Category Archives: Blog

Your blog category

ಬಂಧನಕ್ಕೆ ಬಂದ ಪೊಲೀಸರ ಮೇಲೆಯೇ ‘ಕೈ’ ಮುಖಂಡನ ಪುತ್ರನಿಂದ ನಡೀತಾ ಹಲ್ಲೆ? – Kannada News | Minister’s Aide Son Attacks Cops Amidst Hospital Brawl Case In Davanagere

ದಾವಣಗೆರೆ, ಜನವರಿ 31: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಯುವಕರ ಮೇಲೆ ದಾಳಿ ಪ್ರಕರಣ ಸಂಬಂಧ ಬಂಧಿಸಲು ಬಂದ ಪೊಲೀಸರ ಮೇಲೆಯೇ ಕಾಂಗ್ರೆಸ್​​ ಮುಖಂಡ, ಸಚಿವರ ಆಪ್ತನ ಮಗ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಪೈಲ್ವಾನ್ ಪುತ್ರ ಹಸನ್ ಆರೋಪಿಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಆಪ್ತರೂ ಆಗಿರುವ ಅಯೂಬ್ ಪೈಲ್ವಾನ್ ಮನೆ ಮುಂದೆ ಭಾರಿ ಹೈಡ್ರಾಮಾ ನಡೆದಿದೆ. ಅಂತಿಮವಾಗಿ ಹಸನ್​​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ದಾವಣಗೆರೆ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರು ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನ ಎರಡು ಗುಂಪು ಬಡಿದಾಡಿಕೊಂಡಿತ್ತು.ಗಲಾಟೆಯಲ್ಲಿ 6 ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದರು. ಯುವಕರ ಮೇಲೆ ದಾಳಿ ಮಾಡಿರೋದು ಅಯೂಬ್ ಪೈಲ್ವಾನ್ ಪುತ್ರರು ಎಂಬ ಕಾರಣಕ್ಕೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಬಡಾವಣೆ ಠಾಣೆ ಇನ್ಸ್​​ಪೆಕ್ಟರ್​​ ಗಾಯತ್ರಿ, ಕಾನ್ಸ್​ಟೇಬಲ್​​ಗಳಾದ ಕೆಂಚಪ್ಪ ಮತ್ತು ಹರೀಶ್ ಸೇರಿ ತಂಡ ತೆರಳಿತ್ತು. ಈ ವೇಳೆ ಮನೆಯಲ್ಲಿದ್ದ ಆರೋಪಿ ಹಸನ್, ಪೊಲೀಸರ ಮೇಲೆಯೇ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡಿರೋ ಪೊಲೀಸ್​​ ಸಿಬ್ಬಂದಿಗಳಾದ ಕೆಂಚಪ್ಪ ಮತ್ತು ಹರೀಶ್​​ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಇದನ್ನೂ ಓದಿ: ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ

ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಗಲಾಟೆ ವಿಚಾರವಾಗಿ ಹಳೇ ದಾವಣಗೆರೆಯಲ್ಲಿ ಬಿಗುವಿನ ವಾತಾರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್​​ ಕೈಗೊಳ್ಳಲಾಗಿದೆ. ಇನ್ನು ನಗರದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳಲ್ಲಿ ಮೇಲಿಂದ ಮೇಲೆ ಸಚಿವರ ಆಪ್ತರ ಹೆಸರು ಕೇಳಿಬರುತ್ತಿದೆ. ಇತ್ತೀಚಿಗೆ ಡ್ರಗ್ಸ್ ಕೇಸ್​​ನಲ್ಲಿ ಶಾಮನೂರು ವೇದಮೂರ್ತಿ, ಅನ್ವರ್ ಪಾಷಾ ಜೈಲು ಸೇರಿದ್ದಾರೆ. ಅಕ್ಕಿ ಸಾಗಾಣಿಕೆಯಲ್ಲಿ ಜಮೀರ್ ಎಂಬಾತ ಸಿಕ್ಕಿ ಬಿದ್ದಿದ್ದ. ಈ ನಡುವೆ ಅಯೂಬ್ ಪೈಲ್ವಾನ್ ಪುತ್ರ ಹಾಡುಹಗಲೇ ಆಸ್ಪತ್ರೆ ಆವರಣದಲ್ಲಿ ಹೊಡೆದಾಟ ನಡೆಸಿದ್ದಾನೆ. ಜೊತೆಗೆ ಪೊಲೀಸರ ಮೇಲೆ ಹಲ್ಲೆಯ ಆರೋಪವೂ ಕೇಳಿಬಂದಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:23 pm, Sat, 31 January 26

Source link

ಬಿಡುಗಡೆ ಆಗಿ ತಿಂಗಳಿಗೂ ಮುಂಚೆಯೇ ಒಟಿಟಿಗೆ ಬಂದ ಪ್ರಭಾಸ್ ಸಿನಿಮಾ – Kannada News | The Raja Saab movie releasing on OTT soon here is the date

ಪ್ರಭಾಸ್ (Prabhas), ಭಾರತದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್. ‘ಬಾಹುಬಲಿ’ ಸಿನಿಮಾ ಸರಣಿಯ ಬಳಿಕ ಪ್ರಭಾಸ್ ರೇಂಜ್ ಬಹಳ ಎತ್ತರಕ್ಕೇರಿದೆ. ಯಾವ ಮಟ್ಟಿಗೆಂದರೆ ಅವರ ಕೆಟ್ಟ ಸಿನಿಮಾಗಳು ಸಹ ನೂರಾರು ಕೋಟಿ ಗಳಿಕೆ ಮಾಡುತ್ತವೆ. ಹಾಗೆಂದ ಮಾತ್ರಕ್ಕೆ ಕೆಟ್ಟ ಸಿನಿಮಾಗಳು ಸೂಪರ್ ಹಿಟ್ ಆಗಿಯೇ ತೀರುತ್ತವೆ ಎಂದೇನೂ ಇಲ್ಲ. ಎಷ್ಟೇ ದೊಡ್ಡ ಸೂಪರ್ ಸ್ಟಾರ್ ಆಗಿದ್ದರು ಸಹ ಕೆಟ್ಟ ಸಿನಿಮಾ ನೀಡಿದರೆ ಸೋಲುವುದು ಖಾತ್ರಿ ಎಂಬುದಕ್ಕೆ ಪ್ರಭಾಸ್ ಅವರ ಇತ್ತೀಚೆಗಿನ ಸಿನಿಮಾ ಉದಾಹರಣೆ ಆಗಿದೆ. ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿತ್ತು, ಬಾಕ್ಸ್ ಆಫೀಸ್​​ನಲ್ಲಿ ಹೀನಾಯ ಸೋಲು ಕಂಡಿದೆ.

