Category Archives: Blog

Your blog category

ಗರ್ಲ್​ಫ್ರೆಂಡ್ ಎದೆಯ ಮೇಲೆ ಹತ್ತಿ ಕುಳಿತು ಚಾಕು ಮುರಿಯುವವರೆಗೂ ಇರಿದು ಕೊಂದು, ಧೂಪ ಬೆಳಗಿ ಆಕೆಯ ಆತ್ಮ ಕರೆದ ವ್ಯಕ್ತಿ – Kannada News | Horrific Indore Crime: Man Kills Girlfriend, Attempts Spirit Communication After Murder

ಮುಂಬೈ, ಫೆಬ್ರವರಿ 17: ವ್ಯಕ್ತಿಯೊಬ್ಬ ಪ್ರೇಯಸಿಯ ಎದೆಯ ಮೇಲೆ ಹತ್ತಿ ಕುಳಿತು, ಚಾಕು ಮುರಿಯುವವರೆಗೂ ಇರಿದು, ಕೊಲೆ ಮಾಡಿ ಬಳಿಕ ಧೂಪ ಬೆಳಗಿ ಆಕೆಯ ಆತ್ಮವನ್ನು ಕರೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಆಕೆಯನ್ನು ಕೊಲೆ(Murder)ಮಾಡಿ ಬಳಿಕ ಯೂಟ್ಯೂಬ್ನಲ್ಲಿ ಆತ್ಮವನ್ನು ಕರೆಯುವುದು ಹೇಗೆ ಎಂದು ಸರ್ಚ್​ ಮಾಡಿದ್ದಾನೆ. ಕೊಲೆ ಮಾಡಿದ್ದಕ್ಕೆ ಕ್ಷಮೆಯಾಚಿಸಿ ಆಕೆಯ ಆತ್ಮದೊಂದಿಗೆ ಮಾತನಾಡಲು ಬಯಸುವುದಾಗಿ ಕೇಳಿಕೊಂಡಿದ್ದ.

ಇದು ಕಾಲ್ಪನಿಕವಲ್ಲ, ಇಂದೋರ್‌ನ ದ್ವಾರಕಾಪುರಿ ಪ್ರದೇಶದಲ್ಲಿ ಎಂಬಿಎ ವಿದ್ಯಾರ್ಥಿಯ ಕ್ರೂರ ಹತ್ಯೆಯ ಆರೋಪಿ ಪಿಯೂಷ್ ಧಮ್ನೋಟಿಯಾ ಅವರ ನಡವಳಿಕೆ ಇದು. ಈಗ ಮೂರು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ವಿಚಾರಣೆಯಿಂದ ಹೊರಹೊಮ್ಮುತ್ತಿರುವ ವಿವರಗಳು ನಗರದಾದ್ಯಂತ ಆತಂಕ ಸೃಷ್ಟಿ ಮಾಡಿದೆ. ಮನೆಯ ಬಳಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಫೆಬ್ರವರಿ 10 ರಂದು ಧಮ್ನೋಟಿಯಾ ವಿದ್ಯಾರ್ಥಿಯೊಂದಿಗೆ ಬರುತ್ತಿರುವುದು ಕಂಡುಬಂದಿತ್ತು. ಸುಮಾರು ಎರಡೂವರೆ ಗಂಟೆಗಳ ನಂತರ, ಅದೇ ಕ್ಯಾಮೆರಾದಲ್ಲಿ ಆತ ಒಂಟಿಯಾಗಿ ಬ್ಯಾಗ್ ಹೊತ್ತುಕೊಂಡು ಹೊರಗೆ ಹೋಗುವುದು ಕಂಡುಬಂದಿತ್ತು. ಆ ಕೋಣೆಯೊಳಗೆ ಏನಾಯಿತು ಎಂಬುದರ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.

ಪೊಲೀಸ್ ಮೂಲಗಳ ಪ್ರಕಾರ, ಧಮ್ನೋಟಿಯಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕ್ರಿಯೆಗೆ ಒತ್ತಡ ಹೇರಿದ್ದ, ಆಕೆ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿ ನಿರಾಕರಿಸಿದ್ದಳು. ಆಕೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದ ಆತ, ಆಕೆಯ ಕೈಕಾಲುಗಳನ್ನು ಹಗ್ಗಗಳಿಂದ ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ, ಉಡುಗೊರೆ ನೀಡುವುದಾಗಿ ಹೇಳಿದ್ದ.

ಮತ್ತಷ್ಟು ಓದಿ: ಮೂರು ಮಕ್ಕಳ ಕೊಂದು ಶಿಕ್ಷೆ ಅನುಭವಿಸಿ ಬಂದಿದ್ದ ವ್ಯಕ್ತಿ, ಮಹಿಳೆಯ ಕೊಂದು ರೈಲಿನೆದುರು ಹಾರಿ ಆತ್ಮಹತ್ಯೆ

ಅವಳು ಮತ್ತೆ ವಿರೋಧಿಸಿದಾಗ, ಅವನು ಅವಳ ಬಾಯಿಗೆ ಬಟ್ಟೆಯನ್ನು ತುರುಕಿ ಅವಳ ಎದೆಯ ಮೇಲೆ ಕುಳಿತು, ಅವಳು ಪ್ರಜ್ಞೆ ಕಳೆದುಕೊಳ್ಳುವವರೆಗೂ ಅವಳನ್ನು ಉಸಿರುಗಟ್ಟಿಸಿದ್ದ. ಅವಳು ಉಸಿರಾಟವನ್ನು ನಿಲ್ಲಿಸಿದ್ದಾಳೆಂದು ಅರಿತುಕೊಂಡ ಅವನು, ಅವಳ ಎದೆಯ ಬಳಿ ಎಷ್ಟು ಬಲದಿಂದ ಇರಿದಿದ್ದನೆಂದರೆ ಚಾಕುವೇ ಮುರಿದು ಹೋಗಿತ್ತು.
ಆದರೆ ಆ ಕ್ರೌರ್ಯ ಸಾವಿನೊಂದಿಗೆ ಕೊನೆಗೊಂಡಿಲ್ಲ. ಆಕೆಯನ್ನು ಕೊಂದ ನಂತರವೂ ಅವನು ಕೋಣೆಯೊಳಗೆ ಇದ್ದ. ಅವನು ಹೊರಗೆ ಬಂದು, ಮದ್ಯದ ಅಂಗಡಿಯಿಂದ ಬಿಯರ್ ಖರೀದಿಸಿ, ಹಿಂತಿರುಗಿ, ಆಕೆಯ ನಿರ್ಜೀವ ದೇಹದ ಪಕ್ಕದಲ್ಲಿ ಕುಳಿತು ಕುಡಿದಿದ್ದ.

ವಿಚಾರಣೆಯ ಸಮಯದಲ್ಲಿ, ಅವನು ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಟ್ಟೆ ಬದಲಾಯಿಸಿ ಪರಾರಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ, ಯುವತಿಯನ್ನು ಬೆತ್ತಲೆಯಾಗಿ ಬಿಟ್ಟು ಪರಾರಿಯಾಗಿದ್ದಾನೆ. ವಿದ್ಯಾರ್ಥಿನಿ ತನ್ನ ಆಧಾರ್ ಕಾರ್ಡ್ ಸರಿಪಡಿಸಬೇಕೆಂದು ಮನೆಯಿಂದ ಹೊರಟಿದ್ದಳು. ಆಕೆಯ ತಂದೆ ಆಕೆಯನ್ನು ಕಲೆಕ್ಟರೇಟ್ ಬಳಿ ಡ್ರಾಪ್ ಮಾಡಿದ್ದರು. ನಂತರ ಆಕೆ ತನ್ನ ತಂಗಿಗೆ ಕರೆ ಮಾಡಿ, ತನ್ನ ಸಹಪಾಠಿ ಪಿಯೂಷ್ ಧಮ್ನೋಟಿಯಾ ಜೊತೆ ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿರುವುದಾಗಿ ಮತ್ತು ರಾತ್ರಿ 11 ಗಂಟೆಗೆ ಹಿಂತಿರುಗುವುದಾಗಿ ಹೇಳಿದಳು.

