Category Archives: Blog
Your blog category
ಕರ್ನಾಟಕ ಮೂಲದ ಉದ್ಯಮಿ ಕೇರಳದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ: ಪತ್ನಿ, ಮಕ್ಕಳು ಪಾರು – Kannada News | Kodagu Businessman Suicide: Sajeer Self Immolates in Wayanad Over 20 Lakh Debt
ಸಜೀರ್ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿImage Credit source: onmanorama
ಕೊಡಗು, ಫೆಬ್ರವರಿ 07: ಕೇರಳದ ವಯನಾಡಿನಲ್ಲಿ ಕರ್ನಾಟಕ ಮೂಲದ ಉದ್ಯಮಿ (businessman) ಕುಟುಂಬ ಸಮೇತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ (suicide) ಯತ್ನಿಸಿರುವಂತಹ ಘಟನೆ ನಡೆದಿದೆ. ದುರಂತದಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ನಿವಾಸಿ, ಉದ್ಯಮಿ ಸಜೀರ್ ಮೃತಪಟ್ಟಿದ್ದಾರೆ. ಸಜೀರ್ ಪತ್ನಿಗೆ ಗಂಭೀರ ಗಾಯವಾಗಿದ್ದು, ಕಲ್ಲಿಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ. ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.
ನಡೆದಿದ್ದೇನು?
ಕೊಡಗು ಜಿಲ್ಲೆಯ ಉದ್ಯಮಿ ಸಜೀರ್ ಕುಟ್ಟ ಗ್ರಾಮದಲ್ಲಿ ಹಲವು ವ್ಯಾಪಾರ ಮಳಿಗೆ ಹೊಂದಿದ್ದರು. ಬಾಪು ಎಂಬಾತ ಸಜೀರ್ಗೆ 20 ಲಕ್ಷ ರೂ. ನೀಡಬೇಕಿತ್ತು. ಸಾಲ ಪಡೆದಿದ್ದ ಬಾಪುನ ಮನೆ ಎದುರೇ ಸಜೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಆತ್ಮಹತ್ಯೆಗೂ ಮುನ್ನ ಕಾರಿನಲ್ಲೇ ಕುಳಿತು ಉದ್ಯಮಿ ಸಜೀರ್ ವಿಡಿಯೋ ರೆಕಾರ್ಡ್ ಮಾಡಿದ್ದು, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಬಾಪು ಕಾರಣ ಎಂದು ಹೇಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಭಯೋತ್ಪಾದಕ ಸಾವು
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಭಯೋತ್ಪಾದಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಡರಾತ್ರಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸಾಧಿಕ್ ಪಾಷಾ(47) ಮೃತ ಶಂಕಿತ ಭಯೋತ್ಪಾದಕ. ಕಳೆದ 6 ತಿಂಗಳಿಂದ ಲೋ ಬಿಪಿ ಮತ್ತು ಹೈಶುಗರ್ ಸೇರಿದಂತೆ ಕೆಲ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ.
ಇದನ್ನೂ ಓದಿ: ಫ್ರೀಫೈರ್ಗೆ ಅಡಿಕ್ಟ್ ಆಗಿದ್ದ ಅಕ್ಕನ ಮಗನನ್ನೇ ಕೊಂದಿದ್ದ ಮಾವ ಸೇರಿ ಕುಟುಂಬದ ನಾಲ್ವರು ಬಿಹಾರದಲ್ಲಿ ಆತ್ಮಹತ್ಯೆಗೆ ಶರಣು!
ಸುದ್ದಗುಂಟೆಪಾಳ್ಯ ಸ್ಫೋಟಕವಸ್ತು ಸಂಗ್ರಹ ಕೇಸ್ನಲ್ಲಿ ಜೈಲು ಸೇರಿದ್ದ ಸಾಧಿಕ್ ಪಾಷಾ 2020ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಪ್ರಕರಣ ಸಂಬಂಧ ಸಾಧಿಕ್ ಸೇರಿ ಒಟ್ಟು 6 ಶಂಕಿತರನ್ನು ಎನ್ಐಎ ಬಂಧಿಸಿತ್ತು. ಬೆಂಗಳೂರಿನ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಕುದುರೆ ಗಾಡಿ, ಬೈಕ್ ಡಿಕ್ಕಿ: ಸವಾರ ಸಾವು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗೋಠೆ ಗ್ರಾಮದಲ್ಲಿ ಕುದುರೆ ಗಾಡಿ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬಂಡು ಪವಾರ್(42) ಮೃತ ದುರ್ದೈವಿ. ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Propose Day 2026 Date: ಪ್ರಪೋಸ್ ಡೇ ಯಾವಾಗ? ಪ್ರೇಮಿಗಳ ಈ ಮಹತ್ವದ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ – Kannada News | Propose Day 2026: Why is Propose Day celebrated? Know the history and significance of this special day
ವ್ಯಾಲೆಂಟೈನ್ಸ್ ವೀಕ್ ಈಗಾಗಲೇ ಆರಂಭವಾಗಿದ್ದು, ಪ್ರೇಮಿಗಳ ಪಾಲಿಗೆ ಪ್ರೇಮಿಗಳ ವಾರದ ಪ್ರತಿಯೊಂದು ದಿನವೂ ತುಂಬಾ ವಿಶೇಷವಾಗಿದೆ. ಅದರಲ್ಲೂ ಪ್ರೇಮಿಗಳಿಗೆ ಪ್ರಪೋಸ್ ಡೇ (Propose Day) ಅಪಾರ ಮಹತ್ವದ್ದಾಗಿದೆ. ಇದನ್ನು ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲು, ಮದುವೆಯನ್ನು ಪ್ರಸ್ತಾಪಿಸಲು ಶ್ರೇಷ್ಠ ದಿನವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಪ್ರೇಮಿಗಳ ವಾರದ ಎರಡನೇ ದಿನದಂದು ಪ್ರಪೋಸ್ ಡೇ ಯನ್ನು ಆಚರಿಸಲಾಗುತ್ತದೆ. ಈ ದಿನದಂದು, ಜನರು ತಮ್ಮ ಪ್ರೀತಿ ಅಥವಾ ಸಂಗಾತಿಗೆ ತಮ್ಮ ಆಳವಾದ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುತ್ತಾರೆ. ಒಟ್ಟಾರೆಯಾಗಿ ಈ ವಿಶೇಷ ದಿನವು ಹೊಸ ಪ್ರೇಮಕಥೆಗಳ ಆಶಾದಾಯಕ ಆರಂಭಕ್ಕೆ ಹೆಸರುವಾಸಿಯಾಗಿದ್ದು, ಈ ಪ್ರಪೋಸ್ ಡೇ ಯ ಇತಿಹಾಸ ಮತ್ತು ಮಹತ್ವವೇನು ಎಂಬುದನ್ನು ತಿಳಿಯೋಣ ಬನ್ನಿ.
