Category Archives: Blog

Your blog category

ಸೂರ್ಯನ ಕುಂಭರಾಶಿ ಪ್ರವೇಶದಿಂದ ಯಾರಿಗೆ ಶುಭಾಶುಭ ಫಲ – Kannada News | February 2024 Astrology: Sun Transit in Aquarius and Drekkan Effects

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ರೇಕ್ಕಾಣದ ಮೂಲಕ ಭವಿಷ್ಯದ ಚಿಂತನೆಯನ್ನು ಮಾಡಲು ಸಾಧ್ಯ. ಫೆಬ್ರವರಿ13 ರಿಂದ ಫೆಬ್ರವರಿ 23ರವರೆಗೆ ಸೂರ್ಯನು ಕುಂಭ ರಾಶಿಯಲ್ಲಿದ್ದು ಶನಿಯ ದ್ರೇಕ್ಕಾಣದಲ್ಲಿ (ಅಂದರೆ ಕುಂಭ ರಾಶಿಯ ಮೊದಲ ೧೦ ಡಿಗ್ರಿ) ಇರುತ್ತಾನೆ. ಕುಂಭದ ಮೊದಲ ದ್ರೇಕ್ಕಾಣ ಶನಿಯದ್ದಾಗಿದೆ. ಈ ರಾಶಿಯಲ್ಲಿ ಶನಿಯ ಪ್ರಭಾವ ಅಧಿಕವಾಗಿ ಉಂಟಾಗುವ ಕಾರಣ ಶುಭಾಶುಭ ಫಲಗಳು ಹೀಗಿವೆ.

​ಸೂರ್ಯ ಮತ್ತು ಶನಿ ಪರಸ್ಪರ ಶತ್ರು ಗ್ರಹಗಳು. ಸೂರ್ಯನು ಶನಿಯ ಮನೆಯಾದ ಕುಂಭದಲ್ಲಿ ಸಂಚರಿಸುವಾಗ ಮತ್ತು ಶನಿಯ ದ್ರೇಕ್ಕಾಣದಲ್ಲೇ ಇದ್ದಾಗ ಫಲಗಳು ಕೊಂಚ ಕಠಿಣವಾಗಿರುತ್ತವೆ.

​ಶುಭ ಫಲಗಳು:

​ಮಕರ ಮತ್ತು ಕುಂಭ ರಾಶಿ:

ನಿಮ್ಮ ರಾಶ್ಯಾಧಿಪತಿ ಶನಿಯೇ ಆಗಿರುವುದರಿಂದ, ಕೆಲಸದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಹಳೆಯ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ.

​ವೃಷಭ ರಾಶಿ:

ಹತ್ತನೇ ಮನೆಯಲ್ಲಿ ಈ ಸ್ಥಿತಿ ಇರುವುದರಿಂದ ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿಗಳು ಸಿಗುತ್ತವೆ. ಅಧಿಕಾರದಲ್ಲಿರುವವರಿಂದ ಗೌರವ ದೊರೆಯುತ್ತದೆ.

​ತುಲಾ ರಾಶಿ:

ಸಂಶೋಧನೆ ಅಥವಾ ತಾಂತ್ರಿಕ ಕ್ಷೇತ್ರದಲ್ಲಿ ಇರುವವರಿಗೆ ಈ ಕಾಲವು ಬಹಳ ಅನುಕೂಲಕರವಾಗಿದೆ. ಶ್ರಮಕ್ಕೆ ತಕ್ಕಂತೆ ಆರ್ಥಿಕ ಲಾಭವಾಗಲಿದೆ.

​ಮಿಶ್ರ ಫಲಗಳು:

​ಮೇಷ ರಾಶಿ:

ಏಕಾದಶ ರಾಶಿಯಲ್ಲಿ ಸೂರ್ಯ ಇರುವುದರಿಂದ ಆರ್ಥಿಕ ಲಾಭವಿರುತ್ತದೆ, ಆದರೆ ಸ್ನೇಹಿತರೊಂದಿಗೆ ಅಥವಾ ಹಿರಿಯ ಸಹೋದರರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.

​ಧನು ರಾಶಿ:

ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ಸಣ್ಣ ಪ್ರಯಾಣಗಳಿಂದ ಲಾಭವಾಗಬಹುದು, ಆದರೆ ಕೆಲಸದಲ್ಲಿ ವಿಳಂಬ ಉಂಟಾಗಬಹುದು.

​ಅಶುಭ ಫಲಗಳು:

​ಸಿಂಹ ರಾಶಿ:

ಸೂರ್ಯನು ನಿಮ್ಮ ರಾಶ್ಯಾಧಿಪತಿ. ಸಪ್ತಮ ಸ್ಥಾನದಲ್ಲಿ ಶತ್ರು ರಾಶಿಯಲ್ಲಿದ್ದು ಶನಿ ದ್ರೇಕ್ಕಾಣದಲ್ಲಿರುವುದು ದಾಂಪತ್ಯ ಜೀವನದಲ್ಲಿ ಉದ್ವಿಗ್ನತೆ ಅಥವಾ ಪಾಲುದಾರಿಕೆಯಲ್ಲಿ ನಷ್ಟ ತರಬಹುದು. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

​ಕರ್ಕಾಟಕ ರಾಶಿ:

ಅಷ್ಟಮ ಸ್ಥಾನದಲ್ಲಿ ಸೂರ್ಯ ಮತ್ತು ಶನಿಯ ಪ್ರಭಾವ ಇರುವುದರಿಂದ ಅನಗತ್ಯ ಮಾನಸಿಕ ಒತ್ತಡ, ಅಪವಾದ ಅಥವಾ ತಂದೆಯ ಆರೋಗ್ಯದಲ್ಲಿ ಏರುಪೇರಾಗಬಹುದು.

