Category Archives: Blog

Your blog category

ಆಡಲು ಸಿದ್ಧರಿದ್ದೇವೆ; ಪಾಕ್ ತಂಡದ ಪಂದ್ಯ ಬಹಿಷ್ಕಾರದ ಬಗ್ಗೆ ಸೂರ್ಯ ಅಚ್ಚರಿಯ ಹೇಳಿಕೆ – Kannada News | Pakistan Boycotts India Match at T20 WC: Surya Yadav Reacts, Political Fallout Explained

2026 ರ ಟಿ20 ವಿಶ್ವಕಪ್ (T20 World Cup) ಆರಂಭಕ್ಕೂ ಮುನ್ನ ಪಾಕಿಸ್ತಾನ ತಂಡ, ಟೀಂ ಇಂಡಿಯಾ (India vs Pakistan) ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ರದ್ದಾದರೆ ಐಸಿಸಿ ಜೊತೆಗೆ ಬಿಸಿಸಿಐ ಹಾಗೂ ಪಿಸಿಬಿಗೂ ನಷ್ಟವುಂಟಾಗಲಿದೆ. ಹೀಗಾಗಿ ಐಸಿಸಿ, ಪಾಕ್ ತಂಡ ತನ್ನ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಸೂಚಿಸಿದೆ. ಆದಾಗ್ಯೂ ಇಂದು ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನದ ಪ್ರಧಾನಿ ನಾವು ನಿಮ್ಮ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (SuryaKumar Yadav), ಪಾಕಿಸ್ತಾನದ ನಿರ್ಧಾರದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಟೀಂ ಇಂಡಿಯಾ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿರುವ ಬಗ್ಗೆ ಮಾತನಾಡಿರುವ ಸೂರ್ಯ, ‘ಪಾಕಿಸ್ತಾನ ನಮ್ಮ ವಿರುದ್ಧ ಪಂದ್ಯ ಆಡದಿರಲು ನಿರ್ಧರಿಸಿದೆ. ಪಾಕಿಸ್ತಾನದ ನಿರ್ಧಾರಗಳು ನಮ್ಮ ನಿಯಂತ್ರಣದಲ್ಲಿಲ್ಲ. ಆದರೆ ನಾವು ಪಾಕಿಸ್ತಾನದ ವಿರುದ್ಧ ಆಡಲು ನಿರಾಕರಿಸಿಲ್ಲ, ಅವರು ಆಡಲು ನಿರಾಕರಿಸಿದ್ದಾರೆ. ಐಸಿಸಿ ವೇಳಾಪಟ್ಟಿಯ ಪ್ರಕಾರ ನಾವು ಆಡಲು ಸಿದ್ಧರಿದ್ದೇವೆ. ನಮ್ಮ ಟಿಕೆಟ್‌ಗಳು ಸಹ ಬುಕ್ ಆಗಿವೆ. ಮೊದಲು ನಾವು ಮುಂಬೈನಲ್ಲಿ ಅಮೆರಿಕ ವಿರುದ್ಧ ಮತ್ತು ನಂತರ ದೆಹಲಿಯಲ್ಲಿ ಕೆನಡಾ ವಿರುದ್ಧ ಆಡುತ್ತೇವೆ. ಈ ಎರಡು ಪಂದ್ಯಗಳ ನಂತರ, ನಾವು ದೆಹಲಿಯಿಂದ ಕೊಲಂಬೊಗೆ ಹೊರಡುತ್ತಿದ್ದೇವೆ.

ನಮ್ಮ ತಂಡ ಪಾಕಿಸ್ತಾನದ ವಿರುದ್ಧ ಉತ್ತಮವಾಗಿ ಆಡಿದೆ ಮತ್ತು ಭವಿಷ್ಯದಲ್ಲಿಯೂ ಅದಕ್ಕಾಗಿ ಶ್ರಮಿಸುವುದನ್ನು ಮುಂದುವರಿಸುತ್ತದೆ. ನಾವು ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಮೂರು ಬಾರಿ ಆಡಿದ್ದೇವೆ ಮತ್ತು ನಾವು ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ನಮಗೆ ಮತ್ತೆ ಆಡಲು ಅವಕಾಶ ಸಿಕ್ಕರೆ, ನಾವು ಆಡುತ್ತೇವೆ ಮತ್ತು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ವಾಸ್ತವವಾಗಿ, ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಪಾಕಿಸ್ತಾನ ಸರ್ಕಾರ ಬಹಿಷ್ಕರಿಸುವುದಾಗಿ ಘೋಷಿಸಿದೆ. ಈ ಘೋಷಣೆ ಪಿಸಿಬಿಯಿಂದ ಬಂದಿಲ್ಲ, ಬದಲಾಗಿ ಪಾಕಿಸ್ತಾನ ಸರ್ಕಾರದಿಂದ ಬಂದಿದೆ. ಪಾಕ್ ಸರ್ಕಾರ ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಇದನ್ನು ಘೋಷಿಸಿದೆ. ಆದಾಗ್ಯೂ, ಪಿಸಿಬಿಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಐಸಿಸಿ ಹೇಳಿತ್ತು.

ಅಲ್ಲದೆ ಭಾರತದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಿದ್ದಕ್ಕೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಸಮರ್ಥನೆ ನೀಡಿದ್ದಾರೆ. ‘ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ನಾವು ಭಾರತದ ವಿರುದ್ಧ ಆಡುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದೇವೆ. ಏಕೆಂದರೆ ಆಟದ ಮೈದಾನದಲ್ಲಿ ಯಾವುದೇ ರಾಜಕೀಯ ಇರಬಾರದು. ನಾವು ಬಾಂಗ್ಲಾದೇಶದೊಂದಿಗೆ ಸಂಪೂರ್ಣವಾಗಿ ನಿಲ್ಲಬೇಕು ಮತ್ತು ಇದು ತುಂಬಾ ಸರಿಯಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ನಾವು ಬಾಂಗ್ಲಾದೇಶದೊಂದಿಗೆ ನಿಲ್ಲುತ್ತೇವೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Valentine’s Week List 2026: ಪ್ರೇಮಿಗಳ ವಾರದಲ್ಲಿ ಯಾವೆಲ್ಲಾ ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ; ಇಲ್ಲಿದೆ ಲಿಸ್ಟ್ – Kannada News | Valentine’s Week List 2026: Know which special days are celebrated during Valentine’s Week Here is the list

ವ್ಯಾಲೆಂಟೈನ್ಸ್‌ ವೀಕ್‌Image Credit source: Pinterest

ಪ್ರೀತಿಯ ತಿಂಗಳಾದ ಫೆಬ್ರವರಿ ಈಗಾಗಲೇ ಆರಂಭವಾಗಿದ್ದು, ಪ್ರೇಮಿಗಳ ದಿನ ಸಮೀಪಿಸುತ್ತಿದೆ. ಪ್ರೇಮಿಗಳ ದಿನಕ್ಕೂ ಮುಂಚಿತವಾಗಿ ಫೆಬ್ರವರಿ 7 ರಿಂದ 13 ರವರೆಗೆ ಪ್ರೇಮಿಗಳ ವಾರವನ್ನು (Valentine’s Week) ಸಹ ಆಚರಿಸಲಾಗುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ನಿಮ್ಮ ಸಂಗಾತಿಯೊಂದಿಗೆ ವಿಶೇಷ ಕ್ಷಣಗಳನ್ನು ಕಳೆಯಲು ಪ್ರೇಮಿಗಳ ವಾರವು ಅತ್ಯಂತ ರೋಮ್ಯಾಂಟಿಕ್ ಸಮಯ. ಅಷ್ಟೇ ಅಲ್ಲದೆ ನಂಬಿಕೆ, ಅನ್ಯೋನ್ಯತೆ, ಸ್ನೇಹ ಮತ್ತು ಭಾವನಾತ್ಮಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಮಯವೂ ಹೌದು. ರೋಸ್‌ ಡೇ ನಿಂದ ಕಿಸ್‌ ಡೇ ವರೆಗೆ ವ್ಯಾಲೆಂಟೈನ್ಸ್‌ ವೀಕ್‌ನಲ್ಲಿ ಯಾವೆಲ್ಲಾ ವಿಶೇಷ  ದಿನಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ವ್ಯಾಲೆಂಟೈನ್ಸ್‌ ವೀಕ್‌ನಲ್ಲಿ ಯಾವೆಲ್ಲಾ ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ?

