Category Archives: Blog

Your blog category

ತಾತ, ಅಪ್ಪನ ಹಾದಿಯಲ್ಲಿ ಅಜಯ್ ದೇವಗನ್ ಪುತ್ರ ಯುಗ್: ಜಿಮ್ ವಿಡಿಯೋ ವೈರಲ್ – Kannada News

ಬಾಲಿವುಡ್‌ನ ಸ್ಟಾರ್ ಜೋಡಿ ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಮುದ್ದಿನ ಮಗ ಯುಗ್ ದೇವಗನ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ತಮ್ಮ ಅದ್ಭುತ ಬಾಡಿ ಟ್ರಾನ್ಸ್‌ಫಾರ್ಮೇಶನ್ ಮೂಲಕ ಯುಗ್ ಎಲ್ಲರ ಗಮನ ಸೆಳೆದಿದ್ದಾರೆ. 15 ವರ್ಷದ ಯುಗ್‌ ಫಿಟ್‌ನೆಸ್ ನೋಡಿದರೆ, ಅವರು ಅಜ್ಜ, ಖ್ಯಾತ ಸಾಹಸ ನಿರ್ದೇಶಕ ವೀರೂ ದೇವಗನ್ ಮತ್ತು ತಂದೆ ಅಜಯ್ ದೇವಗನ್ ಅವರ ಹೆಜ್ಜೆಗಳನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಪ್ರಸ್ತುತ ಯುಗ್ ದೇವಗನ್ ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುಗ್ ಕಠಿಣವಾದ ಪುಷ್-ಅಪ್ಸ್‌ಗಳನ್ನು ಮಾಡುತ್ತಿರುವುದನ್ನು ಕಾಣಬಹುದು. ಅವನು ಜಿಮ್ ವರ್ಕೌಟ್ ಆರಂಭಿಸಿದ ದಿನಗಳಿಂದ ಹಿಡಿದು, ಪ್ರಸ್ತುತ ಅವರ ದೇಹ ಈಗ ಹೇಗೆ ಬದಲಾಗಿದೆ ಎಂಬ ಸಂಪೂರ್ಣವಾಗಿ ವಿಡಿಯೋದಲ್ಲಿ ತೋರಿಸಲಾಗಿದೆ. ಯುಗ್‌ ಅವರ ಆರಂಭಿಕ ಮತ್ತು ಇಂದಿನ ಬಾಡಿಯನ್ನು ಹೋಲಿಸಿ ನೋಡಿದರೆ, ಅವರ ಕಠಿಣ ಪರಿಶ್ರಮ ಕಾಣುತ್ತದೆ.

ಯುಗ್‌ನ ಅವರ ಅದ್ಭುತ ಬದಲಾವಣೆಯನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಈಗಾಗಲೇ ಫಿಟ್‌ನೆಸ್ ಪ್ರೇಮಿಯಾಗಿರುವ ಯುಗ್‌ನ ಕಠಿಣ ಪರಿಶ್ರಮ, ದೈಹಿಕ ಸಾಮರ್ಥ್ಯ ಮತ್ತು ತ್ರಾಣವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ವಿಡಿಯೋ ಹಂಚಿಕೊಂಡ ಫಿಟ್‌ನೆಸ್ ತರಬೇತುದಾರ ರಾಬಿನ್ ಬಹ್ಲ್

ಖ್ಯಾತ ಕ್ರೀಡಾಪಟು ಮತ್ತು ಫಿಟ್‌ನೆಸ್ ಟ್ರೇನರ್ ರಾಬಿನ್ ಬಹ್ಲ್ ಅವರು ಯುಗ್‌ನ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ ಭಾವುಕ ಸಾಲುಗಳನ್ನು ಬರೆದುಕೊಂಡಿರುವ ಅವರು, ‘ಈ ಜಿಮ್‌ನಲ್ಲಿ ಅತ್ಯಂತ ಕಷ್ಟಪಟ್ಟು ಕೆಲಸ ಮಾಡುವ ಹುಡುಗ ಇವನೇ. ಅವನ ಸಮರ್ಪಣಾ ಮನೋಭಾವವನ್ನು ನೋಡುವುದು ನನಗೆ ಸ್ಫೂರ್ತಿ ನೀಡುತ್ತದೆ. ಅವನನ್ನು ಅತ್ಯುತ್ತಮ ಫಿಟ್‌ನೆಸ್ ಶಿಖರಕ್ಕೆ ಕೊಂಡೊಯ್ಯಲು ಮತ್ತು ಈ ಜರ್ನಿಯನ್ನು ಮುಂದುವರಿಸಲು ನನಗೆ ಇದು ಪ್ರೇರಣೆ ನೀಡಿದೆ. ಇದು ಕೇವಲ ಆರಂಭವಷ್ಟೇ’ ಎಂದು ಯುಗ್‌ನನ್ನು ಹೊಗಳಿದ್ದಾರೆ.

ಇದನ್ನೂ ಓದಿ: ಅಜಯ್ ದೇವಗನ್​ಗಿಂತ ಅಕ್ಷಯ್ ಕುಮಾರ್ ಸಂಬಳ ಹೆಚ್ಚು? ಸ್ಪಷ್ಟನೆ ನೀಡಿದ ಚಿತ್ರತಂಡ

ರಾಬಿನ್ ಬಹ್ಲ್ ಅವರ ಈ ಪೋಸ್ಟ್‌ಗೆ ಯುಗ್ ಅವರ ತಾಯಿ, ನಟಿ ಕಾಜೋಲ್ ಕಾಮೆಂಟ್ ಬಾಕ್ಸ್‌ನಲ್ಲಿ ‘ಫೈರ್’ ಎಮೋಜಿಯನ್ನು ಹಾಕುವ ಮೂಲಕ ಮಗನಿಗೆ ಬೆಂಬಲ ನೀಡಿದ್ದಾರೆ.

ಯುಗ್ ಮಾಧ್ಯಮಗಳ ಕ್ಯಾಮೆರಾಗಳಿಂದ ಮತ್ತು ಗ್ಲಾಮರ್ ಪ್ರಪಂಚದಿಂದ ದೂರ ಉಳಿಯಲು ಬಯಸುತ್ತಾರೆ. ಕೆಲವೇ ಕೆಲವು ಕಾರ್ಯಕ್ರಮಗಳಲ್ಲಿ ಮಾತ್ರ ಅವರು ಪೋಷಕರ ಜೊತೆ ಕಾಣಿಸಿಕೊಳ್ಳುತ್ತಾರೆ. ಯುಗ್ ಈಗಾಗಲೇ ಚಿತ್ರರಂಗಕ್ಕೆ ಪರೋಕ್ಷವಾಗಿ ಕಾಲಿಟ್ಟಿರುವುದು ಹಲವರಿಗೆ ತಿಳಿದಿಲ್ಲ. ಹೌದು, ಪ್ರಸಿದ್ಧ ಹಾಲಿವುಡ್ ಚಿತ್ರ ‘ಕರಾಟೆ ಕಿಡ್- ಲೆಜೆಂಡ್ಸ್’ ಸಿನಿಮಾದ ಹಿಂದಿ ಆವೃತ್ತಿಗೆ ಯುಗ್ ಧ್ವನಿ ನೀಡಿದ್ದಾರೆ. ಅಂದರೆ, ಅವರು ಈ ಚಿತ್ರಕ್ಕೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಸದ್ಯ ಯುಗ್ ಸಿನಿಮಾ ಕೆಲಸಗಳ ಜೊತೆಗೆ ತನ್ನ ವಿದ್ಯಾಭ್ಯಾಸದ ಕಡೆಯೂ ಸಂಪೂರ್ಣ ಗಮನ ಹರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೆಚ್​ಡಿ ದೇವೇಗೌಡಗೆ ತಪ್ಪಿದ ಎನ್​ಡಿಎ ರಾಜ್ಯಸಭೆ ಟಿಕೆಟ್: ಪ್ರೊ ಎಂ ನಾಗರಾಜಗೆ ಬಿಜೆಪಿ ಮಣೆ – Kannada News

