Headlines

ಸಿನಿಮಾಗಳಲ್ಲಿ ವಿಲನ್, ನಿಜ ಜೀವನದಲ್ಲಿ ‘ಹೀರೋ’ ಈ ನಟ – Kannada News

ಸಿನಿಮಾನಲ್ಲಿ (Cinema) ದೊಡ್ಡ ಹೆಸರು ಮಾಡಿದ ಸ್ಟಾರ್ ನಟರುಗಳು ತಮ್ಮ ಅಭಿಮಾನಿ ಸಂಘಗಳ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಸಾಮಾನ್ಯವಾಗಿ ವರ್ಷದ ಒಂದು ದಿನ ರಕ್ತದಾನ, ಅನ್ನದಾನ ಇಂಥಹಾ ಕೆಲಸಗಳನ್ನು ಮಾಡಿಸುತ್ತಾರೆ ಅದರ ಚಿತ್ರಗಳನ್ನು ಹಂಚಿಕೊಂಡು ಭರ್ಜರಿ ಪ್ರಚಾರ ಪಡೆಯುತ್ತಾರೆ. ಆದರೆ ಇಲ್ಲೊಬ್ಬ ನಟ ಆ ಸ್ಟಾರ್ ಹೀರೋಗಳಿಗಿಂತಲೂ ಬಹಳ ವಿಭಿನ್ನ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಈ ನಟ ಮಾಡಿರುವ ಕೆಲಸದಿಂದ ನಿಜ ಬದುಕಿನಲ್ಲಿ ಹೀರೋ ಎನಿಸಿಕೊಂಡಿದ್ದಾರೆ. ಅವರೇ ಖ್ಯಾತ ನಟ ಸಯ್ಯಾಜಿ…

Read More

ಶಾಸಕ ವಿಶ್ವನಾಥ್​​ ಬಿಟ್ಟು ಸುದ್ದಿಗೋಷ್ಠಿ ನಡೆಸಲು ಬಂದ ಸಂಸದ ಸುಧಾಕರ್​​ಗೆ ಸ್ವಪಕ್ಷಿಗರಿಂದಲೇ ತರಾಟೆ – Kannada News

ವಿಶ್ವನಾಥ್​​ vs ಸುಧಾಕರ್​​Image Credit source: wikipedia ದೇವನಹಳ್ಳಿ, ಜೂನ್​​ 02: ಕಳೆದ ಲೋಕಸಭಾ ಚುನಾವಣೆ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್​​ಗಾಗಿ ಬಿಜೆಪಿ (BJP) ಶಾಸಕ ಎಸ್​​.ಆರ್​​. ವಿಶ್ವನಾಥ್​​ ಮತ್ತು ಸಂಸದ ಡಾ.ಸುಧಾಕರ್​​ ನಡುವೆ ಶುರುವಾದ ಸಮರಕ್ಕೆ ಇನ್ನೂ ಬ್ರೇಕ್​​ ಬಿದ್ಧಂತೆ ಕಾಣುತ್ತಿಲ್ಲ. ಸ್ವಪಕ್ಷದ ಶಾಸಕರನ್ನು ಬಿಟ್ಟು ಒಬ್ಬರೇ ಸುದ್ದಿಗೋಷ್ಠಿ ನಡೆಸಲು ಬಂದಿದ್ದ ಸಂಸದರನ್ನು ಸ್ವಪಕ್ಷದ ಕಾರ್ಯಕರ್ತರೇ ತರಾಟೆಗೆ ತೆಗೆದುಕೊಂಡಿರುವ ಘಟನೆ ಯಲಹಂಕದಲ್ಲಿ ನಡೆದಿದೆ. ಕಾರ್ಯಕರ್ತರ ನಡುವಿನ ವಾಗ್ವಾದದ ಕಾರಣ ಯಲಹಂಕದ ಮಾಧ್ಯಮ ಕೇಂದ್ರದಲ್ಲಿ ಕೆಲ ಕಾಲ…

Read More

ಭಾರತ ಈಗ ಗ್ಲೋಬಲ್ ಬ್ಯಾಕ್ ಆಫೀಸ್ ಮಾತ್ರವೇ ಅಲ್ಲ, ವಿಶ್ವದರ್ಜೆ ಪ್ರಾಡಕ್ಟ್ ನೀಡುವ ದೇಶವಾಗಿದೆ: ಪ್​ರಸಾದ್ ಷಣ್ಮುಗಂ – Kannada News

