Category Archives: Blog

Your blog category

WPL 2026 Final: ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದ ಆರ್​ಸಿಬಿ ಸಿಂಹಿಣಿಯರು; ವಿಡಿಯೋ – Kannada News | WPL 2026 Final: RCB Crowned Champions After Thrilling Chase vs Delhi Capitals

ಮಹಿಳಾ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಬಾರಿಗೆ ಚಾಂಪಿಯನ್ ಕಿರೀಟವನ್ನು ಅಲಂಕರಿಸಿತು. ಡೆಲ್ಲಿ ನೀಡಿದ 203 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್​​ಸಿಬಿ ಕೊನೆಯ ಓವರ್​ನಲ್ಲಿ ಗೆಲುವು ಸಾಧಿಸಿತು.

ಕೊನೆಕೊನೆಯಲ್ಲಿ ಜಾರ್ಜಿಯಾ ವಾಲ್, ರಿಚಾ ಘೋಷ್ ಹಾಗೂ ಸ್ಮೃತಿ ಮಂಧಾನ ವಿಕೆಟ್ ಕಳೆದುಕೊಂಡು ಆರ್​ಸಿಬಿ ಕೊಂಚ ಒತ್ತಡಕ್ಕೆ ಸಿಲುಕಿತ್ತು. ಅಲ್ಲದೆ ಸ್ಮೃತಿ ವಿಕೆಟ್ ಬಳಿಕ ಬಂದ ರಾಧಾ ಯಾದವ್ ಕೂಡ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ್ದರು. ಆದರೆ ಡೆಲ್ಲಿ ತಂಡ ಕ್ಯಾಚ್ ಕೈಚೆಲ್ಲಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ರಾಧಾ 20 ನೇ ಓವರ್​ನಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ರಾಧಾ ಎರಡನೇ ಬೌಂಡರಿ ಬಾರಿಸುತ್ತಿದ್ದಂತೆ ಡಗೌಟ್​ನಲ್ಲಿ ಕುಳಿತಿದ್ದ ಇಡೀ ತಂಡ ಗೆಲುವಿನ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿತು. ಒಬ್ಬರನೊಬ್ಬರು ತಬ್ಬಿಕೊಂಡು ಸಂಭ್ರಮಿಸಿದರು. ಇತ್ತ ಬೌಂಡರಿ ಬಾರಿಸಿ ತಂಡವನ್ನು ಗೆಲ್ಲಿಸಿದ ರಾಧಾ ಯಾದವ್, ನಾನ್ ಸ್ಟ್ರೈಕ್​ನಲ್ಲಿದ್ದ ನಡಿನ್ ಡಿ ಕ್ಲರ್ಕ್​ ಅವರನ್ನು ತಬ್ಬಿಕೊಂಡು ಗೆಲುವನ್ನು ಆಚರಿಸಿದರು. ಆ ಬಳಿಕ ಇಡೀ ತಂಡ ಮೈದಾನದಲ್ಲಿ ನೆರೆದು ಗೆಲುವನ್ನು ಸಂಭ್ರಮಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 6ರ ದಿನಭವಿಷ್ಯ

