ತನ್ನದೇ ಆಟಗಾರರ ಕಾಲೆಳೆದು ನಗೆ ಚಟಾಕಿ ಹಾರಿಸಲೆಂದೇ ಕಲಾವಿದನೊಬ್ಬನನ್ನು ತಂಡಕ್ಕೆ ಸೇರಿಸಿಕೊಂಡಿರುವ ಏಕೈಕ ಐಪಿಎಲ್ ಫ್ರಾಂಚೈಸಿಯೇ ಎಂದರೆ ಅದು ಆರ್ಸಿಬಿ. 2014 ರಲ್ಲಿ ಆರ್ಸಿಬಿ ತಂಡವನ್ನು ಸೇರಿಕೊಂಡ ನಿರೂಪಕ ಮತ್ತು ಹಾಸ್ಯಗಾರ ಡ್ಯಾನಿಶ್ ಸೇಠ್ ಕಿತಾಪತಿ ಮಾಡುವುದರಿಂದಲೇ ಫೇಮಸ್. ಆರ್ಸಿಬಿ ಪಾಳಯದಲ್ಲಿ ಮಿ. ನಾಗ್ಸ್ ಎಂದೇ ಖ್ಯಾತರಾಗಿರುವ ಡ್ಯಾನಿಶ್ ಸೇಠ್ ಪ್ರತಿ ಸೀಸನ್ನಲ್ಲೂ ಆರ್ಸಿಬಿ ಕ್ಯಾಂಪ್ಗೆ ಭೇಟಿ ನೀಡಿ ತಂಡದ ಆಟಗಾರರ ಕಾಲೆಳೆಯುತ್ತಾ, ಜನರನ್ನು ರಂಚಿಸುತ್ತಿರುತ್ತಾರೆ. ಅದರಂತೆ ಈ ಭಾರಿಯ ಐಪಿಎಲ್ನಲ್ಲೂ ಅದೇ ಕೆಲಸ ಮಾಡಿರುವ ಡ್ಯಾನಿಶ್ ಸೇಠ್ ಫೈನಲ್ನಲ್ಲಿ ಆರ್ಸಿಬಿ ಗೆದ್ದ ಬಳಿಕ ಪ್ರತಿಯೊಬ್ಬ ಆಟಗಾರನನ್ನು ತನ್ನದೇ ಶೈಲಿಯಲ್ಲಿ ಕಾಲೆಳೆದಿದ್ದಾರೆ. ಇಲ್ಲಿಗೆ ನಿಲ್ಲದ ನಾಗ್ಸ್ ತಂಡದ ನೂತನ ಮಾಲೀಕರು ಹಾಗೂ ಅಧ್ಯಕ್ಷರು ಆಗಿರುವ ಆರ್ಯಮಾನ್ ವಿಕ್ರಮ್ ಬಿರ್ಲಾ ಹಾಗೂ ಅವರ ಸಹೋದರಿ ಅನನ್ಯಶ್ರೀ ಬಿರ್ಲಾ ಅವರನ್ನು ಚೇಷ್ಟೇಯ ಪ್ರಶ್ನೆಗಳ ಮೂಲಕ ಕಾಡಿದ್ದಾರೆ. ಅದರ ವಿಡಿಯೋವನ್ನು ಆರ್ಸಿಬಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಹಾಗಿದ್ರೆ ಮಿ. ನಾಗ್ಸ್ ತಮ್ಮ ಕಿತಾಪತಿಯ ಪ್ರಶ್ನೆಗಳ ಮೂಲಕ ಯಾವೆಲ್ಲ ಆಟಗಾರರನ್ನು ಹೇಗೆಲ್ಲ ಕಾಡಿದರು ಎಂಬುದನ್ನು ನೋಡಿ.
