ಧನುಷ್ ಮುಂದಿನ ಚಿತ್ರದಲ್ಲಿ ಸಾಯಿ ಪಲ್ಲವಿ ಪೊಲೀಸ್ ಅಧಿಕಾರಿ? ವೈರಲ್ ಆಗ್ತಿದೆ ‘ಡಿ55’ ಅಪ್‌ಡೇಟ್
ಬಹುಭಾಷಾ ನಟಿ ಸಾಯಿ ಪಲ್ಲವಿ (Sai Pallavi) ಅವರು ಸದಾ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಇದೀಗ ಕಾಲಿವುಡ್ ಸ್ಟಾರ್ ಧನುಷ್ (Dhanush) ಹಾಗೂ ಮಾಲಿವುಡ್ ಸ್ಟಾರ್ ಹೀರೋ ಮಮ್ಮುಟ್ಟಿ ನಟಿಸುತ್ತಿರುವ ಬಹುನಿರೀಕ್ಷಿತ ‘D55’ ಸಿನಿಮಾದಲ್ಲಿ ಸಾಯಿ ಪಲ್ಲವಿ ಮಹತ್ವದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹರಿದಾಡುತ್ತಿರುವ ಲೇಟೆಸ್ಟ್ ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಖಾಕಿ ಖದರ್ ತೋರಿಸಲಿದ್ದಾರೆ. ಅಂದರೆ, ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಗಾಸಿಪ್ ಜೋರಾಗಿ ಕೇಳಿಬರುತ್ತಿದೆ. ರಾಜ್‌ಕುಮಾರ್…