Headlines

ಕರ್ನಾಟಕ ಪೊಲೀಸರಿಗೆ ಭರ್ಜರಿ ಗಿಫ್ಟ್, ಕುಟುಂಬಸ್ಥರ ಜತೆ ಕಾಲ ಕಳೆಯಲು ರಜೆ ಭಾಗ್ಯ – Kannada News | Karnataka DG IGP Saleem Orders Leave to Police Staff for anniversary and birthday

ಬೆಂಗಳೂರು, (ಜನವರಿ 29):  ಕರ್ನಾಟಕ ಪೊಲೀಸ್  (Police) ಸಿಬ್ಬಂದಿಯ ಹುಟ್ಟುಹಬ್ಬ (Birthday) ಹಾಗೂ ವಿವಾಹ ವಾರ್ಷಿಕೋತ್ಸವಕ್ಕೆ (Wedding Anniversary) ಸಾಂದರ್ಭಿಕ ರಜೆ ನೀಡುವಂತೆ ಆದೇಶ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂದು ಕುಟುಂಬದವರ ಜೊತೆ ಕಾಲ ಕಳೆಯಲು ಅನುಕೂಲವಾಗುವಂತೆ ಆ ದಿನ ಕಡ್ಡಾಯ ರಜೆ ನೀಡಿ. ಇದರಿಂದ ಒತ್ತಡದ ಕೆಲಸ ಹಾಗೂ ವ್ಯಯಕ್ತಿಕ ಜೀವನ ಸಮತೋಲನಗೆ ರಜೆ…

Read More

ಮ್ಯಾಚ್ ಫಿಕ್ಸಿಂಗ್: ಬಾಂಗ್ಲಾದೇಶದ ತಮೀಮ್ ರೆಹಮಾನ್​ಗೆ ಶ್ರೀಲಂಕಾದಲ್ಲಿ ಜೈಲು, ಭಾರಿ ದಂಡ – Kannada News | LPL Match Fixing Scandal: Tamim Rahman Jailed 4 Years, Banned 5. Sri Lanka’s tough stance

ಶ್ರೀಲಂಕಾದ ಟಿ20 ಲೀಗ್‌ನಲ್ಲಿ ( Sri Lanka cricket) ನಡೆದ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಲಂಕಾ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಕೊಲಂಬೊ ಹೈಕೋರ್ಟ್ ಬಾಂಗ್ಲಾದೇಶದ ತಮೀಮ್ ರೆಹಮಾನ್ (Tamim Rahman) ಅವರನ್ನು ತಪ್ಪಿತಸ್ಥ ಎಂದು ಘೋಷಿಸಿದ್ದು, ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಅವರನ್ನು ಐದು ವರ್ಷಗಳ ಕಾಲ ಅಮಾನತುಗೊಳಿಸಲಾಗಿದ್ದು, 24 ಮಿಲಿಯನ್ ಶ್ರೀಲಂಕಾ ರೂಪಾಯಿ (ಸುಮಾರು 80 ಸಾವಿರ ಅಮೆರಿಕನ್ ಡಾಲರ್) ದಂಡ ವಿಧಿಸಲಾಗಿದೆ. ತಮೀಮ್ ರೆಹಮಾನ್ ಒಂದೆಡೆ ಬಾಂಗ್ಲಾದೇಶ ಮೂಲದವರಾಗಿದ್ದರೆ, ಮತ್ತೊಂದೆಡೆ…

Read More

ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ 2026: ಉಚಿತ ಪ್ರವೇಶಾವಕಾಶ – Kannada News | BISFF 2026 Free Submissions Open for Karnataka Short Films Oscar Qualifying Festival

ಸಿನಿಮಾ ನಿರ್ಮಾಣ, ನಿರ್ದೇಶನದಲ್ಲಿ ಆಸಕ್ತಿ ಇರುವವರಿಗೆ ಚಿತ್ರೋತ್ಸವಗಳು (Film Festival) ಅತ್ಯುತ್ತಮ ವೇದಿಕೆ. ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನಗೊಂಡರೆ ಅದರ ಹಿರಿಮೆಯೇ ಬೇರೆ. ಬರೀ ಪೂರ್ಣಾವಧಿ ಸಿನಿಮಾಗಳಿಗೆ ಮಾತ್ರವಲ್ಲ, ಕಿರುಚಿತ್ರಗಳಿಗೂ ಈ ಮಾತು ಅನ್ವಯ. ಎಷ್ಟೋ ನಿರ್ದೇಶಕರು ಮೊದಲ ಹೆಜ್ಜೆ ಇಡುವುದೇ ಕಿರುಚಿತ್ರಗಳ ಮೂಲಕ. ಕಿರುಚಿತ್ರಗಳ ಫೆಸ್ಟಿವಲ್ (Short Film Festival) ಕೂಡ ಸಿನಿಮಾಸಕ್ತರಿಗೆ ಹಲವು ಅವಕಾಶಗಳನ್ನು ಒದಗಿಸಿಕೊಡುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ, ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ (BISFF). ಈ ಚಿತ್ರೋತ್ಸವದ 2026ನೇ ವರ್ಷದ ಆವೃತ್ತಿಗೆ…

