Category Archives: Blog

Your blog category

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: ಇಡೀ ಕುಟುಂಬವೇ ದುರಂತ ಅಂತ್ಯ – Kannada News | Three of a family dies in head on collision road accident at miraj jamkhandi highway

ಬೆಳಗಾವಿ, (ಫೆಬ್ರವರಿ 18): ಜಮಖಂಡಿ- ಮಿರಜ್ ರಾಜ್ಯ ಹೆದ್ದಾರಿಯಲ್ಲಿ (miraj jamkhandi highway) ಭೀಕರ ರಸ್ತೆ ಅಪಘಾತದಲ್ಲಿ ಇಡೀ ಕುಟುಂಬ ದಾರುಣ ಅಂತ್ಯಕಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ನಡೆದಿದೆ. ಲಾರಿ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್​​ನಲ್ಲಿದ್ದ ಗಂಡ, ಹೆಂಡ್ತಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ನಲ್ಲಿದ್ದ ಗಿರೇಪ್ಪಾ ಕುಂದ್ರಾಳಿ, ಪತ್ನಿ ಮಂಜುಳಾ ಕುಂದ್ರಾಳಿ(27), ಮಗು ಆರಾಧ್ಯ ಕುಂದ್ರಾಳಿ(7) ಮೃತ ದುರ್ವೈವಿಗಳು. ಮೂವರು ಬೈಕ್ ಮೇಲೆ ಮಹಾರಾಷ್ಟ್ರದ ಮಿರಜ್ ನಿಂದ ಜಮಖಂಡಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಗಿರೇಪ್ಪಾ, ಮಂಜುಳಾ ಹಾಗೂ ಆರಾಧ್ಯ ಒಂದೇ ಬೈಕ್​​ನಲ್ಲಿ ಮಿರಜ್ ನಿಂದ ಜಮಖಂಡಿಗೆ ಹೋಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್​​ನಲ್ಲಿ ಗಂಡ-ಹೆಂಡ್ತಿ ಹಾಗೂ ಮಗಳು ಮೃತಪಟ್ಟಿದ್ದಾರೆ. ಇನ್ನು ಸ್ಥಳಕ್ಕೆ ಹಾರೂಗೇರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಚಾಲಕನ ಜೊತೆ ಮಾತಾಡಿದ್ದಕ್ಕೆ ಪತ್ನಿಯನ್ನೇ ಕೊಚ್ಚಿಕೊಂದ ಪತಿ!

ಖಾಸಗಿ ಶಾಲಾ ಬಸ್ ಹರಿದು 4 ವರ್ಷದ ಮಗು ಸಾವು

 ಯಾದಗಿರಿ: ಖಾಸಗಿ ಶಾಲಾ ಬಸ್ ಹರಿದು 4 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ನಡೆದಿದೆ. ಪುನೀತ್ ಮೃತ ಮಗು. ಗಾಜರಕೋಟ ಗ್ರಾಮದ ವಿಸ್ಡಮ್ ಶಾಲೆಯ ವಿದ್ಯಾರ್ಥಿ ಪುನೀತ್ ನಿನ್ನೆ (ಫೆಬ್ರವರಿ 17) ಬಸ್​ನಿಂದ ಕೆಳಗೆ ಇಳಿಯುತ್ತಿದ್ದಂತೆ ಚಾಲಕ ರಿವರ್ಸ್ ತೆಗೆದುಕೊಂಡಿದ್ದಾನೆ. ಆಗ ಬಸ್ ಪುನೀತ್ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮಸ್ಥರು ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದರು. ಬಸ್ ಡ್ರೈವರ್​ಗೆ ಜೀವಾವಧಿ ಶಿಕ್ಷೆ ನೀಡುವಂತೆ ಆಗ್ರಹಿಸಿದರು. ಬಳಿಕ ಪೊಲೀಸರ ಮನವೊಲಿಕೆಯಿಂದ ಪ್ರತಿಭಟನೆ ಕೈಬಿಟ್ಟರು.

ಡಿವೈಡರ್’ಗೆ ಕಾರು ಡಿಕ್ಕಿ

ಬೀದರ್: ಡಿವೈಡರ್’ಗೆ ಕಾರು ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗೊಂಡಿರುವ ಘಟನೆ ಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದಿದೆ. ಹುಮ್ನಾಬಾದ್ ತಾಲೂಕಿನ ಸಿಂಧನಕೇರಾದ ಕಾಶೀನಾಥ್ ಹಾಗೂ ಧುಮ್ಮನಸೂರ ನಿವಾಸಿ ನೀತೇಶ ಎನ್ನುವರು ಗಾಯಗೊಂಡಿದ್ದು, ಇವರನ್ನು ಕಲಬುರಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಹಾರಾಷ್ಟ್ರದ ಉಮ್ಮರ್ಗಾ ಕಡೆಯಿಂದ ಹುಮ್ನಾಬಾದ್ ಕಡೆದ ತೆರಳುವಾಗ ಈ ದುರ್ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಂಗ್ಲೆಂಡ್ ತೊರೆದು ಭಾರತಕ್ಕೆ ಬರುವ ಸ್ಥಿತಿಯಲ್ಲಿಲ್ಲ; ಬಾಂಬೆ ಹೈಕೋರ್ಟ್​ಗೆ ವಿಜಯ್ ಮಲ್ಯ ಮಾಹಿತಿ – Kannada News | Not In A Position To leave England Vijay Mallya To Bombay High Court On Return To India

ನವದೆಹಲಿ, ಫೆಬ್ರವರಿ 18: ದೇಶಭ್ರಷ್ಟ ವಿಜಯ್ ಮಲ್ಯ (Vijay Mallya) ಒಂದುವೇಳೆ ತನ್ನ ವಿರುದ್ಧದ ಕಾನೂನಿನ ಅರ್ಜಿಯ ವಿಚಾರಣೆಯಲ್ಲಿ ಪಾಲ್ಗೊಳ್ಳುವ ಇಚ್ಛೆಯನ್ನು ಹೊಂದಿದ್ದರೆ ಅವರು ಭಾರತಕ್ಕೆ ಮರಳಬೇಕು, ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಎಂದು ಬಾಂಬೆ ಹೈಕೋರ್ಟ್​ ತಿಳಿಸಿತ್ತು. ಮಾಜಿ ಮದ್ಯದ ದೊರೆ ವಿಜಯ್ ಮಲ್ಯ ಇಂದು ಬಾಂಬೆ ಹೈಕೋರ್ಟ್‌ಗೆ ಇದಕ್ಕೆ ಉತ್ತರ ತಿಳಿಸಿದ್ದು, ತಾನು ಯಾವಾಗ ಭಾರತಕ್ಕೆ ಮರಳುತ್ತೇನೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸುವ ಸ್ಥಿತಿಯಲ್ಲಿಲ್ಲ ಎಂದು ಇಂಗ್ಲೆಂಡ್‌ನಲ್ಲಿ ಹೊರಡಿಸಲಾದ ನ್ಯಾಯಾಲಯದ ಆದೇಶಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.

ವಿಜಯ್ ಮಲ್ಯ ಅವರ ಅರ್ಜಿಯು ಪರಾರಿಯಾದ ಆರ್ಥಿಕ ಅಪರಾಧಿಗಳ (FEO) ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿದೆ. ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ನೇತೃತ್ವದ ಬಾಂಬೆ ಹೈಕೋರ್ಟ್ ಪೀಠವು ಮಲ್ಯ ಅವರಿಗೆ ಮರಳಲು ಉದ್ದೇಶಿಸಿದೆಯೇ ಎಂಬುದನ್ನು ಸ್ಪಷ್ಟಪಡಿಸಲು ಅಂತಿಮ ಅವಕಾಶವನ್ನು ನೀಡಿತು. “ನೀವು ಹಿಂತಿರುಗಲೇಬೇಕು. ನೀವು ವಾಪಾಸ್ ಬರದಿದ್ದರೆ, ನಾವು ನಿಮ್ಮ ಅರ್ಜಿಯ ವಿಚಾರಣೆ ನಡೆಸಲು ಸಾಧ್ಯವಿಲ್ಲ. ನೀವು ನ್ಯಾಯಾಲಯದ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದೀರಿ. ಆದ್ದರಿಂದ ನೀವು ನ್ಯಾಯಾಲಯದ ವಿಚಾರಣೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಿಸುತ್ತಾ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ. ಆದರೆ, ನ್ಯಾಯಯುತವಾಗಿ, ನಾವು ನಿಮ್ಮ ಪ್ರಕರಣವನ್ನು ವಜಾಗೊಳಿಸುತ್ತಿಲ್ಲ. ನಿಮಗೆ ಮತ್ತೊಂದು ಅವಕಾಶವನ್ನು ನೀಡುತ್ತಿದ್ದೇವೆ” ಎಂದು ಬಾಂಬೆ ಹೈಕೋರ್ಟ್ ಹೇಳಿತ್ತು.

ಇದನ್ನೂ ಓದಿ: ದೇಶಭ್ರಷ್ಟರಿಬ್ಬರ ಸಂಭ್ರಮ; ವಿಜಯ್ ಮಲ್ಯ 70ನೇ ಹುಟ್ಟುಹಬ್ಬಕ್ಕೆ ಪಾರ್ಟಿ ಕೊಟ್ಟ ಲಲಿತ್ ಮೋದಿ

ವಿಜಯ್ ಮಲ್ಯ ಅವರು ಭಾರತಕ್ಕೆ ಹಿಂತಿರುಗುತ್ತಾರೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಹೇಳುವ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ. “ನೀವು ಯಾವಾಗ ಬರುತ್ತೀರಿ? ನ್ಯಾಯಾಲಯದಲ್ಲಿ ನಿಮ್ಮ ದೈಹಿಕ ಉಪಸ್ಥಿತಿಯಿಲ್ಲದೆ ನೀವು ವಿಚಾರಣೆಗೆ ಅರ್ಹರು ಎಂದು ಈಗಾಗಲೇ ವಾದಿಸಿದ್ದೀರಿ. ಆದರೆ ಮೊದಲು ಅದನ್ನು ಸ್ಪಷ್ಟವಾಗಿ ಹೇಳುವ ಅಫಿಡವಿಟ್ ಸಲ್ಲಿಸಿ” ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಹೇಳಿದ್ದರು.

