ಯೂರೋಪಿಯನ್ ಒಕ್ಕೂಟದೊಂದಿಗಿನ ಒಪ್ಪಂದದಿಂದ ಭಾರತಕ್ಕೆ ಹೆಚ್ಚು ಲಾಭ: ಜೇಮಿಸನ್ – Kannada News | India comes out on top in deal with European Union, says US trade representative Jamieson Greer
ನವದೆಹಲಿ, ಜನವರಿ 28: ಭಾರತ ಮತ್ತು ಯೂರೋಪಿಯನ್ ಯೂನಿಯನ್ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಅಮೆರಿಕದವರು ಪ್ರತಿಕ್ರಿಯಿಸಿದ್ದಾರೆ. ಭಾರತಕ್ಕೆ ಒಳ್ಳೆಯ ಒಪ್ಪಂದ ದಕ್ಕಿತು ಎಂದು ಅಮೆರಿಕದ ಟ್ರೇಡ್ ರೆಪ್ರೆಸೆಂಟೇಟಿವ್ ಆದ ಜೇಮೀಸನ್ ಗ್ರೀರ್ (Jamieson Greer) ಅಭಿಪ್ರಾಯಪಟ್ಟಿದ್ದಾರೆ. ‘ಈ ಒಪ್ಪಂದದಲ್ಲಿ ಭಾರತ ಹೆಚ್ಚು ಅನುಕೂಲ ಪಡೆದಿದೆ. ಹೆಚ್ಚು ಮಾರುಕಟ್ಟೆ ಪ್ರವೇಶ ಮತ್ತು ವಲಸೆಗೆ ಅವಕಾಶ ಪಡೆದಿದೆ’ ಎಂದು ಖಾಸಗಿ ವಾಹಿನಿಯೊಂದಕ್ಕೆ ಗ್ರೀರ್ ಪ್ರತಿಕ್ರಿಯಿಸಿದ್ದಾರೆ. ಭಾರತ ಹಾಗೂ ಐರೋಪ್ಯ ಒಕ್ಕೂಟದ ಒಪ್ಪಂದವು ಅಮೆರಿಕದ ಟ್ಯಾರಿಫ್ ಕ್ರಮದ ಪರಿಣಾಮ ಎಂದು…