Category Archives: Blog

Your blog category

ಚಂದ್ರಚೂಡ್ ವಿವಾದ: ಸುದೀಪ್ ಬಗ್ಗೆ ನಾನು ಮಾತನಾಡಿದ್ದರಲ್ಲಿ ತಪ್ಪೇ ಇಲ್ಲ ಎಂದ ಕೆ. ಮಂಜು – Kannada News | Producer K Manju talks about Chakravarthy Chandrachud and Kichcha Sudeep

ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ಅವರು ಸಿನಿಮಾ ನಿರ್ಮಾಪಕರ ಬಗ್ಗೆ ನೀಡಿದ ಹೇಳಿಕೆಯಿಂದ ವಿವಾದ ಶುರುವಾಗಿದ್ದು, ಅದಕ್ಕೆ ನಿರ್ಮಾಪಕ ಕೆ. ಮಂಜು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ಸುದೀಪ್ (Kichcha Sudeep) ಜೊತೆ ಚಂದ್ರಚೂಡ್ ಆಪ್ತವಾಗಿದ್ದಾರೆ. ಆ ಕುರಿತು ಕೂಡ ಕೆ. ಮಂಜು ಪ್ರತಿಕ್ರಿಯೆ ನೀಡಿದ್ದಾರೆ. ‘ಚಂದ್ರಚೂಡ್ ವೈಯಕ್ತಿಕ ವಿಷಯಗಳನ್ನು ನಾವು ಮಾತನಾಡಿಲ್ಲ. ಚಿತ್ರರಂಗದ ಬಗ್ಗೆ ಮಾತ್ರ ಮಾತನಾಡಿದ್ದೇವೆ. ಯಾವ ನಿರ್ಮಾಪಕರು ಕೂಡ ಮೋಸ ಮಾಡಿಲ್ಲ. ಚಿತ್ರರಂಗಕ್ಕೆ ನಿನ್ನ ಕೊಡುಗೆ ಏನಿದೆ? ಸುದೀಪ್ ಕೂಡ ನಿರ್ಮಾಪಕ ಅಲ್ವಾ? ನಿರ್ಮಾಪಕರ ಬಗ್ಗೆ ಚಂದ್ರಚೂಡ್ ಈ ರೀತಿ ಮಾತನಾಡಿದ್ದು ಸುದೀಪ್ ಅವರಿಗೆ ಗೊತ್ತಾದರೆ ಸುಮ್ಮನೆ ಇರುತ್ತಾರಾ? ಆ ಬಗ್ಗೆ ನಾನು ಮಾತನಾಡಿದ್ದರಲ್ಲಿ ತಪ್ಪು ಏನಿದೆ’ ಎಂದು ಕೆ. ಮಂಜು (K Manju) ಅವರು ಪ್ರಶ್ನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರೇಯಸಿ ಜೊತೆ ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ – Kannada News | 15 year old boy hangs from high tension wire demanding marriage to girlfriend

ಪ್ರತಾಪ್‌ಗಢ, ಫೆಬ್ರವರಿ 6: ಪ್ರತಾಪಗಢದಲ್ಲಿ 15 ವರ್ಷದ ಬಾಲಕನೊಬ್ಬ ತಾನು ಪ್ರೀತಿಸಿದ ಹುಡುಗಿಯ ಜೊತೆ ಮದುವೆ (Wedding) ಮಾಡಿಸುವುದಾದರೆ ಮಾತ್ರ ಕೆಳಗೆ ಇಳಿಯುತ್ತೇನೆ ಎಂದು ಹೈ-ವೋಲ್ಟೇಜ್ ವಿದ್ಯುತ್ ತಂತಿಯನ್ನು ಹಿಡಿದು ನೇತಾಡುತ್ತಿದ್ದ. ಒಲೀಸರು ಆತ ಇಷ್ಟಪಟ್ಟ ಹುಡುಗಿಯ ಜೊತೆ ಮದುವೆ ಮಾಡಿಸುವುದಾಗಿ ಮನವೊಲಿಸಿದ ನಂತರ ಆತ ಕೆಳಗೆ ಇಳಿಯಲು ಒಪ್ಪಿಕೊಂಡ.

ಕೊನೆಗೆ ಏಣಿಯನ್ನು ಹಾಕಿ ಅವನನ್ನು ಸುರಕ್ಷಿತವಾಗಿ ಕೆಳಗೆ ತರಲಾಯಿತು. 40 ನಿಮಿಷಗಳ ಕಾಲ ಆತ ವಿದ್ಯುತ್ ತಂತಿ ಹಿಡಿದು ನೇತಾಡುತ್ತಿದ್ದ. ಕೆಳಗೆ ಬಂದ ತಕ್ಷಣ ಆತ ಅಳಲು ಪ್ರಾರಂಭಿಸಿದನು. ಆತ 13 ವರ್ಷದ ಹುಡುಗಿಯನ್ನು ಪ್ರೀತಿಸುತ್ತಿದ್ದ. 1 ವರ್ಷದಿಂದ ಅವರಿಬ್ಬರೂ ಪ್ರೀತಿಸುತ್ತಿದ್ದರು. ಆಕೆಯ ಜೊತೆ ಮದುವೆ ಮಾಡಲು ಮನೆಯವರು ಒಪ್ಪಿರಲಿಲ್ಲ. ಹೀಗಾಗಿ, ಆತ ಈ ನಾಟಕವಾಡಿದ್ದ. ನಂತರ ಪೊಲೀಸರು ಹುಡುಗನನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಅವನಿಗೆ ಸಲಹೆ ನೀಡಿ ಅವನ ಕುಟುಂಬಕ್ಕೆ ಒಪ್ಪಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಟ್‌ಫ್ಲಿಕ್ಸ್‌ನ ‘ಘೂಸ್‌ಖೋರ್ ಪಂಡತ್’ ವಿವಾದ: ಟೀಸರ್ ಡಿಲೀಟ್ ಮಾಡಿದ ಚಿತ್ರತಂಡ – Kannada News | Ghooskhor Pandat Controversy Netflix deletes teaser after backlash