ತಮ್ಮ ವಿರುದ್ಧದ ವಿಚಾರಣೆಗಳು ವಿದೇಶದಲ್ಲಿ ನಡೆಯುತ್ತಿರುವುದರಿಂದ ಯುಕೆ ನ್ಯಾಯಾಲಯಗಳು ವಿಧಿಸಿರುವ ನಿರ್ಬಂಧಗಳ ಕಾರಣದಿಂದಾಗಿ ನನಗೆ ಭಾರತಕ್ಕೆ ಪ್ರಯಾಣವ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಿಜಯ್ ಮಲ್ಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಎರಡನೇ ವಿಜಯ್ ಮಲ್ಯ ಆಗಿದ್ದರೇ ಸಿಜೆ ರಾಯ್? ಐಷಾರಾಮಿ ಜೀವನ, ನಷ್ಟದಿಂದ ಆಘಾತ! ಸ್ಫೋಟಕ ಮಾಹಿತಿ ಬಹಿರಂಗ

2016ರಿಂದ ಯುಕೆಯಲ್ಲಿ ನೆಲೆಸಿರುವ ವಿಜಯ್ ಮಲ್ಯ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಒಂದು ತಮ್ಮನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯಾಗಿದ್ದರೆ ಇನ್ನೊಂದು 2018ರ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದಾಗಿದೆ. 70 ವರ್ಷ ವಯಸ್ಸಿನ ವಿಜಯ್ ಮಲ್ಯ ಭಾರತದಲ್ಲಿ ವಂಚನೆ ಮತ್ತು ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಏನಿದು ಪ್ರಕರಣ?:

ವಿಜಯ್ ಮಲ್ಯ ಮತ್ತು ಲಲಿತ್ ಮೋದಿ ಇಬ್ಬರೂ ಭಾರತದಲ್ಲಿ ಆರ್ಥಿಕ ಅಕ್ರಮಗಳ ಆರೋಪಗಳನ್ನು ಎದುರಿಸುತ್ತಿದ್ದಾರೆ. ಆದರೂ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ. 2018ರ ಕಾನೂನಿನ ಅಡಿಯಲ್ಲಿ ಒಟ್ಟು 15 ಜನ ದೇಶ ಬಿಟ್ಟು ಪರಾರಿಯಾಗಿರುವ ವ್ಯಕ್ತಿಗಳನ್ನು ಆರ್ಥಿಕ ಅಪರಾಧಿಗಳೆಂದು ಘೋಷಿಸಲಾಗಿದೆ. ಈ ಪೈಕಿ 9 ಜನರು ಸಾರ್ವಜನಿಕ ವಲಯದ ಬ್ಯಾಂಕುಗಳ ವಿರುದ್ಧ ದೊಡ್ಡ ಪ್ರಮಾಣದ ಹಣಕಾಸು ವಂಚನೆಯಲ್ಲಿ ಭಾಗಿಯಾಗಿದ್ದು, ಇದರ ಪರಿಣಾಮವಾಗಿ 26,645 ಕೋಟಿ ರೂ. ಮೂಲ ನಷ್ಟವಾಗಿದೆ. 2025ರ ಅಕ್ಟೋಬರ್ 31ರವರೆಗೆ ಈ ಸಾಲಗಳ ಮೇಲಿನ ಬಡ್ಡಿ 31,437 ಕೋಟಿ ರೂ.ಗಳಾಗಿದ್ದು, ಅಪರಾಧಿಗಳಿಂದ 19,187 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

T20 World Cup: ಸೂಪರ್ 8 ಸುತ್ತಿಗೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ – Kannada News | Matheesha Pathirana Injury: T20 World Cup Exit, IPL Doubt and Sri Lanka’s Super 8 Blow

ಶ್ರೀಲಂಕಾದ ಮಾಧ್ಯಮಗಳ ಪ್ರಕಾರ, ಮಥಿಶಾ ಪತಿರಾನ ಸ್ಕ್ಯಾನಿಂಗ್‌ಗೆ ಒಳಗಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಆದಾಗ್ಯೂ, ಪತಿರಾನ ಗಾಯವನ್ನು ಗಮನಿಸಿದರೆ, ಅವರು ಮೂರು ವಾರಗಳವರೆಗೆ ಆಟದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಮುಖ್ಯವಾದ ವಿಷಯವೆಂದರೆ ಅವರ ಗಾಯವು ಬೇಗನೆ ಗುಣವಾಗದಿದ್ದರೆ, ಅವರು 2026 ರ ಐಪಿಎಲ್​ನಿಂದಲೂ ಹೊರಗುಳಿಯಬಹುದು.

Source link

ನಾನು ಸತ್ತರೆ ನಿನ್ನ ಯಾರು ನೋಡಿಕೊಳ್ಳುತ್ತಾರೆ: ಪತ್ನಿಯನ್ನ ಕೊಂದ ಇಸ್ರೋ ನಿವೃತ್ತ ನೌಕರ – Kannada News | Bengaluru: Retired ISRO employee murdered his wife.

ಬೆಂಗಳೂರು, ಫೆಬ್ರವರಿ 18: ಇಸ್ರೋ ಸಂಸ್ಥೆ ನಿವೃತ್ತ ನೌಕರನಿಂದ ಉಸಿರುಗಟ್ಟಿಸಿ ಪತ್ನಿಯ ಕೊಲೆ (murder) ಮಾಡಿರುವಂತಹ ಘಟನೆ ಬೆಂಗಳೂರಿನ ಆವಲಹಳ್ಳಿಯ ವಿರ್ಟುಸೊ ಅಪಾರ್ಟ್​ಮೆಂಟ್​​​ನಲ್ಲಿ ನಡೆದಿದೆ. ಪತ್ನಿ (wife) ಸಧ್ಯಾರ ಉಸಿರುಗಟ್ಟಿಸಿ ಪತಿ ನಾಗಲೇಶ್ವರ ರಾವ್​​ರಿಂದ ಕೊಲೆ ಮಾಡಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಆಲವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು? 

