Category Archives: Blog

Your blog category

Gold Rate: ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ದರ ಇಳಿಕೆ; ಭಾರತದಲ್ಲಿ ಎಷ್ಟಿದೆ ಬೆಲೆ?

ನವದೆಹಲಿ, ಜೂನ್ 2: ಇಂದು ಮಂಗಳವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver rates) ಯಥಾಸ್ಥಿತಿಯಲ್ಲಿ ಇದೆ. ಭಾರತದಲ್ಲಿ ಸತತ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇವತ್ತು ಬದಲಾವಣೆ ಆಗಿಲ್ಲ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬಂಗಾರದ ದರ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,56,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,43,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 2ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,622 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,320 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,717 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,622 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,320 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,320 ರೂ
  • ಚೆನ್ನೈ: 14,500 ರೂ
  • ಮುಂಬೈ: 14,320 ರೂ
  • ದೆಹಲಿ: 14,335 ರೂ
  • ಕೋಲ್ಕತಾ: 14,320 ರೂ
  • ಕೇರಳ: 14,320 ರೂ
  • ಅಹ್ಮದಾಬಾದ್: 14,325 ರೂ
  • ಜೈಪುರ್: 14,335 ರೂ
  • ಲಕ್ನೋ: 14,335 ರೂ
  • ಭುವನೇಶ್ವರ್: 14,320 ರೂ

ಇದನ್ನೂ ಓದಿ: ಜೂನ್​ನಲ್ಲಿ ಪ್ಯಾನ್ ಕಾರ್ಡ್, ಯುಪಿಐ, ಅಡ್ವಾನ್ಸ್ ಟ್ಯಾಕ್ಸ್ ಇತ್ಯಾದಿ ಪ್ರಮುಖ ಬದಲಾವಣೆಗಳನ್ನು ಗಮನಿಸಿ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 587 ರಿಂಗಿಟ್ (14,080 ರುಪಾಯಿ)
  • ದುಬೈ: 539.75 ಡಿರಾಮ್ (13,980 ರುಪಾಯಿ)
  • ಅಮೆರಿಕ: 147 ಡಾಲರ್ (13,986 ರುಪಾಯಿ)
  • ಸಿಂಗಾಪುರ: 195.80 ಸಿಂಗಾಪುರ್ ಡಾಲರ್ (14,569 ರುಪಾಯಿ)
  • ಕತಾರ್: 537 ಕತಾರಿ ರಿಯಾಲ್ (14,016 ರೂ)
  • ಸೌದಿ ಅರೇಬಿಯಾ: 555 ಸೌದಿ ರಿಯಾಲ್ (14,069 ರುಪಾಯಿ)
  • ಓಮನ್: 57.05 ಒಮಾನಿ ರಿಯಾಲ್ (14,096 ರುಪಾಯಿ)
  • ಕುವೇತ್: 45.43 ಕುವೇತಿ ದಿನಾರ್ (14,092 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 280 ರೂ
  • ಚೆನ್ನೈ: 290 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 280 ರೂ
  • ಜೈಪುರ್: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 290 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ಸೂರ್ಯವಂಶಿಗೆ 12 ಕೋಟಿ ರೂ. ಆಫರ್..!

ಭಾರತೀಯ ಕ್ರಿಕೆಟ್​ನ ಮುಂದಿನ ಸೂಪರ್ ಸ್ಟಾರ್ ಎಂದೇ ಬಿಂಬಿತನಾಗಿರುವ 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಬಿಗ್ ಆಫರ್ ನೀಡಲಾಗಿದೆ. ಅದು ಕೂಡ ಬರೋಬ್ಬರಿ 12 ಕೋಟಿ ರೂ. ಭರ್ಜರಿ ಆಫರ್. ಪ್ರಮುಖ ಕಾರ್ಪೊರೇಟ್ ಟೈರ್​ ಕಂಪೆನಿಯೊಂದು ತಮ್ಮ ಬ್ರ್ಯಾಂಡ್ ಲೋಗೊವನ್ನು ಬ್ಯಾಟ್ ಮೇಲೆ ಪ್ರದರ್ಶಿಸಲು ವೈಭವ್​ಗೆ ಬರೋಬ್ಬರಿ 12 ಕೋಟಿ ರೂಪಾಯಿಗಳ ವಾರ್ಷಿಕ ಸ್ಪಾನ್ಸರ್​ಶಿಪ್ ಆಫರ್ ನೀಡಿದೆ ಎಂದು ವರದಿಯಾಗಿದೆ.

ಇದರ ಜೊತೆಗೆ ಮತ್ತೊಂದು ಟೈರ್ ಕಂಪೆನಿ ಕೂಡ ವೈಭವ್ ಸೂರ್ಯವಂಶಿಯ ಬ್ಯಾಟ್​ ಸ್ಪಾನ್ಸರ್​ಶಿಪ್​ಗಾಗಿ ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ. ಅಂದರೆ ಎರಡು ಪ್ರಮುಖ ಕಂಪೆನಿಗಳು ವೈಭವ್ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಬ್ಯಾಟ್ ಸ್ಪಾನ್ಸರ್​ಶಿಪ್​ನಿಂದಾಗಿ ಯುವ ದಾಂಡಿಗ ಕೋಟಿ ರೂ. ಎನಿಸುವುದು ಖಚಿತ ಎಂದೇ ಹೇಳಬಹುದು.

ಸದ್ಯ ವೈಭವ್ ಸೂರ್ಯವಂಶಿ ಸದ್ಯ ‘SS’ (ಸರೀನ್ ಸ್ಪೋರ್ಟ್ಸ್​) ಕಂಪನಿಯೊಂದಿಗೆ ವಾರ್ಷಿಕ 50 ಲಕ್ಷ ರೂಪಾಯಿಗಳ ಬ್ಯಾಟ್ ಒಪ್ಪಂದವನ್ನು ಹೊಂದಿದ್ದಾರೆ. 3 ವರ್ಷಗಳ ಹಳೆಯ ಈ ಒಪ್ಪಂದವು ಮುಕ್ತಾಯದ ಹಂತದಲ್ಲಿದೆ. ಈ ಒಪ್ಪಂದವು ಮುಗಿಯುತ್ತಿದ್ದಂತೆ ವೈಭವ್ ಸೂರ್ಯವಂಶಿಯ ಬ್ಯಾಟ್ ಮೇಲೆ ಹೊಸ ಕಂಪೆನಿಯ ಹೆಸರು ಕಾಣಿಸಿಕೊಳ್ಳಲಿದೆ.

