Category Archives: Blog

Your blog category

ಫುಟ್​ಬಾಲ್ ವಿಶ್ವಕಪ್​ ಜೊತೆಗೆ ಅಮೆರಿಕದಲ್ಲಿ ಟಿ20 ಲೀಗ್..!

Source link

ನನಗೆ ಇನ್ನೊಂದು ಚಾನ್ಸ್ ಕೊಡಿ: ತೆಲುಗು ಚಿತ್ರರಂಗದಲ್ಲಿ ಅವಕಾಶ ಕೇಳಿದ ದಿಗಂತ್ – Kannada News | Actor Diganth asked for another movie chance in Tollywood

ಕನ್ನಡದ ಜನಪ್ರಿಯ ನಟ ದಿಗಂತ್ (Diganth), ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಅವರಿಗೆ ದೊಡ್ಡ ಯಶಸ್ಸು ದೊರೆತಿಲ್ಲ. ಕೆಲ ದಿನಗಳ ಹಿಂದಷ್ಟೆ ಅವರದ್ದೇ ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಬಾಡಿಗೆ ಹಣದಿಂದ ಜೀವನ ನಿರ್ವಹಣೆ ಮಾಡುವಂತಾಗಿದೆ ಎಂದು ಹೇಳಿದ್ದರು. ಕನ್ನಡದಲ್ಲಿ ಅವಕಾಶಗಳು ಕಡಿಮೆ, ಪ್ರೇಕ್ಷಕರು ಸಿನಿಮಾ ನೋಡುತ್ತಿಲ್ಲ ಎಂಬ ನೋವನ್ನು ದಿಗಂತ್ ಅಂದು ತೋಡಿಕೊಂಡಿದ್ದರು. ಇದೀಗ ನಟ ದಿಗಂತ್ ಪರ ಭಾಷೆ ಸಿನಿಮಾ ಒಂದರಲ್ಲಿ ನಟಿಸಿದ್ದು, ಅಲ್ಲಿಯೇ ಮತ್ತೊಂದು ಸಿನಿಮಾ ಅವಕಾಶ ಕೊಡಿ ಎಂದು ಬಹಿರಂಗವಾಗಿ ಕೇಳಿದ್ದಾರೆ.

ದಿಗಂತ್ ಅವರು ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಜೂನ್ 19ಕ್ಕೆ ಬಿಡುಗಡೆ ಆಗಲಿದೆ. ನಿನ್ನೆಯಷ್ಟೆ (ಜೂನ್ 17) ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಟ ದಿಗಂತ್ ಸಹ ಭಾಗಿ ಆಗಿದ್ದರು. ಈ ವೇಳೆ ಅವರು ತೆಲುಗು ಚಿತ್ರರಂಗದಲ್ಲಿ ಮತ್ತೆ ಅವಕಾಶ ನೀಡುವಂತೆ ಕೇಳಿಕೊಂಡರು.

‘ನಾನು ಬೆಂಗಳೂರಿನವನು, ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀನಿ. ನನಗೆ ಈ ಸಿನಿಮಾನಲ್ಲಿ ನಟಿಸಲು ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದ. ವಿಶೇಷವಾಗಿ ನಿರ್ದೇಶಕಿ ನಂದಿನಿ ರೆಡ್ಡಿ ಹಾಗೂ ಸಮಂತಾ ಋತ್ ಪ್ರಭು ಅವರಿಗೆ ಧನ್ಯವಾದ. ನಾನು ಸಮಂತಾ ಅವರ ನಟನೆಯನ್ನು ಅವರು ಮಾಡುವ ಕೆಲಸವನ್ನು ನೋಡುತ್ತಾ ಪ್ರಶಂಸಿಸುತ್ತಾ ಬಂದವನು. ನಂದಿನಿ ಮತ್ತು ಸಮಂತಾರ ‘ಓಹ್ ಬೇಬಿ’ ನನಗೆ ಬಹಳ ಇಷ್ಟ ಎಂದ ದಿಗಂತ್, ‘ಮಾ ಇಂಟಿ ಬಂಗಾರಂ’ ಸಿನಿಮಾಕ್ಕೆ ಕೆಲಸ ಮಾಡಿದ ಪ್ರಮುಖ ತಂತ್ರಜ್ಞರು ನಿರ್ಮಾಪಕರು, ಎಕ್ಸಿಕ್ಯೂಟಿವ್ ನಿರ್ಮಾಪಕರುಗಳ ಹೆಸರು ಹೇಳಿ ಎಲ್ಲರಿಗೂ ಧನ್ಯವಾದ ಹೇಳಿದರು.

ಇದನ್ನೂ ಓದಿ:ಐಂದ್ರಿತಾ-ದಿಗಂತ್ ಪ್ಲ್ಯಾನ್ ಅಂತು ಸೆಟ್ ಆಗಿದೆ, ಏನದು ಪ್ಲ್ಯಾನ್ ನೋಡಿ

ಬಳಿಕ ಭಾಷಣ ಮುಗಿಸುವಾಗ, ‘ನನಗೆ ಮತ್ತೆ ಅವಕಾಶ ನೀಡುತ್ತೀರ ತಾನೇ?’ ಎಂದು ಪ್ರಶ್ನಿಸಿದರು. ಹಲವರು ಇದಕ್ಕೆ ಹೌದು ಎಂದರು. ಬಳಿಕ ದಿಗಂತ್, ‘ನನ್ನನ್ನು ನಾನು ಪ್ರೂವ್ ಮಾಡಿಕೊಳ್ಳಲು ಇನ್ನೊಂದು ಅವಕಾಶ ಕೊಡಿ’ ಎಂದು ವೇದಿಕೆ ಮೇಲಿಂದ ಕೇಳಿ ಭಾಷಣ ಮುಗಿಸಿದರು.

ಅಸಲಿಗೆ ಬಹಳ ವರ್ಷಗಳ ಹಿಂದೆಯೇ ದಿಗಂತ್ ಅವರು ತೆಲುಗು ಸಿನಿಮಾ ಒಂದರಲ್ಲಿ ನಟಿಸಬೇಕಿತ್ತು. ವಿಜಯ್ ದೇವರಕೊಂಡ ಜೊತೆಗೆ ದಿಗಂತ್ ಬೈಕರ್​​ಗಳ ಬಗೆಗಿನ ಕತೆಯುಳ್ಳ ಸಿನಿಮಾ ಮಾಡಬೇಕಿತ್ತು. ಸಿನಿಮಾಕ್ಕಾಗಿ ತರಬೇತಿ ಸಹ ವಿಜಯ್ ದೇವರಕೊಂಡ ಜೊತೆ ಸೇರಿ ದಿಗಂತ್ ಮಾಡಿದ್ದರು ಆದರೆ ಆ ಸಿನಿಮಾ ಸೆಟ್ಟೇರಲಿಲ್ಲ. ಈಗ ‘ಮಾ ಇಂಟಿ ಬಂಗಾರಂ’ ಸಿನಿಮಾ ಮೂಲಕ ತೆಲುಗಿಗೆ ಹೋಗಿದ್ದಾರೆ. ಅವರ ಕೇಳಿ ಕೊಂಡಂತೆ ತೆಲುಗು ಸಿನಿಮಾ ಅವಕಾಶಗಳು ಸಿಗುತ್ತವೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಆಭರಣ ಚಿನ್ನದ ಬೆಲೆ 13,875 ರೂ; ಬೆಳ್ಳಿ ಮತ್ತಷ್ಟು ಅಗ್ಗ – Kannada News | Gold Price Today on 18th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 18: ಭಾರತದಲ್ಲಿ ಬಂಗಾರದ ಬೆಲೆ (Gold Rates) ಇತ್ತೀಚಿನ ವಾರಗಳಿಂದ ಬಹಳ ಏರಿಳಿತಗಳನ್ನು ಕಾಣುತ್ತಿದೆ. ಸತತವಾಗಿ ಏರಿಕೆಯಾಗಿದ್ದ ಚಿನ್ನದ ಬೆಲೆ ಇದೀಗ ಸತತ ಇಳಿಕೆಗೊಂಡಿದೆ. ಆಭರಣ ಚಿನ್ನದ ಬೆಲೆ 13,850 ರೂ ಮುಟ್ಟಿದೆ. ಅಪರಂಜಿ ಚಿನ್ನದ ಬೆಲೆ 15,110 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಇಂದು ಗುರುವಾರ ಗ್ರಾಮ್​ಗೆ 5 ರೂ ತಗ್ಗಿದೆ. ಇದರೊಂದಿಗೆ ಭಾರತದಲ್ಲಿ ಇದರ ಬೆಲೆ 260 ಮತ್ತು 270 ರೂ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,51,100 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 18ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,110 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,850 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,332 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,110 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,850 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,850 ರೂ
  • ಚೆನ್ನೈ: 14,060 ರೂ
  • ಮುಂಬೈ: 13,850 ರೂ
  • ದೆಹಲಿ: 13,865 ರೂ
  • ಕೋಲ್ಕತಾ: 13,850 ರೂ
  • ಕೇರಳ: 13,850 ರೂ
  • ಅಹ್ಮದಾಬಾದ್: 13,855 ರೂ
  • ಜೈಪುರ್: 13,865 ರೂ
  • ಲಕ್ನೋ: 13,865 ರೂ
  • ಭುವನೇಶ್ವರ್: 13,850 ರೂ

ಇದನ್ನೂ ಓದಿ: ಭಾರತ-ಬ್ರಿಟನ್​ನ 60,000 ಕೋಟಿ ರೂ ಮೌಲ್ಯದ ವ್ಯಾಪಾರ ಒಪ್ಪಂದ ಜುಲೈ 15ಕ್ಕೆ ಜಾರಿ ಸಾಧ್ಯತೆ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 581 ರಿಂಗಿಟ್ (13,438 ರುಪಾಯಿ)
  • ದುಬೈ: 526.50 ಡಿರಾಮ್ (13,561 ರುಪಾಯಿ)
  • ಅಮೆರಿಕ: 143.50 ಡಾಲರ್ (13,571 ರುಪಾಯಿ)
  • ಸಿಂಗಾಪುರ: 190.40 ಸಿಂಗಾಪುರ್ ಡಾಲರ್ (14,001 ರುಪಾಯಿ)
  • ಕತಾರ್: 524.50 ಕತಾರಿ ರಿಯಾಲ್ (13,608 ರೂ)
  • ಸೌದಿ ಅರೇಬಿಯಾ: 539 ಸೌದಿ ರಿಯಾಲ್ (13,583 ರುಪಾಯಿ)
  • ಓಮನ್: 55.25 ಒಮಾನಿ ರಿಯಾಲ್ (13,573 ರುಪಾಯಿ)
  • ಕುವೇತ್: 44.01 ಕುವೇತಿ ದಿನಾರ್ (13,559 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 260 ರೂ
  • ಚೆನ್ನೈ: 270 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 270 ರೂ
  • ಅಹ್ಮದಾಬಾದ್: 260 ರೂ
  • ಜೈಪುರ್: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 270 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Guru Pushya Mahayoga 2026: ಇಂದಿನಿಂದ 61 ದಿನಗಳ ವರೆಗೆ ಈ 6 ರಾಶಿಗೆ ಅದೃಷ್ಟದ ಸುರಿಮಳೆ! – Kannada News | Guru Pushya Mahayoga 2026: Auspicious 61 Day Period and its Impact on Zodiac Signs

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸಂಚಾರ, ಯುತಿ ಹಾಗೂ ದೃಷ್ಟಿಯಿಂದ ಕೆಲವು ಮಹಾ ಯೋಗಗಳು ನಿರ್ಮಾಣವಾಗುತ್ತವೆ. ಅಂತಹ ಒಂದು ಅಪರೂಪದ ಮತ್ತು ಅತ್ಯಂತ ಶುಭಕರ ಯೋಗವೇ ಗುರು ಪುಷ್ಯ ಮಹಾಯೋಗ. 2026 ರಲ್ಲಿ ಈ ಗುರು ಪುಷ್ಯ ಯೋಗವು 61 ದಿನಗಳ ಕಾಲ ಇರಲಿದ್ದು, ಇದು ಪ್ರಮುಖ ಜ್ಯೋತಿಷ್ಯ ಘಟನೆಯಾಗಿದೆ. ಜೂನ್ 18 ರಂದು ಗುರುವಾರ ರಾತ್ರಿ 9:32 ಕ್ಕೆ ಆರಂಭವಾಗಿ, ಆಗಸ್ಟ್ 19 ರ ಬುಧವಾರ ಬೆಳಗಿನ ಜಾವ 3:37 ರವರೆಗೆ ಗುರುವು ಪುಷ್ಯ ನಕ್ಷತ್ರದಲ್ಲಿ ಸಂಚರಿಸಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ಗುರು ಪುಷ್ಯ ಯೋಗದ ಮಹತ್ವ:

ಗುರುವು ಧರ್ಮ ಕಾರಕನಾಗಿರುತ್ತಾನೆ, ಪುಷ್ಯ ನಕ್ಷತ್ರಾಧಿಪತಿ ಶನಿ ಭಗವಾನನು ಕರ್ಮ ಕಾರಕನಾಗಿರುತ್ತಾನೆ. ಧರ್ಮ ಕಾರಕ ಮತ್ತು ಕರ್ಮ ಕಾರಕರು ಒಟ್ಟಾಗಿ ಸಂಚರಿಸುವುದು ನ್ಯಾಯ ಮತ್ತು ಅದೃಷ್ಟದ ದೇವತೆಗಳ ಸಂಯೋಗಕ್ಕೆ ಸಮ. ಈ ಯೋಗದ ಪ್ರಭಾವದಿಂದ ಪ್ರಕೃತಿ, ಪಂಚಭೂತಗಳು, ಮನುಷ್ಯರು, ದ್ವಾದಶ ರಾಶಿಗಳು ಮತ್ತು ಪ್ರಾಣಿಗಳಲ್ಲಿಯೂ ಶುಭ ಫಲಗಳು ಗೋಚರಿಸುತ್ತವೆ. ವಿವಾಹ, ಗೃಹಪ್ರವೇಶ, ಹೊಸ ಉದ್ಯಮ ಆರಂಭ ಮತ್ತು ಇತರೆ ಎಲ್ಲಾ ಶುಭ ಕಾರ್ಯಗಳಿಗೆ ಈ 61 ದಿನಗಳ ಅವಧಿ ಅತ್ಯಂತ ಪ್ರಶಸ್ತವಾಗಿದೆ. ಇದು ವಿದ್ಯಾರ್ಥಿಗಳು, ಗುರುಗಳು, ಶಿಕ್ಷಕರು, ಮಠಾಧೀಶರು, ಪುರೋಹಿತರು ಹಾಗೂ ಧರ್ಮ ಕಾರ್ಯಗಳಲ್ಲಿ ತೊಡಗಿರುವವರಿಗೆ ಪರ್ವಕಾಲವಾಗಿದೆ.

ದ್ವಾದಶ ರಾಶಿಗಳ ಮೇಲೆ ಗುರು ಪುಷ್ಯ ಯೋಗದ ಪ್ರಭಾವ:

ತುಲಾ ರಾಶಿ:

ಈ ರಾಶಿಯವರಿಗೆ ಹತ್ತನೇ ಮನೆಯಲ್ಲಿ ಗುರು ಪುಷ್ಯ ಯೋಗ ಸಂಚಾರ ನಡೆಯುವುದರಿಂದ ಅತೀವ ಶುಭ ಫಲಗಳು ಸಿಗುತ್ತವೆ. ಜವಾಬ್ದಾರಿಗಳು ಹೆಚ್ಚಾಗುತ್ತವೆ, ಉದ್ಯೋಗದಲ್ಲಿ ಪ್ರಗತಿ, ಬಡ್ತಿ, ವ್ಯಾಪಾರದಲ್ಲಿ ಲಾಭ ನಿರೀಕ್ಷಿಸಬಹುದು. ಶನಿವಾರದಂದು ಶನಿ ಭಗವಾನರ ದರ್ಶನ ಮಾಡುವುದರಿಂದ ಮತ್ತಷ್ಟು ಶುಭವಾಗುತ್ತದೆ.

ವೃಶ್ಚಿಕ ರಾಶಿ:

ಒಂಬತ್ತನೇ ಮನೆಯಾದ ಭಾಗ್ಯ ಸ್ಥಾನದಲ್ಲಿ ಈ ಯೋಗ ಸಂಭವಿಸುವುದರಿಂದ ಆಕಸ್ಮಿಕ ಧನಲಾಭ, ಅದೃಷ್ಟ, ಕಾನೂನು ವಿಚಾರಗಳಲ್ಲಿ ಜಯ, ಮನೆ-ಆಸ್ತಿ ಖರೀದಿ ಯೋಗ, ಶುಭ ಕಾರ್ಯಗಳ ಯೋಗವಿರುತ್ತದೆ. ಧರ್ಮ ಕಾರ್ಯಗಳು ನೆರವೇರುತ್ತವೆ. ಗುರುವಾರ ಗುರುಗಳನ್ನು ದರ್ಶನ ಮಾಡಿ ಅನ್ನದಾನ ಮಾಡುವುದು ಉತ್ತಮ.

