Headlines

ಅಧಿಕಾರಿಗಳ ಜತೆ ಸಿಎಂ ಡಿಕೆ ಶಿವಕುಮಾರ್ ಸಭೆ: ಯೋಜನೆಗಳ ಜಾರಿ, ಭ್ರಷ್ಟಾಚಾರಕ್ಕೆ ಕಡಿವಾಣಕ್ಕೆ ಖಡಕ್ ಸೂಚನೆ – Kannada News

ಬೆಂಗಳೂರು, ಜೂನ್ 4: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿಕೆ ಶಿವಕುಮಾರ್ (DK Shivakumar) ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ರಾಜ್ಯದ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಮಹತ್ವದ ಜಂಟಿ ಸಭೆ ನಡೆಸಿದ ಅವರು, ಮೊದಲ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೇರಿದಂತೆ ಎಲ್ಲಾ 6 ಪ್ರಮುಖ ಯೋಜನೆಗಳನ್ನು ತಕ್ಷಣವೇ ಜಾರಿಗೆ ತರುವಂತೆ ಖಡಕ್ ಸೂಚನೆ ನೀಡಿದ್ದಾರೆ. ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು ಎಂದಿರುವ…

Read More

ವಿದೇಶಿ ಹೂಡಿಕೆದಾರರನ್ನು ಮರಳಿ ಆಕರ್ಷಿಸಲು ಸರ್ಕಾರದ ಯತ್ನ; ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೆ ಅನುಮೋದನೆ – Kannada News

ನವದೆಹಲಿ, ಜೂನ್ 4: ಭಾರತದಿಂದ ವಿದೇಶಿ ಹೂಡಿಕೆದಾರರು (FPI) ಹೊರಹೋಗುತ್ತಿರುವುದನ್ನು ತಡೆಯಲು ಮತ್ತು ಅವರನ್ನು ಮತ್ತೆ ಭಾರತದ ಮಾರುಕಟ್ಟೆಗೆ ಆಕರ್ಷಿಸಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೆ (Ordinance) ಸರ್ಕಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ (union cabinet meeting) ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸರ್ಕಾರದ ಭದ್ರತಾ ಪತ್ರಗಳಲ್ಲಿ (Government Securities) ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರು ಮಾಡುವ…

Read More

ಮಂಗಳೂರು, ಕಾರವಾರ, ಗೋವಾ ಮತ್ತು ಮುಂಬೈ ಪ್ರಯಾಣಿಕರ ಗಮನಕ್ಕೆ: ಈ ರೈಲ್ವೆ ಮಾರ್ಗಕ್ಕೆ ಜೂ.15 ರಿಂದ ಹೊಸ ಮುಂಗಾರು ವೇಳಾಪಟ್ಟಿ – Kannada News

ಮಂಗಳೂರು, ಜೂ.4 : ಕೊಂಕಣ ರೈಲ್ವೆ ಮಾರ್ಗದಲ್ಲಿ ಮುಂಗಾರು ಮಳೆಯ (Monsoon) ಅವಧಿಯಲ್ಲಿ ರೈಲುಗಳ ಸುರಕ್ಷಿತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮಾರ್ಗದಲ್ಲಿ ಚಲಿಸುವ ರೈಲುಗಳಿಗಾಗಿ ವಿಶೇಷ ಮುಂಗಾರು ವೇಳಾಪಟ್ಟಿಯನ್ನು (Monsoon Time Table) ಪ್ರಕಟಿಸಲಾಗಿದೆ. ಈ ಹೊಸ ವೇಳಾಪಟ್ಟಿಯು ಜೂನ್ 15, 2026 ರಿಂದ ಜಾರಿಗೆ ಬರಲಿದ್ದು, ಅಕ್ಟೋಬರ್ 20, 2026 ರವರೆಗೆ ಜಾರಿಯಲ್ಲಿರಲಿದೆ. ಪಶ್ಚಿಮ ಕರಾವಳಿ ಮತ್ತು ಕೊಂಕಣ ಭಾಗದಲ್ಲಿ ಮುಂಗಾರು ಮಳೆಯು ಅತ್ಯಂತ…

