Category Archives: Blog

Your blog category

ಅವಮಾನ ಆದಲ್ಲೆ ಕರ್ನಾಟಕದ ಬಾವುಟ ಹಾರಿಸಿದ ಕಿಚ್ಚ: ಸಾಧನೆ ಬಗ್ಗೆ ಹೇಳಿದ್ದೇನು? – Kannada News | Sudeep talks about waving Kannada flag in Tamil Nadu

ಸುದೀಪ್ (Sudeep) ಹಾಗೂ ಅವರ ನೇತೃತ್ವದ ಕರ್ನಾಟಕ ಬುಲ್ಡೊಜರ್ಸ್ ತಂಡ 2026ರ ಸಿಸಿಎಲ್ ಕ್ರಿಕೆಟ್ ಟೂರ್ನಿಯ ಚಾಂಪಿಯನ್ಸ್ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಾಲ್ ತಂಡವನ್ನು ಎದುರಿಸಿದ ಕರ್ನಾಟಕ ತಂಡ ಅದ್ಧೂರಿ ವಿಜಯ ಸಾಧಿಸಿತು. ಆ ಮೂಲಕ ಮೂರನೇ ಬಾರಿ ಚಾಂಪಿಯನ್ ಎನಿಸಿಕೊಂಡಿತು. ಈ ಅದ್ಭುತ ಸಾಧನೆಯ ಬಳಿಕ ಮೊದಲ ಬಾರಿಗೆ ಕರ್ನಾಟಕ ಬುಲ್ಡೊಜರ್ಸ್ ತಂಡ ಮಾಧ್ಯಮಗಳ ಎದುರು ಬಂದು ತಮ್ಮ ಸಂಭ್ರಮ ಹಂಚಿಕೊಂಡಿತು. ಈ ವೇಳೆ ಟಿವಿ9 ಪ್ರತಿನಿಧಿ ಕೇಳಿದ ಪ್ರಶ್ನೆಗೆ ಸುದೀಪ್ ನೀಡಿದ ಉತ್ತರ ಚಪ್ಪಾಳೆ ಗಿಟ್ಟಿಸಿಕೊಂಡಿತು.

ಸಿಸಿಎಲ್ 2026 ಫೈನಲ್ ಗೆದ್ದ ಬಳಿಕ ಕರ್ನಾಟಕ ಬುಲ್ಡೊಜರ್ಸ್ ತಂಡ ಕೊಯಮತ್ತೂರಿನ ಕ್ರಿಕೆಟ್ ಗ್ರೌಂಡ್​​ನಲ್ಲಿ ಸಂಭ್ರಮಾಚರಣೆ ಮಾಡಿತು. ಈ ವೇಳೆ ಸುದೀಪ್ ಹಾಗೂ ಇಡೀ ತಂಡ ಕನ್ನಡ ಬಾವುಟಗಳನ್ನು ಹಾರಾಡಿಸಿತು. ನೆರೆಯ ತಮಿಳುನಾಡಿನಲ್ಲಿ ಅದರಲ್ಲೂ ಕರ್ನಾಟಕದೊಂದಿಗೆ ಗಡಿ, ನೀರು, ಭಾಷೆಯ ವಿಚಾರವಾಗಿ ಪದೇ ಪದೇ ಕಿರಿಕ್ ಮಾಡುತ್ತಲೇ ಬರುತ್ತಿರುವ ತಮಿಳುನಾಡಿನಲ್ಲಿ ಕನ್ನಡ ಬಾವುಟ ಹಾರಿಸಿದ್ದು ಸಾಮಾನ್ಯ ವಿಷಯ ಅಲ್ಲ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಮಾತನಾಡಿದರು.

ಸುದೀಪ್ ಅವರು ಫೈನಲ್ ಗೆದ್ದು ಕನ್ನಡ ಬಾವುಟ ಹಾರಿಸುವ ಕೆಲವೇ ದಿನಗಳ ಮುಂಚೆ, ಕರ್ನಾಟಕದಿಂದ ಶಬರಿಮಲೆಗೆ ತಮಿಳುನಾಡು ಮಾರ್ಗವಾಗಿ ತೆರಳುತ್ತಿದ್ದ ಕನ್ನಡಿಗರನ್ನು ತಡೆದಿದ್ದ ತಮಿಳರು ಕನ್ನಡಿಗರ ವಾಹನಗಳ ಮೇಲಿದ್ದ ಕನ್ನಡ ಬಾವುಟಗಳನ್ನು ಕಿತ್ತು ತೆಗೆದಿದ್ದರು. ಬಾವುಟಕ್ಕೆ ಅವಮಾನ ಮಾಡಿದ ತಮಿಳುನಾಡಿನಲ್ಲೇ ಸುದೀಪ್ ಮತ್ತು ತಂಡ ಕನ್ನಡ ಬಾವುಟ ಹಾರಿಸಿದ್ದರು. ಇದೇ ವಿಷಯವಾಗಿ ಟಿವಿ9 ಪ್ರತಿನಿಧಿ ಸುದೀಪ್ ಅವರನ್ನು ಪ್ರಶ್ನೆ ಕೇಳಿದರು. ಅವಮಾನ ಆದ ಸ್ಥಳದಲ್ಲೇ ಬಾವುಟ ಹಾರಿಸಿದ ಅನುಭವ ಹೇಗಿತ್ತು ಎಂದು ಕೇಳಿದರು.

ಇದನ್ನೂ ಓದಿ:ಸುದೀಪ್​​​ಗೆ ಈ ವಿಷಯ ಗೊತ್ತಾದ್ರೆ ಚಕ್ರವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ; ಕೆ ಮಂಜು

ಪ್ರಶ್ನೆಗೆ ಉತ್ತರಿಸಿದ ಸುದೀಪ್, ‘ನಮ್ಮ ಬಾವುಟವನ್ನು ಹಾರಿಸಲು ಸಮಯ, ಸ್ಥಳದ ಮುಲಾಜೇಕೆ. ನಮ್ಮ ಬಾವುಟವನ್ನು ಬುರ್ಜ್ ಖಲೀಫಾ ಮೇಲೆಯೇ ಹಾರಿಸಿದ್ದೀವಿ. ಬೇರೆ ಕಡೆ ಹಾರಿಸೋದಿಲ್ವ’ ಎಂದರು. ಸುದೀಪ್ ಅವರ ಉತ್ತರಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಯ್ತು. ಸುದ್ದಿಗೋಷ್ಠಿಯಲ್ಲಿ ಹಲವು ವಿಷಯಗಳ ಬಗ್ಗೆ ಸುದೀಪ್ ಮಾತನಾಡಿದರು. ‘ಸಿಸಿಎಲ್’ನಲ್ಲಿ ಯಾವುದೇ ಸಂಭಾವನೆ ಪಡೆಯದೆ ಹಲವು ವರ್ಷಗಳಿಂದಲೂ ಆಡುತ್ತಾ ಬರುತ್ತಿರುವುದಾಗಿ ಸುದೀಪ್ ಹೇಳಿದರು. ಅಲ್ಲದೆ, ಗೆದ್ದರೂ, ಸೋತರೂ ತಮಗೆ ಈ ಸಿಸಿಎಲ್ ಸಾಕು ಎನಿಸಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದರು.