ರಾತ್ರಿ 11ಗಂಟೆಗೆ ಆಕೆಯ ಫೋನ್ ಇಂದ ಅಪ್ಪಾ ನಾನು ಮನೆಗೆ ಬರುವುದಿಲ್ಲ ಎನ್ನುವ ಸಂದೇಶ ಬಂದಿತ್ತು, ಬಳಿಕ ಮೊಬೈಲ್ ಸ್ವಿಚ್ಡ್​ ಆಫ್ ಆಗಿತ್ತು. ಪೊಲೀಸರು ಮೊಬೈಲ್ ವಶಪಡಿಸಿಕೊಂಡಾಗ ಅವರಿಬ್ಬರು 11 ವಿಡಿಯೋಗಳನ್ನು ಕಾಲೇಜಿನ ವಾಟ್ಸ್​ಆ್ಯಪ್ ಗ್ರೂಪ್​​ನಲ್ಲಿ ಹಾಕಿರುವುದು ಕಂಡುಬಂದಿತ್ತು. ವಿಚಾರಣೆಯ ಸಮಯದಲ್ಲಿ, ಧಮ್ನೋಟಿಯಾ ಘಟನೆಗಳ ಬಗ್ಗೆ ತನ್ನ ಹೇಳಿಕೆಯನ್ನು ಪದೇ ಪದೇ ಬದಲಾಯಿಸುತ್ತಿದ್ದ.

ಕೊಲೆಯ ನಂತರ, ಪಿಯೂಷ್ ಮುಂಬೈಗೆ ಓಡಿಹೋಗಿ, ಪನ್ವೇಲ್ ಮೂಲಕ ಪ್ರಯಾಣಿಸಿ ಹೋಟೆಲ್‌ಗಳಲ್ಲಿ ತಂಗಿದ್ದ. ನಂತರ ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಪ್ರೇಯಸಿಯ ಆತ್ಮದೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ಆಕೆಯನ್ನು ನಾನು ಮದುವೆಯಾಗಲು ಬಯಸಿದ್ದೆ, ಆಕೆ 15 ದಿನಗಳಿಂದ ನನ್ನ ಬಳಿ ಮಾತನಾಡಿರಲಿಲ್ಲ, ಆದರೆ ಬೇರೊಬ್ಬನ ಜತೆ ಚಾಟ್ ಮಾಡುತ್ತಿದ್ದಳು, ಅದಕ್ಕೆ ಕೋಪದಿಂದ ಆಕೆಯನ್ನು ಕೊಲೆ ಮಾಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Solar Eclipse: ಇಂದು 2026ರ ಮೊದಲ ಸೂರ್ಯಗ್ರಹಣ; ಭಾರತದಲ್ಲಿ ಸೂತಕ ಇದೆಯಾ? – Kannada News | Rahu grastha Solar Eclipse: Understanding Its Impact and Remedies

2026ರ ಮೊದಲ ಸೂರ್ಯಗ್ರಹಣImage Credit source: Pinterest

ಇಂದು(ಫೆಬ್ರವರಿ 17)ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ. ಇದು 2026ನೇ ವರ್ಷದ ಪ್ರಥಮ ಗ್ರಹಣವಾಗಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಅಂಟಾರ್ಟಿಕಾ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದಂತಹ ಪ್ರದೇಶಗಳಲ್ಲಿ ಇದು ಗೋಚರಿಸಲಿದೆ. ಭಾರತದಲ್ಲಿ ಗೋಚರಿಸದಿದ್ದರೂ, ಗ್ರಹಣದ ಪರಿಣಾಮಗಳು ಕೆಲವು ರಾಶಿಗಳ ಮತ್ತು ನಕ್ಷತ್ರಗಳ ಮೇಲೆ ಇರಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ಈ ಗ್ರಹಣವು ಮಾಘ ಮಾಸದ ಕೃಷ್ಣಪಕ್ಷದಲ್ಲಿ ಸಂಭವಿಸುತ್ತಿದೆ. ಇದು ಕುಂಭ ರಾಶಿಯ ಧನಿಷ್ಠಾ ನಕ್ಷತ್ರದ ನಾಲ್ಕನೇ ಪಾದದಲ್ಲಿ ನಡೆಯುತ್ತಿದೆ. ಇದನ್ನು “ರಿಂಗ್ ಆಫ್ ಫೈರ್” ಎಂದು ಕರೆಯಲಾಗುತ್ತದೆ. ಅಂದರೆ, ಸೂರ್ಯನು ಬೆಂಕಿಯ ಆಕಾರದಲ್ಲಿ ಕಾಣಿಸುತ್ತಾನೆ. ಗ್ರಹಣದ ಸಮಯದಲ್ಲಿ ಐದು ಗ್ರಹಗಳಾದ ರವಿ, ಬುಧ, ಶುಕ್ರ, ರಾಹು, ಮತ್ತು ಚಂದ್ರ ಒಂದೇ ಮನೆಯಲ್ಲಿ ಇರುವುದು ವಿಶೇಷ. ಇದನ್ನು ಪಂಚಗ್ರಹ ಕೂಟ ಎಂದು ಕರೆಯಲಾಗುತ್ತದೆ. ಇದರ ಜೊತೆಗೆ, ಗುರು ಗ್ರಹವು ಈ ಗ್ರಹಣವನ್ನು ನೋಡುತ್ತಿದೆ, ಇದು ಇದರ ಮಹತ್ವವನ್ನು ಹೆಚ್ಚಿಸುತ್ತದೆ.

ಗ್ರಹಣದ ಸ್ಪರ್ಶಕಾಲ ಮಧ್ಯಾಹ್ನ 3:26 ಕ್ಕೆ, ಮಧ್ಯಮ ಕಾಲ ಸಂಜೆ 5:43 ಕ್ಕೆ ಮತ್ತು ಮೋಕ್ಷಕಾಲ ರಾತ್ರಿ 7:57 ಕ್ಕೆ ಇರುತ್ತದೆ. ಇದು ಭಾರತದಲ್ಲಿ ಗೋಚಾರವಿಲ್ಲದಿದ್ದರೂ, ಕರ್ಕಾಟಕ ರಾಶಿ, ಸಿಂಹ ರಾಶಿ, ಮಕರ ರಾಶಿ, ಮತ್ತು ಕುಂಭ ರಾಶಿಯವರ ಮೇಲೆ ತೀವ್ರ ಪರಿಣಾಮಗಳನ್ನು ಮತ್ತು ಬದಲಾವಣೆಗಳನ್ನು ತರಬಹುದು. ರವಿ ಗ್ರಹವನ್ನು ರಾಜಗ್ರಹವೆಂದು ಪರಿಗಣಿಸಲಾಗುತ್ತದೆ, ಇದು ಆತ್ಮಕಾರಕ ಮತ್ತು ಆರೋಗ್ಯಕಾರಕ ಗ್ರಹವಾಗಿದೆ. ಈ ಗ್ರಹಣವು ರಾಜಕೀಯ, ಆಡಳಿತ, ನಾಯಕರು ಮತ್ತು ಅಧಿಕಾರಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಧನಿಷ್ಠಾ ನಕ್ಷತ್ರದ ಜೊತೆಗೆ ಮೃಗಶಿರಾ ಮತ್ತು ಚಿತ್ತಾ ನಕ್ಷತ್ರಗಳಿಗೂ ಇದು ಅಷ್ಟೊಂದು ಶುಭಕರವಲ್ಲ.