ಆದರೆ ಆ ಕಂಪೆನಿ ಯಾವುದು ಎಂಬುದು ಇನ್ನೂ ಕೂಡ ಬಹಿರಂಗವಾಗಿಲ್ಲ. ಇದಾಗ್ಯೂ ಭಾರತ ಸ್ಟಾರ್ ಆಟಗಾರರ ಬ್ಯಾಟ್ ಸ್ಪಾನ್ಸರ್​ ಮಾಡುತ್ತಿರುವ ಎರಡು ಕಂಪೆನಿಗಳೇ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರ ಬ್ಯಾಟ್ ಸ್ಪಾನ್ಸರ್‌ಗಳು ಮತ್ತು ಅವರ ವಾರ್ಷಿಕ ಒಪ್ಪಂದದ ಮೊತ್ತದ ವಿವರಗಳು ಈ ಕೆಳಗಿನಂತಿವೆ…

  • ವಿರಾಟ್ ಕೊಹ್ಲಿ (MRF): ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮೊತ್ತದ ಬ್ಯಾಟ್ ಸ್ಪಾನ್ಸರ್‌ಶಿಪ್ ಹೊಂದಿರುವುದು ವಿರಾಟ್ ಕೊಹ್ಲಿ. 2017ರಲ್ಲಿ ಎಂಆರ್​ಎಫ್ ಕಂಪೆನಿ ಜೊತೆ ಈ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದ ಕೊಹ್ಲಿ  ವಾರ್ಷಿಕವಾಗಿ 12.5 ಕೋಟಿ ರೂ. ಪಡೆಯುತ್ತಿದ್ದಾರೆ.
  • ಶುಭ್​ಮನ್ ಗಿಲ್ (MRF): ಭಾರತ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭ್​ಮನ್​ ಗಿಲ್ ಅವರು ಈ ಹಿಂದೆ ‘CEAT’ ಕಂಪನಿಯ ಒಪ್ಪಂದದಲ್ಲಿದ್ದರು. ಆದರೆ ಅವರ ಅದ್ಭುತ ಫಾರ್ಮ್ ಹಾಗೂ ಮಾರುಕಟ್ಟೆ ಮೌಲ್ಯವನ್ನು ನೋಡಿ MRF ಸಂಸ್ಥೆಯು ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಅದರಂತೆ ಗಿಲ್ ಈಗ ಎಂಆರ್​ಎಫ್ ಸ್ಪಾನ್ಸರ್​ಶಿಪ್​ನೊಂದಿಗೆ ವಾರ್ಷಿಕ 10 ಕೋಟಿ ರೂ. ಪಡೆಯುತ್ತಿದ್ದಾರೆ.
  • ರೋಹಿತ್ ಶರ್ಮಾ (CEAT): ಟೀಮ್ ಇಂಡಿಯಾದ ಹಿರಿಯ ಆಟಗಾರ ರೋಹಿತ್ ಶರ್ಮಾ ಅವರು ದೀರ್ಘಕಾಲದಿಂದ ಸಿಯೆಟ್ ಟೈರ್ಸ್​ ಬ್ರ್ಯಾಂಡ್‌ನ ಲೋಗೋವನ್ನು ತಮ್ಮ ಬ್ಯಾಟ್ ಮೇಲೆ ಬಳಸುತ್ತಿದ್ದು, ಇದಕ್ಕಾಗಿ ಹಿಟ್​ಮ್ಯಾನ್ ಪಡೆಯುತ್ತಿರುವ ವಾರ್ಷಿಕ ಮೊತ್ತ 4 ಕೋಟಿ ರೂ.

ಅಂದರೆ ಇಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಬ್ಯಾಟ್​ಗಳ ಮೇಲೆ ಜಾಹೀರಾತು ನೀಡಿರುವುದು MRF ಮತ್ತು CEAT ಕಂಪೆನಿಗಳು. ಈ ದೈತ್ಯ ಟೈರ್ ಕಂಪೆನಿಗಳೇ ಈಗ ವೈಭವ್ ಸೂರ್ಯವಂಶಿಯ ಬ್ಯಾಟ್ ಮೇಲೂ ಕಣ್ಣಿಟ್ಟಿರುವ ಸಾಧ್ಯತೆಯಿದೆ.

ಸದ್ಯ ಮಾಹಿತಿ ಪ್ರಕಾರ ವೈಭವ್ ಸೂರ್ಯವಂಶಿ ಹಾಗೂ SS ಕಂಪೆನಿ ನಡುವಣ ಒಪ್ಪಂದ ಇನ್ನು ಕೆಲವೇ ತಿಂಗಳಲ್ಲಿ ಮುಗಿಯಲಿದೆ. ಅದಕ್ಕೂ ಮುನ್ನ ಎರಡು ಕಂಪೆನಿಗಳು ವೈಭವ್ ಸ್ಪಾನ್ಸರ್​ಶಿಪ್​ಗಾಗಿ ಕೋಟಿ ಸುರಿಯಲು ಮುಂದಾಗಿದ್ದಾರೆ.

ಇದನ್ನೂ ಓದಿ: RCB ಪರ ಈ ಬಾರಿ ಒಂದೇ ಒಂದು ಪಂದ್ಯವಾಡದ 9 ಆಟಗಾರರು ಇವರೇ!

ಹೀಗೆ ಕೋಟಿ ಪೈಪೋಟಿಯೊಂದಿಗೆ ವೈಭವ್ ಸೂರ್ಯವಂಶಿ 12 ಕೋಟಿ ರೂ.ಗೆ ಡೀಲ್ ಕುದುರಿಸಿಕೊಳ್ಳಲಿದ್ದಾರಾ ಅಥವಾ 12 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಆಫರ್​ ಪಡೆದು ವಿರಾಟ್ ಕೊಹ್ಲಿಯ (12.5 ಕೋಟಿ ರೂ.) ಬ್ಯಾಟ್ ಸ್ಪಾನ್ಸರ್​ಶಿಪ್​ ದಾಖಲೆ ಮುರಿಯಲಿದ್ದಾರಾ ಕಾದು ನೋಡಬೇಕಿದೆ.

Source link

Shani Retrograde: ಮೇಷ ರಾಶಿಯವರೇ ಎಚ್ಚರ! ಜು. 27 ರಿಂದ ಶನಿ ವಕ್ರಿ ನಡೆ; ನಿಮ್ಮ ಜೀವನದಲ್ಲಾಗಲಿದೆ ಭಾರಿ ಬದಲಾವಣೆ

ಮೇಷ ರಾಶಿಯವರ ಮೇಲೆ ಶನಿ ವಕ್ರಿ ಪ್ರಭಾವImage Credit source: Pinterest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿದೇವನನ್ನು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಎಂದು ಪರಿಗಣಿಸಲಾಗಿದೆ. ಕರ್ಮಫಲ ದಾತನಾದ ಶನಿಯು ಜುಲೈ 27 ರಂದು ಹಿಮ್ಮುಖ ಚಲನೆಯನ್ನು (Retrograde/ವಕ್ರಿ ನಡೆ) ಪ್ರಾರಂಭಿಸಲಿದ್ದಾನೆ. ಪ್ರಸ್ತುತ ಮೇಷ ರಾಶಿಯವರಿಗೆ ಶನಿಯ ಸಾಡೇ ಸಾತಿಯ ಮೊದಲ ಹಂತ ನಡೆಯುತ್ತಿರುವುದರಿಂದ, ಈ ವಕ್ರಿ ಚಲನೆಯ ಪ್ರಭಾವವು ಅವರ ಜೀವನದ ಮೇಲೆ ಅತ್ಯಂತ ಆಳವಾಗಿರಲಿದೆ. ಜುಲೈ 27 ರ ನಂತರ ಮೇಷ ರಾಶಿಯವರ ವೃತ್ತಿ, ಸಂಪತ್ತು, ಪ್ರೇಮ ಜೀವನ ಮತ್ತು ಆರೋಗ್ಯದಲ್ಲಿ ಯಾವ ರೀತಿಯ ಪ್ರಮುಖ ಬದಲಾವಣೆಗಳು ಬರಲಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಪ್ರೇಮ ಮತ್ತು ಕೌಟುಂಬಿಕ ಜೀವನ:

ಶನಿಯ ಹಿಮ್ಮುಖ ಚಲನೆಯಿಂದಾಗಿ ನಿಮ್ಮ ಸ್ವಭಾವದಲ್ಲಿ ಕಿರಿಕಿರಿ ಮತ್ತು ಹಠಾತ್ ಕೋಪ ಹೆಚ್ಚಾಗಬಹುದು. ಇದು ನಿಮ್ಮ ಕೌಟುಂಬಿಕ ಜೀವನ ಮತ್ತು ಪ್ರೇಮ ಸಂಬಂಧಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ಹಳೆಯ ವಿಷಯಗಳು ಮತ್ತೆ ಮುನ್ನೆಲೆಗೆ ಬಂದು ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆಯಿದೆ. ಆದ್ದರಿಂದ, ನಿಮ್ಮ ಮಾತಿನ ಮೇಲೆ ನಿಗಾ ಇರಲಿ. ಅಹಂಕಾರವನ್ನು ಬದಿಗಿಟ್ಟು, ಶಾಂತಿಯುತವಾಗಿ ಸಂವಹನ ನಡೆಸಿದರೆ ಮಾತ್ರ ನಿಮ್ಮ ಸಂಬಂಧಗಳನ್ನು ಉಳಿಸಿಕೊಳ್ಳಲು ಮತ್ತು ಬಲಪಡಿಸಲು ಸಾಧ್ಯವಾಗುತ್ತದೆ.

ವೃತ್ತಿಜೀವನ ಮತ್ತು ಉದ್ಯೋಗ:

ಉದ್ಯೋಗಿಗಳಿಗೆ ಈ ಅವಧಿಯಲ್ಲಿ ವೃತ್ತಿಜೀವನದಲ್ಲಿ ಕೆಲವು ಹಿನ್ನಡೆಗಳು ಅಥವಾ ಕೆಲಸಗಳಲ್ಲಿ ವಿಳಂಬ ಉಂಟಾಗಬಹುದು. ನೀವು ನಿರೀಕ್ಷಿಸುತ್ತಿರುವ ಹೊಸ ಕೆಲಸ, ಪ್ರಮೋಷನ್ (ಬಡ್ತಿ) ಅಥವಾ ಪ್ರಮುಖ ಪ್ರಾಜೆಕ್ಟ್‌ಗಳ ವಿಷಯದಲ್ಲಿ ತಾಳ್ಮೆಯಿಂದ ಇರಬೇಕಾಗುತ್ತದೆ. ಕೆಲಸದ ಹೊರೆ ಹೆಚ್ಚಾಗುವುದರಿಂದ ಮಾನಸಿಕ ಒತ್ತಡ ಎದುರಾಗಬಹುದು. ಆದರೆ, ಇದು ನಿಮ್ಮ ಶಿಸ್ತು ಮತ್ತು ಕಠಿಣ ಪರಿಶ್ರಮವನ್ನು ಪರೀಕ್ಷಿಸುವ ಸಮಯ. ಸದ್ಯಕ್ಕೆ ಹೊಸ ಸಾಹಸಗಳಿಗೆ ಕೈ ಹಾಕದೆ, ಬಾಕಿ ಉಳಿದಿರುವ ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸಿ; ಇದು ಭವಿಷ್ಯದಲ್ಲಿ ಉತ್ತಮ ಫಲ ನೀಡುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಆರ್ಥಿಕ ಸ್ಥಿತಿ:

ಶನಿಯ ವಕ್ರಿ ಹಂತದಲ್ಲಿ ಹಣಕಾಸಿನ ವಿಷಯಗಳಲ್ಲಿ ಅತಿಯಾದ ಜಾಗರೂಕತೆ ಅಗತ್ಯ. ನಿಮ್ಮ ಆದಾಯದಲ್ಲಿ ಯಾವುದೇ ಕೊರತೆಯಾಗದಿದ್ದರೂ, ಅನಿರೀಕ್ಷಿತ ಖರ್ಚುಗಳು ಹೆಚ್ಚಾಗುವುದರಿಂದ ಉಳಿತಾಯ ಮಾಡುವುದು ಕಷ್ಟವಾಗಬಹುದು. ಇದು ನಿಮ್ಮ ತಿಂಗಳ ಬಜೆಟ್ ಅನ್ನು ಏರುಪೇರು ಮಾಡಬಹುದು. ಆದ್ದರಿಂದ, ಈ ಸಮಯದಲ್ಲಿ ಯಾವುದೇ ರೀತಿಯ ಅಪಾಯಕಾರಿ (Risky) ಹೂಡಿಕೆಗಳಿಂದ ದೂರವಿರಿ. ಧಾವಂತದಲ್ಲಿ ಯಾರಿಗಾದರೂ ಸಾಲ ನೀಡುವ ಮುನ್ನ ನೂರು ಬಾರಿ ಯೋಚಿಸಿ, ಏಕೆಂದರೆ ಈ ಅವಧಿಯಲ್ಲಿ ಕೊಟ್ಟ ಹಣವು ಮರಳಿ ಬರುವುದು ಅತ್ಯಂತ ವಿಳಂಬವಾಗಬಹುದು.

ಆರೋಗ್ಯ ಮತ್ತು ಶಕ್ತಿ:

ಮೇಷ ರಾಶಿಯವರು ಮೂಲತಃ ಸದಾ ಉತ್ಸಾಹ ಮತ್ತು ಕ್ರಿಯಾಶೀಲತೆಯಿಂದ ಕಂಗೊಳಿಸುವವರು. ಆದರೆ ಶನಿಯ ಹಿಮ್ಮುಖ ಚಲನೆಯು ನಿಮ್ಮ ಶಕ್ತಿಯ ಮಟ್ಟವನ್ನು (Energy levels) ಕುಗ್ಗಿಸಬಹುದು. ಅತಿಯಾದ ಆಯಾಸ, ಆತಂಕ ಮತ್ತು ಮಾನಸಿಕ ಒತ್ತಡ ನಿಮ್ಮನ್ನು ಕಾಡಬಹುದು. ಇದರೊಂದಿಗೆ, ನಿಮ್ಮ ಹಳೆಯ ಆರೋಗ್ಯ ಸಮಸ್ಯೆಗಳು ಮತ್ತೆ ಮರುಕಳಿಸುವ ಸಾಧ್ಯತೆಯಿದೆ. ಇದನ್ನು ತಡೆಯಲು ಸಾಕಷ್ಟು ವಿಶ್ರಾಂತಿ ಪಡೆಯಿರಿ, ಸಮಯಕ್ಕೆ ಸರಿಯಾಗಿ ಊಟ-ನಿದ್ರೆಯ ದಿನಚರಿಯನ್ನು ಪಾಲಿಸಿ ಹಾಗೂ ದಿನನಿತ್ಯ ಯೋಗ ಮತ್ತು ಪ್ರಾಣಾಯಾಮವನ್ನು ತಪ್ಪದೇ ರೂಢಿಸಿಕೊಳ್ಳಿ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!