​ವೃಶ್ಚಿಕ ರಾಶಿ:

ಚತುರ್ಥದಲ್ಲಿ ಈ ಸ್ಥಿತಿ ಇರುವುದರಿಂದ ಮನೆಯ ಸುಖ-ಶಾಂತಿಗೆ ಭಂಗ ಬರಬಹುದು ಅಥವಾ ಆಸ್ತಿ ವಿಚಾರದಲ್ಲಿ ವಿವಾದಗಳು ತಲೆದೂರಬಹುದು.

​ಸೂರ್ಯ-ಶನಿ ಸಂಬಂಧವು ತಂದೆ-ಮಗನ ನಡುವಿನ ಭಿನ್ನಾಭಿಪ್ರಾಯ ಅಥವಾ ಮೇಲಧಿಕಾರಿಗಳೊಂದಿಗೆ ಸಂಘರ್ಷವನ್ನು ಸೂಚಿಸುತ್ತದೆ.

​ಈ ಸಮಯದಲ್ಲಿ ಪ್ರತಿದಿನ ಶಿವ ಪಂಚಾಕ್ಷರಿ ಮಂತ್ರ ಜಪಿಸುವುದು ಅಥವಾ ಸೂರ್ಯನಿಗೆ ನಮಸ್ಕಾರ ಅಶುಭ ಫಲಗಳನ್ನು ಕಡಿಮೆ ಮಾಡಲು ಸಹಕಾರಿ.

– ಲೋಹಿತ ಹೆಬ್ಬಾರ್

Source link

ಕಪ್ಪತ್ತಗುಡ್ಡದ ನಿಗೂಢ ಗುಹೆಗಳ ಸಾಮ್ರಾಜ್ಯ, ಚಿನ್ನದ ರಹಸ್ಯ ಬಯಲು! – Kannada News | Kappataguddas Mysterious Gold Caves: A TV9 Ground Report Uncovers Historical Mining and Hidden Wealth

ಗದಗ, ಫೆಬ್ರವರಿ 6: ಗದಗ ಜಿಲ್ಲೆಯ ಕಪ್ಪತ್ತಗುಡ್ಡವು ಈಗ ರಾಜ್ಯದ ಗಮನ ಸೆಳೆದಿದೆ. ಐತಿಹಾಸಿಕ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾದ ಬೆನ್ನಲ್ಲೇ, ಕಪ್ಪತ್ತಗುಡ್ಡದ ನಿಗೂಢ ಗುಹೆಗಳಲ್ಲಿನ ಚಿನ್ನದ ರಹಸ್ಯ ಬಯಲಾಗುತ್ತಿದೆ. ಮಹಾಲಿಂಗಪುರ ಸಮೀಪದ ಕಪ್ಪತ್ತಗುಡ್ಡದಲ್ಲಿ ‘ಟಿವಿ9’ ಗ್ರೌಂಡ್ ರಿಪೋರ್ಟ್ ನಡೆಸಿದ್ದು, ಈ ಗುಹೆಗಳಲ್ಲಿ ಅಪಾರ ಚಿನ್ನದ ನಿಕ್ಷೇಪವಿರುವ ಸಾಧ್ಯತೆ ಕುರಿತು ಕುತೂಹಲ ಮೂಡಿಸಿದೆ. ಇಲ್ಲಿನ ದುರ್ಗಮ ರಸ್ತೆಗಳು ಮತ್ತು ಭಯಾನಕ ಕಾಡುಗಳ ಮಧ್ಯೆ ಇರುವ ಈ ಗುಹೆಗಳಿಗೆ ತಲುಪುವುದು ಸವಾಲಿನ ಕೆಲಸವಾಗಿದೆ. ಈ ಗುಹೆಗಳು ಒಂದರೊಳಗೊಂದು ಇರುವಂತೆ ಭಾಸವಾಗುತ್ತವೆ, ಪ್ರತಿ ಹೆಜ್ಜೆಯಲ್ಲೂ ಹೊಸ ಕೌತುಕ ಮೂಡಿಸುತ್ತವೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲೂ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿತ್ತು ಎಂಬ ಐತಿಹಾಸಿಕ ಮಾಹಿತಿಯನ್ನು ಸ್ಥಳೀಯ ಹಿರಿಯರು ಬಹಿರಂಗಪಡಿಸಿದ್ದಾರೆ. ಕಪ್ಪತ್ತಗುಡ್ಡವು ‘ಔಷಧ ಸಸ್ಯಕಾಶಿ’ ಎಂದೂ ಹೆಸರಾಗಿದ್ದು, ಇದೀಗ ನಿಗೂಢ ಗುಹೆಗಳಲ್ಲಿ ಚಿನ್ನದ ನಿಕ್ಷೇಪ ಇದೆಯಾ ಎಂಬ ಕುತೂಹಲ ಹೆಚ್ಚಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆಯಲ್ಲಿ ಮಲಗಿದ್ದವರೂ ಇಲ್ಲ, ಜಗಳವಾಡಿ ಹೋದವರೂ ಹಿಂದಿರುಗಿಲ್ಲ, ದೆಹಲಿಯಲ್ಲಿ ಹೆಚ್ಚುತ್ತಿವೆ ಮಕ್ಕಳ ನಾಪತ್ತೆ ಪ್ರಕರಣಗಳು – Kannada News | Every Day Is a Nightmare: Families Await Answers in Delhi Child Disappearances

