Category Archives: Blog

Your blog category

ಕರ್ನಾಟಕದಲ್ಲಷ್ಟೇ ಅಲ್ಲ ಕೇರಳ, ತಮಿಳುನಾಡಲ್ಲೂ ನಡೆದಿದೆ ರಾಜ್ಯಪಾಲರು VS ಸರ್ಕಾರ ಸಂಘರ್ಷ! ಅಲ್ಲಿ ಏನೇನಾಗಿತ್ತು? ಇಲ್ಲಿದೆ ನೋಡಿ – Kannada News | Not Just Karnataka: Governor vs Government Clashes in Kerala and Tamil Nadu Explained

ಬೆಂಗಳೂರು, ಜನವರಿ 21: ಕರ್ನಾಟಕ ವಿಶೇಷ ಅಧಿವೇಶನಕ್ಕೆ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿನ 11 ಅಂಶಗಳನ್ನು ಓದಲು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ನಿರಾಕರಿಸಿದ್ದಾರೆ. ಇದು ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಇದರೊಂದಿಗೆ, ರಾಜ್ಯ ಸರ್ಕಾರಗಳು ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ದಕ್ಷಿಣ ಭಾರತದಲ್ಲಿ ತೀವ್ರಗೊಂಡಂತಾಗಿದೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡುಳಲ್ಲಿಯೂ ಇಂತಹ ಪ್ರಕರಣ ವರದಿಯಾಗಿತ್ತು. ಕಾನೂನು ತಜ್ಞರ ಪ್ರಕಾರ, ರಾಜ್ಯಪಾಲರ ಭಾಷಣವಿಲ್ಲದೆ ವಿಧಾನಸಭೆ ಕಲಾಪಗಳನ್ನು ನಡೆಸಲು ಸಾಧ್ಯವಿಲ್ಲ.

ತಮಿಳುನಾಡಿನಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ರಾಷ್ಟ್ರಗೀತೆಗೆ ಅಗೌರವ ತೋರಲಾಗಿದೆ ಎಂದು ಭಾಷಣ ಮಾಡದೆ ಸದನದಿಂದ ಹೊರ ನಡೆದಿದ್ದರು. ಭಾಷಣದಲ್ಲಿ ಆಧಾರರಹಿತ ಹೇಳಿಕೆಗಳಿವೆ ಎಂದು ಕೂಡ ಆರೋಪಿಸಿದ್ದರು. ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯಪಾಲರು ಭಾಷಣದ ಕೆಲವು ಅಂಶಗಳನ್ನು ಕೈಬಿಟ್ಟು ಓದಿದ್ದಾರೆ ಎಂದು ದೂರಿದ್ದರು. ಸಂವಿಧಾನದ 176ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರು ಸರ್ಕಾರ ನೀಡಿದ ಭಾಷಣವನ್ನು ಓದಬೇಕು ಎಂದು ಸ್ಪಷ್ಟಪಡಿಸಲಾಗಿದೆ. 1966ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಇದೇ ರೀತಿಯ ಪ್ರಕರಣದಲ್ಲಿ ಕೋಲ್ಕತ್ತಾ ಹೈಕೋರ್ಟ್, ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿರಾಕರಿಸುವಂತಿಲ್ಲ ಎಂದು ತೀರ್ಪು ನೀಡಿತ್ತು ಎಂಬುದು ಗಮನಾರ್ಹ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವರ್ಲ್ಡ್ ರೆಕಾರ್ಡ್… ಟೀಮ್ ಇಂಡಿಯಾದ ಇನ್ನೂರರ ನಾಗಾಲೋಟ

Source link

ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಮಾತ್ರ ನಾನು ನಟ ಎಂದ ರಾಮ್ ಚರಣ್ – Kannada News | Ram Charan on why 8 AM 6 PM Actor’s Mindset and Why Legacy is an Advantage

ಪ್ರಪಂಚದಾದ್ಯಂತ ಮನ್ನಣೆ ಗಳಿಸಿರುವ ರಾಮ್ ಚರಣ್ (Ram Charan) ಈಗ ಓಪನ್ ಆಗಿ ಮಾತನಾಡಿದ್ದಾರೆ. ಅನೇಕ ನಾಯಕರು ತಮ್ಮ ಕುಟುಂಬದ ಪರಂಪರೆ ಒತ್ತಡ ಎಂದರೂ, ರಾಮ್ ಚರಣ್ ಮಾತ್ರ ಅನುಕೂಲ ಎನ್ನುತ್ತಿದ್ದಾರೆ. ಆಸ್ಕರ್ ಮಟ್ಟವನ್ನು ತಲುಪಿದ ನಂತರವೂ ಅವರು ತಮ್ಮನ್ನು ತಾವು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ಚರಣ್ ತಮ್ಮ ವೃತ್ತಿಜೀವನ ಮತ್ತು ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ರಾಮ್ ಚರಣ್, ಮೆಗಾಸ್ಟಾರ್ ಚಿರಂಜೀವಿ ಅವರ ಮಗನಾಗಿ ಹುಟ್ಟಿದ್ದರಿಂದ ಆದ ಪ್ರಯೋಜನಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ‘ಸಿನಿಮಾ ಕುಟುಂಬದಿಂದ ಬಂದಿರುವುದು ಒಂದು ಅದ್ಭುತ ಅವಕಾಶ. ಮನೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಜನರಿದ್ದಾಗ, ನೀವು ವಿಷಯಗಳನ್ನು ಬೇಗನೆ ಅರ್ಥಮಾಡಿಕೊಳ್ಳುತ್ತೀರಿ. ಅಂತಹ ವಾತಾವರಣದಲ್ಲಿ ಬೆಳೆದವರು ನಟನಾ ಶಾಲೆಗೆ ಹೋಗಿ ಹೊಸ ವಿಷಯಗಳನ್ನು ಕಲಿಯುವವರಿಗಿಂತ ಹೆಚ್ಚು ವೇಗವಾಗಿ ಕಲಿಯುತ್ತಾರೆ’ ಎಂದು ಚರಣ್ ಹೇಳಿದರು. ಪರಂಪರೆಯು ತನ್ನ ಮೇಲೆ ಹೊರೆಯಾಗಿದೆ ಎಂದು ತಾನು ಎಂದಿಗೂ ಭಾವಿಸಲಿಲ್ಲ, ಆದರೆ ಅದನ್ನು ಒಂದು ಅವಕಾಶವಾಗಿ ನೋಡಿದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಆರಂಭದಲ್ಲಿ ನನಗೆ ಕಷ್ಟವಾಗಲಿಲ್ಲ. ಆದರೆ ಪ್ರೇಕ್ಷಕರು ನನ್ನನ್ನು ನಟನಾಗಿ ಸ್ವೀಕರಿಸುವುದು ಕಷ್ಟಕರವಾಗಬಹುದು. ಏಕೆಂದರೆ ಅವರ ನಿರೀಕ್ಷೆಗಳು ತುಂಬಾ ಹೆಚ್ಚಿರುತ್ತವೆ. ಆದರೆ ಕಾಲಾನಂತರದಲ್ಲಿ, ನಾವು ಮಾಡುವ ಕೆಲಸದ ಮೂಲಕ ಅವರ ಅಭಿಪ್ರಾಯಗಳು ಬದಲಾಗುತ್ತವೆ ಎಂದು ನಾನು ನಂಬುತ್ತೇನೆ’ ಎಂದು ಅವರು ಪ್ರಾಮಾಣಿಕವಾಗಿ ಹೇಳಿದರು.