ಇದನ್ನೂ ಓದಿ: ಫೆಬ್ರವರಿ 17ರಂದು ವರ್ಷದ ಮೊದಲ ಸೂರ್ಯಗ್ರಹಣ; ಉಂಗುರಾಕಾರದಲ್ಲಿ ಸೂರ್ಯ ಗೋಚರ

ಗ್ರಹಣದ ಸಮಯದಲ್ಲಿ ಬುದ್ಧಿಮಾಂದ್ಯರು, ವೃದ್ಧರು, ಅನಾರೋಗ್ಯ ಪೀಡಿತರು, ಮಕ್ಕಳು ಮತ್ತು ಗರ್ಭಿಣಿಯರು ಪ್ರಯಾಣಿಸುವುದು ಅಷ್ಟು ಶುಭಕರವಲ್ಲ. ಗ್ರಹಣದ ಪ್ರಭಾವವು ಸುಮಾರು 90 ದಿನಗಳವರೆಗೆ ಇರಬಹುದು. ಪರಿಹಾರ ಕ್ರಮಗಳಾಗಿ, ಈ ಸಮಯದಲ್ಲಿ ಧ್ಯಾನ ಮಾಡುವುದು, ಸೂರ್ಯ ನಮಸ್ಕಾರ ಮಾಡುವುದು, ಮಂತ್ರ ಜಪ ಮಾಡುವುದು, ಹಾಗೂ ದಾನಗಳನ್ನು ನೀಡುವುದು ಹೆಚ್ಚು ಫಲಪ್ರದ. ವಿಶೇಷವಾಗಿ, ಕರ್ಕಾಟಕ, ಸಿಂಹ, ಮಕರ ಮತ್ತು ಕುಂಭ ರಾಶಿಯವರು ಗೋಧಿ, ಉದ್ದಿನಬೇಳೆ, ತಾಮ್ರವನ್ನು ದಾನ ಮಾಡುವುದರಿಂದ ಮತ್ತು ಸೂರ್ಯನ ಜಪ ಮಾಡುವುದರಿಂದ ಹಾಗೂ ಆದಿತ್ಯ ಹೃದಯವನ್ನು ಕೇಳಿಸಿಕೊಳ್ಳುವುದರಿಂದ ಶುಭ ಫಲ ದೊರೆಯುತ್ತದೆ. ಗ್ರಹಣದ ಸಮಯದಲ್ಲಿ ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಜಾಗರೂಕರಾಗಿರುವುದು ಮುಖ್ಯ. ಪ್ರಪಂಚದ ಯಾವುದೇ ಮೂಲೆಯಲ್ಲಿ ಗ್ರಹಣ ಸಂಭವಿಸಿದರೂ, ಕೆಲವು ರಾಶಿಗಳು ಮತ್ತು ನಕ್ಷತ್ರಗಳ ಮೇಲೆ ಇದರ ಪ್ರಭಾವ ಇದ್ದೇ ಇರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ಫಿಲ್ಟರ್ ಕಾಫಿ, ಮಸಾಲ ದೋಸೆ ಸವಿದ ಅಮೇರಿಕನ್ ರಾಯಭಾರಿ! – Kannada News | US Ambassador Sergio Gor Praises Bengaluru: Strengthening India US Tech and Economic Ties

ಬೆಂಗಳೂರಲ್ಲಿ ಫಿಲ್ಟರ್ ಕಾಫಿ, ಮಸಾಲ ದೋಸೆ ಸವಿದ ಅಮೇರಿಕನ್ ರಾಯಭಾರಿ!

ಬೆಂಗಳೂರು, ಫೆಬ್ರವರಿ 17: ಇತ್ತೀಚೆಗೆ ಅಮೆರಿಕದ ರಾಯಭಾರಿಯಾಗಿರುವ ಸರ್ಜಿಯೋ ಗೋರ್ (Sergio Gor) ಭಾರತಕ್ಕೆ ಆಗಮಿಸಿದ್ದು, ಬೆಂಗಳೂರಿಗೂ ಭೇಟಿ ನೀಡಿ ನಗರವು ಚೈತನ್ಯಮಯವಾಗಿದೆ ಎಂದು ಶ್ಲಾಘಿಸಿದ್ದಾರೆ. ಈ ವೇಳೆ ಅವರ ಜೊತೆ ಒಡನಾಡಿದ ಸಂಸದ ತೇಜಸ್ವಿ ಸೂರ್ಯ (Tejaswi Surya), ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಯುಎಸ್​ ರಾಯಭಾರಿಯ ಎಕ್ಸ್ ಪೋಸ್ಟ್

ಬೆಂಗಳೂರಿನ ಭೇಟಿ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅಮೇರಿಕದ ರಾಯಭಾರಿ ಸರ್ಜಿಯೋ, ಸ್ಟಾರ್ಟ್‌ಅಪ್‌ಗಳಿಂದ ಹಿಡಿದು ಬೀದಿಬದಿಯ ತಿಂಡಿ ತಿನಿಸುಗಳವರೆಗೆ ಬೆಂಗಳೂರಿಗೆ ಸರಿಸಾಟಿಯೇ ಇಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ತೇಜಸ್ವಿ ಸೂರ್ಯರೊಂದಿಗೆ ಸ್ಥಳೀಯ ಆಹಾರವನ್ನು ಸವಿಯುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ಆತಿಥ್ಯಕ್ಕಾಗಿ ಸೂರ್ಯಗೆ ಕೃತಜ್ಞತೆಯನ್ನೂ ತಿಳಿಸಿದ್ದಾರೆ.

ಎರಡು ರಾಷ್ಷ್ಟ್ರಗಳ ಬಾಂಧವ್ಯಕ್ಕೆ ಬೆಂಗಳೂರು ಸಾಕ್ಷಿ

ಈ ಬಗ್ಗೆ ತೇಜಸ್ವಿ ಸೂರ್ಯ ಸಹ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇಂಡಿರಾನಗರದ ಫಿಲ್ಟರ್ ಕಾಫಿ, ಮಸಾಲ ದೋಸೆ ಜೊತೆಗೆ ಅಮೆರಿಕ ರಾಯಭಾರಿಯೊಂದಿಗೆ ಭಾರತ–ಅಮೆರಿಕ ಸಂಬಂಧಗಳ ಕುರಿತು ಸಾರ್ಥಕ ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ. ಮಧ್ಯಂತರ ವ್ಯಾಪಾರ ಒಪ್ಪಂದದ ಬಳಿಕ ವಾಣಿಜ್ಯ, ತಂತ್ರಜ್ಞಾನ ಹಾಗೂ ನವೀನತಾ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ವೃದ್ಧಿಯಾಗುತ್ತಿರುವ ಸಹಭಾಗಿತ್ವದ ಬಗ್ಗೆ ಮಾತುಕತೆ ನಡೆಸಿದೆವು ಎಂದು ಅವರು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ರಾಯಭಾರಿಗೆ “ನಮ್ಮ ಆಟೋ” ಪರಿಚಯಿಸಿ ಆಟೋದಲ್ಲಿ ಸಂಚರಿಸಿದ ಅನುಭವವೂ ಸ್ಮರಣೀಯವಾಗಿತ್ತು ಎಂದು ಸಂಸದರು ಉಲ್ಲೇಖಿಸಿದ್ದಾರೆ. ಮಸಾಲ ದೋಸೆಯಿಂದ ಮೆಷಿನ್ ಲರ್ನಿಂಗ್‌ವರೆಗೆ ಸಾಗಿದ ಬೆಂಗಳೂರಿನ ಪಯಣ ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನದ ಸುಂದರ ಸಂಯೋಜನೆಯನ್ನು ತೋರಿಸುತ್ತದೆ. ನಮ್ಮ ನಗರವು ಎರಡು ಪ್ರಜಾಸತ್ತಾತ್ಮಕ ರಾಷ್ಟ್ರಗಳ ನಡುವೆ ಬಾಂಧವ್ಯ ಹಾಗೂ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ 700ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಭಾರತದ ಸಾಫ್ಟ್‌ವೇರ್ ರಫ್ತುಗಳಲ್ಲಿ ಶೇ43ರಷ್ಟು ಕೊಡುಗೆ ನೀಡುತ್ತಿದೆ. ಜೊತೆಗೆ ದೇಶದ ಜಿಸಿಸಿಗಳ (Global Capability Centres) ಶೇ40ರಷ್ಟು ಕೇಂದ್ರಗಳು ಬೆಂಗಳೂರಿನಲ್ಲಿದ್ದು, ಭಾರತ–ಅಮೆರಿಕಾ ನೂತನ ಸಹಭಾಗಿತ್ವದ ಮುಂದಾಳತ್ವವನ್ನು ನಮ್ಮ ಬೆಂಗಳೂರು ವಹಿಸಿಕೊಂಡಿದೆ ಎಂದು ಅವರು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಿಂದೂಗಳ ಮನೆಯನ್ನೇ ಗುರಿಯಾಗಿಸಿ ಕಲ್ಲು ತೂರಾಟ ಮಾಡ್ತಾರೆ: ಬಿಜೆಪಿ ಯುವ ಮೋರ್ಚಾ ನಾಯಕ ಗಂಭೀರ ಆರೋಪ – Kannada News | Stone Pelting Targeted at Hindu House in Chikkamagaluru, BJP Yuva Morcha Leader Alleges Police Negligence

