Category Archives: Blog

Your blog category

ಅರಿಜಿತ್ ಚಿತ್ರರಂಗ ತೊರೆಯಲು ಸಲ್ಮಾನ್ ಖಾನ್ ಕಾರಣ? – Kannada News | Arijit Singh Quits Bollywood Playback: Is Salman Khan Controversy the Real Reason?

ತಮ್ಮ ಮಧುರ ಧ್ವನಿ ಮತ್ತು ಸರಳ ಗಾಯನದಿಂದ ಲಕ್ಷಾಂತರ ಜನರ ಹೃದಯಗಳನ್ನು ಗೆದ್ದ ಗಾಯಕ ಅರಿಜಿತ್ ಸಿಂಗ್, ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ಎಲ್ಲರಿಗೂ ದೊಡ್ಡ ಆಘಾತ ತಂದಿದೆ. ಅವರ ನಿವೃತ್ತಿಯ ಸುದ್ದಿಯನ್ನು ಚಲನಚಿತ್ರೋದ್ಯಮ ಹಾಗೂ ಅವರ ಅಭಿಮಾನಿಗಳು ಅರಗಿಸಿಕೊಳ್ಳುತ್ತಿಲ್ಲ. ಅರಿಜಿತ್ ಸಂಗೀತ ಕೆಲಸ ನಿಲ್ಲಿಸುವುದಿಲ್ಲವಂತೆ. ಅವರು ಸಿನಿಮಾಗಳಲ್ಲಿ ಹಾಡುವುದನ್ನು ಮಾತ್ರ ನಿಲ್ಲಿಸಿದ್ದಾರೆ. ಅವರು ಚಿತ್ರರಂಗದಿಂದ ದೂರ ಉಳಿಯಲು ಸಲ್ಲು ಕಾರಣ ಎಂದೆಲ್ಲ ಹೇಳಲಾಗುತ್ತಿದೆ.

ಸಲ್ಮಾನ್ ಮತ್ತು ಅರಿಜಿತ್ ನಡುವಿನ ವಿವಾದವು ತುಂಬಾ ಹಳೆಯದು. ಇಬ್ಬರೂ ಕೆಲವು ತಿಂಗಳ ಹಿಂದೆ ಈ ವಿವಾದವನ್ನು ಬಗೆಹರಿಸಿದ್ದರು. ಸಲ್ಮಾನ್ ಅವರ ಮುಂಬರುವ ಚಿತ್ರ ‘ಬ್ಯಾಟಲ್ ಆಫ್ ಗಾಲ್ವಾನ್’ ಚಿತ್ರಕ್ಕಾಗಿ ಅರಿಜಿತ್ ಒಂದು ಹಾಡನ್ನು ಸಹ ಹಾಡಿದ್ದಾರೆ. ಅದುವೇ ‘ಮಾತೃಭೂಮಿ’ ಹಾಡು. ಈ ಹಾಡು ಬಹುಶಃ ಅರಿಜಿತ್ ಅವರ ಕೊನೆಯ ಹಾಡಾಗಿರಬಹುದು. ಅರಿಜಿತ್ ಅವರ ಈ ನಿರ್ಧಾರದಲ್ಲಿ ಸಲ್ಮಾನ್ ಖಾನ್ ಪಾತ್ರವಿದೆಯೇ ಎಂಬ ಪ್ರಶ್ನೆ ಮೂಡಿದೆ.

‘ಮಾತೃಭೂಮಿ’ ಹಾಡು ನಾಲ್ಕು ದಿನಗಳ ಹಿಂದೆ ಬಿಡುಗಡೆಯಾಯಿತು. ಈ ಹಾಡನ್ನು ಹಿಮೇಶ್ ರೇಶಮ್ಮಿಯಾ ಸಂಯೋಜಿಸಿದ್ದಾರೆ. ಸಲ್ಮಾನ್ ಚಿತ್ರಕ್ಕಾಗಿ ಒಂದು ಹಾಡನ್ನು ಹಾಡಿದ ನಂತರವೇ ಅರಿಜಿತ್ ಚಿತ್ರರಂಗವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ‘ಸಲ್ಮಾನ್ ಹಾಡಿನಲ್ಲಿ ಸರಿಯಾಗಿ ಲಿಪ್-ಸಿಂಕ್ ಮಾಡದೇ ಇರುವುದನ್ನು ನೋಡಿದ ನಂತರ ಅರಿಜಿತ್ ವೃತ್ತಿಜೀವನಕ್ಕೆ ಬೈ ಹೇಳಿದ್ದಾರೆ’ ಎಂದು ಕೆಲವರು ತಮಾಷೆ ಮಾಡಿದ್ದಾರೆ.

ಸಲ್ಮಾನ್ ಖಾನ್ ಮತ್ತು ಅರಿಜಿತ್ ಸಿಂಗ್ ನಡುವಿನ ವಿವಾದ 2014 ರಲ್ಲಿ ಪ್ರಾರಂಭವಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅರಿಜಿತ್ ಅವರು ಸಲ್ಮಾನ್ ಅವರನ್ನು ಕೆಣಕಿದ್ದರು. ಸಲ್ಮಾನ್ ಖಾನ್ ಮತ್ತು ರಿತೇಶ್ ದೇಶಮುಖ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹೋಸ್ಟ್ ಮಾಡುತ್ತಿದ್ದರು. ವೇದಿಕೆಯಲ್ಲಿ ಅರಿಜಿತ್ ಅವರನ್ನು ‘ನೀವು ನಿದ್ರಿಸುತ್ತಿದ್ದೀರಾ?’ ಎಂದು ಸಲ್ಲು ಕೇಳಿದಾಗ, ಅವರು ‘ನೀವು ನಿದ್ರಿಸುತ್ತಿದ್ದೀರಿ’ ಎಂದು ಉತ್ತರಿಸಿದರು. ಅರಿಜಿತ್ ಪರೋಕ್ಷವಾಗಿ ಸಲ್ಮಾನ್ ಮತ್ತು ರಿತೇಶ್ ಅವರ ನಿರೂಪಣೆಯನ್ನು ಟೀಕಿಸಿದ್ದರು. ಅದರ ನಂತರ, ಸಲ್ಮಾನ್ ಅವರ ಚಿತ್ರಗಳಿಂದ ಅರಿಜಿತ್ ಅವರ ಹಾಡುಗಳನ್ನು ತೆಗೆದುಹಾಕಲಾಯಿತು. ನಂತರ, ಅರಿಜಿತ್ ಕೂಡ ಸಾರ್ವಜನಿಕವಾಗಿ ಸಲ್ಮಾನ್ ಅವರಿಗೆ ಕ್ಷಮೆಯಾಚಿಸಿದರು.

