Category Archives: Blog

Your blog category

ಅನುಮತಿ ಇಲ್ಲದೆ ಖಾಸಗಿ ಚಿತ್ರ ಹಂಚಿಕೊಂಡರೆ ಎಫ್‌ಐಆರ್ ಆಗುತ್ತೆ ಹುಷಾರ್!: ಕರ್ನಾಟಕ ಪೊಲೀಸ್ ಮುಖ್ಯಸ್ಥರ ಕಡಕ್ ಆದೇಶ – Kannada News | Sharing Intimate Images Without Consent Mandates FIR: Karnataka Police Chief

ಬೆಂಗಳೂರು, ಜೂನ್ 18: ವ್ಯಕ್ತಿಯೊಬ್ಬರ ಒಪ್ಪಿಗೆಯಿಲ್ಲದೆ ಅವರ ಖಾಸಗಿ ಅಥವಾ ಆಪ್ತ ಚಿತ್ರಗಳು ಹಾಗೂ ವೀಡಿಯೊಗಳನ್ನು ಸಾಮಾಜಿಕ ಜಾಲತಾಣ ಅಥವಾ ಇತರೆಡೆ ಹಂಚಿಕೊಂಡರೆ, ಆನ್‌ಲೈನ್ ಬ್ಲ್ಯಾಕ್‌ಮೇಲ್, ರಿವೆಂಜ್ ಪೋರ್ನೋಗ್ರಫಿ ಮತ್ತು ಸೆಕ್ಸ್ಟಾರ್ಷನ್ ಪ್ರಕರಣಗಳಲ್ಲಿ ತಕ್ಷಣವೇ ಎಫ್‌ಐಆರ್ (FIR) ದಾಖಲಿಸಬೇಕು ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಐಜಿಪಿ (DG & IGP) ಎಂ.ಎ. ಸಲೀಮ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಮುಖ್ಯಾಂಶಗಳು

  • ಅನುಮತಿಯಿಲ್ಲದೆ ಖಾಸಗಿ ಚಿತ್ರ ಹಂಚಿಕೊಂಡರೆ ತಕ್ಷಣ ಎಫ್‌ಐಆರ್ ದಾಖಲಿಸುವುದು ಕಡ್ಡಾಯವಾಗಿದೆ.
  • ಚಿತ್ರೀಕರಣದ ಒಪ್ಪಿಗೆ ಹಾಗೂ ಹಂಚಿಕೆಯ ಒಪ್ಪಿಗೆ ಸಂಪೂರ್ಣ ವಿಭಿನ್ನ ಎಂದು ಸ್ಪಷ್ಟಪಡಿಸಲಾಗಿದೆ.
  • ನಿಯಮ ಉಲ್ಲಂಘಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು.

ಸೆಕ್ಸ್ಟಾರ್ಷನ್, ಬ್ಲ್ಯಾಕ್‌ಮೇಲ್ ಮತ್ತು ರಿವೆಂಜ್ ಪೋರ್ನೋಗ್ರಫಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಅಥವಾ ತಿರಸ್ಕರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜೂನ್ 16 ರಂದು ಈ ಮಹತ್ವದ ಆದೇಶ ಹೊರಡಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ, ಸಂತ್ರಸ್ತರು ಈ ಹಿಂದೆ ಚಿತ್ರ ಅಥವಾ ವೀಡಿಯೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣ ಒಡ್ಡಿ ದೂರುಗಳನ್ನು ಸ್ವೀಕರಿಸಲು ನಿರಾಕರಿಸಲಾಗಿತ್ತು. ಈ ಗೊಂದಲಕ್ಕೆ ಪೊಲೀಸ್ ಮುಖ್ಯಸ್ಥರು ತಮ್ಮ ಆದೇಶದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಆದೇಶದಲ್ಲಿರುವ ಅಂಶಗಳೇನು?

ಚಿತ್ರ ಅಥವಾ ವೀಡಿಯೊ ರೆಕಾರ್ಡ್ ಮಾಡಲು ಒಪ್ಪಿಗೆ ನೀಡುವುದು ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಒಪ್ಪಿಗೆ ನೀಡುವುದು ಸಂಪೂರ್ಣವಾಗಿ ಎರಡು ವಿಭಿನ್ನ ಕಾನೂನು ಪರಿಕಲ್ಪನೆಗಳಾಗಿವೆ. ಸಂತ್ರಸ್ತರು ಆರಂಭದಲ್ಲಿ ಫೋಟೋ ಅಥವಾ ವೀಡಿಯೊ ತೆಗೆಯಲು ಒಪ್ಪಿದ್ದರೂ ಸಹ, ಅವರ ಅನುಮತಿಯಿಲ್ಲದೆ ಅದನ್ನು ಮೂರನೇ ವ್ಯಕ್ತಿಗೆ ಅಥವಾ ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಗಂಭೀರ ಅಪರಾಧವಾಗಿದೆ. ಎಂದು ಎಂ.ಎ. ಸಲೀಮ್ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಂತ್ರಸ್ತರ ಒಪ್ಪಿಗೆ ಇತ್ತು ಎಂಬ ಕಾರಣ ನೀಡಿ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವುದನ್ನು ವಿಳಂಬ ಮಾಡುವಂತಿಲ್ಲ ಅಥವಾ ನಿರಾಕರಿಸುವಂತಿಲ್ಲ ಎಂದು ಪುನರುಚ್ಚರಿಸಲಾಗಿದೆ. 2017ರ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ‘ಜಸ್ಟಿಸ್ ಕೆ.ಎಸ್. ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದ ತೀರ್ಪನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಶಾರೀರಿಕ ಖಾಸಗಿತನ ಮತ್ತು ವೈಯಕ್ತಿಕ ಮಾಹಿತಿಯ ಹಂಚಿಕೆಯನ್ನು ನಿಯಂತ್ರಿಸುವ ಹಕ್ಕು ಸಂವಿಧಾನದ ವಿಧಿ 21ರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ ಎಂದು ನೆನಪಿಸಲಾಗಿದೆ.

ಇದನ್ನೂ ಓದಿ ಉಚಿತ 5G ಅಪ್‌ಗ್ರೇಡ್ ಆಸೆಗೆ ಬಿದ್ದ ಬೆಂಗಳೂರು ವ್ಯಕ್ತಿಗೆ ಶಾಕ್: ಅಕೌಂಟ್ ಹ್ಯಾಕ್ ಮಾಡಿ 15 ಲಕ್ಷ ರೂ. ಸಾಲ ಪಡೆದ ಸೈಬರ್ ವಂಚಕರು!

ನಿಯಮವನ್ನು ಉಲ್ಲಂಘಿಸಿ ಖಾಸಗಿ ದೃಶ್ಯಗಳನ್ನು ಹಂಚಿಕೊಳ್ಳುವುದು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 77 ರ ಅಡಿಯಲ್ಲಿ ವೊಯರಿಸಂ (ಖಾಸಗಿತನಕ್ಕೆ ಧಕ್ಕೆ) ಅಪರಾಧವಾಗುತ್ತದೆ. ಇಂತಹ ಸೈಬರ್ ಅಪರಾಧಗಳ ದೂರು ಬಂದಾಗ ಎಫ್‌ಐಆರ್ ದಾಖಲಿಸಲು ನಿರಾಕರಿಸುವ ಅಥವಾ ವಿಳಂಬ ಮಾಡುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿ ಮತ್ತು ಐಜಿಪಿ ಎಚ್ಚರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:07 pm, Thu, 18 June 26

Source link

Video: ಚಪಾತಿ ಮಾಡಲು ಹೋಗಿ ಮೈ ತುಂಬಾ ಹಿಟ್ಟು ಮೆತ್ತಿಕೊಂಡ ಪುಟಾಣಿ – Kannada News | A little kid made chapatis by holding a stick

ಪುಟ್ಟ ಮಕ್ಕಳ (little kids) ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈ ಮುದ್ದು ಮಕ್ಕಳ ತರಲೆ ತುಂಟಾಟ, ಎಡವಟ್ಟಿನ ಕ್ಲಿಪಿಂಗ್ ಗಳನ್ನು ನೋಡುವುದೇ ಒಂಥರಾ ಖುಷಿ. ಮಕ್ಕಳು ಎಡವಟ್ಟು ಮಾಡಿದಾಗ ಕೋಪ ಬಂದರೂ, ಅವುಗಳ ಮುಗ್ಧತೆ ಕಂಡು ಬಾಚಿ ತಪ್ಪಿಕೊಳ್ಳಬೇಕಾಗುತ್ತದೆ. ಈ ಪುಟಾಣಿಯದ್ದು ಎಡವಟ್ಟಿನದು ಕಥೆ. ಪುಟ್ಟ ಕಂದಮ್ಮ ಲಟ್ಟಣಿಗೆ ಹಿಡಿದು ಚಪಾತಿ ಮಾಡಲು ಮುಂದಾಗಿದೆ. ಆದರೆ, ಈ ಗೋಧಿ ಹಿಟ್ಟನ್ನು ಮೈ ತುಂಬಾ ಮೆತ್ತಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಮುದ್ದು ಕಂದಮ್ಮ ಕ್ಯೂಟ್ ಕ್ಲಿಪಿಂಗ್ ನೋಡಿ ನೆಟ್ಟಿಗರು ಕರಗಿ ಹೋಗಿದ್ದಾರೆ.