ಚಿಕ್ಕಮಗಳೂರು, ಫೆಬ್ರವರಿ 17: ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಲಕ್ ಪಾರ್ಕ್ ರಸ್ತೆಯಲ್ಲಿರುವ ಸರ್ಕಾರಿ ಕ್ವಾಟರ್ಸ್‌ನಲ್ಲಿ ವಾಸವಿರುವ ಸುಧಾ ಎಂಬುವವರ ಮನೆ ಮೇಲೆ ಕಳೆದ ಒಂದು ವಾರದಿಂದ ನಿರಂತರವಾಗಿ ಕಲ್ಲುತೂರಾಟ ನಡೆಯುತ್ತಿತ್ತು ಎಂದು ಬಿಜೆಪಿ ಯುವ ಮೋರ್ಚಾ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸಂತೋಷ್ ಗಂಭೀರ ಆರೋಪ ಮಾಡಿದ್ದಾರೆ. ಮುಸ್ಲಿಂ ಯುವಕರಿಂದ ಈ ಕೃತ್ಯ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಕಲ್ಲುತೂರಾಟವನ್ನು ಪ್ರಶ್ನಿಸಲು ಮುಂದಾದ ಮಹಿಳೆಯರ ಮೇಲೆ ಹಲ್ಲೆಗೆ ಯತ್ನಿಸಿದಾಗ ಓರ್ವ ಯುವಕ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರು ಈ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಬಿಜೆಪಿ ಹಾಗೂ ಬಜರಂಗದಳ ಕಾರ್ಯಕರ್ತರು ಈ ಘಟನೆಯನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಹಿಂದೂಗಳ ಮನೆಗಳನ್ನೇ ಗುರಿಯಾಗಿಸಿ ಕಲ್ಲು ತೂರಾಟ ನಡೆಸುತ್ತಿರುವುದು ಯಾಕೆ, ಹಾಗೂ ಇಂತಹ ಕೃತ್ಯಗಳಿಗೆ ಯಾರು ಪ್ರಚೋದನೆ ನೀಡುತ್ತಿದ್ದಾರೆ ಎಂದು ಸಂತೋಷ್ ಪ್ರಶ್ನಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳ ನಡುವೆಯೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸಂತೋಷ್ ಆರೋಪಿಸಿದ್ದು, ಈ ಘಟನೆ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಿವರಗಳಿಗೆ ಓದಿ: ಚಿಕ್ಕಮಗಳೂರು: ಕಲ್ಲು ತೂರಾಟ ಮಾಡಿದವರ ಮೇಲೆ, ಕಿಡಿಗೇಡಿಗಳ ಹಿಡಿದವರ ಮೇಲೂ ಎಫ್​ಐಆರ್!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗನೇ ನಮ್ಮ ಪ್ರಪಂಚ, ಅವನೇ ಇಲ್ಲದ ಮೇಲೆ ನಾವ್ಯಾಕೆ, ಮಗನ ಸಾವಿನ ನೋವಿನಿಂದ ದಂಪತಿ ಆತ್ಮಹತ್ಯೆ – Kannada News | Devastated Parents Suicide in Chhattisgarh After Son’s Accident Death

ಛತ್ತೀಸ್​ಗಢ, ಫೆಬ್ರವರಿ 17: ಮಗನ ಸಾವಿನ ನೋವಿನಿಂದ ಹೊರಬರಲಾರದೆ ಪೋಷಕರು ಆತ್ಮಹತ್ಯೆ(Suicide)ಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಅಪಘಾತವೊಂದರಲ್ಲಿ ಈ ದಂಪತಿ ಮಗನನ್ನು ಕಳೆದುಕೊಂಡಿದ್ದರು. ಆತನೇ ನಮ್ಮ ಪ್ರಪಂಚವಾಗಿದ್ದ, ಈಗ ಅವನೇ ಇಲ್ಲದ ಮೇಲೆ ನಾವು ಬದುಕಿ ಪ್ರಯೋಜನವೇನು ಎಂದು ಡೆತ್ ನೋಟ್ ಬರೆದಿಟ್ಟು ದಂಪತಿ ಸಾವಿಗೆ ಶರಣಾಗಿದ್ದಾರೆ.

ಮನೆಯ ಅಂಗಳದ ಬೇವಿನ ಮರದಲ್ಲಿ ಕೃಷ್ಣ ಪಟೇಲ್ ಮತ್ತು ಅವರ ಪತ್ನಿ ರಮಾ ಬಾಯಿ ಅವರ ಶವಗಳು ನೇತಾಡುತ್ತಿದ್ದವು. ಕೇವಲ ಅವರ ಕುತ್ತಿಗೆ ಸೀರೆಯ ಕುಣಿಕೆಯಿಂದ ಬಂಧಿಸಲ್ಪಟ್ಟಿರಲಿಲ್ಲ, ಬದಲಾಗಿ ಅವರು ಇನ್ನು ಮುಂದೆ ಹೊರಲು ಸಾಧ್ಯವಾಗದ ದುಃಖದಿಂದ ಬಂಧಿಸಲ್ಪಟ್ಟಿದ್ದವು.