ಈ ದಿನ ಪಾರಿವಾಳಗಳಿಗೆ ಕಾಳು- ಕಡಿ ಹಾಕಿದಲ್ಲಿ ಯತ್ನ ಕಾರ್ಯಗಳಲ್ಲಿ ಅನುಕೂಲಗಳು ಆಗಲಿವೆ. ಇನ್ನು ಏನಾದರೊಂದು ಕಾರಣವನ್ನು ಹೇಳಿ, ನಿಮ್ಮ ಕೆಲಸವನ್ನು ಮುಂದಕ್ಕೆ ಹಾಕುತ್ತಾ ಬಂದಿದ್ದಲ್ಲಿ ಅದಕ್ಕೆ ಕೂಡ ಪರಿಹಾರ ದೊರೆಯಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಅಜೀರ್ಣ, ವಿಪರೀತ ಜ್ವರ ಈ ರೀತಿ ತೊಂದರೆಗಳು ಮಕ್ಕಳಿಗೆ ಕಾಣಿಸಿಕೊಂಡಲ್ಲಿ ಕೂಡಲೇ ಸೂಕ್ತ ವೈದ್ಯೋಪಚಾರ ಕೊಡಿಸುವ ಕಡೆಗೆ ಗಮನವನ್ನು ನೀಡಿ. ಸಾವಕಾಶವಾಗಿ ಮಾತನಾಡಿ, ಬಗೆಹರಿಸಿದರಾಯಿತು ಎಂದುಕೊಂಡ ಸಮಸ್ಯೆಯೊಂದು ವಿಕೋಪಕ್ಕೆ ಹೋಗುವುದರಿಂದ ಬಹಳ ಹಿಂಸೆ ಆಗಲಿದೆ. ಯಾವ ವ್ಯಕ್ತಿ ನಿಮ್ಮ ಮಾತನ್ನು ಮೀರುವುದಿಲ್ಲ ಎಂದು ಅಂದುಕೊಂಡಿರುತ್ತೀರೋ ಅಂಥವರೇ ಧ್ವನಿ ಏರಿಸಿ, ನಿಮ್ಮ ಅಭಿಪ್ರಾಯಗಳಿಗೆ- ಸಲಹೆಗಳಿಗೆ ವಿರುದ್ಧವಾಗಿ ಮಾತನಾಡಲಿದ್ದಾರೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮಗೆ ಮಾತು ನೀಡಿದವರು ಇನ್ಯಾರಿಗೋ ಅನುಕೂಲ ಮಾಡಿಕೊಡುವ ಸಲುವಾಗಿ ನೀಡಿದ್ದ ಭರವಸೆ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಹೇಳಲಿದ್ದಾರೆ. ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿ, ಮಾಡಿಕೊಂಡ ಸಿದ್ಧತೆ ವ್ಯರ್ಥ ಆಗುತ್ತದೆ ಎಂಬುದು ನಿಮ್ಮನ್ನು ಚಿಂತೆಗೆ ಗುರಿ ಮಾಡಲಿದೆ. ಎರಡು ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಇದ್ದಲ್ಲಿ ಅವರ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚಿನ ವೆಚ್ಚ ಆಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕಡಿಮೆ ಬೆಲೆಗೆ ಸಿಗುತ್ತಿದೆ ಎಂಬ ಕಾರಣಕ್ಕೆ ನಿಮಗೆ ಅಗತ್ಯವೇ ಇಲ್ಲದಿದ್ದರೂ ಕೆಲವು ವಸ್ತುಗಳನ್ನು ಈ ದಿನ ಖರೀದಿ ಮಾಡುವಂತೆ ಆಗಲಿದೆ. ಇನ್ನು ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಅಂತಾದರೆ ಇನ್ನೂ ಹೆಚ್ಚು ಮುಂಜಾಗ್ರತೆ ತೆಗೆದುಕೊಳ್ಳಬೇಕು. ನೀವಾಗಿಯೇ ದುಂಬಾಲು ಬಿದ್ದು ವಹಿಸಿಕೊಂಡಂಥ ಕೆಲಸಗಳನ್ನು ಗಡುವಿನೊಳಗೆ ಮುಗಿಸಿಕೊಡುವುದಕ್ಕೆ ಪ್ರಯತ್ನಿಸಿ.

ಲೇಖನ- ಸ್ವಾತಿ ಎನ್.ಕೆ.

