13 ವರ್ಷಗಳ ನಂತರ ಸ್ವಂತ ಮನೆ ಬಿಟ್ಟು ಬೆಂಗಳೂರಿನ ಬಾಡಿಗೆ ಮನೆಗೆ ಬಂದ ಮಹಿಳೆ!: ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಯ್ತು ‘ನಮ್ಮ ಬೆಂಗಳೂರು’ ಜರ್ನಿ – Kannada News
ಬೆಂಗಳೂರು, ಜೂ,2: ದಶಕಗಳ ಕಾಲ ಬದುಕಿದ ಮನೆಯನ್ನು ಬಿಟ್ಟು ಹೊಸ ನಗರಕ್ಕೆ, ಹೊಸ ವಾತಾವರಣಕ್ಕೆ ಸ್ಥಳಾಂತರಗೊಳ್ಳುವುದು ಯಾರಿಗಾದರೂ ಭಾವುಕ ಕ್ಷಣವೇ ಸರಿ. ಇಂತಹದ್ದೇ ಒಂದು ಸನ್ನಿವೇಶವನ್ನು ಎದುರಿಸಿದ ಕರಿಷ್ಮಾ ಕೌಲ್ (Karishma Koul) ಎಂಬ ಮಹಿಳೆ, ಗುರಗಾಂವ್ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ತಮ್ಮ ಅನುಭವ ಮತ್ತು ಹೊಸ ಬಾಡಿಗೆ ಮನೆಯ ಝಲಕ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಗಮನ ಸೆಳೆದಿದೆ. ಕರಿಷ್ಮಾ ಕೌಲ್ ತಮ್ಮ ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ ಪ್ರೀತಿಯಿಂದ ನೆಟ್ಟಿಗರನ್ನು ಸ್ವಾಗತಿಸಿದ್ದಾರೆ. “ಹಾಯ್, ಬೆಂಗಳೂರಿನಲ್ಲಿರುವ ನಮ್ಮ…