ಜಂಜ್‌ಗೀರ್-ಚಂಪಾ ಜಿಲ್ಲೆಯ ಶಿವರಿನಾರಾಯಣ ಪೊಲೀಸ್ ಠಾಣೆ ಪ್ರದೇಶದಲ್ಲಿ, ಈ ಘಟನೆ ನಡೆದಿದೆ. ಮನೆಯಲ್ಲಿ ನಿಶ್ಯಬ್ಧತೆ ಇತ್ತು. ಜನರು ಒಟ್ಟುಗೂಡಿದರು ಮನೆಯ ಹೊರಗೆ ಇಬ್ಬರ ಶವ ಕಂಡು ಬೆಚ್ಚಿಬಿದ್ದಿದ್ದರು. ದಂಪತಿ ನಾಲ್ಕು ಪುಟಗಳ ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದರು. ಜತೆಗೆ ವಿಡಿಯೋ ಸಂದೇಶವನ್ನು ಕೂಡ ಮಾಡಿಟ್ಟಿದ್ದರು. ಅವರ ಮಾತುಗಳು ಇಡೀ ಕುಟುಂಬದವರನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಅವರಿಗೆ ಇದ್ದಿದ್ದು ಒಬ್ಬನೇ ಮಗ ಆತನಿಗೆ 21 ವರ್ಷ ವಯಸ್ಸಾಗಿತ್ತು, 2024ರಲ್ಲಿ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ವೃತ್ತಿಯಲ್ಲಿ ಮೇಸ್ತ್ರಿ ಆಗಿದ್ದ ಕೃಷ್ಣ (48) ಮತ್ತು ರಮಾ ಬಾಯಿ (47)ಗೆ ಆದಿತ್ಯನೇ ಪ್ರಪಂಚವಾಗಿದ್ದ. ಅಪಘಾತದ ಬಳಿಕ ಮನೆಗೆ ಬರ ಸಿಡಿಲು ಬಡಿದಂತಾಗಿತ್ತು. ಆದಿತ್ಯ ದೇವಸ್ಥಾನದ ಕೆಲಸ ಮತ್ತು ಯಜ್ಞಕ್ಕೆ ಸಹಾಯ ಮಾಡಲು ಗ್ರಾಮದ ಪುರೋಹಿತರೊಂದಿಗೆ ಹೊರಗೆ ಹೋದ ದಿನದ ಬಗ್ಗೆ ಕೃಷ್ಣ ಬರೆದಿದ್ದಾರೆ.

ಮತ್ತಷ್ಟು ಓದಿ: ಮೂರು ಮಕ್ಕಳ ಕೊಂದು ಶಿಕ್ಷೆ ಅನುಭವಿಸಿ ಬಂದಿದ್ದ ವ್ಯಕ್ತಿ, ಮಹಿಳೆಯ ಕೊಂದು ರೈಲಿನೆದುರು ಹಾರಿ ಆತ್ಮಹತ್ಯೆ

ಆದಿತ್ಯ ಅಂದು ಹೋಗುವುದಿಲ್ಲ ಎಂದರೂ ತಾನೇ ಬಲವಂತವಾಗಿ ಅವನನ್ನು ಕಳುಹಿಸಿಕೊಟ್ಟು ತಪ್ಪು ಮಾಡಿದೆ. ಮಗ ಶಾಶ್ವತವಾಗಿ ನಮ್ಮನ್ನು ಬಿಟ್ಟು ಹೋಗಿದ್ದಾನೆ. ಆದರೆ ನಾವು ಮಾತ್ರ ಜೀವಂತವಾಗಿದ್ದೇವೆ ಎಂದು ಬರೆದಿದ್ದಾರೆ. ದಂಪತಿ ಭಾನುವಾರ ತಡರಾತ್ರಿ ತಮ್ಮ ಅಂಗಳದಲ್ಲಿರುವ ಬೇವಿನ ಮರಕ್ಕೆ ಸೀರೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ಘಟನಾ ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ಹೊರಠಾಣೆ ಉಸ್ತುವಾರಿ ಸತ್ಯಂ ಚೌಹಾಣ್ ತಿಳಿಸಿದ್ದಾರೆ. ತಮ್ಮ ಏಕೈಕ ಮಗನನ್ನು ಕಳೆದುಕೊಂಡ ಅಸಹನೀಯ ದುಃಖವು ಈ ತಪ್ಪು ಹೆಜ್ಜೆ ಇಡಲು ಕಾರಣವಾಯಿತು.
ಮಗನನ್ನು ಕಳೆದುಕೊಂಡಾಗಿನಿಂದ ಆ ದಂಪತಿ ಮುಖದಲ್ಲಿ ನಗುವೇ ಇರಲಿಲ್ಲ, ದೀರ್ಘಕಾಲದ ನೋವಿನ ನಂತರ, ನನ್ನ ಮನಸ್ಸು ಈಗ ಶಾಂತವಾಗಿದೆ. ನಾನು ಕೂಡ ಆತನೊಂದಿಗೆ ಹೋಗುತ್ತಿದ್ದೇನೆ ಎಂದು ಬರೆದಿದ್ದಾರೆ.

ವಿಡಿಯೋವನ್ನು ಕೂಡಾ ರೆಕಾರ್ಡ್​ ಮಾಡಿದ್ದಾರೆ. ಆದಿತ್ಯನ ಅಪಘಾತದ ನಂತರ ಬಂದ ಪರಿಹಾರದ ಹಣವನ್ನು ತಮ್ಮ ಹಿರಿಯ ಸಹೋದರರಾದ ಕುಲಭರ ಪಟೇಲ್ ಮತ್ತು ಜಲಭರ ಪಟೇಲ್‌ಗೆ ವರ್ಗಾಯಿಸಬೇಕೆಂದು ಅವರು ವಿನಂತಿಸಿದ್ದಾರೆ. ನಾವು ಪ್ರಜ್ಞಾಪೂರ್ವಕವಾಗಿ ಮತ್ತು ಸ್ವಇಚ್ಛೆಯಿಂದ ನಮ್ಮನ್ನು ಶಿವನಿಗೆ ಅರ್ಪಿಸಿಕೊಳ್ಳುತ್ತಿದ್ದೇವೆ. ಇದಕ್ಕೆ ಯಾರೂ ಹೊಣೆಯಲ್ಲ, ಸಂತೋಷದಿಂದ ನಮ್ಮನ್ನು ಕಳುಹಿಸಿಕೊಡಿ ಎಂದು ಬರೆದಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಡ್ರೀಮ್ ಕಾರು ರಿವೀಲ್ ಮಾಡಿದ ಪ್ರಿಯಾ ಸುದೀಪ್; ನೀವು ಊಹಿಸಲಿಕ್ಕೂ ಸಾಧ್ಯವಿಲ್ಲ – Kannada News | Priya Sudeep Reveals her Dream Car Mini Cooper

ಪ್ರಿಯಾ ಸುದೀಪ್ ಅವರು ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದ ಒಡೆತನ ಹೊಂದಿದ್ದಾರೆ. ಸುದೀಪ್ ಅವರು ಬೆನ್ನು ತಟ್ಟಿದ್ದರಿಂದ ಈ ತಂಡದ ಮಾಲೀಕರಾಗಲು ಅವರು ಒಪ್ಪಿದರು. ಈ ತಂಡದ ಬಗ್ಗೆ ಮಾತನಾಡುವಾಗ ಅವರು ಕಾರುಗಳ ಬಗ್ಗೆ ಒಂದಷ್ಟು ವಿಷಯ ಹೇಳಿಕೊಂಡಿದ್ದಾರೆ. ತಮ್ಮ ಡ್ರೀಮ್ ಕಾರ್ ಬಗ್ಗೆಯೂ ಅವರು ಮಾಹಿತಿ ರಿವೀಲ್ ಮಾಡಿದ್ದಾರೆ. ಮಿನಿ ಕೂಪರ್ ಪ್ರಿಯಾ ಅವರ ಡ್ರೀಮ್ ಕಾರು. ಎಲೆಕ್ಟ್ರಿಕ್​ಗಿಂತ ಮ್ಯಾನ್ಯುವಲ್​ನ ಅವರು ಹೆಚ್ಚು ಇಷ್ಟಪಡುತ್ತಾರೆ. ಆಟೋಮ್ಯಾಟಿಕ್​​ಗಿಂತ ಮ್ಯಾನ್ಯುವೆಲ್ ಕಾರನ್ನು ಅವರು ಹೆಚ್ಚು ಇಷ್ಟಪಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅವರು ಗೆದ್ದು, ಇವರು ಸೋತರೂ ಆಸ್ಟ್ರೇಲಿಯಾ ಟಿ20 ವಿಶ್ವಕಪ್​ನಿಂದ ಔಟ್! – Kannada News | T20 World Cup 2026: Australia’s Super Eight qualification scenario