ಬೆಂಗಳೂರು, ಜೂನ್ 8: ಕರ್ನಾಟಕ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ 2026ರ ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಎನ್​ಡಿಎ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಭಾರತೀಯ ಜನತಾ ಪಾರ್ಟಿ (BJP) ಪ್ರಕಟಿಸಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಈ ಪಟ್ಟಿಗೆ ಅನುಮೋದನೆ ನೀಡಿದ್ದು, ಕರ್ನಾಟಕದಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಪ್ರೊ. ಎಂ. ನಾಗರಾಜ ಅವರಿಗೆ ಮಣೆ ಹಾಕಲಾಗಿದೆ. ಇನ್ನು ವಿಧಾನ ಪರಿಷತ್ (MLC) ಚುನಾವಣೆಗೆ ಪಕ್ಷದ ನಿಷ್ಠಾವಂತ ನಾಯಕರಾದ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ಕಣಕ್ಕಿಳಿಸಲಾಗಿದೆ. ಆದರೆ, ಬಿಜೆಪಿಯ ಈ ಹಠಾತ್ ನಿರ್ಧಾರವು ಮೈತ್ರಿ ಪಕ್ಷವಾದ ಜೆಡಿಎಸ್‌ಗೆ ಭಾರಿ ಆಘಾತ ನೀಡಿದ್ದು, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಮರುಆಯ್ಕೆಯ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ.

ಮುಖ್ಯಾಂಶಗಳು

  • ರಾಜ್ಯಸಭೆಗೆ ಬಿಜೆಪಿಯಿಂದ ಪ್ರೊ.ಎಂ.ನಾಗರಾಜ ನಾಮನಿರ್ದೇಶನ.
  • ದೇವೇಗೌಡರ ರಾಜ್ಯಸಭೆ ಮರುಪ್ರವೇಶದ ಕನಸಿಗೆ ಬ್ರೇಕ್.
  • ಎಂಎಲ್‌ಸಿ ಅಭ್ಯರ್ಥಿಗಳಾಗಿ ಲಿಂಗರಾಜ್, ರಘು ಕೌಟಿಲ್ಯ.

ಜೆಡಿಎಸ್ ಲೆಕ್ಕಾಚಾರಕ್ಕೆ ಬಿಜೆಪಿ ಬಿಗ್ ಶಾಕ್

ರಾಜ್ಯಸಭಾ ಟಿಕೆಟ್ ಆಕಾಂಕ್ಷೆಯಲ್ಲಿದ್ದ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ (JDS) ತೀವ್ರ ನಿರಾಸೆಯಾಗಿದೆ. ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಹಿರಿತನದ ಆಧಾರದ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಗೌಡರನ್ನೇ ಜಂಟಿ ಅಭ್ಯರ್ಥಿಯನ್ನಾಗಿ ಮರುಆಯ್ಕೆ ಮಾಡಬಹುದು ಎಂಬ ಬಲವಾದ ಆಸೆ ಜೆಡಿಎಸ್ ಶಾಸಕರಲ್ಲಿತ್ತು. ಆದರೆ, ಬಿಜೆಪಿ ಹೈಕಮಾಂಡ್ ವಯಸ್ಸು ಮತ್ತು ಆರೋಗ್ಯದ ಕಾರಣವನ್ನು ಮುಂದಿಟ್ಟುಕೊಂಡು ದೇವೇಗೌಡರಿಗೆ ಟಿಕೆಟ್ ನಿರಾಕರಿಸಿದೆ. ಮೈತ್ರಿಕೂಟದಲ್ಲಿದ್ದರೂ ‘ನಾವು ಯಾವುದೇ ಕಾರಣಕ್ಕೂ ಟಿಕೆಟ್‌ಗಾಗಿ ಬಿಜೆಪಿ ನಾಯಕರಿಗೆ ಒತ್ತಡ ಹಾಕುವುದಿಲ್ಲ’ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಪದೇ ಪದೇ ಹೇಳುತ್ತಿದ್ದರು. ಇದೀಗ ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕುವ ಮೂಲಕ ಜೆಡಿಎಸ್‌ನ ನಿರೀಕ್ಷೆಗೆ ತಣ್ಣೀರೆರಚಿದೆ.

ಮತ್ತೊಂದೆಡೆ, ವಿಧಾನ ಪರಿಷತ್ ಚುನಾವಣೆಗೆ ಆಯ್ಕೆಯಾಗಿರುವ ಲಿಂಗರಾಜ್ ಪಾಟೀಲ್ ಈ ಹಿಂದೆ ಬಿಜೆಪಿ ಶಿಸ್ತು ಸಮಿತಿಯ ಮಾಜಿ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮತ್ತೊಬ್ಬ ಅಭ್ಯರ್ಥಿ ರಘು ಕೌಟಿಲ್ಯ ಪ್ರಸ್ತುತ ಬಿಜೆಪಿ ಒಬಿಸಿ ಮೋರ್ಛಾದ ರಾಜ್ಯಾಧ್ಯಕ್ಷರಾಗಿ ಹಿಂದುಳಿದ ವರ್ಗಗಳನ್ನು ಪಕ್ಷದತ್ತ ಸೆಳೆಯುವಲ್ಲಿ ಸಕ್ರಿಯರಾಗಿದ್ದಾರೆ. ಸಂಘಟನಾ ಶಕ್ತಿ ಮತ್ತು ನಿಷ್ಠೆಯನ್ನು ಪರಿಗಣಿಸಿ ಹೈಕಮಾಂಡ್ ಇವರಿಬ್ಬರಿಗೆ ಮೇಲ್ಮನೆ ಟಿಕೆಟ್ ನೀಡಿದೆ.

ಜೂನ್ 18 ರಂದು 10 ರಾಜ್ಯಗಳಲ್ಲಿ ಚುನಾವಣೆ

ರಾಜ್ಯಸಭೆ ಚುನಾವಣೆಗೆ ಬಿಜೆಪಿ ಈಗಾಗಲೇ ಜೂನ್ 4 ರಂದು ಮೊದಲ ಪಟ್ಟಿ ಬಿಡುಗಡೆ ಮಾಡಿ 11 ಅಭ್ಯರ್ಥಿಗಳನ್ನು ಘೋಷಿಸಿತ್ತು. ಗುಜರಾತ್‌ನಿಂದ ರಾಜುಭಾಯಿ ಶುಕ್ಲಾ, ಮುಖೇಶ್ ಭಾಯಿ ರಾಠ್ವಾ, ಅರುಣಾಚಲ ಪ್ರದೇಶದಿಂದ ತಾಯಿ ತಾಗಕ್ ಹಾಗೂ ಮಣಿಪುರದಿಂದ ಎ. ಶಾರದಾ ದೇವಿ ಕಣಕ್ಕಿಳಿದಿದ್ದಾರೆ. ಮಧ್ಯಪ್ರದೇಶದಿಂದ ಮಹೇಶ್ ಕೇವತ್ ಹಾಗೂ ತರುಣ್ ಚುಗ್ ಸೇರಿದಂತೆ ಹಲವು ರಾಜ್ಯಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಒಟ್ಟು 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18 ರಂದು ಮತದಾನ ನಡೆಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ಬೆನ್ನಲ್ಲೇ ಶಾಂತಿ ಮಾತುಕತೆಗೆ ಮುಂದಾದ ಟ್ರಂಪ್ – Kannada News

