Category Archives: Blog

Your blog category

ರಿಚಾ ಹೋರಾಟ ವ್ಯರ್ಥ; 3 ಎಸೆತಗಳಲ್ಲಿ 6 ರನ್ ಬಾರಿಸಿದೆ ಸೋತ ಟೀಂ ಇಂಡಿಯಾ – Kannada News

2026 ರ ಮಹಿಳಾ ಟಿ20 ವಿಶ್ವಕಪ್ ( Women’s T20 World Cup 2026) ಇನ್ನೇರಡು ದಿನಗಳಲ್ಲಿ ಆರಂಭವಾಗಲಿದೆ. ಅದರ ತಯಾರಿಯಾಗಿ ಎಲ್ಲಾ ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡುತ್ತಿವೆ. ಅದರಂತೆ ಟೀಂ ಇಂಡಿಯಾ ಕೂಡ ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧ (England vs India Women Warm-up) ಗೆಲುವಿನಂಚಲ್ಲಿ ಎಡವಿ 5 ರನ್​ಗಳಿಂದ ಸೋಲನ್ನಪ್ಪಿತು. ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 171 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೂಡ ಗೆಲುವಿಗಾಗಿ ಹೋರಾಟ ನೀಡಿತು. ಆದರೆ ಕೊನೆಯ ಓವರ್​ನಲ್ಲಿ 3 ಎಸೆತಗಳಲ್ಲಿ 6 ರನ್ ಬಾರಿಸಲು ವಿಫಲವಾಗಿ ಸೋಲಿಗೆ ಕೊರಳೊಡ್ಡಬೇಕಾಯಿತು.

171 ರನ್ ಟಾರ್ಗೆಟ್ ನೀಡಿದ ಇಂಗ್ಲೆಂಡ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 171 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ತಂಡದ ಪರ ಆರಂಭಿಕ ಆಟಗಾರ್ತಿ ಆಮಿ ಜೋನ್ಸ್ ಅದ್ಭುತ 64 ರನ್​ಗಳ ಇನ್ನಿಂಗ್ಸ್ ಆಡಿದರೆ, ನಾಯಕಿ ನ್ಯಾಟ್ ಸಿವರ್-ಬ್ರಂಟ್ 57 ರನ್​ಗಳ ಕಾಣಿಕೆ ನೀಡಿದರು. ಉಳಿದಂತೆ ಡ್ಯಾನಿ ಗಿಬ್ಸನ್ 30 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ ಪರ ಶ್ರೇಯಾಂಕ ಪಾಟೀಲ್ ಎರಡು ವಿಕೆಟ್ ಪಡೆದರೆ, ಶಫಾಲಿ ವರ್ಮಾ, ರೇಣುಕಾ ಸಿಂಗ್, ರಾಧಾ ಯಾದವ್ ಮತ್ತು ಶ್ರೀ ಚರಣಿ ತಲಾ ಒಂದು ವಿಕೆಟ್ ಪಡೆದರು.

ರಿಚಾ ಘೋಷ್ ಹೋರಾಟ ವ್ಯರ್ಥ

ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕಳಪೆ ಆರಂಭ ನೀಡಿತು. ಉಪನಾಯಕಿ ಸ್ಮೃತಿ ಮಂಧಾನ ಕೇವಲ 1 ರನ್‌ಗೆ ಔಟಾದರು. ಶಫಾಲಿ ವರ್ಮಾ ಕೂಡ 13 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಯಸ್ತಿಕಾ ಭಾಟಿಯಾ (15), ಹರ್ಮನ್‌ಪ್ರೀತ್ ಕೌರ್ (17), ಮತ್ತು ಭಾರತಿ ಫುಲ್ಮಾಲಿ (18) ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಆದರೆ ಒಂದು ತುದಿಯಲ್ಲಿ ಹೋರಾಟದ ಇನ್ನಿಂಗ್ಸ್ ಕಟ್ಟಿದ ರಿಚಾ ಘೋಷ್ 36 ಎಸೆತಗಳಲ್ಲಿ 68 ರನ್‌ ಬಾರಿಸಿದರು. ಈ ಇನ್ನಿಂಗ್ಸ್‌ನಲ್ಲಿ 9 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳು ಸೇರಿದ್ದವು.

Womens T20 World Cup 2026: ಮಹಿಳಾ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ

3 ಎಸೆತಗಳಲ್ಲಿ 6 ರನ್ ಬೇಕಿತ್ತು

ರಿಚಾ ಘೋಷ್ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರಾದರೂ ಕೊನೆಯ ಓವರ್​ನ 4ನೇ ಎಸೆತದಲ್ಲಿ ಅವರ ವಿಕೆಟ್ ಪತನದೊಂದಿಗೆ ತಂಡಕ್ಕೆ ಸೋಲು ಖಚಿತವಾಯಿತು. ವಾಸ್ತವವಾಗಿ 20ನೇ ಓವರ್​ನ ಕೊನೆಯ 3 ಎಸೆತಗಳಲ್ಲಿ ತಂಡದ ಗೆಲುವಿಗೆ 6 ರನ್‌ಗಳು ಬೇಕಾಗಿದ್ದವು. ಆದರೆ 4ನೇ ಎಸೆತದಲ್ಲಿ ರಿಚಾ ಔಟಾದರೆ, ಆ ನಂತರದ ಎಸೆತದಲ್ಲಿ ರೇಣುಕಾ ಸಿಂಗ್ ಔಟಾಗುವ ಮೂಲಕ ತಂಡ ಆಲೌಟ್ ಆಯಿತು. ಹೀಗಾಗಿ ಹರ್ಮನ್ ಪಡೆ 5 ರನ್‌ಗಳಿಂದ ಪಂದ್ಯವನ್ನು ಸೋತಿತು. ಅಂತಿಮವಾಗಿ ಟೀಂ ಇಂಡಿಯಾ 19.5 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟ್ ಆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉತ್ತಮ ನಿದ್ರೆ ಪಡೆಯಲು ಬಯಸಿದರೆ ಬೆಡ್‌ರೂಮ್‌ನಲ್ಲಿ ಈ ಗಿಡಗಳನ್ನಿಡಿ – Kannada News

ಇಂದಿನ ವೇಗದ ಜೀವನಶೈಲಿಯಲ್ಲಿ ಒತ್ತಡ, ಕೆಲಸದ ಹೊರೆ ಮತ್ತು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳ ಅತಿಯಾದ ಬಳಕೆಯಿಂದಾಗಿ  ಹೆಚ್ಚಿನವರು ನಿದ್ರಾಹಿನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳಪೆ ಗುಣಮಟ್ಟದ ನಿದ್ರೆಯು (sleep) ಹಲವು ಆರೋಗ್ಯ ಸಮಸ್ಯೆಗಲು ಕಾರಣವಾಗುತ್ತದೆ. ಹೀಗಿರುವಾಗ ನೀವು ಕೂಡ ನಿದ್ರಾಹೀನತೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನೈಸರ್ಗಿಕವಾಗಿ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಈ ಒಂದಷ್ಟು ಗಿಡಗಳನ್ನು ಬೆಡ್‌ರೂಮ್‌ನಲ್ಲಿ ಇಡಿ. ಈ ಸಸ್ಯಗಳ ಸುವಾಸನೆ ಮತ್ತು ಅವು ಸುತ್ತಮುತ್ತಲಿನ ಪ್ರದೇಶಗಳಿಗೆ ನೀಡುವ ತಾಜಾತನವು ಮನಸ್ಸನ್ನು ಶಾಂತಗೊಳಿಸಲು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾದ ಆ ಗಿಡಗಳು ಯಾವುದೆಂದು ನೋಡೋಣ ಬನ್ನಿ.