‘ದಿ ರಾಜಾ ಸಾಬ್’ ಸಿನಿಮಾ ಜನವರಿ 09 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಹಾರರ್, ಕಾಮಿಡಿ, ರೊಮ್ಯಾನ್ಸ್ ಒಳಗೊಂಡಿದ್ದ ಈ ಸಿನಿಮಾಕ್ಕೆ ಭಾರಿ ಪ್ರಚಾರವನ್ನು ಪ್ರಭಾಸ್ ಮಾಡಿದ್ದರು. ಆದರೆ ಸಿನಿಮಾ ಬಿಡುಗಡೆ ಆದ ದಿನ ಮತ್ತು ಅದರ ಮರು ದಿನ ಓಡಿದ್ದು ಬಿಟ್ಟರೆ ಮೂರನೇ ದಿನಕ್ಕೆ ಖಾಲಿ ಚಿತ್ರಮಂದಿರಗಳು ಖಾಲಿ ಆಗಲಾರಂಭಿಸಿದವು. ಇದೀಗ ಈ ಸಿನಿಮಾ ಬಿಡುಗಡೆ ಆದ ಒಂದು ತಿಂಗಳಿಗೂ ಮುಂಚೆಯೇ ಒಟಿಟಿಗೆ ಬರುತ್ತಿದೆ. ಪ್ರಭಾಸ್ ಅವರ ಈ ಹಿಂದಿನ ಇನ್ಯಾವ ಸಿನಿಮಾ ಸಹ ಬಿಡುಗಡೆ ಆಗಿ ಇಷ್ಟು ಬೇಗ ಒಟಿಟಿಗೆ ಬಂದಿದ್ದಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ:ಪ್ರಭಾಸ್ ಸಿನಿಮಾನಲ್ಲಿ ನಟಿಸಲಿರುವ ಸಾಯಿ ಪಲ್ಲವಿ ಆದರೆ ಜೋಡಿ ಆಗಿ ಅಲ್ಲ

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಫೆಬ್ರವರಿ 06 ರಂದು ಒಟಿಟಿಗೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಬೇರೆ ಬೇರೆ ಭಾಷೆಗಳಲ್ಲಿ ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ. ಸಿನಿಮಾ ಜನವರಿ 09 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು, ಇದೀಗ ಕೇವಲ 28 ದಿನಗಳಲ್ಲೇ ಒಟಿಟಿಗೆ ಬರುತ್ತಿದೆ. ಜಿಯೋ ಹಾಟ್​​ಸ್ಟಾರ್ ಈಗಾಗಲೇ ‘ದಿ ರಾಜಾ ಸಾಬ್’ ಒಟಿಟಿ ಬಿಡುಗಡೆಯ ಪ್ರಚಾರ ಮಾಡುತ್ತಿದೆ.

‘ದಿ ರಾಜಾ ಸಾಬ್’ ಸಿನಿಮಾವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸುಮಾರು 400-500 ಕೋಟಿ ಬಜೆಟ್ ಹೂಡಲಾಗಿದೆ. ಆದರೆ ಸಿನಿಮಾ ಬಜೆಟ್​ನ ಅರ್ದದಷ್ಟು ಸಹ ಗಳಿಕೆ ಮಾಡಿಲ್ಲ. ಈ ವರೆಗೆ ಸುಮಾರು 250 ಕೋಟಿ ಹಣವನ್ನಷ್ಟೆ ಸಿನಿಮಾ ಗಳಿಸಿದೆ. ಸಿನಿಮಾನಲ್ಲಿ ಪ್ರಭಾಸ್ ಜೊತೆಗೆ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಂಜಯ್ ದತ್, ಬೊಮನ್ ಇರಾನಿ ಇನ್ನೂ ಕೆಲವು ಪ್ರತಿಭಾವಂತ ನಟರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ಈ ಸಿನಿಮಾನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲದರ ಹೊರತಾಗಿಯೂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೀನಾಯ ಸೋಲು ಕಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಸಂಜು ಬದಲು ಕಿಶನ್ ವಿಕೆಟ್‌ಕೀಪರ್; ಸ್ಯಾಮ್ಸನ್ ವೃತ್ತಿಜೀವನ ಅಂತ್ಯ

Source link

ಶಾಲಾ ಮಕ್ಕಳ ಮೇಲೆ ಲಕ್ಕುಂಡಿ ಉತ್ಖನನದ ಎಫೆಕ್ಟ್​​: ಧೂಳಿನ ಅಬ್ಬರಕ್ಕೆ ಪುಟಾಣಿಗಳು ಹೈರಾಣು – Kannada News | Lakkundi Dig’s Dust Pollution: School Kids Suffer Allergies and Illness in Gadag

ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯImage Credit source: Google

ಗದಗ, ಜನವರಿ 31: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗಿದೆ. 14 ದಿನಗಳಲ್ಲಿ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಆ ಮೂಲಕ ಗ್ರಾಮದ ಪುರಾತನ ಮಹತ್ವ ಮತ್ತಷ್ಟು ಬೆಳಕಿಗೆ ಬಂದಿದೆ. ಆದ್ರೆ ಮತ್ತೊಂದೆಡೆ ಇದೇ ಉತ್ಖನನ ಕಾರ್ಯ ಶಾಲಾ ಮಕ್ಕಳ ಮೇಲೆ ಗಂಭೀರ ಪರಿಣಾಮ ಉಂಟುಮಾಡ್ತಿದೆ. ಧೂಳಿನ ಹಿನ್ನೆಲೆ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿರುವ ವಿವೇಕಾನಂದ ಶಾಲೆಯ ಪುಟಾಣಿ ಮಕ್ಕಳಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ.

