Category Archives: Blog

Your blog category

ಮುದ್ದಿನ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯಲು 15 ಲಕ್ಷ ರೂ. ಖರ್ಚು ಮಾಡಿದ ದಂಪತಿ! – Kannada News | Couple spends 15 lakh to take pet dog from Hyderabad to Australia

ಹೈದರಾಬಾದ್, ಜನವರಿ 30: ಹೈದರಾಬಾದ್‌ನ ದಂಪತಿ ತಮ್ಮ ಸಾಕು ನಾಯಿಯನ್ನು ಆಸ್ಟ್ರೇಲಿಯಾಕ್ಕೆ ಕರೆದುಕೊಂಡು ಹೋಗಲು 1.5 ಮಿಲಿಯನ್ (15 ಲಕ್ಷ ರೂ.) ಖರ್ಚು ಮಾಡಿದ್ದಾರೆ. ಆದರೂ ಆ ನಾಯಿ (Dog) ಆಸ್ಟ್ರೇಲಿಯಾಕ್ಕೆ ಬರುವ ಮೊದಲು 6 ತಿಂಗಳು ದುಬೈನಲ್ಲಿ ಇರಬೇಕಾಯಿತು. ಆ ದಂಪತಿಯ ಕುಟುಂಬಸ್ಥರು ಆ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯುವ ಬದಲು ಅಲ್ಲಿಯೇ ಹೊಸ ನಾಯಿಯನ್ನು ಖರೀದಿಸಲು ಸೂಚಿಸಿದರು. ಆದರೆ, ಅದಕ್ಕೆ ಅವರು ಒಪ್ಪಲಿಲ್ಲ.

ಆ ದಂಪತಿ ತಾವು ಸಾಕಿದ ನಾಯಿಯನ್ನೇ ಆಸ್ಟ್ರೇಲಿಯಾಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು. ಅವರು ತಮ್ಮ ಸಾಕು ನಾಯಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಲಕ್ಷಾಂತರ ರೂ. ಬೇಕಾದರೂ ಖರ್ಚು ಮಾಡಲು ತಯಾರಿದ್ದರು. ಆ ನಾಯಿ ತಮ್ಮ ಮಗು, ಅದನ್ನು ಬಿಟ್ಟು ಹೋಗಲು ಸಾಧ್ಯವೇ ಇಲ್ಲ ಎಂದು ಅವರು ಹಠ ಹಿಡಿದರು.

ಇದನ್ನೂ ಓದಿ: ಹಿಮಪಾತದಿಂದ ಯಜಮಾನ ಸತ್ತರೂ 3 ದಿನ ಹೆಣದ ಬಳಿಯೇ ನಿಂತು ಕಾದ ಸಾಕುನಾಯಿ!

ಹೀಗಾಗಿ, ಹೈದರಾಬಾದ್ ಬಿಟ್ಟು ಆಸ್ಟ್ರೇಲಿಯಾಕ್ಕೆ ಹೋಗಲು ನಿರ್ಧರಿಸಿದಾಗ ಅವರು ತಮ್ಮ ನಾಯಿ ‘ಸ್ಕೈ’ ಅನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು. ಆದರೆ ಆ ನಾಯಿಯನ್ನು ನೇರವಾಗಿ ಆಸ್ಟ್ರೇಲಿಯಾಕ್ಕೆ ಕರೆದೊಯ್ಯಲು ಸಾಧ್ಯವಿಲ್ಲ ಎಂದು ತಿಳಿದು ಅವರು ತುಂಬಾ ದುಃಖಿತರಾಗಿದ್ದರು. ಇದಲ್ಲದೆ, ತಮ್ಮ ನಾಯಿ 6 ತಿಂಗಳ ಕಾಲ ರೇಬೀಸ್ ಮುಕ್ತ ದೇಶದಲ್ಲಿ ಇರಬೇಕಾಗುತ್ತದೆ ಎಂಬ ಅಂಶದ ಬಗ್ಗೆ ದಂಪತಿ ಇನ್ನಷ್ಟು ಚಿಂತಿತರಾಗಿದ್ದರು. ಆ ನಾಯಿ 6 ತಿಂಗಳು ದುಬೈನಲ್ಲಿ ಇರಬೇಕಾಯಿತು. ಆ ದಂಪತಿ ಕೂಡ ಆ ನಾಯಿಗೆ ಸಹಾಯ ಮಾಡಲು ಒಂದು ತಿಂಗಳು ದುಬೈನಲ್ಲಿಯೇ ಇದ್ದರು. ಅದಾದ ನಂತರ ಅವರು ಆಸ್ಟ್ರೇಲಿಯಾಕ್ಕೆ ಮರಳಿದರು.

ಉಳಿದ 5 ತಿಂಗಳು ಅವರು ಫೋನ್ ಮತ್ತು ವೀಡಿಯೊ ಕರೆಗಳ ಮೂಲಕ ಆ ನಾಯಿಯನ್ನು ಪರಿಶೀಲಿಸುತ್ತಲೇ ಇದ್ದರು. “ಸ್ಕೈ ನಮ್ಮ ಸಾಕುಪ್ರಾಣಿ ಮಾತ್ರವಲ್ಲ, ಅದು ನಮ್ಮ ಮಗುವಿನಂತೆ” ಎಂದು ಅವರು ಹೇಳಿದ್ದಾರೆ. ಆರು ತಿಂಗಳ ನಂತರ ಸ್ಕೈ ಆಸ್ಟ್ರೇಲಿಯಾಕ್ಕೆ ಹೋದಾಗ ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ನಾಯಿಯ ಹೈದರಾಬಾದ್ ನಿಂದ ಆಸ್ಟ್ರೇಲಿಯಾ ಪ್ರಯಾಣಕ್ಕೆ ವಿಮಾನ ಪ್ರಯಾಣ ಸೇರಿದಂತೆ ಸುಮಾರು 1.5 ಮಿಲಿಯನ್ ರೂ. ಖರ್ಚಾಗಿದೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಟ್ಟಿಗೆ ಏಳು ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಸಿದ ಸರ್ಕಾರ – Kannada News | Tamil Nadu government announce state film awards from 2026 to 2021

ರಾಜ್ಯ ಸರ್ಕಾರಗಳು, ಆಯಾ ರಾಜ್ಯದ ಚಿತ್ರರಂಗಕ್ಕೆ (Movie Industry) ಉತ್ತೇಜನ ನೀಡಲು ಆಯಾ ವರ್ಷದ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ಕೊಡುತ್ತಾ ಬಂದಿವೆ. ಆದರೆ ಬಹಳ ಕಡಿಮೆ ಸರ್ಕಾರಗಳು ಈ ಪ್ರಶಸ್ತಿಗಳನ್ನು ಚಾಚು ತಪ್ಪದೆ ಆಯಾ ವರ್ಷವೇ ಕೊಡುತ್ತವೆ, ಕರ್ನಾಟಕದಲ್ಲಿಯೂ ಸಹ ಸರ್ಕಾರಗಳು ಈ ವಿಷಯದಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಲೇ ಬಂದಿದೆ. ಇದೀಗ ನೆರೆಯ ತಮಿಳುನಾಡಿನಲ್ಲಿ ಒಂದೇ ಬಾರಿಗೆ ಏಳು ವರ್ಷಗಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಒಟ್ಟಿಗೆ ಘೋಷಿಸಲಾಗಿದೆ.

ತಮಿಳುನಾಡಿನಲ್ಲಿ 2016 ರಿಂದಲೂ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ ಬಾಕಿ ಉಳಿದಿತ್ತು. ಇದೀಗ ಒಂದೇ ಬಾರಿಗೆ 2016 ರಿಂದ 2021ರ ವರೆಗಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ತಮಿಳುನಾಡು ಸರ್ಕಾರ ಘೋಷಣೆ ಮಾಡಿದೆ. ಕೆಲವೇ ದಿನಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ಘೋಷಣೆ ಆಗಲಿದ್ದು, ಇದೇ ಕಾರಣಕ್ಕೆ ಇದೀಗ ತರಾತುರಿಯಲ್ಲಿ ಈ ಪ್ರಶಸ್ತಿಗಳನ್ನು ಸರ್ಕಾರ ಘೋಷಿಸಿದಂತಿದೆ.

2016ರ ಸಾಲಿನ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ‘ಮಾನಗರಂ’, ‘ಪುರಿಯಾತ್ತ ಪುತ್ತಿರ್’, ‘ಮಾವೀರನ್ ಕಿಟ್ಟು’ ಸಿನಿಮಾಗಳು ಅನುಕ್ರಮವಾಗಿ ಪಡೆದುಕೊಂಡಿವೆ. ಅದೇ ವರ್ಷದ ಅತ್ಯುತ್ತಮ ನಟ ಪ್ರಶಸ್ತಿ ವಿಜಯ್ ಸೇತುಪತಿ, ಅತ್ಯುತ್ತಮ ನಟಿ ಕೀರ್ತಿ ಸುರೇಶ್ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲೋಕೇಶ್ ಕನಗರಾಜ್ ಅವರಿಗೆ ಧಕ್ಕಿದೆ.