ಉತ್ತಮ ನಿದ್ರೆಗಾಗಿ ಬೆಡ್‌ರೂಮ್‌ನಲ್ಲಿ ಈ ಗಿಡಗಳನ್ನಿಡಿ:

ಮಲ್ಲಿಗೆ ಗಿಡ: ಉತ್ತಮ ನಿದ್ರೆಯನ್ನು ಪಡೆಯಲು ಬಯಸಿದರೆ ನಿವು ಮಲ್ಲಿಗೆ ಗಿಡವನ್ನು ಬೆಡ್‌ರೂಮ್‌ನಲ್ಲಿ ಇಡಬಹುದು. ಮಲ್ಲಿಗೆಯ ಸುವಾಸನೆಯು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ವಿಶೇಷವಾಗಿ ರಾತ್ರಿಯಲ್ಲಿ, ಮಲ್ಲಿಗೆಯ ಸುವಾಸನೆಯು ಕೋಣೆಯಾದ್ಯಂತ ಹರಡುತ್ತದೆ ಮತ್ತು ನೀವು ಬೇಗನೆ ನಿದ್ರಿಸಲು ಸಹಾಯ ಮಾಡುತ್ತದೆ. ಈ ಗಿಡವನ್ನು ಮಲಗುವ ಕೋಣೆಯ ಕಿಟಕಿಯ ಬಳಿ ಇಡುವುದು ಉತ್ತಮ.

ಲ್ಯಾವೆಂಡರ್ ಗಿಡ: ಲ್ಯಾವೆಂಡರ್‌ನ ಪರಿಮಳವು ದೇಹವನ್ನು ವಿಶ್ರಾಂತಿ ಮಾಡಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೆ ಲ್ಯಾವೆಂಡರ್ ಅನ್ನು ನಿದ್ರೆಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವಾಗಿ ಶಿಫಾರಸು ಮಾಡಲಾಗುತ್ತದೆ. ನಿಮ್ಮ ಹಾಸಿಗೆಯ ಬಳಿ ಮೇಜಿನ ಮೇಲೆ ಸಣ್ಣ ಲ್ಯಾವೆಂಡರ್ ಸಸ್ಯವನ್ನು ಇರಿಸಿದರೆ, ಅದರ ಸುವಾಸನೆಯು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನೀವು ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:  ಸೊಳ್ಳೆಯ ಕಾಟದಿಂದ ಪಾರಾಗಲು ಮನೆಯಲ್ಲಿ ಗಿಡಗಳನ್ನು ನೆಡುವುದು ಉತ್ತಮ

ರೋಸ್ಮರಿ ಗಿಡ: ರೋಸ್ಮರಿ ವಿಶಿಷ್ಟ ಪರಿಮಳದಿಂದ ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುವ ಸಸ್ಯವಾಗಿದೆ. ಇದು ಮಲಗುವ ಕೋಣೆಯಲ್ಲಿ ಇಡಲು ಸೂಕ್ತವಾದ ಸಸ್ಯವಾಗಿದೆ.  ಇದಕ್ಕೆ ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ. ರಾತ್ರಿಯಲ್ಲಿ ರೋಸ್ಮರಿಯ ಪರಿಮಳವು ನಿಮಗೆ ಶಾಂತಿಯುತವಾಗಿ ಮಲಗಲು ಸಹಾಯ ಮಾಡುತ್ತದೆ ಮಾತ್ರವಲ್ಲದೆ ಬೆಳಿಗ್ಗೆ ಉಲ್ಲಾಸದಿಂದ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ.

ಅಲೋ ವೆರಾ: ಅಲೋವೆರಾ ಗಿಡಗಳು ಚಿಕ್ಕದಾಗಿರುತ್ತವೆ ಮತ್ತು ನಿಮ್ಮ ಕೋಣೆಯ ಯಾವುದೇ ಮೂಲೆಯಲ್ಲಿ ಸುಲಭವಾಗಿ ಇಡಬಹುದು. ಅಲೋವೆರಾ ರಾತ್ರಿಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುವುದರಿಂದ ಅವುಗಳನ್ನು ಬೆಡ್‌ರೂಮ್‌ನಲ್ಲಿ ಇಡುವುದರಿಂದ ನೀವು ಚೆನ್ನಾಗಿ ನಿದ್ರೆ ಮಾಡಬಹುದು, ಇದು ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:17 pm, Wed, 10 June 26

Source link

ನ್ಯೂಸ್ ಪೇಪರ್​​ಗಳಲ್ಲಿ ಕಟ್ಟಿಕೊಟ್ಟ ತಿಂಡಿ ತಿನ್ನುತ್ತೀರಾ? ನಿಮ್ಮ ಇಷ್ಟದ ಆಹಾರ ವಿಷವಾದೀತು ಎಚ್ಚರ! – Kannada News

ನವದೆಹಲಿ, ಜೂನ್ 10: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಆಹಾರ ಪದಾರ್ಥಗಳನ್ನು ಅದರಲ್ಲೂ ವಿಶೇಷವಾಗಿ ಕರಿದ ತಿಂಡಿಗಳನ್ನು ದಿನಪತ್ರಿಕೆಗಳಲ್ಲಿ ಸುತ್ತಿ ಕೊಡುವುದರ ವಿರುದ್ಧ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದೆ. ನಮ್ಮ ನೆಚ್ಚಿನ ಸ್ಟ್ರೀಟ್ ಫುಡ್‌ಗಳಾದ ಬೋಂಡಾ, ಬಜ್ಜಿ, ವಡೆ, ಪಕೋಡ, ಸಮೋಸಾಗಳನ್ನು ಪೇಪರ್​​ಗಳಲ್ಲಿ ಹಾಕಿಕೊಂಡು ತಿನ್ನುವುದರಿಂದ ಅದು ನಮ್ಮ ಆರೋಗ್ಯಕ್ಕೆ ಹೇಗೆ ಮಾರಕವಾಗಬಹುದು ಎಂಬ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಆ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

ನಮ್ಮ ದೇಶದಲ್ಲಿ ಹೋಟೆಲ್‌ಗಳು, ಬೇಕರಿಗಳು ಮತ್ತು ಬೀದಿಬದಿಯ ವ್ಯಾಪಾರಿಗಳು ಕರಿದ ತಿಂಡಿಗಳಿಂದ ಎಣ್ಣೆಯನ್ನು ಹೀರಿಕೊಳ್ಳಲು ಅಥವಾ ಗ್ರಾಹಕರಿಗೆ ಪ್ಯಾಕ್ ಮಾಡಿಕೊಡಲು ದಿನಪತ್ರಿಕೆಗಳನ್ನು ಬಳಸುವುದು ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಇದು ನೇರವಾಗಿ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು FSSAI ಆತಂಕ ವ್ಯಕ್ತಪಡಿಸಿದೆ.