ನಾಪತ್ತೆಯಾಗಿರುವ ಮಕ್ಕಳುImage Credit source: India TV

ನವದೆಹಲಿ, ಫೆಬ್ರವರಿ 06: ದೆಹಲಿಯಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ಮಕ್ಕಳು(Children) ರಾತ್ರಿ ಮಲಗಿದ್ದವರು ಬೆಳಗಾಗುವಷ್ಟರಲ್ಲಿ ಕಾಣುತ್ತಿಲ್ಲ, ಇನ್ನೂ ಕೆಲವರು ಮನೆಯಿಂದ ಜಗಳವಾಡಿ ಹೋದವರು ಹಿಂದಿರುಗಿಲ್ಲ, ಒಟ್ಟಿನಲ್ಲಿ ನಾಪತ್ತೆ ಪ್ರಕರಣಗಳು ತೀರಾ ಹೆಚ್ಚಾಗಿದೆ. ಜನವರಿ ಮೊದಲ 15 ದಿನಗಳಲ್ಲಿ 800ಕ್ಕೂ ಅಧಿಕ ಜನರು ಕಣ್ಮರೆಯಾಗಿದ್ದರೆ.120 ಹುಡುಗಿಯರಿದ್ದರೆ , 137 ಮಂದಿ ಅಪ್ರಾಪ್ತ ಬಾಲಕರಿದ್ದಾರೆ. 27 ದಿನಗಳ ಬಳಿಕವೂ ಅವರ ಒಂದೇ ಒಂದು ಸುಳಿವು ಕೂಡಾ ಸಿಕ್ಕಿಲ್ಲ.

2026ರ ಮೊದಲ 27 ದಿನಗಳಲ್ಲಿ807 ಮಂದಿ ಕಾಣೆಯಾಗಿರುವ ಬಗ್ಗೆ ಅಂಕಿ ಅಂಶಗಳು ಲಭ್ಯವಾಗಿವೆ. ಅದರಲ್ಲಿ 235 ಮಂದಿ ಪತ್ತೆಯಾಗಿದ್ದಾರೆ, 572 ಮಂದಿ ಇನ್ನೂ ಪತ್ತೆಯಾಗಿಲ್ಲ. 191 ಅಪ್ರಾಪ್ತ ವಯಸ್ಕರಲ್ಲಿ 48 ಮಂದಿ ಪತ್ತೆಯಾಗಿದ್ದಾರೆ.137 ಮಂದಿ ಪತ್ತೆಯಾಗಿಲ್ಲ.ಕಳೆದ ದಶಕದಲ್ಲಿ (2016-2026): 60,694 ಮಕ್ಕಳು (0-18) ಕಣ್ಮರೆಯಾಗಿದ್ದಾರೆ. 53,763 ಮಂದಿ ಸಿಕ್ಕಿದ್ದಾರೆ. ಶೇ. 11 ರಷ್ಟು ಮಂದಿ ಹಿಂದಿರುಗಲೇ ಇಲ್ಲ. 2015-2025, 5,559 ಮಕ್ಕಳು ಕಾಣೆಯಾಗಿದ್ದಾರೆ, 695 ಪ್ರಕರಣಗಳು ಇತ್ಯರ್ಥಗೊಂಡಿಲ್ಲ.

8 ವರ್ಷ ವಯಸ್ಸಿನವರು: 9 ಕಾಣೆಯಾಗಿದ್ದಾರೆ (6 ಪತ್ತೆಯಾಗಿದ್ದಾರೆ); ಎಂಟರಿಂದ ಹನ್ನೆರಡು ವರ್ಷದೊಳಗಿನವರಲ್ಲಿ, ಎಂಟು ಗಂಡು ಮಕ್ಕಳು ಮತ್ತು ಐದು ಹೆಣ್ಣು ಮಕ್ಕಳು ಸೇರಿದಂತೆ 13 ಮಕ್ಕಳು ಕಾಣೆಯಾಗಿದ್ದಾರೆ. ಕೇವಲ ಮೂವರು ಗಂಡು ಮಕ್ಕಳು ಪತ್ತೆಯಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ. ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಒಂಬತ್ತು ಪ್ರಕರಣಗಳು ವರದಿಯಾಗಿವೆ. ಅವರಲ್ಲಿ ಪೊಲೀಸರು ಮೂವರು ಗಂಡು ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆರು ಮಕ್ಕಳು ಇನ್ನೂ ಪತ್ತೆಯಾಗಿಲ್ಲ.

ಮತ್ತಷ್ಟು ಓದಿ: ಪೋಷಕರು ಬೈದಿದ್ದಕ್ಕೆ ಬಸ್​ ಫ್ರೀ ಎಂದು ತಮ್ಮನ ಜೊತೆ ಮನೆಬಿಟ್ಟು ಹೋಗಿ ಊರೂರು ಸುತ್ತಿದ ಬಾಲಕಿ

ಬಿಹಾರದ ಕಿಶನ್‌ಗಂಜ್ ಮೂಲದ ತೆಮುಲ್ ಹಕ್ ಮತ್ತು ರೂಬಿ ದೆಹಲಿಯ ಬುರಾರಿಯ ಮೌರ್ಯ ಎನ್‌ಕ್ಲೇವ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಮೂವರು ಮಕ್ಕಳು , ಹಿರಿಯ ಮಗ ವಾಸಿಮ್ ರಜಾ, ಡಿಸೆಂಬರ್ 27 ರಾತ್ರಿ, ವಾಸಿಮ್ ಮನೆಯಲ್ಲಿ ಮಲಗಿದ್ದ, ಡಿಸೆಂಬರ್ 28 ಬೆಳಗ್ಗೆ 9 ಗಂಟೆಗೆ ಮನೆಬಿಟ್ಟು ಹೋದವನು ಇನ್ನೂ ವಾಪಸಾಗಿಲ್ಲ.