ಫೆಬ್ರವರಿ 7, ಗುಲಾಬಿ ದಿನ: ಪ್ರೇಮಿಗಳ ದಿನವು ಫೆಬ್ರವರಿ 7 ರಂದು ಗುಲಾಬಿ ದಿನದೊಂದಿಗೆ ಪ್ರಾರಂಭವಾಗುತ್ತದೆ. ಈ ದಿನದಂದು ಜನರು ಕೆಂಪು ಗುಲಾಬಿಯನ್ನು ನೀಡುವ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.  ಇದಲ್ಲದೆ  ನೀವು ಸ್ನೇಹವನ್ನು ಪ್ರಾರಂಭಿಸಲು ಬಯಸಿದರೆ, ಹಳದಿ ಗುಲಾಬಿಯನ್ನು, ಸೌಂದರ್ಯ ಅಥವಾ ಸ್ನೇಹವನ್ನು ಹೊಗಳಲು ಬಯಸಿದರೆ ಗುಲಾಬಿ ಬಣ್ಣದ ಗುಲಾಬಿ ಸಹ ನೀಡಬಹುದು.

ಫೆಬ್ರವರಿ 8, ಪ್ರಪೋಸ್ ಡೇ: ಪ್ರಪೋಸ್ ಡೇ ಅನ್ನು ಫೆಬ್ರವರಿ 8 ರಂದು ಆಚರಿಸಲಾಗುತ್ತದೆ. ಈ ದಿನದಂದು ಜನರು ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ.  ನೀವು ಯಾರನ್ನಾದರೂ ಇಷ್ಟಪಟ್ಟು ನಿಮ್ಮ ಭಾವನೆಗಳನ್ನು ಇನ್ನೂ ವ್ಯಕ್ತಪಡಿಸಲು ಸಾಧ್ಯವಾಗದಿದ್ದರೆ, ಪ್ರಪೋಸ್ ಡೇ ದಿನ ನೀವು ಪ್ರೀತಿಸುವ ವ್ಯಕ್ತಿಗೆ ಪ್ರೀತಿಯನ್ನು ವ್ಯಕ್ತಪಡಿಸಬಹುದು.

ಫೆಬ್ರವರಿ 9, ಚಾಕೊಲೇಟ್ ದಿನ: ಈ ದಿನ ಸಂಬಂಧಗಳಿಗೆ ಮಾಧುರ್ಯವನ್ನು ಸೇರಿಸುವ ವಿಶೇಷ ಸಂದರ್ಭವಾಗಿದೆ. ನಿಮ್ಮ ಪ್ರೇಮ ಪ್ರಸ್ತಾಪವನ್ನು ಸ್ವೀಕರಿಸಿದರೆ, ಚಾಕೊಲೇಟ್ ದಿನದಂದು ನಿಮ್ಮ ಗೆಳತಿಗೆ ಅವಳ ನೆಚ್ಚಿನ ಚಾಕೊಲೇಟ್‌ಗಳನ್ನು ನೀಡುವ ಮೂಲಕ ನೀವು ಅವಳ ಹೃದಯವನ್ನು ಮತ್ತೆ ಗೆಲ್ಲಬಹುದು. ನಿಮ್ಮ ಸಂಬಂಧವನ್ನು ಸಿಹಿಗೊಳಿಸಲು ಮತ್ತು ಅದನ್ನು ಶಾಶ್ವತವಾಗಿ ಕಾಪಾಡಿಕೊಳ್ಳಲು ಸಂಗಾತಿಗೆ ಚಾಕೊಲೇಟ್‌ ನೀಡಬಹುದು.

ಫೆಬ್ರವರಿ 10, ಟೆಡ್ಡಿ ಡೇ: ಟೆಡ್ಡಿ ಡೇ ಎಂಬುದು ಮುಗ್ಧತೆ ಮತ್ತು ಮೃದುತ್ವದ ಸಂಕೇತವಾಗಿದೆ. ಈ ದಿನದಂದು ಟೆಡ್ಡಿ ಬೇರ್ ಉಡುಗೊರೆಯಾಗಿ ನೀಡುವುದರಿಂದ ನಿಮ್ಮ ಸಂಗಾತಿಗೆ ಯಾವುದೇ ಸಂದರ್ಭಗಳಿದ್ದರೂ ನೀವು ಯಾವಾಗಲೂ ಅವರ ಜೊತೆಗಿರುತ್ತೀರಿ ಎಂಬ ಫೀಲ್‌ ಬರುತ್ತದೆ. ಅಲ್ಲದೆ ಇದು ಸ್ನೇಹ ಮತ್ತು ಪ್ರಣಯ ಸಂಬಂಧಗಳೆರಡಕ್ಕೂ ಸಂತೋಷವನ್ನು ತರುತ್ತದೆ.

ಫೆಬ್ರವರಿ 11, ಪ್ರಾಮಿಸ್ ಡೇ: ಪ್ರತಿಯೊಂದು ಸಂಬಂಧವು ನಂಬಿಕೆ ಮತ್ತು ಭರವಸೆಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಪ್ರಾಮಿಸ್ ಡೇಯಂದು, ಸಂಗಾತಿಗಳು ಪ್ರತಿಯೊಂದು ಸನ್ನಿವೇಶದಲ್ಲೂ ಪ್ರಾಮಾಣಿಕರು, ಬದ್ಧರು ಮತ್ತು ಬೆಂಬಲ ನೀಡುವವರಾಗಿರುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತಾರೆ. ಈ ದಿನವು ಸಂಬಂಧಗಳ ಅಡಿಪಾಯವನ್ನು ಬಲಪಡಿಸುತ್ತದೆ.

ಇದನ್ನೂ ಓದಿ: ಸಂಗಾತಿಯಲ್ಲಿ ಈ ಬದಲಾವಣೆಗಳು ಕಂಡುಬಂದರೆ ನೀವು ಪ್ರೀತಿಯಲ್ಲಿ ಮೋಸ ಹೋಗ್ತಿದ್ದೀರಿ ಎಂದರ್ಥ

ಫೆಬ್ರವರಿ 12, ಹಗ್ ಡೇ: ಕೆಲವೊಮ್ಮೆ ಅಪ್ಪುಗೆಯು ಪದಗಳಿಗಿಂತ ಹೆಚ್ಚಿನದನ್ನು ಹೇಳುತ್ತದೆ. ಅಪ್ಪುಗೆಯ ದಿನದಂದು, ನಿಮ್ಮ ಪ್ರೇಮಿಯನ್ನು ಅಪ್ಪಿಕೊಂಡು ನಿಮ್ಮ ಪ್ರೀತಿ ಮತ್ತು ಸುರಕ್ಷತೆಯನ್ನು ವ್ಯಕ್ತಪಡಿಸಿ. ಈ ದಿನವು ಭಾವನಾತ್ಮಕ ಬಂಧಗಳನ್ನು ಗಾಢವಾಗಿಸುತ್ತದೆ.

