Category Archives: Blog

Your blog category

⁠Union Budget 2026: ಚುನಾವಣಾ ರಾಜ್ಯಗಳಿಗೆ ಬಜೆಟ್​​ನಲ್ಲಿ ಭರ್ಜರಿ ಕೊಡುಗೆ, ಏನೇನು ಸಿಕ್ತು ನೋಡಿ – Kannada News | Union Budget 2026: Big Push for Poll Bound States as Nirmala Sitharaman Announces Major Sops

ಚುನಾವಣಾ ರಾಜ್ಯಗಳಿಗೆ ಬಜೆಟ್​​ನಲ್ಲಿ ಭರ್ಜರಿ ಕೊಡುಗೆ (ಸಾಂದರ್ಭಿಕ ಚಿತ್ರ)Image Credit source: TV9 Network

ನವದೆಹಲಿ, ಫೆಬ್ರವರಿ 1: ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯಗಳಿಗೆ ಕೇಂದ್ರ ಬಜೆಟ್​​ನಲ್ಲಿ (Union Budget 2026) ಭರ್ಜರಿ ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ. ಒಡಿಶಾ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಿನರಲ್ ರಿಸರ್ವ್ ಪಾರ್ಕ್​ಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ. ವಾರಣಾಸಿಯಿಂದ ಸಿಲಿಗುರಿಗೆ ರೈಲು ಕಾರಿಡಾರ್ , ಕೇರಳ ಮತ್ತು ತಮಿಳುನಾಡಿನಲ್ಲಿ ಅಪರೂಪದ ಅರ್ಥ್ ಕಾರಿಡಾರ್ ಅನ್ನೂ ಹಣಕಾಸು ಸಚಿವರು ಘೋಷಿಸಿದ್ದಾರೆ.

ರೇರ್ ಅರ್ಥ್ ಖನಿಜಗಳ ವಿಚಾರದಲ್ಲಿ ಚೀನಾ ಮೇಲಿನ ಅವಲಂಬನೆ ತಪ್ಪಿಸುವುದಕ್ಕಾಗಿ ತಮಿಳುನಾಡು, ಕೇರಳ, ಒಡಿಶಾ ಮತ್ತು ಆಂಧ್ರಪ್ರದೇಶಗಳಲ್ಲಿ ಕಾರಿಡಾರ್​​ಗಳ ಸ್ಥಾಪನೆ ಘೋಷಣೆ ಮಾಡಲಾಗಿದೆ.

ವಾರಣಾಸಿಯಿಂದ ಸಿಲಿಗುರಿ ರೈಲು ಕಾರಿಡಾರ್

ಭಾರತದ ಹೈಸ್ಪೀಡ್ ರೈಲು ಮಹತ್ವಾಕಾಂಕ್ಷೆಗಳನ್ನು ಹೆಚ್ಚಿಸುವ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್, ಎರಡನೇ ಮತ್ತು ಮೂರನೇ ಶ್ರೇಣಿಯ ನಗರಗಳನ್ನು ಪ್ರಮುಖ ನಗರ ಕೇಂದ್ರಗಳಿಗೆ ಸಂಪರ್ಕಿಸುವ ಸಲುವಾಗಿ ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಿದ್ದಾರೆ.

ಬಜೆಟ್ ಘೋಷಣೆಯ ಪ್ರಕಾರ ಪುಣೆ-ಮುಂಬೈ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಬೆಂಗಳೂರು-ಚೆನ್ನೈ, ಹೈದರಾಬಾದ್-ಚೆನ್ನೈ, ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿ ಮಾರ್ಗಗಳಲ್ಲಿ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಪ್ರಸ್ತಾಪಿಸಲಾಗಿದೆ. ಒಟ್ಟಾಗಿ, ಈ ಕಾರಿಡಾರ್‌ಗಳು ಪಶ್ಚಿಮ, ದಕ್ಷಿಣ, ಉತ್ತರ ಮತ್ತು ಪೂರ್ವ ಪ್ರದೇಶಗಳನ್ನು ಸಂಪರ್ಕಿಸುತ್ತವೆ. ಕೈಗಾರಿಕಾ ಕೇಂದ್ರಗಳು, ತಂತ್ರಜ್ಞಾನ ಕೇಂದ್ರಗಳು, ಯಾತ್ರಾ ನಗರಗಳು ಮತ್ತು ಅಭಿವೃದ್ಧಿಹೊಂದುತ್ತಿರುವ ನಗರ ಸಮೂಹಗಳ ನಡುವೆ ವೇಗವಾಗಿ ಸಂಪರ್ಕ ಕಲ್ಪಿಸಲಿವೆ.