ಇದನ್ನೂ ಓದಿ: ನಿವೃತ್ತಿ ಘೋಷಣೆಗೂ ಮೊದಲು ಅರಿಜಿತ್ ಮಾಡಿಕೊಂಡ ಆಸ್ತಿ ಎಷ್ಟು?

‘ಬಿಗ್ ಬಾಸ್’ ವೇದಿಕೆಯಲ್ಲಿ ಅರಿಜಿತ್ ಜೊತೆಗಿನ ವಿವಾದದ ಬಗ್ಗೆ ಸಲ್ಮಾನ್ ಪ್ರತಿಕ್ರಿಯಿಸಿದ್ದರು. ‘ಅರಿಜಿತ್ ಮತ್ತು ನಾನು ಈಗ ಒಳ್ಳೆಯ ಸ್ನೇಹಿತರು. ನಮ್ಮ ನಡುವೆ ಸ್ವಲ್ಪ ತಪ್ಪು ತಿಳುವಳಿಕೆ ಇತ್ತು ಮತ್ತು ಆ ತಪ್ಪು ತಿಳುವಳಿಕೆ ನನ್ನಿಂದಲೇ ಉಂಟಾಗಿದೆ’ ಎಂದು ಸಲ್ಮಾನ್ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rate Today: 100 ಗ್ರಾಮ್ ಚಿನ್ನದ ಬೆಲೆಯಲ್ಲಿ 12,550 ರೂ ಏರಿಕೆ – Kannada News | Gold Price Today on 29th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 29: ಚಿನ್ನ ಮತ್ತು ಬೆಳ್ಳಿ ಬೆಲೆ ಗುರುವಾರ ಅಕ್ಷರಶಃ ಗಗನ ಮುಟ್ಟಿದೆ. 100 ಗ್ರಾಮ್ ಚಿನ್ನದ ಬೆಲೆಯಲ್ಲಿ (gold rate) ಬರೋಬ್ಬರಿ 12,550 ರೂನಷ್ಟು ಏರಿಕೆ ಆಗಿರುವುದು ಗಮನಾರ್ಹ. ಇತ್ತೀಚಿನ ವರ್ಷಗಳಲ್ಲೇ ಒಂದೇ ದಿನದಲ್ಲಿ ಚಿನ್ನ ಕಂಡ ಅತಿಹೆಚ್ಚು ಏರಿಕೆ ಇದು. ಆಭರಣ ಚಿನ್ನದ ಬೆಲೆ ಮೊದಲ ಬಾರಿಗೆ 16,000 ರೂ ಗಡಿ ದಾಟಿದೆ. ಅಪರಂಜಿ ಚಿನ್ನದ ಬೆಲೆಯೂ 17,000 ರೂ ಮೈಲಿಗಲ್ಲು ದಾಟಿ 18,000 ರೂನತ್ತ ಸಾಗುತ್ತಿದೆ. ಬೆಳ್ಳಿ ಬೆಲೆ ಇನ್ನೂ ದೊಡ್ಡ ಜಿಗಿತ ಕಾಣುತ್ತಿದೆ. ಒಂದೇ ದಿನ ಒಂದು ಗ್ರಾಮ್ ಬೆಳ್ಳಿ ಬೆಲೆಯಲ್ಲಿ 30 ರೂ ಜಂಪ್ ಆಗಿದೆ. ಬೆಂಗಳೂರಿನಲ್ಲಿ ಇದರ ಬೆಲೆ ಮೊದಲ ಬಾರಿಗೆ 400 ರೂ ಗಡಿ ದಾಟಿ 410 ರೂಗೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,63,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,78,850 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 41,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,63,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 41,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 42,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 29ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 17,885 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,395 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,146 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 410 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 17,885 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,395 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 410 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 16,395 ರೂ
  • ಚೆನ್ನೈ: 16,800 ರೂ
  • ಮುಂಬೈ: 16,395 ರೂ
  • ದೆಹಲಿ: 16,410 ರೂ
  • ಕೋಲ್ಕತಾ: 16,395 ರೂ
  • ಕೇರಳ: 16,395 ರೂ
  • ಅಹ್ಮದಾಬಾದ್: 16,400 ರೂ
  • ಜೈಪುರ್: 16,410 ರೂ
  • ಲಕ್ನೋ: 16,410 ರೂ
  • ಭುವನೇಶ್ವರ್: 16,395 ರೂ

ಇದನ್ನೂ ಓದಿ: ಕೇಂದ್ರ ಬಜೆಟ್ 2026: ಹೊಸ ಟ್ಯಾಕ್ಸ್ ರೆಜಿಮ್​ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಲಾಗುತ್ತಾ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 675 ರಿಂಗಿಟ್ (15,784 ರುಪಾಯಿ)
  • ದುಬೈ: 588.50 ಡಿರಾಮ್ (14,736 ರುಪಾಯಿ)
  • ಅಮೆರಿಕ: 168.50 ಡಾಲರ್ (15,498 ರುಪಾಯಿ)
  • ಸಿಂಗಾಪುರ: 216.90 ಸಿಂಗಾಪುರ್ ಡಾಲರ್ (15,812 ರುಪಾಯಿ)
  • ಕತಾರ್: 583 ಕತಾರಿ ರಿಯಾಲ್ (14,712 ರೂ)
  • ಸೌದಿ ಅರೇಬಿಯಾ: 599 ಸೌದಿ ರಿಯಾಲ್ (14,690 ರುಪಾಯಿ)
  • ಓಮನ್: 62.55 ಒಮಾನಿ ರಿಯಾಲ್ (14,943 ರುಪಾಯಿ)
  • ಕುವೇತ್: 48.13 ಕುವೇತಿ ದಿನಾರ್ (14,525 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 410 ರೂ
  • ಚೆನ್ನೈ: 425 ರೂ
  • ಮುಂಬೈ: 410 ರೂ
  • ದೆಹಲಿ: 410 ರೂ
  • ಕೋಲ್ಕತಾ: 410 ರೂ
  • ಕೇರಳ: 425 ರೂ
  • ಅಹ್ಮದಾಬಾದ್: 410 ರೂ
  • ಜೈಪುರ್: 410 ರೂ
  • ಲಕ್ನೋ: 410 ರೂ
  • ಭುವನೇಶ್ವರ್: 425 ರೂ
  • ಪುಣೆ: 410