ಮುಂಬೈನ ಜನಪ್ರಿಯ ವಡಾ ಪಾವ್ ವ್ಯಾಪಾರಿಯೊಬ್ಬರ ವಿರುದ್ಧ ಇತ್ತೀಚೆಗೆ ಹೊರಡಿಸಲಾದ ಎಚ್ಚರಿಕೆಯ ಬೆನ್ನಲ್ಲೇ ಈ ಆದೇಶ ಬಂದಿದೆ. ದಿನಪತ್ರಿಕೆಯಲ್ಲಿ ಆಹಾರ ಪ್ಯಾಕ್ ಮಾಡುವ ಈ ಮೇಲ್ನೋಟಕ್ಕೆ ಹಾನಿಕಾರಕವಲ್ಲದ ಅಭ್ಯಾಸವು ಅನೇಕ ಜನರ ಆರೋಗ್ಯವನ್ನು ಹೇಗೆ ಅಪಾಯಕ್ಕೆ ದೂಡಬಹುದು ಎಂಬುದಕ್ಕೆ ಇದು ನೆನಪಿಸುವಂತಿದೆ. ತಜ್ಞರ ಪ್ರಕಾರ, ಆಹಾರವು ದಿನಪತ್ರಿಕೆಯ ಕಾಗದದೊಂದಿಗೆ ನೇರ ಸಂಪರ್ಕಕ್ಕೆ ಬಂದಾಗ, ಅದರಲ್ಲಿರುವ ಹಾನಿಕಾರಕ ರಾಸಾಯನಿಕಗಳು ಮತ್ತು ರೋಗಕಾರಕ ಸೂಕ್ಷ್ಮಜೀವಾಣುಗಳು ನೇರವಾಗಿ ಆ ಕಾಗದದಲ್ಲಿ ಸುತ್ತಲಾದ ಆಹಾರಕ್ಕೆ ವರ್ಗಾವಣೆಗೊಳ್ಳಬಹುದು.

ಇಂಕ್:

ದಿನಪತ್ರಿಕೆಗಳನ್ನು ಮುದ್ರಿಸಲು ಬಳಸುವ ಇಂಕ್ ಅಥವಾ ಶಾಯಿಯಲ್ಲಿ ಪ್ರಮುಖವಾಗಿ ಸೀಸ ಮತ್ತು ಕ್ಯಾಡ್ಮಿಯಮ್ ನಂತಹ ಭಾರಲೋಹಗಳು ಇರುತ್ತವೆ. ಬಿಸಿಬಿಸಿಯಾದ ಮತ್ತು ಎಣ್ಣೆಯುಕ್ತ ಆಹಾರವನ್ನು ಪತ್ರಿಕೆಯ ಮೇಲಿಟ್ಟಾಗ, ಆ ಬಿಸಿಗೆ ಪತ್ರಿಕೆಯ ಇಂಕ್ ಕರಗಿ ಆಹಾರ ಪದಾರ್ಥಕ್ಕೆ ಅಂಟಿಕೊಳ್ಳುತ್ತದೆ. ಇದು ನಮ್ಮ ಆರೋಗ್ಯಕ್ಕೆ ಅಪಾಯಕಾರಿ.

ಇದನ್ನೂ ಓದಿ: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್​ ಬರಲ್ಲ: FSSAI ಸ್ಪಷ್ಟನೆ

ಬಯೋ-ಆಕ್ಟಿವ್ ಸಂಯುಕ್ತಗಳು:

ಶಾಯಿಯಲ್ಲಿ ಫಾರಂಹೈಡ್ ಹಾಗೂ ಫ್ತಾಲೇಟ್‌ಗಳಂತಹ ವಿಷಕಾರಿ ರಾಸಾಯನಿಕಗಳಿರುತ್ತವೆ. ಇವು ಆಹಾರದ ಮೂಲಕ ನಮ್ಮ ಹೊಟ್ಟೆ ಸೇರಿದಾಗ ದೇಹದ ಹಾರ್ಮೋನ್‌ಗಳ ಸಮತೋಲನವನ್ನು ಏರುಪೇರು ಮಾಡುತ್ತವೆ.

ವಿಷಕಾರಿ ಮರುಬಳಕೆಯ ಕಾಗದ:

ದಿನಪತ್ರಿಕೆಗಳನ್ನು ತಯಾರಿಸಲು ಬಳಸುವ ಕಾಗದ ಮತ್ತು ಬಣ್ಣಗಳು ಮರುಬಳಕೆಯ ಪ್ರಕ್ರಿಯೆಗೆ ಒಳಪಟ್ಟಿರುತ್ತವೆ. ಇದರಲ್ಲಿ ಡಯಾಕ್ಸಿನ್ ಮತ್ತು ಇತರ ಹಾನಿಕಾರಕ ರಾಸಾಯನಿಕಗಳು ಇರುತ್ತವೆ. ಇದು ಆರೋಗ್ಯವನ್ನು ಹದಗೆಡಿಸಬಹುದು.

ದಿನಪತ್ರಿಕೆಯಲ್ಲಿ ಸುತ್ತಿದ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಈ ಕೆಳಗಿನ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕ್ಯಾನ್ಸರ್ ಅಪಾಯ:

ಮುದ್ರಣ ಶಾಯಿಯಲ್ಲಿರುವ ರಾಸಾಯನಿಕಗಳು ಕಾರ್ಸಿನೋಜೆನಿಕ್ (ಕ್ಯಾನ್ಸರ್ ಕಾರಕ) ಗುಣಗಳನ್ನು ಹೊಂದಿದ್ದು, ಜೀರ್ಣಾಂಗವ್ಯೂಹ ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಅಂಗಾಂಗ ವೈಫಲ್ಯ:

ಶಾಯಿಯಲ್ಲಿರುವ ‘ಸೀಸ’ ನಮ್ಮ ರಕ್ತವನ್ನು ಸೇರಿದರೆ ಅದು ಮೂತ್ರಪಿಂಡಗಳು, ಲಿವರ್ ಮತ್ತು ಮೆದುಳಿನ ಕಾರ್ಯನಿರ್ವಹಣೆಗೆ ತೀವ್ರ ಹಾನಿ ಉಂಟುಮಾಡುತ್ತದೆ. ಮಕ್ಕಳಲ್ಲಿ ಇದು ಬುದ್ಧಿಮತ್ತೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಜೀರ್ಣಕ್ರಿಯೆಯ ಸಮಸ್ಯೆ:

ಈ ರಾಸಾಯನಿಕಗಳು ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವುದಲ್ಲದೆ, ಹೊಟ್ಟೆಯ ಅಲ್ಸರ್ ಹಾಗೂ ತೀವ್ರ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತವೆ.

ಸಾರ್ವಜನಿಕರು ಮತ್ತು ವ್ಯಾಪಾರಿಗಳಿಗೆ FSSAI ಸೂಚನೆಗಳೇನು?:

ಪರ್ಯಾಯ ವ್ಯವಸ್ಥೆ ಬಳಸಿ:

ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ಅಥವಾ ಎಣ್ಣೆ ಒಣಗಿಸಲು ದಿನಪತ್ರಿಕೆಗಳ ಬದಲಿಗೆ ಫುಡ್ ಗ್ರೇಡ್ ಪೇಪರ್, ಅಲ್ಯೂಮಿನಿಯಂ ಫಾಯಿಲ್ ಅಥವಾ ಬಾಳೆ ಎಲೆಗಳನ್ನು ಬಳಸಬೇಕು.

ಬಟ್ಟೆ ಅಥವಾ ಟಿಶ್ಯೂ ಬಳಸಿ:

ಮನೆಯಲ್ಲಿ ಕರಿದ ತಿಂಡಿಗಳ ಎಣ್ಣೆ ತೆಗೆಯಲು ಕಿಚನ್ ಟಿಶ್ಯೂ ಪೇಪರ್‌ಗಳನ್ನು ಬಳಸಿ, ಯಾವುದೇ ಕಾರಣಕ್ಕೂ ಹಳೆಯ ಪತ್ರಿಕೆಗಳನ್ನು ಬಳಸಬೇಡಿ.