ಟೆಲ್ ಅವಿವ್, ಜೂನ್ 08: ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ಉಂಟಾಗಿರುವ ಪ್ರಾದೇಶಿಕ ಉದ್ವಿಗ್ನತೆಯ ನಡುವೆಯೂ ಜಾಗತಿಕ ರಾಜತಾಂತ್ರಿಕ ರಂಗದಲ್ಲಿ ಶಾಂತಿ ಮತ್ತು ಕದನವಿರಾಮವನ್ನು ಮರಳಿ ಸ್ಥಾಪಿಸಲು ಅತ್ಯಂತ ಬಲವಾದ ಪ್ರಯತ್ನಗಳು ಆರಂಭಗೊಂಡಿವೆ. ಏಪ್ರಿಲ್ ಕದನ ವಿರಾಮದ ಬಳಿಕ ಇರಾನ್ ಸೇನೆಯು ಇಸ್ರೇಲ್(Israel) ಮೇಲೆ ಕ್ಷಿಪಣಿಗಳನ್ನು ಹಾರಿಸಿದ ಬೆನ್ನಲ್ಲೇ ವಿಶ್ವಸಂಸ್ಥೆ ಹಾಗೂ ಪ್ರಮುಖ ಜಾಗತಿಕ ಶಕ್ತಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ತಕ್ಷಣವೇ ಪ್ರಯತ್ನಗಳನ್ನು ಆರಂಭಿಸಿವೆ.
ಏಪ್ರಿಲ್ ಆರಂಭದಲ್ಲಿ ದುರ್ಬಲ ಕದನ ವಿರಾಮ ಜಾರಿಗೆ ಬಂದ ನಂತರ ಇರಾನ್ ಸೇನೆಯು ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ತನ್ನ ಮೊದಲ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದೆ, ಇದು ಭಾರೀ ಹೋರಾಟಕ್ಕೆ ಮರಳುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಇರಾನ್ ಜೊತೆಗಿನ ಅಮೆರಿಕ-ಇಸ್ರೇಲಿ ಯುದ್ಧವನ್ನು ಕೊನೆಗೊಳಿಸಲು ಸಂಭಾವ್ಯ ಒಪ್ಪಂದವನ್ನು ತಲುಪಲು ಮಧ್ಯಸ್ಥಿಕೆ ಪ್ರಯತ್ನಗಳನ್ನು ಸಂಕೀರ್ಣಗೊಳಿಸಿದೆ. ದಿನಗಳ ಹಿಂದೆ ಅಮೆರಿಕದ ಮನವಿಯನ್ನು ಧಿಕ್ಕರಿಸಿ ಇಸ್ರೇಲ್ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಎಚ್ಚರಿಕೆ ನೀಡದೆ ದಾಳಿ ಮಾಡಿದ ನಂತರ ಇಸ್ರೇಲ್ ಪ್ರತೀಕಾರದ ಎಚ್ಚರಿಕೆ ನೀಡಿದ ಒಂದು ದಿನದ ನಂತರ ಈ ದಾಳಿ ನಡೆದಿದೆ.

ದಾಳಿಯ ಸಮಯದಲ್ಲಿ ಇಸ್ರೇಲ್‌ನಾದ್ಯಂತ ಮುನ್ನೆಚ್ಚರಿಕೆ ಸೈರನ್‌ಗಳು ಮೊಳಗಿದರೂ, ದೇಶದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯು (Air Defence) ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕನಿಷ್ಠ 10 ಪ್ರಮುಖ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇಸ್ರೇಲಿ ಪಡೆಗಳು ಆಕಾಶದಲ್ಲೇ ಯಶಸ್ವಿಯಾಗಿ ತಡೆದು ಹೊಡೆದುರುಳಿಸುವ ಮೂಲಕ ಭಾರಿ ಪ್ರಮಾಣದ ಹಾನಿಯನ್ನು ತಪ್ಪಿಸಿವೆ. ಇಸ್ರೇಲಿ ಮಿಲಿಟರಿ ಮುಖ್ಯಸ್ಥರು ತಕ್ಷಣದ ರಕ್ಷಣಾತ್ಮಕ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ, ಜಾಗತಿಕ ನಾಯಕರ ಮಧ್ಯಸ್ಥಿಕೆಯು ಸದ್ಯಕ್ಕೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿದೆ.

ಮತ್ತಷ್ಟು ಓದಿ: Iran-Israel War: ಯುದ್ಧದ ಪರಿಣಾಮ ಯಾದಗಿರಿಯ 28 ರೈಸ್ ಮಿಲ್‌ಗಳಿಗೆ ಭಾರೀ ಹೊಡೆತ!

ಅಮೆರಿಕದ ಪ್ರತಿಷ್ಠಿತ ಸುದ್ದಿಸಂಸ್ಥೆ ಆಕ್ಸಿಯಾಸ್ ಹಾಗೂ ಇಸ್ರೇಲ್​ನ ಕಾನ್ ವಾಹಿನಿಯ ವರದಿಗಳ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ಜತೆ ನೇರವಾಗಿ ಮಾತುಕತೆ ನಡೆಸಿದ್ದಾರೆ. ಇರಾನ್‌ನ ಈ ದಾಳಿಗೆ ಪ್ರತಿಯಾಗಿ ಇಸ್ರೇಲ್ ಯಾವುದೇ ತಕ್ಷಣದ ಮಿಲಿಟರಿ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.

ಮುನ್ನೆಚ್ಚರಿಕೆಯ ಭಾಗವಾಗಿ ಇರಾನ್ ತನ್ನ ಪಶ್ಚಿಮ ವಾಯುಪ್ರದೇಶವನ್ನು ಮುಚ್ಚಿದ್ದರೆ, ನೆರೆಯ ಇರಾಕ್ ಮತ್ತು ಸಿರಿಯಾ ದೇಶಗಳು ಕೂಡ ರಕ್ಷಣಾತ್ಮಕ ಹಿತದೃಷ್ಟಿಯಿಂದ ತಮ್ಮ ವಾಯುಪ್ರದೇಶದ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮಧ್ಯಪ್ರಾಚ್ಯದಾದ್ಯಂತ ಇರುವ ಅಮೆರಿಕ ಪಡೆಗಳು ಸಂಪೂರ್ಣ ಜಾಗರೂಕವಾಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಶಾಂತಿ ಒಪ್ಪಂದದ ಪುನರಾರಂಭಕ್ಕೆ ಜಾಗತಿಕ ಪ್ರಯತ್ನ
ಪಾಕಿಸ್ತಾನ ಸೇರಿದಂತೆ ಹಲವು ಪ್ರಮುಖ ಅಂತಾರಾಷ್ಟ್ರೀಯ ಮಧ್ಯಸ್ಥಿಕೆದಾರ ರಾಷ್ಟ್ರಗಳು ಅಮೆರಿಕ ಮತ್ತು ಇರಾನ್ ನಡುವೆ ನೇರ ಮಾತುಕತೆಗಳನ್ನು ಪುನರಾರಂಭಿಸಲು ಸಕ್ರಿಯವಾಗಿ ಶ್ರಮಿಸುತ್ತಿವೆ. ಲೆಬನಾನ್ ಮತ್ತು ಇಸ್ರೇಲ್ ನಡುವೆ ಈಗಾಗಲೇ ಚರ್ಚಿಸಲಾಗಿರುವ ಕದನ ವಿರಾಮದ ನಿಯಮಾವಳಿಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಜಾಗತಿಕ ರಾಜತಾಂತ್ರಿಕರು ಪ್ರಯತ್ನಿಸುತ್ತಿದ್ದಾರೆ. ಜಗತ್ತಿನ ಪ್ರಭಾವಿ ನಾಯಕರು ಯುದ್ಧದ ಹಾದಿಯನ್ನು ಬದಿಗಿಟ್ಟು, ಶಾಂತಿ ಮತ್ತು ಸೌಹಾರ್ದತೆಯ ಒಪ್ಪಂದಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಮುಂಬರುವ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ನೆಲೆಸಲು ಭದ್ರವಾದ ಬುನಾದಿ ಹಾಕಿದಂತಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಟಾಕ್ಸಿಕ್’ ಚಿತ್ರಕ್ಕೆ ಯೋಗರಾಜ್ ಭಟ್ ಬರೆದ ಹಾಡುಗಳೆಷ್ಟು? ಲೆಕ್ಕ ಕೊಟ್ಟ ನಿರ್ದೇಶಕ – Kannada News

‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಅಪ್​​ಡೇಟ್ ತಿಳಿದುಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಇರುತ್ತಾರೆ. ಈ ಸಿನಿಮಾ ಬಗ್ಗೆ ಯಾರೇ ಅಪ್​​ಡೇಟ್ ಕೊಟ್ಟರೂ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಯೋಗರಾಜ್ ಭಟ್ ಮಾತನಾಡಿದ್ದಾರೆ. ಈ ಚಿತ್ರದ ‘ತಬಾಹಿ..’ ಹಾಡಿಗೆ ಸಾಹಿತ್ಯ ಬರೆದಿದ್ದು ಯೋಗರಾಜ್ ಭಟ್ ಅವರೇ. ಈಗ ಸಿನಿಮಾದ ಹಾಡುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೀರ್ತಿ ಇಎನ್​ಟಿ ಕ್ಲೀನಿಕ್ ಯೂಟ್ಯೂಬ್ ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಯೋಗರಾಜ್​ ಭಟ್ ಅವರು ಮಾತನಾಡಿದ್ದಾರೆ. ‘ಟಾಕ್ಸಿಕ್ ಸಿನಿಮಾಗೆ ನೀವೇ ಸಾಹಿತ್ಯ ಬರೆದಿದ್ದೀರಿ ಅಲ್ಲವೇ’ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಭಟ್ರು, ‘ಎರಡು ಮೂರು ಹಾಡನ್ನು ಬರೆದಿದ್ದೇನೆ. ಮೂರು ಅಂತ ಲೆಕ್ಕ. ಯಾವಾಗ ರಿಲೀಸ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕು’ ಎಂದು ಯೋಗರಾಜ್ ಭಟ್ ಹೇಳಿದರು.

‘ಫೂಟೇಜ್ ಏನಾದ್ರೂ ನೋಡಿದ್ರಾ’ ಎಂದು ಕೇಳಲಾಯಿತು. ‘ಇದು ಆತ್ಮೀಯ ಗೆಳೆಯನ ಮಹೋನ್ನತ ಚಿತ್ರ. ಅಭೂತಪೂರ್ವ ಯಶಸ್ಸು ಕಾಣುತ್ತದೆ ಎಂದಷ್ಟೇ ಹೇಳಬಹುದು’ ಎಂದರು ಅವರು. ಸಾಂಗ್ ಬರೆಯೋಕೆ ಯೋಗರಾಜ್ ಭಟ್ ಅವರು ಮುಂಬೈಗೆ ತೆರಳಿದ್ದರಂತೆ. ಈ ವಿಷಯ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆ ಹಾಡುಗಳು ಬೇಗ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾಗೆ ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞರು ಕೆಲಸ ಮಾಡುತ್ತಿದ್ದು, ವಿಭಿನ್ನ ಶೈಲಿಯ ಮೇಕಿಂಗ್ ಭರವಸೆ ಮೂಡಿಸಿದೆ. ಭಾರತೀಯ ಚಿತ್ರರಂಗದ ಹೆಸರಾಂತ ನಟ-ನಟಿಯರು ಈ ಆ್ಯಕ್ಷನ್ ಡ್ರಾಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವುದು ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ರಿಶೂಟ್, ಮುಂದಿನ ವರ್ಷ ರಿಲೀಸ್ ಎಂದು ಹೇಳಿ ಉಲ್ಟಾ ಹೊಡೆದ ಬಾಕ್ಸ್ ಆಫೀಸ್ ಪಂಡಿತ 

ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇರುವ ಈ ಸಿನಿಮಾದ ರಿಲೀಸ್ ದಿನಾಂಕ ನಿರಂತರವಾಗಿ ಮುಂದಕ್ಕೆ ಹೋಗುತ್ತಿದೆ. ಈ ಚಿತ್ರದ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಚಿತ್ರದ ಅಪ್ಡೇಟ್‌ಗಳಿಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಿಟ್ಟಿದ್ದಾರೆ. ಸಿನಿಮಾ ತಡವಾದರೂ ಒಂದು ಅದ್ಭುತವಾದ ದೃಶ್ಯಕಾವ್ಯ ಪರದೆಯ ಮೇಲೆ ಬರಲಿದೆ ಎಂಬ ನಂಬಿಕೆಯಿಂದ, ನಿಜವಾದ ಅಭಿಮಾನಿಗಳು ಯಾವುದೇ ಆತುರವಿಲ್ಲದೆ ಅತ್ಯಂತ ತಾಳ್ಮೆಯಿಂದ ಕಾಯುತ್ತಾ ಚಿತ್ರತಂಡಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಳ್ಳಾರಿಯಲ್ಲಿ ಮುಂಗಾರು ಮಳೆ ಅಬ್ಬರ, ಭಾರಿ ಅವಾಂತರ: ವಿಮ್ಸ್ ಆಸ್ಪತ್ರೆ, ಕೆಇಬಿ ಕಚೇರಿಗಳಿಗೆ ನುಗ್ಗಿದ ನೀರು – Kannada News

ವಿಮ್ಸ್ ಆಸ್ಪತ್ರೆಗೆ ನೀರು ನುಗ್ಗಿರುವುದು.Image Credit source: tv9

ಬಳ್ಳಾರಿ, ಜೂನ್ 8: ಗಣಿನಾಡು ಬಳ್ಳಾರಿಯಲ್ಲಿ (Ballari) ಶನಿವಾರ ರಾತ್ರಿ ಹಾಗೂ ಭಾನುವಾರ ಸುರಿದ ಭೀಕರ ಮಳೆ ನಗರದಾದ್ಯಂತ ಭಾರಿ ಅವಾಂತರಗಳನ್ನು ಸೃಷ್ಟಿಸಿದೆ. ಧಾರಾಕಾರವಾಗಿ ಸುರಿದ ಮಳೆಯ ಆರ್ಭಟಕ್ಕೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ವಿಮ್ಸ್ ಆಸ್ಪತ್ರೆ (VIMS Hospital) ಹಾಗೂ ಮುಖ್ಯ ಕೆಇಬಿ (KEB) ವಿದ್ಯುತ್ ವಿತರಣಾ ಕೇಂದ್ರಕ್ಕೆ ನೀರು ನುಗ್ಗಿದೆ. ಇದರ ನಡುವೆ, ನಗರದ ಹಂದ್ರಾಳ ಹಳ್ಳದಲ್ಲಿ ಬ್ಯಾಂಕ್ ಮಹಿಳಾ ಉದ್ಯೋಗಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಮಳೆಯ ನೀರಿನ ರಭಸಕ್ಕೆ ಕೊಚ್ಚಿಹೋಗಿ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮುಖ್ಯಾಂಶಗಳು

  • ಬಳ್ಳಾರಿಯಲ್ಲಿ ರಣಮಳೆಗೆ ಜನಜೀವನ ತತ್ತರ.
  • ವಿಮ್ಸ್ ಆಸ್ಪತ್ರೆಗೆ ನುಗ್ಗಿದ ನೀರು, ರೋಗಿಗಳ ಪರದಾಟ.
  • ಕೆಇಬಿ ಮುಳುಗಡೆ, ನಗರಾದ್ಯಂತ ವಿದ್ಯುತ್ ಸಂಪರ್ಕ ಕಡಿತ.

ವಿಮ್ಸ್ ಆಸ್ಪತ್ರೆ, ಕೆಇಬಿ ಘಟಕ ಜಲಾವೃತ

ಬಳ್ಳಾರಿ ನಗರದ ಶೇಕಡಾ 75 ರಷ್ಟು ಭಾಗಕ್ಕೆ ವಿದ್ಯುತ್ ಸರಬರಾಜು ಮಾಡುವ ಮುಖ್ಯ ಕೆಇಬಿ ಘಟಕದ ಆವರಣಕ್ಕೆ ಮಳೆ ನೀರು ನುಗ್ಗಿದೆ. ಬೃಹತ್ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ವಿದ್ಯುತ್ ನಿಯಂತ್ರಣ ಯಂತ್ರಗಳು (Regulating Machines) ನೀರಿನಲ್ಲಿ ಮುಳುಗಡೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಬಳ್ಳಾರಿ ನಗರಕ್ಕೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರೂ ನೀರು ಸಂಪೂರ್ಣವಾಗಿ ಹೊರಹೋಗಿಲ್ಲ.

ವಿಮ್ಸ್ ಆಸ್ಪತ್ರೆಯೊಳಗೆ ನೀರು ತುಂಬಿರುವುದು

ಮತ್ತೊಂದೆಡೆ, ಬಳ್ಳಾರಿಯ ವಿಮ್ಸ್ (VIMS) ಆಸ್ಪತ್ರೆಯ ಕಿಟಕಿ ಹಾಗೂ ತೆರೆದ ಪ್ಯಾಸೇಜ್‌ಗಳ ಮೂಲಕ ಮಳೆ ನೀರು ವಾರ್ಡ್‌ಗಳ ಒಳಗೆ ನುಗ್ಗಿದ್ದರಿಂದ ರೋಗಿಗಳು ಮತ್ತು ಅವರ ಸಂಬಂಧಿಕರು ರಾತ್ರಿಯಿಡೀ ನಿದ್ದೆಯಿಲ್ಲದೆ ಪರದಾಡುವಂತಾಯಿತು. ಆಸ್ಪತ್ರೆಯಲ್ಲಿ ನೀರು ಸರಾಗವಾಗಿ ಹೊರಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಂದ್ರಾಳ ಹಳ್ಳದಲ್ಲಿ ಬ್ಯಾಂಕ್ ಉದ್ಯೋಗಿಯ ಶವ ಪತ್ತೆ

ಮಳೆಯ ಅವಾಂತರದ ನಡುವೆಯೇ ಬಳ್ಳಾರಿಯ ಹಂದ್ರಾಳ ಹಳ್ಳದ ಪಕ್ಕದ ಜಾಲಿಬೆಲಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಕೌಲ್ ಬಜಾರ್ ನಿವಾಸಿ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಉದ್ಯೋಗಿ ಅನಿಷಾ ಫಾತೀಮಾ (38) ಎಂದು ಗುರುತಿಸಲಾಗಿದೆ. ಅನಿಷಾ ಶನಿವಾರ ರಾತ್ರಿ ಬ್ಯಾಂಕ್ ಸಿಬ್ಬಂದಿ ಆಯೋಜಿಸಿದ್ದ ಪಾರ್ಟಿಗೆ ತೆರಳಿದ್ದರು ಎನ್ನಲಾಗಿದ್ದು, ರಾತ್ರಿ 11 ಗಂಟೆ ಸುಮಾರಿಗೆ ಪತಿಗೆ ಫೋನ್ ಮಾಡಿದ್ದರು. ಆ ಬಳಿಕ ಅವರ ಸಂಪರ್ಕ ಸಿಕ್ಕಿರಲಿಲ್ಲ. ತಡರಾತ್ರಿ ಸುರಿದ ಮಳೆಗೆ ಹಂದ್ರಾಳ ಹಳ್ಳವು ಭೋರ್ಗರೆದು ಹರಿಯುತ್ತಿದ್ದು, ಅನಿಷಾ ತಮ್ಮ ಸ್ಕೂಟರ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮೃತದೇಹವು ವಿವಸ್ತ್ರ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಪೋಷಕರು ಹಾಗೂ ಪೊಲೀಸರಲ್ಲಿ ಹಲವು ಅನುಮಾನಗಳು ಮೂಡಿವೆ.

ಇದನ್ನೂ ಓದಿ: ಮುಂಗಾರು ಮಳೆ ಚುರುಕು, ರಾಜ್ಯಾದ್ಯಂತ ಭಾರಿ ಮಳೆ ಮುನ್ಸೂಚನೆ; 2 ದಿನ ರೆಡ್‌ ಅಲರ್ಟ್‌

ಸ್ಥಳಕ್ಕೆ ಎಪಿಎಂಸಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬ್ಯಾಂಕ್ ಮ್ಯಾನೇಜರ್ ಹಾಗೂ ಪೋಷಕರಿಂದ ಮಾಹಿತಿ ಕಲೆಹಾಕಿದ್ದಾರೆ. ಇದು ಮಳೆ ನೀರಿನಲ್ಲಿ ಕೊಚ್ಚಿಹೋದ ಪ್ರಕರಣವೇ ಅಥವಾ ಇದರ ಹಿಂದೆ ಬೇರೆನಾದರೂ ಷಡ್ಯಂತ್ರ ಅಡಗಿದೆಯೇ ಎಂಬ ನಿಟ್ಟಿನಲ್ಲಿ ಬಳ್ಳಾರಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:25 am, Mon, 8 June 26

Source link

ಕೊನೆಗೂ ನನಸಾದ ಝ್ವೇರೆಫ್ ಗ್ರಾಂಡ್ ಸ್ಲ್ಯಾಮ್ ಕನಸು

ರೊಲ್ಯಾಂಡ್ ಗ್ಯಾರೋಸ್ ಅಂಗಳದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೇರೆಫ್ ಇತಿಹಾಸ ನಿರ್ಮಿಸಿದ್ದಾರೆ. ಭಾನುವಾರ ನಡೆದ 2026ರ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಇಟಲಿಯ ಫ್ಲಾವಿಯೊ ಕೊಬೊಲ್ಲಿ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಝ್ವೇರೆಫ್ ತಮ್ಮ ಚೊಚ್ಚಲ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಅವರ ಜೀವಮಾನದ ಮಹದಾಸೆ ಕೊನೆಗೂ ಈಡೇರಿದೆ.

ನಾಲ್ಕು ಗಂಟೆಗಳ ಮಹಾಸಮರ:

ಕೋರ್ಟ್ ಫಿಲಿಪ್-ಚ್ಯಾಟ್ರಿಯರ್‌ನಲ್ಲಿ ನಡೆದ ಈ ಹಣಾಹಣಿ ಬರೋಬ್ಬರಿ 4 ಗಂಟೆ ಹಾಗೂ 16 ನಿಮಿಷಗಳ ಕಾಲ ಜಿದ್ದಾಜಿದ್ದಿನಿಂದ ಕೂಡಿತ್ತು. ಇಬ್ಬರು ಆಟಗಾರರ ನಡುವಿನ ಹೋರಾಟ ಹೀಗಿತ್ತು:

  • ಮೊದಲ ಸೆಟ್: ಝ್ವೇರೆಫ್ ಭರ್ಜರಿ ಸರ್ವಿಂಗ್ ಮೂಲಕ 6-1 ರಿಂದ ಸುಲಭವಾಗಿ ಗೆದ್ದರು.
  •  ಎರಡನೇ ಸೆಟ್: ತಿರುಗಿಬಿದ್ದ ಕೊಬೊಲ್ಲಿ 6-4 ರಿಂದ ಸೆಟ್ ವಶಪಡಿಸಿಕೊಂಡರು.
  • ಮೂರನೇ ಸೆಟ್: ಲಯ ಕಂಡುಕೊಂಡ ಝ್ವೇರೆಫ್ 6-4 ರಿಂದ ಮತ್ತೆ ಮುನ್ನಡೆದರು.
  •  ನಾಲ್ಕನೇ ಸೆಟ್: ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಸೆಟ್ ಅನ್ನು ಕೊಬೊಲ್ಲಿ ಟೈಬ್ರೇಕರ್‌ನಲ್ಲಿ 7-6 (7-5) ಗೆದ್ದು ಪಂದ್ಯವನ್ನು ನಿರ್ಣಾಯಕ ಸೆಟ್‌ಗೆ ಕೊಂಡೊಯ್ದರು.
  •  ಐದನೇ ಸೆಟ್: ಅಂತಿಮ ಸೆಟ್‌ನಲ್ಲಿ ತಮ್ಮ ಅನುಭವವನ್ನು ಧಾರೆ ಎರೆದ ಝ್ವೇರೆಫ್ 6-1 ರಿಂದ ಕೊಬೊಲ್ಲಿ ಅವರನ್ನು ಮಣಿಸಿ ಚಾಂಪಿಯನ್ ಆದರು.