ಪೂರ್ವ ಭಾರತದಲ್ಲಿ ಡಿಸೈನಿಂಗ್ ಇನ್​ಸ್ಟಿಟ್ಯೂಟ್

ಅಲ್ಪಾವಧಿಯ ಮಾಡ್ಯುಲರ್ ಕೋರ್ಸ್‌ಗಳನ್ನು ವಿನ್ಯಾಸಗೊಳಿಸುವಲ್ಲಿ ಐಸಿಎಐ ಮತ್ತು ಐಸಿಎಸ್‌ಐನಂತಹ ವೃತ್ತಿಪರ ಸಂಸ್ಥೆಗಳಿಗೆ ನೆರವಾಗಲು ಪೂರ್ವ ಭಾರತದಲ್ಲಿ ಡಿಸೈನಿಂಗ್ ಇನ್​ಸ್ಟಿಟ್ಯೂಟ್ ಆರಂಭಿಸುವ ಬಗ್ಗೆ ಬಜೆಟ್​​ನಲ್ಲಿ ಪ್ರಸ್ತಾಪಿಸಲಾಗಿದೆ . ಅಲ್ಲದೆ, ಖಾಸಗಿ ಸಹಯೋಗದೊಂದಿಗೆ ಐದು ವೈದ್ಯಕೀಯ ಕೇಂದ್ರಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದರು.

3 ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆ

ಭಾರತದಲ್ಲಿ ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ವೈದ್ಯಕೀಯ ಪ್ರವಾಸೋದ್ಯಮಕ್ಕೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.

ಅಲ್ಲದೆ, ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರತಿ ಜಿಲ್ಲೆಯಲ್ಲೂ ಮಹಿಳಾ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.

ಬಜೆಟ್ ಲೈವ್​ ಅಪ್​ಡೇಟ್ಸ್​ಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Union Budget 2026 LIVE: ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ – Kannada News | Union Budget 2026 Live Updates: Finance Minister Nirmala Sitharaman Presents Union Budget

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ ಒಂಬತ್ತನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದು, ಹೊಸ ದಾಖಲೆ ಬರೆದಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಸತ್‌ನಲ್ಲಿ ಪ್ರಾರಂಭವಾದ ಬಜೆಟ್​​ನ ಕ್ಷಣ ಕ್ಷಣದ ಮಾಹಿತಿಗಾಗಿ ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ.

 

ಮತ್ತಷ್ಟು ಓದಿ: ಬಜೆಟ್ ಭಾಷಣ ಸಮಯ, ಲೈವ್ ಸ್ಟ್ರೀಮಿಂಗ್, ಪಿಡಿಎಫ್ ಕಾಪಿ ಡೌನ್​ಲೋಡ್ ಇತ್ಯಾದಿ ಮಾಹಿತಿ

Source link

Union Budget 2026: 9 ಬಜೆಟ್​ 9 ಬಣ್ಣದ ಸೀರೆಗಳು; ನಿರ್ಮಲಾ ಸೀತಾರಾಮನ್ ‘ಬಜೆಟ್‌ ಸೀರೆ’ಯ ವೈಶಿಷ್ಟ್ಯ ಇಲ್ಲಿದೆ – Kannada News | Nirmala Sitharaman’s Budget Sarees: A Journey Through India’s Rich Textile Heritage

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೀಗಾ ಸತತ 9 ಬಜೆಟ್‌ಗಳನ್ನು ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಸತತ ಒಂಬತ್ತು ಬಾರಿ ಬಜೆಟ್ ಮಂಡನೆ ಮಾಡಿದ ಮೊತ್ತಮೊದಲ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಗೆ ಅವರಿಗಿದೆ.

ಪ್ರತೀ ವರ್ಷ ಬಜೆಟ್ ಮಂಡನೆಯ ವೇಳೆ ಇವರು ಉಡುವ ಸೀರೆ ಸಾಕಷ್ಟು ಗಮನಸೆಳೆಯುತ್ತದೆ. ಪ್ರತೀ ಸೀರೆಯೂ ಕೂಡ ಒಂದೊಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಬಜೆಟ್ ಸಮಯದಲ್ಲಿ ನಿರ್ಮಲಾ ಸೀತಾರಾಮನ್ ಇಲ್ಲಿಯವರೆಗೆ ಉಟ್ಟ ಸೀರೆಗಳ ವಿಶೇಷತೆಯನ್ನು ಇಲ್ಲಿ ತಿಳಿದುಕೊಳ್ಳಿ.

2026-27ರ ಬಜೆಟ್: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಂದು ಬಣ್ಣದ ಅಂಚು ಹೊಂದಿರುವ ಕೆನ್ನೇರಳೆ ಬಣ್ಣ ಸೀರೆ ಉಟ್ಟು ಸಂಸತ್ ಭವನದತ್ತ ತೆರಳಿದ್ದಾರೆ. ಈ ಬಾರಿಯೂ ಭಾರತದ ಸಾಂಪ್ರದಾಯಿಕ ಕೈಮಗ್ಗ ನೇಕಾರಿಕೆಯನ್ನು ಪ್ರೋತ್ಸಾಹಿಸಲು ಈ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