ಇನ್ನು ಬುರಾರಿಯ ಸಂತನಗರದಲ್ಲಿ ರಿತಿಕ್ ಝಾ ಜೆಇಇ ಮೇನ್ಸ್​ಗೆ ತಯಾರಿ ನಡೆಸುತ್ತಿದ್ದ, ಡಿಸೆಂಬರ್ 17ರಂದು ಪರೀಕ್ಷೆಗೆ ಓದಿಕೋ ಎಂದು ಅವನ ತಾಯಿ ಗದರಿದಾಗ ಬೇಸರದಿಂದ ಮನೆಬಿಟ್ಟು ಹೋದವನು ಹಿಂದಿರುಗಿ ಬಂದಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಯಾವುದೇ ಏರಿಕೆ ಇಲ್ಲ – ಜನವರಿ 2026 ರ ವರದಿಗಳು ಕಡಿಮೆಯಾಗಿವೆ.

2025 ರಲ್ಲಿ ದೆಹಲಿಯಲ್ಲಿ 24,508 ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಶೇ. 60 ಕ್ಕಿಂತ ಹೆಚ್ಚು ಮಹಿಳೆಯರು ನಾಪತ್ತೆಯಾಗಿದ್ದು, 14,870 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಇದು ಒಂದೇ ವರ್ಷದಲ್ಲಿ ದಾಖಲಾಗಿರುವ ಅತಿ ಹೆಚ್ಚು ಪ್ರಕರಣಗಳು. 9,638 ಪುರುಷರು ನಾಪತ್ತೆಯಾಗಿದ್ದಾರೆ. ಪೊಲೀಸರು 15,421 ವ್ಯಕ್ತಿಗಳನ್ನು ಪತ್ತೆಹಚ್ಚಿದ್ದರೂ, 9,087 ಪ್ರಕರಣಗಳು ಬಗೆಹರಿಯದೆ ಉಳಿದಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಾಗರದ ಮಾರಿಕಾಂಬೆ ದರ್ಶನ ಪಡೆದ ಪಡೆದ ಶಿವರಾಜ್​​ಕುಮಾರ್; ಹೇಳಿದ್ದೇನು? – Kannada News | Actor Shivarajkumar Happy visits Sagara Marikamba Jatre

ಸಾಗರದ ಮಾರಿಕಾಂಬೆ ದರ್ಶನಕ್ಕೆ ಶಿವರಾಜ್​​​ಕುಮಾರ್ ಹಾಗೂ ಗೀತಾ ತೆರಳಿದ್ದಾರೆ. ಅವರು ತಾಯಿ ದರ್ಶನ ಪಡೆದು ತುಂಬಾನೇ ಖುಷಿಪಟ್ಟರು. ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ನನಗೆ ಇಲ್ಲಿಗೆ ಬರೋದು ಯಾವಾಗ ಖುಷಿ ನೀಡುತ್ತದೆ. ತಾಯಿ ಆಗಾಗ ಕರೆಸಿಕೊಳ್ಳುತ್ತಾಳೆ’ ಎಂದು ಶಿವಣ್ಣ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮ್ಯೂಲ್ ಅಕೌಂಟ್ ಸೈಬರ್ ದಂಧೆಗೆ ಸಿಐಡಿ ಶಾಕ್: ರಾಜ್ಯಾದ್ಯಂತ ಮೆಗಾ ದಾಳಿ, 13 ಮಾಸ್ಟರ್ ಮೈಂಡ್‌ಗಳ ಬಂಧನ – Kannada News | Karnataka CID busts 40K+ mule accounts, 13 arrested in major cyber fraud operation

ರಾಜ್ಯದ ವಿವಿಧೆಡೆ ಸಿಐಡಿ ಅಧಿಕಾರಿಗಳ ತನಿಖೆ

ಬೆಂಗಳೂರು, ಫೆಬ್ರುವರಿ 06: ರಾಜ್ಯದಲ್ಲಿ ಸೈಬರ್ ಪ್ರಕರಣಗಳು (Cyber crime) ಹೆಚ್ಚುತ್ತಿರುವ ಬೆನ್ನಲ್ಲೇ ಮ್ಯೂಲ್ ಅಕೌಂಟ್‌ಗಳ ಮೂಲಕ ನಡೆಯುತ್ತಿದ್ದ ಭಾರೀ ಸೈಬರ್ ವಂಚನಾ ದಂಧೆಯನ್ನು ಸಿಐಡಿ ಸೈಬರ್ ಕ್ರೈಂ (CID) ವಿಭಾಗ ಭೇದಿಸಿದೆ. ನೂರಾರು ಕಡೆ ದಾಳಿ ನಡೆಸಿದ್ದ ತಂಡಗಳು, ಅಕ್ರಮಕ್ಕಾಗಿ ಬಳಸಕಾಗುತ್ತಿದ್ದ 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್​ಗಗಳನ್ನು ಪತ್ತೆ ಹಚ್ಚಿದೆ.

100ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು

ರಾಜ್ಯದಲ್ಲಿ ಫೆಬ್ರವರಿ 6ರಂದು ರಾಜ್ಯಾದ್ಯಂತ 100ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ ಸಿಐಡಿ ತಂಡ, ಈ ಪ್ರಕರಣದ ಪ್ರಮುಖ 13 ಮಾಸ್ಟರ್ ಮೈಂಡ್‌ಗಳನ್ನು ಬಂಧಿಸಿದೆ. ಅಮಾಯಕ ಜನರ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಹಾಗೂ ಖಾತೆ ವಿವರಗಳನ್ನು ಹಣಕ್ಕಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡಲಾಗುತ್ತಿತ್ತು ಎಂಬುದು ಸಿಐಡಿ ತನಿಖೆ ವೇಳೆ ಬಯಲಾಗಿದೆ. ಈ ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಹಾಗೂ ಎಟಿಎಂ ಮೂಲಕ ಹಣ ವಿತ್‌ಡ್ರಾ ಮಾಡಲಾಗುತ್ತಿತ್ತು.

