Category Archives: Blog

Your blog category

Karnataka Weather Forecast: 11 ಜಿಲ್ಲೆಗಳಲ್ಲಿ ನಾಳೆ ವರುಣಾರ್ಭಟ, ತೀವ್ರ ಗಾಳಿಯ ಎಚ್ಚರಿಕೆ – Kannada News

ಬೆಂಗಳೂರು, ಜೂನ್​​ 03: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದ್ದು, ಜೂ.9ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ವರುಣನ ಆಗಮನದ ನಿರೀಕ್ಷೆ ಇದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಶೇ.50ಕ್ಕಿಂತ ಕಡಿಮೆ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ಭಾರಿ ಮಳೆಯೊಂದಿಗೆ ಬಿರುಗಾಳಿ ಬೀಸಬಹುದೆಂಬ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಪ್ರತಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಕರಾವಳಿ, ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚಿನ ಜೊತೆಗೆ ಕೆಲವೆಡೆ ಆಲಿಕಲ್ಲು ಮಳೆ ಅಂದಾಜಿಸಲಾಗಿದೆ.

ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾವೇರಿ, ಬೆಳಗಾವಿ, ಮೈಸೂರು, ಮಂಡ್ಯ, ರಾಯಚೂರು ಜಿಲ್ಲೆಯಲ್ಲಿ ಭಾರಿ ಮಳೆ ನಿರೀಕ್ಷೆಯಿದ್ದು, ಬೆಂಗಳೂರಿನಲ್ಲೂ ಮುಂದಿನ ವಾರದಿಂದ ಮಳೆ ಪ್ರಮಾಣ ಹೆಚ್ಚಾಗಲಿದೆ. ಹೀಗಾಗಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ಇದನ್ನೂ ಓದಿ: ಮುಂಗಾರು ಆಗಮನಕ್ಕೆ ದಿನಗಣನೆ; ಜೂನ್ 4 ರಂದು ಕೇರಳ ಪ್ರವೇಶ, ಕರ್ನಾಟಕ, ತಮಿಳುನಾಡಿನಲ್ಲಿ ಭಾರಿ ಮಳೆ ಮುನ್ಸೂಚನೆ

11 ಜಿಲ್ಲೆಗಳಲ್ಲಿ ನಾಳೆ ಆರೆಂಜ್​​ ಅಲರ್ಟ್​​

ಉತ್ತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ಹಲವೆಡೆ ನಾಳೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು ಬರೋಬ್ಬರಿ 11 11 ಜಿಲ್ಲೆಗಳಲ್ಲಿ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಬೀದರ್​​, ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ ಮತ್ತು ಹಾವೇರಿಯಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದೆ. ಉಳಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೊಜ್ಜು ಹೃದಯಕ್ಕಷ್ಟೇ ಅಲ್ಲ, ಕಿಡ್ನಿಗೂ ಅಪಾಯಕಾರಿಯಾಗಬಹುದು! ಈ ಲಕ್ಷಣ ಕಂಡು ಬಂದಾಗ ನಿರ್ಲಕ್ಷಿಸಬೇಡಿ – Kannada News

ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯತೆ (Obesity) ದೊಡ್ಡ ಆರೋಗ್ಯ ಸಮಸ್ಯೆಯಾಗುತ್ತಿದೆ. ಸಾಮಾನ್ಯವಾಗಿ ಜನರು ಬೊಜ್ಜು ಅಥವಾ ಸ್ಥೂಲಕಾಯತೆಯನ್ನು ಹೃದಯ ರೋಗ, ಹೈ ಬಿಪಿ ಮತ್ತು ಡಯಾಬಿಟಿಸ್‌ಗೆ ಸಂಬಂಧಿಸಿದ ಸಮಸ್ಯೆಯಾಗಿ ನೋಡುತ್ತಾರೆ. ಆದರೆ ತೂಕ ಹೆಚ್ಚಿದ್ದರೆ ಅದು ಕಿಡ್ನಿ ಆರೋಗ್ಯದ (Kidney Health) ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ನಮ್ಮ ಕಿಡ್ನಿಗೂ ಬೊಜ್ಜಿಗೂ ಏನು ಸಂಬಂಧ, ಯಾವ ರೀತಿಯ ಲಕ್ಷಣಗಳನ್ನು ಕಡೆಗಣಿಸಬಾರದು ಜೊತೆಗೆ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಸಲಹೆಗಳನ್ನು ಪಾಲಿಸಬೇಕು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಕಿಡ್ನಿಯ ಆರೋಗ್ಯಕ್ಕೂ ಸ್ಥೂಲಕಾಯತೆಗೂ ಇರುವ ಸಂಬಂಧವೇನು?