ನಾಗಲೇಶ್ವರ ರಾವ್​​, ಇಸ್ರೋ ಸಂಸ್ಥೆಯ ನಿವೃತ್ತ ನೌಕರರು. ಪತ್ನಿ ಸಧ್ಯಾ ಅವರೊಂದಿಗೆ ವಿರ್ಟುಸೊ ಅಪಾರ್ಟ್​ಮೆಂಟ್​​​ನಲ್ಲಿ ನೆಲೆಸಿದ್ದರು. ಪ್ರಾಥಮಿಕ ವಿಚಾರಣೆ ವೇಳೆ ನಾನು ಸತ್ತರೆ ಪತ್ನಿಯನ್ನು ಯಾರು ನೋಡುಕೊಳ್ಳುತ್ತಾರೆ, ಯಾರೂ ಸಂಬಂಧಿಕರು ಇಲ್ಲ ಆಕೆಯ ಮುಂದಿನ ಜೀವನ ಹೇಗೆ? ಹಾಗಾಗಿ ಆಕೆಯನ್ನ ಕೊಲೆ ಮಾಡಿದೆ ಎನ್ನುತ್ತಿರುವ ನಾಗಲೇಶ್ವರ ರಾವ್, ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ.​​​ ಇನ್ನು ದಂಪತಿಯ ಓರ್ವ ಮಗಳು ಅಮೆರಿಕದಲ್ಲಿದ್ದಾರೆಂಬ ಮಾಹಿತಿ ಸಿಕ್ಕಿದೆ.

ಚಾಲಕನ ಜೊತೆಗೆ ಪತ್ನಿ ಮಾತನಾಡಿದ್ದಕ್ಕೆ ಅನುಮಾನ: ಮಚ್ಚಿನಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ

ಮತ್ತೊಂದು ಪ್ರಕರಣದಲ್ಲಿ ಕೂಡ ಪತಿ ಮಚ್ಚಿನಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಚ್ಚಿನಿಂದ ಕೊಚ್ಚಿ ದೇವಿಕಾ(50) ಹತ್ಯೆಗೈದ ಪತಿ ಕುಮಾರ್. ಸದ್ಯ ಕೊಲೆ ಆರೋಪಿ ಕುಮಾರ್​ನನ್ನು ಬಂಧಿಸಿದ ಪೊಲೀಸರು, ಗೋವಿಂದರಾಜನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗಂಡನ ಪ್ರೇಮ, ಪ್ರೀತಿ-ಪ್ರಣಯದಾಟಕ್ಕೆ ಪತ್ನಿ ಸುಸ್ತು: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ

ಇತ್ತೀಚೆಗೆ ಕುಟುಂಬ ಸಮೇತ ಕೇರಳ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಚಾಲಕನ ಜೊತೆಗೆ ಪತ್ನಿ ಮಾತನಾಡಿದ್ದಕ್ಕೆ ಅನುಮಾನ ಅನುಮಾನ ಹೊಂದಿದ್ದ ಆರೋಪಿ ಪತಿ ಕುಮಾರ್, ನಿನ್ನೆ ರಾತ್ರಿ ಮಲಗಿದ್ದ ವೇಳೆ ಮಚ್ಚಿನಿಂದ ಕೊಚ್ಚಿ ದೇವಿಕಾರನ್ನು ಕೊಲೆ ಮಾಡಿದ್ದಾರೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದರು. ಆದರೆ ಕೂಡಲೇ ಆರೋಪಿ ಕುಮಾರ್​ನನ್ನ ಮಕ್ಕಳು ತಡೆದಿದ್ದಾರೆ.

ಗ್ರಾಮ ದೇವತೆ ಹಬ್ಬದಲ್ಲಿ ಅವಘಢ: ಬಂಡಿ ಓಡಿಸುವಾಗ ಕೆಳಗೆ ಬಿದ್ದು ಯುವಕ ಸಾವು

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮದಲ್ಲಿ ಗ್ರಾಮ ದೇವತೆ ಹಬ್ಬದಲ್ಲಿ ಅವಘಡ ಸಂಭವಿಸಿದ್ದು, ಬಂಡಿ ಓಡಿಸುವಾಗ ಆಯತಪ್ಪಿ ಕೆಳಗೆ ಬಿದ್ದು ಪ್ರವೀಣ್(22) ಸಾವನ್ನಪ್ಪಿದ್ದಾರೆ. ಗ್ರಾಮ ದೇವತೆ ಬಂಡರಸಮ್ಮ ಹಬ್ಬದ ಬಂಡಿ ಉತ್ಸವದಲ್ಲಿ ಘಟನೆ ನಡೆದಿದೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಭೂ ವಿವಾದ ಸ್ವಲ್ಪ ಬಗೆಹರಿಸಿಕೊಡಿ ಎಂದು ಕಂದಾಯ ಇಲಾಖೆಗೆ ತೆವಳುತ್ತಲೇ ಬಂದ ದಿವ್ಯಾಂಗ – Kannada News | Disabled Man Crawls to Office Seeking Justice, Collector Left Stunned in Madhya Pradesh

