Category Archives: Blog

Your blog category

ಗುಜರಾತ್: ಏರ್ ಇಂಡಿಯಾ ಅಪಘಾತವಾದ ಸ್ಥಳದಲ್ಲಿ ಸುಸಜ್ಜಿತ ವೈದ್ಯಕೀಯ ಹಾಸ್ಟೆಲ್ ಸಂಕೀರ್ಣ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ – Kannada News

ಗಾಂಧಿನಗರ, ಜೂನ್ 12: ಕಳೆದ ವರ್ಷ ಜೂನ್ 12 ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ(Air India) AI-171 ವಿಮಾನ ದುರಂತದ ಕಹಿ ನೆನಪಿಗೆ ಈಗ ಒಂದು ವರ್ಷ ತುಂಬಿದೆ. ಈ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗುಜರಾತ್ ಸರ್ಕಾರವು ಅತ್ಯಂತ ಮಾನವೀಯ ನಿರ್ಧಾರವೊಂದನ್ನು ಪ್ರಕಟಿಸಿದೆ. 260 ಮಂದಿ ಪ್ರಾಣ ಕಳೆದುಕೊಂಡ ದುರಂತದ ಆ ಜಾಗವನ್ನು ಈಗ ಭವಿಷ್ಯದ ವೈದ್ಯರನ್ನು ರೂಪಿಸುವ, ಜೀವ ಉಳಿಸುವ ಪವಿತ್ರ ಶೈಕ್ಷಣಿಕ ಕೇಂದ್ರವನ್ನಾಗಿ ಮರು ಅಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿದೆ.

ಬಿಜೆ ವೈದ್ಯಕೀಯ ಕಾಲೇಜಿನ ಹಳೆಯ ಹಾಸ್ಟೆಲ್ ಸಂಕೀರ್ಣಕ್ಕೆ ವಿಮಾನ ಡಿಕ್ಕಿ ಹೊಡೆದಿದ್ದ ಸ್ಥಳದಲ್ಲಿ, ಹಳೆಯ ಶಿಥಿಲಗೊಂಡ ರಚನೆಗಳನ್ನು ಕೆಡವಿ ಹೊಸ ಆಧುನಿಕ ಹಾಸ್ಟೆಲ್ ಸಂಕೀರ್ಣವನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ಜತೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಸಭೆಯ ವಿವರಗಳನ್ನು ಹಂಚಿಕೊಂಡ ರಾಜ್ಯ ಆರೋಗ್ಯ ಸಚಿವ ಪ್ರಫುಲ್ ಪನ್ಶೇರಿಯಾ, ಆ ಸ್ಥಳದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರಿಸುವುದು ಅತ್ಯಂತ ಅರ್ಥಪೂರ್ಣ ಮತ್ತು ಪವಿತ್ರ ಕೆಲಸವಾಗಿದೆ. ಭವಿಷ್ಯದಲ್ಲಿ ಇಲ್ಲಿ ಸಾವಿರಾರು ವೈದ್ಯರು ವಿದ್ಯಾಭ್ಯಾಸ ಮಾಡಿ ರೋಗಿಗಳ ಸೇವೆ ಸಲ್ಲಿಸಲಿದ್ದಾರೆ. ಅಗಲಿದ ಆತ್ಮಗಳಿಗೆ ಇದಕ್ಕಿಂತ ಉತ್ತಮ ಗೌರವ ಬೇರೊಂದಿಲ್ಲ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ:
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು

ಏಳು ಹೊಸ ಬ್ಲಾಕ್‌ಗಳ ಆಧುನಿಕ ಸಂಕೀರ್ಣ
ಮೇ 27 ರಂದು ಔಪಚಾರಿಕವಾಗಿ ಘೋಷಿಸಲಾದ ಈ ಪುನರಾಭಿವೃದ್ಧಿ ಯೋಜನೆಯಡಿ, ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ನಿರ್ಮಿಸಲಾಗುವುದು.

ವಸತಿ ಸೌಕರ್ಯ: ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಏಳು ಹೊಸ ಕಟ್ಟಡಗಳ (Blocks) ಹಾಸ್ಟೆಲ್ ಸಂಕೀರ್ಣ.

ಇತರ ಸೌಲಭ್ಯಗಳು: ವಿಶಾಲವಾದ ಡೈನಿಂಗ್ ಮೆಸ್, ಆಧುನಿಕ ಜಿಮ್ನಾಷಿಯಂ, ಮನರಂಜನಾ ಪ್ರದೇಶಗಳು ಮತ್ತು ಆಕರ್ಷಕ ರಸ್ತೆ ಹಾಗೂ ತೋಟದ ವಿನ್ಯಾಸ. ಈ ಬೃಹತ್ ಯೋಜನೆಗೆ ಏರ್ ಇಂಡಿಯಾ ಆರ್ಥಿಕ ನೆರವು ನೀಡುತ್ತಿದ್ದು, ಗುಜರಾತ್ ಸರ್ಕಾರವು ಹೆಚ್ಚುವರಿ ಹಣವನ್ನು ಒದಗಿಸುತ್ತಿದೆ.

ವಿಧಿವಿಜ್ಞಾನ ಮತ್ತು ವೈದ್ಯಕೀಯ ತಂಡಗಳ ಶ್ಲಾಘನೀಯ ಸೇವೆ
ದುರಂತದ ನಂತರದ ಕಠಿಣ ದಿನಗಳಲ್ಲಿ ಅಹಮದಾಬಾದ್ ಸಿವಿಲ್ ಆಸ್ಪತ್ರೆ ಮತ್ತು ವಿಧಿವಿಜ್ಞಾನ ತಂಡಗಳು ತೋರಿದ ಕರ್ತವ್ಯನಿಷ್ಠೆಯನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬೆಂಕಿಯ ತೀವ್ರತೆಯಿಂದಾಗಿ ಮೃತರ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿದ್ದಾಗ, ಈ ತಂಡಗಳು ಹಗಲಿರುಳು ಶ್ರಮಿಸಿ ಡಿಎನ್‌ಎ (DNA) ಪರೀಕ್ಷೆಗಳ ಮೂಲಕ ಅತ್ಯಂತ ಸೂಕ್ಷ್ಮವಾಗಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಕಾರ್ಯ ಮಾಡಿದ್ದವು.

ವಾರ್ಷಿಕೋತ್ಸವದ ಅಂಗವಾಗಿ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ದುರಂತದಲ್ಲಿ ಅಗಲಿದ ಆತ್ಮಗಳ ಚಿರಶಾಂತಿಗಾಗಿ ವಿಶೇಷ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿದೆ. ಒಂದು ಕಡೆ ಅಪಘಾತದ ತನಿಖೆ ಮತ್ತು ಪರಿಹಾರ ಪ್ರಕ್ರಿಯೆಗಳು ನಡೆಯುತ್ತಿದ್ದರೂ, ಮತ್ತೊಂದೆಡೆ ದುರಂತ ಸಂಭವಿಸಿದ ಜಾಗದಲ್ಲೇ ನೂರಾರು ಜೀವಗಳನ್ನು ಉಳಿಸುವ ವೈದ್ಯರ ವಸತಿ ನಿಲಯ ತಲೆಯೆತ್ತುತ್ತಿರುವುದು ಜಗತ್ತಿಗೆ ಮಾನವೀಯತೆಯ ವಿಶಿಷ್ಟ ಸಂದೇಶವನ್ನು ಸಾರುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್‌ ಟ್ವಿಸ್ಟ್: ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್‌ ರಾಜ್‌ ಹೆಸರು ಉಲ್ಲೇಖಿಸಿದ ಚಿನ್ನಯ್ಯ! – Kannada News

ನಟ ಪ್ರಕಾಶ್ ರಾಜ್ ಹಾಗೂ ಪೊಲೀಸ್ ಜತೆ ಚಿನ್ನಯ್ಯImage Credit source: TV9 Network

ಬೆಂಗಳೂರು, ಜೂನ್ 12: ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್ ಕೇಸ್‌ಗೆ (Dharmasthala Skull Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನನ್ನು ಬಳಸಿಕೊಂಡು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಚಿನ್ನಯ್ಯ (Chinnayya) ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ SIT ತನಿಖೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದಾನೆ. ಷಡ್ಯಂತ್ರದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ., ಅಜಯ್, ದಿನೇಶ್ ಸೇರಿದಂತೆ ಹಲವರ ಪಾತ್ರದ ಬಗ್ಗೆ ಉಲ್ಲೇಖಿಸಲಾಗಿದೆ. ನಟ ಪ್ರಕಾಶ್ ರಾಜ್ (Prakash Raj) ಬಗ್ಗೆಯೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಚಿನ್ನಯ್ಯ ರಿಟ್ ಅರ್ಜಿಯಲ್ಲೇನಿದೆ?