‘ನಾನು ನನ್ನನ್ನು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ. ನಾನು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮಾತ್ರ ನನ್ನ ಕೆಲಸದ ಮೇಲೆ ಗಮನ ಹರಿಸುತ್ತೇನೆ. ಅದು ಮುಗಿದ ನಂತರ, ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ಸಂಪೂರ್ಣವಾಗಿ ಮರೆತುಬಿಡುತ್ತೇನೆ. ಯಶಸ್ಸಿನ ಬಗ್ಗೆ ನಾನು ಹೆಚ್ಚು ಯೋಚಿಸುವುದಿಲ್ಲ’ ಎಂದು ಎಂದು ಚರಣ್ ತಮ್ಮ ಸರಳ ಜೀವನಶೈಲಿಯ ಬಗ್ಗೆ ವಿವರಿಸುತ್ತಾರೆ. ಈ ಅಭ್ಯಾಸವು ಅವರನ್ನು ಯಾವಾಗಲೂ ಶಾಂತವಾಗಿರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜಪಾನ್​​ನಿಂದ ಬಂದು ರಾಮ್ ಚರಣ್​​ಗಾಗಿ ಬಿರಿಯಾನಿ ಮಾಡಿದ ಶೆಫ್: ವಿಶೇಷತೆಯೇನು?

ರಾಮ್ ಚರಣ್ ಪ್ರಸ್ತುತ ತಮ್ಮ ಮುಂದಿನ ಚಿತ್ರ ‘ಪೆದ್ದಿ’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರವು ಮಾರ್ಚ್ 27, 2026 ರಂದು ಬಿಡುಗಡೆಯಾಗಲಿದೆ. ಅವರ ಮುಂದಿನ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಗಳೂರು, ಮೈಸೂರು ಜನರಿಗೆ ತೃಪ್ತಿದಾಯಕ ಸುದ್ದಿ: ಗಾಳಿಯ ಗುಣಮಟ್ಟದಲ್ಲಿ ಈ ನಗರಗಳು ಬೆಸ್ಟ್​ – Kannada News | Karnataka Air Quality Alert: Winter Fog and Pollution Impact on Major Cities

ಬೆಂಗಳೂರು, ಜ.22: ಬೆಂಗಳೂರು ಹಾಗೂ ಇತರ ಜಿಲ್ಲೆಗಳಲ್ಲಿ ಹವಾಮಾನದ ಬದಲಾವಣೆಯಿಂದ ಗಾಳಿಯ ಮಟ್ಟದಲ್ಲೂ (Air Quality) ಕೂಡ ಬದಲಾವಣೆ ಆಗಿದೆ. ಚಳಿಗಾಲದ ಈ ಸಮಯದಲ್ಲಿ ಗಾಳಿಯ ವೇಗ ಕಡಿಮೆಯಿರುವುದರಿಂದ ಮತ್ತು ಮುಂಜಾನೆ ಮಂಜು ಇರುವುದರಿಂದ ಮಾಲಿನ್ಯಕಾರಕ ಕಣಗಳು ಭೂಮಿಗೆ ಹೆಚ್ಚು ಪರಿಣಾಮವನ್ನು ಉಂಟು ಮಾಡುತ್ತದೆ. ಬೆಂಗಳೂರಿನಲ್ಲಿ ವಾಹನ ದಟ್ಟಣೆ ಮತ್ತು ನಿರ್ಮಾಣ ಕಾಮಗಾರಿಗಳಿರುವ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕಡಿಮೆ ಇರಲಿದೆ. ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್​​​ನಲ್ಲಿ ಗಾಳಿಯ ಗುಣಮಟ್ಟ 150 ದಾಟಿದ್ದು, ಇದು ಮಕ್ಕಳಿಗೆ ಹಾಗೂ ಹಿರಿಯರಿಗೆ ಅಪಾಯಕಾರಿ ಎಂದು ಹೇಳಲಾಗದೆ. ಜಿಲ್ಲೆಯ ಇತರ ಭಾಗದಲ್ಲೂ ಕೂಡ ಗಾಳಿಯ ಗುಣಮಟ್ಟ ಕಳಪೆಯಾಗಿದೆ. ಬೆಂಗಳೂರಿನ ಜಯನಗರ ಮತ್ತು ಲಾಲ್‌ಬಾಗ್​​ ಪ್ರದೇಶಗಳಲ್ಲಿ ಹಸಿರು ಹೆಚ್ಚಾಗಿರುವುದರಿಂದ ಇಲ್ಲಿ ಗಾಳಿಯ ಗುಣಮಟ್ಟ ಸಾಧಾರಣವಾಗಿರಲಿದೆ. ಇಲ್ಲಿ 85 – 95ರಷ್ಟು ಗಾಳಿಯ ಮಟ್ಟದ ಇರಲಿದೆ.

ಬೆಂಗಳೂರಿನಲ್ಲಿ ಇಂದು ಗಾಳಿಯ ಗುಣಮಟ್ಟ 110ರಿಂದ 135 ಇರಲಿದೆ. ಇದು ಸಾಧಾರಣ ಎಂದು ಹೇಳಲಾಗಿದೆ. ಮೈಸೂರು 65ರಿಂದ 80 ತೃಪ್ತಿದಾಯಕ ಗಾಳಿಮಟ್ಟವನ್ನು ಹೊಂದಿದೆ. ಇಲ್ಲಿನ ವಾತಾರಣ ಕೂಡ ತುಂಬಾ ಉತ್ತಮವಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಜನ ದಟ್ಟಣೆ ಹಾಗೂ ಕಾಮಗಾರಿಗಳು ಕಾಣರದಿಂದ ಗಾಳಿಯ ಗುಣಮಟ್ಟ 90ರಿಂದ 115ಕ್ಕೆ ತಲುಪಿದೆ. ಮಂಗಳೂರಿನಲ್ಲೂ ವಾತಾವರಣ ಉತ್ತಮವಾಗಿದ್ದು, ಗಾಳಿಯ ಗುಣಮಟ್ಟ 55ರಿಂದ 70 ಇದ್ದು, ತೃಪ್ತಿದಾಯಕವಾಗಿದೆ ಎಂದು ಹೇಳಲಾಗಿದೆ. ಕಲಬುರಗಿಯಲ್ಲಿ ಗಾಳಿಯ ಗುಣಮಟ್ಟ 105ರಿಂದ 120 ಇರಲಿದೆ ಎಂದು ಹೇಳಲಾಗದೆ.