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇಂಧನ ಇಲಾಖೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪಕ್ಕೆ ಬೇಸತ್ತು ರಾಜೀನಾಮೆಗೆ ಮುಂದಾಗಿದ್ದ ಕೆಜೆ ಜಾರ್ಜ್: ಆಮೇಲಾಗಿದ್ದೇ ಬೇರೆ! – Kannada News | KJ George, Karnataka Energy Minister Decided to resign due to Yathindra Siddaramaiah’s interference in his Department; Here’s exclusive report

ಯತೀಂದ್ರ, ಸಿದ್ದರಾಮಯ್ಯ, ಕೆಜೆ ಜಾರ್ಜ್Image Credit source: Tv9

ಬೆಂಗಳೂರು, ಜನವರಿ 29: ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಪುತ್ರ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹಸ್ತಕ್ಷೇಪಕ್ಕೆ ಬೇಸತ್ತು ಸಚಿವ ಕೆಜೆ ಜಾರ್ಜ್ (KJ George) ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ. ಸದ್ಯ ಈ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಂಧನ ಇಲಾಖೆಯಲ್ಲಿ ಯತೀಂದ್ರ ಹಸ್ತಕ್ಷೇಪದಿಂದ ನಡೆದ ಕೆಲ ಅಧಿಕಾರಿಗಳ ವರ್ಗಾವಣೆ ಹಾಗೂ ಅಮಾನತು ವಿಚಾರ ಸರ್ಕಾರದೊಳಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಯಿಂದ ಇಂಧನ ಸಚಿವ ಜಾರ್ಜ್ ಬೇಸತ್ತಿದ್ದರು ಎಂಬುದು ತಿಳಿದುಬಂದಿದೆ. ಇಂಧನ ಇಲಾಖೆಯ ಕಾರ್ಯವೈಖರಿಯಲ್ಲಿ ಯತೀಂದ್ರ ಹಸ್ತಕ್ಷೇಪವಿದೆ ಎಂಬ ಆರೋಪಗಳ ನಡುವೆಯೇ ಈ ಬೆಳವಣಿಗೆ ವರದಿಯಾಗಿದೆ.

ಸಚಿವನಾಗಿ ನನ್ನ ಮಾತಿಗೆ ಬೆಲೆ ಇಲ್ಲ: ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಜಾರ್ಜ್

ಇಂಧನ ಇಲಾಖೆಯ ಕೆಲ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಸಿಎಂ ಕಚೇರಿಯಿಂದ ಆದೇಶ ಹೊರಡಿಸಲಾಗಿತ್ತು. ಇದೇ ವೇಳೆ, ಕೆಲವು ಅಧಿಕಾರಿಗಳನ್ನು ಅಮಾನತುಗೊಳಿಸುವ ಬಗ್ಗೆ ಕ್ರಮವನ್ನೂ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆಗಳಿಂದ ಅಸಮಾಧಾನಗೊಂಡ ಕೆಜೆ ಜಾರ್ಜ್, ‘ಮಂತ್ರಿಯಾಗಿ ನನ್ನ ಮಾತಿಗೆ ಬೆಲೆ ಇಲ್ಲದಿದ್ದರೆ ನಾನು ಏಕೆ ಈ ಸರ್ಕಾರದಲ್ಲಿ ಇರಬೇಕು’ ಎಂದು ಪ್ರಶ್ನಿಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ನೀಡಿದ್ದರು ಎನ್ನಲಾಗಿದೆ.

ನಿಮ್ಮ ಜತೆ ಇರುತ್ತೇನೆ, ಸರ್ಕಾರದಲ್ಲಿರಲ್ಲ ಎಂದಿದ್ದ ಜಾರ್ಜ್

ಜಾರ್ಜ ಅವರು ‘ನಾನು ನಿಮ್ಮ ಜತೆಗೆ ಇರುತ್ತೇನೆ, ಆದರೆ ಸರ್ಕಾರದಲ್ಲಿ ಇರುವುದಿಲ್ಲ’ ಎಂದು ಹೇಳಿದ್ದರು. ಅಲ್ಲದೆ, ಘಟನೆಯಿಂದ ಮನನೊಂದು ಸಂಪುಟ ಸಭೆಗೆ ಸಹ ಗೈರಾಗಿದ್ದರು ಎಂಬುದು ತಿಳಿದುಬಂದಿದೆ. ಈ ಬೆಳವಣಿಗೆಗಳು ಸರ್ಕಾರದೊಳಗಿನ ಅಸಮಾಧಾನ ಬಹಿರಂಗವಾಗುವಂತೆ ಮಾಡಿದ್ದವು.

ಮಧ್ಯ ಪ್ರವೇಶಿಸಿದ್ದ ಸಿದ್ದರಾಮಯ್ಯ ಆಪ್ತರು

ಘಟನೆಯ ಗಂಭೀರತೆ ಅರಿತ ಸಿಎಂ ಸಿದ್ದರಾಮಯ್ಯ ಆಪ್ತರು ತಕ್ಷಣ ಮಧ್ಯಪ್ರವೇಶಿಸಿದ್ದರು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಮೂಲಕ ಕೆಜೆ ಜಾರ್ಜ್ ಅವರೊಂದಿಗೆ ಸಂಧಾನ ನಡೆಸಲಾಗಿತ್ತು. ಜಾರ್ಜ್ ಅವರ ಅಸಮಾಧಾನವನ್ನು ಆಲಿಸಿದ ಪೊನ್ನಣ್ಣ ಮಾತುಕತೆ ಮೂಲಕ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು ಎನ್ನಲಾಗಿದೆ.

ಅಮಾನತು ಆದೇಶ ಹಿಂಪಡೆದಿದ್ದ ಸಿದ್ದರಾಮಯ್ಯ

ಜಾರ್ಜ್ ಜತೆ ಪೊನ್ನಣ್ಣ ಸಂಧಾನದ ಬಳಿಕ, ಇಂಧನ ಇಲಾಖೆಯ ಕೆಲ ಅಧಿಕಾರಿಗಳ ಅಮಾನತು ಆದೇಶವನ್ನು ಮುಖ್ಯಮಂತ್ರಿ ಹಿಂಪಡೆದಿದ್ದರು. ಇದರಿಂದಾಗಿ ಸರ್ಕಾರದೊಳಗಿನ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನಗೊಂಡಿತ್ತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮಾಜಿ ಸಂಸದರೊಬ್ಬರದ್ದು ಎನ್ನಲಾದ ಆಡಿಯೋ ವೈರಲ್​​: ರಾಜಕೀಯ ರಹಸ್ಯಗಳು ಬಯಲು