ಫೆಬ್ರವರಿ 13, ಕಿಸ್ ಡೇ: ಫೆಬ್ರವರಿ 13 ರಂದು ಕಿಸ್ ಡೇ ಆಚರಿಸಲಾಗುತ್ತದೆ. ಈ ದಿನ ದಂಪತಿಗಳು ಮತ್ತು ಪ್ರೇಮಿಗಳಿಗೆ ಬಹಳ ವಿಶೇಷವಾಗಿದೆ, ಏಕೆಂದರೆ ಈ ದಿನದಂದು ಜನರು ಪರಸ್ಪರ ಪ್ರೀತಿಯಿಂದ ಚುಂಬಿಸುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ಫೆಬ್ರವರಿ 14, ಪ್ರೇಮಿಗಳ ದಿನ: ವ್ಯಾಲೆಂಟೈನ್ಸ್‌ ವೀಕ್‌ನ ಏಳು ದಿನ ಪ್ರೀತಿಯ ವಿವಿಧ ಛಾಯೆಗಳನ್ನು ಪ್ರದರ್ಶಿಸಿದ ನಂತರ, ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬರೂ ಈ ವಿಶೇಷ ದಿನವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗ 49 ಕೋಟಿ ರೂ ಲಾಟರಿ ಗೆದ್ದ, ಕುಟುಂಬಸ್ಥರ ಸಂತೋಷ ಹೇಗಿತ್ತು ನೋಡಿ – Kannada News | Udupi Family Happy after Son Shantanu Shettygar wins Rs 49 crore lottery in UAE’s Big Ticket lucky draw

ಉಡುಪಿ, (ಫೆಬ್ರವರಿ 05): ಓಮನ್​​ನಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದ ಉಡುಪಿ ಜಿಲ್ಲೆಯ ಶಂತನು ಶೆಟ್ಟಿಗಾರ್‌ ಅಬುದಾಭಿಯಲ್ಲಿ ನಡೆದ ಬಿಗ್‌ ಟಿಕೆಟ್ ಡ್ರಾನಲ್ಲಿ 49 ಕೋಟಿ ರೂಪಾಯಿ (20 ಮಿಲಿಯನ್‌ ದಿರಮ್‌ ) ಮೊತ್ತದ ಲಾಟರಿ ಗೆದ್ದಿದ್ದಾರೆ. ಹೌದು…ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಾಂತನು‌ ಜ.20 ರಂದು ಬಿಗ್‌ ಟಿಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು. ಫೆ.3ರಂದು ಡ್ರಾ ಫಲಿತಾಂಶ ಹೊರ ಬಿದ್ದಿದ್ದು ಇದರಲ್ಲಿ ಅವರಿಗೆ ಅದೃಷ್ಟ ಖುಲಾಯಿಸಿದೆ. ಆದರೆ ಶಂತನು ತನ್ನ ಸ್ನೇಹಿತರೊಬ್ಬರೊಂದಿಗೆ ಈ ಟಿಕೆಟನ್ನು ಜಂಟಿಯಾಗಿ ಖರೀದಿಸಿದ್ದರು. ಹೀಗಾಗಿ ಅದರಲ್ಲಿ ಅರ್ಧ ಹಣ ಅಂದರೆ ಸರಿ ಸುಮಾರು 24.5 ಕೋಟಿ ರು. ಹಣ ಅವರ ಗೆಳೆಯನಿಗೆ ಸಿಗಲಿದೆ. ಇನ್ನು ಮಟ್ಟು ಪರಿಸರದಲ್ಲಿರುವ ಶಂತನು ಕುಟುಂಬಸ್ಥರು ಫುಲ್ ಖುಷ್ ಆಗಿದ್ದಾರೆ. ಈ ಕುರಿತು ಶಾಂತನು ಪೋಷಕರ ಜೊತೆ ನಮ್ಮ ಉಡುಪಿ ಪ್ರತಿನಿಧಿ ಪ್ರಜ್ವಲ್ ನಡೆಸಿರುವ ಮಾತುಕತೆ ಇಲ್ಲಿದೆ ನೋಡಿ.

ಇದನ್ನೂ ಓದಿ: ವಿದೇಶದಲ್ಲಿ ಕನ್ನಡಿಗನ ಕಮಾಲ್: ಭರ್ಜರಿ 49 ಕೋಟಿ ರೂ. ಲಾಟ್ರಿ ಗೆದ್ದ ಉಡುಪಿಯ ಯುವಕ!

Source link

ಲಂಚ ನೀಡಲು ಹಣವಿಲ್ಲದ್ದಕ್ಕೆ ಬೆಳೆದ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತಂದ ರೈತ – Kannada News | Tumakuru farmer brings radish to govt office, in lieu of bribe insted of Money

ತುಮಕೂರು, (ಫೆಬ್ರವರಿ 05): ಕರ್ನಾಟದಲ್ಲಿ ಯಾವುದೇ ಕಚೇರಿಗಳಿಗೂ ಹೋದರೂ ಸಹ ಲಂಚವಿಲ್ಲದೇ ಯಾವುದೇ ಕೆಲಸಗಳು ಆಗುತ್ತಿಲ್ಲ. ಏನಾದರೂ ಒಂದು ಮಾಡಿಕೊಡಬೇಕೆಂದರೆ ಅಧಿಕಾರಿಗಳು ಮೊದಲು ಲಂಚಕ್ಕೆ ಬೇಡಿಕೆ ಇಡುತ್ತಾರೆ. ಅದರಂತೆ ತುಮಕೂರಿನ ರೈತನೋರ್ವ ಜಮೀನಿಗೆ ರಸ್ತೆ ಮಾಡಿಕೊಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಹಣವಿಲ್ಲದ ಕಾರಣ ರೈತ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ತಾಲೂಕು ಕಚೇರಿಗೆ ತಂದಿದ್ದಾರೆ. ಹೌದು.. ತುಮಕೂರು ಜಿಲ್ಲೆ ಮಧುಗುರಿ ತಾಲೂಕಿನ ದೊಡ್ಡರಿ ಜಕ್ಕೇನಹಳ್ಳಿ ಗ್ರಾಮದ ರೈತ ಪ್ರಸನ್ನಕುಮಾರ್ ಎಂಬವರಿಗೆ ಜಮೀನಿಗೆ ರಸ್ತೆ ಮಾಡಿಕೊಡುವಂತೆ ಲೋಕಾಯುಕ್ತರೇ ಸೂಚಿಸಿದ್ದರೂ ಕೂಡ ಕ್ಯಾರೇ ಎನ್ನದ ಕಂದಾಯ ಅಧಿಕಾರಿಗಳು (Revenue Officer) ಲಂಚಕ್ಕಾಗಿ (Bribe) ಬೇಡಿಕೆ ಇಟ್ಟು ಅಲೆದಾಡಿಸಿದ್ದಾರೆ. ಇದರಿಂದ  ಅಕ್ರೋಶಗೊಂಡ ರೈತರೊಬ್ಬರು ತಾನು ಬೆಳೆದ ಮೂಲಂಗಿಯನ್ನೇ (Radish) ಲಂಚವಾಗಿ ನೀಡಲು ತಾಲೂಕು ಕಚೇರಿಗೆ ತಂದಿದ್ದಾರೆ. ಮೂಲಂಗಿ ಸಮೇತ ತಾಲೂಕು ಕಚೇರಿ ಮುಂದೆ ಮೈಕ್ ಹಿಡಿದು ‘ನನಗೆ ಅಧಿಕಾರಿಗಳಿಗೆ ಲಂಚ ನೀಡಲು ಹಣವಿಲ್ಲ. ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ ಬನ್ನಿ ಬನ್ನಿ’ ಎಂದು ಕೂಗಿದ್ದಾರೆ.