ಬಿಕ್ರಮ್ ಕಲಿಟ (Bikram Kalita) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪುಟಾಣಿಯ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಪುಟಾಣಿ ಲಟ್ಟಣಿಗೆ ಹಿಡಿದು ಚಪಾತಿ ಮಾಡುವುದರಲ್ಲಿ ಬ್ಯುಸಿಯಾಗಿದೆ. ಆದರೆ ಚಪಾತಿ ಹಿಟ್ಟನ್ನು ಮೈ ತುಂಬಾ ಮೆತ್ತಿಕೊಂಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಭರತನಾಟ್ಯ ಮಾಡಿದ ಪುಟ್ಟ ಕಂದಮ್ಮ

ಈ ವಿಡಿಯೋ 2 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ, ಅಡುಗೆ ಭಟ್ಟ ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬರು, ಲಿಟಲ್ ಚೆಫ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಒಳ್ಳೆಯದಾಗಲಿ ಪುಟಾಣಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಂದ್ರನ ರಾಶಿಯಲ್ಲಿ ಅಪರೂಪದ ರಾಜಯೋಗ… ಲಾಭ ಪಡೆಯುವ ಅದೃಷ್ಟದ ರಾಶಿಗಳಿವು – Kannada News | Rare Rajayoga in Cancer: Auspicious Changes for These Lucky Zodiac Signs Now

ಚಂದ್ರನ ರಾಶಿಯಲ್ಲಿ ಅಪರೂಪದ ರಾಜಯೋಗImage Credit source: Pinterest

ಕಾಲದ ಯಥಾರ್ಥವನ್ನು ತಿಳಿಸುವ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಚಂದ್ರ, ಸುಖ-ಭೋಗಗಳ ಅಧಿಪತಿ ಶುಕ್ರ ಮತ್ತು ದೇವಗುರು ಬೃಹಸ್ಪತಿ ಈ ಮೂರೂ ಗ್ರಹಗಳು ಕರ್ಕಾಟಕ ರಾಶಿಯಲ್ಲಿ ಒಂದೇ ಸೂರಿನಡಿ ಸೇರಿದಾಗ ಒಂದು ಅಪರೂಪದ ಮತ್ತು ಅತ್ಯಂತ ಶಕ್ತಿಶಾಲಿ ಯೋಗ ಸೃಷ್ಟಿಯಾಗುತ್ತದೆ.

​ಕರ್ಕಾಟಕ ರಾಶಿಯು ಚಂದ್ರನ ಸ್ವಂತ ರಾಶಿಯಾಗಿದ್ದು, ಗುರು ಗ್ರಹಕ್ಕೆ ಇದು ಉಚ್ಛ ಸ್ಥಾನವಾಗಿದೆ. ಶುಕ್ರನು ಇಲ್ಲಿ ಮಿತ್ರ ಭಾವದಲ್ಲಿದ್ದಾನೆ. ಈ ಮೂರು ಶುಭ ಗ್ರಹಗಳ ಸಮ್ಮಿಲನದಿಂದ ಜ್ಯೋತಿಷ್ಯದಲ್ಲಿ ಗಜಲಕ್ಷ್ಮಿ ಯೋಗ ಅಥವಾ ತ್ರಿಗ್ರಹಿ ಯೋಗ ಉಂಟಾಗುತ್ತದೆ. ಅದರಲ್ಲೂ ಗುರು-ಚಂದ್ರರ ಸಂಯೋಗದಿಂದ ಗಜಕೇಸರಿ ಯೋಗ ಹಾಗೂ ಗುರು-ಶುಕ್ರರ ಪ್ರಭಾವದಿಂದ ರಾಜಯೋಗದ ಮಿಶ್ರಣವೂ ಈ ಅವಧಿಯಲ್ಲಿ ಕಂಡುಬರುತ್ತದೆ. ಇದು ಭೌತಿಕ ಸುಖ, ಸಂಪತ್ತು ಮತ್ತು ಕೀರ್ತಿಯನ್ನು ತಂದುಕೊಡುವ ಅದ್ಭುತ ಯೋಗವಾಗಿದೆ. ​ಈ ಅಪರೂಪದ ಸಂಯೋಗದಿಂದ ಪ್ರಮುಖವಾಗಿ ಲಾಭ ಪಡೆಯುವ ಅದೃಷ್ಟದ ರಾಶಿಗಳಿವು. ಈ ಯೋಗವು ಅಪರೂಪದ ಸಂಯೋಗದಲ್ಲಿ ಇದೂ ಒಂದಾಗಿದೆ.

​ಕರ್ಕಾಟಕ ರಾಶಿ:

ಈ ಯೋಗವು ನಿಮ್ಮದೇ ರಾಶಿಯಲ್ಲಿ ಘಟಿಸುತ್ತಿರುವುದರಿಂದ ನಿಮಗೆ ಅತ್ಯಂತ ಗರಿಷ್ಠ ಲಾಭ ಸಿಗಲಿದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿವೆ. ಸಿಲುಕಿಕೊಂಡಿದ್ದ ಹಣ ಕೈ ಸೇರಲಿದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಗೌರವ ಸಿಗಲಿದೆ. ಉದ್ಯಮಿಗಳಿಗೆ ದೊಡ್ಡ ಲಾಭದಾಯಕ ಒಪ್ಪಂದಗಳು ಸಿಗಲಿವೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದ್ದು, ದಾಂಪತ್ಯ ಜೀವನ ಮಧುರವಾಗಿರುತ್ತದೆ.

ಮೇಷ ರಾಶಿ:

​ಮೇಷ ರಾಶಿಯವರಿಗೆ ಈ ಸಂಯೋಗವು ನಾಲ್ಕನೇ ಮನೆಯಲ್ಲಿ ನಡೆಯುವುದರಿಂದ ಸುಖ-ಸಂತೋಷ ವೃದ್ಧಿಯಾಗಲಿದೆ. ಹೊಸ ಮನೆ, ಭೂಮಿ ಅಥವಾ ವಾಹನ ಖರೀದಿಸುವ ನಿಮ್ಮ ಕನಸು ನನಸಾಗುವ ಸಮಯವಿದು. ಕುಟುಂಬದಲ್ಲಿ ದೀರ್ಘಕಾಲದ ಭಿನ್ನಾಭಿಪ್ರಾಯಗಳು ದೂರವಾಗಿ ಶಾಂತಿ ನೆಲೆಸುತ್ತದೆ. ತಾಯಿಯ ಕಡೆಯಿಂದ ಧನಸಹಾಯ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

​ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಈ ತ್ರಿಗ್ರಹಿ ಯೋಗವು ಹನ್ನೊಂದನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಹೂಡಿಕೆಗಳಿಂದ ಅನಿರೀಕ್ಷಿತ ಲಾಭ ತರಲಿದೆ. ಲಾಟರಿ ಅಥವಾ ಷೇರು ಮಾರುಕಟ್ಟೆಯಿಂದ ಧನಲಾಭವಾಗಬಹುದು. ನೀವು ಕೈಹಾಕುವ ಪ್ರತಿಯೊಂದು ಕೆಲಸದಲ್ಲೂ ಅದೃಷ್ಟ ನಿಮ್ಮ ಪರ ಇರಲಿದೆ. ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ.

​ವೃಶ್ಚಿಕ ರಾಶಿ:

​ನಿಮ್ಮ ರಾಶಿಯ ಒಂಬತ್ತನೇ ಮನೆಯಲ್ಲಿ (ಭಾಗ್ಯ ಸ್ಥಾನ) ಈ ಯೋಗ ಸೃಷ್ಟಿಯಾಗುತ್ತಿರುವುದರಿಂದ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ತೀರ್ಥಯಾತ್ರೆ ಅಥವಾ ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ ಮಾಡುವ ಯೋಗವಿದೆ. ಹಳೆಯ ಆರೋಗ್ಯ ಸಮಸ್ಯೆಗಳು ದೂರವಾಗಿ, ಮನಸ್ಸಿಗೆ ನೆಮ್ಮದಿ ಸಿಗಲಿದೆ. ತಂದೆಯೊಂದಿಗಿನ ಬಾಂಧವ್ಯ ಗಟ್ಟಿಯಾಗಲಿದೆ.

– ಲೋಹಿತ್ ಹೆಬ್ಬಾರ್

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಾಯು, ಜಲ ಮತ್ತು ನೆಲ, ಮೂರೂ ಸ್ತರಗಳಲ್ಲೂ ಅಮೋಘವೆನಿಸಿದೆ ಭಾರತದ ಸ್ವಂತ ಬಲದ ರಕ್ಷಣಾ ಸಾಮರ್ಥ್ಯ – Kannada News | From Tejas to INS Vikrant, India’s indigenous defence capabilities developed in last 12 years

ನವದೆಹಲಿ, ಜೂನ್ 18: ಕಳೆದ 12 ವರ್ಷಗಳ ಮೋದಿ ಆಡಳಿತದಲ್ಲಿ ಭಾರತದ ಮಿಲಿಟರಿ ಸಾಮರ್ಥ್ಯ ಗಣನೀಯವಾಗಿ ಹೆಚ್ಚಿದೆ. ಸ್ವಂತ ಬಲದಲ್ಲಿ ಭಾರತ ಸಾಮರ್ಥ್ಯ ಹೆಚ್ಚಿಸಿಕೊಂಡಿರುವುದು ಗಮನಾರ್ಹ. ತಂತ್ರಜ್ಞಾನ, ಸಾಮರ್ಥ್ಯದಲ್ಲಿ ಬಹಳ ಮುಂಚಿತವಾಗಿ ಹೂಡಿಕೆ ಮಾಡುವ ದೇಶಗಳಿಗೆ ಭವಿಷ್ಯ ಉಜ್ವಲವಾಗಿರುತ್ತದೆ. ಅಂತೆಯೇ, ಭಾರತದ ರಕ್ಷಣಾ ಕ್ಷೇತ್ರದ (India defence) ಕಳೆದ 12 ವರ್ಷಗಳ ಪ್ರಯಾಣ ಇದಕ್ಕೆ ಸಾಕ್ಷಿ. ಭಾರತ ಈಗ ಮಿಲಿಟರಿ ಶಕ್ತಿಯಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರಗಳ ಸಾಲಿನಲ್ಲಿದೆ. ವಾಯು, ಜಲ ಮತ್ತು ನೆಲ ಈ ಮೂರೂ ವಿಭಾಗಗಳಲ್ಲಿ ಭಾರತದ ಸಾಮರ್ಥ್ಯ ವೃದ್ಧಿಯಾಗಿದೆ. ಅದರಲ್ಲೂ ದೇಶೀಯ ತಂತ್ರಜ್ಞಾನ ಮತ್ತು ಉತ್ಪಾದನೆ ಮೂಲಕ ಭಾರತ ಉನ್ನತಿ ಸಾಧಿಸಿರುವುದು ವಿಶೇಷ.