ಪ್ರಪೋಸ್ ಡೇ ಯನ್ನು ಏಕೆ ಆಚರಿಸಲಾಗುತ್ತದೆ?
ಜನರು ತಮ್ಮ ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ತಮ್ಮ ನೆಚ್ಚಿನ ವ್ಯಕ್ತಿಗೆ ಅವರನ್ನು ಪ್ರೀತಿಸುತ್ತೇನೆ ಅಥವಾ ಅವರೊಂದಿಗೆ ಜೀವಮಾನವಿಡೀ ಸಂಬಂಧವನ್ನು ಮುಂದುವರಿಸಲು ಬಯಸುತ್ತೇನೆ ಎಂದು ಹೇಳಲು ಪ್ರಪೋಸ್ ಡೇಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಪ್ರೀತಿ, ವಿಶ್ವಾಸ ಮತ್ತು ಹೊಸ ಸಂಬಂಧಗಳ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅನೇಕ ಜನರು ಈ ದಿನದಂದು ತಮ್ಮ ಪ್ರೇಮವನ್ನು ಪ್ರಸ್ತಾಪ ಮಾಡುತ್ತಾರೆ, ಪ್ರಪೋಸ್ ಮಾಡುತ್ತಾರೆ, ಆದರೆ ಅನೇಕ ದಂಪತಿಗಳು ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸುತ್ತಾರೆ. ಈ ರೀತಿಯಾಗಿ, ಪ್ರೀತಿಯನ್ನು ವ್ಯಕ್ತಪಡಿಸಲು, ಪ್ರಾಮಾಣಿಕತೆ ಮತ್ತು ಸಂಬಂಧಗಳಲ್ಲಿ ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸಲು ಪ್ರಪೋಸ್ ದಿನವನ್ನು ಆಚರಿಸಲಾಗುತ್ತದೆ.
ಪ್ರಪೋಸ್ ಡೇ ಹೇಗೆ ಪ್ರಾರಂಭವಾಯಿತು?
ವರ್ಷಗಳಿಂದ, ಪ್ರೇಮಿಗಳ ವಾರದ ಎರಡನೇ ದಿನದಂದು ಪ್ರಪೋಸ್ ಡೇ ಆಚರಿಸಲಾಗುತ್ತಿದೆ. ಇದು ಶತಮಾನಗಳ ಹಿಂದೆ ಹುಟ್ಟಿಕೊಂಡಿದ್ದರೂ, ಈ ಪಾಶ್ಚಿಮಾತ್ಯ ಸಂಪ್ರದಾಯವು ಭಾರತದಲ್ಲಿಯೂ ಸಾಕಷ್ಟು ಜನಪ್ರಿಯವಾಗಿದೆ. ಇತಿಹಾಸಕಾರರು ಪ್ರೇಮಿಗಳ ದಿನದ ಆಚರಣೆಯು ಮಧ್ಯಕಾಲೀನ ಯುರೋಪಿನಿಂದಲೂ ಆರಂಭವಾಗಿದೆ ಎಂದು ನಂಬುತ್ತಾರೆ. ಆ ಅವಧಿಯಲ್ಲಿ ರಾಜಕುಮಾರರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಈ ಸಮಯವನ್ನು ಹೆಚ್ಚಾಗಿ ಆರಿಸಿಕೊಳ್ಳುತ್ತಿದ್ದರು. ಕ್ರಮೇಣ, 14 ಮತ್ತು 15 ನೇ ಶತಮಾನಗಳ ಹೊತ್ತಿಗೆ, ಫೆಬ್ರವರಿ ತಿಂಗಳು ಪ್ರೀತಿ ಮತ್ತು ಸಂಬಂಧಗಳ ಆರಂಭಕ್ಕೆ ಮೀಸಲಾದ ಸಮಯವೆಂದು ಪರಿಗಣಿಸಲ್ಪಟ್ಟಿತು.