ಎರಡು ತಿಂಗಳಾದರೂ ರಸ್ತೆ ನಿರ್ಮಾಣಕ್ಕಾಗಿ ಸ್ಥಳ ಮಹಜರು ಹಾಗೂ ಪರಿಶೀಲನೆಗೆ ಬರಲು ಕೆಲವು ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣವಿಲ್ಲದ ರೈತ ಪ್ರಸನ್ನಕುಮಾರ್ ಅಧಿಕಾರಿಗಳ ಈ ನಡೆಗೆ ಬೇಸರ ವ್ಯಕ್ತಪಡಿಸಿ ತಹಶೀಲ್ದಾರ್ ಬಳಿ ಮನವಿ ಮಾಡಿದ್ದರು. ಅವರು ರಸ್ತೆ ಮಾಡಿಕೊಡಲು ಸೂಚಿಸಿದ್ದರು. ಆದರೆ ಇಲ್ಲಿಯವರೆಗೂ ಕಂದಾಯ ಅಧಿಕಾರಿಗಳಾಗಲಿ, ಗ್ರಾಮ ಲೆಕ್ಕಿಗರಾಗಲಿ ಬಂದಿಲ್ಲ. ಇದರಿಂದ ಬೆಸತ್ತ ರೈತ ಪ್ರಸನ್ನಕುಮಾರ್ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡಲು ತಾಲೂಕು ಕಚೇರಿಗೆ ತಂದು ಗಮನಸೆಳೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬದಲಾಗುತ್ತಿರುವ ವಿಶ್ವ ಶ್ರೇಣಿಯಲ್ಲಿ ಜಾಗತಿಕ ಶಕ್ತಿಯಾಗುತ್ತಿರುವ ಭಾರತ: ನರೇಂದ್ರ ಮೋದಿ ಹೇಳಿಕೆ – Kannada News | India has unique combination of high growth and low inflation, PM Modi says in Rajya Sabha

ನವದೆಹಲಿ, ಫೆಬ್ರುವರಿ 5: ಬಹಳ ವೇಗವಾಗಿ ಬದಲಾಗುತ್ತಿರುವ ವಿಶ್ವ ಶ್ರೇಣಿಯಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಇಂದು ಗುರುವಾರ ಮೋದಿ ಅವರು ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ವೇಳೆ ಮಾತನಾಡುತ್ತಾ, ಭಾರತದ ಹೆಚ್ಚುತ್ತಿರುವ ಶಕ್ತಿಯ ಬಗ್ಗೆ ಗಮನ ಸೆಳೆದಿದ್ದಾರೆ.

‘ಎರಡನೇ ವಿಶ್ವ ಮಹಾಯುದ್ಧದ ನಂತರ ಹೊಸ ವಿಶ್ವ ಶ್ರೇಣಿ ನಿರ್ಮಾಣವಾಯಿತು. ಈಗ ಜಗತ್ತು ಮತ್ತೆ ಹೊಸ ಶ್ರೇಣಿಯತ್ತ ಸಾಗುತ್ತಿದೆ. ವಿಶ್ವ ಬಂಧು ಎನಿಸಿರುವ ಭಾರತದತ್ತ ಜಗತ್ತು ವಾಲುತ್ತಿದೆ’ ಎಂದು ಪ್ರಧಾನಿಗಳು ಹೇಳಿದ್ದಾರೆ.

ವ್ಯಾಪಾರ ಒಪ್ಪಂದಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ವಂದನಾ ನಿರ್ಣಯದ ಮೇಲಿನ ಭಾಷಣದಲ್ಲಿ ನರೇಂದ್ರ ಮೋದಿ ಅವರು ವ್ಯಾಪಾರ ಒಪ್ಪಂದಗಳ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಯೂರೋಪಿಯನ್ ಯೂನಿಯನ್ ಜೊತೆಗಿನ ವ್ಯಾಪಾರ ಒಪ್ಪಂದವು ಐತಿಹಾಸಿಕ ಎನಿಸಿದೆ. ಹಲವು ದೇಶಗಳೊಂದಿಗೆ ಭವಿಷ್ಯಕ್ಕೆ ತಾಳೆಯಾಗುವ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮೋದಿ ಈ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: ನಾಲ್ಕೈದು ದಿನದಲ್ಲಿ ವ್ಯಾಪಾರ ಒಪ್ಪಂದ ಸಂಬಂಧ ಭಾರತ-ಅಮೆರಿಕ ಜಂಟಿ ಹೇಳಿಕೆ: ಪೀಯೂಶ್ ಗೋಯಲ್

ತಮ್ಮ ಸರ್ಕಾರದ ಹೆಚ್ಚಿನ ಶಕ್ತಿಯು ಹಿಂದಿನ ತಪ್ಪುಗಳನ್ನು ಸರಿಪಡಿಸುವುದರಲ್ಲೇ ವ್ಯಯವಾಗಿದೆ. ದೇಶದ ಬಗ್ಗೆ ಇದ್ದ ಋಣಾತ್ಮಕ ಅಭಿಪ್ರಾಯವನ್ನು ಸರಿಪಡಿಸಲು ಸುಧಾರಣೆಗಳನ್ನು ತರಲಾಗಿದೆ. ಈಗ ದೇಶದ ಆಡಳಿತದಲ್ಲಿ ಸ್ಪಷ್ಟ ನೀತಿ ಮತ್ತು ದೂರಗಾಮಿ ತಂತ್ರ ಇದೆ ಎಂದಿದ್ದಾರೆ ಪ್ರಧಾನಿಗಳು.