ಸರ್ಕಾರದ ಮೈ ಗವರ್ನ್ಮೆಂಟ್ ವಿಭಾಗವು ಸೋಷಿಯಲ್ ಮೀಡಿಯಾದಲ್ಲಿ ಈ 12 ವರ್ಷದಲ್ಲಿ ತನ್ನ ಕೆಲ ಸಾಧನೆಗಳನ್ನು ವಿವರಿಸುವ ಒಂದು ಥ್ರೆಡ್ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಇದನ್ನು ರೀಪೋಸ್ಟ್ ಮಾಡಿದ್ದಾರೆ. ಈ 12 ವರ್ಷಗಳ ಮಿಲಿಟರಿ ಸಾಧನೆಯ ಮಾಹಿತಿಯ ಅವಲೋಕನ ಇಲ್ಲಿದೆ:

ತೇಜಸ್ ಯುದ್ಧವಿಮಾನ

ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ನಿರ್ಮಿಸಿದ ಶಸ್ತ್ರಾಸ್ತ್ರಗಳಲ್ಲಿ ಪ್ರಮುಖವಾದುದು ತೇಜಸ್ ಸರಣಿಯ ಯುದ್ಧವಿಮಾನಗಳು. ಫೈಟರ್ ಜೆಟ್​ಗಳನ್ನು ಭಾರತದಲ್ಲೇ ಸ್ವಂತವಾಗಿ ವಿನ್ಯಾಸ ಮಾಡಿ ನಿರ್ಮಿಸಬಹುದು ಎಂದು ಮೊದಲು ತೋರಿಸಿಕೊಟ್ಟಿದ್ದು ಹೆಚ್​ಎಎಲ್. ತೇಜಸ್ ಎಂಕೆ-1ಎ ಯುದ್ಧವಿಮಾನ ಈಗಾಗಲೇ ಭಾರತೀಯ ವಾಯುಪಡೆಗೆ ನಿಯೋಜಿತವಾಗಿದೆ. ತೇಜಸ್ ಎಂಕೆ-2 ಅಭಿವೃದ್ಧಿಗೊಳ್ಳುತ್ತಿದೆ.

ಪಿಎಂ ನರೇಂದ್ರ ಮೋದಿ ಅವರ ಟ್ವೀಟ್ ಮತ್ತು ಥ್ರೆಡ್

ಆಕಾಶ್ ಮಿಸೈಲ್ ಸಿಸ್ಟಂ

ಭಾರತದ ಏರ್ ಡಿಫೆನ್ಸ್ ಜಾಲದಲ್ಲಿ ಆಕಾಶ್ ಸಿಸ್ಟಂ ಬಹಳ ಮುಖ್ಯ ಭಾಗವಾಗಿದೆ. ಆಪರೇಷನ್ ಸಿಂದೂರ್ ವೇಳೆ ಆಕಾಶ್ ಎಷ್ಟು ಉಪಯುಕ್ತ ಎಂಬುದು ಸಾಬೀತಾಗಿದೆ. ಆಕಾಶ್-ಎನ್​ಜಿ ಎನ್ನುವ ಮತ್ತಷ್ಟು ಸುಧಾರಿತ ಮಿಸೈಲ್ ಸಿಸ್ಟಂ ಅನ್ನು ಡಿಆರ್​ಡಿಒ ಅಭಿವೃದ್ಧಿಪಡಿಸುತ್ತಿದೆ. ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸಂಸ್ಥೆ ಈ ಮಿಸೈಲ್ ಸಿಸ್ಟಂ ಅನ್ನು ತಯಾರಿಸುವ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ಗಣಿತ ಪರೀಕ್ಷೆಯಲ್ಲಿ 51 ಅಂಕ ಗಳಿಸಿದ್ದ ಹುಡುಗ ಇವತ್ತು ಭಾರತದ ಅತಿದೊಡ್ಡ ಖಾಸಗಿ ಬಾಹ್ಯಾಕಾಶ ಕಂಪನಿ ಒಡೆಯ

ಪಿನಾಕ ಎನ್ನುವ ಅಮೋಘ ಫಿರಂಗಿ

ಭಾರತ ಸ್ವಂತವಾಗಿ ನಿರ್ಮಿಸಿರುವ ಶಸ್ತ್ರಾಸ್ತ್ರಗಳಲ್ಲಿ ಫಿರಂಗಿಗಳು ಇವೆ. ಪಿನಾಕಾ ಸಿಸ್ಟಂ ಇದಕ್ಕೆ ನಿದರ್ಶನ. ಡಿಆರ್​ಡಿಒದ ಎಆರ್​ಡಿಎ ಲ್ಯಾಬ್​ನಲ್ಲಿ ಇದರ ಅಭಿವೃದ್ಧಿಯಾಗಿದ್ದು, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ತಯಾರಿಸಲಾಗುತ್ತಿದೆ. ಭಾರತದ ಆರ್ಟಿಲರಿ ಶಕ್ತಿಯಲ್ಲಿ ಪಿನಾಕಾದ್ದು ಮುಖ್ಯಭಾಗ. ಈ ಅದ್ಭುತ ಫಿರಂಗಿಯಿಂದ ರಾಕೆಟ್ ದಾಳಿ ಮಾಡಬಹುದು.

ಅಗ್ನಿ ಮಿಸೈಲ್​ಗಳು

ಭಾರತದ ಅಗ್ನಿ-5 ವಿಶ್ವದ ಶಕ್ತಿಶಾಲಿ ಕ್ಷಿಪಣಿಗಳ ಸಾಲಿಗೆ ಬರುತ್ತದೆ. ಇದು ಎಂಐಆರ್​ವಿ ಟೆಕ್ನಾಲಜಿ ಹೊಂದಿದೆ. ಒಂದೇ ಮಿಸೈಲ್​ನಲ್ಲಿ ಹಲವು ವಾರ್​ಹೆಡ್​ಗಳನ್ನು ಕಳುಹಿಸಬಹುದು. ಬೇರೆ ಬೇರೆ ಗುರಿಗಳಿಗೆ ಇವನ್ನು ಹೊಡೆಯಬಹುದು. ಕೆಲವೇ ದೇಶಗಳಿಗೆ ಈ ಸಾಮರ್ಥ್ಯ ಇರುವುದು.

ಹೈಪರ್ಸಾನಿಕ್ ಮಿಸೈಲ್ ತಂತ್ರಜ್ಞಾನ

ಬಹಳ ವೇಗವಾಗಿ ಸಾಗಬಲ್ಲ ಹೈಪರ್​ಸಾನಿಕ್ ಕ್ಷಿಪಣಿಯನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ಹೈಪರ್​ಸಾನಿಕ್ ಕ್ಷಿಪಣಿಗಳು ಮ್ಯಾಕ್ 5ಗಿಂತ ಹೆಚ್ಚಿನ ವೇಗದಲ್ಲಿ ಹಾರುತ್ತವೆ. ಮ್ಯಾಕ್ ವೇಗ ಎಂದರೆ ಶಬ್ದದ ವೇಗ. ಮ್ಯಾಕ್ 5 ವೇಗ ಎಂದರೆ ಗಂಟೆಗೆ 6,000 ಕಿಮೀಗೂ ಹೆಚ್ಚು ವೇಗದಲ್ಲಿ ಸಾಗುವುದು.

ಮೂರೂ ಮಿಲಿಟರಿ ವಿಭಾಗದಲ್ಲಿ ಪರಮಾಣು ಶಕ್ತಿ

ಶತ್ರುಗಳ ಜಂಘಾಬಲ ಉಡುಗಿಸಲು ಸಹಾಯವಾಗುವುದು ಪರಮಾಣು ದಾಳಿಯ ಶಕ್ತಿ. ಭಾರತ ಇತ್ತೀಚೆಗೆ ಐಎನ್​ಎಸ್ ಅರಿಹಂತ್ ಅನ್ನು ನೌಕಾಪಡೆಗೆ ನಿಯೋಜಿಸಿತು. ಇದು ಪರಮಾಣ ಶಸ್ತ್ರಾಸ್ತ್ರ ದಾಳಿ ಸಾಮರ್ಥ್ಯ ಇರುವ ಯುದ್ಧ ನೌಕೆ. ಇದರೊಂದಿಗೆ ವಾಯು, ಜಲ ಮತ್ತು ನೆಲ ಮಾರ್ಗಗಳಲ್ಲಿ ಭಾರತ ಪರಮಾಣು ದಾಳಿ ಸಾಮರ್ಥ್ಯ ಹೊಂದಿದಂತಾಗಿದೆ. ಶತ್ರುಗಳು ಪರಮಾಣು ದಾಳಿ ಎಸಗುವ ಸಾಹಸ ಮಾಡಿದರೆ ಭಾರತ ಕ್ಷಿಪ್ರವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಿದೆ.

ಐಎನ್​ಎಸ್ ವಿಕ್ರಾಂತ್

ಯುದ್ಧಗಳಲ್ಲಿ ಹಡಗುಗಳ ಪಾತ್ರ ಬಹಳ ಮಹತ್ವದ್ದು. ಚೋಳರ ಕಾಲದಲ್ಲಿ ಭಾರತದ ನೌಕಾ ಬಲ ಬಹಳ ಉಚ್ಚವಾಗಿತ್ತು. ಈಗ ಭಾರತ ಆ ನಿಟ್ಟಿನಲ್ಲಿ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿದೆ. ಐಎನ್​ಎಸ್ ವಿಕ್ರಾಂತ್ ಇದಕ್ಕೆ ನಿದರ್ಶನ. ಇದು ಭಾರತದಲ್ಲೇ ಸ್ವಂತವಾಗಿ ನಿರ್ಮಿಸಲಾದ ಹಡಗು. ಇದು ಯುದ್ಧವಿಮಾನಗಳ ವಾಹಕವಾಗಿದೆ. ಜನರನ್ನು ಸಾಗಿಸುವ ಹಡಗುಗಳಿಗಿಂತ ಯುದ್ದವಿಮಾನಗಳನ್ನು ಸಾಗಿಸುವ ಹಡಗುಗಳ ನಿರ್ಮಾಣ ಹೆಚ್ಚು ಸವಾಲಿಂದ ಕೂಡಿರುತ್ತದೆ ಮತ್ತು ಸಂಕೀರ್ಣವಾಗಿರುತ್ತದೆ.