ದೇವನಹಳ್ಳಿ, ಜೂನ್ 2: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಕಣ್ಣೂರಹಳ್ಳಿ ರಸ್ತೆಯಲ್ಲಿ ಅಚ್ಚರಿಯ ಹಾಗೂ ಆತಂಕದ ಘಟನೆಯೊಂದು ನಡೆದಿದೆ. ಇಲ್ಲಿ ಒಂದೇ ಸ್ಥಳದಲ್ಲಿ ಬರೋಬ್ಬರಿ 23 ನಾಗರಹಾವಿನ ಮರಿಗಳು ಒಟ್ಟಿಗೆ ಪತ್ತೆಯಾಗಿವೆ. ಒಂದೇ ಕಡೆ ಇಷ್ಟೊಂದು ಸಂಖ್ಯೆಯ ಹಾವಿನ ಮರಿಗಳನ್ನು ಕಂಡ ಸ್ಥಳೀಯರು ಕೆಲ ಕಾಲ ತೀವ್ರ ಆತಂಕಕ್ಕೆ ಒಳಗಾಗಿ ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಜಾಗೃತರಾದ ಸಾರ್ವಜನಿಕರು ಸ್ಥಳೀಯ ಉರಗ ತಜ್ಞರಾದ ಸಿ.ಎಸ್. ನಾಗಭೂಷಣ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞರು ಹಾವಿನ ಮರಿಗಳನ್ನು ಅತ್ಯಂತ ರಕ್ಷಣೆ ಮಾಡಿದ್ದು, ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಡಲು ನಿರ್ಧರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರುಕ್ಮಿಣಿ ವಸಂತ್ ಡೀಪ್‌ಫೇಕ್ ವಿಡಿಯೋ ಹಂಚಿಕೊಂಡವರಿಗೆ ನಡುಕ; 29 ಅಕೌಂಟ್‌ಗಳ ವಿರುದ್ಧ ಎಫ್‌ಐಆರ್

ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಟಿ ರುಕ್ಮಿಣಿ ವಸಂತ್ ಅವರ (Rukmini Vasanth) ನಕಲಿ ಬಿಕಿನಿ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಕಿಡಿಗೇಡಿಗಳಿಗೆ ನಡುಕು ಶುರುವಾಗಿದೆ. ಈ ಖಾತೆಗಳ ವಿರುದ್ಧ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೃತಕ ಬುದ್ಧಿಮತ್ತೆ (AI) ಹಾಗೂ ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿ, ಬೇರೆಯೊಬ್ಬರ ದೇಹಕ್ಕೆ ತಮ್ಮ ಮುಖವನ್ನು ಜೋಡಿಸಿ ನಕಲಿ ದೃಶ್ಯಗಳನ್ನು ಸೃಷ್ಟಿಸಲಾಗಿದೆ ಎಂದು ನಟಿ ದೂರು ನೀಡಿದ್ದರು. ಈ ಕೃತ್ಯದಿಂದ ತಮಗೆ ತೀವ್ರ ಮುಜುಗರವಾಗಿದ್ದು, ತಮ್ಮ ಚಾರಿತ್ರ್ಯ ಹರಣ ಮಾಡಲು ಯತ್ನಿಸಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ದೂರು ಆಧರಿಸಿ ಎಫ್​​ಐಆರ್ ದಾಖಲು ಮಾಡಿಕೊಳ್ಳಲಾಗಿದೆ.

ರುಕ್ಮಿಣಿ ವಸಂತ್ ನೀಡಿದ ದೂರಿನನ್ವಯ ಪೊಲೀಸರು ಒಟ್ಟು 29 ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇದರಲ್ಲಿ 9 ಇನ್‌ಸ್ಟಾಗ್ರಾಮ್ ಅಕೌಂಟ್‌ಗಳು, 14 ಟ್ವಿಟರ್ ಅಕೌಂಟ್‌ಗಳು ಹಾಗೂ 6 ಫೇಸ್‌ಬುಕ್ ಪೇಜ್‌ಗಳು ಸೇರಿವೆ. ಸೈಬರ್ ಪೊಲೀಸರು ಐಟಿ ಆ್ಯಕ್ಟ್ 66C, 66D ಹಾಗೂ ಬಿಎನ್‌ಎಸ್ (BNS) ಸೆಕ್ಷನ್ 75(3), 79, 336, 356, 351, 352 ಮತ್ತು 294ರ ಅಡಿಯಲ್ಲಿ ಮೊಕದ್ದಮೆ ಹೂಡಿ ತನಿಖೆ ಆರಂಭಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ದುರ್ಬಳಕೆ ತೀವ್ರವಾಗುತ್ತಿದ್ದು, ಸೆಲೆಬ್ರಿಟಿಗಳ ನಕಲಿ ಚಿತ್ರಗಳನ್ನು ಸೃಷ್ಟಿಸುವ ‘ಡೀಪ್‌ಫೇಕ್’ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರು ಇದೇ ರೀತಿಯ ಸಮಸ್ಯೆ ಎದುರಿಸಿದ್ದರು. ಆ ಸಂದರ್ಭದಲ್ಲೂ ಬಂಧನಗಳು ನಡೆದಿದ್ದವು.

ಇದನ್ನೂ ಓದಿ: ‘ಇದು ರುಕ್ಮಿಣಿ ವಸಂತ್ ಸಮಸ್ಯೆ ಮಾತ್ರವಲ್ಲ’; ಎಐ ಅಪಾಯದ ಬಗ್ಗೆ ನಿರ್ಮಾಪಕಿ ಎಚ್ಚರಿಕೆ

ಇನ್ನು, ಸ್ಯಾಂಡಲ್‌ವುಡ್ ಹಿರಿಯ ನಟಿ ರಮ್ಯಾ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್​​​ಗಳು ಬಂದಿದ್ದವು. ಇದರ ವಿರುದ್ಧ ದೂರು ದಾಖಲು ಮಾಡಲಾಗಿತ್ತು. ಆಗ ಅನೇಕರ ಬಂಧನ ಆಗಿತ್ತು. ಈಗ ನಟಿ ರುಕ್ಮಿಣಿ ವಸಂತ್ ಪ್ರಕಿರಣದಲ್ಲೂ ಹಲವರನ್ನು ಅರೆಸ್ಟ್ ಮಾಡುವ ಸಾಧ್ಯತೆ ಇದೆ. ತಂತ್ರಜ್ಞಾನದ ಇಂತಹ ದುರ್ಬಳಕೆ ಚಿತ್ರರಂಗದ ತಾರೆಯರಲ್ಲಿ ಆತಂಕ ಮೂಡಿಸಿದೆ.