ಸುದೀಪ್ ಅವರಿಗೆ ಕ್ರಿಕೆಟ್ ಮೇಲೆ ಅಪಾರ ಪ್ರೀತಿ. ಕ್ರಿಕೆಟ್ ಮೇಲಿರುವ ಪ್ರೀತಿಯ ಕಾರಣಕ್ಕೆ ಅವರು ಪ್ರತಿ ವರ್ಷವೂ ತಪ್ಪದೇ ಸಿಸಿಎಲ್ ನಲ್ಲಿ ಪಾಲ್ಗೊಳ್ಳುತ್ತಾರೆ. ಟೂರ್ನಿ ಆರಂಭವಾದಾಗಿನಿಂದ ಈಗಿನವರೆಗೂ ಸುದೀಪ್ ಅವರು ಪ್ರತಿ ವರ್ಷವೂ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಬಾರಿ ಮೂರನೇ ಬಾರಿ ಚಾಂಪಿಯನ್ ಸಹ ಎನಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:15 pm, Sat, 7 February 26

Source link

ಭಾರತದ ನಕ್ಷೆಯಲ್ಲಿ ಪಿಒಕೆ ಸೇರಿಸಿದ ಅಮೆರಿಕ; ಪಾಕಿಸ್ತಾನಕ್ಕೆ ಬಿಸಿ ತುಪ್ಪವಾದ ಟ್ರಂಪ್ – Kannada News | Jammu Kashmir POK Map in India US Trade Deal Trump Quiet Message to Pakistan

ನವದೆಹಲಿ, ಫೆಬ್ರವರಿ 7: ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುತ್ತಿದ್ದೇವೆ ಎಂಬ ಕಾರಣಕ್ಕೆ ಭಾರತದ ಮೇಲೆ ಮುನಿಸಿಕೊಂಡಿದ್ದ ಡೊನಾಲ್ಡ್ ಟ್ರಂಪ್ (Donald Trump) ಇದ್ದಕ್ಕಿದ್ದಂತೆ ಶೇ. 25ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಭಾರತದ ಮೇಲಿನ ಒಟ್ಟು ಸುಂಕವನ್ನು ಶೇ. 50ಕ್ಕೆ ಏರಿಸಿದ್ದರು. ಇದಕ್ಕೆ ಯಾವ ಪ್ರತಿಕ್ರಿಯೆಯನ್ನೂ ನೀಡದ ಪ್ರಧಾನಿ ನರೇಂದ್ರ ಮೋದಿ ಬೇರೆ ದೇಶಗಳ ಜೊತೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುತ್ತಾ ತಮ್ಮದೇ ಆದ ಕಾರ್ಯತಂತ್ರ ರೂಪಿಸಿದ್ದರು. ಇದರಿಂದ ಸಹಜವಾಗಿಯೇ ಟ್ರಂಪ್​ಗೆ ತಲೆಬಿಸಿ ಹೆಚ್ಚಾಗಿತ್ತು. ಕೊನೆಗೆ ಮತ್ತೆ ಇದ್ದಕ್ಕಿದ್ದಂತೆ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ್ದ ಡೊನಾಲ್ಡ್ ಟ್ರಂಪ್ ಭಾರತದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿದ್ದರು.

ಇದಕ್ಕೆ ಖುಷಿಯಾಗಿಯೇ ಒಪ್ಪಿದ್ದ ಪ್ರಧಾನಿ ನರೇಂದ್ರ ಮೋದಿ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದರು. ಈ ಮೂಲಕ ಭಾರತದ ಮೇಲೆ ವಿಧಿಸಲಾಗಿದ್ದ ಸುಂಕವನ್ನು ಶೇ. 18ಕ್ಕೆ ಇಳಿಸಲಾಗಿತ್ತು. ಇದರ ಜೊತೆಗೆ ಅಮೆರಿಕ ಕೆಲವು ಷರತ್ತುಗಳನ್ನು ಕೂಡ ವಿಧಿಸಿರುವುದಾಗಿ ಹೇಳಿಕೊಂಡಿದೆ. ಆದರೆ. ಆ ಬಗ್ಗೆ ಭಾರತ ಇನ್ನೂ ಸ್ಪಷ್ಟವಾದ ಮಾಹಿತಿ ನೀಡಿಲ್ಲ. ವಿಶ್ವದ ದೊಡ್ಡಣ್ಣನ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡದ್ದಕ್ಕಿಂತ ಖುಷಿಯ ಸಂಗತಿ ಮತ್ತೊಂದಿದೆ. ನಿನ್ನೆ ಭಾರತದ ಜೊತೆಗಿನ ಒಪ್ಪಂದದ ನಕ್ಷೆಯೊಂದನ್ನು ಅಮೆರಿಕ ಬಿಡುಗಡೆ ಮಾಡಿದೆ. ಈ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವೆಂಬಂತೆ ಚಿತ್ರಿಸಲಾಗಿದೆ.

ಚೀನಾ ತನ್ನ ಪ್ರದೇಶದ ಭಾಗವೆಂದು ಹೇಳಿಕೊಳ್ಳುವ ಭಾರತದ ಗಡಿಯಲ್ಲಿರುವ ಅಕ್ಸಾಯ್ ಚಿನ್ ಅನ್ನು ಸಹ ಭಾರತದ ನಕ್ಷೆಯಲ್ಲಿ ಸೇರಿಸಲಾಗಿದೆ. ಹೀಗಾಗಿ, ಪಾಕಿಸ್ತಾನ ಮತ್ತು ಚೀನಾದ ಗಡಿ ವಿವಾದಕ್ಕೆ ಭಾರತಕ್ಕೆ ಅಮೆರಿಕ ಬೆಂಬಲ ನೀಡುತ್ತಿದೆಯೇ? ಎಂಬ ಚರ್ಚೆ ಶುರುವಾಗಿದೆ. ಭಾರತದ ನಕ್ಷೆಯಲ್ಲಿ ಅಮೆರಿಕ ಕಾಶ್ಮೀರದ ಪೂರ್ಣ ಚಿತ್ರಣವನ್ನು ನೀಡಿರುವುದು ಪಾಕಿಸ್ತಾನಕ್ಕೆ ಬಿಸಿ ತುಪ್ಪದಂತಾಗಿದೆ. ಟ್ರಂಪ್ ಅವರ ವಿರುದ್ಧ ಹೇಳಿಕೆಯನ್ನೂ ನೀಡಲಾಗದೆ, ಇದನ್ನು ಸಹಿಸಿಕೊಳ್ಳಲೂ ಸಾಧ್ಯವಾಗದೆ ಪಾಕಿಸ್ತಾನ ಒದ್ದಾಡುತ್ತಿದೆ.

ಇದನ್ನೂ ಓದಿ: ಭಾರತದ ಜೊತೆ ವ್ಯಾಪಾರ ಒಪ್ಪಂದ ಘೋಷಿಸಿದ ಅಮೆರಿಕ; ಸುಂಕವನ್ನು ಶೇ. 18ಕ್ಕೆ ಇಳಿಸಿದ ಟ್ರಂಪ್