T20 World Cup 2026: ಟಿ20 ವಿಶ್ವಕಪ್​ 2026 ರಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದಿರುವುದು ಕೇವಲ ಒಂದು ಮ್ಯಾಚ್ ಮಾತ್ರ. ಅದು ಕೂಡ ಐರ್ಲೆಂಡ್ ವಿರುದ್ಧ. ಇದಾದ ಬಳಿಕ ಝಿಂಬಾಬ್ವೆ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ಸೋಲನುಭವಿಸಿದೆ. ಈ ಸೋಲುಗಳಿಂದಾಗಿ ಆಸ್ಟ್ರೇಲಿಯಾ ತಂಡದ ಸೂಪರ್-8 ಹಾದಿ ಮತ್ತಷ್ಟು ಕಠಿಣವಾಗಿದೆ. ಅಂದರೆ ಆಸೀಸ್ ಪಡೆಯ ಸೂಪರ್-8 ಭವಿಷ್ಯ ಎರಡು ತಂಡಗಳ ಕೈಯಲ್ಲಿದೆ. ಈ ಎರಡು ಟೀಮ್​ಗಳು ಗೆದ್ದರೆ ಮಾತ್ರ ಆಸ್ಟ್ರೇಲಿಯಾ ಮುಂದಿನ ಸುತ್ತಿಗೆ ಪ್ರವೇಶಿಸಲಿದೆ.

ಝಿಂಬಾಬ್ವೆ ಮತ್ತು ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಸತತ ಸೋಲು ಅನುಭವಿಸಿರುವುದರಿಂದ, ಆಸೀಸ್ ತಂಡವು ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ. ಆಸ್ಟ್ರೇಲಿಯಾ ಮುಂದಿನ ಹಂತಕ್ಕೆ ಹೋಗಬೇಕಾದರೆ ಈ ಕೆಳಗಿನ ಲೆಕ್ಕಾಚಾರಗಳು ನಡೆಯಬೇಕಿದೆ…

  • ಝಿಂಬಾಬ್ವೆಯ ಸೋಲು: ಝಿಂಬಾಬ್ವೆ ತಂಡವು ತನ್ನ ಮುಂದಿನ ಎರಡು ಪಂದ್ಯಗಳಲ್ಲಿ (ಐರ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧ) ಸೋಲಲೇಬೇಕು. ಒಂದು ವೇಳೆ ಝಿಂಬಾಬ್ವೆ ಒಂದೇ ಒಂದು ಪಂದ್ಯ ಗೆದ್ದರೂ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬೀಳಲಿದೆ.
  • ಒಂದು ಸೋಲು, ಒಂದು ಗೆಲುವು: ಝಿಂಬಾಬ್ವೆ ತಂಡವು ಐರ್ಲೆಂಡ್ ವಿರುದ್ಧ ಸೋತರೂ, ಶ್ರೀಲಂಕಾ ವಿರುದ್ಧ ಗೆದ್ದರೆ ಸಾಕು. ಝಿಂಬಾಬ್ವೆ ಪಡೆ ನೇರವಾಗಿ ಸೂಪರ್-8 ಹಂತಕ್ಕೇರಲಿದೆ.
  • ಐರ್ಲೆಂಡ್, ಶ್ರೀಲಂಕಾ ಕೈಯಲ್ಲಿ ಭವಿಷ್ಯ: ಝಿಂಬಾಬ್ವೆ ತಂಡವು ಐರ್ಲೆಂಡ್ ಅಥವಾ ಶ್ರೀಲಂಕಾ ವಿರುದ್ಧ ಗೆದ್ದರೆ ಒಟ್ಟು 6 ಅಂಕಗಳನ್ನು ಪಡೆದು ಮುಂದಿನ ಹಂತಕ್ಕೇರಲಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡದ ಭವಿಷ್ಯ ಐರ್ಲೆಂಡ್ ಹಾಗೂ ಝಿಂಬಾಬ್ವೆ ಕೈಯಲ್ಲಿದೆ.

ಆಸ್ಟ್ರೇಲಿಯಾದ ಲೆಕ್ಕಾಚಾರ:

ಝಿಂಬಾಬ್ವೆ ವಿರುದ್ಧ ಶ್ರೀಲಂಕಾ ಗೆದ್ದರೆ ಹಾಗೂ  ಐರ್ಲೆಂಡ್ ವಿರುದ್ಧ ಝಿಂಬಾಬ್ವೆ  ಸೋತರೆ ಆಸ್ಟ್ರೇಲಿಯಾ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಒಮಾನ್ ವಿರುದ್ಧ ಭಾರಿ ಅಂತರದ ಗೆಲುವು ಸಾಧಿಸಿ ತನ್ನ ನೆಟ್ ರನ್ ರೇಟ್ (NRR) ಅನ್ನು ಹೆಚ್ಚಿಸಿಕೊಳ್ಳಬೇಕು. ಈ ಮೂಲಕ ಝಿಂಬಾಬ್ವೆಯನ್ನು ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರುವ ಮೂಲಕ ಸೂಪರ್-8 ಹಂತಕ್ಕೇರಬಹುದು.

ಹೀಗಾಗಿ ಆಸ್ಟ್ರೇಲಿಯಾ ಪಾಲಿಗೆ ಐರ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಗೆಲ್ಲಲೇಬೇಕು. ಅಂದರೆ ಝಿಂಬಾಬ್ವೆ ತಂಡವು ಇನ್ನೊಂದು ಪಂದ್ಯ ಗೆದ್ದರೆ ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್​ನಿಂದ ಹೊರಬೀಳಲಿದೆ. ಹೀಗಾಗಿಯೇ ಆಸೀಸ್ ಪಡೆಯ ವಿಶ್ವಕಪ್ ಭವಿಷ್ಯ ಐರ್ಲೆಂಡ್ ಹಾಗೂ ಶ್ರೀಲಂಕಾ ಕೈಯಲ್ಲಿದೆ.

ನೆಟ್ ರನ್ ರೇಟ್ ಹೇಗೆ ಬದಲಾಗಬಹುದು?

  • ಝಿಂಬಾಬ್ವೆಯ ಸೋಲಿನ ಅಂತರ: ಝಿಂಬಾಬ್ವೆ ತಂಡವು ಐರ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ಭಾರಿ ಅಂತರದಿಂದ ಸೋಲಬೇಕೆಂದು ಆಸ್ಟ್ರೇಲಿಯಾ ಆಶಿಸುತ್ತಿದೆ. ಝಿಂಬಾಬ್ವೆ ದೊಡ್ಡ ಅಂತರದಲ್ಲಿ ಸೋತಷ್ಟು ಅವರ ಪ್ರಸ್ತುತ +1.984 ರನ್ ರೇಟ್ ಕುಸಿಯುತ್ತದೆ.
  • ಒಮಾನ್ ವಿರುದ್ಧ ಆಸೀಸ್ ಗೆಲುವಿನ ಅಂತರ: ಆಸ್ಟ್ರೇಲಿಯಾ ತನ್ನ ಕೊನೆಯ ಪಂದ್ಯದಲ್ಲಿ ಒಮಾನ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಸುಮಾರು 80-90 ರನ್‌ಗಳ ಭಾರಿ ಅಂತರದಿಂದ ಗೆಲ್ಲಬೇಕು ಅಥವಾ ಒಮಾನ್ ನೀಡಿದ ಗುರಿಯನ್ನು ಕೇವಲ 10-12 ಓವರ್‌ಗಳಲ್ಲಿ ಬೆನ್ನಟ್ಟಬೇಕು. ಇದರಿಂದ ಆಸೀಸ್ ರನ್ ರೇಟ್ ಧನಾತ್ಮಕವಾಗಿ ಏರಿಕೆಯಾಗಿ ಝಿಂಬಾಬ್ವೆಯನ್ನು ಹಿಂದಿಕ್ಕಲು ಸಾಧ್ಯವಾಗುತ್ತದೆ.
  • ಐರ್ಲೆಂಡ್ ಅಡ್ಡಿ: ಐರ್ಲೆಂಡ್ ಕೂಡ 2 ಅಂಕಗಳನ್ನು ಹೊಂದಿದ್ದು, ಅವರು ಝಿಂಬಾಬ್ವೆಯನ್ನು ಸೋಲಿಸಿದರೆ ಅವರೂ ಸಹ 4 ಅಂಕ ತಲುಪಲಿದ್ದಾರೆ. ಆಗ ಆಸ್ಟ್ರೇಲಿಯಾ, ಝಿಂಬಾಬ್ವೆ ಮತ್ತು ಐರ್ಲೆಂಡ್ ನಡುವೆ ಮೂರು ತಂಡಗಳ ರನ್ ರೇಟ್ ಪೈಪೋಟಿ ಏರ್ಪಡುತ್ತದೆ.