ಧನುಸ್ಸು ರಾಶಿ:

ಅಷ್ಟಮ ಸ್ಥಾನದಲ್ಲಿ ಈ ಯೋಗವು ಧನು ರಾಶಿಯವರಿಗೆ ಬಹಳಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಮನಸ್ಸಿನ ಭಾವನೆಗಳು ಸುಧಾರಿಸುತ್ತವೆ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸ್ಥಿರ ಆಸ್ತಿಗಳ ಸಂಪಾದನೆ, ಅಪವಾದಗಳಿಂದ ಮುಕ್ತಿ ಸಿಗುತ್ತದೆ. ಶನಿವಾರ ಎಳ್ಳೆಣ್ಣೆಯನ್ನು ಶನಿ ದೇವರಿಗೆ ಅರ್ಪಿಸುವುದು ಉತ್ತಮ.

ಮಕರ ರಾಶಿ:

ಸಪ್ತಮ ಸ್ಥಾನದಲ್ಲಿ ಈ ಯೋಗವು ಪಾಲುದಾರಿಕೆಯಲ್ಲಿ ಶುಭ, ವಿವಾಹ ವಿಷಯಗಳಲ್ಲಿ ಪ್ರಗತಿ, ವೃತ್ತಿಯಲ್ಲಿ ಬದಲಾವಣೆ, ಕೋರ್ಟ್ ಕೇಸ್ ವಿಚಾರಗಳಲ್ಲಿ ಶುಭ ಮತ್ತು ಕೆಲವರಿಗೆ ಸ್ಥಾನ ಪಲ್ಲಟವನ್ನು ತರುತ್ತದೆ. ಗುರುವಾರ ಗುರುಗಳಿಗೆ ವಸ್ತ್ರದಾನ ಮಾಡುವುದು, ಅನ್ನದಾನ ಮಾಡುವುದು ಶುಭ.

ಕುಂಭ ರಾಶಿ:

ಷಷ್ಠ ಸ್ಥಾನದಲ್ಲಿ ಗುರು ಪುಷ್ಯ ಯೋಗ ಸಂಭವಿಸುವುದರಿಂದ ಆರೋಗ್ಯ ಸುಧಾರಿಸುತ್ತದೆ, ಸಾಲ ತೀರಿಸುವ ಯೋಗ, ಲೋನ್ ಮಂಜೂರಾತಿ, ಕೆಲಸ ಕಾರ್ಯಗಳಲ್ಲಿ ಶುಭ, ವಿದೇಶ ಪ್ರಯಾಣ, ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಶಿಸ್ತು ಕಾಪಾಡಿಕೊಳ್ಳುವುದು ಮುಖ್ಯ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮೀನ ರಾಶಿ:

ಪಂಚಮ ಸ್ಥಾನದಲ್ಲಿ ಈ ಯೋಗವು ಶಿಕ್ಷಣ ಕ್ಷೇತ್ರದಲ್ಲಿ ರಾರಾಜಿಸಲು, ಮಕ್ಕಳಿಂದ ಶುಭ, ರೈತರು ಮತ್ತು ವ್ಯಾಪಾರಸ್ಥರಿಗೆ ಲಾಭ, ಅಪವಾದಗಳಿಂದ ಮುಕ್ತಿ, ಶುಭ ಕಾರ್ಯಗಳಲ್ಲಿ ಭಾಗವಹಿಸುವಿಕೆ, ಮನೆ ಅಥವಾ ಸೈಟ್ ಖರೀದಿ ಯೋಗವನ್ನು ನೀಡುತ್ತದೆ. ಶತ್ರುಗಳು ಮಿತ್ರರಾಗುವ ಸಾಧ್ಯತೆಯಿದೆ.

ಇತರ ರಾಶಿಗಳಿಗೂ ಲಾಭ:

ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ ಮತ್ತು ಕನ್ಯಾ ರಾಶಿಗಳಿಗೆ ಈ ಯೋಗವು ನೇರವಾಗಿ ಮಹಾ ಶುಭ ಫಲಗಳನ್ನು ನೀಡದಿದ್ದರೂ, ಧರ್ಮ ಮಾರ್ಗದಲ್ಲಿ, ಶಿಸ್ತಿನಿಂದ ನಡೆದುಕೊಂಡರೆ ಅವರಿಗೂ ಅದೃಷ್ಟ ಮತ್ತು ಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಎಲ್ಲಾ ಜ್ಯೋತಿಷ್ಯ ಫಲಿತಾಂಶಗಳು ನಂಬಿಕೆ ಮತ್ತು ಶಾಸ್ತ್ರ ಆಧಾರಿತವಾಗಿವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಆರ್ಥಿಕತೆ ಶೀಘ್ರದಲ್ಲೇ 420 ಶತಕೋಟಿ ಡಾಲರ್‌ಗೆ! – Kannada News | Bengaluru Economic Master Plan Aims USD 420 Billion GDP By 2037

ಬೆಂಗಳೂರು, ಜೂನ್ 18: ನಗರದ ಆರ್ಥಿಕತೆಯನ್ನು ಅಭಿವೃದ್ಧಿ ಮಾರ್ಗಸೂಚಿ (ರೋಡ್‌ಮ್ಯಾಪ್) ಮೂಲಕ 2037ರ ವೇಳೆಗೆ 390 ರಿಂದ 420 ಶತಕೋಟಿ ಡಾಲರ್‌ಗೆ ಹೆಚ್ಚಿಸಲು ಮತ್ತು ಹೆಚ್ಚುವರಿಯಾಗಿ 25 ರಿಂದ 30 ಲಕ್ಷ ಉದ್ಯೋಗಗಳನ್ನು (Jobs) ಸೃಷ್ಟಿಸಲು ಅವಕಾಶವಿದೆ ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ.