ಹೀಗಾಗಿ, ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಘೋಷಣೆಯು ರಾಜತಾಂತ್ರಿಕವಾಗಿ ಮಾತ್ರವಲ್ಲದೆ ಭಾರತದೊಂದಿಗಿನ ಗಡಿ ವಿವಾದದ ದೃಷ್ಟಿಯಿಂದಲೂ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಕೊಟ್ಟಿರುವುದಂತೂ ನಿಜ. ಭಾರತ ಮತ್ತು ಯುಎಸ್ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಘೋಷಿಸಿದ ಕೂಡಲೇ, ಯುಎಸ್ ವ್ಯಾಪಾರ ಪ್ರತಿನಿಧಿ ಕಚೇರಿಯು ಭಾರತದ ಭೂಪ್ರದೇಶವನ್ನು ಸ್ಪಷ್ಟವಾಗಿ ಗುರುತಿಸುವ ಭಾರತದ ನಕ್ಷೆಯನ್ನು ಬಿಡುಗಡೆ ಮಾಡಿತು. ಅಮೆರಿಕದ ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾದ ನಕ್ಷೆಯು ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಪ್ರದೇಶವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದರಲ್ಲಿ ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶ (ಪಿಒಕೆ) ಭಾರತದ ಭಾಗವಾಗಿದೆ. ಈ ಪೋಸ್ಟ್ ಈ ಪ್ರದೇಶದ ಮೇಲಿನ ಭಾರತದ ಹಕ್ಕನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಇಬ್ಬರೂ ಜಾಗತಿಕ ವೇದಿಕೆಯಲ್ಲಿ ತಾವು ಗಟ್ಟಿಯಾಗಿ ನೆಲೆಗೊಳ್ಳಲು ಅಮೆರಿಕವನ್ನು ಮನವೊಲಿಸಲು ಶ್ರಮಿಸುತ್ತಿರುವುದರಿಂದ ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಘೋಷಣೆಯ ನಂತರದ ಈ ಸಾಮಾಜಿಕ ಮಾಧ್ಯಮ ಪೋಸ್ಟ್ ಪಾಕಿಸ್ತಾನಕ್ಕೆ ದೊಡ್ಡ ಮುಜುಗರವನ್ನುಂಟುಮಾಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಟ್ರಂಪ್ ಮಾಡಿಕೊಂಡ ವ್ಯಾಪಾರ ಒಪ್ಪಂದದ 7 ಹೈಲೈಟ್ಸ್ ಇಲ್ಲಿವೆ

ಇದಲ್ಲದೆ, ಚೀನಾ ತನ್ನ ಪ್ರದೇಶದ ಭಾಗವೆಂದು ಹೇಳಿಕೊಳ್ಳುವ ಅಕ್ಸಾಯ್ ಚಿನ್ ಅನ್ನು ಸಹ ಭಾರತದ ನಕ್ಷೆಯಲ್ಲಿ ಸೇರಿಸಲಾಗಿದೆ. ಅಮೆರಿಕದ ಈ ಪೋಸ್ಟ್ ಉದ್ದೇಶಪೂರ್ವಕ ಅಥವಾ ಪ್ರಾಸಂಗಿಕವಾಗಿದ್ದರೂ ಸಹ ಅದು ಪಾಕಿಸ್ತಾನಕ್ಕೆ ಬಲವಾದ ರಾಜತಾಂತ್ರಿಕ ಸಂದೇಶವನ್ನು ಕಳುಹಿಸಿದೆ. ಅಮೆರಿಕ ಈ ರೀತಿ ಪಿಒಕೆಯನ್ನು ಭಾರತದ ನಕ್ಷೆಯೊಳಗೆ ಸೇರಿಸಿದ್ದು ಉದ್ದೇಶಪೂರ್ವಕವಾಗಿಯಾ? ಅಲ್ಲವಾ? ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ, ಭಾರತೀಯರಿಗಂತೂ ವ್ಯಾಪಾರ ಒಪ್ಪಂದಕ್ಕಿಂತಲೂ ಅಮೆರಿಕದ ಈ ಗಡಿ ನಿಲುವಿನ ಬಗ್ಗೆ ಸಂತೋಷ ಹೆಚ್ಚಾಗಿದೆ ಎಂದೇ ಹೇಳಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

T20 World Cup: ಭಾರತದ ವಿರುದ್ಧ ಸೋತರೂ ದಿಟ್ಟ ಹೋರಾಟ ನೀಡಿದ ಯುಎಸ್​ಎ – Kannada News | India Dominates USA in T20 World Cup 2026 Opener: Comprehensive Win at Wankhede

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಮೆರಿಕ ನಡುವಿನ 2026 ರ ಟಿ20 ವಿಶ್ವಕಪ್ ಮೂರನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಸುಲಭ ಜಯ ದಾಖಲಿಸಿತು. ಇದರೊಂದಿಗೆ ಹಾಲಿ ಚಾಂಪಿಯನ್ ಆಗಿ ಪಂದ್ಯಾವಳಿಗಿಳಿದಿರುವ ಭಾರತ ಗೆಲುವಿನ ಶುಭಾರಂಭ ಮಾಡಿದೆ. ಇತ್ತ ಭಾರತದ ವಿರುದ್ಧ ಸೋತರೂ ಅನಾನುಭವಿ ಅಮೆರಿಕ ತಂಡ ದಿಟ್ಟ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಟೀಂ ಇಂಡಿಯಾವನ್ನು ಕೇವಲ 161 ರನ್​ಗಳಿಗೆ ಕಟ್ಟಿಹಾಕುವಲ್ಲಿ ಅಮೆರಿಕ ಬೌಲರ್​ಗಳು ಯಶಸ್ವಿಯಾದರು. ಆದಾಗ್ಯೂ ಈ ಗುರಿ ಬೆನ್ನಟ್ಟಿದ ಅಮೆರಿಕ ತಂಡದ ಬ್ಯಾಟಿಂಗ್ ವಿಭಾಗದ ಭಾರತದ ಬೌಲಿಂಗ್ ದಾಳಿಯ ಮುಂದೆ ತತ್ತರಿಸಿ 20 ಓವರ್​ಗಳಲ್ಲಿ 132 ರನ್​ಗಳನಷ್ಟೇ ಕಲೆಹಾಕಲು ಶಕ್ತವಾಗಿ 30 ರನ್​ಗಳಿಂದ ಸೋಲೊಪ್ಪಿಕೊಂಡಿತು.

Source link

ಸಂಸಾರದ ಜಂಜಾಟಕ್ಕಿಂತ ಸನ್ಯಾಸತ್ವ ಉತ್ತಮ: ದಾವಣಗೆರೆ ಸಿವಿಲ್ ಇಂಜಿನಿಯರಿಂಗ್ ಟಾಪರ್ ಈಗ ಜೈನ ಸನ್ಯಾಸಿ – Kannada News | Davangere’s BIET Civil Topper Anchal Kumari Becomes Jain Nun, Inspiring Renunciation

ದಾವಣಗೆರೆ, ಫೆ.7: ದಾವಣಗೆರೆಯ ಬಿಐಇಟಿ (BIET) ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ಟಾಪರ್ ಆಂಚಲ್ ಕುಮಾರಿ ಅವರು ಐಷಾರಾಮಿ ಜೀವನವನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದು, ಚರ್ಚೆಗೂ ಕಾರಣವಾಗಿದೆ. 26ನೇ ವಯಸ್ಸಿನಲ್ಲಿ ಅವರು ಕೈಗೊಂಡಿರುವ ಈ ನಿರ್ಧಾರ ಆಧುನಿಕ ಜಗತ್ತಿನಲ್ಲಿ ಅಧ್ಯಾತ್ಮದ ಸೆಳೆತ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಆಂಚಲ್ ಕುಮಾರಿ ದಾವಣಗೆರೆಯ ಚೌಕಿಪೇಟೆಯ ನಿವಾಸಿಗಳಾದ ಮುಖೇಶ್ ಕುಮಾರ್ ಹಾಗೂ ಸುನೀತಾ ದಂಪತಿಯ ಪುತ್ರಿ. ಪ್ರತಿಷ್ಠಿತ ಬಿಐಇಟಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಿ ಟಾಪರ್ ಆಗಿದ್ದರು. ಲಕ್ಷಾಂತರ ರೂಪಾಯಿ ಸಂಬಳ ಬರುವ ಉದ್ಯೋಗದ ಅವಕಾಶಗಳನ್ನು ಬದಿಗೊತ್ತಿ ಅಧ್ಯಾತ್ಮದ ಹಾದಿ ಹಿಡಿದಿರುವುದು ಎಲ್ಲರಿಗೂ ಅಚ್ಚರಿಯನ್ನು ತಂದಿದೆ.