ಇನ್ನೊಂದು ಇತಿಹಾಸದ ಪ್ರಕಾರ ಆಸ್ಟ್ರಿಯಾದ ಆರ್ಚ್‌ಡ್ಯೂಕ್ ಮ್ಯಾಕ್ಸಿಮಿಲಿಯನ್ 1477 ರಲ್ಲಿ ಬರ್ಗಂಡಿಯ ಮೇರಿಗೆ ಪ್ರಪೋಸ್ ಮಾಡಿದರು ಎಂದು ಹೇಳಲಾಗುತ್ತದೆ. ಈ ವಿಶೇಷ ಕ್ಷಣವನ್ನು ಗುರುತಿಸಲು ಅವರು ಅವಳಿಗೆ ವಜ್ರದ ಉಂಗುರವನ್ನು ಉಡುಗೊರೆಯಾಗಿ ನೀಡಿದರು. ಹೀಗೆ ಮ್ಯಾಕ್ಸಿಮಿಲಿಯನ್ ಮೇರಿಗೆ ವಜ್ರದ ಉಂಗುರ ತೊಡಿಸಿ ವಿವಾಹ ಪ್ರಸ್ತಾಪ ಮಾಡಿದ ಕಾರಣ ಪ್ರತಿ ವರ್ಷ ಫೆಬ್ರವರಿ ೮ ರಂದು ಪ್ರಪೋಸ್ ಡೇ ಆಚರಿಸಲಾಗುತ್ತದೆ. ಇದಲ್ಲದೆ, 1816೧೬ ರಲ್ಲಿ, ರಾಜಕುಮಾರಿ ಷಾರ್ಲೆಟ್ ತನ್ನ ಭಾವಿ ಪತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಕೂಡ ಇದೇ ದಿನದಂದು.
ಇದನ್ನೂ ಓದಿ: ಪ್ರೇಮಿಗಳ ವಾರದ ಮೊದಲೇ ದಿನವೇ ರೋಸ್ ಡೇ; ಈ ದಿನದ ಇತಿಹಾಸ, ಮಹತ್ವವೇನು?
ಪ್ರಪೋಸ್ ದಿನವನ್ನು ಹೇಗೆ ಆಚರಿಸಲಾಗುತ್ತದೆ?
ಜನರು ತಮ್ಮದೇ ಆದ ರೀತಿಯಲ್ಲಿ ಪ್ರಪೋಸ್ ದಿನವನ್ನು ಆಚರಿಸುತ್ತಾರೆ. ಕೆಲವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ, ತಮ್ಮ ಸಂಗಾತಿಯೊಂದಿಗೆ ತಮ್ಮ ಹೃದಯಪೂರ್ವಕ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ, ಸಂಬಂಧವನ್ನು ಪ್ರಾರಂಭಿಸಲು ಅಥವಾ ಮುಂದುವರಿಸಲು ಪ್ರಸ್ತಾಪಿಸುತ್ತಾರೆ. ಇನ್ನು ಕೆಲವರು ಗುಲಾಬಿ, ಚಾಕೊಲೇಟ್, ಕಾರ್ಡ್ ಅಥವಾ ಸಣ್ಣ ಉಡುಗೊರೆಯನ್ನು ನೀಡುವ ಮೂಲಕ ಪ್ರೇಮ ಪ್ರಸ್ತಾಪವನ್ನು ಮಾಡುತ್ತಾರೆ. ಇನ್ನು ಕೆಲವರು ಸುಂದರವಾದ ಸಂದೇಶ, ಕವಿತೆ ಅಥವಾ ಕೈಬರಹದ ಪ್ರೇಮ ಪತ್ರದ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಈ ದಿನದಂದು ಪ್ರೇಮಿಗಳು ಪರಸ್ಪರ ಬದ್ಧರಾಗಿ ತಮ್ಮ ಬಂಧವನ್ನು ಮತ್ತಷ್ಟು ಬಲಪಡಿಸುತ್ತಾರೆ.
ಪ್ರಪೋಸ್ ಡೇಯ ಮಹತ್ವವೇನು?
- ಪ್ರಪೋಸ್ ಡೇ ಮನಸ್ಸಿನಲ್ಲಿರುವ ಭಾವನೆ, ಪ್ರೀತಿಯನ್ನು ವ್ಯಕ್ತಪಡಡಿಸಲಿರುವ ಒಂದು ವೇದಿಕೆಯಾಗಿದೆ.
- ಪ್ರಪೋಸ್ ಡೇ ಪ್ರೇಮಪಕ್ಷಿಗಳಿಗೆ ಭಯವನ್ನೆಲ್ಲಾ ಪಕ್ಕಕ್ಕಿಟ್ಟು ಪ್ರೀತಿಯನ್ನು ವ್ಯಕ್ತಪಡಿಸಲು ಒಂದು ಧೈರ್ಯವನ್ನು ನೀಡುತ್ತದೆ.
- ಈ ದಿನ ಸಂಗಾತಿಗಳಿಬ್ಬರ ಸಂಬಂಧಕ್ಕೆ ಹೊಸ ತಾಜಾತನ ಮತ್ತು ಬದ್ಧತೆಯನ್ನು ತರುತ್ತದೆ.