ಇದನ್ನೂ ಓದಿ: ಬೆಂಗಳೂರಿನ ಐಐಎಂ ಕ್ಯಾಂಪಸ್​ನಲ್ಲಿ ಹೊಸ ಕಾಲೇಜು; ಎರಡು ಪದವಿ ಕೋರ್ಸ್​ಗಳು ಆಫರ್; ಟಾಟಾ ಟ್ರಸ್ಟ್ಸ್​ನಿಂದ ಅನುದಾನ

ನೌಕಾಪಡೆಗೆ ಸ್ಟೀಲ್ತ್ ಫ್ರಿಗೇಟ್, 15ಬಿ ಡೆಸ್ಟ್ರಾಯರ್ಸ್ ಇತ್ಯಾದಿ ಶಕ್ತಿ

ಭಾರತದ ನೌಕಾಪಡೆಯ ಆಧುನೀಕರಣ ಕೆಲಸ ಜೋರಾಗಿ ನಡೆಯುತ್ತಿದೆ. ದೇಶೀಯವಾಗಿ ಅಭಿವೃದ್ಧಿಗೊಂಡ ತಂತ್ರಜ್ಞಾನದಿಂದಲೇ ಆಧುನೀಕರಣ ಮಾಡಲಾಗುತ್ತಿದೆ. ಪ್ರಾಜೆಕ್ಟ್ 17ಎ ಸ್ಟೀಲ್ತ್ ಫ್ರಿಗೇಟ್ಸ್ (ಸಣ್ಣ ಹಡಗು), ಪ್ರಾಜೆಕ್ಟ್ 15ಬಿ ಡೆಸ್ಟ್ರಾಯರ್ಸ್, ಕಲ್ವರಿ ದರ್ಜೆಯ ಸಬ್​ಮರೀನ್​ಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ.

ಬ್ರಹ್ಮೋಸ್, ಅಸ್ತ್ರ, ರುದ್ರಂ ಬಲ

ಭಾರತ ಸ್ವಂತವಾಗಿ ಅದ್ಭುತವಾದ ಮಿಸೈಲ್ ಇಕೋಸಿಸ್ಟಂ ಅಭಿವೃದ್ಧಿಪಡಿಸಿದೆ. ಬ್ರಹ್ಮೋಸ್, ಅಸ್ತ್ರ, ರುದ್ರಂ ಕ್ಷಿಪಣಿಗಳು ಶತ್ರುಗಳ ರಾಡಾರ್ ಕಣ್ತಪ್ಪಿಸಿ ಮಿಂಚಿನ ವೇಗದಲ್ಲಿ ದಾಳಿ ಮಾಡಬಲ್ಲಂತಹ ವಿಶ್ವದರ್ಜೆಯ ಅಸ್ತ್ರಗಳಾಗಿವೆ. ಅತ್ಯಾಧುನಿಕ ಡಿಫೆನ್ಸ್ ಟೆಕ್ನಾಲಜಿಯ ಉತ್ಪನ್ನಗಳುಉ ಇವು.

ಸಿ-295 ಪ್ರಾಜೆಕ್ಟ್

ದೇಶೀಯವಾಗಿ ವಿಮಾನಗಳನ್ನು ಅಭಿವೃದ್ಧಿಪಡಿಸುವುದು ಸವಾಲಿನ ಕೆಲಸ. ಭಾರತ ಸಿ-295 ಪ್ರಾಜೆಕ್ಟ್​ಗೆ ಕೈ ಹಾಕಿದೆ. ಆಪತ್ಕಾಲದಲ್ಲಿ ಬೇರೆ ದೇಶಗಳ ಮೇಲೆ ವಿಮಾನಗಳಿಗಾಗಿ ಅವಲಂಬಿತವಾಗುವುದು ತಪ್ಪುತ್ತದೆ. ಈ ಸಿ-295 ವಿಮಾನಗಳು ಯುದ್ಧ ಕಾಲದಲ್ಲಿ ಸೈನಿಕರನ್ನು ಮತ್ತು ಯುದ್ಧ ಸಾಮಗ್ರಿಗಳನ್ನು ಸಾಗಿಸಲು ಬಳಕೆಯಾಗುತ್ತವೆ.

ಡ್ರೋನ್​ಗಳ ಬಲ

ಈಗ ಯುದ್ಧದಲ್ಲಿ ಡ್ರೋನ್ ಬಹಳ ಮುಖ್ಯವಾಗಿದೆ. ಶತ್ರುಗಳ ಡಿಫೆನ್ಸ್ ಸಿಸ್ಟಂ ಅನ್ನು ನ್ಯೂಟ್ರಲೈಸ್ ಮಾಡಲು ಡ್ರೋನ್​ಗಳ ಗುಂಪನ್ನು ಬಳಸಲಾಗುತ್ತದೆ. ಹೀಗಾಗಿ, ರಷ್ಯಾ ಎದುರು ಉಕ್ರೇನ್ ಇನ್ನೂ ಸೋಲಪ್ಪಿಲ್ಲ. ಅಮೆರಿಕ, ಇಸ್ರೇಲ್​ನ ಭೀಕರ ದಾಳಿಗೆ ಇರಾನ್ ಪ್ರತ್ಯುತ್ತರ ಕೊಡಲು ಈ ಡ್ರೋನ್​ಗಳ ಪಾತ್ರ ಇದೆ. ಈ ಕಾರಣಕ್ಕೆ ಭಾರತವು ಸಾಕಷ್ಟು ಡ್ರೋನ್ ಸಾಮರ್ಥ್ಯ ವೃದ್ಧಿಸಲು ಖಾಸಗಿ ಕ್ಷೇತ್ರವನ್ನೂ ಬಳಸಿಕೊಳ್ಳುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದೀಪಾವಳಿಗೆ ದೊಡ್ಡ ಕ್ಲ್ಯಾಶ್: ‘ಜೈಲರ್ 2’ vs ‘ರಾಮಾಯಣ’, ಸಿಂಬು ಕೂಡ ರೇಸ್‌ನಲ್ಲಿ ಭಾಗಿ – Kannada News | Jailer 2 vs Ramayana: Rajinikanth’s Diwali Box Office Clash with Ranbir Kapoor and Yash

ಸೂಪರ್‌ಸ್ಟಾರ್ ರಜಿನಿಕಾಂತ್ ನಟನೆಯ ಬಹು ನಿರೀಕ್ಷಿತ ಚಿತ್ರ ‘ಜೈಲರ್ 2’ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರದ ರಿಲೀಸ್ ಡೇಟ್ ಅಧಿಕೃತವಾಗಿ ಪ್ರಕಟವಾಗದಿದ್ದರೂ, ಚಿತ್ರತಂಡ ದೀಪಾವಳಿ ಹಬ್ಬದ ಸಮಯದಲ್ಲಿ ಸಿನಿಮಾವನ್ನು ತೆರೆಗೆ ತರಲು ಭರ್ಜರಿ ಪ್ಲಾನ್ ಮಾಡಿದೆ. ಆದರೆ, ಇದೇ ದೀಪಾವಳಿಗೆ ಭಾರತೀಯ ಚಿತ್ರರಂಗದ ಮತ್ತೊಂದು ದೊಡ್ಡ ಸಿನಿಮಾ ‘ರಾಮಾಯಣ’ ಸಿನಿಮಾ ಕೂಡ ಬಿಡುಗಡೆಯಾಗುತ್ತಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಕ್ಲ್ಯಾಶ್ ನಡೆಯುವುದು ಖಚಿತವಾಗಿದೆ.

ದೀಪಾವಳಿ ರೇಸ್‌ನಲ್ಲಿ ತಲೈವಾ ವರ್ಸಸ್ ರಾಮಾಯಣ

ಆರಂಭದಲ್ಲಿ ‘ಜೈಲರ್ 2’ ಚಿತ್ರವನ್ನು ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ಯೋಚಿಸಲಾಗಿತ್ತು. ಆದರೆ, ಈಗ ದೀಪಾವಳಿ ಹಬ್ಬದ ಸೀಸನ್‌ಗೆ ಮುಂದೂಡಲಾಗಿದೆ ಎಂದು ವರದಿಗಳು ತಿಳಿಸಿವೆ. ಒಂದು ಕಡೆ ರಜಿನಿಕಾಂತ್ ಅವರ ‘ಜೈಲರ್ 2’ ಹಾಗೂ ಮತ್ತೊಂದು ಕಡೆ ಭಾರಿ ಬಜೆಟ್‌ನ ‘ರಾಮಾಯಣ’ ಸಿನಿಮಾ ಒಂದೇ ಸಮಯಕ್ಕೆ ಚಿತ್ರಮಂದಿರಗಳಿಗೆ ಬರಲಿವೆ. ಇದರ ಜೊತೆಗೆ ಸಿಂಬು ನಟನೆಯ, ವೆಟ್ರಿಮಾರನ್ ನಿರ್ದೇಶನದ ‘ಅರಸನ್’ ಚಿತ್ರವೂ ಇದೇ ರೇಸ್‌ನಲ್ಲಿದೆ. ಈ ಮೂರು ಬಿಗ್ ಬಜೆಟ್ ಸಿನಿಮಾಗಳು ಒಟ್ಟಿಗೆ ಬಂದರೆ ಬಾಕ್ಸ್ ಆಫೀಸ್ ಧೂಳೀಪಟವಾಗುವುದು ಗ್ಯಾರಂಟಿ.

‘ಜೈಲರ್ 2’ ತಾರಾಗಣದಲ್ಲಿ ಯಾರೆಲ್ಲ ಇದ್ದಾರೆ?

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ ಸೀಕ್ವೆಲ್‌ನಲ್ಲಿ ರಜಿನಿಕಾಂತ್ ಮತ್ತೆ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೊದಲ ಭಾಗದಲ್ಲಿದ್ದಂತೆ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಹಾಗೂ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಈ ಚಿತ್ರದಲ್ಲೂ ಅತಿಥಿ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ. ಮೊದಲು ಈ ಚಿತ್ರದಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅತಿಥಿ ಪಾತ್ರ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ತಮ್ಮ ‘ಕಿಂಗ್’ ಚಿತ್ರದಲ್ಲಿ ಬ್ಯುಸಿ ಇರುವುದರಿಂದ ಈ ಆಫರ್ ನಿರಾಕರಿಸಿದ್ದಾರೆ. ಹೀಗಾಗಿ ಚಿತ್ರತಂಡ ಈಗ ಹೃತಿಕ್ ರೋಶನ್ ಜೊತೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.

ಇನ್ನು’ಅರಸನ್’ ಧನುಷ್ ನಟನೆಯ ‘ವಡಾ ಚೆನ್ನೈ’ ಚಿತ್ರದ ಸ್ಪಿನ್ ಆಫ್ ಆಗಿದ್ದು, ಆ ಸಿನಿಮಾ ಹಿನ್ನೆಲೆಯಲ್ಲೇ ಸಾಗಲಿದೆ. ಚಿತ್ರದಲ್ಲಿ ಸಿಂಬು ಜೊತೆಗೆ ವಿಜಯ ಸೇತುಪತಿ ಪ್ರಮುಖ ಪಾತ್ರದಲ್ಲಿದ್ದಾರೆ. ಕನ್ನಡದ ಚೈತ್ರಾ ಜೆ. ಆಚಾರ್ ಹಾಗೂ ಪ್ರಿಯಾಂಕಾ ಮೋಹನ್ ಕೂಡ ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರದ ಬಿಡುಗಡೆ ಮುಂದೂಡಿಕೆ? ವದಂತಿಗಳಿಗೆ ತೆರೆ ಎಳೆದ ಚಿತ್ರತಂಡ!