ಇದನ್ನೂ ಓದಿ:ಕಾಂತಾರ, ಕೆಜಿಎಫ್ ಸಿನಿಮಾಗಳಿಂದ ಮಾತ್ರ ಚಿತ್ರರಂಗ ಬೆಳೆಯಲ್ಲ: ಪ್ರಿಯಾ ಹಾಸನ್

2017ರ ಅತ್ಯುತ್ತಮ ಮೂರು ಸಿನಿಮಾಗಳು ಕ್ರಮವಾಗಿ ‘ಅರಂ’, ‘ವಿಕ್ರಂ ವೇದ’ ಮತ್ತು ‘ತರಮಣಿ’. ಅತ್ಯುತ್ತಮ ನಟ ಕಾರ್ತಿ, ಅತ್ಯುತ್ತಮ ನಟಿ ನಯನತಾರಾ. ಅತ್ಯುತ್ತಮ ನಿರ್ದೇಶಕ ಪುಷ್ಕರ್-ಗಾಯತ್ರಿ (ವಿಕ್ರಂ-ವೇದ). 2018ರ ಅತ್ಯುತ್ತಮ ಸಿನಿಮಾಗಳು ‘ಪರಿಯೇರುಮ್ ಪೆರುಮಾಳ್’, ‘ಕಡೈಕುಟ್ಟಿ ಸಿಂಗಂ’, ‘96’. ಅತ್ಯುತ್ತಮ ನಟ ಧನುಶ್ (ವಡ ಚೆನ್ನೈ), ಅತ್ಯುತ್ತಮ ನಟಿ ಜ್ಯೋತಿಕ (ಚಕ್ಕ ಚಿವಂತಿ ವಾನಂ). ಅತ್ಯುತ್ತಮ ನಿರ್ದೇಶಕ ಮಾರಿ ಸೆಲ್ವರಾಜ್ (ಪರಿಯೇರುಮ್ ಪೆರುಮಾಳ್).

2019ರ ಅತ್ಯುತ್ತಮ ಸಿನಿಮಾ ‘ಅಸುರನ್’, ‘ಒತ್ತ ಸೆರಪ್ಪು ಸೈಜ್ 7’, ‘ಕೋಮಲಿ’. ಅತ್ಯುತ್ತಮ ನಟ ಕಾರ್ತಿ (ಕೈದಿ), ಅತ್ಯುತ್ತಮ ನಟಿ ಮಂಜು ವಾರಿಯರ್ (ಅಸುರನ್). ಅತ್ಯುತ್ತಮ ನಿರ್ದೇಶಕ ಆರ್ ಪಾರ್ತಿಬನ್ (ಒತ್ತ ಸೆರಪ್ಪು ಸೈಜ್ 7) 2020ರ ಅತ್ಯುತ್ತಮ ಸಿನಿಮಾಗಳು ಕ್ರಮವಾಗಿ, ‘ಕೂಳಂಗಳ್’, ‘ಸೂರರೈ ಪೋಟ್ರು’, ‘ಸಂಡಕಾರಿ’. ಅತ್ಯುತ್ತಮ ನಟ ಸೂರ್ಯ (ಸೂರರೈ ಪೊಟ್ರು), ಅಪರ್ಣಾ ಬಾಲಮುರಳಿ (ಸೂರರೈ ಪೊಟ್ರು). ಅತ್ಯುತ್ತಮ ನಿರ್ದೇಶಕ ಸುಧಾ ಕೊಂಗರ (ಸೂರರೈ ಪೊಟ್ರು).

2021ರ ಸಾಲಿನ ಅತ್ಯುತ್ತಮ ಸಿನಿಮಾಗಳು ‘ಜೈ ಭೀಮ್’, ‘ಕಡೈಸಿ ವ್ಯವಸಾಯಿ’, ‘ಕರ್ಣನ್’. ಅತ್ಯುತ್ತಮ ನಟ ಆರ್ಯ (ಸರ್ಪಟ್ಟ ಪರಂಬರೈ), ಅತ್ಯುತ್ತಮ ನಟಿ ಲಿಜೊಮಲ್ ಜೋಸ್ (ಜೈ ಭೀಮ್). ಅತ್ಯುತ್ತಮ ನಿರ್ದೇಶಕ ಥಾ ಸೆ ಜ್ಞಾನವೇಲ್ (ಜೈ ಭೀಮ್).

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:43 pm, Fri, 30 January 26

Source link

ರಾಜ್‌ಕೋಟ್ ಬಳಿ ಸೇತುವೆಯಿಂದ ಬಿದ್ದು ಹೊತ್ತಿ ಉರಿದ ಕಾರು; ಮೂವರು ಸಾವು – Kannada News | 3 people killed after car catches fire and falling off bridge in Rajkot

ರಾಜ್‌ಕೋಟ್, ಜನವರಿ 30: ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಕಾರು ಸೇತುವೆಯಿಂದ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಮೂವರು ಸುಟ್ಟು ಕರಕಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಗೊಂಡಾಲ್-ಅಟ್ಕೋಟ್ ಹೆದ್ದಾರಿಯಲ್ಲಿ ಬೆಳಿಗ್ಗೆ 5.30ರ ಸುಮಾರಿಗೆ ಕಾರು ಛೋಟಾ ಉದೇಪುರದಿಂದ ಗೊಂಡಾಲ್ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ (Accident) ಸಂಭವಿಸಿದೆ.

ಕಾರು ಸಣ್ಣ ಹೊಳೆಯೊಂದರ ಮೇಲಿನ 8 ಅಡಿ ಎತ್ತರದ ಸೇತುವೆಯ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದು, ಕೆಳಗೆ ಉರುಳಿತು. ಕಾರು ಬಿದ್ದ ತಕ್ಷಣ ಅದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದವರು ಒಳಗೆ ಸಿಲುಕಿಕೊಂಡರು. ಇದರಿಂದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Video: ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ

ಮೃತರ ಸುಟ್ಟ ಶವಗಳನ್ನು ಹೊರತೆಗೆದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:54 pm, Fri, 30 January 26

Source link

ಯಾರು ಈ CJ ರಾಯ್?ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಜೀವನದಲ್ಲಿ ಕಾನ್ಫಿಡೆಂಟ್ ಕಳೆದುಕೊಂಡಿದ್ಯಾಕೆ? – Kannada News | Confident Group Chairman CJ Roy dies In Bengaluru, Who Is He? Why Commits Suicide?

ಬೆಂಗಳೂರು, (ಜನವರಿ 30): ಪ್ರಸಿದ್ದ ರಿಯಲ್ ಎಸ್ಟೇಟ್ ಕಂಪನಿ ಕಾನ್ಪಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ.ರಾಯ್ (Confident Group Chairman CJ Roy) ಇಂದು (ಜನವರಿ 30) ಬೆಂಗಳೂರಿನ ಹೊಸೂರು ರಸ್ತೆಯ ಲ್ಯಾಂಗ್ ಫರ್ಡ್ ಟೌನ್ ನಲ್ಲಿರುವ ಕಂಪನಿಯ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ರಾಯ್ ಮನೆ, ಕಚೇರಿಗಳ ಮೇಲೆ ಐಟಿ ದಾಳಿಯಾಗಿದ್ದವು. ಅದರಂತೆ ಇಂದು ಸಹ ಕಂಪನಿಯ ಮೇಲೆ ಐಟಿ ದಾಳಿ ನಡೆದಿದ್ದು, ಇದರಿಂದ ಮನನೊಂದು ತಮ್ಮ ಪಿಸ್ತೂಲ್​​ನಿಂದಲೇ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.  ಸಿಜೆ ರಾಯ್ ಅವರ ಈ ಸಾವು ಉದ್ಯಮ ವಲಯದಲ್ಲಿ ಆಘಾತ ಮುಡಿಸಿದೆ.

