87ರ ವಯಸ್ಸಿನಲ್ಲಿ ಮೊದಲ ಬಾರಿ ಸಮುದ್ರ ತೀರಕ್ಕೆ ಹೋದ ಅಜ್ಜಿ, ರಿಯಾಕ್ಷನ್ ಹೇಗಿತ್ತು ನೋಡಿ – Kannada News
ನವದೆಹಲಿ, ಜೂನ್ 02: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ಬಂದು ಹೋಗುತ್ತವೆ. ಆದರೆ, ಕೆಲವು ವಿಡಿಯೋಗಳು ಹೃದಯಕ್ಕೆ ಹತ್ತಿರವಾಗಿ, ಸಂಬಂಧಗಳ ನಿಜವಾದ ಮೌಲ್ಯವನ್ನು ನೆನಪಿಸುತ್ತವೆ. ಅಂತಹದೇ ಒಂದು ಅಪರೂಪದ ಹಾಗೂ ಭಾವುಕ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಜನರ ಮನ ಗೆದ್ದಿದೆ. 87 ವರ್ಷದ ಅಜ್ಜಿ(Grand Mother)ಯೊಬ್ಬರು ತಮ್ಮ ಜೀವಿತಾವಧಿಯಲ್ಲೇ ಮೊದಲ ಬಾರಿಗೆ ಬೀಚ್(Beach)ಗೆ ಭೇಟಿ ನೀಡಿ ಆನಂದಿಸುತ್ತಿರುವ ದೃಶ್ಯ ನೋಡುಗರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ‘ಹರ್ಷೆ ಇನೆನಿ’ ಎಂಬ ಕಂಟೆಂಟ್ ಕ್ರಿಯೇಟರ್ ಈ ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ….