Category Archives: Blog

Your blog category

ಭಾರತ ಸೆಮೀಸ್ ಎದುರಾಳಿಯಾದ್ರೆ? ಪಾಕ್ ನಾಯಕ ನೀಡಿದ ಉತ್ತರವೇನು ನೋಡಿ – Kannada News | T20 World Cup 2026: Pakistan Boycotts India Match; Captain Agha Reveals Shocking Stance

2026 ರ ಟಿ20 ವಿಶ್ವಕಪ್‌ (T20 World Cup 2026) ಇನ್ನೇರಡು ದಿನಗಳಲ್ಲಿ ಆರಂಭವಾಗಲಿದೆ. ಆದಾಗ್ಯೂ ಕೋಟ್ಯಾಂತರ ಅಭಿಮಾನಿಗಳು ಕಾದು ಕುಳಿತಿದ್ದ ಪಂದ್ಯ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವೆ ಫೆಬ್ರವರಿ 15 ರಂದು ನಡೆಯಬೇಕಿತ್ತು. ಆದರೆ ಈ ಪಂದ್ಯ ರದ್ದಾಗಿದೆ. ಇದಕ್ಕೆ ಕಾರಣ ಪಾಕಿಸ್ತಾನ. ಟೀಂ ಇಂಡಿಯಾ ವಿರುದ್ಧದ ಈ ಪಂದ್ಯವನ್ನು ನಾವು ಬಹಿಷ್ಕರಿಸುತ್ತಿದ್ದೇವೆ ಎಂದು ಪಾಕಿಸ್ತಾನ ಪ್ರಧಾನಿ ಹೇಳಿಕೆ ನೀಡಿದ್ದಾರೆ. ಇದರಿಂದ ಲೀಗ್ ಹಂತದಲ್ಲಿ ಉಭಯ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯ ರದ್ದಾಗಿದೆ. ಪಾಕಿಸ್ತಾನದ ಈ ನಿರ್ಧಾರ ಅದಕ್ಕೆ ದೊಡ್ಡ ಆತಂಕವನ್ನು ತಂದೊಡ್ಡಿದೆ. ಏಕೆಂದರೆ ಸೆಮಿಫೈನಲ್ ಹಾಗೂ ಫೈನಲ್​ನಲ್ಲಿ ಟೀಂ ಇಂಡಿಯಾವೇ ಪಾಕಿಸ್ತಾನಕ್ಕೆ ಎದುರಾದರೆ, ಆಗಲೂ ಪಾಕಿಸ್ತಾನ ಆ ಪಂದ್ಯವನ್ನು ಬಹಿಷ್ಕರಿಸುತ್ತದಾ ಎಂಬ ಪ್ರಶ್ನೆ ಮೂಡಿದೆ.

ಸೆಮೀಸ್ ಮತ್ತು ಫೈನಲ್​ನಲ್ಲಿ ಎದುರಾದರೆ?

ಲೀಗ್ ಹಂತದಲ್ಲಿ ಪಂದ್ಯವನ್ನು ಬಹಿಷ್ಕರಿಸುತ್ತಿರುವುದು ಪಾಕಿಸ್ತಾನಕ್ಕೆ 2 ಅಂಕಗಳ ನಷ್ಟವನ್ನುಂಟು ಮಾಡುತ್ತದೆ. ಆದರೆ ಇತರೆ ತಂಡಗಳ ವಿರುದ್ಧ ಗೆದ್ದು ಮುಂದಿನ ಹಂತಕ್ಕೆ ಹೋಗುವ ಅವಕಾಶ ಪಾಕಿಸ್ತಾನಕ್ಕಿದೆ. ಆದರೆ ಸೆಮಿಫೈನಲ್ ಹಾಗೂ ಫೈನಲ್ ಸುತ್ತಿನಲ್ಲಿ ಅದು ಸಾಧ್ಯವಿಲ್ಲ. ಒಂದು ವೇಳೆ ಪಾಕಿಸ್ತಾನ ಆ ಸಂದರ್ಭದಲ್ಲೂ ತನ್ನ ನಿರ್ಧಾರಕ್ಕೆ ಬದ್ಧವಾಗಿ ನಿತ್ತರೆ ಅದು ಟೂರ್ನಿಯಿಂದಲೇ ಹೊರಬೀಳಬೇಕಾಗುತ್ತದೆ. ಇದೀಗ ಇದೇ ಪ್ರಶ್ನೆಯನ್ನು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಘಾ ಬಳಿ ಕೇಳಲಾಗಿದೆ.

ಕೊಲಂಬೊದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಲ್ಮಾನ್ ಆಘಾ ಈ ವಿಷಯವನ್ನು ಪ್ರಸ್ತಾಪಿಸಿದರು. ‘ಭಾರತದ ವಿರುದ್ಧದ ಪಂದ್ಯ ನಮ್ಮ ನಿಯಂತ್ರಣದಲ್ಲಿಲ್ಲ. ಅದು ಪಾಕಿಸ್ತಾನ ಸರ್ಕಾರದ ನಿರ್ಧಾರ, ಮತ್ತು ನಾವೆಲ್ಲರೂ ಅದನ್ನು ಗೌರವಿಸುತ್ತೇವೆ. ಅವರು ಏನು ಹೇಳುತ್ತಾರೋ ಅದನ್ನು ನಾವು ಮಾಡುತ್ತೇವೆ’ ಎಂದರು. ಇದೇ ವೇಳೆ ನಾಕೌಟ್ ಪಂದ್ಯಗಳಲ್ಲಿಯೂ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮುಖಾಮುಖಿಯಾದರೆ, ಮತ್ತೊಮ್ಮೆ ಪಾಕಿಸ್ತಾನ ಸರ್ಕಾರದ ನಿರ್ಧಾರಕ್ಕೆ ತಂಡ ಬದ್ಧವಾಗಿರುತ್ತಾ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸಲ್ಮಾನ್ ಆಘಾ, ‘ನಾವು ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಮತ್ತೆ ಆಡಬೇಕಾದ ಸಂದರ್ಭ ಬಂದರೆ ಆಗಲೂ ಸರ್ಕಾರದ ಸಲಹೆಯನ್ನು ಅನುಸರಿಸಬೇಕಾಗುತ್ತದೆ’ಎಂದಿದ್ದಾರೆ.