ಗುಜರಾತ್ ರಾಜ್ಯದ ಸೂರತ್‌ನಲ್ಲಿ ವಿಜೃಂಭಣೆಯಿಂದ ದೀಕ್ಷಾ ಕಾರ್ಯಕ್ರಮ ನಡೆಯಿತು. ಜೈನ ಧರ್ಮದ ಗುರುಗಳಾದ ಕುಲಚಂದ್ರ ಸುರೇಶ್ವರ್ಜಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಆಂಚಲ್ ದೀಕ್ಷೆ ಪಡೆದರು. ಕೋಟಿ ಕೋಟಿ ಮೌಲ್ಯದ ಆಸ್ತಿ, ಕುಟುಂಬ ಮತ್ತು ಭೌತಿಕ ಸುಖಗಳನ್ನು ತ್ಯಜಿಸಿ ಈಗ ಅವರು ಅಧಿಕೃತವಾಗಿ ಜೈನ ಸನ್ಯಾಸಿನಿಯಾಗಿದ್ದಾರೆ. ಸನ್ಯಾಸಿಗಳ ಮುಖದಲ್ಲಿರುವ ಆಂತರಿಕ ಶಾಂತಿ ಮತ್ತು ಅವರ ಸರಳ ಜೀವನ ಶೈಲಿ ಆಂಚಲ್ ಅವರ ಮೇಲೆ ಗಾಢವಾದ ಪ್ರಭಾವ ಬೀರಿದೆ. ಸಂಸಾರದ ಜಂಜಾಟಕ್ಕಿಂತ ಸನ್ಯಾಸತ್ವದಲ್ಲಿ ಸಿಗುವ ನೆಮ್ಮದಿ ಶ್ರೇಷ್ಠವಾದುದು ಎಂಬುದು ಅವರ ಅಚಲ ನಂಬಿಕೆಯಾಗಿದೆ. ಕಾಲೇಜು ದಿನಗಳಿಂದಲೇ ಅಧ್ಯಾತ್ಮದ ಕಡೆಗೆ ಹೆಚ್ಚಿನ ಒಲವು ಹೊಂದಿದ್ದರು.

ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಪೋಷಕರು ವಿರೋಧಿಸುತ್ತಾರೆ. ಆದರೆ ಆಂಚಲ್ ಅವರ ಪೋಷಕರು ಮಗಳ ನಿರ್ಧಾರವನ್ನು ಗೌರವಿಸಿ, ಒಪ್ಪಿಗೆ ನೀಡಿದ್ದಾರೆ. ಇಂಜಿನಿಯರಿಂಗ್‌ನಂತಹ ವೃತ್ತಿಪರ ಶಿಕ್ಷಣದಲ್ಲಿ ಅಗ್ರಸ್ಥಾನ ಪಡೆದ ಯುವತಿಯೊಬ್ಬರು ಹೀಗೆ ಸನ್ಯಾಸತ್ವ ಸ್ವೀಕರಿಸಿರುವುದು ಸಾರ್ವಜನಿಕರಲ್ಲಿ ಕುತೂಹಲ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ. ಜೈನ ಧರ್ಮದಲ್ಲಿ ಇತ್ತೀಚಿನ ವರ್ಷಗಳಲ್ಲಿ ಉನ್ನತ ಶಿಕ್ಷಣ ಪಡೆದ ಯುವಕ-ಯುವತಿಯರು ಅಧ್ಯಾತ್ಮದ ಕಡೆಗೆ ಆಕರ್ಷಿತರಾಗುತ್ತಿರುವುದು ಹೆಚ್ಚುತ್ತಿದೆ.

ಇದನ್ನೂ ಓದಿ: ಊರಿಗೆಲ್ಲ ಊಟ ಹಾಕಿಸಿ ಮಗನಂತಿರುವ ಕೋಣದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ರೈತ

ಗುಜರಾತ್‌ನ ‘ಮಹಾಸಂಯಮ’ ದೀಕ್ಷಾ ಸಂಭ್ರಮ:

ಇತ್ತೀಚೆಗೆ ಗುಜರಾತ್‌ನ ಸೂರತ್ ಮತ್ತು ಅಹಮದಾಬಾದ್‌ನಲ್ಲಿ ನಡೆದ ದೀಕ್ಷಾ ಕಾರ್ಯಕ್ರಮಗಳಲ್ಲಿ ಕೇವಲ ಒಬ್ಬಿಬ್ಬರಲ್ಲ, ಬದಲಿಗೆ ಹತ್ತಾರು ಯುವಕ-ಯುವತಿಯರು ಮತ್ತು ಉದ್ಯಮಿಗಳು ಒಟ್ಟಾಗಿ ಸನ್ಯಾಸತ್ವ ಸ್ವೀಕರಿಸಿದರು. ಇದರಲ್ಲಿ ಅನೇಕರು ಕೋಟ್ಯಧಿಪತಿ ಉದ್ಯಮಿಗಳ ಮಕ್ಕಳು, ಚಾರ್ಟರ್ಡ್ ಅಕೌಂಟೆಂಟ್ (CA)ಗಳು ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಇದ್ದದ್ದು ವಿಶೇಷ. ಇಂತಹ ಕಾರ್ಯಕ್ರಮಗಳನ್ನು ‘ಮಹಾಸಂಯಮ’ ಅಥವಾ ‘ದೀಕ್ಷಾ ಮಹೋತ್ಸವ’ ಎಂದು ಕರೆಯಲಾಗುತ್ತದೆ. ಇದರಲ್ಲಿ ಸಂಸಾರಿಕ ಜೀವನದ ಐಷಾರಾಮಿಗಳನ್ನು ತ್ಯಜಿಸಿ, ಗುರುಗಳ ಸಮ್ಮುಖದಲ್ಲಿ ಬಿಳಿ ವಸ್ತ್ರ ಧರಿಸಿ ಅಧ್ಯಾತ್ಮದ ಹಾದಿಗೆ ಕಾಲಿಡುತ್ತಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಟ್ಟೆ ನೋವನ್ನು ನಿರ್ಲಕ್ಷಿಸಬೇಡಿ; ಇದರ ಹಿಂದೆ ಬರಬಹುದು ನೀವು ಊಹಿಸಲೂ ಸಾಧ್ಯವಿಲ್ಲದ ಕಾಯಿಲೆಗಳು! – Kannada News | What Your Stomach Pain Is Trying to Tell You