ನೋವಿನ ಅಂಗಳದಲ್ಲೇ ಚಾಂಪಿಯನ್ ಪಟ್ಟ:

ಅಲೆಕ್ಸಾಂಡರ್ ಝ್ವೇರೆಫ್ ಪಾಲಿಗೆ ಇದು ಕೇವಲ ಪ್ರಶಸ್ತಿಯಲ್ಲ, ಅವರ ಟೆನಿಸ್ ಬದುಕಿನ ಅತಿ ದೊಡ್ಡ ಪುನರಾಗಮನ. ಇದೇ ರೊಲ್ಯಾಂಡ್ ಗ್ಯಾರೋಸ್ ಅಂಗಳದಲ್ಲಿ 2022 ರ ಸೆಮಿಫೈನಲ್‌ನಲ್ಲಿ ರಾಫೆಲ್ ನಡಾಲ್ ವಿರುದ್ಧ ಆಡುವಾಗ ಕಾಲಿನ ಗಾಯಕ್ಕೆ ತುತ್ತಾಗಿ ಕಣ್ಣೀರಿನೊಂದಿಗೆ ಝ್ವೇರೆಫ್ ಕೋರ್ಟ್ ತೊರೆದಿದ್ದರು.

ಅದಕ್ಕೂ ಮುನ್ನ ಮೂರು ಗ್ರಾಂಡ್ ಸ್ಲ್ಯಾಮ್ ಫೈನಲ್‌ಗಳಲ್ಲಿ (2024ರ ಫ್ರೆಂಚ್ ಓಪನ್ ಸೇರಿದಂತೆ) ಸೋತು “ಗ್ರಾಂಡ್ ಸ್ಲ್ಯಾಮ್ ಗೆಲ್ಲದ ಅತ್ಯುತ್ತಮ ಆಟಗಾರ” ಎಂಬ ಅಪಕೀರ್ತಿಗೆ ಒಳಗಾಗಿದ್ದರು. ಈಗ ಅದೇ ಮಣ್ಣಿನಲ್ಲಿ ಟ್ರೋಫಿ ಎತ್ತಿಹಿಡಿಯುವ ಮೂಲಕ ತಮ್ಮ ಮೇಲಿದ್ದ ನತದೃಷ್ಟದ ಹಣೆಪಟ್ಟಿಯನ್ನು ಅಳಿಸಿಹಾಕಿದ್ದಾರೆ.

ದಾಖಲೆಗಳ ಪುಟ ಸೇರಿದ ಝ್ವೇರೆಫ್:

  • ಜರ್ಮನಿಯ ಮೂರನೇ ಆಟಗಾರ: ಓಪನ್ ಎರಾದಲ್ಲಿ ಗ್ರಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಜರ್ಮನಿಯ ಕೇವಲ ಮೂರನೇ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಝ್ವೇರೆಫ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಬೋರಿಸ್ ಬೆಕರ್ ಮತ್ತು ಮೈಕೆಲ್ ಸ್ಟಿಚ್ ಈ ಪ್ರಶಸ್ತಿ ಗೆದ್ದಿದ್ದರು.
  • 30 ವರ್ಷಗಳ ಬರ ನೀಗಿತು: 1996 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಬೋರಿಸ್ ಬೆಕರ್ ಗೆದ್ದ ನಂತರ, ಜರ್ಮನಿಯ ಪುರುಷ ಆಟಗಾರನೊಬ್ಬ ಗ್ರಾಂಡ್ ಸ್ಲ್ಯಾಮ್ ಗೆದ್ದಿರುವುದು ಇದೇ ಮೊದಲು.
  • 89 ವರ್ಷಗಳ ಇತಿಹಾಸ: 1937 ರಲ್ಲಿ ಹೆನ್ನರ್ ಹೆಂಕೆಲ್ ನಂತರ ಫ್ರೆಂಚ್ ಓಪನ್ ಮುಡಿಗೇರಿಸಿಕೊಂಡ ಮೊದಲ ಜರ್ಮನ್ ಪುರುಷ ಆಟಗಾರ ಅಲೆಕ್ಸಾಂಡರ್ ಝ್ವೇರೆಫ್.

ಇದನ್ನೂ ಓದಿ: ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡ 19 ವರ್ಷದ ಮಿರಾ ಆಂಡ್ರೀವಾ

ಒಲಿಂಪಿಕ್ ಚಿನ್ನದ ಪದಕ, ಎರಡು ಎಟಿಪಿ ಫೈನಲ್ಸ್ ಹಾಗೂ ಏಳು ಮಾಸ್ಟರ್ಸ್ ಪ್ರಶಸ್ತಿಗಳನ್ನು ಹೊಂದಿರುವ 29 ವರ್ಷದ ಝ್ವೇರೆಫ್ ಗೆ ಕೊನೆಗೂ ತಮ್ಮ ಗ್ರಾಂಡ್ ಸ್ಲ್ಯಾಮ್ ಕನಸನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

 

Source link

Philippines Earthquake: ದಕ್ಷಿಣ ಫಿಲಿಪೈನ್ಸ್​​ನಲ್ಲಿ 7.8 ತೀವ್ರತೆಯ ಭೂಕಂಪ, ಓರ್ವ ಸಾವು, ಹಲವರಿಗೆ ಗಾಯ, ಸುನಾಮಿ ಎಚ್ಚರಿಕೆ – Kannada News

ಮನಿಲಾ, ಜೂನ್ 08: ದಕ್ಷಿಣ ಫಿಲಿಪೈನ್ಸ್​ನಲ್ಲಿ 7.8 ತೀವ್ರತೆಯ ಭೂಕಂಪ(Earthquake) ಸಂಭವಿಸಿದೆ. ಓರ್ವ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಅಷ್ಟೇ ಅಲ್ಲದೆ ಸುನಾಮಿ ಎಚ್ಚರಿಕೆ ಕೂಡ ನೀಡಲಾಗಿದೆ. ಪ್ರಕೃತಿ ವಿಕೋಪಗಳ ಸವಾಲುಗಳ ನಡುವೆಯೂ ಮಾನವನ ಧೈರ್ಯ ಮತ್ತು ಆಡಳಿತ ವ್ಯವಸ್ಥೆಯ ತ್ವರಿತ ಮುನ್ನೆಚ್ಚರಿಕೆ ಕ್ರಮಗಳು ಹೇಗೆ ಜೀವಗಳನ್ನು ರಕ್ಷಿಸಬಲ್ಲವು ಎಂಬುದಕ್ಕೆ ಫಿಲಿಪೈನ್ಸ್‌ನ ಇಂದಿನ ಘಟನೆ ಸಾಕ್ಷಿಯಾಗಿದೆ.

ದಕ್ಷಿಣ ಫಿಲಿಪೈನ್ಸ್‌ನ ಮಿಂಡಾನಾವೊ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಭೂಕಂಪ ಸಂಭವಿಸಿದ ಬೆನ್ನಲ್ಲೇ, ಅಲ್ಲಿನ ಸರ್ಕಾರ ಮತ್ತು ಅಂತರರಾಷ್ಟ್ರೀಯ ರಕ್ಷಣಾ ಸಂಸ್ಥೆಗಳು ಅತ್ಯಂತ ಪ್ರಬುದ್ಧವಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತಿವೆ.

