Category Archives: Blog

Your blog category

Video: ಕೈಯಲ್ಲಿದ್ದ ಒಂದೇ ಒಂದು ಚಾಕೊಲೇಟ್‌ನ್ನು ಸ್ನೇಹಿತರಿಗೂ ಕೊಟ್ಟು ತಿಂದ ಪುಟಾಣಿ

ಕೆಲ ಮಕ್ಕಳು ತಮ್ಮ ಕೈಯಲ್ಲಿರುವ ಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ಕೊಡುವುದಿಲ್ಲ. ಇನ್ನು ಕೆಲ ಪುಟಾಣಿಗಳು (little kids) ತಮ್ಮ ಹಂಚಿಕೊಳ್ಳುವ ಗುಣದಿಂದಲೇ ಎಲ್ಲರಿಗೂ ಇಷ್ಟವಾಗುತ್ತಾರೆ. ಆಟಿಕೆಗಳು, ತಿಂಡಿ ಏನೇ ಇರಲಿ, ತಮ್ಮ ಫ್ರೆಂಡ್ಸ್ ಗೆ ಕೊಟ್ಟರೇನೇ ಸಮಾಧಾನ. ಇದಕ್ಕೆ ಉದಾಹರಣೆಯಂತಿದೆ ಈ ಪುಟಾಣಿ. ತನ್ನ ಬಳಿಯಿದ್ದ ಒಂದೇ  ಒಂದು ಚಾಕೊಲೇಟ್‌ನಲ್ಲಿ ತನ್ನ ಸ್ನೇಹಿತರಿಗೂ ಕೊಟ್ಟು ತಿಂದ ಪುಟಾಣಿಯ ವಿಡಿಯೋ ವೈರಲ್ ಆಗಿದೆ.

mahi_phadi_kedarwasi ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪುಟಾಣಿಯ ಶೇರಿಂಗ್ ಗುಣದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪ್ ನಲ್ಲಿ ಮೂವರು ಪುಟ್ಟ ಮಕ್ಕಳು ಇರುವುದನ್ನು ಕಾಣಬಹುದು. ಅದರಲ್ಲಿ ಒಂದು ಪುಟಾಣಿ ತನ್ನ ಕೈಯಲ್ಲಿದ್ದ ಚಾಕೊಲೇಟ್‌ನ ನೆಲೆದ ಮೇಲೆ ಇಟ್ಟು ಕಲ್ಲಿನಿಂದ ಪುಡಿ  ಮಾಡಿದೆ. ಆ ಬಳಿಕ ತನ್ನ ಜತೆಗೆ ಇದ್ದ ಇಬ್ಬರೂ ಸ್ನೇಹಿತರಿಗೆ ಕೊಟ್ಟು  ಚಾಕೊಲೇಟ್‌ ತಿನ್ನುವ ದೃಶ್ಯವನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಫೇವರಿಟ್ ಟೀಚರ್‌ಗಾಗಿ ಮನೆಯಿಂದ ಟೀ ಮಾಡಿಕೊಂಡು ತಂದ ಪುಟಾಣಿ

ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಈ ದೃಶ್ಯ ಮುದ್ದಾಗಿದೆ ಎಂದಿದ್ದಾರೆ. ಮತ್ತೊಬ್ಬರು, ಹೆತ್ತವರು ಮಕ್ಕಳಿಗೆ ಹಂಚಿಕೊಂಡು ತಿನ್ನುವ ಗುಣ ಕಲಿಸುವುದು ಮುಖ್ಯ ಎಂದು ಹೇಳಿದ್ದಾರೆ. ಇನ್ನೊಬ್ಬರು, ಕ್ಯೂಟ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಸಂಗ್ರಹ; 1.94 ಲಕ್ಷ ಕೋಟಿ ರೂಗೆ ಏರಿದ ತೆರಿಗೆ ಆದಾಯ

ನವದೆಹಲಿ, ಜೂನ್ 1: ಭಾರತದ ಆರ್ಥಿಕತೆಯು ಬಲಿಷ್ಠವಾಗಿ ಮುನ್ನುಗ್ಗುತ್ತಿರುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. 2026 ರ ಮೇ ತಿಂಗಳ ದೇಶದ ಒಟ್ಟು ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು ಶೇಕಡಾ 3.2 ರಷ್ಟು ಪ್ರಗತಿ ಸಾಧಿಸಿದ್ದು, ಬರೋಬ್ಬರಿ 1.94 ಲಕ್ಷ ಕೋಟಿ ರೂ ತಲುಪಿದೆ. ದೇಶೀಯ ವಹಿವಾಟುಗಳಲ್ಲಿನ ಸ್ಥಿರತೆ ಮತ್ತು ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚುತ್ತಿರುವುದು ಈ ದಾಖಲೆಯ ಸಂಗ್ರಹಕ್ಕೆ ಪ್ರಮುಖ ಕಾರಣವಾಗಿದೆ. ನಿವ್ವಳ ಜಿಎಸ್​ಟಿ (Net GST) ಆದಾಯದಲ್ಲೂ ಏರಿಕೆ ಆಗಿದೆ.

ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಮೇ 2026 ರ ನಿವ್ವಳ ಆದಾಯ 1.73 ಲಕ್ಷ ಕೋಟಿ ರೂ ಇದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೆಟ್ ಜಿಎಸ್​ಟಿ ಕಲೆಕ್ಷನ್ಸ್​ನಲ್ಲಿ ಶೇಕಡಾ 2.8 ರಷ್ಟು ಹೆಚ್ಚಳ ಆಗಿದೆ.

ಪ್ರಸಕ್ತ ಹಣಕಾಸು ವರ್ಷದ (FY 2026-27) ಒಟ್ಟು ಸಂಗ್ರಹ

ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳುಗಳಲ್ಲಿ (ಏಪ್ರಿಲ್ ಮತ್ತು ಮೇ 2026) ಭಾರತದ ಒಟ್ಟು ಜಿಎಸ್‌ಟಿ ಸಂಗ್ರಹವು ಅತ್ಯಂತ ಆಶಾದಾಯಕವಾಗಿದೆ. ಎರಡು ತಿಂಗಳ ಒಟ್ಟು ಗ್ರಾಸ್ ಜಿಎಸ್‌ಟಿ, 4.04 ಲಕ್ಷ ಕೋಟಿ ರೂ ಇದೆ. ಒಟ್ಟು ನಿವ್ವಳ ಜಿಎಸ್‌ಟಿ, 3.54 ಲಕ್ಷ ಕೋಟಿ ರೂ ಇದೆ. ಇವುಗಳಲ್ಲಿ ಕ್ರಮವಾಗಿ ಶೇ. 7.1 ಮತ್ತು 7.2ರಷ್ಟು ಏರಿಕೆ ಆಗಿದೆ.

ಇದನ್ನೂ ಓದಿ: ನೀವು ಮಗನಾದರೂ ಸರಿ, ಹೆಂಡತಿಯಾದರೂ ಸರಿ, ಮೃತ ವ್ಯಕ್ತಿಯ ಎಟಿಎಂನಿಂದ ಹಣ ಡ್ರಾ ಮಾಡುವುದು ತಪ್ಪಾ?

ಇದಕ್ಕೂ ಮುನ್ನ, ಕಳೆದ ಏಪ್ರಿಲ್ (2026) ತಿಂಗಳಿನಲ್ಲಿ ಭಾರತದ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮಟ್ಟದ 2.10 ಲಕ್ಷ ಕೋಟಿ ರೂ ಜಿಎಸ್‌ಟಿ ಸಂಗ್ರಹವಾಗಿ ದೇಶದ ಆರ್ಥಿಕ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.