- ಈ ದಿನವನ್ನು ಪ್ರೀತಿ, ವಿಶ್ವಾಸ ಮತ್ತು ಹೊಸ ಸಂಬಂಧಗಳ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
T20 World Cup 2026: ನೆದರ್ಲ್ಯಾಂಡ್ಸ್ ವಿರುದ್ಧ ತಿಣುಕಾಡಿ ಗೆದ್ದ ಪಾಕಿಸ್ತಾನ – Kannada News | 2026 T20 World Cup: Faheem Ashraf Heroics Lead Pakistan to Thrilling Win vs Netherlands
2026 ರ ಟಿ20 ವಿಶ್ವಕಪ್ ಇಂದಿನಿಂದ ಆರಂಭವಾಗಿದೆ. ಮೊದಲ ದಿನ ಮೂರು ಪಂದ್ಯಗಳು ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್ಲ್ಯಾಂಡ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಕೊನೆಯ ಓವರ್ವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇತ್ತ 19ನೇ ಓವರ್‌ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ನೆದರ್ಲ್ಯಾಂಡ್ಸ್ ರೋಚಕ ಗೆಲುವಿನಿಂದ ವಂಚಿತವಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ಸ್ 147 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 18 ನೇ ಓವರ್ ವೇಳೆಗೆ ಸೋಲಿನ ಸನಿಹಕ್ಕೆ ತಲುಪಿತ್ತು. ಆದರೆ 19 ನೇ ಓವರ್‌ನಲ್ಲಿ ಫಹೀಮ್ ಅಶ್ರಫ್ ಮೂರು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿ ತಂಡದ ಗೆಲುವು ಖಚಿತಪಡಿಸಿದರು. ಇದೇ ಓವರ್‌ನಲ್ಲಿ ಅಶ್ರಫ್ಗೆ ಜೀವದಾನವೂ ಸಿಕ್ಕಿತು. ಇದರ ಪರಿಣಾಮವಾಗಿ ಪಾಕಿಸ್ತಾನ 20 ನೇ ಓವರ್‌ನಲ್ಲಿ ಪಂದ್ಯ ಗೆದ್ದು ಗೆಲುವಿನೊಂದಿಗೆ ಅಭಿಯಾನವನ್ನು ಪ್ರಾರಂಭಿಸಿತು.
ಸ್ಕೂಟರ್ಗೆ ಡಿಕ್ಕಿ ತಪ್ಪಿಸಲು ಹೋಗಿ ರಿಕ್ಷಾ ಪಲ್ಟಿ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ – Kannada News | Viral Video: Auto rickshaw Flips Avoiding Scooter Collision in Odisha
ಸ್ಕೂಟರ್ಗೆ ಡಿಕ್ಕಿ ತಪ್ಪಿಸಲು ಹೋಗಿ ಆಟೋರಿಕ್ಷಾವೊಂದು ಪಲ್ಟಿಯಾಗಿರುವ ಘಟನೆ ಒಡಿಶಾದ ರಾಷ್ಟ್ರೀಯ ಹೆದ್ದಾರಿ -55 ರಲ್ಲಿ ನಡೆದಿದೆ. ಆಟೋರಿಕ್ಷಾದಲ್ಲಿದ್ದ 5 ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಆಟೋರಿಕ್ಷಾ ಸ್ಕೂಟರ್ಗೆ ಡಿಕ್ಕಿ ತಪ್ಪಿಸಲು ಸಡನ್ ಬ್ರೇಕ್ ಹಾಕಿದ್ದರಿಂದ ವಾಹನ ಪಲ್ಟಿಯಾಗಿರುವುದನ್ನು ಕಾಣಬಹುದು.
ಇದನ್ನೂ ಓದಿ: ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ಪಿಯುಸಿ ವಿದ್ಯಾರ್ಥಿ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ – Kannada News | Mouna Guddemane Became Heroine For Krishna Rukku Serial
ಮೌನ ಗುಡ್ಡೇಮನೆ ಅವರು ಇಷ್ಟು ದಿನ ‘ರಾಮಾಚಾರಿ’ ಧಾರಾವಾಹಿಯಲ್ಲಿ ನಟಿಸಿ ಗಮನ ಸೆಳೆಯುತ್ತಿದ್ದರು. ಈಗ ಮೌನ ಅವರು ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ರುಕ್ಕು ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದೆ. ಎಂತಹುದೇ ಕಷ್ಟ ಬಂದರೂ ಅದರಲ್ಲಿ ನಗು ಕಾಣೋದು ರುಕ್ಕು ಸ್ವಭಾವ. ಕೃಷ್ಣನ ಪಾತ್ರದಲ್ಲಿ ಅಕ್ಷಯ್ ನಾಯಕ್ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Weekly Job Horoscope: ಈ ರಾಶಿಯವರಿಗೂ ವೃತ್ತಿಜೀವನದಲ್ಲಿ ಎದುರಾಗಬಹುದಾದ ಸವಾಲುಗಳನ್ನು ತಾಳ್ಮೆಯಿಂದ ನಿಭಾಯಿಸಿ – Kannada News | Weekly job horoscope career forecast feb 8 14 2026
8-02-2026ರಿಂದ 14-02-2026 ರವರೆಗೆ ಉದ್ಯೋಗದಾತರು ಬಗ್ಗೆ ಅತಿಯಾದ ನಿಗಾ ಇಡುವ ಅವಶ್ಯಕತೆ ಇಲ್ಲದೇ ಇದ್ದರೂ ಚಿಂತೆ ಮಾತ್ರ ಒಂದಾದಮೇಲೆ ಒಂದರಂತೆ ಬರಲಿದೆ. ನಿಮ್ಮ ಸಮಯವನ್ನು ಸೃಜನಾತ್ಮಕವಾಗಿ ಬಳಸಿಕೊಂಡರೆ ಯಶಸ್ಸು ಸಾಧ್ಯ.
ಮೇಷ
ಕುಜನ ಪ್ರಭಾವದಿಂದ ಉದ್ಯೋಗದಲ್ಲಿ ಧೈರ್ಯದ ನಿರ್ಧಾರ ತೆಗೆದುಕೊಳ್ಳುವಿರಿ. ಹೊಸ ಜವಾಬ್ದಾರಿಗಳು ಹುಡುಕಿಕೊಂಡು ಬರಲಿವೆ. ಸಹೋದ್ಯೋಗಿಗಳೊಂದಿಗೆ ವಾಗ್ವಾದ ಬೇಡ. ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದ್ದು, ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಶುಭ ವಾರ್ತೆ ಸಿಗಲಿದೆ.