ಜಾಗ್ರತೆ ವಹಿಸಿ:

ಗ್ರಾಹಕರು ಹೋಟೆಲ್ ಅಥವಾ ಬೀದಿಬದಿಯಲ್ಲಿ ದಿನಪತ್ರಿಕೆಯಲ್ಲಿ ಆಹಾರ ನೀಡುವುದನ್ನು ಕಂಡರೆ ಅದನ್ನು ನಿರಾಕರಿಸಬೇಕು. “ಆಹಾರವು ಎಷ್ಟು ಪೌಷ್ಟಿಕವಾಗಿದೆ ಮತ್ತು ರುಚಿಯಾಗಿದೆ ಎಂಬುದು ಎಷ್ಟು ಮುಖ್ಯವೋ, ಅದನ್ನು ಯಾವ ವಸ್ತುವಿನಲ್ಲಿಟ್ಟು ಗ್ರಾಹಕರಿಗೆ ನೀಡಲಾಗುತ್ತಿದೆ ಎಂಬುದೂ ಅಷ್ಟೇ ಮುಖ್ಯ. ದಿನಪತ್ರಿಕೆಯು ಓದಲು ಮಾತ್ರ, ಆಹಾರ ಪ್ಯಾಕ್ ಮಾಡಲು ಅಲ್ಲ ಎಂದು FSSAI ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಗರಗಳಲ್ಲಿ ದಿನದಿಂದ ದಿನಕ್ಕೆ ಸೆಕೆ ಹೆಚ್ಚಾಗಿ ಆರೋಗ್ಯ ಹದಗೆಡುತ್ತಿರುವುದಕ್ಕೆ ಕಾರಣವೇನು? – Kannada News

ಬೆಂಗಳೂರು ಒಂದು ಕಾಲದಲ್ಲಿ ತನ್ನ ತಂಪಾದ ವಾತಾವರಣದಿಂದಲೇ ಎಲ್ಲರನ್ನು ಸೆಳೆಯುತ್ತಿತ್ತು, ಆದರೆ ಕಳೆದ ಕೆಲ ವರ್ಷಗಳಿಂದ ಇಲ್ಲಿರುವವರು ಉಷ್ಣತೆಯ ವಾತಾವರಣದಿಂದ ಬಳಲುತ್ತಿದ್ದಾರೆ ಜೊತೆಗೆ ಸೆಕೆಯ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಈಗ ನಿರ್ಜಲೀಕರಣ, ಶಾಖದಿಂದ ಬಳಲಿಕೆ ಮತ್ತು ಹೀಟ್ ಸ್ಟ್ರೋಕ್ (Heat stroke) ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು ವೃದ್ಧರು, ಮಕ್ಕಳು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಇದು ಹೆಚ್ಚಾಗಿದೆ. ಹಾಗಾದರೆ ಬೆಂಗಳೂರು ಅಥವಾ ನಗರದ ಜೀವನಶೈಲಿಯಲ್ಲಿ ಈ ರೀತಿ ಬದಲಾವಣೆ ಕಂಡುಬಂದಿರುವುದಕ್ಕೆ ಕಾರಣವೇನು, ಈ ರೀತಿಯ ಸಮಸ್ಯೆ ತಡೆಗಟ್ಟಲು ಏನು ಮಾಡಬಹುದು ಎಂಬುದರ ಕುರಿತು ಬೆಂಗಳೂರು ಅಪೋಲೋ ಆಸ್ಪತ್ರೆಯ ಚರ್ಮರೋಗ ತಜ್ಞರಾಗಿರುವ ಡಾ. ಸುರೇಂದ್ರ ವಿಎಚ್‌ಹೆಚ್ (Dr. Surendra V H H) ಮಾಹಿತಿ ಹಂಚಿಕೊಂಡಿದ್ದಾರೆ.

ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?

ಡಾ. ಸುರೇಂದ್ರ ಅವರು ಹೇಳುವ ಪ್ರಕಾರ ಈ ಬದಲಾವಣೆಯ ಹಿಂದಿರುವ ಪ್ರಮುಖ ಕಾರಣಗಳಲ್ಲಿ ಒಂದೆಂದರೆ ನಗರದ ಜೀವನಶೈಲಿಗಳು ವಿಕಾಸಗೊಂಡಿರುವ ರೀತಿ. ಹೊರಗಡೆ ದೀರ್ಘ ಅವಧಿಯ ಕೆಲಸ, ಹೆಚ್ಚಿನ ಟ್ರಾಫಿಕ್ ಒತ್ತಡ, ಡಿಹೈಡ್ರೇಷನ್, ಹೆಚ್ಚಿನ ಒತ್ತಡ ಮತ್ತು ಉಷ್ಣತೆ ಹೀರಿಕೊಳ್ಳುವ ಕಾಂಕ್ರೀಟ್ ಪರಿಸರಗಳಲ್ಲಿ ಹೆಚ್ಚಾಗಿ ವಾಸಮಾಡುವುದರಿಂದ ನಗರದ ನಿವಾಸಿಗಳಿಗೆ ಹೆಚ್ಚು ಸಂಕಷ್ಟ ಎದುರಾಗಿದೆ. ಅದರಲ್ಲಿಯೂ ಬಹಳಷ್ಟು ಜನ ಈ ರೀತಿ ಉಂಟಾಗುವ ಉಷ್ಣತೆಯ ಪರಿಣಾಮದ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆಯಾಸ, ತಲೆ ಸುತ್ತುವುದು, ತಲೆನೋವು, ಅತಿಯಾಗಿ ಬೆವರುವುದು, ಸ್ನಾಯು ಸೆಳೆತ, ವಾಕರಿಕೆ ಮತ್ತು ಕಿರಿಕಿರಿಯನ್ನು ನಿರ್ಲಕ್ಷಿಸುತ್ತಾರೆ. ಆದರೆ ಈ ರೀತಿ ಆದಾಗ ಅದನ್ನು ಮುಂಚೆಯೇ ಗಮನಿಸಿ ಸೂಕ್ತ ಎಚ್ಚರಿಕೆ ವಹಿಸಿದಲ್ಲಿ ದೊಡ್ಡ ದೊಡ್ಡ ಅಪಾಯಗಳು ತಪ್ಪುತ್ತದೆ.

ಇನ್ನು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ರೋಗ, ಬೊಜ್ಜು ಅಥವಾ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿರುವವರು ಹೆಚ್ಚು ಕಷ್ಟಪಡಬೇಕಾಗಬಹುದು. ಹೊರಗಡೆ ಹೆಚ್ಚು ಸಮಯ ಕೆಲಸ ಮಾಡುವವರು, ಡೆಲಿವರಿ ಮಾಡುವವರು, ಟ್ರಾಫಿಕ್ ಪೊಲೀಸ್, ಕ್ರೀಡಾಪಟುಗಳು ಮತ್ತು ದೀರ್ಘಕಾಲ ಟ್ರಾಫಿಕ್ ನಲ್ಲಿ ಕಳೆಯುವ ಸಂಚಾರಿಗಳಿಗೂ ಕೂಡ ಸಂಕಷ್ಟ ತಪ್ಪಿದ್ದಲ್ಲ.

ಇದನ್ನೂ ಓದಿ: ಹೈ ಕೊಲೆಸ್ಟ್ರಾಲ್ ಅಪಾಯ ಇಲ್ಲದಿದ್ದರೂ ಹೃದಯಾಘಾತವಾಗುವುದಕ್ಕೆ ಕಾರಣವೇನು? ತಡೆಗಟ್ಟಲು ಇಲ್ಲಿದೆ ಸಲಹೆ

ಸಮಸ್ಯೆ ತಡೆಗಟ್ಟಲು ಸುಲಭ ಮಾರ್ಗಗಳು?