‘ವಿಠಲ್ ಗೌಡ ತಮ್ಮನ್ನು ಮಹೇಶ್ ಶೆಟ್ಟಿ ತಿಮರೋಡಿಗೆ ಪರಿಚಯಿಸಿದರು. ಧರ್ಮಸ್ಥಳದಲ್ಲಿ ಅನೇಕ ಶವಗಳನ್ನು ದಫನ್‌ ಮಾಡಲಾಗಿದೆ. ಅಲ್ಲಿ ಸಾವಿರಾರು ಶವಗಳಿವೆ ಎಂದು ಹೇಳಲು ನಿರ್ದೇಶಿಸಿದರು. ನಂತರ ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ, ಗಣೇಶ್ ಮತ್ತಿತರರು ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ಕರೆದೊಯ್ದರು. ಆಗಿಂದಾಗ್ಗೆ 5 ಸಾವಿರ, 15 ಸಾವಿರ ಹಣ ನೀಡುತ್ತಿದ್ದರು. ನಂತರ ಬೆಂಗಳೂರಿನ ಜಯಂತ್ ಮನೆಗೆ ಕರೆದೊಯ್ದು ತಲೆ ಬುರುಡೆ ಕೊಟ್ಟು ಕೈಯಲ್ಲಿ ಹಿಡಿದುಕೊಳ್ಳುವಂತೆ ಸೂಚಿಸಿ ಫೋಟೋ ತೆಗೆದುಕೊಂಡರು. ನಂತರ ವಕೀಲರ ಕಚೇರಿಗೆ ಕರೆದೊಯ್ದು ಅಲ್ಲಿ ಸಹಿ ಪಡೆದರು. ನಂತರ ಸುಜಾತಾ ಭಟ್‌ ಅವರೊಂದಿಗೆ ಗಿರೀಶ್ ಮಟ್ಟಣ್ಣನವರ್ ತಮ್ಮನ್ನೂ ದೆಹಲಿಗೆ ಸುಪ್ರೀಂಕೋರ್ಟ್‌ಗೆ ಕರೆದೊಯ್ದರು. ನಂತರ ಉಜಿರೆಗೆ ತೆರಳಿದಾಗ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ಕೂಡಿ ಹಾಕಲಾಗಿತ್ತು. ಸಂಜೆ ವೇಳೆ ಗಿರೀಶ್ ಮಟ್ಟಣ್ಣನವರ್ ಅವರ ತಲೆ, ಕಾಲುಗಳನ್ನು ಮಸಾಜ್ ಮಾಡಲು, ಮಹೇಶ್ ಶೆಟ್ಟಿ ತಿಮರೋಡಿ ಅವರಿಗೂ ಮಸಾಜ್ ಮಾಡಲು ಒತ್ತಾಯಿಸಲಾಗುತ್ತಿತ್ತು. ಅವರ ಕೃಷಿ ಭೂಮಿಯಲ್ಲಿ ಕೆಲಸ ಮಾಡಿಸುತ್ತಿದ್ದರು. ವಕೀಲರು ಹೇಳಿದಂತೆ ಕೋರ್ಟ್‌ಗೆ ಹೇಳದಿದ್ದರೆ ಕೊಂದು ಅದೇ ಜಾಗದಲ್ಲಿ ಹೂಳುವುದಾಗಿ ಬೆದರಿಸಿದ್ದರು. ಸಮೀರ್ ಎಂ.ಡಿ. ಅಜಯ್ ಅವರ ಯೂಟ್ಯೂಬ್ ಚಾನಲ್‌ಗಳಲ್ಲಿ ಅವರ ಸೂಚನೆಯಂತೆ ಹೇಳಿಸಿ ರೆಕಾರ್ಡ್ ಮಾಡಿಸಲಾಯಿತು. ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಚೆಕ್ ನೀಡುವುದಾಗಿ ಭರವಸೆ ನೀಡಿದ್ದರು’
ಎಂದು ಚಿನ್ನಯ್ಯನ ರಿಟ್ ಅರ್ಜಿಯಲ್ಲಿ ಉಲ್ಲೇಖವಾಗಿದೆ.

ಹೀಗೆ, ಬುರುಡೆ ಗ್ಯಾಂಗ್‌ನ ಷಡ್ಯಂತ್ರವನ್ನು ರಿಟ್‌ ಅರ್ಜಿಯಲ್ಲಿ ಉಲ್ಲೇಖಿಸಿರುವ ಮಾಸ್ಕ್‌ಮ್ಯಾನ್‌ ಚಿನ್ನಯ್ಯ, ಮತ್ತೊಂದು ಸ್ಫೋಟಕ ಹೆಸರನ್ನು ಬಯಲಿಗೆ ತಂದಿದ್ದಾನೆ. ಬಹುಭಾಷಾ ಖ್ಯಾತ ನಟ ಪ್ರಕಾಶ್‌ ರಾಜ್‌ ಹೆಸರನ್ನೂ ಸಹ ಚಿನ್ನಯ್ಯ ಉಲ್ಲೇಖ ಮಾಡಿದ್ದಾನೆ.

ಪ್ರಕಾಶ್‌ ರಾಜ್‌ ಹೆಸರು ಉಲ್ಲೇಖಿಸಿದ ಚಿನ್ನಯ್ಯ

ತಲೆ ಬುರುಡೆ ನೀಡಿ ಪೊಲೀಸರಿಗೆ ದೂರು ಕೊಟ್ಟ ಬಳಿಕ ಕೇರಳದ ರೆಸಾರ್ಟ್‌ಗೆ ಕರೆದೊಯ್ದರು. ಅಲ್ಲಿ ರಾತ್ರಿ 8 ಗಂಟೆಗೆ ನಟ ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ ಅರ್ಜಿದಾರರಿಗೆ ಫೋನ್ ನೀಡಿದರು. ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ಮಾತನಾಡಿ ಗಿರೀಶ್ ಮಟ್ಟಣ್ಣನವರ್ ಹೇಳಿಕೊಟ್ಟಂತೆ ಹೇಳಿಕೆ ನೀಡಬೇಕು. ತಾವು 29 ನೇ ತಾರೀಕಿಗೆ ಬಂದು ಅಪ್ಪಿಕೊಳ್ಳುವುದಾಗಿ ಹೇಳಿದರು. ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದಾಗ ಸಂಭ್ರಮಿಸಿ ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸುವ ಸಮಯ ಬಂದಿತೆಂದು ಸಂಭ್ರಮಿಸಿದರು. ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣವರ್ ಬಂಗ್ಲೆಗುಡ್ಡದ ಸ್ಥಳ ಗುರುತಿಸಿ ಅಲ್ಲಿ ಉತ್ಖನನ ನಡೆಸಿ ಸರ್ಕಾರದ ಹಣ ವ್ಯಯ ಮಾಡಿಸುವಂತೆ ಸೂಚಿಸಿದರು. ಯೋಜನೆಯ ಬಜೆಟ್ 200 ಕೋಟಿ ಇದ್ದು, ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ 50 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದರು. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ., ಅಜಯ್, ದಿನೇಶ್ ಅವರು ಹೇಳಿದ ಜಾಗಗಳನ್ನು SITಗೆ ತೋರಿಸುವಂತೆ ಸೂಚಿಸಿ, ಹಾಗೆ ಮಾಡದಿದ್ದರೆ ತಮ್ಮ ಪತ್ನಿಯನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಆದರೆ ಅಲ್ಲಿ ಯಾವುದೇ ಶವದ ಅವಶೇಷ ಸಿಗಲಿಲ್ಲ. ಧರ್ಮಸ್ಥಳದ ವಿರುದ್ಧ ಇವರ ಷಡ್ಯಂತ್ರದಿಂದ ಭೀತನಾಗಿ ಸತ್ಯ ಹೇಳಲು ತೀರ್ಮಾನಿಸಿದೆ. ನಂತರ SIT ಮುಂದೆ ಷಡ್ಯಂತ್ರದ ಹೇಳಿಕೆ ನೀಡಿದೆ ಎಂದು ಚಿನ್ನಯ್ಯ ಉಲ್ಲೇಖಿಸಿದ್ದಾನೆ.