ಕೆಲವರಿಗೆ ಪದೇ ಪದೇ ಹೊಟ್ಟೆ ನೋವು (Stomach Pain) ಕಾಣಿಸಿಕೊಳ್ಳುತ್ತದೆ. ಆದರೆ ಇದನ್ನು ಸಾಮಾನ್ಯ ಆರೋಗ್ಯ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ, ಇದು ಅನಿಲ, ಆಯಾಸ ಅಥವಾ ಆಹಾರ ಪದ್ಧತಿಯಲ್ಲಿ ಆದಂತಹ ಬದಲಾವಣೆಯಿಂದ ಉಂಟಾಗುತ್ತದೆ ಎಂದು ಅಂದುಕೊಳ್ಳುತ್ತಾರೆ. ಆದರೆ ಹೊಟ್ಟೆ ನೋವು ಆಗಾಗ ಕಂಡುಬಂದರೆ, ಅದು ದೇಹದಲ್ಲಿನ ಆಂತರಿಕ ಸಮಸ್ಯೆಯ ಸಂಕೇತವೂ ಆಗಿರಬಹುದು ಎಂಬುದನ್ನು ಮರೆಯಬಾರದು. ಅಂತಹ ನೋವಿನ ಜೊತೆಗೆ, ಹೊಟ್ಟೆಯಲ್ಲಿ ಉರಿ, ಭಾರ, ವಾಕರಿಕೆ, ಹಸಿವಿನ ಕೊರತೆ, ಆಗಾಗ ಅತಿಸಾರ ಅಥವಾ ಮಲಬದ್ಧತೆ, ಉಬ್ಬುವುದು ಅಥವಾ ಆಯಾಸದಂತಹ ಇತರ ಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು. ಇದಲ್ಲದೆ, ಕೆಲವರಿಗೆ ತಲೆನೋವು ಅಥವಾ ತಲೆತಿರುಗುವಿಕೆ ಅನುಭವಕ್ಕೆ ಬರಬಹುದು. ಈ ರೀತಿ ನೋವು ದೀರ್ಘಕಾಲದವರೆಗೆ ಮುಂದುವರಿದರೆ ಅಥವಾ ದೈನಂದಿನ ಚಟುವಟಿಕೆಗಳನ್ನು ಸರಿಯಾಗಿ ಮಾಡಲು ಸಾಧ್ಯವಾಗದಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಇಂತಹ ರೋಗಲಕ್ಷಣಗಳ ಮೂಲಕ ದೇಹವು ನಮಗೆ ಎಚ್ಚರಿಕೆ ನೀಡುತ್ತದೆ. ಹಾಗಾದರೆ ಪದೇ ಪದೇ ಹೊಟ್ಟೆ ನೋವು ಯಾವ ರೋಗವನ್ನು ಸೂಚಿಸುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪದೇ ಪದೇ ಮರುಕಳಿಸುವ ಹೊಟ್ಟೆ ನೋವು ಯಾವ ಕಾಯಿಲೆಯ ಲಕ್ಷಣ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಮರುಕಳಿಸುವ ಹೊಟ್ಟೆ ನೋವು ವಿವಿಧ ರೀತಿಯ ಕಾಯಿಲೆಗಳ ಲಕ್ಷಣವಾಗಿರಬಹುದು. ಇವುಗಳಲ್ಲಿ ಐಬಿಎಸ್, ಉರಿಯೂತದ ಕರುಳಿನ ಕಾಯಿಲೆ (ಐಬಿಡಿ), ಗ್ಯಾಸ್ಟ್ರೋಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ (ಜಿಇಆರ್‌ಡಿ), ಸೆಲಿಯಾಕ್ ಕಾಯಿಲೆ, ಗ್ಯಾಸ್ಟ್ರೋಎಂಟರೈಟಿಸ್, ಬ್ಯಾಕ್ಟೀರಿಯಾದ ಸೋಂಕುಗಳು, ಪಿತ್ತಗಲ್ಲುಗಳು, ಅಪೆಂಡಿಸೈಟಿಸ್, ಪ್ಯಾಂಕ್ರಿಯಾಟೈಟಿಸ್ ಮತ್ತು ಮೂತ್ರಪಿಂಡದ ಕಲ್ಲುಗಳು ಸೇರಿವೆ. ಹೆಚ್ಚುವರಿಯಾಗಿ, ಪೆಪ್ಟಿಕ್ ಹುಣ್ಣು, ಒತ್ತಡ, ಹರ್ನಿಯಾ ಅಥವಾ ಲ್ಯಾಕ್ಟೋಸ್ ಅಸಹಿಷ್ಣುತೆಯಂತಹ ಆಹಾರ ಅಲರ್ಜಿ ಸಹ ನೋವನ್ನು ಉಂಟುಮಾಡಬಹುದು. ಕೆಲವೊಮ್ಮೆ, ಅನಾರೋಗ್ಯಕರ ಆಹಾರ ಪದ್ಧತಿ, ಅನಿಯಮಿತ ದಿನಚರಿ ಅಥವಾ ದೀರ್ಘಕಾಲದ ಒತ್ತಡ ಮತ್ತು ಆತಂಕದಿಂದಾಗಿ ಈ ನೋವು ಹೆಚ್ಚಾಗಬಹುದು. ನೋವು ನಿರಂತರವಾಗಿದ್ದರೆ ಮತ್ತು ತೂಕ ನಷ್ಟ, ದೌರ್ಬಲ್ಯ ಅಥವಾ ಇತರ ಗಂಭೀರ ಲಕ್ಷಣ ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ಸರಿಯಾದ ಕಾರಣವನ್ನು ಗುರುತಿಸಲು ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪ್ರಾರಂಭಿಸಲು ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ಮಧುಮೇಹ, ಅಧಿಕ ರಕ್ತದೊತ್ತಡ ಇರುವವರಿಗೆ ಶ್ರವಣದೋಷ ಉಂಟಾಗುತ್ತದೆಯೇ? ವೈದ್ಯರು ಹೇಳುವುದೇನು?

ಹೊಟ್ಟೆ ನೋವನ್ನು ತಡೆಗಟ್ಟುವುದು ಹೇಗೆ?

ಹೊಟ್ಟೆ ನೋವನ್ನು ತಡೆಗಟ್ಟಲು ಮೊದಲು, ದೈನಂದಿನ ಅಭ್ಯಾಸಗಳನ್ನು ಸುಧಾರಿಸಿಕೊಳ್ಳುವುದು ಬಹಳ ಮುಖ್ಯ. ಸಮಯಕ್ಕೆ ಸರಿಯಾಗಿ ಸಮತೋಲಿತ ಆಹಾರ ಸೇವಿಸುವುದು, ಹುರಿದ ಮತ್ತು ಮಸಾಲೆಯುಕ್ತ ಆಹಾರ ಸೇವನೆಯನ್ನು ಕಡಿಮೆ ಮಾಡುವುದು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಮತ್ತು ಪ್ರತಿದಿನ ಲಘು ವ್ಯಾಯಾಮ ಅಥವಾ ನಡಿಗೆ ಮಾಡುವುದು. ಒತ್ತಡ ಕಡಿಮೆ ಮಾಡಲು ಯೋಗ ಮತ್ತು ಧ್ಯಾನ ಮಾಡುವುದು ಸೇರಿದಂತೆ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಇದೆಲ್ಲದರ ಜೊತೆಗೆ ಊಟದ ನಂತರ ತಕ್ಷಣ ಮಲಗುವುದನ್ನು ತಪ್ಪಿಸಿ ಮತ್ತು ಬೇಗನೆ ಊಟ ಮಾಡಿ. ಶುಚಿತ್ವ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup: ಮೊದಲ ಎಸೆತದಲ್ಲೇ ಸೊನ್ನೆ ಸುತ್ತಿ ಗಂಭೀರ್ ದಾಖಲೆ ಸರಿಗಟ್ಟಿದ ಅಭಿಷೇಕ್ – Kannada News | Abhishek Sharma’s T20 World Cup Debut Disaster: Golden Duck Equates Gambhir’s Record

ಅಭಿಷೇಕ್ ಶರ್ಮಾ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಔಟಾದ ನಂತರ ಅಮೆರಿಕ ವಿರುದ್ಧದ ಪಂದ್ಯದ ಚಿತ್ರಣವೇ ಬದಲಾಯಿತು. ಭಾರತದ ಅಗ್ರ ಕ್ರಮಾಂಕವು ಕ್ಷಣಾರ್ಧದಲ್ಲಿ ಕುಸಿಯಿತು. ಭಾರತವು ಕೇವಲ 46 ರನ್‌ಗಳಿಗೆ ತನ್ನ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಭಿಷೇಕ್, ತಿಲಕ್, ಇಶಾನ್, ದುಬೆ, ಹಾರ್ದಿಕ್ ಪಾಂಡ್ಯ ಮತ್ತು ರಿಂಕು ಸಿಂಗ್ ಕೂಡ ಬೇಗನೆ ವಿಕೆಟ್ ಒಪ್ಪಿಸಿದರು.

