Headlines

ಪಾಕಿಸ್ತಾನದಿಂದ ವಲಸೆ ಬಂದ ದಲಿತ ಹಿಂದೂಗಳಿಗೆ ವಸತಿ ಕಲ್ಪಿಸಿ; ಸುಪ್ರೀಂ ಕೋರ್ಟ್ ಆದೇಶ – Kannada News | Supreme Court stops eviction of Pakistan Born Dalit Hindus in Delhi seeks dignified housing

ನವದೆಹಲಿ, ಫೆಬ್ರವರಿ 2: ಪಾಕಿಸ್ತಾನದಿಂದ ವಲಸೆ ಬಂದ ಪರಿಶಿಷ್ಟ ಜಾತಿಯ ಹಿಂದೂಗಳ ದುಃಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಆದೇಶಿಸಿದೆ. ದೆಹಲಿಯಿಂದ ಪಾಕ್ ನಿರಾಶ್ರಿತರನ್ನು ಗಡಿಪಾರಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮಜ್ನು ಕಾ ತಿಲಾ ಮತ್ತು ಸಿಗ್ನೇಚರ್ ಸೇತುವೆ ಬಳಿ ವಾಸಿಸುವ ಸುಮಾರು 250 ಕುಟುಂಬಗಳ 1,000ಕ್ಕೂ ಹೆಚ್ಚು ಜನರನ್ನು ಗಡಿಪಾರಿನಿಂದ ರಕ್ಷಿಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎನ್. ಕೋಟೇಶ್ವರ ಸಿಂಗ್…

Read More

ಸಿ.ಜೆ. ರಾಯ್ ಆತ್ಮಹತ್ಯೆ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ವಿತ್ತ ಸಚಿವೆಗೆ ಕೇರಳ ಸಿಎಂ ಪತ್ರ – Kannada News | C.J. Roy Suicide: Kerala CM Pinarayi Vijayan Urges Judicial Probe, Writes to Finance Minister Nirmala Sitharaman

ಸಿ.ಜೆ. ರಾಯ್​​ ಕೇಸ್​ ಬಗ್ಗೆ ವಿತ್ತ ಸಚಿವೆಗೆ ಕೇರಳ ಸಿಎಂ ಪತ್ರ Image Credit source: Google ತಿರುವನಂತಪುರಂ, ಫೆಬ್ರವರಿ 02: ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿ ವಿತ್ತ ಸಚಿವೆ ನಿರ್ಮಲಾ​ ಸೀತಾರಾಮನ್​​ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ ಬರೆದು ಒತ್ತಾಯಿಸಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಕರ್ನಾಟಕ ಸರ್ಕಾರ ಈಗಾಗಲೇ ಎಸ್‌ಐಟಿ ರಚಿಸಿದ್ದು, ಬೆಂಗಳೂರಿನ ಜಂಟಿ…

Read More

Real Estate Mafia In Kodagu: ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್ – Kannada News | Kodagus Ambatti Hills Under Threat: Real Estate Mafia Illegally Blasts Mountains for Resorts

ಕೊಡಗು, ಫೆಬ್ರುವರಿ 02: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಂಬಟ್ಟಿ ಬೆಟ್ಟದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಅಟ್ಟಹಾಸ ಮಿತಿ ಮೀರಿದೆ. ರೆಸಾರ್ಟ್ ಹಾಗೂ ವಿಲ್ಲಾಗಳ ನಿರ್ಮಾಣಕ್ಕಾಗಿ ಯಾವುದೇ ಇಲಾಖಾ ಅನುಮತಿ ಪಡೆಯದೆ ಬೃಹತ್ ಬೆಟ್ಟವನ್ನು ಬಗೆದು, ಬೆಟ್ಟದ ಬುಡದಲ್ಲೇ ಡೈನಮೈಟ್ ಸ್ಫೋಟಿಸಲಾಗಿದೆ. ಬೆಟ್ಟದ ಮೇಲಿನಿಂದ ಹರಿಯುತ್ತಿದ್ದ ನೀರಿನ ಮೂಲವನ್ನೇ ಬಂದ್ ಮಾಡಿರುವ ಆರೋಪ ಕೇಳಿಬಂದಿದೆ. ಇದರಿಂದ ಮಳೆಗಾಲದಲ್ಲಿ ಭಾರೀ ಭೂ ಕುಸಿತ ಸಂಭವಿಸುವ ಆತಂಕ ವ್ಯಕ್ತವಾಗಿದ್ದು, ಅವೈಜ್ಞಾನಿಕ ಕಾಮಗಾರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಪಂಚಾಯಿತಿ ಮೌನ…