ಇದನ್ನೂ ಓದಿ ಮಹಿಳಾ ಅಧಿಕಾರಿಯ ಬೆಡ್‌ರೂಮ್ ದೃಶ್ಯಗಳ ಸ್ಟಿಂಗ್ ಮಾಡಿ 50 ಲಕ್ಷ ರೂ.ಗೆ ಬ್ಲ್ಯಾಕ್‌ಮೇಲ್: ನಕಲಿ ಪತ್ರಕರ್ತರ ಗ್ಯಾಂಗ್ ಬಂಧನ

40 ಸಾವಿರಕ್ಕೂ ಹೆಚ್ಚು ಅಕ್ರಮ ಅಕೌಂಟ್​ಗಳು!

ಖಾತೆ ವಿವರ ನೀಡಿದ ಅಮಾಯಕರಿಗೆ ಈ ವಂಚನೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿದು ಬಂದಿದೆ. ತನಿಖೆಯ ವೇಳೆ ಸುಮಾರು 42 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳು ಬಳಕೆಯಲ್ಲಿರುವುದು ಪತ್ತೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆ ಮ್ಯೂಲ್ ಅಕೌಂಟ್‌ಗಳ ವಿರುದ್ಧ ಸಿಐಡಿ ತಂಡ ತೀವ್ರ ನಿಗಾ ವಹಿಸಿತ್ತು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RCB vs DC: ಆರು ಬಾಲ್​​ಗೆ 10 ರನ್; ಕೊನೆಯ ಓವರ್ ಥ್ರಿಲ್ ಹೇಗಿತ್ತು ನೋಡಿ

ವುಮನ್ ಪ್ರೀಮಿಯರ್ ಲೀಗ್ 2026ರ ಫೈನಲ್ ಫೆಬ್ರವರಿ 5ರಂದು ನಡೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ನಗೆ ಬೀರಿದೆ. ಆರ್​​ಸಿಬಿಗೆ ಡೆಲ್ಲಿ ತಂಡ 204 ರನ್​​ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್​​ನ ಆರ್​​ಸಿಬಿ ಬೆನ್ನು ಹತ್ತಿತ್ತು. ಅಂತಿಮ ಓವರ್ ಸಮೀಪಿಸುವಾಗ ಆರ್​​ಸಿಬಿ 194 ರನ್​​​ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆರು ಬಾಲ್​​ಗೆ ಬೇಕಿದ್ದಿದ್ದು 10 ರನ್​​ಗಳು.

ಕ್ರೀಜ್​ ಅಲ್ಲಿ ಇದ್ದ ರಾಧಾ ಯಾದವ್ ಮೊದಲ ಬಾಲ್​​ ಅಲ್ಲಿ ಸಿಂಗಲ್ ಕಲೆ ಹಾಕಿದರು. ಡಿ ಕ್ಲಾರ್ಕ್ ಕೂಡ ಒಂದು ರನ್ ತೆಗೆದು ರಾಧಾಗೆ ಸ್ಟ್ರೈಕ್ ನೀಡಿದರು. ಮೂರು ಹಾಗೂ ನಾಲ್ಕನೇ ಬಾಲ್​​ಗೆ ಫೋರ್ ಹೊಡೆದು ರಾಧಾ ಅವರು ಪಂದ್ಯವನ್ನು ಗೆಲುವಿನ ದಡ ತಲುಪಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Bengaluru Air Quality: ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ದಿಢೀರ್ ಸುಧಾರಣೆ; ಮಂಗಳೂರಿನ ವಾಯು ಗುಣಮಟ್ಟ ಪಾತಾಳಕ್ಕೆ! – Kannada News | Bangalore Air Pollution Crisis: Bengaluru Air quality is slightly better, Mangaluru’s AQI is unhealthy

ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ದಿಢೀರ್ ಸುಧಾರಣೆ

ಬೆಂಗಳೂರು, ಫೆಬ್ರುವರಿ 06: ಬೆಂಗಳೂರಿನ ವಾಯು ಗುಣಮಟ್ಟ (Bengaluru Air Quality) ದಿನಕ್ಕೊಂದು ರೀತಿ ಬದಲಾಗುತ್ತಿದೆ. ಸಧ್ಯಕ್ಕೆ ನಗರದ ಏರ್ ಕ್ವಾಲಿಟಿಯಲ್ಲಿ ಏಕಾಏಕಿ ಸುಧಾರಣೆ ಕಂದುಬಂದಿದೆ. ಇದರ ಬದಲಾಗಿ ಮಂಗಳೂರಿನ ವಾಯು ಗುಣಮಟ್ಟ 200ರ ಗಡಿ ತಲುಪಿದ್ದು, ಆತಂಕ ಮೂಡಿಸಿದೆ. ಜೊತೆಗೆ ಬಳ್ಳಾರಿ ಮತ್ತು ಶಿವಮೊಗ್ಗದ ಪರಿಸ್ಥಿತಿಯೂ ಹದಗೆಟ್ಟಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 137ಕ್ಕೆ ತಲುಪಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ. ಮೂರು ನಾಲ್ಕು ದಿನಗಳ ಹಿಂದೆ 100ರ ಆಸು ಪಾಸಿದ್ದ ಮಂಗಳೂರಿನ AQI, ಇಂದು 199ಕ್ಕೆ ತಲುಪಿದ್ದು ಆಶ್ಚರ್ಯ ಉಂಟು ಮಾಡಿದೆ. ಈ ಹದಗೆಟ್ಟ ವಾತಾವರಣ ಹೀಗೆ ಮುಂದುವರೆದರೆ ದೆಹಲಿಯಂತೆಯೇ ಆಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ. ಈ ಕಲುಷಿತ ಗಾಳಿಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ.