ಬಾಂಗ್ಲಾ ಆಡದಿರುವುದು ನಿರಾಶೆ ತಂದಿದೆ

ಇದೇ ವೇಳೆ ಬಾಂಗ್ಲಾದೇಶ ತಂಡ ಹಿಂದೆ ಸರಿದಿರುವುದರ ಬಗ್ಗೆ ಮಾತನಾಡಿದ ಅಘಾ, ‘ಬಾಂಗ್ಲಾದೇಶ ತಂಡವು ಟೂರ್ನಮೆಂಟ್‌ನಲ್ಲಿ ಆಡದಿರುವುದು ದುರದೃಷ್ಟಕರ. ಅವರು ನಮ್ಮ ಸಹೋದರರು. ಅವರು ಟೂರ್ನಮೆಂಟ್‌ನಲ್ಲಿ ನಮ್ಮನ್ನು ಬೆಂಬಲಿಸಬಹುದಿತ್ತು ಎಂದು ನಾನು ಹೇಳುತ್ತೇನೆ. ಮತ್ತು ಅವರನ್ನು ಈ ಸ್ಥಿತಿಯಲ್ಲಿ ನೋಡುವುದು ನಿಜಕ್ಕೂ ದುಃಖಕರವಾಗಿದೆ’ ಎಂದರು. ಇನ್ನು ಕಳೆದ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ವಿರುದ್ಧದ ಸೋಲಿನ ಬಗ್ಗೆಯೂ ಮಾತನಾಡಿದ ಸಲ್ಮಾನ್ ಆಘಾ, ‘ನಾವು ಕಳೆದ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ವಿರುದ್ಧ ಸೋತಿದ್ದೇವೆ, ಆದರೆ ಅದು ಹಿಂದಿನದು. ಇದು ಹೊಸ ವಿಶ್ವಕಪ್. ಇದು ಹೊಸ ತಂಡ, ಮತ್ತು ನಾವು ಇದಕ್ಕಾಗಿ ತುಂಬಾ ಉತ್ಸುಕರಾಗಿದ್ದೇವೆ. ನಾಯಕನಾಗಿ ಇದು ನನ್ನ ಮೊದಲ ವಿಶ್ವಕಪ್, ಮತ್ತು ನಾನು ತಂಡವನ್ನು ಮುನ್ನಡೆಸಲು ಬಯಸುತ್ತೇನೆ. ಪ್ರತಿಯೊಬ್ಬ ಆಟಗಾರನು ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ವಾತಾವರಣವನ್ನು ಸೃಷ್ಟಿಸಲು ನಾನು ಬಯಸುತ್ತೇನೆ’ ಎಂದಿದ್ದಾರೆ.

9 ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಇದುವರೆಗೆ ಮುರಿಯಲಾಗದ ದಾಖಲೆಗಳಿವು

ಪಾಕಿಸ್ತಾನದ ವೇಳಾಪಟ್ಟಿ

ಟಿ20 ವಿಶ್ವಕಪ್​​ನಲ್ಲಿ ಪಾಕಿಸ್ತಾನದ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 7 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ. ನಂತರ ಫೆಬ್ರವರಿ 10 ರಂದು ಅಮೆರಿಕವನ್ನು ಎದುರಿಸಲಿದೆ. ಫೆಬ್ರವರಿ 15 ರಂದು ಪಾಕಿಸ್ತಾನ ಭಾರತವನ್ನು ಎದುರಿಸಲಿದೆ. ಆದಾಗ್ಯೂ, ಈ ಪಂದ್ಯದ ಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ. ಫೆಬ್ರವರಿ 18 ರಂದು ನಮೀಬಿಯಾ ವಿರುದ್ಧ ಅಂತಿಮ ಲೀಗ್ ಪಂದ್ಯ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಸಿವಿನಿಂದ ಅಳುತ್ತಿದ್ದ 5 ವರ್ಷದ ಮಗಳಿಗೆ ಹೆಂಡ ಕುಡಿಸಿ, ಕತ್ತು ಹಿಸುಕಿ ಕೊಂದ ಕುಡುಕ! – Kannada News | Punjab Drunk father Killed 5 Year Old Daughter After She Cried For Food

ಜಲಂಧರ್, ಫೆಬ್ರವರಿ 5: ಪಂಜಾಬ್‌ನ ಜಲಂಧರ್‌ನಲ್ಲಿ ತಂದೆಯೊಬ್ಬ ತನ್ನ ಐದು ವರ್ಷದ ಮಗಳು ಹಸಿವಿನಿಂದ ಅಳುತ್ತಿದ್ದ ಕಾರಣ ಆಕೆಯ ಬಾಯಿಗೆ ಆಲ್ಕೋಹಾಲ್ (Alcohol) ಹಾಕಿ, ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ಜಲಂಧರ್‌ನಲ್ಲಿ ವಾಸಿಸುತ್ತಿರುವ ಛತ್ತೀಸ್‌ಗಢ ಮೂಲದ ಆರೋಪಿ ಅರವಿಂದ್​​ನನ್ನು ಆತನ ನೆರೆಯ ಮನೆಯ ಹಿಮ್ಮತ್ ಕುಮಾರ್ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಅರವಿಂದ್ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ, ವಿಪರೀತ ಕುಡಿಯುತ್ತಿದ್ದ.

5 ವರ್ಷದ ಬಾಲಕಿಯ ತಾಯಿ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಅರವಿಂದ್ ತನ್ನ ಹಸಿದ ಮತ್ತು ಅಳುತ್ತಿದ್ದ ಮಗಳ ಬಾಯಿಗೆ ಆಲ್ಕೋಹಾಲ್ ಸುರಿದು ಅವಳನ್ನು ಸುಮ್ಮನಾಗಿಸಲು ಪ್ರಯತ್ನಿಸಿದನು. ಆದರೂ ಆಕೆ ಅಳತೊಡಗಿದಾಗ ಕೋಪದಿಂದ ಆಕೆಯನ್ನು ನೆಲಕ್ಕೆ ಎಸೆದನು. ಆದರೂ ಅವಳು ಅಳುತ್ತಲೇ ಇದ್ದಾಗ, ಅವಳ ಕತ್ತು ಹಿಸುಕಿದನು. ಇದರಿಂದಾಗಿ ಅವಳು ತಕ್ಷಣವೇ ಸಾವನ್ನಪ್ಪಿದಳು.

ಇದನ್ನೂ ಓದಿ: ಹೆತ್ತ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಅಪ್ಪ; ಡಿಎನ್​ಎ ಪರೀಕ್ಷೆಯಲ್ಲಿ ಸತ್ಯ ಬಯಲು

“ಆರೋಪಿಗೆ ಸರಿಯಾದ ಕೆಲಸವಿರಲಿಲ್ಲ. ಕುಡಿತದ ಅಮಲಿನಲ್ಲಿದ್ದಾಗ ಆಗಾಗ ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ. ಕೌಟುಂಬಿಕ ಕಲಹಗಳು ಮತ್ತು ಆರ್ಥಿಕ ತೊಂದರೆಗಳಿಂದಾಗಿ ಕುಟುಂಬವು ತೀವ್ರ ಸಂಕಷ್ಟದಲ್ಲಿತ್ತು” ಎಂದು ನೆರೆಹೊರೆಯವರ ಸಾಕ್ಷ್ಯಗಳನ್ನು ಉಲ್ಲೇಖಿಸಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದ ಆ ಮಗುವಿನ ತಾಯಿ ತೀವ್ರ ದುಃಖಿತರಾಗಿದ್ದಾರೆ. ಮಗುವಿನ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಸ್ ಟಿಕೆಟ್ ದರ ಏರಿಕೆ ಆಗಿದ್ಯಾ? ಅಂತೆ-ಕಂತೆಗಳಿಗೆ ಸ್ಪಷ್ಟನೆ ನೀಡಿದ ಕೆಎಸ್‌ಆರ್‌ಟಿಸಿ – Kannada News | KSRTC Clarifies No Bengaluru to Mysuru Bus Fare Hike

ಬೆಂಗಳೂರು, ಫೆಬ್ರವರಿ 05: ಪ್ರಯಾಣಿಕರ ವಿರೋಧದ ನಡುವೆಯೂ ನಮ್ಮ ಮೆಟ್ರೋ ಟಿಕೆಟ್‌ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಅಸ್ತು ಎಂದಿದೆ. ಸೋಮವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಸದ್ಯ ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಿರುವಾಗ ಸರ್ಕಾರಿ ಬಸ್​​ಗಳ ಟಿಕೆಟ್ ದರ ಏರಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು. ಸದ್ಯ ಈ ವಿಚಾರವಾಗಿ ಯಾವುದೇ ಟಿಕೆಟ್ ದರ ಏರಿಕೆ ಆಗಿಲ್ಲ ಎಂದು ಕೆಎಸ್ಆರ್​​ಟಿಸಿ ನಿಗಮ (KSRTC) ಸ್ಪಷ್ಟನೆ ನೀಡಿದೆ.