ಆದಾಯದ ವಿಭಜನೆ (Tax Breakdown)

ಮೇ 2026 ರಲ್ಲಿ ಸಂಗ್ರಹವಾದ ಒಟ್ಟು ₹1,94,149 ಕೋಟಿ ಜಿಎಸ್‌ಟಿ ಆದಾಯದ ವಿವಿಧ ವಿಭಾಗಗಳು ಹೀಗಿವೆ:

  • CGST (ಕೇಂದ್ರ ಜಿಎಸ್‌ಟಿ): ₹34,713 ಕೋಟಿ
  • SGST (ರಾಜ್ಯ ಜಿಎಸ್‌ಟಿ): ₹43,001 ಕೋಟಿ
  • IGST (ಸಮಗ್ರ ಜಿಎಸ್‌ಟಿ): ₹1,00,001 ಕೋಟಿ (ಇದರಲ್ಲಿ ಆಮದು ಸರಕುಗಳಿಂದ ಬಂದ ₹45,431 ಕೋಟಿ ಸೇರಿದೆ).
  • Cess (ಸೆಸ್): ₹11,434 ಕೋಟಿ (ಇದರಲ್ಲಿ ಆಮದು ಸರಕುಗಳ ಮೇಲಿನ ₹932 ಕೋಟಿ ಸೆಸ್ ಸೇರಿದೆ).

ಇದನ್ನೂ ಓದಿ: ಜೂನ್ 1ರಿಂದ ರೈಲ್ವೆ ವೈಟಿಂಗ್ ಲಿಸ್ಟ್ ನಿಯಮಗಳಲ್ಲಿ ಬದಲಾವಣೆ; ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಳ; ನಿಯಮ ಉಲ್ಲಂಘನೆಗೆ ಭಾರಿ ದಂಡ

ಮೇ ತಿಂಗಳ ಈ ಭಾರಿ ಜಿಎಸ್‌ಟಿ ತೆರಿಗೆ ಸಂಗ್ರಹವು ದೇಶದಲ್ಲಿ ವ್ಯಾಪಾರ-ವಹಿವಾಟುಗಳು ಸುಗಮವಾಗಿ ಸಾಗುತ್ತಿರುವುದನ್ನು ಮತ್ತು ತೆರಿಗೆ ಪಾವತಿಯ ನಿಯಮಗಳು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಯಾಗುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Viral: ಸ್ಕೂಟರ್‌ನಲ್ಲಿ ಗೂಡು ಕಟ್ಟಿ ಮರಿ ಇಟ್ಟ ಗುಬ್ಬಚ್ಚಿ, ಅಚ್ಚರಿಗೊಂಡ ಸ್ಥಳೀಯರು

ತೆಲಂಗಾಣ ಜೂನ್ 01: ಸಾಮಾನ್ಯವಾಗಿ ಗುಬ್ಬಚ್ಚಿಗಳು ಈ ಮರಗಳು ಇಲ್ಲವಾದರೆ ಮನೆಗಳ ಜಂತಿ, ಸಂದುಗಳು, ಛಾವಣಿಗಳನ್ನು ಆಶ್ರಯಿಸಿ ಗೂಡು ಕಟ್ಟುತ್ತವೆ. ಆದರೆ ಇದೀಗ ಸ್ಕೂಟರ್‌ನಲ್ಲಿ ಗೂಡು ಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡಿದೆ. ಈ ಕುತೂಕಲಕಾರಿ ಘಟನೆಯೂ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾದಲ್ಲಿ (Vaira, Khammam district of Telangana) ನಡೆದಿದೆ. ಹೌದು, ಗುಬ್ಬಚ್ಚಿಯೊಂದು ಗುಬ್ಬಚ್ಚಿ ತನ್ನ ಮರಿಗಳನ್ನು ರಕ್ಷಿಸಲು ಆಯ್ಕೆ ಮಾಡಿಕೊಂಡ ಈ  ನೂತನ ಮಾರ್ಗದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ.

ಗುಬ್ಬಚ್ಚಿಯೊಂದು ಸಂತಾನ ಅಭಿವೃದ್ಧಿಗೆ  ವೈರ ಪುರಸಭೆ ವ್ಯಾಪ್ತಿಯ ಲೀಲಾಸುಂದರಯ್ಯನಗರದ ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಸ್ಕೂಟರ್‌ನನ್ನು ಸುರಕ್ಷಿತ ತಾಣವನ್ನಾಗಿ ಮಾಡಿಕೊಂಡಿದೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬವೊಂದು ಬೇಸಿಗೆ ರಜೆಯಲ್ಲಿ ತಮ್ಮ ಊರಿಗೆ ತೆರಳಿದ್ದು. ಈ ದ್ವಿಚಕ್ರ ವಾಹನವು ಒಂದು ತಿಂಗಳಿಗೂ ಹೆಚ್ಚು ಕಾಲ ಮನೆಯ ಹೊರಭಾಗದಲ್ಲಿ ನಿಲ್ಲಿಸಲಾಗಿತ್ತು.

ಇದನ್ನೂ ಓದಿ: ಬಾಯಾರಿಕೆಯಿಂದ ಬಸ್ ಅಡ್ಡಗಟ್ಟಿ ನೀರು ಕುಡಿದ ಕೋತಿಗಳು; ವಿಡಿಯೋ ವೈರಲ್

ಹೀಗಾಗಿ ಸ್ಕೂಟಿಯ ಕೀ ಪಕ್ಕದಲ್ಲಿ ಒಂದು ಸಣ್ಣ ಖಾಲಿ ಜಾಗದಲ್ಲಿ ಗುಬ್ಬಚ್ಚಿ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿ ಮಾಡಿದೆ. ಈ ಗುಬ್ಬಚ್ಚಿಗಳು ಹೆಚ್ಚಾಗಿ ಸ್ಕೂಟಿಗೆ ಬರುವುದನ್ನು ಸ್ಥಳೀಯರು ಗಮನಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಕೂಟಿಯಲ್ಲಿ ಗುಬ್ಬಚ್ಚಿ ಗೂಡು  ಮೊಟ್ಟೆಗಳಿರುವುದು ಕಂಡು ಬಂದಿದೆ.  ಈ ಘಟನೆಯೂ ಸ್ಥಳೀಯರನ್ನು ಅಚ್ಚರಿಗೊಳಿಸಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಟ್ಟೆಯ ಬೊಜ್ಜು ಕರಗಿಸಲು ಹೋಗಿ ಸಮಸ್ಯೆ ಮಾಡಿಕೊಂಡ ತಾಪ್ಸಿ ಪನ್ನು; ಮಹಿಳೆಯರಿಗೆ ಎಚ್ಚರಿಕೆ

ಇಂದಿನ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಪರ್ಫೆಕ್ಟ್ ಫಿಗರ್, ಅದರಲ್ಲೂ ಪ್ರಮುಖವಾಗಿ ಚಪ್ಪಟೆಯಾದ ಹೊಟ್ಟೆ (Flat Midriff) ಹೊಂದಿರಬೇಕು ಎಂಬ ಕ್ರೇಜ್ ಯುವತಿಯರಲ್ಲಿ ಹೆಚ್ಚಾಗಿದೆ. ಆದರೆ, ಇನ್‌ಸ್ಟಾಗ್ರಾಮ್‌ನಲ್ಲಿ ಪರ್ಫೆಕ್ಟ್ ಆಗಿ ಕಾಣಿಸಿಕೊಳ್ಳಲು ಹೋಗಿ ತಮ್ಮ ದೇಹವನ್ನು ದಂಡಿಸಬೇಡಿ ಎಂದು ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu) ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ. ತಾವೂ ಕೂಡ ಒಂದು ಕಾಲದಲ್ಲಿ ಇಂತಹದ್ದೇ ಹುಚ್ಚಿಗೆ ಬಿದ್ದು ದೇಹಕ್ಕೆ ಅತಿಯಾದ ಹಿಂಸೆ ನೀಡಿದ್ದಾಗಿ ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.