ಸೂಕ್ಷ್ಮಾಣುಗಳಿಂದಲೂ ಜೀವಕ್ಕೆ ಹಾನಿ

PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 84 ಆಗಿದ್ದು, PM10 109ಕ್ಕೆ ಏರಿಕೆಯಾಗಿದೆ. ಈ ಕಣಗಳು ನೇರವಾಗಿ ಉಸಿರಾಟ ವ್ಯವಸ್ಥೆಗೆ ಹೊಡೆತ ನೀಡುತ್ತವೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –137
  • ಮಂಗಳೂರು-199
  • ಮೈಸೂರು –144
  • ಬೆಳಗಾವಿ – 135
  • ಕಲಬುರ್ಗಿ-152
  • ಶಿವಮೊಗ್ಗ – 166
  • ಬಳ್ಳಾರಿ – 179
  • ಹುಬ್ಬಳ್ಳಿ- 97
  • ಉಡುಪಿ –164
  • ವಿಜಯಪುರ –154

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಹಿಳಾ ಅಧಿಕಾರಿಯ ಬೆಡ್‌ರೂಮ್ ದೃಶ್ಯಗಳ ಸ್ಟಿಂಗ್ ಮಾಡಿ 50 ಲಕ್ಷ ರೂ.ಗೆ ಬ್ಲ್ಯಾಕ್‌ಮೇಲ್: ನಕಲಿ ಪತ್ರಕರ್ತರ ಗ್ಯಾಂಗ್ ಬಂಧನ – Kannada News | Hidden Camera Sting in Belagavi: Fake Journalists Blackmail Woman Officer for Rs 50 Lakh, Three Arrested

ಬೆಳಗಾವಿ, ಫೆಬ್ರವರಿ 6: ಬೆಳಗಾವಿಯಲ್ಲಿ (Belagavi) ಮಹಿಳಾ ಅಧಿಕಾರಿಯ ಖಾಸಗಿ ಕ್ಷಣಗಳನ್ನು ರಹಸ್ಯ ಕ್ಯಾಮರಾದಲ್ಲಿ ಸೆರೆಹಿಡಿದು 50 ಲಕ್ಷ ರೂಪಾಯಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣ ಸದ್ಯ ಬೆಳಗಾವಿಯಲ್ಲಿ ಸಂಚಲನ ಮೂಡಿಸಿದೆ. ಗೋಕಾಕ್‌ನ ಸಮೀರ್ ನಿಸಾರ್ ಅಹ್ಮದ್ ಶೇಖ್, ಅಬ್ಬುಲ್ ರಶೀದ್ ಮಕಾಂದಾರ್ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಬಂಧಿತ ಆರೋಪಿಗಳು.

ಆರೋಪಿಗಳು ಮಹಿಳಾ ಅಧಿಕಾರಿ ಮನೆಯ ಲೈಟ್ ಬಲ್ಬ್ ಹೋಲ್ಡರ್‌ಗಳಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿದ್ದರು. ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಸಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಬ್ಲ್ಯಾಕ್​ಮೇಲ್ ಬಗ್ಗೆ ಮಹಿಳಾ ಅಧಿಕಾರಿ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು. ಆ ಬಳಿಕ ಕಮಿಷನರ್ ಸೂಚನೆಯಂತೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಮಾಳಮಾರುತಿ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಸ್ಯಾಮ್‌ಸಂಗ್ ಅಲ್ಟ್ರಾ ಮೊಬೈಲ್, ಒಂದು ವಿವೋ ಮೊಬೈಲ್, 64 ಜಿಬಿ ಪೆನ್‌ಡ್ರೈವ್, ಆರು ರಹಸ್ಯ ಕ್ಯಾಮರಾಗಳು, ಎರಡು ಓಟಿಜಿ ಸಾಧನಗಳು, ಹಲವು ಮೆಮೊರಿ ಕಾರ್ಡ್‌ಗಳು ಹಾಗೂ ಇನ್ನೋವಾ ಕ್ರಿಸ್ಟಾ ಕಾರನ್ನು ಜಪ್ತಿ ಮಾಡಲಾಗಿದೆ.

ಮನೆಯೊಳಗೆ ರಹಸ್ಯ ಕ್ಯಾಮರಾ ಅಳವಡಿಸಿದ್ಹೇಗೆ ಆರೋಪಿಗಳು?