ಪ್ರಕಟಣೆಯಲ್ಲಿ ಏನಿದೆ?

ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣ ವ್ಯತ್ಯಾಸದ ಬಗ್ಗೆ ವರದಿಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕೆಎಸ್ಆರ್​​ಟಿಸಿ ನಿಗಮ, ಮೈಸೂರು ಮತ್ತು ಬೆಂಗಳೂರು ನಡುವಿನ ಐರಾವತ ಕ್ಲಬ್ ಕ್ಲಾಸ್ ದರ 430 ರೂ. ಆಗಿರುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ: ಭಾರೀ ವಿರೋಧ ಬೆನ್ನಲ್ಲೇ ಎಚ್ಚೆತ್ತ ಸಚಿವರು: ಸರ್ಕಾರಿ ಬಸ್​ಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ತೆರವಿಗೆ ಸೂಚನೆ

ಪ್ರಯಾಣದ ಸಮಯದಲ್ಲಿ ವಿತರಣೆಯಾಗಿರುವ 431 ರೂ. ಮೌಲ್ಯದ ಟಿಕೆಟ್ ನಿರ್ವಾಹಕರು ಮಾರ್ಗಕ್ಕೆ ತೆರಳಿ ಕಾರ್ಯಾಚರಣೆ ಮಾಡುವಾಗ ಸದರಿ ಮಾರ್ಗಕ್ಕೆ ಇಟಿಎಂ ಯಂತ್ರದಲ್ಲಿ ಆಯ್ಕೆ ಮಾಡಬೇಕಾದ ರೂಟ್ ನಂಬರ್ 94ರ ಬದಲು ಇಟಿಎಂ ಯಂತ್ರದ ರೂಟ್ ನಂಬರ್ 908ನ್ನು ತಪ್ಪಾಗಿ ಆಯ್ಕೆ ಮಾಡಿಕೊಂಡು ಕಾರ್ಯಾಚರಣೆ ಮಾಡಿರುವುದರಿಂದ ಈ ರೀತಿ ಆಗಿದ್ದು, ಇದನ್ನು ಸರಿಪಡಿಸಲಾಗಿದೆ. ಯಾವುದೇ ದರ ಏರಿಕೆ ಆಗಿರುವುದಿಲ್ಲ ಎಂದು ಕೆಎಸ್ಆರ್​​ಟಿಸಿ ನಿಗಮ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಕರ್ನಾಟಕ ಸಾರಿಗೆ ನೌಕರರಿಂದ ಜ. 29ರಂದು ‘ಬೆಂಗಳೂರು ಚಲೋ’: ಬೇಡಿಕೆ ಈಡೇರದಿದ್ದರೆ ಮುಷ್ಕರಕ್ಕೂ ಪ್ಲ್ಯಾನ್​​!

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಇತ್ತೀಚೆಗೆ ಸಿಡಿದೆದ್ದಿದ್ದರು. ಆ ಮೂಲಕ ‘ಬೆಂಗಳೂರು ಚಲೋ’ಗೆ ಕರೆ ನೀಡಿದ್ದರು. ಕರ್ನಾಟಕ ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಫ್ರೀಡಂ ಪಾರ್ಕ್​​ನಲ್ಲಿ ನಾಲ್ಕೂ ನಿಗಮಗಳಿಂದ ಪ್ರತಿಭಟನೆ ನಡೆಯಬೇಕಿತ್ತು. ಆದರೆ ಅನಂತ್ ಸುಬ್ಬರಾವ್​ ಅವರ ನಿಧನ ಹಿನ್ನೆಲೆ ಬೆಂಗಳೂರು ಚಲೋ ಅನ್ನು ಮುಂದೂಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹೆತ್ತ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಅಪ್ಪ; ಡಿಎನ್​ಎ ಪರೀಕ್ಷೆಯಲ್ಲಿ ಸತ್ಯ ಬಯಲು – Kannada News | Mumbai shcoking news; DNA test confirms father Raped and impregnated disabled daughter

ಮುಂಬೈ, ಫೆಬ್ರವರಿ 5: 9 ತಿಂಗಳ ತುಂಬು ಗರ್ಭಿಣಿಯಾದ (Pregnant) 20 ವರ್ಷದ ಯುವತಿ ಗರ್ಭಿಣಿಯಾಗಿದ್ದಳು. ಆದರೆ, ಆಕೆಗೆ ತನ್ನ ಮಗುವಿಗೆ ತಂದೆ ಯಾರೆಂದೇ ಗೊತ್ತಿರಲಿಲ್ಲ. ಏಕೆಂದರೆ, ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದಳು. ಹೀಗಾಗಿ, ತನ್ನ ಜೊತೆ ಯಾರು ಕೆಟ್ಟದಾಗಿ ವರ್ತಿಸಿದರು, ತನ್ನ ದೇಹದಲ್ಲಿ ಯಾವೆಲ್ಲ ಬದಲಾವಣೆಯಾಗುತ್ತಿದೆ, ತಾನು ತಾಯಿಯಾಗುತ್ತಿದ್ದೇನೆ ಎಂಬಿತ್ಯಾದಿ ಯಾವ ವಿಷಯವೂ ಆಕೆಗೆ ಗೊತ್ತಾಗುತ್ತಿರಲಿಲ್ಲ. ಹೀಗಾಗಿ, ಕಳೆದ 4 ತಿಂಗಳಿಂದ ಆಕೆಯ ಮೇಲೆ ಅತ್ಯಾಚಾರ ನಡೆಸಿದವನನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಲೇ ಇದ್ದರು. ಇದಕ್ಕೆ ಕೊನೆಯ ಆಯ್ಕೆಯೆಂಬಂತೆ ಆ ಯುವತಿಯ ಸುತ್ತಮುತ್ತಲಿನ ಮನೆಯವರು, ಸಂಬಂಧಿಕರು ಹೀಗೆ ಒಟ್ಟು 17 ಗಂಡಸರ ಡಿಎನ್​ಎ ಪರೀಕ್ಷೆ ನಡೆಸಲಾಗಿತ್ತು. ಆದರೆ, ಅದರಿಂದ ಬಂದ ಫಲಿತಾಂಶ ನೋಡಿ ಪೊಲೀಸರು ಮಾತ್ರವಲ್ಲದೆ ಆ ಯುವತಿಯ ಕುಟುಂಬದವರೂ ಶಾಕ್ ಆಗಿದ್ದಾರೆ.

ಏಕೆಂದರೆ, ಆ ಯುವತಿಯ ತಂದೆಯೇ ಆಕೆಯ ಮೇಲೆ ಅತ್ಯಾಚಾರ ನಡೆಸಿ, ಗರ್ಭ ಧರಿಸಲು ಕಾರಣನಾದ ಪಾಪಿ. ಮಾನಸಿಕ ಅಸ್ವಸ್ಥಳಾದ ಆತನ ಮಗಳಿಗೆ ಕಿವಿ ಕೇಳುವುದಿಲ್ಲ ಹಾಗೂ ಮಾತನಾಡಲು ಕೂಡ ಬರುವುದಿಲ್ಲ. ಇದನ್ನೇ ದುರುಪಯೋಗ ಮಾಡಿಕೊಂಡ ಆತ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಬಳಿಕ ಈ ವಿಷಯ ಆಕೆಯ ತಾಯಿಯ ಗಮನಕ್ಕೆ ಬರುವಾಗ ಆಕೆ ಗರ್ಭಿಣಿಯಾಗಿದ್ದಳು. ಆಕೆಗೆ ಕಳೆದ ವರ್ಷ ಅಕ್ಟೋಬರ್​ನಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಗ ಆಕೆಯ ತಾಯಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಅವಳಿಗೆ 5 ತಿಂಗಳಾಗಿದೆ ಎಂಬುದು ಗೊತ್ತಾಗಿತ್ತು. ಆದರೆ, ಅದಕ್ಕೆ ಕಾರಣ ಯಾರು? ಎಂಬುದು ದೊಡ್ಡ ಪ್ರಶ್ನೆಯಾಗಿತ್ತು.

