Category Archives: Blog

Your blog category

ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್

ಚಿತ್ರಮಂದಿರಗಳ ಎದುರು ಸಾಮಾನ್ಯವಾಗಿ ದೊಡ್ಡದಾಗಿ ಹೀರೋಗಳ ಕಟೌಟ್ ಹಾಕಲಾಗುತ್ತದೆ. ಹೀರೋಯಿನ್​​ಗಳ ಕಟೌಟ್ ನಿಲ್ಲಿಸಲಾಗೋದಿಲ್ಲ. ‘ಲ್ಯಾಂಡ್​ ಲಾರ್ಡ್’ ಸಿನಿಮಾಗಾಗಿ ರಚಿತಾ ಕಟೌಟ್ ನಿಲ್ಲಿಸಲಾಗಿದೆ. ಹೀರೋಗಳ ಪಕ್ಕದಲ್ಲಿ ಹೀರೋಯಿನ್​​​ಗಳ ಕಟೌಟ್ ನಿಲ್ಲಿಸಬೇಕು ಎಂಬುದು ಅವರ ಕೋರಿಕೆ. ‘ಎಲ್ಲಾ ಹೀರೋಯಿನ್​​​ಗಳು ಕಟೌಟ್ ಬೇಕು. ಅವರ ಕಟೌಟ್ ನಿಲ್ಲಿಸಬೇಕು. ಇದು ಚಿತ್ರತಂಡಕ್ಕೆ ನನ್ನ ಮನವಿ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉತ್ತರಾಖಂಡ: ದೇಹ ವಿರೂಪಗೊಂಡ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿಯ ಶವ ಪತ್ತೆ – Kannada News | Uttarakhand Horror: Minor Girl Found Mutilated, Cousin Suspected in Brutal Murder

ವಿಕಾಸನಗರ, ಜನವರಿ 30: ಉತ್ತರಾಖಂಡ(Uttarakhand)ದ ವಿಕಾಸನಗರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯನ್ನು ಬರ್ಬರವಾಗಿ ಹತ್ಯೆ(Murder) ಮಾಡಲಾಗಿದ್ದು, ಈ ಪ್ರದೇಶದಲ್ಲಿ ಆತಂಕವನ್ನು ಹುಟ್ಟುಹಾಕಿದೆ. ವಿಕಾಸನಗರ ಕೊತ್ವಾಲಿ ಮಿತಿಯ ಧಾಲಿಪುರದ ಶಕ್ತಿ ಕಾಲುವೆಯ ಬಳಿ ಬಾಲಕಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಹದ ತುಂಬಾ ಹರಿತವಾದ ಆಯುಧದಿಂದ ಮಾಡಿದ ಹಲವು ಗಾಯಗಳಿದ್ದವು. ಬಾಲಕಿಯ ಬೆರಳುಗಳು ಮತ್ತು ಮೂಗನ್ನು ಕತ್ತರಿಸಲಾಗಿತ್ತು.

ಮತ್ತು ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಲಾಗಿತ್ತು. ಪೊಲೀಸರು ಸ್ಥಳದಿಂದ ಕೊಲೆಗೆ ಬಳಸಲಾಗಿದೆ ಎಂದು ಹೇಳಲಾದ ಹರಿತವಾದ ಕತ್ತಿ ತರಹದ ಆಯುಧ ಮತ್ತು ಬೈಕ್ ಅನ್ನು ವಶಪಡಿಸಿಕೊಂಡಿದದ್ಆರೆ. ಮೃತದೇಹದ ಸುತ್ತಲಿನ ಪ್ರದೇಶವು ರಕ್ತದಿಂದ ಕೂಡಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಮೃತಳನ್ನು 12 ನೇ ತರಗತಿ ವಿದ್ಯಾರ್ಥಿನಿ ಮತ್ತು ಧಲಿಪುರ ನಿವಾಸಿ ಮನೀಷಾ ತೋಮರ್ ಎಂದು ಗುರುತಿಸಲಾಗಿದೆ. ಪೊಲೀಸ್ ತನಿಖೆಯ ಪ್ರಕಾರ, ಔಷಧಿ ಖರೀದಿಸಲು ತನ್ನ ಸೋದರಸಂಬಂಧಿ ಸುರೇಂದ್ರ ಜೊತೆ ಬೈಕ್​ನಲ್ಲಿ ಮನೆಯಿಂದ ಹೊರಟಿದ್ದಳು ಆದರೆ ಹಿಂತಿರುಗಲಿಲ್ಲ.

ತನಿಖೆಯ ಸಮಯದಲ್ಲಿ, ಪೊಲೀಸರು ಪೆಟ್ರೋಲ್ ಪಂಪ್‌ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಮನಿಷಾ ಮತ್ತು ಸುರೇಂದ್ರ ಬೈಕ್​ನಲ್ಲಿ ಒಟ್ಟಿಗೆ ಇರುವುದು ಕಂಡುಬಂದಿದೆ. ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಹರಿತವಾದ ಆಯುಧವನ್ನು ಸುರೇಂದ್ರ ಇತ್ತೀಚೆಗೆ ಖರೀದಿಸಿದ್ದಾನೆ ಎಂದು ಪೊಲೀಸರಿಗೆ ತಿಳಿದುಬಂದಿದೆ.

ಮತ್ತಷ್ಟು ಓದಿ: ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ‌ ಹತ್ಯೆ: ಕಾರಣವೇನು?

ಕೊಲೆಯ ನಂತರ, ಸುರೇಂದ್ರ ನಾಪತ್ತೆಯಾಗಿದ್ದ.ಅಪರಾಧ ಸ್ಥಳದಲ್ಲಿ ಬೈಕ್ ಮತ್ತು ಆಯುಧ ಪತ್ತೆಯಾದ ನಂತರ, ಪೊಲೀಸರು ಎಸ್‌ಡಿಆರ್‌ಎಫ್‌ಗೆ ಕರೆ ಮಾಡಿ ಶಕ್ತಿ ಕಾಲುವೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಕೊಲೆ ಮಾಡಿದ ನಂತರ ಸುರೇಂದ್ರ ಕಾಲುವೆಗೆ ಹಾರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ, ಆದರೆ ಇಲ್ಲಿಯವರೆಗೆ ಅವನ ಯಾವುದೇ ಕುರುಹು ಪತ್ತೆಯಾಗಿಲ್ಲ.

ಕೊಲೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಪೊಲೀಸರು ಎಲ್ಲಾ ಸಂಭಾವ್ಯ ಕೋನಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಡೆಹ್ರಾಡೂನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಗ್ರಾಮೀಣ ಎಸ್ಪಿ ಪಂಕಜ್ ಗೈರೋಲಾ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ನಡೆಯುತ್ತಿರುವ ವಿಚಾರಣೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜಾನ್ ಅಬ್ರಹಾಂ ಎಷ್ಟೆಲ್ಲ ಕಟ್ಟುನಿಟ್ಟಿನ ಡಯಟ್ ಮಾಡ್ತಾರೆ ಗೊತ್ತಾ? ಆದರೂ ಏಕೀ ಸ್ಥಿತಿ? – Kannada News | John Abraham’s Strict Diet: 25 Yrs No Sweets, Vegetarian – Yet Fans Worry About His Health

ಜಾನ್ ಅಬ್ರಹಾಂ (John Abraham) ಎಂದಾಕ್ಷಣ ನೆನಪಿಗೆ ಬರೋದು ಕಟ್ಟುಮಸ್ತಾದ ದೇಹ, ಸಿಕ್ಸ್ ಪ್ಯಾಕ್. ಅವರು ಆ್ಯಕ್ಷನ್ ಸಿನಿಮಾಗಳನ್ನು ಮಾಡಿ ಫೇಮಸ್ ಆಗಿದ್ದಾರೆ. ಜಾನ್ ಅಬ್ರಹಾಂ ಅವರು ಫಿಟ್ನೆಸ್​ಗೆ ಹೆಸರು ವಾಸಿ. ಏನೇ ಮರೆತರೂ ಅವರು ಜಿಮ್​ನಲ್ಲಿ ವರ್ಕೌಟ್ ಮಾಡೋದನ್ನು ಮರೆಯಲ್ಲ. ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ನಟನ ಫಿಟ್ನೆಸ್​​ಗೆ ಮೆಚ್ಚುಗೆ ಸೂಚಿಸುತ್ತಾರೆ. ಅದೇ ರೀತಿ ಸಿಹಿಯನ್ನು ಮುಟ್ಟಲ್ಲ. ಅವರು ತಮ್ಮಿಷ್ಟದ ಸಿಹಿ ತಿನ್ನದೇ ಅದೆಷ್ಟೋ ವರ್ಷಗಳು ಕಳೆದಿವೆ. ಈಗ ಅವರ ಹೊಸ ಲುಕ್ ಅನೇಕರಿಗೆ ಭಯ ಮೂಡಿಸಿದೆ.

ಜಾನ್ ಅಬ್ರಹಾಂ ಅವರಿಗೆ ಈಗ 53 ವರ್ಷ. ಈ ವಯಸ್ಸಲ್ಲೂ ಅವರು ಸಾಕಷ್ಟು ಫಿಟ್ ಆಗಿದ್ದಾರೆ. ಅವರು ಸಿಹಿ ಪದಾರ್ಥ ತಿನ್ನದೆ 25 ವರ್ಷಗಳೇ ಕಳೆದು ಹೋಗಿವೆ ಎಂದರೆ ನೀವು ನಂಬೇಲೇಬೇಕು. ಅವರು ಫಿಟ್ನೆಸ್​ಗೆ ಹಾಗೂ ಆರೋಗ್ಯಕ್ಕೆ ಕೊಡುವ ಪ್ರಾಮುಖ್ಯತೆ ಇದು ಸಿಹಿ ಪದಾರ್ಥ ಎಂದರೆ ಎಲ್ಲರೂ ತಿನ್ನಲು ಮುಂದೆ ಬರುತ್ತಾರೆ. ಹಬ್ಬ-ಹರಿದಿನಗಳಲ್ಲಿ ಸಿಹಿ ತಿನ್ನುತ್ತಾರೆ. ಕೆಲವು ಸೆಲೆಬ್ರಿಟಿಗಳು ಸಿಹಿಯಿಂದ ದೂರ ಇರುತ್ತಾರೆ. ಜಾನ್ ಅಬ್ರಹಾಂ ಮಾತ್ರ ಈ ರೀತಿ ಅಲ್ಲ. ಈಗಲೂ ಫಿಟ್ನೆಸ್ ಬಗ್ಗೆ ಗಮನ ನೀಡುವ ಅವರು, ಇದಕ್ಕೆ ತಕ್ಕಂತೆ ಆಹಾರ ಕ್ರಮ ಫಾಲೋ ಮಾಡುತ್ತಾರೆ.

ನಟಿ ಆಲಿ ಖಾನ್ ಅವರು ಜಾನ್ ಅಬ್ರಹಾಂ ಅವರ ಬಗ್ಗೆ, ಅವರ ಆಹಾರ ಕ್ರಮದ ಬಗ್ಗೆ ಮಾತನಾಡಿದ್ದರು. ‘ಜಾನ್ ಅಬ್ರಹಾಂ ಅವರು ಈ ಕಾಲದಲ್ಲೂ ಸಖತ್ ಫಿಟ್ ಆಗಿದ್ದಾರೆ. ಅದಕ್ಕೆ ಕಾರಣ ಅವರು ಕಳೆದ 25 ವರ್ಷಗಳಿಂದ ಸಿಹಿ ಪದಾರ್ಥ ಸೇವನೆ ಮಾಡೇ ಇಲ್ಲ’ ಎಂದಿದ್ದರು. ಇದನ್ನು ಕೇಳಿ ಅನೇಕರು ಅಚ್ಚರಿ ಹೊರಹಾಕಿದ್ದರು.