ಬಾಲಿವುಡ್ ನಟ ಮನೋಜ್ ಬಾಜಪೇಯಿ ಅಭಿನಯದ ‘ಘೂಸ್‌ಖೋರ್ ಪಂಡತ್’ (Ghooskhor Pandat) ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದ ಸೃಷ್ಟಿ ಮಾಡಿದೆ. ತೀವ್ರ ವಿರೋಧ ಹಾಗೂ ಕಾನೂನು ಸಂಘರ್ಷದ ಬೆನ್ನಲ್ಲೇ ಇಂಟರ್ನೆಟ್‌ನಿಂದ ಈ ಸಿನಿಮಾದ ಟೀಸರ್ ಹಾಗೂ ಎಲ್ಲ ಪ್ರಚಾರದ ಕಂಟೆಂಟ್​​ಗಳನ್ನು ತೆಗೆದು ಹಾಕಲು ನೆಟ್‌ಫ್ಲಿಕ್ಸ್ ಹಾಗೂ ಚಿತ್ರತಂಡ ನಿರ್ಧರಿಸಿದೆ. ಕೇಂದ್ರ ಸರ್ಕಾರವು ನೆಟ್‌ಫ್ಲಿಕ್ಸ್ (Netflix) ಸಂಸ್ಥೆಗೆ ಚಿತ್ರದ ಟೀಸರ್ ತೆಗೆದುಹಾಕುವಂತೆ ಸೂಚನೆ ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಧಾರ್ಮಿಕ ಮತ್ತು ಜಾತಿ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ‘ಘೂಸ್‌ಖೋರ್ ಪಂಡತ್’ ಚಿತ್ರದ ಶೀರ್ಷಿಕೆ ಮತ್ತು ಕಥಾವಸ್ತು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೂ ಮುನ್ನ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಿತ್ರತಂಡದ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಅಲ್ಲದೆ, ಚಿತ್ರದ ಬಿಡುಗಡೆಗೆ ತಡೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನೂ ಸಲ್ಲಿಸಲಾಗಿತ್ತು.

ನಿರ್ದೇಶಕ ನೀರಜ್ ಪಾಂಡೆ ಸ್ಪಷ್ಟನೆ: ಹೆಚ್ಚುತ್ತಿರುವ ಆಕ್ರೋಶವನ್ನು ಗಮನಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ನಿರ್ದೇಶಕ ನೀರಜ್ ಪಾಂಡೆ, ‘ನಮ್ಮ ಚಿತ್ರವು ಒಂದು ಕಾಲ್ಪನಿಕ ಪೊಲೀಸ್ ಡ್ರಾಮಾ ಆಗಿದೆ. ‘ಪಂಡತ್’ ಎಂಬ ಪದವನ್ನು ಕೇವಲ ಒಂದು ಕಾಲ್ಪನಿಕ ಪಾತ್ರದ ಆಡುಭಾಷೆಯ ಹೆಸರಾಗಿ ಬಳಸಲಾಗಿದೆ. ಆದರೆ, ಈ ಶೀರ್ಷಿಕೆಯಿಂದ ಕೆಲವು ವೀಕ್ಷಕರ ಭಾವನೆಗಳಿಗೆ ನೋವಾಗಿದೆ ಎಂಬುದು ನಮಗೆ ಅರ್ಥವಾಗಿದೆ’ ಎಂದು ತಿಳಿಸಿದ್ದಾರೆ.

ಮನೋಜ್ ಬಾಜಪೇಯಿ ಪ್ರತಿಕ್ರಿಯೆ: ಈ ಸಿನಿಮಾದಲ್ಲಿ ‘ಪಂಡತ್’ ಎಂಬ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿರುವ ನಟ ಮನೋಜ್ ಬಾಜಪೇಯಿ, ‘ಯಾವುದೇ ಸಮುದಾಯಕ್ಕೆ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಇದೊಂದು ದೋಷಪೂರಿತ ವ್ಯಕ್ತಿಯ ಆತ್ಮಸಾಕ್ಷಿಯ ಪಯಣದ ಕಥೆಯಾಗಿದೆ. ಜನರ ಭಾವನೆಗಳು ಮತ್ತು ಕಳಕಳಿಗಳನ್ನು ನಾನು ಗೌರವಿಸುತ್ತೇನೆ’ ಎಂದು ಎಕ್ಸ್ (ಟ್ವಿಟರ್) ಖಾತೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಬ್ರಾಹ್ಮಣ ಸಮುದಾಯಕ್ಕೆ ಅವಮಾನ? ಮನೋಜ್ ಸಿನಿಮಾ ವಿರುದ್ಧ ಆಕ್ರೋಶ

ಚಿತ್ರದ ಶೀರ್ಷಿಕೆಯಲ್ಲಿ ಪಂಡತ್ (ಪಂಡಿತ್) ಎಂಬ ಹೆಸರು ಬಳಕೆ ಆಗಿರುವುದರಿಂದ ಬ್ರಾಹ್ಮಣ ಸಮುದಾಯಕ್ಕೆ ನೋವುಂಟಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಕಾರಣದಿಂದಲೇ ಇಷ್ಟೆಲ್ಲ ವಿವಾದ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

T20 World Cup: 20 ತಂಡಗಳು, 55 ಪಂದ್ಯಗಳು, 1 ಟ್ರೋಫಿ; ಟಿ20 ವಿಶ್ವಕಪ್ ವೇಳಾಪಟ್ಟಿ ಹೀಗಿದೆ – Kannada News | T20 World Cup 2026: Full Schedule, Groups, Venues and India’s Fixtures