ಮುಖ್ಯಾಂಶಗಳು

  • 2037ರ ವೇಳೆಗೆ ಬೆಂಗಳೂರು ಆರ್ಥಿಕತೆ 420 ಶತಕೋಟಿ ಡಾಲರ್‌ಗೆ ಏರಿಕೆಯಾಗಲಿದೆ.
  • ಮುಂದಿನ ದಿನಗಳಲ್ಲಿ ಬಿಎಂಆರ್ ವಲಯದಲ್ಲಿ 30 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ.
  • ಸಂಚಾರ ದಟ್ಟಣೆ ನಿಯಂತ್ರಣಕ್ಕೆ 287 ಕಿಮೀ ವರ್ತುಲ ರೈಲು ಬರಲಿದೆ.

ಪ್ರಸ್ತುತ ಬಿಎಂಆರ್‌ನ ಆರ್ಥಿಕ ಮೌಲ್ಯ 149 ಶತಕೋಟಿ ಡಾಲರ್ ಆಗಿದ್ದು, ಇದು ಕರ್ನಾಟಕದ ಒಟ್ಟು ರಾಜ್ಯ ದೇಶೀಯ ಉತ್ಪನ್ನಕ್ಕೆ (GSDP) ಶೇ 43ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ. ಬೆಂಗಳೂರು ಮಹಾನಗರ ಪ್ರದೇಶದ ತಲಾವಾರು ಜಿಡಿಪಿ ಸುಮಾರು 9,700 ಡಾಲರ್ ಅಂದರೆ ಅಂದಾಜು 9.15 ಲಕ್ಷ ರೂ. ಆಗಿದ್ದು, ಇದು ಕರ್ನಾಟಕದ ಸರಾಸರಿಗಿಂತ (5,000 ಡಾಲರ್) 1.9 ಪಟ್ಟು ಮತ್ತು ಭಾರತದ ರಾಷ್ಟ್ರೀಯ ಸರಾಸರಿಗಿಂತ (2,500 ಡಾಲರ್) ನಾಲ್ಕು ಪಟ್ಟು ಹೆಚ್ಚಾಗಿದೆ.

ಐಎಸ್‌ಇಜಿ (ISEG) ಫೌಂಡೇಶನ್ ಸಿದ್ಧಪಡಿಸಿರುವ ಆರ್ಥಿಕ ಮಹಾಯೋಜನೆ

ಬೆಂಗಳೂರಿನ ಕೇಂದ್ರ ಭಾಗದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನಗರದ ಒಳಗಡೆ ಮತ್ತು ಹೊರವಲಯದಲ್ಲಿ ಕೈಗಾರಿಕೆ, ಐಟಿ/ಬಿಟಿ, ಸಂಶೋಧನೆ ಮತ್ತು ಲಾಜಿಸ್ಟಿಕ್ಸ್ ಒಳಗೊಂಡ ಹೊಸ ‘ಬೆಳವಣಿಗೆ ಕೇಂದ್ರಗಳನ್ನು’ (Growth Centres) ಸ್ಥಾಪಿಸಲು ಯೋಜಿಸಲಾಗಿದೆ.

ಸಂಚಾರ ದಟ್ಟಣೆ ನಿಯಂತ್ರಿಸಲು 287 ಕಿಲೋಮೀಟರ್ ಉದ್ದದ ವರ್ತುಲ ರೈಲು ಜಾಲ (Circular Rail Network), 400-500 ಕಿಲೋಮೀಟರ್ ಹೆಚ್ಚುವರಿ ಮೆಟ್ರೋ ಜಾಲ, 4 ಹೊಸ ಪ್ರಾದೇಶಿಕ ಕ್ಷಿಪ್ರ ಸಾರಿಗೆ (RRTS) ಕಾರಿಡಾರ್‌ಗಳು ಮತ್ತು ಉಪನಗರ ರೈಲು ಜಾಲದ ವಿಸ್ತರಣೆಯನ್ನು ಈ ಯೋಜನೆ ಒಳಗೊಂಡಿದೆ. ಈ ಅಂತಿಮ ಮಾಸ್ಟರ್ ಪ್ಲಾನ್ ವರದಿಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಲಾಗುವುದು ಎಂದು ಹೇಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯತ್ನಾಳ್ ಖಂಡಿತಾ ನನಗೇ ವೋಟ್ ಹಾಕ್ತಾರೆ!: ಉಚ್ಚಾಟಿತ ಶಾಸಕನ ಪತ್ರದ ಸೀಕ್ರೆಟ್ ಬಿಚ್ಚಿಟ್ಟ ಲಿಂಗರಾಜ್ ಪಾಟೀಲ್ – Kannada News | Lingaraj Patil: “I Will Win the Election,” Says Confident BJP Nominee

ಬೆಂಗಳೂರು, ಜೂ.18: ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಲಿಂಗರಾಜ್ ಪಾಟೀಲ್, ತಮ್ಮ ಗೆಲುವಿನ ಬಗ್ಗೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟಿವಿ9 ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, “ನೂರಕ್ಕೆ ನೂರು ಪ್ರತಿಶತ ನಾನು ಗೆದ್ದು ಬರುತ್ತೇನೆ” ಎಂದು ದೃಢವಾಗಿ ಹೇಳಿದ್ದಾರೆ. ಈ ಹಿಂದೆ ಎರಡು ಬಾರಿ ವಿಧಾನ ಪರಿಷತ್ ಟಿಕೆಟ್ ಕಳೆದುಕೊಂಡಿದ್ದ ಲಿಂಗರಾಜ್ ಪಾಟೀಲ್, ಈ ಬಾರಿ ಪಕ್ಷ ತೀರ್ಮಾನ ಕೈಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. “ನಾನು ಪಕ್ಷಕ್ಕಾಗಿ ಕೆಲಸ ಮಾಡಿದ್ದು ಎಲ್ಲರಿಗೂ ತಿಳಿದಿದೆ. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ನನಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ಪಕ್ಷದ ತೀರ್ಮಾನದಂತೆ ಮತದಾರರು ಮತ ಹಾಕುತ್ತಾರೆ” ಎಂದು ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾವು ಮತ್ತು ರಘು ಅವರು ಜೊತೆಯಾಗಿ ಗೆಲ್ಲುವುದಾಗಿ ಅವರು ತಿಳಿಸಿದ್ದಾರೆ. ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮಗೆ ಮತ ಹಾಕುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿರುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಲಿಂಗರಾಜ್ ಪಾಟೀಲ್, ಯತ್ನಾಳ್ ಅವರು ತಮ್ಮ ಆಪ್ತರು ಮತ್ತು ಪಕ್ಷದ ನಾಯಕರು ಅವರೊಂದಿಗೆ ಮಾತನಾಡಿದ್ದಾರೆ. ಹೀಗಾಗಿ, ಅವರು ಖಂಡಿತವಾಗಿಯೂ ತಮ್ಮ ಪರವಾಗಿ ಮತ ಚಲಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿಮ್ಲಾ ಅಪಘಾತ: ಕಂದಕಕ್ಕೆ ಉರುಳಿದ ಬೊಲೆರೊ, ಏಳು ಮಂದಿ ಸಾವು – Kannada News | Himachal Road Tragedies: 7 Dead in Bolero Crash, Lack of Crash Barriers Blamed