ಕೇರಳ ರಾಜ್ಯದಿಂದ ವಿದೇಶದವರೆಗೆ

ಮೂಲತಃ ಕೇರಳದವರಾಗಿದ್ದರೂ ಸಹ ಬೆಂಗಳೂರಿನಲ್ಲೇ ಬೆಳೆದಿದ್ದರು.  ಕೊಚ್ಚಿ ಕ್ರೈಸ್ತ ಧರ್ಮಕ್ಕೆ ಸೇರಿದರಾಗಿರುವ ರಾಯ್, ಫ್ರಾನ್ಸ್, ಸ್ವಿಜರ್ಲ್ಯಾಂಡ್ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ವ್ಯಾಸಂಗ ಮಾಡಿದ್ದರು.   ರಾಯ್ ಅವರ ಪತ್ನಿ ಹೆಸರು ಲಿನಿ ರಾಯ್, ಮಗ ರೋಹಿತ್, ಮಗಳು ರಿಯಾ.  2006ರವರೆಗೆ ಹ್ಯಾವ್ಲೆಟ್ ಪ್ಯಾಕರ್ಡ್ ಕಂಪನಿಯಲ್ಲಿ ಕೆಲಸ ಮಾಡಿದ್ದು. ನಂತರ ಕಾನ್ಫಿಡೆಂಟ್ ಗ್ರೂಪ್​​ನ ರಿಯಲ್ ಎಸ್ಟೇಟ್ ಸಮೂಹವನ್ನು ವಿಸ್ತರಿಸಲು ಶುರು ಮಾಡಿದ್ದರು. ರಾಯ್ ಕಾನ್ಷಿಡೆಂಟ್ ಗ್ರೂಪ್ನ ಚೇರ್ಮನ್ ಆಗಿದ್ದು, ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ಹಲವು ಕ್ಷೇತ್ರಗಳಲ್ಲಿ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಿದ್ದಲ್ಲದೇ ಗಲ್ಫ್ ಮತ್ತು ಕೇರಳ, ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದರು.

ಇದನ್ನೂ ಓದಿ: ಐಟಿ ದಾಳಿ ವೇಳೆಯೇ ಶೂಟ್​ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್​ ಆತ್ಮಹತ್ಯೆ

ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ

ಕಾನ್ಪಿಡೆಂಟ್ ಗ್ರೂಪ್ ರಿಯಲ್ ಎಸ್ಟೇಟ್ ಲೇಔಟ್, ಹೋಟೇಲ್, ರೆಸಾರ್ಟ್, ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಿ.ಜೆ.ರಾಯ್ ಬಂಡವಾಳ ಹೂಡಿಕೆ ಮಾಡಿ ಯಶಸ್ವಿಯಾಗಿ ಉದ್ಯಮವನ್ನು ನಡೆಸುತ್ತ ಸಿ.ಜೆ.ರಾಯ್ ಸಾವಿರಾರು ಕೋಟಿ ಒಡೆಯರಾಗಿದ್ದರು. ಜೊತೆಗೆ ಬಡವರಿಗೆ ದಾನ- ಧರ್ಮ ಸಹ ಮಾಡುತ್ತಿದ್ದರು. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ 201 ವಿದ್ಯಾರ್ಥಿಗಳಿಗೆ ಎಜುಕೇಷನ್ ಸ್ಕಾಲರ್ ಶಿಪ್ ನೀಡಿದ್ದರು.

ಹತ್ತಾರು ದೊಡ್ಡ ದೊಡ್ಡ ಐಷರಾಮಿ ಕಾರುಗಳು

ರಾಯ್ ಅವರು ಕಾರುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ, ದುಬೈ ಮತ್ತು ಭಾರತದಲ್ಲಿ ದುಬಾರಿ ಐಷಾರಾಮಿ ಮತ್ತು ಸ್ಫೋರ್​ಟ್ಸ್​​​ ಕಾರುಗಳ ಕಲೆಕ್ಷನ್ ಇವರ ಬಳಿ ಇವೆ. ಬರೋಬ್ಬರಿ 12 ರೋಲ್ಸ್ ರಾಯ್ಸ್ ಕಾರ್ ಗಳನ್ನು ಹೊಂದಿದ್ದಾರೆ. ಇನ್ನು 10 ಕೋಟಿ ರೂಪಾಯಿ ಬೆಲೆಬಾಳುವ ಫ್ಯಾಂಟೋನ್-8 ಕಾರನ್ನು ಸಹ ಖರೀದಿಸಿದ್ದರು. ಅಲ್ಲದೇ ಕನ್ನಡ ಬಿಗ್ ಬಾಸ್ ವಿನ್ನರ್ ಗಳಿಗೆ 50 ಲಕ್ಷ ರೂಪಾಯಿ ಹಣವನ್ನು ಸಿ.ಜೆ.ರಾಯ್ ಪ್ರಾಯೋಕತ್ವ ಮಾಡುತ್ತಿದ್ದರು. ಇಂತಹ ಲಕ್ಷುರಿ, ಐಷಾರಾಮಿ ಜೀವನ ನಡೆಸುತ್ತಿದ್ದ ಉದ್ಯಮಿ ಸಿ.ಜೆ.ರಾಯ್ ಪದೇ ಪದೇ ಐಟಿ ದಾಳಿಯಿಂದ ನಲುಗಿ ಹೋಗಿದ್ದರು. ಇಂದು ಮತ್ತೆ ಐಟಿ ದಾಳಿ ನಡದದಿದ್ದರಿಂದ ಮನನೊಂದು ಈ ರೀತಿ ಮಾಡಿಕೊಂಡಿದ್ದಾರೆ.

43 ಲಕ್ಷ ಚದರ್ ಅಡಿಗಳಷ್ಟು ವ್ಯವಹಾರ

.ಇನ್ನು ಇವರು ರಿಯಲ್ ಎಸ್ಟೇಟ್​​ನಲ್ಲಿ ಬರೋಬ್ಬರಿ 43 ಲಕ್ಷ ಚದರ್ ಅಡಿಗಳಷ್ಟು ವ್ಯವಹಾರ ಮಾಡಿದ್ದಾರೆ. ಅಲ್ಲದೇ 150ಕ್ಕೂ ಹೆಚ್ಚು ದೊಡ್ಡ ದೊಡ್ಡ ಪ್ರಾಜೆಕ್ಟ್​ಗಳನ್ನು ಸಹ ಮಾಡಿದ್ದಾರೆ. ಆದ್ರೆ, ಇನ್ನೊಂದು ಗಮನಿಸಬೇಕಾದ ಅಂಶ ಇಲ್ಲಿಯವರೆಗೂ ಇವರ ನೆಟ್ವರ್ಕ್​ ಎಷ್ಟಿದೆ? ಎಲ್ಲಿಯವರೆಗೂ ಇದೆ ಎನ್ನುವುದನ್ನು ಎಲ್ಲೂ ತೋರಿಸಿಕೊಂಡಿಲ್ಲ. ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇವರ ನೆಟ್ವರ್ಕ್ ಇದೆ. ಆದರೂ ಇದನ್ನು ಎಲ್ಲೂ ಬಹಿರಂಗಪಡಿಸಿಕೊಂಡಿಲ್ಲ. ಹೀಗೆ ದೇಶ ವಿದೇಶಗಳಲ್ಲೂ ಚಿರಪರಿಚಿತರಾಗಿದ್ದು, ತಮ್ಮ ಕಾನ್ಷಿಡೆಂಟ್ ಗ್ರೂಪ್​​ಗೆ ಯಾರನ್ನೂ ಬ್ರ್ಯಾಂಡ್ ಅಂಬಾಸಿಡರ್, ಅಥವಾ ದೊಡ್ಡ ದೊಡ್ಡ ಮಾಡೆಲ್, ಸೆಲೆಬ್ರಿಟಿಗಳಿಂದ ಜಾಹಿರಾತು ಕೊಡಿಸಿಲ್ಲ. ಬದಲಿಗೆ ರಾಯ್ ಅವರೇ ತಮ್ಮ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಏನೇ ಜಾಹಿರಾತು ನೀಡಬೇಕಿದ್ದರೂ ತಾವೇ ಅಂಬಾಸಿಡರ್ ಆಗಿದ್ದರು.

ಯುವಕರಿಗೆ ಸ್ಫೂರ್ತಿಯಾಗಿದ್ದ ಒಡೆಯ

ದೊಡ್ಡ ಕೋಟ್ಯಾಧೀಶರಾಗಿದ್ದರೂ ಸಹ ವಿಡಿಯೋ ಮೂಲಕ ಯುವ ಜನತೆಗೆ ಹೇಗೆ ಬ್ಯುಸಿನೆಸ್ ಮಾಡಬೇಕು? ಹೇಗೆ ಸಂಪಾದನೆ ಮಾಡಬೇಕು? ಎನ್ನುವುದನ್ನು ತಿಳಿಸುತ್ತಿದ್ದರು. ಜೀವನದಲ್ಲಿ ಸೋತು ಜಿಗುಪ್ಸೆಗೊಂಡವರಿಗೂ ಸಹ ತಮ್ಮ ಮೋಟಿವೇಶನ್ ಮಾತುಗಳೊಂದಿಗೆ ಮನಪರಿವರ್ತನೆ ಮಾಡುತ್ತಿದ್ದರು

ಹೀಗೆ ಕೋಟ್ಯಾಧೀಶ ಒಡೆಯನಾಗಿರುವ ವ್ಯಕ್ತಿ ಐಟಿ ಅಧಿಕಾರಿಗಳ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂದರೆ ಯಾವ ಮಟ್ಟಕ್ಕೆ ಅವರಿಗೆ ಸ್ಟೆಸ್ ಅಥವಾ ಒತ್ತಡ ಇತ್ತು ಎನ್ನುವ ವಿಚಾರ ಪ್ರಶ್ನೆಯಾಗಿ ಉಳಿದಿದೆ. ಕಾನ್ಫಿಡೆಂಟ್​​ ಗ್ರೂಪ್​ ಒಡೆಯ ಜೀವನದ ಕಾನ್ಫಿಡೆಂಟ್ ಕಳೆದುಕೊಂಡಿದ್ಯಾಕೆ ಎನ್ನುವುದೇ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:12 pm, Fri, 30 January 26