ಅಂದರೆ ಇಲ್ಲಿ ಆಸ್ಟ್ರೇಲಿಯಾ ಪಾಲಿಗೆ ಝಿಂಬಾಬ್ವೆ ತಂಡವು ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಸೋಲಬೇಕು. ಅಂದರೆ ಮಾತ್ರ ಕೊನೆಯ ಲೀಗ್ ಪಂದ್ಯದ ಮೂಲಕ ಸೂಪರ್-8 ಹಂತಕ್ಕೇರಲು ಅವಕಾಶ ಇರಲಿದೆ. ಇಲ್ಲಿ ಆಸ್ಟ್ರೇಲಿಯಾಕ್ಕೆ ಅನುಕೂಲವೆಂದರೆ ಅವರು ಗುಂಪಿನ ಕೊನೆಯ ಪಂದ್ಯವನ್ನು (ಫೆಬ್ರವರಿ 20) ಆಡುತ್ತಿರವುದು.

ಇದನ್ನೂ ಓದಿ: ಯಾರಿಗೂ ಸಾಧ್ಯವಾಗದೇ ಇರುವುದನ್ನು ಸಾಧಿಸಿ ತೋರಿಸಿದ ಪಾತುಮ್ ನಿಸ್ಸಂಕಾ

ಇದಕ್ಕೂ ಮುನ್ನ ಫೆಬ್ರವರಿ 17 ರಂದು ಐರ್ಲೆಂಡ್ ಹಾಗೂ ಫೆಬ್ರವರಿ 19 ರಂದು ಶ್ರೀಲಂಕಾ ವಿರುದ್ಧ ಝಿಂಬಾಬ್ವೆ ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳಲ್ಲಿ ಝಿಂಬಾಬ್ವೆ ತಂಡ ಸೋತರೆ, ಆಸ್ಟ್ರೇಲಿಯಾ ತಂಡಕ್ಕೆ ಎಷ್ಟು ರನ್​ಗಳ ಅಂತರದಿಂದ ಅಥವಾ ಎಷ್ಟು ಓವರ್​ಗಳಲ್ಲಿ ಪಂದ್ಯ ಮುಗಿಸಿದರೆ ರನ್ ರೇಟ್ ಹೆಚ್ಚಿಸಿಕೊಳ್ಳಬಹುದು ಎಂಬುದರ ಸ್ಪಷ್ಟ ಮಾಹಿತಿ ದೊರೆಯಲಿದೆ. ಆದರೆ ಇವೆಲ್ಲಾ ಲೆಕ್ಕಾಚಾರಕ್ಕೂ ಮುನ್ನ ಝಿಂಬಾಬ್ವೆ ತಂಡವು ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಸೋಲಲಿದೆಯಾ ಎಂಬುದೇ ಪ್ರಶ್ನೆ.

Source link

ಬೆಂಗಳೂರು ರೈಲು ಪ್ರಯಾಣಿಕರಿಗೆ ಕೇಂದ್ರ ಸಚಿವ ಸೋಮಣ್ಣ ಗುಡ್ ನ್ಯೂಸ್: ಕೊನೆಗೂ ಈಡೇರಿತು ಬಹುಕಾಲದ ಬೇಡಿಕೆ – Kannada News | Bengaluru Passengers Get Good News as Union Minister Somanna Flags Off Express Train Halt at Nayandahalli Railway Station

ಬೆಂಗಳೂರು, ಫೆಬ್ರವರಿ 17: ಬೆಂಗಳೂರಿನ (Bangalore) ನಾಯಂಡಹಳ್ಳಿ ರೈಲ್ವೆ ನಿಲ್ದಾಣದಲ್ಲಿ (Nayandahalli Railway Station) ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಕಲ್ಪಿಸುವ ಬಹುಕಾಲದ ಬೇಡಿಕೆ ಕೊನೆಗೂ ಈಡೇರಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V Somanna) ಅವರು ಮಂಗಳವಾರ ನಾಲ್ಕು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಇದುವರೆಗೆ ನಾಯಂಡಹಳ್ಳಿ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲುಗಳು ಮಾತ್ರ ನಿಲ್ಲುತ್ತಿದ್ದು, ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗಾಗಿ ಪ್ರಯಾಣಿಕರು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಇಂದು ಆ ಬೇಡಿಕೆ ಈಡೇರಿದ ಹಿನ್ನೆಲೆ ಪ್ರಯಾಣಿಕರಲ್ಲಿ ಸಂತಸ ಮೂಡಿದೆ. ಜತೆಗೆ, ಮೈಸೂರು–ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ ರೈಲಿಗೆ ಸಚಿವರು ಸಾಂಕೇತಿಕವಾಗಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಈ ದಿನ ತಮಗೆ ಅತ್ಯಂತ ಸಂತೋಷ ತಂದಿದೆ ಎಂದು ಹೇಳಿದರು. ಈ ಯೋಜನೆಗೆ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಸಲ್ಲಿಸಿದರು. ಒಟ್ಟು ನಾಲ್ಕು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಮೇಲೆ ಇರುವ ಒತ್ತಡವನ್ನು ಕಡಿಮೆ ಮಾಡಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಹೇಳಿದರು. ನಿಲುಗಡೆ ಸಮಯದ ಮಾಹಿತಿಯನ್ನು ಶೀಘ್ರವೇ ಪ್ರಕಟಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು.

ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಕೇಂದ್ರದಿಂದ ಭರಪೂರ ಅನುದಾನ: ಸೋಮಣ್ಣ

ರಾಜ್ಯದ ರೈಲ್ವೆ ಅಭಿವೃದ್ಧಿ ಕುರಿತು ಮಾತನಾಡಿದ ಸೋಮಣ್ಣ, ಹಿಂದಿನ ಸರ್ಕಾರದ ಅವಧಿಯಲ್ಲಿ ಸುಮಾರು 800 ಕೋಟಿ ರೂ. ಮಾತ್ರ ಅನುದಾನ ನೀಡಲಾಗುತ್ತಿತ್ತು. ಈಗ ಕೇಂದ್ರ ಸರ್ಕಾರದಿಂದ 7,748 ಕೋಟಿ ರೂ. ಅನುದಾನ ದೊರಕಿದೆ ಎಂದು ಹೇಳಿದರು. ರಾಜ್ಯದಲ್ಲಿ 52,000 ಕೋಟಿ ರೂ. ಮೌಲ್ಯದ ವಿವಿಧ ರೈಲ್ವೆ ಯೋಜನೆಗಳು ನಡೆಯುತ್ತಿವೆ. 707 ಮೇಲ್ಸೇತುವೆಗಳು ನಿರ್ಮಾಣಗೊಂಡಿದ್ದು, 12 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರು ವಿಶಾಖಪಟ್ಟಣ ವಿಶೇಷ ರೈಲು ಅವಧಿ ವಿಸ್ತರಣೆ: ಇನ್ಮುಂದೆ ನಾಯಂಡಹಳ್ಳಿಯಲ್ಲಿ ಈ 4 ರೈಲುಗಳಿಗೆ ಇರುತ್ತೆ ನಿಲುಗಡೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕೆಗಳಿಗೆ ತೀವ್ರ ಟೀಕೆ ವ್ಯಕ್ತಪಡಿಸಿದ ಸೋಮಣ್ಣ, ಅವರು ತಲೆ ಬುಡ ಇಲ್ಲದ ರೀತಿ ಮಾತನಾಡುತ್ತಾರೆ ಎಂದರು.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:38 am, Tue, 17 February 26