ಇದನ್ನೂ ಓದಿ: Viral News: ಮಾತು ಬಿಟ್ಟಿದ್ದಕ್ಕೆ ಪ್ರಿಯಕರನನ್ನೇ ಕೊಂದ ಯುವತಿ!

ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟ ಪೊಲೀಸರು ಆಕೆಯ ವರ್ತನೆಯನ್ನು ಪರಿಗಣಿಸಿ, ಆಕೆಗೆ ಏನಾಯಿತು ಎಂಬುದನ್ನು ತಿಳಿಯಲು ಆಕೆಯ ಸುತ್ತಮುತ್ತಲಿನ ಸಂಬಂಧಿಕರು ಮತ್ತು ಇತರರು ಸೇರಿದಂತೆ ಸುಮಾರು 16 ಜನರಿಂದ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿದ್ದರು. ಕೊನೆಗೆ ಆಕೆಯ ತಂದೆಯಿಂದಲೂ ಡಿಎನ್​ಎ ಸಂಗ್ರಹಿಸಿದ್ದರು. ಆಕೆ ಮಾನಸಿಕ ಅಸ್ವಸ್ಥೆಯಾದ್ದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಆಕೆಗೆ ಗರ್ಭಪಾತ ಮಾಡಲಾಗಿತ್ತು. ಆ ಭ್ರೂಣದ ಡಿಎನ್​ಎ ಮಾದರಿಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಯಿತು.

ಇದನ್ನೂ ಓದಿ: ಹನಿಮೂನ್ ಮರ್ಡರ್ 2.0: ಮದುವೆಯಾದ 3 ತಿಂಗಳಲ್ಲೇ ಗಂಡನನ್ನು ಕೊಂದು ಅಪಘಾತವೆಂದು ನಂಬಿಸಿದ ಹೆಂಡತಿ

3 ತಿಂಗಳ ಬಳಿಕ ಜನವರಿ 27ರಂದು, ವಿಧಿವಿಜ್ಞಾನ ತಜ್ಞರು ಆಕೆಯ ತಂದೆಯ ಜೊತೆ ಆಕೆಯ ಮಗುವಿನ ಡಿಎನ್‌ಎ ಹೊಂದಾಣಿಕೆ ಆಗುತ್ತಿದೆ ಎಂಬ ಆಘಾತಕಾರಿ ವರದಿ ನೀಡಿದ್ದಾರೆ. ಆ ವರದಿಯನ್ನು ಆಧರಿಸಿ ಆ ಯುವತಿಯ ಅಪ್ಪನನ್ನು ಈ ವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗಳ ಪಾಲಿಗೆ ಹೀರೋ ಆಗಬೇಕಿದ್ದ ಅಪ್ಪನೇ ವಿಲನ್ ಆಗಿರುವುದು ಆಘಾತ ಮತ್ತು ಆಕ್ರೋಶ ಮೂಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್​ನಿಂದ ಹೊರಬಿದ್ದ ಮುಸ್ತಾಫಿಜುರ್​ಗೆ ಪಿಎಸ್​ಎಲ್​ಲ್ಲಿ ಬಂಪರ್ ಬೆಲೆ – Kannada News | Mustafizur Rahman: IPL Exit Controversy to PSL Mega Deal and Cricket Politics

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರವನ್ನು ಖಂಡಿಸಿ, ಬಿಸಿಸಿಐ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಹಾಕಿತ್ತು. ಆ ಬಳಿಕ ಕ್ರಿಕೆಟ್ ಲೋಕದಲ್ಲಿ ದೊಡ್ಡ ವಿವಾದವೊಂದು ಹುಟ್ಟಿಕೊಂಡಿತು. ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್​ನಿಂದ ತನ್ನ ತಂಡದ ಹೆಸರನ್ನು ಹಿಂತೆಗೆದುಕೊಂಡಿತು. ಇತ್ತ ಪಾಕಿಸ್ತಾನ, ಟೀಂ ಇಂಡಿಯಾ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿತ್ತು.

Source link

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲು ‘ಬ್ಯಾಲೆಟ್ ಪೇಪರ್ʼ ಬಳಕೆ: ಸಂಪುಟ ನಿರ್ಧಾರ – Kannada News | Karnataka Cabinet Decides Used ballot papers In Local Body Polls instead of evm

ಬೆಂಗಳೂರು, (ಫೆಬ್ರವರಿ, 05): ಕರ್ನಾಟಕದ  (Karnataka) ಬಹುತೇಕ ಗ್ರಾಮ ಪಂಚಾಯಿತಿಗಳ   ಅಧಿಕಾರಾವಧಿ ಇದೇ ಫೆಬ್ರವರಿ-ಮಾರ್ಚ್‌ನಲ್ಲಿ ಮುಗಿಯಲಿದೆ. ಹೀಗಾಗಿ ಚುನಾವಣೆ ನಡೆಯುವವರೆಗೂ ಸರ್ಕಾರ ಆಡಳಿತಾಧಿಕಾರಿಗಳ ನೇಮಕಕ್ಕೆ ಆದೇಶ ಹೊರಡಿಸಿದೆ. ಮತ್ತೊಂದೆಡೆ  2026ರ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ (Gram Panchayt Elections) ನಡೆಸಲು ಸರ್ಕಾರ ಸಿದ್ಧತೆ ನಡೆಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪೂರ್ವಸಿದ್ಧತೆಗೆ ನಿರ್ದೇಶನ ನೀಡಲಾಗಿದೆ. ಈ ಎಲ್ಲಾ ಬೆಳವಣಿಗಗಳ ನಡುವೆ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಇಂದಿನ ಸಚಿವ ಸಂಪುಟ  ಸಭೆಯಲ್ಲಿ ನಿರ್ಧರಿಸಲಾಗಿದೆ.

ಇಂದು (ಫೆಬ್ರವರಿ 05) ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2026ಕ್ಕೆ ಅನುಮೋದನೆ ದೊರೆತ್ತಿದೆ. ಇದರೊಂದಿಗೆ ಸ್ಥಳೀಯ ಸಂಸ್ಥೆ ಅಂದ್ರೆ ಜಿಲ್ಲಾ, ತಾಲೂಕು, ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲೂ ಬ್ಯಾಲೆಟ್ ಪೇಪರ್ ಬಳಕೆಗೆ ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ತಾಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮೂಹುರ್ತ ಫಿಕ್ಸ್: ಗರಿಗೆದರಿದ ಹಳ್ಳಿ ರಾಜಕೀಯ

ಮತಗಳ್ಳತನದ ಪ್ರಕರಣಗಳು ಬಯಲಾದ ಬಳಿಕ ಜನಸಾಮಾನ್ಯರಲ್ಲಿ ಇವಿಎಂ ಮೇಲಿನ ವಿಶ್ವಾಸಾರ್ಹತೆ ಕಡಿಮೆಯಾಗಿದೆ. ಮತಗಳ್ಳತನಕ್ಕೆ ಸಂಬಂಧಿಸಿದಂತೆ ಹಲವಾರು ದೂರುಗಳು ಬಂದಿವೆ. ಆದ್ದರಿಂದ ಸಚಿವ ಸಂಪುಟವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಇವಿಎಂ ಬದಲು ಬ್ಯಾಲೇಟ್ ಪೇಪರ್ ಮೂಲಕ ನಡೆಸುವಂತೆ ಚುನಾವಣೆ ಆಯೋಗಕ್ಕೆ ತಿಳಿಸಲು ನಿರ್ಧರಿಸಲಾಗಿದೆ.