ಸಾಮಾನ್ಯವಾಗಿ ಕಿಡ್ನಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವುದು, ದೇಹದ ದ್ರವ ಸಮತೋಲನವನ್ನು ಕಾಪಾಡುವುದು ಮತ್ತು ರಕ್ತದ ಒತ್ತಡ ನಿಯಂತ್ರಿಸುವಂತಹ ಪ್ರಮುಖ ಕೆಲಸಗಳನ್ನು ಮಾಡುತ್ತವೆ. ಆದರೆ ದೇಹದ ತೂಕ ಹೆಚ್ಚಾದಾಗ ಕಿಡ್ನಿಗಳು ಸಾಮಾನ್ಯಕ್ಕಿಂತ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಅವುಗಳ ಮೇಲೆ ಹೆಚ್ಚುವರಿ ಒತ್ತಡ ಬೀಳಬಹುದು. ನ್ಯಾಷನಲ್ ಕಿಡ್ನಿ ಫೌಂಡೇಶನ್ ಮಾಹಿತಿ ಪ್ರಕಾರ, ಸ್ಥೂಲಕಾಯವು ಕ್ರೋನಿಕ್ ಕಿಡ್ನಿ ಡಿಸೀಸ್ (CKD) ಅಪಾಯವನ್ನು ಹೆಚ್ಚಿಸಬಹುದು. ಜೊತೆಗೆ ಹೈ ಬ್ಲಡ್ ಪ್ರೆಶರ್ ಮತ್ತು ಟೈಪ್-2 ಡಯಾಬಿಟಿಸ್ ಸಮಸ್ಯೆಗಳು ಕೂಡ ಕಿಡ್ನಿ ಹಾನಿಗೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ.

ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು?

ಕಿಡ್ನಿ ಸಮಸ್ಯೆಗಳಲ್ಲಿ ಆರಂಭಿಕ ಹಂತದಲ್ಲಿ ಸ್ಪಷ್ಟ ಲಕ್ಷಣಗಳು ಕಂಡುಬರದಿರಬಹುದು. ಆದರೆ ಕೆಲವರಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸಬಹುದು;

  • ಕಾಲು, ಮುಖ ಅಥವಾ ಪಾದಗಳಲ್ಲಿ ಊತ
  • ಅತಿಯಾದ ದಣಿವು
  • ಪದೇಪದೇ ಮೂತ್ರ ವಿಸರ್ಜನೆ
  • ಮೂತ್ರದಲ್ಲಿ ಬದಲಾವಣೆ
  • ಹಸಿವು ಕಡಿಮೆಯಾಗುವುದು
  • ದೇಹದಲ್ಲಿ ದುರ್ಬಲತೆ

ಇದನ್ನೂ ಓದಿ: ಅಪ್ಪಿತಪ್ಪಿಯೂ ಈ ಆಹಾರಗಳ ಸೇವನೆ ಮಾಡಬೇಡಿ ಇದು ಕಿಡ್ನಿ ಸ್ಟೋನ್ ಆಗಲು ಕಾರಣವಾಗುತ್ತೆ ಎಚ್ಚರ!

ಕಿಡ್ನಿ ಆರೋಗ್ಯ ಕಾಪಾಡಲು ಏನು ಮಾಡಬೇಕು?

ಸಮತೋಲನಯುತ ಆಹಾರ ಸೇವನೆ: ಜಂಕ್ ಫುಡ್, ಹೆಚ್ಚು ಸಕ್ಕರೆ ಮತ್ತು ಪ್ರೊಸೆಸ್ಡ್ ಆಹಾರಗಳನ್ನು ಕಡಿಮೆ ಮಾಡುವುದು ಉತ್ತಮ.

ನಿಯಮಿತ ವ್ಯಾಯಾಮ: ಪ್ರತಿದಿನ ಶಾರೀರಿಕ ಚಟುವಟಿಕೆ ನಡೆಸುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ.

ಸಾಕಷ್ಟು ನೀರು ಕುಡಿಯಿರಿ: ದೇಹದಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳುವುದು ಕಿಡ್ನಿಗಳಿಗೆ ಸಹಾಯಕ.

ಬಿಪಿ ಮತ್ತು ಶುಗರ್ ನಿಯಂತ್ರಣ: ಹೈ ಬಿಪಿ ಹಾಗೂ ಡಯಾಬಿಟಿಸ್ ಇದ್ದರೆ ನಿಯಮಿತ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯ.

ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ: ಇವು ಕಿಡ್ನಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.

ಸ್ಥೂಲಕಾಯವು ಕೇವಲ ದೇಹದ ತೂಕ ಹೆಚ್ಚಳವಲ್ಲ, ಇದು ಕಿಡ್ನಿ ಸೇರಿದಂತೆ ಹಲವು ಅಂಗಗಳ ಆರೋಗ್ಯಕ್ಕೂ ಅಪಾಯಕಾರಿಯಾಗಿದೆ. ಆದ್ದರಿಂದ ಆರೋಗ್ಯಕರ ಜೀವನಶೈಲಿ, ಸರಿಯಾದ ಆಹಾರ ಮತ್ತು ನಿಯಮಿತ ಆರೋಗ್ಯ ತಪಾಸಣೆ ಮೂಲಕ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಯತೀಂದ್ರ – Kannada News