ಸೆಲೆಬ್ರಿಟಿಗಳು ಸಿಹಿ ಪದಾರ್ಥಗಳಿಂದ ದೂರ ಇರಲು ಪ್ರಯತ್ನಿಸುತ್ತಾರೆ. ಇದರಿಂದ ದೇಹದ ತೂಕ ನಿಯಂತ್ರಿಸಬಹುದು. ಡಯಾಬಿಟಿಸ್ ನಿಂದ ದೂರ ಆಗಬಹುದು. ಅಲ್ಲದೆ ಕೊಲೆಸ್ಟ್ರಾಲ್ ಲೆವೆಲನ್​ ನಿಯಂತ್ರಣದಲ್ಲಿ ಇಡಬಹುದು. ಕೊಲೆಸ್ಟ್ರಾಲ್ ಇಲ್ಲ ಎಂದರೆ ಹೃದಯದ ಸಮಸ್ಯೆ ಇಲ್ಲ. ಹೊಟ್ಟೆಯ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಜಾನ್ ಅಬ್ರಹಾಂ ಅವರು ಇಷ್ಟೊಂದು ಒಳ್ಳೆಯ ಬಾಡಿ ಮಾಡಿದ್ದಾರೆ ಎಂದ ಮಾತ್ರಕ್ಕೆ ಅವರು ನಾನ್​ವೆಜ್ ತಿನ್ನುತ್ತಾರೆ ಎಂದು ಎಲ್ಲರೂ ಅಂದುಕೊಳ್ಳಬಹುದು. ಆದರೆ, ಅದು ಸುಳ್ಳು. ಅವರು ಸಸ್ಯಾಹಾರಿ. ಸಸ್ಯಾಹಾರ ಸೇವನೆಯಿಂದ ಇಷ್ಟು ಒಳ್ಳೆಯ ಬಾಡಿ ಮಾಡಿದ್ದಾರೆ. ಇದನ್ನು ಕೂಡ ಅವರು ಈ ಮೊದಲು ಹೇಳಿದ್ದರು.

ಇದನ್ನೂ ಓದಿ: ಗುರುತು ಸಿಗದಂತೆ ಬದಲಾದ ಜಾನ್ ಅಬ್ರಾಹಂ; ಆರೋಗ್ಯದ ಬಗ್ಗೆ ಮೂಡಿದೆ ಅನುಮಾನ

ಜಾನ್ ಅಬ್ರಹಾಂ ಅವರು ಹೀರೋ ಆಗಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಅವರು ಬಾಲಿವುಡ್​ನಲ್ಲಿ ವಿಲನ್ ಆಗಿಯೂ ಹೆಸರು ಮಾಡಿದ್ದಾರೆ. ಅವರ ಜನಪ್ರಿಯತೆ ಹೆಚ್ಚುತ್ತಿದೆ. ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಆರೋಗ್ಯದ ಬಗ್ಗೆ ಅಚ್ಚರಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬಳ್ಳಾರಿಗೂ ಬಂತು ವಾಯು ಮಾಲಿನ್ಯದ ಕಂಟಕ! ಬೆಂಗಳೂರಿಗಿಂತ ಕಳಪೆ ಏರ್ ಕ್ವಾಲಿಟಿ – Kannada News | Bangalore Air Pollution Crisis: Ballari’s Air quality is worse than Bengaluru’s AQI

ಬಳ್ಳಾರಿಗೂ ಬಂತು ವಾಯು ಮಾಲಿನ್ಯದ ಕಂಟಕ!

ಬೆಂಗಳೂರು, ಜನವರಿ 30: ರಾಜ್ಯದೆಲ್ಲೆಡೆ ವಾಯು ಗುಣಮಟ್ಟ ಸಾಕಷ್ಟು ಹದಗೆಟ್ಟಿರುವಾಗ, ಬೆಂಗಳೂರಿನಲ್ಲಿ AQI ನಿರಂತರ ಏರುಪೇರು ಕಾಣುತ್ತಿದೆ. ಅದರ ನಡುವೆ ಮಂಗಳೂರು, ಮೈಸೂರು ಹಾಗೂ ಬಳ್ಳಾರಿ, ಬೆಂಗಳೂರನ್ನೂ ಮೀರಿಸುವಂತಿದೆ. ಇದರಿಂದಾಗಿ ನಗರಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ದೆಹಲಿಯಂತಾಗುತ್ತಾ ಪರಿಸ್ಥಿತಿ?

ಕೆಲ ದಿನಗಳಿಂದಲೂ ಏರಿಕೆ ಕಾಣುತ್ತಿದ್ದ ಬಳ್ಳಾರಿಯ ಏರ್ ಕ್ವಾಲಿಟಿ, ಇಂದು 222ಕ್ಕೆ ಹೋಗಿ ತಲುಪಿದೆ. ಈ ಹದಗೆಟ್ಟ ವಾತಾವರಣ ಹೀಗೆ ಮುಂದುವರೆದರೆ ದೆಹಲಿಯಂತೆಯೇ ಆಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ. ಈ ಕಲುಷಿತ ಗಾಳಿಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲೂ ಕಡಿಮೆ ಆಗದ AQI, ಇಂದು 192ಕ್ಕೆ ತಲುಪಿದೆ.ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ಸೂಕ್ಷ್ಮಾಣುಗಳಿಂದಲೂ ಜೀವಕ್ಕೆ ಹಾನಿ

PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 84 ಆಗಿದ್ದು, PM10 109ಕ್ಕೆ ಏರಿಕೆಯಾಗಿದೆ. ಈ ಕಣಗಳು ನೇರವಾಗಿ ಉಸಿರಾಟ ವ್ಯವಸ್ಥೆಗೆ ಹೊಡೆತ ನೀಡುತ್ತವೆ.

PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಆರೋಗ್ಯ ತಜ್ಞರು ಮಕ್ಕಳು, ವೃದ್ಧರು ಹಾಗೂ ಶ್ವಾಸಕೋಶ ಸಮಸ್ಯೆ ಇರುವವರು ಹೊರಗೆ ಹೋಗುವಾಗ ಎಚ್ಚರಿಕೆ ವಹಿಸಲು ಸಲಹೆ ನೀಡಿದ್ದಾರೆ. ಮಾಸ್ಕ್ ಬಳಕೆ, ವಾಹನ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಹಸಿರು ಪ್ರದೇಶಗಳನ್ನು ಹೆಚ್ಚಿಸುವುದು ಈಗ ನಗರಕ್ಕೆ ಅನಿವಾರ್ಯವಾಗಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –192
  • ಮಂಗಳೂರು-170
  • ಮೈಸೂರು –140
  • ಬೆಳಗಾವಿ – 102
  • ಕಲಬುರ್ಗಿ-126
  • ಶಿವಮೊಗ್ಗ – 69
  • ಬಳ್ಳಾರಿ – 222
  • ಹುಬ್ಬಳ್ಳಿ- 148
  • ಉಡುಪಿ –168
  • ವಿಜಯಪುರ –153

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಾಯಿ ಜನ್ಮದಿನಕ್ಕೆ ಎರಡು ಜಿರಾಫೆ ದತ್ತು ಪಡೆದ ಪವನ್ ಕಲ್ಯಾಣ್ – Kannada News | Pawan Kalyan Adopts Two Giraffes at Vizag Zoo for Mother’s Birthday – Animal Welfare Advocate

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಗುರುವಾರ (ಜನವರಿ 29) ವಿಶಾಖಪಟ್ಟಣಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಅಲ್ಲಿನ ಇಂದಿರಾ ಗಾಂಧಿ ಪ್ರಾಣಿ ಪಾರ್ಕ್​​ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಪವನ್ ಕಲ್ಯಾಣ್ (Pawan Kalyan) ತಮ್ಮ ತಾಯಿ ಅಂಜನಾ ದೇವಿಯ ಹುಟ್ಟುಹಬ್ಬವನ್ನು ಆಚರಿಸಲು ಮೃಗಾಲಯದಿಂದ ಎರಡು ಜಿರಾಫೆಗಳನ್ನು ಒಂದು ವರ್ಷದವರೆಗೆ ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದರು. ಎರಡು ಜಿರಾಫೆಗಳ ವೆಚ್ಚವನ್ನು ಒಂದು ವರ್ಷದವರೆಗೆ ಭರಿಸುವುದಾಗಿ ಅವರು ಬಹಿರಂಗಪಡಿಸಿದರು.

ಪವನ್ ಕಲ್ಯಾಣ್​​​ಗೆ ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಇದೆ. ಹೀಗಾಗಿ, ಪ್ರಾಣಿ ರಕ್ಷಣೆಗಾಗಿ ಮುಂದೆ ಬರುವಂತೆ ಕಾರ್ಪೊರೇಟ್‌ಗಳಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ, ಪವನ್ ಮೃಗಾಲಯ ಉದ್ಯಾನವನದಲ್ಲಿ ಹೊಸದಾಗಿ ನಿರ್ಮಿಸಲಾದ ಕರಡಿ ಆವರಣವನ್ನು ಉದ್ಘಾಟಿಸಿದರು.

ಇದನ್ನೂ ಓದಿ: ಕಾರು ಉಡುಗೊರೆಯಾಗಿ ಕೊಟ್ಟ ನಟ ಪವನ್ ಕಲ್ಯಾಣ್: ಯಾರಿಗೆ? ಏಕೆ?

ಮೃಗಾಲಯದಲ್ಲಿ ನೀರಾನೆ , ಕೃಷ್ಣಮೃಗಗಳು, ಹುಲಿಗಳು ಮತ್ತು ಸಿಂಹಗಳನ್ನು ಇಡಲಾದ ಪ್ರದೇಶಗಳಿ ಭೇಟಿ ನೀಡಿದರು. ಅವುಗಳಿಗೆ ಒದಗಿಸಲಾದ ಆಹಾರ, ಅವುಗಳ ಹೆಸರುಗಳು ಮತ್ತು ಇತರ ವಿವರಗಳ ಬಗ್ಗೆ ಮೃಗಾಲಯದ ಕ್ಯುರೇಟರ್ ಅವರ ಬಳಿ ವಿಚಾರಿಸಿದ್ದಾರೆ. ಅವರು ಆನೆಗಳು ಮತ್ತು ಜಿರಾಫೆಗಳ ಆವರಣಗಳನ್ನು ಪರಿಶೀಲಿಸಿದರು ಮತ್ತು ಅವುಗಳಿಗೆ ಸ್ವತಃ ಆಹಾರವನ್ನು ನೀಡಿದರು.