ಪ್ರಬಲ ಭೂಕಂಪದ ಹೊರತಾಗಿಯೂ, ಮುಂಚಿತವಾಗಿಯೇ ಸಿದ್ಧವಾಗಿದ್ದ ವಿಪತ್ತು ನಿರ್ವಹಣಾ ನೀತಿಗಳಿಂದಾಗಿ ಭಾರಿ ಪ್ರಮಾಣದ ಪ್ರಾಣಹಾನಿಯನ್ನು ಯಶಸ್ವಿಯಾಗಿ ತಡೆಯಲಾಗಿದೆ. ಸದ್ಯಕ್ಕೆ ಒಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ವರದಿಯಾಗಿದ್ದು, ಗಾಯಾಳುಗಳಿಗೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ಭೂಕಂಪದ ಕೇಂದ್ರಬಿಂದು ಬುರಿಯಾಸ್​ನಿಂದ 24.7 ಕಿ.ಮೀ ದೂರದಲ್ಲಿದ್ದು, ಪತ್ತೆ ಹಚ್ಚಿ ತಕ್ಷಣ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಮತ್ತು ಜಪಾನ್ ಹವಾಮಾನ ಇಲಾಖೆ ಜಂಟಿಯಾಗಿ ಫಿಲಿಪೈನ್ಸ್​, ಇಂಡೋನೇಷ್ಯಾ, ತೈವಾನ್ ಮತ್ತು ಜಪಾನ್ ಕರಾವಳಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಘೋಷಿಸಿವೆ.

ವಿಡಿಯೋ

ಕರಾವಳಿ ಭಾಗದ ಜನರನ್ನು ತಕ್ಷಣವೇ ಎತ್ತರ ಹಾಗೂ ಸುರಕ್ಷಿತ ಸ್ಥಳಗಳಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಡಲ ಅಲೆಗಳ ಏರಿಳಿತವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ನೌಕಾಸೇನೆ ಮತ್ತು ಕರಾವಳಿ ರಕ್ಷಣಾ ಪಡೆಗಳು ಸನ್ನದ್ಧವಾಗಿವೆ.

ಮತ್ತಷ್ಟು ಓದಿ: Earthquake: ಭಾರೀ ಭೂಕಂಪದ ಅಪಾಯದಲ್ಲಿ ಭಾರತ, ಹಿಮಾಲಯ ಪ್ರದೇಶಕ್ಕೆ ಹೆಚ್ಚು ಭೀತಿ; ಐಐಟಿ ವಿಜ್ಞಾನಿ ಆತಂಕ

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳಲ್ಲಿ, ಭೂಕಂಪನದ ಸಮಯದಲ್ಲಿ ಶಾಲಾ ಶಿಕ್ಷಕರು ಮತ್ತು ಅಧಿಕಾರಿಗಳು ವಿದ್ಯಾರ್ಥಿಗಳನ್ನು ಅತ್ಯಂತ ಶಾಂತವಾಗಿ, ಶಿಸ್ತುಬದ್ಧವಾಗಿ ಮುಕ್ತ ಮೈದಾನಕ್ಕೆ ಕರೆತಂದು ಸುರಕ್ಷತೆ ಖಚಿತಪಡಿಸಿರುವುದು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ. ಸಂತ್ರಸ್ತ ಪ್ರದೇಶದ ಜನರಿಗೆ ಆಡಳಿತ ಮಂಡಳಿಯು ತಾತ್ಕಾಲಿಕ ವಸತಿ, ಆಹಾರ, ಶುದ್ಧ ನೀರು ಮತ್ತು ವೈದ್ಯಕೀಯ ಕಿಟ್‌ಗಳನ್ನು ವಿತರಿಸಲು ತುರ್ತು ಕೇಂದ್ರಗಳನ್ನು ತೆರೆದಿದೆ.

ಫಿಲಿಪೈನ್ಸ್ ದೇಶವು ಪೆಸಿಫಿಕ್ ಮಹಾಸಾಗರದ “ರಿಂಗ್ ಆಫ್ ಫೈರ್”  ಅಂದರೆ ಭೂಕಂಪನ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿ ಇರುವುದರಿಂದ, ಇಲ್ಲಿನ ನಾಗರಿಕರು ಮತ್ತು ರಕ್ಷಣಾ ಪಡೆಗಳು ಇಂತಹ ಸವಾಲುಗಳನ್ನು ಎದುರಿಸಲು ಮೊದಲೇ ತರಬೇತಿ ಪಡೆದಿರುತ್ತಾರೆ. ಸರ್ಕಾರದ ತ್ವರಿತ ಸ್ಪಂದನೆ, ಡ್ರೋನ್ ತಂತ್ರಜ್ಞಾನದ ಕಣ್ಗಾವಲು ಮತ್ತು ನೆರೆರಾಷ್ಟ್ರಗಳ ಸೌಹಾರ್ದಯುತ ಬೆಂಬಲದಿಂದಾಗಿ ಮಿಂಡಾನಾವೊ ಪ್ರದೇಶವು ಅತ್ಯಂತ ವೇಗವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಪುನರ್ನಿರ್ಮಾಣ ಕಾರ್ಯಗಳು ಸಶಕ್ತವಾಗಿ ಆರಂಭಗೊಂಡಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today: ಇಂದು ಈ ರಾಶಿಯವರು ಕೋಪ ಮತ್ತು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 08, ಸೋಮವಾರದ ದೈನಂದಿನ ರಾಶಿ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವ ನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ ಅಷ್ಟಮಿ, ಪೂರ್ವಾಭಾದ್ರ ನಕ್ಷತ್ರ, ವಿಷ್ಕಂಭ ಯೋಗ ಮತ್ತು ಬಾಲವಕರಣ ಇರತಕ್ಕಂತಹ ಈ ದಿನದ ರಾಹುಕಾಲ 7:29 ರಿಂದ 9:05 ರವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲ 9:05 ರಿಂದ 10:42 ರವರೆಗೆ ಇರುತ್ತದೆ.

ಇಂದು ವಿಶ್ವ ಸಾಗರ ದಿನವೂ ಹೌದು. ರವಿ ವೃಷಭ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಓಂ ನಮಃ ಶಿವಾಯ ಮಂತ್ರ ಜಪಿಸುವುದರಿಂದ ಸಕಲ ಅಭೀಷ್ಟಗಳು ಈಡೇರುತ್ತವೆ ಎಂದು ಗುರೂಜಿ ತಿಳಿಸಿದ್ದಾರೆ.

 

Source link

Daily Devotional: ಅಧಿಕ ಮಾಸದಲ್ಲಿ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರಲಿದೆ? – Kannada News

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಅಧಿಕ ಮಾಸದಲ್ಲಿ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರಲಿದೆ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಅಧಿಕ ಮಾಸ, ಇದನ್ನು ಪುರುಷೋತ್ತಮ ಮಾಸವೆಂದೂ ಕರೆಯುತ್ತಾರೆ, ಈ ಮಾಸದಲ್ಲಿ ಜನಿಸಿದ ಮಕ್ಕಳ ಭವಿಷ್ಯದ ಕುರಿತು ಕೆಲವೊಂದು ಪ್ರಮುಖ ವಿಚಾರಗಳನ್ನು ತಿಳಿಸಿದ್ದಾರೆ. ಸಾಂಪ್ರದಾಯಿಕವಾಗಿ, ಚೈತ್ರ ಮಾಸದಿಂದ ಹಿಡಿದು 12 ಮಾಸಗಳಲ್ಲಿ ಶುಭ-ಅಶುಭಗಳು ಸಂಭವಿಸುತ್ತವೆ. ಆದರೆ, ಮಗುವಿನ ಜನನಕ್ಕೆ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ, ಏಕೆಂದರೆ ಜನಿಸಿದ ಮಾಸಕ್ಕೆ ತಕ್ಕಂತೆ ದೇವರ ಅನುಗ್ರಹ ಆ ಮಗುವಿನ ಮೇಲೆ ಇರುತ್ತದೆ.