ಬೆಂಗಳೂರು, ಜೂನ್​ 03: ನೂತನ ಸಿಎಂ ಡಿ.ಕೆ. ಶಿವಕುಮಾರ್​​ ಅವರ ಸಚಿವ ಸಂಪುಟಕ್ಕೆ ಡಾ. ಯತೀಂದ್ರ ಸಿದ್ದರಾಮಯ್ಯ ಸೇರ್ಪಡೆಯಾಗಿದ್ದಾರೆ. ರಾಜ್ಯಪಾಲರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದು, ಈ ವೇಳೆ ತದೇಕ ಚಿತ್ತದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರನನ್ನು ನೋಡಿದ್ದಾರೆ. ಜೊತೆಗೆ ಪಕ್ಕದಲ್ಲಿದ್ದ ಹೈಕೋರ್ಟ್​​ ಸಿಜೆಗೆ ತಮ್ಮ ಪುತ್ರ ಎಂದು ಪರಿಚಯಿಸಿದ್ದಾರೆ. ಪ್ರಮಾಣವಚನ ಬಳಿಕ ತಂದೆಯ ಕಾಲುಮುಟ್ಟಿ ನಮಸ್ಕರಿಸಿ ಯತೀಂದ್ರ ಕೂಡ ಆಶೀರ್ವಾದ ಪಡೆದಿದ್ದಾರೆ. ಪುತ್ರ ಭುಜ ಮುಟ್ಟಿ ಮಾಜಿ ಸಿಎಂ ಸಿದ್ದರಾಮಯ್ಯ ಹಾರೈಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ

ಇಂದು (ಜೂನ್ 03) ಡಿಕೆ ಶಿವಕುಮಾರ್ (DK Shivakumar) ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹಲವು ಕಾಂಗ್ರೆಸ್ ಮುಖಂಡರು, ಸ್ವಾಮೀಜಿಗಳು, ಕೆಲ ಸಾಹಿತಿಗಳು, ಜೊತೆಗೆ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸಹ ಭಾಗಿ ಆಗಿದ್ದರು. ನಟಿ ರಮ್ಯಾ, ನಟ ಪ್ರೇಮ್, ಶಿವರಾಜ್ ಕುಮಾರ್ ಇನ್ನೂ ಹಲವರು ಪದಗ್ರಹಣಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದ ಬಳಿಕ ಟಿವಿ9 ಜೊತೆಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ಡಿಕೆ ಶಿವಕುಮಾರ್ ಅವರು ಸಿಎಂ ಆಗಿರುವುದು ಸಂತಸ, ಹೊಸ ಸಿಎಂ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅವರಿಗೆ ಒಳಿತಾಗಲಿ ಎಂದರು. ಶಿವರಾಜ್ ಕುಮಾರ್ ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

‘ಪೆದ್ದಿ’ ಪ್ರೀಮಿಯರ್ ಶೋಗೆ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ: ಕಾರಣ? – Kannada News

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ನಾಳೆ (ಜೂನ್ 4) ಅಧಿಕೃತವಾಗಿ ಬಿಡುಗಡೆ ಆಗುತ್ತಿದೆ. ಆದರೆ ಇಂದೇ (ಜೂನ್ 3) ಹಲವೆಡೆ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಬೆಂಗಳೂರಿನ ಹಲವಾರು ಚಿತ್ರಮಂದಿರಗಳಲ್ಲಿ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಆದರೆ ಬೆಂಗಳೂರಿನ ಪ್ರೀಮಿಯರ್ ಶೋಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಪ್ರೀಮಿಯರ್ ಶೋ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು, ಹಲವೆಡೆ ಟಿಕೆಟ್ ಬಿಕರಿ ಆಗಿಲ್ಲ.

‘ಪೆದ್ದಿ’ ಸಿನಿಮಾದ ಪ್ರೀಮಿಯರ್ ಶೋ ಇಂದು ರಾತ್ರಿ 8 ಗಂಟೆಗೆ ಆರಂಭವಾಗುತ್ತಿದೆ. ನಗರದ ಹಲವು ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್​​ಗಳಲ್ಲಿ ಪ್ರೀಮಿಯರ್ ಶೋ ಪ್ರದರ್ಶಿಸಲಾಗುತ್ತಿದೆ. ಆದರೆ ಬುಕ್ ಮೈ ಶೋ ಮಾಹಿತಿ ಪ್ರಕಾರ ಹಲವು ಚಿತ್ರಮಂದಿರಗಳಲ್ಲಿ ಟಿಕೆಟ್ ಸೂಕ್ತವಾಗಿ ಬಿಕರಿ ಆಗಿಲ್ಲ. ಬಹುತೇಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರೀಮಿಯರ್ ಶೋನ ಬುಕಿಂಗ್ ಅನ್ನು ಬಹು ತಡವಾಗಿ ಆರಂಭಿಸಿದ್ದು, ಈ ನೀರಸ ಪ್ರತಿಕ್ರಿಯೆಗೆ ಮುಖ್ಯ ಕಾರಣ. ಮೊದಲಿಗೆ ಜೂನ್ 4 ರ ಶೋನ ಟಿಕೆಟ್​​ಗಳ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿತ್ತು. ಹಾಗಾಗಿ ಹೆಚ್ಚಿನ ಅಭಿಮಾನಿಗಳು ಜೂನ್ 4 ರ ಮುಂಜಾನೆಯ ಶೋ ಅಂದರೆ 6:30 ಶೋಗೆ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಅದಾದ ಬಳಿಕ ಬಹಳ ತಡವಾಗಿ ಇಂದು (ಜೂನ್ 3) ರಾತ್ರಿಯ ಪ್ರೀಮಿಯರ್ ಶೋಗೆ ಅಡ್ವಾನ್ಸ್ ಬುಕಿಂಗ್ ತೆರೆಯಲಾಗಿದೆ. ಜೂನ್ 4 ರ ಶೋಗೆ ಹೆಚ್ಚಿನ ಜನ ಬುಕಿಂಗ್ ಮಾಡಿಕೊಂಡಿರುವ ಕಾರಣ ಇಂದು ರಾತ್ರಿಯ ಶೋಗಳಿಗೆ ಹೆಚ್ಚು ಬುಕಿಂಗ್ ಆಗಿಲ್ಲ.