2019-20ರ ಬಜೆಟ್: ಮೋದಿ 3.0 ಸರ್ಕಾರದಲ್ಲಿ ಹಣಕಾಸು ಮಂತ್ರಿ ಹೊಣೆ ಪಡೆದ ನಿರ್ಮಲಾ ಸೀತಾರಾಮನ್ ಅವರಿಗೆ ಮೊದಲ ಬಜೆಟ್ ಮಂಡನೆ ಇದಾಗಿದೆ. ತನ್ನ ಮೊದಲ ಬಜೆಟ್‌ಗೆ ಸ್ಥಿರತೆ ಮತ್ತು ಗಂಭೀರತೆಯ ಸಂಕೇತವಾಗಿರುವ ಗುಲಾಬಿ ಬಣ್ಣದ ಸೀರೆ ಉಟ್ಟಿದ್ದರು. ಇದು ಆಂಧ್ರಪ್ರದೇಶದ ಮಂಗಳಗಿರಿ ಕಾಟನ್ ಮತ್ತು ರೇಷ್ಮೆ ಮಿಶ್ರಿತ ಗೋಲ್ಡನ್​ ಕಲರ್​ ಬಾರ್ಡರ್​​ ಅನ್ನು ಹೊಂದಿದೆ.

2020-21ರ ತಮ್ಮ ಎರಡನೇ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಹಳದಿ ಮತ್ತು ನೀಲಿ ಬಣ್ಣದ ಅಂಚಿನ ರೇಷ್ಮೆ ಸೀರೆಯನ್ನುಂಟು ಗಮನ ಸೆಳೆದಿದ್ದಾರೆ. ಈ ಸಮಯದಲ್ಲಿ ಹೆಲ್ತ್​ಕೇರ್, ಸ್ವಚ್ಛ ಭಾರತ್ ಮಿಷನ್, ಮನೆಗಳಿಗೆ ಕೊಳವೆ ನೀರು ಇತ್ಯಾದಿ ಯೋಜನೆಗಳಿಗೆ ಹೇರಳ ಅನುದಾನ ಬಿಡುಗಡೆ ಮಾಡಿದರು.

2021-22ರ ಬಜೆಟ್: ಕೋವಿಡ್​ನಿಂದ ಜರ್ಝರಿತಗೊಳ್ಳುತ್ತಿದ್ದ ಸಂದರ್ಭದಲ್ಲಿ ಮಂಡನೆಯಾದ ಮೂರನೇ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಹೈದರಾಬಾದ್​ ಪೋಚಂಪಳ್ಳಿ ಗ್ರಾಮದ ಪೋಚಂಪಳ್ಳಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದರು. ಕೆಂಪು ಮತ್ತು ಬಿಳಿ ಬಣ್ಣದ ಈ ಸೀರೆ ಇಕ್ಕತ್ ಶೈಲಿಯನ್ನು ಹೊಂದಿತ್ತು.

2022-23ರ ಬಜೆಟ್: ಕೋವಿಡ್​ನಿಂದ ಅಧಃಪತನಕ್ಕೆ ಇಳಿದಿದ್ದ ಆರ್ಥಿಕತೆಗೆ ಚೇತರಿಕೆ ತುಂಬ ಪ್ರಯತ್ನ ಈ ಬಜೆಟ್​ನಲ್ಲೂ ಮುಂದುವರಿಯಿತು. ಈ ಬಜೆಟ್​ ಮಂಡನೆ ವೇಳೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಕೈಮಗ್ಗದಲ್ಲಿ ನೇಯ್ದ ಬೊಮ್ಮೆ ಸೀರೆಯನ್ನು ನಿರ್ಮಲಾ ಸೀತಾರಾಮನ್ ತೊಟ್ಟಿದ್ದರು.

2023-24ರ ಬಜೆಟ್: ಕರ್ನಾಟಕದಿಂದ ರಾಜ್ಯಸಭಾ ಸಂಸದೆಯಾಗಿ ಹಣಕಾಸು ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್​ನಲ್ಲಿ ಕರ್ನಾಟಕದ ಖ್ಯಾತ ಇಳಕಲ್ ಸೀರೆ ತೊಟ್ಟು ಬಜೆಟ್ ಮಂಡಿಸಿದ್ದು ವಿಶೇಷ.

2024-25ರ ಮಧ್ಯಂತರ ಬಜೆಟ್: ಮೋದಿ 2.0 ಸರ್ಕಾರದ ಕೊನೆಯ ಬಜೆಟ್. ಚುನಾವಣೆ ಇದ್ದುದ್ದರಿಂದ 2024ರ ಫೆಬ್ರುವರಿ 1ರಂದು ಮಧ್ಯಂತರ ಬಜೆಟ್ ಮಂಡಿಸಲಾಯಿತು. ನಿರ್ಮಲಾ ಸೀತಾರಾಮನ್ ಅವರ ಮೊದಲ ಮಧ್ಯಂತರ ಬಜೆಟ್ ಕೂಡ ಇದು. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕಾಂತ ಹೊಲಿಗೆಯಿಂದ ವಿನ್ಯಾಸಗೊಳಿಸಿದ ನೀಲಿ ಬಣ್ಣದ ಟಸ್ಸರ್ ರೇಷ್ಮೆ ಸೀರೆಯಲ್ಲಿ ಮಿಂಚಿದ್ದ ನಿರ್ಮಲಾ ಸೀತಾರಾಮನ್.