ಈಗಾಗಲೇ ಗ್ರೇಟರ್ ಬೆಂಗಳೂರು (ಜಿಬಿಎ) ಚುನಾವಣೆಯನ್ನೂ ಸಹ ಬ್ಯಾಲೆಟ್ ಪೇಪರ್ ನಡೆಸಲು ನಿರ್ಣಯಿಸಿದ್ದು, ಈ ಬಗ್ಗೆ ರಾಜ್ಯ ಚುನಾವಣೆ ಆಯೋಗವೂ ಸಹ ಜಿಬಿಎ ಎಲೆಕ್ಷನ್ ನಲ್ಲಿ ಇವಿಎಂ ಬಳಸದಿರಲು ತಿಳಿಸಿದೆ.  ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಹ ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.

ಏಪ್ರಿಲ್-ಮೇನಲ್ಲಿ ಸ್ಥಳೀಯ ಸಂಸ್ಥೆ ಎಲೆಕ್ಷನ್?

ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಮುಗಿಯಲಿದೆ. ಹೀಗಾಗಿ 2026ರ ಏಪ್ರಿಲ್‌- ಮೇ ತಿಂಗಳಲ್ಲಿ ಚುನಾವಣೆ ನಡೆಸಲು ಸರಕಾರ ಸಜ್ಜಾಗಿದ್ದು, ಪೂರ್ವಸಿದ್ಧತೆಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ಕೂಡ ನೀಡಿದೆ. ಈಗಾಗಲೇ ರಾಜ್ಯ ಚುನಾವಣಾ ಆಯೋಗವು ಅವಧಿ ಪೂರ್ಣಗೊಂಡ ಗ್ರಾಪಂಗಳಿಗೆ ನಿಗದಿತ ಕಾಲಮಿತಿಯಲ್ಲಿ ಮೀಸಲು ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರವನ್ನು ಕೋರಿದೆ.

ರಾಜ್ಯದ 5,948 ಗ್ರಾಪಂಗಳ ಪೈಕಿ 5,698 ಗ್ರಾಪಂಗಳಿಗೆ 2020 ಡಿಸೆಂಬರ್‌ನಲ್ಲಿ ಚುನಾವಣೆ ಆಗಿತ್ತು. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ 2021- 22ರಲ್ಲಿ ನಡೆದಿದ್ದರಿಂದ 2026ರ ಫೆಬ್ರವರಿ ಎರಡನೇ ವಾರಕ್ಕೆ ಈ ಪಂಚಾಯಿತಿ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿಯಲಿದೆ. ಇದರೊಟ್ಟಿಗೆ 2026ರ ಮಾರ್ಚ್ಗೆ ಮುಗಿಯುವ 92 ಗ್ರಾಪಂಗಳನ್ನು ಸೇರಿಸಿ ಚುನಾವಣೆ ನಡೆಸಲು ಸರಕಾರ ತಯಾರಿ ನಡೆಸಿದೆ. ಈಗಾಗಲೇ ರಾಜ್ಯದ 187 ನಗರ ಸ್ಥಳೀಯ ಸಂಸ್ಥೆಗಳ ಕೌನ್ಸಿಲ್‌ ಅವಧಿ ಮುಗಿದಿದೆ. 2021ರಿಂದಲೇ ರಾಜ್ಯದ 31 ಜಿಲ್ಲಾ ಪಂಚಾಯಿತಿ ಹಾಗೂ 240 ತಾಲೂಕು ಪಂಾಯಿತಿಗಳಿಗೆ ಎಲೆಕ್ಷನ್ ನಡೆದಿರುವುದರಿಂದ ಚುನಾಯಿತ ಪ್ರತಿನಿಧಿಗಳಿಲ್ಲ. ಹೀಗಾಗಿ ಏಪ್ರಿಲ್, ಮೇನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಾಧ್ಯತೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಚಿತ್ರೋತ್ಸವ: ಹಂಸಲೇಖಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ – Kannada News | Lifetime Achievement Award for Hamsalekha at Bengaluru International Film Festival

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ವತಿಯಿಂದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ (Lifetime Achievement Award) ನೀಡಿ ಗೌರವಿಸಲಾಗುತ್ತದೆ. ಕಳೆದ ಗುರುವಾರ (ಜನವರಿ 29) ಪ್ರಾರಂಭವಾದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವು (Bengaluru Film Festival) ಶುಕ್ರವಾರ (ಫೆಬ್ರವರಿ 6) ಸಮಾರೋಪ ಕಾಣಲಿದ್ದು, ಈ ಸಮಾರಂಭದಲ್ಲಿ ಹಂಸಲೇಖ (Hamsalekha) ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಈ ಸಂಬಂಧ ಇಂದು (ಫೆಬ್ರವರಿ 5) ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್‌ ವಿನೋದ್‌ ಚಂದ್ರ ಮತ್ತು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾದ ಮುರಳಿ ಅವರು ಹಂಸಲೇಖ ಅವರನ್ನು ಭೇಟಿ ಮಾಡಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಿದರು.

ಕಳೆದ ಒಂದು ವಾರದಿಂದ ಸಿನಿಮಾಸಕ್ತರ ಮನಸ್ಸು ಗೆದ್ದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಮಾರೋಪ ಸಮಾರಂಭ, ಸಂಜೆ 6ಕ್ಕೆ ಲುಲು ಮಾಲ್‌ನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಹಂಸಲೇಖ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಚಿತ್ರೋತ್ಸವದಲ್ಲಿ ಏಷ್ಯನ್‌ ಸಿನಿಮಾ, ಭಾರತೀಯ ಸಿನಿಮಾ ಮತ್ತು ಕನ್ನಡ ಸಿನಿಮಾ ಎಂಬ ಮೂರು ಸ್ಪರ್ಧಾ ವಿಭಾಗಗಳಿದ್ದು, ಈ ವಿಭಾಗಗಳಲ್ಲಿ ಸ್ಪರ್ಧಿಸಿ, ಪ್ರಶಸ್ತಿ ಗೆದ್ದವರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಈ ಕಾರ್ಯಕಮದ ಅಧ್ಯಕ್ಷತೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್‌ ಗೂಂಡೂರಾವ್‌ ವಹಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಡಾ. ಸಾಧು ಕೋಕಿಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲಾ, ಚಿತ್ರೋತ್ಸವದ ರಾಯಭಾರಿ ಪ್ರಕಾಶ್‌ ರಾಜ್‌ ಮುಂತಾದವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಬೇರೆ ದೇಶಗಳ ಸಿನಿಮಾ ಯಾಕೆ ನೋಡಬೇಕು? ವಿವರಿಸಿದ ಸಿಎಂ ಸಿದ್ದರಾಮಯ್ಯ