f
ಈ ಸಂದರ್ಭದಲ್ಲಿ ಮಾತನಾಡಿದ ಪವನ್ ಕಲ್ಯಾಣ್, ‘ನಮ್ಮ ದೇಶದಲ್ಲಿ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಮೃಗಾಲಯಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಅವು ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸುತ್ತವೆ. ಸುಮಾರು 650 ಎಕರೆ ಪ್ರದೇಶದಲ್ಲಿ ಹರಡಿರುವ ವಿಶಾಖಪಟ್ಟಣ ಮೃಗಾಲಯದಲ್ಲಿ ನೂರಾರು ಕಾಡು ಪ್ರಾಣಿಗಳು ಮತ್ತು ಪಕ್ಷಿಗಳು ಆಹ್ಲಾದಕರ ವಾತಾವರಣದಲ್ಲಿ ವಾಸಿಸುತ್ತವೆ. ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮೃಗಾಲಯಗಳ ಅಭಿವೃದ್ಧಿಯಲ್ಲಿ ಕಾರ್ಪೊರೇಟ್‌ಗಳು ಪಾಲುದಾರರಾಗಿರಬೇಕು. ಅವರು ತಮ್ಮ ಇಷ್ಟ ಪ್ರಾಣಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅವುಗಳನ್ನು ದತ್ತು ಪಡೆಯಬೇಕು ನಮ್ಮ ಇಡೀ ಕುಟುಂಬವು ಪ್ರಾಣಿ ಪ್ರಿಯರು. ನಾವು ಪ್ರಾಣಿ ಕಲ್ಯಾಣಕ್ಕೆ ಹೆಚ್ಚಿನ ಗಮನ ನೀಡುತ್ತೇವೆ’ ಎಂದು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಯಾರಿಗೆ ಯಾವ ವಿಧವಾಗಿ ನಮಸ್ಕಾರ ಮಾಡಬೇಕು? – Kannada News | Daily Devotional: The Spiritual Significance of Namaskara: A Guide to Proper Devotional Greetings

ಬೆಂಗಳೂರು, ಜನವರಿ 30: ನಾವು ಮಾಡುವ ನಮಸ್ಕಾರವು ಕೇವಲ ಯಾಂತ್ರಿಕವಾಗಿರದೆ, ಶ್ರದ್ಧೆ, ಭಕ್ತಿ ಮತ್ತು ವಿನಯದಿಂದ ಕೂಡಿರಬೇಕು. ಆಗ ಮಾತ್ರ ಅದರ ಫಲ ಸಿಗುತ್ತದೆ. ವಿಷ್ಣು, ಶಿವ ಮತ್ತು ಅವರ ಅಂಶಗಳಿರುವ ದೇವರುಗಳಿಗೆ ನಮಸ್ಕರಿಸುವಾಗ ಎರಡೂ ಕೈಗಳನ್ನು ಜೋಡಿಸಿ, ತಲೆಯ ಮೇಲೆ ಸುಮಾರು ಹನ್ನೆರಡು ಇಂಚು ಎತ್ತರದಲ್ಲಿ ಹಿಡಿದು ತಲೆಬಾಗಿ ನಮಸ್ಕರಿಸಬೇಕು. ಇತರ ಎಲ್ಲಾ ದೇವರುಗಳಿಗೆ ತಲೆಯ ಮೇಲೆ ಕೈಗಳನ್ನು ಜೋಡಿಸಿ ನಮಸ್ಕರಿಸುವುದು ಸೂಕ್ತ. ಗುರುಗಳಿಗೆ ನಮಸ್ಕರಿಸುವಾಗ ಬಾಯಿಂದ ನಮಸ್ಕಾರ ಎಂದು ಹೇಳುವುದನ್ನು ತಪ್ಪಿಸಬೇಕು. ಬದಲಿಗೆ, ಸಂಪೂರ್ಣವಾಗಿ ಶಿರಬಾಗಿ, ಮೂಗು ಬೆರಳುಗಳ ಮೇಲೆ ಬರುವಂತೆ ವಿನಯದಿಂದ ನಮಸ್ಕರಿಸಬೇಕು. ಮಹನೀಯರು ಮತ್ತು ಯೋಗಿಗಳಿಗೆ ವಕ್ಷಸ್ಥಳದಲ್ಲಿ ಕೈ ಜೋಡಿಸಿ ತಲೆಬಾಗಿ ನಮಸ್ಕರಿಸಬೇಕು. ತಂದೆ ಅಥವಾ ಪೋಷಕರಿಗೆ ಬಾಯಿಯ ಬಳಿ ಕೈ ಜೋಡಿಸಿ ನಮಸ್ಕರಿಸಿದರೆ, ತಾಯಿಗೆ ಹೊಟ್ಟೆಯ ಅಥವಾ ಹೃದಯದ ಭಾಗದಲ್ಲಿ ಕೈ ಜೋಡಿಸಿ ಅಥವಾ ಸಾಷ್ಟಾಂಗ ನಮಸ್ಕಾರ ಮಾಡಬಹುದು. ಈ ಶಾಸ್ತ್ರೋಕ್ತ ವಿಧಾನಗಳನ್ನು ಪಾಲಿಸುವುದರಿಂದ ಸಂಪೂರ್ಣ ಫಲ ದೊರೆಯುತ್ತದೆ ಎಂದು ಗುರೂಜಿ ಹೇಳಿದ್ದಾರೆ.

 

 

 

 

Source link

ಸಿನಿಮಾ ಪ್ರಚಾರ ಹೀಗೂ ಮಾಡ್ತಾರಾ? ರಾಜಮೌಳಿ ಬುದ್ಧಿವಂತಿಕೆ ಮೆಚ್ಚಲೇಬೇಕು – Kannada News | Rajamouli’s Varanasi Release Date Stunt: Unconventional Film Promotion Masterclass

ಸಿನಿಮಾ ಮೇಕಿಂಗ್ ವಿಷಯದಲ್ಲಿ ರಾಜಮೌಳಿ (SS Rajamouli) ಎಷ್ಟು ಗಮನ ಹರಿಸುತ್ತಾರೋ ಅದೇ ರೀತಿ ಸಿನಿಮಾ ಪ್ರಚಾರಕ್ಕೂ ಅವರು ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ. ಈ ಕಾರಣದಿಂದಲೇ ರಾಜಮೌಳಿ ಅವರ ಸಿನಿಮಾ ಅಷ್ಟು ದೊಡ್ಡ ಮಟ್ಟದಲ್ಲಿ ತಲುಪುತ್ತದೆ. ಈಗ ಅವರು ‘ವಾರಣಾಸಿ’ ಸಿನಿಮಾ ಪ್ರಚಾರಕ್ಕೆ ದೊಡ್ಡ ಮಟ್ಟದ ಯೋಜನೆ ರೂಪಿಸಿದ್ದಾರೆ. ಸಿನಿಮಾ ಟೈಟಲ್ ಹಾಕದೆ ರಿಲೀಸ್ ದಿನಾಂಕ ಘೋಷಿಸಿದ್ದಾರೆ.