ಪ್ರಕರಣದಲ್ಲಿ ಮಹಿಳಾ ಅಧಿಕಾರಿಯ ಮನೆ ಕೆಲಸದವನ ಪಾತ್ರವೂ ಬೆಳಕಿಗೆ ಬಂದಿದೆ. ಮನೆ ಕಿಟಕಿಯಲ್ಲಿ ಬೀಗದ ಕೀಲಿಕೈಯನ್ನು ಇಡುವ ವಿಚಾರವನ್ನು ತಿಳಿದಿದ್ದ ಆತ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಮಹಿಳಾ ಅಧಿಕಾರಿ ಕೀಲಿಕೈ ಕಿಟಕಿಯಲ್ಲಿ ಇಟ್ಟು ಹೋಗಿದ್ದಾಗ ಮನೆ ಕೆಲಸದಾತ ಆರೋಪಿಗಳಿಗೆ ಮಾಹಿತಿ ನೀಡಿದ್ದ. ಅದರಂತೆ, ಸಮಯ ನೋಡಿ ಮನೆಗೆ ನುಗ್ಗಿದ್ದ ಆರೋಪಿಗಳು ಬೆಡ್‌ರೂಮ್ ಹಾಗೂ ಹಾಲ್‌ನಲ್ಲಿ ರಹಸ್ಯ ಕ್ಯಾಮರಾಗಳನ್ನು ಅಳವಡಿಸಿದ್ದರು. ಆ ಮೂಲಕ ಮಹಿಳಾ ಅಧಿಕಾರಿಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ನಂತರ ತೆಗೆದುಕೊಂಡು ಹೋಗಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಬೇರೊಬ್ಬರ ಹೆಂಡ್ತಿ ಜತೆ ಸಿಕ್ಕಿಬಿದ್ದು ಏಟು ತಿಂದ ಪ್ರಕರಣ: ಸ್ಫೋಟಕ ವಿಚಾರ ಬಿಚ್ಚಿಟ್ಟ ಮಹಿಳೆಯ ಗಂಡ!

ಬಳಿಕ ಖಾಸಗಿ ವಿಡಿಯೋ ಆಧರಿಸಿ ಮಹಿಳಾ ಅಧಿಕಾರಿ ಬಳಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದು, ಪರಾರಿಯಾಗಿರುವ ಮನೆ ಕೆಲಸದವನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಟಿಟಿಗೆ ಬರಲು ರೆಡಿ ಆದ ‘ಪರಾಶಕ್ತಿ’; ಎಲ್ಲಿ? ಯಾವಾಗ? – Kannada News | Parashakti OTT: Shiva Karthikeyan’s Film on Anti Hindi Protests Arrives on Zee5

ಕಾಲಿವುಡ್ ಹೀರೋ ಶಿವಕಾರ್ತಿಕೇಯನ್ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ವಿಭಿನ್ನ ಕಂಟೆಂಟ್ ಹೊಂದಿರುವ ಚಿತ್ರಗಳನ್ನು ಮಾಡುವ ಮೂಲಕ ವಿಶೇಷ ಹೆಸರು ಮಾಡಿದ್ದಾರೆ. ಇತ್ತೀಚೆಗೆ, ಸಂಕ್ರಾಂತಿ ಹಬ್ಬದ ಸಮಯದಲ್ಲಿ, ಅವರು ‘ಪರಾಶಕ್ತಿ’ ಚಿತ್ರದೊಂದಿಗೆ (Parashkati) ಪ್ರೇಕ್ಷಕರ ಮುಂದೆ ಬಂದರು. ಆದರೆ ಕೆಟ್ಟ ವಿಮರ್ಶೆ ಪಡೆದಿದ್ದರಿಂದ ಈ ಚಿತ್ರಕ್ಕೆ ಹಿನ್ನಡೆ ಆಯಿತು. ಈ ಸಿನಿಮಾ ಈಗ ಒಟಿಟಿಗೆ ಕಾಡಲಿಡುತ್ತಿದೆ.

ಈ ಚಿತ್ರವು ಥಿಯೇಟರ್​ನಲ್ಲಿ ತಮಿಳಿನಲ್ಲಿ ಮಾತ್ರ ಬಿಡುಗಡೆಯಾಯಿತು. ಆದರೆ, ಒಟಿಟಿಯಲ್ಲಿ ಹಲವು ಭಾಷೆಗಳಲ್ಲಿ ಲಭ್ಯವಿದೆ. ನಿರ್ದೇಶಕಿ ಸುಧಾ ಕೊಂಗರ ನಿರ್ದೇಶಿಸಿದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಮತ್ತೊಂದೆಡೆ, ಜನನಾಯಗನ್ ಚಿತ್ರವನ್ನು ಮುಂದೂಡಿದ್ದರಿಂದ ಈ ಚಿತ್ರದ ವಿರುದ್ಧ ತೀವ್ರ ಟೀಕೆಗಳು ಕೇಳಿ ಬಂದವು. ‘ಜನ ನಾಯಗನ್’ ವಿರುದ್ಧದ ಪಿತೂರಿ ಇದೆ ತಂಡದ ಕಿತಾಪತಿ ಎಂದು ಹೇಳಲಾಯಿತು. ಆದಾಗ್ಯೂ ‘ಪರಾಶಕ್ತಿ’ ಸಿನಿಮಾ 100 ಕೋಟಿ ರೂ.ಗಳಿಗಿಂತ ಹೆಚ್ಚು ಗಳಿಸಿದೆ.

ಪರಾಶಕ್ತಿ ಚಿತ್ರ ಈಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಇದು ಫೆಬ್ರವರಿ 7 ರಿಂದ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಜೀ5 ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಚಿತ್ರ ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಪ್ರಸಾರ ಕಾಣಲಿದೆ. ಶಿವಕಾರ್ತಿಕೇಯನ್ ಈಗಾಗಲೇ ರೆಮೋ, ಪ್ರಿನ್ಸ್ ಮತ್ತು ಅಮರನ್ ಚಿತ್ರಗಳ ಮೂಲಕ ಭಾರಿ ಕ್ರೇಜ್ ಸೃಷ್ಟಿಸಿದ್ದಾರೆ. ಹೀಗಾಗಿ ಅವರ ಫ್ಯಾನ್ಸ್ ‘ಪರಾಶಕ್ತಿ’ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಶ್ರೀಲೀಲಾ ಇದರಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಶ್ರೀಲೀಲಾ ಈ ಚಿತ್ರದ ಮೂಲಕ ತಮಿಳಿನಲ್ಲಿ ಪಾದಾರ್ಪಣೆ ಮಾಡಿದರು.