‘ನಾನು ಬೆಳೆಯುವಾಗ ಅತ್ಯಂತ ಫಿಟ್ ಆಗಿದ್ದೆ. ಆದರೂ ನನ್ನ ಕೆಳಹೊಟ್ಟೆಯ ಬೊಜ್ಜು ಏಕೆ ಕರಗುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿರಲಿಲ್ಲ. ಆ ಫ್ಲಾಟ್ ಬೆಲ್ಲಿ ಹೊಂದುವ ಹಠಕ್ಕೆ ಬಿದ್ದು, ನಾನು ಮಿತಿ ಮೀರಿ ವರ್ಕೌಟ್ ಮಾಡಲು ಶುರುಮಾಡಿದೆ. ನನ್ನ ದೇಹಕ್ಕೆ ನಾನೇ ಅತಿಯಾದ ಒತ್ತಡ ಹೇರಿದೆ. ಆದರೆ ನಾವು ಯಾವಾಗ ದೇಹವನ್ನು ಮಿತಿ ಮೀರಿ ದಂಡಿಸುತ್ತೇವೋ, ಆಗ ಮೆದುಳು ನಮ್ಮ ದೇಹಕ್ಕೆ ರಕ್ಷಣೆಯ ಅಗತ್ಯವಿದೆ ಎಂಬ ಅಲಾರಾಂ ಸಂದೇಶ ರವಾನಿಸುತ್ತದೆ’ ಎಂದು ತಾಪ್ಸಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

‘ನಾವು ಅತಿಯಾಗಿ ದಂಡಿಸಿದಾಗ ದೇಹವು ನೀರನ್ನು ಹಿಡಿದಿಟ್ಟುಕೊಳ್ಳಲು ಆರಂಭಿಸುತ್ತದೆ. ಆ ಕೆಳಹೊಟ್ಟೆಯಲ್ಲಿ ಕಾಣಿಸುವುದು ಕೇವಲ ಕೊಬ್ಬು ಮಾತ್ರವಲ್ಲ, ಅದು ನೀರು ಕೂಡ ಆಗಿರುತ್ತದೆ. ಅತಿಯಾದ ವರ್ಕೌಟ್‌ನಿಂದ ಅದು ಮತ್ತಷ್ಟು ಹೆಚ್ಚಾಗುತ್ತದೆಯೇ ಹೊರತು ಕರಗುವುದಿಲ್ಲ. ಹೀಗಾಗಿ ಯಾರೂ ಕೂಡ ಅತಿಯಾಗಿ ಜಿಮ್‌ನಲ್ಲಿ ಕಸರತ್ತು ಮಾಡಬಾರದು’ ಎಂದು ಅವರು ಸಲಹೆ ನೀಡಿದ್ದಾರೆ.

ಮಹಿಳೆಯರ ದೇಹದ ರಚನೆಯ ಬಗ್ಗೆ ಮಾತನಾಡಿರುವ ತಾಪ್ಸಿ, ‘ಪ್ರತಿಯೊಬ್ಬ ಮಹಿಳೆಯ ದೇಹದ ಪ್ರಕೃತಿಯೂ ವಿಭಿನ್ನವಾಗಿರುತ್ತದೆ. ನನಗೂ ಇದನ್ನು ಅರ್ಥ ಮಾಡಿಕೊಳ್ಳಲು ತುಂಬಾ ಸಮಯ ಬೇಕಾಯಿತು. ಸಾಕಷ್ಟು ಹಿಂಸೆ ಅನುಭವಿಸಿದ ಬಳಿಕವಷ್ಟೇ ನನಗೆ ಸತ್ಯದ ಅರಿವಾಯಿತು. ನನ್ನ ನ್ಯೂಟ್ರಿಷನಿಸ್ಟ್ ಮುನ್‌ಮುನ್ ಗನೇರಿವಾಲ್ ಈ ಬಗ್ಗೆ ನನಗೆ ಸ್ಪಷ್ಟನೆ ನೀಡಿದ್ದರು. ಮಹಿಳೆಯರ ಕೆಳಹೊಟ್ಟೆಯ ಭಾಗದಲ್ಲಿ ಸ್ವಲ್ಪ ಕೊಬ್ಬು ಮತ್ತು ನೀರಿನಂಶ ಇರುವುದು ಅತ್ಯಂತ ಅವಶ್ಯಕ. ಏಕೆಂದರೆ ಅಲ್ಲಿ ಮಹಿಳೆಯರ ಸಂತಾನೋತ್ಪತ್ತಿ ಅಂಗಗಳಿರುತ್ತವೆ. ಅವುಗಳ ರಕ್ಷಣೆಗಾಗಿ ಪ್ರಕೃತಿಯೇ ಈ ರಚನೆ ಮಾಡಿದೆ’ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ‘ನೀವು ಗಂಡಸರ ರೀತಿ ಕಾಣ್ತೀರಾ’ ಎಂದಿದ್ದಕ್ಕೆ ಖುಷಿ ಆಗಿದ್ದೇಕೆ ತಾಪ್ಸಿ ಪನ್ನು?

‘ಇದು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಒಳ್ಳೆಯದು. ಕೇವಲ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳು ಪರ್ಫೆಕ್ಟ್‌ ಆಗಿ ಬರಲಿ ಎಂಬ ಒಂದೇ ಕಾರಣಕ್ಕೆ ನಿಮ್ಮ ದೇಹಕ್ಕೆ ಹಿಂಸೆ ಕೊಡಬೇಡಿ. ಹೊಟ್ಟೆಯ ಭಾಗದಲ್ಲಿ ಸ್ವಲ್ಪ ಉಬ್ಬು ಇರುವುದು ಸಹಜ ಮತ್ತು ಆರೋಗ್ಯಕರ. ಪ್ಲೀಸ್, ನಿಮ್ಮ ದೇಹಕ್ಕೆ ನೀವೇ ಟಾರ್ಚರ್ ಮಾಡಬೇಡಿ’ ಎಂದು ತಾಪ್ಸಿ ಪನ್ನು ಮಹಿಳೆಯರಲ್ಲಿ ವಿನಂತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೇವೇಗೌಡ, ಕುಮಾರಸ್ವಾಮಿ ಬಗ್ಗೆ ನಾಲಿಗೆ ಹರಿಬಿಟ್ರೆ ಕತ್ತರಿಸುತ್ತೇವೆ: ಚಲುವರಾಯಸ್ವಾಮಿಗೆ ಸುರೇಶ್ ಗೌಡ ಎಚ್ಚರಿಕೆ

ಹೆಚ್​ಡಿ ದೇವೇಗೌಡರ, ಎನ್.ಚಲುವರಾಯಸ್ವಾಮಿ, ಸುರೇಶ್ ಗೌಡ

ಮಂಡ್ಯ, ಜೂನ್​ 01: ಸಚಿವ ಚಲುವರಾಯಸ್ವಾಮಿ (Chaluvaraya Swamy) ಅಧಿಕಾರ, ಹಣ, ಮದದಿಂದ ತಪ್ಪು ಮಾಡುತ್ತಿದ್ದಾರೆ. ಅವರು ಯಾರ ಸಾವನ್ನು ಬಯಸುತ್ತಿದ್ದಾರೆ? ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡರು (HD Deve Gowda) ಮತ್ತು ಹೆಚ್​​ಡಿ ಕುಮಾರಸ್ವಾಮಿ (HD Kumaraswamy)
ಬಗ್ಗೆ ನಾಲಿಗೆ ಹರಿಬಿಟ್ಟರೆ ಕತ್ತರಿಸುತ್ತೇವೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್​​ನ ಮಾಜಿ ಶಾಸಕ ಸುರೇಶ್ ಗೌಡ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಮುಖ್ಯಾಂಶಗಳು