10ನೇ ಆವೃತ್ತಿಯ ಟಿ20 ವಿಶ್ವಕಪ್ ನಾಳೆಯಿಂದ ಅಂದರೆ ಫೆಬ್ರವರಿ 7 ರ ಶನಿವಾರದಿಂದ ಪ್ರಾರಂಭವಾಗಲಿದೆ. ಈ ಬಾರಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಈ ಮೆಗಾ ಟೂರ್ನಮೆಂಟ್‌ನಲ್ಲಿ ಒಟ್ಟು 20 ತಂಡಗಳು ಸ್ಪರ್ಧಿಸಲಿವೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿರುವ ಭಾರತ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಮೆರಿಕ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದರೆ ಅದಕ್ಕೂ ಮುನ್ನ ಟಿ20 ವಿಶ್ವಕಪ್​ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

20 ತಂಡಗಳ 4 ಗುಂಪು

ಗುಂಪು ಎ: ಭಾರತ, ಪಾಕಿಸ್ತಾನ, ಅಮೆರಿಕ, ನೆದರ್‌ಲ್ಯಾಂಡ್ಸ್, ನಮೀಬಿಯಾ.

ಗುಂಪು ಬಿ: ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ, ಐರ್ಲೆಂಡ್, ಓಮನ್.

ಗುಂಪು ಸಿ: ವೆಸ್ಟ್ ಇಂಡೀಸ್, ಇಂಗ್ಲೆಂಡ್, ಇಟಲಿ, ನೇಪಾಳ, ಸ್ಕಾಟ್ಲೆಂಡ್.

ಗುಂಪು ಡಿ: ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಕೆನಡಾ, ಯುಎಇ.

ಆತಿಥ್ಯದ ಸ್ಥಳಗಳು

ಭಾರತ

  • ಈಡನ್ ಗಾರ್ಡನ್ಸ್- ಕೋಲ್ಕತ್ತಾ
  • ವಾಂಖೆಡೆ ಸ್ಟೇಡಿಯಂ- ಮುಂಬೈ
  • ಎಂಎ ಚಿದಂಬರಂ ಸ್ಟೇಡಿಯಂ- ಚೆನ್ನೈ
  • ನರೇಂದ್ರ ಮೋದಿ ಕ್ರೀಡಾಂಗಣ- ಅಹಮದಾಬಾದ್‌
  • ಅರುಣ್ ಜೇಟ್ಲಿ ಕ್ರೀಡಾಂಗಣ- ದೆಹಲಿ

ಶ್ರೀಲಂಕಾ

  • ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್- ಕೊಲಂಬೊ
  • ಆರ್.ಪ್ರೇಮದಾಸ ಕ್ರೀಡಾಂಗಣ- ಕೊಲಂಬೊ
  • ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ- ಪಲ್ಲೆಕೆಲೆ

ಟಿ20 ವಿಶ್ವಕಪ್ ಗುಂಪು ಹಂತದ ಸಂಪೂರ್ಣ ಪಟ್ಟಿ

* ಫೆಬ್ರವರಿ 7 (ಶನಿವಾರ)

ಪಾಕಿಸ್ತಾನ vs ನೆದರ್ಲ್ಯಾಂಡ್ಸ್ — ಕೊಲಂಬೊ — ಬೆಳಿಗ್ಗೆ 11:00

ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ – ಕೋಲ್ಕತ್ತಾ – ಮಧ್ಯಾಹ್ನ 3:00

ಭಾರತ vs ಅಮೆರಿಕ – ಮುಂಬೈ – ಸಂಜೆ 7:00

* ಫೆಬ್ರವರಿ 8 (ಭಾನುವಾರ)

ನ್ಯೂಜಿಲೆಂಡ್ vs ಅಫ್ಘಾನಿಸ್ತಾನ – ಚೆನ್ನೈ – ಬೆಳಿಗ್ಗೆ 11:00

ಇಂಗ್ಲೆಂಡ್ vs ನೇಪಾಳ – ಮುಂಬೈ – ಮಧ್ಯಾಹ್ನ 3:00

ಶ್ರೀಲಂಕಾ vs ಐರ್ಲೆಂಡ್ – ಕೊಲಂಬೊ- ಸಂಜೆ 7:00

* ಫೆಬ್ರವರಿ 9 (ಸೋಮವಾರ)

ಸ್ಕಾಟ್ಲೆಂಡ್ vs ಇಟಲಿ — ಕೋಲ್ಕತ್ತಾ — ಬೆಳಿಗ್ಗೆ 11:00

ಜಿಂಬಾಬ್ವೆ vs ಓಮನ್ – ಕೊಲಂಬೊ – ಮಧ್ಯಾಹ್ನ 3:00

ದಕ್ಷಿಣ ಆಫ್ರಿಕಾ vs ಕೆನಡಾ – ಅಹಮದಾಬಾದ್ – ಸಂಜೆ 7:00

* ಫೆಬ್ರವರಿ 10 (ಮಂಗಳವಾರ)

ನೆದರ್ಲ್ಯಾಂಡ್ಸ್ vs ನಮೀಬಿಯಾ — ದೆಹಲಿ — ಬೆಳಿಗ್ಗೆ 11:00

ನ್ಯೂಜಿಲೆಂಡ್ vs ಯುಎಇ – ಚೆನ್ನೈ – ಮಧ್ಯಾಹ್ನ 3:00

ಪಾಕಿಸ್ತಾನ vs ಅಮೆರಿಕ — ಕೊಲಂಬೊ— ಸಂಜೆ 7:00

* ಫೆಬ್ರವರಿ 11 (ಬುಧವಾರ)

ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ – ಅಹಮದಾಬಾದ್ – ಬೆಳಿಗ್ಗೆ 11:00

ಆಸ್ಟ್ರೇಲಿಯಾ vs ಐರ್ಲೆಂಡ್ – ಕೊಲಂಬೊ – ಮಧ್ಯಾಹ್ನ 3:00

ಇಂಗ್ಲೆಂಡ್ vs ವೆಸ್ಟ್ ಇಂಡೀಸ್ – ಮುಂಬೈ – ಸಂಜೆ 7:00 ಗಂಟೆಗೆ

* ಫೆಬ್ರವರಿ 12 (ಗುರುವಾರ)

