Category Archives: Blog

Your blog category

ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿತ್ಯ ತಿನ್ನಿ ಈ ಗಿಡದ ಎಲೆ – Kannada News

ಗಿಡಮೂಲಿಕೆಗಳ ರಾಣಿ ಎಂದೇ ಕರೆಯಲ್ಪಡುವ ತುಳಸಿ (Tulsi) ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಸಸ್ಯಕ್ಕೆ ಪೂಜ್ಯನೀಯ ಸ್ಥಾನವನ್ನು ನೀಡಲಾಗಿರುವುದರಿಂದ ಮನೆಗಳಲ್ಲಿ ಈ ಪವಿತ್ರ ಗಿಡವನ್ನು ನೆಟ್ಟು ಪೂಜಿಸಲಾಗುತ್ತದೆ. ಧಾರ್ಮಿಕ ಮಹತ್ವವನ್ನು ಪಡೆದಿರುವ ತುಳಸಿ ಹಲವಾರು ಔಷಧೀಯ ಗುಣಗಳನ್ನು ಸಹ ಹೊಂದಿದೆ. ತುಳಸಿ ಎಲೆಯಲ್ಲಿ ವಿಟಮಿನ್‌ ಎ, ಸಿ, ಕೆ ಮತ್ತು ಕ್ಯಾಲ್ಸಿಯಂ, ಮೆಗ್ನೇಸಿಯಂ, ರಂಜಕ, ಕಬ್ಬಿಣದಂತಹ ಹಲವಾರು ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳಿದ್ದು, ಪ್ರತಿನಿತ್ಯ ತುಳಸಿ ಎಲೆಯನ್ನು ಸೇವನೆ ಮಾಡುವುದರಿಂದ ಸಾಕಷ್ಟು ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಿದ್ದರೆ ತುಳಸಿ ಎಲೆಯ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಅನ್ನೋದನ್ನು ನೋಡೋಣ ಬನ್ನಿ.

ತುಳಸಿ ಎಲೆಯ ಸೇವನೆಯಿಂದ ಲಭಿಸುವ  ಪ್ರಯೋಜನಗಳೇನು?

ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ: ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ತುಳಸಿ ಎಲೆಗಳು ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ದೇಹವನ್ನು ಒಳಗಿನಿಂದ ಶುದ್ಧೀಕರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹವು ಸೋಂಕುಗಳ ವಿರುದ್ಧ ಹೋರಾಡಲು ಶಕ್ತಿಯನ್ನು ನೀಡುತ್ತದೆ. ಇದರ ಜೊತೆಗೆ, ಇದು ಶೀತ, ಕೆಮ್ಮು, ಗಂಟಲು ನೋವು ಮತ್ತು ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಒತ್ತಡವನ್ನು ನಿವಾರಿಸುತ್ತದೆ: ತುಳಸಿ ಎಲೆಗಳು ಅಡಾಪ್ಟೋಜೆನಿಕ್ ಗುಣಗಳನ್ನು ಹೊಂದಿದ್ದು, ಇದು ದೇಹದಲ್ಲಿನ ಒತ್ತಡದ ಹಾರ್ಮೋನ್ ‘ಕಾರ್ಟಿಸೋಲ್’ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ, ಮನಸ್ಸಿನ ಶಾಂತಿಯನ್ನು ಹೆಚ್ಚಿಸುತ್ತವೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಅಗಿಯುವುದರಿಂದ ದೇಹದಲ್ಲಿನ ಒತ್ತಡದ ಮಟ್ಟ ಕಡಿಮೆಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ. ಇದಲ್ಲದೆ ತುಳಸಿ ಚಹಾವನ್ನು ಕೂಡ ಸೇವಿಸಬಹುದು. ತುಳಸಿಯು ಆತಂಕ, ಚಿಂತೆ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಂದ ರಕ್ಷಿಸುತ್ತದೆ ,ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ತುಳಸಿ ಎಲೆಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಎಲೆಗಳು ನೈಸರ್ಗಿಕ ಉರಿಯೂತ ನಿವಾರಕ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣಗಳನ್ನು ಹೊಂದಿವೆ, ಇದು ಗ್ಯಾಸ್, ಅಜೀರ್ಣ, ಹೊಟ್ಟೆ ನೋವು ಮತ್ತು ಮಲಬದ್ಧತೆಯಂತಹ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳು ಕರುಳಿನಲ್ಲಿರುವ ಬ್ಯಾಕ್ಟೀರಿಯಾವನ್ನು ಸಮತೋಲನಗೊಳಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸಾಮಾನ್ಯವಾಗಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದರಿಂದ ಹೊಟ್ಟೆ ತಂಪಾಗುತ್ತದೆ. ತುಳಸಿ ಎಲೆಯ ನಿಯಮಿತ ಸೇವನೆಯು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ತುಳಸಿ ಎಲೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರುತ್ತದೆ. ಈ ಎಲೆಗಳು ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ತುಳಸಿ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹದ ಅಪಾಯ ಕಡಿಮೆಯಾಗುತ್ತದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ತುಳಸಿ ಎಲೆಗಳು ಹೃದಯಕ್ಕೂ ತುಂಬಾ ಪ್ರಯೋಜನಕಾರಿ. ತುಳಸಿ ಎಲೆಗಳು ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತನಾಳಗಳನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೆ ತುಳಸಿ ಎಲೆಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:  ಉತ್ತಮ ನಿದ್ರೆ ಪಡೆಯಲು ಬಯಸಿದರೆ ಬೆಡ್‌ರೂಮ್‌ನಲ್ಲಿ ಗಿಡಗಳನ್ನಿಡಿ

ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ: ತುಳಸಿ ಗಿಡ ಇರುವ ಸ್ಥಳವು ಶಾಂತಿ ಮತ್ತು ಸಕಾರಾತ್ಮಕ ಕಂಪನಗಳಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ತುಳಸಿ ಗಿಡದ ಬಳಿ ದೀಪ ಹಚ್ಚುವುದರಿಂದ ಮನಸ್ಸಿಗೆ ಒಂದು ರೀತಿಯ ಶಾಂತಿ ಲಭಿಸುತ್ತದೆ, ಸಕಾರಾತ್ಮಕ ಶಕ್ತಿಯೂ ಹೆಚ್ಚುತ್ತದೆ.

ಗಾಳಿಯನ್ನು ಶುದ್ಧೀಕರಿಸುತ್ತದೆ: ತುಳಸಿ ದಿನದ 24 ಗಂಟೆಗಳ ಕಾಲ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಮತ್ತು ಗಾಳಿಯಲ್ಲಿರುವ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುತ್ತದೆ, ಗಾಳಿಯನ್ನು ಶುದ್ಧೀಕರಿಸುತ್ತದೆ. ಅಲ್ಲದೆ ಈ ಗಿಡದ ಪರಿಮಳವು ಸೊಳ್ಳೆಗಳು ಮತ್ತು ಕೀಟಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ.

ತುಳಸಿ ಎಲೆಗಳನ್ನು ಯಾವಾಗ ತಿನ್ನಬೇಕು?

  • ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ.
  • ನೀವು ತುಳಸಿ ಎಲೆಯ ಚಹಾ ಅಥವಾ ರಸವನ್ನು ಸಹ ಕುಡಿಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಗಿಣಿ ದ್ವಿವೇದಿ, ವರಲಕ್ಷ್ಮೀ ನಟನೆಯ ‘ಪೊಲೀಸ್ ಕಂಪ್ಲೈಂಟ್’ ಜೂನ್ 12ಕ್ಕೆ ಬಿಡುಗಡೆ – Kannada News

ಮಹಿಳಾ ಪ್ರಧಾನ ಕಥಾಹಂದರ ಇರುವ ಸಿನಿಮಾಗಳಿಗೆ ಅದರದ್ದೇ ಆದ ಪ್ರೇಕ್ಷಕರ ವರ್ಗವಿದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಅಂಥ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಈಗ ರಾಗಿಣಿ ದ್ವಿವೇದಿ (Ragini Dwivedi) ಮತ್ತು ವರಲಕ್ಷ್ಮೀ ಶರತ್ ಕುಮಾರ್ ಅಭಿನಯಿಸಿರುವ ಮಹಿಳಾ ಪ್ರಧಾನ ಸಿನಿಮಾ ‘ಪೊಲೀಸ್ ಕಂಪ್ಲೈಂಟ್’ ಬಿಡುಗಡೆಗೆ ಸಜ್ಜಾಗಿದೆ. ಜೂನ್ 12ರಂದು ಈ ಚಿತ್ರ ರಿಲೀಸ್ ಆಗಲಿದೆ. ನವೀನ್ ಚಂದ್ರ, ಕೃಷ್ಣ ಸಾಯಿ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ರವಿಶಂಕರ್, ಶರತ್ ಲೋಹಿತಾಶ್ವ, ಅನಿಲ್ ರಾಜ್, ಸಪ್ತಗಿರಿ, ಪೃಥ್ವಿರಾಜ್, ಜೆಮಿನಿ ಸುರೇಶ್ ಮುಂತಾದವರು ‘ಪೊಲೀಸ್ ಕಂಪ್ಲೈಂಟ್’ (Police Complaint) ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಸಂಜೀವ ಮೆಗೋಟಿ ಅವರು ‘ಪೊಲೀಸ್ ಕಂಪ್ಲೈಂಟ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ಪೂಜಾ ಗಾಂಧಿ ನಟನೆಯ ‘ಅನು’, ‘ದಂಡು’, ‘ಆಪ್ತ’, ‘ಆದಿ ಪರ್ವ’ ಮುಂತಾದ ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದರು. ‘ಎಂ.ಎಸ್.ಕೆ. ಪ್ರಮೀದಾಶ್ರೀ ಫಿಲ್ಮ್ಸ್’ ಮೂಲಕ ‘ಪೊಲೀಸ್ ಕಂಪ್ಲೈಂಟ್’ ಸಿನಿಮಾ ನಿರ್ಮಾಣ ಆಗಿದೆ. ತೆಲುಗಿನಲ್ಲಿ ಹಲವು ಸಿನಿಮಾ ಮಾಡಿರುವ ನಟ ಕೃಷ್ಣಸಾಯಿ ಅವರಿಗೆ ಕನ್ನಡದಲ್ಲಿ ನಾಯಕ ನಟನಾಗಿ ಇದು ಮೊದಲ ಸಿನಿಮಾ.

‘ಪೊಲೀಸ್ ಕಂಪ್ಲೈಂಟ್’ ಸಿನಿಮಾದ ಬಗ್ಗೆ ನಿರ್ದೇಶಕ ಸಂಜೀವ ಮೆಗೋಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಸುಮಾರು 10 ವರ್ಷದ ನಂತರ ಕನ್ನಡದಲ್ಲಿ ಸಿನಿಮಾ ನಿರ್ದೇಶಿಸಿ ಪ್ರೇಕ್ಷಕರ ಮುಂದೆ ತರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದೊಂದು ಆ್ಯಕ್ಷನ್, ಹಾರರ್-ಥ್ರಿಲ್ಲರ್ ಕಥಾಹಂದರ ಇರುವ ಸಿನಿಮಾ. ನಾವು ಮಾಡಿದ ಕರ್ಮ ಹೇಗೆ ನಮ್ಮನ್ನು ಕಾಡುತ್ತದೆ ಎಂಬ ಒಂದು ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಕನ್ನಡ ಮತ್ತು ತೆಲುಗಿನ ಸುಮಾರು 50ಕ್ಕೂ ಹೆಚ್ಚಿನ ಕಲಾವಿದರು ಈ ಸಿನಿಮಾದ ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ’ ಎಂದು ಅವರು ಹೇಳಿದರು.

ನಟಿ ವರಲಕ್ಷ್ಮೀ ಶರತ್ ಕುಮಾರ್ ಅವರು ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಅವರು, ‘ಇದು ಹೊಸ ತಲೆಮಾರಿನ ಪ್ರೇಕ್ಷಕರಿಗೆ ಬಹುಬೇಗ ಕನೆಕ್ಟ್ ಆಗುವ ಸಿನಿಮಾ. ಇದರಲ್ಲಿ ಮನಮುಟ್ಟುವ ಕಥೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ಕೂಡ ಇದೆ. ಆ್ಯಕ್ಷನ್, ಥ್ರಿಲ್ಲರ್, ಸಸ್ಪೆನ್ಸ್ ಹೀಗೆ ಎಲ್ಲ ರೀತಿಯ ಮನರಂಜನೆ ಇದೆ’ ಎಂದಿದ್ದಾರೆ.

ಇದನ್ನೂ ಓದಿ: ರಾಗಿಣಿ ದ್ವಿವೇದಿ ಹೊಸ ಸಿನಿಮಾಗೆ ಜಗ್ಗೇಶ್ ಮಕ್ಕಳ ನಿರ್ದೇಶನ; ಕೆ. ಮಂಜು ನಿರ್ಮಾಣ

ನಟಿ ರಾಗಿಣಿ ದ್ವಿವೇದಿ ಕೂಡ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ‘ನನ್ನ ವೃತ್ತಿಜೀವನದಲ್ಲಿ ಪೊಲೀಸ್ ಕಂಪ್ಲೈಂಟ್ ಒಂದು ವಿಭಿನ್ನ ಸಿನಿಮಾ. ಇದರಲ್ಲಿ ತಾಯಿ ಹಾಗೂ ಮಗುವಿನ ಸಂಬಂಧದ ಸುತ್ತ ನನ್ನ ಪಾತ್ರ ಸಾಗುತ್ತದೆ. ಆ್ಯಕ್ಷನ್, ಹಾರರ್ ಜೊತೆಗೆ ಎಮೋಶನ್ಸ್ ಸಹ ಸಿನಿಮಾದಲ್ಲಿದೆ. ಎಲ್ಲಾ ರೀತಿಯ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗಲಿದೆ’ ಎಂದು ರಾಗಿಣಿ ದ್ವಿವೇದಿ ಅವರು ಹೇಳಿದರು. ಆರೋಹಣ ಸುಧೀಂದ್ರ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಹರೀಶ್ ಸೊಂಡೇಕೊಪ್ಪ ಅವರು ಛಾಯಾಗ್ರಹಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ODI World Cup 2027: ಈ ದಿನದಿಂದ ಆರಂಭವಾಗಲಿದೆ 2027 ರ ಏಕದಿನ ವಿಶ್ವಕಪ್‌; ವೇಳಾಪಟ್ಟಿ ಬಹಿರಂಗ – Kannada News

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಈಗಾಗಲೇ ಎಲ್ಲಾ ತಂಡಗಳು ತಮ್ಮ ತಯಾರಿಯನ್ನು ಶುರು ಮಾಡಿವೆ. ಅದರ ಭಾಗವಾಗಿ ಕಳೆದ ಬಾರಿಯ ರನ್ನರ್ ಅಪ್ ಟೀಂ ಇಂಡಿಯಾ ಕೂಡ ವಿವಿಧ ತಂಡಗಳ ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿದೆ. ಮುಂಬರುವ ಏಕದಿನ ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯವಹಿಸುತ್ತಿವೆ ಎಂಬ ಸುದ್ದಿ ಈ ಹಿಂದೆಯೇ ಖಚಿತವಾಗಿತ್ತು. ಇದೀಗ ಈ ಮೆಗಾ ಟೂರ್ನಿ ಯಾವಾಗ ಆರಂಭವಾಗಿ ಎಲ್ಲಿಯವರೆಗೆ ನಡೆಯಲಿದೆ ಎಂಬುದರ ಬಗ್ಗೆ ಮಾಹಿತಿ ಹೊರಬಿದ್ದಿದೆ.