Read More

ಸಿಗ್ನಲ್ ಜಂಪ್ ಕೃತಿಗೆ ಕಸಾಪ ದತ್ತಿ ಪ್ರಶಸ್ತಿ – Kannada News | Avva pustakaalaya Anant Kunigal gets Publisher RN Hubbu datti Award 2024 for tv9 creative producer Ravindra Muddi’s Signal Jump book

ಬೆಂಗಳೂರು, (ಫೆಬ್ರವರಿ 02): ಕನ್ನಡ ಟಿವಿ9 ಕ್ರಿಯೇಟಿವ್ ಪ್ರೊಡ್ಯೂಸರ್ ರವೀಂದ್ರ ಮುದ್ದಿ ಅವರ ಸಿಗ್ನಲ್ ಜಂಪ್ (Signal Jump) ಕಥಾ ಸಂಕಲನ ಪ್ರಕಟಿಸಿದ್ದ ಅವ್ವ ಪುಸ್ತಕಾಲಯದ ಅನಂತ ಕುಣಿಗಲ್ ಅವರಿಗೆ 2024ನೇ ಸಾಲಿನ ಪ್ರಕಾಶಕ ಆರ್. ಎನ್. ಹಬ್ಬು ದತ್ತಿ ಪ್ರಶಸ್ತಿ ಲಭಿಸಿದೆ. 2024ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೂ ಪ್ರಕಟಗೊಂಡ ಕೃತಿಗಳನ್ನು ಒಟ್ಟು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿದೆ. ವಿವಿಧ ಪ್ರಕಾರದ ಸಾಹಿತ್ಯದ ಪ್ರಶಸ್ತಿಗಾಗಿ ಸುಮಾರು 900 ಕೃತಿಗಳಲ್ಲಿ…

Read More

Lakkundi Excavation: ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಸಜ್ಜು

ಗದಗ, ಫೆಬ್ರುವರಿ 02: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮವು ತನ್ನ ಅಪಾರ ಪುರಾತತ್ವ ಸಂಪತ್ತಿನಿಂದಾಗಿ ಪ್ರಾಮುಖ್ಯತೆ ಗಳಿಸಿದೆ. ಇತ್ತೀಚೆಗೆ ನಡೆದ ಚಿನ್ನದ ನಿಧಿ ಶೋಧವು ಈ ಪ್ರದೇಶದ ಬಗ್ಗೆ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಡೆಕ್ಕನ್ ಹೆರಿಟೇಜ್ ಫೌಂಡೇಶನ್ (ಡಿಎಚ್‌ಎಫ್) ಲಕ್ಕುಂಡಿಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಪ್ರಮುಖ ಪಾತ್ರ ವಹಿಸುತ್ತಿದೆ. ಸರ್ಕಾರದ ಸಹಯೋಗದೊಂದಿಗೆ ಲಕ್ಕುಂಡಿಯಲ್ಲಿ ಬಯಲು ಪ್ರಾಚ್ಯವಸ್ತು ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಲು ಫೌಂಡೇಶನ್ ಸಿದ್ಧತೆ ನಡೆಸುತ್ತಿದೆ. ಸಿದ್ದರಾಮಯ್ಯ ಸೇರಿದಂತೆ ಮುಖ್ಯಮಂತ್ರಿಗಳು ಈ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದ್ದಾರೆ….