ಹಿರಿಯ ನಾಗರಿಕರು ಮತ್ತು ಉಸಿರಾಟದ ಸಮಸ್ಯೆ ಇರುವವರು ದಟ್ಟ ಮಂಜು ಮತ್ತು ಮಾಲಿನ್ಯ ಪ್ರದೇಶದಲ್ಲಿ ಓಡಾಡುವದನ್ನು ತಪ್ಪಿಸಿ, ಹಾಗೂ ಸ್ವಲ್ಪ ಬಿಸಿಲು ಬಂದ ನಂತರ ಹೊರಗೆ ಹೋಗುವುದು ಉತ್ತಮ ಎಂದು ತಜ್ಞರು ಹೇಳಿದ್ದಾರೆ. ವಾಹನ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದನ್ನು ಮರೆಯಬಾರದು, ಕಳಪೆ ಗಾಳಿಯ ಗುಣಮಟ್ಟ ಇರುವ ಪ್ರದೇಶದಲ್ಲಿ ಮಕ್ಕಳನ್ನು ಬಿಡಬೇಡಿ, ಹಾಗೂ ಸ್ಕೂಲ್​​​​​ಗೆ ಹೋಗವಾಗ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಈ ಗಾಳಿಯ ಗುಣಮಟ್ಟ ಮುಂದಿನ ಎರಡು ವಾರಗಳವರೆಗೆ ಹೀಗೆ ಇರಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು ಜನರೇ ಗಮನಿಸಿ, ಬೆಳಿಗ್ಗೆ ದಟ್ಟ ಮಂಜು ಇರುವ ಕಾರಣ ವಾಹನ ಸವಾರರೇ ಎಚ್ಚರ

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ

ಬೆಂಗಳೂರು: 127

ಮಂಗಳೂರು: 164

ಮೈಸೂರು: 96

ಬೆಳಗಾವಿ: 114

ಕಲಬುರುಗಿ: 86

ಶಿವಮೊಗ್ಗ: 166

ಹುಬ್ಬಳ್ಳಿ : 161

ಉಡುಪಿ : 160

ವಿಜಯಪುರ : 66

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಿ, ಕೆಲಸ ಸಿಗುತ್ತೆ’; ರೆಹಮಾನ್​​ಗೆ ಕಿವಿಮಾತು ಹೇಳಿದ ಗಾಯಕ – Kannada News | AR Rahman Bollywood Communalism Claim: Anup Jalota Suggests Reconversion

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಮತ್ತು ಗಾಯಕ ಎ.ಆರ್. ರೆಹಮಾನ್ (Ar Rahman) ಇತ್ತೀಚಿನ ಸಂದರ್ಶನವೊಂದರಲ್ಲಿ ಕಳೆದ 8 ವರ್ಷಗಳಿಂದ ಬಾಲಿವುಡ್‌ನಲ್ಲಿ ಕೆಲಸ ಸಿಗುತ್ತಿಲ್ಲ ಎಂದು ಒಪ್ಪಿಕೊಂಡರು. ಬಾಲಿವುಡ್ ಉದ್ಯಮವು ಈಗ ಹೆಚ್ಚು ಕೋಮುವಾದಿಯಾಗಿದೆ ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆಗೆ ವಿವಿಧ ಪ್ರತಿಕ್ರಿಯೆಗಳು ಹೊರಬರಲು ಪ್ರಾರಂಭಿಸಿವೆ. ಧರ್ಮದ ಕಾರಣದಿಂದ ಕೆಲಸ ಸಿಗುತ್ತಿಲ್ಲ ಎಂಬ ದೂರನ್ನು ಹಲವರು ವಿರೋಧಿಸಿದ್ದಾರೆ. ಈಗ, ಭಜನೆಯ ಸಾಮ್ರಾಟ ಎಂಬ ಖ್ಯಾತಿ ಇರೋ ಗಾಯಕ ಅನುಪ್ ಜಲೋಟಾ ನೀಡಿದ ಹೇಳಿಕೆ ಈ ನಿಟ್ಟಿನಲ್ಲಿ ಚರ್ಚೆಗೆ ಬಂದಿದೆ. ಅನುಪ್ ಜಲೋಟಾ ನೇರವಾಗಿ ರೆಹಮಾನ್‌ಗೆ ಮತಾಂತರಗೊಳ್ಳುವಂತೆ ಸಲಹೆ ನೀಡಿದ್ದಾರೆ.

IANSಗೆ ನೀಡಿದ ಸಂದರ್ಶನದಲ್ಲಿ ಅನುಪ್ ಜಲೋಟಾ ಮಾತನಾಡಿದ್ದಾರೆ. ಎ.ಆರ್. ರೆಹಮಾನ್ ತಮ್ಮ ಧರ್ಮದ ಕಾರಣದಿಂದಾಗಿ ಕೆಲಸ ಸಿಗುತ್ತಿಲ್ಲ ಎಂದು ಭಾವಿಸಿದರೆ, ಅವರು ಹಿಂದೂ ಧರ್ಮಕ್ಕೆ ಮತ್ತೆ ಮತಾಂತರಗೊಳ್ಳುವ ಬಗ್ಗೆ ಯೋಚಿಸಬೇಕು’ ಎಂದು ಹೇಳಿದರು. ಇದು ಚರ್ಚೆಯ ಕೇಂದ್ರಬಿಂದು ಆಗಿದೆ.

‘ಅವರು ಮೊದಲು ಹಿಂದೂ ಆಗಿದ್ದರು ಮತ್ತು ನಂತರ ಇಸ್ಲಾಂಗೆ ಮತಾಂತರಗೊಂಡರು ಎಂದು ಹೇಳಿದರು. ಅದಾದ ನಂತರವೂ ಅವರು ಸಂಗೀತ ಜಗತ್ತಿನಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದರು, ಹಣ ಮತ್ತು ಖ್ಯಾತಿಯನ್ನು ಗಳಿಸಿದರು. ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದರು. ಆದರೆ ರೆಹಮಾನ್ ತಮ್ಮ ಧರ್ಮದ ಕಾರಣದಿಂದಾಗಿ ಕೆಲಸದ ಅವಕಾಶಗಳು ಸಿಗುತ್ತಿಲ್ಲ ಎಂದು ಭಾವಿಸಿದರೆ ತಮ್ಮ ಹಳೆಯ ಧರ್ಮಕ್ಕೆ ಮತ್ತೆ ಮತಾಂತರಗೊಳ್ಳುವ ಬಗ್ಗೆ ಯೋಚಿಸಬೇಖಕಿದೆ’ ಎಂದು ಸಲಹೆ ನೀಡಿದರು.

‘ನಮ್ಮ ದೇಶದಲ್ಲಿ ಮುಸ್ಲಿಮರಾಗಿರುವುದರಿಂದ ಅವರಿಗೆ ಕೆಲಸ ಸಿಗುತ್ತಿಲ್ಲ ಎಂದು ಅವರು ನಂಬಿದರೆ, ಅವರು ಮತ್ತೆ ಹಿಂದೂಗಳಾಗಬೇಕು. ಹಿಂದೂಗಳಾಗಿರುವುದರಿಂದ ಅವರಿಗೆ ಮತ್ತೆ ಸಿನಿಮಾ ಸಿಗುತ್ತವೆ ಎಂದು ಅವರು ನಂಬಬೇಕು. ರೆಹಮಾನ್ ಹೇಳಿದ್ದು ಇದನ್ನೇ. ಆದ್ದರಿಂದ ನಾನು ಅವರಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಪ್ರಯತ್ನಿಸಲು ಸಲಹೆ ನೀಡುತ್ತೇನೆ. ನಂತರ ಅವರಿಗೆ ಮತ್ತೆ ಕೆಲಸ ಸಿಗುತ್ತದೆಯೇ ಎಂದು ನೋಡಬೇಕು’ ಎಂದು ಜಲೋಟಾ ಹೇಳಿದರು.