Read More

ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ: ದಾಳಿ ವೇಳೆ ಕಂಪನಿಯ ಸರ್ವರ್​​ ಡೌನ್​​ ಮಾಡಿ ಕಳ್ಳಾಟ? – Kannada News

ಬೆಳಗಾವಿ, ಜೂನ್​ 04: ಶಿವಂ ಅಸೋಸಿಯೇಟ್ಸ್ ಸಂಸ್ಥೆಯಿಂದ ಸಾವಿರಾರು ಕೋಟಿ ಅಕ್ರಮ ಸಂಬಂಧ ತನಿಖೆ ನಡೆಯುತ್ತಿರುವ ನಡುವೆಯೇ ಬೆಳಗಾವಿಯಲ್ಲಿ ಮತ್ತೊಂದು ನೂರಾರು ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಭಾಗ್ಯ ನಗರದಲ್ಲಿರುವ ಆದಿತ್ಯರಾಜ ಕ್ಯಾಪಿಟಲ್ ಪ್ರೈವೇಟ್​​ ಲಿಮಿಟೆಡ್​​ ಕಂಪನಿ ಮೇಲೆ ಎಸಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ರೇಡ್​​ ಕುರಿತು ಮಾಹಿತಿ ಸಿಗುತ್ತಿದ್ದಂತೆ ಆನ್ ಲೈನ್ ಮೂಲಕ ವ್ಯವಹಾರ ನಡೆಸುತ್ತಿದ್ದ ಕಂಪನಿಯ ವೆಬ್​​ಸೈಟ್​​ ಸ್ಥಗಿತವಾಗಿದೆ. ಹೀಗಾಗಿ ಕಂಪನಿ ಮಾಲಿಕ ಅಧಿಕಾರಿಗಳಿಗೇ ಚಳ್ಳೆಹಣ್ಣು ತಿನ್ನಿಸಲು ಮುಂದಾದರಾ ಎಂಬ ಅನುಮಾನವೂ ವ್ಯಕ್ತವಾಗಿದೆ….

Read More

Tirumala Laddus: ದಾಖಲೆ ಬರೆದ ಶ್ರೀವಾರಿ ಪ್ರಸಾದ; ಮೇ ತಿಂಗಳಲ್ಲಿ 1.21 ಕೋಟಿಗೂ ಅಧಿಕ ತಿರುಪತಿ ಲಡ್ಡು ಮಾರಾಟ! – Kannada News

ದಾಖಲೆ ಬರೆದ ಶ್ರೀವಾರಿ ಪ್ರಸಾದImage Credit source: Pinterest ತಿರುಮಲ: ಕಲಿಯುಗದ ಪ್ರತ್ಯಕ್ಷ ದೈವ, ವೆಂಕಟೇಶ್ವರ ಸ್ವಾಮಿಯ ಪರಮ ಪವಿತ್ರ ಪ್ರಸಾದವಾದ ‘ತಿರುಮಲ ತಿರುಪತಿ ಲಡ್ಡು’ ಇದೀಗ ಹೊಸ ಇತಿಹಾಸ ಸೃಷ್ಟಿಸಿದೆ. ಪ್ರಪಂಚದಾದ್ಯಂತದ ಕೋಟ್ಯಂತರ ಭಕ್ತರ ಪಾಲಿಗೆ ಕೇವಲ ಪ್ರಸಾದವಾಗಿರದೆ, ಮಹಾ ದೈವಿಕ ಶಕ್ತಿಯ ಸಂಕೇತವಾಗಿರುವ ಶ್ರೀವಾರಿ ಲಡ್ಡು ಮಾರಾಟವು ಈ ವರ್ಷದ (2026) ಮೇ ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (TTD) ಅಧಿಕೃತವಾಗಿ ಘೋಷಿಸಿದೆ. ದಾಖಲೆ ಬರೆದ ಮೇ ತಿಂಗಳ…

Read More

ತಂತ್ರಜ್ಞಾನದ ಸವಾಲಿಗೆ ಕಾರ್ಮಿಕನ ‘ವಿಗ್’ ಎಂಬ ಜಾಣ್ಮೆಯ ಉತ್ತರ: ಸಾಫ್ಟ್‌ವೇರ್ ಅಪ್‌ಡೇಟ್‌ಗೆ ದಾರೀದೀಪವಾದ ಘಟನೆ – Kannada News