Read More

ಭಾರತದ ಪ್ರಗತಿಗೆ ಪೂರಕವಾಗಿದೆ ಈ ಬಜೆಟ್: ಅಪೋಲೋ ಹಾಸ್ಪಿಟಲ್ಸ್ ಮುಖ್ಯಸ್ಥ ಡಾ. ಪ್ರತಾಪ್ ಸಿ. ರೆಡ್ಡಿ – Kannada News | Budget 2026 sends reassuring message about India’s growth: Chairman & Apollo Hospitals founder Dr PC Reddy

ಡಾ. ಪ್ರತಾಪ್ ಸಿ ರೆಡ್ಡಿ ನವದೆಹಲಿ, ಫೆಬ್ರುವರಿ 2: ಈ ಬಾರಿಯ ಕೇಂದ್ರ ಬಜೆಟ್ (Union Budget) ಬಗ್ಗೆ ಹೆಲ್ತ್​ಕೇರ್ ಉದ್ಯಮ ಸಮಾಧಾನಪಟ್ಟಿದೆ. ದೇಶದ ಆರೋಗ್ಯ ವ್ಯವಸ್ಥೆಗೆ ಪುಷ್ಟಿ ಕೊಡಲು ಬಜೆಟ್​ನಲ್ಲಿ ತೆಗೆದುಕೊಳ್ಳಲಾದ ಕ್ರಮಗಳನ್ನು ಈ ಉದ್ಯಮದ ನಾಯಕರು ಸ್ವಾಗತಿಸಿದ್ದಾರೆ. ಹೆಚ್ಚು ಜನರಿಗೆ ಚಿಕಿತ್ಸಾ ವ್ಯವಸ್ಥೆ ಮುಟ್ಟಲು ಅನುವು ಮಾಡಿಕೊಂಡುವಂತಹ ಕ್ರಮಗಳನ್ನು ಬಜೆಟ್​ನಲ್ಲಿ ತೆಗೆದುಕೊಳ್ಳಲಾಗಿದೆ ಎಂಬುದು ಇವರ ಅನಿಸಿಕೆ. ಅಪೋಲೋ ಹಾಸ್ಪಿಟಲ್ಸ್​ನ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರತಾಪ್ ಸಿ ರೆಡ್ಡಿ (Dr Pratap C Reddy) ಅವರು…

Read More

ಮಾವನ ಮಗನ ಜೊತೆ ನಿಶ್ಚಿತಾರ್ಥ, ಚಾಲಕನ ಜೊತೆ ಓಡಿಹೋಗಿ ಮದುವೆಯಾದ ಯುವತಿ: ಆಮೇಲಾಯ್ತು ಸಿನಿಮೀಯ ಟ್ವಿಸ್ಟ್! – Kannada News | Tumakuru Love Twist: Engaged to Cousin, Woman Elopes With Family Driver, Police Mediation Ends Case

ತುಮಕೂರು, ಫೆಬ್ರವರಿ 2: ಅದೊಂದು ರೀತಿಯ ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ. ಆಕೆ ಶ್ರೀಮಂತರ ಮಗಳು. ಆರ್ಥಿಕವಾಗಿ ಚೆನ್ನಾಗಿದ್ದ ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿತ್ತು. ಮಗಳು ಚೆನ್ನಾಗಿ ಓದದಿದ್ದರೂ ಸಹ ಮಾವನ ಮಗನ ಜೊತೆ ಮದುವೆ ಮಾಡುವ ಯೋಚನೆಯಲ್ಲಿ ಮನೆಯವರಿದ್ದರು. ಅದರಂತೆ ಸಂಬಂಧಿಕರಿಗೆಲ್ಲಾ ಕಾರ್ಡ್ ಹಂಚಿ ಚೌಲ್ಟ್ರಿ, ಊಟ, ಡೆಕೊರೇಷನ್ ಎಂದು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಹೀಗೆ ಮದುವೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಯುವತಿ ಶಾಕ್ ನೀಡಿದ್ದು, ಮನೆಯ ವಾಹನ ಚಾಲಕನ ಜೊತೆ ಓಡಿ…

Read More

Video: ಮಗಳ ಡ್ಯಾನ್ಸ್‌ನ್ನು ಕೀಪ್ಯಾಡ್ ಮೊಬೈಲ್‌ನಲ್ಲಿ ಸೆರೆಹಿಡಿದ ತಂದೆ, ವೈರಲ್‌ ಆಯ್ತು ದೃಶ್ಯ – Kannada News | Father records video of daughter dancing on stage with keypad mobile phone