ಕನ್ನಡ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿರುವ ನಟಿ, ನಿರ್ಮಾಪಕಿ ಜಯಮಾಲಾ, ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು, ನಿರ್ಮಾಪಕಿ ಪಾರ್ವತಮ್ಮ ರಾಜ್​ಕುಮಾರ್ ಹಾಗೂ ಹಿರಿಯ ಛಾಯಾಗ್ರಾಹಕ ಎಸ್. ರಾಮಚಂದ್ರ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಪಾರ್ವತಮ್ಮ ಪರವಾಗಿ ಅವರ ಪುತ್ರಿ ಪೂರ್ಣಿಮಾ ರಾಮ್​ಕುಮಾರ್, ಎಸ್. ರಾಮಚಂದ್ರ ಪರವಾಗಿ ಅವರ ಪುತ್ರಿ ಉಷಾ ಗೌರವ ಸ್ವೀಕರಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆನ್ ಸ್ಟೋಕ್ಸ್​ಗೆ ಕಣ್ಣು, ಮುಖಕ್ಕೆ ಗಂಭೀರ ಗಾಯ – Kannada News | Ben Stokes’ Facial Injury: England Captain Narrowly Escapes Permanent Eye Damage

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. ಗಾಯದ ತೀವ್ರತೆ ಹೇಗಿದೆ ಎಂದರೇ ಸ್ಟೋಕ್ಸ್ ಅವರ ಮುಖವೇ ವಿರೂಪಗೊಂಡಿದೆ. ಬೆನ್ ಸ್ಟೋಕ್ಸ್ ಅವರ ಬಲ ಕಣ್ಣು ಹಾಗೂ ಕಣ್ಣಿನ ಕೆಳ ಭಾಗಕ್ಕೆ ಗಾಯವಾಗಿದೆ. ಸ್ವತಃ ಈ ವಿಚಾರವನ್ನು ಬೆನ್​ ಸ್ಟೋಕ್ಸ್ ಅವರೇ ತಮ್ಮ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಸ್ಟೋಕ್ಸ್ ಅವರ ಮುಖಕ್ಕೆ ಚೆಂಡು ಬಲವಾಗಿ ಬಡಿದಿದೆ ಎಂಬುದು ಸ್ಟೋಕ್ಸ್ ಅವರು ನೀಡಿರುವ ಮಾಹಿತಿಯಿಂದಲೇ ಖಚಿತವಾಗಿದೆ.

ಬೆನ್ ಸ್ಟೋಕ್ಸ್​ಗೆ ಗಂಭೀರ ಗಾಯ

ತಮ್ಮ ಗಾಯದ ಫೋಟೋವನ್ನು ಇನ್ಸ್​ಟಾಗ್ರಾಮ್​ ಫೋಸ್ಟ್​ನಲ್ಲಿ ಹಂಚಿಕೊಂಡಿರುವ ಸ್ಟೋಕ್ಸ್ ‘ನೀವು ಕ್ರಿಕೆಟ್ ಚೆಂಡಿನ ಸ್ಥಿತಿಯನ್ನು ಸಹ ಪರಿಶೀಲಿಸಬೇಕು’ ಎಂದು ಬರೆದಿದ್ದಾರೆ. ಸ್ಟೋಕ್ಸ್ ಕ್ರಿಕೆಟ್ ಆಡುವ ಸಮಯದಲ್ಲಿ ಈ ಗಾಯಕ್ಕೆ ತುತ್ತಾಗಿದ್ದಾರೆ ಎಂಬುದನ್ನು ಇದರಿಂದ ತಿಳಿಯಬಹುದಾಗಿದೆ. ಬೆನ್ ಸ್ಟೋಕ್ಸ್ ಅವರ ಕಣ್ಣಿನ ಕೆಳಗೆ ರಕ್ತ ಹೆಪ್ಪುಗಟ್ಟಿರುವುದನ್ನು ಮತ್ತು ಅವರ ಕೆನ್ನೆಯ ಬಳಿ ಕೆಂಪು ಗಲೆ ಇರುವುದನ್ನು ಕಾಣಬಹುದು. ಸ್ಟೋಕ್ಸ್ ಅವರ ಮೂಗಿನ ಕೆಳಗೂ ಗಾಯ ಆಗಿದೆ.

ಗಾಯದ ಸ್ಥಿತಿಯನ್ನು ನೋಡಿದರೆ ಸ್ಟೋಕ್ಸ್, ಕೂದಲೆಳೆ ಅಂತರದಿಂದ ದೊಡ್ಡ ಅವಘಡದಿಂದ ಪಾರಾಗಿದ್ದಾರೆ ಎನ್ನಬಹುದು. ಒಂದು ವೇಳೆ ಚೆಂಡು ಇನ್ನು ಸ್ವಲ್ಪ ಮೇಲ್ಬಾಗಕ್ಕೆ ಬಡಿದಿದ್ದರೆ, ಅವರ ಕಣ್ಣಿಗೆ ಗಂಭೀರ ಗಾಯವಾಗುತ್ತಿತ್ತು. ಇದರಿಂದ ಅವರು ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುತ್ತಿದ್ದರು. ಇದರಿಂದ ಅವರ ವೃತ್ತಿಜೀವನ ಅಂತ್ಯಗೊಳ್ಳುವ ಸಾಧ್ಯತೆ ಇತ್ತು. ಆದರೆ ಸಧ್ಯದ ಪರಿಸ್ಥಿತಿ ನೋಡಿದರೆ, ಸ್ಟೋಕ್ಸ್ ಗಂಡಾಂತರದಿಂದ ಪಾರಾಗಿದ್ದಾರೆ ಎನ್ನಬಹುದು.

ಈ ಹಿಂದೆಯೂ ಗಾಯಕ್ಕೆ ತುತ್ತಾಗಿದ್ದ ಸ್ಟೋಕ್ಸ್

ಬೆನ್ ಸ್ಟೋಕ್ಸ್ ಈ ರೀತಿಯ ಗಾಯಕ್ಕೆ ತುತ್ತಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಗಂಭೀರ ಗಾಯಗಳಿಂದ ಬಳಲಿದ್ದರು. 2014 ರಲ್ಲಿ, ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಶೂನ್ಯಕ್ಕೆ ಔಟಾಗಿದ್ದಕ್ಕೆ ತಾಳ್ಮೆ ಕಳೆದುಕೊಂಡಿದ್ದ ಸ್ಟೋಕ್ಸ್ ಡ್ರೆಸ್ಸಿಂಗ್ ರೂಮ್ ಲಾಕರ್‌ಗೆ ತಮ್ಮ ಬಲಗೈನಿಂದ ಗುದ್ದಿದ್ದರು. ಇದರಿಂದ ಅವರ ಬಲ ಮಣಿಕಟ್ಟು ಮುರಿದುಕೊಂಡಿತು. ಇದರಿಂದಾಗಿ ಅವರು ಮೂರು ತಿಂಗಳ ಕಾಲ ಆಟದಿಂದ ಹೊರಗುಳಿಯಬೇಕಾಯಿತು. ಜೊತೆಗೆ 2014 ರ ಟಿ20 ವಿಶ್ವಕಪ್​ನಿಂದಲೂ ಹೊರಬಿದ್ದಿದ್ದರು.