ಶ್ರೀಲಂಕಾ vs ಓಮನ್ — ಕ್ಯಾಂಡಿ — ಬೆಳಿಗ್ಗೆ 11:00

ನೇಪಾಳ vs ಇಟಲಿ — ಮುಂಬೈ — ಮಧ್ಯಾಹ್ನ 3:00

ಭಾರತ vs ನಮೀಬಿಯಾ — ದೆಹಲಿ — ಸಂಜೆ 7:00

* ಫೆಬ್ರವರಿ 13 (ಶುಕ್ರವಾರ)

ಆಸ್ಟ್ರೇಲಿಯಾ vs ಜಿಂಬಾಬ್ವೆ — ಕೊಲಂಬೊ— ಬೆಳಿಗ್ಗೆ 11:00

ಕೆನಡಾ vs ಯುಎಇ — ದೆಹಲಿ — ಮಧ್ಯಾಹ್ನ 3:00

ಅಮೆರಿಕ vs ನೆದರ್ಲ್ಯಾಂಡ್ಸ್ — ಚೆನ್ನೈ — ಸಂಜೆ 7:00

* ಫೆಬ್ರವರಿ 14 (ಶನಿವಾರ)

ಐರ್ಲೆಂಡ್ vs ಓಮನ್ — ಕೊಲಂಬೊ — ಬೆಳಿಗ್ಗೆ 11:00

ಇಂಗ್ಲೆಂಡ್ vs ಸ್ಕಾಟ್ಲೆಂಡ್ – ಕೋಲ್ಕತ್ತಾ – ಮಧ್ಯಾಹ್ನ 3:00

ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ – ಅಹಮದಾಬಾದ್ – ಸಂಜೆ 7:00

* ಫೆಬ್ರವರಿ 15 (ಭಾನುವಾರ)

ವೆಸ್ಟ್ ಇಂಡೀಸ್ vs ನೇಪಾಳ – ಮುಂಬೈ – ಬೆಳಿಗ್ಗೆ 11:00

ಅಮೆರಿಕ vs ನಮೀಬಿಯಾ — ಚೆನ್ನೈ — 3:00 PM

ಭಾರತ vs ಪಾಕಿಸ್ತಾನ – ಕೊಲಂಬೊ- ಸಂಜೆ 7:00

* ಫೆಬ್ರವರಿ 16 (ಸೋಮವಾರ)

ಅಫ್ಘಾನಿಸ್ತಾನ vs ಯುಎಇ — ದೆಹಲಿ — ಬೆಳಿಗ್ಗೆ 11:00

ಇಂಗ್ಲೆಂಡ್ vs ಇಟಲಿ – ಕೋಲ್ಕತ್ತಾ – ಮಧ್ಯಾಹ್ನ 3:00

ಆಸ್ಟ್ರೇಲಿಯಾ vs ಶ್ರೀಲಂಕಾ – ಕ್ಯಾಂಡಿ – ಸಂಜೆ 7:00

* ಫೆಬ್ರವರಿ 17 (ಮಂಗಳವಾರ)

ನ್ಯೂಜಿಲೆಂಡ್ vs ಕೆನಡಾ – ಚೆನ್ನೈ – ಬೆಳಿಗ್ಗೆ 11:00

ಐರ್ಲೆಂಡ್ vs ಜಿಂಬಾಬ್ವೆ – ಕ್ಯಾಂಡಿ – ಮಧ್ಯಾಹ್ನ 3:00

ಸ್ಕಾಟ್ಲೆಂಡ್ vs ನೇಪಾಳ – ಮುಂಬೈ – ಸಂಜೆ 7:00 ಗಂಟೆಗೆ.

* ಫೆಬ್ರವರಿ 18 (ಬುಧವಾರ)

ದಕ್ಷಿಣ ಆಫ್ರಿಕಾ vs ಯುಎಇ — ದೆಹಲಿ — ಬೆಳಿಗ್ಗೆ 11:00

ಪಾಕಿಸ್ತಾನ vs ನಮೀಬಿಯಾ – ಕೊಲಂಬೊ – ಮಧ್ಯಾಹ್ನ 3:00

ಭಾರತ vs ನೆದರ್ಲ್ಯಾಂಡ್ಸ್ – ಅಹಮದಾಬಾದ್ – ಸಂಜೆ 7:00

* ಫೆಬ್ರವರಿ 19 (ಗುರುವಾರ)

ವೆಸ್ಟ್ ಇಂಡೀಸ್ vs ಇಟಲಿ — ಕೋಲ್ಕತ್ತಾ — ಬೆಳಿಗ್ಗೆ 11:00

ಶ್ರೀಲಂಕಾ vs ಜಿಂಬಾಬ್ವೆ – ಕೊಲಂಬೊ – ಮಧ್ಯಾಹ್ನ 3:00

ಅಫ್ಘಾನಿಸ್ತಾನ vs ಕೆನಡಾ — ಚೆನ್ನೈ — ಸಂಜೆ 7:00

* ಫೆಬ್ರವರಿ 20 (ಶುಕ್ರವಾರ)

ಆಸ್ಟ್ರೇಲಿಯಾ vs ಓಮನ್ – ಕ್ಯಾಂಡಿ – ಸಂಜೆ 7:00

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಟ್ರೊ ಟಿಕೆಟ್ ದರ ಏರಿಕೆ ಬಗ್ಗೆ ಕೊನೆಗೂ ಮೌನಮುರಿದ ಸಿದ್ದರಾಮಯ್ಯ ಹೇಳಿದ್ದಿಷ್ಟು – Kannada News | Bengaluru Metro Fare Hike: CM Siddaramaiah Assures Talks With Central Government