(ವರದಿ: ವಿಕಾಸ್)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Zojila Tunnel : ಲಡಾಖ್-ಕಾಶ್ಮೀರ ನಡುವೆ ಸರ್ವಋತು ಸಂಪರ್ಕ, ಜೂನ್ 9ರೊಳಗೆ ಝೋಜಿಲಾ ಸುರಂಗದ ಉತ್ಖನನ ಕಾರ್ಯ ಪೂರ್ಣ

ಶ್ರೀನಗರ, ಜೂನ್ 02: ಕಾಶ್ಮೀರ(Kashmir) ಮತ್ತು ಲಡಾಖ್ ನಡುವೆ 365 ದಿನವೂ ಸುಗಮ ಸಂಚಾರ ಕಲ್ಪಿಸುವ, ದೇಶದ ಅತ್ಯಂತ ಹೆಮ್ಮೆಯ ಮತ್ತು ಅತಿ ಎತ್ತರದ ಮೂಲಸೌಕರ್ಯ ಯೋಜನೆಯಾದ ಝೋಜಿಲಾ ಸುರಂಗ (Zojila Tunnel) ಕಾಮಗಾರಿಯಲ್ಲಿ ಐತಿಹಾಸಿಕ ಮೈಲಿಗಲ್ಲು ತಲುಪುವ ಸಮಯ ಹತ್ತಿರ ಬಂದಿದೆ. ಹಿಮಾಲಯದ ಕಠಿಣ ಪರಿಸ್ಥಿತಿಯ ನಡುವೆಯೂ ಸುರಂಗದ ಉತ್ಖನನ ಕಾರ್ಯವು ಈಗ ಅಮತಿಮ ಹಂತಕ್ಕೆ ತಲುಪಿದ್ದು, ಜೂನ್ 9ರ ವೇಳೆಗೆ ಇದು ಸಂಪೂರ್ಣಗೊಳ್ಳಲಿದೆ.

ಹಿಮಾಲಯದಲ್ಲಿ 11,578 ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ಈ 13.15 ಕಿಲೋಮೀಟರ್ ಉದ್ದದ ಬೃಹತ್ ಸುರಂಗವನ್ನು ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಮತ್ತು ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆ ನಿರ್ಮಿಸುತ್ತಿದೆ.

ಬಾಲ್ಟಾಲ್ ಮತ್ತು ಮಿನಮಾರ್ಗ್ ಎರಡೂ ಕಡೆಯಿಂದ ಕೊರೆಯಲಾದ ಸುರಂಗದ ಅಂಚುಗಳು ಮೇ ಅಂತ್ಯಕ್ಕೆ ಒಂದಾಗಲಿದ್ದು, ಇದನ್ನು ಎಂಜಿನಿಯರ್‌ಗಳು ಐತಿಹಾಸಿಕ “ಹ್ಯಾಂಡ್‌ಶೇಕ್” ಕ್ಷಣ ಎಂದು ಕರೆದಿದ್ದಾರೆ. ಮೈನಸ್ ತಾಪಮಾನ, ಭೀಕರ ಹಿಮಪಾತ ಹಾಗೂ ಕಠಿಣ ಭೂವಿಜ್ಞಾನದ ಸವಾಲುಗಳನ್ನು ಮೆಟ್ಟಿ ನಿಂತು MEIL ತಂಡವು ಹಗಲಿರುಳು ಶ್ರಮಿಸುತ್ತಿದೆ.

ದೇಶಕ್ಕೆ ಮತ್ತು ಗಡಿ ಸುರಕ್ಷತೆಗೆ ಇದರ ಪ್ರಾಮುಖ್ಯತೆ ಏನು?
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಒಟ್ಟು 6,809.69 ಕೋಟಿ ರೂ. ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆ ಸೆಪ್ಟೆಂಬರ್ 2026 ರ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ.

ಮತ್ತಷ್ಟು ಓದಿ: Video: ನಾನೇನು ಪಾಕಿಸ್ತಾನಿನಾ ನಾನೂ ಭಾರತೀಯನೆ ಪ್ರವಾಸಿಗರಿಗೆ ಕಾಶ್ಮೀರಿ ವ್ಯಕ್ತಿ ಕೊಟ್ಟ ಉತ್ತರ ಕೇಳಿ

ಸುರಕ್ಷಿತ ಪ್ರಯಾಣ: ಪ್ರತಿ ಚಳಿಗಾಲದಲ್ಲಿ ಭೀಕರ ಹಿಮಪಾತ ಮತ್ತು ಇತ್ತೀಚೆಗೆ ಸಂಭವಿಸಿದಂತೆ ಭೀಕರ ಪ್ರಾಣಹಾನಿ ಉಂಟುಮಾಡುವ ಹಿಮಕುಸಿತದ ಅಪಾಯಗಳಿರುವ ಝೋಜಿಲಾ ಪಾಸ್ ಅನ್ನು ಇದು ಬೈಪಾಸ್ ಮಾಡಲಿದ್ದು, ಶ್ರೀನಗರ-ಕಾರ್ಗಿಲ್-ಲೇಹ್ ಪ್ರಯಾಣ ಅತ್ಯಂತ ಸುರಕ್ಷಿತವಾಗಲಿದೆ.

ಗಡಿ ಭದ್ರತೆಗೆ ಬಲ: ಚೀನಾ ಮತ್ತು ಪಾಕಿಸ್ತಾನದೊಂದಿಗೆ ಸೂಕ್ಷ್ಮ ಗಡಿ ಹಂಚಿಕೊಂಡಿರುವ ಲಡಾಖ್‌ಗೆ ಚಳಿಗಾಲದಲ್ಲಿ ಸಂಪರ್ಕ ಕಡಿತಗೊಳ್ಳುತ್ತಿತ್ತು. ಈ ಸುರಂಗದಿಂದಾಗಿ ಇನ್ಮುಂದೆ ಸೇನಾ ಸಿಬ್ಬಂದಿ, ಭಾರೀ ರಕ್ಷಣಾ ಉಪಕರಣಗಳು ಹಾಗೂ ತುರ್ತು ಸೇವೆಗಳ ಅಡೆತಡೆಯಿಲ್ಲದ ಚಲನೆ ಸಾಧ್ಯವಾಗಲಿದೆ.

ಸ್ಥಳೀಯರಿಗೆ ಉದ್ಯೋಗ ಮತ್ತು ಆರ್ಥಿಕ ಚೇತರಿಕೆ: ಈ ಯೋಜನೆಯಲ್ಲಿ ಈಗಾಗಲೇ 1000 ಕ್ಕೂ ಹೆಚ್ಚು ಸ್ಥಳೀಯ ನಿವಾಸಿಗಳು ಉದ್ಯೋಗ ಪಡೆದಿದ್ದಾರೆ. ಸೋನಾಮಾರ್ಗ್, ಡ್ರಾಸ್, ಕಾರ್ಗಿಲ್ ಮತ್ತು ಲೇಹ್‌ನ ವ್ಯಾಪಾರಿಗಳು ಹಾಗೂ ಪ್ರವಾಸೋದ್ಯಮ ವೃತ್ತಿಪರರಿಗೆ ವರ್ಷಪೂರ್ತಿ ವ್ಯಾಪಾರ ನಡೆಸಲು ಈ ಸುರಂಗವು ಹೊಸ ಆರ್ಥಿಕ ಜೀವನಾಡಿಯಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Jupiter Transit In Cancer 2026: ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?