ತೆಲಂಗಾಣ, ಜೂನ್ 04: ಗ್ರಾಮೀಣ ಭಾಗದ ಆರ್ಥಿಕತೆಗೆ ಬೆನ್ನೆಲುಬಾಗಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಪಾರದರ್ಶಕತೆ ತರಲು ಜಾರಿಗೆಗೊಳಿಸಲಾದ ಮುಖ ಗುರುತಿಸುವಿಕೆ (Face Recognition) ತಂತ್ರಜ್ಞಾನವು, ಇತ್ತೀಚೆಗೆ ಕಾರ್ಮಿಕರೊಬ್ಬರ ಅದ್ಭುತ ಸಮಯಪ್ರಜ್ಞೆ ಮತ್ತು ಜಾಣ್ಮೆಗೆ ಸಾಕ್ಷಿಯಾಗಿದೆ. ತಾಂತ್ರಿಕ ಸವಾಲೊಂದನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಯಶಸ್ವಿಯಾಗಿ ಎದುರಿಸಿದ ಕಾರ್ಮಿಕರ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಕಾರಾತ್ಮಕ ಚರ್ಚೆ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ. ಭಕ್ತಿ ಮತ್ತು ತಂತ್ರಜ್ಞಾನದ ಜುಗಲ್ಬಂದಿ ವೀರ್ಣಪಲ್ಲಿ ಮಂಡಲದ…

Read More

ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಅರ್ಜಿ ಸಲ್ಲಿಕೆ ಹೇಗೆ? ಏನೇನು ದಾಖಲೆಗಳು ಬೇಕು? ಇಲ್ಲಿದೆ ವಿವರ – Kannada News

ಬಿಎಂಟಿಸಿ ಬಸ್ (ಸಾಂದರ್ಭಿಕ ಚಿತ್ರ)Image Credit source: tv9 ಬೆಂಗಳೂರು, ಜೂನ್ 4: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿಕೆ ಶಿವಕುಮಾರ್ (DK Shivakumar) ವಿದ್ಯಾರ್ಥಿ ಸಮೂಹಕ್ಕೆ ಭರ್ಜರಿ ಕೊಡುಗೆ ನೀಡಿದ್ದಾರೆ. ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ‘ಉಚಿತ ಬಸ್ ಪಾಸ್’ ನೀಡುವುದಾಗಿ ಮುಖ್ಯಮಂತ್ರಿಗಳು ಮಹತ್ತರ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವ್ಯಾಪ್ತಿಯಲ್ಲಿ ಸದ್ಯ ಪಾಸ್ ಪಡೆಯಲು ಇರುವ ನಿಯಮಗಳು, ಪ್ರಸ್ತುತ ಇರುವ ದರ ಪಟ್ಟಿ ಹಾಗೂ ಇನ್ನು…

Read More

ಅಮೆರಿಕನ್ನರ ಮನಗೆದ್ದ ನಮ್ಮ ಹೆಮ್ಮೆಯ ಬೆಂಗಳೂರು!: ಊರಿಗೆ ಹೋಗಲ್ಲ ಎಂದು ಹಠ ಹಿಡಿದ ವಿದೇಶಿ ಮಕ್ಕಳು – Kannada News

ಬೆಂಗಳೂರು, ಜೂ.4: ಟ್ರಾಫಿಕ್, ಕಸದ ಸಮಸ್ಯೆ ಎಂದು ಬೆಂಗಳೂರನ್ನು ಸದಾ ಟೀಕಿಸುವವರ ನಡುವೆ, ಅಮೆರಿಕದ ಪ್ರವಾಸಿಯೊಬ್ಬರು ನಮ್ಮ ಸಿಲಿಕಾನ್ ಸಿಟಿಯ ಜನತೆ, ಸಂಸ್ಕೃತಿ ಮತ್ತು ಆತಿಥ್ಯವನ್ನು ಕೊಂಡಾಡಿ ಬರೆದಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ಹೃದಯ ಗೆದ್ದಿದೆ. 5 ತಿಂಗಳ ಕಾಲ ಬೆಂಗಳೂರಿನಲ್ಲಿ ವಾಸವಿದ್ದ ಅಮೆರಿಕದ ಕುಟುಂಬವೊಂದು, “ನಮ್ಮ ಮಕ್ಕಳಿಗೆ ಇಲ್ಲಿಂದ ವಾಪಸ್ ಸ್ವದೇಶಕ್ಕೆ ಹೋಗಲು ಮನಸ್ಸಿಲ್ಲ, ಬೆಂಗಳೂರಿಗೆ ನಮ್ಮ ಕಡೆಯಿಂದ 5 ಸ್ಟಾರ್ ರೇಟಿಂಗ್!” ಎಂದು ಹೆಮ್ಮೆಯಿಂದ ಹೇಳಿಕೊಂಡಿದೆ. ರೆಡ್ಡಿಟ್​​ನಲ್ಲಿ ‘ಥ್ಯಾಂಕ್ಸ್ ಬೆಂಗಳೂರು’ (Thanks Bangalore)…