Source link

Video: ತಮಿಳುನಾಡಿನ ಮಾಯಾನ ಕೊಲ್ಲೈ ಉತ್ಸವದಲ್ಲಿ ಕುಸಿದು ಬಿದ್ದ ದೇವಾಲಯದ ರಥ, ಹಲವರಿಗೆ ಗಾಯ – Kannada News | Massive Temple Car Overturns During Festival in Tamil Nadu, Several Hurt

ಚೆನ್ನೈ, ಫೆಬ್ರವರಿ 17: ತಮಿಳುನಾಡಿನ ವೆಲ್ಲೂರಿನಲ್ಲಿ ಸೋಮವಾರ ರಾತ್ರಿ ಮಾಯಾನ ಕೊಲ್ಲೈ ಉತ್ಸವದ ಸಂದರ್ಭದಲ್ಲಿ 60 ಅಡಿ ಎತ್ತರದ ದೇವಾಲಯದ ರಥ ಕುಸಿದು ಬಿದ್ದು 7 ಮಂದಿ ಗಾಯಗೊಂಡಿದ್ದಾರೆ. ಕೂಡಲೇ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸಹಾಯ ಮಾಡಿದ್ದಾರೆ. ಹೇಗೆ ರಥ ಕುಸಿಯಿತು ಎಂಬುದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರತಿ ವರ್ಷ ಮಹಾಶಿವರಾತ್ರಿ ಸಂದರ್ಭದಲ್ಲಿ ಈ ರಥೋತ್ಸವ ನಡೆಯುತ್ತದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಕನ್ನಡದಲ್ಲಿ ನಾಯಕ ನಟನ ಕೊರತೆಯನ್ನು ಕಡಿಮೆ ಮಾಡಿ’; ಗಿಲ್ಲಿಗೆ ಹಾರೈಸಿದ ಮುನಿರತ್ನ – Kannada News | Kannada Cinema Needs New Heroes: Gilli Actor Gets Munirathna’s Support

ಕನ್ನಡ ಚಿತ್ರರಂಗದಲ್ಲಿ ಹೀರೋಗಳ ಕೊರತೆ ಎದ್ದು ಕಾಣಿಸುತ್ತಿದೆ. ಕೆಲವರು ಪ್ಯಾನ್ ಇಂಡಿಯಾ ಸಿನಿಮಾ ಮಾಡುವತ್ತ ಗಮನ ಹರಿಸುತ್ತಿರುವುದರಿಂದ ಸಹಜವಾಗಿಯೇ ವಿಳಂಬ ಆಗುತ್ತಿದೆ. ಇನ್ನೂ ಕೆಲವರು ತಮ್ಮ ಪ್ರಾಮಾಣಿಕ ಶ್ರಮ ಹಾಕುತ್ತಿದ್ದಾರೆ. ಈ ಮಧ್ಯೆ ಯುವ ಹೀರೋಗಳು ಎಂಟ್ರಿ ಕೊಟ್ಟು, ಸ್ಟಾರ್​​​ಗಳಾಗಿ ಬೆಳೆಯಬೇಕು ಎಂಬುದು ಅನೇಕರ ಕೋರಿಕೆ. ಈಗ ಬೆಂಗಳೂರಿನ ಆರ್​​ಆರ್​​ ನಗರ ಶಾಸಕ ಮುನಿರತ್ನ ಅವರು ಗಿಲ್ಲಿಗೆ ಇದೇ ರೀತಿಯ ಹಾರೈಸಿದ್ದಾರೆ. ಗಿಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆಯಬೇಕು ಎಂದು ಬಯಸಿದ್ದಾರೆ.

ಗಿಲ್ಲಿ ನಟ ಅವರು ಓರ್ವ ಅದ್ಭುತ ಕಲಾವಿದ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಅವರ ಬಳಿ ಸಾಕಷ್ಟು ಟ್ಯಾಲೆಂಟ ಇದೆ. ಈ ಟ್ಯಾಲೆಂಟ್​​ನ್ ನೋಡಿ ಅವರಿಗೆ ಸಿನಿಮಾ ಅವಕಾಶ ಸಿಗಬೇಕು ಎಂಬುದು ಅನೇಕರ ಕೋರಿಕೆ ಆಗಿದೆ. ಮುನಿರತ್ನ ಕೂಡ ಇದೇ ರೀತಿಯಲ್ಲಿ ಹಾರೈಸಿದ್ದಾರೆ.

ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಾಗಿತ್ತು. ಇದರ ವೇದಿಕೆ ಏರಿದ ಗಿಲ್ಲಿ ನಟ ಅವರನ್ನು ಮುನಿರತ್ನ ಸ್ವಾಗತಿಸಿದರು. ‘ದರ್ಶನ್ ಮೊದಲ ಚಿತ್ರಕ್ಕೆ ನಾನೇ ಕ್ಲ್ಯಾಪ್ ಮಾಡಿದ್ದು. ನಾನು ಗುತ್ತಿಗೆದಾರ. ನನ್ನ ಸಹೋದ್ಯೋಗಿ ಗುತ್ತಿಗೆದಾರ ರಾಮಮೂರ್ತಿ ಕ್ಲ್ಯಾಪ್ ಮಾಡೋಕೆ ಕರೆದರು. ನಾನು ಕ್ಲ್ಯಾ

ಪ್ ಮಾಡಿ ಬಂದೆ. ನಂತರ ದರ್ಶನ್ ಜೊತೆಯೇ ಸಿನಿಮಾ ಮಾಡಿದೆ’ ಎಂದು ಮುನಿರತ್ನಹೇಳಿದ್ದಾರೆ.

‘ನೀವು ದೊಡ್ಡ ನಾಯಕನಟನಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ. ಕನ್ನಡ ಚಿತ್ರರಂಗದಲ್ಲಿ ನಾಯಕ ನಟನ ಕೊರತೆ ಇದೆ. ಆ ಕೊರತೆ ಕಮ್ಮಿ ಮಾಡುವತ್ತ ಅವರು ಶ್ರಮಿಸಲಿ ಎಂದು’ ಮುನಿರತ್ನ ಹೇಳಿದರು. ಈ ಹಾರೈಕೆಯನ್ನು ಕೇಳಿದ ಬಳಿಕ ಗಿಲ್ಲಿ ನಟನಿಗೆ ಏನು ಹೇಳಬೇಕು ಎಂಬುದೇ ತಿಳಿಯಲಿಲ್ಲ.

ಇದನ್ನೂ ಓದಿ: ದರ್ಶನ್ ಭೇಟಿಗೆ ಪ್ರಯತ್ನಿಸಿದ್ರೂ ಅವಕಾಶ ಸಿಗಲಿಲ್ಲ: ಸತ್ಯ ತೆರೆದಿಟ್ಟ ಗಿಲ್ಲಿ ನಟ

ಗಿಲ್ಲಿ ನಟ ಅವರು ನಿರ್ದೇಶಕನಾಗಬೇಕು ಎಂದು ಕನಸು ಕಾಣುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಅವರು ವಿವಿಧ ಉತ್ಸವಗಳಿಗೆ ತೆರಳುತ್ತಿದ್ದಾರೆ. ಆ ಬಳಿಕ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link