ಇದನ್ನೂ ಓದಿ: ಮುಸ್ಲಿಂ ಎಂಬ ಕಾರಣಕ್ಕೆ ಹಿಂದಿಯಲ್ಲಿ ನನಗೆ ಆಫರ್​​ಗಳು ಬರುತ್ತಿಲ್ಲ; ಎಆರ್ ರೆಹಮಾನ್

‘ಕಳೆದ 8 ವರ್ಷಗಳಲ್ಲಿ ಬಾಲಿವುಡ್​​ನಲ್ಲಿ ಸೃಜನಶೀಲರಲ್ಲದವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಕೆಲವು ಕೋಮು ವಿಷಯಗಳು ಇರಬಹುದು, ಆದರೆ ಯಾರೂ ನನಗೆ ನೇರವಾಗಿ ಏನನ್ನೂ ಹೇಳಿಲ್ಲ. ಕೆಲವು ವಿಷಯಗಳು ನನ್ನ ಕಿವಿಗೆ ಬಿದ್ದಿವೆ’ ಎಂದು ರೆಹಮಾನ್ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಶೇಷ ಅಧಿವೇಶನ: ಸರ್ಕಾರಕ್ಕೆ ಚೆಕ್ ಮೇಟ್ ಇಡ್ತಾರಾ ರಾಜ್ಯಪಾಲರು? ಕುತೂಹಲ ಮೂಡಿಸಿದ ನಡೆ! – Kannada News | Special Assembly Session in Karnataka: Will Governor Checkmate Government Over Speech Dispute? Many options before him

ರಾಜ್ಯಪಾಲ vs ಕರ್ನಾಟಕ ಸರ್ಕಾರ (ಸಾಂದರ್ಭಿಕ ಚಿತ್ರ)

ಬೆಂಗಳೂರು, ಜನವರಿ 22: ಕೇಂದ್ರ ಸರ್ಕಾರ ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿ ವಿಬಿ ಜಿ ರಾಮ್ ಜಿ ಎಂದು ಮರು ನಾಮಕರಣ ಮಾಡಿರುವುದರ ವಿರುದ್ಧ ನಿರ್ಣಯ ಕೈಗೊಳ್ಳಲು ಕರ್ನಾಟಕ (Karnataka) ಕಾಂಗ್ರೆಸ್ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ವಿಶೇಷ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಇದೀಗ ರಾಜ್ಯಪಾಲರು ತಗಾದೆ ತೆಗೆದಿದ್ದಾರೆ. ಭಾಷಣದ 11 ಪ್ಯಾರಾಗಳನ್ನು ಓದಲು ಅವರು ನಿರಾಕರಿಸಿದ್ದಾರೆ. ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕೆಲ ಅಂಶಗಳಿವೆ. ಕೇಂದ್ರ ವಿರುದ್ಧದ ವಿಚಾರ ಕೈಬಿಡಬೇಕೆಂಬುದು ಅವರ ಆಗ್ರಹ. ಆದರೆ, ಸರ್ಕಾರ ಅದನ್ನು ಕೈಬಿಡಲು ತಯಾರಿಲ್ಲ. ಹೀಗಾಗಿ ರಾಜ್ಯಪಾಲರು ಅಧಿವೇಶನಕ್ಕೆ ಗೈರಾಗುತ್ತಾರೆಯೇ ಎಂಬ ಪ್ರಶ್ನೆಯೂ ಮೂಡಿದೆ. ಒಂದು ವೇಳೆ ಅವರು ಗೈರಾದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸರ್ಕಾರ ಸಿದ್ಧತೆ ಮಾಡಿದೆ. ಹೀಗಾಗಿ ಅಧಿವೇಶನಕ್ಕೆ ಹಾಜರಾಗಿಯೇ ಸರ್ಕಾರಕ್ಕೆ ಚೆಕ್ ಮೇಟ್ ಇಡ್ತಾರಾ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಎಂಬ ಪ್ರಶ್ನೆ ಈಗ ಮೂಡಿದೆ.

ಹಾಗಾದರೆ, ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ಮುಂದೆ ಏನೇನು ಆಯ್ಕೆಗಳಿವೆ? ಮಾಹಿತಿ ಇಲ್ಲಿದೆ.

ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು?

ಸರ್ಕಾರ ನೀಡಿರುವ ಭಾಷಣದ ಆಕ್ಷೇಪಾರ್ಹ ಪ್ಯಾರಾಗಳನ್ನು ಬಿಟ್ಟು ಉಳಿದ ಭಾಷಣವನ್ನು ರಾಜ್ಯಪಾಲರು ಓದಬಹುದು. ಆಕ್ಷೇಪಾರ್ಹ ಪ್ಯಾರಾಗಳನ್ನು ಓದುವುದನ್ನು ಕೈಬಿಡುವ ಸಂದರ್ಭದಲ್ಲಿ ‘ಈ ಪ್ಯಾರಾಗಳು ನನ್ನ ಭಾಷಣದ ಭಾಗವಾಗಿಲ್ಲ’ ಎಂದು ಉಚ್ಚರಿಸಬೇಕು. ರಾಜ್ಯಪಾಲರು ಹೀಗೆ ಉಲ್ಲೇಖಿಸಿದರೆ ಆ ಪ್ಯಾರಾಗಳ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶವಿಲ್ಲ. ಇದು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ನಡೆಸುವುದರ ಮೂಲ ಉದ್ದೇಶಕ್ಕೇ ಪೆಟ್ಟು ಕೊಡುತ್ತದೆ. ಹೀಗಾಗಿ ಈ ರೀತಿ ಸರ್ಕಾರಕ್ಕೆ ಚೆಕ್ ಮೇಟ್ ಕೊಡುವ ಆಯ್ಕೆ ರಾಜ್ಯಪಾಲರ ಎದುರಿದೆ.

ರಾಜ್ಯಪಾಲರ ಮುಂದಿರುವ ಇನ್ನಿತರ ಆಯ್ಕೆಗಳೇನು?

ಸಂವಿಧಾನದ ಆರ್ಟಿಕಲ್ 160ರ ಪ್ರಕಾರ ರಾಜ್ಯಪಾಲರಿಗೆ ವಿಶೇಷ ಪರಿಸ್ಥಿತಿಗಳಲ್ಲಿ ಅಧಿವೇಶನಕ್ಕೆ ಗೈರುಹಾಜರಾಗುವ ಅವಕಾಶವಿದೆ. ಅನಿರೀಕ್ಷಿತ ಅಥವಾ ಅಸಾಧಾರಣ ಸಂದರ್ಭಗಳು, ಆಕಸ್ಮಿಕ ಅನಾರೋಗ್ಯ ಅಥವಾ ತುರ್ತು ಪರಿಸ್ಥಿತಿ ಎದುರಾದಲ್ಲಿ, ರಾಜ್ಯಪಾಲರು ರಾಷ್ಟ್ರಪತಿಗಳಿಂದ ಅನುಮತಿ ಪಡೆದು ಅಧಿವೇಶನಕ್ಕೆ ಹಾಜರಾಗದೇ ಇರಬಹುದು. ಇಂತಹ ಸಂದರ್ಭಗಳಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಗೈರು ಹಾಜರಾತಿಗೆ ಅನುಮೋದನೆ ನೀಡುವ ಅಧಿಕಾರ ಹೊಂದಿದ್ದಾರೆ. ರಾಷ್ಟ್ರಪತಿಗಳ ಅನುಮತಿ ದೊರೆತಿದ್ದರೆ, ಈ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಹಸ್ತಕ್ಷೇಪ ಕಷ್ಟಸಾಧ್ಯವಾಗುತ್ತದೆ. ರಾಜ್ಯಪಾಲರ ವಿರುದ್ಧ ಯಾವುದೇ ಕಾನೂನು ಕ್ರಮ ಆರಂಭವಾದರೂ, ಅವರು ಸಂವಿಧಾನಾತ್ಮಕವಾಗಿ ಸಮಂಜಸವಾದ ಕಾರಣವನ್ನು ನೀಡುವ ಹಕ್ಕು ಹೊಂದಿರುತ್ತಾರೆ.