ದಿಂಡೋರಿ, ಫೆಬ್ರವರಿ 18: ಭೂ ವಿವಾದವನ್ನು ಬಗೆಹರಿಸಿಕೊಂಡುವಂತೆ ಒತ್ತಾಯಿಸಿ ದಿವ್ಯಾಂಗರೊಬ್ಬರು ತೆವಳುತ್ತಲೇ ಕಂದಾಯ ಇಲಾಖೆಗೆ ಬಂದಿರುವ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದ ದಿಂಡೋರಿ ಕಲೆಕ್ಟರೇಟ್​ನಲ್ಲಿ ನಡೆದ ಕುಂದುಕೊರತೆ ನಿವಾರಣೆ ಕಾರ್ಯಕ್ರದ ವೇಳೆ ಈ ಘಟನೆ ನಡೆದಿದ್ದು, ವ್ಯಕ್ತಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ನ್ಯಾಯ ಸಿಕ್ಕಿಲ್ಲ ಎಂದು ಅವರು ಆರೋಪಿಸಿದ್ದಾರೆ. ಉಮೇಶ್ ಎಂಬುವವರು ತನ್ನ ಚಿಕ್ಕಪ್ಪನೊಂದಿಗೆ ಭೂ ವಿವಾದ ಇರುವುದಾಗಿ ಹೇಳಿದ್ದಾರೆ.ತಾನು ಸಮಸ್ಯೆ ಬಗೆಹರಿಯುವವರೆಗೂ ಬಿಡುವುದಿಲ್ಲ ಎಂದಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

ನಿದ್ರಿಸಿದ್ದ ಬಾಲಕನ ಕ್ಯಾಬ್​​ನಲ್ಲೆ ಬಿಟ್ಟುಹೋದ ಪೋಷಕರು: 1 ಗಂಟೆಯಲ್ಲಿ ಆತನ ರಕ್ಷಣೆ ಮಾಡಿದ ಪೊಲೀಸರು – Kannada News | Bengaluru: Parents Forget Child in Cab; Police Rescue Sleeping Boy in 1 Hour via Namma 112

ಬೆಂಗಳೂರು, ಫೆಬ್ರವರಿ 18: ನಿದ್ರಿಸಿದ್ದ ಮಗುವನ್ನು ಮರೆತು ಕ್ಯಾಬ್​​ನಲ್ಲಿಯೇ ಪೋಷಕರು ಬಿಟ್ಟು ಹೋಗಿರುವ ಪ್ರಕರಣ ಬೆಂಗಳೂರಿನ ಹೆನ್ನೂರಲ್ಲಿ ನಡೆದಿದೆ. ಬಳಿಕ ಪೊಲೀಸರ ಸಹಾಯದಿಂದ ಕ್ಯಾಬ್​​ ಪತ್ತೆ ಮಾಡಿ ಮಗುವಿನ ರಕ್ಷಣೆ ಮಾಡಲಾಗಿದ್ದು ಪ್ರಕರಣ ಸುಖಾಂತ್ಯ ಕಂಡಿದೆ. ಪೊಲೀಸರು ತಲುಪುವ ಮೊದಲು ಅದಾಗಲೇ ಮತ್ತೆರಡು ಟ್ರಿಪ್​​ಗಳನ್ನು ಚಾಲಕ ಪೂರೈಸಿದ್ದರೂ ಆತನಿಗಾಗಲೀ ಅಥವಾ ಇತರ ಪ್ರಯಾಣಿಕರಿಗಾಗಲೀ ನಿದ್ರಿಸುತ್ತಿರುವ ಮಗು ಗಮನಕ್ಕೆ ಬಾರದೇ ಇರುವುದು ನಿಜಕ್ಕೂ ವಿಪರ್ಯಾಸ.

ಜಿಯಾನ್ ಚುಂಗಿ (4) ರಕ್ಷಿಸಲಾದ ಮಗುವಾಗಿದ್ದು,  ಈತನ ಕುಟುಂಬ ಮತ್ತು ಬಂಧುಗಳು ಒಟ್ಟಾಗಿ ಇಸ್ಕಾನ್ ದೇವಸ್ಥಾನಕ್ಕೆ ತೆರಳಿದ್ದರು. ದೇಗುಲದಿಂದ ಮರಳಿ ಬರುವ ವೇಳೆ ಜಿಯಾನ್ ಚುಂಗಿ ಕ್ಯಾಬ್​​ನ ಹಿಂಬದಿಯ ಆಸನದಲ್ಲಿ ನಿದ್ರೆಗೆ ಜಾರಿದ್ದು, ಅಪಾರ್ಟ್‌ಮೆಂಟ್‌ಗೆ ತಲುಪಿದ ಬಳಿಕ ಕುಟುಂಬಸ್ಥರು ತ್ವರಿತವಾಗಿ ವಾಹನದಿಂದ ಇಳಿದು ಮನೆಗೆ ತೆರಳಿದ್ದಾರೆ. ನಿದ್ರಿಸುತ್ತಿದ್ದ ಬಾಲಕನ ಬಗ್ಗೆ ಒಬ್ಬರಿಗೂ ಗಮನ ಇರಲಿಲ್ಲ. ಇತ್ತ ಕ್ಯಾಬ್​​ ಚಾಲಕನೂ ಬಾಲಕನ ಗಮನಿಸದೆ ಮುಂದಿನ ಟ್ರಿಪ್​​ಗೆಂದು ತೆರಳಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಫ್ರೀಯಾಗಿ ಮೂವಿ ಸಿಗುತ್ತೆ ಎಂದು ಡೌನ್ ಲೋಡ್ ಮಾಡ್ತಿದ್ದಿರಾ? ಡೌನ್ ಲೋಡ್ ಆಗುವ ಸಮಯವೇ ಆಗುತ್ತೆ ವಂಚಕರಿಗೆ ವರದಾನ, ಹೇಗೆ ಗೊತ್ತಾ?