ಆದರೆ, ಇಂಧನ ಇಲಾಖೆಯಲ್ಲಿ ನಡೆದ ಈ ಘಟನೆ ಸರ್ಕಾರದ ಒಳಜಗಳ ಮತ್ತು ಅಧಿಕಾರ ಹಂಚಿಕೆಯ ವಿಚಾರವನ್ನು ಮತ್ತೆ ಮುನ್ನೆಲೆಗೆ ತರುವಂತೆ ಮಾಡಿವೆ. ಮುಂದಿನ ದಿನಗಳಲ್ಲಿ ಈ ವಿಷಯ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೆನ್ನು ಹಿಡಿದ ಸ್ಟೈಲ್ ಕಿಂಗ್ ರಜನೀಕಾಂತ್: ಬರೆಯುತ್ತಿರುವುದು ಯಾವ ಪುಸ್ತಕ? – Kannada News | Rajinikanth writing his auto biography confirms his daughter

ರಜನೀಕಾಂತ್ (Rajinikantha) ಭಾರತದ ನಂಬರ್ 1 ಸೂಪರ್ ಸ್ಟಾರ್. ಹಲವು ದಶಕಗಳಿಂದಲೂ ರಜನೀಕಾಂತ್ ಅವರು ಸೂಪರ್ ಸ್ಟಾರ್ ಸ್ಥಾನದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ರಜನೀಕಾಂತ್ ಸಿನಿಮಾ ನಟನಾಗಿ ಅದ್ಭುತ ಕತೆಗಳ ಮೂಲಕ ಹಲವರಿಗೆ ಸ್ಪೂರ್ತಿ ತುಂಬಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನವೂ ಸಹ ಯಾವುದೇ ಸಿನಿಮಾ ಕತೆಗಿಂತಲೂ ಕಡಿಮೆ ಆಗಿದ್ದಲ್ಲ. ಬೆಂಗಳೂರಿನ ಸಣ್ಣ ಏರಿಯಾದಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿ ರಜನೀ ಏರಿದ ಎತ್ತರ ಅಸಾಧಾರಣವಾದುದು. ಅಷ್ಟು ಎತ್ತರಕ್ಕೆ ಏರಿದ ಬಳಿಕವೂ ರಜನೀ ಕಾಯ್ದುಕೊಂಡ ಸರಳತೆ, ವಿನಮ್ರತೆ ಕೋಟ್ಯಂತರ ಜನರಿಗೆ ಸ್ಪೂರ್ತಿ. ಈ ಸ್ಪೂರ್ತಿದಾಯಕ ಕತೆ ಇದೀಗ ಪುಸ್ತಕ ರೂಪದಲ್ಲಿ ಬರೆಯಲಿದೆ.

ರಜನೀಕಾಂತ್ ಅವರು ತಮ್ಮ ಜೀವನದ ಘಟನೆಗಳನ್ನು ಹಲವು ಸಂದರ್ಭಗಳಲ್ಲಿ ಹಂಚಿಕೊಂಡಿದ್ದಾರೆ. ರಜನೀಕಾಂತ್ ಅವರ ಸಿನಿಮಾದ ಕಾರ್ಯಕ್ರಮಗಳಲ್ಲಿ ಅವರು ತಮ್ಮ ಜೀವನದ ವಿಷಯಗಳನ್ನು ಬಲು ರಸವತ್ತಾಗಿ ಹಂಚಿಕೊಳ್ಳುತ್ತಾರೆ. ಅದನ್ನು ಕೇಳುವುದೇ ಅಭಿಮಾನಿಗಳಿಗೆ ಖುಷಿ. ಇದೀಗ ರಜನೀಕಾಂತ್ ಅವರು ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಪುಸ್ತಕವಾಗಿ ಹೊರ ತರುತ್ತಿದ್ದಾರೆ. ರಜನೀಕಾಂತ್ ತಮ್ಮ ಆತ್ಮಚರಿತ್ರೆಯನ್ನು ಬರೆಯುತ್ತಿದ್ದಾರೆ.

ಈ ಕುರಿತು ಅವರ ಪುತ್ರಿ ಸೌಂದರ್ಯ ರಜನೀಕಾಂತ್ ಮಾತನಾಡಿದ್ದು, ‘ತಂದೆ ರಜನೀಕಾಂತ್ ತಮ್ಮ ಆತ್ಮಚರಿತ್ರೆ ಬರೆಯುತ್ತಿದ್ದಾರೆ. ಬರವಣಿಗೆ ಪ್ರಸ್ತುತ ಚಾಲ್ತಿಯಲ್ಲಿದೆ. ಅದು ಬಿಡುಗಡೆ ಆದಾಗ ಅದೊಂದು ವಿಶ್ವದಲ್ಲೇ ಒಂದು ವಿದ್ಯಮಾನವಾಗಿ ಗುರುತಿಸಿಕೊಳ್ಳಲಿದೆ’ ಎಂದಿದ್ದಾರೆ. ತಾವೂ ಸಹ ತಂದೆಯವರ ಆತ್ಮಚರಿತ್ರೆ ಓದಲು ಕಾತರರಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:37 ವರ್ಷದ ಹಿಂದೆ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆ ಆಗುತ್ತಿದೆ ರಜನೀಕಾಂತ್ ಸಿನಿಮಾ

ರಜನೀಕಾಂತ್ ಅವರ ಜೀವನ ಅಸಾಧಾರಣವಾದುದು. ಬೆಂಗಳೂರಿನ ಸಣ್ಣ ಕುಟುಂಬದಲ್ಲಿ ಜನಿಸಿ ಸಾಕಷ್ಟು, ನೋವು, ಅವಮಾನಗಳನ್ನು ಅನುಭವಿಸಿ ನಟನಾಗಿ, ಆ ನಂತರವೂ ಹಲವು ಅವಮಾನಗಳನ್ನು ಎದುರಿಸಿ ಸ್ಟಾರ್ ಆಗಿ ಬೆಳೆದ ಬಗೆ ಅಸಾಧಾರಣವಾದುದು. ರಜನೀಕಾಂತ್ ಅವರ ಅತ್ಮಚರಿತ್ರೆ ಕೋಟ್ಯಂತರ ಜನರಿಗೆ ಸ್ಪೂರ್ತಿಯನ್ನಂತೂ ನೀಡುವುದು ಖಾತ್ರಿ.