ಉತ್ಖನನದ ವೇಳೆ ಉಂಟಾಗ್ತಿರೋ ಧೂಳಿನಿಂದ ಎಲ್‌ಕೆಜಿ, ಯುಕೆಜಿ ಮಕ್ಕಳಲ್ಲಿ ಡಸ್ಟ್ ಅಲರ್ಜಿ, ಜ್ವರ, ಕೆಮ್ಮು ಕಾಣಿಸಿಕೊಳ್ಳುತ್ತಿದ್ದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದ ಕಾರಣ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇನ್ನು ಶಾಲೆಯ ಶಿಕ್ಷಕರು ಕೂಡ ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿರುವ ಆರೋಪವೂ ಕೇಳಿಬಂದಿದ್ದು, ಈ ಬಗ್ಗೆ ಮುಖ್ಯ ಶಿಕ್ಷಕರು ಶಿಕ್ಷಕಿಯರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ. ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೇ ಉತ್ಖನನ ಸ್ಥಳದಲ್ಲಿ ನೀರು ಸಿಂಪಡಣೆ ಕಾರ್ಯ ಆರಂಭಿಸಲಾಗಿದೆ.

ಇದನ್ನೂ ಓದಿ: ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪುರಾತನ ವಸ್ತು ಪತ್ತೆ!

ಇನ್ನು ಉತ್ಖನನ ಸ್ಥಳಕ್ಕೆ ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕ ಶೆಜೇಶ್ವರ ಅವರು ಭೇಟಿ ನೀಡಿದ್ದು, ಪತ್ತೆಯಾದ ಶಿಲ್ಪಗಳು, ಶಿಲಾ ಅವಶೇಷಗಳು ಹಾಗೂ ಇತರೆ ಪುರಾತನ ವಸ್ತುಗಳನ್ನು ಮಾಹಿತಿ ಕಲೆ ಹಾಕಿದ್ದಾರೆ. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕೂಡ ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ದೇವಸ್ಥಾನಗಳನ್ನು ವೀಕ್ಷಿಸಿದ ಅವರು, ಕುಂಬಾರೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಮನೆಗಳ ಶೀಘ್ರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪರಿಹಾರ ಹಣ ನೀಡಲಾಗಿದ್ದು, ಸ್ಥಳಾಂತರ ಪ್ರಕ್ರಿಯೆ ಕೇಂದ್ರ ಪುರಾತತ್ವ ಇಲಾಖೆ ಮೂಲಕ ನಡೆಯಲಿದೆ ಎಂದು ತಿಳಿಸಿದ್ದಾರೆ. ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿಗೆ 2025–26ನೇ ಸಾಲಿನಲ್ಲಿ ಆರು ದೇವಸ್ಥಾನಗಳಿಗೆ ಒಟ್ಟು 10 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂಬ ಬಗ್ಗೆಯೂ ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs NZ: ಅಬ್ಬರ ಸಿಡಿಲಬ್ಬರ.. ಪಾಕೆಟ್ ಡೈನಮೋ ಸ್ಫೋಟಕ್ಕೆ ನುಚ್ಚುನೂರಾದ ಕಿವೀಸ್ – Kannada News | Ishan Kishan Smashes Fastest T20 Century vs NZ, Hits 29 Runs in Ish Sodhi Over

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಇಶಾನ್ ಕಿಶನ್ (Ishan Kishan) ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿದ ಕಿಶನ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಗಾಯದಿಂದಾಗಿ ಹಿಂದಿನ ಪಂದ್ಯದಿಂದ ಹೊರಗುಳಿದಿದ್ದ ಕಿಶನ್ ಸರಣಿಯ ಅಂತಿಮ ಪಂದ್ಯದಲ್ಲಿ ಕಿವೀಸ್ ಬೌಲರ್‌ಗಳನ್ನು ಹೈರಾಣಾಗಿಸಿದ್ದಾರೆ. ಸಂಜು ವಿಕೆಟ್ ಪತನದ ನಂತರ ಬಹುಬೇಗನೇ ಬ್ಯಾಟಿಂಗ್​ಗೆ ಬಂದ ಕಿಶನ್ ತಮ್ಮ ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದ ಮೊದಲ ಶತಕ ಸಿಡಿಸಿ ಮಿಂಚಿದರು.

ಒಂದೇ ಓವರ್​ನಲ್ಲಿ 29 ರನ್

ಈ ಪಂದ್ಯದಲ್ಲಿ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದರಲ್ಲೂ ಇನ್ನಿಂಗ್ಸ್‌ನ 12 ನೇ ಓವರ್‌ನಲ್ಲಿ ನ್ಯೂಜಿಲೆಂಡ್‌ನ ಸ್ಪಿನ್ನರ್ ಇಶ್ ಸೋಧಿಯನ್ನು ಇನ್ನಿಲ್ಲದ ಂತೆ ಕಾಡಿದ ಕಿಶನ್ ಒಂದೇ ಓವರ್​ನಲ್ಲಿ ಬರೋಬ್ಬರಿ 29 ರನ್ ಕಲೆಹಾಕಿ ತಮ್ಮ ಅರ್ಧಶತಕ ಪೂರೈಸಿದರು. ವೈಡ್‌ನೊಂದಿಗೆ ಪ್ರಾರಂಭವಾದ ಓವರ್​ನ ಮುಂದಿನ ಮೂರು ಎಸೆತಗಳಲ್ಲಿ ಕಿಶನ್ ಸತತ ಮೂರು ಬೌಂಡರಿಗಳನ್ನು ಬಾರಿಸಿದರು. ನಂತರ ನಾಲ್ಕನೇ ಎಸೆತದಲ್ಲಿ ಸಿಕ್ಸರ್, ಐದನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಮತ್ತು ಕೊನೆಯ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿ ಓವರ್ ಮುಗಿಸಿದರು. ಹೀಗಾಗಿ, ಈ ಓವರ್​ನ ಆರು ಎಸೆತಗಳಲ್ಲಿ ಕಿಶನ್ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು.