ಮನೆ ತಲುಪುತ್ತಿದ್ದಂತೆ ಕುಟುಂಬಸ್ಥರಿಗೆ ಮಗು ನಾಪತ್ತೆ ಆಗಿರುವ ವಿಚಾರ ಗೊತ್ತಾಗಿದೆ. ಈ ವೇಳೆ ಆತ ಕ್ಯಾಬ್​​ನಲ್ಲಿ ನಿದ್ರಿಸುತ್ತಿದ್ದ ಎಂಬುದು ನೆನಪಾಗಿ ಕಾಲ್ ಸೆಂಟರ್ ಮೂಲಕ ಕ್ಯಾಬ್ ಸಂಪರ್ಕಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ ಅದು ವಿಫಲವಾದ ಕಾರಣ ರಾಜ್ಯದ ತುರ್ತು ಪ್ರತಿಕ್ರಿಯಾ ವ್ಯವಸ್ಥೆಯಾದ ‘ನಮ್ಮ 112’ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ತಕ್ಷಣವೇ ಹೋಯ್ಸಳ-51 ಪೇಟ್ರೋಲಿಂಗ್‌ನಲ್ಲಿ ಸಮೀಪದಲ್ಲಿದ್ದ ಎಎಸ್‌ಐ ಮಂಜಪ್ಪ ಕೊಪ್ಪಳ ಹಾಗೂ ಮುಖ್ಯ ಆರಕ್ಷಕ ಸತೀಶ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ಅವರು ಎರಡು ನಿಮಿಷಗಳಲ್ಲೇ ಅಪಾರ್ಟ್‌ಮೆಂಟ್‌ ತಲುಪಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕ್ಯಾಬ್ ನೋಂದಣಿ ಸಂಖ್ಯೆ ಆಧಾರದಲ್ಲಿ ಮೊಬೈಲ್ ಕ್ರೈಂ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಮ್ (CCTNS) ಆಪ್ ಬಳಸಿ ಚಾಲಕನನ್ನು ಸಂಪರ್ಕಿಸಿದ್ದಾರೆ.

ವಾಹನ ಪರಿಶೀಲಿಸಿದಾಗ ಜಿಯಾನ್ ಸುರಕ್ಷಿತವಾಗಿ ನಿದ್ರಿಸುತ್ತಿರುವುದು ಕಂಡುಬಂದಿದ್ದು, ಬಾಲಕನನ್ನು ಎಚ್ಚರಿಸದೆ ಅಪಾರ್ಟ್‌ಮೆಂಟ್‌ಗೆ ಮರಳುವಂತೆ ಕ್ಯಾಬ್​​ ಚಾಲಕನಿಗೆ ನಿರ್ದೇಶಿಸಲಾಗಿದೆ. ಹುಡುಕಾಟ ಆರಂಭವಾದ ಒಂದು ಗಂಟೆಯೊಳಗೆ ಕ್ಯಾಬ್ ಅಪಾರ್ಟ್‌ಮೆಂಟ್‌ಗೆ ತಲುಪಿದ್ದು, ಬಾಲಕನನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ವಿಶೇಷವೆಂದರೆ ಇಡೀ ಘಟನೆಯ ಅವಧಿಯಲ್ಲಿ ಬಾಲಕ ನಿದ್ರೆಯಲ್ಲೇ ಇದ್ದು, ಮನೆ ತಲುಪಿದ ಬಳಿಕವೇ ಆತನಿಗೆ ಎಚ್ಚರವಾಗಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿಗರೇಟ್​​ ಖರೀದಿಸುವ ನೆಪದಲ್ಲಿ ಬಂದು ವೃದ್ಧೆಯ ಸರ ಕಿತ್ತೊಯ್ದ ಕಳ್ಳ; ಸಿಸಿಟಿವಿಯಲ್ಲಿ ಸೆರೆ – Kannada News | Viral CCTV: Thief Snatching Elderly Woman’s Chain at Shop

ಸಿಗರೇಟ್​​ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದ ಕಳ್ಳನೊಬ್ಬ ವೃದ್ಧೆಯ ಸರ ಕಿತ್ತೊಯ್ದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯಾವಳಿ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸರ ಕಿತ್ತು ಕಳ್ಳ ಓಡಿ ಹೋಗಿರುವುದು, ವೃದ್ಧೆ ಅಸಹಾಯಕತೆಯಿಂದ ಕಿರುಚಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಜನಿ ಕೊನೆಯ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ ಆ ವಿಶೇಷ ವ್ಯಕ್ತಿ – Kannada News | Rajinikanth’s Last Film? Daughter Soundarya to Produce Post Jailer 2 Buzz

ರಜನಿಕಾಂತ್ (Rajinikanth) ಅವರು ಸದ್ಯ ‘ಜೈಲರ್ 2’ ಸಿನಿಮಾ ಶೂಟ್​​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟ್ ವಿವಿಧ ಹಂತಗಳಲ್ಲಿ ಭರದಿಂದ ಸಾಗಿದೆ. ಹೀಗಿರುವಾಗಲೇ ರಜನಿಕಾಂತ್ ಕೊನೆಯ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಚಿತ್ರವನ್ನು ರಜನಿ ಮಗಳೇ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎಂದು ವರದಿ ಆಗಿದೆ. ಈ ಆಸೆಯನ್ನು ಈಡೇರಿಸಲು ರಜನಿ ಕೂಡ ಒಪ್ಪಿದ್ದಾರಂತೆ.