  • ಡಿಕೆ ಶಿವಕುಮಾರ್​ ಸಿಎಂ ಆಗುತ್ತಿರುವುದರಿಂದ ಹೆಚ್​ಡಿಡಿ ಮನೆಯಲ್ಲಿ ಸೂತಕದ ಛಾಯೆ ಹೇಳಿಕೆ ವಿವಾದ
  • ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್​ ನಾಯಕರು ಕೆಂಡಾಮಂಡಲ
  • ಜೆಡಿಎಸ್​ನ ಮಾಜಿ ಶಾಸಕ ಸುರೇಶ್ ಗೌಡ ನೇರ ವಾಗ್ದಾಳಿ

ಮಾಜಿ ಶಾಸಕ ಸುರೇಶ್ ಗೌಡ ಹೇಳಿದ್ದಿಷ್ಟು

ಡಿಕೆ ಶಿವಕುಮಾರ್​​ ಸಿಎಂ ಆಗುತ್ತಿರುವುದರಿಂದ ದೇವೇಗೌಡರ ಮನೆಯಲ್ಲಿ ಸೂತಕ ಎಂಬ‌ ಸಚಿವ ಚಲುವರಾಯಸ್ವಾಮಿ ಹೇಳಿಕೆ‌ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್​ ನಾಯಕರು ಕೆಂಡಾಮಂಡಲರಾಗಿದ್ದಾರೆ. ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದವರು ಮಾಜಿ ಶಾಸಕ ಸುರೇಶ್ ಗೌಡ ತಿರುಗೇಟು ನೀಡಿದ್ದಾರೆ.

ಚಲುವರಾಯಸ್ವಾಮಿ ಯಾರ ಸಾವು ಬಯಸುತ್ತಿದ್ದಾರೆ?

ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನ ಆಯ್ಕೆ ಮಾಡಿದ್ದಾರೆ. 5 ವರ್ಷ ಪೂರ್ಣಗೊಳಿಸಬೇಕು. ಅಭಿವೃದ್ಧಿ ಕುಂಠಿತದ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಡಿಕೆ ಶಿವಕುಮಾರ್​ ಸಿಎಂ ಆಗಿದ್ದಾರೆ. ಕೆಲವು ಕಿಡಿಗೇಡಿಗಳು ಯಾರನ್ನೋ ಮೆಚ್ಚಿಸಲು ನಮ್ಮ ನಾಯಕರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಬಂದಿದೆ ಅಂತ ಹೇಳುತ್ತಾರೆ. ಸಾವಿನ ಸಂದರ್ಭದಲ್ಲಿ ಮಾತ್ರ ಸೂತಕ ಬರುವುದು. ಚಲುವರಾಯಸ್ವಾಮಿ ಯಾರ ಸಾವನ್ನು ಬಯಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ದೇವೇಗೌಡರ ಭೇಟಿ ಬಳಿಕ ಜಿಟಿಡಿ ಸ್ಫೋಟಕ ಹೇಳಿಕೆ: ಎಲ್ಲಾ ಅಂತೆ-ಕಂತೆಗಳಿಗೆ ತೆರೆ!

ಚಲುವರಾಯಸ್ವಾಮಿಗೆ ಯಾವ ರೀತಿ ಬುದ್ಧಿ ಹೇಳಬೇಕು. ದೇವೇಗೌಡರ ಇತಿಹಾಸ ನಿಮಗೆ ಏನು ಗೊತ್ತು. ಕನ್ನಡನಾಡಿನಲ್ಲಿ ಪ್ರಧಾನಿಯಾದ ಒಬ್ಬ ಕನ್ನಡಿಗ ಅಂದರೆ ದೇವೇಗೌಡರು. ಎಸ್ ಎಂ ಕೃಷ್ಣ ಅವರನ್ನು ಸಿಎಂ ಮಾಡಿದ್ದು ಯಾರು? ಇವಾಗ ಡಿಕೆ ಶಿವಕುಮಾರ್​ ಮುಖ್ಯಮಂತ್ರಿ ಆದರೆ ದೇವೇಗೌಡರಿಗೆ ಹೊಟ್ಟೆ ಉರಿನಾ? ಬಿಜೆಪಿ ಜೊತೆ ಎನ್​​ಡಿಎ ಸರ್ಕಾರ ಇದೆ. ಕಾಂಗ್ರೆಸ್ ಪಕ್ಷದಿಂದ ಯಾರೇ ಸಿಎಂ ಆದರೂ ನಮ್ಮ ವಿರೋಧವೆ. ವಿರೋಧ ಪಕ್ಷದ ಕೆಲಸ ವಿರೋಧ ಮಾಡುವುದೆ ಎಂದಿದ್ದಾರೆ.

ಮಾಟ- ಮಂತ್ರ ಮಾಡಿಸುವುದರಲ್ಲಿ ಎತ್ತಿದ ಕೈ

ಅಧಿಕಾರ ಶಾಶ್ವತ ಅಲ್ಲ, ಚುನಾವಣೆ ಬುರುತ್ತೆ ಬುದ್ದಿ ಕಲಿಸುತ್ತಾರೆ. ದೇವೇಗೌಡರ ಬಗ್ಗೆ ಮಾತನಾಡಿ ಲೀಡರ್ ಆಗುತ್ತೇನೆ ಎನ್ನುವ ಭ್ರಮೆಯಲ್ಲಿದ್ದಾರೆ. ನಿನ್ನ ಬಳಿ ಅಧಿಕಾರ ಇರಬಹುದು ಜನರ ಶಕ್ತಿ ನಮ್ಮ ಬಳಿ ಇದೆ. ಚಲುವರಾಯಸ್ವಾಮಿಗೆ ಯಾರ ಮನೆಯಲ್ಲಿ ಸಾಯುತ್ತಾರೆ ಎನ್ನುವುದು ಮುನ್ಸೂಚನೆ ಗೊತ್ತಾಗುತ್ತೆ. ಮಾಟ- ಮಂತ್ರ ಮಾಡಿಸುವುದರಲ್ಲಿ ಎತ್ತಿದ ಕೈ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಪತ್ನಿಗೆ ರಾಜ್ಯಸಭಾ ಆಫರ್ ನೀಡಿದ್ದ ರಾಹುಲ್ ಗಾಂಧಿ: ಬೇಡವೆಂದಿದ್ದ ಮಾಜಿ ಸಿಎಂ ಇಟ್ಟಿದ್ದು ಬೇರೆಯೇ ಬೇಡಿಕೆ!

ಸುರೇಶ್ ಗೌಡ ಜೀವನದಲ್ಲಿ ಅಡ್ಜಸ್ಟ್ಮೆಂಟ್ ರಾಜಕೀಯ ಇಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದ ಲೂಟಿ ಮಾಡುತ್ತಿದೆ. ದೇವೇಗೌಡರ ಮನೆಗೆ ಏನೋ ಮಾಡಿಸಿದ್ದಾರೆ, ನನಗೂ ಮಾಟ-ಮಂತ್ರ ಮಾಡಿಸಿದ್ದಾರೆ ಎಂಬುವುದು ನಾನು ನಂಬಲ್ಲ. ನಾವು ನಮ್ಮ ಶತ್ರುಗಳಿಗೂ ಕೆಟ್ಟದ್ದು ಬಯಸಲ್ಲ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಈ ಸೀಸನ್​ನಲ್ಲಿ ವೈಭವ್ ಖಜಾನೆ ತುಂಬಿದ ಒಟ್ಟು ಹಣವೆಷ್ಟು?