9. 2024-25ರ ಬಜೆಟ್: ಮೋದಿ 3.0 ಸರ್ಕಾರದ ಮೊದಲ ಪೂರ್ಣ ಬಜೆಟ್ ಮಂಡನೆ ಮಾಡಿದ ನಿರ್ಮಲಾ ಸೀತಾರಾಮನ್ ಮಜೆಂಟಾ ಬಾರ್ಡರ್ ಹೊಂದಿದ್ದ ಮಂಗಳಗಿರಿ ಕಾಟನ್ ಸೀರೆಯಲ್ಲಿ ಗಮನಸೆಳೆದಿದ್ದರು. ಈ ಸಮಯದಲ್ಲಿ ಅವರು ಮೊಬೈಲ್ ಫೋನ್, ಚಿನ್ನ, ಬೆಳ್ಳಿ ಮೇಲೆ ಆಮದು ಸುಂಕ ಕಡಿಮೆ ಮಾಡಿದ್ದರು.

2025-26ರ ಬಜೆಟ್: ನಿರ್ಮಲಾ ಸೀತಾರಾಮನ್ ಅವರಿಗೆ ಇದು 8ನೇ ಬಜೆಟ್. ಈ ಸಮಯದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಬಿಹಾರದ ಖ್ಯಾತ ಮಿಥಿಲಾ ಕಲಾವಿದೆ ದುಲಾರಿ ದೇವಿ ಅವರಿಂದ ಕೊಡುಗೆಯಾಗಿ ಸಿಕ್ಕಿದ್ದ ಸೀರೆಯನ್ನುಟ್ಟಿದ್ದರು. ಮಿಥಿಲಾ ಆರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಕ್ರೆಡಿಟ್ ಔಟ್‌ರೀಚ್ ಕಾರ್ಯಕ್ರಮಕ್ಕಾಗಿ ಮಧುಬನಿಗೆ ಭೇಟಿ ನೀಡಿದಾಗ ಸಿಕ್ಕಿದ್ದ ಸೀರೆಯಿದು.

Published On – 10:07 am, Sun, 1 February 26

Source link

ಟಿ20 ವಿಶ್ವಕಪ್​ಗೂ ಮುನ್ನವೇ ಟೀಮ್ ಇಂಡಿಯಾ ಆಟಗಾರನಿಗೆ ಸಿಕ್ತು ಗ್ರೀನ್ ಸಿಗ್ನಲ್ – Kannada News | Tilak Varma will be available for the T20 World Cup 2026 warmup games

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟಿ20 ಸರಣಿ ಮುಗಿದಿದೆ. 5 ಪಂದ್ಯಗಳ ಈ ಸರಣಿಯನ್ನು ಟೀಮ್ ಇಂಡಿಯಾ 4-1 ಅಂತರದಿಂದ ಗೆದ್ದುಕೊಂಡಿದೆ. ಈ ಭರ್ಜರಿ ಗೆಲುವಿನ ಹುಮ್ಮಸ್ಸಿನೊಂದಿಗೆ ಭಾರತ ತಂಡವು ಟಿ20 ವಿಶ್ವಕಪ್​ಗಾಗಿ ಸಜ್ಜಾಗಲಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾಗೆ ಯುಎ ಎಡಗೈ ದಾಂಡಿಗ ಎಂಟ್ರಿ ಕೊಡಲಿದ್ದಾನೆ.

ಹೌದು, ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ತಿಲಕ್ ವರ್ಮಾ ಟಿ20 ವಿಶ್ವಕಪ್​ಗೂ ಮುನ್ನವೇ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಬೆಂಗಳೂರಿನ ಎನ್​ಸಿಎ ನಲ್ಲಿ ನಡೆದ ಫಿಟ್​ನೆಸ್ ಟೆಸ್ಟ್​ನಲ್ಲಿ ತಿಲಕ್ ವರ್ಮಾ ಪಾಸ್ ಆಗಿದ್ದು, ಹೀಗಾಗಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲು ಹಸಿರು ನಿಶಾನೆ ನೀಡಲಾಗಿದೆ.

ಇದಕ್ಕೂ ಮುನ್ನ ವಿಜಯ ಹಝಾರೆ ಟೂರ್ನಿಯ ಪಂದ್ಯದ ವೇಳೆ ವೃಷಣ ತಿರುಚುವಿಕೆಯಿಂದಾಗಿ ತೀವ್ರ ಹೊಟ್ಟೆ ನೋವಿಗೆ ಒಳಗಾಗಿದ್ದ ತಿಲಕ್ ವರ್ಮಾ ಕಳೆದ ವಾರ ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಅವರು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್​ನೆಸ್ ಟೆಸ್ಟ್​ ಪಾಸಾಗಿದ್ದಾರೆ.

