Category Archives: Blog

Your blog category

ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ಪರಮೇಶ್ವರ್​​ ನೇತೃತ್ವದಲ್ಲಿ ಕಾಂಗ್ರೆಸ್​​ನ SC, ST ನಾಯಕರ ಸಭೆ – Kannada News | Congress SC ST Leaders Meet: Discussions Held on SCSP–TSP Fund Protection and Dalit CM Demand

ಗೃಹ ಸಚಿವ ಡಾ.ಜಿ. ಪರಮೆಶ್ವರ್​Image Credit source: Google

ಬೆಂಗಳೂರು, ಫೆಬ್ರವರಿ 04: ವಿಶೇಷ ಅಧಿವೇಶನದ ಹೊತ್ತಲ್ಲಿಯೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ SC, ST ಸಚಿವರು, ಶಾಸಕರು ಹಾಗೂ ವಿಧಾನಪರಿಷತ್​ ಸದಸ್ಯರ ಸಭೆ ನಡೆದಿದೆ. ಈ ಹಿಂದೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೀಡಿದ್ದ ಸೂಚನೆ ಈ ಮೀಟಿಂಗ್​ ನಡೆದಿದೆ ಎನ್ನಲಾಗಿದ್ದು, ಅಧಿಕಾರ ಹಂಚಿಕೆ ವಿಚಾರ ಚರ್ಚೆ ಮಧ್ಯೆಯೇ ಈ ಸಭೆ ಮಹತ್ವ ಪಡೆದುಕೊಂಡಿದೆ.

ಸಚಿವರಾದ ಪರಮೇಶ್ವರ್, ಮುನಿಯಪ್ಪ, ಮಹದೇವಪ್ಪ, ಶಿವರಾಜ ತಂಗಡಗಿ, ಮಾಜಿ ಸಚಿವ ಕೆ.ಎನ್.ರಾಜಣ್ಣ ಸೇರಿ 20ಕ್ಕೂ ಹೆಚ್ಚು ಎಸ್‌ಸಿ, ಎಸ್‌ಟಿ ಶಾಸಕರು ಹಾಗೂ ಪರಿಷತ್ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದಾರೆ. SCSP-TSP ಅನುದಾನ ಬಳಕೆ ಕುರಿತು ಸಭೆ ಹೆಸರಲ್ಲಿ ಕಾಂಗ್ರೆಸ್​ನ SC, ST ಸಚಿವರು, ಶಾಸಕರು ಒಗ್ಗಟ್ಟಿನ ಶಕ್ತಿ ಪ್ರದರ್ಶನ ಮಾಡಿದ್ದು, SCSP-TSP ಅನುದಾನ ಬೇರೆ ಯೋಜನೆಗಳಿಗೆ ಬಳಸ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಜೆಟ್​ನಲ್ಲಿ SC, ST ಸಮುದಾಯಕ್ಕೆ ವಿಶೇಷ ಕೊಡುಗೆ‌ ನೀಡಬೇಕು. SCSP-TSP ಹಣ ಯಾವುದಕ್ಕೆ ಮೀಸಲಿದೆಯೋ ಅದಕ್ಕೇ ಬಳಸಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಭೇಟಿಯಾಗುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದ್ದು, ದಲಿತ ಸಿಎಂ ಬೇಡಿಕೆ ಕುರಿತಾಗಿ ಸಮುದಾಯದಿಂದ ಹೈಕಮಾಂಡ್ ಮುಂದೆ ಹಕ್ಕು ಮಂಡನೆ ಬಗ್ಗೆಯೂ ಸಮಾಲೋಚನೆ ಈ ವೇಳೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಎಸ್​ಸಿಎಸ್​ಪಿ-ಟಿಎಸ್​ಪಿಯ 9 ಸಾವಿರ ಕೋಟಿ ರೂ. ಹಣ ಗ್ಯಾರಂಟಿಗೆ ಬಳಸಿಕೊಂಡ ಸರ್ಕಾರ

SCSP, TSP ಹಣ ನೀಡದ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಈ ಹಿಂದೆ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ರೋಷಾವೇಶ ಪ್ರದರ್ಶಿಸಿದ್ದರು. ಎಸ್​ಸಿಎಸ್​ಪಿ, ಟಿಎಸ್​ಪಿಗೆ ಅನುದಾನ ಹಂಚಿಕೆ ಮಾಡದಿರುವುದು ಯಾಕೆ? ಏನು ಅಂದುಕೊಂಡಿದ್ದೀರಿ? SCSP, TSP ಹಣ ಬೇರೆ ಕಡೆ ಬಳಸುತ್ತಿದ್ದೀರಾ? ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಏರುಧ್ವನಿಯಲ್ಲಿಯೇ ಸಚಿವರು ಪ್ರಶ್ನಿಸಿದ್ದು, ಮಹದೇವಪ್ಪ ಅವರ ಆಕ್ರೋಶ ಕಂಡು ಸಂಪುಟ ಸಹೋದ್ಯೋಗಿಗಳು ಕಕ್ಕಾಬಿಕ್ಕಿ ಆದ ಪ್ರಸಂಗ ನಡೆದಿತ್ತು. ಆ ಬೆನ್ನಲ್ಲಿಯೇ ಈಗ ಸಮುದಾಯದ ನಾಯಕರ ಸಭೆ ನಡೆದಿರೋದು ಭಾರೀ ಕುತೂಹಲ ಮೂಡಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಆನ್​ಲೈನ್ ಗೇಮ್ ಆಡಬೇಡಿ ಎಂದಿದ್ದಕ್ಕೆ ಮೂವರು ಸಹೋದರಿಯರು 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ – Kannada News | Ghaziabad Tragedy: Three Minor Sisters Die After Jumping From Housing Complex

