Headlines

ಇಸ್ಲಾಮಾಬಾದ್‌ನಲ್ಲಿ ನಡೆದ ಬಾಂಬ್ ದಾಳಿಯ ವಿಡಿಯೋ ಇಲ್ಲಿದೆ – Kannada News | Intensity of the suicide bomb Blast in Islamabad Pakistan Watch Video

ಇಸ್ಲಾಮಾಬಾದ್, ಫೆಬ್ರವರಿ 6: ಪಾಕಿಸ್ತಾನದ (Pakistan Bomb Blast) ರಾಜಧಾನಿ ಇಸ್ಲಮಾಬಾದ್​​ನಲ್ಲಿರುವ ಶಿಯಾ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಆತ್ಮಾಹುತಿ ಬಾಂಬ್ ದಾಳಿಯ ತೀವ್ರತೆ ಎಷ್ಟರಮಟ್ಟಿಗೆ ಇತ್ತು ಎಂಬ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ  Source link

Read More

Viral News: ಗರ್ಭಿಣಿ ಪ್ರೇಯಸಿಯನ್ನು ಚಲಿಸುವ ಕಾರಿನಿಂದ ತಳ್ಳಿದ ಯುವಕ – Kannada News | Man throws pregnant lover out of moving car for refusing abortion

ನವದೆಹಲಿ, ಫೆಬ್ರವರಿ 6: ಉತ್ತರ ಪ್ರದೇಶದಲ್ಲಿ ಚಲಿಸುವ ಕಾರಿನಿಂದ ತನ್ನ ಪ್ರೇಯಸಿಯನ್ನು ತಳ್ಳಿರುವ ಯುವಕ ಇದೀಗ ಪೊಲೀಸರ ವಶದಲ್ಲಿದ್ದಾನೆ. ಗರ್ಭಪಾತ (Abortion) ಮಾಡಿಸಿಕೊಳ್ಳಲು ನಿರಾಕರಿಸಿದ್ದಕ್ಕಾಗಿ 19 ವರ್ಷದ ಯುವತಿಯನ್ನು ಆಕೆಯ ಪ್ರೇಮಿ ಹೆದ್ದಾರಿಯಲ್ಲಿ ಚಲಿಸುವ ಕಾರಿನಿಂದ ಹೊರಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತುರ್ಕಪಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಮಧುರಿಯಾ ಇಂಟರ್ ಕಾಲೇಜು ಬಳಿ ಇಂದು ಸಂಜೆ ಈ ಘಟನೆ ನಡೆದಿದೆ. ಕೊಲ್ಕತ್ತಾ ಮೂಲದ ಯುವತಿ ಅಮ್ಜದ್ ಅಲಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತ ಆಕೆಯೊಂದಿಗೆ ಜಗಳವಾಡಿ, ತನ್ನ…

Read More

ಥ್ರಿಲ್ಲರ್ ಮಂಜು, ಉಪೇಂದ್ರ ನಡುವಿನ 35 ವರ್ಷಗಳ ಸ್ನೇಹ ಎಂಥದ್ದು ನೋಡಿ – Kannada News | Upendra and Thriller Manju travel together for a function