ರಾಜಮೌಳಿ ‘ವಾರಣಾಸಿ’ ಸಿನಿಮಾ ಘೋಷಣೆ ಮಾಡಿದ್ದಾರೆ. ಮಹೇಶ್ ಬಾಬು ಚಿತ್ರಕ್ಕೆ ಹೀರೋ. ಈ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ. ಆದರೆ, ಸಿನಿಮಾ ತಂಡ ರಿಲೀಸ್ ದಿನಾಂಕ ಘೋಷಣೆ ಮಾಡಿರಲಿಲ್ಲ. ಈಗ ವಾರಾಣಸಿಯಲ್ಲಿ ದೊಡ್ಡದಾದ ಬಿಲ್ ಬೋರ್ಡ್​​ಗಳು ರಾರಾಜಿಸಿದ್ದು‘ಏಪ್ರಿಲ್ 7, 2027’ ಎಂದು ಬರೆಯಲಾಗಿದೆ.

ಎಲ್ಲಿಯೂ ರಾಜಮೌಳಿ ಅವರು ತಮ್ಮ ಸಿನಿಮಾ ಹೆಸರನ್ನು ಹಾಕಿಲ್ಲ. ಕೊನೆ ಪಕ್ಷ ಇದು ಯಾವ ಸಿನಿಮಾ ಎಂದು ಊಹಿಸುವ ಪೋಸ್ಟರ್​​ಗಳನ್ನು ಕೂಡ ಬಳಕೆ ಮಾಡಿಲ್ಲ. ಆದಾಗ್ಯೂ ಇದು ರಾಜಮೌಳಿ ಅವರದ್ದೇ ಸಿನಿಮಾ ಎಂದು ಅನೇಕರು ಊಹಿಸಿದ್ದಾರೆ. ವಾರಾಣಸಿಯಲ್ಲೇ ಅವರು ಈ ರೀತಿ ಸಿನಿಮಾ ರಿಲೀಸ್ ದಿನಾಂಕ ತಿಳಿಸಿರೋದು ವಿಶೇಷ ಎನಿಸಿಕೊಂಡಿದೆ. ಏಪ್ರಿಲ್ 7 ಯುಗಾದಿ. ಹಬ್ಬದ ಸಮಯದಲ್ಲೇ ಸಿನಿಮಾ ತೆರೆಗೆ ಬರುತ್ತಿದೆ.

ರಾಜಮೌಳಿ ಫ್ಲೆಕ್ಸ್​​​ಗಳನ್ನು ಹಾಕಿದ್ದು ವಾರಾಣಸಿಯಲ್ಲೇ ಆದರು, ‘ವಾರಣಾಸಿ’ ಸಿನಿಮಾದ ರಿಲೀಸ್ ದಿನಾಂಕದ ವಿಷಯ ಇಡೀ ದೇಶಾದ್ಯಂತ ಚರ್ಚೆ ಆಗಿದೆ. ಆ ಸಂದರ್ಭದಲ್ಲಿ ಶಾಲೆಗಳು ಕೂಡ ಪೂರ್ಣಗೊಂಡಿರುತ್ತವೆ. ಹೀಗಾಗಿ, ಕುಟುಂಬ ಸಮೇತ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಿರುತ್ತದೆ.

ಈ ಮೊದಲು ರಾಜಮೌಳಿ ಅವರು ‘ವಾರಣಾಸಿ’ ಟೈಟಲ್ ಲಾಂಚ್ ಮಾಡಲು ದೊಡ್ಡದಾದ ಈವೆಂಟ್ ಮಾಡಿದ್ದರು. ಹೈದರಾಬಾದ್​​ನಲ್ಲಿ ಈ ಈವೆಂಟ್ ನಡೆದಿತ್ತು. ಇದಕ್ಕೆ 20-25 ಕೋಟಿ ರೂಪಾಯಿ ಖರ್ಚಾಗಿತ್ತು ಎನ್ನಲಾಗಿದೆ. ಈಗ ಅವರು ಬಿಲ್​​ಬೋರ್ಡ್​​ಗಳನ್ನು ನಿಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ: ರಾಜಮೌಳಿಯ ‘ವಾರಣಾಸಿ’ಗಿಂತ ಮೂರು ಪಟ್ಟು ಹೆಚ್ಚು ವೀವ್ಸ್ ಪಡೆದ ‘ಟಾಕ್ಸಿಕ್’ ಟೀಸರ್

‘ವಾರಣಾಸಿ’ ಸಿನಿಮಾ ದೊಡ್ಡ ಬೆಜಟ್​​ನಲ್ಲಿ ರೆಡಿ ಆಗುತ್ತಿರುವ ಸಿನಿಮಾ. ತೆಲುಗು ಜೊತೆಗೆ ಪರಭಾಷೆಗಳಲ್ಲೂ ಸಿನಿಮಾ ಡಬ್ ಆಗಲಿದೆ. ‘ಆರ್​ಆರ್​ಆರ್’ ಬಳಿಕ ಬರುತ್ತಿರುವ ಸಿನಿಮಾ ಇದಾಗಿದೆ. ಮಹೇಶ್ ಬಾಬು, ಪ್ರಿಯಾಂಕಾ ಜೊತೆ ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್ ಕೂಡ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:31 am, Fri, 30 January 26

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಮಂಜು ಕವಿದ ವಾತಾರಣ; ರಾಜ್ಯದೆಲ್ಲೆಡೆ ಮುಂದುವರೆದ ಒಣ ಹವೆ – Kannada News | Bengaluru temperature: Fog and misty weather in Bengaluru, Dry weather elsewhere