ಸತತ 7 ಬೌಂಡರಿ

ಈ ದುಬಾರಿ ಓವರ್ ಬೌಲ್ ಮಾಡಿದ ಇಶ್ ಸೋಧಿ ಮುಜುಗರದ ದಾಖಲೆಯೊಂದನ್ನು ತಮ್ಮ ಖಾತೆಗೆ ಹಾಕಿಕೊಂಡರು. ಇದು ಅಂತ ಟಿ20 ಯಲ್ಲಿ ನ್ಯೂಜಿಲೆಂಡ್​ನ ಬೌಲರ್​ ಒಬ್ಬ ಬೌಲ್ ಮಾಡಿದ ಎರಡನೇ ಅತ್ಯಂತ ದುಬಾರಿ ಓವರ್ ಎನಿಸಿಕೊಂಡಿತು. ಈ ಸರಣಿಯ ಹಿಂದಿನ ಪಂದ್ಯದಲ್ಲಿಯೂ ಇಶ್ ಸೋಧಿ ಓವರ್‌ನಲ್ಲಿ 29 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಸೋಧಿ ಅವರ ಮುಂದಿನ ಓವರ್​ನ ಮೊದಲ ಎಸೆತದಲ್ಲೂ ಇಶಾನ್ ಸಿಕ್ಸರ್‌ ಬಾರಿಸಿದರು. ಈ ಮೂಲಕ ಸತತ ಏಳು ಎಸೆತಗಳಲ್ಲಿ ಏಳು ಬೌಂಡರಿಗಳನ್ನು (ಬೌಂಡರಿ ಮತ್ತು ಸಿಕ್ಸರ್) ಬಾರಿಸುವ ಮೂಲಕ ಕಿಶನ್ ಗಮನಾರ್ಹ ಸಾಧನೆಯನ್ನು ಪೂರ್ಣಗೊಳಿಸಿದರು.

IND vs NZ: 21 ಎಸೆತಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಇಶಾನ್ ಕಿಶನ್

42 ಎಸೆತಗಳಲ್ಲಿ ಶತಕ

ಅರ್ಧಶತಕ ಬಾರಿಸಿದ ಬಳಿಕ ತಮ್ಮ ಬ್ಯಾಟಿಂಗ್‌ ಗೇರ್ ಬದಲಿಸಿದ ಇಶಾನ್ ಕಿಶನ್ ಕೇವಲ 42 ಎಸೆತಗಳಲ್ಲಿ ಶತಕ ಪೂರೈಸಿದರು. ಇದರರ್ಥ ಅವರು ಕೇವಲ 14 ಎಸೆತಗಳಲ್ಲಿ 50 ರಿಂದ 100 ರನ್ ಗಳಿಸಿದರು. ಇದು ನ್ಯೂಜಿಲೆಂಡ್ ವಿರುದ್ಧದ ಟಿ20ಪಂದ್ಯದಲ್ಲಿ ಅತಿ ವೇಗದ ಶತಕದ ದಾಖಲೆಯಾಗಿದೆ. ಕಿಶನ್ ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 43 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಿತ 103 ರನ್ ಬಾರಿಸಿ ಔಟಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:15 pm, Sat, 31 January 26

Source link

ವಾಣಿಜ್ಯ ಮಂಡಳಿ ಚುನಾವಣೆ: ಗೆದ್ದು ಬೀಗಿದ ಜಯಮಾಲ – Kannada News | Karnataka film chamber of commerce election Jayamala won

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (karnataka film chamber of commerce) ಚುನಾವಣೆ ಇಂದು (ಜನವರಿ 31) ನಡೆದಿದ್ದು, ಭಾಮಾ ಹರೀಶ್ ವಿರುದ್ಧ ಜಯಮಾಲ ಅವರು ವಿಜೇತರಾಗಿದ್ದು, ವಾಣಿಜ್ಯ ಮಂಡಳಿಯ ಮುಂದಿನ ಅಧ್ಯಕ್ಷರಾಗುವುದು ಬಹುತೇಕ ಖಾತ್ರಿ ಆಗಿದೆ. ಇಂದು ಬೆಳಿಗ್ಗೆ ಆರಂಭವಾದ ಮತದಾನದಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗಿ ಆಗಿದ್ದರು. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಅಶ್ವಿನಿ ಪುನೀತ್ ರಾಜ್​​ಕುಮಾರ್ ಸೇರಿದಂತೆ ಹಲವಾರು ನಟ, ನಟಿಯರು, ತಂತ್ರಜ್ಞರುಗಳು ಆಗಮಿಸಿ ವಿವಿಧ ಸ್ಥಾನಗಳಿಗೆ ಚುನಾವಣೆ ಎದುರಿಸಿದ್ದ ಸ್ಪರ್ಧಿಗಳಿಗೆ ತಮಗೆ ಸೂಕ್ತ ಎನಿಸಿದವರಿಗೆ ಮತ ಚಲಾಯಿಸಿದರು.

ಇಂದೇ ಮತ ಎಣಿಕೆಯೂ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆಂದು ಭಾಮಾ ಹರೀಶ್ ಮತ್ತು ಜಯಮಾಲ ಅವರ ನಡುವೆ ತುರುಸಿನ ಪೈಫೊಟಿ ಇತ್ತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 813 ಮತಗಳು ಈ ಬಾರಿ ಚಲಾವಣೆ ಆಗಿದ್ದು, ಅವುಗಳಲ್ಲಿ 512 ಮತಗಳನ್ನು ಜಯಮಾಲ ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ. ಆ ಮೂಲಕ ಮುಂದಿನ ಅವಧಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ ಜಯಮಾಲ ಅವರು ಅಧಿಕಾರ ವಹಿಸಿಕೊಳ್ಳುವುದು ಬಹತೇಕ ಖಾತ್ರಿ ಆಗಿದೆ. ಜಯಮಾಲ ಅವರು ಎರಡನೇ ಬಾರಿ ಫಿಲಂ ಚೇಂಬರ್​​ನ ಅಧ್ಯಕ್ಷೆ ಆಗಲಿದ್ದಾರೆ. 2008ರಲ್ಲಿ ಹಿರಿಯ ನಟಿ ಜಯಮಾಲ ಅವರು ಮಂಡಳಿಯ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಈಗ ಮತ್ತೊಮ್ಮೆ ಅಧ್ಯಕ್ಷೆ ಆಗಲಿದ್ದಾರೆ.