ಇದನ್ನೂ ಓದಿ:ರಾಮ್ ಚರಣ್ ಬಾಡಿಗಾರ್ಡ್ ಸಾಮಾನ್ಯ ಮನುಷ್ಯ ಅಲ್ಲ

ಅದು ಮಾತ್ರವೇ ಅಲ್ಲದೆ, ಇಂದು ರಾತ್ರಿಯ ಶೋಗೆ ಭಾರಿ ಮೊತ್ತದ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಇಂದು ರಾತ್ರಿಯ ಶೋಗಳಿಗೆ ಸಿಂಗಲ್ ಸ್ಕ್ರೀನ್​​ನಲ್ಲಿ 500 ರಿಂದ 300 ಹಾಗೂ ಮಲ್ಟಿಪ್ಲೆಕ್ಸ್​​ನಗಳಲ್ಲಿ 600 ರಿಂದ 1200 ರೂ ವರೆಗೆ ಟಿಕೆಟ್ ನಿಗದಿಪಡಿಸಲಾಗಿದೆ. ಅದೇ ನಾಳೆಯ ಅಂದರೆ ಜೂನ್ 4 ರ ಬೆಳಿಗಿನ ಶೋಗಳಿಗೆ ಇದರ ಅರ್ಧದಷ್ಟು ಟಿಕೆಟ್ ಬೆಲೆ ಇದೆ. ಹಾಗಾಗಿ ಹೆಚ್ಚಿನ ಜನ ಜೂನ್ 4 ರಂದೇ ಸಿನಿಮಾಕ್ಕೆ ಟಿಕೆಟ್​​ಗಳನ್ನು ಮುಂಗಡವಾಗಿ ಬುಕ್ ಮಾಡಿಕೊಂಡಿದ್ದು, ಸಿನಿಮಾ ನೋಡಲು ಕಾತರರಾಗಿದ್ದಾರೆ. ಒಟ್ಟಾರೆಯಾಗಿ ಕೆಟ್ಟ ಪ್ಲಾನಿಂಗ್​​ ಇಂದಾಗಿ ಇಂದಿನ ಪ್ರೀಮಿಯರ್ ಶೋಗೆ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಪಡೆಯಲು ‘ಪೆದ್ದಿ’ ವಿಫಲವಾಗಿದೆ.

‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಶಿವರಾಜ್ ಕುಮಾರ್ ಸಹ ನಟಿಸಿದ್ದು, ಕರ್ನಾಟಕದಲ್ಲಿಯೂ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಅನ್ನು ಬುಚ್ಚಿಬಾಬು ಸನಾ ನಿರ್ದೇಶಿಸಿದ್ದಾರೆ. ಎಆರ್ ರೆಹಮಾನ್ ಸಂಗೀತವಿದೆ. ಸಿನಿಮಾ ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಈ ಐಪಿಎಲ್​ನಲ್ಲೂ ಈ 5 ದಾಖಲೆಗಳನ್ನು ಮುರಿಯಲಾಗಲಿಲ್ಲ..!

Source link

ಕರ್ನಾಟಕದಲ್ಲಿ ಶುರುವಾಯ್ತು ಡಿಕೆ ಶಿವಕುಮಾರ್​​ ರಾಜ್ಯಭಾರ: ಡಿಕೆ ಸೈನ್ಯ ಹೀಗಿದೆ

Source link

ಡಿಕೆಶಿ ಸಂಪುಟದಲ್ಲಿ ಅನುಭವಿ ನಾಯಕರು: ಸಚಿವರಾಗಿ ಮುನಿಯಪ್ಪ, ಎಂ.ಬಿ. ಪಾಟೀಲ್​​, ಜಾರ್ಜ್​​ ಪ್ರಮಾಣ – Kannada News

ಸಚಿವರಾಗಿ ಪ್ರಮಾಣವಚನImage Credit source: Tv9 Kannada

ಬೆಂಗಳೂರು, ಜೂನ್​​ 03: ನೂತನ ಸಿಎಂ ಡಿ.ಕೆ. ಶಿವಕುಮಾರ್ (DK Shivakumar)​​ ಜೊತೆಗೆ ಡಿಸಿಎಂ ಪರಮೇಶ್ವರ್​​ ಸೇರಿ 12 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಂಪುಟ ದರ್ಜೆ ಸಚಿವರಾಗಿ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್ ಮತ್ತುಎಂ.ಬಿ. ಪಾಟೀಲ್​​ರಿ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯಪಾಲರು ಉಪಸ್ಥಿತರಿದ್ದು, ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಗೆ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು.