ಶಿಮ್ಲಾ, ಜೂನ್ 18: ಶಿಮ್ಲಾದ ಮಸ್ರುಂದ್-ಹಮಲ್ ರಸ್ತೆಯಲ್ಲಿ ವಾಹನವೊಂದು ಕಂದಕಕ್ಕೆ ಉರುಳಿದ ಪರಿಣಾಮ ಏಳು ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಬುಧವಾರ ಮಧ್ಯರಾತ್ರಿ 2 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ವಾಹನದ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ  ಈ ಅಪಘಾತ(Accident) ಸಂಭವಿಸಿದೆ.
ಮೃತಪಟ್ಟವರೆಲ್ಲರೂ ಕುತೇಡ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಲ್ ಗ್ರಾಮದ ನಿವಾಸಿಗಳಾಗಿದ್ದಾರೆ. ಇವರೆಲ್ಲರೂ ಕಾಕ್ರೋಧಾ ಗ್ರಾಮದಲ್ಲಿ ನಡೆದ ಸಮಾರಂಭ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ.

ಅಪಘಾತದ ತೀವ್ರತೆಗೆ ಬೊಲೆರೊ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಮೂವರು ಮಹಿಳೆಯರು ಮತ್ತು ಮೂವರು ಪುರುಷರು ಸೇರಿ ಒಟ್ಟು ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು, ಜಿಲ್ಲಾಡಳಿತ ಅಧಿಕಾರಿಗಳು ಮತ್ತು ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಆದರೆ, ದಟ್ಟ ಕತ್ತಲೆ ಮತ್ತು ಕಡಿದಾದ ಗುಡ್ಡಗಾಡು ಪ್ರದೇಶವಾಗಿದ್ದರಿಂದ ಕಂದಕಕ್ಕೆ ಇಳಿದು ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ತಂಡಗಳು ತೀವ್ರ ಸವಾಲು ಎದುರಿಸಬೇಕಾಯಿತು.

ಅಪಘಾತ ನಡೆದ ರಸ್ತೆಯಲ್ಲಿ ಸುರಕ್ಷತಾ ತಡೆಗೋಡೆಗಳು ಇಲ್ಲದಿರುವುದೇ ಈ ಭೀಕರ ದುರಂತಕ್ಕೆ ಕಾರಣ ಎಂದು ಸ್ಥಳೀಯ ನಿವಾಸಿಗಳು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ತಡೆಗೋಡೆಗಳಿದ್ದಿದ್ದರೆ ಇಷ್ಟೊಂದು ದೊಡ್ಡ ಸಾವು-ನೋವು ಸಂಭವಿಸುತ್ತಿರಲಿಲ್ಲ ಎಂದು ಅವರು ಆರೋಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ದುಬೈ ರಸ್ತೆ ಅಪಘಾತ ಸಂತ್ರಸ್ತರಿಗೆ ನೆರವಾದ ಅನಿವಾಸಿ ಭಾರತೀಯ ಉದ್ಯಮಿ: 2.6 ಕೋಟಿ ರೂ. ನೆರವು ಘೋಷಿಸಿದ ಡಾ. ಶಂಶೀರ್ ವಯಾಲಿಲ್

ಚಂಬಾದಲ್ಲಿ ನಡೆದ ಮತ್ತೊಂದು ಅಪಘಾತ: ಇಬ್ಬರು ಸಾವು
ಇದಕ್ಕೂ ಒಂದು ದಿನ ಮುಂಚೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ (NH-154A) ಬನಿಖೇತ್-ಚಂಬಾ ರಸ್ತೆಯ ಅಣೆಕಟ್ಟು ವ್ಯೂ ಪಾಯಿಂಟ್ ಬಳಿ ಮತ್ತೊಂದು ಕಾರು ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಕಾರು ಮೇಲಿನ ರಸ್ತೆಯಿಂದ ಕೆಳಗಿನ ಚೋಹ್ರಾ ಅಣೆಕಟ್ಟು ರಸ್ತೆಯ ಕಂದಕಕ್ಕೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: 25 ಸಾವಿರ ರೂ ಸಂಬಳದ ಉದ್ಯೋಗ ತೊರೆದು ಕ್ಯಾಬ್ ಚಾಲಕನಾದ ಯುವಕ – Kannada News | Businessman shocked to hear the earnings of a young man who quit his Rs. 25,000 a day job and became a cab driver