Read More

ಹಿಮಪಾತದಿಂದ ಉತ್ತರಾಖಂಡದ 77 ಗ್ರಾಮಗಳಿಗೆ ಸಂಕಷ್ಟ, ರಸ್ತೆಗಳು ಬಂದ್, ಪ್ರವಾಸಿಗರು ಕಂಗಾಲು – Kannada News | Snowfall in Uttarakhand 77 villages affected roads blocked in Chamoli

ಡೆಹ್ರಾಡೂನ್, ಜನವರಿ 29: ಉತ್ತರಾಖಂಡದಲ್ಲಿ ಹಿಮಪಾತದ (Snowfall) ಪರಿಣಾಮದಿಂದ ಅನೇಕ ಪ್ರವಾಸಿಗರು ಮಧ್ಯದಲ್ಲೇ ಸಿಲುಕಿಕೊಂಡಿದ್ದಾರೆ. ಚಮೋಲಿಯಲ್ಲಿ 77 ಗ್ರಾಮಗಳು ಹಿಮಪಾತದಿಂದ ತೊಂದರೆಗೆ ಸಿಲುಕಿವೆ, ರಸ್ತೆಗಳ ಸಂಪರ್ಕ ಸ್ಥಗಿತಗೊಂಡಿದೆ, ಪ್ರವಾಸಿಗರು ತಮ್ಮ ಊರನ್ನು ತಲುಪಿದರೆ ಸಾಕಪ್ಪ ಎಂದು ಚಡಪಡಿಸುತ್ತಿದ್ದಾರೆ. ಭಾರೀ ಹಿಮಪಾತವಾಗುತ್ತಿರುವುದರಿಂದ ಪ್ರವಾಸಿಗರು ಹೆಚ್ಚು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಡಳಿತ ಸೂಚಿಸಿದೆ. ಕಳೆದ 4 ದಿನಗಳಿಂದ ಉತ್ತರಾಖಂಡದಲ್ಲಿ ಹವಾಮಾನ ಅಸ್ಥಿರವಾಗಿದ್ದು, ತಡರಾತ್ರಿಯ ಮಳೆ, ಆಲಿಕಲ್ಲು ಮಳೆ ಮತ್ತು ಭಾರೀ ಹಿಮಪಾತವು ಹಲವಾರು ಜಿಲ್ಲೆಗಳಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅವುಗಳಲ್ಲಿ ಚಮೋಲಿ ಅತ್ಯಂತ…

Read More

ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಅದರಲ್ಲಿರುವುದು ಯಾವ ಮ್ಯಾಟರ್ ಗೊತ್ತಾ?

ಬೆಂಗಳೂರು, ಜನವರಿ 29: ವಿಧಾನಸಭೆಯಲ್ಲಿ ಬಳ್ಳಾರಿ ಬ್ಯಾನರ್​ ಗಲಾಟೆ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಅಶೋಕ್,​​ ಶಾಸಕರೊಬ್ಬರ ಗಂಭೀರ ಹೇಳಿಕೆಯನ್ನು ಉಲ್ಲೇಖಿಸಿದರು. ಅಷ್ಟೇ ಅಲ್ಲದೆ ಆ ಕುರಿತ ಆಡಿಯೋ, ವಿಡಿಯೋ ಸಾಕ್ಷಿಗಳಿರುವ ಪೆನ್​ ಡ್ರೈವ್​ ತೋರಿಸಿದರು. “ಕೊಲ್ಲಲು ಸಾವಿರಾರು ದಾರಿಗಳಿವೆ, ನಾನು ಅಂದುಕೊಂಡರೆ ಐದು ನಿಮಿಷದಲ್ಲಿ ಬಳ್ಳಾರಿಯನ್ನು ಭಸ್ಮ ಮಾಡಬಲ್ಲೆ” ಎಂದು ಆ ಶಾಸಕರು ಹೇಳಿರುವ ಹೇಳಿಕ ಉಲ್ಲೇಸಿದರು. ಈ ವಿಚಾರದಲ್ಲಿ ಗೃಹಸಚಿವರು ಸುಳ್ಳು ಎಂದು ಸಾಬೀತುಪಡಿಸಿದರೆ ಕ್ಷಮಾಪಣೆ ಕೇಳಲು ಸಿದ್ಧ ಎಂದು ಆರ್​​. ಅಶೋಕ್ ಹೇಳಿದ್ದಾರೆ….