2026ರ ಜೂನ್ 2ರಂದು ಬೆಳಿಗ್ಗೆ 6:29ಕ್ಕೆ ಗುರು ಗ್ರಹವು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಸಂಚರಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿಯಲ್ಲಿ ಗುರು ಉಚ್ಚ ಸ್ಥಾನವನ್ನು ಪಡೆಯುವುದರಿಂದ ಈ ಸಂಚಾರವು ಮಹತ್ವಪೂರ್ಣವಾಗಿದೆ. ಗುರುಬಲದ ಆಧಾರದ ಮೇಲೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಅಭಿವೃದ್ಧಿ ಮತ್ತು ಯಶಸ್ಸು ಅವಲಂಬಿತವಾಗಿದೆ ಎಂದು ಖ್ಯಾತ ಜ್ಯೋತಿಷ್ಯ ಹರಿಶಾಸ್ತ್ರಿ ಗುರೂಜಿ ಅವರು ವಿವರಿಸಿದ್ದಾರೆ.

ಈ ಗುರು ಸಂಚಾರದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಸುಮಾರು ಶೇ.60-70 ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ, ನವೆಂಬರ್, ಡಿಸೆಂಬರ್ ಮತ್ತು ಜನವರಿ 24, 2027ರವರೆಗಿನ 85 ದಿನಗಳ ಕಾಲ ಗುರು ಸಿಂಹ ರಾಶಿಗೆ ಬಂದು ಮತ್ತೆ ಯುದ್ಧಗಳು ತೀವ್ರಗೊಳ್ಳಬಹುದು. ಭಾರತದಲ್ಲಿ ಈ ಅವಧಿಯಲ್ಲಿ ಪ್ರಕೃತಿ ವಿಕೋಪಗಳು, ವಿಶೇಷವಾಗಿ ನೀರಿನಿಂದ ಉಂಟಾಗುವ ಸಮಸ್ಯೆಗಳು (ಹಿಮಾಲಯ, ಕೇರಳ, ತಮಿಳುನಾಡು) ಮತ್ತು ಭೂಕಂಪನಗಳು ಹೆಚ್ಚಾಗಬಹುದು. ಆರ್ಥಿಕವಾಗಿ ದೇಶವು ಹಣದುಬ್ಬರ ಮತ್ತು ವೆಚ್ಚಗಳ ಹೆಚ್ಚಳದಿಂದ ಸವಾಲುಗಳನ್ನು ಎದುರಿಸಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸನಾತನ ಧರ್ಮ ಕಿತ್ತೊಗೀಬೇಕೆಂದಿದ್ದ ಉದಯನಿಧಿ ಸ್ಟಾಲಿನ್ ಹೆಸರಲ್ಲೇ ಚಾಮುಂಡೇಶ್ವರಿ, ನಿಮಿಷಾಂಬಾಗೆ ದುರ್ಗಾ ಸ್ಟಾಲಿನ್ ಪೂಜೆ!

ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ದುರ್ಗಾ ಸ್ಟಾಲಿನ್Image Credit source: tv9

ಮೈಸೂರು, ಜೂನ್ 2: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಪತ್ನಿ ದುರ್ಗಾ ಸ್ಟಾಲಿನ್ (Durga Stalin) ಅವರು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಮೈಸೂರಿನ ಚಾಮುಂಡಿಬೆಟ್ಟ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಸನಾತನ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ದೇಶಾದ್ಯಂತ ಆಕ್ರೋಶಕ್ಕೆ ಗುರಿಯಾಗಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udayanidhi Stalin) ಅವರ ತಾಯಿಯೇ ಈಗ ಮಗ ಹಾಗೂ ಪತಿಯ ಹೆಸರಿನಲ್ಲಿ ಶಕ್ತಿ ದೇವತೆಗಳಿಗೆ ಅರ್ಚನೆ ಮಾಡಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಾಂಶಗಳು

  • ಮೈಸೂರಿನ ಚಾಮುಂಡಿಬೆಟ್ಟ ಹಾಗೂ ಮಂಡ್ಯದ ಗಂಜಾಂನ ನಿಮಿಷಾಂಬಾ ದೇವಸ್ಥಾನಕ್ಕೆ ತಮಿಳುನಾಡು ಮಾಜಿ ಸಿಎಂ ಎಂಕೆ ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಭೇಟಿ.
  • ಸನಾತನ ಧರ್ಮ ವಿರೋಧಿಸಿದ್ದ ಪುತ್ರ ಉದಯನಿಧಿ ಸ್ಟಾಲಿನ್ ಹೆಸರಿನಲ್ಲಿ ತಾಯಿಯಿಂದ ದೇವಿಗೆ ವಿಶೇಷ ಅರ್ಚನೆ ಮತ್ತು ಮಡಿಲು ತುಂಬಿಸುವ ಉಡಿಸೇವೆ ಸಲ್ಲಿಕೆ.
  • ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಜೆಡಿಎಸ್ ಹಿರಿಯ ಶಾಸಕ ಜಿಟಿ ದೇವೇಗೌಡ ನಿವಾಸಕ್ಕೆ ಭೇಟಿ ನೀಡಿ ದಂಪತಿಯ ಆಶೀರ್ವಾದ ಪಡೆದ ದುರ್ಗಾ.

ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ಪುತ್ರ ಹಾಗೂ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ‘ಸನಾತನ ಧರ್ಮ ಎಂಬುದು ಸೊಳ್ಳೆ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ಕೇವಲ ವಿರೋಧಿಸಿದರೆ ಸಾಲದು, ಸಮಾಜದಿಂದ ಸಂಪೂರ್ಣವಾಗಿ ಕಿತ್ತೊಗೆಯಬೇಕು’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿತ್ತು ಮತ್ತು ಹಿಂದೂ ಧರ್ಮೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಚಾಮುಂಡೇಶ್ವರಿ ದೇಗುಲದಲ್ಲಿ ದುರ್ಗಾ ಸ್ಟಾಲಿನ್

ಮಗ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸನಾತನ ಧರ್ಮವನ್ನು ವಿರೋಧಿಸಿದ್ದರೂ, ತಾಯಿ ದುರ್ಗಾ ಸ್ಟಾಲಿನ್ ಮಾತ್ರ ತಮ್ಮ ಧಾರ್ಮಿಕ ನಂಬಿಕೆಯನ್ನು ಮುಂದುವರಿಸಿದ್ದಾರೆ. ಮಗನ ಒಳಿತಿಗಾಗಿ ಹಾಗೂ ಕುಟುಂಬದ ಸುಖ-ಶಾಂತಿಗಾಗಿ ಅವರು ಹಿಂದೂ ಸಂಪ್ರದಾಯದಂತೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ಮಗನ ಹೇಳಿಕೆಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ.

ದೇವಸ್ಥಾನಗಳಲ್ಲಿ ಉಡಿಸೇವೆ ಮತ್ತು ವಿಶೇಷ ಪೂಜೆ


ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಪ್ರಸಿದ್ಧ ನಿಮಿಷಾಂಬಾ ದೇವಸ್ಥಾನಕ್ಕೆ ಶಾಸಕ ಜಿ.ಟಿ. ದೇವೇಗೌಡ ಅವರ ಪುತ್ರಿ ಮತ್ತು ಅಳಿಯನೊಂದಿಗೆ ಭೇಟಿ ನೀಡಿದ ದುರ್ಗಾ ಸ್ಟಾಲಿನ್, ಸುಮಾರು 30 ನಿಮಿಷಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು. ದೇವಿಗೆ ರೇಷ್ಮೆ ಸೀರೆ, ಗಾಜಿನ ಬಳೆಗಳು ಹಾಗೂ ಹೂ-ಹಣ್ಣುಗಳನ್ನು ಅರ್ಪಿಸುವ ಮೂಲಕ ಸಾಂಪ್ರದಾಯಿಕ ‘ಮಡಿಲು ತುಂಬಿಸುವ’ ಉಡಿಸೇವೆಯನ್ನು ನೆರವೇರಿಸಿದರು. ಈ ವೇಳೆ ಪತಿ ಎಂ.ಕೆ. ಸ್ಟಾಲಿನ್ ಹಾಗೂ ಪುತ್ರ ಉದಯನಿಧಿ ಸ್ಟಾಲಿನ್ ಅವರ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿಸಿದರು.