ಇದನ್ನೂ ಓದಿ:ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಚುನಾವಣೆ ಮುಂದೂಡಿಕೆ

ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ, ಕಜಾಂಚಿ, ಕಾರ್ಯದರ್ಶಿ, ಗೌರವ ಕಾರ್ಯದರ್ಶಿ (ವಿತರಕರ ವಲಯ), ಗೌರವ ಕಾರ್ಯದರ್ಶಿ (ಪ್ರದರ್ಶಕರ ವಲಯ) ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದೆ. ಫಿಲಂ ಚೇಂಬರ್ ಪಕ್ಕದಲ್ಲೇ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾನ ನಡೆದಿದೆ. ಮತದಾನಕ್ಕೆ ಮುಂಚೆ ನಡೆದ ಸಭೆಯಲ್ಲಿಯೂ ಗಲಾಟೆಗಳು ನಡೆದಿದ್ದವು. ಮೈಕ್ ಕಿತ್ತು ಪರಸ್ಪರ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದರು. ಭಾರಿ ಕುತೂಹಲವನ್ನು ಮೂಡಿಸಿದ್ದ ಅಧ್ಯಕ್ಷ ಸ್ಥಾನ ಇದೀಗ ಜಯಮಾಲ ಅವರ ಪಾಲಾಗಿದೆ. ಇತರೆ ಸ್ಥಾನಗಳ ಫಲಿತಾಂಶ ಹೊರಬೀಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೈಲುಗಳ ಕಮಾಂಡ್ ಸೆಂಟರ್​​ಗೆ ಚಾಲನೆ: ಅನೈತಿಕ ಚಟುವಟಿಕೆಗಳಿಗೆ ಇನ್ನಾದ್ರೂ ಬೀಳುತ್ತಾ ಬ್ರೇಕ್​​? – Kannada News | Revolutionising Jail Security: Karnataka Launches Centralised Monitoring System for Prisons

ಬೆಂಗಳೂರು, ಜನವರಿ 31: ರಾಜ್ಯದ ಜೈಲುಗಳಲ್ಲಿ ನಡೆಯುತ್ತಿದ್ದ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಗೃಹಸಚಿವ ಜಿ. ಪರಮೇಶ್ವರ್ ಅವರು ನೂತನ ಕಮಾಂಡ್ ಸೆಂಟರ್ ಉದ್ಘಾಟಿಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ವಿವಿಧ ಜೈಲುಗಳಲ್ಲಿ ಡ್ರಗ್ಸ್ ಸಪ್ಲೈ, ಲಿಕ್ಕರ್ ತಯಾರಿಕೆ, ಅಕ್ರಮ ಬರ್ತಡೇ ಆಚರಣೆಗಳಂತಹ ಘಟನೆಗಳು ವರದಿಯಾಗಿದ್ದವು. ಇದು ಕಾರಾಗೃಹ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹಿತೇಂದ್ರ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು ಜೈಲುಗಳಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಅವುಗಳನ್ನು ಪರಿಹರಿಸಲು ವರದಿಯನ್ನು ಸಲ್ಲಿಸಿತ್ತು. ವರದಿಯ ಶಿಫಾರಸುಗಳ ಆಧಾರದ ಮೇಲೆ ಮತ್ತು ತಂತ್ರಜ್ಞಾನವನ್ನು ಬಳಸಿ ಜೈಲುಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುವ ಸಲಹೆಯಂತೆ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಸದ್ಯ 8 ಕೇಂದ್ರ ಜೈಲುಗಳು ಮತ್ತು 4 ಜಿಲ್ಲಾ ಜೈಲುಗಳನ್ನು ಈ ಕಮಾಂಡ್ ಸೆಂಟರ್‌ಗೆ ಸಂಪರ್ಕಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ತಾಲೂಕು ಮಟ್ಟದ ಜೈಲುಗಳನ್ನು ಸಹ ಇದೇ ರೀತಿಯಲ್ಲಿ ಸಂಪರ್ಕಿಸಲಾಗುವುದು. 24/7 ಕಣ್ಗಾವಲಿಗಾಗಿ 1076 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಸಿ ಸೂಕ್ಷ್ಮ ಘಟನೆಗಳನ್ನು ಸಹ ಪತ್ತೆ ಹಚ್ಚುವ ಸಾಮರ್ಥ್ಯ ಈ ಕೇಂದ್ರಕ್ಕಿದೆ. ಇದು ಜೈಲುಗಳಲ್ಲಿನ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಲು ಮತ್ತು ಸಿಬ್ಬಂದಿಯಲ್ಲಿ ಜಾಗರೂಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ವರ್ಷದ ಬಜೆಟ್ ಭಾಷಣದಲ್ಲಿ ಹೊಸತನ; 75 ವರ್ಷದ ಸಂಪ್ರದಾಯ ಮುರಿಯುತ್ತಾರಾ ನಿರ್ಮಲಾ ಸೀತಾರಾಮನ್? – Kannada News | Nirmala sitharaman may break 75 year tradition in her 2026 budget speech say reports

ನವದೆಹಲಿ, ಜನವರಿ 31: ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ನಾಳೆ ಭಾನುವಾರ ಮಂಡಿಸಲಿರುವ ಬಜೆಟ್ ಹಾಗೂ ಅವರ ಬಜೆಟ್ ಭಾಷಣ (Budget Speech) ವಿಭಿನ್ನವಾಗಿರಲಿದೆ ಎಂದು ಹೇಳಲಾಗುತ್ತಿದೆ. ಬಜೆಟ್ ಅನ್ನು ಪ್ರಸ್ತುತಪಡಿಸುವ ರೀತಿ ಬೇರೆ ರೀತಿ ಇರಲಿದೆ. 75 ವರ್ಷಗಳಿಂದ ಇದ್ದ ಬಜೆಟ್ ಭಾಷಣದ ಸ್ವರೂಪ ಬದಲಾಗಲಿದೆ. ಬಜೆಟ್ ಭಾಷಣದ ಎರಡು ಭಾಗಗಳ ಪೈಕಿ ಎರಡನೇ ಭಾಗಕ್ಕೆ ನಿರ್ಮಲಾ ಸೀತಾರಾಮನ್ ಅವರು ಹೆಚ್ಚು ಒತ್ತು ಕೊಡಲಿದ್ದಾರೆ ಎಂದು ಸರ್ಕಾರಿ ಮೂಲಗಳು ಹೇಳಿದ್ದಾಗಿ ನ್ಯೂಸ್18 ವರದಿ ಮಾಡಿದೆ.