ಗಾಜಿಯಾಬಾದ್, ಫೆಬ್ರವರಿ 04:ಆನ್​ಲೈನ್ ಗೇಮ್ ಆಡಬೇಡಿ ಎಂದಿದ್ದಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶ ಗಾಜಿಯಾಬಾದ್​​ನಲ್ಲಿ ನಡೆದಿದೆ. ಅಪ್ರಾಪ್ತ ಸಹೋದರಿಯರು ಮಂಗಳವಾರ ತಡರಾತ್ರಿ ತಾರಸಿಯಿಂದ ಕೆಳಗೆ ಹಾರಿದ್ದಾರೆ. ಅವರ ಪೋಷಕರು ಆನ್‌ಲೈನ್ ಗೇಮಿಂಗ್ ಆಡುವುದನ್ನು ವಿರೋಧಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಮೃತ ಬಾಲಕಿಯರನ್ನು ಪಾಖಿ (12), ಪ್ರಾಚಿ (14) ಮತ್ತು ವಿಶಿಕಾ (16) ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ,  COVID-19 ಸಾಂಕ್ರಾಮಿಕ ಸಮಯದಲ್ಲಿ ಈ ಮೂವರು ಆನ್‌ಲೈನ್ ವಿಡಿಯೋ ಗೇಮ್‌ಗಳಿಗೆ ವ್ಯಸನಿಯಾಗಿದ್ದರು ಎಂದು ವರದಿಯಾಗಿದೆ. ಅವರು ಆನ್‌ಲೈನ್, ಟಾಸ್ಕ್ ಆಧಾರಿತ ಕೊರಿಯನ್ ಲವ್ ಗೇಮ್ ಆಡುತ್ತಿದ್ದರು. ವರದಿಯಲ್ಲಿ ಉಲ್ಲೇಖಿಸಿರುವ ಪ್ರಕಾರ, ವ್ಯಸನವು ಎಷ್ಟರ ಮಟ್ಟಿಗೆ ತಲುಪಿತ್ತೆಂದರೆ, ಹುಡುಗಿಯರು ಶಾಲೆಗೆ ಹೋಗುವುದನ್ನು ನಿಲ್ಲಿಸಿ, ಹೆಚ್ಚಿನ ಸಮಯವನ್ನು ಆಟದಲ್ಲಿ ಕಳೆಯುತ್ತಿದ್ದರು ಎಂದು ವರದಿಯಾಗಿದೆ.

ಬೆಳಗಿನ ಜಾವ 2 ಗಂಟೆ ಸುಮಾರಿಗೆ ಗಾಜಿಯಾಬಾದ್‌ನ ವಸತಿ ಪಟ್ಟಣವಾದ ಭಾರತ್ ಸಿಟಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಘಟನೆಯ ಹಿಂದಿನ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ತಿಳಿಯಲು  ಆತ್ಮಹತ್ಯೆ ಪತ್ರ ಅಥವಾ ಡಿಜಿಟಲ್ ಪುರಾವೆಗಳು ಲಭ್ಯವಿದೆಯೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ಸ್ಪಷ್ಟವಾಗಿಲ್ಲ.

ಮತ್ತಷ್ಟು ಓದಿ: ಸಿ.ಜೆ.ರಾಯ್​​​ ಆತ್ಮಹತ್ಯೆ: ಮೋದಿ, ನಿರ್ಮಲಾ ಸೀತಾರಾಮನ್​ಗೆ ಮೋಹನ್ ದಾಸ್ ಪೈ ವಿಶೇಷ ಮನವಿ

ಹುಡುಗಿಯರು ಬಾಲ್ಕನಿಯಲ್ಲಿ ಪ್ಲಾಸ್ಟಿಕ್ ಕುರ್ಚಿಯನ್ನು ಇಟ್ಟು ಒಂಬತ್ತನೇ ಮಹಡಿಯಿಂದ ಒಬ್ಬೊಬ್ಬರಾಗಿ ಹಾರಿದ್ದಾರೆ. ಬಿದ್ದ ಕಾರಣ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಬ್ದ ಕೇಳಿ ಜನರು ಮತ್ತು ಕುಟುಂಬ ಸದಸ್ಯರು ಬರುವ ಹೊತ್ತಿಗೆ ಎಲ್ಲವೂ ಮುಗಿದಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ, ಶವಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಇಂತಹ ಟಾಸ್ಕ್ ಆಧಾರಿತ ಆಟಗಳಲ್ಲಿ, ಅಪಾಯಕಾರಿ ಸವಾಲುಗಳನ್ನು ನೀಡಲಾಗುತ್ತದೆ, ಅವುಗಳನ್ನು ಪೂರ್ಣಗೊಳಿಸಲು ಅವರು ಮಾನಸಿಕವಾಗಿ ಸವಾಲು ಎದುರಿಸುತ್ತಾರೆ. ಮೂವರು ಸಹೋದರಿಯರು ಅಂತಿಮ ಟಾಸ್ಕ್ ಪೂರ್ಣಗೊಳಿಸಲು ಅಥವಾ ಆಟದ ಪ್ರಭಾವದಿಂದ ಈ ತೀವ್ರ ಹೆಜ್ಜೆ ಇಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಆದಾಗ್ಯೂ, ಪೊಲೀಸರು ಈ ಕೋನವನ್ನು ಕೂಲಂಕಷವಾಗಿ ತನಿಖೆ ಮಾಡುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

RCB ತಂಡ ಮಾರಾಟಕ್ಕಿದೆ… ಇಷ್ಟು ಕೋಟಿ ಇದ್ದರೆ ನೀವು ಸಹ ಖರೀದಿಸಬಹುದು! – Kannada News | IPL 2026: RCB sale ‘launched’ by Diageo

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಮಾರಾಟಕ್ಕೆ ಡಿಯಾಜಿಯೋ ಕಂಪೆನಿ ಮುಂದಾಗಿದೆ. ಈ ಮಾರಾಟ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಗಿದ್ದು, ಆರ್​ಸಿಬಿ ಫ್ರಾಂಚೈಸಿಯ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್ ಎಂದು ಘೋಷಿಸಲಾಗಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 18,000 ಕೋಟಿ ರೂ.

ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಬಿಡ್ಡಿಂಗ್ ಸುಮಾರು 18 ಸಾವಿರ ಕೋಟಿ ರೂ.ನಿಂದ ಶುರುವಾಗಲಿದೆ. ಈಗಾಗಲೇ ಕೆಲ ಉದ್ಯಮಿಗಳು ಆರ್​ಸಿಬಿ ತಂಡದ ಖರೀದಿಗೆ ಆಸಕ್ತಿ ತೋರಿದ್ದು, ಹೀಗಾಗಿ ಈ ಮೊತ್ತವು ಮತ್ತಷ್ಟು ಏರಿಕೆಯಾಗುವುದರಲ್ಲಿ ಅನುಮಾನವೇ ಇಲ್ಲ.