Source link

WPL 2026 Prize Money: ಚಾಂಪಿಯನ್ ಆರ್​ಸಿಬಿ ಮೇಲೆ ಹಣದ ಸುರಿಮಳೆ; ಡೆಲ್ಲಿಗೂ ಭರ್ಜರಿ ಬಹುಮಾನ – Kannada News | RCB Wins WPL Final, Defeats Delhi Capitals! Champions Again, Secures ₹6 Cr Prize

ಇದರ ಜೊತೆಗೆ, ಪಂದ್ಯಾವಳಿಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ (ಆರೆಂಜ್ ಕ್ಯಾಪ್), ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ (ಪರ್ಪಲ್ ಕ್ಯಾಪ್) ಮತ್ತು ಪಂದ್ಯಾವಳಿಯ ಶ್ರೇಷ್ಠ ಆಟಗಾರ್ತಿಗೆ ತಲಾ 5 ಲಕ್ಷ ರೂ. ಬಹುಮಾನ ನೀಡಲಾಯಿತು. ಇದಲ್ಲದೆ, ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ್ತಿ ಮತ್ತು ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರ್ತಿಗೂ ತಲಾ 5 ಲಕ್ಷ ರೂ. ಬಹುಮಾನ ನೀಡಲಾಯಿತು.

Source link

ಈ ಕಟ್ಟಡದ ಮುಂಭಾಗ ರೀಲ್ಸ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡ ರಜತ್ – Kannada News | This is why Rajath Kishan latest reel creates controversy in Mysore

ಇದು ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡ. ಇತಿಹಾಸದ ಸ್ಮಾರಕ, ಸರ್ಕಾರಿ ಆಸ್ತಿ, ಪಾರಂಪರಿಕ ಮಹತ್ವ ಹೊಂದಿರುವ ಕಟ್ಟಡ. ಇದೇ ಕಟ್ಟಡದ ಮುಂದೆ ಬಿಗ್‌ಬಾಸ್ ಖ್ಯಾತಿಯ ರಜತ್ (Rajath Kishan) ಸಿಗರೇಟ್ ಸೇದುತ್ತಾ, ಕಾರಿನಿಂದ ಇಳಿಯುತ್ತಾ ವಿಲನ್ ಲುಕ್‌ನಲ್ಲಿ ವಿಡಿಯೋ ಶೂಟ್ ಮಾಡಿದ್ದಾರೆ. ಕಪ್ಪು ಉಡುಪು, ಬಿಂದಾಸ್ ಸ್ಟೈಲ್, ಬಾಯಲ್ಲಿ ಸಿಗರೇಟ್ ಇಟ್ಟುಕೊಂಡು ರೀಲ್ಸ್ ಮತ್ತು ವಿಡಿಯೋಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ. ದೂರು ಸ್ವೀಕರಿಸಿರುವ ಲಕ್ಷ್ಮಿಪುರಂ ಪೊಲೀಸರು ಪ್ರಾಥಮಿಕವಾಗಿ ಎನ್‌ಸಿಆರ್ ದಾಖಲಿಸಿದ್ದಾರೆ. ಅನುಮತಿ ಇಲ್ಲದೇ ಶೂಟಿಂಗ್ ನಡೆದಿದೆಯೇ? ಸಾರ್ವಜನಿಕ ಆಸ್ತಿಗೆ ಧಕ್ಕೆ ಆಗಿದೆಯೇ? ಕಾನೂನು ಉಲ್ಲಂಘನೆ ಆಗಿದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಊಟದ ನಂತರ ಸಿಹಿ ತಿನ್ನಬೇಕೆಂಬ ಬಯಕೆಗೆ ನಿಜವಾದ ಕಾರಣ ಏನು ಗೊತ್ತಾ? – Kannada News | Why Do I Cray Sweets After Eating?