ಹಿಂದೊಮ್ಮೆ ಅತಿದುರ್ಬಲ ಐದು ಆರ್ಥಿಕತೆಗಳಲ್ಲಿ ಒಂದೆನಿಸಿದ್ದ ಭಾರತ ಈಗ ಮೂರನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿದೆ. ಅಧಿಕ ಜಿಡಿಪಿ ವೃದ್ಧಿ ಮತ್ತು ಕಡಿಮೆ ಹಣದುಬ್ಬರದ ವಿಶೇಷ ಅನುಕೂಲ ಭಾರತಕ್ಕೆ ಇದೆ. ಮುಂದುವರಿದ ದೇಶಗಳಿಗೆ ವಯಸ್ಸಾಗುತ್ತಿದೆ. ಭಾರತಕ್ಕೆ ಯುವಜನರ ಸಂಖ್ಯಾಬಲ ಇದೆ ಎಂದು ಪ್ರಧಾನಿಗಳು ಭಾರತಕ್ಕಿರುವ ಹಲವು ಅನುಕೂಲಗಳನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ, ಯೂರೋಪ್ ಜೊತೆ ಭಾರತದ ವ್ಯಾಪಾರ ಸಂಬಂಧ, 1991ರ ಉದಾರ ನೀತಿಗಿಂತಲೂ ದೊಡ್ಡದು: ಅರವಿಂದ್ ಪಣಗರಿಯಾ

ಜಾಗತಿಕ ಸಮಸ್ಯೆಗಳಿಗೆ ಭಾರತ ಪರಿಹಾರ ಕೊಡುವ ಮೂಲಕ ವಿಶ್ವಕ್ಕೆ ಭರವಸೆಯ ಬೆಳಕಾಗಿದೆ. ಗ್ಲೋಬಲ್ ಸೌತ್​ಗೆ (ಅಭಿವೃದ್ಧಿಶೀಲ ದೇಶಗಳು) ಭಾರತವು ಧ್ವನಿಯಾಗಿದೆ ಎಂದೂ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವಾಗಲೇ ವಿಪಕ್ಷದಿಂದ ಸಭಾತ್ಯಾಗ, ಸಂಸತ್ ಹೊರಗೆ ಪ್ರತಿಭಟನೆ – Kannada News | Opposition MPs walks out as PM Modi speaks in Rajya Sabha Session

ನವದೆಹಲಿ, ಫೆಬ್ರವರಿ 5: ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ (PM Modi) ಉತ್ತರಿಸುವಾಗ ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದಂತೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು “ಲೋಕಸಭಾ ವಿಪಕ್ಷ ನಾಯಕ ಮಾತನಾಡಲಿ” ಎಂಬ ಘೋಷಣೆಗಳನ್ನು ಕೂಗುತ್ತಾ ರಾಜ್ಯಸಭೆಯಿಂದ ಸಭಾತ್ಯಾಗ ಮಾಡಿವೆ. ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಆದರೂ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಮುಂದುವರೆಸಿದರು. ಇದರಿಂದ ಕೋಪಗೊಂಡ ಕಾಂಗ್ರೆಸ್ ಸಂಸದರು ಸಂಸತ್ ಹೊರಗೆ ಮೆಟ್ಟಿಲ ಮೇಲೆ ಪ್ರತಿಭಟನೆ ನಡೆಸಿದರು.

ಪ್ರಧಾನಿ ತಮ್ಮ ಭಾಷಣವನ್ನು ಮುಂದುವರಿಸುತ್ತಿದ್ದಂತೆ, ಮೇಲ್ಮನೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ವಿರೋಧ ಪಕ್ಷದ ಸದಸ್ಯರು ನಿರಂತರ ಗದ್ದಲವನ್ನು ಸೃಷ್ಟಿಸಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರ ಅಪ್ರಕಟಿತ ಪುಸ್ತಕವನ್ನು ರಾಹುಲ್ ಗಾಂಧಿ ಉಲ್ಲೇಖಿಸಲು ಅವಕಾಶ ನೀಡಲು ಲೋಕಸಭೆ ಸ್ಪೀಕರ್ ನಿರಾಕರಿಸಿದ್ದಕ್ಕೆ ಪ್ರತಿಭಟನೆ ನಡೆಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣವಕಾಶ; ಆದಾಯ ತೆರಿಗೆ ಇಲಾಖೆಯಲ್ಲಿ ನೇಮಕಾತಿ – Kannada News | Gujarat Income Tax Sports Quota Recruitment 2026: MTS and Tax Asst Jobs Apply Now!

ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಯುವಜನರಿಗೆ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿಗೆ ಗುಜರಾತ್‌ನ ಆದಾಯ ತೆರಿಗೆ ಇಲಾಖೆಯಿಂದ ಉತ್ತಮ ಅವಕಾಶ ದೊರೆತಿದೆ. ಕ್ರೀಡಾ ಕೋಟಾದಡಿಯಲ್ಲಿ ಮಲ್ಟಿ–ಟಾಸ್ಕಿಂಗ್ ಸ್ಟಾಫ್ (MTS) ಮತ್ತು ತೆರಿಗೆ ಸಹಾಯಕ (Tax Assistant) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 46 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ರಾಜ್ಯ, ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿರುವ ಅಭ್ಯರ್ಥಿಗಳಿಗೆ ಇದು ಸರ್ಕಾರಿ ವಲಯದಲ್ಲಿ ವೃತ್ತಿಜೀವನ ನಿರ್ಮಿಸಿಕೊಳ್ಳಲು ಸುವರ್ಣಾವಕಾಶವಾಗಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 31ರಿಂದ ಆರಂಭಗೊಂಡಿದ್ದು, ಫೆಬ್ರವರಿ 21 ಕೊನೆಯ ದಿನಾಂಕ. ಆಸಕ್ತ ಅಭ್ಯರ್ಥಿಗಳು ಗುಜರಾತ್ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ incometaxgujarat.gov.in ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ಗಮನದಿಂದ ಓದಿ.

ಈ ನೇಮಕಾತಿಯಲ್ಲಿ ತೆರಿಗೆ ಸಹಾಯಕ ಮತ್ತು ಮಲ್ಟಿ–ಟಾಸ್ಕಿಂಗ್ ಸ್ಟಾಫ್ ಎರಡು ಪ್ರಮುಖ ಹುದ್ದೆಗಳು ಸೇರಿವೆ . ಎರಡೂ ಹುದ್ದೆಗಳು ಸಂಪೂರ್ಣವಾಗಿ ಕ್ರೀಡಾ ಕೋಟಾದಡಿಯಲ್ಲಿ ಭರ್ತಿಯಾಗಲಿದ್ದು, ಕ್ರೀಡಾ ಕ್ಷೇತ್ರದಲ್ಲಿ ಪ್ರಮಾಣಿತ ಸಾಧನೆ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇಲಾಖೆಯು ಶೈಕ್ಷಣಿಕ ಅರ್ಹತೆಯ ಜೊತೆಗೆ ಕ್ರೀಡಾ ಪ್ರದರ್ಶನಕ್ಕೂ ಹೆಚ್ಚಿನ ಮಹತ್ವ ನೀಡುತ್ತದೆ.

ತೆರಿಗೆ ಸಹಾಯಕ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪದವಿ ಹೊಂದಿರಬೇಕು. ಜೊತೆಗೆ, ಡೇಟಾ ಎಂಟ್ರಿಯಲ್ಲಿ ಗಂಟೆಗೆ ಕನಿಷ್ಠ 8000 ಕೀ ಡಿಪ್ರೆಶನ್‌ಗಳ ವೇಗ ಇರಬೇಕು. ಮಲ್ಟಿ–ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರುವುದು ಸಾಕಷ್ಟು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕ್ರೀಡಾ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

ವಯೋಮಿತಿಯ ಕುರಿತು ಹೇಳುವುದಾದರೆ, ತೆರಿಗೆ ಸಹಾಯಕ ಹುದ್ದೆಗೆ 18 ರಿಂದ 27 ವರ್ಷಗಳು ಹಾಗೂ MTS ಹುದ್ದೆಗೆ 18 ರಿಂದ 25 ವರ್ಷಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ದೊರೆಯುತ್ತದೆ.