ESPNcricinfo ವರದಿಯ ಪ್ರಕಾರ, ಏಕದಿನ ವಿಶ್ವಕಪ್ ಅಕ್ಟೋಬರ್ 4, 2027 ರಂದು ಪ್ರಾರಂಭವಾಗಲಿದ್ದು, ನವೆಂಬರ್ 21, 2027 ರವರೆಗೆ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 54 ಪಂದ್ಯಗಳು ನಡೆಯಲಿದ್ದು, ಈ ವಿಶ್ವ ಸಮರ ಸುಮಾರು ಒಂದೂವರೆ ತಿಂಗಳುಗಳ ಕಾಲ ನಡೆಯಲಿದೆ. ಈ ಟೂರ್ನಿಯಲ್ಲಿ ವಿಶ್ವದ ಅಗ್ರ 14 ತಂಡಗಳು ಟ್ರೋಫಿ ಗೆಲುವಿಗಾಗಿ ಪರಸ್ಪರ ಸೆಣಸಾಡಲಿವೆ. ಮೇ ತಿಂಗಳಲ್ಲಿ ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ವಿಶ್ವಕಪ್‌ ವೇಳಾಪಟ್ಟಿಯ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ. ಆದರೆ ಜುಲೈನಲ್ಲಿ ಎಡಿನ್‌ಬರ್ಗ್‌ನಲ್ಲಿ ನಡೆಯುವ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವರದಿಯಾಗಿದೆ.

2027 ರ ಏಕದಿನ ವಿಶ್ವಕಪ್ ವೇಳಾಪಟ್ಟಿ

2027 ರ ವಿಶ್ವಕಪ್ ಹಿಂದಿನ ಆವೃತ್ತಿಯಾದ 2023 ರ ಆವೃತ್ತಿಗಿಂತ ಗಮನಾರ್ಹವಾಗಿ ಭಿನ್ನವಾಗಿರುತ್ತದೆ. ಅಂದರೆ 2003 ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಮಾದರಿಯಲ್ಲಿ ಈ ಬಾರಿಯ ವಿಶ್ವಕಪ್ ನಡೆಸಲು ತೀರ್ಮಾನಿಸಲಾಗಿದೆ. ಆ ಪ್ರಕಾರ, ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ 14 ತಂಡಗಳನ್ನು ತಲಾ ಏಳು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ನಂತರ ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಸುತ್ತಿಗೆ ಮುನ್ನಡೆಯುತ್ತವೆ. ನಂತರ ಸೂಪರ್ ಸಿಕ್ಸ್‌ನ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಿವೆ. ಈ ಸುತ್ತಿನಲ್ಲಿ ಗೆದ್ದ ಎರಡು ತಂಡಗಳು ನವೆಂಬರ್ 21 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.

ಯಾವ ದೇಶದಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ?

ಮೇಲೆ ಹೇಳಿದಂತೆ ಈ ಪಂದ್ಯಾವಳಿಯು ಮೂರು ದೇಶಗಳಲ್ಲಿ ನಡೆಯಲಿದ್ದು, ದಕ್ಷಿಣ ಆಫ್ರಿಕಾ ಪ್ರಮುಖ ಆತಿಥೇಯವಾಗಿದೆ. ವರದಿಗಳ ಪ್ರಕಾರ, ದಕ್ಷಿಣ ಆಫ್ರಿಕಾದ ಎಂಟು ಕ್ರೀಡಾಂಗಣಗಳು ಪಂದ್ಯಾವಳಿಯ ಹೆಚ್ಚಿನ ಪಂದ್ಯಗಳು ಮತ್ತು ನಾಕೌಟ್ ಟೈಗಳನ್ನು ಆಯೋಜಿಸುತ್ತವೆ. ಇವುಗಳಲ್ಲಿ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣ, ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣ ಮತ್ತು ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರೀಡಾಂಗಣ ಸೇರಿವೆ. ಜಿಂಬಾಬ್ವೆಯ ಎರಡು ನಗರಗಳಾದ ಹರಾರೆ ಮತ್ತು ಬುಲವಾಯೊದಲ್ಲಿ ಪಂದ್ಯಗಳು ನಡೆಯಲಿವರ. ನಮೀಬಿಯಾದ ಎರಡು ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.

ಯಾವ 14 ತಂಡಗಳಿಗೆ ಅವಕಾಶ ಸಿಗುತ್ತದೆ?

ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ 2027 ರ ಏಕದಿನ ವಿಶ್ವಕಪ್‌ಗೆ ನೇರ ಪ್ರವೇಶ ಪಡೆದಿವೆ. ಇದರ ಜೊತೆಗೆ, ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಎಂಟು ತಂಡಗಳು ಸಹ ನೇರವಾಗಿ ಅರ್ಹತೆ ಪಡೆಯುತ್ತವೆ. ಆತಿಥೇಯ ನಮೀಬಿಯಾ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅರ್ಹತಾ ಸುತ್ತನ್ನು ಆಡಬೇಕಾಗುತ್ತದೆ. ಉಳಿದ ಮೂರರಿಂದ ನಾಲ್ಕು ಸ್ಥಾನಗಳಿಗೆ ಅರ್ಹತಾ ಪಂದ್ಯಾವಳಿಯಲ್ಲಿ ಗೆದ್ದ ತಂಡಗಳು ಆಯ್ಕೆಯಾಗಲಿವೆ.

Source link

ಅಡ್ಡ ಬಂದ ನಾಗರ ಹಾವು: ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್ – Kannada News

ಚಿಕ್ಕಮಗಳೂರು, ಜೂ.11: ರಸ್ತೆಗೆ ಏಕಾಏಕಿ ಅಡ್ಡ ಬಂದ ನಾಗರ ಹಾವನ್ನು ತಪ್ಪಿಸಲು ಹೋದ ಬೈಕ್ ಸವಾರನ ಎಡವಟ್ಟಿನಿಂದಾಗಿ, ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸರಣಿ ಅಪಘಾತ ನಡೆದಿರುವ ವಿಲಕ್ಷಣ ಘಟನೆ ಚಿಕ್ಕಮಗಳೂರಿನ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಅಪಘಾತದ ರಭಸಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ನುಗ್ಗಿದ್ದು, ಅದೃಷ್ಟವಶಾತ್ ಭಾರಿ ಪ್ರಾಣಾಪಾಯವೊಂದು ಕೂದಲೆಳೆತದಲ್ಲಿ ತಪ್ಪಿದೆ. ಬೈಕ್ ಸವಾರರಿಬ್ಬರು ನಾರಾಯಣಪುರ ಗೇಟ್ ರಸ್ತೆಯಲ್ಲಿ ಚಲಿಸುತ್ತಿದ್ದಾಗ ಬೃಹತ್ ಗಾತ್ರದ ನಾಗರ ಹಾವೊಂದು ಏಕಾಏಕಿ ರಸ್ತೆಗೆ ಅಡ್ಡ ಬಂದಿದೆ. ಹಾವನ್ನು ಕಂಡು ಆತಂಕಗೊಂಡ ಬೈಕ್ ಚಾಲಕ ತಕ್ಷಣವೇ ರಸ್ತೆ ಮಧ್ಯದಲ್ಲೇ ಜೋರಾಗಿ ಬ್ರೇಕ್ ಹಾಕಿದ್ದಾನೆ. ಈ ವೇಳೆ ಅದೇ ಮಾರ್ಗದಲ್ಲಿ ಬೈಕ್‌ನ ಹಿಂಬದಿಯಲ್ಲೇ ಬರುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ ಚಾಲಕನಿಗೆ ತಕ್ಷಣವೇ ಬ್ರೇಕ್ ಹಾಕಲು ಸಾಧ್ಯವಾಗದೆ ಮುಂದಿದ್ದ ಬೈಕ್‌ಗೆ ಜೋರಾಗಿ ಗುದ್ದಿದೆ. ಬೈಕ್‌ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್ ಚಾಲಕ ವಾಹನವನ್ನು ನಿಯಂತ್ರಿಸಲು ಒತ್ತಡದಲ್ಲಿ ಬ್ರೇಕ್ ಹಾಕಿದ್ದಾನೆ. ಆದರೆ, ವೇಗವಾಗಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ರಸ್ತೆ ಬದಿಯಲ್ಲಿದ್ದ ತೋಟದ ಬೇಲಿಯನ್ನು ಮುರಿದುಕೊಂಡು ಒಳಗಡೆ ನುಗ್ಗಿದೆ. ಅಪಘಾತದ ಸಮಯದಲ್ಲಿ ಬಸ್‌ನಲ್ಲಿ ಹಲವಾರು ಪ್ರಯಾಣಿಕರಿದ್ದರೂ, ಚಾಲಕನ ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ ತೋಟಕ್ಕೆ ನುಗ್ಗುತ್ತಿದ್ದಂತೆ ಒಳಗಿದ್ದ ಪ್ರಯಾಣಿಕರು ಆತಂಕದಿಂದ ಕಿರುಚಾಡಿದ್ದಾರೆ. ಈ ಭೀಕರ ಅಪಘಾತದಲ್ಲಿ ಬೈಕಿನಲ್ಲಿದ್ದ ಇಬ್ಬರು ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಜ್ಜಂಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಜ್ಜಂಪುರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ

ಸಿನಿಮಾಗಳಲ್ಲಿ (Cinema) ಆಕ್ಷನ್ ಸಾಮಾನ್ಯ. ಹೀರೋ ನಿಂತು ಸ್ಟೈಲ್ ಆಗಿ ಕೈ ಬೀಸಿದರೆ ವಿಲನ್​​ಗಳು ಮಾರು ದೂರ ಹೋಗಿ ಬೀಳುತ್ತಾರೆ, ಅಭಿಮಾನಿಗಳು ಚಪ್ಪಾಳೆ ಹೊಡೆಯುತ್ತಾರೆ. ಇಲ್ಲಿ ಹೀರೋಗೆ ಹೆಚ್ಚು ಕಷ್ಟವಿಲ್ಲ, ಅವನ ಶ್ರಮವೂ ಏನೂ ಇಲ್ಲ. ಆದರೆ ಹಾಗೆ ಹಾರಿ ಬೀಳುವ ಫೈಟರ್​​ಗಳದ್ದು ಎಷ್ಟು ಕಷ್ಟದ ಮತ್ತು ಎಷ್ಟು ರಿಸ್ಕಿ ಕೆಲಸ ಗೊತ್ತೆ? ಇಲ್ಲೊಂದು ವಿಡಿಯೋ ಇದೆ ನೋಡಿ, ನಟಿಯೊಬ್ಬರು ಹಾರಿ ಬೀಳುವ ದೃಶ್ಯವಿದು, ಸಾಕಷ್ಟು ಸೆಕ್ಯುರಿಟಿ ತೆಗೆದುಕೊಳ್ಳಲಾಗಿದೆ, ಆದರೂ ಹಾಗೆ ಹಾರಿ ಬೀಳುವುದು ಎಷ್ಟು ಅಪಾಯಕಾರಿ ಎಂಬುದು ಈ ವಿಡಿಯೋನಲ್ಲಿ ಕಾಣುತ್ತದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಭಾರತ U19 ತಂಡಕ್ಕೆ ಆಯ್ಕೆಯಾದ ರಾಹುಲ್ ದ್ರಾವಿಡ್ ಪುತ್ರ – Kannada News

ಈ ವರ್ಷದ ಆರಂಭದಲ್ಲಿ ಆಯುಷ್ ಮ್ಹಾತ್ರೆ ನಾಯಕತ್ವದಲ್ಲಿ ಭಾರತ ಅಂಡರ್-19 ತಂಡವು (India U19 Squad 2026) ಅಂಡರ್-19 ವಿಶ್ವಕಪ್ ಗೆದ್ದಿತು. ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ ಮತ್ತು ಅಭಿಗ್ಯಾನ್ ಕುಂಡು ಅವರಂತಹ ಯುವ ಪ್ರತಿಭೆಗಳು ತಂಡವನ್ನು ಚಾಂಪಿಯನ್ ಮಾಡುವಲ್ಲಿ ಶ್ರಮಿಸಿದ್ದವು. ಇದೀಗ ಭಾರತ ಅಂಡರ್ 19 ತಂಡ ಶ್ರೀಲಂಕಾ ಪ್ರವಾಸಕ್ಕೆ ಸಿದ್ಧವಾಗಿದೆ. ಈ ಪ್ರವಾಸದಲ್ಲಿ ಭಾರತ ಯುವ ಪಡೆ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಪ್ರವಾಸಕ್ಕೆ ಭಾರತ ಅಂಡರ್ 19 ತಂಡವನ್ನು ಸಹ ಬಿಸಿಸಿಐ ಪ್ರಕಟಿಸಿದೆ. ಆದರೆ ಈ ಬಾರಿ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತಂಡದಲ್ಲಿ ವೈಭವ್ ಆಗಲಿ ಆಯುಷ್ ಆಗಲಿ ಇಲ್ಲ. ಆದಾಗ್ಯೂ ತಂಡದಲ್ಲಿ ಮಾಜಿ ಟೀಂ ಇಂಡಿಯಾ ನಾಯಕ ರಾಹುಲ್ ದ್ರಾವಿಡ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ( Anvay Dravid) ಆಯ್ಕೆಯಾಗಿರುವುದು ಅಭಿಮಾನಿಗಳ ಸಂತೋಷವನ್ನು ಇಮ್ಮಡಿಗೊಳಿಸಿದೆ.

ಎರಡು ಸರಣಿಗಳಿಗೆ ತಂಡ ಪ್ರಕಟ

ಬಿಸಿಸಿಐ ಜೂನಿಯರ್ ಕ್ರಿಕೆಟ್ ಸಮಿತಿಯು ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ 19 ವರ್ಷದೊಳಗಿನವರ ಭಾರತ ಪುರುಷರ ತಂಡದ ತಂಡವನ್ನು ಆಯ್ಕೆ ಮಾಡಿದೆ. ಮೇಲೆ ಹೇಳಿದಂತೆ ಈ ಪ್ರವಾಸದಲ್ಲಿ ಭಾರತ ತಂಡವು ಮೂರು ಏಕದಿನ ಪಂದ್ಯಗಳು ಮತ್ತು ಎರಡು ರೆಡ್-ಬಾಲ್ ಪಂದ್ಯಗಳನ್ನು ಆಡಲಿದೆ. ಈ ತಂಡದ ನಾಯಕತ್ವವನ್ನು ಯಶವರ್ಧನ್ ಸಿಂಗ್ ಚೌಹಾಣ್ ಅವರಿಗೆ ನೀಡಲಾಗಿದೆ. ಯಶ್ ವೈಟ್-ಬಾಲ್ ಮತ್ತು ರೆಡ್-ಬಾಲ್ ತಂಡಗಳೆರಡಕ್ಕೂ ನಾಯಕರಾಗಿರುತ್ತಾರೆ. ಲಕ್ಷ್ಯ ರಾಯ್‌ಚಂದಾನಿ ಎರಡೂ ತಂಡಗಳಿಗೆ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಪ್ರವಾಸಕ್ಕಾಗಿ ಅನ್ವಯ್ ದ್ರಾವಿಡ್ ಅವರನ್ನು ಏಕದಿನ ತಂಡದಲ್ಲಿ ಮಾತ್ರ ಆಯ್ಕೆ ಮಾಡಲಾಗಿದ್ದು, ರೆಡ್-ಬಾಲ್ ಸರಣಿಗೆ ಆಯ್ಕೆ ಮಾಡಲಾಗಿಲ್ಲ.