Read More

Video: ಬೆಳಗ್ಗೆಯಿಂದ ರಾತ್ರಿ ತನಕ ಬ್ಯುಸಿ, ಆದ್ರೂ ಲೈಫ್‌ನಲ್ಲಿ ಫುಲ್‌ ಹ್ಯಾಪಿ; ಈ ಯುವಕನ ಬ್ಯುಸಿ ಶೆಡ್ಯೂಲ್ ಹೇಗಿದೆ ನೋಡಿ – Kannada News

ನಮ್ಮಲ್ಲಿ ಯಾರನ್ನಾದ್ರೂ ಕೇಳಿದ್ರೆ ಕೆಲಸಕ್ಕೆ (Office) ಹೋಗಿ ಬಂದು ಸುಸ್ತು ಆಗುತ್ತದೆ. ಆಫೀಸ್‌ಗೆ ಹೋಗಿ ಬರುವಷ್ಟರಲ್ಲಿ ಟೈಮ್ ಆಗಿ ಬಿಡುತ್ತದೆ. ಮನೆಗೆ ಬಂದು ಮಲಗಿದ್ರೆ ಸಾಕು ಎಂದು ಹೇಳುವವರೇ ಹೆಚ್ಚು. ಇದೆಲ್ಲದರ ನಡುವೆ ಈ ಯುವಕನ ಬಿಡುವಿಲ್ಲದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಎನರ್ಜಿಟಿಕ್ ಯುವಕನ ಹೆಸರು ದೀಪಕ್ ಪಾಂಡೆ (Deepak Pandey). ಬೆಳಗ್ಗೆ 9 ರಿಂದ 5 ಗಂಟೆ ತನಕ ಆಫೀಸ್ ಕೆಲಸ. ಸಂಜೆ ಆಫೀಸ್‌ ಮುಗಿಸಿ ಬಂದು ರಾತ್ರಿ 11 ಗಂಟೆವರೆಗೆ…

Read More

ಜಮೀರ್ ಅಹ್ಮದ್​ಗೆ ಡಿಕೆ ಶಿವಕುಮಾರ್ ಸಂಪುಟದಲ್ಲಿ ಮುಂದೆಯೂ ಸ್ಥಾನ ಸಿಗೋದು ಅನುಮಾನ! – Kannada News

ಬೆಂಗಳೂರು, ಜೂನ್ 4: ಸಿದ್ದರಾಮಯ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಮುಖವಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್​ಗೆ (Zameer Ahmed Khan) ಡಿಕೆ ಶಿವಕುಮಾರ್ (DK Shivakumar) ನೂತನ ಸಂಪುಟದಲ್ಲಿ ಮೊದಲ ಅವಕಾಶ ಕೈತಪ್ಪಿದೆ. ಸಚಿವ ಸಂಪುಟ ವಿಸ್ತರಣೆ ವೇಳೆಯೂ ಸ್ಥಾನ ತಪ್ಪುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ದಿನಗಳಲ್ಲೂ ಕಾಂಗ್ರೆಸ್ 2.0 ಸರ್ಕಾರದಲ್ಲಿ ಜಮೀರ್​​ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಕ್ಷೀಣಿಸಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ದಾವಣಗೆರೆ ದಕ್ಷಿಣ ಉಪಚುನಾವಣೆಯ ವೇಳೆ ಉಂಟಾದ…

Read More