Source link

ಭಾರೀ ವಿರೋಧ ಬೆನ್ನಲ್ಲೇ ಎಚ್ಚೆತ್ತ ಸಚಿವರು: ಸರ್ಕಾರಿ ಬಸ್​ಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ತೆರವಿಗೆ ಸೂಚನೆ – Kannada News | Tobacco Advertisements ongovernment Buses and Stations: Minister RamalingaReddy Orders Removal

ತಂಬಾಕು ಉತ್ಪನ್ನಗಳ ಜಾಹೀರಾತುImage Credit source: newindianexpress.com

ಬೆಂಗಳೂರು, ಜನವರಿ 30: ಸರ್ಕಾರಿ ಬಸ್​ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು (Tobacco Advertisements) ಮುದ್ರಿಸುವ ಮೂಲಕ ಸಾರಿಗೆ ಸಂಸ್ಥೆಗಳು ಆದಾಯದ ವ್ಯಾಮೋಹಕ್ಕೆ ಒಳಗಾಗಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಪ್ರತಿಯೊಂದು ಸರ್ಕಾರಿ ಬಸ್​​ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳು ರಾರಾಜಿಸುತ್ತಿದ್ದವು. ಈ ಬಗ್ಗೆ ಕನ್ನಡ ಸಂಘಟನೆಗಳು ಸೇರಿದಂತೆ ಜನರು ಕೂಡ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಇದೀಗ ಸರ್ಕಾರಿ ಬಸ್​ಗಳ ಮೇಲಿನ ಜಾಹೀರಾತು ತೆಗೆಯಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ನಾಲ್ಕು ನಿಗಮಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಆದಾಯ ಹೆಚ್ಚಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಸಾರಿಗೆ ಬಸ್‌ಗಳ ಮೇಲೂ ಜಾಹೀರಾತುಗಳನ್ನು ಅಳವಡಿಸಲಾಗಿತ್ತು. ಅವುಗಳಲ್ಲಿ ಕೆಲವು ತಂಬಾಕು ಉತ್ಪನ್ನಗಳಿಗೆ ಸಂಬಂಧಿಸಿದ ಜಾಹೀರಾತುಗಳಾಗಿದ್ದವು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪರಿಣಾಮವಾಗಿ, ಹಲವು ಕಡೆಗಳಲ್ಲಿ ಬಸ್‌ಗಳ ಮೇಲಿದ್ದ ಜಾಹೀರಾತುಗಳನ್ನು ಜನರು ಕಿತ್ತು ಹಾಕಿದ್ದ ಘಟನೆಗಳು ನಡೆದಿದ್ದವು.

ಟಿವಿ9 ವರದಿ ಬೆನ್ನಲ್ಲೇ ಅಧಿಕಾರಿಗಳಿಗೆ ರಾಮಲಿಂಗಾರೆಡ್ಡಿ ಸೂಚನೆ

ಈ ಬಗ್ಗೆ ಟಿವಿ9 ಕೂಡ ಸುದ್ದಿ ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 4 ನಿಗಮದ ಎಂಡಿಗಳಿಗೆ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರಚಾರ ಮಾಡದಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಸಾರಿಗೆ ನಿಗಮದ ಬಸ್​ಗಳಲ್ಲಿ ಹಾಗೂ ಬಸ್​ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ಕೂಡಲೇ ತೆಗೆದುಹಾಕುವಂತೆ ಸೂಚಿಸಿದ್ದಾರೆ.

ಆದೇಶದಲ್ಲೇನಿದೆ?

ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ ಸಂಸ್ಥೆಯ ಬಸ್​​ಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಯಾವುದೇ ಜಾಹೀರಾತುಗಳನ್ನು ಇನ್ನು ಮುಂದೆ ಪ್ರಚಾರ ಮಾಡದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಸಾರಿಗೆ ಸಂಸ್ಥೆಗೂ ಆದಾಯದ ವ್ಯಾಮೋಹ: ಕೆಟ್ಟಿತು ಸರ್ಕಾರಿ ಬಸ್​​ಗಳ ಅಂದ

ಈಗಾಗಲೇ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವಂತಹ ಜಾಹೀರಾತುಗಳನ್ನು ಬಸ್​​​ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಅಳವಡಿಸಿದ್ದರೆ ಅದನ್ನು ತೆಗೆಯಲು ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ, ಆ ನಿಗದಿತ ಸಮಯದೊಳಗೆ ಸದರಿ ಜಾಹೀರಾತುಗಳನ್ನು ತೆಗೆದು ಹಾಕುವಂತೆ ಸಂಬಂಧಪಟ್ಟವರಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡುವಂತೆ ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿನಿಮಾ, ಟಿವಿ ಕ್ಷೇತ್ರದೊಟ್ಟಿಗೆ ಜೆಸಿ ರಾಯ್​ ಅವರಿಗಿದ್ದ ಬಂಧ ಎಂಥದ್ದು? – Kannada News | JC Roy has close connection with Tv and Movie industry

ಕಾನ್ಫಿಡೆಂಟ್ ಗ್ರೂಪ್​​ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕ ಜೆಸಿ ರಾಯ್ (JC Roy) ಇಂದು (ಜನವರಿ 30) ನಿಧನ ಹೊಂದಿದ್ದಾರೆ. ರಾಯ್ ಅವರು, ಪದೇ ಪದೇ ಆಗುತ್ತಿದ್ದ ಐಟಿ ದಾಳಿಗಳಿಂದ ಬೇಸತ್ತು ಅಧಿಕಾರಿಗಳ ಎದುರೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಜೆಸಿ ರಾಯ್ ಅವರಿಗೆ ಸಿನಿಮಾ ಮತ್ತು ಟಿವಿ ಜಗತ್ತಿನೊಂದಿಗೆ ಹತ್ತಿರದ ಬಂಧ ಇತ್ತು.

ರಾಯ್ ಅವರು ಉದ್ಯಮಿ ಮಾತ್ರವೇ ಅಲ್ಲದೆ ಸಿನಿಮಾ ನಿರ್ಮಾಪಕರೂ ಆಗಿದ್ದರು. ಮಲಯಾಳಂನಲ್ಲಿ ಮೋಹನ್​ನಾಲ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಕ್ಯಾಸನೋವ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ ರಾಯ್ ಅವರು 12 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರಂತೆ.

ಇನ್ನು ಟಿವಿ ಜಗತ್ತಿನೊಂದಿಗೆ ಅವರದ್ದು ಹತ್ತಿರದ ಬಂಧ. ಹಲವಾರು ರಿಯಾಲಿಟಿ ಶೋಗಳಿಗೆ ಅವರು ಪ್ರಮುಖ ಸ್ಪಾನ್ಸರ್ ಆಗಿದ್ದರು. ಬಿಗ್​​ಬಾಸ್ ಕನ್ನಡ 11ನೇ ಸೀಸನ್​​ಗೆ ಮೊದಲ ಬಹುಮಾನವಾದ 50 ಲಕ್ಷ ರೂಪಾಯಿಗಳನ್ನು ರಾಯ್ ಅವರೇ ನೀಡಿದ್ದರು. ಅದಕ್ಕೂ ಮುಂಚೆ ಕಾನ್ಫಿಡೆಂಟ್ ಸ್ಟಾರ್ ಸಿಂಗರ್ ಸಿಂಗಿಂಗ್ ರಿಯಾಲಿಟಿ ಶೋಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಿದ್ದರು. ಮಲಯಾಳಂ ಬಿಗ್​​ಬಾಸ್​​ಗೂ ಸಹ ಸ್ಪಾನ್ಸರ್ ಆಗಿದ್ದರು ರಾಯ್. ದಕ್ಷಿಣ ಭಾರತದ ಸಿನಿಮಾಗಳಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾದ ಸೈಮಾಕ್ಕೆ ಎಂಟು ವರ್ಷಗಳ ಕಾಲ ಮುಖ್ಯ ಸ್ಪಾನ್ಸರ್ ಆಗಿದ್ದಿದ್ದು ರಾಯ್ ಅವರ ಕಾನ್ಫಿಡೆಂಟ್ ಗ್ರೂಪ್.

ಇದನ್ನೂ ಓದಿ:ಸಾವಿರಾರು ಕೋಟಿ ಒಡೆಯ ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಜೀವನದಲ್ಲಿ ಕಾನ್ಫಿಡೆಂಟ್ ಕಳೆದುಕೊಂಡಿದ್ಯಾಕೆ?