ಏಕದಿನ ಸರಣಿಗೆ ಭಾರತ ತಂಡ: ಸಾಗರ್ ವಿರ್ಕ್, ಲಕ್ಷ ರಾಯಚಂದನಿ (ಉಪನಾಯಕ), ಯಶ್ಬರ್ಧನ್ ಸಿಂಗ್ ಚೌಹಾಣ್ (ನಾಯಕ), ವಿನೀತ್ ವಿ ಕೆ, ಅರ್ಜುನ್ ರಜಪೂತ್, ಕುಶಾಗ್ರಾ ಓಜಾ, ರಜತ್ ಬಘೇಲ್ (ವಿಕೆಟ್ ಕೀಪರ್), ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ಅನ್ಮೋಲ್ಜೀತ್ ಸಿಂಗ್, ವುಟ್ಕುರಿ ಯಶ್ವೀರ್ ಗೌಡ್, ರೋಹಿತ್ ಅನಿಲ್ ಯಾದವ್, ಶವಿನ್ ವಿ, ಕಾವ್ಯಾ ಪರೇಶ್ ಪಟೇಲ್, ಮೋಹಿತ್ ಉಲ್ವಾ, ಇಶಾನ್ ಸೂದ್

ರೆಡ್ ಬಾಲ್ ಸರಣಿಗೆ ಭಾರತ ತಂಡ: ಸಾಗರ್ ವಿರ್ಕ್, ಲಕ್ಷ ರಾಯಚಂದನಿ (ಉಪನಾಯಕ), ಯಶ್ಬರ್ಧನ್ ಸಿಂಗ್ ಚೌಹಾಣ್ (ನಾಯಕ), ಪಟೇಲ್ ಕುಶ್, ಮನಲ್ ಚೌಹಾಣ್, ಕುಶಾಗ್ರಾ ಓಜಾ, ಮಾನವ್ ಕೃಷ್ಣ (ವಿಕೆಟ್ ಕೀಪರ್), ಆರ್ಯನ್ ಸಂದೇಶ್ ಸಕ್ಪಾಲ್ (ವಿಕೆಟ್ ಕೀಪರ್), ಹೇಮಚುದೇಶನ್ ಜೆ, ಬಿ ಕೆ ಕಿಶೋರ್, ರೋಹಿತ್ ಅನಿಲ್ ಯಾದವ್, ಕಾವ್ಯಾ ಪರೇಶ್ ಪಟೇಲ್, ಪ್ರಿಯಾಂಶು ಸಿಂಗ್, ಪ್ರಣವ್ ರಾಘವೇಂದ್ರ, ಚಿಗುರುಪತಿ ವೆಂಕಟ

ಶ್ರೀಲಂಕಾ ಪ್ರವಾಸದ ಸಂಪೂರ್ಣ ವೇಳಾಪಟ್ಟಿ

  • ಮೊದಲನೇ ಏಕದಿನ ಪಂದ್ಯ: ಜುಲೈ 4, 2026, ಹಂಬಂಟೋಟ, ಬೆಳಿಗ್ಗೆ 10 ಗಂಟೆ
  • ಎರಡನೇ ಏಕದಿನ ಪಂದ್ಯ: ಜುಲೈ 6, 2026, ಹಂಬಂಟೋಟ, ಬೆಳಿಗ್ಗೆ 10 ಗಂಟೆ
  • ಮೂರನೇ ಏಕದಿನ ಪಂದ್ಯ: ಜುಲೈ 9, 2026, ಹಂಬಂಟೋಟ, ಬೆಳಿಗ್ಗೆ 10 ಗಂಟೆ

ರೆಡ್ ಬಾಲ್ ಸರಣಿ

  • ಮೊದಲ ಪಂದ್ಯ: ಜುಲೈ 13 ರಿಂದ 16, ಗಾಲೆ, ಬೆಳಿಗ್ಗೆ 10 ಗಂಟೆ
  • ಎರಡನೇ ಪಂದ್ಯ: ಜುಲೈ 20 ರಿಂದ 23, ಕೊಲಂಬೊ, ಬೆಳಿಗ್ಗೆ 10 ಗಂಟೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂಗಾರು ಬಿತ್ತನೆಗೆ ಮುನ್ನ ರೈತರಿಗೆ ಖುಷಿ ಸುದ್ದಿ, ಯೂರಿಯಾ ಬೆಲೆ ಅರ್ಧಕರ್ಧ ಕುಸಿತ – Kannada News

ಯೂರಿಯಾ ಎರಚುತ್ತಿರುವ ರೈತImage Credit source: Getty Images

ನವದೆಹಲಿ, ಜೂನ್ 11: ಭಾರತದ ರೈತರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ದೊಡ್ಡ ನಿರಾಳತೆ ನೀಡುವ ಸುದ್ದಿಯೊಂದರ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರದ (Urea fertilizer) ಆಮದು ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ರಸಗೊಬ್ಬರ ಸಂಸ್ಥೆ (‘NFL’ – ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್) ಇತ್ತೀಚೆಗೆ ಆಯೋಜಿಸಿದ್ದ ಜಾಗತಿಕ ಟೆಂಡರ್‌ನಲ್ಲಿ ಯೂರಿಯಾ ಬೆಲೆ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂದಿದೆ. ಎನ್‌ಎಫ್‌ಎಲ್ ನಡೆಸಿದ 1.7 ಮಿಲಿಯನ್ ಟನ್ ಯೂರಿಯಾ ಆಮದು ಟೆಂಡರ್‌ನಲ್ಲಿ, ಪ್ರತಿ ಟನ್‌ಗೆ $444.9 ರಿಂದ $449.3 ರಷ್ಟು ಕಡಿಮೆ ಬೆಲೆಯ ಬಿಡ್‌ಗಳು (Landed Price) ಬಂದಿವೆ. ಇದಕ್ಕೂ ಮುನ್ನ ‘ಇಂಡಿಯನ್ ಪೊಟ್ಯಾಶ್ ಲಿಮಿಟೆಡ್’ (IPL) ನಡೆಸಿದ್ದ ಟೆಂಡರ್‌ನಲ್ಲಿ ಪ್ರತಿ ಟನ್ ಯೂರಿಯಾ ಬೆಲೆ $935 ರಿಂದ $959 ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಈಗ ಯೂರಿಯಾ ಬೆಲೆ ಅರ್ಧಕ್ಕಿಂತಲೂ ಹೆಚ್ಚು ಕುಸಿದಿದೆ.

ಯೂರಿಯಾ ಬೆಲೆ ಇಳಿಕೆಗೆ ಪ್ರಮುಖ ಕಾರಣವೇನು?

ಮಾರ್ಚ್ ತಿಂಗಳಲ್ಲಿ ಚೀನಾ ದೇಶವು ಯೂರಿಯಾ ರಫ್ತಿನ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. ಆದರೆ ಈಗ ಚೀನಾ ತನ್ನ ರಫ್ತು ನಿರ್ಬಂಧಗಳನ್ನು ಭಾಗಶಃ ಸಡಿಲಗೊಳಿಸಿ, ಹೊಸ ರಫ್ತು ಕೋಟಾಗಳನ್ನು ಬಿಡುಗಡೆ ಮಾಡಿದೆ. ಜಾಗತಿಕ ಮಾರುಕಟ್ಟೆಗೆ ಚೀನಾದ ಯೂರಿಯಾ ಪೂರೈಕೆ ಆರಂಭವಾಗುತ್ತಿದ್ದಂತೆ ಬೆಲೆಗಳು ತಣ್ಣಗಾಗಿವೆ.

ಕಳೆದ ಹಣಕಾಸು ವರ್ಷದಲ್ಲಿ (2025-26) ಭಾರತವು ದಾಖಲೆಯ 11.17 ಮಿಲಿಯನ್ ಟನ್ ಯೂರಿಯಾವನ್ನು ಆಮದು ಮಾಡಿಕೊಂಡಿತ್ತು. ಇದರಲ್ಲಿ ಸಿಂಹಪಾಲು (2.23 ಮಿಲಿಯನ್ ಟನ್) ಚೀನಾದಿಂದಲೇ ಬಂದಿತ್ತು.