ಹಲವು ವರ್ಷ ಚಿತ್ರರಂಗದಲ್ಲಿ ಶ್ರಮಿಸಿ ನಂತರ ವೃತ್ತಿ ಜೀವನಕ್ಕೆ ಗುಡ್​​​ಬೈ ಹೇಳಬೇಕು ಎಂದರೆ ಭಾವನಾತ್ಮಕವಾಗಿ ಅದು ನಿಜಕ್ಕೂ ಚಾಲೆಂಜಿಂಗ್ ಅನ್ನಿಸೋ ವಿಷಯ. ಕೊನೆಯ ಸಿನಿಮಾ ಮೆಮೊರೆಬಲ್ ಆಗಿರಬೇಕು ಎಂದು ಅನೇಕರು ಬಯಸುತ್ತಾರೆ. ಈ ಎಲ್ಲಾ ಕಾರಣದಿಂದ ಸೌಂದರ್ಯಾ ರಜನಿಕಾಂತ್ ಅವರು ಸಿನಿಮಾನ ನಿರ್ಮಾಣ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಸಾಮಾನ್ಯವಾಗಿ ಕೊನೆಯ ಸಿನಿಮಾ ಎಂದಾಗ ಬಿಸ್ನೆಸ್ ದೃಷ್ಟಿಯಲ್ಲೂ ಹೆಚ್ಚು ಲಾಭ ತಂದುಕೊಡುತ್ತದೆ. ರಜನಿ ಅವರನ್ನು ಇನ್ನೆಂದೂ ದೊಡ್ಡ ಪರದೆ ಮೇಲೆ ನೋಡಲು ಸಾಧ್ಯವಿಲ್ಲ ಎಂಬ ಭಾವಾನಾತ್ಮಕ ನೆಲೆಗಟ್ಟಿನ ಮೇಲೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾನ ವೀಕ್ಷಿಸಲು ತೆರೆಳುತ್ತಾರೆ. ಇನ್ನು, ಟಿವಿ ಹಾಗೂ ಒಟಿಟಿ ಹಕ್ಕುಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಬಿಕರಿ ಆಗುವ ಸಾಧ್ಯತೆ ಇರುತ್ತದೆ.

ರಜನಿಕಾಂತ್ ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಶ್ರಮಿಸಿದ್ದಾರೆ. ಅವರ ದೇಹ ಆ್ಯಕ್ಷನ್ ದೃಶ್ಯಗಳನ್ನು ಮಾಡಲು ಸ್ಪಂದಿಸುತ್ತಿಲ್ಲ. ಹೀಗಾಗಿ ಡ್ಯೂಪ್ ಬಳಸಿ ಈ ರೀತಿಯ ದೃಶ್ಯಗಳನ್ನು ಸೆರೆ ಹಿಡಿಯಬೇಕಿದೆ. ಇದೆಲ್ಲದರ ಮಧ್ಯೆ ನಟಿಸಲು ಸಾಕಷ್ಟು ಶ್ರಮ ಹಾಕಲೇಬೇಕು. ಈ ಎಲ್ಲಾ ಕಾರಣದಿಂದ ವಿಶ್ರಾಂತಿ ಪಡೆಯುವ ಆಲೋಚನೆಯಲ್ಲಿ ಅವರಿದ್ದಾರೆ.

ಇದನ್ನೂ ಓದಿ: ಆಪ್ತ ಗೆಳೆಯನಿಗೂ ಇಲ್ಲ ರಿಯಾಯಿತಿ, ಕಮಲ್ ಜೊತೆ ಸಿನಿಮಾಕ್ಕೆ ರಜನಿಕಾಂತ್ ಪಡೆದ ಸಂಭಾವನೆ ಎಷ್ಟು?

ರಜನಿಕಾಂತ್ ಇನ್ನೂ ಕೆಲವು ಸಿನಿಮಾಗಳನ್ನು ಮಾಡುತ್ತಾರೆ ಎಂಬ ವರದಿ ಕೂಡ ಇದೆ. ಅವರು ಕಮಲ್ ಹಾಸನ್ ಜೊತೆ ಸಿನಿಮಾ ಒಂದನ್ನು ಮಾಡಬೇಕಿದೆ. ಇದಾದ ಬಳಿಕ ಅವರ ಕೊನೆಯ ಸಿನಿಮಾ ಸೆಟ್ಟೇರುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಅಷ್ಟೇ ಅಲ್ಲ, ಕೊನೆಯ ಸಿನಿಮಾಗೆ ನಿರ್ದೇಶನ ಮಾಡುವವರು ಯಾರು ಎಂಬ ಕುತೂಹಲವೂ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:48 pm, Wed, 18 February 26

Source link

ಹೆಣ್ಣುಮಕ್ಕಳ ಪೈಜಾಮದ ದಾರ ಸಡಿಲಿಸುವುದು ಕೂಡ ಅತ್ಯಾಚಾರದ ಪ್ರಯತ್ನ: ಸುಪ್ರೀಂಕೋರ್ಟ್​ – Kannada News | Supreme Court: Loosening Pajama String Is Attempted physical Assault Under POCSO, Overturns HC