ಈ ರೀತಿ ಸಮಸ್ಯೆಯನ್ನು ಆದಷ್ಟು ತಡೆಗಟ್ಟಲು ಸರಿಯಾಗಿ ನೀರು ಕುಡಿಯುವುದು, ಬಿರು ಬಿಸಿಲಿನಲ್ಲಿ ನೇರ ಸೂರ್ಯನ ತಾಪಕ್ಕೆ ಒಡ್ಡಿಕೊಳ್ಳದೇ ಇರುವುದು, ಸಡಿಲ ಮತ್ತು ಗಾಳಿಯಾಡುವ ಬಟ್ಟೆ ಧರಿಸುವುದು ಮತ್ತು ಹೊರಾಂಗಣ ಚಟುವಟಿಕೆಗಳನ್ನು ಆದಷ್ಟು ಕಡಿಮೆ ಮಾಡುವುದು ಹೆಚ್ಚಿನ ಪ್ರಮಾಣದಲ್ಲಿ ರಿಸ್ಕ್ ತಪ್ಪಿಸುತ್ತದೆ. ಬಿಸಿ ವಾತಾವರಣದಲ್ಲಿ ಹೆಚ್ಚಿನ ಕೆಫೀನ್ ಮತ್ತು ಮದ್ಯಸೇವನೆಯನ್ನು ಮಾಡುವುದು ಕೂಡ ನಿರ್ಜಲೀಕರಣಕ್ಕೆ ಕಾರಣವಾಗುವುದರಿಂದ ಅಂತಹ ಅಭ್ಯಾಸಗಳನ್ನು ತಪ್ಪಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಐಎಡಿಬಿಯಲ್ಲಿ ಇನ್ಮುಂದೆ ಬ್ರೋಕರ್ಸ್‌ಗೆ ನೋ ಎಂಟ್ರಿ: 100 ದಿನಗಳಲ್ಲಿ ಇಡೀ ಸಿಸ್ಟಮ್ ಡಿಜಿಟಲ್ ಮಾಡಲು ಸಚಿವ ಎಂ.ಬಿ.ಪಾಟೀಲ್ ಆದೇಶ – Kannada News

ಬೆಂಗಳೂರು, ಜೂ.10: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (KIADB) ಇನ್ನು ಮುಂದೆ ಜಮೀನು ಭೂಸ್ವಾಧೀನ ಮತ್ತು ನಿವೇಶನ ಮಂಜೂರಾತಿಯ ಪ್ರತಿಯೊಂದು ಪ್ರಕ್ರಿಯೆಯೂ ಸಂಪೂರ್ಣವಾಗಿ ಹೈಟೆಕ್ ಆಗಲಿದೆ. ಕೆಐಎಡಿಬಿ ವ್ಯಾಪ್ತಿಯ ಎಲ್ಲಾ ಸೇವೆಗಳನ್ನು ಮುಂದಿನ 100 ದಿನಗಳ ಒಳಗಾಗಿ ಸಂಪೂರ್ಣವಾಗಿ ಡಿಜಿಟಲೀಕರಣ (Digitization) ಗೊಳಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಗಡುವು ನೀಡಿದ್ದಾರೆ. ಖನಿಜ ಭವನದಲ್ಲಿ ಇಂದು (ಜೂ.10) ನಡೆದ ಕೈಗಾರಿಕಾ ಇಲಾಖೆಯ ಎರಡನೇ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಇ-ಗವರ್ನೆನ್ಸ್ (ಇ-ಆಡಳಿತ) ಇಲಾಖೆಯು ಹೊಂದಿರುವ ‘ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ’ಯ ಅಡಿಯಲ್ಲೇ ಈಗ ರಾಜ್ಯದ ಹಳೆಯ ಮತ್ತು ಹೊಸ ಕೈಗಾರಿಕಾ ಪ್ರದೇಶಗಳಲ್ಲಿನ ನಿವೇಶನಗಳ ಪ್ರತಿಯೊಂದು ವಿವರವನ್ನೂ ಡಿಜಿಟಲೀಕರಣ ಮಾಡಲಾಗುವುದು. ಈ ಹೊಸ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಪ್ರತಿ ನಿವೇಶನಕ್ಕೆ ಸಂಬಂಧಿಸಿದಂತೆ ಒಟ್ಟು 77 ಕಾಲಂಗಳಲ್ಲಿ ಇಂಚಿಂಚೂ ಮಾಹಿತಿಯನ್ನು ಸಂಗ್ರಹಿಸಿಡಲಾಗುತ್ತದೆ.

ಈ ಮಹತ್ವದ ಸುಧಾರಣೆಯಿಂದಾಗಿ ಕೈಗಾರಿಕಾ ನಿವೇಶನದ ಮಂಜೂರಾತಿ, ಅದರ ಸದ್ಯದ ಸ್ಥಿತಿಗತಿ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆ, ಮಾಡಲಾಗಿರುವ ಒಟ್ಟು ಹೂಡಿಕೆ, ಸೃಷ್ಟಿಯಾಗಿರುವ ಉದ್ಯೋಗಾವಕಾಶಗಳು, ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಗೆ ಕೊಟ್ಟಿರುವ ಪರಿಹಾರದ ಮೊತ್ತ, ಕೋರ್ಟ್ ಕೇಸುಗಳ ಇತಿಹಾಸ ಹಾಗೂ ಹೂಡಿಕೆದಾರರಿಗೆ ನೀಡಿರುವ ಕಾಲಾವಕಾಶದಂತಹ ಎಲ್ಲಾ ಪ್ರಮುಖ ವಿವರಗಳು ಇನ್ನು ಮುಂದೆ ಒಂದೇ ಕ್ಲಿಕ್‌ನಲ್ಲಿ ಕ್ಷಣಾರ್ಧದಲ್ಲಿ ಲಭ್ಯವಾಗಲಿವೆ. ಈ ಹಿಂದೆ ಕೆಐಎಡಿಬಿಯಲ್ಲಿ ಸರಿಯಾದ ಡಿಜಿಟಲ್ ದಾಖಲೆಗಳು ಇಲ್ಲದ ಕಾರಣ, ಒಂದೇ ಜಮೀನಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡೆರಡು ಬಾರಿ ಪರಿಹಾರದ ಹಣ ನೀಡಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ ಹಲವು ಪ್ರಕರಣಗಳು ಕಂಡುಬಂದಿದೆ. ಆದರೆ, ಹೊಸ ವ್ಯವಸ್ಥೆಯಿಂದ ಸಂಪೂರ್ಣ ಪಾರದರ್ಶಕತೆ ಬರಲಿದ್ದು, ಇಂತಹ ಅವ್ಯವಹಾರಗಳಿಗೆ ಶಾಶ್ವತ ಬ್ರೇಕ್ ಬೀಳಲಿದೆ. ಜೊತೆಗೆ, ಹೂಡಿಕೆದಾರರು ತಾವು ಇದ್ದ ಜಾಗದಿಂದಲೇ ತಮಗೆ ಬೇಕಾದ ಅಧಿಕೃತ ಮಾಹಿತಿ ಪಡೆಯಬಹುದಾಗಿದ್ದು, ಕೆಐಎಡಿಬಿ ಕಚೇರಿಗಳಲ್ಲಿ ಮಧ್ಯವರ್ತಿಗಳ (ಬ್ರೋಕರ್ಸ್) ಹಾವಳಿ ಸಂಪೂರ್ಣವಾಗಿ ನಿಲ್ಲಲಿದೆ.

ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: 1,280 ವೈದ್ಯರು, ನರ್ಸ್‌ಗಳ ಭರ್ತಿಗೆ ಯು.ಟಿ. ಖಾದರ್ ಆದೇಶ

ರಾಜ್ಯಾದ್ಯಂತ ಸದ್ಯ 224 ಕೈಗಾರಿಕಾ ಪ್ರದೇಶಗಳಿದ್ದು, ಇಲ್ಲಿರುವ ಸಾವಿರಾರು ನಿವೇಶನಗಳ ಹಂಚಿಕೆ ಮಾಹಿತಿಯನ್ನು ಕೇವಲ ಒಂದು ತಿಂಗಳೊಳಗೆ ಸ್ಕ್ಯಾನ್ ಮಾಡಿ ಮುಗಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ಈ ದತ್ತಾಂಶವನ್ನು ಬಳಸಿಕೊಂಡು ಕೆಐಎಡಿಬಿಗೆ ಒಪ್ಪುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ, ಬಳಿಕ ಅದನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ‘ಇ-ಸ್ವತ್ತು’ ತಂತ್ರಾಂಶದ ಜತೆ ಜೋಡಣೆ ಮಾಡಲಾಗುತ್ತದೆ. ಇದರಿಂದ ಕೈಗಾರಿಕೆಗಳಿಗೆ ಆನ್‌ಲೈನ್ ಮೂಲಕವೇ ಸುಲಭವಾಗಿ ‘ಇ-ಖಾತಾ’ ನೀಡಲು ಅನುಕೂಲವಾಗುತ್ತದೆ. ಈ ಉನ್ನತ ಮಟ್ಟದ ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಹಾಗೂ ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸರಿಗೂ ಎಚ್ಚರಿಕೆ ಕೊಟ್ಟ ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, (ಜೂನ್ 10): ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾಗುತ್ತಿದ್ದಂತೆಯೇ ಕೆಲ ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಪ್ರಿಯಾಂಕ್ ಖರ್ಗೆ, ಡ್ರಗ್ಸ್ ಹಾಗೂ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸರಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಎಫ್​​ಐಆರ್ ಹಾಗೂ ಚಾರ್ಚ್ ಶೀಟ್ ಸಲ್ಲಿಸಲು ವಿಳಂಬದ ಬಗ್ಗೆ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ. ಇಲಾಖೆಗೆ ಅಗೌರವ ತರುವಂತ ಕೆಲಸ ಯಾವ ಸಿಬ್ಬಂದಿಯಿಂದ ಆಗಬಾರದು‌. ನಾನು ಹೇಳಿದ ಸಲಹೆ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಹೇಳಿದ್ದಾರೆ.

Source link

PM Modi Speech Live: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ; ಲೈವ್​​ ವಿಡಿಯೋ ಇಲ್ಲಿದೆ ನೋಡಿ

ದೆಹಲಿ, ಜೂ.10: ಪ್ರಧಾನಿ ಮೋದಿ ಅವರು ದೇಶವನ್ನು ಉದ್ದೇಶಿ ಮಾತನಾಡುತ್ತಿದ್ದಾರೆ. ದೆಹಲಿಯಲ್ಲಿ ಭಾರತ್ ಮಂಟಪಂನಲ್ಲಿ ಎನ್​​ಡಿಎ ಸಭೆಯ ನಂತರ ಈ ಭಾಷಣ ಮಾಡುತ್ತಿದ್ದಾರೆ. ಈ ಬಗ್ಗೆ ಲೈವ್ ವಿಡಿಯೋ ಇಲ್ಲಿದೆ ನೋಡಿ. ಮೂರನೇ ಬಾರಿಗೆ ಅಧಿಕಾರ ಹಿಡಿದಿರುವ ಎನ್‌ಡಿಎ ಮೈತ್ರಿಕೂಟದ ಮುಂದಿನ ಆಡಳಿತಾತ್ಮಕ ಕಾರ್ಯತಂತ್ರಗಳು, ಅಭಿವೃದ್ಧಿ ಯೋಜನೆಗಳು ಹಾಗೂ ದೇಶದ ಸರ್ವತೋಮುಖ ಪ್ರಗತಿಯ ದೃಷ್ಟಿಯಿಂದ ಇಂದಿನ ಸಭೆ ಅತ್ಯಂತ ಮಹತ್ವದ್ದಾಗಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಒಣಗಿದ ನಿಂಬೆಯನ್ನು ಎಸೆಯುವ ಬದಲು ಈ ರೀತಿಯಾಗಿ ಉಪಯೋಗಿಸಿಕೊಳ್ಳಿ – Kannada News

ಹಿಂದಿನ ಕಾಲದಿಂದಲೂ ನಿಂಬೆ ಹಣ್ಣಿನ (lemon) ಬಳಕೆ ಹೆಚ್ಚಾಗಿದೆ. ವಿಟಮಿನ್‌ ಸಿ ಹೇರಳವಾಗಿರುವ ಈ ಹಣ್ಣನಿಂದ ವಿವಿಧ ಬಗೆಯ ಪಾನೀಯ, ಉಪ್ಪಿನಕಾಯಿಯನ್ನು ತಯಾರಿಸಲಾಗುತ್ತದೆ. ಅಲ್ಲದೆ ಅಡುಗೆಯಲ್ಲೂ ಬಳಸಲಾಗುತ್ತದೆ. ಹಾಗಾಗಿ ಎಲ್ಲರೂ ಪ್ರತಿ ಬಾರಿ ಮಾರುಕಟ್ಟೆಗೆ ಹೋದ ಸಂದರ್ಭದಲ್ಲಿ ಜಾಸ್ತಿ ಪ್ರಮಾಣದಲ್ಲಿಯೇ ನಿಂಬೆ ಹಣ್ಣನ್ನು ಖರೀದಿ ಮಾಡುತ್ತಾರೆ. ಖರೀದಿ ಮಾಡಿ ತಂದಂತಹ ಈ ನಿಂಬೆ ಹಣ್ಣುಗಳು ಕೆಲವೇ ಕೆಲವು ದಿನಗಳಲ್ಲಿ ಒಣಗಿಬಿಡುತ್ತವೆ. ಅನೇಕ ಜನರು ಅವುಗಳನ್ನು ನಿಷ್ಪ್ರಯೋಜಕವೆಂದು ಭಾವಿಸಿ ಎಸೆಯುತ್ತಾರೆ. ವಾಸ್ತವವಾಗಿ, ಒಣಗಿದ ನಿಂಬೆಹಣ್ಣುಗಳಿಂದಲೂ ಹಲವು ಉಪಯೋಗಗಳಿವೆ. ಹೌದು  ಅವುಗಳಲ್ಲಿರುವ ನೈಸರ್ಗಿಕ ಆಮ್ಲಗಳು ಮನೆ ಶುಚಿಗೊಳಿಸುವುಕೆಗೆ ತುಂಬಾನೇ ಪರಿಣಾಮಕಾರಿ. ಒಣಗಿದ ನಿಂಬೆ ಹಣ್ಣಿನಿಂದ ಯಾವೆಲ್ಲಾ ಉಪಯೋಗಗಳಿವೆ ಎಂಬುದನ್ನು ನೋಡೋಣ ಬನ್ನಿ.

ಒಣಗಿದ ನಿಂಬೆಯ ಉಪಯೋಗಗಳೇನು?