ಇದನ್ನೂ ಓದಿ: ಅನಿವಾಸಿ ಭಾರತೀಯರ FCNR-B ಠೇವಣಿಗಳಿಗೆ ಭಾರತದ ಬ್ಯಾಂಕುಗಳಿಂದ ಭರ್ಜರಿ ಬಡ್ಡಿ ಆಫರ್

ಯೂರಿಯಾ ಬೆಲೆ ಕುಸಿತದಿಂದ ರೈತರಿಗೆ ಮತ್ತು ಸರ್ಕಾರಕ್ಕೆ ಆಗುವ ಲಾಭಗಳೇನು?

ಖಾರಿಫ್ ಹಂಗಾಮಿಗೆ ಸಕಾಲಿಕ ನೆರವು: ಪ್ರಸ್ತುತ ದೇಶದಲ್ಲಿ ಮುಂಗಾರು (ಖಾರಿಫ್) ಬಿತ್ತನೆ ಕಾರ್ಯಗಳು ಆರಂಭವಾಗುತ್ತಿವೆ. ಜುಲೈ ಅಂತ್ಯದ ವೇಳೆಗೆ ಈ ಅಗ್ಗದ ಯೂರಿಯಾ ಭಾರತದ ಬಂದರುಗಳನ್ನು ತಲುಪಲಿದ್ದು, ಆಗಸ್ಟ್‌ನಲ್ಲಿ ರೈತರ ಕೈಸೇರಲಿದೆ.

ಗೊಬ್ಬರ ಸಬ್ಸಿಡಿ ಹೊರೆ ಇಳಿಕೆ: ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಮತ್ತು ರಸಗೊಬ್ಬರ ಬೆಲೆಗಳು ಏರಿಕೆಯಾಗಿದ್ದರಿಂದ, ಈ ವರ್ಷ ಭಾರತ ಸರ್ಕಾರದ ರಸಗೊಬ್ಬರ ಸಬ್ಸಿಡಿ ಬಿಲ್ ಬರೋಬ್ಬರಿ ₹3.40 ಲಕ್ಷ ಕೋಟಿ ತಲುಪಬಹುದು ಎಂದು ಅಂದಾಜಿಸಲಾಗಿತ್ತು (ಬಜೆಟ್‌ನಲ್ಲಿ ನಿಗದಿಪಡಿಸಿದ್ದು ₹1.70 ಲಕ್ಷ ಕೋಟಿ ಮಾತ್ರ). ಈಗ ಆಮದು ಬೆಲೆ ಇಳಿಕೆಯಾಗಿರುವುದರಿಂದ ಸರ್ಕಾರದ ಸಬ್ಸಿಡಿ ಹೊರೆ ಕೊಂಚ ತಗ್ಗಲಿದೆ.

ಇದನ್ನೂ ಓದಿ: ಕೈಯಿಂದ ಪ್ರೀಮಿಯಮ್ ಕಟ್ಟಬೇಕಿಲ್ಲ; ಉಚಿತ 7 ಲಕ್ಷ ರೂ ವಿಮಾ ಸೌಲಭ್ಯ ಪಡೆಯುವುದು ಹೇಗೆ?

ಒಟ್ಟಾರೆ, ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿದ್ದರಿಂದ ಗೊಬ್ಬರದ ಬೆಲೆ ತೀವ್ರವಾಗಿ ಏರಿತ್ತು. ಆದರೆ ಈಗ ಚೀನಾ ಪೂರೈಕೆಯನ್ನು ಆರಂಭಿಸಿರುವುದರಿಂದ ಜಾಗತಿಕವಾಗಿ ಯೂರಿಯಾ ಬೆಲೆ ಕುಸಿದಿದ್ದು, ಇದು ಮುಂಗಾರು ಹಂಗಾಮಿನಲ್ಲಿ ಭಾರತದ ಕೃಷಿ ಕ್ಷೇತ್ರಕ್ಕೆ ದೊಡ್ಡ ಸಮಾಧಾನ ತಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಕರ್ನಾಟಕದಲ್ಲಿ 5 ದಿನ ವ್ಯಾಪಕ ಮಳೆ, ಹಲವು ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ – Kannada News

ಬೆಂಗಳೂರು, (ಜುನ್ 11): ಕರ್ನಾಟಕದ (Karnataka) ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಅಂದರೆ ಇಂದಿನಿಂದ ಜೂನ್ 15ರವರೆಗೆ ವ್ಯಾಪಕ ಮಳೆಯಾಗುವ (Monsoon Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ (South) ಜಾಗೂ ಉತ್ತರ ಒಳನಾಡ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ  ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಪ್ರಮುಖ ಜಿಲ್ಲೆಗಳ ಹವಾಮಾನ ಮುನ್ಸೂಚನೆ

ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಕರ್ನಾಟಕ: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಡಲ ತೀರದಲ್ಲಿ ಗಂಟೆಗೆ 30-40 ಕಿ.ಮೀ ಗಾಳಿಯ ವೇಗ ಇರಲಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ದಕ್ಷಿಣ ಒಳನಾಡು ಮತ್ತು ಮಲೆನಾಡು ಭಾಗದ ತುಮಕೂರು, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳ ಲ್ಲಿ ಭಾರಿ ಮಳೆ ಹಾಗೂ ನಿರಂತರ ಗಾಳಿ (ಗಂಟೆಗೆ 30-40 ಕಿ.ಮೀ) ಬೀಸುವ ಸಾಧ್ಯತೆಯಿದೆ. ಇನ್ನು ಬಳ್ಳಾರಿ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಸಾಧಾರಣ ಮಳೆ ಹಾಗೂ ನಿರಂತರ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರುತ್ತದೆ. ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ಗಂಟೆಗೆ 30ರಿಂದ40 ಕಿ.ಮೀ. ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ಸ್ಮಾರ್ಟ್‌ ಟ್ರಿಕ್ಸ್‌ ಪಾಲಿಸುವ ಮೂಲಕ ಮಳೆಗಾಲದಲ್ಲಿ ಬಟ್ಟೆಗಳನ್ನು ಸುಲಭವಾಗಿ ಒಣಗಿಸಬುದು – Kannada News

ಮಳೆಗಾಲದಲ್ಲಿ (rainy season) ಒಗೆದ ಬಟ್ಟೆಗಳನ್ನು ಒಣಗಿಸುವುದು ತುಂಬಾ ಕಷ್ಟಕರವಾದ ಕೆಲಸ. ಈ ಋತುವಿನಲ್ಲಿ ಸರಿಯಾಗಿ ಸೂರ್ಯನ ಬೆಳಕು ಬೀಳದಿರುವ ಕಾರಣ, ವಾತಾರವರಣದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಒಗೆದ ಬಟ್ಟೆಗಳು ಬೇಗನೆ ಒಣಗುವುದಿಲ್ಲ. ಸರಿಯಾಗಿ ಒಣಗದಿದ್ದರೆ ಬಟ್ಟೆಗಳಿಂದ ಒಂದು ರೀತಿಯ ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತದೆ. ಹಾಗಾಗಿ ಮಳೆಗಾಲ ಬಂತೆಂದರೆ ಸಾಕು ಹೆಚ್ಚಿನವರಿಗೆ ಬಟ್ಟೆ ಒಣಗಿಸುವುದು, ಬಟ್ಟೆಗಳು ವಾಸನೆ ಬಾರದಂತೆ ನೋಡಿಕೊಳ್ಳುವುದೇ ದೊಡ್ಡ ತಲೆ ಬಿಸಿಯಾಗಿರುತ್ತದೆ. ಹೀಗಿರುವಾಗ ಈ ಕೆಲವೊಂದು ಟ್ರಿಕ್ಸ್‌ಗಳನ್ನು ಪಾಲಿಸುವ ಮೂಲಕ ಒಗೆದ ಬಟ್ಟೆಗಳನ್ನು ಬಲು ಸುಲಭವಾಗಿ ಒಣಗಿಸಬಹುದು.

ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಈ ರೀತಿಯಾಗಿ ಒಣಗಿಸಿ:

ಬಟ್ಟೆಗಳನ್ನು ಚೆನ್ನಾಗಿ ಹಿಂಡಿ:  ಒಗೆದ ಬಟ್ಟೆಗಳಿಂದ ನೀರನ್ನು ಹಿಂಡಿ ತೆಗೆಯುವುದು ತುಂಬಾನೇ ಮುಖ್ಯ. ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ತೊಳೆಯುತ್ತಿದ್ದೀರಿ ಎಂದಾದ್ರೆ ಎಕ್ಸ್‌ಟ್ರಾ ಸ್ಪಿನ್ ಅಥವಾ ಡ್ರೈಯರ್ ಮೋಡ್ ಅನ್ನು ಬಳಸಿಕೊಂಡು ಬಟ್ಟೆಗಳನ್ನು ಡ್ರೈ ಮಾಡಿ ನಂತರ ಒಣಗಲು ಹಾಕಿ. ವಾಷಿಂಗ್‌ ಮೆಷಿನ್‌ ಇಲ್ಲ ಎಂದಾದ್ರೆ ಬಟ್ಟೆಗಳನ್ನು ಚೆನ್ನಾಗಿ ಹಿಂಡಿ ಪೈಪ್‌ನಲ್ಲಿ ಪೈಪ್‌ನಲ್ಲಿ ನೇತುಹಾಕಿ. ಬಟ್ಟೆಯಿಂದ ನೀರು ಸಂಪೂರ್ಣವಾಗಿ ಬರಿದಾಗಲು ಬಿಡಿ ಮತ್ತು ನಂತರ ಅವುಗಳನ್ನು ಒಣಗಲು ಹಾಕಿ.

ಬಟ್ಟೆಗಳನ್ನು ದೂರ ದೂರ ಒಣಹಾಕಿ: ಇರಿಸಿ: ಬಟ್ಟೆಗಳನ್ನು ಒಣಗಿಸುವಾಗ, ಅವುಗಳನ್ನು ತುಂಬಾ ಹತ್ತಿರದಲ್ಲಿ ಜೋಡಿಸುವ ಬದಲು, ಅವುಗಳ ನಡುವೆ ಸಾಕಷ್ಟು ಸ್ಥಳಾವಕಾಶ ಇರುವಂತೆ ಹರಡಿ. ಅವುಗಳನ್ನು ತುಂಬಾ ಹತ್ತಿರದಲ್ಲಿ ಒಣ ಹಾಕಿದರೆ, ಬಟ್ಟೆಗಳು ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಫ್ಯಾನ್ ಬಳಸಿ: ಮಳೆಗಾಲದಲ್ಲಿ ಎಲ್ಲರೂ ಸಾಮಾನ್ಯವಾಗಿ ಮನೆಯೊಳಗೆ ಬಟ್ಟೆಗಳನ್ನು ಒಣಗಿಸುತ್ತಾರೆ. ಹೀಗಿರುವಾಗ ಕೋಣೆಯಲ್ಲಿ ಟೇಬಲ್ ಫ್ಯಾನ್ ಅಥವಾ ಸೀಲಿಂಗ್ ಫ್ಯಾನ್ ಅನ್ನು ಆನ್ ಮಾಡಿ. ಫ್ಯಾನ್ ಗಾಳಿಯು ಬಟ್ಟೆಗಳಿಂದ ತೇವಾಂಶವನ್ನು ಸುಲಭವಾಗಿ ಆವಿಯಾಗಿಸಲು ಸಹಾಯ ಮಾಡುತ್ತದೆ.  ಮತ್ತು ಬಟ್ಟೆಗಳು ವೇಗವಾಗಿ ಒಣಗುತ್ತವೆ.

ಇಸ್ತ್ರಿ ಮಾಡಿ:  ನೀವು ಒದ್ದೆಯಾದ ಬಟ್ಟೆಯ ಮೇಲೆ ತೆಳುವಾದ ಟವಲ್ ಅನ್ನು ಇಟ್ಟು ಅದನ್ನು ಇಸ್ತ್ರಿ ಮಾಡಬಹುದು. ಇಸ್ತ್ರಿ ಮಾಡುವಾಗ ಉತ್ಪತ್ತಿಯಾಗುವ ಶಾಖವು ಬಟ್ಟೆಯಲ್ಲಿರುವ ತೇವಾಂಶ ಬೇಗನೆ ಆವಿಯಾಗುತ್ತದೆ. ಜೀನ್ಸ್ ಅಥವಾ ಸ್ವೆಟರ್‌ಗಳಂತಹ ದಪ್ಪ ಬಟ್ಟೆಗಳನ್ನು ಒಣಗಿಸಲು ಈ ವಿಧಾನವು ಉಪಯುಕ್ತವಾಗಿದೆ.

ಇದನ್ನೂ ಓದಿ:  ಒಣಗಿದ ನಿಂಬೆಯನ್ನು ಎಸೆಯುವ ಬದಲು ರೀತಿಯಾಗಿ ಉಪಯೋಗಿಸಿಕೊಳ್ಳಿ

ಹೇರ್‌ ಡ್ರೈಯರ್‌ ಬಳಸಿ: ಹೇರ್ ಡ್ರೈಯರ್ ಕೂದಲನ್ನು ಒಣಗಿಸಲು ಮಾತ್ರವಲ್ಲ, ಬಟ್ಟೆಗಳನ್ನು ಒಣಗಿಸಲು ಸಹ ಬಳಸಬಹುದು. ಅದನ್ನು ಹೀಟ್‌ ಮೋಡ್‌ಗೆ ಹೊಂದಿಸಿ ಮತ್ತು ಬಟ್ಟೆಗಳನ್ನು ಒಣಗಿಸಿ. ಕನಿಷ್ಠ ಐದು ನಿಮಿಷಗಳ ಕಾಲ ಈ ಪ್ರಕ್ರಿಯೆಯನ್ನು ಮುಂದುವರಿಸಿ, ನಂತರ ಆ ಬಟ್ಟೆಗಳನ್ನು ಅರ್ಧ ಘಂಟೆಯವರೆಗೆ ಫ್ಯಾನ್ ಅಡಿಯಲ್ಲಿ ಬಿಡಿ. ಅವು ಎಷ್ಟು ಚೆನ್ನಾಗಿ ಒಣಗುತ್ತವೆ.

ಹೀಟರ್ ಬಳಸಿ: ಸಾಮಾನ್ಯವಾಗಿ ಚಳಿಗಾಲದಲ್ಲಿ ಹೀಟರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಲ್ಲದೆ ಬೇಸಿಗೆಯಲ್ಲಿ ಬಟ್ಟೆಗಳನ್ನು ಒಣಗಿಸಲು ನೀವು ಅವುಗಳನ್ನು ಬಳಸಬಹುದು. ನಿಮ್ಮ ಹೀಟರ್ ಅನ್ನು ಕೋಣೆಯಲ್ಲಿ ಇರಿಸಿ ಮತ್ತು ಬಟ್ಟೆ ಒಣಗಲು ಬಿಡಿ. ಹೀಟರ್‌ನಿಂದ ಬರುವ ಶಾಖವು ಬಟ್ಟೆಗಳನ್ನು ಸಂಪೂರ್ಣವಾಗಿ ಒಣಗಿಸುತ್ತದೆ ಮತ್ತು ವಾಸನೆಯನ್ನು ನಿವಾರಿಸುತ್ತದೆ.

ವಾಸನೆ ತಡೆಯಲು ವಿನೆಗರ್ ಮತ್ತು ನಿಂಬೆ ಬಳಸಿ: ಮಳೆಗಾಲದಲ್ಲಿ ಬಟ್ಟೆಗಳು ಸಂಪೂರ್ಣವಾಗಿ ಒಣಗದಿದ್ದಾಗ, ಅವುಗಳಿಂದ ಅಹಿತಕರ ವಾಸನೆ ಬರಬಹುದು. ಇದನ್ನು ತಪ್ಪಿಸಲು, ನೀವು ಬಟ್ಟೆಗಳನ್ನು ತೊಳೆಯುವ ನೀರಿಗೆ ಒಂದು ಕಪ್ ವಿನೆಗರ್ ಅಥವಾ ಸ್ವಲ್ಪ ನಿಂಬೆ ರಸವನ್ನು ಸೇರಿಸಬಹುದು. ವಿನೆಗರ್ ನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ವಾಸನೆಯನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಸೀಸನಲ್ ರೋಗಗಳಿಂದ ದೂರವಿರಲು ಈ ರೀತಿ ಮಾಡಿ! – Kannada News

ದೇಶದ ಹಲವೆಡೆ ಹವಾಮಾನದಲ್ಲಿ ಬದಲಾವಣೆಯಾಗುತ್ತಿರುವುದನ್ನು ನೀವು ಕಾಣಬಹುದು. ಕೆಲವು ಕಡೆ ಮಳೆ ಸುರಿಯುತ್ತಿದ್ದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಈ ರೀತಿ ಹವಾಮಾನ ಬದಲಾಗುವ ಸಮಯದಲ್ಲಿ ಜ್ವರ, ಶೀತ, ಗಂಟಲು ಸೋಂಕು, ಫ್ಲೂ ಮುಂತಾದ ಸಮಸ್ಯೆಗಳು ಕಂಡುಬರುವುದು ಸಾಮಾನ್ಯ. ಆದರೆ ಈ ರೀತಿಯಾಗುವುದಕ್ಕೆ ಪ್ರಮುಖ ಕಾರಣ ದೇಹದ ರೋಗನಿರೋಧಕ ಶಕ್ತಿ ದುರ್ಬಲವಾಗಿರುವುದು. ವೈದ್ಯರ ಪ್ರಕಾರ, ಏನೇ ಮಾಡಿದರೂ ಒಂದು ರಾತ್ರಿಯಲ್ಲಿ ಇಮ್ಯೂನಿಟಿ (Immunity) ಹೆಚ್ಚಿಸಿಕೊಳ್ಳುವ ಯಾವುದೇ ತ್ವರಿತ ವಿಧಾನಗಳಿಲ್ಲ. ಆದರೆ ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ ಹಾಗೂ ಒಳ್ಳೆಯ ಅಭ್ಯಾಸಗಳನ್ನು ನಿಯಮಿತವಾಗಿ ಪಾಲಿಸಿದರೆ ದೇಹದ ರೋಗನಿರೋಧಕ ಶಕ್ತಿ ಉತ್ತಮವಾಗಿರಿಸಿಕೊಳ್ಳಬಹುದು. ಇದರಿಂದ ಸೀಸನಲ್ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಾದರೆ ನಮ್ಮ ದಿನಚರಿ ಹೇಗಿರಬೇಕು, ಯಾವ ಆಹಾರಗಳಿಂದ ದೂರವಿದ್ದರೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಮತೋಲನ ಆಹಾರ ಸೇವನೆ:

ದೇಹಕ್ಕೆ ಅಗತ್ಯವಾದ ವಿಟಮಿನ್ ಮತ್ತು ಖನಿಜಾಂಶಗಳು ದೊರೆಯಲು ಹಣ್ಣು, ತರಕಾರಿ, ಧಾನ್ಯ, ಡ್ರೈ ಫ್ರೂಟ್ಸ್ ಹಾಗೂ ಪ್ರೋಟೀನ್‌ಯುಕ್ತ ಆಹಾರ ಸೇವನೆ ಅಗತ್ಯ. ವಿಶೇಷವಾಗಿ ನಿಂಬೆ, ಕಿತ್ತಳೆ, ನೆಲ್ಲಿಕಾಯಿ ಮುಂತಾದ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್-ಸಿ ಸಮೃದ್ಧವಾಗಿದ್ದು, ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬಾದಾಮಿ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಜಿಂಕ್ ಲಭ್ಯವಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಸಾಕಷ್ಟು ನೀರು ಮತ್ತು ನಿದ್ರೆ:

ದೇಹ ಸರಿಯಾಗಿ ಕಾರ್ಯನಿರ್ವಹಿಸಲು ದಿನಪೂರ್ತಿ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಜೊತೆಗೆ ಪ್ರತಿದಿನ ಸರಿಯಾಗಿ ನಿದ್ರೆ ಮಾಡದಿದ್ದರೆ ರೋಗನಿರೋಧಕ ಶಕ್ತಿ ಕುಗ್ಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಇದನ್ನೂ ಓದಿ: ಆರೋಗ್ಯವಾಗಿರಲು ಮಾತ್ರೆ ತಗೋಳೋದು ಬಿಟ್ಟು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನಕೊಡಿ!

ವ್ಯಾಯಾಮ ಮತ್ತು ಒತ್ತಡ ನಿಯಂತ್ರಣ:

ಪ್ರತಿದಿನ ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡುವುದರಿಂದ ದೇಹದ ಆರೋಗ್ಯ ಸುಧಾರಿಸುತ್ತದೆ. ದೀರ್ಘಕಾಲದ ಒತ್ತಡ ದೇಹದ ರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು. ಆದ್ದರಿಂದ ಮನಸ್ಸನ್ನು ಶಾಂತವಾಗಿಡುವುದು ಮತ್ತು ಒತ್ತಡ ನಿಯಂತ್ರಿಸುವುದು ಮುಖ್ಯ.

ಭಾರತೀಯ ಮಸಾಲೆಗಳ ಆರೋಗ್ಯ ಲಾಭಗಳು:

ಅರಿಶಿನ, ಶುಂಠಿ, ಬೆಳ್ಳುಳ್ಳಿ, ಮೆಣಸು ಹಾಗೂ ದಾಲ್ಚಿನ್ನಿಯಲ್ಲಿ ನೈಸರ್ಗಿಕ ಆಂಟಿ-ವೈರಲ್ ಮತ್ತು ಆಂಟಿ-ಬ್ಯಾಕ್ಟೀರಿಯಲ್ ಗುಣಗಳಿವೆ. ಪ್ರತಿದಿನ ಅರಿಶಿನ ಹಾಲು ಕುಡಿಯುವುದು ಆರೋಗ್ಯಕ್ಕೆ ಲಾಭಕರ. ತುಳಸಿ, ಪುದೀನಾ ಹಾಗೂ ಶುಂಠಿಯಿಂದ ತಯಾರಿಸಿದ ಕಷಾಯಗಳು ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ.

ಯಾವ ಆಹಾರಗಳಿಂದ ದೂರ ಇರಬೇಕು?

ಜಂಕ್ ಫುಡ್, ಹೆಚ್ಚು ಎಣ್ಣೆಯ ಆಹಾರ, ಸಾಫ್ಟ್ ಡ್ರಿಂಕ್ಸ್ ಮತ್ತು ಅತಿಯಾದ ಸಕ್ಕರೆ ಇರುವ ಪದಾರ್ಥಗಳನ್ನು ಕಡಿಮೆ ಮಾಡುವುದು ಉತ್ತಮ. ಧೂಮಪಾನ ಮತ್ತು ಮದ್ಯಪಾನವೂ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಬಹುದು. ಆರೋಗ್ಯಕರ ಆಹಾರ, ಸರಿಯಾದ ನಿದ್ರೆ, ವ್ಯಾಯಾಮ ಮತ್ತು ಒಳ್ಳೆಯ ಜೀವನಶೈಲಿಯೇ ದೇಹವನ್ನು ಒಳಗಿನಿಂದ ಬಲಪಡಿಸಿ ಸೀಸನಲ್ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link