ಇದನ್ನೂ ಓದಿ: ‘ಪರಾಶಕ್ತಿ’ ಸಕ್ಸಸ್ ಮೀಟ್ ವೇದಿಕೆಯಲ್ಲಿ ನಾಯಕ-ನಿರ್ದೇಶಕಿ ಜಗಳ

ಈ ಚಿತ್ರವು 1965 ರಲ್ಲಿ ತಮಿಳುನಾಡಿನಲ್ಲಿ ನಡೆದ ಹಿಂದಿ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿದೆ. ಆ ಸಮಯದಲ್ಲಿ, ಭಾರತೀಯ ಕೇಂದ್ರ ಸರ್ಕಾರವು ತಮಿಳರ ಮೇಲೆ ಹಿಂದಿ ಭಾಷೆಯನ್ನು ಹೇರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದರು. ಈ ಆಂದೋಲನವು ಚೆಜಿಯನ್ ಮತ್ತು ಚಿನ್ನದುರೈ ಎಂಬ ಇಬ್ಬರು ಸಹೋದರರ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಚಿತ್ರವು ಚಿತ್ರಿಸುತ್ತದೆ. ರಾಣಾ ದಗ್ಗುಬಾಟಿ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:18 am, Fri, 6 February 26

Source link

‘ಧುರಂಧರ್ 2’ ಚಿತ್ರದ ಒಟಿಟಿ ಹಕ್ಕಿಗೆ ಡಬಲ್ ಹಣ ಕೊಟ್ಟ ಜಿಯೋ ಹಾಟ್​​ಸ್ಟಾರ್ – Kannada News | Dhurandhar 2: Ranveer Singh’s Sequel OTT Rights Soar; Netflix and Hotstar’s Mega Deals Revealed

ಆದಿತ್ಯ ಧಾರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟಿಸಿದ ‘ಧುರಂಧರ್’ ಜನವರಿ 30, 2026 ರಂದು ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಚಿತ್ರವು ಬಿಡುಗಡೆಯಾದ ತಕ್ಷಣ ನೆಟ್‌ಫ್ಲಿಕ್ಸ್‌ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇದೆಲ್ಲದರ ನಡುವೆ, ‘ಧುರಂಧರ್ 2: ದಿ ರಿವೆಂಜ್’ನ ಮೊದಲ ಟೀಸರ್ ಅನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಟೀಸರ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಈ ಚಿತ್ರದ ಒಟಿಟಿ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆ ಎನ್ನಲಾಗುತ್ತಿದೆ.

ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ‘ಧುರಂಧರ್’ ಚಿತ್ರದ ಎರಡೂ ಭಾಗಗಳ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್​​ಫ್ಲಿಕ್ಸ್ ಖರೀದಿ ಮಾಡಿತ್ತು. ನೆಟ್‌ಫ್ಲಿಕ್ಸ್ ಎರಡೂ ಭಾಗಗಳನ್ನು ಒಟ್ಟಿಗೆ ಪಡೆಯಲು 170 ಕೋಟಿ ನೀಡಲು ರೆಡಿ ಇತ್ತು. ಆದರೆ, ನಂತರ ಡೀಲ್ ಕ್ಯಾನ್ಸಲ್ ಮಾಡಿ ಹಾಟ್​​ಸ್ಟಾರ್ ಇದರ ಹಕ್ಕನ್ನು ಪಡೆದುಕೊಂಡಿದೆ.

ವರದಿಯ ಪ್ರಕಾರ, ಮೊದಲ ಪಾರ್ಟ್​​ಗಾಗಿ ನೆಟ್​​ಫ್ಲಿಕ್ಸ್​​ 85 ಕೋಟಿ ರೂ ನೀಡಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಸಿನಿಮಾ ಖರೀದಿಗೆ ಇತ್ತೀಚೆಗೆ ಕಡಿಮೆ ಆಸಕ್ತಿ ತೋರಿಸುತ್ತಿವೆ ಎಂದು ಹೇಳಲಾಗಿದೆ. ಆದರೆ ‘ಧುರಂಧರ್’ ಚಿತ್ರದ ದೊಡ್ಡ ಯಶಸ್ಸು ಮತ್ತು ಪ್ರೇಕ್ಷಕರಿಂದ ಬಂದ ಬೇಡಿಕೆಯಿಂದಾಗಿ ಅವರು ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಬೇಕಾಯಿತು. ಈಗ ಜಿಯೋ ಹಾಟ್​​ಸ್ಟಾರ್ 170 ಕೋಟಿ ರೂಪಾಯಿ ಕೊಟ್ಟು ಎರಡನೇ ಭಾಗದ ಸ್ಟ್ರೀಮಿಂಗ್ ಹಕ್ಕು ಖರೀದಿಸಿದೆ ಎಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ‘ಧುರಂಧರ್’ ಬಗ್ಗೆ ಹೃತಿಕ್ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಆದಿತ್ಯ ಧಾರ್

ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿನ ಭಾಗದಲ್ಲಿ ರೆಹಮಾನ್ ಡಕಾಯಿತ್ (ಅಕ್ಷಯ್ ಖನ್ನಾ) ಅವರ ಮರಣದ ನಂತರ, ಎರಡನೇ ಭಾಗವು ಹಮ್ಜಾ ಅಲಿ (ರಣವೀರ್ ಸಿಂಗ್) ಅವರ ಪಾತ್ರ ಹೈಲೈಟ್ ಆಗೋ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಕೂಡ ನಟಿಸಿದ್ದಾರೆ. ಈ ಚಿತ್ರವು ಮಾರ್ಚ್ 19, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link