ನಟ ಉಪೇಂದ್ರ ಹಾಗೂ ಫೈಟ್ ಮಾಸ್ಟರ್ ಥ್ರಿಲ್ಲರ್ ಮಂಜು ಅವರು ಒಟ್ಟಿಗೆ ಪ್ರಯಾಣ ಮಾಡಿದ್ದಾರೆ. ಎಲ್ಲಿಗೆ ಎಂಬುದನ್ನು ಥ್ರಿಲ್ಲರ್ ಮಂಜು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ಆತ್ಮೀಯ ಆಹ್ವಾನವನ್ನು ಸ್ವೀಕರಿಸಿ ಬಂದಿದ್ದಕ್ಕೆ ಉಪೇಂದ್ರ (Upendra) ಅವರಿಗೆ ಥ್ರಿಲ್ಲರ್ ಮಂಜು ಧನ್ಯವಾದ ತಿಳಿಸಿದ್ದಾರೆ. ‘ಒಂದು ಸಮಾರಂಭಕ್ಕೆ ಉಪ್ಪಿ ಸರ್ ನನ್ನ ಜೊತೆ ಬರುತ್ತಿದ್ದಾರೆ. ನನ್ನ ಸಂಬಂಧಿಯ ಮದುವೆಗೆ ಒಂದೇ ಮಾತು ಕರೆದಿದ್ದಕ್ಕೆ ಬಂದಿದ್ದಾರೆ. ಅವರ ಅಮೂಲ್ಯವಾದ ಸಮಯವನ್ನು ನೀಡಿದ್ದಾರೆ’ ಎಂದು ಥ್ರಿಲ್ಲರ್ ಮಂಜು (Thriller Manju) ಹೇಳಿದ್ದಾರೆ. ಅದಕ್ಕೆ…

Read More

ಮೆಟ್ರೋ ಟಿಕೆಟ್ ದರ ಏರಿಕೆ ಜಟಾಪಟಿ: ದಾಖಲೆ ಸಮೇತ ಸಿಎಂಗೆ ಟಾಂಗ್ ಕೊಟ್ಟ ತೇಜಸ್ವಿ ಸೂರ್ಯ – Kannada News | Bengaluru Metro Fare Hike: CM Blames Centre, Tejasvi Surya spark on State Over BMRCL Cost

ಬೆಂಗಳೂರು, ಫೆಬ್ರವರಿ 06: ಬೆಂಗಳೂರಿಗರಿಗೆ ಒಂದು ಕಾಲದಲ್ಲಿ ವರದಾನವಾಗಿದ್ದ ನಮ್ಮ ಮೆಟ್ರೋ (Namma Metro​) ಇಂದು ದೇಶದಲ್ಲಿ ಅತೀ ದುಬಾರಿ ಸಾರಿಗೆ ಆಗಿದೆ. ಒಂದು ಲೆಕ್ಕದಲ್ಲಿ ಆಟೋ ಪ್ರಯಾಣಿಕ್ಕಿಂತಲೂ ದುಬಾರಿ ಆಗಿದೆ. ಕಳೆದ ವರ್ಷವಷ್ಟೇ ಟಿಕೆಟ್ ದರ ಹೆಚ್ಚಿಸಿದ್ದ ಬಿಎಂಆರ್​​ಸಿಎಲ್ (BMRCL) ಇದೀಗ ಮತ್ತೆ ಟಿಕೆಟ್‌ ದರ ಹೆಚ್ಚಿಸಿದೆ. ಸದ್ಯ ಇದು ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಕೇಂದ್ರದ ಕಡೆ ಬೊಟ್ಟು ಮಾಡಿದ್ದಾರೆ. ಈ…

Read More

ಇದು ನನ್ನ ಜಾಗ; ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ – Kannada News | Wild elephant attempts to charge a vehicle on forest road in Dhenkanal

ಭುವನೇಶ್ವರ, ಫೆಬ್ರವರಿ 6: ಕಾಂಕ್ರೀಟ್ ಕಾಡು ಹೆಚ್ಚಾಗುತ್ತಿದ್ದಂತೆ ಅರಣ್ಯ ನಾಶವಾಗುತ್ತಿದೆ. ಇದರಿಂದ ವನ್ಯಜೀವಿಗಳು ಆಹಾರಕ್ಕಾಗಿ ಊರಿನೊಳಗೆ ಬರುವಂತಾಗಿದೆ. ಕಾಡಾನೆಯೊಂದು (Elephant) ಅರಣ್ಯದ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಬಳಿ ಹೋಗಿ ಆಕ್ರೋಶದಿಂದ ವರ್ತಿಸಿದೆ. ಒಡಿಶಾದ ಧೆಂಕನಲ್‌ನಲ್ಲಿ ಅರಣ್ಯದ ರಸ್ತೆಯಲ್ಲಿ ಕಾಡಾನೆಯೊಂದು ವಾಹನವನ್ನು ಎತ್ತಲು ಪ್ರಯತ್ನಿಸಿದೆ. ಈ ವೇಳೆ ಆಚೀಚೆ ರಸ್ತೆಗಳಲ್ಲಿ ಇದ್ದವರು ಜೋರಾಗಿ ಕಿರುಚಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆನೆ ಆ ಕಾರನ್ನು ಬಿಟ್ಟು ಜನರತ್ತ ಧಾವಿಸಿದೆ. ಅರಣ್ಯ ಕಾರಿಡಾರ್‌ಗಳ ಬಳಿ ಸಂಚಾರ ಹೆಚ್ಚುತ್ತಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ಯಾವ ಮಟ್ಟಿಗೆ…