ಸಿನಿಮಾಗಳ ವಿಷಯಕ್ಕೆ ಬರುವುದಾದರೆ ರಜನೀಕಾಂತ್ ಪ್ರಸ್ತುತ ‘ಜೈಲರ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಕಮಲ್ ಹಾಸನ್ ನಿರ್ಮಾಣ ಮಾಡಲಿರುವ ಸಿನಿಮಾನಲ್ಲಿ ಅವರು ನಟಿಸಲಿದ್ದಾರೆ. ಅದಾದ ಬಳಿಕ ಪುತ್ರಿ ಸೌಂದರ್ಯ ನಿರ್ದೇಶನದ ಮತ್ತೊಂದು ಸಿನಿಮಾನಲ್ಲಿ ನಟಿಸುವ ಸಾಧ್ಯತೆ ಇದೆ. ‘ಕೂಲಿ 2’ ಸಹ ಬರಲಿದೆ ಎನ್ನಲಾಗುತ್ತಿದೆ ಆದರೆ ಖಾತ್ರಿ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಂದಲ್ಲಾರೀ, ಅಕ್ಷಯ್ ಕುಮಾರ್ ತಪ್ಪು; ‘ಹೇರಾ ಫೇರಿ 3’ ವಿಳಂಬಕ್ಕೆ ಕಾರಣ ಕೊಟ್ಟ ಪರೇಶ್ – Kannada News | Hera Pheri 3 Delays: Paresh Rawal Clarifies, Addresses Akshay Kumar Rumors

‘ಹೇರಾ ಫೇರಿ 3’ ಚಿತ್ರ ಘೋಷಣೆ ಆಗಿ ಬಹಳ ಸಮಯ ಕಳೆದಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಹಾಗೂ ಪರೇಶ್ ರಾವಲ್ ನಟಿಸುತ್ತಿದ್ದಾರೆ. ಆದರೆ, ಮಧ್ಯದಲ್ಲಿ ಪರೇಶ್ ಅವರು ಸಿನಿಮಾದಿಂದ ಹೊರ ನಡೆದಿದ್ದರು. ಈಗ ಅವರು ಚಿತ್ರಕ್ಕೆ ಮರಳಿದ್ದಾರೆ. ಆದಾಗ್ಯೂ ಸಿನಿಮಾ ಸೆಟ್ಟೇರುತ್ತಿಲ್ಲ. ಇದಕ್ಕೆ ಪರೇಶ್ (Paresh Rawal) ಅವರೇ ಕಾರಣ ಎನ್ನಲಾಗಿತ್ತು. ಇದಕ್ಕೆ ಪರೇಶ್ ಉತ್ತರ ನೀಡಿದ್ದಾರೆ. ಪ್ರಕರಣದಲ್ಲಿ ಎಳೆದು ತರಬೇಡಿ ಎಂದು ಅವರು ಹೇಳಿದ್ದಾರೆ.

‘ಹೇರಾ ಫೇರಿ 3’ ಸೆಟ್ಟೇರೋದು ಅನುಮಾನ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಉತ್ತರಿಸಿದ ಅವರು,‘ಖಂಡಿತವಾಗಿಯೂ ಹೇರಾ ಫೇರಿ 3 ಸಿನಿಮಾ ಸಿದ್ಧವಾಗುತ್ತದೆ. ಆ ಸಿನಿಮಾ ವಿಳಂಬ ಆಗುವುದಕ್ಕೆ ನಾನು ಕಾರಣ ಅಲ್ಲ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಎಲ್ಲಾ ವದಂತಿಗೆ ಸ್ಪಷ್ಟನೆ ಕೊಟ್ಟೊದ್ದಾರೆ.

‘ಅಕ್ಷಯ್ ಕುಮಾರ್ ಹಾಗೂ ಸಿನಿಮಾ ತಂಡದ ಮಧ್ಯೆ ಸಮಸ್ಯೆ ಆಗಿದೆ. ಸಿನಿಮಾಗೆ ಯಾವುದೇ ಕಾನೂನು ತೊಡಕು ಇಲ್ಲ. ಅಕ್ಷಯ್ ಕುಮಾರ್ ನನ್ನ ಮೇಲೆ 25 ಕೋಟಿ ರೂಪಾಯಿ ಕೇಸ್ ಹಾಕಿದ್ದರು ಎಂಬುದನ್ನು ಹೆಚ್ಚು ಉತ್ಪ್ರೇಕ್ಷಿಸಲಾಯಿತು’ ಎಂದು ಪರೇಶ್ ರಾವಲ್ ಹೇಳಿದ್ದಾರೆ.

‘ಒಂದೊಮ್ಮೆ ಬಾಬುರಾವ್ ಪಾತ್ರ ಇಲ್ಲದೆ ಅವರು ಸಿನಿಮಾ ಮಾಡಲು ಮುಂದಾದರು ಎಂದಿಟ್ಟುಕೊಳ್ಳಿ, ಖಂಡಿತವಾಗಿಯೂ ಅದು ದುರಂತ ಆಗಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ. ಇದು ಕೇವಲ ಪರೇಶ್ ರಾವಲ್ ಅವರ ಮಾತು ಮಾತ್ರವಲ್ಲ. ಬಹುತೇಕರು ಇದೇ ರೀತಿಯ ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ಪರೇಶ್ ರಾವಲ್ ಇಲ್ಲದೆಯೂ ಹೇರಾ ಫೇರಿ ಆಗುತ್ತೆ’; ಧಿಮಾಕಿನಿಂದ ಉತ್ತರಿಸಿದ ಅಕ್ಷಯ್ ಕುಮಾರ್

‘ರಾಮ್ಜಿ ರಾವ್ ಸ್ಪೀಕಿಂಗ್’ ಹೆಸರಿನ 1989ರ ಮಲಯಾಳಂ ಚಿತ್ರವನ್ನು ‘ಹೇರಾ ಫೇರಿ’ ಆಧರಿಸಿದೆ. ‘ಹೇರಾ ಫೇರಿ’, ‘ಫಿರ್ ಹೇರಾ ಫೇರಿ’ ಸಿನಿಮಾಗಳು ರಿಲೀಸ್ ಆಗಿ ಗಮನ ಸೆಳೆದವು. ‘ಹೇರಾ ಫೇರಿ 3’ ಚಿತ್ರಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಿಷ್ಠಾವಂತ ಪ್ರಾಣಿ ಶ್ವಾನವನ್ನು ಕಂಡು ಹಿಡಿಯಬಲ್ಲಿರಾ – Kannada News | Optical illusion: Can you find the loyal animal dog hidden in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಖುಷಿಯೇ ಬೇರೆ. ಇದು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುತ್ತದೆ. ಸಮಯ ಕಳೆಯಲು ಇಂತಹ ಒಗಟುಗಳನ್ನು ಬಿಡಿಸುವುದು ಒಳ್ಳೆಯದು. ಹೆಚ್ಚಿನವರು ಇಂತಹ ಟ್ರಿಕ್ಕಿ ಒಗಟುಗಳನ್ನು ಬಿಡಿಸುವತ್ತ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಎಲ್ಲರಿಗೂ ಉತ್ತರ ಕಂಡು ಕೊಳ್ಳುವುದು ಕಷ್ಟವಾಗಬಹುದು. ಈ ಒಗಟಿನ ಚಿತ್ರದಲ್ಲಿ ಶ್ವಾನವೊಂದು (dog) ಅಡಗಿ ಕುಳಿತಿದೆ. ಈ ನಿಷ್ಠಾವಂತ ಪ್ರಾಣಿಯನ್ನು ನೀವು ಐದು ಸೆಕೆಂಡುಗಳಲ್ಲಿ ಪತ್ತೆ ಹಚ್ಚುವ ಸವಾಲು ಇದೆ. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ.