ಸರ್ಕಾರದ ಮುಂದಿರುವ ಆಯ್ಕೆಗಳೇನು?

ರಾಜ್ಯಪಾಲರು ಅಧಿವೇಶನಕ್ಕೆ ಗೈರಾದರೆ ಕಾನೂನು ಹೋರಾಟ ಮಾಡುವ ಆಯ್ಕೆ ಸರ್ಕಾರ ಮುಂದಿದೆ. ರಾಜ್ಯಪಾಲರು ಸಾಂವಿಧಾನಿಕ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲ ಎಂದು ಆರೋಪಿಸಬಹುದು. ರಾಜ್ಯಪಾಲರು ಭಾಷಣ ಓದದೇ ಇದ್ದ ಪಕ್ಷದಲ್ಲಿ ತನ್ನ ಭಾಷಣವನ್ನು ಸದನದಲ್ಲಿ ನಿರ್ಣಯ ಮಂಡಿಸಿ ಸಭಾಧ್ಯಕ್ಷರಿಂದ ಚರ್ಚೆ ಅವಕಾಶ ಕೇಳಬಹುದು.

ಇದನ್ನೂ ಓದಿ: ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡದಿದ್ರೆ ಸುಪ್ರೀಂ ಮೊರೆ ಹೋಗಲು ರಾಜ್ಯ ಸರ್ಕಾರ ಸಿದ್ಧತೆ!

ಸದ್ಯ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಣ ಸಂಘರ್ಷ ಕುತೂಹಲ ಘಟ್ಟ ತಲುಪಿದ್ದು, ಏನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನನ್ನಷ್ಟು ಸ್ಟ್ರಾಂಗ್ ಸ್ಪರ್ಧಿ ಬಂದಿರಲಿಲ್ಲ’ ಎಂಬ ಅಶ್ವಿನಿ ಹೇಳಿಕೆ; ಸಿಂಹಿಣಿ ಸಂಗೀತಾನ ನೆನಪಿಸಿದ ವೀಕ್ಷಕರು – Kannada News | Ashwini Gowda’s Strongest Contestant Claim: Big Boss Fans Compare to Sangeetha Sringeri

ಅಶ್ವಿನಿ ಗೌಡ (Ashwini Gowda) ಅವರ ಬಿಗ್ ಬಾಸ್ ಪ್ರಯಾಣ ಸಾಕಷ್ಟು ಏರಿಳಿತಗಳಿಂದ ಕೂಡಿತ್ತು. ಬಿಗ್ ಬಾಸ್ನಿಂದ ಹೊರ ಬಂದ ಬಳಿಕವೂ ಅಶ್ವಿನಿ ಅವರು ಹೇಳಿಕೆ ನೀಡೋದನ್ನು ಮುಂದುವರಿಸಿದ್ದಾರೆ. ನಿಜವಾದ ವೋಟ್ ತೋರಿಸಿದ್ರೆ ನಾನೇ ಗೆಲ್ತಿದ್ದೆ ಎಂಬ ಹೇಳಿಕೆ ಚರ್ಚೆಗೆ ಕಾರಣ ಆಗಿದೆ. ‘ನನ್ನಷ್ಟು ಸ್ಟ್ರಾಂಗ್ ಸ್ಪರ್ಧಿ ಈವರೆಗೆ ಬಂದಿಲ್ಲ’ ಎಂದ ಅಶ್ವಿನಿಗೆ ವೀಕ್ಷಕರು ಸಂಗೀತಾ ಶೃಂಗೇರಿ ಅವರನ್ನು ನೆನಪಿಸಿದ್ದಾರೆ.

ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಆಗಿದ್ದರು ಎಂಬುದರಲ್ಲಿ ಅನುಮಾನವೇ ಇಲ್ಲ. ಮಾತಿನ ವಿಷಯ ಬಂದಾಗ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಯಾರ ಮಾತಿಗೂ ಬಗ್ಗುತ್ತಿರಲಿಲ್ಲ. ಟಾಸ್ಕ್ ಕೂಡ ಉತ್ತಮವಾಗಿ ಆಡುತ್ತಿದ್ದರು. ಗಿಲ್ಲಿ ಅನೇಕ ಬಾರಿ ಕಾಲೆಳೆದಾಗ ಅಶ್ವಿನಿ ಅತ್ತಿದ ಉದಾಹರಣೆ ಇದೆ. ಆದಾಗ್ಯೂ ಹೊರಕ್ಕೆ ಬಂದ ಬಳಿಕ ‘ನನ್ನಷ್ಟು ಸ್ಟ್ರಾಂಗ್ ಸ್ಪರ್ಧಿ ಮತ್ತೊಬ್ಬರಿಲ್ಲ’ ಎಂದು ಅವರು ಹೇಳುತ್ತಿದ್ದಾರೆ. ಜನರಿಗೆ ಸಂಗೀತಾ ನೆನಪಾಗಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿಸಿ ಗಮನ ಸೆಳೆದವರು ಸಂಗೀತಾ ಶೃಂಗೇರಿ. ಅವರು ವಿನಯ್ ಗೌಡ, ರಜತ್ ಅಂತಹ ಸ್ಟ್ರಾಂಗ್ ಸ್ಪರ್ಧಿಗಳನ್ನು ಎದುರು ಹಾಕಿಕೊಂಡರು. ಅವರ ವಿರುದ್ಧ ಹೆದರಿಕೆ ಇಲ್ಲದೆ ಮಾತಿಗೆ ಇಳಿದರು. ಅವರ ಗತ್ತು ಬೇರೆಯದೇ ಇತ್ತು ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಸಂಗೀತಾನ ಫ್ಯಾನ್ಸ್ ಪ್ರೀತಿಯಿಂದ ಸಿಂಹಿಣಿ ಎನ್ನುತ್ತಿದ್ದರು.

ಇದನ್ನೂ ಓದಿ: ‘ವೋಟ್​​​ ನಂಬರ್ ಆಚೆ ಬಂದ್ರೆ ನಾನೇ ವಿನ್ನರ್’; ಅಶ್ವಿನಿ ಗೌಡ ನೇರ ಮಾತು

ಸಂಗೀತಾ ಶೃಂಗೇರಿಗೆ ಟಾಸ್ಕ್ ಆಡುವಾಗ ಕಣ್ಣಿಗೆ ಸೋಪಿನ ನೀರು ಹಾಕಿದ್ದರಿಂದ ಸಾಕಷ್ಟು ತೊಂದರೆ ಆಗಿತ್ತು. ಅವರು 2-3 ದಿನ ಆಸ್ಪತ್ರೆ ಸೇರಬೇಕಾಯಿತು. ಆಸ್ಪತ್ರೆಯಿಂದ ಮರಳುವಾಗ ಅವರು ಕರಿ ಬಣ್ಣದ ಕನ್ನಡಕ ಹಾಕಿ ಬಂದಿದ್ದರು. ಈ ಎಪಿಸೋಡ್ ಗಮನ ಸೆಳೆದಿತ್ತು. ತಾವೆಷ್ಟು ಸ್ಟ್ರಾಂಗ್ ಎಂಬುದನ್ನು ಅವರು ಇಲ್ಲಿ ಸಾಬೀತು ಮಾಡಿದ್ದರು. ಹೀಗಾಗಿ, ಎಲ್ಲರೂ ಅಶ್ವಿನಿಗಿಂತ ಸಂಗೀತಾ ಅವರೇ ಸ್ಟ್ರಾಂಗ್ ಸ್ಪರ್ಧಿ ಎಂದು ಹೇಳುತ್ತಿದ್ದಾರೆ. ಇದನ್ನು ಬಹುತೇಕರು ಒಪ್ಪಿದ್ದಾರೆ. ಗಿಲ್ಲಿ ಗೆಲುವನ್ನು ಅಶ್ವಿನಿ ಗೌಡ ಅವರು ಒಪ್ಪುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಿಲ್ಲಿ ‘ಬಡವ’ ಕಾರ್ಡ್ ಬಳಸಿ ಗೆದ್ದ ಎಂದವರಿಗೆ ಮುಟ್ಟಿ ನೋಡಿಕೊಳ್ಳೋ ಉತ್ತರ ಕೊಟ್ಟ ಸಹ ಸ್ಪರ್ಧಿ ಅಭಿಷೇಕ್ – Kannada News | Bigg Boss Gilli Win: Abhishek Rejects ‘Poor Card’ Claims, Credits Talent and Entertainment

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿ ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿರುವಾಗ ‘ನಾನು ಬಡವ, ನನ್ನ ಬಳಿ ಹಣವಿಲ್ಲ, ಊಟಕ್ಕೂ ತೊಂದರೆ ಆಗುತ್ತಿದೆ’ ಎಂದೆಲ್ಲ ಎಂದಿಯೂ ಹೇಳಿಕೊಂಡವರಲ್ಲ. ಅವರು ತಮ್ಮ ಆಸ್ತಿ, ಜಾತಿ ವಿಷಯವನ್ನು ಮಾತನಾಡಿಯೇ ಇಲ್ಲ. ಆದರೂ ಕೆಲವರು ಆ ಬಗ್ಗೆ ಮಾತನಾಡುತ್ತಿದ್ದಾರೆ. ಗಿಲ್ಲಿ ಬಡವ ಕಾರ್ಡ್ ಬಳಸಿ ಗೆದ್ದ ಎಂದೆಲ್ಲ ಹೇಳುತ್ತಿದ್ದಾರೆ. ಈ ಬಗ್ಗೆ ಈ ಸೀಸನ್ ಸ್ಪರ್ಧಿ ಅಭಿಷೇಕ್ ಮಾತನಾಡಿದ್ದಾರೆ. ಅವರು ತೂಕದ ಮಾತನಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇರುವಾಗ ಯಾರ ಖ್ಯಾತಿ ಎಷ್ಟಿದೆ ಎಂಬುದರ ಅಂದಾಜು ಯಾರಿಗೂ ಇರೋದಿಲ್ಲ. ಅದನ್ನು ನೋಡೋಕೆ ಹೊರಕ್ಕೆ ಬರಬೇಕು. ಅಭಿಷೇಕ್ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಗಿಲ್ಲಿ ನಟನ ಆಟವನ್ನು ಅಷ್ಟಾಗಿ ಇಷ್ಟಪಟ್ಟವರಲ್ಲ. ಆದರೆ, ಹೊರ ಬಂದ ಬಳಿಕ ಗಿಲ್ಲಿ ಆಟ ಏನು ಎಂಬುದು ಗೊತ್ತಾಗಿದೆ. ಸಖತ್ ಆಗಿ ಕಂಟೆಂಟ್ ನೀಡಿ ಮನರಂಜಿಸಿದ್ದಾರೆ ಎಂಬುದು ಮನದಟ್ಟಾಗಿದೆ. ಈ ಎಲ್ಲಾ ಕಾರಣದಿಂದ ಅವರು ಗಿಲ್ಲಿಗೆ ಬೆಂಬಲ ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿದ್ದಾರೆ.

‘ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಿದ್ದೇನೆ. ಒಬ್ಬರು ಗಿಲ್ಲಿ ಬಡವ ಅಂತಾರೆ, ಇನ್ನೊಬ್ಬರು ಗಿಲ್ಲಿ ಶ್ರೀಮಂತ ಅಂತಾರೆ. ಒಂದು ಕಡೆ ಅವನತ್ರ ಆ ಕಾರು ಇದೆ, ಈ ಕಾರು ಇದೆ ಅಂತಾರೆ. ಅದಕ್ಕೇನು? ಅವನು ಸಿಂಪತಿಯಿಂದ ಗೆದ್ದ ಎಂದು ನನಗೆ ಅನಿಸುತ್ತಿಲ್ಲ. ಅವನು ಟ್ಯಾಲೆಂಟ್​​ನಿಂದ ಗೆದ್ದ. ನಮಗೆ ಒಬ್ಬರನ್ನು ನಗಿಸೋದೆ ಕಷ್ಟ. ಹೀಗಿರುವಾಗ ಅವನು ಇಡೀ ಕರ್ನಾಟಕನ ನಗಿಸಿದ್ದಾನೆ. ನನಗೆ ಅವನ ಬಗ್ಗೆ ಸಂಪೂರ್ಣವಾಗಿ ಖುಷಿ ಇದೆ. ಅವನ ಬಳಿ ಟ್ಯಾಲೆಂಟ್ ಇದೆ. ಅವನು ಗೆದ್ದಿದ್ದಕ್ಕೆ ಖುಷಿ ಇದೆ. ಗಿಲ್ಲಿ ನಿನ್ನ ಬಗ್ಗೆ ಹೆಮ್ಮೆ ಇದೆ’ ಎಂದು ಅಭಿಷೇಕ್ ಮಾತನಾಡಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಬಡವನಾ ಶ್ರೀಮಂತನಾ? ಮುತ್ತಿನಂಥ ಮಾತು ಹೇಳಿದ ಸೂರಜ್