ಇದನ್ನೂ ಓದಿ: ಧರ್ಮಸ್ಥಳಕ್ಕೆ ಕಳಂಕ ತರಲು ಬುರುಡೆ ಗ್ಯಾಂಗ್ ಹುನ್ನಾರ: 200 ಕೋಟಿ ಬಜೆಟ್ ಇಟ್ಟುಕೊಂಡು ಷಡ್ಯಂತ್ರ

ಹೀಗೆ, ಇಡೀ ಪ್ರಕರಣದಲ್ಲಿ ಸ್ಫೋಟಕ ತಿರುವು ಎಂಬಂತೆ ಪ್ರಕಾಶ್‌ ರಾಜ್‌ ಹೆಸರನ್ನೂ ಚಿನ್ನಯ್ಯ ರಿಟ್‌ ಅರ್ಜಿಯಲ್ಲಿ ಉಲ್ಲೇಖಿಸಿರುವುದು ತೀವ್ರ ಅಚ್ಚರಿ ಮೂಡಿಸಿದೆ. ತಾವು ಹೇಳಿಕೆ ನೀಡಿದ ಬಳಿಕ ಷಡ್ಯಂತ್ರ ರೂಪಿಸಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸರ್ಕಾರ, ಎಸ್‌ಐಟಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಚಿನ್ನಯ್ಯ ಕೋರಿದ್ದಾನೆ. ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರ SITಗೆ ನೋಟಿಸ್ ಜಾರಿಗೊಳಿಸಿದೆ. ಜೂನ್ 29 ರೊಳಗೆ SIT ತನಿಖೆಯ ಸ್ಥಿತಿಗತಿ ಬಗ್ಗೆ ವಿವರ ಒದಗಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಹಿಂದೂ ಸನಾತನ ಸಂಪ್ರದಾಯದಲ್ಲಿ, ಹೆಣ್ಣುಮಕ್ಕಳಂತೆ ಗಂಡು ಮಕ್ಕಳಿಗೂ ಕಿವಿ ಚುಚ್ಚಿಸುವ ಪದ್ಧತಿ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಇದನ್ನು ಕರ್ಣವೇದ ಸಂಸ್ಕಾರ ಎಂದು ಕರೆಯಲಾಗುತ್ತದೆ. ಇದು ಕೇವಲ ಅಲಂಕಾರ ಅಥವಾ ಫ್ಯಾಷನ್ ಆಗಿರದೆ, ಅನೇಕ ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಶೈಕ್ಷಣಿಕ ಪ್ರಯೋಜನಗಳನ್ನು ಹೊಂದಿದೆ.

ಸಾಮಾನ್ಯವಾಗಿ ಉಪನಯನ ಸಮಯದಲ್ಲಿ ಅಥವಾ 21 ವರ್ಷದ ಒಳಗಿನ ಮಕ್ಕಳಿಗೆ ಕಿವಿ ಚುಚ್ಚಿಸುವುದು ಶುಭ ಎಂದು ಪರಿಗಣಿಸಲಾಗುತ್ತದೆ. ಆಧ್ಯಾತ್ಮಿಕವಾಗಿ, ಇದು ದೇಹವನ್ನು ಋಣಾತ್ಮಕ ಶಕ್ತಿಗಳಿಂದ ಮತ್ತು ರಾಹು-ಕೇತುಗಳ ಕೆಟ್ಟ ಪ್ರಭಾವಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಕಿವಿ ಚುಚ್ಚಿಸಿದಾಗ ದೇಹವು ಭಿನ್ನ ಆಗಿ, ಕೆಟ್ಟ ಶಕ್ತಿಗಳ ಆವಾಹನೆಯಾಗುವುದಿಲ್ಲ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

Source link

Horoscope Today: ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 12, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠಮಾಸ, ಗ್ರೀಷ್ಮ ಋತು, ಕೃಷ್ಣಪಕ್ಷ, ದ್ವಾದಶಿ, ಭರಣಿ ನಕ್ಷತ್ರ, ಅತಿಗಂಡ ಯೋಗ, ತೈತಿಲಕರಣವನ್ನು ಒಳಗೊಂಡಿದೆ. ರಾಹುಕಾಲವು ಬೆಳಗ್ಗೆ 10:41 ರಿಂದ ಮಧ್ಯಾಹ್ನ 12:18 ರವರೆಗೆ ಇರಲಿದ್ದು, ಶುಭಕಾಲವು ಮಧ್ಯಾಹ್ನ 12:19 ರಿಂದ 1:56 ರವರೆಗೆ ಇರುತ್ತದೆ ಎಂದು ಗುರೂಜಿ ಹೇಳಿದ್ದಾರೆ.

ಶುಕ್ರವಾರವು ಶ್ರೀ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಸೂಕ್ತ ದಿನವಾಗಿದ್ದು, ಪ್ರದೋಷದ ಕಾಲವೂ ಇದಾಗಿದೆ. ಅಂತರಾಷ್ಟ್ರೀಯವಾಗಿ ವಿಶ್ವ ಬಾಲ ಕಾರ್ಮಿಕರ ದಿನಾಚರಣೆಯೂ ಇಂದೇ. ಗ್ರಹಗಳ ಸಂಚಾರದಂತೆ, ರವಿಯು ವೃಷಭ ರಾಶಿಯಲ್ಲಿ ಹಾಗೂ ಚಂದ್ರನು ಮೇಷ ರಾಶಿಯ ಭರಣಿ ನಕ್ಷತ್ರದಲ್ಲಿ ಸಂಚರಿಸುತ್ತಾನೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

Source link

Horoscope Today 12 June: ಇಂದು ಈ ರಾಶಿಯವರು ತಮ್ಮ ಪ್ರಭಾವವನ್ನು ಬಳಸುವಲ್ಲಿ ಎಡವುವರು – Kannada News

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಭರಣೀ, ಯೋಗ : ಸೌಭಾಗ್ಯ, ಕರಣ : ತೈತಿಲ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:47 – 12:24, ಯಮಗಂಡ ಕಾಲ 15:38 – 17:15, ಗುಳಿಕ ಕಾಲ 07:34 – 09:11

ಮೇಷ ರಾಶಿ :

ನಿಮ್ಮನ್ನು ಬುದ್ಧಿಯನ್ನು ಯಾರಾದರೂ ಬಳಸಿಕೊಂಡು ಕೈಬಿಡಬಹುದು. ನೀವಿಂದು ಮಂಗಲಕಾರ್ಯಗಳಿಗೆ ಹಣವನ್ನು ನೀಡುವಿರಿ. ಪರರಿಂದ ಆದ ಪ್ರಚೋದನೆಯು ತಾತ್ಕಾಲಿಕವಾಗಿ ಉಪಶಮನವಾಗಲಿದೆ. ಯೋಜನೆಯನ್ನು ಸಾಕಾರಗೊಳಿಸಲು ಒಳ್ಳೆಯ ಕಾಲ ದುಡಿಮೆಗೆ ತಕ್ಕ ಫಲ ಸಿಗಲಿದೆ. ವಿದ್ಯಾಭ್ಯಾಸದ ಬಗದಗೆ ಅತಿಯಾದ ಚಿಂತೆ ಬೇಡ. ಆಗುವುದು ಆಗಿಯೇ ಆಗುವುದು ಎಂಬ ಸತ್ಯ ತಿಳಿದಿರಿಲಿ. ಆರೋಗ್ಯವು ಹಾಳಾಗಬಹುದು.

ವೃಷಭ ರಾಶಿ :

ಆದಾಯವನ್ನು ಭೂಮಿಯ ಖರೀದಿಗೆ ಹಾಕುವ ಯೋಜನೆ ಬರುವುದು. ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಲ್ಲ ಕಡೆ ಎಂದು ಅನ್ನಿಸುತ್ತಿರಬಹುದು. ಅದನ್ನು ಆಲೋಚನೆಯಿಂದ ದೂರವಿರಿಸಿ. ಸಿಗುವ ಮನ್ನಣೆಯು ಮತ್ತೇನನ್ನೋ ಬಯಸುವ ಸಂದೇಹ ಬರಲಿದೆ. ಸೌಂದರ್ಯಪ್ರಜ್ಞೆಯು ನಿಮಗೆ ವರದಾನವೆಂದೇ ತಿಳಿಯುತ್ತದೆ. ನಿಮ್ಮ ಬಗ್ಗೆ ನಿಮ್ಮ ಶತ್ರಗಳು ವಿವರವನ್ನು ಕಲೆಹಾಕಬಹುದು. ಅತಿಯಾದ ನಿರ್ಲಕ್ಷ್ಯ ಬೇಡ.