ರಾಯ್ ಅವರು ರಿಯಾಲಿಟಿ ಶೋಗಳಿಗಷ್ಟೆ ಸ್ಪಾನ್ಸರ್ ಮಾಡುತ್ತಿದ್ದಿದ್ದಕ್ಕೂ ಕಾರಣವಿತ್ತು. ಅವರೇ ಹೇಳಿಕೊಂಡಿರುವಂತೆ, ‘ಧಾರಾವಾಹಿಗೆ ನಾನು ಪ್ರಾಯೋಜಕತ್ವ ನೀಡುತ್ತಿರಲಿಲ್ಲ, ಧಾರಾವಾಹಿಗಳು ಒಳ್ಳೆಯವೇ ಆದರೆ ನಮ್ಮದು ರಿಯಾಲಿಟಿ (ರಿಯಲ್ ಎಸ್ಟೇಟ್) ಕಂಪೆನಿ, ನನ್ನದು ರಿಯಲ್ ಕಂಪೆನಿ ಹಾಗಾಗಿ ನಾನು ರಿಯಾಲಿಟಿ ಶೋಗಳಿಗೆ ಸ್ಪಾನ್ಸರ್ ಮಾಡುತ್ತಿದ್ದೆ. ಅದರಿಂದ ನಿಜವಾದ ಪ್ರತಿಭೆ ಇದ್ದವರಿಗೆ ಸಹಾಯ ಮಾಡಿದ ತೃಪ್ತಿ ನನಗೆ ಸಿಗುತ್ತಿತ್ತು, ಪ್ರತಿಭಾವಂತರಿಗೆ ಬೆಂಬಲ ನೀಡುವುದು ನನ್ನ ಉದ್ದೇಶವಾಗಿತ್ತು’ ಎಂದಿದ್ದರು ರಾಯ್.

‘ಹಲವಾರು ರಿಯಾಲಿಟಿ ಶೋಗಳಿಗೆ ಸ್ಪಾನ್ಸರ್ ನೀಡಿದ್ದೇನೆ. ಆದರೆ ಒಮ್ಮೆ ಕೂಡ ಬಹುಮಾನದ ಮೊತ್ತ ನೀಡುವುದನ್ನು ನಾನು ತಡ ಮಾಡಿಲ್ಲ. ಹೇಳಿದ ಹಣವನ್ನು, ಹೇಳಿದ ದಿನದಂದು ನೀಡಿದ್ದೇನೆ. ಒಂದೇ ಒಂದು ಕಪ್ಪು ಚುಕ್ಕೆಯೂ ನನ್ನ ಮೇಲೆ ಇಲ್ಲ’ ಎಂದು ರಾಯ್ ಹೇಳಿಕೊಂಡಿದ್ದರು. ಸಿನಿಮಾಗಳ ಬಗ್ಗೆ, ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ರಾಯ್ ಅವರು ಮ್ಯಾಜಿಕ್ ಟ್ರಿಕ್​​ಗಳನ್ನು ಸಹ ಮಾಡುತ್ತಿದ್ದರಂತೆ. ಕೆಲವು ಶೋಗಳನ್ನು ಸಹ ಬಹಳ ಮುಂಚೆ ನೀಡಿದ್ದರಂತೆ. ಆದರೆ ಮದುವೆಯ ಬಳಿಕ ಅದೆಲ್ಲವನ್ನೂ ಬಿಟ್ಟೆ ಎಂದಿದ್ದರು ರಾಯ್.

ರಾಯ್ ಅವರು ಕನ್ನಡ ಹಾಗೂ ಮಲಯಾಳಂ ಚಿತ್ರರಂಗದ ಹಲವರೊಟ್ಟಿಗೆ ಆತ್ಮೀಯ ಬಂಧ ಹೊಂದಿದ್ದರು. ಕನ್ನಡದ ಸ್ಟಾರ್ ನಟ ದಿವಂಗತ ಪುನೀತ್ ರಾಜ್​​ಕುಮಾರ್ ಅವರ ಒಳ್ಳೆಯ ಸ್ನೇಹಿತರಾಗಿದ್ದರು. ಕಿಚ್ಚ ಸುದೀಪ್ ಅವರ ಆಪ್ತರೂ ಸಹ ಆಗಿದ್ದರು ರಾಯ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎನ್​ಸಿಪಿ ಮತ್ತೆ ವಿಲೀನವಾಗುತ್ತಾ? ಅಜಿತ್ ಪವಾರ್ ಕೊನೆಯ ಆಸೆಯ ಬಗ್ಗೆ ಶುರುವಾಯ್ತು ಚರ್ಚೆ – Kannada News | NCP Reunion Announcement Buzz Grows louder after Ajit Pawar Death

ಮುಂಬೈ, ಜನವರಿ 30: ಬುಧವಾರ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರ ದಿಢೀರ್ ಮರಣದ ನಂತರ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) 2 ಬಣಗಳ ವಿಲೀನದ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಎರಡೂ ಬಣಗಳು ಮತ್ತೆ ಒಂದಾಗಲಿವೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯ ನಂತರ ಫೆಬ್ರವರಿ ಎರಡನೇ ವಾರದಲ್ಲಿ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಎರಡೂ ಬಣಗಳ ಹಿರಿಯ ನಾಯಕರ ಪ್ರಕಾರ, ಬುಧವಾರ ವಿಮಾನ ಅಪಘಾತದಲ್ಲಿ ನಿಧನರಾದ ಅಜಿತ್ ಪವಾರ್ ವಿಲೀನಕ್ಕೆ ದಾರಿ ಮಾಡಿಕೊಟ್ಟರು ಮತ್ತು ಡಿಸೆಂಬರ್ ಮತ್ತು ಜನವರಿಯಲ್ಲಿ ಚಿಕ್ಕಪ್ಪ ಶರದ್ ಪವಾರ್ ಅವರೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆಯ ನಂತರ ಜಂಟಿ ಪತ್ರಿಕಾಗೋಷ್ಠಿಯ ಮೂಲಕ ಇಬ್ಬರು ನಾಯಕರು ವಿಲೀನವನ್ನು ಅಧಿಕೃತವಾಗಿ ಘೋಷಿಸಲು ನಿರ್ಧರಿಸಲಾಗಿತ್ತು.

ಅಜಿತ್ ಪವಾರ್ ಅವರ ಎನ್‌ಸಿಪಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಮತ್ತು ಮಹಾರಾಷ್ಟ್ರ ಸರ್ಕಾರದಲ್ಲಿ ಏಕನಾಥ್ ಶಿಂಧೆ ಅವರ ಶಿವಸೇನಾ ಜೊತೆ ಮೈತ್ರಿ ಮಾಡಿಕೊಂಡಿದೆ. ಅವರ ಚಿಕ್ಕಪ್ಪ ಶರದ್ ಪವಾರ್ ಅವರ ಎನ್‌ಸಿಪಿ ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ವಿರೋಧ ಪಕ್ಷದಲ್ಲಿದೆ.

ಇದನ್ನೂ ಓದಿ: ಅಜಿತ್ ಪವಾರ್ ಇದ್ದ ವಿಮಾನ ಅಪಘಾತ: ಕೊನೇ ಸಮಯದಲ್ಲಿ ಪೈಲಟ್ ಬದಲಾವಣೆ ಮಾಡಲಾಗಿತ್ತೇ?

ಇತ್ತೀಚಿನ ನಾಗರಿಕ ಚುನಾವಣೆಯ ಸಮಯದಲ್ಲಿ ಎರಡೂ ಬಣಗಳು ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದಾಗ, ಅಜಿತ್ ಪವಾರ್ ತಮ್ಮ ಪಕ್ಷವನ್ನು ಎನ್‌ಸಿಪಿ (ಎಸ್‌ಪಿ) ಯೊಂದಿಗೆ ವಿಲೀನಗೊಳಿಸಲು ಉದ್ದೇಶಿಸಿರುವುದಾಗಿ ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ. ಜನವರಿ 15ರಂದು ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ನಡೆದ ನಾಗರಿಕ ಚುನಾವಣೆಗಳಲ್ಲಿ ಒಟ್ಟಾಗಿ ಸ್ಪರ್ಧಿಸಿದ ನಂತರ, ಮುಂದಿನ ತಿಂಗಳು ನಡೆಯಲಿರುವ ಜಿಲ್ಲಾ ಪರಿಷತ್ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸಲು ಎರಡೂ ಬಣಗಳು ನಿರ್ಧರಿಸಿದವು.

