವು ಜಾಲೋರ್ ಕಲೆಕ್ಟರ್‌ಗೆ ನೋಟಿಸ್ ನೀಡಿದೆ. ರಾಜಸ್ಥಾನ ಪಂಚಾಯತ್ ಮಹಿಳೆಯರಿಗೆ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸುವುದನ್ನು ಲಿಂಗ ತಾರತಮ್ಯ ಎಂದು ಕರೆದಿದೆ. ಜಾಲೋರ್‌ನಲ್ಲಿ 15 ಗ್ರಾಮಗಳ ಪಂಚಾಯತ್‌ಗಳು ಸೊಸೆಯಂದಿರು ಮತ್ತು ಹೆಣ್ಣುಮಕ್ಕಳಿಗೆ ಸ್ಮಾರ್ಟ್‌ಫೋನ್ ಬಳಕೆಯನ್ನು ನಿಷೇಧಿಸಿದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಕಲೆಕ್ಟರ್ ಪ್ರದೀಪ್ ಗವಾಂಡೆ ಅವರಿಗೆ ನೋಟಿಸ್ ನೀಡಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಿ 14 ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:34 pm, Wed, 18 February 26

Source link

ಕಾಂಗ್ರೆಸ್​​ ಕಚೇರಿಗಳಿಗಾಗಿ ಕರ್ನಾಟಕದಲ್ಲಿ ಸಿಎ ಸೈಟ್​​ಗಳ ಬಳಕೆ: ದೆಹಲಿಯಲ್ಲೂ ಸದ್ದು ಮಾಡಿದ ವಿವಾದ – Kannada News | Karnataka CA Site Row: Congress Accused of Land Grab for Offices, BJP Alleges 48 Cr Corruption

ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಮೇಲೆ ಮುಗಿಬಿದ್ದ ಬಿಜೆಪಿImage Credit source: Google

ಬೆಂಗಳೂರು, ಫೆಬ್ರವರಿ 18: ಕಾಂಗ್ರೆಸ್​​ ಕಚೇರಿಗಳಿಗಾಗಿ ಕರ್ನಾಟಕದಲ್ಲಿ ಸಿಎ ಸೈಟ್​​ಗಳನ್ನು ಪಡೆದುಕೊಳ್ಳುತ್ತಿದೆ ಎಂಬ ಬಿಜೆಪಿಯ ಆರೋಪವೀಗ ದೆಹಲಿಯಲ್ಲೂ ಸದ್ದು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಗೌರವ್ ಭಾಟಿಯಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರವು ನಾಗರಿಕ ಸೌಲಭ್ಯಗಳಿಗಾಗಿ ಮೀಸಲಾಗಿದ್ದ 24 ಜಾಗಗಳನ್ನು ಕಾಂಗ್ರೆಸ್ ಪಕ್ಷದ ಕಚೇರಿಗಳಿಗಾಗಿ ಬಳಸಲು ಹೊರಟಿರುವುದು ಏಕೆ? ಈ 24 ಜಾಗಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಹಸ್ತಾಂತರಿಸಲಾಗಿದೆ. ಅವುಗಳ ಮೌಲ್ಯ ಸುಮಾರು 50 ಕೋಟಿ ರೂಪಾಯಿ. ಆದರೆ ಭ್ರಷ್ಟಾಚಾರಕ್ಕೆ ಪ್ರಸಿದ್ಧವಾದ ಕಾಂಗ್ರೆಸ್‌ಗೆ ಅವುಗಳನ್ನು ಕೇವಲ 2 ಕೋಟಿಗೆ ನೀಡಲಾಗಿದೆ. ಇಲ್ಲಿ ಸ್ಪಷ್ಟವಾಗಿ 48 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಗೋಚರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವರ್ಗಾವಣೆಯ ಉದ್ದೇಶವೇನು? 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸುವುದೇ? ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಮತ್ತು ದೇಶದ ಜನರು ಮಹತ್ವದವರಲ್ಲ. ಕಾಂಗ್ರೆಸ್ ಪಕ್ಷದ ಡಿಎನ್‌ಎಯೇ ಹೀಗಿದೆ . ಅವರು ‘ನಕಲಿ ಗಾಂಧಿ ಕುಟುಂಬ’ವನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ.  ಸಾರ್ವಜನಿಕ ಜಮೀನಿಗೆ ಮಾರುಕಟ್ಟೆ ಮೌಲ್ಯವನ್ನು ಸರ್ಕಾರಕ್ಕೆ ನೀಡದೇ ಕಾಂಗ್ರೆಸ್ ಆಸ್ತಿಯನ್ನಾಗಿ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರವಾನಗಿ ಸಿಗುತ್ತದೆಯೇ ಎಂದವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದಿಂದಲೇ ಭೂಕಬಳಿಕೆ; ಜಿಲ್ಲೆಜಿಲ್ಲೆಗಳಲ್ಲಿ ಕಾಂಗ್ರೆಸ್​ ಭವನಕ್ಕೆ ಭೂಮಿ ನೀಡಿದ ದಾಖಲೆ ಸಮೇತ ಬಿಜೆಪಿ ಗಂಭೀರ ಆರೋಪ