ನವದೆಹಲಿ, ಜೂನ್ 2: ಒಂದು ಕಾಲದಲ್ಲಿ ಭಾರತವನ್ನು ಕೇವಲ ಜಾಗತಿಕ ಕಂಪನಿಗಳಿಗೆ ಕಡಿಮೆ ವೆಚ್ಚದಲ್ಲಿ ತಾಂತ್ರಿಕ ಬೆಂಬಲ ನೀಡುವ (Support Centre) ದೇಶ ಎಂದು ನೋಡಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಭಾರತೀಯ ಕಂಪನಿಗಳು ಜಾಗತಿಕ ಮಟ್ಟದ ವಿಶ್ವದರ್ಜೆಯ ಸಾಫ್ಟ್‌ವೇರ್ ಉತ್ಪನ್ನಗಳನ್ನು (World-Class Products) ಸ್ವತಃ ಭಾರತದಲ್ಲೇ ನಿರ್ಮಿಸುತ್ತಿವೆ ಎಂದು ಕೆಜಿಐಎಸ್ಎಲ್ ಸಿಇಒ ಪ್ರಸಾದ್ ಷಣ್ಮುಖಂ (Prassadh Shanmugam) ತಿಳಿಸಿದ್ದಾರೆ. ಬಿಸಿನೆಸ್ ಟುಡೇ (Business Today) ಪತ್ರಿಕೆಯ ‘ಹಿಡನ್ ಜೆಮ್ಸ್ ಆಫ್ ಇಂಡಿಯನ್ ಬಿಸಿನೆಸ್’ (Hidden Gems…

Read More

ಮಂಗಳೂರಿನಿಂದ ಮಂತ್ರಾಲಯಕ್ಕೆ ನೇರ ಸಂಪರ್ಕ; ಜೂನ್ ಪೂರ್ತಿ ಓಡಲಿದೆ 24 ಬೋಗಿಗಳ ಬೃಹತ್ ವಿಶೇಷ ರೈಲು! – Kannada News

ಮಂಗಳೂರು, ಜೂ.2: ಜೂನ್ ತಿಂಗಳ ಪ್ರವಾಸ ಮತ್ತು ಉದ್ಯೋಗದ ನಿಮಿತ್ತ ರೈಲುಗಳಲ್ಲಿ ಉಂಟಾಗಿರುವ ಭಾರಿ ಜರ್ನಿ ರಶ್ ಅನ್ನು ನಿಯಂತ್ರಿಸಲು ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಹೆಚ್ಚುವರಿ ಸೀಟುಗಳ ಬೇಡಿಕೆಯನ್ನು ಪೂರೈಸಲು 4 ರೌಂಡ್ ಟ್ರಿಪ್‌ಗಳ (ನಾಲ್ಕು ವಾರಗಳ ಕಾಲ) ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಪ್ರಕಟಿಸಲಾಗಿದೆ. ಈ ರೈಲು ತೆಲಂಗಾಣ, ಕರ್ನಾಟಕ ಹಾಗೂ ಕೇರಳ ಮೂರೂ ರಾಜ್ಯಗಳ ಪ್ರಯಾಣಿಕರಿಗೆ ನೆರವಾಗಲಿದೆ. ದಕ್ಷಿಣ ರೈಲ್ವೆಯ…

Read More

ನಿಮ್ಮ ಹಾಸಿಗೆ ಮೇಲೊಂದು ಟೈಮ್ ಬಾಂಬ್; ಮೊಬೈಲ್ ಪಕ್ಕದಲ್ಲಿಟ್ಟುಕೊಂಡು ನಿದ್ರೆ ಮಾಡುತ್ತೀರಾ? – Kannada News

ನವದೆಹಲಿ, ಜೂನ್ 2: ಮೊಬೈಲ್ ಫೋನ್ ಅನ್ನು ತಲೆಯ ಕೆಳಗೆ ಅಥವಾ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವ ಅಭ್ಯಾಸ ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿದೆ. ಆದರೆ, ಇದು ನಿಮ್ಮ ಆರೋಗ್ಯ, ಸುರಕ್ಷತೆ ಮತ್ತು ನಿದ್ರೆಯ (Sleep) ಗುಣಮಟ್ಟದ ಮೇಲೆ ಗಂಭೀರವಾದ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಎಂಬುದು ನಿಮಗೆ ಗೊತ್ತಾ? ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರ ದೈನಂದಿನ ಜೀವನವು ಸ್ಮಾರ್ಟ್‌ಫೋನ್‌ಗಳ ಸುತ್ತ ಸುತ್ತುತ್ತಿದೆ. ಮೊಬೈಲ್ ಫೋನ್‌ಗಳು ರಾತ್ರಿ ಮಲಗುವ ಮುನ್ನ ನಾವು ಮುಟ್ಟುವ ಕೊನೆಯ ವಸ್ತು ಮತ್ತು ಬೆಳಿಗ್ಗೆ ಎದ್ದಾಗ…

