ಆನೇಕಲ್: ಚೂಡೇನಹಳ್ಳಿ ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್

ಆನೇಕಲ್, ಏಪ್ರಿಲ್ 3: ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಚೂಡೇನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ. ಕಳೆದ ಒಂದು ವಾರದಿಂದ ಗ್ರಾಮದ ಸುತ್ತಮುತ್ತಲೇ ಬೀಡುಬಿಟ್ಟಿರುವ ಗಜಪಡೆ, ಪ್ರತಿ ರಾತ್ರಿ ಜಮೀನುಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿವೆ. ರೈತರು ಕಷ್ಟಪಟ್ಟು ಬೆಳೆದ ಬೆಳೆ ಆನೆಗಳ ಪಾಲಾಗುತ್ತಿದ್ದು, ಜೀವ ಭಯದಲ್ಲಿರುವ ಗ್ರಾಮಸ್ಥರು ಮನೆಯಿಂದ ಹೊರಬರಲು ನಡುಗುವಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಮಧ್ಯಪ್ರವೇಶಿಸಿ ಆನೆಗಳನ್ನು ಕಾಡಿಗಟ್ಟಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಮಧ್ಯೆ, ಗ್ರಾಮದಲ್ಲಿ ಆನೆಗಳ ನೈಟ್ ರೌಂಡ್ಸ್ ವಿಡಿಯೋ ವೈರಲ್ ಆಗುತ್ತಿದೆ. ಕರ್ನಾಟಕದ…

Read More

Hormuz Strait: ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್​ಗೆ ಭಾರತದ ಒತ್ತಾಯ

ನವದೆಹಲಿ, ಏಪ್ರಿಲ್ 03: ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದಾಗಿನಿಂದ ಇರಾನ್​ನ ಮುಚ್ಚಿರುವ ಹಾರ್ಮುಜ್(Hormuz) ಜಲಸಂಧಿಯನ್ನು ತೆರೆಯುವಂತೆ ಭಾರತ ಒತ್ತಾಯಿಸಿದೆ. ಸಂಘರ್ಷ ಪೀಡಿತ ಜಲಮಾರ್ಗದಲ್ಲಿ ನಾಗರಿಕರನ್ನು ಕಳೆದುಕೊಂಡ ಏಕೈಕ ರಾಷ್ಟ್ರ ಭಾರತ ಎಂದು ಭಾರತ ಹೇಳಿದೆ. ಮಧ್ಯಪ್ರಾಚ್ಯದ ಪರಿಸ್ಥಿತಿಯ ಕುರಿತು ಯುಕೆ ಕರೆದ ಬಹುಪಕ್ಷೀಯ ಸಭೆಯಲ್ಲಿ, ಅಂತಾರಾಷ್ಟ್ರೀಯ ಜಲಮಾರ್ಗಗಳ ಮೂಲಕ ಸುರಕ್ಷಿತ ಮತ್ತು ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಭಾರತವು ಒತ್ತಿ ಹೇಳಿದೆ. 60 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದ ವರ್ಚುವಲ್ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್…

Read More

ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಶಾಸಕ ಯತ್ನಾಳ್

ಬಾಗಲಕೋಟೆ, ಏ.3: ಬಾಗಲಕೋಟೆ ಉಪಚುನಾವಣೆ ಅಖಾಡದಲ್ಲಿ  ಶಾಸಕ  ಬಸನಗೌಡ ಪಾಟೀಲ್ ಯತ್ನಾಳ್ ಅವರು ವೀರಣ್ಣ ಚರಂತಿಮಠ ಅವರ ಪರವಾಗಿ ಪ್ರಚಾರ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹಿಂದೂ ಸಮಾಜದ ಐಕ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ಯತ್ನಾಳ್, ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸುವಂತೆ ಕರೆ ನೀಡಿದರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಯತ್ನಾಳ್, ಇವು ಜನರ ಮೇಲೆ ತೆರಿಗೆ ಹೊರೆಯನ್ನು ಹೆಚ್ಚಿಸಿವೆ ಎಂದು…