ಝೆರೋಧಾ ಕಂಪೆನಿಯ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಯ (MEMG) ಅಧ್ಯಕ್ಷ ರಂಜನ್ ಪೈ ಜೊತೆಗೂಡಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದಾರೆ ಈ ಹಿಂದೆ ವರದಿಯಾಗಿತ್ತು.

ಅತ್ತ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನವಾಲ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಗೆ ಆಸಕ್ತಿ ಹೊಂದಿದ್ದಾರೆ.

ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಕೂಡ ಆರ್​ಸಿಬಿ ಮೇಲೆ ಕಣ್ಣಿಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಾಗಿ ಅವರ ಜೆಎಸ್​ಡಬ್ಲ್ಯೂ ಗ್ರೂಪ್ ಬಿಡ್ ಮಾಡಲಿದೆ ಎಂದು ತಿಳಿದು ಬಂದಿದೆ.

ಇನ್ನೊಂದೆಡೆ ಅದಾನಿ ಗ್ರೂಪ್ ಕೂಡ ಆರ್​ಸಿಬಿ ಫ್ರಾಂಚೈಸಿಯನ್ನು ಖರೀದಿಸಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಎಂಟ್ರಿ ಕೊಡಲು ಪ್ಲ್ಯಾನ್ ರೂಪಿಸುತ್ತಿದೆ. ಹೀಗಾಗಿ ಅದಾನಿ ಗ್ರೂಪ್​ ಕಡೆಯಿಂದ ಬಿಡ್ಡಿಂಗ್​ನಲ್ಲಿ ಪೈಪೋಟಿ ಎದುರಾಗಲಿದೆ.

ಈ ಉದ್ಯಮಿಗಳಲ್ಲದೆ ದೇವಯಾನಿ ಇಂಟರ್​ನ್ಯಾಷನಲ್ ಗ್ರೂಪ್ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಗೆ ಆಸಕ್ತಿ ತೋರಿದೆ. ಹಾಗೆಯೇ ಅಮೆರಿಕದ ಪ್ರೈವೆಟ್ ಇನ್​ವೆಸ್ಟ್​ಮೆಂಟ್ ಕಂಪೆನಿಯೊಂದು ಕೂಡ ಆರ್​ಸಿಬಿ ಫ್ರಾಂಚೈಸಿ ಖರೀದಿಗಾಗಿ ಡಿಯಾಜಿಯೊ ಕಂಪೆನಿ ಜೊತೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 5 ಓವರ್​ಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ ವೆಸ್ಟ್ ಇಂಡೀಸ್

ಇದೀಗ 18 ಸಾವಿರ ಕೋಟಿ ರೂ. ಬ್ರ್ಯಾಂಡ್ ಮೌಲ್ಯದೊಂದಿಗೆ ಆರ್​ಸಿಬಿ ಫ್ರಾಂಚೈಸಿಯನ್ನು ಡಿಯಾಜಿಯೋ ಕಂಪೆನಿ ಮಾರಾಟಕ್ಕಿಟ್ಟಿದೆ ಎಂದು  Sportico ವರದಿ ಮಾಡಿದೆ. ಈ ಮಾರಾಟ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆತಿರುವುದರಿಂದ ಪ್ರಮುಖ ಕಂಪೆನಿಗಳ ಕಡೆಯಿಂದ ಬಿಡ್ಡಿಂಗ್​ನಲ್ಲಿ ಪೈಪೋಟಿ ನಡೆಯಬಹುದು. ಈ ಪೈಪೋಟಿಯೊಂದಿಗೆ ಆರ್​ಸಿಬಿ ಫ್ರಾಂಚೈಸಿಯು ಎಷ್ಟು ಕೋಟಿಗೆ ಮಾರಾಟವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

RCB ಫ್ರಾಂಚೈಸಿ ಖರೀದಿಗೆ ಆಸಕ್ತಿ ಹೊಂದಿರುವವರು:

  • ಜೆಎಸ್​ಡಬ್ಲ್ಯೂ ಗ್ರೂಪ್ (ಪಾರ್ಥ್ ಜಿಂದಾಲ್)
  • ಅದಾನಿ ಗ್ರೂಪ್ (ಗೌತಮ್ ಅದಾನಿ)
  • ಪೂನಾವಾಲ ಗ್ರೂಪ್ (ಆದಾರ್ ಪೂನಾವಾಲ)
  • ನಿಖಿಲ್ ಕಾಮತ್ (ಝೆರೋಧಾ ಕಂಪೆನಿ)
  • ರಂಜನ್ ಪೈ (ಮಣಿಪಾಲ್ ಗ್ರೂಪ್)
  • ದೇವಯಾನಿ ಇಂಟರ್ನ್ಯಾಷನಲ್ ಗ್ರೂಪ್ (ರವಿಕಾಂತ್ ಜೈಪುರಿಯಾ)
  • ಅಮೆರಿಕದ ಪ್ರೈವೆಟ್ ಇನ್​ವೆಸ್ಟ್​ಮೆಂಟ್ ಕಂಪೆನಿ

Source link

‘ಧುರಂಧರ್’ ವಿಷಯದಲ್ಲಿ ಮಾಡಿದ ತಪ್ಪಿಗೆ ಭಾರೀ ದಂಡ ತೆತ್ತ ನೆಟ್​​ಫ್ಲಿಕ್ಸ್? – Kannada News | Netflix’s ‘Dhurandhar’ Blunder: Lost ‘Dhurandhar 2’ OTT Rights to Hotstar

‘ಧುರಂಧರ್’ ಸಿನಿಮಾ (Dhurandhar) ವಿಷಯದಲ್ಲಿ ನೆಟ್​​ಫ್ಲಿಕ್ಸ್ ಸಂಸ್ಥೆ ದೊಡ್ಡ ತಪ್ಪೊಂದನ್ನು ಮಾಡಿತ್ತು. ಈ ಚಿತ್ರವನ್ನು ಒಟಿಟಿಯಲ್ಲಿ ಪ್ರಸಾರ ಮಾಡುವಾಗ 10 ನಿಮಿಷಗಳ ದೃಶ್ಯಕ್ಕೆ ಕತ್ತರಿ ಹಾಕಿದೆ. ಅಲ್ಲದೆ, ಹಲವು ಪದಗಳನ್ನು ಮ್ಯೂಟ್ ಮಾಡಿದೆ. ಇಷ್ಟೇ ಅಲ್ಲ, ಸಿನಿಮಾದ ಗುಣಮಟ್ಟವನ್ನು ತಗ್ಗಿಸಿದೆ. ಇದು ಸಂಸ್ಥೆಗೆ ತುಂಬಾನೇ ದುಬಾರಿ ಆಯಿತೇ ಎಂಬ ಪ್ರಶ್ನೆ ಮೂಡಿದೆ. ಈಗ ‘ಧರುಂಧರ್ 2’ ಸಿನಿಮಾದ ಒಟಿಟಿ ಹಕ್ಕು ನೆಟ್​​ಫ್ಲಿಕ್ಸ್ ಕೈತಪ್ಪಿದೆ. ಎರಡನೇ ಪಾರ್ಟ್ ಹಾಟ್​ಸ್ಟಾರ್ ಮೂಲಕ ತೆರೆಗೆ ಬರುತ್ತಿದೆ.