ಸಿಂಕ್ ಅನ್ನು ಸ್ವಚ್ಛಗೊಳಿಸಬಹುದು: ಒಣಗಿದ ನಿಂಬೆಹಣ್ಣನ್ನು ಎರಡು ತುಂಡುಗಳಾಗಿ ಕತ್ತರಿಸಿ ಅದನ್ನು ಸಿಂಕ್ ಅನ್ನು ಸ್ವಚ್ಛಗೊಳಿಸಲು ಬಳಸಿ. ಇದು ನೈಸರ್ಗಿಕ ಕ್ಲೀನರ್ ಆಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು ಸಿಂಕ್‌ನಲ್ಲಿ ಸಂಗ್ರಹವಾಗುವ ಬ್ಯಾಕ್ಟೀರಿಯಾ ಮತ್ತು ವಾಸನೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.

ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಸಹಕಾರಿ: ಒಣಗಿದರೂ ನಿಂಬೆಹಣ್ಣಿನ ಸುವಾಸನೆ ಹೋಗುವುದಿಲ್ಲ ಮತ್ತು ಅವು ತಾಜಾವಾಗಿರುತ್ತವೆ. ಆದ್ದರಿಂದ, ಅವುಗಳನ್ನು ಎರಡು ಭಾಗಗಳಾಗಿ ಕತ್ತರಿಸಿ,  ಅದಕ್ಕೆ ಅಡುಗೆ ಸೋಡಾ ಸಿಂಪಡಿಸಿ ಬೆರೆಸಿ ಫ್ರಿಡ್ಜ್, ಶೂ ರ್ಯಾಕ್ ಮತ್ತು ಕಪಾಟುಗಳಲ್ಲಿ ಇರಿಸಿ.

ಪಾತ್ರೆಗಳನ್ನು ಪಾಲಿಶ್ ಮಾಡಲು ಬಳಸಬಹುದು: ನಿಂಬೆಹಣ್ಣುಗಳು ಹಿತ್ತಾಳೆ ಪಾತ್ರೆಗಳನ್ನು ಹೊಳೆಯುವಂತೆ ಮಾಡುವ ಶಕ್ತಿಯನ್ನು ಹೊಂದಿವೆ. ಹಿತ್ತಾಳೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಈ ಒಣ ನಿಂಬೆಯನ್ನು ಬಳಸಿಕೊಳ್ಳಬಹುದು. ಮ್ಮ ಉಕ್ಕಿನ ಅಥವಾ ತಾಮ್ರದ ಪಾತ್ರೆಗಳ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ಮತ್ತು ಒಣಗಿದ ನಿಂಬೆಹಣ್ಣಿನ ತುಂಡಿನಿಂದ ಚೆನ್ನಾಗಿ ಉಜ್ಜಿ. ಇದು ಮೊಂಡುತನದ ಕಲೆಗಳನ್ನು ತೆಗೆದುಹಾಕಿ ಅವುಗಳನ್ನು ಹೊಳೆಯುವಂತೆ ಮಾಡುತ್ತದೆ.

ಇದನ್ನೂ ಓದಿ: ಹಳೆಯ ಟೂತ್‌ಬ್ರಷ್‌ ಎಸೆಯುವ ಬದಲು ಮನೆಯ ಎಲ್ಲಾ ಕೆಲಸಗಳನ್ನು ಮಾಡಲು ಉಪಯೋಗಿಸಿಕೊಳ್ಳಿ

ಕೀಟಗಳನ್ನು ನಿವಾರಿಸಲು ಸಹಕಾರಿ: ಇರುವೆಗಳು, ಕೀಟಗಳು ನಿಂಬೆಯ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಒಣಗಿದ ನಿಂಬೆಹಣ್ಣನ್ನು ಎರಡು ಹೋಳುಗಳಾಗಿ  ಕತ್ತರಿಸಿ ನಿಂಬೆ ಅಡುಗೆಮನೆಯ ಮೂಲೆಗಳಲ್ಲಿ  ಇರಿಸಿ. ಇದು ಆಹಾರದ ಮೇಲೆ ಕೀಟಗಳು ಆವರಿಸಿಕೊಳ್ಳುವುದನ್ನು  ತಡೆಯುತ್ತವೆ.

ಗಿಡಮೂಲಿಕೆ ಚಹಾ ಮಾಡಿ: ಒಣಗಿದ ನಿಂಬೆಹಣ್ಣಿನಿಂದ ನೀವು ಗಿಡಮೂಲಿಕೆ ಚಹಾ ಸಹ ತಯಾರಿಸಬಹುದು. ಚರ್ಮದ ಹೊಳಪನ್ನು ಸುಧಾರಿಸುವುದರಿಂದ ಹಿಡಿದು ತೂಕ ಇಳಿಸುವವರೆಗೆ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಮಾಡಲು, ಒಣಗಿದ ನಿಂಬೆಹಣ್ಣನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ, ರಾತ್ರಿಯಿಡೀ ನೆನೆಸಿಟ್ಟರೆ  ಉತ್ತಮ. ನಂತರ, ಬೆಳಿಗ್ಗೆ ನೀರನ್ನು ಚೆನ್ನಾಗಿ ಕುದಿಸಿ. ಜೇನುತುಪ್ಪ ಸೇರಿಸಿ ಕುಡಿಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

370 ರೂ. ಬಿರಿಯಾನಿ ವಿವಾದ: ಇನ್‌ಸ್ಟಾಗ್ರಾಮ್ ಖಾತೆ ಡಿಆಕ್ಟಿವೇಟ್ ಮಾಡಿದ ಪ್ರಣಿತ್ ಮೋರೆ – Kannada News

ಸ್ಟ್ಯಾಂಡಪ್ ಕಾಮಿಡಿ ಶೋ ಒಂದರಲ್ಲಿ ಪ್ರೇಕ್ಷಕನೊಬ್ಬ ಯುವತಿಯ ಬಗ್ಗೆ ಮಾಡಿದ್ದ ಅಸಭ್ಯ ಮತ್ತು ವಿವಾದಾತ್ಮಕ ಕಾಮೆಂಟ್‌ಗೆ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮತ್ತು ಸೆಲೆಬ್ರಿಟಿಗಳಿಂದ ತೀವ್ರ ಟೀಕೆಗೆ ಒಳಗಾಗಿದ್ದ ಪ್ರಸಿದ್ಧ ಕಾಮಿಡಿಯನ್ ಪ್ರಣಿತ್ ಮೋರೆ (Pranit More) ಇದೀಗ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಆಕ್ಟಿವೇಟ್ ಮಾಡಿದ್ದಾರೆ. 370 ರೂಪಾಯಿ ಬಿರಿಯಾನಿ (370 Rupees Biryani) ವಿವಾದವೇ ಇಷ್ಟಕ್ಕೆಲ್ಲ ಕಾರಣ ಆಗಿದೆ.