ವೃಷಭ
ಶುಕ್ರನ ಸಂಚಾರವು ವೃತ್ತಿಜೀವನದಲ್ಲಿ ಸ್ಥಿರತೆ ನೀಡಲಿದೆ. ಕಲಾತ್ಮಕ ಕ್ಷೇತ್ರಗಳಲ್ಲಿರುವವರಿಗೆ ಉತ್ತಮ ಅವಕಾಶಗಳು ಲಭಿಸಲಿವೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಲಾಭದಾಯಕ ವಾರವಿದು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ನಿಮ್ಮ ಗುರಿ ತಲುಪುವಿರಿ.
ಮಿಥುನ
ಬುಧನ ಚಲನೆಯಿಂದಾಗಿ ಸಂವಹನ ಕ್ಷೇತ್ರದಲ್ಲಿದ್ದವರಿಗೆ ಯಶಸ್ಸು ಸಿಗಲಿದೆ. ಕೆಲಸ ಬದಲಿಸುವ ಆಲೋಚನೆ ಇದ್ದರೆ ಇದು ಸಕಾಲ. ಸಂದರ್ಶನಗಳಲ್ಲಿ ಆತ್ಮವಿಶ್ವಾಸದಿಂದ ಪಾಲ್ಗೊಳ್ಳಿ. ಹೊಸ ಕೌಶಲ್ಯಗಳನ್ನು ಕಲಿಯಲು ಸಮಯ ಮೀಸಲಿಡಿ, ಇದು ಭವಿಷ್ಯದ ಪ್ರಗತಿಗೆ ಪೂರಕವಾಗಲಿದೆ.
ಕರ್ಕಾಟಕ
ಚಂದ್ರನ ಬದಲಾವಣೆಯಿಂದ ಕೆಲಸದಲ್ಲಿ ಏರಿಳಿತವಿರಬಹುದು. ತಾಳ್ಮೆಯಿಂದ ಕೆಲಸ ಮಾಡುವುದು ಅಗತ್ಯ. ಕಚೇರಿಯ ರಾಜಕೀಯದಿಂದ ದೂರವಿರಿ. ವಾರದ ಮಧ್ಯಭಾಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಖಂಡಿತ ದೊರೆಯಲಿದೆ.
ಸಿಂಹ
ಸೂರ್ಯನ ಪ್ರಭಾವದಿಂದ ನಾಯಕತ್ವದ ಗುಣಗಳು ಮೆಚ್ಚುಗೆ ಪಡೆಯಲಿವೆ. ಆಡಳಿತಾತ್ಮಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಸ್ವಂತ ಉದ್ಯಮ ಮಾಡುವವರಿಗೆ ಹೊಸ ಒಪ್ಪಂದಗಳು ಸಿಗಲಿವೆ. ನಿಮ್ಮ ಶಕ್ತಿಯ ಮೇಲೆ ನಂಬಿಕೆಯಿರಲಿ, ಈ ವಾರ ದೊಡ್ಡ ಸಾಧನೆ ಮಾಡುವಿರಿ.
ಕನ್ಯಾ
ಕೆಲಸದ ಸ್ಥಳದಲ್ಲಿ ಸಣ್ಣಪುಟ್ಟ ಸವಾಲುಗಳು ಎದುರಾಗಬಹುದು. ಯೋಜನೆಗಳ ಅನುಷ್ಠಾನದಲ್ಲಿ ನಿಖರತೆ ಇರಲಿ. ತಾಂತ್ರಿಕ ವಲಯದವರಿಗೆ ಈ ವಾರ ಅತ್ಯಂತ ಲಾಭದಾಯಕವಾಗಿದೆ. ಕಠಿಣ ಪರಿಶ್ರಮದಿಂದ ಅಸಾಧ್ಯವಾದದ್ದನ್ನು ಸಾಧಿಸುವಿರಿ. ಮೇಲಧಿಕಾರಿಗಳ ಪ್ರೋತ್ಸಾಹ ನಿಮ್ಮ ಉತ್ಸಾಹ ಹೆಚ್ಚಿಸಲಿದೆ.
ತುಲಾ
ವೃತ್ತಿಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭದಾಯಕ ಬದಲಾವಣೆ ಕಂಡುಬರಲಿದೆ. ಹೊಸ ಉದ್ಯೋಗದ ಆಫರ್ ಬರುವ ಸಾಧ್ಯತೆಯಿದೆ. ಟೀಮ್ ವರ್ಕ್ ಮೂಲಕ ಕಷ್ಟದ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ. ಆರ್ಥಿಕವಾಗಿ ವಾರವು ಶುಭವಾಗಿದೆ.
ವೃಶ್ಚಿಕ
ಗುಪ್ತ ಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ನಿಮ್ಮ ಕೆಲಸದ ಮೇಲೆ ಹೆಚ್ಚಿನ ಗಮನ ಹರಿಸಿ. ಸಂಶೋಧನೆ ಮತ್ತು ತನಿಖಾ ಕ್ಷೇತ್ರದಲ್ಲಿರುವವರಿಗೆ ಪ್ರಗತಿ ಸಿಗಲಿದೆ. ವಾರದ ಅಂತ್ಯಕ್ಕೆ ವೃತ್ತಿಯಲ್ಲಿ ದೊಡ್ಡ ತಿರುವು ಸಿಗುವ ಸಾಧ್ಯತೆಯಿದೆ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ.