ಈಗಿನ ಯುವಕ ಯುವತಿಯರು ಸ್ವಂತ ಉದ್ಯಮದತ್ತ ಮುಖ ಮಾಡುತ್ತಿದ್ದಾರೆ. ಯಾರ ಕೈಕೆಳಗೂ ಕೆಲಸ ಮಾಡಲು ಇಷ್ಟ ಪಡದೇ ಸ್ವಂತವಾಗಿ ಬ್ಯುಸಿನೆಸ್ (business) ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆಯಂತಿದ್ದಾರೆ ಈ ಯುವಕ. 25 ಸಾವಿರ ರೂಪಾಯಿ ಸಂಬಳದ ಉದ್ಯೋಗ ತೊರೆದು ಕ್ಯಾಬ್ ಡ್ರೈವರ್ (Cab driver) ಆಗಿದ್ದು ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾನೆ. ಈ ಯುವಕನ ಬಗ್ಗೆ ಉದ್ಯಮಿ ಆಕಾಶ್ ಗುಪ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇವಿಒಎಮ್ ಕಂಪನಿಯ ಸಂಸ್ಥಾಪಕ ಹಾಗೂ ಉದ್ಯಮಿ ಆಕಾಶ್ ಗುಪ್ತಾ (Akash Gupta) ಈ ಕ್ಯಾಬ್ ಚಾಲಕನೊಂದಿಗಿನ ಸಂಭಾಷಣೆಯ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಆಫೀಸ್ ಕೆಲಸ ತೊರೆದು ಕ್ಯಾಬ್ ಚಾಲಕನಾಗಿರುವುದನ್ನು ಕಾಣಬಹುದು. ಆಫೀಸ್ ಕೆಲಸ ಬಿಟ್ಟು ಕ್ಯಾಬ್ ಚಾಲಕ ವೃತ್ತಿಯನ್ನು ಅತ್ಯದ್ಭುತವಾಗಿ ನಿರ್ವಹಿಸುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್ ನಲ್ಲಿ ಈಗಿನ ಯುವಕ ಯುವತಿಯರು ಸಂಬಳಕ್ಕಿಂತ ಹೊಂದಿಕೊಳ್ಳುವ ಉದ್ಯೋಗಗಳನ್ನು ಆಯ್ಕೆ ಮಾಡುತ್ತಿದ್ದಾರೆ.. ಆದರೆ ನಾನು ಮಾಡುತ್ತಿದ್ದ ಆಫೀಸ್ ಕೆಲಸದಲ್ಲಿ ಸಂಬಳ ಕಡಿಮೆಯಿತ್ತು. ಇದು ತನ್ನ ಖರ್ಚಿಗೆ ಸಾಲುತ್ತಿರಲಿಲ್ಲ ಎಂದು ಹೇಳುತ್ತಿರುವುದನ್ನು ಕಾಣಬಹುದು.

ನನ್ನ ತಿಂಗಳ ಸಂಬಳ 25,000 ರೂ. ಮಾಸಿಕ ಸಂಬಳದೊಂದಿಗೆ ಕಚೇರಿ ಕೆಲಸ ಮಾಡುತ್ತಿದ್ದೆ. ಆದರೆ ಈ ಕ್ಯಾಬ್ ಡ್ರೈವರ್ ಆದ ಬಳಿಕ ತಿಂಗಳಿಗೆ 1 ಲಕ್ಷ ರೂಪಾಯಿ ಸಂಪಾದಿಸುತ್ತೇನೆ. ಯಾವಾಗ ಕೆಲಸ ಮಾಡಬೇಕು, ಎಷ್ಟು ಗಂಟೆ ಮಾಡ ಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ ಎಂದು ಯುವಕ ಹೇಳಿಕೊಂಡಿದ್ದಾನೆ. ಈ ಯುವಕನ ಆತ್ಮವಿಶ್ವಾಸ ತುಂಬಿದ ಮಾತು ಕೇಳಿದ ಉದ್ಯಮಿ ಆತನನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಕನಸನ್ನು ಬೆನ್ನಟ್ಟಿ ಹೋದ ವ್ಯಕ್ತಿ; ಇಂದು ಏರ್ ಇಂಡಿಯಾದಲ್ಲಿ ಸ್ವಚ್ಛತಾ ಸಿಬ್ಬಂದಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಬೇರೆಯವರ ಕೈ ಕೆಳಗೆ ಕೆಲಸ ಮಾಡೋದಕ್ಕಿಂತ ಸ್ವಂತ ಉದ್ಯಮವೇ ಬೆಸ್ಟ್ ಎಂದಿದ್ದಾರೆ. ಮತ್ತೊಬ್ಬರು, ಈ ಯುವಕನ ಆತ್ಮವಿಶ್ವಾಸದ ಮಾತು ಕೇಳಿ ಖುಷಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನಿಮ್ಮ ಮಾತು, ನಿಮ್ಮ ಧೈರ್ಯ ಇಂದಿನ ಯುವ ಪೀಳಿಗೆಗೆ ಪ್ರೇರಣಾದಾಯಕ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾಖಲೆ ಬರೆದ ಮಾದಪ್ಪನ ಹುಂಡಿ: ಕೇವಲ 27 ದಿನದಲ್ಲಿ ಬರೋಬ್ಬರಿ 2.73 ಕೋಟಿ ಸಂಗ್ರಹ! – Kannada News | Male Mahadeshwara Betta Hundi Collection Records Rs 2.73 Crore in Just 27 Days

ಚಾಮರಾಜನಗರ, ಜೂನ್ 18: ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಮತ್ತೆ ಕೋಟಿ ಕೋಟಿ ಹಣ ಸಂಗ್ರಹವಾಗಿದೆ. ವೀಕೆಂಡ್ ಹಾಗೂ ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಕ್ತರ ಹರಿವು ಹೆಚ್ಚಾಗಿದ್ದು, ಕೇವಲ 27 ದಿನಗಳಲ್ಲಿ ದಾಖಲೆಯ 2,73,57,105 ರೂಪಾಯಿ ನಗದು ಸಂಗ್ರಹವಾಗಿದೆ.