Read More

ಲ್ಯಾಂಬೋರ್ಗಿನಿ ಕಾರು ಪ್ರಕರಣ: ಮುತ್ತಪ್ಪ ರೈ ಮಗ ರಿಕ್ಕಿ ರೈಗೆ ಮತ್ತೊಂದು ಸಂಕಷ್ಟ

ಬೆಂಗಳೂರು, ಏಪ್ರಿಲ್ 3: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಬೆಂಗಳೂರಿನ (Bangalore) ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಮತ್ತೊಂದು ಶಾಕ್ ನೀಡಿದ್ದಾರೆ. ನಕಲಿ ನಂಬರ್ ಪ್ಲೇಟ್ ಬಳಸಿ ಸರ್ಕಾರಕ್ಕೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಇದೇ ಲ್ಯಾಂಬೋರ್ಗಿನಿ ಕಾರಿನಲ್ಲಿ ಹೈ-ಸ್ಪೀಡ್ ಡ್ರಿಫ್ಟಿಂಗ್ ಸ್ಟಂಟ್ ನಡೆಸಿದ ವಿಚಾರದ ವಿಡಿಯೋ ವೈರಲ್ ಆಗಿತ್ತಲ್ಲದೆ, ಪ್ರಕರಣ ಸಹ ದಾಖಲಾಗಿತ್ತು. ಏನಿದು ಲ್ಯಾಂಬೋರ್ಗಿನಿ ವಂಚನೆ ಪ್ರಕರಣ? ದೆಹಲಿಯಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ…

Read More

ನಿಮಗೆ ಸಾಬರಷ್ಟೇ ಓಟ್ ಹಾಕಿದ್ದಾರಾ ಸಿದ್ದರಾಮಯ್ಯ? ಬಾಗಲಕೋಟೆಯಲ್ಲಿ ಗುಡುಗಿದ ಯತ್ನಾಳ್

ಬಾಗಲಕೋಟೆ, ಏಪ್ರಿಲ್ 3: ಬಾಗಲಕೋಟೆಯಲ್ಲಿ ಉಪಚುನಾವಣೆಯ ಕಣ ರಂಗೇರಿದ್ದು, ಬಿಜೆಪಿಯಿಂದ ಉಚ್ಚಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಸರಿ ಅಭ್ಯರ್ಥಿ ಪರವಾಗಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯನ್ನು ಪ್ರಸ್ತಾಪಿಸಿದ ಅವರು, ಹಿಂದೂಗಳೆಲ್ಲರೂ ಒಂದಾಗುವಂತೆ ಕರೆ ನೀಡಿದರು. ಶಿವಾಜಿ ಮಹಾರಾಜರು ಇಲ್ಲದಿದ್ದರೆ ಸನಾತನ ಧರ್ಮದ ರಕ್ಷಣೆ ಸಾಧ್ಯವಾಗುತ್ತಿರಲಿಲ್ಲ. ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದವರ ಮೇಲೆ ಜೆಸಿಬಿ ಪ್ರಯೋಗ ಮಾಡಬೇಕು ಎಂದು ಗುಡುಗಿದರು. ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ…

Read More

ಬದುಕಿದ್ದರೂ ದಾಖಲೆಯಲ್ಲಿ ‘ಮೃತ’: ಅಧಿಕಾರಿಗಳ ಎಡವಟ್ಟಿಗೆ ಹಂಪಮ್ಮ ಪರದಾಟ; ಉಪ ಲೋಕಾಯುಕ್ತರು ಮಾಡಿದ್ದೇನೆ ನೋಡಿ