ಹೀಗಾಗಿ ಟಿ20 ವಿಶ್ವಕಪ್​ಗೂ ಮುನ್ನ ತಿಲಕ್ ವರ್ಮಾ ಅಭ್ಯಾಸ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಫೆಬ್ರವರಿ 2 ರಂದು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಯುಎಸ್​ಎ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ಎ ಪರ ಆಡಲಿದ್ದಾರೆ.

ಇನ್ನು ಈ ಪಂದ್ಯದ ಬಳಿಕ ಫೆಬ್ರವರಿ 4 ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ತಿಲಕ್ ವರ್ಮಾ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಟಿ20 ವಿಶ್ವಕಪ್​ನಲ್ಲಿ ತಿಲಕ್ ವರ್ಮಾ ಕಣಕ್ಕಿಳಿಯುವುದು ಸಹ ಖಚಿತವಾಗಿದೆ.

ಟಿ20 ವಿಶ್ವಕಪ್​ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್.

Published On – 11:53 am, Sun, 1 February 26

Source link

Union Budget 2026: ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಮಿಷನ್​ಗೆ ಪುಷ್ಟಿ; ರೇರ್ ಅರ್ಥ್ ಕಾರಿಡಾರ್ ನಿರ್ಮಾಣ – Kannada News | Union Budget 2026, announcements on electronics manufacturing, semiconductor mission, rare earth corridor

ನವದೆಹಲಿ, ಫೆ. 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 9ನೇ ಬಜೆಟ್​ನಲ್ಲಿ ಆದ್ಯತಾ ಕ್ಷೇತ್ರಗಳ ಬೆಳವಣಿಗೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಭಾರತದ ಭವಿಷ್ಯದ ಸೆಕ್ಟರ್ ಎನಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಗಮನ ಕೊಟ್ಟಿದ್ದಾರೆ. ಎಲೆಕ್ಟ್ರಾನಿಕ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್​ನಲ್ಲಿ ಅನುದಾನದ ಪ್ರಮಾಣವನ್ನು 40,000 ಕೋಟಿ ರೂಗೆ ಏರಿಸಿವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಸರ್ಕಾರವು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 ಅನ್ನು ಆರಂಭಿಸಲಿದೆ ಎಂದು ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ. ಈ ಎರಡನೇ ಆವೃತ್ತಿಯ ಸೆಮಿಕಂಡಕ್ಟರ್ ಮಿಷನ್​ನಲ್ಲಿ ಉಪಕರಣಗಳು ಮತ್ತು ವಸ್ತುಗಳ ತಯಾರಿಕೆ, ಫುಲ್ ಸ್ಟ್ಯಾಕ್ ಇಂಡಿಯನ್ ಐಪಿ ಅಭಿವೃದ್ಧಿಗೆ ಒತ್ತು ಕೊಡಲಾಗುತ್ತದೆ. ಈ ಸೆಕ್ಟರ್​ನ ಸಪ್ಲೈ ಚೈನ್ ಅನ್ನು ಬಲಪಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಮೊದಲು ಸರ್ಕಾರ ಆರಂಭಿಸಿದ ಸೆಮಿಕಂಡಕ್ಟರ್ ಮಿಷನ್ ಹೇಗೆ ದೇಶದಲ್ಲಿ ಸೆಮಿಕಂಡಕ್ಟರ್ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಾಧ್ಯವಾಯಿತು, ಮುಂಬರುವ ಎರಡನೇ ಆವೃತ್ತಿಯ ಮಿಷನ್ ಹೇಗೆ ಭಾರತಕ್ಕೆ ಅನುಕೂಲವಾಗುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.

ನಿರ್ಮಲಾ ಸೀತಾರಾಮನ್​ ಬಜೆಟ್​ ಭಾಷಣ ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ

ರೇರ್ ಅರ್ತ್ ಕಾರಿಡಾರ್​ಗಳು

ಸೆಮಿಕಂಡಕ್ಟರ್ ಮಿಷನ್ ಹಾಗೂ ಇತರ ಉದ್ಯಮಗಳಿಗೆ ಬಹಳ ಅಗತ್ಯವಾಗಿರುವ ವಿರಳ ಭೂಖನಿಜಗಳಿಗಾಗಿ ಸರ್ಕಾರ ಹೊಸ ಪ್ಲಾನ್ ಮಾಡಿದೆ. ಈ ವಸ್ತುಗಳಿಗಾಗಿ ಭಾರತ ಬಹುತೇಕ ಆಮದು ಮೇಲೆ ಅವಲಂಬಿತವಾಗಿದೆ. ಇದನ್ನು ತಪ್ಪಿಸಲು ದೇಶೀಯವಾಗಿ ಇವುಗಳ ಉತ್ಪಾದನೆಗೆ ಸರ್ಕಾರ ಯೋಜಿಸಿದೆ. ಬಜೆಟ್​ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದ್ದು, ರೇರ್ ಅರ್ಥ್ ಕಾರಿಡಾರ್ ನಿರ್ಮಿಸುತ್ತಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಒಡಿಶಾ, ಕೇರಳ ಮತ್ತು ಆಂಧ್​ರಪ್ರದೇಶದಂತಹ ಖನಿಜ ಸಮೃದ್ಧ ರಾಜ್ಯಗಳನ್ನೊಳಗೊಂಡ ರೇರ್ ಅರ್ಥ್ ಕಾರಿಡಾರ್ ನಿರ್ಮಿಸಲಾಗುತ್ತದೆ. ಇಲ್ಲಿ ಸಂಶೋಧನೆ ಮತ್ತು ಮೈನಿಂಗ್​ಗೆ ಉತ್ತೇಜನ ಕೊಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಬಜೆಟ್ ಮಾಹಿತಿ ಕ್ಷಣಕ್ಷಣದ ಅಪ್​ಡೇಟ್, ಲೈವ್ ಬ್ಲಾಗ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Union Budget 2026 LIVE: ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ – Kannada News | Union Budget 2026 Live Updates: Finance Minister Nirmala Sitharaman Presents Union Budget

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ ಒಂಬತ್ತನೇ ಬಾರಿಗೆ ಬಜೆಟ್‌ ಮಂಡಿಸುತ್ತಿದ್ದು, ಹೊಸ ದಾಖಲೆ ಬರೆದಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಸತ್‌ನಲ್ಲಿ ಪ್ರಾರಂಭವಾದ ಬಜೆಟ್​​ನ ಕ್ಷಣ ಕ್ಷಣದ ಮಾಹಿತಿಗಾಗಿ ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ.

 

ಮತ್ತಷ್ಟು ಓದಿ: ಬಜೆಟ್ ಭಾಷಣ ಸಮಯ, ಲೈವ್ ಸ್ಟ್ರೀಮಿಂಗ್, ಪಿಡಿಎಫ್ ಕಾಪಿ ಡೌನ್​ಲೋಡ್ ಇತ್ಯಾದಿ ಮಾಹಿತಿ

Source link

Budget 2026: ಚೆನ್ನೈ ಬೆಂಗಳೂರು ಸೇರಿ 7 ಹೈಸ್ಪೀಡ್ ರೈಲ್ವೆ ಕಾರಿಡಾರ್ ಘೋಷಿಸಿದ ನಿರ್ಮಲಾ ಸೀತಾರಾಮನ್ – Kannada News | Budget 2026: Nirmala Sitharaman Announces 7 High Speed Rail Corridors Including Chennai–Bengaluru

ನವದೆಹಲಿ, ಫೆಬ್ರವರಿ 1: ದೇಶದ ಸಾರಿಗೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ನಲ್ಲಿ (Union Budget 2026) ಘೋಷಣೆ ಮಾಡಿದ್ದಾರೆ. ಚೆನ್ನೈ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುವ ಏಳು ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗಳನ್ನು (High-Speed Rail Corridors) ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿರುವುದಾಗಿ ಘೋಷಣೆ ಮಾಡಿದ್ದಾರೆ.

ಈ ಯೋಜನೆಯಡಿ ಮುಂಬೈ–ಪುಣೆ, ಪುಣೆ–ಹೈದರಾಬಾದ್, ಹೈದರಾಬಾದ್–ಬೆಂಗಳೂರು, ಹೈದರಾಬಾದ್–ಚೆನ್ನೈ, ಚೆನ್ನೈ–ಬೆಂಗಳೂರು, ದೆಹಲಿ–ವಾರಾಣಸಿ ಹಾಗೂ ವಾರಾಣಸಿ–ಸಿಲಿಗುರಿ ನಡುವೆ ಹೈಸ್ಪೀಡ್ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗಳ ಮೂಲಕ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವುದು, ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವುದು ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಯೋಜನೆಯಿಂದ ಮಹಾನಗರಗಳು ಮತ್ತು ಪ್ರಮುಖ ಆರ್ಥಿಕ ಕೇಂದ್ರಗಳ ನಡುವೆ ಸಂಪರ್ಕ ಮತ್ತಷ್ಟು ಬಲವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಬಜೆಟ್ ಘೋಷಣೆಯ ಬೆನ್ನಲ್ಲೇ ಹೈಸ್ಪೀಡ್ ರೈಲು ಯೋಜನೆಗಳು ದೇಶದ ಸಾರಿಗೆ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ಚಾಲನೆ ನೀಡಲಿವೆ ಎಂಬ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ: ಬಜೆಟ್ ಮುನ್ನವೇ ಸಿಹಿ ಸುದ್ದಿ, ಚಿನ್ನ ಮತ್ತು ಬೆಳ್ಳಿ ಬೆಲೆ ಭಾರಿ ಇಳಿಕೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೇಂದ್ರ ಬಜೆಟ್ 2026: ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ – Kannada News | Zuhaib Khan’s Budget 2026 Art: Nirmala Sitharaman Charcoal Sketch by Amroha Artist