7 ಬಾರಿ ಸಂಸದ, ಮೊದಲಬಾರಿ ಶಾಸಕರಾಗಿರುವ ಮುನಿಯಪ್ಪ

ಕರ್ನಾಟಕದ ಅತ್ಯಂತ ಹಿರಿಯ ಮತ್ತು ಪ್ರಭಾವಿ ದಲಿತ ನಾಯಕರಲ್ಲಿ ಒಬ್ಬರಾಗಿರುವ ಕೆ.ಎಚ್. ಮುನಿಯಪ್ಪ ಅವರು 1991 ರಿಂದ 2019 ರವರೆಗೆ ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಏಳು ಬಾರಿ ಸಂಸದರಾಗಿ ಆಯ್ಕೆಯಾದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಎಸ್. ಮುನಿಸ್ವಾಮಿ ಅವರ ವಿರುದ್ಧ ಮೊದಲ ಬಾರಿಗೆ ಪರಾಭವಗೊಂಡ ಬಳಿಕ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (SC) ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ: ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್​​; ಅಷ್ಟಕ್ಕೂ ಯಾರು ಈ ಅಜ್ಜಯ್ಯ?

3ನೇ ಬಾರಿ ಸಚಿವರಾದ ಎಂ.ಬಿ. ಪಾಟೀಲ್​​

ಇನ್ನು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಎಂಬಿ ಪಾಟೀಲ್​​ ಹಾಲಿ ಬಬಲೇಶ್ವರ ಕ್ಷೇತ್ರದ ಶಾಸಕರು. ಐದು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಎಂ.ಬಿ.ಪಾಟೀಲ್, ಮೊದಲಬಾರಿಗೆ ವಿಧಾನಸಭೆ ಪ್ರವೇಶಿಸಿದ್ದು, 1991ರಲ್ಲಿ.
1998ರಲ್ಲಿ ವಿಜಯಪುರ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಇವರು, 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವ , 2018ರಲ್ಲಿಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವರಾಗಿ ಮತ್ತು 2023-26ರವರೆಗೆ ಸಿದ್ದರಾಮಯ್ಯನವರ ಸಂಪುಟದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿದ್ದರು.

ಕಾಂಗ್ರೆಸ್‌ನ ಹಿರಿಯ ನಾಯಕ ಜಾರ್ಜ್​​ಗೆ ಮತ್ತೊಮ್ಮೆ ಮಂತ್ರಿಗಿರಿ

ಸರ್ವಜ್ಞನಗರ ಕ್ಷೇತ್ರದ ಶಾಸಕರಾಗಿರುವ ಕೆ.ಜೆ.ಜಾರ್ಜ್ ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರು. ಆರು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಕೆ.ಜೆ.ಜಾರ್ಜ್ , 1985ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ್ದರು. ವೀರೇಂದ್ರ ಪಾಟೀಲ್‌, ಎಸ್‌.ಬಂಗಾರಪ್ಪ ಸರ್ಕಾರದಲ್ಲೂ ಸಂಪುಟ ದರ್ಜೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹಇಲಾಖೆ ಸಚಿವರಾಗಿದ್ದರು. 2018ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಬೃಹತ್‌ & ಮಧ್ಯಮ ಕೈಗಾರಿಕೆ ಸಚಿವರಾಗಿದ್ದ ಇವರು 2023ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಖಾತೆ ನಿರ್ವಹಣೆ ಮಾಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:53 pm, Wed, 3 June 26

Source link

ಜೊಹೊ ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಅವರ ಕರುವಿಯಿಂದ ಚೀನೀ ಪವರ್ ಟೂಲ್ಸ್​ಗೆ ಪೈಪೋಟಿ – Kannada News