ಧನು
ಗುರು ಗ್ರಹದ ಕೃಪೆಯಿಂದ ಉದ್ಯೋಗದಲ್ಲಿ ಬಡ್ತಿ ಅಥವಾ ವರ್ಗಾವಣೆಯ ಯೋಗವಿದೆ. ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಗೌರವ ಸಿಗಲಿದೆ. ದೂರದ ಪ್ರಯಾಣದಿಂದ ಕೆಲಸದಲ್ಲಿ ಅನುಕೂಲವಾಗಲಿದೆ. ನಿಮ್ಮ ಸಲಹೆಗಳಿಗೆ ಕಚೇರಿಯಲ್ಲಿ ಹೆಚ್ಚಿನ ಬೆಲೆ ಸಿಗುವ ವಾರವಿದು.
ಮಕರ
ಶನಿಯ ಪ್ರಭಾವದಿಂದ ಕೆಲಸದ ಹೊರೆ ಹೆಚ್ಚಿರಲಿದೆ. ಶಿಸ್ತು ಮತ್ತು ಸಮಯಪ್ರಜ್ಞೆ ನಿಮಗೆ ಯಶಸ್ಸು ತಂದುಕೊಡಲಿದೆ. ಹಳೆಯ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ. ತಾಳ್ಮೆಯಿಂದ ಕಾರ್ಯನಿರ್ವಹಿಸಿದರೆ ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೇರುವಿರಿ. ಹೂಡಿಕೆಗಳ ಬಗ್ಗೆ ಜಾಗರೂಕರಾಗಿರಿ.
ಕುಂಭ
ನವೀನ ಆಲೋಚನೆಗಳು ನಿಮ್ಮ ವೃತ್ತಿಜೀವನಕ್ಕೆ ಹೊಸ ವೇಗ ನೀಡಲಿವೆ. ಐಟಿ ಮತ್ತು ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಶುಭ ಕಾಲ. ಸಹೋದ್ಯೋಗಿಗಳ ಬೆಂಬಲದಿಂದ ದೊಡ್ಡ ಪ್ರಾಜೆಕ್ಟ್ ಪೂರ್ಣಗೊಳಿಸುವಿರಿ. ಸಮಾಜಮುಖಿ ಕೆಲಸಗಳಲ್ಲಿ ನಿಮ್ಮ ಪಾತ್ರ ಹಿರಿದಾಗಿರಲಿದೆ.
ಮೀನ
ಸೃಜನಶೀಲ ಕೆಲಸಗಳಲ್ಲಿ ಲಾಭ ದೊರೆಯಲಿದೆ. ನಿಮ್ಮ ಕೆಲಸಕ್ಕೆ ಸಮಾಜದಲ್ಲಿ ಮನ್ನಣೆ ಸಿಗಲಿದೆ. ಉದ್ಯೋಗದ ನಿಮಿತ್ತ ವಿದೇಶ ಪ್ರಯಾಣದ ಸಂಭವವಿದೆ. ಆರ್ಥಿಕವಾಗಿ ಸದೃಢರಾಗುವಿರಿ. ಮನಸ್ಸಿನ ಗೊಂದಲ ಬಿಟ್ಟು ಏಕಾಗ್ರತೆಯಿಂದ ಕೆಲಸ ಮಾಡಿ, ಅದೃಷ್ಟ ನಿಮ್ಮ ಬೆನ್ನಿಗಿದೆ.
- ಲೋಹಿತ ಹೆಬ್ಬಾರ್ – 8762924271 (what’s app only)
ಬೆಂಗಳೂರು ಏರ್ಪೋರ್ಟ್ನಲ್ಲಿ ಸಿಕ್ತು 3 ಕೋಟಿ ರೂ. ಮೌಲ್ಯದ ಗಾಂಜಾ! ಮೂವರು ಆರೋಪಿಗಳು ವಶಕ್ಕೆ – Kannada News | Bengaluru Airport Customs Seize Rs 2.97 Cr Hydro Ganja; 3 Arrested for Smuggling
ಬೆಂಗಳೂರು ಏರ್ಪೋರ್ಟ್ನಲ್ಲಿ ಸಿಕ್ತು 3 ಕೋಟಿ ರೂ. ಮೌಲ್ಯದ ಗಾಂಜಾ!
ಬೆಂಗಳೂರು, ಫೆಬ್ರವರಿ 07: ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (International Airport) ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2.97 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಎಂಟೂ ವರೆ ಕೆಜಿ ಹೈಡ್ರೋ ಗಾಂಜಾ ಪತ್ತೆ
ಥಾಯ್ಲೆಂಡ್‌ನ ಪುಕೆಟ್ ಹಾಗೂ ಮಲೇಶಿಯಾದಿಂದ ಕೆಐಎಬಿಗೆ ಆಗಮಿಸಿದ್ದ ಮೂವರು ಪ್ರಯಾಣಿಕರ ಲಗೇಜ್ ಬ್ಯಾಗ್‌ಗಳನ್ನು ಇಮಿಗ್ರೇಷನ್ ವಿಭಾಗದಲ್ಲಿ ಪರಿಶೀಲಿಸಿದ ವೇಳೆ, ಪ್ಯಾಕೆಟ್‌ಗಳಾಗಿ ಅಡಗಿಸಿಟ್ಟಿದ್ದ ಒಟ್ಟು 8.5 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ವಶಪಡಿಸಿಕೊಳ್ಳಲಾದ ಮಾದಕ ವಸ್ತುವಿನ ಮೌಲ್ಯವನ್ನು ಸುಮಾರು 2.97 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ ಚಿನ್ನಾಭರಣ ಕದ್ದಿದ್ದ ನೇಪಾಳಿ ಜೋಡಿ ಮಹಾರಾಷ್ಟ್ರಕ್ಕೆ ಎಸ್ಕೇಪ್!
ಮೂವರನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು!
ಗಾಂಜಾ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣದ ಹಿಂದೆ ಇರುವ ಜಾಲ ಹಾಗೂ ವಿದೇಶಿ ಸಂಪರ್ಕಗಳ ಕುರಿತು ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 2:38 pm, Sat, 7 February 26
Love Horoscope: ಪ್ರೇಮಿಗಳಿಗೆ ಫೆ.14ರವರೆಗೆ ಎಚ್ಚರಿಕೆ, ನಿಮ್ಮ ಸಂಬಂಧದಲ್ಲಿ ಮಹತ್ವದ ತಿರುವು – Kannada News | Weekly Love Predictions Feb 8 14: Astrological Guide for Your Valentine’s Day Romance
ಫೆಬ್ರವರಿ 08ರಿಂದ ಫೆಬ್ರವರಿ 14ರ ವರೆಗೆ ಈ ತಿಂಗಳ ಎರಡನೇ ವಾರವಾಗಿದ್ದು. ಪ್ರೇಮಕ್ಕೆ ಸಂಬಂಧಿಸಿದಂತೆ ಉತ್ಸಾಹ ನಿಮ್ಮಲ್ಲಿ ಕಾಣಿಸುವುದು. ಪ್ರೇಮಿಗಳ ದಿನದ ಸಿದ್ಧತೆಯಲ್ಲಿ ಇರುವ ನಿಮಗೆ ಎಲ್ಲವೂ ಕೂಡಿಬರಬೇಕೆಂದಿಲ್ಲ. ಕೆಲವರಿಗೆ ಅಸೆ ಭಂಗವಾಗಲಿದೆ. ಭವಿಷ್ಯದ ಬಗ್ಗೆ ನಿರ್ದಿಷ್ಟತೆ ನಿಮ್ಮದಾಗಿಲಿ.
ಮೇಷ:
ಸಂಬಂಧದಲ್ಲಿ ಕೊಂಚ ಬಿಸಿ ಇರಲಿದೆ. ಅತಿಯಾದ ಕೋಪ ಪ್ರೀತಿಯನ್ನು ದೂರ ಮಾಡಬಹುದು. ಸಂಗಾತಿಯ ಮಾತಿಗೆ ದನಿಗೂಡಿಸಿ, ವಾರಾಂತ್ಯದ ವೇಳೆಗೆ ಪರಿಸ್ಥಿತಿ ತಣ್ಣಗಾಗಲಿದೆ.
ವೃಷಭ:
ಪ್ರೀತಿಯ ಹೂವು ಅರಳುವ ಕಾಲವಿದು. ಸಂಗಾತಿಯೊಂದಿಗೆ ಐಷಾರಾಮಿ ಸಮಯ ಕಳೆಯುವಿರಿ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ದುಬಾರಿ ಉಡುಗೊರೆಗಿಂತ ನಿಮ್ಮ ‘ಸಮಯ’ ನೀಡಿದಲ್ಲಿ ಸಂಬಂಧ ಗಟ್ಟಿಯಾಗುವುದು.
ಮಿಥುನ:
ಈ ವಾರ ಸಂವಹನವೇ ನಿಮ್ಮ ಅಸ್ತ್ರ. ಮನಬಿಚ್ಚಿ ಮಾತನಾಡಿ. ಸಣ್ಣ ತಪ್ಪು ತಿಳುವಳಿಕೆಗಳು ಕಾಡಬಹುದು, ಆದರೆ ನಿಮ್ಮ ಚಾಕಚಕ್ಯತೆಯಿಂದ ಅದನ್ನು ಸರಿಪಡಿಸಿಕೊಳ್ಳುವಿರಿ.
ಕರ್ಕಾಟಕ:
ಭಾವನಾತ್ಮಕ ಬೆಂಬಲ ಸಿಗುವ ವಾರ. ನಿಮ್ಮ ಸಂಗಾತಿಯೇ ನಿಮಗೆ ಶಕ್ತಿಯಾಗಲಿದ್ದಾರೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಪ್ರೇಮಿಗಳ ದಿನವನ್ನು ಸಂಭ್ರಮಿಸುವಿರಿ.
ಸಿಂಹ:
ಸಂಬಂಧದಲ್ಲಿ ನಿಮ್ಮದೇ ಮೇಲುಗೈ ಇರಬೇಕೆಂಬ ಹಠ ಬೇಡ. ಸಂಗಾತಿಗೆ ಸ್ವಲ್ಪ ಸ್ವಾತಂತ್ರ್ಯ ನೀಡಿ. ಅವರ ಸಣ್ಣ ಸಾಧನೆಗಳನ್ನು ಹೊಗಳುವ ಮೂಲಕ ಅವರ ಮನಗೆಲ್ಲಬಹುದು.
ಕನ್ಯಾ:
ಪ್ರೇಮಕ್ಕಿಂತ ಪ್ರಾಯೋಗಿಕತೆಗೆ ಹೆಚ್ಚು ಒತ್ತು ನೀಡುವಿರಿ. ಪ್ರೀತಿಪಾತ್ರರಿಗೆ ನಿಮ್ಮ ಕೆಲಸದ ನಡುವೆಯೂ ಸ್ವಲ್ಪ ಸಮಯ ಮೀಸಲಿಡಿ. ವಾರಾಂತ್ಯದಲ್ಲಿ ಸಣ್ಣ ಪ್ರವಾಸದ ಯೋಗವಿದೆ.