ನಿನ್ನೆ ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ್ದ ವಿಧಾನ ಪರಿಷತ್​​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ದಾಖಲೆಗಳೊಂದಿಗೆ ಕಾಂಗ್ರೆಸ್​​ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳು, ತಾಲೂಕು ಮತ್ತು ಪಂಚಾಯತ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿಗಳಿಗೆ ಭೂಮಿ ಪಡೆದುಕೊಳ್ಳಲಾಗುತ್ತಿದೆ. ಬಡವರಿಗೆ ಮನೆ ಭೂಮಿ ನೀಡದೇ ಸರ್ಕಾರವೇ ಭೂ ಕಬಳಿಕೆಯಲ್ಲಿ ತೊಡಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಕೌಂಟರ್​​ ಕೊಟ್ಟಿದ್ದ ಡಿಸಿಎಂ ಡಿಕೆಶಿ

ಆದರೆ ಬಿಜೆಪಿ ಆರೋಪಗಳಿಗೆ ಕೌಂಟೆರ್​ ಕೊಟ್ಟಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್​, ಬಿಜೆಪಿಯವರು RSS ಕಚೇರಿಗೆ ನೂರಾರು ಎಕರೆ ಕೊಟ್ಟಿಲ್ವೇ? ಚಾಣಕ್ಯ ವಿವಿ, RSS ಕಚೇರಿಗೆ ಜಮೀನು ನೀಡಿಲ್ಲವೇ ಎಂದು ಪ್ರಶ್ನಿಸಿದ್ದರು. ಬಿಜೆಪಿ ಅವಧಿಯಲ್ಲಿ ಬೆಂಗಳೂರಲ್ಲಿ 100ಕ್ಕೂ ಹೆಚ್ಚು ಕಡೆ ವಿವಿಧ ಟ್ರಸ್ಟ್​ಗಳ ಹೆಸರಿನಲ್ಲಿ ಜಾಗವನ್ನು ಪಡೆದಿದ್ದಾರೆ. ಚಾಣಕ್ಯ ವಿವಿಗೆ ನೀಡಿರುವ ಜಾಗ ಪ್ರತಿ ಎಕರೆಗೆ 10 ಕೋಟಿ. ಆದ್ರೆ, ಬಿಜೆಪಿಗರು ಎಕರೆಗೆ 50 ಲಕ್ಷದ ದರದಲ್ಲಿ 100 ಎಕರೆ ಮಂಜೂರು ಮಾಡಿದ್ದಾರೆ.ಇಂತಹ ನೂರಾರು ಉದಾಹರಣೆಗಳನ್ನು ನಾನು ನೀಡಬಲ್ಲೆ. ಹೀಗಾಗಿ ಬಿಜೆಪಿಯವರು ನಮಗೆ ಬೋಧನೆ ಮಾಡುವ ಅಗತ್ಯವಿಲ್ಲ. ಅವರು ಏನಾದರೂ ಆರೋಪಗಳನ್ನ ಮಾಡಿಕೊಳ್ಳಲಿ. ಎಲ್ಲ ಮಾನದಂಡಗಳ ಆಧಾರದ ಮೇಲೆ ಜಾಗ ಮಂಜೂರು ಮಾಡಲಾಗಿದ್ದು, ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುವುದಾದರೆ ಹೋಗಲಿ ಎಂದು ಸವಾಲು ಹಾಕಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:26 pm, Wed, 18 February 26

Source link