Source link

ಶಾಕಿಂಗ್ ಮಾಹಿತಿ ರಿವೀಲ್ ಮಾಡಿದ ಆರೋಗ್ಯ ಇಲಾಖೆ: ಸಿಟಿ ಜನರಲ್ಲಿ ಹೆಚ್ಚುತ್ತಿದೆ ಮಾನಸಿಕ ಖಿನ್ನತೆ ಸಮಸ್ಯೆ – Kannada News | Bangalore Mental Health Crisis: Tele Manas Offers Lifeline Amidst Rising Depression

ಬೆಂಗಳೂರು, ಫೆಬ್ರವರಿ 07: ಸಿಲಿಕಾನ್ ಸಿಟಿ ಬೆಂಗಳೂರು (bangaluru) ಒಂಥರಾ ಬ್ಯುಸಿ ಸಿಟಿ. ಇಲ್ಲಿ ಇರುವ ಜನರು ಕೂಡ ಅಷ್ಟೇ ಬ್ಯುಸಿ ಹಾಗೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಇದೀಗ ಸಿಟಿ ಮಂದಿ ಹೆಚ್ಚು ಮಾನಸಿಕ ಅನಾರೋಗ್ಯಕ್ಕೆ (Mental Health) ತುತ್ತಾಗುತ್ತಿದ್ದಾರೆ. ಹೀಗಾಗಿ ಟೆಲಿ ಮಾನಸ್​​ಗೆ ಮನೋ ರೋಗಿಗಳಿಂದ ಲಕ್ಷಾಂತರ ಕರೆಗಳು ಬರುತ್ತಿವೆ. ಸಿ. ಜೆ ರಾಯ್​ ಹಾಗೂ ಮಕ್ಕಳ ಸೂಸೈಡ್ ಬಳಿಕ ಆರೋಗ್ಯ ಇಲಾಖೆ ಶಾಕಿಂಗ್ ಮಾಹಿತಿಯೊಂದನ್ನು ಬಯಲು ಮಾಡಿದೆ.

ಹೌದು.. ಇತ್ತೀಚೆಗೆ ಜನರ ಜೀವನ ಶೈಲಿಯೇ ಬದಲಾಗಿಬಿಟ್ಟಿದೆ. ಇದರಿಂದ ಜನರು ಅನೇಕ ಖಾಯಿಲೆಗಳಿಗೂ ತುತ್ತಾಗುತ್ತಿದ್ದಾರೆ. ಅದರಲ್ಲೂ ಆತಂಕ ಹುಟ್ಟಿಸುವ ವಿಚಾರವೆಂದರೆ ಅನೇಕ ಜನರಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಅಂತೆ. ಅನೇಕರಿಗೆ ತಮ್ಮ ಒತ್ತಡ ಹಾಗೂ ಸಮಸ್ಯೆಗಳನ್ನ ಹೇಳಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಸಾಕಷ್ಟು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಪದೇ ಪದೇ ಆತ್ಮಹತ್ಯೆ ಯತ್ನಿಸಿದ 8ನೇ ತರಗತಿ ವಿದ್ಯಾರ್ಥಿನಿ: ಅಸಲಿ ಕಾರಣ ಇಲ್ಲಿದೆ

ಸಿಜೆ ರಾಯ್ ಹಾಗೂ ಮಕ್ಕಳ ಸೂಸೈಡ್ ಘಟನೆ ಬಳಿಕ ಆರೋಗ್ಯ ಇಲಾಖೆ ಅಚ್ಚರಿಯ ಮಾಹಿತಿ ನೀಡಿದೆ. ಒಂದೇ ವರ್ಷದಲ್ಲಿ 101,898 ಜನರಿಗೆ ಆತ್ಮಹತ್ಯೆ ಯೋಚನೆಗಳು ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಗುಪ್ತ ಖಿನ್ನತೆ ಕೇಸ್ ಹೆಚ್ಚಳ ಕಂಡಿದೆ. ಹಗಲು-ರಾತ್ರಿ ಎನ್ನದೇ ಟೆಲಿ ಮಾನಸ್​​ಗೆ ಮನೋ ರೋಗಿಗಳು ಕರೆ ಮಾಡುತ್ತಿದ್ದಾರೆ.

ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಸ್ಫೋಟಕ ಅಂಕಿ-ಅಂಶ ಬಯಲಾಗಿದೆ. ಟೆಲಿ ಮಾನಸ್​ಗೆ ಸರಾಸರಿ ಎರಡುವರೆ ಲಕ್ಷ ಜನ ಕರೆ ಮಾಡಿ ತಮ್ಮ ಖಿನ್ನತೆ ಬಗ್ಗೆ ದೂರು ಹೇಳಿಕೊಂಡಿದ್ದಾರೆ. ಈ ಪೈಕಿ ಪುರಷರಲ್ಲಿ 49.86%, ಮಹಿಳೆಯರಲ್ಲಿ 45.45% ಮಾನಸಿಕ ಒತ್ತಡ ಕಂಡು ಬಂದಿದೆ.

ರಾಯ್ ಅವರಂತೆ ನಗದರ ಅನೇಕ ಜನರಿಲ್ಲಿ ಗುಪ್ತ ಖಿನ್ನತೆ ಸಮಸ್ಯೆ, ವ್ಯವಹಾರದಲ್ಲಿ ನಷ್ಟ, ಒತ್ತಡ, ಕೌಟುಂಬಿಕ ಮತ್ತು ಕೆಲಸದ ಒತ್ತಡಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ತಮಗೆ ಗೊತ್ತಿಲ್ಲದೆ ಜನರು ಖಿನ್ನತೆಗೆ ಒಳಪಡುತ್ತಿದ್ದು, ಗುಪ್ತ ಖಿನ್ನತೆಗೆ ಒಳಪಟ್ಟು ಸಾಕಷ್ಟು ಸಮಯದ ನಂತರ ಮನೋಶಾಸ್ತ್ರಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕಾಗಿ ಆರೋಗ್ಯ ಇಲಾಖೆ ಸಿಟಿ ಜನರ ಮಾನಸಿಕ ಆರೋಗ್ಯಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆಯಿಂದ ಟೆಲಿ ಮಾನಸ್ ಯೋಜನೆ ಶುರು ಮಾಡಿದೆ. ನಿಮ್ಹಾನ್ಸ್ ಆಸ್ಪತ್ರೆ ಸಹಯೋಗದಲ್ಲಿ ಟೆಲಿ ಮಾನಸ್ ಸೇವೆ ಆರಂಭವಾಗಿದ್ದು, ಈಗಾಗಲೇ ಸರಾಸರಿ 2 ಲಕ್ಷ 3 ಸಾವಿರ ಜನರಿಗೆ ಚಿಕಿತ್ಸೆ ಸಲಹೆ ನೀಡಲಾಗಿದೆ.

2025 ಜನವರಿಯಿಂದ ಡಿಸೆಂಬರ್ 25ರ ವರೆಗೆ ಟೆಲಿ ಮಾನಸ್​ಗೆ ಬಂದ ಕರೆಗಳೆಷ್ಟು?