ಬಜೆಟ್ ಭಾಷಣದಲ್ಲಿ ಎರಡು ಭಾಗ ಇರುತ್ತವೆ. ಹಿಂದಿನ ಬಜೆಟ್​ಗಳಲ್ಲಿ ಸಚಿವರು ಮೊದಲ ಭಾಗದಲ್ಲಿ ಆರ್ಥಿಕ ಪರಿಸ್ಥಿತಿ, ಹಣಕಾಸು ಸ್ಥಿತಿ, ಪ್ರಮುಖ ನೀತಿ ಘೋಷಣೆ ಇತ್ಯಾದಿ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗುತ್ತಿತ್ತು. ಎರಡನೇ ಭಾಗದಲ್ಲಿ ತೆರಿಗೆ ಇತ್ಯಾದಿ ಅಂಕಿ ಅಂಶಗಳ ಪ್ರಸ್ತುತಿ ಹೆಚ್ಚಾಗಿ ಇರುತ್ತಿತ್ತು. 2026-27ರ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದ ಎರಡನೇ ಭಾಗದಲ್ಲಿ ಸುದೀರ್ಘ ಮಾಹಿತಿ ಒದಗಿಸಲಿದ್ದಾರೆ.

ಇದನ್ನೂ ಓದಿ: ಆರ್ಥಿಕತೆಗೆ ಪುಷ್ಟಿ ಕೊಡಲು ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಹೆಚ್ಚು ಹಣ ವ್ಯಯಿಸಿ: ತಜ್ಞರ ಸಲಹೆ

ಎರಡನೇ ಭಾಗದ ಬಜೆಟ್ ಭಾಷಣದಲ್ಲಿ ತತ್​ಕ್ಷಣದ ಆರ್ಥಿಕ ಆದ್ಯತೆಗಳಿಗೆ ಒತ್ತು ಕೊಟ್ಟಂತೆ, ದೂರಗಾಮಿ ಅಭಿವೃದ್ಧಿ ಗುರಿಗಳಿಗೂ ಒತ್ತು ಕೊಡಲಾಗುತ್ತದೆ. ದೀರ್ಘಾವಧಿ ರಚನಾತ್ಮಕ ಸುಧಾರಣೆಗಳ ಮೂಲಕ ಸರ್ಕಾರ ಆರ್ಥಿಕ ಶಿಸ್ತು ಅಭಿವೃದ್ಧಿ, ಸಮಾಜ ಕಲ್ಯಾಣದ ಸಮತೋಲನ ಸಾಧಿಸಲು ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದರ ವಿವರ ಇದರಲ್ಲಿ ಇರುತ್ತದೆ ಎನ್ನಲಾಗಿದೆ.

ಜಾಗತಿಕ ಮತ್ತು ದೇಶೀಯ ಸವಾಲುಗಳ ಮಧ್ಯೆ ಭಾರತದ ಆರ್ಥಿಕ ದೃಷ್ಟಿಕೋನ ಹೇಗಿರುತ್ತದೆ ಎಂಬುದರ ಚಿತ್ರಣವನ್ನು ತೆರೆದಿಡಲಾಗುತ್ತದೆ. ದೇಶದ ಸದ್ಯದ ಆರ್ಥಿಕ ಸಾಮರ್ಥ್ಯಗಳೇನು, ವಿವಿಧ ವಲಯವಾರು ಅನುಕೂಲಗಳೇನು, ಭವಿಷ್ಯದ ಬೆಳವಣಿಗೆ ಅವಕಾಶಗಳೆಷ್ಟು ಎಂಬಿತ್ಯಾದಿಯನ್ನು ಅಂದಾಜಿಸುವ ಪ್ರಯತ್ನವಾಗಲಿದೆ.

ಇದನ್ನೂ ಓದಿ: ಬಲಿಷ್ಠ ಭಾರತಕ್ಕೆ ಬೇಕು ತಂತ್ರಜ್ಞಾನ ಪ್ರಾವೀಣ್ಯತೆ; ಬಜೆಟ್​ನಲ್ಲಿ ಟೆಕ್ ಸೆಕ್ಟರ್​ಗೆ ಏನು ಸಿಗುತ್ತೆ?

ಒಟ್ಟಾರೆ, ಬಜೆಟ್ ಭಾಷಣದ ದ್ವಿತೀಯಾರ್ಧದಲ್ಲಿ ಸರ್ಕಾರದ ಮಧ್ಯಮ ಮತ್ತು ದೂರಗಾಮಿ ಆರ್ಥಿಕ ಆದ್ಯತೆಗಳು ಹಾಗು ಸುಧಾರಣೆಗಳ ಝಲಕ್ ಹೇಗಿರುತ್ತೆ ಎಂಬುದರ ಸುಳಿವು ಕೊಡಲಾಗುತ್ತದೆ. ಇನ್ನುಳಿದಂತೆ ಹೊಸ ಯೋಜನೆಗಳ ಘೋಷಣೆ, ಬಂಡವಾಳ ವೆಚ್ಚ, ವಿವಿಧ ಇಲಾಖೆಗಳಿಗೆ ಅನುದಾನ ಹಂಚಿಕೆ, ಯೋಜನೆಗಳಿಗೆ ಅನುದಾನ ಹಂಚಿಕೆ ಇತ್ಯಾದಿ ಮೂಲಭೂತ ಬಜೆಟ್ ಅಂಶಗಳು ಇದ್ದೇ ಇರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂಗೆ ಅಂತಿಮ ವರದಿ ಸಲ್ಲಿಸಿದ ಪ್ರೊ.ಎಂ.ಗೋವಿಂದ ರಾವ್ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ – Kannada News | Karnataka Regional Imbalance: Govinda Rao Committee Submits Final Report to CM Siddaramaiah