2026 ರ ಐಪಿಎಲ್​ಗೆ (IPL 2026) ಅದ್ಧೂರಿ ತೆರೆಬಿದ್ದಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿದ ಆರ್​ಸಿಬಿಗೆ ಟ್ರೋಫಿ ಜೊತೆಗೆ 20 ಕೋಟಿ ರೂ. ಬಹುಮಾನವೂ ಸಿಕ್ಕಿದೆ. ಇನ್ನು ರನ್ನರ್ ಅಪ್ ಆದ ಗುಜರಾತ್ ತಂಡಕ್ಕೂ 13 ಕೋಟಿ ರೂ. ಬಹುಮಾನ ದೊರೆತಿದೆ. ಇದು ತಂಡಗಳಿಗೆ ಸಿಕ್ಕ ಬಹುಮಾನದ ವಿವರವಾದರೆ.. ಇಡೀ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿಗಳ ಮೇಲೆ ಪ್ರಶಸ್ತಿ ಸ್ವೀಕರಿಸಿದ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಒಂದೊಂದು ಪ್ರಶಸ್ತಿಗೆ ಎಷ್ಟು ಹಣವನ್ನು ಬಹುಮಾನವಾಗಿ ಪಡೆದರು. ಇದರ ಜೊತೆಗೆ ಪ್ರತಿ ಪಂದ್ಯವನ್ನು ಆಡಿದಕ್ಕೆ ವೈಭವ್​ಗೆ ಸಿಕ್ಕ ಸಂಭಾವನೆ ಎಷ್ಟು ಹಾಗೆಯೇ ಐಪಿಎಲ್ ಹರಾಜಿನಲ್ಲಿ ವೈಭವ್​ಗೆ ಸಿಕ್ಕ ಮೊತ್ತವೆಷ್ಟು ಎಂಬುದನ್ನು ನೋಡೋಣ..

ಹರಾಜಿನಲ್ಲಿ ಕಡಿಮೆ ಬೆಲೆ ಪಡೆದ ವೈಭವ್

2025 ರ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ವೈಭವ್ ಸೂರ್ಯವಂಶಿಯನ್ನು ಕೇವಲ 1.10 ಕೋಟಿ ರೂ.ಗಳಿಗೆ ಖರೀದಿಸಿತು. ಆ ಸಮಯದಲ್ಲಿ ಈ ಮೊತ್ತ ಕೊಂಚ ದುಬಾರಿಯಾಯಿತ್ತೆನಿಸಿದರೂ, ಈ ಸೀಸನ್ ಅಂತ್ಯದ ವೇಳೆಗೆ, ವೈಭವ್ ಸೂರ್ಯವಂಶಿ ಫ್ರಾಂಚೈಸಿಯು ಹೂಡಿಕೆ ಮಾಡಿದ ಪ್ರತಿ ಪೈಸೆಗೂ ನ್ಯಾಯ ಒದಗಿಸಿಕೊಟ್ಟರು. ಇನ್ನು ಈ ವರ್ಷದ ಟೂರ್ನಮೆಂಟ್‌ನಲ್ಲಿ ಆಡಿದ 16 ಪಂದ್ಯಗಳಲ್ಲಿ ಬರೋಬ್ಬರಿ 776 ರನ್ ಬಾರಿಸಿದ ವೈಭವ್, ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಪ್ರತಿಷ್ಠಿತ ‘ಆರೆಂಜ್ ಕ್ಯಾಪ್’ ಅನ್ನು ಗೆದ್ದರು. ಇದರ ಜೊತೆಗೆ ಇನ್ನು ಹಲವು ಪ್ರಶಸ್ತಿಗಳು ವೈಭವ್ ಪಾಲಾದವು. ಅವುಗಳ ಪೂರ್ಣ ವಿವರ ಇಂತಿದೆ.

  • ಟೂರ್ನಮೆಂಟ್‌ನ ಅತ್ಯಂತ ಮೌಲ್ಯಯುತ ಆಟಗಾರ (MVP): 15 ಲಕ್ಷ ರೂ.
  • ಆರೆಂಜ್ ಕ್ಯಾಪ್ (ಅತಿ ಹೆಚ್ಚು ರನ್‌ಗಳು): 10 ಲಕ್ಷ ರೂ.
  • ಸೀಸನ್ ಸೂಪರ್ ಸ್ಟ್ರೈಕರ್: ರೂ. 10 ಲಕ್ಷ ಜೊತೆಗೆ ಹೊಚ್ಚ ಹೊಸ ಟಾಟಾ ಸಿಯೆರಾ ಕಾರು
  • ಸೀಸನ್ ಸೂಪರ್ ಸಿಕ್ಸ್‌ಗಳು: 10 ಲಕ್ಷ ರೂ.
  • ಈ ಸೀಸನ್​ನ ಉದಯೋನ್ಮುಖ ಆಟಗಾರ: 10 ಲಕ್ಷ ರೂ.

    ಪಂದ್ಯ ಶುಲ್ಕದಿಂದ ಬಂದಿದೆಷ್ಟು?

ಈ ಪ್ರಶಸ್ತಿಗಳ ಜೊತೆಗೆ ವೈಭವ್ ಐಪಿಎಲ್ ನಿಯಮಗಳ ಪ್ರಕಾರ ಆಡಿದ ಪ್ರತಿ ಪಂದ್ಯಕ್ಕೂ ರೂ. 7.5 ಲಕ್ಷ ಪಂದ್ಯ ಶುಲ್ಕವನ್ನು ಪಡೆದರು. ಈ ಆವೃತ್ತಿಯಲ್ಲಿ ವೈಭವ್ ರಾಜಸ್ಥಾನ ರಾಯಲ್ಸ್ ಆಡಿದ ಎಲ್ಲಾ 16 ಪಂದ್ಯಗಳಲ್ಲಿ ಆಡಿದರು. ಈ ಮೂಲಕ, ವೈಭವ್ ಪಂದ್ಯ ಶುಲ್ಕದ ರೂಪದಲ್ಲಿಯೇ 1.20 ಕೋಟಿ ರೂ. ಆದಾಯ ಗಳಿಸಿದ್ದಾರೆ.

IPL 2026 Orange Cap: ಆರೆಂಜ್ ಕ್ಯಾಪ್ ಗೆದ್ದ 15 ವರ್ಷದ ವೈಭವ್ ಸೂರ್ಯವಂಶಿ

ಇದರ ಜೊತೆಗೆ, ಅವರು ಲೀಗ್ ಪಂದ್ಯಗಳಲ್ಲಿ ‘ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಮ್ಯಾಚ್’ ಮತ್ತು ‘ಮೋಸ್ಟ್ ಸಿಕ್ಸ್ ಆಫ್ ದಿ ಮ್ಯಾಚ್’ ನಂತಹ ಪ್ರಶಸ್ತಿಗಳನ್ನು ಹಲವಾರು ಬಾರಿ ಗೆದ್ದಿದ್ದಾರೆ. ಪ್ರತಿ ಪ್ರಶಸ್ತಿಗೆ ಹೆಚ್ಚುವರಿಯಾಗಿ 1 ಲಕ್ಷ ರೂ. ಬಹುಮಾನ ನೀಡಲಾಗಿದೆ. ಒಟ್ಟಾರೆಯಾಗಿ, ಈ ಆವೃತ್ತಿಯಲ್ಲಿ ವೈಭವ್ 3 ಕೋಟಿ ರೂ.ಗೂ ಅಧಿಕ ಹಣವನ್ನು ಸಂಪಾಧನೆ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಅಧಿಸೂಚನೆ ಪ್ರಕಟ, ಮತದಾನ, ರಿಸಲ್ಟ್ ಯಾವಾಗ? ಇಲ್ಲಿದೆ ವಿವರ