ಸಮಸ್ಯೆ ಹೇಳಿಕೊಂಡು ಬಂದ ಕರೆಗಳು ಒಟ್ಟು ಕರೆಗಳು; 101,898, ನೇರ ಕರೆ; 82,027, ಸರ್ವಿಸ್ ಕರೆ; 19,871, ರೋಟಿನ್ ಕಾಲ್; 61,888, ಮಾಹಿತಿಗೋಸ್ಕರ ಕರೆ; 10,510, ಫ್ರಾಂಕ್ ಕಾಲ್​; 817, ಒಟ್ಟು ವಿಡಿಯೋ ಕಾಲ್; 77. ನಿರಾಸಕ್ತಿ ಮತ್ತು ಇತರೆ ಸಿಂಟಮ್ಸ್: 28.18%, ಒತ್ತಡ: 13.0%, ಪ್ಯಾನಿಕ್, ಫೋಬಿಯಾ ಸಿಂಪ್ಟಮ್ಸ್: 12.26%, ನಿದ್ದೆ ಸಮಸ್ಯೆ; 12.3%, ಆತ್ಮಹತ್ಯೆ ಆಲೋಚನೆ: 3.88%.

ಪುರುಷರಲ್ಲೇ ಹೆಚ್ಚು ಮಾನಸಿಕ ಸಮಸ್ಯೆ

ಪುರುಷರು: 49.86%, ಮಹಿಳೆಯರು: 45.45%, ಲೈಂಗಿಕ ಅಲ್ಪಸಂಖ್ಯಾತರು: 0.02%.

ವಯೋಮಿತಿ ಡಾಟಾ

  • 18-45 ವಯೋಮಿತಿ ; 69.7%
  • 46-64 ವಯೋಮಿತಿ ; 15.7%
  • 65 + ವಯೋಮಿತಿ ; 4.5%
  • 13-17 ವಯೋಮಿತಿ ; 7.2%
  • 0-12 ವಯೋಮಿತಿ; 2.9%

ಖಿನ್ನತೆ ಬಗ್ಗೆ ಹೆಚ್ಚಿರುವ ಹಿನ್ನಲೆ ಆರೋಗ್ಯ ಇಲಾಖೆ ಮೂರು ಹಂತದಲ್ಲಿ ವೈದ್ಯರ ನೇಮಕ ಮಾಡಿಕೊಂಡಿದೆ. ಸಿಂಪಲ್ ಸಮಸ್ಯೆಗೆ ಜ್ಯೂನಿಯರ್ ಸೈಕಾಲಜಿಸ್ಟ್ಗಳಿಂದ ಚಿಕಿತ್ಸೆ ನೀಡಿದರೆ, ಕಷ್ಟಕರ ಕೇಸ್​​ಗಳಿಗೆ ಸೀನಿಯರ್ ಸೈಕಾಲಜಿಸ್ಟ್ ಸಹಾಯ ಮಾಡುತ್ತಾರೆ. ಗೊಂದಲಮಯ ಸೇರಿದಂತೆ ದೊಡ್ಡ ಸಮಸ್ಯೆಗಳಿದ್ದಾಗ ವೃತ್ತಿಪರ ವೈದ್ಯರು ಸಹಾಯ ಮಾಡುತ್ತಾರೆ. ಇದಕ್ಕಾಗಿಯೇ 14416 ಸಹಾಯವಾಣಿ ಶುರು ಮಾಡಿದ್ದು, ಯಾವುದೇ ಮುಜುಗರ ಇಲ್ಲದೇ ಸೇವೆ ಪಡೆಯಲು ಆರೋಗ್ಯ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಸಿಕ್ತು 3 ಕೋಟಿ ರೂ. ಮೌಲ್ಯದ ಗಾಂಜಾ! ಮೂವರು ಆರೋಪಿಗಳು ವಶಕ್ಕೆ

14416 ಸಹಾಯವಾಣಿ ವಾರದ ಎಲ್ಲಾ ದಿನಗಳಲ್ಲಿ 24 ಗಂಟೆಯೂ ದೂರವಾಣಿ ಕರೆಗಳನ್ನು 20 ಭಾಷೆಗಳಲ್ಲಿ ಸ್ವೀಕರಿಸಲಾಗುತ್ತಿದೆ. ಒಟ್ಟಿನಲ್ಲಿ ಸಿಟಿ ಜನರು ತಮ್ಮ ಕೆಲಸದ ಒತ್ತಡ, ಮಕ್ಕಳು ಓದಿನ ಒತ್ತಡ ಹೀಗೆ ಅನೇಕ ಸಮಸ್ಯೆಗಳಿಂದ ಮಾನಸಿಕ ಆರೋಗ್ಯ ಹಾಳಾಗುತ್ತಿದ್ದು, ಅನೇಕರು ಒತ್ತಡ ನಿವಾರಣೆಯನ್ನ ಮಾಡಿಕೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

T20 World Cup: ಏಕಾಂಗಿ ಹೋರಾಟ ನೀಡಿ ತಂಡದ ಮಾನ ಉಳಿಸಿದ ಸೂರ್ಯಕುಮಾರ್

Source link

ಊರಿಗೆಲ್ಲ ಊಟ ಹಾಕಿಸಿ ಮಗನಂತಿರುವ ಕೋಣದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ರೈತ – Kannada News | Chikkalawala’s Sanjay Satale Throws Grand 1st Birthday for Pet Buffalo Shyam

ಬೆಳಗಾವಿ, ಫೆ.7: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಕ್ಕಲವಾಳ ಗ್ರಾಮದಲ್ಲಿ ಒಂದು ಅಪರೂಪದ ಘಟನೆಯೊಂದು ನಡೆದಿದೆ. ಮನೆಯ ಮುಂದೆ ಹಾಕಿರುವ ಪೆಂಡಾಲ್ , ಸಂಭ್ರಮ ನೋಡಿ ಮದುವೆ ಇರಬೇಕು ಎಂದುಕೊಳ್ಳಬೇಕು. ಅಷ್ಟೊಂದು ಸಡಗರ ಇತ್ತು ಈ ಮನೆಯಲ್ಲಿ. ಇಷ್ಟಕ್ಕೂ ಈ ಸಂಭ್ರಮಕ್ಕೆ ಕಾರಣವೇನು? ಎಂದು ಒಮ್ಮೆ ಯೋಚನೆ ಮಾಡಬಹುದು. ಇದಕ್ಕೆ ಅಸಲಿ ಕಾರಣ ಚಿಕ್ಕಲವಾಳ ಗ್ರಾಮದ ಸಂಜಯ್ ಸತಾಳೆ ಎಂಬುವವರ ಮನೆಯ ಕೋಣ. ಹೌದು ಅವರ ತನ್ನ ಕೋಣ ವರ್ಷ ಪೂರೈಸಿದಕ್ಕೆ ಈ ಸಂಭ್ರಮವನ್ನು ಮಾಡಿದ್ದಾರೆ. ಊರಿಗೆಲ್ಲಾ ಊಟ ಹಾಕಿ, ಕೋಣದ (buffalo birthday celebration) ಮುಂದೆ ಕೇಕ್ ಇಟ್ಟು ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ. 39ವರ್ಷದ ಸಂಜಯ್ ತಮ್ಮದೇ ಜಮೀನಿನಲ್ಲಿ ಉಳುಮೆ ಮಾಡ್ತಾ, ಜಾನುವಾರುಗಳನ್ನ ಸಾಕುತ್ತಾ ಜೀವನ ನಡೆಸುತ್ತಿದ್ದಾರೆ.