ತುಲಾ:
ಪ್ರೇಮ ಲೋಕದಲ್ಲಿ ನೀವು ರಾಜ, ರಾಣಿಯರಂತೆ ಮನೋಹರವಾಗಿ ನಿಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ. ನಿಮ್ಮ ಆಕರ್ಷಣೆ ಹೆಚ್ಚಲಿದೆ.
ವೃಶ್ಚಿಕ:
ಸಂಬಂಧದಲ್ಲಿ ತೀವ್ರತೆ ಇರಲಿದೆ. ಅಸೂಯೆ ಮತ್ತು ಸಂಶಯಕ್ಕೆ ಜಾಗ ನೀಡಬೇಡಿ. ಸಂಗಾತಿಯನ್ನು ಪೂರ್ಣವಾಗಿ ನಂಬಿ, ಪ್ರೀತಿಯಲ್ಲಿ ಹೊಸ ಆಯಾಮವನ್ನು ಕಾಣುವಿರಿ.
ಧನು:
ಹೊಸ ಸಾಹಸಗಳಿಗೆ ಈ ವಾರ ಮುನ್ನುಡಿ. ಸಂಗಾತಿಯೊಂದಿಗೆ ದೂರಪ್ರಯಾಣ ಹೋಗುವಿರಿ. ಅವಿವಾಹಿತರಿಗೆ ಹಳೆಯ ಗೆಳೆಯ/ಗೆಳತಿಯಿಂದ ಪ್ರೇಮ ನಿವೇದನೆಯಾಗುವ ಸಾಧ್ಯತೆ ಇದೆ.
ಮಕರ:
ಗಂಭೀರ ಚರ್ಚೆಗಳಿಗೆ ಇದು ಸಮಯವಲ್ಲ. ಸಂಬಂಧದಲ್ಲಿ ಹಾಸ್ಯ ಮತ್ತು ಲವಲವಿಕೆ ಇರಲಿ. ಸಂಗಾತಿಯ ಇಷ್ಟ-ಕಷ್ಟಗಳಿಗೆ ಸ್ಪಂದಿಸಿದರೆ ವಾರ ಪೂರ್ತಿ ನೆಮ್ಮದಿ ಇರಲಿದೆ.
ಕುಂಭ:
ನೀವು ಈ ವಾರ ಅನಿರೀಕ್ಷಿತ ಪ್ರೇಮ ಪ್ರಸ್ತಾಪವನ್ನು ಎದುರಿಸಬಹುದು. ಸೃಜನಾತ್ಮಕವಾಗಿ ಪ್ರೀತಿಯನ್ನು ವ್ಯಕ್ತಪಡಿಸಿ. ಸಂಗಾತಿಯೊಂದಿಗೆ ಹಂಚಿಕೊಳ್ಳುವ ಪ್ರತಿ ಕ್ಷಣವೂ ನೆನಪಿನಲ್ಲಿ ಉಳಿಯಲಿದೆ.
ಮೀನ:
ಕನಸುಗಳ ಲೋಕದಲ್ಲಿ ತೇಲುವಿರಿ. ನಿಮ್ಮ ಭಾವನೆಗಳನ್ನು ಕವಿತೆ ಅಥವಾ ಪತ್ರದ ಮೂಲಕ ತಿಳಿಸಿ. ಸಂಗಾತಿಯ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು ಸಂಬಂಧವನ್ನು ಮತ್ತಷ್ಟು ಮಧುರವಾಗಿಸುತ್ತದೆ.
– ಲೋಹಿತ ಹೆಬ್ಬಾರ್
ದಿನಸಿ ಮಾರ್ಟ್ ಮುಂದೆ ರೌಡಿಸಂ: ಡೆಲಿವರಿ ಬಾಯ್ಸ್ಗೆ ಹೆಲ್ಮೆಟ್ನಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ ಕಿಡಿಗೇಡಿಗಳು! – Kannada News | Bengaluru Delivery Boy Assault: Miscreants Brutally Attack at Bagaluru Grocery Mart
ಬೆಂಗಳೂರು, ಫೆಬ್ರುವರಿ 07: ಸಿಲಿಕಾನ್ ಸಿಟಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸಕ್ಕೆ ಕಡಿವಾಣ ಇಲ್ಲದಂತಾಗಿದೆ. ಈಶಾನ್ಯ ವಿಭಾಗದ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಿಗೇನಹಳ್ಳಿ ಸಮೀಪದ ದಿನಸಿ ಡೆಲಿವರಿ ಮಾರ್ಟ್ ಬಳಿ ಡೆಲಿವರಿ ಬಾಯ್ಸ್ ಮೇಲೆ ಮನಬಂದಂತೆ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ದಿನಸಿ ಆರ್ಡರ್ ಪಡೆಯಲು ಬಂದಿದ್ದ ಸಿಬ್ಬಂದಿಯ ಮೇಲೆ ಐದಾರು ಮಂದಿ ಕಿಡಿಗೇಡಿಗಳು ಗುಂಪುಗುಂಪಾಗಿ ದಾಳಿ ನಡೆಸಿ, ಹೆಲ್ಮೆಟ್ ಹಾಗೂ ಕೈಗೆ ಸಿಕ್ಕ ವಸ್ತುಗಳಿಂದ ಥಳಿಸಿದ್ದಾರೆ. ಮಾರ್ಟ್ ಒಳಗಡೆ ನುಗ್ಗಿಯೂ ಹಲ್ಲೆ ನಡೆಸಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಈ ಘಟನೆಯಿಂದ ಬೆಚ್ಚಿಬಿದ್ದ ಡೆಲಿವರಿ ಬಾಯ್ಸ್, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