ಅಮ್ರೋಹಾದ ಖ್ಯಾತ ಕಲಾವಿದ ಝುಹೇಬ್ ಖಾನ್ (Zuhaib Khan) ಅವರು ಇಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ 2026 ರ ಸಂಭ್ರಮವನ್ನು ತಮ್ಮ ವಿಶಿಷ್ಟ ಕಲೆಯ ಮೂಲಕ ಸ್ವಾಗತಿಸಿದ್ದಾರೆ. ಝುಹೇಬ್ ಖಾನ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅತ್ಯಂತ ಸುಂದರವಾದ ಮತ್ತು ನೈಜವಾದ ‘ಚಾರ್ಕೋಲ್ ಸ್ಕೆಚ್’ (ಇದ್ದಿಲು ಚಿತ್ರಕಲೆ) ಅನ್ನು ಬಿಡಿಸಿದ್ದಾರೆ. ಝುಹೇಬ್ ಖಾನ್ ಅವರು ಅಮ್ರೋಹಾದಲ್ಲಿ ಇಂತಹ ವಿಶೇಷ ಸಂದರ್ಭಗಳಲ್ಲಿ ತಮ್ಮ ಕಲಾಕೃತಿಗಳ ಮೂಲಕ ಸಾರ್ವಜನಿಕರ ಗಮನ ಸೆಳೆಯುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ಅವರು ಪ್ರಧಾನಿ ಮೋದಿ ಮತ್ತು ಇತರ ಗಣ್ಯರ ಚಿತ್ರಗಳನ್ನು ಬಿಡಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಅಮ್ರೋಹಾದಂತಹ ಸಣ್ಣ ನಗರಗಳ ಪ್ರತಿಭೆಗಳು ರಾಷ್ಟ್ರೀಯ ಮಟ್ಟದ ಇಂತಹ ವಿದ್ಯಮಾನಗಳಿಗೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸುವುದು ಭಾರತದ ವೈವಿಧ್ಯಮಯ ಸಂಸ್ಕೃತಿಗೆ ಕನ್ನಡಿ ಹಿಡಿದಂತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಟಿಟಿಗೆ ಬಂತು ಆಶಿಕಾ, ದುಷ್ಯಂತ್, ಸಿಂಪಲ್ ಸುನಿ ಸಿನಿಮಾ ‘ಗತವೈಭವ’ – Kannada News | Ashika Ranganath starrer Gatha Vaibhava movie now streaming on this OTT

ತೆಳು ಹಾಸ್ಯದ ಜೊತೆಯಲ್ಲಿ ಗಾಢವಾದ ಕಥೆಯನ್ನು ಹೇಳುವಲ್ಲಿ ನಿರ್ದೇಶಕ ಸಿಂಪಲ್ ಸುನಿ (Simple Suni) ಅವರು ಸಖತ್ ಫೇಮಸ್. ಕಳೆದ ವರ್ಷ ಅವರು ಆ್ಯಕ್ಷನ್-ಕಟ್ ಹೇಳಿದ್ದ ‘ಗತವೈಭವ’ (Gatha Vaibhava) ಸಿನಿಮಾ ರಿಲೀಸ್ ಆಗಿತ್ತು. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಆ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ಉತ್ತಮ ವಿಮರ್ಶೆ ಕೂಡ ಸಿಕ್ಕಿತ್ತು. ‘ಗತವೈಭವ’ ಸಿನಿಮಾ ಈಗ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ (OTT) ಈ ಚಿತ್ರ ನೋಡಬಹುದು. ‘ಅಮೇಜಾನ್ ಪ್ರೈಮ್ ವಿಡಿಯೋ’ ಮೂಲಕ ಮನೆಯಲ್ಲೇ ಕುಳಿತು ‘ಗತವೈಭವ’ ವೀಕ್ಷಿಸಬಹುದು.

ಯುವ ನಟ ದುಷ್ಯಂತ್ ಅವರು ‘ಗತವೈಭವ’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್‌ ಕಾಣಿಸಿಕೊಂಡಿದ್ದಾರೆ. ನಾಲ್ಕು ಬೇರೆ ಬೇರೆ ಕಾಲಘಟ್ಟದಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ಆ ನಾಲ್ಕು ಕಾಲಘಟ್ಟಗಳಿಗೆ ತಕ್ಕಂತೆ ನಾಲ್ಕು ಬೇರೆ ಬೇರೆ ಗೆಟಪ್​​ಗಳಲ್ಲಿ ಆಶಿಕಾ ರಂಗನಾಥ್ ಮತ್ತು ದುಷ್ಯಂತ್ ಅವರು ಅಭಿನಯಿಸಿದ್ದಾರೆ.