ಚೆನ್ನೈ, ಜೂನ್ 3: ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಕ್ರಾಂತಿ ಮಾಡಿರುವ ಭಾರತದ ಪ್ರಮುಖ ಸಾಸ್ (SaaS) ಯೂನಿಕಾರ್ನ್ ಸಂಸ್ಥೆ ‘ಜೊಹೊ’ನ (Zoho) ಸಹ-ಸಂಸ್ಥಾಪಕ ಮತ್ತು ಮುಖ್ಯ ವಿಜ್ಞಾನಿ ಹಾಗು ಮಾಜಿ ಸಿಇಒ ಶ್ರೀಧರ್ ವೆಂಬು, ಈಗ ಉತ್ಪಾದನಾ (Manufacturing) ಕ್ಷೇತ್ರದಲ್ಲೂ ಭಾರತದ ಹೆಜ್ಜೆಯನ್ನು ಗಟ್ಟಿಗೊಳಿಸಲು ಮುಂದಾಗಿದ್ದಾರೆ. ಇವರ ಕರುವಿ ಎನ್ನುವ ಪವರ್ ಟೂಲ್ಸ್ ಉತ್ಪಾದನಾ ಸಂಸ್ಥೆ ಸದ್ದು ಮಾಡತೊಡಗಿದೆ. ಚೀನೀ ಕಂಪನಿಗಳ ಪ್ರಾಬಲ್ಯ ಇರುವ ಪವರ್ ಟೂಲ್ಸ್ ಕ್ಷೇತ್ರದಲ್ಲಿ ಕರುವಿ (Karuvi) ಗಟ್ಟಿ ಹೆಜ್ಜೆ ಊರಲು ಅಣಿಯಾಗಿದೆ. ಈ ಬಗ್ಗೆ ಶ್ರೀಧರ್ ವೆಂಬು ಅವರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಮೆಕಾಟ್ರಾನಿಕ್ಸ್ ಸ್ಟಾರ್ಟಪ್ ಆದ ಕರುವಿಯ ಮೊದಲ ಉತ್ಪನ್ನ ತಯಾರಾಗಿ ಪ್ರಾಯೋಗಿಕವಾಗಿ ಗ್ರಾಹಕರಿಗೆ ತಲುಪಿಸಲಾಗಿರುವ ವಿಚಾರವನ್ನು ವೆಂಬು ಹಂಚಿಕೊಂಡಿದ್ದಾರೆ. ಚೀನಾ ಉತ್ಪನ್ನಗಳನ್ನು ಎದುರಿಸಬೇಕಾದರೆ ಕೇವಲ ಬೆಲೆ ಮಾತ್ರವಲ್ಲ, ಜಾಗತಿಕ ಗುಣಮಟ್ಟವನ್ನು ಸರಿಗಟ್ಟುವುದು (Matching Global Quality) ಅತ್ಯಂತ ಪ್ರಮುಖ ಸವಾಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

Karuvi ಸ್ಟಾರ್ಟ್-ಅಪ್‌ನ ಉಗಮ ಮತ್ತು ತಂತ್ರಜ್ಞಾನ

ತಮಿಳು ಭಾಷೆಯಲ್ಲಿ ‘ಕರುವಿ’ ಎಂದರೆ ಉಪಕರಣ ಅಥವಾ ಸಾಧನ (Instrument/Tool) ಎಂದರ್ಥ. ಸುಮಾರು ಎರಡು ವರ್ಷಗಳ ಹಿಂದೆ ತಮಿಳುನಾಡಿನ ಗ್ರಾಮೀಣ ಪ್ರದೇಶವಾದ ತೆನ್ಕಾಸಿಯಲ್ಲಿ ಒಂದು ಸಣ್ಣ ಇಂಜಿನಿಯರಿಂಗ್ ತಂಡದೊಂದಿಗೆ ಈ ಸಾಹಸವನ್ನು ಪ್ರಾರಂಭಿಸಲಾಯಿತು. ಶ್ರೀಧರ್ ವೆಂಬು ಮತ್ತು ಟೋನಿ ಥಾಮಾಸ್ ಇದರ ಸಹ-ಸಂಸ್ಥಾಪಕರು.

ಕರುವಿ ಉತ್ಪನ್ನಗಳ ಶ್ರೇಣಿ

‘ಕರುವಿ’ ಬ್ರ್ಯಾಂಡ್ ಅಡಿಯಲ್ಲಿ ಕೈಗಾರಿಕಾ ಮತ್ತು ಗ್ರಾಹಕ ಬಳಕೆಯ ರೋಟರಿ ಡ್ರಿಲ್ಸ್, ಹ್ಯಾಮರ್ ಡ್ರಿಲ್ಸ್, ಆಂಗಲ್ ಗ್ರೈಂಡರ್ಸ್, ಡೆಮೋಲಿಷನ್ ಹ್ಯಾಮರ್ಸ್ ಮತ್ತು ಗರಗಸಗಳಂತಹ (Saws) ಪ್ರಮುಖ ಪವರ್ ಟೂಲ್‌ಗಳನ್ನು ವಾಣಿಜ್ಯ ಉತ್ಪಾದನೆಗೆ ಸಿದ್ಧಪಡಿಸಲಾಗಿದೆ.

ಈ ಉಪಕರಣಗಳನ್ನು ಕೇವಲ ಸಾಮಾನ್ಯ ಯಂತ್ರಗಳಾಗಿ ಮಾಡದೆ, ಮೋಟಾರ್ ತಂತ್ರಜ್ಞಾನ (Motor Technology), ಮೆಟೀರಿಯಲ್ ಸೈನ್ಸ್ (ವಸ್ತು ವಿಜ್ಞಾನ) ಮತ್ತು ಎಲೆಕ್ಟ್ರಾನಿಕ್ಸ್ ವಲಯದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಅತ್ಯಂತ ನಿಖರವಾಗಿ (Precise) ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: ಚೀನಾ ಔಟ್, ಭಾರತ ಇನ್: ಜಾಗತಿಕ ಮಾರುಕಟ್ಟೆಯಲ್ಲಿ ಜಪಾನ್ ಹೂಡಿಕೆದಾರರ ಭರ್ಜರಿ ದಿಕ್ಕು ಬದಲಾವಣೆ