ಸಿಎಂ ಸಿದ್ದರಾಮಯ್ಯ, ಮೆಟ್ರೋ Image Credit source: tv9 kannada

ಬೆಂಗಳೂರು, ಫೆಬ್ರವರಿ 06: ಬೆಂಗಳೂರಿಗರ ಜೀವನಾಡಿ ಮೆಟ್ರೋ (Metro) ಪ್ರಯಾಣ ದರ ಫೆಬ್ರವರಿ 9ರಿಂದ ಶೇಕಡಾ 5ರಷ್ಟು ಏರಿಕೆ ಆಗಲಿದೆ. ಜನರ ವಿರೋಧದ ನಡುವೆ ಟಿಕೆಟ್​​ ದರ ಹೆಚ್ಚಿಸಲಾಗಿದ್ದು, BMRCL ವಿರುದ್ಧ ಆಕ್ರೋಶದ ಕಟ್ಟೆಯೊಡಿದಿದೆ. ಸಾಮಾಜಿಕ ಜಾಲತಾಣದಲ್ಲಿ ಮೆಟ್ರೋ ಬಾಯ್ಕಾಟ್ ಕ್ಯಾಂಪೇನ್ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ ಈ ವಿಚಾರ ರಾಜ್ಯ ಸರ್ಕಾರ ಮತ್ತು ಬಿಜೆಪಿ ಮಧ್ಯೆ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದೆಲ್ಲದರ ಮಧ್ಯೆ ಕೇಂದ್ರ ಸರ್ಕಾರದ ಜೊತೆ ಚರ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಮೆಟ್ರೋ ಟಿಕೆಟ್​​​ ದರ ಏರಿಕೆ ಬಗ್ಗೆ ಕೇಂದ್ರದ ಜತೆ ಚರ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ. ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಚಿಸಿರುವ ಸ್ವತಂತ್ರ ದರ ನಿಗದಿ ಕಮಿಟಿ ನಿರ್ಧರಿಸುತ್ತದೆ. ದರ ನಿಗದಿ ಸಮಿತಿ ನಿಗದಿತ ಅವಧಿಯೊಳಗೆ ಶಿಫಾರಸು ಸಲ್ಲಿಸಬೇಕು. ಸೆಕ್ಷನ್ 37ರ ಅಡಿಯಲ್ಲಿ ಈ ಶಿಫಾರಸುಗಳನ್ನ ಮೆಟ್ರೋ ಆಡಳಿತ ಶಿಫಾರಸು ಒಪ್ಪಿ ಜಾರಿ ಮಾಡಬೇಕಿದೆ ರಾಜ್ಯ ಸರ್ಕಾರಕ್ಕೆ ಅಥವಾ ಬಿಎಂಆರ್​ಸಿಎಲ್​ಗೆ ಅಧಿಕಾರವಿಲ್ಲ. ಶಿಫಾರಸು ರದ್ದುಗೊಳಿಸುವ, ಉಲ್ಲಂಘಿಸುವ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್​​

ಈ ದರ ನಿಗದಿ ಕಮಿಟಿಯನ್ನು ಕೇಂದ್ರ ಸರ್ಕಾರ ರಚಿಸುತ್ತದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವ ವಹಿಸಿರುತ್ತಾರೆ. ಕೇಂದ್ರದ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತೆ. ಸಂಸತ್ತಿನಲ್ಲಿ ತಾವೇ ಈ ಶಿಫಾರಸುಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಮಾಡಿ ಈಗ ನಮ್ಮ ಸರ್ಕಾರದ ಮೇಲೆ ಬೆಲೆ ಏರಿಕೆ ನಿರ್ಧಾರದ ಆರೋಪ ಹೊರಿಸುವುದು ಅಪ್ರಾಮಾಣಿಕ ನಡೆ ಮಾತ್ರವಲ್ಲ, ಜನರನ್ನು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ. ದರ ಪರಿಷ್ಕರಣೆಯ ಹೊಣೆಯನ್ನು ನಮ್ಮ ಸರ್ಕಾರದ ತಲೆಗೆ ಕಟ್ಟುವುದು ದುಷ್ಟತನ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ, ತೇಜಸ್ವಿ ಸೂರ್ಯ ಸವಾಲ್

ಕಾನೂನು ದರ ಪರಿಷ್ಕರಣೆಯ ಎಲ್ಲಾ ಪ್ರಕ್ರಿಯೆಗಳನ್ನು ನಿಗದಿಪಡಿಸುತ್ತದೆಯಾದರೂ, ಜನಹಿತದ ವಿಚಾರದಲ್ಲಿ ನಮ್ಮ ಬದ್ಧತೆಯೂ ಕಾನೂನಿನ ಗಡಿಗಳನ್ನು ಮೀರಿದೆ. ನಾವು ನಿಮ್ಮೊಂದಿಗೆ ದೃಢವಾಗಿ ಇರುತ್ತೇವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಲ್ಲರಿಗೂ ಲಭ್ಯವಾಗುವಂತೆ ಕೈಗೆಟುಕುವ ದರದಲ್ಲಿರಬೇಕು. ದೈನಂದಿನ ಬದುಕಿಗೆ ಬಲ ತುಂಬುವಂತಿರಬೇಕು. ಬೆಂಗಳೂರಿನ ಬೆಳವಣಿಗೆಯೂ ಪ್ರಯಾಣಿಕರಿಗೆ ಹೊರೆಯಾಗಬಾರದು. ನಾನು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಿದ್ದೇನೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿರಿಯಾನಿ ಕೊಟ್ಟು ಸಿನಿಮಾ ತೋರಿಸುತ್ತಿದ್ದಾರೆ: ನಿರ್ಮಾಪಕರ ಟೀಕಿಸಿದ ಕೆ ಮಂಜು – Kannada News | K Manju talks about wrong practices of some movie producers