‘ಧುರಂಧರ್ 2’ ಸಿನಿಮಾ ಡಿಸೆಂಬರ್ 5ರಂದು ತೆರೆಗೆ ಬಂತು. ಈ ಚಿತ್ರದ ಮೊದಲ ಭಾಗದ ಬಜೆಟ್ 250 ಕೋಟಿ ರೂಪಾಯಿ ಎನ್ನಲಾಗಿದೆ. ಎರಡೂ ಪಾರ್ಟ್ ಸೇರಿದರೆ 475 ಕೋಟಿ ರೂಪಾಯಿ ಆಗಿದೆಯಂತೆ. ಮೊದಲ ಭಾಗದ ಬಾಕ್ಸ್ ಆಫೀಸ್ ಕಲೆಕ್ಷನ್ 1350 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾನ ಜಿಯೋ ಸ್ಟುಡಿಯೋಸ್ ನಿರ್ಮಿಸಿದೆ. ಬಿ62 ಸ್ಟುಡಿಯೋಸ್ ಕೂಡ ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸಿದೆ. ಮೊದಲ ಭಾಗದ ಒಟಿಟಿ ಹಕ್ಕನ್ನು ನೆಟ್​​ಫ್ಲಿಕ್ಸ್​​ಗೆ ನೀಡಲಾಗಿತ್ತು. ಆದರೆ, ಎರಡನೇ ಪಾರ್ಟ್ ವಿಷಯದಲ್ಲಿ ಸಂಸ್ಥೆ ನಿರ್ಧಾರ ಬದಲಿಸಿದೆ.

‘ಧುರಂಧರ್ 2’ ಸಿನಿಮಾ ಜಿಯೋ ಹಾಟ್​ಸ್ಟಾರ್ ಮೂಲಕ ಪ್ರಸಾರ ಕಾಣಲಿದೆ. ಟೀಸರ್​​ನಲ್ಲಿ ಈ ವಿಷಯ ತಿಳಿದುಬಂದಿದೆ. ‘ಧುರಂಧರ್ 2’ ಟೀಸರ್ ಕೊನೆಯಲ್ಲಿ ಜಿಯೋ ಹಾಟ್​​ಸ್ಟಾರ್ ಹೆಸರನ್ನು ಉಲ್ಲೇಖ ಮಾಡಲಾಗಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಒಟಿಟಿ ಪ್ರೇಕ್ಷಕನಿಗೆ ‘ಧುರಂಧರ್’ ಚಿತ್ರದ ನಿಜವಾದ ಅನುಭವವನ್ನು ‘ನೆಟ್​ಫ್ಲಿಕ್ಸ್’ ಹಾಳು ಮಾಡಿದೆ. ಈ ಕಾರಣದಿಂದ ನಿರ್ಮಾಣ ಸಂಸ್ಥೆ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ‘ಧುರಂಧರ್ 2’ ಚಿತ್ರವನ್ನು‘ಟಾಕ್ಸಿಕ್’ ಕಬಳಿಸಿಯಾಗಿದೆ; ಹಿಂದಿ ಮಂದಿಯ ಅಭಿಪ್ರಾಯ

ಆದರೆ, ಅಸಲಿಗೆ ಹಾಗಿರೋದಿಲ್ಲ. ಏಕೆಂದರೆ, ಈ ಡೀಲ್​​ಗಳು ಏಕಾಏಕಿ ನಡೆಯೋದಿಲ್ಲ. ರಾತ್ರೋರಾತ್ರಿ ಒಪ್ಪಂದ ಬದಲಿಸಿಕೊಳ್ಳಲು ಸಾಧ್ಯವಿಲ್ಲ. ಜಿಯೋ ಸ್ಟುಡಿಯೋಸ್ ಅಡಿಯಲ್ಲೇ ಜಿಯೋ ಹಾಟ್​​ಸ್ಟಾರ್ ಕೂಡ ಬರುತ್ತದೆ. ಈ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು. ಈ ಮೊದಲು ಹಾಟ್​​ಸ್ಟಾರ್ ಜಿಯೋ ಸಂಸ್ಥೆಯ ಅಡಿಯಲ್ಲಿ ಇರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಥೆಲ್ ಸ್ಪಿನ್​ಗೆ ‘ತಿರುಗಿ’ ಬಿದ್ದ ಶ್ರೀಲಂಕಾ

ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲೂ ಇಂಗ್ಲೆಂಡ್ ತಂಡ ಜಯ ಸಾಧಿಸಿದೆ. ಆದರೆ ಈ ಬಾರಿ ಗೆದ್ದಿರುವುದು ಕೇವಲ 12 ರನ್​ಗಳ ಅಂತರದಿಂದ. ಈ ಗೆಲುವಿನ ರೂವಾರಿ ಜೇಕಬ್ ಬೆಥೆಲ್. ಪಲ್ಲೆಕೆಲ್ಲೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 128 ರನ್​ಗಳು ಮಾತ್ರ.