ಮಿಥುನ ರಾಶಿ :

ಇಂದು ನಿಮ್ಮ ಸ್ವಂತ ವಾಹನದಲ್ಲಿ ಪ್ರಯಾಣ ಅನಿವಾರ್ಯವಾಗಬಹುದು, ಇಂದು ಎಲ್ಲಿಗೂ ಪ್ರಯಾಣ ಮಾಡಬೇಡಿ. ಯಾರಿಂದಲಾದರೂ ನಿಮಗೆ ಮುಖ್ಯ ಸ್ಥಾನ ದೊರೆಯಬಹುದು. ಒಳ್ಳೆಯ ಮನಸ್ಸಿನ ಪ್ರಯತ್ನಕ್ಕೆ ದೈವಾನುಕೂಲ ಲಭಿಸುವುದು. ಹಣಕಾಸಿನಲ್ಲಿ ಬಂಡವಾಳ ಹೂಡಿಕೆಗೆ ಸಮಯ ಸೂಕ್ತ. ಕುಟುಂಬದಲ್ಲಿ ಸಂತೋಷದ ಕ್ಷಣಗಳ ಅನುಭವ. ದೀರ್ಘಕಾಲದ ಅನಂತರ ಸ್ನೇಹಿತರ ಜೊತೆ ಭೇಟಿಯಾಗಬಹುದು.

ಕರ್ಕಾಟಕ ರಾಶಿ :

ಅಭಾವದ ಕಾರಣ ಅಧ್ಯಾತ್ಮದಲ್ಲಿ ಒಲವು ಮೂಡಬಹುದು. ನಿಮಗೆ ಗೌರವ ಸಿಗದ ಜಾಗದಲ್ಲಿ ಹೆಚ್ಚು ಕಾಲ ಇರಲಾರಿರಿ. ಮಕ್ಕಳಿಂದ ಸಂತೋಷ ಸಿಗುತ್ತದೆ. ಪ್ರಯಾಣದ ಸಾಧ್ಯತೆಯೂ ಇದೆ. ಆದರೆ ಸಂಜೆ ಸಮಸ್ಯೆಗಳು ಹೆಚ್ಚಾಗಬಹುದು. ಬಂಧುಗಳ ಮನೆಗೆ ಅತಿಥಿಯಾಗಿ ಆಹ್ವಾನ ಬರಬಹುದು. ಅಪಕ್ವಮನುಷ್ಯರ ಜೊತೆ ಮಾತುಕತೆಗಳು ಬೇಡ. ಅಪಮಾನವಾದೀತು. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು.

ಸಿಂಹ ರಾಶಿ :

ನಿಮ್ಮ ಕೆಲಸದ ಸ್ಥಳದಲ್ಲಿ ಸವಾಲುಗಳಿದ್ದು ಸಹಕಾರದ ಅಗತ್ಯವಲಿದೆ ಹಣಕಾಸಿನಲ್ಲಿ ಚಿಕ್ಕ ಶ್ರಮದಿಂದ ಲಾಭ ಸಾಧ್ಯ. ನಿಮ್ಮಿಂದ ಬಯಸಿದ್ದನ್ನು ನೀಡುವುದು ಕಷ್ಟ. ಸ್ನೇಹಿತರಿಂದ ಖುಷಿಯ ಸುದ್ದಿ ಕೇಳಬಹುದು. ಮನಸ್ಸು ಶಾಂತವಾಗಿರಿಸಲು ಪ್ರಯತ್ನಿಸಿ. ಅನಿರೀಕ್ಷಿತವಾಗಿ ಬಂಧುಗಳ ಭೇಟಿಯಾಗಲಿದೆ. ಆದರೂ ನಿಮ್ಮ ಯೋಜಿತವಾದ ಕಾರ್ಯಗಳು ನಿರ್ಬಿಡೆಯಿಂದ ಸಾಗುವುದು. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರಣೀಯವಾಗಬಹುದು.

ಕನ್ಯಾ ರಾಶಿ :

ಯಾರ ಒತ್ತಡಕ್ಕೂ ತಲೆಬಾಗದೇ ಇದ್ದರೆ ನಿಮ್ಮನ್ನು ಅನ್ಯರೀತಿಯಲ್ಲಿ ನೋಡಬಹುದು. ವರ್ಗಾವಣೆಗಾಗಿ ಕಾಯುತ್ತಿದ್ದವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ವಿದೇಶದಲ್ಲಿ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಬಾಂಧವ್ಯ ಸ್ಥಿರತೆಗೆ ಬದ್ಧಮನಸ್ಸಿರುವುದು. ಅವುಗಳಿಂದ ದೂರವಿರುವುದು ಉಚಿತ. ನಿಮ್ಮ ಅಹಂಕಾರಕ್ಕೆ ಪೆಟ್ಟುಬೀಳುವುದು. ಯಾವ ವಿವರಗಳನ್ನೂ ಕೊಡಬೇಡಿ. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು.

ತುಲಾ ರಾಶಿ :

ನೀವು ಏನೂ ಗೊತ್ತಿಲ್ಲದವರಂತೆ ವರ್ತಿಸಿ, ಮುಂಬರುವ ಸಂಕಟದಿಂದ ಬಚಾವಾಗುವಿರಿ. ನಿರ್ಧಾರಗಳ ಮೇಲೆ ಸ್ಥಿರವಾಗಿರುವುದು ಯಶಸ್ಸು ತರುತ್ತದೆ. ಹಣಕಾಸಿನಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಪರರ ಸಂಪತ್ತಿನ ಬಗ್ಗೆ ಆಸೆ ಬೇಡ. ಕುಟುಂಬದ ಸದಸ್ಯರೊಂದಿಗೆ ಆಸ್ತಿಯ ವಿಚಾರವಾಗಿ ಸುದೀರ್ಘ ಚರ್ಚೆ. ಯಾರಮೇಲಾದರೂ ಪ್ರೀತಿಯು ಉಂಟಾಗಬಹುದು. ಸುಮ್ಮನೇ ಕುಳಿತು ಸಮಯವನ್ನು ವ್ಯರ್ಥಮಾಡಬೇಡಿ.

ವೃಶ್ಚಿಕ ರಾಶಿ :

ಸ್ನೇಹಿತರು ನಿಮಗೆ ಉತ್ತಮ ಕೆಲಸ ಹಾಗು ಸಂಬಳದ ಸ್ಥಳವನ್ನು ತಿಳಿಸಬಹುದು. ನಿರೀಕ್ಷೆ ಇಟ್ಟುಕೊಳ್ಳುವುದರಿಂದ ನಿರಾಶೆ. ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಳ್ಳಿ. ಯಾರದೋ ಸಂತೋಷಕ್ಕೆ ನೀವು ಬಲಿಯಾಗುವ ಸಂದರ್ಭ ಬರಬಹುದು. ಹಣಕಾಸಿನ ವಿಚಾರದಲ್ಲಿ ಉತ್ತಮ ಅವಕಾಶ ಸಿಗಬಹುದು. ಓಡಾಟ ಬೇಡವೆಂದು ಕುಳಿತ ನಿಮಗೆ ಅನಿವಾರ್ಯದ ಪ್ರಯಾಣವು ಬರಲಿದೆ. ಅಪರಿಚಿತರ ವ್ಯವಹಾರದಲ್ಲಿ ಎಷ್ಟೇ ಜಾಣ್ಮೆಯಿದ್ದರೂ ಸಾಲದು.‌

ಧನು ರಾಶಿ :

ಕುಟುಂಬದವರ ಜೊತೆ ಭಾವನಾತ್ಮಕ ಮಾತುಕತೆ ನಡೆಯಬಹುದು. ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ಶಾಂತಿ ಮತ್ತು ತಾಳ್ಮೆಯನ್ನು ಕಾಪಾಡಿಕೊಳ್ಳಿ, ಹಣಕಾಸು ಸ್ಥಿತಿ ಸ್ಥಿರವಾಗಿರುತ್ತದೆ. ಸ್ನೇಹಿತರಿಂದ ಸಹಾಯ ನಿರೀಕ್ಷಿಸಬಹುದು. ಉದ್ವೇಗದ ಮಾತುಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಕುಟುಂಬದವರು ನಿಮ್ಮನ್ನು ಬಹಳ ಪ್ರೀತಿಸುವರು. ಅವರಿಗೆ ಸ್ವಲ್ಪ ಸಮಯ ಕೊಡಿ. ಹಣವನ್ನು ಉಳಿಸಲು ಪ್ರಯತ್ನಶೀಲರಾಗುವಿರಿ.