ಈ ಇಲ್ಯೂಷನ್ ಚಿತ್ರದಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಇಲ್ಯೂಷನ್ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಬೀಳುವುದೇ ಉದ್ಯಾನವನದ ಸುಂದರ ನೋಟ. ಇಲ್ಲಿ ಸಾಲಾಗಿ ಮರಗಳಿದ್ದು, ನೆಲೆದ ಮೇಲೆ ಒಣಗಿದ ಎಲೆಗಳ ರಾಶಿಯಿದೆ. ಆದರೆ ಈ ಸ್ಥಳದಲ್ಲಿ ಶ್ವಾನವೊಂದು ಅಡಗಿ ಕುಳಿತಿದ್ದು ಈ ಪ್ರಾಣಿಯನ್ನು ಹುಡುಕುವುದೇ ನಿಮ್ಮ ಮುಂದಿರುವ ಬಹುದೊಡ್ಡ ಸವಾಲು. ಈ ಟ್ರಿಕ್ಕಿ ಸವಾಲು ಸ್ವೀಕರಿಸಲು ನೀವು ರೆಡಿ ಇದ್ದೀರಾ ಎಂದು ನಾವು ಭಾವಿಸುತ್ತೇವೆ.

ಇದನ್ನೂ ಓದಿ: ಗಿಳಿಗಳ ನಡುವೆ ಅಡಗಿದೆ ಬಣ್ಣದ ಚಿಟ್ಟೆ;‌ ಜಸ್ಟ್ 15 ಸೆಕೆಂಡುಗಳಲ್ಲಿ ಗುರುತಿಸಿ

ನಿಷ್ಠಾವಂತ ಪ್ರಾಣಿ ನಿಮ್ಮ ಕಣ್ಣಿಗೆ ಕಾಣಿಸಿತೇ?

ಈ ಆಪ್ಟಿಕಲ್‌ ಇಲ್ಯೂಷನ್‌ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಶ್ವಾನವನ್ನು ಹುಡುಕುವುದು ಎಲ್ಲರಿಗೂ ಸಾಧ್ಯವಾಗದೇ ಇರಬಹುದು. ನೀವು ಎಷ್ಟೇ ಪ್ರಯತ್ನಿಸಿದರೂ ನಿಮ್ಮ ಕಣ್ಣಿಗೆ ಶ್ವಾನವು ಬಿದ್ದಿಲ್ಲವೇ. ನಾವೇ ನಿಮಗೆ ಉತ್ತರ ಹೇಳುತ್ತೇವೆ. ಒಣಗಿದ ಎಲೆಗಳ ಮೇಲೆ ಕುಳಿತಿರುವ ಶ್ವಾನವನ್ನು ಈ ಕೆಳಗಿನ ಚಿತ್ರದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Rose Plant: ಮನೆಯ ಅಂಗಳದಲ್ಲಿ ಗುಲಾಬಿ ಗಿಡ ನೆಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ – Kannada News | Rose Plant Vastu: Best Directions and Placement for Positive Energy at Home

ಮನೆಯ ಅಂಗಳದಲ್ಲಿ ಬಣ್ಣ ಬಣ್ಣದ ಗುಲಾಬಿ ಗಿಡಗಳನ್ನು ನೆಡುವುದು ಮನೆಯ ಅಂದವವನ್ನು ಹೆಚ್ಚಿಸುತ್ತದೆ. ಆದರೆ ವಾಸ್ತುಶಾಸ್ತ್ರ ಮತ್ತು ಫೆಂಗ್ ಶೂಯಿ ದೃಷ್ಟಿಕೋನದಿಂದ ನೋಡಿದರೆ, ಮನೆಯ ಅಂಗಳದಲ್ಲಿ ಗುಲಾಬಿ ಗಿಡ ನೆಡುವ ವಿಷಯಕ್ಕೆ ವಿಭಿನ್ನ ಅಭಿಪ್ರಾಯಗಳಿವೆ. ಕೆಲವು ನಂಬಿಕೆಗಳು ಇದನ್ನು ಶುಭವೆಂದು ಹೇಳಿದರೆ, ಕೆಲವು ಅಶುಭ ಎಂದು ಸೂಚಿಸುತ್ತವೆ. ಒಟ್ಟಾರೆಯಾಗಿ ಗುಲಾಬಿ ಗಿಡ ನೆಡುವುದು ತಪ್ಪಲ್ಲ, ಆದರೆ ಸ್ಥಳ ಮತ್ತು ದಿಕ್ಕು ಅತ್ಯಂತ ಮುಖ್ಯ ಎಂದು ತಜ್ಞರು ಎಚ್ಚರಿಸುತ್ತಾರೆ.

ವಾಸ್ತು ಪ್ರಕಾರ, ಮನೆಯ ಮುಖ್ಯ ಪ್ರವೇಶದ ಬಳಿ ಮುಳ್ಳಿನ ಸಸ್ಯಗಳನ್ನು ನೆಡುವುದು ಒಳ್ಳೆಯದಲ್ಲ. ಗುಲಾಬಿ ಗಿಡಕ್ಕೆ ಮುಳ್ಳುಗಳು ಇರುವುದರಿಂದ, ಮನೆಯ ಮುಂದೆ ಇದನ್ನು ನೆಡುವುದರಿಂದ ಮನೆಯಲ್ಲಿ ಅಶಾಂತಿ, ಕಲಹಗಳು ಮತ್ತು ಭಿನ್ನಾಭಿಪ್ರಾಯಗಳು ಉಂಟಾಗಬಹುದು ಎಂದು ನಂಬಲಾಗುತ್ತದೆ. ಇದರಿಂದ ಜೀವನದಲ್ಲಿ ಅನಾವಶ್ಯಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ, ವಾಸ್ತು ದೃಷ್ಟಿಯಿಂದ ಮನೆಯ ಮುಂದೆ ಗುಲಾಬಿ ಗಿಡ ನೆಡುವುದು ಅಶುಭ ಎಂದು ಹೇಳಲಾಗುತ್ತದೆ.