ಚೀನಾ ಆಮದುಗಳ ವಿರುದ್ಧ ವೆಂಬು ಕಾರ್ಯತಂತ್ರಗಳು

ಭಾರತೀಯ ಪವರ್ ಟೂಲ್ಸ್ ಮಾರುಕಟ್ಟೆಯಲ್ಲಿ ಸದ್ಯ ಚೀನಾ ಉತ್ಪನ್ನಗಳದ್ದೇ ಮೇಲುಗೈಯಾಗಿದೆ. ಇದನ್ನು ಮೆಟ್ಟಿನಿಲ್ಲಲು ಶ್ರೀಧರ್ ವೆಂಬು ಮೂರು ಪ್ರಮುಖ ಸೂತ್ರಗಳನ್ನು ಮುಂದಿಟ್ಟಿದ್ದಾರೆ:

  • ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ: ಭಾರತೀಯ ಗ್ರಾಹಕರು ಕೇವಲ ಕಡಿಮೆ ಬೆಲೆಯ ವಸ್ತುಗಳನ್ನು ಹುಡುಕುವುದಿಲ್ಲ, ಬದಲಿಗೆ ಬಾಳಿಕೆ ಬರುವ ಗುಣಮಟ್ಟವನ್ನು ಬಯಸುತ್ತಾರೆ. ಚೀನಾದ ಅಗ್ಗದ ಆಮದುಗಳಿಗೆ ತಕ್ಕ ಟಕ್ಕರ್ ನೀಡಬೇಕಾದರೆ ಜಾಗತಿಕ ಗುಣಮಟ್ಟದ ಮಾನದಂಡಗಳಿಗೆ ಸರಿಸಮಾನವಾದ ಅತ್ಯುತ್ತಮ ಫಿನಿಷಿಂಗ್, ವಿನ್ಯಾಸ ಮತ್ತು ದಕ್ಷತೆಯನ್ನು ಕರುವಿ ಉತ್ಪನ್ನಗಳಲ್ಲಿ ತರಲಾಗಿದೆ.
  • ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ: ಜೊಹೊ ಸಂಸ್ಥೆಯಂತೆಯೇ ‘ಕರುವಿ’ ಉತ್ಪಾದನಾ ಘಟಕವನ್ನೂ ಗ್ರಾಮೀಣ ಭಾಗದಲ್ಲೇ (ತೆನ್ಕಾಸಿ) ಸ್ಥಾಪಿಸಲಾಗುತ್ತಿದೆ. ಚೀನಾ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರ ಜೊತೆಗೆ, ಭಾರತದ ಗ್ರಾಮೀಣ ಯುವಕರಿಗೆ ಅತ್ಯಾಧುನಿಕ ಹಾರ್ಡ್‌ವೇರ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಉದ್ಯೋಗ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.
  • ಕೈಗೆಟುಕುವ ಬೆಲೆ: ಜಾಗತಿಕ ಗುಣಮಟ್ಟವನ್ನು ಹೊಂದಿದ್ದರೂ, ಈ ಉತ್ಪನ್ನಗಳನ್ನು ಮಧ್ಯಮ ವರ್ಗದ ಕಾರ್ಮಿಕರು ಮತ್ತು ಕೈಗಾರಿಕೆಗಳಿಗೆ ಸುಲಭವಾಗಿ ಸಿಗುವಂತಹ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ತರಲು ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ: ಭಾರತದ ಸೇವಾ ಕ್ಷೇತ್ರದಲ್ಲಿ ಹೊಸ ಹುರುಪು; ಮೇ ತಿಂಗಳ ಸರ್ವಿಸ್ ಸೆಕ್ಟರ್ ಪಿಎಂಐ 6 ತಿಂಗಳ ಗರಿಷ್ಠ ಮಟ್ಟಕ್ಕೆ

ವೆಂಬು ಈ ಕ್ಷೇತ್ರಕ್ಕೆ ಬಂದಿದ್ದು ಹೇಗೆ?

ಟ್ವಿಟರ್ (X) ನಲ್ಲಿ ಈ ಕುರಿತು ಬರೆದುಕೊಂಡಿದ್ದ ಶ್ರೀಧರ್ ವೆಂಬು, “ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಿಡಲ್ ಈಸ್ಟ್‌ನ ಪ್ರಮುಖ ಎಲೆಕ್ಟ್ರಾನಿಕ್ಸ್ ವಿತರಕರಾದ ಅಬ್ದುಲ್ ಗಫೂರ್ ಅವರು ನನ್ನನ್ನು ಭೇಟಿಯಾಗಿ, ಹ್ಯಾಂಡ್ ಟೂಲ್‌ಗಳ ಬಾಕ್ಸ್ ತೋರಿಸಿ ಇವುಗಳನ್ನು ಜೊಹೊ ತಯಾರಿಸಬೇಕು, ನಾನು ಜಾಗತಿಕವಾಗಿ ವಿತರಣೆ ಮಾಡುತ್ತೇನೆ ಎಂದಿದ್ದರು. ಆಗ ನಮಗೆ ಇದರ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ಇದು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುತ್ತದೆ ಎಂದು ಅವರು ಹೇಳಿದಾಗ ನಾನು ಈ ಸವಾಲನ್ನು ಸ್ವೀಕರಿಸಿದೆ,” ಎಂದು ಕರುವಿ ಹುಟ್ಟಿನ ಹಿಂದಿನ ಸ್ವಾರಸ್ಯಕರ ಕಥೆಯನ್ನು ಹಂಚಿಕೊಂಡಿದ್ದಾರೆ.