ಮಕರ ರಾಶಿ :

ಇದನ್ನೂ ಓದಿ: ಕೇತುವಿನ ಮೇಲಿದೆ ಕುಜನ ದೃಷ್ಟಿ: ಯಾರಿಗೆ ಒಲಿಯಲಿದೆ ಪೂರ್ಣ ರಾಜಯೋಗ? ಯಾರಿಗೆ ಧನಲಾಭ?

ನಿಮ್ಮನ್ನು ಇಷ್ಟಪಟ್ಟವರಿಗೆ ಇಂದು ನಿಮ್ಮಿಂದ‌ ಅಸಮಾಧಾನವಾಗುವ ಸಾಧ್ಯತೆ ಇದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಶೋಧನೆ ಮಾಡುವ ಸಂಭವ ಬರಲಿದೆ. ನಿಮ್ಮ ಮಾತುಗಳೇ ನಿಮ್ಮ ಶಕ್ತಿ ಸಾಮಾಜಿಕ ವಲಯದಲ್ಲಿ ಮೆರೆಯುವ ಅವಕಾಶ ಇದೆ. ಉದ್ಯೋಗದಲ್ಲಿ ಉನ್ನತಿ ಸೂಚನೆಗಳು ಸಿಗಬಹುದು. ಅತಿಯಾದ ಭಾವನೆಗಳಿಂದ ದೂರವಿರಿ. ಹಣದ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ.

ಕುಂಭ ರಾಶಿ :

ಮನೆಯವರ ಸಹಾಯವು ಅನಿವಾರ್ಯ ಸ್ಥಿತಿ ಬಂದಾಗ ಸಿಗಲಿದೆ. ಅನಿರೀಕ್ಷಿತ ಲಾಭದಿಂದ ದಾರಿ ತಪ್ಪಬಹುದು. ಮನೆಯವರ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಚ್ಛಿಸುವಿರಿ. ಆತ್ಮೀಯರ ಸಹಾಯದಿಂದ ಸಮಸ್ಯೆಗಳ ಪರಿಹಾರ ಸಿಗುತ್ತದೆ. ಹಣದ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ವಿದೇಶದಿಂದ ಉದ್ಯೋಗಕ್ಕೆ ಕರೆ ಬರಲಿದೆ. ಬೇಸರಿಸದೇ ಬಂದುದನ್ನು ಬಂದಂತೆ ಎದುರಿಸವುದು ನಿಮಗೆ ಸ್ವಭಾವಸಿದ್ಧ. ನೀವು ಬಯಸಿದ ಕೆಲಸವನ್ನು ಮಾಡುವಿರಿ.

ಮೀನ ರಾಶಿ :

ಯೋಗ ಹಾಗೂ ಧ್ಯಾನದಿಂದ ಶ್ರಮದ ಪರಿಹಾರವಾಗಲಿದೆ. ಆರ್ಥಿಕವಾಗಿ ನಷ್ಟ ಎದುರಾಗುವುದು. ಇಂದಿನ ನಿಮ್ಮ ಕರ್ಮಕ್ಕೆ ಅನ್ಯರ ಸಹಕಾರ ಇರದು. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಶಾಂತಿ ಸಿಗಬಹುದು. ದೂರದ ಗೆಳೆಯರಿಂದ ಶುಭ ಸುದ್ದಿ ಬರುತ್ತದೆ. ಧಾರ್ಮಿಕ ಕ್ಷೇತ್ರದವರಿಗೆ ಹೊಸ ಅವಕಾಶ. ವೃತ್ತಿಯ ಸ್ಥಳದಲ್ಲಿ ನೀವು ಸಂತೋಷವಾಗಿ ಕೆಲಸಮಾಡುವಿರಿ. ಸ್ನೇಹಿತರ ಮಾತಿನಿಂದ ವಿದೇಶಕ್ಕೆ ಹೋಗುವ ಆಸೆ ಅತಿಯಾಗುವುದು.

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ! – Kannada News

ಮುಂಬೈ, ಜೂನ್ 11: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದಿಯೋನಿ ತಾಲೂಕಿನ ಬಂಬಾಲಿ ಗ್ರಾಮದಲ್ಲಿ ದೇಶವನ್ನೇ ಬೆಚ್ಚಿಬೀಳಿಸುತ್ತಿರುವ ಹೃದಯವಿದ್ರಾವಕ ಘಟನೆ (Viral News) ಬೆಳಕಿಗೆ ಬಂದಿದೆ. ದೇಶಕ್ಕೆ ಅನ್ನ ನೀಡುವ ರೈತ ಕುಟುಂಬದ ದುಃಸ್ಥಿತಿಯನ್ನು ನೋಡಿ ನೆಟ್ಟಿಗರು ಮರುಕಪಡುತ್ತಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಸಿಡಿಲಿನ ಹೊಡೆತಕ್ಕೆ ಬಂಬಲಿ ಗ್ರಾಮದ ಬಡ ರೈತ ಕಾಶಿನಾಥ್ ಗಾಯಕ್ವಾಡ್ ಅವರಿಗೆ ಸೇರಿದ ಎತ್ತು ಸಾವನ್ನಪ್ಪಿತು. ಖಾರಿಫ್ ಋತು ಆರಂಭವಾಗಿ ಕೃಷಿ ಕೆಲಸಗಳು ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಅವರ ಜೀವನೋಪಾಯಕ್ಕೆ ಆಧಾರವಾಗಿದ್ದ ಎತ್ತಿನ ಸಾವಿನಿಂದ ಕೃಷಿ ಕೆಲಸ ನಿಂತುಹೋಗಬಹುದು ಎಂಬ ಆತಂಕ ಅವರನ್ನು ಕಾಡಿತು. ಮಾರುಕಟ್ಟೆಯಲ್ಲಿ ಮತ್ತೊಂದು ಎತ್ತನ್ನು ಖರೀದಿಸಲು ಆ ಬಡ ರೈತನಿಗೆ ಆರ್ಥಿಕ ಸಾಮರ್ಥ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ನೇಗಿಲಿನ ಒಂದು ಬದಿ ಒಂದು ಎತ್ತನ್ನು ಕಟ್ಟಿ, ಇನ್ನೊಂದು ಬದಿಗೆ ಹೆಂಡತಿಯ ಭುಜಕ್ಕೆ ನೊಗ ಇಟ್ಟು ಆ ರೈತ ಉಳುಮೆ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ನೆಟಿಜನ್‌ಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ದೃಶ್ಯಗಳನ್ನು ನೋಡಿದ ಅವರು ಸ್ಥಳೀಯ ಅಧಿಕಾರಿಗಳು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸಂಬಂಧಿತ ಸಚಿವರು ತಕ್ಷಣ ಪ್ರತಿಕ್ರಿಯಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

(Video Source: Rohit Pawar X Account)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

370 ರೂ. ಬಿರಿಯಾನಿ ವಿವಾದ: ಪ್ರಣಿತ್ ಮೋರೆ, ಹಿಮಾಂಶು, ಡಾ. ಸೆಜಲ್​ಗೆ ಮಹಿಳಾ ಆಯೋಗ ನೋಟಿಸ್ – Kannada News

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ‘370 ರೂಪಾಯಿ ಬಿರಿಯಾನಿ’ ಜೋಕ್ ಮತ್ತು ಮೃತದೇಹಗಳ ಕುರಿತಾದ ಆಕ್ಷೇಪಾರ್ಹ ಹಾಸ್ಯ ಪ್ರಹಸನಗಳು ಈಗ ಸ್ಟ್ಯಾಂಡಪ್ ಕಾಮಿಡಿಯನ್‌ಗಳಿಗೆ ಭಾರೀ ಸಂಕಷ್ಟ ತಂದಿಟ್ಟಿವೆ. ಮಹಿಳೆಯರ ಕುರಿತು ಅಶ್ಲೀಲ ಹಾಗೂ ಅವಹೇಳನಕಾರಿ ಕಾಮೆಂಟ್ ಮಾಡಿದ ಆರೋಪದ ಮೇಲೆ ಕಾಮಿಡಿಯನ್ ಪ್ರಣಿತ್ ಮೋರೆ (Pranit More), ಹಿಮಾಂಶು ಜಾಂಗ್ರಾ (Himanshu Jangra) ಮತ್ತು ಡಾ. ಸೇಜಲ್ ಪವಾರ್ (Sejal Pawar) ವಿರುದ್ಧ ಮುಂಬೈ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮತ್ತೊಂದೆಡೆ, ಈ ಘಟನೆಯನ್ನು ರಾಷ್ಟ್ರೀಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಜೂನ್ 22ರಂದು ಸಂಜೆ 4 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಆಯೋಗವು ಸಮನ್ಸ್ ಜಾರಿ ಮಾಡಿದೆ.