ಬೆಂಗಳೂರಿನಲ್ಲಿ ಮಂಜು ಕವಿದ ವಾತಾರಣ; ರಾಜ್ಯದೆಲ್ಲೆಡೆ ಮುಂದುವರೆದ ಒಣ ಹವೆ

ಬೆಂಗಳೂರು, ಜನವರಿ 30: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಎರಡು ದಿನಗಳ ಹಿಂದೆ ಮೋಡ ಕವಿದು, ಸಾಧಾರಣ ಪ್ರಮಾಣದ ಮಳೆಯಾಗಿತ್ತು. ಆದರೆ ಇಂದು ರಾಜ್ಯದ ಹವಾಮಾನ (Weather Forecast) ಯಥಾಸ್ಥಿತಿ ತಲುಪಿದೆ. ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಎಲ್ಲೆಲ್ಲಿ ಒಣಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಇಂದು ನಗರದಲ್ಲಿ ಎಂದಿನಂತೆ ಚಳಿಯ ಜೊತೆಗೆ ಮೋಡ ಕವಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 17°C ಇದ್ದು, ಗರಿಷ್ಠ 30°C ಇರಲಿದ್ದು, ಬೆಳಗ್ಗೆ ಮೋಡ ಕವಿದ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಕಬ್ಬು ತುಂಬಿದ್ದ ಟ್ರಕ್ ಶಾಲಾ ವಾಹನದ ಮೇಲೆ ಪಲ್ಟಿ – Kannada News | Overloaded Sugarcane Truck Overturns onto School Van in UP’s Lakhimpur Kheri

ಉತ್ತರ ಪ್ರದೇಶ, ಜನವರಿ 30: ಕಬ್ಬು ತುಂಬಿದ್ದ ಟ್ರಕ್ ಶಾಲಾ ವಾಹನದ ಮೇಲೆ ಪಲ್ಟಿ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ್​ ಖೇರಿಯಲ್ಲಿ ನಡೆದಿದೆ. ಟ್ರಕ್ ಪಲ್ಟಿ ಹೊಡೆಯುತ್ತಿದ್ದಂತೆ, ಸ್ಥಳೀಯರು ಓಡಿ ಬಂದು ಯಾವುದೇ ಸರ್ಕಾರದ ನಿರ್ದೇಶನಗಳಿಗೆ ಕಾಯದೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ವ್ಯಾನ್ ಮೇಲೆ ಬಿದ್ದ ಕಬ್ಬುಗಳೆಲ್ಲವನ್ನು ಬದಿಗೆ ಹಾಕಿ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳು ಅವರ ಪೋಷಕರು ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Source link

ಕೇಂದ್ರದ ಬಜೆಟ್​ನಲ್ಲಿ ರಾಜ್ಯಕ್ಕೆ ಈ ಬಾರಿ ಏನೆಲ್ಲಾ ಸಿಗಬಹುದು? ಉದ್ದವಿದೆ ನಿರೀಕ್ಷೆಗಳ ಪಟ್ಟಿ! – Kannada News | Union Budget 2026: What Karnataka Can Expect from Nirmala Sitharaman’s Budget? Know details here

ಬೆಂಗಳೂರು, ಜನವರಿ 30: ಒಂದು ಕಡೆ ಪಂಚರಾಜ್ಯಗಳ ಚುನಾವಣಾ ಅಬ್ಬರ, ಇನ್ನೊಂದೆಡೆ ಭರಪೂರ ನಿರೀಕ್ಷೆಯಲ್ಲಿರುವ ಕರ್ನಾಟಕ. ಹೀಗಿರುವಾಗ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ (Union Budget) ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ದೇಶದಲ್ಲಿ ಅತೀ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ಕರ್ನಾಟಕವೂ ಕೂಡ ಒಂದಾಗಿದ್ದು, ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲಿನ ಅಸಮಾನತೆ ಸರಿಪಡಿಸುವುದು ಮತ್ತು ನನೆಗುದಿಗೆ ಬಿದ್ದಿರುವ ಬೃಹತ್ ಯೋಜನೆಗಳಿಗೆ ಮರುಜೀವ ನೀಡುವುದು ಕೇಂದ್ರಕ್ಕೆ ಈಗ ದೊಡ್ಡ ಸವಾಲಾಗಿದೆ.

ಕೇಂದ್ರ ಬಜೆಟ್​: ಕರ್ನಾಟಕದ ಬೇಡಿಕಗಳೇನು?

  • ನೀರಾವರಿ: ಕೃಷ್ಣಾ ಮೇಲ್ದಂಡೆ, ಎತ್ತಿನಹೊಳೆ, ಮಹದಾಯಿ ಯೋಜನೆಗೆ ‘ರಾಷ್ಟ್ರೀಯ ಯೋಜನೆ’ ಮಾನ್ಯತೆ ನಿರೀಕ್ಷೆ.
  • ಭದ್ರಾ ಮೇಲ್ದಂಡೆ: 2023ರಲ್ಲಿ ಘೋಷಣೆಯಾಗಿದ್ದ 5,300 ಕೋಟಿ ರೂ. ಅನುದಾನ ಬಿಡುಗಡೆಗೆ ಆಗ್ರಹ.
  • ಬೆಂಗಳೂರು ಮೆಟ್ರೋ: ನಮ್ಮ ಮೆಟ್ರೋ 3ನೇ ಹಂತದ ವಿಸ್ತರಣೆಗೆ ಕೇಂದ್ರದ ಆರ್ಥಿಕ ನೆರವು. ಸಬ್ ಅರ್ಬನ್ ರೈಲಿಗೆ ಹೆಚ್ಚಿನ ಅನುದಾನ.
  • ಹೈಸ್ಪೀಡ್ ರೈಲು: ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲ್ವೆ ಯೋಜನೆಗೆ ಗ್ರೀನ್ ಸಿಗ್ನಲ್.
  • ಹಾಸನ ಐಐಟಿ, ಶಿರಾಡಿ ಸುಂರಂಗ, ರಾಯಚೂರು ಏಮ್ಸ್, ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಗೆ ಮರುಜೀವ ನಿರೀಕ್ಷೆ.
  • ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆ ನಿರೀಕ್ಷೆ, ಮೈಸೂರು- ಕುಶಾಲನಗರ ಹೊಸ ರೈಲು ಯೋಜನೆ.