ಇನ್ನು, ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮೊದಲಾದವರು ನಟಿಸಿದ್ದಾರೆ. ಬಿಗ್ ಬಜೆಟ್​​ನಲ್ಲಿ ಸಿನಿಮಾ ಮೂಡಿ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಠಾಕ್ರೆ ಬಣದಲ್ಲಿ ಮತ್ತೊಂದು ಬಿರುಕು ದೃಢ, ಉದ್ಧವ್ ಕರೆದಿದ್ದ ಸಭೆಗೆ 6 ಸಂಸದರು ಗೈರು – Kannada News | Uddhav Thackeray Faces New Shiv Sena Split: 6 MPs Boycott Key Meeting, Rebellion Confirmed

ಮುಂಬೈ, ಜೂನ್ 18: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಪಕ್ಷಾಂತರ ಪರ್ವ ಅಧಿಕೃತಗೊಂಡಿದೆ. ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray) ಇಂದು ಬೆಳಗ್ಗೆ ದೆಹಲಿಯಲ್ಲಿ ಕರೆದಿದ್ದ ಅತ್ಯಂತ ನಿರ್ಣಾಯಕ ಸಂಸದರ ಸಭೆಗೆ ಆರು ಲೋಕಸಭಾ ಸಂಸಅದರು ಗೈರಾಗುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ. ಇರೊಂದಿಗೆ ಠಾಕ್ರೆ ನೇತೃತ್ವದ ಶಿವಸೇನೆಯಲ್ಲಿನ ಒಡಕು ಈಗ ಸ್ಪಷ್ಟವಾದಂತಾಗಿದೆ.
ದೇಶದ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಸಂಸದರು ಪಕ್ಷಾಂತರ ಮಾಡಿದ್ದ ಬೆನ್ನಲ್ಲೇ, ಈಗ ಮಹಾರಾಷ್ಟ್ರದ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷದಲ್ಲೂ ಭಾರಿ ವಿಭಜನೆ ದೃಢಪಟ್ಟಿದೆ.

ಏನಿದು ‘ಆಪರೇಷನ್ ಟೈಗರ್’? ಯಾಕೆ ಈ ರಾಜಕೀಯ ಭೂಕಂಪ?
ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ‘ಆಪರೇಷನ್ ಟೈಗರ್’ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿತ್ತು. ಉದ್ಧವ್ ಠಾಕ್ರೆ ಬಣದ ಸಂಸದರನ್ನು ಸೆಳೆದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿಸಿಕೊಳ್ಳುವ ರಹಸ್ಯ ಕಾರ್ಯಾಚರಣೆಗೆ ಈ ಹೆಸರು ಇಡಲಾಗಿದೆ.

ಈ ಬಿರುಕಿಗೆ ಮುಖ್ಯ ಕಾರಣಗಳು ಇಲ್ಲಿವೆ
ಕೇಂದ್ರದಲ್ಲಿರುವ ಎನ್‌ಡಿಎ (NDA) ಸರ್ಕಾರಕ್ಕೆ ಕೆಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲು ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಇತ್ತೀಚೆಗಷ್ಟೇ ಬಂಗಾಳದ ಟಿಎಂಸಿ ಸಂಸದರು ಬಂದ ನಂತರವೂ ಎನ್‌ಡಿಎಗೆ ಇನ್ನೂ 46 ಸಂಸದರ ಕೊರತೆಯಿತ್ತು. ಈಗ ಉದ್ಧವ್ ಬಣದ 6 ಸಂಸದರನ್ನು ಸೆಳೆಯುವ ಮೂಲಕ ಶಿಂಧೆ ಮತ್ತು ಬಿಜೆಪಿ ಮೈತ್ರಿಕೂಟ ಕೇಂದ್ರದಲ್ಲಿ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದೆ.

ಮತ್ತಷ್ಟು ಓದಿ: ಶಿವಸೇನೆಯಲ್ಲಿ ಮತ್ತೊಂದು ಬಿರುಕು? ಆಪರೇಷನ್ ಟೈಗರ್ ವದಂತಿ ಬೆನ್ನಲ್ಲೇ ಉದ್ಧವ್ ಠಾಕ್ರೆ ತುರ್ತು ಸಭೆ

ಸಭೆಗೆ ಹಾಜರಾದವರು ಯಾರು?
ಪಕ್ಷದ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ನಿನ್ನೆಯೇ ‘ಮೂರು ಸಾಲಿನ ವಿಪ್’ ಜಾರಿ ಮಾಡಲಾಗಿತ್ತು. ಆದರೂ ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾದಾಗ ಕೇವಲ ನಾಲ್ಕು ಜನ ಸಂಸದರು ಮಾತ್ರ ಹಾಜರಿದ್ದರು.

ಸಂಜಯ್ ರಾವತ್
ಅನಿಲ್ ದೇಸಾಯಿ
ಅರವಿಂದ್ ಸಾವಂತ್
ರಾಜಭಾವು ವಾಜೆ

ಬಂಡಾಯವೆದ್ದ ಆರು ಸಂಸದರು ಯಾರು?
ವಿಪ್ ಜಾರಿಯಾಗಿದ್ದರೂ ಪಕ್ಷದ ಆದೇಶವನ್ನು ಧಿಕ್ಕರಿಸಿ ಸಭೆಯಿಂದ ದೂರ ಉಳಿದ 6 ಸಂಸದರ ಪಟ್ಟಿ ಇಲ್ಲಿದೆ:

ಸಂಜಯ್ ದಿನಾ ಪಾಟೀಲ್

ಸಂಜಯ್ ದೇಶಮುಖ್

ಸಂಜಯ್ (ಬಂದು) ಜಾಧವ್

ಓಂರಾಜೆ ನಿಂಬಾಳ್ಕರ್

ಸಂಜಯ್ ವಕ್ಚೌರೆ

ನಾಗೇಶ್ ಪಾಟೀಲ್ ಅಶ್ಟಿಕರ್

ಉದ್ಧವ್ ಸೇನೆಯ ಮುಂದಿನ ನಡೆ ಏನು?
ಅನರ್ಹತೆ ತೂಗುಗತ್ತಿ: ಪಕ್ಷದ ವಿಪ್ ಉಲ್ಲಂಘಿಸಿ ಸಭೆಗೆ ಗೈರಾದ ಆರು ಸಂಸದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉದ್ಧವ್ ಠಾಕ್ರೆ ಬಣ ಸಜ್ಜಾಗಿದೆ.

ಮೂಲಗಳ ಪ್ರಕಾರ, ಉದ್ಧವ್ ಸೇನೆಯು ಮೊದಲು ಈ ಬಂಡಾಯ ಸಂಸದರಿಗೆ ‘ಶೋಕಾಸ್ ನೋಟಿಸ್’ (ಕಾರಣ ಕೇಳಿ ನೋಟಿಸ್) ಜಾರಿ ಮಾಡಲಿದೆ. ಅದಾದ ಬಳಿಕ ಇವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವಂತೆ ಲೋಕಸಭಾ ಸ್ಪೀಕರ್ ಅವರಿಗೆ ಅಧಿಕೃತವಾಗಿ ದೂರು ನೀಡುವ ಸಾಧ್ಯತೆಯಿದೆ. ಮಹಾರಾಷ್ಟ್ರದ ಈ ರಾಜಕೀಯ ಹೈಡ್ರಾಮಾ ಈಗ ದೆಹಲಿಯ ಸಂಸತ್ತಿನ ಅಂಗಳ ತಲುಪಿದೆ.

ಉದ್ಧವ್ ಬಣದಲ್ಲಿ ಒಟ್ಟು 9 ಲೋಕಸಭಾ ಸಂಸದರಿದ್ದಾರೆ. ಪಕ್ಷಾಂತರ ನಿರೋಧಕ ಕಾಯ್ದೆಯಡಿ ಅನರ್ಹತೆಯಿಂದ ಪಾರಾಗಬೇಕಾದರೆ 3ನೇ 2ರಷ್ಟು ಅಂದರೆ ಕನಿಷ್ಠ 6 ಸಂಸದರು ಒಟ್ಟಿಗೆ ಹೊರಬರಬೇಕಿತ್ತು. ಬಂಡಾಯಗಾರರು ನಿಖರವಾಗಿ ಇದೇ ಸಂಖ್ಯೆಯನ್ನು ತಲುಪಿದ್ದಾರೆ. 2022 ರಲ್ಲಿ ಶಿಂಧೆ ಶಾಸಕರನ್ನು  ವಿಭಜಿಸಿದ ಮಾದರಿಯಲ್ಲೇ, ಈಗ ಸಂಸದರನ್ನೂ ಒಡೆದು ಉದ್ಧವ್‌ಗೆ ಮತ್ತೊಂದು ಭಾರಿ ಪೆಟ್ಟು ನೀಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಣ್ಣಿಗೆ ಸನ್​ಗ್ಲಾಸ್… ಆರ್ಚರ್ ಎದುರು ಫಿಲಿಪ್ಸ್ ಮಾಸ್!

ಲಂಡನ್‌ನ ಓವಲ್ ಮೈದಾನದಲ್ಲಿ ಗ್ಲೆನ್ ಫಿಲಿಪ್ಸ್ ಮತ್ತು ಜೋಫ್ರಾ ಆರ್ಚರ್ ನಡುವೆ ನಡೆದ ರೋಚಕ ಹಣಾಹಣಿ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ನ್ಯೂಝಿಲೆಂಡ್ ತಂಡದ ಬ್ಯಾಟರ್ ಗ್ಲೆನ್ ಫಿಲಿಪ್ಸ್ ಕಪ್ಪು ಬಣ್ಣದ ಸನ್‌ಗ್ಲಾಸ್ ಧರಿಸಿ, ಇಂಗ್ಲೆಂಡ್‌ನ ಅತ್ಯಂತ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಬೌನ್ಸರ್‌ಗಳನ್ನು ಎದುರಿಸಿದ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸನ್​ಗ್ಲಾಸ್ ಧರಿಸಲು ಕಾರಣವೇನು?

ಪಂದ್ಯದ 67ನೇ ಓವರ್​ ವೇಳೆ ಓವಲ್ ಮೈದಾನದ ಸೈಟ್‌ಸ್ಕ್ರೀನ್‌ನಿಂದ ಸೂರ್ಯನ ಬೆಳಕು ತೀವ್ರವಾಗಿ ಕಣ್ಣಿಗೆ ಬಡಿಯುತ್ತಿದ್ದ ಕಾರಣ, ಚೆಂಡನ್ನು ಸ್ಪಷ್ಟವಾಗಿ ಗುರುತಿಸಲು ಗ್ಲೆನ್ ಫಿಲಿಪ್ಸ್ ಕಪ್ಪು ಬಣ್ಣದ ಸನ್‌ಗ್ಲಾಸ್ ಧರಿಸಲು ನಿರ್ಧರಿಸಿದರು.

ಫಿಲಿಪ್ಸ್ ಹೆಲ್ಮೆಟ್ ಒಳಗಡೆ ದೊಡ್ಡ ಕನ್ನಡಕ ಧರಿಸಿ ಕ್ರೀಸ್‌ನಲ್ಲಿ ನಿಂತಾಗ, ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಲೇವಡಿ ಮಾಡಿದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಇದನ್ನು ಫಿಲಿಪ್ಸ್ ಅವರ ಅಪ್ರತಿಮ “ಸ್ವಾಗ್” ಮತ್ತು ಧೈರ್ಯ ಎಂದು ಬಣ್ಣಿಸಿದ್ದಾರೆ.

ಜೋಫ್ರಾ ಆರ್ಚರ್ vs ಗ್ಲೆನ್ ಫಿಲಿಪ್ಸ್:

ವೇಗವಾಗಿ ರನ್ ಗಳಿಸುತ್ತಿದ್ದ ಗ್ಲೆನ್ ಫಿಲಿಪ್ಸ್ (23 ಎಸೆತಗಳಲ್ಲಿ 33 ರನ್) ಅವರನ್ನು ಕಟ್ಟಿಹಾಕಲು ಇಂಗ್ಲೆಂಡ್ ನಾಯಕ ಜೋ ರೂಟ್, ಜೋಫ್ರಾ ಆರ್ಚರ್ ಅವರನ್ನು ಮರಳಿ ಬೌಲಿಂಗ್‌ಗೆ ತಂದರು. ಆರ್ಚರ್ ಸನ್‌ಗ್ಲಾಸ್ ಧರಿಸಿದ್ದ ಫಿಲಿಪ್ಸ್ ವಿರುದ್ಧ ಸತತ 8 ಓವರ್‌ಗಳ ಕಾಲ ಕೇವಲ ಶಾರ್ಟ್-ಪಿಚ್ ಎಸೆತಗಳ ಮೂಲಕ ದಾಳಿ ನಡೆಸಿದರು. ಫಿಲಿಪ್ಸ್ ಸನ್‌ಗ್ಲಾಸ್ ಧರಿಸಿದ ತಕ್ಷಣ ಎದುರಿಸಿದ ಆರ್ಚರ್ ಅವರ ಮೊದಲ ಬೌನ್ಸರ್ ನೇರವಾಗಿ ಅವರ ಹೆಗಲಿಗೆ ಬಡಿಯಿತು.

ಚಹಾ ವಿರಾಮದ ನಂತರ ಆರ್ಚರ್ ಎಸೆದ 40 ಎಸೆತಗಳಲ್ಲಿ 33 ಎಸೆತಗಳು ಶಾರ್ಟ್-ಪಿಚ್ ಆಗಿದ್ದವು. ಸುಮಾರು 138 ಕಿ.ಮೀ ವೇಗದಲ್ಲಿ ಬಂದ ಕುತ್ತಿಗೆ ಮಟ್ಟದ ಬೌನ್ಸರ್ ಒಂದರಿಂದ ತಪ್ಪಿಸಿಕೊಳ್ಳಲು ಫಿಲಿಪ್ಸ್ ಕ್ರೀಸ್‌ನಲ್ಲಿ ಮಲಗಬೇಕಾಯಿತು.

ಆರ್ಚರ್ ಎಸೆದ ಈ ಭೀಕರ ಬೌನ್ಸರ್‌ನಿಂದ ತಪ್ಪಿಸಿಕೊಂಡು ನೆಲದ ಮೇಲೆ ಬಿದ್ದ ಫಿಲಿಪ್ಸ್, ಹಾಗೆಯೇ ಮಲಗಿ ನ್ಯೂಝಿಲೆಂಡ್ ಡ್ರೆಸ್ಸಿಂಗ್ ರೂಮ್ ಕಡೆಗೆ ‘ಥಂಬ್ಸ್-ಅಪ್’ ತೋರಿಸಿದರು. ಇದನ್ನು ಕಂಡು ಸಹ ಆಟಗಾರ ಡೆರಿಲ್ ಮಿಚೆಲ್ ಸೇರಿದಂತೆ ಇಡೀ ಕಿವೀಸ್ ಬಳಗ ನಗೆಗಡಲಲ್ಲಿ ತೇಲಿದರು.

ಇದಾಗ್ಯೂ ಸನ್​ಗ್ಲಾಸ್ ಧರಿಸಿಯೇ ಏಕಾಂಗಿ ಹೋರಾಟ ಮುಂದುವರೆಸಿರುವ ಗ್ಲೆನ್ ಫಿಲಿಪ್ಸ್ ಮೊದಲ ದಿನದಾಟದ ಅಂತ್ಯಕ್ಕೆ 74 ಎಸೆತಗಳಲ್ಲಿ 9 ಫೋರ್​ ಬಾರಿಸಿ ಅಜೇಯ 49 ರನ್ ಕಲೆಹಾಕಿದ್ದಾರೆ. ಇತ್ತ ಫಿಲಿಪ್ಸ್ ಅವರ ಈ ಕೆಚ್ಚೆದೆಯ ಪ್ರದರ್ಶನದ ಫಲವಾಗಿ ನ್ಯೂಝಿಲೆಂಡ್ ತಂಡವು ಮೊದಲ ದಿನದಲ್ಲೇ ಆಲೌಟ್ ಆಗುವುದರಿಂದ ಬಚಾವಾಗಿದೆ. ಅಲ್ಲದೆ ಮೊದಲ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್​ನಲ್ಲಿ 7 ವಿಕೆಟ್ ಕಳೆದುಕೊಂಡು 291 ರನ್ ಕಲೆಹಾಕಿದೆ.

 

 

Source link

Jwarahareshwara Temple: ಜ್ವರ ಮತ್ತು ದೀರ್ಘಕಾಲದ ಕಾಯಿಲೆ ಗುಣಪಡಿಸುವ ಜ್ವರಹರೇಶ್ವರ ದೇವಸ್ಥಾನದ ಬಗ್ಗೆ ಗೊತ್ತಾ? – Kannada News | Jvarahareshwara Temple Kanchipuram: Shiva’s Divine Power for Fever and Ailment Healing

ಕಾಂಚೀಪುರಂನ ಜ್ವರಹರೇಶ್ವರ ದೇವಸ್ಥಾನImage Credit source: Templesofindia

ಸನಾತನ ಧರ್ಮದಲ್ಲಿ, ಶಿವನು ಕೇವಲ ವಿನಾಶಕನಲ್ಲ, ಭಕ್ತರ ಕಷ್ಟಗಳನ್ನು ನಿವಾರಿಸುವ ಕರುಣಾಮಯಿಯೂ ಆಗಿದ್ದಾನೆ. ವಿಶೇಷವಾಗಿ, ಶಿವನನ್ನು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುವ ದೇವರಾಗಿ ಅನೇಕ ಸ್ಥಳಗಳಲ್ಲಿ ಪೂಜಿಸಲಾಗುತ್ತದೆ. ಅಂತಹ ಅಪರೂಪದ ಶೈವ ಸ್ಥಳಗಳಲ್ಲಿ, ತಮಿಳುನಾಡಿನ ಕಾಂಚೀಪುರಂನಲ್ಲಿರುವ ‘ಜುರಹರೇಶ್ವರ ದೇವಸ್ಥಾನ’ (ಜ್ವರಹರೇಶ್ವರ) ವಿಶೇಷ ಸ್ಥಾನವನ್ನು ಹೊಂದಿದೆ. ಜ್ವರ, ದೀರ್ಘಕಾಲದ ಕಾಯಿಲೆಗಳು ಮತ್ತು ದೈಹಿಕ ನೋವುಗಳಿಂದ ಮುಕ್ತಿ ಪಡೆಯಲು ಬಯಸುವ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಜ್ವರಹರೇಶ್ವರ ಯಾರು ಮತ್ತು ಆ ಹೆಸರಿನ ಅರ್ಥವೇನು?

ಶಿವನನ್ನು ಇಲ್ಲಿ ‘ಜ್ವರಹರೇಶ್ವರ’ ಎಂದು ಪ್ರತಿಷ್ಠಾಪಿಸಲಾಗಿದೆ, ಅಂದರೆ “ಜ್ವರವನ್ನು ನಿವಾರಿಸುವವನು”. ನಾವು ನೋಡುವ ಶಿವಲಿಂಗದ ಸಾಮಾನ್ಯ ರೂಪಕ್ಕಿಂತ ಭಿನ್ನವಾಗಿ, ಇಲ್ಲಿನ ಆಧ್ಯಾತ್ಮಿಕ ತತ್ವಶಾಸ್ತ್ರವು ಶಿವನನ್ನು ವಿಶೇಷ ಗುಣಪಡಿಸುವ ಶಕ್ತಿಯಾಗಿ ಪರಿಗಣಿಸುತ್ತದೆ. ಈ ರೂಪವು ದೈಹಿಕ ಕಾಯಿಲೆಗಳನ್ನು ಮಾತ್ರವಲ್ಲದೆ ಮಾನಸಿಕ ಚಿಂತೆಗಳು, ಭಯಗಳು ಮತ್ತು ನಕಾರಾತ್ಮಕ ಆಲೋಚನೆಗಳನ್ನು ಸಹ ದೂರವಾಗಿಸುವ ದೈವಿಕ ಶಕ್ತಿಯನ್ನು ಹೊಂದಿದೆ ಎಂದು ಭಕ್ತರು ನಂಬುತ್ತಾರೆ.

ದೇವಾಲಯದ ಸ್ಥಾಪನೆಯ ಹಿಂದಿನ ಪೌರಾಣಿಕ ಕಥೆ:

ದಂತಕಥೆಗಳ ಪ್ರಕಾರ, ಒಂದು ಕಾಲದಲ್ಲಿ ತೀವ್ರವಾದ ಜ್ವರ ಮತ್ತು ರೋಗಗಳು ಭೂಮಿಯಾದ್ಯಂತ ಹರಡಿ, ಜನರಿಗೆ ತೀವ್ರ ಸಂಕಷ್ಟವನ್ನುಂಟುಮಾಡುತ್ತಿದ್ದವು. ಆಗ ದೇವತೆಗಳು ರಕ್ಷಣೆಗಾಗಿ ಶಿವನನ್ನು ಪ್ರಾರ್ಥಿಸಿದಾಗ, ಈತನು ತನ್ನ ದೈವಿಕ ಶಕ್ತಿಯಿಂದ ಜ್ವರದ ರೂಪದಲ್ಲಿದ್ದ ದುಷ್ಟ ಶಕ್ತಿಯನ್ನು ನಿಗ್ರಹಿಸಿದನೆಂದು ಹೇಳಲಾಗುತ್ತದೆ. ಅದರ ನಂತರ, ಆತನು “ಜ್ವರಹರೇಶ್ವರ” ರೂಪದಲ್ಲಿ ಭಕ್ತರಿಗೆ ಪ್ರತ್ಯಕ್ಷನಾಗಿ ಭೂಮಿಯ ಆರೋಗ್ಯ ರಕ್ಷಕನಾದನೆಂಬ ನಂಬಿಕೆಯಿದೆ.

ಮೂರು ಮುಖಗಳು ಮತ್ತು ಮೂರು ಕಾಲುಗಳ ರಹಸ್ಯ:

ಜ್ವರಹರೇಶ್ವರನ ವಿಶಿಷ್ಟತೆಯು ಅವನ ಸಾಂಕೇತಿಕ ರೂಪದಲ್ಲಿದೆ. ಈ ಮೂರ್ತಿಯ ಮೂರು ಮುಖಗಳು ಬ್ರಹ್ಮಾಂಡದ ಸೃಷ್ಟಿ, ಸ್ಥಿತಿ ಮತ್ತು ಅವನತಿಯನ್ನು ಸಂಕೇತಿಸುತ್ತವೆ. ಇನ್ನು ಆತನ ಮೂರು ಕಾಲುಗಳು ಆಯುರ್ವೇದದಲ್ಲಿ ಉಲ್ಲೇಖಿಸಲಾದ ವಾತ, ಪಿತ್ತ ಮತ್ತು ಕಫ ಎಂಬ ಮೂರು ದೋಷಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ. ಹಾಗೆಯೇ ಆತನ ಬೆಂಕಿಯಂತಹ ಕಣ್ಣುಗಳು ದೇಹದಲ್ಲಿನ ರೋಗಕಾರಕ ಶಕ್ತಿಗಳನ್ನು ಸುಟ್ಟುಹಾಕುವ ದೈವಿಕ ಶಕ್ತಿಯ ಸಂಕೇತವಾಗಿದೆ. ನಮ್ಮ ಪೂರ್ವಜರು ಈ ರೂಪದ ಮೂಲಕ ಆರೋಗ್ಯದ ರಹಸ್ಯವನ್ನು ಆಧ್ಯಾತ್ಮಿಕವಾಗಿ ವಿವರಿಸಿದ್ದಾರೆ.

ಕಾಂಚೀಪುರಂನ ಅಪರೂಪದ ಪಲ್ಲವ ವಾಸ್ತುಶಿಲ್ಪದ ವೈಭವ:

ತಮಿಳುನಾಡಿನ ಕಾಂಚೀಪುರಂ ಅನೇಕ ಶೈವ ಮತ್ತು ವೈಷ್ಣವ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಜ್ವರಹರೇಶ್ವರ ದೇವಾಲಯವೂ ಅಲ್ಲಿನ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಪಲ್ಲವ ಕಾಲದ ಈ ದೇವಾಲಯವು ದ್ರಾವಿಡ ವಾಸ್ತುಶಿಲ್ಪದ ವೈಭವವನ್ನು ಪ್ರತಿಬಿಂಬಿಸುತ್ತದೆ. ದೇವಾಲಯದ ಗರ್ಭಗುಡಿಯನ್ನು ಅತ್ಯಂತ ವಿಶಿಷ್ಟ ಆಕಾರದಲ್ಲಿ ನಿರ್ಮಿಸಲಾಗಿದ್ದು, ಇಲ್ಲಿನ ಶಾಂತಿಯುತ ವಾತಾವರಣ ಮತ್ತು ಶಿಲ್ಪಗಳ ಮೇಲೆ ಕೆತ್ತಲಾದ ಆಧ್ಯಾತ್ಮಿಕ ಸಂದೇಶಗಳು ಭಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಪವಿತ್ರ ಪುಷ್ಕರಿಣಿ ಮತ್ತು ವಿಶೇಷ ಪೂಜಾ ವಿಧಾನಗಳು:

ದೇವಾಲಯದ ಆವರಣದಲ್ಲಿರುವ ಪವಿತ್ರ ಪುಷ್ಕರಿಣಿಯೂ ವಿಶೇಷ ಮಹತ್ವವನ್ನು ಹೊಂದಿದೆ. ಇಲ್ಲಿ ಸ್ನಾನ ಮಾಡಿ ಭಗವಂತನನ್ನು ದರ್ಶನ ಪಡೆಯುವ ಭಕ್ತರು ತಮ್ಮ ಆರೋಗ್ಯ ಸಮಸ್ಯೆಗಳಿಂದ ಗುಣಮುಖರಾಗುತ್ತಾರೆ ಎಂದು ನಂಬಲಾಗಿದೆ. ಇತರ ಶಿವನ ದೇವಾಲಯಗಳಿಗೆ ಹೋಲಿಸಿದರೆ ಇಲ್ಲಿನ ದೈನಂದಿನ ಪೂಜೆ, ಅಭಿಷೇಕಗಳು, ದೀಪಾರಾಧನೆ ಮತ್ತು ಪ್ರಾರ್ಥನೆಗಳು ಸ್ವಲ್ಪ ಭಿನ್ನವಾಗಿರುತ್ತವೆ. ಸೋಮವಾರದಂದು, ಪ್ರದೋಷ ಕಾಲದಲ್ಲಿ ಹಾಗೂ ಮಹಾಶಿವರಾತ್ರಿಯಂದು ಇಲ್ಲಿಗೆ ಸಾವಿರಾರು ಭಕ್ತರು ಹರಿದುಬರುತ್ತಾರೆ.

ಮೆಣಸಿನ ಪ್ರಸಾದ ದಾನದ ಹಿಂದಿನ ಆಯುರ್ವೇದದ ಅರ್ಥ:

ಇಲ್ಲಿನ ದೇವರಿಗೆ ಮೆಣಸಿನಿಂದ (ಕಾಳುಮೆಣಸು) ಮಾಡಿದ ಪ್ರಸಾದವನ್ನು ಅರ್ಪಿಸುವುದು ಅತ್ಯಂತ ವಿಶಿಷ್ಟವಾದ ಸಂಪ್ರದಾಯವಾಗಿದೆ. ಆಯುರ್ವೇದದಲ್ಲಿ ಮೆಣಸಿನಕಾಯಿ ಅಥವಾ ಕಾಳುಮೆಣಸಿನ ಆರೋಗ್ಯಕರ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಈ ಆಚರಣೆಯನ್ನು ರೂಪಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಇದನ್ನು ದೇಹದಲ್ಲಿನ ಶಾಖ ಮತ್ತು ಶೀತದ ಸಮತೋಲನವನ್ನು ಕಾಯ್ದುಕೊಳ್ಳುವ ಸಂಕೇತವೆಂದು ಸಹ ಪರಿಗಣಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:35 am, Thu, 18 June 26

Source link

ನಟಿ ಸಂಚಿತಾ ಸಾವು: ‘ಅವಳ ಆತ್ಮ ದೆವ್ವಗಳಂತೆ ಅಲೆದಾಡುತ್ತವೆ’ ಎಂದ ಖ್ಯಾತ ನಟ – Kannada News | Sanchita Ugale death: Harassment Allegations Emerge; Ravi Kishan Condemns Act

ಮುಂಬೈ (ಜೂನ್​ 18): ‘ಕುಂಕುಮ ಭಾಗ್ಯ’ ಧಾರಾವಾಹಿ ಹಾಗೂ ವಿಕ್ಕಿ ಕೌಶಲ್ ನಟನೆಯ ‘ಛಾವಾ’ ಸಿನಿಮಾ ಖ್ಯಾತಿಯ ಯುವ ನಟಿ ಸಂಚಿತಾ ಉಗ್ಲೆ ಅವರ ಹಠಾತ್ ಆತ್ಮಹತ್ಯೆ ಪ್ರಕರಣವು ಇಡೀ ಕಿರುತೆರೆ ಮತ್ತು ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಜೂನ್ 14 ರಂದು ಅವರು ನಲಸೋಪಾರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರಂತದ ಬೆನ್ನಲ್ಲೇ ಚಿತ್ರರಂಗ ಹಾಗೂ ರಾಜಕೀಯ ವಲಯದಿಂದ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಈ ಮಧ್ಯೆ, ಪ್ರಸಿದ್ಧ ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಅವರು ಈ ಘಟನೆಗೆ ನೀಡಿರುವ ಪ್ರತಿಕ್ರಿಯೆಯು ಸದ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಆತ್ಮಹತ್ಯೆ ಪರಿಹಾರವಲ್ಲ, ಅದು ಮಹಾಪಾಪ: ರವಿ ಕಿಶನ್

ಸಂಚಿತಾ ಆತ್ಮಹತ್ಯೆ ಕುರಿತು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರವಿ ಕಿಶನ್, ‘ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಕೇವಲ 22 ವರ್ಷದ ಯುವ ಟಿವಿ ನಟಿಯೊಬ್ಬರು ಹೀಗೆ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ. ಅದಕ್ಕಾಗಿಯೇ ಜೀವನದಲ್ಲಿ ಧ್ಯಾನ, ಆಧ್ಯಾತ್ಮಿಕತೆ ಮತ್ತು ಪ್ರಾರ್ಥನೆ ಬಹಳ ಮುಖ್ಯ. ಇವು ನಮಗೆ ಎಂತಹ ಕಷ್ಟದ ಸಂದರ್ಭದಲ್ಲೂ ಬದುಕುವ ಶಕ್ತಿಯನ್ನು ನೀಡುತ್ತವೆ’ ಎಂದಿದ್ದಾರೆ.

‘ಈ ಜಗತ್ತಿನಲ್ಲಿ ಕಷ್ಟ, ದುಃಖ ಇಲ್ಲದ ಮನುಷ್ಯನೇ ಇಲ್ಲ. ಆದರೆ ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ, ಅದೊಂದು ದೊಡ್ಡ ಪಾಪ. ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಆತ್ಮಕ್ಕೆ ಎಂದಿಗೂ ಮೋಕ್ಷ ಸಿಗುವುದಿಲ್ಲ. ಅವರ ಸಾವು ನಿಗದಿತ ಸಮಯದಲ್ಲಿ ಸಂಭವಿಸದೇ ಇರುವುದರಿಂದ, ಅಂತಹ ತೀವ್ರ ಹೆಜ್ಜೆ ಇಟ್ಟವರ ಆತ್ಮಗಳು ಇಲ್ಲೇ ಭೂಮಿಯ ಮೇಲೆ ದೆವ್ವಗಳಂತೆ ಅಲೆದಾಡುತ್ತವೆ. ಜೀವನದಲ್ಲಿ ಸುಖ-ದುಃಖಗಳು ಬಂದು ಹೋಗುವುದು ಸಹಜ, ಆ ಸಂದರ್ಭಗಳನ್ನು ಎದುರಿಸಿ ನಾವು ಬದುಕಬೇಕು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ’ಕಿರುತೆರೆ ನಟಿ ಸಂಚಿತಾ ಉಗಾಳೆ ಆತ್ಮಹತ್ಯೆಗೆ ಕಿರುಕುಳವೇ ಕಾರಣ’; ತಂದೆಯ ಆರೋಪ

ಸಹನಟನಿಂದ ಕಿರುಕುಳ? ವಾಟ್ಸಾಪ್ ಚಾಟ್ಸ್ ಸೋರಿಕೆ!

ಮತ್ತೊಂದೆಡೆ, ಸಂಚಿತಾ ಅವರ ನಿಗೂಢ ಸಾವಿನ ಹಿಂದೆ ಮಾನಸಿಕ ಕಿರುಕುಳದ ಆರೋಪ ಕೇಳಿಬಂದಿದೆ. ಸಂಚಿತಾ ಅವರ ಕುಟುಂಬಸ್ಥರು ಈ ವಿಷಯವನ್ನು ದೃಢಪಡಿಸಿದ್ದು, ತಮ್ಮ ಮಗಳು ಕಳೆದ ಕೆಲವು ಸಮಯದಿಂದ ನಿರಂತರವಾಗಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಳು ಎಂದು ದೂರಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಸಂಚಿತಾ ಅವರ ವಾಟ್ಸಾಪ್ ಚಾಟ್‌ಗಳು ಸಹ ಸೋರಿಕೆಯಾಗಿದ್ದು, ಸಹನಟ ಉಜ್ವಲ್ ಶರ್ಮಾ ಎಂಬುವವರು ಆಕೆಗೆ ತೀವ್ರ ಕಿರುಕುಳ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:10 am, Thu, 18 June 26

Source link

ಎಲ್ಲರಿಗೂ ಅಪ್ಪ ಇದ್ದಾರೆ ಆದ್ರೆ ನಂಗೆ ಇಲ್ಲ, ಯಾಕಪ್ಪಾ ಅಷ್ಟೊಂದು ಕುಡಿದ್ರಿ, ಯಾಕೆ ಹೋದ್ರಿ, ಪುಟ್ಟ ಬಾಲಕಿಯ ಪ್ರಶ್ನೆಗೆ ಉತ್ತರಿಸುವವರ್ಯಾರು? – Kannada News | Father Lost to Alcohol: Heartbreaking Viral Video Highlights Family Devastation

ಕುಡಿತದ ಚಟ ಹೇಗೆ ಒಂದು ಸುಂದರ ಸಂಸಾರವನ್ನು ಸರ್ವನಾಶ ಮಾಡುತ್ತದೆ, ಅದರ ಜತೆಗೆ ಮಕ್ಕಳ ಮನಸ್ಸಿನ ಮೇಲೆ ಎಂಥಾ ದುಷ್ಪರಿಣಾಮವನ್ನು ಬೀರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಪುಟ್ಟ ಹೆಣ್ಣುಮಗುವೊಂದು ಅಪ್ಪ, ಅಮ್ಮನ ಜತೆ ತಾನು ನಿಂತಿರುವ ಫೋಟೊದ ಬಳಿ ಹೋಗಿ ಎಲ್ಲರಿಗೂ ಅಪ್ಪ ಇದ್ದಾರೆ ಆದ್ರೆ ನನಗೆ ಮಾತ್ರ ಇಲ್ಲ, ಯಾಕಪ್ಪಾ ಅಷ್ಟೊಂದು ಕುಡಿದ್ರಿ, ಯಾಕಪ್ಪಾ ನಮ್ಮನ್ನು ಬಿಟ್ಟು ಹೋದ್ರಿ ಎಂದು ಕೇಳುವ ಪ್ರಶ್ನೆಗೆ ಉತ್ತರಿಸುವವರ್ಯಾರು?.

‘@flix.indian’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ, ಬಾಲಕಿಯೊಬ್ಬಳು ಅಪ್ಪನ ಫೋಟೊದೆದುರು ನಿಂತು ತುಂಬಾ ಭಾವುಕಳಾಗಿ ಹಾಗೂ ಕೋಪದಿಂದ ಮಾತನಾಡುತ್ತಿರುವುದನ್ನು ಕಾಣಬಹುದು.
ತನ್ನ ತಂದೆ ಫೋಟೋದಲ್ಲಿದ್ದರೂ, ಅವರು ತನ್ನೆದುರೇ ಇದ್ದಾರೆ ಎಂಬಂತೆ ಮಾತನಾಡಿದ ಬಾಲಕಿ, ಮದ್ಯದ ವ್ಯಸನದ ವಿನಾಶಕಾರಿ ಮುಖವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾಳೆ.

ಅಪ್ಪಾ, ಅಮ್ಮ ನಿಮ್ಮನ್ನು ಕುಡಿಯಬೇಡಿ ಅಂತ ತಡೆಯುತ್ತಿದ್ದರು. ಆದ್ರೂ ನೀವು ಯಾಕೆ ಅಷ್ಟೊಂದು ಕುಡಿದ್ರಿ? ಇವತ್ತು ಬೇರೆ ಎಲ್ಲಾ ಮಕ್ಕಳಿಗೂ ಅಪ್ಪ ಇದ್ದಾರೆ. ಆದ್ರೆ ನೀವು ಮಾತ್ರ ಮದ್ಯಪಾನ ಮಾಡಿ ನಮ್ಮನ್ನು ಬಿಟ್ಟು ಹೋಗಿದ್ದೀರಿ.

ಈ ವೀಡಿಯೊ ಎಲ್ಲಿಯದು ಮತ್ತು ಬಾಲಕಿಯ ಹೆಸರೇನು ಎಂಬ ಮಾಹಿತಿ ಲಭ್ಯವಿಲ್ಲದಿದ್ದರೂ, ಅವಳು ವ್ಯಕ್ತಪಡಿಸಿದ ನೋವು ಮಾತ್ರ ಪ್ರತಿಯೊಬ್ಬರ ಹೃದಯವನ್ನು ತಟ್ಟುವಂತಿದೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಸಾವಿರಾರು ಜನರು ಕಮೆಂಟ್ ಬಾಕ್ಸ್‌ನಲ್ಲಿ ತಮ್ಮ ಬಾಲ್ಯದ ಕಹಿ ನೆನಪುಗಳು ಮತ್ತು ಆಘಾತಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ವಿಡಿಯೋ

ನನ್ನ ತಂದೆ ಇಂದಿಗೂ ಮದ್ಯಪಾನ ಮಾಡುತ್ತಾರೆ. ಅವರ ವರ್ತನೆ ಕಂಡು ಬೇಸತ್ತು ನಾನು ಜೀವನದಲ್ಲಿ ಎಂದಿಗೂ ಮದ್ಯವನ್ನು ಮುಟ್ಟಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನನ್ನ ಬಾಲ್ಯದ ನೆಮ್ಮದಿಯ ದಿನ ಯಾವುದು ಗೊತ್ತಾ? ನನ್ನ ತಂದೆ ಕುಡಿದು ಗಲಾಟೆ ಮಾಡಿ ಊರು ಬಿಟ್ಟು ಹೋಗಿದ್ದ ದಿನಗಳು. ನಿಮಗೆ ಮದ್ಯದ ವ್ಯಸನವಿದ್ದರೆ ದಯವಿಟ್ಟು ಮದುವೆಯಾಗಬೇಡಿ, ಮಕ್ಕಳನ್ನು ಪಡೆದು ಅವರ ಜೀವನ ಹಾಳು ಮಾಡಬೇಡಿ ಎಂದು ಬರೆದಿದ್ದಾರೆ.

ಪ್ರತಿಯೊಂದು ಮಗುವಿಗೂ ಒಬ್ಬರು ಒಳ್ಳೆಯ ಪೋಷಕರು ಬೇಕು. ಆದರೆ ಪ್ರತಿಯೊಬ್ಬ ಪೋಷಕರೂ ಮಗುವನ್ನು ಪಡೆಯಲು ಅರ್ಹರಾಗಿರುವುದಿಲ್ಲ. ನನ್ನ ತಂದೆಯನ್ನೂ ನಾನು ಇದೇ ಮದ್ಯದ ವ್ಯಸನದಿಂದ ಕಳೆದುಕೊಂಡೆ. ಈ ಪುಟ್ಟ ಹುಡುಗಿಯ ನೋವು ಏನೆಂದು ನನಗೆ ಗೊತ್ತು ಎಂದು ಹೇಳಿಕೊಂಡಿದ್ದಾರೆ. ಈ ಪುಟ್ಟ ಬಾಲಕಿಯ ಕಣ್ಣೀರು ಮತ್ತು ಪ್ರಾಮಾಣಿಕ ಮಾತುಗಳು, ಮದ್ಯದ ದಾಸರಾಗಿರುವ ಎಷ್ಟೋ ಪೋಷಕರಿಗೆ ತಮ್ಮ ಜವಾಬ್ದಾರಿಯನ್ನು ನೆನಪಿಸುವಂತಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link