ಹರಿಯಾಣದ ಗುರುಗ್ರಾಮದಲ್ಲಿ ಪ್ರಣಿತ್ ಮೋರೆ ನಡೆಸಿಕೊಡುತ್ತಿದ್ದ ಸ್ಟ್ಯಾಂಡಪ್ ಕಾಮಿಡಿ ಶೋ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಹಿಮಾಂಶು ಜಾಂಗ್ರಾ ಎಂಬಾತ ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಕಾಮೆಂಟ್ ಮಾಡಿದ್ದ. ತಾನು ಡೇಟಿಂಗ್‌ಗೆ ಹೋದಾಗ ಹುಡುಗಿಗೆ 370 ರೂಪಾಯಿ ಕೊಟ್ಟು ಚಿಕನ್ ಬಿರಿಯಾನಿ ಕೊಡಿಸಿದ್ದೆ. ಅವಳು ಮನೆಗೆ ಬಿಡಲು ಕೇಳಿದಾಗ, ‘ನಾನು 370 ರೂಪಾಯಿ ಖರ್ಚು ಮಾಡಿದ್ದೇನೆ, ಅದನ್ನು ವಸೂಲಿ ಮಾಡದೆ ಬಿಡುವುದಿಲ್ಲ’ ಎಂದು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾಗಿ ಹೇಳಿಕೊಂಡಿದ್ದ. ಇದನ್ನು ಕೇಳಿ ಕಾಮಿಡಿಯನ್ ಪ್ರಣಿತ್ ಮೋರೆ ನಕ್ಕಿದ್ದರು.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಡೇಟಿಂಗ್ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಮತ್ತು ಬಲವಂತವನ್ನು ಹಾಸ್ಯದ ರೂಪದಲ್ಲಿ ವೈಭವೀಕರಿಸಿದ್ದಕ್ಕೆ ನೆಟ್ಟಿಗರು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಇದೇ ಶೋನ ಮತ್ತೊಂದು ಕ್ಲಿಪ್‌ನಲ್ಲಿ ಡಾ. ಸೆಜಲ್ ಪವಾರ್ ಎಂಬಾಕೆ, ವೈದ್ಯಕೀಯ ಶಿಕ್ಷಣಕ್ಕಾಗಿ ಬಳಸುವ ಮೃತದೇಹಗಳ ಬಗ್ಗೆ ಮತ್ತು ಮೃತ ಪುರುಷರ ದೇಹಗಳ ಬಗ್ಗೆ ಅತ್ಯಂತ ಅಶ್ಲೀಲ ಹಾಗೂ ವಿಕೃತವಾಗಿ ಮಾತನಾಡಿದ್ದರು. ಇದು ಸತ್ತವರ ಘನತೆಗೆ ಅಪಚಾರ ಎಸಗಿದಂತೆ ಇದೆ ಎಂದು ಸಾರ್ವಜನಿಕರು ಹಾಗೂ ಸೈಬರ್ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಾಹಟ್ಕರ್ ಅವರು ಹರಿಯಾಣ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು, ಈ ಬಗ್ಗೆ ತಕ್ಷಣವೇ ಕಟ್ಟುನಿಟ್ಟಿನ ಮತ್ತು ಸಮಯದ ಮಿತಿಯೊಳಗೆ ಕ್ರಮ ಕೈಗೊಳ್ಳಬೇಕು ಹಾಗೂ 7 ದಿನಗಳ ಒಳಗಾಗಿ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಇನ್‌ಸ್ಟಾಗ್ರಾಮ್ ಖಾತೆ ಡಿಆಕ್ಟಿವೇಟ್ ಮಾಡಿದ ಪ್ರಣಿತ್ ಮೋರೆ

‘ಮಹಿಳೆಯರ ಒಪ್ಪಿಗೆ, ಘನತೆ ಮತ್ತು ಸ್ವಾತಂತ್ರ್ಯವನ್ನು ಕೇವಲ ಮನರಂಜನೆಗಾಗಿ ಬಳಸಿಕೊಳ್ಳುವುದು ಮತ್ತು ಇಂತಹ ವಿಕೃತ ನಡವಳಿಕೆಗಳನ್ನು ಸಾಮಾನ್ಯೀಕರಿಸುವುದು ಸಮಾಜದಲ್ಲಿ ಲಿಂಗ ಆಧಾರಿತ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದಂತೆ ಆಗುತ್ತದೆ’ ಎಂದು ಮಹಿಳಾ ಆಯೋಗ ಕಳವಳ ವ್ಯಕ್ತಪಡಿಸಿದೆ. ಸದ್ಯ ಮಹಾರಾಷ್ಟ್ರ ಸೈಬರ್ ಪೊಲೀಸರು ಮೂವರ ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರೇಯಸಿಯನ್ನು ಸೇತುವೆಯಿಂದ ತಳ್ಳಿ ಕೊಂದು, ಅಪಘಾತವೆಂದು ಬಿಂಬಿಸಿದ ಪ್ರೇಮಿ! – Kannada News

ಭುವನೇಶ್ವರ, ಜೂನ್ 11: ಒಡಿಶಾದ ಗಂಜಾಂ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಯುವತಿಯೊಬ್ಬಳು ತನ್ನನ್ನು ಮದುವೆಯಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ ಕಾರಣಕ್ಕಾಗಿ ಆಕೆಯ ಪ್ರಿಯಕರನೇ ಆಕೆಯನ್ನು ಕ್ರೂರವಾಗಿ ಕೊಂದಿದ್ದಾನೆ. ಮೃತರನ್ನು ಅಂಬಿಕಾ ಎಂದು ಗುರುತಿಸಲಾಗಿದೆ. ಆರೋಪಿಯು ಈ ಕೊಲೆಯನ್ನು ರಸ್ತೆ ಅಪಘಾತ (Accident) ಎಂದು ಬಿಂಬಿಸಲು ಸಕಲ ಪ್ರಯತ್ನ ನಡೆಸಿದ್ದರೂ, ಪೊಲೀಸರ ಚುರುಕಿನ ತನಿಖೆಯಿಂದಾಗಿ ಸತ್ಯ ಹೊರಬಂದಿದೆ. ದಿಗಪಹಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಿಮಖಂಡಿ ಪೆಂತ್ ನಿವಾಸಿ ರಾಕೇಶ್ ಆಚಾರ್ಯ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ರಾಕೇಶ್ ಮತ್ತು ಅಂಬಿಕಾ ಇಬ್ಬರೂ ದೀರ್ಘಕಾಲದಿಂದ ಪ್ರೀತಿಸುತ್ತಿದ್ದರು. ಅಂಬಿಕಾ ಪಿಯುಸಿ ಮುಗಿಸಿ, ಡಾಕ್ಟರ್ ಆಗಬೇಕೆಂಬ ದೊಡ್ಡ ಕನಸಿನೊಂದಿಗೆ ಬೆಹರಾಂಪುರದಲ್ಲಿ ಉಳಿದುಕೊಂಡು ನೀಟ್ (NEET) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಇತ್ತೀಚಿನ ದಿನಗಳಲ್ಲಿ ಅಂಬಿಕಾ ತಾವಿಬ್ಬರೂ ಮದುವೆಯಾಗೋಣ ಎಂದು ರಾಕೇಶ್‌ಗೆ ಒತ್ತಾಯ ಮಾಡಲಾರಂಭಿಸಿದ್ದಳು. ಆದರೆ ಮದುವೆಯ ಜವಾಬ್ದಾರಿ ತೆಗೆದುಕೊಳ್ಳಲು ಇಷ್ಟವಿಲ್ಲದ ರಾಕೇಶ್, ಆಕೆಯನ್ನು ತನ್ನ ಹಾದಿಯಿಂದ ಶಾಶ್ವತವಾಗಿ ಮುಗಿಸಲು ಸಂಚು ರೂಪಿಸಿದ್ದ.