ಸಿನಿಮಾ (Ciema) ಮಂದಿರಗಳಿಗೆ ಪ್ರೇಕ್ಷಕರನ್ನು ಕರೆದುಕೊಂಡು ಬರುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರೇಕ್ಷಕರನ್ನು ಸಿನಿಮಾ ಮಂದಿರಕ್ಕೆ ಕರೆದುಕೊಂಡು ಬರಲು ಕೆಲ ನಿರ್ಮಾಪಕರು ಅಡ್ಡ ದಾರಿ ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಕೆ ಮಂಜು, ‘ಸಾಲ ಮಾಡಿ ಸಿನಿಮಾ ನಿರ್ಮಿಸಿ, ಟಿಕೆಟ್ ಹಣ ಕೊಟ್ಟು, ಬಿರಿಯಾನಿ ಹಾಕಿಸಿ ಸಿನಿಮಾವನ್ನು ಜನರಿಗೆ ತೋರಿಸುತ್ತಿರುವ ನಿರ್ಮಾಪಕರು ಇದ್ದಾರೆ. ದಯವಿಟ್ಟು ಹೀಗೆಲ್ಲ ಮಾಡಬೇಡಿ, ಇದು ಬಹಳ ತಪ್ಪು’ ಎಂದು ಕೆ ಮಂಜು ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

T20 World Cup: ಆಲ್‌ರೌಂಡರ್ ಬದಲು ಟೀಂ ಇಂಡಿಯಾಕ್ಕೆ ಅನುಭವಿ ವೇಗಿಯ ಆಗಮನ

Source link

ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ, ತೇಜಸ್ವಿ ಸೂರ್ಯ ಸವಾಲ್ – Kannada News | Bengaluru South BJP Tejasvi Surya talks On Bengaluru namma Metro Ticket Price Hike

ಶಿವಮೊಗ್ಗ, (ಫೆಬ್ರವರಿ 06): ಬೆಂಗಳೂರು ನಮ್ಮ ಮೆಟ್ರೊ (Bengaluru Namma Metro)  ಪ್ರಯಾಣ ದರ ಏರಿಕೆಯ ಬೆನ್ನಲ್ಲೇ ಬಿಎಂಆರ್‌ಸಿಎಲ್‌ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯನವರ ಸರ್ಕಾರವೇ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದೆ ಎಂದು ಬಿಜೆಪಿ(BJP) ನಾಯಕರು ಆರೋಪಿಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕರು, ಎಲ್ಲಾ ಏರಿಕೆ ಮಾಡುವುದು ಕೇಂದ್ರ ಸರ್ಕಾರದ ಎಂದು ತಿರುಗೇಟು ನೀಡುತ್ತಿದ್ದಾರೆ. ಹೀಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದ್ದು, ಇದರ ಮಧ್ಯೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಹ ರಾಜ್ಯ ಸರ್ಕಾರದ ವಿರುದ್ಧವೇ ಆರೋಪಿಸಿದ್ದಾರೆ. ಇನ್ನು ಒಂದು ವೇಳೆ ಕೇಂದ್ರ ಸರ್ಕಾರವೇ ಮೆಟ್ರೋ ಟಿಕೆಟ್ ದರ ಏರಿಸಿದ್ದೇ ಆದ್ರೆ 24 ಗಂಟೆಯೊಳಗೆ ಕಡಿಮೆ ಮಾಡಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಭರವಸೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮುಂದಿನ 25 ವರ್ಷಕ್ಕೆ ಭಾರತದ ಬೆಳವಣಿಗೆಗೆ ಬುನಾದಿ ಹಾಕಿದೆ ಈ ಬಜೆಟ್: ಸಚಿವ ಪ್ರಲ್ಹಾದ್ ಜೋಶಿ – Kannada News | Union Budget 2026 27 reflects India’s continued economic progress, says Pralhad Joshi

ಹೈದರಾಬಾದ್, ಫೆಬ್ರುವರಿ 6: ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ (2026-27) ಮುಂದಿನ 25 ವರ್ಷಕ್ಕೆ ದೇಶದ ಬೆಳವಣಿಗೆಗೆ ಬುನಾದಿ ಹಾಕುವ ಕೆಲಸ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅಭಿಪ್ರಾಯಪಟ್ಟಿದ್ದಾರೆ. ನಾಂಪಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಜೋಶಿ, 2047ರ ವಿಕಸಿತ ಭಾರತದ ಆಶಯ ಈಡೇರಿಸಲು ಬಜೆಟ್ ಕೆಲಸ ಮಾಡುತ್ತದೆ ಎಂದಿದ್ದಾರೆ.

‘2013ರಲ್ಲಿ ವಿಶ್ವದ ಐದು ಶಿಥಿಲ ಆರ್ಥಿಕತೆಗಳಲ್ಲಿ ಭಾರತವೂ ಒಂದೆನಿಸಿತ್ತು. ಅಭಿವೃದ್ಧಿಶೀಲ ಮಾರುಕಟ್ಟೆಗಳು ತಮ್ಮ ಬೆಳವಣಿಗೆಗೆ ವಿದೇಶೀ ಬಂಡವಾಳದ ಮೇಲೆ ಅವಲಂಬಿತವಾಗಿದ್ದವು. ಆ ಪರಿಸ್ಥಿತಿಯಿಂದ ಈಗ 2047ಕ್ಕೆ ವಿಕಸಿತ ಭಾರತದ ಆಶಯದತ್ತ ಸಾಗುತ್ತಿದ್ದೇವೆ’ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

‘ವಿಶ್ವ ಶ್ರೇಣಿಯಲ್ಲಿ ಬದಲಾವಣೆ ಆಗುತ್ತದೆ. ಭಾರತವು ಈ ಬದಲಾವಣೆಯಲ್ಲಿ ಮುಂಚೂಣಿಯಲ್ಲಿರುತ್ತದೆ. ನಾವು ನಾಲ್ಕನೇ ಅತಿದೊಡ್ಡ ಹಾಗೂ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿದ್ದೇವೆ. ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್​ದೇವೆ’ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೃಷಿ ಕ್ಷೇತ್ರಕ್ಕೆ ತೊಂದರೆ ಇಲ್ಲ, ರೈತರು ಸೇಫ್; ಭಾರತ-ಅಮೆರಿಕ ಟ್ರೇಡ್ ಡೀಲ್​ನಲ್ಲಿ ಏನೇನಿದೆ?