2021 ರಲ್ಲಿಯೂ ಸ್ಟೋಕ್ಸ್ ಬೆರಳಿಗೆ ಗಾಯ ಮಾಡಿಕೊಂಡಿದ್ದರು. 2023-24 ರ ದಿ ಹಂಡ್ರೆಡ್ ಲೀಗ್​ನಲ್ಲಿಯೂ ಸ್ಟೋಕ್ಸ್ ಎಡ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. 2025 ರಲ್ಲಿ ಅವರಿಗೆ ಮತ್ತೆ ಅದೇ ಗಾಯಕ್ಕೆ ತುತ್ತಾಗಿ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ಮೂರು ತಿಂಗಳ ಕಾಲ ಕ್ರಿಕೆಟ್​ನಿಂದ ದೂರವಿದ್ದರು. 2025 ರಲ್ಲಿ ಭುಜದ ಗಾಯದಿಂದ ಬಳಲುತ್ತಿದ್ದ ಸ್ಟೋಕ್ಸ್ ಭಾರತದ ವಿರುದ್ಧ ಐದನೇ ಟೆಸ್ಟ್​ನಿಂದ ಹೊರಬಿದ್ದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:50 pm, Thu, 5 February 26

Source link

ಬೆಂಗಳೂರು ಚಿತ್ರೋತ್ಸವದ ಕೊನೆಯ ದಿನ ಈ 10 ಸಿನಿಮಾ ಮಿಸ್ ಮಾಡಿಕೊಳ್ಳಬೇಡಿ – Kannada News | 10 Best movies to watch on last day in 17th Bengaluru International Film Festival

ಜನವರಿ 29ರಿಂದ ಫೆಬ್ರವರಿ 6ರ ತನಕ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Bengaluru Film Festival) ನಡೆದಿದೆ. ಫೆಬ್ರವರಿ 6ರಂದು ಸಮಾರೋಪ ಸಮಾರಂಭ ನಡೆಯಲಿದೆ. ಕನ್ನಡ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿರುವ ನಟಿ, ನಿರ್ಮಾಪಕಿ ಜಯಮಾಲಾ, ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು, ನಿರ್ಮಾಪಕಿ ಪಾರ್ವತಮ್ಮ ರಾಜ್​ಕುಮಾರ್ ಹಾಗೂ ಹಿರಿಯ ಛಾಯಾಗ್ರಾಹಕ ಎಸ್. ರಾಮಚಂದ್ರ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಪಾರ್ವತಮ್ಮ ಪರವಾಗಿ ಅವರ ಪುತ್ರಿ ಪೂರ್ಣಿಮಾ ರಾಮ್​ಕುಮಾರ್, ಎಸ್. ರಾಮಚಂದ್ರ ಪರವಾಗಿ ಅವರ ಪುತ್ರಿ ಉಷಾ ಗೌರವ ಸ್ವೀಕರಿಸಲಿದ್ದಾರೆ. ಫೆ.6ರಂದು ಲುಲು ಮಾಲ್​ನಲ್ಲಿ ನೋಡಬಹುದಾದ 10 ಅತ್ಯುತ್ತಮ ಸಿನಿಮಾಗಳಿವು.

  1. ನೌವೆಲ್ ವಾಗ್ : ರಾತ್ರಿ 8:20 ಸ್ಕ್ರೀನ್ 3, ರಾತ್ರಿ 7:30 ಸ್ಕ್ರೀನ್ 6, ಸಂಜೆ 7:20 ಸ್ಕ್ರೀನ್ 8. ಪ್ರಖ್ಯಾತ ನಿರ್ದೇಶಕ ರಿಚರ್ಡ್ ಲಿಂಕ್ಲೇಟರ್ ನಿರ್ದೇಶನದ ಈ 2025ರ ಚಿತ್ರವು ಫ್ರೆಂಚ್ ಸಿನಿಮಾ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.
  2. ಶಂಕರ್ ಗುರು: ಮಧ್ಯಾಹ್ನ 2:00 ಸ್ಕ್ರೀನ್ 6. ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರ ಅಭಿನಯದ ಈ 1978ರ ಮೈಲಿಗಲ್ಲು ಚಿತ್ರವನ್ನು ‘ಜನಪ್ರಿಯ ಮನರಂಜನಾ ಸಿನಿಮಾ’ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತಿದೆ.
  3. ಅಂಕಲ್ ಬೂನ್ಮಿ ಹೂ ಕ್ಯಾನ್ ರಿಕಾಲ್ ಹಿಸ್ ಪಾಸ್ಟ್ ಲೈವ್ಸ್: ಸಮಯ ಸಂಜೆ 4:10, ವಿಐಪಿ ಸ್ಕ್ರೀನ್ 1. ಅಪಿಚತ್‌ಪಾಂಗ್ ವೀರಸೇತಕುಲ್ ನಿರ್ದೇಶನದ ಈ ಥಾಯ್ ಚಿತ್ರವು ಆಧ್ಯಾತ್ಮಿಕ ಮತ್ತು ಪುನರ್ಜನ್ಮದ ಕುರಿತಾದ ಜಾಗತಿಕ ಮಟ್ಟದ ಶ್ರೇಷ್ಠ ಕಲಾಕೃತಿಯಾಗಿದೆ.
  4. ದಿ ಪ್ರೆಸಿಡೆಂಟ್ಸ್ ಕೇಕ್: ಸಂಜೆ 5:40, ಸ್ಕ್ರೀನ್ 4. ಹಸನ್ ಹಾದಿ ನಿರ್ದೇಶನದ ಈ 2025ರ ಅರೇಬಿಕ್ ಚಿತ್ರವು ಇರಾಕ್‌ನ ಸಮಕಾಲೀನ ಸಾಮಾಜಿಕ ಚಿತ್ರಣವನ್ನು ಕಟ್ಟಿಕೊಡುತ್ತದೆ.
  5. ಮ್ಯಾನ್ ಆಫ್ ಮಾರ್ಬಲ್: ಸಂಜೆ 6:50, ವಿಐಪಿ ಸ್ಕ್ರೀನ್ 1. ಪೋಲಿಷ್ ನಿರ್ದೇಶಕ ಅಂದ್ರೆಜ್ ವಾಜ್ದಾ ಅವರ ಈ 1977ರ ಚಿತ್ರವು ವಿಶ್ವ ಸಿನಿಮಾದ ಐತಿಹಾಸಿಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
  6. ಡಿವೈನ್ ಕಾಮಿಡಿ: ಮಧ್ಯಾಹ್ನ 12:30, ಸ್ಕ್ರೀನ್ 5. ಅಲಿ ಅಸ್ಗರಿ ನಿರ್ದೇಶನದ ಈ 2025ರ ಪರ್ಷಿಯನ್ ಚಿತ್ರವು ಏಷ್ಯನ್ ಸಿನಿಮಾ ಸ್ಪರ್ಧಾ ವಿಭಾಗದ ಅಡಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ.
  7. ದಿ ಮಾಸ್ಟರ್ ಮೈಂಡ್: ಮಧ್ಯಾಹ್ನ 2:30, ಸ್ಕ್ರೀನ್ 5. ಕೆಲ್ಲಿ ರೀಚಾರ್ಡ್ ನಿರ್ದೇಶನದ ಈ ಇಂಗ್ಲಿಷ್ ಚಿತ್ರವು ತನ್ನ ವಿಶಿಷ್ಟ ಕಥಾಹಂದರದಿಂದಾಗಿ ‘ಸಮಕಾಲೀನ ವಿಶ್ವ ಸಿನಿಮಾ’ ವಿಭಾಗದಲ್ಲಿ ಗಮನಸೆಳೆಯುತ್ತಿದೆ.
  8. ಡ್ರಾಗನ್‌ಫ್ಲೈ: ಬೆಳಗ್ಗೆ 11:30, ಸ್ಕ್ರೀನ್ 3. ಪಾಲ್ ಆಂಡ್ರ್ಯೂ ವಿಲಿಯಮ್ಸ್ ನಿರ್ದೇಶನದ ಈ 2025ರ ಇಂಗ್ಲಿಷ್ ಚಿತ್ರವು ಗಂಭೀರ ಕಥಾಹಂದರ ಹೊಂದಿರುವ ಪ್ರಮುಖ ಚಿತ್ರವಾಗಿದೆ.
  9. ಗಣರಾಜ್: ಮಧ್ಯಾಹ್ನ 3:00. ವಿಐಪಿ ಸ್ಕ್ರೀನ್ 2. ಭಾರತದ ಈಶಾನ್ಯ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಈ 2025ರ ಅಸ್ಸಾಮಿ ಚಿತ್ರವನ್ನು ದಿಪ್ ಭುಯಾನ್ ನಿರ್ದೇಶಿಸಿದ್ದಾರೆ.
  10. ಕ್ಯಾಟನೇ: ಸಂಜೆ 4:50, ಸ್ಕ್ರೀನ್ 1. ಅಯೋನಾ ಮಿಸ್ಚೀ ನಿರ್ದೇಶನದ ಈ 2025ರ ರೋಮೇನಿಯನ್ ಚಿತ್ರವು ಯುರೋಪಿಯನ್ ಸಿನಿಮಾದ ಆಧುನಿಕ ಶೈಲಿಯನ್ನು ಪ್ರತಿನಿಧಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೀದರ್​​​ನ ಅದೊಂದು ಗ್ರಾಮದಲ್ಲಿ ಭೂಮಿಯಿಂದ ಹೊರಹೊಮ್ಮುತ್ತಿದೆ ವಿಚಿತ್ರ ಶಬ್ಧ – Kannada News | Dokulagi Village Mystery: Strange Ground Sounds Terrify Bidar Residents, Officials Investigate