ಬೆಂಗಳೂರು, (ಜೂನ್ 01): ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ನ (Karnataka Legislative Council biennial polls) 7 ಸದಸ್ಯ ಸ್ಥಾನಕ್ಕೆ ನಡೆಯುವ ದ್ವಿವಾರ್ಷಿಕ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಇಂದಿನಿಂದ (ಜೂನ್ 01) ಜೂ.8ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ವಿಧಾನಪರಿಷತ್‌ನ ದ್ವೈವಾರ್ಷಿಕ ಚುನಾವಣೆಯ ಚುನಾವಣಾಧಿಕಾರಿ ಹಾಗೂ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಕ್ಷಿ ಅವರು ಈ ಸಂಬಂಧ ಪ್ರಕಟಣೆ ಹೊರಡಿಸಿದ್ದಾರೆ.ಜೂ.9 ರಂದು ನಾಮಪತ್ರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಂದು ಸಂಜೆ ವೇಳೆಗೆ ಸಿಂಧುವಾದ ನಾಮಪತ್ರಗಳ ಪ್ರಕಟಣೆ ಹೊರಡಿಸಲಾಗುತ್ತದೆ.

ಮುಖ್ಯಾಂಶಗಳು

  • ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಅಧಿಸೂಚನೆ ಪ್ರಕಟ
  • ವಿಧಾನಸಭೆಯಿಂದ ವಿಧಾನಪರಿಷತ್‌ ನ 7 ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆ
  • ಇಂದಿನಿಂದ ಜೂನ್ 8ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ
  • ಜೂನ್ 18ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ

ಜೂನ್ 11 ರವರೆಗೆ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗಿದ್ದು, ಚುನಾವಣಾ ಸ್ಪರ್ಧೆಯಲ್ಲಿ 7ಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ ಜೂನ್ 18ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.

ವಿಧಾನಪರಿಷತ್‌ ಸದಸ್ಯರಾದ ಗೋವಿಂದರಾಜು, ನಾಸಿರ್‌ ಅಹಮದ್‌, ಎಂಟಿಬಿ ನಾಗರಾಜ್‌, ಪ್ರತಾಪ್‌ ಸಿಂಹ ನಾಯಕ್‌ ಕೆ., ತಿಪ್ಪಣ್ಣಪ್ಪ, ಸುನೀಲ್‌ ವಲ್ಯಾಪುರೆ, ಬಿ.ಕೆ.ಹರಿಪ್ರಸಾದ್‌ ಅವರು ಜೂ. 30 ರಂದು ನಿವೃತ್ತಿ ಹೊಂದಲಿದ್ದಾರೆ. ಇವರ ನಿವೃತ್ತಿಯಿಂದ ತೆರವಾಗುವ ಮೇಲನೆ ಸದಸ್ಯ ಸ್ಥಾನಕ್ಕೆ ಭಾರತೀಯ ಚುನಾವಣಾ ಆಯೋಗವು ಪ್ರಕಟಣೆ ಹೊರಡಿಸಿದ್ದು, ಅದರಂತೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ.

Published On – 4:08 pm, Mon, 1 June 26

Source link

ನೀವು ಮಗನಾದರೂ ಸರಿ, ಹೆಂಡತಿಯಾದರೂ ಸರಿ, ಮೃತ ವ್ಯಕ್ತಿಯ ಎಟಿಎಂನಿಂದ ಹಣ ಡ್ರಾ ಮಾಡುವುದು ತಪ್ಪಾ?

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಪೋಷಕರು ಅಥವಾ ಹಿರಿಯರು ತುರ್ತು ಸಂದರ್ಭಗಳಲ್ಲಿ ಬಳಸಲಿ ಎಂದು ತಮ್ಮ ಎಟಿಎಂ ಕಾರ್ಡ್ (ATM Card) ಮತ್ತು ಪಿನ್ ನಂಬರ್ (PIN) ಅನ್ನು ಮಕ್ಕಳಿಗೆ ಅಥವಾ ಕುಟುಂಬದ ಸದಸ್ಯರಿಗೆ ನೀಡಿರುತ್ತಾರೆ. ವ್ಯಕ್ತಿ ಬದುಕಿರುವಾಗ ಈ ಪ್ರಕ್ರಿಯೆ ತೀರಾ ಸಾಮಾನ್ಯ ಮತ್ತು ಕಾನೂನುಬದ್ಧವಾಗಿರುತ್ತದೆ. ಆದರೆ, ಅದೇ ವ್ಯಕ್ತಿ ಮರಣ ಹೊಂದಿದ ನಂತರ ಅವರ ಎಟಿಎಂ ಕಾರ್ಡ್ ಅಥವಾ ಯುಪಿಐ (UPI) ಬಳಸಿ ಹಣ ಡ್ರಾ ಮಾಡಿದರೆ (Money Withdrawal) ನೀವು ಜೈಲು ಪಾಲಾಗಬಹುದು ಎಂಬ ವಿಷಯ ನಿಮಗೆ ಗೊತ್ತೇ?

ನೀವು ಆ ಬ್ಯಾಂಕ್ ಖಾತೆಗೆ ನಾಮಿನಿ (Nominee) ಅಥವಾ ಕಾನೂನುಬದ್ಧ ಉತ್ತರಾಧಿಕಾರಿಯಾಗಿದ್ದರೂ ಸಹ, ಬ್ಯಾಂಕ್‌ಗೆ ಮಾಹಿತಿ ನೀಡದೆ ಮೃತರ ಖಾತೆಯಿಂದ ಹಣವನ್ನು ವಿತ್‌ಡ್ರಾ ಮಾಡುವುದು ಕಾನೂನುಬಾಹಿರ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮತ್ತು ಬ್ಯಾಂಕಿಂಗ್ ಕಾನೂನುಗಳು ಏನು ಹೇಳುತ್ತವೆ? ಇಲ್ಲಿದೆ ಸಂಪೂರ್ಣ ವಿವರ:

ಸಾವು ಸಂಭವಿಸಿದ ತಕ್ಷಣ ಖಾತೆ ನಿಷ್ಕ್ರಿಯ

ಬ್ಯಾಂಕಿಂಗ್ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿ ಮರಣ ಹೊಂದಿದ ತಕ್ಷಣ ಅವರ ಬ್ಯಾಂಕ್ ಖಾತೆಯು ಕಾನೂನುಬದ್ಧವಾಗಿ ನಿಷ್ಕ್ರಿಯಗೊಳ್ಳುತ್ತದೆ. ವ್ಯಕ್ತಿಯ ಮರಣದೊಂದಿಗೆ ಅವರ ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಸೇವೆಗಳ ಬಳಕೆಯ ಹಕ್ಕು ಸಂಪೂರ್ಣವಾಗಿ ಮುಕ್ತಾಯಗೊಳ್ಳುತ್ತದೆ. ಆದ್ದರಿಂದ, ಮರಣದ ನಂತರ ಆ ಖಾತೆಯಿಂದ ಮಾಡುವ ಯಾವುದೇ ರೀತಿಯ ಡಿಜಿಟಲ್ ವಹಿವಾಟುಗಳನ್ನು ಅಕ್ರಮ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಜೂನ್ 1ರಿಂದ ರೈಲ್ವೆ ವೈಟಿಂಗ್ ಲಿಸ್ಟ್ ನಿಯಮಗಳಲ್ಲಿ ಬದಲಾವಣೆ; ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಳ; ನಿಯಮ ಉಲ್ಲಂಘನೆಗೆ ಭಾರಿ ದಂಡ

ನಾಮಿನಿ ಆಗಿದ್ದರೂ ನೇರವಾಗಿ ಹಣ ತೆಗೆಯುವಂತಿಲ್ಲ!