ಇದನ್ನೂ ಓದಿ: ಅಜಿತ್ ಪವಾರ್ ಸಾವಿನಲ್ಲಿ ಷಡ್ಯಂತ್ರವಿಲ್ಲ, ಅದೊಂದು ಅಪಘಾತ; ಶರದ್ ಪವಾರ್ ಮೊದಲ ಪ್ರತಿಕ್ರಿಯೆ

“ಎನ್‌ಸಿಪಿ ಬಣಗಳ ವಿಲೀನದ ಬಗ್ಗೆ ನಾವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾವು ಸಿಎಂ ಅವರನ್ನು ಭೇಟಿಯಾದೆವು. ಅಜಿತ್ ಪವಾರ್ ಅವರ ಕುಟುಂಬದೊಂದಿಗೆ ಚರ್ಚಿಸುತ್ತೇವೆ” ಎಂದು ಈ ಪ್ರಫುಲ್ ಪಟೇಲ್ ಹೇಳಿದ್ದಾರೆ. ಹಾಗೇ, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ನಾಳೆ ಎಲ್ಲಾ ಎನ್‌ಸಿಪಿ ಶಾಸಕರ ಸಭೆ ಕರೆಯಲಾಗಿದೆ. ಬಹುತೇಕ ಎಲ್ಲರೂ ಸುನೇತ್ರಾ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಬೇಕೆಂದು ಬಯಸಿದ್ದಾರೆ ಎನ್ನಲಾಗಿದೆ. ಉಪ ಮುಖ್ಯಮಂತ್ರಿ ಹುದ್ದೆಗೂ ಸುನೇತ್ರಾ ಪವಾರ್ ಅವರ ಹೆಸರು ದೃಢೀಕರಿಸಲ್ಪಡುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WPL 2026: ಮುಂಬೈ ವಿರುದ್ಧ ಟಾಸ್ ಗೆದ್ದು ಅಚ್ಚರಿಯ ನಿರ್ಧಾರ ತೆಗೆದುಕೊಂಡ ಗುಜರಾತ್ – Kannada News | WPL: MI vs GG Do or Die! Mumbai Indians, Gujarat Giants Battle for Eliminator Spot

ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) 19 ನೇ ಲೀಗ್ ಪಂದ್ಯವು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ (MI vs GG) ನಡುವೆ ವಡೋದರಾದ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಗುಜರಾತ್ ತಂಡ ಗೆದ್ದರೆ, ಅದು ಎಲಿಮಿನೇಟರ್ ಪಂದ್ಯದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ. ಇತ್ತ ಮುಂಬೈ ಇಂಡಿಯನ್ಸ್‌ಗೂ ಸಹ, ಈ ಪಂದ್ಯವು ಮಾಡು ಇಲ್ಲವೇ ಮಡಿ ಪರಿಸ್ಥಿತಿಯಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಮುಂಬೈ ಸೋಲನ್ನು ಎದುರಿಸಿದರೆ, ಟೂರ್ನಮೆಂಟ್‌ನಲ್ಲಿ ಅವರ ಪ್ರಯಾಣವು ಲೀಗ್ ಹಂತದಲ್ಲಿ ಕೊನೆಗೊಳ್ಳಬಹುದು.

ಟಾಸ್ ಗೆದ್ದ ಗುಜರಾತ್

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ನಾಯಕಿ ಆಶ್ಲೇ ಗಾರ್ಡ್ನರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಆವೃತ್ತಿಯಲ್ಲಿ ಟಾಸ್ ಗೆದ್ದ ನಾಯಕಿಯೊಬ್ಬರು ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವುದು ಇದೇ ಮೊದಲು. ಹೀಗಾಗಿ ವಿಭಿನ್ನ ನಿರ್ಧಾರ ತೆಗೆದುಕೊಂಡಿರುವ ಗುಜರಾತ್ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಟಾಸ್ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊಂದರ ಬಳಗ ಹೊರಬಿದಿದ್ದು, ಎರಡೂ ತಂಡಗಳಲ್ಲೂ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಉಭಯ ತಂಡಗಳ ಪ್ರದರ್ಶನ

ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತನ್ನ ಆರಂಭಿಕ ಪಂದ್ಯದಲ್ಲಿ ಸೋತ ನಂತರ ಸತತ ಎರಡು ಗೆಲುವುಗಳೊಂದಿಗೆ ಗಮನಾರ್ಹ ಪುನರಾಗಮನ ಮಾಡಿದರು. ಇದರ ನಂತರ, ಮುಂದಿನ ಮೂರು ಪಂದ್ಯಗಳಲ್ಲಿ ಸತತ ಸೋಲುಗಳನ್ನು ಅನುಭವಿಸಿತು. ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ಮಹಿಳಾ ತಂಡವನ್ನು 15 ರನ್‌ಗಳಿಂದ ಸೋಲಿಸಿದ ಮುಂಬೈ ಎಲಿಮಿನೇಟರ್‌ನಲ್ಲಿ ತನ್ನ ಸ್ಥಾನ ಪಡೆಯುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಇತ್ತ ಆಶ್ಲೇ ಗಾರ್ಡ್ನರ್ ನಾಯಕತ್ವದಲ್ಲಿ, ಮಹಿಳಾ ಪ್ರೀಮಿಯರ್ ಲೀಗ್‌ನ ನಾಲ್ಕನೇ ಸೀಸನ್‌ನಲ್ಲಿ ಆಡುತ್ತಿರುವ ಗುಜರಾತ್ ಜೈಂಟ್ಸ್, ಇಲ್ಲಿಯವರೆಗೆ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆಡಿರುವ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಮೂರರಲ್ಲಿ ಮಾತ್ರ ಸೋತಿದೆ. ಈ ಪಂದ್ಯದಲ್ಲಿ ಗೆಲುವು ಎಲಿಮಿನೇಟರ್‌ನಲ್ಲಿ ಗುಜರಾತ್ ಜೈಂಟ್ಸ್‌ನ ಸ್ಥಾನವನ್ನು ಖಚಿತಪಡಿಸುತ್ತದೆ.

ಉಭಯ ತಂಡಗಳು

ಗುಜರಾತ್ ಜೈಂಟ್ಸ್: ಬೆತ್ ಮೂನಿ (ವಿಕೆಟ್ ಕೀಪರ್), ಸೋಫಿ ಡಿವೈನ್, ಅನುಷ್ಕಾ ಶರ್ಮಾ, ಆಶ್ಲೀಗ್ ಗಾರ್ಡನರ್ (ನಾಯಕಿ), ಜಾರ್ಜಿಯಾ ವಾರೆಹಮ್, ಭಾರ್ತಿ ಫುಲ್ಮಾಲಿ, ಕನಿಕಾ ಅಹುಜಾ, ಕಶ್ವಿ ಗೌತಮ್, ತನುಜಾ ಕನ್ವರ್, ರೇಣುಕಾ ಸಿಂಗ್ ಠಾಕೂರ್, ರಾಜೇಶ್ವರಿ ಗಾಯಕ್ವಾಡ್.

ಮುಂಬೈ ಇಂಡಿಯನ್ಸ್: ಹೇಲಿ ಮ್ಯಾಥ್ಯೂಸ್, ಸಜೀವನಾ ಸಜ್ನಾ, ನ್ಯಾಟ್ ಶೀವರ್ ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮನ್‌ಜೋತ್ ಕೌರ್, ಅಮೆಲಿಯಾ ಕೆರ್, ರಾಹಿಲಾ ಫಿರ್ದೌಸ್ (ವಿಕೆಟ್ ಕೀಪರ್), ಸಂಸ್ಕೃತಿ ಗುಪ್ತಾ, ವೈಷ್ಣವಿ ಶರ್ಮಾ, ಶಬ್ನಿಮ್ ಇಸ್ಮಾಯಿಲ್, ಪೂನಂ ಖೆಮ್ನಾರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weekly Love Horoscope: 2026ರ ಫೆಬ್ರವರಿ ಮೊದಲ ವಾರದ ಪ್ರೇಮ ಭವಿಷ್ಯ ಯಾವ ರಾಶಿಗೆ ಹೇಗಿದೆ? – Kannada News | Weekly Love Horoscope From 2026 February 1st to 7th: Relationship Forecast for All Zodiac Signs in Kannada

ಫೆಬ್ರವರಿ ಮೊದಲ ವಾರದ ಪ್ರೇಮ ಜಾತಕ – ಸಾಂದರ್ಭಿಕ ಚಿತ್ರ

ಫೆಬ್ರವರಿ 01ರಿಂದ ಫೆಬ್ರವರಿ 07ರ ವರೆಗೆ ಮೊದಲ ವಾರವಾಗಿದೆ. ಶುಕ್ರನು ಉಚ್ಚಗಾಮಿಯಾದ ಕಾರಣ ಶುಭ ಫಲವನ್ನು ನಿರೀಕ್ಷಿಸಬಹುದು. ಜನ್ಮದಲ್ಲಿ ಉತ್ತಮ ಸ್ಥಾನದಲ್ಲಿ ಶುಕ್ರನಿದ್ದರೆ, ಶುಕ್ರದಶೆ ಶುಭದಾಯಕ. ಪ್ರೇಮದಿಂದ ಶುಭವಾಗಲಿ.

ಮೇಷ:
ಈ ವಾರ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ತಾಳ್ಮೆಯಿಂದ ವರ್ತಿಸುವುದು ಒಳಿತು. ಪ್ರೇಮಿಗಳಿಗೆ ಮನೆಯವರಿಂದ ಬೆಂಬಲ ಸಿಗುವ ಸಾಧ್ಯತೆಯಿದೆ. ಹೊಸ ಸಂಬಂಧ ಬೆಳೆಸುವ ಮುನ್ನ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.