ಅಭಿಷೇಕ್ ಮಾತಿನಿಂದ ಗಿಲ್ಲಿ ಅಭಿಮಾನಿಗಳಿಗೆ ಖುಷಿ ಆಗಿದೆ. ಅವರು ಅಭಿಷೇಕ್​​ಗೆ ಧನ್ಯವಾದ ಅರ್ಪಿಸಿದ್ದಾರೆ. ಅಭಿಷೇಕ್ ರೀತಿ ಸೂರಜ್ ಕೂಡ ಮಾತನಾಡಿದ್ದಾರೆ. ಅವರು ಕೂಡ ಗಿಲ್ಲಿಗೆ ಬೆಂಬಲ ಸೂಚಿಸಿದ್ದಾರೆ. ಗಿಲ್ಲಿ ಸಿಂಪತಿ ಹಾಗೂ ಬಡವ ಕಾರ್ಡ್ ಬಳಸಿ ಗೆದ್ದ ಎಂಬುದು ಅಶ್ವಿನಿ ಹಾಗೂ ಧ್ರುವಂತ್ ಆರೋಪ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡದಿದ್ರೆ ಸುಪ್ರೀಂ ಮೊರೆ ಹೋಗಲು ರಾಜ್ಯ ಸರ್ಕಾರ ಸಿದ್ಧತೆ! – Kannada News | Karnataka Government to Approach Supreme Court if Governor Skips Address in Special Assembly Session

ಕರ್ನಾಟಕ ರಾಜ್ಯಪಾಲರು (ಸಂಗ್ರಹ ಚಿತ್ರ)

ಬೆಂಗಳೂರು, ಜನವರಿ 22: ಕರ್ನಾಟಕದಲ್ಲಿ (Karnataka) ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ. ಇಂದು ಆರಂಭವಾಗಲಿರುವ ವಿಧಾನಮಂಡಲದ ವಿಶೇಷ (Karnataka Assembly Session) ಅಧಿವೇಶನದಲ್ಲಿ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ. ಭಾಷಣದಲ್ಲಿ ಉಲ್ಲೇಖಿಸಲಾಗಿರುವ 11 ಪ್ಯಾರಾಗಳನ್ನು ತಿದ್ದುಪಡಿ ಮಾಡುವಂತೆ ಅಥವಾ ಕೈಬಿಡುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರವು ರಾಜ್ಯಪಾಲರ ಈ ಷರತ್ತಿಗೆ ನಕಾರ ವ್ಯಕ್ತಪಡಿಸಿದೆ. ಸರ್ಕಾರವು ಬರೆದುಕೊಟ್ಟ ಭಾಷಣವನ್ನೇ ರಾಜ್ಯಪಾಲರು ಓದಬೇಕು ಎಂದು ಪಟ್ಟು ಹಿಡಿದಿದೆ. ಈ ವಿಚಾರವಾಗಿ ಸರ್ಕಾರ ಕಾನೂನು ಹೋರಾಟಕ್ಕೂ ಸಿದ್ಧವಾಗಿದೆ.

ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ನವದೆಹಲಿಗೆ ತೆರಳಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ರಾಜ್ಯಪಾಲರಿಗೆ ನಿರ್ದೇಶನ ನೀಡುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿರುವ ಸಂಭಾವ್ಯ ಅರ್ಜಿಯಲ್ಲಿ ಎರಡು ಪ್ರಮುಖ ಅಂಶಗಳ ಮೇಲೆ ರಾಜ್ಯಪಾಲರಿಗೆ ನಿರ್ದೇಶನ ನೀಡಲು ಸರ್ಕಾರ ಕೋರಲಿದೆ. ಮೊದಲನೆಯದಾಗಿ, ರಾಜ್ಯಪಾಲರು ಸರ್ಕಾರದ ಭಾಷಣವನ್ನು ಸದನದಲ್ಲಿ ಓದಬೇಕು. ಎರಡನೆಯದಾಗಿ, ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಪಾಲಿಸಬೇಕು. ಈ ಕುರಿತು ಅರ್ಜಿ ಸಿದ್ಧಪಡಿಸಲು ಮುಖ್ಯಮಂತ್ರಿಗಳು ಪೊನ್ನಣ್ಣ ಮತ್ತು ಅಡ್ವೊಕೇಟ್ ಜನರಲ್ ಅವರಿಗೆ ಜವಾಬ್ದಾರಿಯನ್ನು ವಹಿಸಿದ್ದಾರೆ.

11 ಅಂಶ ಕೈಬಿಡಲು ಹೇಳಿದ್ದೇಕೆ ರಾಜ್ಯಪಾಲರು?

ಸರ್ಕಾರ ಬರೆದುಕೊಟ್ಟ ಭಾಷಣದಲ್ಲಿ ಮನ್ರೇಗಾ ಕಾಯ್ದೆ ಬದಲಾವಣೆ ಬಗ್ಗೆ ಉಲ್ಲೇಖಿಸಲಾಗಿತ್ತು. ಅದರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕೆಲ ಅಂಶಗಳಿವೆ ಎಂದಿರುವ ರಾಜ್ಯಪಾಲರು, 11 ಪ್ಯಾರಾಗಳನ್ನು ಕೈಬಿಡಬೇಕೆಂದು ಸಲಹೆ ನೀಡಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ನಡುವೆ ಸಂಬಂಧದ ಬಗ್ಗೆ ಉಲ್ಲೇಖವಿದೆ. ಮನ್​ರೇಗಾ ಯೋಜನೆ ಮರುಸ್ಥಾಪನೆ, ಅನುದಾನ ತಾರತಮ್ಯ,
ಕೇಂದ್ರ ಸರ್ಕಾರ ಕಾರ್ಮಿಕರ ಕೆಲಸ ಕಿತ್ತುಕೊಂಡಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಅನುದಾನ ನೀಡದಿರುವುದು ಸೇರಿದಂತೆ ಕೇಂದ್ರ ವಿರುದ್ಧದ ವಿಚಾರ ಕೈಬಿಡುವಂತೆ ರಾಜ್ಯಪಾಲರಿಂದ ಸಲಹೆ ನೀಡಿದ್ದಾರೆ.

ರಾಜ್ಯ ಸರ್ಕಾರದಿಂದ ಕಾದುನೋಡುವ ತಂತ್ರ

ರಾಜ್ಯ ಸರ್ಕಾರವು ಬೆಳಗ್ಗೆ 11 ಗಂಟೆಯವರೆಗೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಬೆಳಗ್ಗೆ 11 ಗಂಟೆಗೆ ಸರಿಯಾಗಿ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣವನ್ನು ಪ್ರಾರಂಭಿಸಬೇಕು. ಅದಕ್ಕೂ ಮುನ್ನ 10 ಗಂಟೆ 55 ನಿಮಿಷಕ್ಕೆ ಅವರು ವಿಧಾನಸೌಧದ ಗ್ರಾಂಡ್ ಸ್ಟೆಪ್‌ಗಳನ್ನು ತಲುಪಬೇಕಾಗುತ್ತದೆ. ಒಂದು ವೇಳೆ ಆ ನಿಗದಿತ ಸಮಯದ ನಂತರವೂ ರಾಜ್ಯಪಾಲರು ಅಧಿವೇಶನಕ್ಕೆ ಹಾಜರಾಗದೆ ಹೋದರೆ ಅಥವಾ ಭಾಷಣ ಮಾಡಲು ನಿರಾಕರಿಸಿದರೆ, ರಾಜ್ಯ ಸರ್ಕಾರವು ಕಾನೂನು ಸಮರವನ್ನು ಪ್ರಾರಂಭಿಸಲು ತೀರ್ಮಾನಿಸಿದೆ.

ಇದನ್ನೂ ಓದಿ: ಭಾಷಣ ಮಾಡಲ್ಲ ಎಂದ ರಾಜ್ಯಪಾಲರು: ವಿಶೇಷ ಅಧಿವೇಶನ ರದ್ದಾಗುತ್ತಾ? ಸರ್ಕಾರದ ಮುಂದಿರುವ ಆಯ್ಕೆಗಳೇನು?