ಮಗಳ ಪಾಲಿಗೆ ಅಪ್ಪ (father) ಎಲ್ಲವೂ ಆಗಿರುತ್ತಾನೆ. ಇತ್ತ ಕಷ್ಟಪಟ್ಟು ದುಡಿದು ಮಗಳ ಇಷ್ಟಗಳನ್ನು ಈಡೇರಿಸುವ ಅಪ್ಪನಿಗೆ ಆಕೆಗಿಂತ ದೊಡ್ಡ ಪ್ರಪಂಚ ಮತ್ತೊಂದಿಲ್ಲ. ಮಗಳ ಖುಷಿಯಲ್ಲೇ ತನ್ನ ಖುಷಿ ಕಾಣುವ ತಂದೆಯ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಗಣರಾಜ್ಯೋತ್ಸವ ದಿನ ತನ್ನ ಮಗಳು ಸ್ಟೇಜ್‌ನಲ್ಲಿ ಡ್ಯಾನ್ಸ್ ಮಾಡುತ್ತಿದ್ದರೆ, ಇತ್ತ ತಂದೆ ಕೀಪ್ಯಾಡ್ ಫೋನ್‌ನಲ್ಲಿ ರೆಕಾರ್ಡ್ ಮಾಡಲು ನಿಂತುಕೊಂಡಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ. ಜಿತೇಂದರ್ ಸರಸ್ವತ್ (Jitendar Sarswat) ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ…

Read More

ಗುಡಿಬಂಡೆ ಬಳಿ ಇದೆಯಾ ಚಿನ್ನದ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ನಡೆಯಿತು ಶೋಧಕಾರ್ಯ – Kannada News | Geological Survey of India Conducts Aerial Search for Gold in Gudibande KGF Hills, Chikkaballapura

ಚಿಕ್ಕಬಳ್ಳಾಪುರ, ಫೆಬ್ರವರಿ 2: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿನ್ನ ಹಾಗೂ ನಿಧಿ ನಿಕ್ಷೇಪಗಳ ಶೋಧ ಕಾರ್ಯ ತೀವ್ರಗೊಂಡಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು (GSI) ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿದೆ. ಕೆಜಿಎಫ್ ಗೋಲ್ಡ್ ಮೈನಿಂಗ್ ಬೆಟ್ಟದ ಸಾಲಿನಲ್ಲಿ ಇರುವ ಈ ಪ್ರದೇಶದಲ್ಲಿ ತಜ್ಞರು ಚಿನ್ನದ ಲಭ್ಯತೆಯನ್ನು ಪತ್ತೆಹಚ್ಚಲು ಶೋಧ ನಡೆಸುತ್ತಿದ್ದಾರೆ. ಈ ಹಿಂದೆಯೂ ಚಿಕ್ಕಬಳ್ಳಾಪುರ ಜಿಲ್ಲೆಯ ಮಣ್ಣಿನಲ್ಲಿ ಚಿನ್ನದ ಕಣಗಳು ಪತ್ತೆಯಾಗಿದ್ದವು. ನಿರ್ದಿಷ್ಟವಾಗಿ ಹೇಳುವುದಾದರೆ, ಬಾಗೇಪಲ್ಲಿ ಮತ್ತು…

Read More

VIDEO: ಕೋಪ-ತಾಪ… ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ – Kannada News | Vaibhav suryavanshi sledges pakistan player

ಅಂಡರ್-19 ವಿಶ್ವಕಪ್​ನ 12ನೇ ಪಂದ್ಯವು ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.5 ಓವರ್​ಗಳಲ್ಲಿ ಕಲೆಹಾಕಿದ್ದು 252 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 35 ಓವರ್​ಗಳಲ್ಲಿ 168 ರನ್ ಕಲೆಹಾಕಿದ್ದರು. ಇದರ ನಡುವೆ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಅದರಲ್ಲೂ ವಿಹಾನ್ ಮಲ್ಹೋತ್ರ ಎಸೆದ 37ನೇ ಓವರ್​ನ ಕೊನೆಯ ಎಸೆತದಲ್ಲಿ ಅಲಿ ಹಸನ್ ಬಲೂಚ್ ವಿಕೆಟ್ ಒಪ್ಪಿಸಿದ್ದರು. ಅತ್ತ ಅಲಿ ಹಸನ್…

Read More