ಸಾಮಾನ್ಯವಾಗಿ ಕೆಲವರಿಗೆ ಸಿಹಿ ತಿಂಡಿ ಸೇವನೆ ಮಾಡುವುದು ಎಂದರೆ ಬಲು ಇಷ್ಟ. ಅವರು ತಮ್ಮ ಒತ್ತಡ ನಿವಾರಿಸಿಕೊಳ್ಳಲು, ಸಂತೋಷ ಹಂಚಿಕೊಳ್ಳಲು ಹೀಗೆ ನಾನಾ ಕಾರಣಗಳಿಗೆ ಸಿಹಿ ತಿಂದು ಖುಷಿ ಪಡುತ್ತಾರೆ. ಆದರೆ ಇನ್ನು ಕೆಲವರು ಊಟ, ತಿಂಡಿ ಆದ ನಂತರ ಸಿಹಿತಿಂಡಿ ತಿನ್ನುವ ಅಭ್ಯಾಸ (Sweet Cravings) ಇಟ್ಟುಕೊಂಡಿರುತ್ತಾರೆ. ಕೆಲವು ಮನೆಗಳಲ್ಲಿ ಇದೊಂದು ಸಂಪ್ರದಾಯದಂತೆ ಮುಂದುವರೆದುಕೊಂಡು ಬಂದಿದೆ. ಆದರೆ ಊಟವಾದ ನಂತರ ಯಾಕೆ ಸಿಹಿ ತಿಂಡಿ ಸೇವನೆ ಮಾಡುತ್ತಾರೆ ಎಂದು ಎಂದಾದರೂ ಯೋಚಿಸಿದ್ದೀರಾ… ಇದಕ್ಕೆ ಕಾರಣಗಳು ಹಲವಾರಿದ್ದರು ಕೂಡ ಅದನ್ನು ನಿಯಂತ್ರಿಸುವ ಮಾರ್ಗಗಳತ್ತ ಗಮನ ಹರಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಊಟದ ನಂತರ ಸಿಹಿ ತಿನ್ನಲು ಮನಸ್ಸಾಗುವುದಕ್ಕೆ ಕಾರಣವೇನು?

ಕೆಲವರಿಗೆ ಸಿಹಿತಿಂಡಿ ತಿನ್ನಬೇಕು ಎಂಬ ಬಯಕೆ ಹೆಚ್ಚಾಗಿರುತ್ತದೆ. ಇನ್ನು ಹಲವರಿಗೆ ಆರೋಗ್ಯ ಸಮಸ್ಯೆಗಳಿಂದಾಗಿ ಸಿಹಿತಿಂಡಿಗಳನ್ನು ತಿನ್ನುವ ಆಸೆ ಉಂಟಾಗುತ್ತದೆ. ಅದರಲ್ಲಿಯೂ ಸಕ್ಕರೆ ಮಟ್ಟದಲ್ಲಿನ ಏರಿಳಿತ ಕೂಡ ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಜೊತೆಗೆ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಇದ್ದಾಗ, ಸಕ್ಕರೆ ಮಟ್ಟ ಕಡಿಮೆಯಾಗುತ್ತವೆ. ಆಗ ದೇಹವು ಶಕ್ತಿಗಾಗಿ ಹೆಚ್ಚಿನ ಸಕ್ಕರೆಯನ್ನು ಬಯಸುತ್ತದೆ, ಇದರ ಪರಿಣಾಮವಾಗಿ ಸಿಹಿ ತಿಂಡಿಗಳ ಬಯಕೆ ಉಂಟಾಗುತ್ತದೆ. ಅಷ್ಟೇ ಅಲ್ಲ, ಈ ರೀತಿ ಸಿಹಿ ತಿನ್ನಬೇಕು ಎಂದು ಅನಿಸುವುದಕ್ಕೆ ಒಂದು ಪ್ರಮುಖ ಕಾರಣವೆಂದರೆ ಪೌಷ್ಟಿಕಾಂಶದ ಕೊರತೆಯಾಗಿದೆ. ದೇಹದಲ್ಲಿ ಪೋಷಕಾಂಶಗಳ ಕೊರತೆಯಾದಾಗ ಸಿಹಿತಿಂಡಿ ತಿನ್ನಬೇಕು ಎಂಬ ಹಂಬಲ ಹೆಚ್ಚಾಗುತ್ತದೆ.

ಇದನ್ನೂ ಓದಿ: ಪದೇ ಪದೇ ಸಿಹಿತಿಂಡಿ ತಿನ್ನಬೇಕು ಅನಿಸುತ್ತಾ? ಹಾಗಿದ್ರೆ ಈ ವಿಷಯಗಳನ್ನು ನೀವು ತಿಳಿಯಲೇಬೇಕು!