Read More

Spiritual Journey: ಬೃಂದಾವನದಲ್ಲಿ ವಿರಾಟ್-ಅನುಷ್ಕಾ; ಪ್ರೇಮಾನಂದ್ ಗುರೂಜಿ ಬಳಿ ಈ ಜೋಡಿ ಪದೇ ಪದೇ ಹೋಗುವುದೇಕೆ ಗೊತ್ತಾ? – Kannada News

ಪ್ರೇಮಾನಂದ್ ಗುರೂಜಿ ಬಳಿ ವಿರಾಟ್-ಅನುಷ್ಕಾImage Credit source: Pinterest ಭಾರತೀಯ ಕ್ರಿಕೆಟ್‌ನ ರನ್‌ ಮಷೀನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದಾ ಸುದ್ದಿಯಲ್ಲಿರುವ ಜೋಡಿ. ಮೈದಾನದಲ್ಲಿ ವಿರಾಟ್ ಅಬ್ಬರಿಸಿದರೆ, ಬೆಳ್ಳಿ ಪರದೆಯ ಮೇಲೆ ಅನುಷ್ಕಾ ಮಿಂಚುತ್ತಾರೆ. ಆದರೆ, ಇವರಿಬ್ಬರ ಗ್ಲಾಮರಸ್ ಬದುಕಿನ ಆಚೆಗೊಂದು ಶಾಂತ, ಆಧ್ಯಾತ್ಮಿಕ ಪ್ರಪಂಚವಿದೆ. ಈ ಜೋಡಿ ಆಗಾಗ ತಮ್ಮ ಬಿಡುವಿನ ವೇಳೆಯಲ್ಲಿ ಮಥುರಾ ಮತ್ತು ಬೃಂದಾವನದ ಪ್ರಸಿದ್ಧ ಸಂತ ಪ್ರೇಮಾನಂದ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿದ ವೀಡಿಯೊಗಳು…

Read More

ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್: ರಾಜ್ಯಪಾಲರ ಮೊರೆ ಹೋದ ಬಿಜೆಪಿ ನಿಯೋಗ – Kannada News

ಬೆಂಗಳೂರು, (ಜೂನ್ 02):  ಕಲಬುರಗಿ (Kalaburagi) ಜಿಲ್ಲೆಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣ (Ladle Mashak Dargah) ಹೊಸ ತಿರುವು ಪಡೆದುಕೊಂಡಿದೆ. ಆಳಂದದ (Aland) ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಪ್ರಕರಣ ವಾಪಸ್ ಪಡೆದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಲು ಸೂಚಿಸಬೇಕು ಎಂದು ಬಿಜೆಪಿ (BJP) ನಿಯೋಗ ರಾಜ್ಯಪಾಲರಿಗೆ (Governer) ದೂರು ನೀಡಿದೆ. ಇಂದು (ಜೂ.2) ಮಧ್ಯಾಹ್ನ 1 ಗಂಟೆಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ನೇತೃತ್ವದ…

Read More

Monsoon 2026: ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶ; ಕರ್ನಾಟಕದಲ್ಲಿ ಮಳೆಗಾಲ ಯಾವಾಗ ಶುರು? – Kannada News