ಇದನ್ನೂ ಓದಿ: IIT ಮದ್ರಾಸ್ ಸಮ್ಮರ್ ಇಂಟರ್ನ್‌ಶಿಪ್; ತರಬೇತಿಯ ಜೊತೆಗೆ 30,000 ರೂ. ಸ್ಟೈಫಂಡ್

ವೇತನದ ದೃಷ್ಟಿಯಿಂದಲೂ ಈ ಹುದ್ದೆಗಳು ಆಕರ್ಷಕವಾಗಿವೆ. ತೆರಿಗೆ ಸಹಾಯಕ ಹುದ್ದೆಗೆ ಆಯ್ಕೆಯಾದವರಿಗೆ 25,500 ರಿಂದ 81,100 ರೂ. ವರೆಗೆ ಸಂಬಳ ದೊರೆಯುತ್ತದೆ. MTS ಹುದ್ದೆಗೆ 18,000 ರಿಂದ 56,900 ರೂ. ವರೆಗೆ ವೇತನ ನೀಡಲಾಗುತ್ತದೆ. ಇದರ ಜೊತೆಗೆ, ಇತರ ಸರ್ಕಾರಿ ಭತ್ಯೆಗಳು ಮತ್ತು ಸೌಲಭ್ಯಗಳನ್ನೂ ಪಡೆಯಬಹುದು. ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಕ್ರೀಡಾ ಸಾಧನೆ, ಪ್ರಮಾಣಪತ್ರಗಳ ಮೌಲ್ಯಮಾಪನ ಮತ್ತು ದಾಖಲೆ ಪರಿಶೀಲನೆ ಪ್ರಮುಖ ಪಾತ್ರ ವಹಿಸುತ್ತದೆ. ಲಿಖಿತ ಪರೀಕ್ಷೆಗಿಂತ ಕ್ರೀಡಾ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನೇಮಕಾತಿ ಲಿಂಕ್ ಕ್ಲಿಕ್ ಮಾಡಿ, ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಕ್ರೀಡಾ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಫಾರ್ಮ್ ಸಲ್ಲಿಸಬೇಕು. ನಂತರ ಅದರ ಪ್ರತಿಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವುದು ಒಳಿತು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಟ್‌ಫ್ಲಿಕ್ಸ್‌ನಲ್ಲಿ ದಾಖಲೆ ಬರೆದ ‘ಧುರಂಧರ್’: ‘ಅನಿಮಲ್’, ‘ಪುಷ್ಪ 2’ ರೆಕಾರ್ಡ್ ಧೂಳೀಪಟ – Kannada News | Dhurandhar Netflix Records beats Animal And Pushpa 2 in 3 days

ಕಳೆದ ವರ್ಷಾಂತ್ಯಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಧುರಂಧರ್’ ಈಗ ಒಟಿಟಿ (OTT) ಲೋಕದಲ್ಲೂ ಅಧಿಪತ್ಯ ಸಾಧಿಸಿದೆ. ಜನವರಿ 30ರಂದು ನೆಟ್‌ಫ್ಲಿಕ್ಸ್‌ನಲ್ಲಿ (Netflix) ಬಿಡುಗಡೆಯಾದ ಈ ಸಿನಿಮಾ, ಕೇವಲ ಒಂದೇ ವಾರದಲ್ಲಿ ಭಾರತದ ಅತಿದೊಡ್ಡ ಹಿಟ್ ಚಿತ್ರಗಳಾದ ‘ಅನಿಮಲ್’, ‘ಫೈಟರ್’ ಮತ್ತು ‘ಪುಷ್ಪ 2: ದಿ ರೂಲ್’ ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕಿ ಹೊಸ ಇತಿಹಾಸ ಸೃಷ್ಟಿಸಿದೆ. ಆ ಮೂಲಕ, ರಣವೀರ್ ಸಿಂಗ್ ನಟನೆಯ ಈ ಸಿನಿಮಾ ಚಿತ್ರಮಂದಿರದಲ್ಲಿ ಮಾತ್ರವಲ್ಲದೇ ಒಟಿಟಿಯಲ್ಲೂ ಸೂಪರ್ ಹಿಟ್ ಆಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ‘ಧುರಂಧರ್’ ಬರೋಬ್ಬರಿ 7.6 ಮಿಲಿಯನ್ ವೀಕ್ಷಣೆಗಳನ್ನು ಪಡೆಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಭಾರತದ ಪೋಸ್ಟ್-ಥಿಯೇಟ್ರಿಕಲ್ ಡಿಜಿಟಲ್ ಬಿಡುಗಡೆಯ ಇತಿಹಾಸದಲ್ಲೇ ಮೊದಲ ವಾರಾಂತ್ಯದಲ್ಲಿ 7 ಮಿಲಿಯನ್ ಗಡಿ ದಾಟಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಈ ಹಿಂದೆ ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ 6.2 ಮಿಲಿಯನ್ ವೀಕ್ಷಣೆಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಹೃತಿಕ್ ರೋಷನ್ ಅವರ ‘ಫೈಟರ್’ (5.9 ಮಿಲಿಯನ್) ಮತ್ತು ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ (5 ಮಿಲಿಯನ್) ನಂತರದ ಸ್ಥಾನಗಳಲ್ಲಿದ್ದವು. ಇದೀಗ ‘ಧುರಂಧರ್’ ಈ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದೆ.

ಅಂಕಿಅಂಶಗಳ ಪ್ರಕಾರ, ಏಳು ದೇಶಗಳಲ್ಲಿ ನೆಟ್‌ಫ್ಲಿಕ್ಸ್‌ನ ‘ಟಾಪ್ 10’ ಇಂಗ್ಲಿಷೇತರ ಸಿನಿಮಾಗಳ ಪಟ್ಟಿಯಲ್ಲಿ ‘ಧುರಂಧರ್’ ಮೊದಲ ಸ್ಥಾನದಲ್ಲಿದೆ. ವಿಶೇಷವೆಂದರೆ, ಪಾಕಿಸ್ತಾನದಲ್ಲಿ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ನಿಷೇಧ ಹೇರಲಾಗಿದ್ದರೂ, ಅಲ್ಲಿನ ಒಟಿಟಿ ಟ್ರೆಂಡಿಂಗ್‌ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಈವರೆಗೆ ಜಾಗತಿಕವಾಗಿ ಈ ಚಿತ್ರವು 26.1 ಮಿಲಿಯನ್ ಗಂಟೆಗಳ ವೀಕ್ಷಣೆಯನ್ನು ಕಂಡಿದೆ.

ಇದನ್ನೂ ಓದಿ: ‘ಧುರಂಧರ್’ ಸಿನಿಮಾದ 4 ಕೋಟಿ ಟಿಕೆಟ್ ಮಾರಾಟ; ಶಾರುಖ್, ಆಮಿರ್ ದಾಖಲೆ ಉಡೀಸ್

‘ಧುರಂಧರ್’ ಚಿತ್ರದ ಯಶಸ್ಸಿನ ನಂತರ ಅಭಿಮಾನಿಗಳು ಇದರ ಎರಡನೇ ಭಾಗ ‘ಧುರಂಧರ್: ದಿ ರಿವೇಂಜ್’ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈ ಸೀಕ್ವೆಲ್ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಕೂಡ ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಹಣಾಹಣಿ ನಡೆಯುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಂಡನನ್ನು ಕೋರ್ಟ್​​​​ ಕಟಕಟೆಯಲ್ಲಿ ನಿಲ್ಲಿಸಿದ ಪತ್ನಿ: ಜಡ್ಜ್ ಎದುರೇ ವಿಷಸೇವಿಸಿದ ಪತಿ; ಏನಿದು ಪ್ರಕರಣ? – Kannada News | Bagalkote: Man Attempts Suicide in Banahatti Court During Divorce Hearing