Read More

ಕಿವಿಯಲ್ಲಿನ ವಾಕ್ಸ್ ತೆಗೆಯಲು ಸರಿಯಾದ ವಿಧಾನ ಯಾವುದು? ಆರೋಗ್ಯ ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ ನೋಡಿ – Kannada News | Why Earwax Builds Up & How to Clean Safely

ಕಿವಿಯಲ್ಲಿ (Ear) ಕೊಳಕು ಅಥವಾ ಮೇಣ (Earwax) ಸಂಗ್ರಹವಾದರೆ, ಅದನ್ನು ಬೆರಳಿನಿಂದ ಅಥವಾ ಇಯರ್ ಬಡ್ ಸಹಾಯದಿಂದ ಅದನ್ನು ತೆಗೆಯಲು ಪ್ರಯತ್ನಿಸುತ್ತೇವೆ. ಹಾಗಾದರೆ ಇದು ಕಿವಿಯನ್ನು ಸ್ವಚ್ಛಗೊಳಿಸುತ್ತದೆಯೇ, ಈ ವಿಧಾನ ಒಳ್ಳೆಯದೇ ಎಂದು ಎಂದಾದರೂ ಯೋಚಿಸಿದ್ದೀರಾ… ಆರೋಗ್ಯ ತಜ್ಞರು ಇದು ಸರಿಯಾದ ಮಾರ್ಗವಲ್ಲ ಎಂದು ಹೇಳುತ್ತಾರೆ. ಹಾಗದರೆ ಕಿವಿಯಲ್ಲಿ ಕೊಳಕು ಅಥವಾ ಮೇಣ ಸಂಗ್ರಹವಾಗುವುದಕ್ಕೆ ಕಾರಣವೇನು, ಅದನ್ನು ತೆಗೆಯಲು ಸರಿಯಾದ ವಿಧಾನ ಯಾವುದು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಇಎನ್‌ಟಿ…

Read More

ನಿವೃತ್ತಿ ಬಗ್ಗೆ ಯೋಚಿಸಿದ್ದೆ..! ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್

ಪ್ರಸ್ತುತ ಭಾರತದ ಟೆಸ್ಟ್ ಹಾಗೂ ಏಕದಿನ ತಂಡದ ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಎಂದರೆ ಅದು ಕನ್ನಡಿಗ ಕೆ.ಎಲ್. ರಾಹುಲ್. ಕೆಎಲ್ ರಾಹುಲ್ ಭಾರತೀಯ ಟೆಸ್ಟ್ ತಂಡದಲ್ಲಿ ಆರಂಭಿಕ ಆಟಗಾರನಾಗಿ ಆಡುತ್ತಿದ್ದಾರೆ. ವಿಶೇಷವೆಂದರೆ ಅವರು ಏಕದಿನ ತಂಡದಲ್ಲಿ ಮ್ಯಾಚ್ ಫಿನಿಷರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದಲ್ಲದೇ ವಿಕೆಟ್ ಕೀಪರ್ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಈ ಎರಡೂ ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್, ಸಂದರ್ಶನವೊಂದರಲ್ಲಿ ನಿವೃತ್ತಿ ಹೊಂದುವ ಬಗ್ಗೆ ಯೋಚಿಸಿದ್ದೆ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ….

Read More

ಕೊನೆಗೂ ಎಚ್ಚೆತ್ತ ಸರ್ಕಾರ: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಎದುರಾಗಿದ್ದ ನೀರಿನ ಆತಂಕ ದೂರ – Kannada News | Tumakuru: water crisis facing Siddaganga Mutt has been resolved; KIADB Clears BESCOM Dues