ಇದನ್ನೂ ಓದಿ: ಐಶಾರಾಮಿ ಜೀವನಕ್ಕಾಗಿ ಉಂಡ ಮನೆಗೇ ಕನ್ನ: 25 ಲಕ್ಷ ಹಣ ಕದ್ದು ಜೈಲುಪಾಲಾದ ನೇಪಾಳಿ ದಂಪತಿ

ಜೂನ್ 7ರಂದು ರಾಕೇಶ್ ಒಟ್ಟಿಗೆ ಸಮಯ ಕಳೆಯುವ ನೆಪದಲ್ಲಿ ಅಂಬಿಕಾಳನ್ನು ತನ್ನ ಬೈಕ್‌ನಲ್ಲಿ ಗೋಪಾಲಪುರಕ್ಕೆ ಕರೆದೊಯ್ದಿದ್ದ. ದಿನವಿಡೀ ಇಬ್ಬರೂ ಒಟ್ಟಿಗೆ ಕಳೆದಿದ್ದಾರೆ. ನಂತರ ಅಂದು ತಡರಾತ್ರಿ ಇಬ್ಬರೂ ಬೈಕ್‌ನಲ್ಲಿ ವಾಪಾಸ್ ಬರುತ್ತಿದ್ದಾಗ, ರಾಕೇಶ್ ಅಂಕುಲಿ ಮೇಲ್ಸೇತುವೆ ಬಳಿ ಬೈಕ್ ನಿಲ್ಲಿಸಿದ್ದಾನೆ. ಆಕೆ ಏನಾಯಿತೆಂದು ಯೋಚಿಸುವಷ್ಟರಲ್ಲೇ ಆಕೆಯನ್ನು ಮೇಲ್ಸೇತುವೆಯಿಂದ ಕೆಳಗೆ ತಳ್ಳಿದ್ದಾನೆ. ಆಕೆ ಸೇತುವೆಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಕೊಲೆಯ ನಂತರ ಆರೋಪಿ ರಾಕೇಶ್ ಇದೊಂದು ಭೀಕರ ರಸ್ತೆ ಅಪಘಾತ ಎಂದು ಜಗತ್ತನ್ನು ನಂಬಿಸಲು ನಾಟಕವಾಡಿದ್ದಾನೆ. ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಆಕಸ್ಮಿಕ ಅಪಘಾತದಲ್ಲಿ ಅಂಬಿಕಾ ತೀರಿಕೊಂಡಿದ್ದಾಳೆ ಎಂದು ಆತನೇ ಸ್ವತಃ ಯುವತಿಯ ಕುಟುಂಬಸ್ಥರಿಗೆ ಫೋನ್ ಮಾಡಿ ತಿಳಿಸಿದ್ದಾನೆ. ಆದರೆ, ಘಟನೆಯ ಬಗ್ಗೆ ಆತ ನೀಡಿದ ಹೇಳಿಕೆಗಳಿಗೂ ಮತ್ತು ಪರಿಸ್ಥಿತಿಗೂ ಹೊಂದಾಣಿಕೆಯಾಗುತ್ತಿರಲಿಲ್ಲ. ರಾಕೇಶ್ ಮಾತಿನಲ್ಲಿದ್ದ ಗೊಂದಲಗಳನ್ನು ಗಮನಿಸಿದ ಅಂಬಿಕಾಳ ಸೋದರಮಾವ ಕನ್ಹೂ ಜೇನಾ ಅವರಿಗೆ ತೀವ್ರ ಅನುಮಾನ ಮೂಡಿ, ಬೈದ್ಯನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಒಂದೇ ಕುಟುಂಬದ ಮೂವರು ನಿಗೂಢ ಸಾವು: ಡೆತ್​​ ನೋಟ್​​ನಿಂದ ಸಾವಿನ ರಹಸ್ಯ ಬಯಲಿಗೆ

ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಕಲೆಹಾಕಿದ್ದರು. ತನಿಖೆ ಮುಂದುವರಿದಂತೆ ಇದು ಕೇವಲ ಸಾಮಾನ್ಯ ರಸ್ತೆ ಅಪಘಾತವಲ್ಲ, ಬದಲಿಗೆ ವ್ಯವಸ್ಥಿತವಾಗಿ ನಡೆದ ಕೊಲೆ ಎಂಬುದಕ್ಕೆ ಪೊಲೀಸರಿಗೆ ಗಟ್ಟಿಯಾದ ಸುಳಿವುಗಳು ಸಿಕ್ಕಿತ್ತು. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ರಾಕೇಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Women’s T20 World Cup 2026: ಮಹಿಳಾ ಟಿ20 ವಿಶ್ವಕಪ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿವೆ – Kannada News

10ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ (Women’s T20 World Cup) ಜೂನ್ 12 ರಂದು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯ ಆತಿಥೇಯ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಫೈನಲ್ ಪಂದ್ಯ ಜುಲೈ 5 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಈ ಬಾರಿ, 12 ತಂಡಗಳು 24 ದಿನಗಳಲ್ಲಿ 33 ಪಂದ್ಯಗಳನ್ನು ಆಡಲಿವೆ. ಇದು ಇದುವರೆಗೆ ನಡೆದ ಅತಿದೊಡ್ಡ ಮಹಿಳಾ ಟಿ20 ವಿಶ್ವಕಪ್ ಆಗಲಿದ್ದು, ಈ ಟೂರ್ನಿಯಲ್ಲಿ ಏಕದಿನ ಚಾಂಪಿಯನ್ ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 14 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ.

ಮಹಿಳಾ ಟಿ20 ವಿಶ್ವಕಪ್ ಇತಿಹಾಸ

ಮೊದಲ ಮಹಿಳಾ ಟಿ20 ವಿಶ್ವಕಪ್ 2009 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಿತು. ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು ಮತ್ತು ಆತಿಥೇಯ ಇಂಗ್ಲೆಂಡ್ ಉದ್ಘಾಟನಾ ಚಾಂಪಿಯನ್ ಆಯಿತು. ಮೊದಲ ಮೂರು ವಿಶ್ವಕಪ್‌ಗಳಲ್ಲಿ ಎಂಟು ತಂಡಗಳು ಸ್ಪರ್ಧಿಸಿದ್ದವು. 2014 ರಲ್ಲಿ ತಂಡಗಳ ಸಂಖ್ಯೆ 10 ಕ್ಕೆ ಏರಿತು. ಇದೀಗ 2026 ರಲ್ಲಿ, ಮೊದಲ ಬಾರಿಗೆ 12 ತಂಡಗಳು ಭಾಗವಹಿಸುತ್ತವೆ. ಇಂಗ್ಲೆಂಡ್ 17 ವರ್ಷಗಳ ನಂತರ ವಿಶ್ವಕಪ್ ಅನ್ನು ಆಯೋಜಿಸುತ್ತಿದೆ.

ಯಾವ ಸ್ವರೂಪದಲ್ಲಿ ಪಂದ್ಯಾವಳಿ ನಡೆಯಲಿದೆ?

12 ತಂಡಗಳನ್ನು ತಲಾ ಆರು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ತಂಡಗಳು ಗುಂಪು ಹಂತದಲ್ಲಿ ಪರಸ್ಪರ ಆಡುತ್ತವೆ. ನಂತರ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಸೆಮಿಫೈನಲ್ ವಿಜೇತರು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

ಯಾವ ತಂಡ ಯಾವ ಗುಂಪಿನಲ್ಲಿದೆ?

  • ಎ ಗುಂಪು: ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್
  • ಬಿ ಗುಂಪು: ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್, ಸ್ಕಾಟ್ಲೆಂಡ್.

ಪಂದ್ಯಗಳು ಯಾವ ಮೈದಾನದಲ್ಲಿ ನಡೆಯಲಿವೆ?