ಫೆಂಗ್ ಶೂಯಿ ಪ್ರಕಾರ:

ಇನ್ನೊಂದೆಡೆ, ಫೆಂಗ್ ಶೂಯಿ ಪ್ರಕಾರ ಗುಲಾಬಿ ಗಿಡವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಶಕ್ತಿಯುಳ್ಳ ಸಸ್ಯವಾಗಿದೆ. ವಿಶೇಷವಾಗಿ ಕೆಂಪು ಗುಲಾಬಿಗಳು ಶಕ್ತಿ, ಪ್ರೀತಿ ಮತ್ತು ಉತ್ಸಾಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಿಳಿ ಗುಲಾಬಿಗಳು ಶಾಂತಿ ಮತ್ತು ಸೌಹಾರ್ದತೆಯನ್ನು ಪ್ರತಿನಿಧಿಸುತ್ತವೆ. ಹೀಗಾಗಿ, ಸರಿಯಾದ ಸ್ಥಳದಲ್ಲಿ ಗುಲಾಬಿ ಗಿಡವನ್ನು ನೆಟ್ಟರೆ ಮನೆಯ ವಾತಾವರಣ ಹರ್ಷಭರಿತವಾಗಿರಲು ಸಹಾಯವಾಗುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಗುಲಾಬಿ ಮರವನ್ನು ನೆಡಲು ಸೂಕ್ತ ಸ್ಥಳ:

ಗುಲಾಬಿ ಗಿಡಗಳನ್ನು ಮನೆಯ ಮುಂದೆ ಬದಲು, ಬಾಲ್ಕನಿಯಲ್ಲಿ ಮನೆಯ ನೈಋತ್ಯ ದಿಕ್ಕಿನಲ್ಲಿ
ನೆಡುವುದು ಉತ್ತಮ ಎಂದು ಹೇಳಲಾಗುತ್ತದೆ. ಇದಲ್ಲದೆ, ಕೆಂಪು ಹೂವುಗಳನ್ನು ಹೊಂದಿರುವ ಸಸ್ಯಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಶುಭಕರವೆಂದು ನಂಬಲಾಗಿದೆ. ಇದರಿಂದ ಮನೆಯವರ ಸಾಮಾಜಿಕ ಸ್ಥಾನಮಾನ ಹೆಚ್ಚುತ್ತದೆ ಹಾಗೂ ಕುಟುಂಬ ಸಂಬಂಧಗಳು ಬಲವಾಗುತ್ತವೆ ಎನ್ನಲಾಗುತ್ತದೆ.

ಒಟ್ಟಾರೆಯಾಗಿ ಗುಲಾಬಿ ಗಿಡವನ್ನು ನೆಡುವುದು ತಪ್ಪಲ್ಲ, ಆದರೆ ಸ್ಥಳ ಮತ್ತು ದಿಕ್ಕು ಅತ್ಯಂತ ಮುಖ್ಯ. ಮನೆಯ ಮುಖ್ಯ ದ್ವಾರದ ಮುಂದೆ ನೆಡುವುದನ್ನು ತಪ್ಪಿಸಿ, ಸೂಕ್ತ ದಿಕ್ಕಿನಲ್ಲಿ ನೆಟ್ಟರೆ ಗುಲಾಬಿಯ ಸೌಂದರ್ಯವೂ, ಅದರ ಸಕಾರಾತ್ಮಕ ಪರಿಣಾಮವೂ ನಿಮ್ಮ ಮನೆಗೆ ಲಭಿಸಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ – Kannada News | We Have Boarded the Reform Express, Says PM Modi Ahead of Budget

ನವದೆಹಲಿ, ಜನವರಿ 29: ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಗುರುವಾರ ಮಾಧ್ಯಮಗಳನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ(Narendra Modi) ಮಾತನಾಡಿದ್ದಾರೆ. ನಮ್ಮ ಸರ್ಕಾರದ ವಿಶಿಷ್ಟ ಲಕ್ಷಣವೆಂದರೆ ಸುಧಾರಣೆ, ಕಾರ್ಯಕ್ಷಮತೆ ಮತ್ತು ಬದಲಾವಣೆ, ಈಗ ನಾವು ಸುಧಾರಣಾ ಎಕ್ಸ್​ಪ್ರೆಸ್​ನಲ್ಲಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.  ರಾಷ್ಟ್ರಪತಿ ಭಾಷಣವನ್ನು ಉಲ್ಲೇಖಿಸಿರುವ ಅವರು, ಭಾಷಣವು 140 ಕೋಟಿ ಭಾರತೀಯರ ವಿಶ್ವಾಸದ ಅಭಿವ್ಯಕ್ತಿಯಾಗಿದೆ. ಅವರ ಸಾಮರ್ಥ್ಯ ಮತ್ತು ಅವರ ಆಕಾಂಕ್ಷೆಗಳ ರೇಖಾಚಿತ್ರವಾಗಿದೆ.

ವಿಶೇಷವಾಗಿ ಯುವಕರ ಬಗ್ಗೆ. ಎಲ್ಲಾ ಸಂಸದರಿಗೆ, ರಾಷ್ಟ್ರಪತಿ ಮಾರ್ಗದರ್ಶನ ನೀಡಲು ಹಲವಾರು ವಿಷಯಗಳನ್ನು ಹೇಳಿದ್ದರು, ಎಲ್ಲಾ ಸಂಸದರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ನನಗೆ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಭಾರತದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತೆಯ ಸಮಗ್ರ ಮೌಲ್ಯಮಾಪನವನ್ನು ಪ್ರಸ್ತುತಪಡಿಸುತ್ತದೆ ಮತ್ತು ಬಜೆಟ್ ಮಂಡಿಸುವ ಮೊದಲು ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಲೋಕಸಭೆಯಲ್ಲಿ 2026 ರ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.