ಅನುದಾನ ಕೊರತೆಯಿಂದ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನ ಬಾಕಿ ಉಳಿದಿವೆ. ರಾಜ್ಯದ ಕೆಲವು ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದರೆ ಶೇ 90ರಷ್ಟು ಅನುದಾನ ಕೇಂದ್ರದಿಂದಲೇ ಸಿಗಲಿದೆ. ಇದು ಬರಪೀಡಿತ 23 ಜಿಲ್ಲೆಗಳ 150ಕ್ಕೂ ಹೆಚ್ಚು ತಾಲೂಕುಗಳಿಗೆ ವರದಾನವಾಗಲಿದೆ.

2023ರಲ್ಲಿ ಚುನಾವಣೆ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಸ್ವತಃ ಕೇಂದ್ರ ಸರಕಾರವೇ ಘೋಷಣೆ ಮಾಡಿದ್ದ 5,300 ಕೋಟಿ ರೂ. ಇನ್ನೂ ಬಿಡುಗಡೆಯಾಗಿಲ್ಲ. ಹಣಬಿಡುಗಡೆ ಮಾಡುವಂತೆ ರಾಜ್ಯ ಸಾಕಷ್ಟು ಬಾರಿ ಮನವಿ ಮಾಡಿದೆ. ಘೋಷಣೆ ಮಾಡಿದ್ದ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ಈ ಬಜೆಟ್ ನಲ್ಲಿ ಉತ್ತರ ಸಿಗಬಹುದಾ ಎಂಬ ನಿರೀಕ್ಷೆ ರಾಜ್ಯದ ಜನರಿಗಿದೆ. ಇನ್ನು ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಅನುಷ್ಠಾನಕ್ಕೆ ಕೇಂದ್ರ ಸರಕಾರ ಅಧಿಕೃತ ಮುದ್ರೆ ಒತ್ತಬೇಕಿದೆ.

ರೈಲ್ವೆ ಮತ್ತು ಕರಾವಳಿ ಅಭಿವೃದ್ಧಿಗೆ ಬೂಸ್ಟ್?

ರಾಜ್ಯದ ರೈಲ್ವೆ ಯೋಜನೆಗಳಿಗೆ ಈ ಬಾರಿ ಹೆಚ್ಚಿನ ಬಲ ಸಿಗುವ ಸಾಧ್ಯತೆಯಿದೆ. ಧಾರವಾಡ-ಕಿತ್ತೂರು-ಬೆಳಗಾವಿ, ಗಿಣಿಗೇರಾ-ರಾಯಚೂರು ಮಾರ್ಗಗಳ ಜೊತೆಗೆ ಕಲಬುರಗಿ ರೈಲ್ವೆ ವಿಭಾಗದ ಕನಸು ನನಸಾಗಬೇಕಿದೆ. ಇನ್ನು 360 ಕಿಲೋ ಮೀಟರ್ ಉದ್ದದ ಕಡಲ ತೀರ ಹೊಂದಿದ್ದರೂ ಅಭಿವೃದ್ಧಿ ಕಾಣದ ಕರ್ನಾಟಕದ ಬಂದರುಗಳಿಗೆ ಸಾಗರಮಾಲಾ ಯೋಜನೆಯಡಿ ವಿಶೇಷ ಪ್ಯಾಕೇಜ್ ಸಿಗುವ ನಿರೀಕ್ಷೆಯಿದೆ. ಜೊತೆಗೆ ಕೈಗಾರಿಕೆಗಳಿಗೆ ಪೂರಕವಾಗಿ ಉಕ್ಕಿನ ಪೂರೈಕೆಗೆ ರಿಯಾಯಿತಿ ಸಿಗಬಹುದು ಎನ್ನಲಾಗುತ್ತಿದೆ.

ಅತಿವೃಷ್ಟಿ,ಬರ ಮತ್ತು ಆರ್ಥಿಕ ಸವಾಲುಗಳು

ರಾಜ್ಯದಲ್ಲಿ ಸಾಲದ ಹೊರೆ ಹೆಚ್ಚುತ್ತಿದೆ, ನಿರಂತರ ಅತಿವೃಷ್ಟಿ ಮತ್ತು ಪ್ರವಾಹದಿಂದ ಆರ್ಥಿಕತೆ ನಲುಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ನಿಧಿ ಹಂಚಿಕೆಯಾಗಬೇಕಿದೆ. ಗುಜರಾತ್, ಯುಪಿ ಮಾದರಿಯಲ್ಲಿ ಕರ್ನಾಟಕಕ್ಕೂ ಬೃಹತ್ ತಾಂತ್ರಿಕ ಯೋಜನೆಗಳನ್ನು ನೀಡುವ ಮೂಲಕ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಬೇಕೆಂಬುದು ಉದ್ಯಮ ಕ್ಷೇತ್ರದ ಒತ್ತಾಯವಾಗಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2026: ಹೊಸ ಟ್ಯಾಕ್ಸ್ ರೆಜಿಮ್​ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಲಾಗುತ್ತಾ?

ಒಟ್ಟಿನಲ್ಲಿ 2026ರ ಬಜೆಟ್ ಕರ್ನಾಟಕದ ಪಾಲಿಗೆ ಕೇವಲ ಭರವಸೆಯ ಮೂಟೆಯಾಗುತ್ತಾ ಅಥವಾ ನಿಜವಾಗಿಯೂ ಅಭಿವೃದ್ಧಿಯ ಹಾದಿ ತೆರೆಯುತ್ತಾ ಎಂಬುದು ಭಾನುವಾರ ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link