ಪಂದ್ಯಾವಳಿಯ ಎಲ್ಲಾ 33 ಪಂದ್ಯಗಳು ಇಂಗ್ಲೆಂಡ್‌ನಾದ್ಯಂತ ಏಳು ಕ್ರೀಡಾಂಗಣಗಳಲ್ಲಿ ನಡೆಯಲಿದ್ದು, ಫೈನಲ್ ಪಂದ್ಯ ಲಾರ್ಡ್ಸ್‌ನಲ್ಲಿ ಮತ್ತು ಎರಡೂ ಸೆಮಿಫೈನಲ್ ಪಂದ್ಯಗಳು ದಿ ಓವಲ್‌ನಲ್ಲಿ ನಡೆಯಲಿವೆ.

ODI World Cup 2027: ಈ ದಿನದಿಂದ ಆರಂಭವಾಗಲಿದೆ 2027 ರ ಏಕದಿನ ವಿಶ್ವಕಪ್‌; ವೇಳಾಪಟ್ಟಿ ಬಹಿರಂಗ

ಪಂದ್ಯಾವಳಿಯನ್ನು ಎಲ್ಲಿ ವೀಕ್ಷಿಸಬಹುದು?

ಭಾರತದ ವೀಕ್ಷಕರು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಎಲ್ಲಾ ವಿಶ್ವಕಪ್ ಪಂದ್ಯಗಳ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಭಾರತದ ಪ್ರದರ್ಶನ ಹೇಗಿದೆ?

ಭಾರತ ಇದುವರೆಗೆ ನಡೆದಿರುವ ಒಂಬತ್ತು ವಿಶ್ವಕಪ್‌ಗಳಲ್ಲಿಯೂ ಆಡಿದೆ. 2020 ರಲ್ಲಿ, ತಂಡವು ಮೊದಲ ಬಾರಿಗೆ ಫೈನಲ್ ತಲುಪಿತ್ತಾದರೂ ಆಸ್ಟ್ರೇಲಿಯಾ ವಿರುದ್ಧ ಸೋತಿತು. ಆದಾಗ್ಯೂ ಟೀಂ ಇಂಡಿಯಾ ಇದುವರೆಗೆ ನಾಲ್ಕು ಬಾರಿ ಸೆಮಿಫೈನಲ್ ತಲುಪಿದೆ. ಭಾರತವು ಪಂದ್ಯಾವಳಿಯಲ್ಲಿ 40 ಪಂದ್ಯಗಳನ್ನು ಆಡಿದ್ದು, 22 ಪಂದ್ಯಗಳನ್ನು ಗೆದ್ದಿದ್ದರೆ 18 ಪಂದ್ಯಗಳಲ್ಲಿ ಸೋತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧರ್ಮಸ್ಥಳಕ್ಕೆ ಕಳಂಕ ತರಲು ಬುರುಡೆ ಗ್ಯಾಂಗ್ ಹುನ್ನಾರ: 200 ಕೋಟಿ ಬಜೆಟ್ ಇಟ್ಟುಕೊಂಡು ಷಡ್ಯಂತ್ರ – Kannada News

ಬೆಂಗಳೂರು,( ಜೂನ್ 11): ಧರ್ಮಸ್ಥಳ ಬುರುಡೆ ಕೇಸ್‌ನ ಮತ್ತೊಂದು ಸ್ಫೋಟಕ ಸಂಗತಿ ಹೊರಬಿದ್ದಿದೆ. ಬುರುಡೆ ಗ್ಯಾಂಗ್ ಹೇಗೆಲ್ಲ ಸಂಚು ರೂಪಿಸಿತ್ತು ಎಂಬ ವಿಚಾರ ಬಯಲಾಗಿದೆ. ಬುರುಡೆ ಚಿನ್ನಯ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯಲ್ಲಿ ಹಲವು ಸ್ಫೋಟಕ ಸಂಗತಿ ಹೊರಬಿದ್ದಿದೆ. ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖಿಸಿರೋ ಚಿನ್ನಯ್ಯ, ಪ್ರಕಾಶ್ ರಾಜ್ ಮಾತನಾಡಿರೋದ ಸಂಗತಿಯನ್ನ ಉಲ್ಲೇಖಿಸಿದ್ದಾನೆ.

ಚಿನ್ನಯ್ಯ ರಿಟ್ ಅರ್ಜಿಯಲ್ಲಿ ಏನಿದೆ
‘ಒಂದು ದಿನ ರಾತ್ರಿ ಸುಮಾರು 8:00 ಗಂಟೆಗೆ, ಗಿರೀಶ್ ಮಟ್ಟಣ್ಣವರ್ ನಟ ಪ್ರಕಾಶ್ ರಾಜ್ ಅವರಿಗೆ ದೂರವಾಣಿ ಕರೆ ಮಾಡಿ ನನಗೆ ಫೋನ್ ನೀಡಿದರು. ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ಮಾತನಾಡಿ, ಗಿರೀಶ್ ಮಟ್ಟಣ್ಣವರ್ ಅವರು ಏನು ಹೇಳಬೇಕೆಂದು ಸೂಚಿಸಿದ್ದಾರೋ ಅದನ್ನು ಅಧಿಕಾರಿಗಳ ಮುಂದೆ ಹೇಳಬೇಕು. ಅವರು ಹೇಳಿದಂತೆ ಕೇಳಿದರೆ ಜೂನ್ 29 ರಂದು ಬಂದು ಅಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದರು. ಹೀಗೆಂದು ಹೇಳಿದ್ದಾಗಿ ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖಿಸಿ ಚಿನ್ನಯ್ಯ ರಿಟ್ ಅರ್ಜಿಯಲ್ಲಿ ತಿಳಿಸಿದ್ದಾನೆ. ಅಷ್ಟೇ ಅಲ್ಲ, ಈ ಷಡ್ಯಂತ್ರಕ್ಕಾಗಿ ನಡೆದಿದ್ದು ಬರೋಬ್ಬರಿ 200 ಕೋಟಿ ವಹಿವಾಟು ಅಂತಾ ಸ್ಫೋಟಕ ಸಂಗತಿಯನ್ನ ಉಲ್ಲೇಖಿಸಿದ್ದಾನೆ.

ಧರ್ಮಸ್ಥಳಕ್ಕೆ ಕಳಂಕ ತರಲು ಬುರುಡೆ ಗ್ಯಾಂಗ್‌ ಹುನ್ನಾರ ಮಾಡಿರೋದು ಚಿನ್ನಯ್ಯನ ರಿಟ್ ಅರ್ಜಿಯಲ್ಲಿ ಬಯಲಾಗಿದೆ. 200 ಕೋಟಿ ಬಜೆಟ್ ಇಟ್ಕೊಂಡು ಗ್ಯಾಂಗ್ ಷಡ್ಯಂತ್ರ ಮಾಡಿತ್ತಂತೆ. ಷಡ್ಯಂತ್ರಕ್ಕೆ ಅಂತಾರಾಜ್ಯ ಮಟ್ಟದ ಆರ್ಥಿಕ ವಹಿವಾಟು ನಡೆದಿದೆ ಎಂದಿದ್ದಾನೆ. ಅಷ್ಟೇ ಅಲ್ಲ, ಷಡ್ಯಂತ್ರ ಸಕ್ಸಸ್ ಆದ್ರೆ 50 ಲಕ್ಷ ಕೊಡ್ತೀನಿ ಅಂತಾ ಆಮಿಷ ವೊಡ್ಡಿದ್ರು ಅಂತಾ ಚಿನ್ನಯ್ಯ ರಿಟ್ ಅರ್ಜಿಯಲ್ಲಿ ಹೇಳಿಕೊಂಡಿದ್ದಾನೆ.) ತಿಮರೋಡಿ, ಮಟ್ಟಣ್ಣವರ್, ವಿಠಲಗೌಡ, ಜಯಂತ್ ಷಡ್ಯಂತ್ರದ ರೂವಾರಿಗಳು. ನಿಜವಾದ ಆರೋಪಿಗಳ ಹೆಸರು ಹೇಳಿದ್ರೂ ಎಸ್‌ಐಟಿ ಕ್ರಮ ಕೈಗೊಂಡಿಲ್ಲ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ವಿಚಾರಣೆಯನ್ನ ಜೂನ್ 29ಕ್ಕೆ ಮುಂದೂಡಿದ ಹೈಕೋರ್ಟ್ ಮುಂದೂಡಿದೆ.

Source link