ಈ ನಡುವೆ, ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ನಂತರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವರದಿ ಸಲ್ಲಿಸಿದ್ದಾರೆ. ರಾಜ್ಯಪಾಲರು ಭಾಷಣದ 11 ಅಂಶಗಳನ್ನು ಯಾವ ಕಾರಣಕ್ಕಾಗಿ ಕೈಬಿಡಲು ಸೂಚಿಸಿದ್ದಾರೆ ಎಂಬ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸುದೀರ್ಘ ಚರ್ಚೆ ನಡೆದಿದೆ. ಅಕಸ್ಮಾತ್ ರಾಜ್ಯಪಾಲರು ಅಧಿವೇಶನಕ್ಕೆ ಬರದಿದ್ದರೆ, ಅದು ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಲಿದೆ ಎಂದು ಸರ್ಕಾರ ಭಾವಿಸಿದೆ. ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಯಾವ ರೀತಿಯ ಭಾಷಣ ಮಾಡುತ್ತಾರೆ, ಸರ್ಕಾರ ಕೊಟ್ಟಿರುವ 11 ಅಂಶಗಳನ್ನು ಕೈಬಿಟ್ಟು ಓದುತ್ತಾರಾ, ಅಥವಾ ಸಂಪೂರ್ಣವಾಗಿ ಗೈರುಹಾಜರಾಗುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಚಿಕ್ಕಮಗಳೂರು ಜನರೇ ಎಚ್ಚರ, ಬೆಳಿಗ್ಗೆ ದಟ್ಟ ಮಂಜು ಇರುವ ಕಾರಣ ವಾಹನ ಚಲಿಸುವಾಗ ಎಚ್ಚರ – Kannada News | Karnataka weather today dry cold wave continues bengaluru pleasant fog warning

ಬೆಂಗಳೂರು, ಜ.22: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇಂದಿನ (ಜನವರಿ 22, 2026) ಹವಾಮಾನ ಶುಷ್ಕ ಮತ್ತು ಶೀತ ವಾತಾವರಣದಿಂದ ಕೂಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಪ್ರಸ್ತುತ ಚಳಿಯ ತೀವ್ರತೆ ಮುಂದುವರಿದಿದ್ದು, ಒಣ ಹವಾಮಾನ (Dry Weather) ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಇಂದು ಆಹ್ಲಾದಕರ ಹವಾಮಾನವಿರಲಿದ್ದು, ಬೆಳಗಿನ ಜಾವ ಸಾಧಾರಣ ಮಂಜು ಇರಲಿದೆ. ಗರಿಷ್ಠ ತಾಪಮಾನ 28°C ಮತ್ತು ಕನಿಷ್ಠ ತಾಪಮಾನ 16°C ಇರಲಿದೆ. ಗಾಳಿಯ ಗುಣಮಟ್ಟ (AQI) ಸಾಧಾರಣ ಮಟ್ಟದಲ್ಲಿದೆ. ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಚಳಿಯ ಅಲೆ ಮುಂದುವರಿದಿದೆ. ಇಲ್ಲಿ ಕನಿಷ್ಠ ತಾಪಮಾನ 12°C – 14°C ವರೆಗೆ ಕುಸಿಯುವ ಸಾಧ್ಯತೆಯಿದೆ.

ಮಂಗಳೂರು, ಉಡುಪಿ ಭಾಗದಲ್ಲಿ ಹವಾಮಾನವು ಸ್ವಲ್ಪ ಉಷ್ಣಾಂಶದಿಂದ ಕೂಡಿರಲಿದ್ದು, ಗರಿಷ್ಠ ತಾಪಮಾನ 32°C ದಾಟಬಹುದು. ಇಲ್ಲಿ ಸಮುದ್ರದ ಗಾಳಿ ಮಂದಗತಿಯಲ್ಲಿರಲಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳಿಗ್ಗೆ ದಟ್ಟ ಮಂಜು ಮುಸುಕಲಿದ್ದು, ವಾಹನ ಸವಾರರು ಜಾಗರೂಕರಾಗಿರಲು ಹವಾಮಾನ ಇಲಾಖೆ ಹೇಳಿದೆ. ಮುಂಜಾನೆ ಮತ್ತು ತಡರಾತ್ರಿ ಚಳಿ ಹೆಚ್ಚಿರುವುದರಿಂದ ಶೀತ ಮತ್ತು ಕೆಮ್ಮು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಬಗ್ಗೆ ಜಾಗ್ರತೆ ವಹಿಸಿ. ಬೆಚ್ಚಗಿನ ಉಡುಪು ಧರಿಸುವುದು ಉತ್ತಮ ಎಂದು ತಜ್ಞರು ಹೇಳಿದ್ದಾರೆ. ಇನ್ನು ಯಾವ ಜಿಲ್ಲೆಯಲ್ಲೂ ಕೂಡ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಕರ್ನಾಟಕದ ಬಯಲು ಪ್ರದೇಶಗಳಲ್ಲೇ ದಾವಣಗೆರೆಯಲ್ಲಿ ಕನಿಷ್ಠ 11.0°C ತಾಪಮಾನ ದಾಖಲಾಗಿದೆ.

ಕಳೆದ ಕೆಲವು ದಿನಗಳಿಂದ ಹವಾಮಾನದಲ್ಲಿ ತುಂಬಾ ಬದಲಾವಣೆಗಳು ಕಾಣುತ್ತಿದೆ. ಮಕ್ಕಳು, ಮಹಿಳೆಯರು ಹಾಗೂ ಹಿರಿಯರು ಎಚ್ಚರವಾಗಿರಲು ತಜ್ಞರು ಹೇಳಿದ್ದಾರೆ. ಮುಂದಿನ ನಾಲ್ಕು ದಿನಗಳವರೆಗೆ ಇದೇ ರೀತಿಯ ಪರಿಸ್ಥಿತಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಲವಾರು ದಿನಗಳಿಂದ ಒಣ ಹವಾಮಾನ ಇದ್ದು, ಇದೇ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ಇಲಾಖೆ ಹೇಳಿದೆ.

ಇದನ್ನೂ ಓದಿ: ತಪಾಸಣೆ ನೆಪದಲ್ಲಿ ವಿದೇಶಿ ಮಹಿಳೆಯ ಖಾಸಗಿ ಅಂಗ ಸ್ಪರ್ಶಿಸಿ ತಬ್ಬಿಕೊಂಡ ವಿಮಾನ ನಿಲ್ದಾಣ ಸಿಬ್ಬಂದಿಯ ಬಂಧನ

ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಶಿವಮೊಗ್ಗ ಮತ್ತು ವಿಜಯನಗರದಲ್ಲೂ ಕೂಡ ವಾತಾವರಣ ಶುಷ್ಕವಾಗಿರಲಿದೆ. ಉತ್ತರ ಕನ್ನಡ ಸೇರಿದಂತೆ ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಒಣ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಮಾನ ಇಲಾಖೆ ಹೇಳಿದೆ. ಈ ಭಾಗದಲ್ಲೂ ಕೂಡ ಎಚ್ಚರದಿಂದ ಇರುವಂತೆ ಇಲಾಖೆ ಹೇಳಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link