ನವದೆಹಲಿ, ಜೂನ್ 2: ಕೇರಳಕ್ಕೆ ಈ ಬಾರಿ ಜೂನ್ 26ರಂದೇ ಮುಂಗಾರು ಪ್ರವೇಶವಾಗಲಿದೆ ಎನ್ನಲಾಗಿತ್ತು. ಆದರೆ, ಆ ದಿನಾಂಕದಲ್ಲಿ ಬದಲಾವಣೆಯಾಗಿದ್ದು, ಭಾರತೀಯ ಹವಾಮಾನ ಇಲಾಖೆ ಹೊಸ ದಿನಾಂಕವನ್ನು ಪ್ರಕಟಿಸಿದೆ. ಜೂನ್ 4ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ಭಾರತದ ಕೃಷಿ ವಲಯದ ಜೀವನಾಡಿಯಾಗಿರುವ ನೈಋತ್ಯ ಮುಂಗಾರು (Southwest Monsoon) ಜೂನ್ 4ರಂದು ಅಧಿಕೃತವಾಗಿ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸ್ಪಷ್ಟಪಡಿಸಿದೆ. ಮುಂಗಾರು ಆರಂಭವಾದ ಬೆನ್ನಲ್ಲೇ ಕೇರಳದಾದ್ಯಂತ ತೀವ್ರ ಬಿರುಗಾಳಿ ಸಹಿತವಾದ ಭಾರಿ…

Read More

ಮಾಜಿ ಎಂಎಲ್ಸಿಯನ್ನೇ ಅಪಹರಿಸಿ 2 ಕೋಟಿ ಹಣಕ್ಕೆ ಡಿಮ್ಯಾಂಡ್​​: ದುಷ್ಟರಿಂದ ದಯಾನಂದರೆಡ್ಡಿ ಬಚಾವ್​​ ಆಗಿದ್ದೇ ರೋಚಕ! – Kannada News

ಮಾಜಿ ಎಂಎಲ್‌ಸಿ ದಯಾನಂದರೆಡ್ಡಿImage Credit source: Tv9 Kannada ಆನೇಕಲ್​​, ಜೂನ್​​ 02: ವಿಧಾನ ಪರಿಷತ್​​ ಮಾಜಿ ಸದಸ್ಯನನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹುಸ್ಕೂರು ಬಳಿ ನಡೆದಿದೆ. ನಿನ್ನೆ ಮಧ್ಯರಾತ್ರಿ 12.15ರ ಸುಮಾರಿಗೆ ಘಟನೆ ನಡೆದಿದ್ದು, ಮಾಜಿ MLC ದಯಾನಂದರೆಡ್ಡಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಮುಖ್ಯಾಂಶಗಳು ಹಣಕ್ಕಾಗಿ ಮಾಜಿ ಎಂಎಲ್ಸಿಯ ಅಪಹರಿಸಿದ ದುಷ್ಕರ್ಮಿಗಳು ಆನೇಕಲ್…

Read More

ಪ್ಲಂಬರ್, ಎಲೆಕ್ಟ್ರಿಶಿಯನ್​ಗೂ ತಪ್ಪೋದಿಲ್ಲವಂತೆ ಎಐ ಕಂಟಕ; ಕೃತಕ ಬುದ್ಧಿಮತ್ತೆ ಪ್ಲಂಬಿಂಗ್ ಕೆಲಸ ಹೇಗೆ ಮಾಡುತ್ತೆ? – Kannada News

ನವದೆಹಲಿ, ಜೂನ್ 2: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ನಾವು ಅಂದುಕೊಂಡಿದ್ದಕ್ಕಿಂತ ಅತ್ಯಂತ ವೇಗವಾಗಿ ಉದ್ಯೋಗ ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತಿದೆ. 2023ರಲ್ಲಿ ಬಂದಿದ್ದ ವರದಿಯೊಂದು 2032ರ ವೇಳೆಗೆ ಎಐ ತಂತ್ರಜ್ಞಾನವು ಶೇ. 90ರಷ್ಟು ಉದ್ಯೋಗಗಳ ಮೇಲೆ ಪ್ರಭಾವ ಬೀರಬಹುದು ಎಂದು ಅಂದಾಜಿಸಿತ್ತು. ಕೇವಲ 3 ವರ್ಷಗಳಲ್ಲೇ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಎಐ ಅಂದುಕೊಂಡಿದ್ದಕ್ಕಿಂತ ಮೂರು ಪಟ್ಟು ವೇಗವಾಗಿ ಉದ್ಯೋಗಗಳನ್ನು ಆವರಿಸಿಕೊಳ್ಳುತ್ತಿದೆ. ಇದೇ ವೇಳೆ ಐಟಿ ರಂಗದ ಪ್ರಮುಖ ಸಂಸ್ಥೆಯಾದ ‘ಕಾಗ್ನಿಜೆಂಟ್’ (Cognizant) ಬಿಡುಗಡೆ ಮಾಡಿರುವ ಹೊಸ ಅಧ್ಯಯನದ ವಿವರಗಳು…

Read More