ಬಹಳಷ್ಟು ಜನರಿಗೆ ಬ್ಯಾಂಕ್ ಖಾತೆಯಲ್ಲಿ ತಮ್ಮ ಹೆಸರು ‘ನಾಮಿನಿ’ ಆಗಿ ನೋಂದಣಿಯಾಗಿದ್ದರೆ, ವ್ಯಕ್ತಿಯ ಮರಣದ ನಂತರ ನೇರವಾಗಿ ಎಟಿಎಂ ಬಳಸಿ ಹಣ ಡ್ರಾ ಮಾಡಬಹುದು ಎಂಬ ತಪ್ಪು ಕಲ್ಪನೆ ಇರುತ್ತದೆ. ಆದರೆ ಇದು ಸಂಪೂರ್ಣ ತಪ್ಪು. ನೀವು ನಾಮಿನಿ ಆಗಿದ್ದರೂ ಸಹ, ಮೊದಲು ಬ್ಯಾಂಕ್‌ಗೆ ವ್ಯಕ್ತಿಯ ಮರಣದ ಅಧಿಕೃತ ಮಾಹಿತಿ ಮತ್ತು ಮರಣ ಪ್ರಮಾಣಪತ್ರವನ್ನು (Death Certificate) ಸಲ್ಲಿಸಬೇಕಾಗುತ್ತದೆ. ಈ ಪ್ರಕ್ರಿಯೆ ನಡೆಸದೆ ನೇರವಾಗಿ ಹಣ ತೆಗೆದರೆ ಅದನ್ನು ‘ವಂಚನೆ’ (Fraud) ಎಂದು ಪರಿಗಣಿಸಲಾಗುತ್ತದೆ.

ಬ್ಯಾಂಕ್‌ಗಳು ಇಷ್ಟು ಕಟ್ಟುನಿಟ್ಟಾಗಿ ಇರುವುದೇಕೆ?

ಮೃತ ವ್ಯಕ್ತಿಯ ಹಣವನ್ನು ಸುರಕ್ಷಿತವಾಗಿಡಲು ಬ್ಯಾಂಕ್ ಈ ಕಠಿಣ ನಿಯಮವನ್ನು ಅನ್ವಯಿಸುತ್ತದೆ. ಮೃತ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಕಾನೂನುಬದ್ಧ ವಾರಸುದಾರರು ಇರಬಹುದು. ಅಂತಹ ಪರಿಸ್ಥಿತಿಯಲ್ಲಿ, ಯಾರಾದರೂ ಒಬ್ಬರು ಬ್ಯಾಂಕ್‌ಗೆ ತಿಳಿಸದೆ ಎಲ್ಲಾ ಹಣವನ್ನು ಡ್ರಾ ಮಾಡಿಕೊಂಡರೆ, ಅದು ಇತರ ವಾರಸುದಾರರ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಅದಕ್ಕಾಗಿಯೇ ಬ್ಯಾಂಕ್ ಎಲ್ಲಾ ಉತ್ತರಾಧಿಕಾರಿಗಳ ಹಕ್ಕುಗಳನ್ನು ಪರಿಶೀಲಿಸಿದ ನಂತರವೇ ಹಣವನ್ನು ಬಿಡುಗಡೆ ಮಾಡುತ್ತದೆ.

ದೂರು ದಾಖಲಾದರೆ ಜೈಲು ಮತ್ತು ದಂಡದ ಶಿಕ್ಷೆ

ಬ್ಯಾಂಕ್‌ಗೆ ಮಾಹಿತಿ ನೀಡದೆ ಮೃತರ ಖಾತೆಯಿಂದ ಹಣವನ್ನು ಡ್ರಾ ಮಾಡಿದಾಗ, ಕುಟುಂಬದ ಇತರ ಸದಸ್ಯರು ಅಥವಾ ಇತರ ವಾರಸುದಾರರು ಬ್ಯಾಂಕ್ ಅಥವಾ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸಿದರೆ ಕಾನೂನು ಕ್ರಮ ಜರುಗಿಸಬಹುದು. ಹಣ ಡ್ರಾ ಮಾಡಿದ ವ್ಯಕ್ತಿಯ ವಿರುದ್ಧ ವಂಚನೆ (Cheating) ಮತ್ತು ಕಳ್ಳತನದ (Theft) ಆರೋಪದಡಿ ಎಫ್‌ಐಆರ್ (FIR) ದಾಖಲಾಗಬಹುದು. ಇದರ ಅಡಿಯಲ್ಲಿ ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಇದನ್ನೂ ಓದಿ: ಹಾರ್ಮುಜ್ ಬಿಕ್ಕಟ್ಟಿನ ಎಫೆಕ್ಟ್: ತೈಲದ ಗರಿಷ್ಠ ಬಳಕೆ ಸೇರಿದಂತೆ ಹೊಸ ಪ್ರವೃತ್ತಿಯಲ್ಲಿ ಭಾರತೀಯ ಆಯಿಲ್ ರಿಫೈನರಿಗಳು

ಹಣವನ್ನು ಕಾನೂನುಬದ್ಧವಾಗಿ ಪಡೆಯುವುದು ಹೇಗೆ?

ನಿಮ್ಮ ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದ್ದರೆ, ಹಣವನ್ನು ಪಡೆಯಲು ಈ ಸರಳ ಮತ್ತು ಕಾನೂನುಬದ್ಧ ಮಾರ್ಗವನ್ನು ಅನುಸರಿಸಿ:

  • ಮೊದಲು ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಹೋಗಿ ವ್ಯಕ್ತಿಯ ಮರಣದ ಕುರಿತು ಲಿಖಿತ ಮಾಹಿತಿ ನೀಡಿ.
  • ಬ್ಯಾಂಕ್‌ನಿಂದ ಕ್ಲೈಮ್ ಫಾರ್ಮ್ (Claim Form) ಪಡೆದು, ಅದನ್ನು ಭರ್ತಿ ಮಾಡಿ. ಅದರೊಂದಿಗೆ ಮೃತರ ಮರಣ ಪ್ರಮಾಣಪತ್ರ, ನಿಮ್ಮ ಗುರುತಿನ ಚೀಟಿ (ID Proof) ಮತ್ತು ನೀವು ನಾಮಿನಿ ಆಗಿರುವ ಪುರಾವೆಗಳನ್ನು ಸಲ್ಲಿಸಿ.
  • ಬ್ಯಾಂಕ್ ನಿಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ (Verify) ನಂತರ, ಕೆಲವೇ ದಿನಗಳಲ್ಲಿ ಆ ಹಣವನ್ನು ಕಾನೂನುಬದ್ಧವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ.