ಕೆಲವರಿಗೆ ಪದೇ ಪದೇ ಬಾಯಾರಿಕೆಯಾಗುತ್ತದೆ ಅಂತವರು ಅದನ್ನು ಹಸಿವು ಎಂದು ತಪ್ಪಾಗಿ ತಿಳಿಯುತ್ತಾರೆ. ಈ ರೀತಿಯಾಗುವ ನಿರ್ಜಲೀಕರಣ ಕೂಡ ದೇಹವನ್ನು ಸಿಹಿತಿಂಡಿ ತಿನ್ನಬೇಕು ಎಂಬ ಬಯಕೆಗೆ ಕಾರಣವಾಗಬಹುದು. ಕೆಲವೊಮ್ಮೆ ದೇಹ ದಣಿದಿದ್ದಾಗಲೂ ಕೂಡ, ದೇಹ ಅಗತ್ಯ ಶಕ್ತಿ ಪಡೆಯಲು ಅಥವಾ ದಣಿವನ್ನು ನಿವಾರಿಸಿಕೊಳ್ಳಲು ಸಿಹಿಯಾಗಿರುವ ಆಹಾರ ಸೇವಿಸಲು ದೇಹ ಬಯಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದು ನಾಯಿಯಿಂದ ತಪ್ಪಿಸಿಕೊಳ್ಳಲು ಗೇಟ್ ಹಾರಿದವನಿಗೆ ಕಾದಿತ್ತು ಶಾಕ್! – Kannada News | Boy Jumps Gate To Escape from Stray Dog Chasing Him But shocked seeing 3 dogs inside watch video

ನವದೆಹಲಿ, ಫೆಬ್ರವರಿ 5: ಸೋಷಿಯಲ್ ಮೀಡಿಯಾದಲ್ಲಿ ದಿನವೂ ಅನೇಕ ವಿಡಿಯೋಗಳು, ರೀಲ್ಸ್​ಗಳು ವೈರಲ್ (Viral Video) ಆಗುತ್ತಲೇ ಇರುತ್ತವೆ. ಭಾರತದ ಕೆಲವು ಕಡೆ ಬೀದಿ ನಾಯಿಗಳ ಕಾಟ ಎಷ್ಟರ ಮಟ್ಟಿಗೆ ಇದೆ ಎಂದು ಹೊಸತಾಗಿ ಏನೂ ಹೇಳಬೇಕಾಗಿಲ್ಲ. ರಸ್ತೆಯಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನು ಬೀದಿ ನಾಯಿ ಅಟ್ಟಿಸಿಕೊಂಡು ಬಂದಿತ್ತು. ಹೀಗಾಗಿ, ಆ ನಾಯಿಯಿಂದ ತನ್ನನ್ನು ಕಾಪಾಡಿಕೊಳ್ಳಲು ಬೇರೆ ದಾರಿ ಕಾಣದೆ ಆತ ಪಕ್ಕದಲ್ಲೇ ಇದ್ದ ಮನೆಯೊಂದರ ಗೇಟ್ ಹಾರಿ ಒಳಗೆ ಹೋಗಿದ್ದ. ಆದರೆ, ಆತನ ಅದೃಷ್ಟ ಕೆಟ್ಟಿತ್ತು. ಆ ಮನೆಯಲ್ಲಿ ದೈತ್ಯಾಕಾರದ ಮೂರು ನಾಯಿಗಳು ಕಾವಲು ಕಾಯುತ್ತಿದ್ದವು. ಆ ನಾಯಿಗಳು ಗೇಟ್ ಹಾರಿ ಬಂದವನ ಮೇಲೆ ದಾಳಿ ಮಾಡಲು ಬಂದವು. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WPL 2026 Final: ಫೈನಲ್‌ನಲ್ಲಿ ಡೆಲ್ಲಿ ಮಣಿಸಿ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದ ಆರ್​ಸಿಬಿ – Kannada News | RCB Crowned WPL 2026 Champions! Thrilling Win Over Delhi Capitals in Vadodara Final

ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ 2026 ರ ಮಹಿಳಾ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 203 ರನ್​ಗಳ ಬೃಹತ್ ರನ್ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಕೊನೆಯ ಓವರ್​ನಲ್ಲಿ ಗೆಲುವು ಸಾಧಿಸಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

Source link

WPL ಇತಿಹಾಸದಲ್ಲೇ ಅತಿ ವೇಗದ ಅರ್ಧಶತಕ ಬಾರಿಸಿದ ಸ್ಮೃತಿ ಮಂಧಾನ – Kannada News | Smriti Mandhana’s Fastest WPL Fifty: RCB vs DC 2026 Final Highlights from Vadodara

ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ 2026 ರ ಮಹಿಳಾ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 203 ರನ್​ಗಳ ಬೃಹತ್ ರನ್ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಪರ ನಾಯಕಿ ಸ್ಮೃತಿ ಮಂಧಾನ ನಾಯಕತ್ವದ ಇನ್ನಿಂಗ್ಸ್ ಆಡುವ ಮೂಲಕ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ಸ್ಮೃತಿ ನಿರ್ಮಿಸಿದರು.

Source link

ರಾತ್ರಿ ಹಿಂದೂ ಮಹಿಳೆಯ ಮನೆಯಲ್ಲಿ ಕಾಂಗ್ರೆಸ್​​ ಮುಖಂಡ ಸಿಕ್ಕಿಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – Kannada News | Congress Leader Rahil Sharif Caught With Hindu Married Woman in Chikkamagaluru, case Book Against 6 People

ಚಿಕ್ಕಮಗಳೂರು, (ಫೆಬ್ರವರಿ 05): ಚಿಕ್ಕಮಗಳೂರು (Chikkamagaluru) ನಗರದ ಗಾಂಧಿ ನಗರದಲ್ಲಿ ರಾತ್ರಿ ಹಿಂದೂ ಮಹಿಳೆಯ ಮನೆಯಲ್ಲಿ ಕಾಂಗ್ರೆಸ್​​ ಮುಖಂಡ ಸಿಕ್ಕಿಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ ಸಿಕ್ಕಿದೆ. ಚಿಕ್ಕಮಗಳೂರು ಕಾಂಗ್ರೆಸ್ (Congress) ಮುಖಂಡ ರಾಹಿಲ್ ಷರೀಫ್, ಚಿಕ್ಕಮಗಳೂರು ನಗರದ ಗಾಂಧಿ ನಗರದ ಹಿಂದೂ ಮಹಿಳೆ ಜೊತೆ ಇರುವಾಗಲೇ ಸಿಕ್ಕಿಬಿದ್ದಿದ್ದು, ಮಹಿಳೆಯ ಪತಿ ಸ್ಥಳೀಯರ ಜೊತೆ ಸೇರಿಕೊಂಡು ರೆಡ್​ ಹ್ಯಾಂಡ್​​ ಆಗಿ ಹಿಡಿದು ರಾಹಿಲ್ ಷರೀಫನಿಗೆ ಥಳಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು,  ಯಾವಾಗ ಈ ವಿಡಿಯೋ ವೈರಲ್ ಆಯ್ತೋ ಮಹಿಳೆ ಒಂದು ಹೇಳಿಕೆಯೊಂದನ್ನು ನೀಡಿದ್ದಾಳೆ. ರಾಹಿಲ್ ಷರೀಫ್ ಹಾಗೂ ನಾನು ಫ್ರೆಂಡ್ಸ್. ರಾತ್ರಿ ಹುಷಾರಿಲ್ಲ ಎಂದು ಪೋನ್ ಮಾಡಿ ಮಾತ್ರೆ ತರಿಸಿಕೊಂಡಿದ್ದೇ ಅಷ್ಟೆ ಎಂದು ಸ್ಪಷ್ಟನೆ ನೀಡಿದ್ದಾಳೆ. ಇನ್ನೂ ರಾಹಿಲ್ ಷರೀಫ್ ಸಹ ಮಾತ್ರೆ ಕೊಡಲು ಬಂದಿದ್ದೆ ಎಂದಿದ್ದಾನೆ.