2025ರ ನವೆಂಬರ್ 14ರಂದು ಚಿತ್ರಮಂದಿರಗಳಲ್ಲಿ ‘ಗತವೈಭವ’ ಸಿನಿಮಾ ತೆರೆಕಂಡಾಗ ಪ್ರೇಕ್ಷಕರು 4 ಡಿಫರೆಂಟ್ ಕಥೆಗಳನ್ನು ನೋಡಿ ಎಂಜಾಯ್ ಮಾಡಿದ್ದರು. ಈಗ ಒಟಿಟಿಯಲ್ಲಿ ಈ ಸಿನಿಮಾವನ್ನು ನೋಡಿದ ಪ್ರೇಕ್ಷಕರು ಕೂಡ ಪಾಸಿಟಿವ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಿನಿಮಾದಲ್ಲಿನ ಕಾಡುವ ಲವ್ ಸ್ಟೋರಿ ಎಲ್ಲರಿಗೂ ಇಷ್ಟ ಆಗುತ್ತಿದೆ. ಮೇಕಿಂಗ್ ಗಮನ ಸೆಳೆಯುತ್ತಿದೆ.

ನಟ ದುಷ್ಯಂತ್ ಅವರಿಗೆ ಇದು ಮೊದಲ ಸಿನಿಮಾ. ಚೊಚ್ಚಲ ಚಿತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಮಾಡಿಕೊಂಡು ನಟಿಸಿದ್ದರು. ಹಾಗಾಗಿ ಒಬ್ಬ ಅನುಭವಿ ಹೀರೋ ರೀತಿ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಫೈಟ್, ಡ್ಯಾನ್ಸ್, ಅಭಿನಯ.. ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. 4 ಡಿಫರೆಂಟ್ ಪಾತ್ರಗಳನ್ನು ಅವರು ಉತ್ತಮವಾಗಿ ನಿಭಾಯಿಸಿದ್ದಾರೆ.

ಇದನ್ನೂ ಓದಿ: ‘ಗತವೈಭವ’ಕ್ಕಾಗಿ ಒಂದು ಕೋಟಿ ಮೌಲ್ಯದ ಆಭರಣ ಧರಿಸಿದ್ದ ಆಶಿಕಾ: ವಿಡಿಯೋ

‘ಗತವೈಭವ’ ಚಿತ್ರಕ್ಕೆ ಸಿಂಪಲ್ ಸುನಿ ಅವರು ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ‘ಸುನಿ ಸಿನಿಮಾಸ್’ ಮೂಲಕ ದೀಪಕ್ ಹಾಗೂ ಸುನಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ, ಜೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶಕ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್ – Kannada News | Shahbaz Ahmed Takes 11 Wickets for Bengal

ರಣಜಿ ಟೂರ್ನಿಯ ಎಲೈಟ್ ಗ್ರೂಪ್-ಸಿ ಪಂದ್ಯದಲ್ಲಿ ಹರ್ಯಾಣ ವಿರುದ್ಧ ಶಹಬಾಝ್ ಅಹ್ಮದ್ ಬರೋಬ್ಬರಿ 11 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಾಲ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 193 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಹರ್ಯಾಣ ತಂಡವನ್ನು ಕೇವಲ 100 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಶಹಬಾಝ್ ಅಹ್ಮದ್ ಪ್ರಮುಖ ಪಾತ್ರವಹಿಸಿದರು.

ಪ್ರಥಮ ಇನಿಂಗ್ಸ್​ನಲ್ಲಿ 11.1 ಓವರ್​ಗಳನ್ನು ಎಸೆದ ಶಹಬಾಝ್ ಅಹ್ಮದ್ ಕೇವಲ 42 ರನ್ ನೀಡಿ 5 ವಿಕೆಟ್ ಕಬಳಿಸಿದರು. ಇದಾದ ಬಳಿಕ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಬೆಂಗಾಲ್ ತಂಡವು 200 ರನ್​ಗಳಿಸಲಷ್ಟೇ ಶಕ್ತರಾದರು.

ಅದರಂತೆ 294 ರನ್​ಗಳ ಗುರಿ ಪಡೆದ ಹರ್ಯಾಣ ತಂಡವನ್ನು ಮತ್ತೊಮ್ಮೆ ಕಟ್ಟಿ ಹಾಕುವಲ್ಲಿ ಶಹಬಾಝ್ ಅಹ್ಮದ್ ಯಶಸ್ವಿಯಾದರು. ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 8 ಓವರ್​ಗಳನ್ನು ಎಸೆದ ಶಹಬಾಝ್ 38 ರನ್ ನೀಡಿ 6 ವಿಕೆಟ್ ಕಬಳಿಸಿದರು. ಪರಿಣಾಮ ಹರ್ಯಾಣ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 105 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಬೆಂಗಾಲ್ ತಂಡವು 188 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಪಂದ್ಯದ ಎರಡು ಇನಿಂಗ್ಸ್​ಗಳ ಮೂಲಕ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

 

Source link