Read More

U19 World Cup 2026: ಚಾಂಪಿಯನ್ ಭಾರತಕ್ಕೆ ಐಸಿಸಿಯಿಂದ ನಯಾಪೈಸೆ ಸಿಗಲಿಲ್ಲ – Kannada News | India U19 Champions 2026 BCCI Prize Money Expectation

ವರ್ಷಕ್ಕೊಂದು ಐಸಿಸಿ (ICC) ಟ್ರೋಫಿಯನ್ನು ಗೆಲ್ಲುವುದನ್ನು ಟೀಂ ಇಂಡಿಯಾ (Team India) ಅಭ್ಯಾಸ ಮಾಡಿಕೊಂಡಿದೆ. ಇದೀಗ 2026 ರ ಆರಂಭದಲ್ಲಿ ಭಾರತ ಯುವ ಪಡೆ 19 ವರ್ಷದೊಳಗಿನವರ ವಿಶ್ವಕಪ್ (U19 World Cup 2026) ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಫೈನಲ್‌ ಪಂದ್ಯವನ್ನು 100 ರನ್​ಗಳಿಂದ ಗೆದ್ದಿಕೊಳ್ಳುವ ಮೂಲಕ ಟೀಂ ಇಂಡಿಯಾ ಆರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಮೂಲಕ ಭಾರತ ತಂಡ ಅತಿ ಹೆಚ್ಚು ಬಾರಿ ವಿಶ್ವಕಪ್ ಗೆದ್ದ ತಂಡ…

Read More

T20 World Cup: ಟಿ20 ವಿಶ್ವಕಪ್​ನಿಂದ 7 ಸ್ಟಾರ್ ಆಟಗಾರರು ಔಟ್ – Kannada News | T20 World Cup 2026: Key Player Injuries Jolt Teams Before Tournament Start

2026 ರ ಟಿ20 ವಿಶ್ವಕಪ್ ಆರಂಭವಾಗುವುದಕ್ಕೂ ಮೊದಲೇ ಪ್ರಮುಖ ಆಟಗಾರರ ಗಾಯ ತಂಡಗಳ ತಲೆನೋವು ಹೆಚ್ಚಿಸಿದೆ. ಟೀಂ ಇಂಡಿಯಾ, ಆಸ್ಟ್ರೇಲಿಯಾ ಸೇರಿದಂತೆ ಪ್ರಮುಖ ತಂಡಗಳ ಸ್ಟಾರ್ ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದ ಅವರು ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ. ಏಕಾಂಗಿಯಾಗಿ ಪಂದ್ಯದ ದಿಕ್ಕನೇ ಬದಲಿಸುತ್ತಿದ್ದ ಆಟಗಾರರ ಅಲಭ್ಯತೆ ತಂಡಗಳಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ. Source link

Read More

ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಮೂಲ, ಹಿನ್ನೆಲೆ ಏನ್ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ – Kannada News | Lakkundi History: temple Found inside house, here Is Family Reaction

ಗದಗ, (ಫೆಬ್ರವರಿ 06) : ಐತಿಹಾಸಿಕ ಲಕ್ಕುಂಡಿಯಲ್ಲಿ (Lakkundi) ಚಿನ್ನದ ನಿಧಿ (Gold Treasure) ಪತ್ತೆಯಾಗಿ ದೊಡ್ಡ ಸುದ್ದಿಯಾಗಿತ್ತು. ಇದಾದ ಬಳಿಕ ಸರ್ಕಾರ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ (Excavation) ಶುರುಮಾಡಿದೆ. ಸುಮಾರು ಐದು ದಿನಗಳಿಂದ ಲಕ್ಕುಂಡಿ ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದೆ. ಈ ವೇಳೆ ಪುರಾತನ ವಸ್ತುಗಳು (Antiquities) ಪತ್ತೆಯಾಗಿವೆ. ಈ ಬೆನ್ನಲ್ಲೇ ಮತ್ತೊಂದು ಅಚ್ಚರಿ ತಿಳಿದುಬಂದಿದೆ. ಗ್ರಾಮದಲ್ಲಿರುವ ಮನೆಯೊಳಗೊಂದು ಐತಿಹಾಸಿಕ ದೇವಸ್ಥಾನ ಪತ್ತೆಯಾಗಿದ್ದು, ಹೊರಗೆ ನೋಡಿದ್ರೆ ಮನೆ ಒಳಗೆ…

Read More

ಒಡಿಶಾ ಸರ್ಕಾರದ ಬ್ಲ್ಯಾಕ್ ಸ್ವಾನ್ ಶೃಂಗಸಭೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ – Kannada News | President Droupadi Murmu graces Black Swan Summit by the Government of Odisha in Bhubaneswar

ಭುವನೇಶ್ವರ, ಫೆಬ್ರವರಿ 6: ಒಡಿಶಾ ಸರ್ಕಾರವು ಗ್ಲೋಬಲ್ ಫೈನಾನ್ಸ್ ಮತ್ತು ಟೆಕ್ನಾಲಜಿ ನೆಟ್‌ವರ್ಕ್ ಸಹಯೋಗದೊಂದಿಗೆ ಒಡಿಶಾ ಸರ್ಕಾರ ಆಯೋಜಿಸಿರುವ ಭಾರತದ ಬ್ಲ್ಯಾಕ್ ಸ್ವಾನ್ ಶೃಂಗಸಭೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಇಂದು (ಫೆಬ್ರವರಿ 6) ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ತಂತ್ರಜ್ಞಾನವು ಭಾರೀ ವೇಗದಲ್ಲಿ ವಿಕಸನಗೊಳ್ಳುತ್ತಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಹೇಳಿದರು. ಹೊಸ ಆವಿಷ್ಕಾರಗಳು ಎಷ್ಟು ವೇಗವಾಗಿ ಬರುತ್ತವೆ ಎಂದರೆ ನಮ್ಮ ವ್ಯವಸ್ಥೆಗಳು, ಕೌಶಲ್ಯಗಳು ಮತ್ತು ವ್ಯವಹಾರ ಮಾದರಿಗಳು…

Read More

17ನೇ ಬೆಂಗಳೂರು ಚಲನಚಿತ್ರೋತ್ಸವ ಮುಕ್ತಾಯ; ಹಂಸಲೇಖಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ – Kannada News | 17th Bangalore Film Festival concludes; Hamsalekha gets Lifetime Achievement Award

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (BIFFes) 17ನೇ ಆವೃತ್ತಿಗೆ ಶುಕ್ರವಾರ (ಫೆಬ್ರವರಿ 6) ರಾತ್ರಿ ನಗರದ ಲುಲು ಮಾಲ್‌ನಲ್ಲಿ ತೆರೆ ಬಿದ್ದಿದೆ. ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌’, ಮರಾಠಿಯ ‘ಸಬರ್‌ ಬೊಂಡಾ’ ಮತ್ತು ಕನ್ನಡದ ‘ವನ್ಯಾ’ ಸಿನಿಮಾಗಳು ಅನುಕ್ರಮವಾಗಿ ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ಸ್ಪರ್ಧಾ ವಿಭಾಗಗಳಲ್ಲಿ ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡವು. ಹಿರಿಯ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ…

Read More