ಗ್ರಾಮಕ್ಕೆ ಅಧಿಕಾರಿಗಳ ಭೇಟಿImage Credit source: tv9 kannada

ಬೀದರ್, ಫೆಬ್ರವರಿ 05: ಜಿಲ್ಲೆಯ ಹುಮ್ನಾಬಾದ್ (Humnabad) ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ಭೂಮಿಯಿಂದ ಬರುತ್ತಿದ್ದ ಭಯಂಕರ ಶಬ್ದದಿಂದಾಗಿ (sound) ಜನರು ಆತಂಕಗೊಂಡಿದ್ದಾರೆ. ಬುಧವಾರ ರಾತ್ರಿ ನಾಲ್ಕೈದು ಭಾರೀ ಭೂಮಿ ಒಳಗಡೆಯಿಂದ ಬರುತ್ತಿದ್ದ ಶಬ್ಧದಿಂದಾಗಿ ಜನ ಮನೆಯೊಳಗಿರಲು ಹೆದರುತ್ತಿದ್ದಾರೆ. ರಾತ್ರಿ ಭಯಂಕರ ಶಬ್ದ ಬಂದು ಭೂಮಿ ನಡುಗಿದಂತಾಗಿದ್ದು, ಜನರು ಮನೆಯಿಂದ ಹೊರ ಓಡಿಬಂದಿದ್ದಾರೆ. ಸದ್ಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ.

ಭೂಮಿಯಿಂದ ವಿಚಿತ್ರ ಶಬ್ಧ

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಾಲ್ಕೈದು ಸಲ ಬಾಂಬ್ ಬಿದ್ದ ಹಾಗೆ ಸೌಂಡ್ ಆಗಿದ್ದು, ಗ್ರಾಮಸ್ಥರಿಗೆ ಆತಂಕ ಹೆಚ್ಚಾಗಿದೆ. ದೊಡ್ಡ ಮಟ್ಟದ ಸೌಂಡ್​ ಆಗಿದ್ದರಿಂದ ನಿನ್ನೆ ಇಡೀ ರಾತ್ರಿ ಗ್ರಾಮಸ್ಥರು ನಿದ್ರೆ ಮಾಡದೆ ರಾತ್ರಿ ಇಡೀ  ಜಾಗರಣೆ ಮಾಡಿದ್ದಾರೆ. ಭೂಮಿಯಿಂದ ವಿಚಿತ್ರ ಶಬ್ಧ ಬರುತ್ತಿದೆ. ಈ ರೀತಿಯ ಶಬ್ದ ಭೂಮಿಯಿಂದ ಬಂದಾಗ ಭೂಮಿ ಕಂಪನವಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಮಾಂಜ್ರಾ ನದಿ ಒಡಲು ಬಗೆಯುತ್ತಿರುವ ದಂಧೆಕೋರರು: ಹಗಲು-ರಾತ್ರಿ ಎನ್ನದೆ ಮರಳು ಮಾಫಿಯಾ

ಇನ್ನು ಈ ವಿಚಾರವನ್ನು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಪಿಡಿಓ, ತಹಶಿಲ್ದಾರ್, ತಾಲೂಕು ಪಂಚಾಯತ್ ಇಓ ಸೇರಿಕೊಂಡು ಗ್ರಾಮಕ್ಕೆ ಬಂದು ಗ್ರಾಮಸ್ಥರಿಂದ ಮಾಹಿತಿ ಪಡೆದಿದ್ದಾರೆ. ಅಧಿಕಾರಿಗಳು ಗ್ರಾಮಕ್ಕೆ ಭೆಟ್ಟಿ ಕೊಟ್ಟಾಗಲೂ ಎರಡು ಸಲ ಭೂಮಿಯಿಂದ ಶಬ್ಧ ಕೇಳಿಬಂದಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳಿಗೆ, ಸ್ಥಳೀಯ ಶಾಸಕರ ಗನಮಕ್ಕೆ ಅಧಿಕಾರಿಗಳು ತಂದಿದ್ದಾರೆ.

ಈ ಬಗ್ಗೆ ತಹಶಿಲ್ದಾರ್ ಅಜುಂ ತಬಸುಮ್ ಮಾತನಾಡಿ, ಗ್ರಾಮಸ್ಥರು ಮಾಹಿತಿ ಕೊಟ್ಟ ತಕ್ಷಣ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇವೆ. ಭೂಕಂಪನವಾದ ಬಗ್ಗೆ ಎಲ್ಲಿಯೂ ದಾಖಲಾಗಿಲ್ಲ. ಆದರೆ ಪದೇ ಪದೇ ಭೂಮಿಯಿಂದ ಶಬ್ಧ ಬರುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಭೂಮಿಯಿಂದ ಏಕೆ ಸೌಂಡ್ ಬರುತ್ತಿದೆ ಎಂದು ಪತ್ತೆ ಹಚ್ಚಲು ತನಿಖಾ ತಂಡ ರಚನೆ ಮಾಡುತ್ತೇವೆ. ನೀವು ಯಾವುದೇ ಕಾರಣಕ್ಕೂ ಹೆದರಬೇಡಿ. ಭೂಮಿಯಲ್ಲಿ ನೀರು ಜಾಸ್ತಿಯಾಗಿ ಹೀಗೆ ಶಬ್ಧ ಬರುತ್ತಿದೆ. ಭಯಗೊಳ್ಳುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬೀದರ್​ನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ! ಶಾಲೆಗೆ ತೆರಳುತ್ತಿದ್ದ ಮಕ್ಕಳಿಗೆ ಗಂಭೀರ ಗಾಯ

ಬಾಂಬ್ ಬ್ಲಾಸ್ಟ್ ಆದ ಹಾಗೆ ಭೂಮಿಯ ಒಳಗಡೆಯಿಂದ ಸೌಂಡ್ ಬರುತ್ತಿದೆ. ಜನರು ಹಗಲು-ರಾತ್ರಿ ಮನೆಯಿಂದ ಹೊರಗಿರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಏನು ಭಯಪಡುವ ಅವ್ಯಶ್ಯಕತೆಯಿಲ್ಲ ಎಂದಿದ್ದಾರೆ. ಆದರು ಕೂಡ ಸೌಂಡ್​​ ಬರುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link