ಹಣದ ಜೊತೆಗೆ 44 ಗ್ರಾಂ ಚಿನ್ನ ಹಾಗೂ 977 ಗ್ರಾಂ ಬೆಳ್ಳಿಯನ್ನು ಭಕ್ತರು ಕಾಣಿಕೆಯಾಗಿ ಸಮರ್ಪಿಸಿದ್ದಾರೆ. ವಿಶೇಷವೆಂದರೆ, ಎಣಿಕೆ ವೇಳೆ ಏಳು ವಿದೇಶಿ ನೋಟುಗಳು ಹಾಗೂ ನಿಷೇಧಿತ ಹತ್ತು 2,000 ಮುಖಬೆಲೆಯ ಹಳೆಯ ನೋಟುಗಳು ಪತ್ತೆಯಾಗಿವೆ. ಮಲೆ ಮಹದೇಶ್ವರ ಪ್ರಾಧಿಕಾರದ ಸಿಬ್ಬಂದಿ ಸಮ್ಮುಖದಲ್ಲಿ ಈ ಬೃಹತ್ ಮೊತ್ತದ ಹುಂಡಿ ಎಣಿಕೆ ಕಾರ್ಯ ಯಶಸ್ವಿಯಾಗಿ ಜರುಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ಯಾರಿಸ್‌ಗೆ ಪ್ರಧಾನಿ ಮೋದಿ ಆಗಮನ: ಜಾಗತಿಕ ಪ್ರಗತಿಗೆ ಭಾರತ-ಫ್ರಾನ್ಸ್ ಸಹಭಾಗಿತ್ವ ಅತ್ಯಗತ್ಯ – Kannada News | PM Modi Paris: India France Partnership Essential for Global Progress Post G7

ಪ್ಯಾರಿಸ್, ಜೂನ್ 18: ಜಿ7 ಶೃಂಗಸಭೆ ಮುಗಿಸಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ ತಲುಪಿದ್ದಾರೆ. ಪ್ಯಾರಿಸ್‌ನಲ್ಲಿ ಅವರಿಗೆ ಭಾರತೀಯರಿಂದ ಅದ್ಧೂರಿ ಸ್ವಾಗತ ದೊರೆತಿದೆ. ಈ ವೇಳೆ ಮಾತನಾಡಿದ ಅವರು, ನಮ್ಮ ಗ್ರಹದ ಒಟ್ಟಾರೆ ಪ್ರಗತಿಗೆ ಭಾರತ ಮತ್ತು ಫ್ರಾನ್ಸ್ ನಡುವಿನ ಪಾಲುದಾರಿಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.

ಫ್ರೆಂಚ್ ಕಮ್ಯೂನ್ ಎವಿಯನ್-ಲೆಸ್-ಬೈನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಅತಿಥಿ ರಾಷ್ಟ್ರವಾಗಿ ಭಾರತ ಭಾಗವಹಿಸಿತ್ತು. ಅಲ್ಲಿನ ಕಾರ್ಯಕ್ರಮಗಳನ್ನು ಮುಗಿಸಿ ಮೋದಿ ಪ್ಯಾರಿಸ್‌ಗೆ ಆಗಮಿಸಿದ್ದಾರೆ.
ಪ್ಯಾರಿಸ್‌ನಲ್ಲಿ ಪ್ರಧಾನಿ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಯುರೋಪಿನ ಅತಿದೊಡ್ಡ ತಂತ್ರಜ್ಞಾನ ಮೇಳವಾದ ‘ವಿವಾಟೆಕ್ 2026’ ನಲ್ಲಿ ಭಾಗವಹಿಸಲಿದ್ದಾರೆ.

ಜಾಗತಿಕ ಸಮೃದ್ಧಿಯನ್ನು ಸಾಧಿಸಲು ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ (ಗ್ಲೋಬಲ್ ಸೌತ್) ನಿಕಟ ಸಂಬಂಧ ಹೊಂದುವುದು ಅಗತ್ಯ ಎಂದು ಮೋದಿ ಒತ್ತಿಹೇಳಿದರು. ಜಿ7 ದೇಶಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಬಲವನ್ನು ಒಟ್ಟುಗೂಡಿಸಿ ವ್ಯಾಪಾರ ಹಾಗೂ ಸಂಪರ್ಕವನ್ನು ಹೆಚ್ಚಿಸುವ ಹೊಸ ಚೌಕಟ್ಟನ್ನು ಮೋದಿ ಪ್ರಸ್ತಾಪಿಸಿದರು.

ಮತ್ತಷ್ಟು ಓದಿ: ಮೋದಿ ರಾಜತಾಂತ್ರಿಕತೆ ಯಶಸ್ವಿ; ಬ್ರಿಟನ್, ಕೆನಡಾ ಮತ್ತು ಐರೋಪ್ಯ ಒಕ್ಕೂಟದಿಂದ ಭಾರತಕ್ಕೆ ಭಾರಿ ಆರ್ಥಿಕ ಲಾಭ!

ಶೃಂಗಸಭೆಯ ನಡುವೆ ಪ್ರಧಾನಿ ಮೋದಿ ಅವರು ವಿಶ್ವದ ಪ್ರಮುಖ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಮತ್ತು ಯುಎಇ ಅಧ್ಯಕ್ಷರು

ಉಭಯ ದೇಶಗಳು ರಕ್ಷಣೆ, ಭದ್ರತೆ, ಬಾಹ್ಯಾಕಾಶ, ನಾಗರಿಕ ಪರಮಾಣು ಶಕ್ತಿ ಮತ್ತು ಹವಾಮಾನ ಬದಲಾವಣೆಯ ತಡೆಗೆ ಸಂಬಂಧಿಸಿದಂತೆ ಬಲವಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ. ಪ್ರಸ್ತುತ ಫ್ರಾನ್ಸ್‌ನಲ್ಲಿ ಸುಮಾರು 1.19 ಲಕ್ಷಕ್ಕೂ ಅಧಿಕ ಭಾರತೀಯರು ವಾಸಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link