129 ರನ್​ಗಳ ಸುಲಭ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು 15 ಓವರ್​ಗಳಲ್ಲಿ 97 ರನ್ ಕಲೆಹಾಕಿದ್ದರು. ಈ ಹಂತದಲ್ಲಿ ದಾಳಿಗಿಳಿದ ಜೇಕಬ್ ಬೆಥೆಲ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

ಅಂತಿಮ ಹಂತದಲ್ಲಿ 3.3 ಓವರ್​ಗಳನ್ನು ಎಸೆದ ಬೆಥೆಲ್ ಕೇವಲ 11 ರನ್ ನೀಡಿ 4 ವಿಕೆಟ್ ಉರುಳಿಸಿದರು. ಪರಿಣಾಮ ಶ್ರೀಲಂಕಾ ತಂಡವು 19.3 ಓವರ್​ಗಳಲ್ಲಿ 116 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ ತಂಡ 12 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

Source link

ಲಿಬಿಯಾದ ಮಾಜಿ ಸರ್ವಾಧಿಕಾರಿ ಗಡಾಫಿಯ ಮಗ ಸೈಫ್ ಅಲ್-ಇಸ್ಲಾಂನ ಗುಂಡಿಕ್ಕಿ ಹತ್ಯೆ – Kannada News | Libya: Saif al Islam Gaddafi, Son of Muammar, Killed by Gunmen Amid Political Turmoil

ಲಿಬಿಯಾ, ಫೆಬ್ರವರಿ 04: ಲಿಬಿಯಾದಲ್ಲಿ ರಾಜಕೀಯ ಉದ್ವಿಗ್ನತೆ ಮತ್ತೊಮ್ಮೆ ಉತ್ತುಂಗಕ್ಕೇರಿದೆ. ಜಿಂಟಾನ್ ನಗರದ ಮನೆಯೊಂದಕ್ಕೆ ನುಗ್ಗಿದ ನಾಲ್ವರು ಅಪರಿಚಿತ ಬಂದೂಕುಧಾರಿಗಳು ಲಿಬಿಯಾದ ಮಾಜಿ ಸರ್ವಾಧಿಕಾರಿ ಗಡಾಫಿಯ ಮಗ  ಸೈಫ್ ಅಲ್-ಇಸ್ಲಾಂ ಗಡಾಫಿಯನ್ನು ಹತ್ಯೆ(Murder)ಗೈದಿದ್ದಾರೆ. ತಮ್ಮ ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಸೈಫ್ ಅಲ್-ಇಸ್ಲಾಂಗೆ 53 ವರ್ಷ ವಯಸ್ಸಾಗಿತ್ತು. ಲಿಬಿಯಾದ ಅಧಿಕಾರಿಗಳು ಮತ್ತು ಕುಟುಂಬ ಮೂಲಗಳು ಮಂಗಳವಾರ ಈ ಘಟನೆಯನ್ನು ದೃಢಪಡಿಸಿವೆ.

ಸೈಫ್ ಅಲ್-ಇಸ್ಲಾಂ ಗಡಾಫಿ ಲಿಬಿಯಾದ ಮಾಜಿ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯವರ ಮಗ, ಅವರು ತಮ್ಮ ತಂದೆಯ ಆಡಳಿತದಲ್ಲಿ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿದ್ದರು. ಅವರ ಹತ್ಯೆಯ ಉದ್ದೇಶ ಸ್ಪಷ್ಟವಾಗಿಲ್ಲವಾದರೂ, ಈ ಘಟನೆಯು ಮತ್ತೊಮ್ಮೆ ಲಿಬಿಯಾದ ಅಸ್ಥಿರ ಭದ್ರತಾ ವ್ಯವಸ್ಥೆ ಮತ್ತು ದೀರ್ಘಕಾಲದ ರಾಜಕೀಯ ಸಂಘರ್ಷವನ್ನು ಬೆಳಕಿಗೆ ತಂದಿದೆ.

ಲಿಬಿಯಾದ ಮಾಧ್ಯಮಗಳ ಪ್ರಕಾರ, ಸೈಫ್ ಅಲ್-ಇಸ್ಲಾಂ ಅವರ ವಕೀಲ ಖಲೀದ್ ಅಲ್-ಝೈದಿ ಮತ್ತು ರಾಜಕೀಯ ಪ್ರತಿನಿಧಿಗಳು ವಾಯುವ್ಯ ಲಿಬಿಯಾದ ಜಿಂಟಾನ್ ನಗರದಲ್ಲಿರುವ ಅವರ ಮನೆಯಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ದೃಢಪಡಿಸಿದ್ದಾರೆ. ಅವರ ರಾಜಕೀಯ ತಂಡದ ಹೇಳಿಕೆಯ ಪ್ರಕಾರ, ನಾಲ್ವರು ಮುಸುಕುಧಾರಿ ಬಂದೂಕುಧಾರಿಗಳು ಅವರ ನಿವಾಸಕ್ಕೆ ಪ್ರವೇಶಿಸಿ, ಭದ್ರತಾ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿ, ಘರ್ಷಣೆಯ ನಂತರ ಗುಂಡು ಹಾರಿಸಿದ್ದಾರೆ.

ಲಿಬಿಯಾದ ಅಧಿಕಾರಿಗಳು ಹತ್ಯೆಯ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆದಾಗ್ಯೂ, ಹತ್ಯೆಯ ಹಿಂದಿನ ಉದ್ದೇಶ ಅಥವಾ ಸಂಚು ರೂಪಿಸಿದವರು ಯಾರು ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ದಾಳಿಕೋರರು ಕಮಾಂಡೋ ಘಟಕದವರೆಂದು ಹೇಳಲಾಗುತ್ತದೆ.

ಮತ್ತಷ್ಟು ಓದಿ: ಒಂದೇ ಮಹಿಳೆಯ ಜತೆಗೆ ಇಬ್ಬರ ಅನೈತಿಕ ಸಂಬಂಧ: ಚಾಕುವಿನಿಂದ ಇರಿದು ಕೊಲೆ

ಜೂನ್ 1972 ರಲ್ಲಿ ಟ್ರಿಪೋಲಿಯಲ್ಲಿ ಜನಿಸಿದ ಸೈಫ್ ಅಲ್-ಇಸ್ಲಾಂ, ಗಡಾಫಿ , ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪಿಎಚ್‌ಡಿ ಪದವಿ ಪಡೆದಿದ್ದರು.ನಾಲ್ಕು ದಶಕಗಳ ಅಧಿಕಾರದ ನಂತರ 2011 ರಲ್ಲಿ ನ್ಯಾಟೋ ಬೆಂಬಲಿತ ದಂಗೆಯಲ್ಲಿ ಮೊಅಮ್ಮರ್ ಗಡಾಫಿ ಅವರನ್ನು ಪದಚ್ಯುತಗೊಳಿಸಲಾಯಿತು. ಆ ವರ್ಷದ ಕೊನೆಯಲ್ಲಿ ದೇಶವು ಸಂಘರ್ಷಕ್ಕೆ ಸಿಲುಕಿದಾಗ ಅವರನ್ನು ಕೊಲ್ಲಲಾಯಿತು.