ಬಾಗಲಕೋಟೆ, ಫೆಬ್ರವರಿ 05: ದಂಪತಿ ವಿಚ್ಛೇದನ ವಿಚಾರಣೆ ವೇಳೆ ಜಡ್ಜ್ ಎದುರೇ ಗಂಡ ವಿಷಸೇವಿಸಿ ಆತ್ಮಹತ್ಯೆಗೆ (Suicide Attempt) ಯತ್ನಿಸಿದ ಘಟನೆ ಜಿಲ್ಲೆಯ ಬನಹಟ್ಟಿ ಕೋರ್ಟ್​ನಲ್ಲಿ (Banahatti Court) ನಡೆದಿದೆ. ಜಗದಾಳ ಗ್ರಾಮದ ನಿವಾಸಿ ಯಾಕೂಬ್ ದೊಡ್ಡಮನಿ(35) ಆತ್ಮಹತ್ಯೆಗೆ ಯತ್ನಿಸಿದ ಪತಿ.  ಸದ್ಯ ಯಾಕೂಬ್ ದೊಡ್ಡಮನಿಯನ್ನು ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ಇತ್ತು. ಹೀಗಾಗಿ ಬನಹಟ್ಟಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವೇಳೆ ಜಡ್ಜ್ ಮುಂದೆ ಯಾಕೂಬ್ ದೊಡ್ಡಮನಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಯಾಕೂಬ್ ದೊಡ್ಡಮನಿ ತನ್ನ ಪತ್ನಿ ಅನೈತಿಕ ಸಂಬಂಧದ ಬಗ್ಗೆ ಉಲ್ಲೇಖಿಸಿ ನ್ಯಾಯಾಲಯದ ಜಡ್ಜ್​ಗೆ ಬರೆದಿರುವ ಪತ್ರಯೊಂದು ಬಹಿರಂಗವಾಗಿದೆ.

ಸಹೋದರ ಹೇಳಿದ್ದಿಷ್ಟು

ಇನ್ನು ಘಟನೆ ಬಗ್ಗೆ ಯಾಕೂಬ್ ದೊಡ್ಡಮನಿಯ ಸಹೋದರ ಸಂಬಂಧಿ ಸದಾಶಿವ ದೊಡ್ಡಮನಿ ಮಾಧ್ಯಮದವರೊಂದಿಗೆ ಮಾತನಾಡಿ, ಗಂಡ-ಹೆಂಡತಿ ನಡುವೆ ಜಗಳವಾಗುತ್ತಿತ್ತು. ಹಿರಿಯರು ಎಷ್ಟೇ ಕಾಳಜಿ ವಹಿಸಿದರೂ ದಂಪತಿ ಒಂದಾಗಲಿಲ್ಲ. ಇಂದು ಕೋರ್ಟ್‌ನಲ್ಲಿ ಕೇಸ್‌ ನಡೆದಿತ್ತು. ಈ ವೇಳೆ‌‌ ನನ್ನ ಸಹೋದರ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಅನೈತಿಕ ಸಂಬಂಧ ಶಂಕೆ: ಪತಿಯಿಂದಲೇ ಪತ್ನಿಯ ಹತ್ಯೆ

ಅನೈತಿಕ ಸಂಬಂಧ ಶಂಕೆಯಿಂದ ಪತಿಯಿಂದಲೇ ಪತ್ನಿಯ ಹತ್ಯೆ ಮಾಡಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ನಡೆದಿದೆ. ಕತ್ತು ಹಿಸುಕಿ ಪತ್ನಿ ಮಮತಾ(32) ಕೊಲೆಗೈದ ಪತಿ ರಂಗನಾಥ್. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಬಾಲ್ಯ ವಿವಾಹವಾಗಿದ್ದಕ್ಕೆ ಪೋಕ್ಸೊ ಕೇಸ್: ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ಪತ್ನಿ ಕೊಂದು ಪೊಲೀಸ್ ಠಾಣೆಗೆ ಬಂದು ರಂಗನಾಥ್ ಶರಣಾಗಿದ್ದಾರೆ. ರಂಗನಾಥ್​ ಮತ್ತು ಮಮತಾ 12 ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಬಸ್​ ಡಿಕ್ಕಿ: ಬೈಕ್​ ಸವಾರ ಸಾವು

ಖಾಸಗಿ ಬಸ್​ ಡಿಕ್ಕಿಯಾಗಿ ಬೈಕ್​ ಸವಾರ ಉಮೇಶ್(28) ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಹೆದ್ದಾರಿ ಬಳಿ ನಡೆದಿದೆ. ಮೃತ ಉಮೇಶ್ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಗ್ರಾಮದ ನಿವಾಸಿ. ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:26 pm, Thu, 5 February 26

Source link

ಕಾಂಗ್ರೆಸ್ ಏನೋ ಪ್ಲಾನ್ ಮಾಡಿದೆಯೆಂದು ನಾನೇ ಪ್ರಧಾನಿ ಮೋದಿಗೆ ಗೈರಾಗಲು ಸೂಚಿಸಿದ್ದೆ; ಸ್ಪೀಕರ್ ಓಂ ಬಿರ್ಲಾ – Kannada News | I Advised PM Modi Not To Come Lok Sabha Congress MPs Planned Something Om Birla On Speech Row

ನವದೆಹಲಿ, ಫೆಬ್ರವರಿ 5: “ಕಾಂಗ್ರೆಸ್ ಸಂಸದರು ಅಧಿವೇಶನದಲ್ಲಿ ಏನೋ ಮಾಡಲು ಪ್ಲಾನ್ ಮಾಡಿದ್ದರು ಎಂಬ ಮಾಹಿತಿ ನನಗೆ ಸಿಕ್ಕಿತ್ತು. ಹೀಗಾಗಿಯೇ ನಿನ್ನೆಯ ಅಧಿವೇಶನಕ್ಕೆ ಬಾರದಂತೆ ಮತ್ತು ಕಲಾಪವನ್ನು ಉದ್ದೇಶಿಸಿ ಭಾಷಣ ಮಾಡದಂತೆ ನಾನೇ ಪ್ರಧಾನಿ ಮೋದಿಯವರಿಗೆ ಸಲಹೆ ನೀಡಿದ್ದೆ” ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೂ ಮುನ್ನ ಲೋಕಸಭಾ ಅಧಿವೇಶನವನ್ನು (Lok Sabha Session) ಮುಂದೂಡಲಾಗಿತ್ತು. ಇದಕ್ಕೆ ಕಾರಣವಾದ ಗದ್ದಲದ ಬಗ್ಗೆ ಬೇಸರ ವ್ಯಕ್ತಪಡಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ವಿರೋಧ ಪಕ್ಷದ ಸದಸ್ಯರು ಪ್ರಧಾನಮಂತ್ರಿಗಳ ಕುರ್ಚಿಯನ್ನು ಸುತ್ತುವರೆದಿದ್ದರಿಂದ ಭದ್ರತಾ ಕಾರಣದಿಂದ ಪ್ರಧಾನಿ ಮೋದಿಯವರಿಗೆ ಲೋಕಸಭೆಗೆ ಬರದಂತೆ ನಾನೇ ಸಲಹೆ ನೀಡಿದ್ದೆ ಎಂದು ಹೇಳಿದ್ದಾರೆ.