ಮಹಿಳೆಯ ಪತಿ ಹರಿಬಿಟ್ಟ ವಿಡಿಯೋನಲ್ಲೇನಿದೆ?

ಇಬ್ಬರು ಹೇಳಿಕೆ ಬೆನ್ನಲ್ಲೇ ಮಹಿಳೆಯ ಪತಿಯೂ ಸಹ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಅದು ಆಕೆ ನೀಡಿದ ಹೇಳಿಕೆಗೆ ತದ್ವಿರುದ್ಧವಾಗಿದೆ. ರಾತ್ರಿ ಮನೆಯ ಬಾಗಿಲು ಓಪನ್ ಇತ್ತು. ನನ್ನ ಹೆಂಡತಿಯದ್ದೇ ಸ್ಕೂಟಿಯಲ್ಲಿ ರಾಹಿಲ್ ಷರೀಫ್ ಬಂದಿದ್ದ. ಬಳಿಕ ಇಬ್ಬರೂ ಸೇರಿ ಮನೆಯ‌ಬಾಗಿಲು ಹಾಕಿಕೊಂಡರು. ನಾನು ಕತ್ತಲಲ್ಲಿ ನಿಂತು ಎಲ್ಲವನ್ನೂ ನೋಡಿದೆ. ನಂತರ ಆಕೆಯ (ಹೆಂಡ್ತಿ) ಮನೆಯವರಿಗೆ ಪೋನ್ ಮಾಡಿ ಬರಲು ಹೇಳಿದ್ದು, ಆಮೇಲೆ ಹೋಗಿ ನೋಡಿದಾಗ ಬೆಡ್ ರೂಂನಲ್ಲಿದ್ದರು. ಕೇಳಿದ್ದಕ್ಕೆ ರಾಹಿಲ್ ಷರೀಫ್ ನಾನು ಬಾಂಬೆಯಿಂದ ಈಗ ಬಂದೆ ಅಂತೇಳಿದ. ಅದಕ್ಕೆ ಬಾಂಬೆಯಿಂದ ಬಂದ್ರೆ ನಿಮ್ಮ ಮನೆಗೆ ಹೋಗುವುದು ಬಿಟ್ಟು ಇಲ್ಲಿಗೆ ಯಾಕೆ ಬಂದೆ ? ನಿಮ್ಮ ಮನೆಗೆ ಹೋಗು ಅಂತಿದ್ದಂತೆ ಮಚ್ಚಿನಿಂದ‌ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಬೇರೊಬ್ಬರ ಹೆಂಡ್ತಿ ಜತೆ ಸಿಕ್ಕಿಬಿದ್ದು ಏಟು ತಿಂದ ಪ್ರಕರಣ: ಸ್ಫೋಟಕ ವಿಚಾರ ಬಿಚ್ಚಿಟ್ಟ ಮಹಿಳೆಯ ಗಂಡ!

ನಾವಿಬ್ರೂ ಬೇರೆ ಆಗಲು ರಾಹಿಲ್ ಷರೀಫ್ ಕಾರಣ

ಅಷ್ಟೇ ಅಲ್ಲದೆ ನಾವಿಬ್ಬರೂ ಲವ್ ಮಾಡಿ ಮದ್ವೆ ಆಗಿದ್ವಿ. ಆದರೆ ಕಳೆದ ಒಂದು ವರ್ಷದಿಂದ ದೂರ ಇದ್ದೇವೆ. ನಾವಿಬ್ರೂ ಬೇರೆ ಬೇರೆ ಆಗುವುದಕ್ಕೆ ರಾಹಿಲ್ ಷರೀಫ್ ಕಾರಣ. ಇನ್ನೂ ವರ್ಷದ ಹಿಂದೆ ನನ್ನ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ಹಾಕಿಸಿದ್ರು. ಅದಕ್ಕೂ ಕೂಡಾ ರಾಯಲ್ ಷರೀಫ್ ಕಾರಣ ಎಂದು ಮಹಿಳೆಯ ಪತಿ ಆರೋಪಿಸಿದ್ದಾನೆ.

ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಚಿಕ್ಕಮಗಳೂರು ನಗರ ಪೊಲಿಸರು, ರಾಹಿಲ್ ಷರೀಫ್, ಮಹಿಳೆಯ ಪತಿ ಸೇರಿದಂತೆ ಒಟ್ಟು 6 ಜನರ ವಿರುದ್ಧ ಸ್ವಯಂ ಪ್ರೇರಿತ(ಸುಮೊಟೊ) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಎನ್ಎಸ್ ಸೆಕ್ಷನ್ 194(2)ರ ಅಡಿ ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ ಮಾಡಿದ ಆರೋಪದಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಇದನ್ನೂ ನೋಡಿ: ರಾತ್ರಿ ವೇಳೆ ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್​​ ಮುಖಂಡ: ಹಿಗ್ಗಾಮುಗ್ಗಾ ಥಳಿಸಿದ ಯುವಕರು

ಒಟ್ಟಿನಲ್ಲಿ ಹಲ್ಲೆಯ ವಿಡಿಯೋ, ಮಹಿಳೆಯ ಸ್ಟೇಟ್ ಮೆಂಟ್, ಪತಿಯ ಹೇಳಿಕೆ‌ ಎಲ್ಲವೂ ನಗರ ಪೊಲೀಸ್ ಠಾಣೆಯ ಅಂಗಳಕ್ಕೆ ಶಿಫ್ಟ್ ಆಗಿದ್ದು. ಅಲ್ಲಿ ನಡೆದದ್ದೇನು? ಅಸಲಿಗೆ ಏನಾಯ್ತು? ಮಾತ್ರೆ ಕೊಡಲು ಹೋಗಿದ್ದ ಅಥವಾ ಪತಿ ಆರೋಪವೇ ನಿಜವಾ ಎನ್ನುವುದು ಪೊಲೀಸರ ತನಿಖೆಯ ಬಳಿಕವೇ ಹೊರಬರಬೇಕಿದೆ.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ಯಾರು? ಕೇಂದ್ರ ಸಚಿವರ ಭೇಟಿ ಬಳಿಕ ತೇಜಸ್ವಿ ಸೂರ್ಯ ಹೇಳಿದ್ದಿಷ್ಟು – Kannada News | Bengaluru Metro Fare Hike: MP Tejaswi Surya spark on karnataka government

ಬೆಂಗಳೂರು, ಫೆಬ್ರವರಿ 05: ಏಕಾಏಕಿ ಮೆಟ್ರೋ ಟಿಕೆಟ್‌ ದರ ಹೆಚ್ಚಿಸಿ ಬಿಎಂಆರ್‌ಸಿಎಲ್‌ ಆದೇಶ ಹೊರಡಿಸಿದೆ. ಸೋಮವಾರದಿಂದ ದುಬಾರಿ ಸವಾರಿಗೆ ಸಜ್ಜಾಗಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ಮಾಡಿದ್ದಾರೆ. ಇಂದು ದೆಹಲಿಯಲ್ಲಿ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್​​ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ಕೇವಲ 10 ತಿಂಗಳ ಹಿಂದೆಯೇ ಮೆಟ್ರೋ ದರವನ್ನು ಶೇ. 71ರಷ್ಟು ಹೆಚ್ಚಿಸಲಾಗಿತ್ತು. ಈ ಕಾರಣದಿಂದ ಬೆಂಗಳೂರು ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಎಂಬ ಕುಖ್ಯಾತಿಗೆ ಒಳಗಾಗಿದೆ. ಜನರ ಹಣ ಲೂಟಿ ಮಾಡಲು ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link