ವೃಷಭ:
ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ. ಸಂಗಾತಿಯೊಂದಿಗೆ ದೂರದ ಪ್ರಯಾಣ ಕೈಗೊಳ್ಳುವ ಸಾಧ್ಯತೆಯಿದೆ. ಪರಸ್ಪರ ಗೌರವ ನೀಡುವುದರಿಂದ ನಿಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.


ಮಿಥುನ:
ಹಳೆಯ ಪ್ರೇಮ ಪ್ರಕರಣಗಳು ಮತ್ತೆ ಮುನ್ನೆಲೆಗೆ ಬರಬಹುದು. ಹಿಂದಿನ ಕಹಿ ನೆನಪುಗಳನ್ನು ಮರೆತು ಹೊಸ ಆರಂಭಕ್ಕೆ ಇದು ಸೂಕ್ತ ಸಮಯ. ಸಂಗಾತಿಯ ಅಗತ್ಯತೆಗಳಿಗೆ ಸ್ಪಂದಿಸಿ, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.


ಕರ್ಕಾಟಕ:
ಕುಟುಂಬದ ಸದಸ್ಯರ ಸಮ್ಮತಿಯೊಂದಿಗೆ ನಿಮ್ಮ ಪ್ರೇಮ ವಿವಾಹಕ್ಕೆ ಮುದ್ರೆ ಬೀಳುವ ಸಂಭವವಿದೆ. ನಿಮ್ಮ ಸಂಗಾತಿಯು ನಿಮಗೆ ಆರ್ಥಿಕವಾಗಿ ಅಥವಾ ವೃತ್ತಿಪರವಾಗಿ ಸಹಾಯ ಮಾಡಲಿದ್ದಾರೆ. ಪ್ರೀತಿಯಲ್ಲಿ ಪ್ರಾಮಾಣಿಕತೆ ಇರಲಿ.


ಸಿಂಹ:
ನಿಮ್ಮ ಅಹಂಕಾರ ಪ್ರೇಮ ಸಂಬಂಧದಲ್ಲಿ ಬಿರುಕು ಮೂಡಿಸಬಹುದು, ಎಚ್ಚರಿಕೆ ಇರಲಿ. ಪ್ರೀತಿಯ ವಿಷಯದಲ್ಲಿ ಹಠ ಮಾಡಬೇಡಿ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆ ನೀಡುವ ಮೂಲಕ ಅವರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಿ.


ಕನ್ಯಾ:
ಈ ವಾರ ನೀವು ಪ್ರೇಮ ಜೀವನದಲ್ಲಿ ತುಂಬಾ ಸಂತೋಷವಾಗಿರುವಿರಿ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ಪರಸ್ಪರರ ಮೇಲಿನ ನಂಬಿಕೆ ಹೆಚ್ಚಾಗಲಿದೆ. ಒಂಟಿಯಾಗಿರುವವರಿಗೆ ಹೊಸ ವ್ಯಕ್ತಿಯ ಪರಿಚಯವಾಗುವ ಸಾಧ್ಯತೆಯಿದೆ.


ತುಲಾ:
ಪ್ರೀತಿಪಾತ್ರರಿಂದ ವಿಶೇಷ ಉಡುಗೊರೆ ಪಡೆಯುವಿರಿ. ಸಂವಹನದಲ್ಲಿ ಸ್ಪಷ್ಟತೆ ಇರಲಿ, ಇಲ್ಲದಿದ್ದರೆ ತಪ್ಪು ತಿಳುವಳಿಕೆ ಉಂಟಾಗಬಹುದು. ವಾರಾಂತ್ಯದಲ್ಲಿ ಸಂಗಾತಿಯೊಂದಿಗೆ ಸುಂದರವಾದ ಹೋಟೆಲ್‌ಗೆ ಭೇಟಿ ನೀಡುವ ಯೋಜನೆ ರೂಪಿಸುವಿರಿ.


ವೃಶ್ಚಿಕ:
ಮಾತಿನ ಮೇಲೆ ಹತೋಟಿ ಇರಲಿ. ನಿಮ್ಮ ಕಟು ಮಾತುಗಳು ಸಂಗಾತಿಗೆ ನೋವುಂಟು ಮಾಡಬಹುದು. ಸಂಬಂಧವನ್ನು ಉಳಿಸಿಕೊಳ್ಳಲು ಮೌನವೇ ಕೆಲವೊಮ್ಮೆ ಪರಿಹಾರ. ಪ್ರೀತಿಯಲ್ಲಿ ತಾಳ್ಮೆ ಮತ್ತು ಸಹನೆ ಈ ವಾರ ಬಹಳ ಮುಖ್ಯ.

​ಧನು:
ಹೊಸ ಪ್ರೇಮ ಪ್ರಸ್ತಾಪಗಳು ಬರಬಹುದು. ಈಗಾಗಲೇ ಪ್ರೀತಿಸುತ್ತಿರುವವರಿಗೆ ಈ ವಾರ ರೋಮ್ಯಾಂಟಿಕ್ ಆಗಿರಲಿದೆ. ನಿಮ್ಮ ಸಂಗಾತಿಯ ಯಶಸ್ಸನ್ನು ಸಂಭ್ರಮಿಸುವಿರಿ. ಸಂಬಂಧದಲ್ಲಿ ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳುವುದು ಈ ವಾರ ಒಳ್ಳೆಯದು.

ಮಕರ:
ವೃತ್ತಿಜೀವನದ ಒತ್ತಡದ ನಡುವೆಯೂ ಸಂಗಾತಿಗಾಗಿ ಸಮಯ ಮೀಸಲಿಡುವಿರಿ. ನಿಮ್ಮ ಬದ್ಧತೆಯು ಸಂಗಾತಿಗೆ ನಿಮ್ಮ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ. ಪ್ರೇಮಿಗಳ ನಡುವೆ ಇದ್ದ ಗೊಂದಲಗಳು ಬಗೆಹರಿದು ಮನಸ್ಸು ನಿರಾಳವಾಗಲಿದೆ.


ಕುಂಭ:
ದೂರದೂರಿನಲ್ಲಿರುವ ಸಂಗಾತಿಯಿಂದ ಶುಭ ಸುದ್ದಿ ಕೇಳುವಿರಿ. ನಿಮ್ಮ ಪ್ರೇಮ ಜೀವನಕ್ಕೆ ಸಂಬಂಧಿಕರ ಬೆಂಬಲ ಸಿಗಲಿದೆ. ಪ್ರೀತಿಯ ವಿಷಯದಲ್ಲಿ ಯಾವುದೇ ಅವಸರದ ನಿರ್ಧಾರ ಬೇಡ. ಪರಸ್ಪರರ ಆಸೆಗಳನ್ನು ಗೌರವಿಸಿ ಮುನ್ನಡೆಯಿರಿ.

​ಮೀನ:
ಭಾವನಾತ್ಮಕವಾಗಿ ನೀವು ಸಂಗಾತಿಗೆ ತುಂಬಾ ಹತ್ತಿರವಾಗುವಿರಿ. ಕಷ್ಟದ ಸಮಯದಲ್ಲಿ ಸಂಗಾತಿಯ ಬೆಂಬಲ ನಿಮಗೆ ಧೈರ್ಯ ನೀಡಲಿದೆ. ಪ್ರೇಮ ಸಂಬಂಧವು ಮದುವೆಯ ಹಂತಕ್ಕೆ ತಲುಪಲು ಈ ವಾರ ಪೂರಕವಾದ ವಾತಾವರಣವಿದೆ.