ಎಐ ಕ್ಷೇತ್ರದ ಮಹತ್ವವನು ಒತ್ತಿ ಹೇಳಿದ ಗ್ರಾಹಕ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ, ಎಐ ಕ್ರಾಂತಿಯನ್ನು ವಿದ್ಯುತ್ ಮತ್ತು ಇಂಟರ್ನೆಟ್ ಕ್ರಾಂತಿಗೆ ಹೋಲಿಕೆ ಮಾಡಿದ್ದಾರೆ. ಹಾಗೆಯೇ, ತಮ್ಮ ಸರ್ಕಾರವು ಎಐ ಮಿಷನ್​ಗೆ ನೀಡಿರುವ ಮಹತ್ವವನ್ನೂ ಎತ್ತಿ ತೋರಿಸಿದ್ದಾರೆ.

ಕ್ರಿಟಿಕಲ್ ಮಿನರಲ್ ಅಥವಾ ಮುಖ್ಯ ಖನಿಜಗಳು ಸೆಮಿಕಂಡಕ್ಟರ್, ಎಐ, ನವೀಕರಣ ಇಂಧನ, ಹಸಿರು ಇಂಧನದಂತಹ ಪ್ರಮುಖ ಸೆಕ್ಟರ್​ಗಳಿಗೆ ಬಹಳ ಮಹತ್ವದ್ದಾಗಿದ್ದು, ಸರ್ಕಾರ ಕ್ರಿಟಿಕಲ್ ಮಿನರಲ್ಸ್ ಮಿಷನ್ ಜಾರಿಗೆ ತಂದಿದೆ ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.

‘ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ, ಲಾಜಿಸ್ಟಿಕ್ಸ್ ಕ್ಷಮತೆ, ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್, ಎಐ, ನವೀಕರಣ ಇಂಧನ, ತಂತ್ರಜ್ಞಾನ ಪ್ರಭಾವಿತ ಬೆಳವಣಿಗೆಗೆ ಒತ್ತು ಕೊಡುತ್ತಾ ಭಾರತವು ಆರ್ಥಿಕ ಪ್ರಗತಿ ಸಾಧಿಸುತ್ತಿರುವುದನ್ನು ಈ ಬಾರಿಯ ಬಜೆಟ್​ನಲ್ಲಿ ಕಾಣಬಹುದು. ರಾಜ್ಯಗಳಿಗೆ ಸಾಕಷ್ಟು ಫಂಡಿಂಗ್ ಕೊಡಲಾಗಿದ್ದು, ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಲು ರಾಜ್ಯಗಳನ್ನು ಶಕ್ತಗೊಳಿಸಲಾಗಿದೆ’ ಎಂದು ಹೊಸ ಮತ್ತು ನವೀಕರಣ ಇಂಧನ ಸಚಿವರಾದ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ವಾಣಿಜ್ಯಾತ್ಮಕವಾಗಿ ಲಾಭವಿದ್ದರೆ ವೆನೆಜುವೆಲಾದಿಂದಲೂ ತೈಲ ಪಡೆಯುತ್ತೇವೆ: ಭಾರತ ಸರ್ಕಾರದ ಹೇಳಿಕೆ

ಪ್ರಲ್ಹಾದ್ ಜೋಶಿ ಅವರು ನಾಂಪಲ್ಲಿಯಲ್ಲಿ ಉದ್ಯಮ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಜೋಶಿ, 2047ರ ವಿಕಸಿತ ಭಾರತದ ದೂರಗಾಮಿ ಗುರಿಯ ಮುಂದುವರಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಲ್ಹಾದ್ ಜೋಶಿ ಅವರ ಎಕ್ಸ್ ಪೋಸ್ಟ್​ಗಳು

ಸರಳ ವಿಧಾನಗಳು, ಕಾನೂನು, ನೀತಿ ಸುಧಾರಣೆಗಳ ವ್ಯಾಪಾರ ವಾತಾವರಣ ಸುಲಭಗೊಳಿಸಲಾಗಿದೆ. ವ್ಯಾಪಾರಿಗಳು, ಎಂಎಸ್​ಎಂಇಗಳು, ಉದ್ಯಮಗಳಿಗೆ ಶಕ್ತಿ ತುಂಬಲಾಗಿದೆ ಎಂದು ಪ್ರಲ್ಹಾದ್ ಜೋಶಿ ವಿಶ್ಲೇಷಿಸಿದ್ದಾರೆ.

ಪ್ರಲ್ಹಾದ್ ಜೋಷಿ ಮಾತನಾಡಿರುವ ವಿಡಿಯೋ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಮ್ಮದೇ ಹಳೆ ಕಲ್ಟ್ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಲಿದ್ದಾರೆ ಶಾರುಖ್ ಖಾನ್ – Kannada News | Shah Rukh Khan’s next movie project is Main Hu Na with Farah Khan