ಭಾರತವು ಸಾಫ್ಟ್‌ವೇರ್‌ನಲ್ಲಿ ಸಾಧಿಸಿರುವ ಯಶಸ್ಸನ್ನು ಈಗ ಹಾರ್ಡ್‌ವೇರ್ ಮತ್ತು ಮೆಕ್ಯಾನಿಕಲ್ ಉತ್ಪಾದನಾ ವಲಯದಲ್ಲೂ ಸಾಧಿಸಬಹುದು ಎಂಬುದಕ್ಕೆ ಶ್ರೀಧರ್ ವೆಂಬು ಅವರ ಈ ‘ಕರುವಿ’ ಪ್ರಮುಖ ಉದಾಹರಣೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ; ಭಾರತೀಯ ಪ್ರಜೆಯ ದುರಂತ ಸಾವು – Kannada News

ಕುವೈತ್, ಜೂನ್ 3: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ಮತ್ತಷ್ಟು ತಾರಕಕ್ಕೇರಿದೆ. ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ (Iran Attack) ನಡೆಸಿರುವ ಭೀಕರ ಡ್ರೋನ್ ದಾಳಿಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆಯು ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಕುವೈತ್ ವಿಮಾನ ನಿಲ್ದಾಣದ ಆವರಣದ ಮೇಲೆ ಏಕಕಾಲದಲ್ಲಿ ಹಲವು ಡ್ರೋನ್‌ಗಳು ಅಪ್ಪಳಿಸಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಇರಾನ್ ಸೇನೆಯು ಕುವೈತ್ ವಿಮಾನ ನಿಲ್ದಾಣದ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದೆ. ಡ್ರೋನ್‌ಗಳು ಅಪ್ಪಳಿಸುತ್ತಿದ್ದಂತೆ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು. ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು.

ಇದನ್ನೂ ಓದಿ: ಕುವೈತ್, ಬಹ್ರೇನ್‌ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ಇರಾನ್ ದಾಳಿ

ಈ ದಾಳಿಯ ಸಮಯದಲ್ಲಿ ವಿಮಾನ ನಿಲ್ದಾಣದ ತಾಂತ್ರಿಕ ಅಥವಾ ನಿರ್ವಹಣಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಪ್ರಜೆಯೊಬ್ಬರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ವಿವರ ಇನ್ನೂ ಬಹಿರಂಗವಾಗಿಲ್ಲ.

ಇತ್ತೀಚಿನ ದಿನಗಳಲ್ಲಿ ಇರಾನ್ ಮತ್ತು ಅಮೆರಿಕ ಬೆಂಬಲಿತ ಗಲ್ಫ್ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಹಾಗೂ ಸೇನಾ ಸಂಘರ್ಷ ತೀವ್ರಗೊಂಡಿದೆ. ಅಮೆರಿಕದ ಮಿಲಿಟರಿ ಬೇಸ್‌ಗಳು ಅಥವಾ ಪಾಶ್ಚಿಮಾತ್ಯ ದೇಶಗಳಿಗೆ ಸಹಕರಿಸುತ್ತಿರುವ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ಈ ದಾಳಿ ನಡೆಸಿದೆ ಎಂದು ರಕ್ಷಣಾ ವಲಯದ ತಜ್ಞರು ವಿಶ್ಲೇಷಿಸಿದ್ದಾರೆ. ಆದರೆ, ಕುವೈತ್‌ನಂತಹ ಶಾಂತಿಯುತ ರಾಷ್ಟ್ರದ ನಾಗರಿಕ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಖಂಡನೆಗೆ ಒಳಗಾಗಿದೆ.

ಇದನ್ನೂ ಓದಿ: ಇರಾನ್ ಮೇಲೆ ಮತ್ತೆ ಅಮೆರಿಕದ ‘ಆತ್ಮರಕ್ಷಣಾ ದಾಳಿ’: ಸೈನಿಕರು ಸುರಕ್ಷಿತ

ಈ ಘಟನೆಯ ಬೆನ್ನಲ್ಲೇ ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಲರ್ಟ್ ಆಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮೃತಪಟ್ಟ ಭಾರತೀಯ ಪ್ರಜೆಯ ಮೃತದೇಹವನ್ನು ಶೀಘ್ರವಾಗಿ ಭಾರತಕ್ಕೆ ತರಲು ರಾಯಭಾರ ಕಚೇರಿ ಅಧಿಕಾರಿಗಳು ಕುವೈತ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಕುವೈತ್‌ನಲ್ಲಿರುವ ಉಳಿದ ಭಾರತೀಯ ನಾಗರಿಕರು ಸುರಕ್ಷಿತ ಸ್ಥಳಗಳಲ್ಲೇ ಇರುವಂತೆ ಮತ್ತು ಸ್ಥಳೀಯ ಸರ್ಕಾರದ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 5:54 pm, Wed, 3 June 26

Source link