ಇದನ್ನೂ ಓದಿ: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಎಂದು ಕರೆದ ಸ್ಟಾಲಿನ್ ಪುತ್ರ ಉದಯನಿಧಿ

ಇದಕ್ಕೂ ಮುನ್ನ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ದುರ್ಗಾ ಸ್ಟಾಲಿನ್, ಕುಟುಂಬದ ಒಳಿತಿಗಾಗಿ ಪ್ರಾರ್ಥಿಸಿದರು. ಧಾರ್ಮಿಕ ದರ್ಶನದ ಬಳಿಕ ಮೈಸೂರಿನಲ್ಲಿರುವ ಶಾಸಕ ಜಿ.ಟಿ. ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ಜಿ.ಟಿ.ಡಿ ಪತ್ನಿ ಲಲಿತಾ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಿ.ಟಿ. ದೇವೇಗೌಡ ದಂಪತಿಯ ಕಾಲು ಮುಟ್ಟಿ ಆಶೀರ್ವಾದ ಪಡೆದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂದು ನಾನು ಇಲ್ಲದೇ ಹೋಗಿದ್ದರೆ ನೀವು ಜೈಲಿನಲ್ಲಿ ಇರುತ್ತಿದ್ದಿರಿ, ಈಗ ಎಲ್ಲರೂ ನಿಮ್ಮನ್ನು ದ್ವೇಷಿಸುತ್ತಿದ್ದಾರೆ, ನೆತನ್ಯಾಹು ಕೆಣಕಿದ ಟ್ರಂಪ್

ವಾಷಿಂಗ್ಟನ್, ಜೂನ್ 02: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ನೇರ ಹಸ್ತಕ್ಷೇಪ ಮತ್ತು ಕಟ್ಟುನಿಟ್ಟಿನ ನಿಲುವಿನಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಭಾರಿ ರಾಜತಾಂತ್ರಿಕ ಯಶಸ್ಸು ಸಿಕ್ಕಿದೆ. ಇಸ್ರೇಲ್ ಮತ್ತು ಹಿಜ್ಬುಲ್ಲಾ ಸಂಘಟನೆಗಳು ಪರಸ್ಪರ ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಒಪ್ಪಿಕೊಂಡಿವೆ. ಅದಕ್ಕೂ ಮುನ್ನ  ನಾನು ಇಲ್ಲದೇ ಇದ್ದಿದ್ದರೆ ನೀವು ಜೈಲಿನಲ್ಲಿ ಇರುತ್ತಿದ್ದಿರಿ, ನಾನು ನಿಮ್ಮನ್ನು ಉಳಿಸಿದ್ದೆ ಎಂದು ಇಸ್ರೇಲಿ ನಾಯಕನ ಭ್ರಷ್ಟಾಚಾರ ವಿಚಾರಣೆಯ ಸಮಯದಲ್ಲಿ ಅವರು ಕೊಟ್ಟ ಬೆಂಬಲದ ಬಗ್ಗೆ ಟ್ರಂಪ್ ಮಾತನಾಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರಂಭದಲ್ಲಿ, ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿದ್ದ ನಿರಂತರ ಮಿಲಿಟರಿ ದಾಳಿಗಳು ಮತ್ತು ನಾಗರಿಕ ಸಾವುನೋವುಗಳ ಬಗ್ಗೆ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ನಡೆದ ಮಾತುಕತೆಯಲ್ಲಿ, ಇಸ್ರೇಲ್‌ನ ಈ ಕ್ರಮಗಳು ದೇಶವನ್ನು ಜಾಗತಿಕವಾಗಿ ಒಂಟಿಯಾಗಿಸುತ್ತವೆ ಮತ್ತು ಇರಾನ್ ಜೊತೆಗಿನ ಅಮೆರಿಕದ ಮಾತುಕತೆಗಳಿಗೆ ಅಡ್ಡಿಪಡಿಸುತ್ತವೆ ಎಂದು ಟ್ರಂಪ್ ಅತ್ಯಂತ ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿತ್ತು. ಆದರೆ, ಈ ಎಲ್ಲಾ ಬಿರುಸಿನ ಮಾತುಕತೆಗಳ ಬಳಿಕ ಪರಿಸ್ಥಿತಿ ತಿಳಿಯಾಗಿದ್ದು, ಶಾಂತಿ ಸ್ಥಾಪನೆಯಾಗಿದೆ.

ಟ್ರಂಪ್ ಸಂಧಾನದ ಪ್ರಮುಖ ಮುಖ್ಯಾಂಶಗಳು
ಇಸ್ರೇಲ್ ಪಡೆಗಳ ವಾಪಸಾತಿ: ಪ್ರಧಾನಿ ನೆತನ್ಯಾಹು ಅವರೊಂದಿಗೆ ಅತ್ಯಂತ ಯಶಸ್ವಿ ಮಾತುಕತೆ ನಡೆದಿದ್ದು, ಇಸ್ರೇಲ್ ಇನ್ನು ಮುಂದೆ ಬೈರುತ್‌ಗೆ ಯಾವುದೇ ಸೈನಿಕರನ್ನು ಕಳುಹಿಸುವುದಿಲ್ಲ ಮತ್ತು ಈಗಾಗಲೇ ಗಡಿಯಲ್ಲಿದ್ದ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಾಗಿದೆ.

ಮತ್ತಷ್ಟು ಓದಿ: ‘ನಮಗೆ ಬೇಕಾದ್ದು ದಕ್ಕದೇ ಹೋದರೆ ಬೇರೆ ಮಾರ್ಗದಲ್ಲಿ ಕೊನೆಗಾಣಿಸಬೇಕಾಗುತ್ತದೆ’- ಇರಾನ್​ಗೆ ಟ್ರಂಪ್ ವಾರ್ನಿಂಗ್