ಕೆಲವು ದಿನಗಳ ಹಿಂದೆ ಪ್ರಣಿತ್ ಮೋರೆ ಅವರ ಕಾಮಿಡಿ ಶೋನ ವಿಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ಗುರ್ಗಾಂವ್ ಮೂಲದ 23 ವರ್ಷದ ಹಿಮಾಂಶು ಜಾಂಗ್ರಾ ಎಂಬ ಯುವಕ, ತಾನು ಇತ್ತೀಚೆಗೆ ಒಬ್ಬ ಯುವತಿಯೊಂದಿಗೆ ಡೇಟ್‌ಗೆ ಹೋಗಿದ್ದಾಗಿ ಹೇಳಿದ್ದನು. ‘ಅಲ್ಲಿ ನಾನು 370 ರೂಪಾಯಿ ಕೊಟ್ಟು ಚಿಕನ್ ಬಿರಿಯಾನಿ ಕೊಡಿಸಿದೆ. ಅಷ್ಟು ಹಣ ಖರ್ಚು ಮಾಡಿದ ಮೇಲೆ ನನಗೆ ಅದಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂದುಕೊಂಡೆ. ಬಿರಿಯಾನಿ ತಿಂದ ನಂತರ ಆಕೆ ಮನೆಗೆ ಬಿಡುವಂತೆ ಕೇಳಿಕೊಂಡಳು. ಆದರೆ ನಾನು 370 ರೂಪಾಯಿ ಖರ್ಚು ಮಾಡಿದ್ದೇನೆ, ಅದನ್ನು ವಸೂಲಿ ಮಾಡದೆ ಬಿಡುವುದಿಲ್ಲ ಎಂದುಕೊಂಡೆ’ ಎಂದು ವೇದಿಕೆಯಲ್ಲಿದ್ದ ಪ್ರಣಿತ್ ಎದುರು ಹೇಳಿಕೊಂಡಿದ್ದನು.

ಅಷ್ಟಕ್ಕೇ ನಿಲ್ಲಿಸದ ಆತ, ಆ ಯುವತಿಯನ್ನು ತನ್ನ ರೂಮಿಗೆ ಕರೆಯುವ ಬಗ್ಗೆ ಯೋಚಿಸಿದ್ದಾಗಿ ಮತ್ತು ಆಕೆ ನಿರಾಕರಿಸಿದಾಗ ಕತ್ತಲಿರುವ ಪಾರ್ಕ್‌ಗೆ ಕರೆದುಕೊಂಡು ಹೋದ ಬಗ್ಗೆ ಅತ್ಯಂತ ಅಸಭ್ಯವಾಗಿ ವಿವರಿಸಿದ್ದನು. ಯುವತಿ ಎಷ್ಟೇ ಬೇಡವೆಂದರೂ ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದಾಗಿ ಆತ ಹೆಮ್ಮೆಯಿಂದ ಹೇಳಿಕೊಂಡಿದ್ದನು. ಆತ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಜನಾಕ್ರೋಶ ವ್ಯಕ್ತವಾಗಿದೆ.

ಯುವಕ ಇಷ್ಟೆಲ್ಲಾ ವಿಕೃತವಾಗಿ ಮಾತನಾಡುತ್ತಿದ್ದರೂ, ಶೋ ನಡೆಸಿಕೊಡುತ್ತಿದ್ದ ಪ್ರಣಿತ್ ಮೋರೆ ಅದನ್ನು ತಡೆಯುವ ಬದಲು ಜೋರಾಗಿ ನಕ್ಕು ಹಗುರವಾಗಿ ಪರಿಗಣಿಸಿದ್ದರು. ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಮಹಿಳೆಯರು ಸೇರಿದಂತೆ ಲಕ್ಷಾಂತರ ಜನರು ಆಕ್ರೋಶ ಹೊರಹಾಕಿದ್ದಾರೆ. ಎಲ್ವಿಶ್ ಯಾದವ್ ಸೇರಿದಂತೆ ಹಲವು ಪ್ರಮುಖ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಪ್ರಣಿತ್ ಮೋರೆ ಅವರ ಬೇಜವಾಬ್ದಾರಿತನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಒಬ್ಬ ಯುವತಿಯ ಸುರಕ್ಷತೆಯ ಬಗ್ಗೆ ಇಷ್ಟು ಕೀಳಾಗಿ ಮಾತನಾಡುತ್ತಿದ್ದರೂ ಅದನ್ನು ತಡೆಯದ ಪ್ರಣಿತ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಕಾಮಿಡಿಯನ್ ಪ್ರಣೀತ್‌ಗೆ ಮೊದಲೇ ವಾರ್ನಿಂಗ್ ನೀಡಿದ್ದ ಸಲ್ಮಾನ್ ಖಾನ್

ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಮತ್ತು ಆಕ್ರೋಶಕ್ಕೆ ಒಳಗಾದ ಹಿಮಾಂಶು ಜಾಂಗ್ರಾ ಈಗಾಗಲೇ ಕ್ಷಮೆಯಾಚಿಸಿ ತನ್ನ ಅಕೌಂಟ್‌ಗಳನ್ನು ಡಿಲೀಟ್ ಮಾಡಿದ್ದಾನೆ. ಇದೀಗ ಸುಮಾರು 3.8 ಮಿಲಿಯನ್ (38 ಲಕ್ಷ) ಫಾಲೋವರ್ಸ್ ಹೊಂದಿದ್ದ ಮುಖ್ಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಪ್ರಣಿತ್ ಮೋರೆ ಕೂಡ ಡಿಆಕ್ಟಿವೇಟ್ ಮಾಡಿದ್ದಾರೆ. ಆದರೆ, ಕಾಮಿಡಿ ಕಂಟೆಂಟ್ ಹಂಚಿಕೊಳ್ಳುವ ಅವರ ಮತ್ತೊಂದು ಖಾತೆ @maharashtrianbhau ಇನ್ನೂ ಸಕ್ರಿಯವಾಗಿದೆ.

ವಿವಾದ ತಾರಕಕ್ಕೇರುತ್ತಿದ್ದಂತೆ ಪ್ರಣಿತ್ ಮೋರೆ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದರು. ‘ಶೋನಲ್ಲಿ ಪ್ರೇಕ್ಷಕರು ಮಾಡಿದ ಕಾಮೆಂಟ್‌ಗಳು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ. ಆ ಸಮಯದಲ್ಲಿ ಆತನ ಮಾತನ್ನು ತಡೆಯುವ ಬದಲು ನಾನು ನಕ್ಕು ಸುಮ್ಮನಾಗಿದ್ದು ನನ್ನ ತಪ್ಪು ನಿರ್ಧಾರವಾಗಿತ್ತು. ಇದೊಂದು ದೊಡ್ಡ ಪಾಠವಾಗಿದ್ದು, ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

175ನೇ ಸಿನಿಮಾದ ಮುಹೂರ್ತ, ಆ ಮೂವರ ನೆನೆದ ನಟಿ ಶ್ರುತಿ

ಕನ್ನಡ ಚಿತ್ರರಂಗದ (Sandalwood) ವರ್ಸಟೈಲ್ ನಟಿ ಶ್ರುತಿ ಅವರು ದಶಕಗಳಿಂದಲೂ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಹಲವು ರೀತಿಯ ಪಾತ್ರಗಳಲ್ಲಿ ನಟಿಸಿರುವ ಶ್ರುತಿ ಅವರು ಚಿತ್ರರಂಗದ ವರ್ಸಟೈಲ್ ನಟಿ. ಇದೀಗ ಅವರ ನಟನೆಯ 175ನೇ ಸಿನಿಮಾದ ಮುಹೂರ್ತ ನಡೆದಿದೆ. ನಟಿಯೊಬ್ಬರು 175 ಸಿನಿಮಾಗಳಲ್ಲಿ ನಟಿಸುವುದು ಅಪರೂಪದ ವಿದ್ಯಮಾನ. ಅಂಥಹಾ ಸಾಧನೆಯನ್ನು ನಟಿ ಶ್ರುತಿ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಶ್ರುತಿ, ತಮ್ಮ ಈ ಬೆಳವಣಿಗೆಗೆ ಪ್ರಮುಖ ಕಾರಣರಾದ ಮೂವರು ಮಹನೀಯರನ್ನು ನೆನಪು ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link