ಇದು ಅವರ ಸತತ ಒಂಬತ್ತನೇ ಬಜೆಟ್ ಆಗಿದ್ದು, ಜಾಗತಿಕ ಅನಿಶ್ಚಿತತೆಯ ನಡುವೆ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಸರಿಪಡಿಸುವ ಕ್ರಮಗಳನ್ನು ಇದು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಒಂದೇ ಮಹಿಳೆಯ ಜತೆಗೆ ಇಬ್ಬರ ಅನೈತಿಕ ಸಂಬಂಧ: ಚಾಕುವಿನಿಂದ ಇರಿದು ಕೊಲೆ – Kannada News | Karnataka Crime: Illicit Affair Leads to Brutal Murder of Contractor in Hassan

ಹಾಸನ, ಜ.29: ರಾಜ್ಯದಲ್ಲಿ ಅನೈತಿಕ ಸಂಬಂಧಗಳ ಪ್ರಕರಣಗಳು ಹೆಚ್ಚಾಗಿದೆ. ಈ ಕಾರಣಕ್ಕೆ ಕೊಲೆಗಳು ಕೂಡ ನಡೆಯುತ್ತಿದೆ. ಇದೀಗ ಹಾಸನದಲ್ಲಿ (Hassan) ಅನೈತಿಕ ಸಂಬಂಧದ ವಿಚಾರವಾಗಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ನೆನ್ನೆ (ಜ.28) ತಡರಾತ್ರಿ ಅನೈತಿಕ ಸಂಬಂಧದ ವಿಚಾರವಾಗಿ ಅಡುಗೆ ಕಂಟ್ರಾಕ್ಟರ್​​​ನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚಾಕುವಿನಿಂದ ಇರಿದು ಅಡುಗೆ ಗುತ್ತಿಗೆದಾರ ಆನಂದ್(48) ಎಂಬುವವರನ್ನು ಹತ್ಯೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ಧರ್ಮೇಂದ್ರ ಎಂಬ ವ್ಯಕ್ತಿ ಅಡುಗೆ ಗುತ್ತಿಗೆದಾರ ಆನಂದ್ ಎಂಬುವವರಿಗೆ ಐದಾರು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಆನಂದ್ ಮೇಲೆ ಧರ್ಮೇಂದ್ರ ದಾಳಿ ಮಾಡಿದ್ದಾರೆ. ಒಂದೇ ಮಹಿಳೆ ಜತೆಗೆ‌ ಆನಂದ್​​ ಮತ್ತು ಧಮೇಂದ್ರ ಅನೈತಿಕ ಸಂಬಂಧ ಹೊಂದಿದ್ದರು. ಇದೇ ವಿಚಾರಕ್ಕೆ ಆನಂದ್ ಮೇಲೆ ಧರ್ಮೇಂದ್ರ ನಡುವೆ ಜಗಳ ನಡೆದಿತ್ತು. ಇಬ್ಬರು ಕೂಡ ಬಾರ್​​​​ನಲ್ಲಿ ಭೇಟಿಯಾಗಿದ್ದು, ಮಹಿಳೆ ಜತೆಗಿನ ಸಂಬಂಧ ಬಗ್ಗೆ ಮಾತುಕತೆಯಾಗಿದೆ. ಅಲ್ಲಿಂದ ಆನಂದ್​​ ಮನೆಗೆ ಹೋಗಿದ್ದಾರೆ. ಆದರೆ ಮತ್ತೆ ಫೋನ್​​ ಮಾಡಿ ಧರ್ಮೇಂದ್ರ ಕರೆಸಿಕೊಂಡಿದ್ದಾರೆ. ಧರ್ಮೇಂದ್ರ ಫೋನ್ ಮಾಡಿದ ಕಾರಣ ಆನಂದ್​​​​ ವಾಪಸ್ಸು ಬಂದಿದ್ದಾರೆ.

ಇದನ್ನೂ ಓದಿ: ರಾಜಕಾರಣಿಗಳ ಮಗಳಂದಿರ ಜತೆ ಯುವಕನ ಕಾಮಕೇಳಿ: ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿ ಮೊಹಮ್ಮದ್ ಸವದ್ ಬಂಧನ

ಈ ವೇಳೆ ಮತ್ತೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಮಾತಿನ ಭರದಲ್ಲಿ ಧಮೇಂದ್ರ ಆನಂದ ಅವರಿಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ಧರ್ಮೇಂದ್ರ ಅವರು ಮಹಿಳೆ ಜೊತೆ ಕಳೆದ ಎಂಟು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ಇದರ ನಡುವೆ ಮಹಿಳೆ ಆನಂದ ಜತೆಗೂ ಸಂಬಂಧ ಹೊಂದಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆನಂದ ಹಾಗೂ ಧರ್ಮೇಂದ್ರ ನಡುವೆ ಆಗ್ಗಾಗೆ ಜಗಳ ನಡೆಯುತ್ತಿತ್ತು. ನೆನ್ನೆ ರಾತ್ರಿ ಕುಡಿದ ಅಮಲಿನಲ್ಲಿ ಧರ್ಮೇಂದ್ರ ಆನಂದ್​​ ಅವರನ್ನು ಕೊಲೆ ಮಾಡಿದ್ದಾರೆ. ಹತ್ಯೆ ಮಾಡಿದ ನಂತರ ಧಮೇಂದ್ರ ಅಲ್ಲಿ ಪರಾರಿಯಾಗಿದ್ದಾನೆ. ಇದೀಗ ಹಾಸನ ನಗರದ ಕೆ.ಆರ್.ಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ. ತೀವ್ರ ರಕ್ತಸ್ರಾವದಿಂದ ಆನಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:02 am, Thu, 29 January 26

Source link

Video: ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ – Kannada News | Driver Killed After Vehicle Catches Fire on National Highway in Andhra Pradesh

ಕಾಕಿನಾಡ, ಜನವರಿ 29: ಆಂಧ್ರಪ್ರದೇಶದ ಕಾಕಿನಾಡದಲ್ಲಿ ಎರಡು ಟ್ರಕ್​ಗಳ ನಡುವೆ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಸಜೀವದಹನವಾಗಿದ್ದಾರೆ. ಕತಿಪುಡಿ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೆಚ್ಚು ವಾಹನಗಳು ಓಡಾಡುವ ಹೆದ್ದಾರಿ, ಪಕ್ಕದ ರಸ್ತೆಯಿಂದ ಟ್ರಕ್​ ಒಂದು ಯೂಟರ್ನ್​ ತೆಗೆದುಕೊಳ್ಳುವಾಗ ಈ ಅಪಘಾತ ಸಂಭವಿಸಿದೆ. ಎರಡೂ ವಾಹನಗಳು ಡಿಕ್ಕಿ ಹೊಡೆದ ತಕ್ಷಣ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಹರಡುವ ಮೊದಲೇ ಓರ್ವ ಚಾಲಕ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರು. ಆದರೆ ಮತ್ತೊಂದು ಟ್ರಕ್​ನಲ್ಲಿದ್ದ ಚಾಲಕನಿಗೆ ಅದು ಸಾಧ್ಯವಾಗಲಿಲ್ಲ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link