ಗಮನಿಸಬೇಕಾದ ಸಂಗತಿ ಎಂದರೆ, ತುರ್ತು ಪರಿಸ್ಥಿತಿ ಯಾವುದೇ ಇರಲಿ, ಮೃತ ವ್ಯಕ್ತಿಯ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡುವ ಸಾಹಸಕ್ಕೆ ಕೈಹಾಕಬೇಡಿ. ಕಾನೂನಾತ್ಮಕವಾಗಿಯೇ ಹಣವನ್ನು ಕ್ಲೈಮ್ ಮಾಡಿ ಪಡೆಯಿರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಕೊರಗಜ್ಜ’ ಸಿನಿಮಾ ಬಿಡುಗಡೆಗೂ ಮೊದಲೇ ನಿರ್ದೇಶಕರಿಗೆ ಸಿಕ್ತು ಫ್ಲ್ಯಾಟ್ ಉಡುಗೊರೆ

ಬಹುನಿರೀಕ್ಷಿತ ‘ಕೊರಗಜ್ಜ’ (Koragajja) ಸಿನಿಮಾಗೆ ಈಗ ಕೊಚ್ಚಿ ಮತ್ತು ಚೆನ್ನೈ ನಲ್ಲಿ 3ಡಿ ಕೆಲಸ ಭರದಿಂದ ಸಾಗುತ್ತಿದೆ. ತಾಂತ್ರಿಕವಾಗಿ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾಗೂ ಕಡಿಮೆ ಇಲ್ಲ ಎನ್ನುವ ಹಾಗೆ ಈ ಸಿನಿಮಾ ಮೂಡಿಬರುತ್ತಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ (Sudheer Attavar) ಅವರು ತಿಳಿಸಿದ್ದಾರೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದ ವಿತರಣಾ ಸಂಸ್ಥೆಗಳು ಈ ಸಿನಿಮಾ ಮೇಲೆ ಆಸಕ್ತಿ ತೋರಿಸುತ್ತಿವೆ ಎಂದು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರಿಗೆ ಖುಷಿ ಆಗಿದೆ. ಇದೇ ಖುಷಿಯಲ್ಲಿ ನಿರ್ದೇಶಕರಿಗೆ ಅವರು ದೊಡ್ಡ ಗಿಫ್ಟ್ ನೀಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ‘ಕೊರಗಜ್ಜ’ ಸಿನಿಮಾ ಈ ಮಟ್ಟಕ್ಕೆ ಬೆಳೆಯಲು ಶ್ರಮಿಸುತ್ತಿರುವ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ಮೂರು ಬೆಡ್ ರೂಮಿನ, ಸುಮಾರು 1.75 ಕೋಟಿ ರೂಪಾಯಿ ಬೆಲೆಬಾಳುವ ಐಷಾರಾಮಿ ಫ್ಲಾಟನ್ನು ಉಡುಗೊರೆಯಾಗಿ ನೀಡಲಾಗಿದೆ. ಸಿನಿಮಾದ ಮೇಲೆ ಮತ್ತು ನಿರ್ದೇಶಕರ ಮೇಲೆ ತಮಗಿರುವ ಅಭಿಮಾನವನ್ನು ಈ ರೂಪದಲ್ಲಿ ನಿರ್ಮಾಪಕರು ತೋರಿಸಿದ್ದಾರೆ.

ಈಗಾಗಲೇ ಆರು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾಗೆ ಅಸ್ಸಾಮಿ, ಚೈನಿಸ್ ಮತ್ತು ಇಂಗ್ಲಿಷ್ ಅವತರಣಿಕೆಗಳೂ ಸೇರ್ಪಡೆ ಆಗುತ್ತಿವೆ ಎಂಬ ವಿಷಯವನ್ನು ಕೂಡ ನಿರ್ಮಾಪಕರು ತಿಳಿಸಿದ್ದಾರೆ. ಇತ್ತೀಚೆಗೆ ಹೊಸ ಫ್ಲಾಟ್ ಗೃಹ ಪ್ರವೇಶ ನಡೆಯಿತು. ಬಳಿಕ ಸತ್ಯನಾರಾಯಣ ಪೂಜೆ ಕೂಡ ಮಾಡಲಾಯಿತು. ಇದೇ ವೇಳೆ ಕೊರಗಜ್ಜ ದೈವದ ಅಗೆಲು ಸೇವೆಯನ್ನು ಅತಿಥಿಗಳ ಸಮ್ಮುಖದಲ್ಲಿ ಮಾಡಲಾಯಿತು.

‘ಕೊರಗಜ್ಜ’ ಸಿನಿಮಾದಲ್ಲಿ ಅಭಿನಯಿಸಿರುವ ಹಿರಿಯ ಕಲಾವಿದೆ ಭವ್ಯ ಅವರು ಕೊರಗಜ್ಜ ದೈವದ ಅಗೆಲು ಸೇವೆಗೆ ಇಷ್ಟವಾದ ಕುಚಲಕ್ಕಿ ಅನ್ನ, ಹುರುಳಿ-ಬಸಳೆ ಸಾರು, ಮಿಡಿ ಮಾವಿನ ಉಪ್ಪಿನಕಾಯಿ, ಬಂಗುಡೆ ಮೀನಿನ ಗಸಿ, ಕೋಳಿ ಸುಕ್ಕ, ಕಳ್ಳು ಮೊದಲಾದವುಗಳನ್ನು ಗೆರಸೆಯಲ್ಲಿಟ್ಟು ಸಮರ್ಪಿಸಿದರು. ನಿರ್ದೇಶಕರ ಪತ್ನಿ ರಾಜಶ್ರೀ ಸುಧೀರ್ ಎಲ್ಲಾ ಭಕ್ಷ್ಯಗಳನ್ನು ಅಣಿಗೊಳಿಸಿದರು. ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಅವರು ಭವ್ಯಗೆ ಸಾಥ್ ನೀಡಿದರು.

ಇದನ್ನೂ ಓದಿ: ‘ಕೊರಗಜ್ಜ’ ಸಿನಿಮಾದಲ್ಲಿ ಡ್ಯುಯೆಟ್ ಸಾಂಗ್? ಕುತೂಹಲ ಮೂಡಿಸಿದ ಚಿತ್ರತಂಡ

ಈ ವೇಳೆ ಭವ್ಯ ಮಾತನಾಡಿದರು. ‘ಕೊರಗಜ್ಜ ಸಿನಿಮಾವು ನನ್ನನ್ನು ಹೆಚ್ಚು ದೈವಭಕ್ತಳನ್ನಾಗಿಸಿದೆ. ನಾನು ಈ ಸಿನಿಮಾದ ಎಲ್ಲಾ ಕಾರ್ಯಕ್ರಮಗಳಿಗೂ ಭಾಗಿಯಾಗುತ್ತಾ ಚಿತ್ರತಂಡದ ಅವಿಭಾಜ್ಯ ಅಂಗ ಎನ್ನುವ ರೀತಿಯಲ್ಲಿ ಜೊತೆಗಿದ್ದೇನೆ. ಈ ಸಿನಿಮಾದಲ್ಲಿ ನಾನು ಕೊರಗಜ್ಜನಿಗೆ ಪ್ರಪ್ರಥಮವಾಗಿ ಅಗೆಲು ಸೇವೆ ನೀಡುವ ರಾಣಿ ಪಂಜಂದಾಯಿ ಪಾತ್ರ ವಹಿಸಿದ್ದೇನೆ. ಈಗ ನಿಜ ಜೀವನದಲ್ಲೂ ಕೊರಗಜ್ಜನಿಗೆ ಅಗೆಲು ಸೇವೆ ಮಾಡುವಂತಹ ಸೌಭಾಗ್ಯ ಸಿಕ್ಕಿದೆ’ ಎಂದು ಅವರು ಹೇಳಿದರು.

ಚೈನೀಸ್ ಭಾಷೆಗೂ ಈ ಸಿನಿಮಾ ಡಬ್ ಆಗುತ್ತಿದೆ ಎಂದು ಚಿತ್ರತಂಡ ಹೇಳಿದೆ. ಹಾಂಕಾಂಗ್ ಮತ್ತು ಬೀಜಿಂಗ್​ನಿಂದ ವಿತರಣಾ ಸಂಸ್ಥೆಗಳು ಮಾತುಕಥೆಗೆ ಮುಂದೆ ಬಂದಿವೆ. ಸಿನಿಮಾದ ಬಜೆಟ್ 40 ಕೋಟಿ ರೂಪಾಯಿ ದಾಟಿದರೂ ವ್ಯಾವಹಾರಿಕವಾಗಿ ವಿಶ್ವಾಸ ಮತ್ತು ಖುಷಿ ಹೆಚ್ಚುತ್ತಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ತೆರೆಕಾಣುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More

Source link