ನವದೆಹಲಿ, ಫೆಬ್ರವರಿ 18: ಹೆಣ್ಣುಮಕ್ಕಳ ಪೈಜಾಮದ ದಾರ ಸಡಿಲಿಸುವುದು ಕೂಡ ಅತ್ಯಾಚಾರ ಪ್ರಯತ್ನ ಎಂದು ಸುಪ್ರೀಂಕೋರ್ಟ್(Supreme Court)​ ಅಭಿಪ್ರಾಯಪಟ್ಟಿದೆ. ಹೆಣ್ಣುಮಕ್ಕಳನ್ನು ಅನುಚಿತವಾಗಿ ಸ್ಪರ್ಶಿಸುವುದು ಪ್ಯಾಂಟ್ ದಾರವನ್ನು ಸಡಿಲಗೊಳಿಸುವುದು ಕೂಡ ಅತ್ಯಾಚಾರದ ಪ್ರಯತ್ನ ಎಂದು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿತು, ವಿವಾದಾತ್ಮಕ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತು, ಹೈಕೋರ್ಟ್​ ಈ ಅಪರಾಧವನ್ನು ಅತ್ಯಾಚಾರಕ್ಕೆ ಸಿದ್ಧತೆ ಎಂದು ವಿವರಿಸಿತ್ತು, ಪ್ರಯತ್ನವಲ್ಲ ಎಂದು ಹೇಳಿತ್ತು. ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನು ಮಾರ್ಚ್ 17, 2025 ರಂದು ನೀಡಲಾಯಿತು. ನ್ಯಾಯಾಲಯದ ತೀರ್ಪು ಸಾಕಷ್ಟು ಕೋಲಾಹಲಕ್ಕೆ ಕಾರಣವಾಯಿತು.

ವೀ ದಿ ವುಮೆನ್ ಎಂಬ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷೆ ಮತ್ತು ಹಿರಿಯ ವಕೀಲೆ ಶೋಭಾ ಗುಪ್ತಾ ಅವರ ಪತ್ರದ ನಂತರ ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತ್ತು. ಮಂಗಳವಾರ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಹೈಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಿತು ಮತ್ತು ಇಬ್ಬರು ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಕಠಿಣ ಆರೋಪವನ್ನು ಎದುರಿಸುವಂತಾಗಿದೆ.

ಮತ್ತಷ್ಟು ಓದಿ: ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಲೈಂಗಿಕ ಅಪರಾಧಗಳ ಪ್ರಕರಣಗಳಲ್ಲಿ ಮಹಿಳೆಯರ ಬಗ್ಗೆ ಹೆಚ್ಚಿನ ಸಂವೇದನೆ ಇರಬೇಕು ಎಂದು ಎನ್‌ಜಿಒ ಅಧ್ಯಕ್ಷೆ ಶೋಭಾ ಗುಪ್ತಾ ಮತ್ತು ಹಿರಿಯ ವಕೀಲೆ ಎಚ್.ಎಸ್. ಫೂಲ್ಕಾ ಅವರು ಪೀಠಕ್ಕೆ ಮನವಿ ಮಾಡಿದ್ದರು. ಯಾವುದೇ ನ್ಯಾಯಮೂರ್ತಿಗಳು ಅಥವಾ ನ್ಯಾಯಾಲವು ವಾಸ್ತವತೆ ಮತ್ತು ಮಹಿಳೆಯರು ಎದುರಿಸಬಹುದಾದ ಸಂದರ್ಭಗಳ ಬಗ್ಗೆ ಸಂವೇದನಾಶೀಲರಲ್ಲದಿದ್ದರೆ ಸಂಪೂರ್ಣ ನ್ಯಾಯವನ್ನು ಕೊಡುತ್ತಾರೆ ಎಂದು ಅಪೇಕ್ಷಿಸಲು ಸಾಧ್ಯವಿಲ್ಲ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

KSRTC BMTC Employees Strike: ನಾಳೆ ಸಾರಿಗೆ ಬಸ್ ಇರೋದಿಲ್ವಾ? ಹೇಗಿರುತ್ತೆ ಮುಷ್ಕರ? – Kannada News | Karnataka transport employees Bengaluru Chalo Protest On February 19th, Likely Disrupt Bus Services

ಬೆಂಗಳೂರು, (ಫೆಬ್ರವರಿ 18): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಾಳೆ ‘ಬೆಂಗಳೂರು ಚಲೋ’ (Bengaluru Chalo) ಕೈಗೊಳ್ಳಲಿದ್ದು,ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ 4 ನಿಗಮದ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ನಾಳೆ (ಗುರುವಾರ) ಸಂಜೆ ಬಳಿಕ ಬಿಎಂಟಿಸಿ (BMTC), ಕೆಎಸ್‌ಆರ್‌ಟಿಸಿ (KSRTC) ಸಂಚಾರದಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಮತ್ತೊಂದೆಡೆ ಸಾರಿಗೆ ಇಲಾಖೆ ಸಹ ರಜೆ ಹಾಗೂ ನೋ ವರ್ಕ್ ನೋ ಪೇ ಸುತ್ತೋಲೆ ಹೊರಡಿಸಿದೆ. ಇನ್ನು ನಾಳಿನ ಮುಷ್ಕರ ಹೇಗಿರಲಿದೆ? ಬಸ್ ಸಂಚಾರ ಇರುತ್ತಾ? ಎನ್ನುವ ವಿವರ ಇಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link