– ಲೋಹಿತ ಹೆಬ್ಬಾರ್

Published On – 4:44 pm, Fri, 30 January 26

Source link

ಪತಂಜಲಿ ಬ್ಯುಸಿನೆಸ್​ನ ಭಾಗವಾಗಬೇಕಾ? ಪತಂಜಲಿ ಸ್ಟೋರ್ ತೆರೆಯಿರಿ; ಇಲ್ಲಿದೆ ಅರ್ಜಿ ಸಲ್ಲಿಕೆ, ಬಂಡವಾಳ ಇತ್ಯಾದಿ ಮಾಹಿತಿ – Kannada News | How to open Patanjali Stores, here is the step by step guide

ಪತಂಜಲಿ FMCG ಸೆಕ್ಟರ್ ಪ್ರವೇಶಿಸಿದಾಗಿನಿಂದ ಅದರ ಉತ್ಪನ್ನಗಳು ಜನರ ದೈನಂದಿನ ಜೀವನದ ಭಾಗವಾಗಿವೆ. ಇದರ ಪರಿಣಾಮವಾಗಿ ಕಂಪನಿಯ ಮಾರುಕಟ್ಟೆ ವಿಸ್ತಾರಗೊಂಡಿದೆ. ಅದರ ಉತ್ಪನ್ನಗಳು ಹೆಚ್ಚೆಚ್ಚು ಮನೆಗಳನ್ನು ಮುಟ್ಟುವಲ್ಲಿ ಯಶಸ್ವಿಯಾಗಿವೆ. ನೀವೂ ಕೂಡ ಈ ಬೆಳವಣಿಗೆಯ ಭಾಗವಾಗಲು ಅವಕಾಶ ಇದೆ. ಗ್ರಾಹಕರಾಗಿ ಪತಂಜಲಿ ಬ್ಯುಸಿನೆಸ್ ಅನ್ನು ಬೆಳೆಸುವುದು ಮಾತ್ರವಲ್ಲ, ಮಾರಾಟಗಾರರಾಗಿಯೂ ಲಾಭ ಮಾಡಬಹುದು. ದೇಶಾದ್ಯಂತ ಹಲವೆಡೆ ಪತಂಜಲಿ ಸ್ಟೋರ್​ಗಳಿವೆ. ಒಂದು ಸ್ಟೋರ್ (Patanjali Store) ಅನ್ನು ನೀವು ಬೇಕಾದರೂ ತೆರೆಯಲು ಸಾಧ್ಯ. ಪತಂಜಲಿ ಸ್ಟೋರ್ ತೆರೆಯಲು ಪ್ರಕ್ರಿಯೆಗಳೇನು ಎನ್ನುವ ವಿವರ ಇಲ್ಲಿದೆ.

ಪತಂಜಲಿ ಸ್ಟೋರ್ ಆರಂಭಿಸಬೇಕೆಂದರೆ ಮೊದಲಿಗೆ 5 ಲಕ್ಷ ರೂ ಆರಂಭಿಕ ಹೂಡಿಕೆ ಬೇಕು. 200-2,000+ ಚದರ ಅಡಿ ಜಾಗದ ಅಗತ್ಯವಿದೆ. ಅಧಿಕೃತ ಪತಂಜಲಿ ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ₹300 ಶುಲ್ಕ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಸ್ಟೋರ್​ನ ಫೋಟೋ ಮತ್ತು ₹5 ಲಕ್ಷ ಭದ್ರತಾ ಠೇವಣಿ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಈ ಪತಂಜಲಿ ಪ್ಲಾಟ್​ಫಾರ್ಮ್​ಗಳಲ್ಲಿ ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಖರೀದಿಸುವ ಅವಕಾಶ

ಪತಂಜಲಿ ಸ್ಟೋರ್ ತೆರೆಯುವ ಪ್ರಕ್ರಿಯೆ

ಪತಂಜಲಿ ಸ್ಟೋರ್ ಅನ್ನು ಹೇಗೆ ಪಡೆಯುವುದು? ಮೊದಲು, ಪತಂಜಲಿ ವ್ಯವಹಾರಗಳ ವಿವಿಧ ಪ್ರಕಾರಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಪತಂಜಲಿ ಬ್ಯುಸಿನೆಸ್​ಗಳಲ್ಲಿ ಮೂರು ವಿಧಗಳಿವೆ: ಗ್ರಾಮೀಣ ಆರೋಗ್ಯ ಕೇಂದ್ರಗಳು, ಪತಂಜಲಿ ಚಿಕಿತ್ಸಾಲಯಗಳು ಮತ್ತು ಮೆಗಾ ಸ್ಟೋರ್​ಗಳು. ಪ್ರತಿಯೊಂದು ಸ್ಟೋರ್​ಗೆ ವಿಭಿನ್ನ ಪ್ರಮಾಣದ ಸ್ಥಳಾವಕಾಶ ಬೇಕಾಗುತ್ತದೆ. ಉದಾಹರಣೆಗೆ, ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಸರಿಸುಮಾರು 200 ಚದರ ಅಡಿಗಳು ಮಾತ್ರ ಬೇಕಾಗುತ್ತವೆ, ಆದರೆ ಮೆಗಾ ಸ್ಟೋರ್​ಗೆ ಕನಿಷ್ಠ 2,000 ಚದರ ಅಡಿ ಜಾಗ ಬೇಕಾಗುತ್ತವೆ.

ಎಷ್ಟು ಹೂಡಿಕೆ ಮಾಡಬೇಕಾಗುತ್ತದೆ?

ಸಣ್ಣ ಸ್ಟೋರ್ ತೆರೆಯಲು ಸರಿಸುಮಾರು ₹5 ರಿಂದ ₹10 ಲಕ್ಷ (ಸುಮಾರು $10 ಮಿಲಿಯನ್) ಹೂಡಿಕೆಯ ಅಗತ್ಯವಿರುತ್ತದೆ. ಆದರೆ ಒಂದು ಮೆಗಾ ಸ್ಟೋರ್​ಗೆ ₹1 ಕೋಟಿ (ಸುಮಾರು $10 ಮಿಲಿಯನ್) ವೆಚ್ಚವಾಗಬಹುದು. ₹5 ಲಕ್ಷ (ಸುಮಾರು $500,000) ರೀಫಂಡಬಲ್ ಸೆಕ್ಯೂರಿಟಿ ಡೆಪಾಸಿಟ್ ಅಗತ್ಯ ಇದೆ. ಇದರಲ್ಲಿ ₹2.5 ಲಕ್ಷ (ಸುಮಾರು $250,000) ದಿವ್ಯ ಫಾರ್ಮಸಿಗೆ, ಮತ್ತು ₹2.5 ಲಕ್ಷ (ಸುಮಾರು $250,000) ಪತಂಜಲಿ ಆಯುರ್ವೇದ ಲಿಮಿಟೆಡ್​ಗೆ ಡಿಡಿ ಮೂಲಕ ನೀಡಬೇಕಾಗುತ್ತದೆ. ಅರ್ಜಿದಾರರು ಗುರುತಿನ ಪುರಾವೆ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್), ವಿಳಾಸ ಪುರಾವೆ, ಮಾಲೀಕತ್ವದ ದಾಖಲೆಗಳು ಅಥವಾ ಸ್ಟೋರ್ ಅಥವಾ ಆವರಣದ ಬಾಡಿಗೆ ಕರಾರು ಮತ್ತು ಸ್ಟೋರ್​ನ ಫೋಟೋವನ್ನು ಸಲ್ಲಿಸುವ ಅಗತ್ಯವಿದೆ.

ಇದನ್ನೂ ಓದಿ: Patanjali Model: ಜಾಗತಿಕ ಬ್ರ್ಯಾಂಡ್​ಗಳಿಗೆ ಪೈಪೋಟಿ ನೀಡುತ್ತಿರುವ ಪತಂಜಲಿಯ ಯಶಸ್ಸಿನ ಗುಟ್ಟೇನು?

ಪತಂಜಲಿ ಸ್ಟೋರ್​ಗೆ ಅರ್ಜಿ ಪ್ರಕ್ರಿಯೆ

  • ಪತಂಜಲಿಯ ವೆಬ್‌ಸೈಟ್‌ನಿಂದ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಆನ್‌ಲೈನ್‌ನಲ್ಲೇ ಅರ್ಜಿಯನ್ನು ಭರ್ತಿ ಮಾಡಬಹುದು.
  • ಅರ್ಜಿ ಶುಲ್ಕ 300 ರೂ. ಮತ್ತು ಅಗತ್ಯ ದಾಖಲೆಗಳನ್ನು ಫಾರ್ಮ್​ನೊಂದಿಗೆ ಸಲ್ಲಿಸಿ.
  • ಅರ್ಜಿ ಸಲ್ಲಿಕೆ ನಂತರ, ಕಂಪನಿಯು ನೀವು ತಿಳಿಸಿದ ಸ್ಥಳವನ್ನು ಪರಿಶೀಲಿಸುತ್ತದೆ.
  • ಸೂಕ್ತ ಎನಿಸಿದರೆ ಸ್ಟೋರ್​​ಗೆ ಅನುಮೋದನೆ ಕೊಡಲಾಗುತ್ತದೆ.
  • ಅನುಮೋದನೆ ಪಡೆದ ನಂತರ ಒಪ್ಪಂದ ಆಗುತ್ತದೆ. ಉತ್ಪನ್ನಗಳನ್ನು ಪಡೆದ ಬಳಿಕ ಸ್ಟೋರ್ ಅನ್ನು ಆರಂಭಿಸಬಹುದು.

ಗಮನಿಸಬೇಕಾದ ಸಂಗತಿ ಎಂದರೆ, ನೀವು ಪತಂಜಲಿ ಸ್ಟೋರ್​ಗೆ ಅರ್ಜಿ ಸಲ್ಲಿಸಿದ ನಂತರ, ಪ್ರಕ್ರಿಯೆಯನ್ನು ವೇಗವಾಗಿ ಪೂರ್ಣಗೊಳಿಸಲು ಕಂಪನಿಯ ಮಾರಾಟ ವ್ಯವಸ್ಥಾಪಕರನ್ನು ಸಂಪರ್ಕಿಸುವುದು ಉತ್ತಮ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link