ನವೆಂಬರ್ 2021 ರಲ್ಲಿ, ಅವರು ಲಿಬಿಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಉಮೇದುವಾರಿಕೆಯನ್ನು ಘೋಷಿಸುವ ಮೂಲಕ ರಾಜಕೀಯ ಪುನರಾಗಮನಕ್ಕೆ ಪ್ರಯತ್ನಿಸಿದರು. ಅವರ ನಿರ್ಧಾರವು ದೇಶಾದ್ಯಂತ ಗಡಾಫಿ ವಿರೋಧಿ ಗುಂಪುಗಳಿಂದ ತೀವ್ರ ವಿರೋಧವನ್ನು ಹುಟ್ಟುಹಾಕಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪೋಷಕರು ಬೈದಿದ್ದಕ್ಕೆ ಬಸ್​ ಫ್ರೀ ಎಂದು ತಮ್ಮನ ಜೊತೆ ಮನೆಬಿಟ್ಟು ಹೋಗಿ ಊರೂರು ಸುತ್ತಿದ ಬಾಲಕಿ – Kannada News | Bengaluru: 13 Year Old Girl Runs Away with 9 Year Old Brother, Uses Free Bus Service After Parental Scolding

ಬೆಂಗಳೂರು, ಫೆಬ್ರವರಿ 04: ದುಡಿಯುವ, ಬಡ ಮಹಿಳೆಯರಿಗೆ ಅನುಕೂಲವಾಗಲೆಂದು ಸಾಮಾನ್ಯ ಸರ್ಕಾರಿ ಸಾರಿಗೆ ಬಸ್​​ಗಳಲ್ಲಿ ಉಚಿತ ಪ್ರಯಾಣವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಆದ್ರೆ ಇದೇ ಯೋಜನೆಯಿಂದ ಕುಟುಂಬವೊಂದು ಕಂಗಾಲಾಗಿರುವ ಅಚ್ಚರಿಯ ಘಟನೆ ಬೆಂಗಳೂರಲ್ಲಿ ನಡೆದಿದೆ. ಟ್ಯೂಷನ್ ಗೆ ಹೋಗಲ್ಲ ಎಂದು ಮಕ್ಕಳಿಗೆ ಪೋಷಕರು ಬೈದ ಕಾರಣ 13 ವರ್ಷದ ಬಾಲಕಿಯೋರ್ವಳು ತನ್ನ 9 ವರ್ಷದ ತಮ್ಮನ ಜೊತೆ ಫ್ರೀ ಬಸ್​​ನಲ್ಲಿ ಊರೂರು ಸುತ್ತಿದ್ದಾಳೆ. ಮಾರತ್ತಹಳ್ಳಿಯ ಅಶ್ವತ್ಥನಗರದಿಂದ ತೆರಳಿದ್ದ ಅಕ್ಕ-ತಮ್ಮ ಶಿವಮೊಗ್ಗ ಮತ್ತು ಚಿತ್ರದುರ್ಗದಲ್ಲಿ ಓಡಾಡಿದ್ದು, ಪೊಲೀಸರ ಸಹಕಾರದಿಂದ ಮಕ್ಕಳು ಅಂತಿಮವಾಗಿ ಮರಳಿ ಹೆತ್ತವರ ಮಡಿಲು ಸೇರಿರುವ ಪ್ರಸಂಗ ನಡೆದಿದೆ.

ಹೌದು, ಹೆತ್ತವರು ಬೈದಿದ್ದಕ್ಕೆ ಕೋಪಗೊಂಡ ಮಕ್ಕಳು ಮನೆಬಿಟ್ಟು ತೆರಳಿದ್ದಾರೆ. ಆಧಾರ್ ಕಾರ್ಡ್ ಇರೋದ್ರಿಂದ ಸರ್ಕಾರಿ ಬಸ್​​ಗಳಲ್ಲಿ ಬಾಲಕಿಗೆ ಉಚಿತವಾಗಿ ಪ್ರಯಾಣಿಸಿದ್ದರೆ, ತಮ್ಮನಿಗೆ ಟಿಕೆಟ್​​ ಮಾಡದೆ ಕರೆದೊಯ್ದಿದ್ದಳು. ಇತ್ತ ಮಕ್ಕಳು ಕಾಣೆಯಾಗಿರುವ ಬಗ್ಗೆ ಆತಂಕಗೊಂಡ ಪೋಷಕರು ಅವರಿಗಾಗಿ ಹುಡುಕಾಡಿದ್ದಾರೆ. ಬಳಿಕ HAL ಠಾಣೆಯಲ್ಲಿ ನಾಪತ್ತೆ ದೂರು ಕೂಡ ದಾಖಲಿಸಿದ್ದಾರೆ. ತಕ್ಷಣ ಅಲರ್ಟ್​​ ಆದ ಪೊಲೀಸರು ಈ ಬಗ್ಗೆ ರಾಜ್ಯಾದ್ಯಂತ ಪೊಲೀಸರಿಗೆ ಮಾಹಿತಿ ನೀಡುವ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಮಕ್ಕಳ ಕುರಿತು ಮಾಹಿತಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಪೊಲೀಸರ ಸಮಯಪ್ರಜ್ಞೆಯಿಂದ ಬೆಂಗಳೂರಿನಲ್ಲಿ ತಪ್ಪಿದ ಭಾರೀ ದೊಡ್ಡ ದುರಂತ

ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳ ಪರಿಶೀಲನೆ ನಡೆಸಿದಾಗ ಅಶ್ವತ್ಥನಗರ ಮನೆಯಿಂದ ಬ್ಯಾಗ್ ಹಿಡಿದು ಹೊರಟಿದ್ದ ಮಕ್ಕಳು ಮಾರತ್ತಹಳ್ಳಿ ಬ್ರಿಡ್ಜ್ ಸ್ಕೈ ವಾಕ್ ಹತ್ತಿ ಬಂದಿದ್ದಾರೆ. ಅಲ್ಲಿಂದ ಮೆಜೆಸ್ಟಿಕ್​​ಗೆ ಬಂದು ನೇರವಾಗಿ‌ ಶಿವಮೊಗ್ಗಗೆ ತೆರಳಿದ್ದಾರೆ ಎಂಬುದು ಗೊತ್ತಾಗಿದೆ. ಹೀಗೆ ಬಸ್​​ ಹತ್ತಿಹೋದ ಇವರು ಭದ್ರವಾತಿಯಲ್ಲಿ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ಸಂದೇಶ ನೋಡಿ ಪೊಲೀಸರಿಗೆ ಕರೆ ಬಂದಿದೆ. ಫೋಟೊದಲ್ಲಿರುವ ಮಕ್ಕಳ ರೀತಿಯಲ್ಲೇ ಕಾಣುವ ಇಬ್ಬರು ಇಲ್ಲಿದ್ದಾರೆಂಬ ಮಾಹಿತಿ ಸಿಕ್ಕ ಕಾರಣ ವಿಷಯವನ್ನು HAL ಪೊಲೀಸರು ಸ್ಥಳೀಯ ಠಾಣೆಗೆ ತಿಳಿಸಿದ್ದಾರೆ. ಅವರು ಮಕ್ಕಳನ್ನು ರಕ್ಷಿಸಿದ್ದು, ಭದ್ರಾವತಿತಿಂದ ಹೆಚ್ಎಎಲ್ ಠಾಣೆಗೆ ಮನೆಬಿಟ್ಟು ತೆರಳಿದ್ದ ಅಕ್ಕ ಮತ್ತು ತಮ್ಮನನ್ನು ಕರೆತರಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಹಿಳೆಯ ಕಾಲು ಕತ್ತರಿಸಿ 6.5 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದೋಚಿದ ಕಳ್ಳರು – Kannada News | Rajasthan Woman Brutally Injured as Thieves Target Jewellery Worth Rs6.5 Lakh

ಜೈಪುರ, ಫೆಬ್ರವರಿ 04: ಮಹಿಳೆಯಯನ್ನು ಕ್ರೂರವಾಗಿ ಕೊಲೆ(Murder) ಮಾಡಿ, ಆಕೆಯ ಬಳಿ ಇದ್ದ 6.5 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದುಷ್ಕರ್ಮಿಗಳು ದೋಚಿರುವ ಘಟನೆ ರಾಜಸ್ಥಾನ(Rajasthan)ದಲ್ಲಿ ನಡೆದಿದೆ. ಮಹಿಳೆಯ ಗಂಟಲು ಸೀಳಿ, ಕಾಲುಗಳಲ್ಲಿ ಕತ್ತರಿಸಿ ಆಭರಣಗಳನ್ನು ದೋಚಲಾಗಿದೆ. ಕೊಲೆ ನಡೆದ ಸಮಯದಲ್ಲಿ ಆಕೆ ಮೇಕೆ ಮೇಯಿಸಲು ಕಾಡಿಗೆ ಹೋಗಿದ್ದರು, ವಾಪಸ್ ಬಾರದ ಹಿನ್ನೆಲೆಯಲ್ಲಿ ಮಗ ಆಕೆಯನ್ನು ಹುಡುಕಿಕೊಂಡು ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಈ ಘಟನೆ ಕೊಡೈ ಗ್ರಾಮದಲ್ಲಿ ನಡೆದಿದ್ದು, ಸಂಜೆಯಾದರೂ ದೇವಿ ಮನೆಗೆ ಹಿಂತಿರುಗದಿದ್ದಾಗ ಅನುಮಾನ ಬಂದಿತ್ತು. ಆಕೆಯ ಕುಟುಂಬ ಮತ್ತು ಇತರ ಗ್ರಾಮಸ್ಥರು ಆತಂಕಗೊಂಡರು. ನಂತರ, ಆಕೆಯ ಮಗ ಆಕೆಯನ್ನು ಹುಡುಕಲು ಕಾಡಿಗೆ ಹೋದಾಗ ಕತ್ತರಿಸಿದ ಕಾಲುಗಳು ಗ್ರಾಮದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ತಾಯಿಯ ಶವ ಬಿದ್ದಿರುವುದು ಮಗನ ಕಣ್ಣಿಗೆ ಬಿದ್ದಿತ್ತು.
ಸಂತ್ರಸ್ತೆಯ ದೇಹದಿಂದ ಚಿನ್ನದ ಪೆಂಡೆಂಟ್, ಕಿವಿಯೋಲೆಗಳು ಮತ್ತು ಮೂಗುತಿ ಸಹ ಕಳವು ಮಾಡಲಾಗಿದೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ.

ದಾಳಿಕೋರರು ದೇವಿಯನ್ನು ಕೊಂದು, ಆಕೆಯ ದೇಹದಲ್ಲಿರುವ ಎಲ್ಲಾ ಆಭರಣಗಳನ್ನು ತೆಗೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೀಲ್ ಕಮಲ್ ಮೀನಾ ಮತ್ತು ಇತರ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿದರು. ದಾಳಿಕೋರರನ್ನು ಬಂಧಿಸಲಾಗಿಲ್ಲ ಮತ್ತು ದಾಳಿಕೋರರನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಪತ್ನಿಯೊಂದಿಗೆ ಅನೈತಿಕ ಸಂಬಂಧ ಶಂಕೆ: ಮದ್ಯ ಕುಡಿಸಿ ಸ್ನೇಹಿತನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಯುವಕ

ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ, ಕೈಕಾಲು ಕಟ್ಟಿ ಕಾಡಿಗೆ ಬಿಟ್ರು
ಒಡಿಶಾದ ಕಂಧಮಲ್ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿ ಕೈಕಾಲು ಕಟ್ಟಿ ಕಾಡಿನಲ್ಲಿ ಎಸೆದು ಹೋಗಿರುವ ಘಟನೆ ನಡೆದಿದೆ. ಪೊಲೀಸರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಯುತ್ತಿದೆ. ಬೆಲ್ಘರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಆರೋಪಿಗಳು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ವಿರೋಧಿಸಿದಾಗ ಆಕೆಯ ಬಟ್ಟೆಗಳನ್ನು ಹರಿದು ನಗ್ನ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ನಂತರ ಆ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.ಆಕೆಯನ್ನು ತೀವ್ರವಾಗಿ ಥಳಿಸಿ, ಬಟ್ಟೆಯಿಂದ ಬಾಯಿ ಕಟ್ಟಿ, ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿ, ನಂತರ ಕಾಡಿನಲ್ಲಿ ಬಿಟ್ಟು ಹೋಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿಂದು ಚಳಿಯ ಜೊತೆಗೆ ಶುಷ್ಕ ಹವಾಮಾನ – Kannada News | Bengaluru temperature: clear sky in Bengaluru, Dry weather all over Karnataka