ವರ್ಷದ ಹಿಂದೆ ತಂದಿದ್ದ ಕೋಣಕ್ಕೆ ಇಂದಿಗೆ ಒಂದು ವರ್ಷ ಪೂರೈಸಿದ ಹಿನ್ನೆಲೆ ಅದ್ದೂರಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಈ ಕೋಣಕ್ಕೆ ಶಾಮ್ ಎಂಬ ಹೆಸರು ಕೂಡ ಇಟ್ಟಿದ್ದಾರೆ. ಇದನ್ನು ಮಗನಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಸಂಜಯ್ ಗೆ ಇನ್ನೂ ಮದುವೆಯಾಗಿಲ್ಲ ಆ ಕಾರಣಕ್ಕೆ ಕೋಣವನ್ನೇ ಮಗನ ರೀತಿಯಲ್ಲಿ ಸಾಕುತ್ತಿದ್ದಾರೆ. ಒಂದು ವೇಳೆ ಮದುವೆಯಾಗಿ ಮಗ ಇದ್ದಿದ್ರೆ ಹೇಗೆ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಸೆಲೆಬ್ರೇಷನ್​ ಮಾಡುತ್ತಿದ್ದರೂ, ಅದೇ ರೀತಿಯಲ್ಲಿ ಮಾಡಿದ್ದಾರೆ. ಇದೀಗ ಕೋಣದ ಹುಟ್ಟು ಹಬ್ಬ ಮಾಡಿ ಇಡೀ ಗ್ರಾಮದ ಗಮನ ಸೆಳೆದಿದ್ದಾರೆ.

ಇನ್ನೂ ಕೋಣಕ್ಕೆ ಒಂದು ವರ್ಷ ಪೂರೈಕೆ ಆಗ್ತಿದ್ದಂತೆ ಗ್ರಾಮದ ಎಲ್ಲರನ್ನೂ ಕರೆದು ಹುಟ್ಟು ಹಬ್ಬ ಆಚರಣೆಗೆ ಪ್ಲ್ಯಾನ್ ಮಾಡಿದ್ದ ಸಂಜಯ್ ಗೆ ಕುಟುಂಬಸ್ಥರು ಸಾಥ್ ನೀಡಿದ್ದಾರೆ. ಶಾಮ್​​ನ ಹುಟ್ಟು ಹಬ್ಬವನ್ನ ಮಗನ ಮದುವೆ ಮಾದರಿಯಲ್ಲಿ ಮಾಡಿದ್ದಾರೆ. ಮನೆ ಮುಂದೆ ಪೆಂಡಾಲ್ ಹಾಕಿಸಿ ಅಲಂಕರಿಸಿ, ಇಡೀ ಊರ ಜನರನ್ನ ಕರೆದಿದ್ದಾರೆ, ಹತ್ತು ಕೆಜಿ ಕೇಕ್ ತಂದು ಕೋಣದ ಕಡೆಯಿಂದ ಕಟ್ ಮಾಡಿಸಿದ್ದಾರೆ. ಹುಗ್ಗಿ, ಪಲ್ಯ, ಅನ್ನ ಸಾಂಬಾರ್ ಅಡುಗೆ ಮಾಡಿಸಿ ಮುನ್ನೂರಕ್ಕೂ ಅಧಿಕ ಜನರಿಗೆ ಊಟ ಹಾಕಿಸಿದ್ದಾರೆ. ಎಲ್ಲಿಯೂ ಹೆಣ್ಣು ಸಿಗದಿದ್ದಾಗ ನೊಂದುಕೊಳ್ಳದೇ ತನ್ನೊಟ್ಟಿಗೆ ನಿತ್ಯವೂ ಇರುವ ಪ್ರಾಣಿಗಳನ್ನ ತಮ್ಮ ಮಕ್ಕಳಂತೆ ನೋಡಿಕೊಂಡು ಸಂಜಯ್ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪದೇ ಪದೇ ಆತ್ಮಹತ್ಯೆ ಯತ್ನಿಸಿದ 8ನೇ ತರಗತಿ ವಿದ್ಯಾರ್ಥಿನಿ: ಅಸಲಿ ಕಾರಣ ಇಲ್ಲಿದೆ

ಸದ್ಯ ಸಂಜಯ್ ಮಾಡಿರುವ ಹುಟ್ಟು ಹಬ್ಬ ಗ್ರಾಮೀಣ ಭಾಗದ ರೈತರು, ಯುವಕರಿಗೆ ಮಾದರಿಯಾಗಿದೆ. ಪ್ರಾಣಿಗಳನ್ನ ಪ್ರಾಣಿಗಳಂತೆ ನೋಡದೇ ಮಕ್ಕಳಂತೆ ನೋಡುವುದಷ್ಟೇ ಅಲ್ಲದೇ ಮಕ್ಕಳಿದಿದ್ರೇ ಎನೂ ಮಾಡ್ತಿದ್ರೂ ಅದನ್ನ ಮೂಕ ಪ್ರಾಣಿಗಳ ಮೇಲೆ ಮಾಡಿ ಸಂತಸ ಪಡ್ತಿರುವುದು ರೈತರ ಮುಗ್ದತೆ ಎತ್ತಿ ಹಿಡಿಯುತ್ತೆ. ಅದೇನೆ ಮೋಜು ಮಸ್ತಿ ಮಾಡಲು ಎನೆಲ್ಲಾ ಮಾಡೋರ ಮಧ್ಯೆ ಇಲ್ಲೊಬ್ಬ ಮೂಕ ಪ್ರಾಣಿಯದ್ದು ಹುಟ್ಟು ಹಬ್ಬ ಮಾಡಿ ಎಲ್ಲರಿಗೂ ಮಾದಿರಿಯಾಗಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೂರಜ್‌ಕುಂಡ್ ಜಾತ್ರೆ ದುರಂತ; ಸುನಾಮಿ ಉಯ್ಯಾಲೆ ತುಂಡಾಗಿ ಪೊಲೀಸ್ ಸಾವು, 13 ಜನರಿಗೆ ಗಾಯ – Kannada News | Surajkund Fair tragedy Police dead 13 injured after swing collapses in Faridabad

ಫರಿದಾಬಾದ್, ಫೆಬ್ರವರಿ 7: ಹರಿಯಾಣದ ಫರೀದಾಬಾದ್​ನಲ್ಲಿ ನಡೆಯುತ್ತಿದ್ದ ಸೂರಜ್‌ಕುಂಡ್ ಜಾತ್ರೆಯಲ್ಲಿ ದುರಂತ ಸಂಭವಿಸಿದೆ. ಎಲ್ಲ ಜಾತ್ರೆಗಳಲ್ಲೂ ಇರುವಂತೆ ಆ ಜಾತ್ರೆಯಲ್ಲೂ ಜಾಯಿಂಟ್ ವೀಲ್, ಜೋಕಾಲಿ ಮತ್ತಿತರ ಸ್ವಿಂಗ್​ಗಳನ್ನು ಹಾಕಲಾಗಿತ್ತು. ಈ ವೇಳೆ ಸುನಾಮಿ ಸ್ವಿಂಗ್ ತುಂಡಾಗಿ ಬಿದ್ದಿದೆ. ಅದರಲ್ಲಿ ಕುಳಿತಿದ್ದವರು ಕೆಳಗೆ ಬೀಳಲಾರಂಭಿಸಿದರು. ಜಾತ್ರೆಯಲ್ಲಿ ವಿಪರೀತ ಜನ ಸೇರಿದ್ದರಿಂದ ಏನಾಯಿತು ಎಂದು ಅಲ್ಲಿದ್ದವರಿಗೆ ಗೊತ್ತಾಗುವಷ್ಟರಲ್ಲಿ ಮೇಲಿನಿಂದ ಬಿದ್ದು ಪೊಲೀಸ್ ಸಾವನ್ನಪ್ಪಿದ್ದು, 13ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ಸಮಯದಲ್ಲಿ ಉಯ್ಯಾಲೆಯಲ್ಲಿ 18 ಜನರಿದ್ದರು. ಈ ದುರಂತಕ್ಕೆ ಹರಿಯಾಣ ಸಿಎಂ ದುಃಖ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link