ತುಮಕೂರು, ಜನವರಿ 29: ಪಂಪ್ ಹೌಸ್​ನ ವಿದ್ಯುತ್ ಬಿಲ್ (Electricity bill) ಪಾವತಿಸದ ಪರಿಣಾಮ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರಿನ ಸಂಪರ್ಕವನ್ನು ಕೆಐಎಡಿಬಿ ಅಧಿಕಾರಿಗಳು ಕಡಿತಗೊಳಿಸಿದ್ದರು. ಹೀಗಾಗಿ ಸಿದ್ಧಗಂಗಾ ಮಠಕ್ಕೆ ನೀರಿನ (Water) ಸಮಸ್ಯೆ ಆಗುವ ಆತಂಕ ಎದುರಾಗಿತ್ತು. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಚರ್ಚೆ, ಟೀಕೆ ನಡೆದಿತ್ತು. ಟಿವಿ9 ವರದಿ ಕೂಡ ಮಾಡಿತ್ತು. ಇದೀಗ ವರದಿ ಬೆನ್ನಲ್ಲೇ ಬಾಕಿ ಉಳಿದಿದ್ದ ಸುಮಾರು 1.96 ಕೋಟಿ ರೂ ಹಣವನ್ನು ಬೆಸ್ಕಾಂಗೆ ಕೆಐಎಡಿಬಿ ಪಾವತಿಸಿದೆ. ಆ…

Read More

ಈ ಬಾರಿಯ ಬಜೆಟ್​ನಿಂದ ಇನ್ನಷ್ಟು ಸೂಕ್ಷ್ಮ ಕ್ರಮ ಎದುರು ನೋಡುತ್ತಿರುವ ಇನ್ಷೂರೆನ್ಸ್ ಸೆಕ್ಟರ್ – Kannada News | Insurance sector expectations from 2026 Budget

‘ಸೆಕ್ಷನ್ 80ಸಿ, 80ಸಿಸಿಸಿ, 80ಸಿಸಿಡಿ ಅಡಿಯಲ್ಲಿ ಟ್ಯಾಕ್ಸ್ ಇನ್ಸೆಂಟಿವ್​ಗಳನ್ನು ನೀಡುವುದರಿಂದ ಇನ್ಷೂರೆನ್ಸ್ ಬಳಕೆ ಮತ್ತು ದೀರ್ಘಾವಧಿ ಹಣ ಉಳಿತಾಯಕ್ಕೆ ಪ್ರೇರಣೆ ಸಿಗಬಹುದು. ಟರ್ಮ್ ಇನ್ಷೂರೆನ್ಸ್​ಗೆಯೇ ಪ್ರತ್ಯೇಕ ಟ್ಯಾಕ್ಸ್ ಡಿಡಕ್ಷನ್ ತರಬೇಕು’ ಎಂದು ಎಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ ಸಂಸ್ಥೆಯ ಸಿಇಒ ಸುಮಿತ್ ಮದನ್ ಹೇಳಿದ್ದಾರೆ. ಪಿಂಚಣಿದಾರರ ಆದಾಯದ ಮೇಲೆ ತೆರಿಗೆ ದೊಡ್ಡ ಹೊರೆಯಾಗುತ್ತದೆ. ಇತರ ನಿಶ್ಚಿತ ಬಡ್ಡಿ ಸ್ಕೀಮ್​ಗಳಲ್ಲಿರುವಂತೆ ಬಡ್ಡಿ ಅಥವಾ ಲಾಭಕ್ಕೆ ಮಾತ್ರವೇ ಟ್ಯಾಕ್ಸ್ ಹಾಕಬಹುದು. ಇದರಿಂದ ಪಿಂಚಣಿದಾರರಿಗೆ ನಿವೃತ್ತಿ ನಂತರದ ಆದಾಯ ಹೆಚ್ಚಲು ಸಾಧ್ಯವಾಗುತ್ತದೆ…

Read More

ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು? ರಚಿತಾ ರಾಮ್ ಹೇಳಿದ್ದೇನು? – Kannada News | Rachita Ram talks about landlord Kannada movie

ದುನಿಯಾ ವಿಜಯ್, ರಚಿತಾ ರಾಮ್ (Rachita Ram) ನಟನೆಯ ‘ಲ್ಯಾಂಡ್​ಲಾರ್ಡ್’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು, ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಮಂದಿ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದಾರೆ. ನಟಿ ರಚಿತಾ ರಾಮ್ ನಟನೆಗೆ ಸಖತ್ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಸಿನಿಮಾ ಬಗ್ಗೆ ನಟಿ ರಚಿತಾ ರಾಮ್ ಟಿವಿ9 ಜೊತೆಗೆ ಮಾತನಾಡಿದ್ದು, ತಮ್ಮ ಪಾತ್ರಕ್ಕೆ ಸಿಗುತ್ತಿರುವ ಮನ್ನಣೆಯ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ದರ್ಶನ್ ಹೊರಗಿದ್ದು ‘ಲ್ಯಾಂಡ್ ಲಾರ್ಡ್’ ಸಿನಿಮಾ ನೋಡಿದ್ದರೆ ಏನು ಹೇಳುತ್ತಿದ್ದರು…

Read More