ಬೆಂಗಳೂರಿನಲ್ಲಿಂದು ಚಳಿಯ ಜೊತೆಗೆ ಶುಷ್ಕ ಹವಾಮಾನ

ಬೆಂಗಳೂರು, ಫೆಬ್ರುವರಿ 04: ರಾಜ್ಯದಲ್ಲಿ ಹಲವು ದಿನಗಳಿಂಧ ಶುಷ್ಕ ವಾತಾವರಣವೇ (Weather Forecast) ಕಂಡುಬರುತ್ತಿದ್ದು, ಇಂದೂ ಸಹ ಅದೇ ಹವಾಮಾನವಿರಲಿದೆ ಎಂದು ಇಲಾಖೆ ತಿಳಿಸಿದೆ. ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನವಿರುವುದರಿಂದ ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಕ

ಎಲ್ಲೆಲ್ಲಿ ಒಣಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಚಳಿಯ ವಾತಾವರಣ

ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 27°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇಂದು ನಗರದಲ್ಲಿ ಎಂದಿನಂತೆ ಚಳಿಯ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಒಬ್ಬಳ ಮೇಲೆ ಇಬ್ಬರಿಗೆ ಲವ್​: ನೇಪಾಳಿ ಯುವತಿಗಾಗಿ ನಡೆದ ಗಲಾಟೆಯಲ್ಲಿ ನಡೆದಿದ್ದು ರಕ್ತಪಾತ! – Kannada News | Bengaluru Stabbing: Love Triangle Leads to Violence in Devasandra

ಬೆಂಗಳೂರು, ಫೆಬ್ರವರಿ 04: ಯುವತಿ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಓರ್ವನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರಿನ ಕೆ.ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸಂದ್ರದಲ್ಲಿ ನಡೆದಿದೆ. ರೋಷನ್​​ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದು, ಆರೋಪಿ ಮಾಮು ಮತ್ತು ಸಹಚರರು ಘಟನೆ ಬಳಿಕ ತಲೆಮರೆಸಿಕೊಂಡಿದ್ದಾರೆ. ರೋಷನ್​​ ಸ್ಥಿತಿ ಸದ್ಯ ಚಿಂತಾಜನಕವಾಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಗಿದ್ದು, ಆರೋಪಿಗಳಿಗಾಗು ಶೋಧ ಮುಂದುವರಿದಿದೆ.

ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ರೋಷನ್​​ ನೇಪಾಳಿ ಯುವತಿಯೋರ್ವಳ ಹಿಂದೆ ಬಿದ್ದಿದ್ದ. ಆರೋಪಿ ಮಾಮುಗೆ ಕೂಡ ಅದೇ ಯುವತಿಯ ಮೇಲೆ ಲವ್​​ ಆಗಿತ್ತು. ಈ ರೋಷನ್ ಮತ್ತು ಮಾಮು ಇಬ್ಬರ ನಡುವೆ ತಕ್ಕಮಟ್ಟಿನ ಪರಿಚಯ ಕೂಡ ಇದ್ದು, ಇಬ್ಬರೂ ಭೇಟಿಯಾಗೋಣ ಎಂದು ಫೆಬ್ರವರಿ ಒಂದರಂದು ರಾತ್ರಿ 8.30ರ ಸುಮಾರಿಗೆ ದೇವಸಂದ್ರಕ್ಕೆ ಬಂದಿದ್ದರು. ರೋಷನ್ ಸ್ಥಳಕ್ಕೆ ಬರ್ತಿದ್ದ ಹಾಗೆ ಮಾಮುವಿನ ಹತ್ತರಿಂದ ಹದಿನೈದು ಜನ ಸ್ನೇಹಿತರು ಅಲ್ಲಿಗೆ ಬಂದಿದ್ದಾರೆ. ಮಾತಿಗೆ ಮಾತು ಬೆಳೆದು ರೋಷನ್ ಮೇಲೆ ಕೈ ಮಾಡಿದ್ದಾರೆ. ಇದರಿಂದ ಕೂಡಲೇ ರೊಚ್ಚಿಗೆದ್ದ ರೋಷನ್ ಆಕಡೆ ಈಕಡೆ ಓಡಾಡಿದವನೇ ಒಂದು ಕಲ್ಲು ಎತ್ತಿಕೊಂಡು ಬಂದು ಮಾಮು ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಯುವಕರ ಗುಂಪು ಚಾಕುನಿಂದ ರೋಷನ್ ಕುತ್ತಿಗೆ ಭಾಗಕ್ಕೆ ಮನಬಂದಂತೆ ಇರಿದಿದೆ ಎನ್ನಲಾಗಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ಲಾರಿ ಏರಿ ಸಿನಿಮಾ ಸ್ಟೈಲ್​​ನಲ್ಲಿ ಡ್ರೈವರ್ ಮೇಲೆ ಮಾರಣಾಂತಿಕ ಹಲ್ಲೆ

ಇನ್ನು ಸ್ಥಳೀಯರು ಕೂಡಲೇ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದು, ರೋಷನ್​​ನ ಆಸ್ಪತ್ರೆಗೆ ಸೇರಿಸಿದ್ದಾರೆ. ಇನ್ನು ದೇವಸಂದ್ರದಲ್ಲಿ ಆಗಾಗ ಇಂತಹ ಘಟನೆಗಳು ನಡೆಯುತ್ತಿದ್ದು,ಸಿಸಿಟಿವಿ ಕ್ಯಾಮೆರಾಗಳನ್ನ ಜಾಸ್ತಿ ಹಾಕಿಸಬೇಕು. ಬೇರೆ ಏರಿಯಾದ ಹುಡುಗರು ಬಂದು ಇಲ್ಲಿ ಗಲಾಟೆ ಮಾಡುತ್ತಿದ್ದು, ಈ ಬಗ್ಗೆ ಗಮನವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಗಾಯಗೊಂಡ ರೋಷನ್​​ನಿಂದ ಪೊಲೀಸರು ಹೇಳಿಕೆ ಪಡೆದಿದ್ದು, ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿ ಆಧರಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link