“ಲೋಕಸಭೆಯ ಕೊಠಡಿಯೊಳಗೆ ಕೆಲವು ವಿರೋಧ ಪಕ್ಷದ ಸದಸ್ಯರು “ದುರ್ವರ್ತನೆ” ತೋರಿದ್ದಾರೆ. ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷದ ಸದಸ್ಯರು ಪ್ರಧಾನಿ ಭಾಷಣದ ಸಮಯದಲ್ಲಿ ಅವ್ಯವಸ್ಥೆ ಸೃಷ್ಟಿಸಲು ಪ್ರಯತ್ನಿಸಬಹುದು ಎಂಬ ಪೂರ್ವ ಮಾಹಿತಿ ನನಗೆ ಸಿಕ್ಕಿತ್ತು. ಇತಿಹಾಸದಲ್ಲಿ ಎಂದಿಗೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸಂಸತ್ತಿನ ಸದನಕ್ಕೆ ತಂದಿರಲಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಕೆಲವು ಸದಸ್ಯರು ಪ್ರಧಾನಿಯವರ ಪೀಠದ ಬಳಿಗೆ ಹೋಗಿ ಗದ್ದಲ ನಡೆಸಿದರು. ಇದು ಅನಿರೀಕ್ಷಿತ ದಾಳಿಗೂ ಕಾರಣವಾಗಬಹುದು ಎಂಬ ಮಾಹಿತಿ ನನಗೆ ಸಿಕ್ಕಿತ್ತು. ಅಂತಹ ಘಟನೆ ಸಂಭವಿಸಿದ್ದರೆ ಅದು ರಾಷ್ಟ್ರದ ಘನತೆಗೆ ತೀವ್ರ ಹಾನಿಯನ್ನುಂಟು ಮಾಡುತ್ತಿತ್ತು. ಅದಕ್ಕಾಗಿಯೇ ನಾನು ಪ್ರಧಾನಿಯನ್ನು ಸಂಸತ್ತಿಗೆ ಬರದಂತೆ ಒತ್ತಾಯಿಸಿದೆ. ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಕಲಾಪವನ್ನು ಮುಂದೂಡಲಾಯಿತು. ನಿನ್ನೆ ನಡೆದದ್ದು ಸಂಸತ್ತಿನ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ” ಎಂದು ಲೋಕಸಭಾ ಸ್ಪೀಕರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Parliament Session: ಇಂದು ಪ್ರಧಾನಿ ಮೋದಿ ಭಾಷಣ ರದ್ದು; ವಿಪಕ್ಷಗಳ ಪ್ರತಿಭಟನೆಯಿಂದ ಲೋಕಸಭಾ ಕಲಾಪ ನಾಳೆಗೆ ಮುಂದೂಡಿಕೆ

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಅಪ್ರಕಟಿತ ಪುಸ್ತಕದ ಆಯ್ದ ಭಾಗಗಳನ್ನು ಓದದಂತೆ ನಿರ್ಬಂಧಿಸಿದ ನಂತರ ಬುಧವಾರ ಲೋಕಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಬಿಜೆಪಿಯ ಹಿರಿಯ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ರಾಹುಲ್ ಗಾಂಧಿಯ ಈ ಕ್ರಮವನ್ನು ಬಲವಾಗಿ ವಿರೋಧಿಸಿದರು.

ಬಳಿಕ ಮಧ್ಯಾಹ್ನ 2 ಗಂಟೆಗೆ ಸದನ ಮತ್ತೆ ಸೇರಿದಾಗ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಎಡ್ವಿನಾ ಮತ್ತು ನೆಹರು ಮತ್ತು ದಿ ಮಿತ್ರೋಖಿನ್ ಆರ್ಕೈವ್‌ನಂತಹ ಪುಸ್ತಕಗಳನ್ನು ಉಲ್ಲೇಖಿಸಿ, ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದರು. ಸದನದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹೊರತುಪಡಿಸಿ ಯಾವುದೇ ಪುಸ್ತಕ, ಪತ್ರಿಕೆ ಅಥವಾ ಪತ್ರವನ್ನು ಸಂಸದರು ಓದುವಂತಿಲ್ಲ. ರಾಹುಲ್ ಗಾಂಧಿ ನರವಾಣೆ ಅವರ ಪುಸ್ತಕವನ್ನು ಉಲ್ಲೇಖಿಸುವುದನ್ನು ತಡೆಯಲು ಇದೇ ನಿಯಮವನ್ನು ಅನ್ವಯಿಸಲಾಗಿತ್ತು ಎಂದು ಸದನದಲ್ಲಿ ತಿಳಿಸಲಾಯಿತು.

ಇದನ್ನೂ ಓದಿ: ಮಹಿಳಾ ಸಂಸದರನ್ನು ಛೂ ಬಿಟ್ಟ ಕಾಂಗ್ರೆಸ್; ಇಂದು ಸಂಸತ್​​ನಲ್ಲಿ ಮೋದಿ ಭಾಷಣ ಮಾಡದಿರಲು ಕಾರಣವೇನು?

ಆದರೂ ನಿಶಿಕಾಂತ್ ದುಬೆ ಅವರ ಹೇಳಿಕೆಗಳು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಸಂಸದರಿಂದ ಪ್ರತಿಭಟನೆಗೆ ಕಾರಣವಾಯಿತು. ಅವರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಬಳಿಕ ಸಂಜೆ 5 ಗಂಟೆಯವರೆಗೆ ಕಲಾಪ ಮುಂದೂಡಬೇಕಾಯಿತು. ಕಲಾಪ ಮುಂದೂಡಿಕೆಯ ನಂತರ ಕಾಂಗ್ರೆಸ್ ಸಂಸದರು ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ, ದುಬೆ ಅವರಿಗೆ ಪುಸ್ತಕಗಳಿಂದ ಉಲ್ಲೇಖಿಸಲು ಅವಕಾಶ ನೀಡಿದ್ದನ್ನು ಆಕ್ಷೇಪಿಸಿದರು. ಅದೇ ನಿಯಮವನ್ನು ಉಲ್ಲೇಖಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪುಸ್ತಕವನ್ನು ಓದಲು ಅವಕಾಶವನ್ನು ನಿರಾಕರಿಸಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿದಂತೆ ನಿಶಿಕಾಂತ್ ದುಬೆ ಅವರನ್ನು ಕೂಡ ಅಮಾನತುಗೊಳಿಸುವಂತೆ ಒತ್ತಾಯಿಸಿದರು.

ಆದರೆ, ಸ್ಪೀಕರ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿಲ್ಲ. ಹೀಗಾಗಿ, ಸಂಜೆ 5 ಗಂಟೆಗೆ ಸದನ ಮತ್ತೆ ಸೇರಿದಾಗ ಪ್ರತಿಭಟನೆಗಳು ತೀವ್ರಗೊಂಡವು. ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ನೇತೃತ್ವದಲ್ಲಿ ಮಹಿಳಾ ಸಂಸದರು ಪ್ರತಿಭಟನೆಯ ವೇಳೆ ಪ್ರಧಾನಿಯವರ ಕುರ್ಚಿಯ ಕಡೆಗೆ ತೆರಳಿ ಮುತ್ತಿಗೆ ಹಾಕಿದರು. ಯಾವುದೇ ಕಾರಣಕ್ಕೂ ಮೋದಿಗೆ ಭಾಷಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಹೀಗಾಗಿ, 1 ದಿನದ ಕಲಾಪವನ್ನು ಮುಂದೂಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link