ಹಿಜ್ಬುಲ್ಲಾ ಕದನ ವಿರಾಮ: ಉನ್ನತ ಪ್ರತಿನಿಧಿಗಳ ಮೂಲಕ ಟ್ರಂಪ್ ಅವರು ಹಿಜ್ಬುಲ್ಲಾ ಸಂಘಟನೆಯೊಂದಿಗೂ ನೇರ ಸಂಪರ್ಕ ಸಾಧಿಸಿದ್ದು, ಅವರು ಕೂಡ ಇಸ್ರೇಲ್ ಮೇಲಿನ ಎಲ್ಲಾ ರೀತಿಯ ಶೂಟಿಂಗ್ ಮತ್ತು ದಾಳಿಗಳನ್ನು ತಕ್ಷಣದಿಂದಲೇ ನಿಲ್ಲಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಪೋಸ್ಟ್
ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, ಇಸ್ರೇಲ್ ಪ್ರಧಾನಿ ಬೀಬಿ ನೆತನ್ಯಾಹು ಅವರೊಂದಿಗೆ ನಾನು ಬಹಳ ಫಲಪ್ರದವಾದ ಮಾತುಕತೆ ನಡೆಸಿದ್ದೇನೆ. ಬೈರುತ್‌ಗೆ ಇನ್ನು ಯಾವುದೇ ಸೈನಿಕರು ಹೋಗುವುದಿಲ್ಲ. ಅದೇ ರೀತಿ ಹಿಜ್ಬುಲ್ಲಾ ಕೂಡ ಎಲ್ಲಾ ದಾಳಿಗಳನ್ನು ನಿಲ್ಲಿಸಲು ಒಪ್ಪಿಕೊಂಡಿದೆ. ಇಸ್ರೇಲ್ ಅವರ ಮೇಲೆ ದಾಳಿ ಮಾಡುವುದಿಲ್ಲ ಮತ್ತು ಅವರು ಇಸ್ರೇಲ್ ಮೇಲೆ ದಾಳಿ ಮಾಡುವುದಿಲ್ಲ, ಎಂದು ತಿಳಿಸಿದ್ದಾರೆ.

ಈ ಮಹತ್ವದ ಒಪ್ಪಂದದಿಂದಾಗಿ ಲೆಬನಾನ್ ಮತ್ತು ಇಸ್ರೇಲ್ ಗಡಿಯಲ್ಲಿ ದೀರ್ಘಕಾಲದಿಂದ ಉಂಟಾಗಿದ್ದ ಯುದ್ಧದ ಭೀತಿ ದೂರವಾಗಿದ್ದು, ಪ್ರಾದೇಶಿಕ ಶಾಂತಿ ಪುನಃಸ್ಥಾಪನೆಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಪಾನ್​​​ಗೆ ಪತಿ ಜೊತೆ ತೆರಳಿ ಎಂಜಾಯ್ ಮಾಡಿದ ರಶ್ಮಿಕಾ ಮಂದಣ್ಣ

ಟಾಲಿವುಡ್‌ನ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಅವರ ಪತಿ ವಿಜಯ್ ದೇವರಕೊಂಡ ಇತ್ತೀಚೆಗೆ ಜಪಾನ್​ಗೆ ತೆರಳಿದ್ದರು. ಅನಿಮೆ ಕಾರ್ಯಕ್ರಮಕ್ಕೆ ರಶ್ಮಿಕಾ ಹೋಸ್ಟ್ ಆಗಿದ್ದರಿಂದ ಅವರಿಗೆ ಜಪಾನ್​​ಗೆ ಬರುವಂತೆ ಆಮಂತ್ರಣ ಬಂದಿತ್ತು. ಈ ವೇಳೆ ವಿಜಯ್ ಕೂಡ ಭಾಗಿ ಆಗಿದ್ದರು. ಅಲ್ಲಿನ ಸುಂದರ ಕ್ಷಣಗಳ ಫೋಟೋಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.

ಈ ಮೊದಲು ರಶ್ಮಿಕಾ ಹಾಗೂ ವಿಜಯ್ ಸುತ್ತಾಡಲು ತೆರಳಿದ್ದರೂ ವಿಷಯ ಗುಟ್ಟಾಗಿ ಇಟ್ಟಿದ್ದರಿಂದ ಫೋಟೋ ಹಂಚಿಕೊಳ್ಳುತ್ತಾ ಇರಲಿಲ್ಲ. ಈ ಬಾರಿ ರಶ್ಮಿಕಾ ಮಂದಣ್ಣ ಅವರು ತಮ್ಮ ಪತಿ ವಿಜಯ್ ಜೊತೆಗಿನ ಫೋಟೋಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಜಪಾನ್‌ನ ಸಾಂಪ್ರದಾಯಿಕ ಉಡುಗೆಯಾದ ಯುಕಾಟಾ ಧರಿಸಿ ಗ್ಲಾಮರಸ್ ಆಗಿ ಪೋಸ್ ನೀಡಿದ್ದ ರಶ್ಮಿಕಾ, ‘ಈ ವರ್ಷ ಜಪಾನ್ ಪ್ರವಾಸ ಇನ್ನು ಹೆಚ್ಚಿನ ಮಜಾ ನೀಡಿತು’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

ಜಪಾನ್‌ನ ಸ್ಥಳೀಯ ಆಹಾರ ಸವಿಯುತ್ತಿರುವ, ಅಲ್ಲಿನ ಸುಂದರ ಕಲೆ ಮತ್ತು ಸಂಸ್ಕೃತಿಯನ್ನು ಆಸ್ವಾದಿಸುತ್ತಿರುವ ಹಾಗೂ ಹಿನ್ನೆಲೆಯಲ್ಲಿ ಮೌಂಟ್ ಫ್ಯೂಜಿ ಜ್ವಾಲಾಮುಖಿ ಕಾಣುವಂತೆ ವಿಜಯ್ ಅವರನ್ನು ತಬ್ಬಿಕೊಂಡಿರುವ ಬ್ಲರ್ ಆಗಿರುವ ರೋಮ್ಯಾಂಟಿಕ್ ಫೋಟೋಗಳು ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿವೆ.

ರಶ್ಮಿಕಾ ಅವರ ಈ ಫೋಟೋಗಳಿಗೆ ಅಭಿಮಾನಿಗಳು ಹಾರ್ಟ್ ಎಮೋಜಿಗಳ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ‘ಫೋಟೋಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಮಿಸಸ್ ದೇವರಕೊಂಡ’ ಎಂದು ಬರೆದರೆ, ಮತ್ತೊಬ್ಬರು ‘ನಿಮ್ಮ ಪ್ರೀತಿಯ ಪತಿಯೊಂದಿಗೆ ನೀವು ಜೀವನವನ್ನು ಎಂಜಾಯ್ ಮಾಡುತ್ತಿರುವುದನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ’ ಎಂದಿದ್ದಾರೆ. ಇನ್ನು ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕಿ ಫರಾ ಖಾನ್ ಕುಂದರ್ ಕೂಡ ಕಾಮೆಂಟ್ ಮಾಡಿದ್ದು,‘ನಾನು ನಾಳೆಯೇ ಜಪಾನ್‌ಗೆ ಹೋಗುತ್ತಿದ್ದೇನೆ, ಅಲ್ಲಿ ಭೇಟಿ ನೀಡಬೇಕಾದ ಜಾಗಗಳ ಬಗ್ಗೆ ಮಾಹಿತಿ ತಿಳಿಯಲು ನಿಮಗೆ ಕರೆ ಮಾಡುತ್ತೇನೆ’ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಸಿನಿಮಾ ಜರ್ನಿಯಲ್ಲೇ ಅತ್ಯಂತ ಗರಿಷ್ಠ ಸಂಭಾವನೆ ಪಡೆದ ರಶ್ಮಿಕಾ ಮಂದಣ್ಣ

ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ಇದೇ ವರ್ಷ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ಕೊಡವ ಹಾಗೂ ತೆಲುಗು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link