ಶಾರುಖ್ ಖಾನ್ (Shah Rukh Khan) ಪ್ರಸ್ತುತ ‘ಕಿಂಗ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಸಿನಿಮಾಗಳ ಮೂಲಕ ಸತತ ಮೂರು ಬ್ಲಾಕ್ ಬಸ್ಟರ್ ನೀಡಿದ ಶಾರುಖ್ ಖಾನ್ ಇದೀಗ ‘ಕಿಂಗ್’ ಸಿನಿಮಾ ಮೂಲಕ ಅದೇ ಮ್ಯಾಜಿಕ್ ಅನ್ನು ಪುನರಾವರ್ತನೆ ಮಾಡುವ ಭರವಸೆಯಲ್ಲಿದ್ದಾರೆ. ಸಿನಿಮಾದ ಸಣ್ಣ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸಿದೆ. ಇದೀಗ ‘ಕಿಂಗ್’ ಬಳಿಕ ಶಾರುಖ್ ಖಾನ್ ನಟಿಸಲಿರುವ ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿದ್ದು, ತಮ್ಮದೇ ಕಲ್ಟ್ ಕ್ಲಾಸಿಕ್ ಸಿನಿಮಾದ ಸೀಕ್ವೆಲ್​ನಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

2004ರ ಬ್ಲಾಕ್‌ಬಸ್ಟರ್ ಸಿನಿಮಾ ‘ಮೈ ಹೂ ನಾ’ ಶಾರುಖ್ ವೃತ್ತಿ ಜೀವನದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದು. ಆ ಸಿನಿಮಾ ಕಲ್ಟ್ ಎನಿಸಿಕೊಂಡಿದೆ. ಆ ಸಿನಿಮಾದ ಹಾಸ್ಯ, ಪಾತ್ರಗಳ ಸ್ಟೈಲ್, ಹಾಡುಗಳಂತೂ ಇಂದಿಗೂ ಜನಪ್ರಿಯ. ಶಾರುಖ್ ಖಾನ್ ಅವರ ಆಪ್ತ ಗೆಳತಿ ಫರಾಹ್ ಖಾನ್ ನಿರ್ದೇಶಿಸಿದ್ದ ‘ಮೈ ಹೂ ನಾ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಮ್ಯಾಜಿಕ್ಕನ್ನೇ ಮಾಡಿತ್ತು. ಇದೀಗ ಶಾರುಖ್ ಖಾನ್ ‘ಮೈ ಹೂ ನ 2’ ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಕೇಳಿ ಬರುತ್ತಿವೆ.

ಈಗ ಹರಿದಾಡುತ್ತಿರುವ ವರದಿಗಳ ಪ್ರಕಾರ, ಫರಾಹ್ ಖಾನ್ ‘ಮೈ ಹೂ ನಾ 2’ ಸಿನಿಮಾಕ್ಕಾಗಿ ಕಥೆಯನ್ನು ಸಿದ್ಧಪಡಿಸಿದ್ದಾರೆ. ವಿಶೇಷವೆಂದರೆ ಈ ಬಾರಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. 2004ರ ‘ಮೈ ಹೂ ನಾ’ ಅಣ್ಣ-ತಮ್ಮನ ಕತೆ ಆಗಿತ್ತು. ಆದರೆ ಈ ಬಾರಿಯ ಸಿನಿಮಾನಲ್ಲಿ ಶಾರುಖ್ ಖಾನ್ ಅವರೇ ಎರಡು ಪಾತ್ರಗಳಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಎರಡು ವಿಭಿನ್ನ ಶೇಡ್‌ಗಳಿರುವ ಪಾತ್ರಗಳನ್ನು ಫರಾಹ್ ಖಾನ್ ಸೃಷ್ಟಿಸಿದ್ದು, ಈಗಾಗಲೇ ಕಿಂಗ್ ಖಾನ್‌ಗೆ ಈ ಐಡಿಯಾವನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಶಾರುಖ್ ಕೂಡ ಈ ಹೊಸ ಪ್ರಯೋಗಕ್ಕೆ ಅತೀವ ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತದೆ. ಆಕಾಶ್ ಕೌಶಿಕ್ ಅವರು ಸಿನಿಮಾದ ಚಿತ್ರಕತೆ ರಚಿಸುತ್ತಿದ್ದಾರೆ.

ಇದನ್ನೂ ಓದಿ:ಶಾರುಖ್ ಖಾನ್ ಮಗಳ ವರ್ಕೌಟ್ ವಿಡಿಯೋ ವೈರಲ್

2004ರ ‘ಮೈ ಹೂ ನಾ’ ಸಿನಿಮಾದ ರೀತಿಯೇ ಸೀಕ್ವೆಲ್ ಸಹ ದೇಶಭಕ್ತಿಯ ಹಿನ್ನೆಲೆಯನ್ನೇ ಹೊಂದಿರುತ್ತದೆ. ಭಾರತಕ್ಕೆ ಎದುರಾಗುವ ಹೊಸ ಸವಾಲು ಮತ್ತು ಅದನ್ನು ಎದುರಿಸುವ ಮೇಜರ್ ರಾಮ್ ಪ್ರಸಾದ್ ಶರ್ಮಾ ಅವರ ಸಾಹಸಗಾಥೆ ಸಿನಿಮಾದಲ್ಲಿ ಇರಲಿದೆ. ಆದರೆ ಈ ಬಾರಿ ಸಾಹಸದ ಜೊತೆಗೆ ಹಾಸ್ಯ ಮತ್ತು ಭಾವನಾತ್ಮಕ ಸನ್ನಿವೇಶಗಳು ಇಮ್ಮಡಿಯಾಗಿರಲಿವೆ. ಜೊತೆಗೆ ಹಾಡುಗಳು ಸಹ ಸಖತ್ ಆಗಿಯೇ ಇರಲಿವೆ ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಶಾರುಖ್ ಖಾನ್ ಸದ್ಯ ತಮ್ಮ ’ಕಿಂಗ್’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಕೆಲಸಗಳು 2026ರ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಆನಂತರವೇ ಅವರು ‘ಮೈ ಹೂ ನಾ 2’ ಚಿತ್ರದ ಸಂಪೂರ್ಣ ಸ್ಕ್ರಿಪ್ಟ್ ಕೇಳಲಿದ್ದಾರೆ. ಸ್ಕ್ರಿಪ್ಟ್ ಅಂತಿಮಗೊಂಡ ಬಳಿಕವೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link