ಇತ್ತೀಚೆಗೆ ಅನೇಕರು ಅಧಿಕ ಮಾಸದಲ್ಲಿ ಮಕ್ಕಳ ಜನನದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಧಿಕ ಮಾಸವು ಒಂದು ವಿಶೇಷ ಮಾಸವಾಗಿದ್ದು, ಕೆಲವರು ಇದನ್ನು ಶೂನ್ಯ ಮಾಸ, ಮಲ ಮಾಸ ಅಥವಾ ಶುಭ ಮಾಸವಲ್ಲ ಎಂದು ತಪ್ಪಾಗಿ ಭಾವಿಸುತ್ತಾರೆ. ಈ ರೀತಿಯ ನಕಾರಾತ್ಮಕ ಭಾವನೆಗಳು ಮಾನಸಿಕವಾಗಿ ಜನರನ್ನು ಕಾಡುತ್ತವೆ ಎಂದು ಗುರೂಜಿ ಹೇಳಿದ್ದಾರೆ.

Source link

ಸುದೀಪ್ ನೆಪೋಟಿಸಂ ಹೇಳಿಕೆ ಬೆನ್ನಲ್ಲೇ ಶಿವಣ್ಣ ಖಡಕ್ ಉತ್ತರ – Kannada News

ನೆಪೋಟಿಸಂ ಬಗ್ಗೆ ಬಾಲಿವುಡ್​​ನಲ್ಲಿ ಚರ್ಚೆ ಆದಷ್ಟು ಕನ್ನಡ ಚಿತ್ರರಂಗದಲ್ಲಿ ಆಗೋದಿಲ್ಲ. ಇಲ್ಲಿ ಟ್ಯಾಲೆಂಟ್ ಇದ್ದರೆ ಮಾತ್ರ ಅವಕಾಶಗಳು ಸಿಗುತ್ತವೆ. ಇತ್ತೀಚೆಗೆ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ನೆಪೋಟಿಸಂ ಹೇಳಿಕೆ ಚರ್ಚೆಗೆ ಬಂದಿತ್ತು. ಸುದೀಪ್​​ಗೆ ಈ ಬಗ್ಗೆ ಪ್ರಶ್ನೆ ಕೂಡ ಎದುರಾಯಿತು. ಆಗ ಕಿಚ್ಚ (Kichcha Sudeep) ‘ಶಿವರಾಜ್​​ಕುಮಾರ್​​ಗೆ ಈ ಪ್ರಶ್ನೆ ಏಕೆ ಕೇಳಲ್ಲ’ ಎಂದು ನೇರವಾಗಿ ಪ್ರಶ್ನೆ ಮಾಡಿದ್ದರು. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ತಮ್ಮದೇ ಶೈಲಿಯಲ್ಲಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗೋಷ್ಠಿಯೊಂದರಲ್ಲಿ ಎದುರಾದ ಪ್ರಶ್ನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶಿವಣ್ಣ, ‘ಆ ರೀತಿಯ ಪ್ರಶ್ನೆಯನ್ನು ಕೇಳಿದ್ದೇ ತಪ್ಪು’ ಎಂದು ನೇರವಾಗಿ ಹೇಳಿದ್ದಾರೆ.

‘ಮ್ಯಾಂಗೋ ಪಚ್ಚ’ ವಿಶೇಷ ಶೋ ನೋಡಿ ಬಂದ ಶಿವಣ್ಣ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪತ್ರಕರ್ತರೊಬ್ಬರು ಸುದೀಪ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ‘ನೆಪೋಟಿಸಂ ಪ್ರಶ್ನೆಯನ್ನು ಶಿವಣ್ಣ ಅವರಿಗೆ ಏಕೆ ಕೇಳಿಲ್ಲ ಎಂದು ಸುದೀಪ್ ಹೇಳಿದ್ದಾರೆ’ ಎಂಬ ಪ್ರಶ್ನೆಯನ್ನು ಶಿವಣ್ಣನಿಗೆ ಕೇಳಿದರು. ಈ ಪ್ರಶ್ನೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಶಿವಣ್ಣ, ‘ನೀವು ಆ ಪ್ರಶ್ನೆಯನ್ನು ಏಕೆ ಕೇಳಿದ್ರಿ? ನಾನು ಆ ವಿಡಿಯೋ ನೋಡಿದ್ದೇನೆ. ಆದರೆ ನೀವು ಆ ಪ್ರಶ್ನೆಯನ್ನು ಏಕೆ ಕೇಳುತ್ತಿದ್ದೀರಿ? ಅದು ಕೇಳಬೇಕಾದ ಪ್ರಶ್ನೆಯೇ ಅಲ್ಲ’ ಎಂದು ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ನೆಪೋಟಿಸಂ ಇರೋದು ನಿಜ, ಅದರಿಂದಲೇ ನನಗೆ ಕೆಲಸ ಸಿಗುತ್ತಿದೆ: ಆಮಿರ್ ಖಾನ್ ಮಗನ ನೇರ ಮಾತು

ಯಾರ ಮಕ್ಕಳು ಬೇಕಾದರೂ ಕನಸು ಕಾಣಬಹುದು:

ಮುಂದುವರಿದು ಮಾತನಾಡಿದ ಶಿವಣ್ಣ, ‘ಚಿತ್ರರಂಗದಲ್ಲಿ ಕೇವಲ ಇವರ ಮಕ್ಕಳು ಅಥವಾ ಅವರ ಮಕ್ಕಳೇ ಬಂದು ಕನಸು ಕಾಣಬೇಕು ಎಂದೇನೂ ಇಲ್ಲ. ಪ್ರತಿಯೊಬ್ಬ ಮನುಷ್ಯನಿಗೂ, ಪ್ರತಿಯೊಬ್ಬ ಮಗುವಿಗೂ ಕನಸು ಕಾಣುವ ಹಕ್ಕಿದೆ. ಚಿತ್ರರಂಗಕ್ಕೆ ಯಾರ ಮಕ್ಕಳು ಬೇಕಾದರೂ ಬರಬಹುದು, ನೀವು ಕೂಡ ಬರಬಹುದು. ಎಲ್ಲರಿಗೂ ಇಲ್ಲಿ ಅವಕಾಶವಿದೆ’ ಎಂದು ನೆಪೋಟಿಸಂ ವಾದಕ್ಕೆ ತಕ್ಕ ಉತ್ತರ ನೀಡಿದರು.

ಶಿವಣ್ಣನ ‘ಗ್ರೇಟ್‌ನೆಸ್’ ಕೊಂಡಾಡಿದ ಕಿಚ್ಚ ಸುದೀಪ್:

ಶಿವಣ್ಣ ಅವರು ಪತ್ರಕರ್ತನಿಗೆ ಖಡಕ್ ಆಗಿ ಉತ್ತರಿಸುತ್ತಿದ್ದಾಗ ಪಕ್ಕದಲ್ಲೇ ನಿಂತಿದ್ದ ನಟ ಕಿಚ್ಚ ಸುದೀಪ್ ಅವರು ಮುಗುಳ್ನಗುತ್ತಿದ್ದರು. ಶಿವಣ್ಣ ಮಾತು ಮುಗಿಸುತ್ತಿದ್ದಂತೆ ಮೈಕ್ ಕೈಗೆತ್ತಿಕೊಂಡ ಸುದೀಪ್, ‘ಗ್ರೇಟ್‌ನೆಸ್ ಅಂದ್ರೆ ಏನು ಗೊತ್ತಾ? ಈ ಪ್ರಶ್ನೆಯನ್ನು ಶಿವಣ್ಣನಿಗೆ ಕೇಳಿದ್ರಲ್ಲ’ ಎಂದು ಸುದೀಪ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link