ಸಿಎಂಗೆ ಅಂತಿಮ ವರದಿ ಸಲ್ಲಿಕೆImage Credit source: Google

ಬೆಂಗಳೂರು, ಜನವರಿ 31: ಪ್ರೊ.ಎಂ.ಗೋವಿಂದ ರಾವ್‌ ಅಧ್ಯಕ್ಷತೆಯ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ ಅಂತಿಮ ವರದಿಯನ್ನು ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲಿಸಿದೆ. ಡಾ. ಡಿ.ಎಂ. ನಂಜುಂಡಪ್ಪನವರ ಪ್ರಾದೇಶಿಕ ಅಸಮತೋಲನ ನಿವಾರಣಾ ವರದಿ ಹಳೆಯದಾಗಿದ್ದ ಕಾರಣ, ರಾಜ್ಯ ಸರ್ಕಾರವು 233 ತಾಲ್ಲೂಕುಗಳಲ್ಲಿ ಪ್ರಸ್ತುತ ಲಭ್ಯವಿರುವ ಅಂಕಿಅಂಶಗಳ ಆಧಾರದ ಮೇಲೆ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಿ ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕ ಗುರುತಿಸಲು ಆರ್ಥಿಕ ತಜ್ಞ ಪ್ರೊ. ಗೋವಿಂದ ರಾವ್ ಅವರನ್ನು ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಳಿಸಿ 2024ರ ಮಾರ್ಚ್​​ನಲ್ಲಿ ಆದೇಶಿಸಿತ್ತು.

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಅಧ್ಯಯನ ಮಾಡಲು ಮತ್ತು ಅದನ್ನು ನಿವಾರಿಸುವ ನಿಟ್ಟಿನಲ್ಲಿ 2000ನೇ ಇಸವಿಯಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸರ್ಕಾರ ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ರಚಿಸಿತ್ತು. ಈ ಸಮಿತಿಯು 2002 ರಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿ, ರಾಜ್ಯದ 175 ತಾಲ್ಲೂಕುಗಳಲ್ಲಿ 114 ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕುಗಳು ಎಂದು ಗುರುತಿಸಿತ್ತು. ಅತಿ ಹೆಚ್ಚು ಹಿಂದುಳಿದ (39), ಹೆಚ್ಚು ಹಿಂದುಳಿದ (40) ಮತ್ತು ಹಿಂದುಳಿದ (35) ಎಂದು ಮೂರು ವರ್ಗಗಳಾಗಿ ವಿಂಗಡಿಸಿತ್ತು.

ದನ್ನೂ ಓದಿ: ಸರ್ಕಾರದಿಂದ ಮಹತ್ವದ ಆದೇಶ; ಕರ್ನಾಟಕ ನೌಕರರು ಈ ಬಟ್ಟೆ ಧರಿಸುವುದು ಕಡ್ಡಾಯ

ಆದರೆ ಈ ವರದಿ ಸುಮಾರು 22 ವರ್ಷಗಳಷ್ಟು ಹಳೆಯದ್ದಾಗಿದೆ ಎಂಬ ಕಾರಣಕ್ಕೆ ಈ ಬಗ್ಗೆ ಅಧ್ಯಯನಕ್ಕೆ 2024ರಲ್ಲಿ ಪ್ರೊ. ಎಂ. ಗೋವಿಂದ ರಾವ್ ಸಮಿತಿ ರಚನೆ ಮಾಡಲಾಗಿತ್ತು. ನಂಜುಂಡಪ್ಪ ಸಮಿತಿಯ ಶಿಫಾರಸುಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸುವುದು ಮತ್ತು ಪ್ರಸ್ತುತ ಹಿಂದುಳಿದಿರುವ ತಾಲ್ಲೂಕುಗಳನ್ನು ಅಭಿವೃದ್ಧಿಪಡಿಸಲು ಹೊಸ ಮಾನದಂಡಗಳನ್ನು ರೂಪಿಸುವುದು ಹೊಸ ಸಮಿತಿಯ ಜವಾಬ್ದಾರಿಯಾಗಿತ್ತು. ಹೀಗಾಗಿ ಸಮಿತಿಯು ತನ್ನ ಅಂತಿಮ ವರದಿಯನ್ನು ಇಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈ ವೇಳೆ ಸಚಿವರಾದ ಈಶ್ವರ ಖಂಡ್ರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಸಮಿತಿ ಸದಸ್ಯರಾದ ಎಸ್.ಟಿ.ಬಾಗಲಕೋಟೆ, ಸೂರ್ಯನಾರಾಯಣ ರಾವ್, ಸಂಗೀತ ಎನ್.ಕೆ., ಎಲ್.ಕೆ.ಅತೀಕ್, ಸದಸ್ಯ ಕಾರ್ಯದರ್ಶಿ ವಿಶಾಲ್ ಉಪಸ್ಥಿತರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

94ರ ವಯಸ್ಸಿನಲ್ಲಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ ಲಿಜೆಂಡರಿ ನಿರ್ದೇಶಕ, ರಾಜಮೌಳಿಗೂ ಕಾತರ – Kannada News | Singeetam Srinivasa Rao directing new movie in his age of 94

ಸಿಂಗೀತಂ ಶ್ರೀನಿವಾಸ್, ಭಾರತದ ಲಿಜೆಂಡರಿ ಸಿನಿಮಾ ನಿರ್ದೇಶಕರುಗಳಲ್ಲಿ (Director) ಒಬ್ಬರು. ಅವರು ನಿರ್ದೇಶಿಸಿರುವ ಅತ್ಯುತ್ತಮ ಸಿನಿಮಾಗಳ ಪಟ್ಟಿ ಬಹಳ ದೊಡ್ಡದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಎಲ್ಲ ಭಾಷೆಗಳಲ್ಲಿಯೂ ಸಿನಿಮಾಗಳನ್ನು ನಿರ್ದೇಶಿಸಿರುವುದು ಮಾತ್ರವೇ ಅಲ್ಲ ಸುಮಾರು 20ಕ್ಕೂ ಹೆಚ್ಚು ಆಲ್​​ಟೈಂ ಕಲ್ಟ್ ಸಿನಿಮಾಗಳನ್ನು ಭಾರತ ಚಿತ್ರರಂಗಕ್ಕೆ ನೀಡಿದ ಅತ್ಯದ್ಭುತ ನಿರ್ದೇಶಕ ಅವರು. ಅಪ್ಪಟ ಸಿನಿಮಾ ಪ್ರೇಮಿ ಆಗಿರುವ ಸಿಂಗೀತಂ ಶ್ರೀನಿವಾಸ್ ವಯಸ್ಸು ಈಗ 94 ವರ್ಷ. ಈ ವಯಸ್ಸಿನಲ್ಲೂ ಅವರು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಮುಂದಾಗಿರುವುದು ಮಾತ್ರವಲ್ಲ, ಹಲವು ಭಾಗಗಳ ಚಿತ್ರೀಕರಣವನ್ನೂ ಮುಗಿಸಿಬಿಟ್ಟಿದ್ದಾರೆ.

ಸಿಂಗೀತಂ ಶ್ರೀನಿವಾಸ್ ಅವರು ಈ ವಯಸ್ಸಿನಲ್ಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾಕ್ಕೆ ದಕ್ಷಿಣದ ಜನಪ್ರಿಯ ಮತ್ತು ಹಿರಿಯ ನಿರ್ಮಾಣ ಸಂಸ್ಥೆಯಾದ ವೈಜಯಂತಿ ಮೂವೀಸ್ ಬಂಡವಾಳ ಹೂಡಿದೆ. ಸಿಂಗೀತಂ ಅವರು ಈಗಾಗಲೇ ತಮ್ಮ ಹೊಸ ಸಿನಿಮಾದ ಹಲವು ಭಾಗಗಳ ಚಿತ್ರೀಕರಣವನ್ನು ಸಹ ಮುಗಿಸಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ವೈಜಯಂತಿ ಮೂವೀಸ್, ಸಿಂಗೀತಂ ಅವರು ಚಿತ್ರೀಕರಣ ಮಾಡುತ್ತಿರುವ ದೃಶ್ಯಗಳನ್ನು ಹಂಚಿಕೊಂಡಿದೆ. ಸಿನಿಮಾಕ್ಕೆ ದೇವಿ ಶ್ರೀ ಪ್ರಸಾದ್ ಅವರು ಸಂಗೀತ ನೀಡಿರುವುದು ಮತ್ತೊಂದು ವಿಶೇಷ.

ಸಿಂಗೀತಂ ಶ್ರೀನಿವಾಸ್ ಅವರ ಹೊಸ ಸಿನಿಮಾದ ನಟರುಗಳು ಯಾರು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಇತ್ತೀಚೆಗಷ್ಟೆ ಸಿನಿಮಾದ ಮುಹೂರ್ತ ನಡೆದಿದೆ. ಈ ಸಿನಿಮಾ ಸಿಂಗೀತಂ ಶ್ರೀನಿವಾಸ್ ಅವರ ಬಹು ಮೆಚ್ಚಿನ ಕತೆಯನ್ನು ಒಳಗೊಂಡಿರಲಿದ್ದು, ಇದು ಅವರ ಡ್ರೀಮ್ ಪ್ರಾಜೆಕ್ಟ್ ಆಗಿದೆಯಂತೆ. ಸಿನಿಮಾದ ಟೈಟಲ್ ಅನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ವೈಜಯಂತಿ ಮೂವೀಸ್ ಹೇಳಿಕೊಂಡಿದೆ.

ಇದನ್ನೂ ಓದಿ:ಈ ವಾರ ಒಟಿಟಿಗೆ ಬಂದಿವೆ ಭರ್ಜರಿ ಸಿನಿಮಾಗಳು: ನೀವೂ ನೋಡಿ

ಸಿಂಗೀತಂ ಶ್ರೀನಿವಾಸ್ ಅವರ 61ನೇ ಸಿನಿಮಾ ಇದಾಗಿದೆ. 2005 ರಲ್ಲಿ ಬಿಡುಗಡೆ ಆದ ಕಮಲ್ ಹಾಸನ್ ನಟನೆಯ ‘ಮುಂಬೈ ಎಕ್ಸ್​​ಪ್ರೆಸ್’ ಸಿಂಗೀತಂ ನಿರ್ದೇಶಿಸಿದ ಕೊನೆಯ ಸಿನಿಮಾ ಆಗಿತ್ತು. ಅದಾದ ಬಳಿಕ 2013 ರಲ್ಲಿ ‘ವೆಲ್​​ಕಮ್ ಒಬಾಮ’ ಹೆಸರಿನ ಮಕ್ಕಳ ಸಿನಿಮಾ ನಿರ್ದೇಶಿಸಿದರು. ಅದಾದ ಬಳಿಕ ಈಗ ಮತ್ತೆ ಡೈರೆಕ್ಟರ್ ಕುರ್ಚಿ ಏರಿದ್ದಾರೆ.

ಶಿವಣ್ಣನ ಮೊದಲ ಸಿನಿಮಾ ‘ಆನಂದ್’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಹಾಲು-ಜೇನು’, ‘ಚಲಿಸುವ ಮೋಡಗಳು’, ‘ದೇವತಾ ಮನುಷ್ಯ’, ‘ಶ್ರುತಿ ಸೇರಿದಾಗ’, ‘ಟುವ್ವಿ ಟುವ್ವಿ ಟುವ್ವಿ’ ಇನ್ನೂ ಕೆಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಸಿಂಗೀತಂ ಕನ್ನಡಕ್ಕೆ ನೀಡಿದ್ದಾರೆ. ಭಾರತದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ‘ಪುಷ್ಪಕ ವಿಮಾನ’ದ ನಿರ್ದೇಶಕರೂ ಇವರೇ. ತೆಲುಗಿನಲ್ಲಿ ‘ಭೈರವ ದ್ವೀಪಂ’, ‘ಆದಿತ್ಯ 369’ ತಮಿಳಿನ ‘ಅಪೂರ್ವ ಸೋದರಂಗಳ್’ ಸೇರಿದಂತೆ ಇನ್ನೂ ಹಲವು ಅತ್ಯುತ್ತಮ ಸಿನಿಮಾಗಳನ್ನು ಅವರು ನೀಡಿದ್ದಾರೆ. ಎಸ್​​ಎಸ್ ರಾಜಮೌಳಿ ಸಹ ಸಿಂಗೀತಂ ಅವರ ಹೊಸ ಸಿನಿಮಾದ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದು, ಸಿನಿಮಾಕ್ಕಾಗಿ ಕಾತರನಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link