ಹೊಸಪೇಟೆ, ಏ,3: ಜೀವಂತವಾಗಿದ್ದರೂ ಮಹಿಳೆಯೊಬ್ಬರನ್ನು ದಾಖಲೆಗಳಲ್ಲಿ ‘ಮೃತ’ ಎಂದು ತೋರಿಸಿ, ಸರ್ಕಾರದ ಸವಲತ್ತುಗಳಿಂದ ವಂಚಿತರನ್ನಾಗಿಸಿದ ಹೊಸಪೇಟೆ ತಾಲ್ಲೂಕಿನ ಕಂದಾಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಸಪೇಟೆ ತಾಲ್ಲೂಕಿನ ಧರ್ಮಸಾಗರ ಗ್ರಾಮದ ನಿವಾಸಿ ಎನ್. ಹಂಪಮ್ಮ ಅವರು ಈ ದುರಾಡಳಿತದ ಬಲಿಪಶು. ಅದೇ ಗ್ರಾಮದ ಎನ್. ತಿಮ್ಮಾರೆಡ್ಡಿ ಅವರ ಪತ್ನಿ ಹಂಪಮ್ಮ ಎಂಬುವವರು 2024 ರಲ್ಲಿ ನಿಧನರಾಗಿದ್ದರು. ಆದರೆ, ಅಧಿಕಾರಿಗಳು ಯಾವುದೇ ಪ್ರಾಥಮಿಕ ಪರಿಶೀಲನೆ ನಡೆಸದೆ,…

Read More

ರಾವಣನ ಪಾತ್ರ ಮಾಡಿದ ಯಶ್​ನ ಹಾಡಿ ಹೊಗಳಿದ ರಣಬೀರ್ ಕಪೂರ್

ರಾಕಿಂಗ್ ಸ್ಟಾರ್ ಯಶ್, ರಣಬೀರ್ ಕಪೂರ್, ಸನ್ನಿ ಡಿಯೋಲ್, ಸಾಯಿ ಪಲ್ಲವಿ ಸೇರಿದಂತೆ ಅನೇಕರು ‘ರಾಮಾಯಣ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಕೆಲವರು ಟೀಸರ್ ಹೊಗಳಿದರೆ ಇನ್ನೂ ಕೆಲವರು ಇದನ್ನು ಎಐ ವಿಡಿಯೋ ಎಂದು ಕರೆದಿದ್ದಾರೆ. ಹೀಗಿರುವಾಗಲೇ ರಾವಣನ ಪಾತ್ರ ಮಾಡಿದ ಯಶ್ ಅವರನ್ನು ರಣಬೀರ್ ಕಪೂರ್ ಹಾಡಿ ಹೊಗಳಿದ್ದಾರೆ. ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 2ರಂದು ರಿಲೀಸ್ ಆದ ಟೀಸರ್…

Read More

ಗ್ಯಾಸ್ ಇಲ್ಲಾ ಅಂತ ಇಂಡಕ್ಷನ್​ನಲ್ಲಿ ಅಡುಗೆ ಮಾಡುತ್ತಿದ್ದೀರಾ? ಈ ಅಂಶಗಳು ನಿಮಗೆ ಗೊತ್ತಿರಲೇ ಬೇಕು!

ಬೆಂಗಳೂರು, ಏಪ್ರಿಲ್ 03: ಇರಾನ್, ಇಸ್ರೇಲ್ ಮತ್ತು ಅಮೇರಿಕಾ ಯುದ್ಧದ ಪರಿಣಾಮವಾಗಿ ಎಲ್​ಪಿಜಿ ಸಿಲಿಂಡರ್ ಕೊರತೆ ಹೆಚ್ಚಾಗಿದೆ. ವಾಣಿಜ್ಯ ಸಿಲಿಂಡರ್​ಗಳ ಕೊರತೆ ಜೊತೆಗೆ ಗ್ರಹಬಳಕೆ ಸಿಲಿಂಡರ್​ಗಳನ್ನು ಖರೀದಿಸುವಲ್ಲಿಯೂ ಹಲವರು ಅಡಚಣೆಯನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಇಂಡಕ್ಷನ್ ಸ್ಟೌವ್‌ಗಳ (Induction Stove) ಬೇಡಿಕೆ ಏರಿಕೆಯಾಗಿದ್ದು, ಆನ್​ಲೈನ್ ಖರೀದಿ ಪ್ಲಾಟ್​ಫಾರ್ಮ್​ಗಳಲ್ಲಿ ಸ್ಟೌವ್‌ಗಳ ಮಾರಾಟ 5 ರಿಂದ 10 ಪಟ್ಟು ಹೆಚ್ಚಾಗಿದೆ. ಹೀಗಿರುವಾಗ ಹೊಸ ಇಂಡಕ್ಷನ್ ಸ್ಟವ್ ಖರೀದಿಗೂ ಮುನ್ನ ಗಮನಿಸಬೇಕಾದ ಅಂಶಗಳನ್ನು ಬೆಸ್ಕಾಂ (BESCOM) ತನ್ನ ಎಕ್ಸ್(X) ಖಾತೆಯಲ್ಲಿ ಹಂಚಿಕೊಂಡಿದೆ….

Read More

ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ

ಜೀ ಕನ್ನಡದಲ್ಲಿ ‘ಸರಿಗಮಪ ಲಿಟ್ಲ್​ ಚಾಂಪ್ಸ್’ ಪ್ರಸಾರ ಕಾಣುವುದರಲ್ಲಿ ಇದೆ. ಈ ಶೋನಲ್ಲಿ ಟ್ಯಾಲೆಂಟ್​​ಗಿಂತ ಹೆಚ್ಚಾಗಿ ಕಷ್ಟದಲ್ಲಿರುವವರಿಗೆ ಅವಕಾಶ ಕೊಟ್ಟು ಟಿಆರ್​ಪಿ ಪಡೆದುಕೊಳ್ಳಲಾಗುತ್ತದೆ ಎಂಬ ಆರೋಪ ಇದೆ.  ಇದಕ್ಕೆ ತಿರುಗೇಟು ಕೊಡಲು ಪ್ರೋಮೋ ಒಂದನ್ನು ಮಾಡಲಾಗಿದೆ. ಈ ಪ್ರೋಮೋದಲ್ಲಿ ಎಲ್ಲರಿಗೂ ಖಡಕ್ ಆಗಿ ಉತ್ತರಿಸಲಾಗಿದೆ. ಜನರ ಕಲ್ಪನೆ ಮತ್ತು ರಿಯಾಲಿಟಿ ವಿವರಿಸಲಾಗಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

KKR vs SRH, IPL 2026: ಪೋಸ್ಟ್ ಮ್ಯಾಚ್​ನಲ್ಲಿ ತಂಡದ ಗೆಲುವಿಗೆ ಕಾರಣರಾದ ಯಾರನ್ನೂ ಮರೆಯದ ಇಶಾನ್ ಕಿಶನ್, ಏನು ಹೇಳಿದ್ರು ನೋಡಿ

ಬೆಂಗಳೂರು (ಏ. 03): ಗುರುವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026 ರ ಆರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 65 ರನ್‌ಗಳಿಂದ ಸೋಲಿಸಿತು. ಋತುವಿನ ಮೊದಲ ಗೆಲುವು ದಾಖಲಿಸಿದ ನಂತರ, ನಾಯಕ ಇಶಾನ್ ಕಿಶನ್ ತಮ್ಮ ಆಟಗಾರರನ್ನು ಹಾಡಿಹೊಗಳಿದ್ದಾರೆ. ಮುಖ್ಯವಾಗಿ ಆರಂಭಿಕ ಜೋಡಿಗಳಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ನಮ್ಮ ತಂಡಕ್ಕೆ ಪಂದ್ಯವನ್ನು ತುಂಬಾ ಸುಲಭಗೊಳಿಸಿದರು ಎಂದು ಹೇಳಿದ್ದಾರೆ. ಕೆಕೆಆರ್ ವಿರುದ್ಧದ ಗೆಲುವಿನ…

Read More